Telegram Join Our Telegram WhatsApp Join Our WhatsApp

Whatsapp Username Feature 2026, Big Update: ವಾಟ್ಸಾಪ್‌ ಬಳಕೆದಾರರಿಗೆ ಸರ್ಕಾರದಿಂದ ಬಿಗ್‌ ಶಾಕ್‌, ಸಂಪೂರ್ಣ ಮಾಹಿತಿ ತಿಳಿದುಕೊಳ್ಳಿ

Whatsapp Username Feature ಗೆ ಸರ್ಕಾರದಿಂದ ನಿರ್ಭಂಧ, ಮುಂದುವರೆದ ಪರಿಶೀಲನೆ.

 

ಭಾರತ ದೇಶದಲ್ಲಿ ಸ್ಮಾರ್ಟ್ ಫೋನನ್ನು ಎಲ್ಲರೂ ಬಳಸುತ್ತಿದ್ದಾರೆ. ಬಹುತೇಕ ಜನರು ಪ್ರತಿನಿತ್ಯವೂ ಬಳಸುವ ಮೊಬೈಲ್ ಅವರ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಮೊಬೈಲ್ ಬಳಸುವ ಜೊತೆಯಲ್ಲಿ ದಿನನಿತ್ಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿ ವಾಟ್ಸಪ್ ಅನ್ನು ಬಳಸುತ್ತಿದ್ದಾರೆ ವೈಯಕ್ತಿಕ ಸಂದೇಶಗಳಿಂದ ಹಿಡಿದು ಕುಟುಂಬದ ಸಂವಹನ, ಶಿಕ್ಷಣ, ಆನ್ಲೈನ್ ವ್ಯವಹಾರ, ಕಚೇರಿ ಸಂವಹನ, ಬ್ಯಾಂಕಿಂಗ್ ಮಾಹಿತಿ ಸರಕಾರಿ ಸೇವೆಗಳ ಮಾಹಿತಿ ಗ್ರಾಹಕ ಸಂಪರ್ಕ ಹಾಗೂ ವ್ಯಾಪಾರದ ಉದ್ದೇಶಗಳಿಗೆ ವಾಟ್ಸಾಪ್ ಅನ್ನು ಬಳಸಲಾಗುತ್ತಿದೆ.

ಭಾರತದಲ್ಲಿ ಕೋಟ್ಯಂತರ ಬಳಕೆದಾರರನ್ನು ಹೊಂದಿರುವ ಈ ಮೆಸೇಜಿಂಗ್ ಅಪ್ಲಿಕೇಶನ್ ತನ್ನ ಹೊಸ ಫೀಚರ್ ಗಳ ಮೂಲಕ ಬಳಕೆದಾರರ ಅನುಭವವನ್ನು ಮತ್ತಷ್ಟು ಸುಧಾರಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ

ಇದೇ ಪ್ರಯತ್ನದ ಅಂಗವಾಗಿ ಮೆಟಾ ಸಂಸ್ಥೆಯು Whatsapp Username Feature ಎಂಬ ಹೊಸ ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸುತ್ತದೆ ಈ ಫೀಚರ್ನ ಮುಖ್ಯ ಉದ್ದೇಶವೆಂದರೆ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಬಹಿರಂಗವಾಗದಂತೆ ಕೇವಲ ಒಂದು ವಿಶಿಷ್ಟ ಯೂಸರ್ ನೇಮ್ ಮೂಲಕ ಇತರರೊಂದಿಗೆ ಸಂಪರ್ಕವನ್ನು ಸಾಧಿಸಬಹುದಾಗಿರುತ್ತದೆ

ಈ ವ್ಯವಸ್ಥೆಯು ಈಗಾಗಲೇ ಟೆಲಿಗ್ರಾಂ, ಸಿಗ್ನಲ್, ಡಿಸ್ಕಾರ್ಡ್ ಹಾಗೂ ಇತರ ಮೆಸೇಜಿಂಗ್ ವೇದಿಕೆಗಳಲ್ಲಿ ಲಭ್ಯವಿರುವ ಕಾರಣ ವಾಟ್ಸಪ್ ಕೂಡ ಈ ರೀತಿಯ ವೈಶಿಷ್ಟ್ಯತೆಯನ್ನು ತರಲು ಪ್ರಯತ್ನಿಸುತ್ತಿದೆ ಹಾಗೂ ತನ್ನ ಗ್ರಾಹಕರಿಗೆ ಅನುಕೂಲವನ್ನು ನೀಡಲು ಯೋಜನೆ ರೂಪಿಸಿದೆ

ಆದರೆ ಈ ಹೊಸ ಫೀಚರ್ ಭಾರತ ದೇಶದಲ್ಲಿ ಪರಿಚಯವಾಗುವ ಮುನ್ನವೇ ದೊಡ್ಡ ವಿವಾದಕ್ಕೆ ಗುರಿಯಾಗಿದೆ. ಅಂದರೆ ಕೇಂದ್ರ ಸರ್ಕಾರವು ಈ ವೈಶಿಷ್ಟ್ಯಗಳ ಕುರಿತು ಕೆಲವು ಭದ್ರತಾ ಆತಂಕಗಳನ್ನು ವ್ಯಕ್ತಪಡಿಸಿದ್ದು, ಮೆಟಾ ಸಂಸ್ಥೆಗೆ ಅಧಿಕೃತ ನೋಟಿಸ್ ಅನ್ನು ನೀಡಿದೆ ಮತ್ತು ಕೆಲವು ಪ್ರಮುಖ ಪ್ರಶ್ನೆಗಳಿಗೆ ಉತ್ತರವನ್ನು ಕೇಳಿದೆ.

ಸರ್ಕಾರದ ಅನುಮತಿ ಮತ್ತು ಭದ್ರತಾ ಪರಿಶೀಲನಾ ಪ್ರಕ್ರಿಯೆಯು ಸಂಪೂರ್ಣವಾಗಿ ಪೂರ್ಣಗೊಳ್ಳುವವರೆಗೆ ಭಾರತದಲ್ಲಿ ಈ ವಾಟ್ಸಪ್ ಯೂಸರ್ ನೇಮ್ ಫೀಚರ್ ಅನ್ನು ಬಿಡುಗಡೆ ಮಾಡುವುದಿಲ್ಲ ಎಂದು ಮೆಟಾ ಸಂಸ್ಥೆಯು ತನ್ನ ಅಧಿಕೃತ ಖಾತೆಯಲ್ಲಿ ತಿಳಿಸಿದೆ

ಈ ಬೆಳವಣಿಗೆ ತಂತ್ರಜ್ಞಾನವು ತಂತ್ರಜ್ಞಾನ ಕ್ಷೇತ್ರದಲ್ಲಿ ಮಾತ್ರವಲ್ಲದೆ ಸಾಮಾನ್ಯ ಬಳಕೆದಾರರಲ್ಲಿಯೂ ಸಹ ಸಾಕಷ್ಟು ಆತಂಕ ಮತ್ತು ಕುತೂಹಲ ಚರ್ಚೆಗೆ ಕಾರಣವಾಗಿದೆ ಒಂದು ಕಡೆ ಬಳಕೆದಾರರ ಗೌಪ್ಯತೆ ಹೆಚ್ಚಿಸುವ ಹೊಸ ವ್ಯವಸ್ಥೆ ಎಂದರೆ ಇನ್ನೊಂದು ಕಡೆ ಸೈಬರ್ ಅಪರಾಧಿಗಳಿಗೆ ಇದೊಂದು ಅವಕಾಶವಾಗುವುದು ಎಂಬ ಪ್ರಶ್ನೆ ಮೂಡಿದೆ.

Whatsapp Username Feature ಎಂದರೆ ಏನು

ಪ್ರಸ್ತುತ ಮೆಟಾ ಸಂಸ್ಥೆಯು ತನ್ನ ಅಧೀನದಲ್ಲಿರುವ ವಾಟ್ಸಾಪ್ ಅನ್ನು ಬಳಸಲು ಮೊಬೈಲ್ ಸಂಖ್ಯೆಯನ್ನು ಕಡ್ಡಾಯಗೊಳಿಸಿದೆ. ಯಾರನ್ನಾದರೂ ವಾಟ್ಸಾಪ್ ಮೂಲಕ ಸಂಪರ್ಕಿಸಬೇಕಾದರೆ ಅವರ ಫೋನ್ ಸಂಖ್ಯೆಯನ್ನು ನಿಮ್ಮ ಸಂಪರ್ಕ ಪಟ್ಟಿಯಲ್ಲಿ ಸೇವ್‌ ಮಾಡಿಕೊಂಡ ನಂತರವೇ ಅವರಿಗೆ ಸಂದೇಶವನ್ನು ಕಳುಹಿಸಬೇಕಾಗಿರುತ್ತದೆ ವಾಟ್ಸಪ್ ಖಾತೆಯ ಗುರುತು ಸಂಪೂರ್ಣವಾಗಿ ಮೊಬೈಲ್ ಸಂಖ್ಯೆಯ ಮೇಲೆ ಅವಲಂಬನೆಗೊಂಡಿದೆ

ಆದರೆ ಪ್ರಸ್ತುತದಲ್ಲಿ ಮೆಟಾ ಸಂಸ್ಥೆಯ ಅಭಿವೃದ್ಧಿಪಡಿಸಿರುವ Whatsapp Username Feature ನಲ್ಲಿ ಬಳಕೆದಾರರು ತಮ್ಮ ಒಂದು ಖಾತೆಗೆ ವಿಶಿಷ್ಟ ಯೂಸರ್ ನೇಮ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಈ ಯೂಸರ್ ನೇಮ್ ಪ್ರತಿಯೊಬ್ಬ ಬಳಕೆದಾರಣೆಗೂ ವಿಭಿನ್ನವಾಗಿರುತ್ತದೆ ಎಂದು ತಿಳಿಸಲಾಗಿದೆ

ಈ ರೀತಿಯ ವಾಟ್ಸಪ್ ಯೂಸರ್ ನೇಮ್ ಫೀಚರ್ ಗಳ ಮೂಲಕ ಇತರರು ನಿಮ್ಮನ್ನು ಸುಲಭವಾಗಿ ಹುಡುಕಬಹುದಾಗಿದೆ ಇದರಿಂದ ನಿಮ್ಮ ವೈಯಕ್ತಿಕ ಮೊಬೈಲ್ ಸಂಖ್ಯೆಯನ್ನು ಎಲ್ಲರಿಗೂ ಹಂಚಿಕೊಳ್ಳುವ ಅಗತ್ಯತೆ ಇರುವುದಿಲ್ಲ

ಸರಳ ಅರ್ಥದಲ್ಲಿ ಹೇಳುವುದಾದರೆ ಇನ್ಸ್ಟಾಗ್ರಾಮ್ ಅಥವಾ ಎಕ್ಸ್ ನಲ್ಲಿ ಯುಸರ್ ನೇಮ್ ಅನ್ನು ಬಳಸುವ ರೀತಿಯಲ್ಲೇ ವಾಟ್ಸಪ್ ನಲ್ಲೂ ಸಹ ನಿಮ್ಮದೇ ಆದ ಯುಸರ್ ನೇಮ್ ಅನ್ನು ಹೊಂದಬಹುದಾಗಿರುತ್ತದೆ

ಮೆಟಾ ಸಂಸ್ಥೆಯು ಈ ಫೀಚರ್ ಅನ್ನು ಪರಿಚಯಿಸಲು ಕಾರಣವೇನು

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಕ್ಷೇತ್ರದಲ್ಲಿ ಸಂವಹನದ ರೂಪವೇ ಸಂಪೂರ್ಣವಾಗಿ ಬದಲಾಗಿದೆ ಹಲವರು ತಮ್ಮ ಮೊಬೈಲ್ ಸಂಖ್ಯೆಯನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ವಿಶೇಷವಾಗಿ ಶಿಕ್ಷಕರು, ವೈದ್ಯರು, ಉದ್ಯಮಿಗಳು, ಫ್ರೀಲಾನ್ಸರ್ ಗಳು, ಯೂಟ್ಯಬರ್‌ ಗಳು, ಕಂಟೆಂಟ್ ಕ್ರಿಯೇಟರ್ಗಳು, ಪತ್ರಕರ್ತರು ಹಾಗೂ ಆನ್ಲೈನ್ ಮಾರಾಟಗಾರರು ಪ್ರತಿದಿನವೂ ಹೊಸ ಗ್ರಾಹಕರ ಜೊತೆ ಸಂಪರ್ಕ ಸಾಧಿಸಬೇಕಾಗುತ್ತದೆ

ಪ್ರತಿ ಬಾರಿಯೂ ಮೊಬೈಲ್ ಸಂಖ್ಯೆ ಹಂಚಿಕೊಳ್ಳುವುದು ಲಭ್ಯತೆ ದೃಷ್ಟಿಯಿಂದ ಸುರಕ್ಷಿತವಾಗಿರುವುದಿಲ್ಲ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ ಇದೇ ಕಾರಣಕ್ಕೆ ಮೆಟಾ ಸಂಸ್ಥೆಯು Whatsapp Username Feature ವ್ಯವಸ್ಥೆಯನ್ನು ಪರಿಚಯಿಸುವ ಮೂಲಕ ಸುರಕ್ಷತೆಯನ್ನು ಹೆಚ್ಚಿಸಲು ಮುಂದಾಗಿದೆ

ಮೆಟಾ ಸಂಸ್ಥೆಯ ಉದ್ದೇಶದ ಪ್ರಕಾರ ಈ ಯೂಸರ್ ನೇಮ್ ಫೀರ್‌ ನಿಂದ ಬಳಕೆದಾರರು ತಮ್ಮ ಫೋನ್ ಸಂಖ್ಯೆಯನ್ನು ಖಾಸಗಿಯಾಗಿ ಇಟ್ಟುಕೊಂಡು ಅಗತ್ಯವಿರುವವರಿಗೆ ಮಾತ್ರ ಕೊಡಬಹುದಾಗಿರುತ್ತದೆ ಇದರಿಂದ ಸಂವಹನ ಸುಲಭವಾಗುವುದರ ಜೊತೆಯಲ್ಲಿ ವೈಯಕ್ತಿಕ ಮಾಹಿತಿಗೆ ಸುರಕ್ಷತೆಯು ಸಹ ಹೆಚ್ಚಾಗಲಿದೆ

ಭಾರತ ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರ ಬಳಕೆದಾರರು

ಭಾರತದ ವಾಟ್ಸಾಪ್‌ ಬಳಕೆದಾರರು 853,800,000 ಬಳಕೆದಾರರು
ಸೈಬರ್‌ ಅಪರಾಧಗಳ ಮಾಹಿತಿ – 2026 1,270,000 ಸೈಬರ್ ಅಪರಾಧಗಳು
ಯು ಪಿ ಐ ಬಳಕೆದಾರರು 500,000,000 ಕ್ಕೂ ಹೆಚ್ಚು ಯುಪಿಐ ಬಳಕೆದಾರರು

 

Whatsapp Username Feature ಹೇಗೆ ಕಾರ್ಯನಿರ್ವಹಿಸುತ್ತದೆ

ಮೆಟಾ ಸಂಸ್ಥೆಯು ಈ ಯುಸರ್ ನೇಮ್ ಫೀಚರನ್ನು ಅಧಿಕೃತವಾಗಿ ಇನ್ನು ಬಿಡುಗಡೆ ಮಾಡಿಲ್ಲ ಆದರೆ ಪರೀಕ್ಷಾ ಆವೃತ್ತಿಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಬಳಕೆದಾರರು ಸೆಟ್ಟಿಂಗ್ ವಿಭಾಗಕ್ಕೆ ಹೋಗಿ ತಮ್ಮ ಖಾತೆಯ ಒಂದು ವಿಶಿಷ್ಟ Whatsapp Username Feature ರಚಿಸಿಕೊಳ್ಳುವ ಅವಕಾಶ ದೊರೆಯುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿರುತ್ತಾರೆ

ವಾಟ್ಸಪ್ ಯೂಸರ್ ನೇಮ್ ಫೀಚರ್ ಅನ್ನು ಆಯ್ಕೆ ಮಾಡುವಾಗ ಇರುವ ನಿಯಮಗಳು

  • ಈಗಾಗಲೇ ಬೇರೆ ಬಳಕೆದಾರರು ಬಳಸಿರುವ ಯೂಸರ್ ನೇಮ್ ಅನ್ನು ಆಯ್ಕೆ ಮಾಡಲು ಸಾಧ್ಯವಾಗುವುದಿಲ್ಲ
  • ವಿಶೇಷ ಸಂಖ್ಯೆಗಳು ಚಿಹ್ನೆಗಳು ಮತ್ತು ನಿಷೇಧಿತ ಪದಗಳನ್ನು ಬಳಸಲು ಅವಕಾಶವಿರುವುದಿಲ್ಲ
  • ಯೂಸರ್ ನೇಮ್ ಒಂದು ನಿರ್ದಿಷ್ಟ ಸಂಖ್ಯೆಗಳ ಮಿತಿಯೊಳಗೆ ಇರಬೇಕಾಗಬಹುದು
  • ಅಸಭ್ಯ ತಪ್ಪು ಅಥವಾ ಕೆಟ್ಟ ಅರ್ಥ ನೀಡುವ ಅಥವಾ ಕಾನೂನುಬಾಹಿರ ಪದಗಳನ್ನು ನಿರ್ಬಂಧಿಸಬಹುದು

ಈ Whatsapp Username Feature ಸೃಷ್ಟಿಯಾದ ನಂತರ ಅದನ್ನು ಇತರರೊಂದಿಗೆ ಹಂಚಿಕೊಳ್ಳುವ ಮೂಲಕ ಮೊಬೈಲ್ ಸಂಖ್ಯೆಯನ್ನು ನೀಡದೆ ಸಂವಹನವನ್ನು ಮತ್ತು ಸಂಪರ್ಕವನ್ನು ಸಾಧಿಸಬಹುದಾಗಿರುತ್ತದೆ

ವಾಟ್ಸಾಪ್‌ ನಂಬರ್‌ ಮತ್ತು ಯೂಸರ್‌ ನೇಮ್‌ ಫೀಚರ್‌ ನಡುವಿನ ಹೋಲಿಕೆಗಳು

ವೈಶಿಷ್ಟ್ಯತೆ ಮೊಬೈಲ್‌ ನಂಬರ್ ಯೂಸರ್‌ ನೇಮ್
ಸುರಕ್ಷತೆ ಕಡಿಮೆ ಉತ್ತಮ
ಸುಲಭ ಮಾಹಿತಿ ಹಂಚಿಕೊಳ್ಳುವಿಕೆ ಕಡಿಮೆ ಉತ್ತಮ
ಸ್ಪ್ಯಾಮ್‌ ಸುರಕ್ಷತೆ ಸಾಧಾರಣ ಉತ್ತಮ

ಬಳಕೆದಾರರಿಗೆ ಏನು ಉಪಯೋಗ

ಮೆಟಾ ಸಂಸ್ಥೆಯ ವಾಟ್ಸಪ್ ಯೂಸರ್ ನೇಮ್ ಫೀಚರ್ ಪ್ರಮುಖ ಉದ್ದೇಶ ಬಳಕೆದಾರರ ಗೌಪ್ಯತೆಯನ್ನು ಹೆಚ್ಚಿಸುವುದಾಗಿದೆ ಪ್ರಸ್ತುತ ಸಂದರ್ಭದಲ್ಲಿ ಹೊಸ ವ್ಯಕ್ತಿಯೊಂದಿಗೆ ವಾಟ್ಸಪ್ ನಲ್ಲಿ ಮಾತನಾಡಲು ನಿಮ್ಮ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನೀಡಲೇಬೇಕು ಇದರಿಂದ ಹಲವಾರು ಬಾರಿ ಅನಗತ್ಯ ಕರೆಗಳು, ಸ್ಪ್ಯಾಮ್ ಸಂದೇಶಗಳು ಹಾಗೂ ಮಾರ್ಕೆಟಿಂಗ್ ಮೆಸೇಜುಗಳು ಸಹ ಹೆಚ್ಚಾಗಿ ಬರಲು ಆರಂಭಿಸುತ್ತವೆ

ಈ ಹೊಸ Whatsapp Username Feature ನಲ್ಲಿ ಯೂಸರ್ ನೇಮ್ ಮಾತ್ರ ಹಂಚಿಕೊಂಡರೆ ಸಾಕು ಮೊಬೈಲ್ ಸಂಖ್ಯೆಯನ್ನು ನೀಡುವ ಅವಶ್ಯಕತೆ ಇರುವುದಿಲ್ಲ

Whatsapp Username Feature ಪ್ರಯೋಜನಗಳು

  • ವೈಯಕ್ತಿಕ ಮೊಬೈಲ್ ಸಂಖ್ಯೆ ಸುರಕ್ಷಿತವಾಗಿರುತ್ತದೆ‌
  • ನಾವು ಅಪರಿಚಿದರೊಂದಿಗೆ ಮಾತನಾಡುವಾಗ ಗೌಪ್ಯತೆ ಮಟ್ಟ ಹೆಚ್ಚಾಗಿರುತ್ತದೆ
  • ವ್ಯವಹಾರಕ್ಕಾಗಿ ಪ್ರತ್ಯೇಕ ಡಿಜಿಟಲ್ ಗುರುತನ್ನು ಬಳಸಬಹುದು
  • ಗ್ರಾಹಕರೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸಬಹುದು
  • ಸಾಮಾಜಿಕ ಜಾಲತಾಣಗಳಲ್ಲಿ ಯೂಸರ್ ನೇಮ್ ಮಾತ್ರ ಹಂಚಿಕೊಳ್ಳಬಹುದು 
  • ಸ್ಪ್ಯಾಮ್ ಕರೆಗಳ ಸಾಧ್ಯತೆ ಕಡಿಮೆಯಾಗುತ್ತದೆ

ಯಾವ ಬಳಕೆದಾರರಿಗೆ ಈ ಫೀಚರ್ ಹೆಚ್ಚು ಸಹಕಾರಿಯಾಗಲಿದೆ

ಈ ವಾಟ್ಸಪ್ ಯೂಸರ್ ನೇಮ್ ಫೀಚರ್  ಸಾಮಾನ್ಯ ಬಳಕೆದಾರರಿಗಿಂತ ಕೆಲವು ವೃತ್ತಿಪರ ಉದ್ಯಮಿಗಳಿಗೆ ಮತ್ತು ವ್ಯಕ್ತಿಗಳಿಗೆ ಹೆಚ್ಚು ಅನುಕೂಲವಾಗುವ ಸಾಧ್ಯತೆ ಇದೆ

ಸಣ್ಣ ಉದ್ಯಮಿಗಳು

ಸಣ್ಣ ಅಂಗಡಿಗಳು, ಆನ್‌ ಲೈನ್‌ ವ್ಯವಹಾರ ಮಾಡುವವರು ಅಥವಾ ಆನ್ ಲೈನ್ ಮೂಲಕ ಸೇವೆಯನ್ನು ನೀಡುವವರು ತಮ್ಮ ಮೊಬೈಲ್ ಸಂಖ್ಯೆ ನೀಡುವ ಬದಲು ಯೂಸರ್ ನೇಮಗಳನ್ನು ಹಂಚಿಕೊಳ್ಳಬಹುದು.

ಕಂಟೆಂಟ್ ಕ್ರಿಯೇಟರಗಳು

ಯೂಟ್ಯೂಬ್‌, ಫೇಸ್ ಬುಕ್, ಇನ್ಸ್ಟಾಗ್ರಾಂ ಮತ್ತು ಬ್ಲಾಗ್‌ ಕೆಲಸಗಳನ್ನು ನಡೆಸುವಂತಹ ಕಂಟೆಂಟ್ ಕ್ರಿಯೇಟರ್‌ ಗಳು ತಮ್ಮ ಪ್ರೇಕ್ಷಕರೊಂದಿಗೆ ಸಂಪರ್ಕ ಸಾಧಿಸಲು ಈ ಯೂಸರ್ ನೇಮ್ ಗಳನ್ನು ಬಳಸಬಹುದು

ವಿದ್ಯಾರ್ಥಿಗಳು

ಶೈಕ್ಷಣಿಕ ಗುಂಪುಗಳು, ಪ್ರಾಜೆಕ್ಟ್ ತಂಡಗಳು ಮತ್ತು ತರಬೇತಿ ಕೇಂದ್ರಗಳಲ್ಲಿ ವೈಯಕ್ತಿಕ ಸಂಖ್ಯೆಯನ್ನು ಹಂಚಿಕೊಳ್ಳುವಾಗ ಸ್ಥಿತಿ ಕಡಿಮೆಯಾಗುತ್ತದೆ

ಉದ್ಯೋಗ ಆಕಾಂಕ್ಷಿಗಳು

ಉದ್ಯೋಗಕ್ಕಾಗಿ ವಿವಿಧ ಸಂಸ್ಥೆಗಳೊಂದಿಗೆ ತಮ್ಮ ಮಾಹಿತಿಯನ್ನು ಹಂಚಿಕೊಳ್ಳುವವರು ಮತ್ತು ವಿವಿಧ ಸಂಸ್ಥೆಗಳೊಂದಿಗೆ ಸಂಪರ್ಕ ಸಾಧಿಸುವವರು ತಮ್ಮ ಸುರಕ್ಷತೆಯನ್ನು ಕಾಪಾಡಿಕೊಳ್ಳಬಹುದು

ಮಹಿಳೆಯರು ಮತ್ತು ಯುವಕರು

ಅಪರಿಚಿತ ವ್ಯಕ್ತಿಗಳೊಂದಿಗೆ ಸಂವಹನವನ್ನು ಸಾಧಿಸುವ ಸಂದರ್ಭದಲ್ಲಿ ಮೊಬೈಲ್ ಸಂಖ್ಯೆಯನ್ನು ಬಹಿರಂಗಪಡಿಸಿರುವುದು ಸುರಕ್ಷತೆಯ ದೃಷ್ಟಿಯಿಂದ ಹೆಚ್ಚು ಸಹಕಾರಿಯಾಗಿದೆ

ಜಗತ್ತಿನ ಇತರೆ ಅಪ್ಲಿಕೇಶನ್ ಗಳಲ್ಲಿ ಯೂಸರ್ ನೇಮ್ ಗಳ ವ್ಯವಸ್ಥೆ

ಯೂಸರ್ ನೇಮ್ ಎಂಬ ಪರಿಕಲ್ಪನೆಯು ಹೊಸದಲ್ಲ ಆದರೆ ಈಗಾಗಲೇ ಹಲವು ಜನಪ್ರಿಯ ಮೆಸೇಜಿಂಗ್ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ವ್ಯವಸ್ಥೆಯು ಈಗಾಗಲೇ ಬಳಕೆಯಲ್ಲಿದೆ ಉದಾಹರಣೆಗೆ

  • Telegram – ಯೂಸರ್‌ ನೇಮ್ ಮೂಲಕ ಮೊಬೈಲ್ ಸಂಖ್ಯೆ ಇಲ್ಲದೆ ಚಾಟ್ ಗಳನ್ನು ಮಾಡಬಹುದು.
  • Signal – ಬಳಕೆದಾರರ ಸುರಕ್ಷತೆ ಹೆಚ್ಚಿಸಲು Username ವ್ಯವಸ್ಥೆಯನ್ನು ಪರಿಚಯಿಸಿದೆ.
  • Discord – Username ಆಧಾರಿತವಾಗಿ ಖಾತೆಯ ನಿರ್ವಹಣೆ.
  • Instagram – Username ಮೂಲಕ ಪ್ರೊಫೈಲ್ ಗಳನು ಹುಡುಕಬಹುದು.
  • X (Twitter) – @Username ಮೂಲಕ ನಿರ್ದಿಷ್ಟ ಬಳಕೆದಾರರನ್ನು ಗುರುತಿಸಲಾಗುತ್ತದೆ.

ಈ ಅಪ್ಲಿಕೇಶನ್ ಗಳ ಯಶಸ್ಸನ್ನು ಗಮನಿಸಿದ ನಂತರ ಮೆಟಾ ಸಂಸ್ಥೆಯು ಕೂಡ ವಾಟ್ಸಪ್ ನಲ್ಲಿ ಇದೇ ರೀತಿಯ ವ್ಯವಸ್ಥೆಯನ್ನು ತರಲು ಪ್ರಯತ್ನಿಸುತ್ತಿದೆ

ಭಾರತದಲ್ಲಿ ಈ Whatsapp Username Feature ಹೆಚ್ಚು ಚರ್ಚೆಯಾಗಲು ಕಾರಣವೇನು

ಭಾರತವು ಇಡೀ ವಿಶ್ವದಲ್ಲೇ ಅತಿ ದೊಡ್ಡ ವಾಟ್ಸಪ್ ಬಳಕೆದಾರರನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ. ಸರ್ಕಾರಿ ಸೇವೆಗಳು, ಶಿಕ್ಷಣ ಸಂಸ್ಥೆಗಳು, ಲಕ್ಷಾಂತರ ಉದ್ಯಮಗಳು ಮತ್ತು ಸಾಮಾನ್ಯ ನಾಗರಿಕರು ವಾಟ್ಸಪ್ ಅನ್ನು ತಮ್ಮ ದೈನಂದಿನ ಸಂವಹನದ ಪ್ರಮುಖ ಸಾಧನವಾಗಿ ಬಳಸುತ್ತಿದ್ದಾರೆ

ಇಂತಹ ಸಮಯದಲ್ಲಿ Whatsapp Username Feature ಬಂದರೆ ಅದು ಕೋಟ್ಯಂತರ ಬಳಕೆದಾರರ ಅನುಭವವನ್ನು ಬದಲಾಯಿಸುತ್ತದೆ ಅಂದರೆ ಇದೇ ಸಮಯದಲ್ಲಿ ಸೈಬರ್ ಅಪರಾಧಿಗಳು ಸಹ ಈ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯೂ ಸಹ ಹೆಚ್ಚಾಗಿರುವುದರಿಂದ ಕೇಂದ್ರ ಸರ್ಕಾರವು ಭದ್ರತಾ ಅಂಶಗಳಿಗೆ ಹೆಚ್ಚಿನ ಮಹತ್ವವನ್ನು ನೀಡಿದೆ

ಹೀಗಾಗಿ ಈ ಹೊಸ ವಾಟ್ಸಪ್ ಯೂಸರ್ ನೇಮ್ ಫೀಚರ್ ಒಂದು ಕಡೆ ಸುರಕ್ಷತೆಯನ್ನು ಹೆಚ್ಚಿಸುವ ಸಾಧನವಾಗಿದ್ದರೆ ಮತ್ತೊಂದು ಕಡೆ ಭದ್ರತಾ ಸವಾಲುಗಳನ್ನು ಸಹ ಎದುರಿಸುವಂತಿದೆ ಎಂಬ ಚರ್ಚೆ ದೇಶದಾದ್ಯಂತ ನಡೆಯುತ್ತಿದೆ

ಹೋಲಿಕೆ ಕೋಷ್ಟಕ

ವೈಶಿಷ್ಟ್ಯ ಪ್ರಸ್ತುತ ವಾಟ್ಸಾಪ್ ಯೂಸರ್‌ ನೇಮ್
ಮೊಬೈಲ್‌ ನಂಬರ್ ಅವಶ್ಯಕ ಹೆಚ್ಚುವರಿ ಆಯ್ಕೆ
ಸುರಕ್ಷತೆ ಸಾಧಾರಣ ಹೆಚ್ಚು
ಸ್ಪ್ಯಾಮ್ ಹೆಚ್ಚು ಕಡಿಮೆ
ಹುಡುಕುವಿಕೆ ನಂಬರ್ ಯೂಸರ್‌ ನೇಮ್

ಭಾರತ ಸರ್ಕಾರವು ಈ Whatsapp Username Feature ಬಗ್ಗೆ ಆತಂಕ ವ್ಯಕ್ತಪಡಿಸಲು ಕಾರಣವೇನು

Whatsapp Username Feature ಅನ್ನು ಬಳಕೆದಾರರ ಗೌಪ್ಯತೆಯನ್ನು ಹೆಚ್ಚಿಸುವ ಮತ್ತು ಕಾಪಾಡುವ ಉದ್ದೇಶದಿಂದ ಅಭಿವೃದ್ಧಿಪಡಿಸಲಾಗಿದ್ದರೂ ಸಹ ಭಾರತ ಸರ್ಕಾರವು ಈ ಹೊಸ ವ್ಯವಸ್ಥೆಯನ್ನು ಕೇವಲ ಗೌಪ್ಯತೆ ದೃಷ್ಟಿಯಿಂದ ಮಾತ್ರ ನೋಡದೆ ಬದಲಾಗಿ ದೇಶದ ಸೈಬರ್ ಸುರಕ್ಷತೆ ಡಿಜಿಟಲ್ ಅಪರಾಧಗಳು ಆನ್ಲೈನ್ ವಂಚನೆ ಹಾಗೂ ಕಾನೂನು ಜಾರಿ ಸಂಸ್ಥೆಗಳ ತನಿಖೆಯ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎಂಬುದನ್ನು ಸಹ ಗಂಭೀರವಾಗಿ ಪರಿಗಣಿಸಿದೆ

ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಡಿಜಿಟಲ್ ವಹಿವಾಟುಗಳು, ಯುಪಿಐ ಪಾವತಿಗಳು, ಸಾಮಾಜಿಕ ಜಾಲತಾಣಗಳ ಬಳಕೆ ಹಾಗೂ ಆನ್ಲೈನ್ ಬ್ಯಾಂಕಿಂಗ್ ಬಳಕೆಯು ಗಣನೀಯವಾಗಿ ಹೆಚ್ಚುತ್ತಿದೆ ಇದರಿಂದ ಸೈಬರ್ ವಂಚನೆಗಳ ಸಂಖ್ಯೆಯು ವೇಗವಾಗಿ ಏರಿಕೆಯಾಗಿರುವುದು ಸರ್ಕಾರದ ಆತಂಕಕ್ಕೆ ಪ್ರಮುಖ ಕಾರಣವಾಗಿದೆ

ಸರ್ಕಾರದ ಅಭಿಪ್ರಾಯದಂತೆ ಮೊಬೈಲ್ ಸಂಖ್ಯೆಯ ಬದಲಿಗೆ ವಾಟ್ಸಪ್ ಯೂಸರ್ ನೇಮ್ ಫೀಚರ್ ಮೂಲಕ ಸಂಪರ್ಕ ಸಾಧಿಸುವ ವ್ಯವಸ್ಥೆ ಜಾರಿಯಾದರೆ ಅಪರಾಧಿಗಳು ತಮ್ಮ ಗುರುತನ್ನು ಮರೆಮಾಚಲು ಇನ್ನಷ್ಟು ಉತ್ತಮ ಅವಕಾಶಗಳು ದೊರೆಯಬಹುದಾಗಿರುತ್ತದೆ ಆದ್ದರಿಂದ ಭದ್ರತಾ ಕ್ರಮಗಳು ಸಮರ್ಪಕವಾಗಿರುವುದನ್ನು ಖಚಿತಪಡಿಸಿಕೊಂಡ ನಂತರವೇ ಈ ಯೂಸರ್ ನೇಮ್ ಅನ್ನು ಬಿಡುಗಡೆ ಮಾಡುವಂತೆ ಸರಕಾರವು ನಿರ್ಧಾರವನ್ನು ಕೈಗೊಂಡಿದೆ

ಮೊಬೈಲ್ ಸಂಖ್ಯೆ ಏಕೆ ಪ್ರಮುಖ ಗುರುತಾಗಿದೆ

ಪ್ರಸ್ತುತದಲ್ಲಿ ವಾಟ್ಸಪ್ ಖಾತೆಯು ಸಂಪೂರ್ಣವಾಗಿ ಮೊಬೈಲ್ ಸಂಖ್ಯೆಯ ನೇರ ಸಂಬಂಧವನ್ನು ಹೊಂದಿದೆ ಯಾವುದೇ ಬಳಕೆದಾರರು ವಾಟ್ಸಾಪ್ ಖಾತೆಯನ್ನು ತೆರೆಯಬೇಕಾದರೆ ಮೊಬೈಲ್ ಸಂಖ್ಯೆ ಮತ್ತು ಓಟಿಪಿ ದೃಢೀಕರಣವನ್ನು ಕಡ್ಡಾಯವಾಗಿ ಮಾಡಬೇಕಾಗಿರುತ್ತದೆ

ಪ್ರಸ್ತುತ ಇರುವ ವ್ಯವಸ್ಥೆಯಿಂದ ಪ್ರಯೋಜನಗಳು

  • ಕಾನೂನು ಜಾರಿ ಸಂಸ್ಥೆಗಳು ಮತ್ತು ತನಿಖಾ ಸಂಸ್ಥೆಗಳು ಅಗತ್ಯವಿದ್ದರೆ ತನಿಖೆ ನಡೆಸಲು ಸಹಾಯವಾಗುತ್ತದೆ
  • ವಂಚನೆ ನಡೆದರೆ ಖಾತೆಯ ಮೂಲವನ್ನು ಪಚ್ಚೆಹಚ್ಚುವ ವಿಧಾನ ಸುಲಭವಾಗಿದೆ
  • ಬಳಕೆದಾರರ ಗುರುತನ್ನು ಪರಿಶೀಲಿಸಲು ಅನುಕೂಲಕಾರಿ
  • ಸ್ಪ್ಯಾಮ್ ಚಟುವಟಿಕೆಗಳನ್ನು ನಿಯಂತ್ರಿಸಲು ನೆರವು‌

Whatsapp Username Feature ಆಧಾರಿತ ವ್ಯವಸ್ಥೆಯಲ್ಲಿ ಬಳಕೆದಾರರ ಹೆಸರು ಮಾತ್ರ ಕಾಣುವ ಸಾಧ್ಯತೆ ಇರುವುದರಿಂದ ಅಪರಾಧಿಗಳು ನಕಲಿ ಹೆಸರನ್ನು ಅಥವಾ ನಕಲಿ ಗುರುತನ್ನು ಬಳಸಿಕೊಂಡು ಸಮಸ್ಯೆಗಳನ್ನು ಹೆಚ್ಚಿಸಬಹುದು ಎಂಬ ಅಭಿಪ್ರಾಯ ಪಟ್ಟಿದ್ದಾರೆ

ಡಿಜಿಟಲ್ ಅರೆಸ್ಟ್ ವಂಚನೆಗಳ ಸಂಖ್ಯೆಯಲ್ಲಿ ಹೆಚ್ಚಳ

ಕಳೆದ ಕೆಲವು ವರ್ಷಗಳಿಂದ ಭಾರತವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶವಾದರೂ ಇದರ ಜೊತೆಯಲ್ಲಿ ಅತ್ಯಂತ ವೇಗವಾಗಿ ಸೈಬರ್ ವಂಚನೆಗಳಲ್ಲಿ ಡಿಜಿಟಲ್ ಅರೆಸ್ಟ್ ಸ್ಕ್ಯಾಮ್ ಕೂಡ ಹೆಚ್ಚುತ್ತಿದೆ

ಈ ವಂಚನೆಯಲ್ಲಿ ಅಪರಾಧಿಗಳು ತಮ್ಮನ್ನು ತಾವು ಪೊಲೀಸ್ ಅಧಿಕಾರಿಗಳು‌, ಸಿಬಿಐ ಅಥವಾ ನ್ಯಾಯಾಧೀಶರು ಎಂದು ಪರಿಚಯಿಸಿಕೊಂಡು ನಿಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ, ನಿಮ್ಮ ಬ್ಯಾಂಕ್ ಖಾತೆ ತನಿಖೆಯಲ್ಲಿದೆ ಅಥವಾ ನಿಮ್ಮ ಆಧಾರ್ ಸಂಖ್ಯೆಯ ದುರುಪಯೋಗವಾಗಿದೆ ಎಂಬಂತೆ ಜನರನ್ನು ಹೆದರಿಸಿ ಅವರನ್ನು ಆತಂಕ ವಾಗುವಂತೆ ಮಾಡುತ್ತಾರೆ

ನಂತರ ವಿಡಿಯೋ ಕರೆ ಅಥವಾ ವಾಟ್ಸಪ್ ಮೂಲಕ ಸಂಪರ್ಕಿಸಿ ಹಣವನ್ನು ವರ್ಗಾಯಿಸಲು ಒತ್ತಾಯ ಮಾಡಲಾಗುತ್ತದೆ

Whatsapp Username Feature ವ್ಯವಸ್ಥೆ ಜಾರಿಗೆ ಬಂದರೆ ಇಂತಹ ವಂಚಕರು ನಕಲಿ ಅಧಿಕಾರಿಗಳ ಹೆಸರು ಅಥವಾ ಯೂಸರ್ ನೇಮ್ ಅನ್ನು ಸೃಷ್ಟಿಸಿ ಜನರನ್ನು ಸುಲಭವಾಗಿ ನಂಬಿಸಬಹುದು ಎಂಬ ಆತಂಕವನ್ನು ಸರ್ಕಾರ ವ್ಯಕ್ತಪಡಿಸಿದೆ

ನಕಲಿ ಖಾತೆಗಳ ಹೆಚ್ಚಳ

ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ನಕಲಿ ಖಾತೆಗಳ ಸಂಖ್ಯೆಯು ಹೆಚ್ಚಾಗಿದ್ದು ವಾಟ್ಸಪ್ ಯೂಸರ್ ನೇಮ್ ಫೀಚರ್ ವ್ಯವಸ್ಥೆ ಬಂದರೆ ಈ ಕೆಳಕಂಡ ಯೂಸರ್ ನೇಮ್ ಗಳನ್ನು ಸೃಷ್ಟಿಸುವ ಮೂಲಕ ಜನರನ್ನು ಮೋಸಗೊಳಿಸಬಹುದು

  • @PMOIndiaSupport
  • @PoliceHelpDesk
  • @BankManager
  • @IncomeTaxIndia
  • @KarnatakaGovt

ಈ ರೀತಿಯ Whatsapp Username Feature ಗಳನ್ನು ನೋಡಿ ಸಾಮಾನ್ಯ ಜನರು ಸಹ ಅವುಗಳನ್ನು ಅಧಿಕೃತ ಖಾತೆಗಳು ಎಂದು ನಂಬುವ ಸಾಧ್ಯತೆ ಇರುತ್ತದೆ ಇದರಿಂದ ಹಣಕಾಸು ವಂಚನೆ ವೈಯಕ್ತಿಕ ಮಾಹಿತಿ ಕಳವು ಅಥವಾ ಸಾಮಾಜಿಕ ಜಾಲತಾಣಗಳ ಮೂಲಕ ಮೋಸ ಆಗಬಹುದು

ಬ್ಯಾಂಕಿಂಗ್ ಮತ್ತು ಯುಪಿಐ ವಂಚನೆ

ಭಾರತ ದೇಶದಲ್ಲಿ ಹಣದ ವ್ಯವಹಾರ ಹೆಚ್ಚುತ್ತಿತರುವುದರಿಂದ ಯುಪಿಐ ಬಳಕೆಯು ಸಹ ಅತ್ಯಧಿಕ ಮಟ್ಟದಲ್ಲಿ ಹೆಚ್ಚಳವಾಗಿದೆ ಭಾರತದಲ್ಲಿ ಯುಪಿಐ ಬಳಕೆ ವಿಶ್ವದಲ್ಲಿ ಅತ್ಯಧಿಕ ಆಗಿರುವುದರಿಂದ ಪ್ರತಿದಿನ ಕೋಟ್ಯಂತರ ಜನರು ಕೋಟ್ಯಂತರ ರೂಪಾಯಿ ಡಿಜಿಟಲ್ ವಹಿವಾಟು ನಡೆಸುತ್ತಾರೆ.

ಸೈಬರ್ ಅಪರಾಧಿಗಳು ಈಗಾಗಲೇ ಈ ಕೆಳಕಂಡ ವಿಧಾನಗಳನ್ನು ಬಳಸುತ್ತಿದ್ದು ಈ ವಾಟ್ಸಪ್ ಯೂಸರ್ ನೇಮ್ ಫೀಚರ್ ವ್ಯವಸ್ಥೆ ಬಂದರೆ ಬ್ಯಾಂಕ್ ಅಥವಾ ಪಾವತಿ ಸಂಸ್ಥೆಗಳ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಹಣವನ್ನು ವಂಚಿಸುವ ಸಾಧ್ಯತೆ ಹೆಚ್ಚುರುತ್ತದೆ

  • QR Code Scam
  • Fake Payment Screenshot
  • UPI Collect Request Scam
  • Refund Scam
  • KYC Update Scam

 

ಫಿಶಿಂಗ್ ದಾಳಿಗಳು

ಫಿಶಿಂಗ್ ದಾಳಿಗಳು ಎಂದರೆ ಮೋಸಗಾರರು ನಕಲಿ ವೆಬ್ಸೈಟ್ ಗಳನ್ನು ಸೃಷ್ಟಿಸಿ ಅಥವಾ ನಕಲಿ ಸಂದೇಶಗಳನ್ನು ಸೃಷ್ಟಿಸುವುದರ ಮೂಲಕ ಬಳಕೆದಾರರ ಮಾಹಿತಿಯನ್ನು ಕದಿಯುವ ವಿಧಾನವಾಗಿದೆ ಉದಾಹರಣೆಗೆ

  • ನಿಮ್ಮ ಬ್ಯಾಂಕ್ ಖಾತೆ ಬಂದ್ ಆಗಲಿದೆ
  • ತಕ್ಷಣ ಕೆವೈಸಿ ಅಪ್ಡೇಟ್ ಮಾಡಿ
  • ನಿಮ್ಮ PAN Card ಪರಿಶೀಲನೆ ಕಡ್ಡಾಯ

ಈ ಮೇಲಿನಂತೆ ಸಂದೇಶಗಳನ್ನು ಅಧಿಕೃತ ವಾಟ್ಸಪ್ ಯೂಸರ್ ನೇಮ್ ಫೀಚರ್ನಿಂದ ಬಂದಿವೆ ಎಂದು ಬಳಕೆದಾರರು ನಂಬಿ ದೊಡ್ಡ ಪ್ರಮಾಣದ ವಂಚನೆಗೆ ಒಳಗಾಗುತ್ತಾರೆ

ಓಟಿಪಿ ಮತ್ತು ವೈಯಕ್ತಿಕ ಮಾಹಿತಿಯ ಕಳವು

ಬಹುತೇಕ ಆನ್ ಲೈನ್ ವಂಚನೆಗಳಲ್ಲಿ ಓಟಿಪಿಯು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ ಅಪರಾಧಿಗಳು ತಮ್ಮನ್ನು ತಾವು ಬ್ಯಾಂಕ್ ಸಿಬ್ಬಂದಿ ಅಥವಾ ಸರ್ಕಾರಿ ಅಧಿಕಾರಿ ಎಂದು ನಂಬಿಸಿ ಓಟಿಪಿ ಕೇಳುವ ಪ್ರಕರಣಗಳು ಈಗಾಗಲೇ ಹೆಚ್ಚಾಗಿವೆ ಮೂಲಕ ವಿಶ್ವಾಸಾರ್ಹ ಗುರುತು ನಿರ್ಮಿಸಿಕೊಂಡರೆ ಇಂತಹ ವಂಚನೆಗಳ ಪರಿಣಾಮ ಇನ್ನಷ್ಟು ಹೆಚ್ಚಾಗಬಹುದು

ರಾಷ್ಟ್ರೀಯ ಭದ್ರತೆಗೆ ಇರುವ ಆತಂಕ ಏನು

ಸರ್ಕಾರವು ಕೇವಲ ವೈಯಕ್ತಿಕ ವ್ಯಕ್ತಿಗಳಿಗೆ ಆಗುವ ವಂಚನೆಗಳ ಬಗ್ಗೆ ಮಾತ್ರವಲ್ಲದೆ ರಾಷ್ಟ್ರೀಯ ಭದ್ರತೆಯ ಮೇಲು ಸಹ ಹೆಚ್ಚಿನ ಗಮನವನ್ನು ಹರಿಸಿದೆ

ಅನಾಮಧೇಯ ಯೋಜನೆಗಳ ಮೂಲಕ ಈ ಕೆಳಕಂಡ ರೀತಿಯ ವಂಚನೆಗಳನ್ನು ಮಾಡಬಹುದು

  • ವದಂತಿಗಳನ್ನು ಸೃಷ್ಟಿಸುವುದು
  • ಸಮಾಜದಲ್ಲಿ ಅಶಾಂತಿ ಉಂಟು ಮಾಡುವುದು
  • ಸುಳ್ಳು ಸುದ್ದಿಗಳನ್ನು ಹರಡುವುದು
  • ಸಂಘಟಿತ ಸೈಬರ್ ದಾಳಿಗಳನ್ನು ನಡೆಸುವುದು

ವಾಟ್ಸಪ್ ಯೂಸರ್ನೇ ಫೀಚರ್ ಮೂಲಕ ಈ ರೀತಿಯ ಚಟುವಟಿಕೆಗಳಿಗೆ ಅವಕಾಶ ಸಿಗಬಹುದು ಎಂಬುದನ್ನು ಸರ್ಕಾರ ಪರಿಶೀಲನೆ ಮಾಡುತ್ತಿದೆ

ಕಾನೂನು ಜಾರಿ ಸಂಸ್ಥೆಗಳ ಮುಂದೆ ಇರುವ ಸವಾಲುಗಳು

ಮೊಬೈಲ್ ಸಂಖ್ಯೆ ಇರುವ ಸಂದರ್ಭದಲ್ಲಿ ತನಿಖೆ ಅಧಿಕಾರಿಗಳು ಅಗತ್ಯ ಮಾಹಿತಿಯನ್ನು ಪಡೆದು ಅಪರಾಧಿಗಳನ್ನು ಪತ್ತೆಹಚ್ಚಲು ಸುಲಭವಾಗುತ್ತದೆ

ಆದರೆ ವಾಟ್ಸಪ್ ಯೂಸರ್ ನೇಮ್ ಫೀಚರ್ ಸಾರ್ವಜನಿಕವಾಗಿ ಕಾಣುವ ವ್ಯವಸ್ಥೆ ಆಗಿರುವುದರಿಂದ ತನಿಖೆ ನಡೆಸಲು ಹೆಚ್ಚುವರಿ ತಾಂತ್ರಿಕ ನೆರವು ಅಗತ್ಯವಾಗಬಹುದು ಅಥವಾ ತನಿಖೆಯ ಸಂದರ್ಭದಲ್ಲಿ ಹೆಚ್ಚು ಸವಾಲುಗಳನ್ನು ಎದುರಿಸಬಹುದು

ಇದೇ ಕಾರಣದಿಂದ ಸರ್ಕಾರವು ಮೆಟಾ ಸಂಸ್ಥೆಯಿಂದ ಸ್ಪಷ್ಟವಾದ ತಾಂತ್ರಿಕ ವಿವರಗಳನ್ನು ಕೇಳಿದೆ

ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಸರಕಾರವು ಕೇಳಿರುವ ಪ್ರಶ್ನೆಗಳು

ಕೇಂದ್ರ ಸರ್ಕಾರವು ಮೆಟಾ ಸಂಸ್ಥೆಗೆ ವಾಟ್ಸಪ್ ಯುಸರ್ ನೇಮ್ ಟೀಚರ್ ಅನ್ನು ಶುರು ಮಾಡಲು ಹಲವು ಪ್ರಶ್ನೆಗಳನ್ನು ಕೇಳಿದ್ದು ಆ ಪ್ರಶ್ನೆಗಳು ಈ ಕೆಳಕಂಡಂತಿವೆ

ಬಳಕೆದಾರರ ಗುರುತನ್ನು ಹೇಗೆ ಪರಿಶೀಲಿಸಲಾಗುತ್ತದೆ?

ಯೂಸರ್ ನೇಮ್ ಆಯ್ಕೆ ಮಾಡಿಕೊಳ್ಳುವ ಮೂಲಕ ಬಳಕೆದಾರರ ಗುರುತು ಸುರಕ್ಷಿತವಾಗಿ ದಾಖಲಾಗುತ್ತದೆಯೇ ಅಥವಾ ಬಳಕೆದಾರರ ಮಾಹಿತಿ ಸ್ಪಷ್ಟವಾಗಿ ದಾಖಲಾಗುತ್ತದೆ ಎಂಬುದರ ಕುರಿತು ಸರ್ಕಾರ ಸ್ಪಷ್ಟನೆ ಕೇಳಿದೆ

ಫೇಕ್  ಯೂಸರ್ ನೇಮ್ ಗಳನ್ನು ಹೇಗೆ ತಡೆಯಲಾಗುತ್ತದೆ?

ಪ್ರಸಿದ್ಧ ವ್ಯಕ್ತಿಗಳು, ಸಾರ್ವಜನಿಕ ಸಂಸ್ಥೆಗಳ, ಹೆಸರು ಹಾಗೂ ಸರ್ಕಾರಿ ಇಲಾಖೆಗಳ ಹೆಸರಿನಲ್ಲಿ ನಕಲಿ ಯೂಸರ್ ನೇಮ್ ಸೃಷ್ಟಿಯಾಗದಂತೆ ಯಾವ ಕ್ರಮವನ್ನು ಕೈಗೊಳ್ಳಲಾಗುತ್ತದೆ

ಕಾನೂನು ಜಾರಿ ಸಂಸ್ಥೆಗಳಿಗೆ ಸಹಕಾರ ಹೇಗೆ ದೊರೆಯುತ್ತದೆ?

ಸೈಬರ್ ಅಪರಾಧ ತನಿಖೆ ಮತ್ತು ಪರಿಶೀಲನೆಗಳಲ್ಲಿ ಮೆಟಾ ಸಂಸ್ಥೆಯು ಯಾವ ರೀತಿಯ ಮಾಹಿತಿಯನ್ನು ನೀಡುವ ಮೂಲಕ ಸಹಕಾರ ನೀಡಲಿದೆ

ಸ್ಪ್ಯಾಮ್ ಮತ್ತು ಸ್ಕ್ಯಾಮ್ ಪತ್ತೆ ಹೇಗೆ?

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಕೃತಕ ಬುದ್ಧಿಮತ್ತೆ ಮತ್ತು ಸ್ವಯಂ ಚಾಲಿತ ವ್ಯವಸ್ಥೆಗಳು ಯಾವ ಹಂತದಲ್ಲಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತವೆ

ಭಾರತೀಯ ಕಾನೂನುಗಳನ್ನು ಮೆಟಾ ಪಾಲಿಸುತ್ತದೆಯೇ?

ಭಾರತದ ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಯಮಗಳು ಮತ್ತು ಸರ್ಕಾರದ ನಿರ್ದೇಶನಗಳನ್ನು ಮೆಟಾ ಸಂಸ್ಥೆಯು ಸಂಪೂರ್ಣವಾಗಿ ಅನುಸರಿಸುತ್ತದೆಯೇ ಎಂಬ ಬಗ್ಗೆಯೂ ಸಹ ಪ್ರಶ್ನೆಗಳನ್ನು ಸರ್ಕಾರವು ಕೇಳಿದೆ

 

ಮೆಟಾ ಸಂಸ್ಥೆ ನೀಡಿರುವ ಪ್ರಾಥಮಿಕ ಪ್ರತಿಕ್ರಿಯೆ

ಮೆಟಾ ಸಂಸ್ಥೆಯು ಈ Whatsapp Username Feature ಅನ್ನು ಇನ್ನೂ ಅಭಿವೃದ್ಧಿ ಮತ್ತು ಪರೀಕ್ಷಾ ಹಂತದಲ್ಲಿ ಇರಿಸಲಾಗಿದೆ ಎಂದು ತಿಳಿಸಿದೆ.

ಭಾರತ ದೇಶ ಸೇರಿದಂತೆ ಯಾವುದೇ ದೇಶದಲ್ಲಿ ಅಂತಿಮವಾಗಿ ಈ ಫೀಚರ್ ಅನ್ನು ಬಿಡುಗಡೆ ಮಾಡುವ ಮೊದಲು ಸ್ಥಳೀಯ ಕಾನೂನುಗಳು ಮತ್ತು ಸುರಕ್ಷಿತ ಮಾನದಂಡಗಳನ್ನು ಪರಿಶೀಲಿಸಿದ ನಂತರವೇ ಈ ಫೀಚರ್ ಅನ್ನು ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದೆ

ಸರ್ಕಾರದೊಂದಿಗೆ ಸಮರ್ಪಕ ಚರ್ಚೆಯನ್ನು ನಡೆಸಿ ಅಗತ್ಯವಿರುವ ಬದಲಾವಣೆಗಳನ್ನು ಮಾಡಲು ಸಂಸ್ಥೆಯು ಸಿದ್ಧವಾಗಿದೆ ಎಂಬ ಸೂಚನೆಯನ್ನು ಸಹ ನೀಡಿದೆ

ಬಳಕೆದಾರರು ಆತಂಕ ಪಡಬೇಕೇ?

ಸದ್ಯಕ್ಕೆ ಬಳಕೆದಾರರು ಯಾವುದೇ ರೀತಿ ಆತಂಕವನ್ನು ಪಡಬೇಕಾಗಿಲ್ಲ ಏಕೆಂದರೆ ಈ ವೈಶಿಷ್ಟ್ಯವನ್ನು ಇನ್ನೂ ಬಳಕೆದಾರರಿಗೆ ಬಿಡುಗಡೆ ಮಾಡಲಾಗಿಲ್ಲ

ಹೀಗಾಗಿ ನಿಮ್ಮ ವಾಟ್ಸಪ್ ಖಾತೆ ಇಂದನಂತೆಯೇ ಮೊಬೈಲ್ ಸಂಖ್ಯೆ ಆಧಾರಿತವಾಗಿ ಕಾರ್ಯನಿರ್ವಹಿಸಲಿದೆ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಯೂಸರ್ ನೇಮ್ ಫೀಚರ್ ಈಗಲೇ ಬಂದಿದೆ ಅಥವಾ ತಕ್ಷಣ ರಚಿಸಿ ಎಂಬ ಸಂದೇಶಗಳನ್ನು ಯಾವುದೇ ಕಾರಣಕ್ಕೂ ನಂಬಬೇಡಿ

ಮೆಟಾ ಸಂಸ್ಥೆಯು ಅಧಿಕೃತವಾಗಿ ಘೋಷಿಸಿದ ನಂತರವೇ ಈ ವೈಶಿಷ್ಟ್ಯ ಎಲ್ಲರಿಗೂ ಲಭ್ಯವಾಗಲಿದೆ

 

ವಾಟ್ಸಪ್ ಯೂಸರ್ ನೇಮ್ ಫೀಚರ್ ಕುರಿತು ಮೆಟಾ ಸಂಸ್ಥೆ ನೀಡಿರುವ ಸ್ಪಷ್ಟನೆ

ಭಾರತ ಸರ್ಕಾರದಿಂದ ಹಲವಾರು ಭದ್ರತಾ ಆತಂಕಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ವಾಟ್ಸಪ್ ಮಾತೃ ಸಂಸ್ಥೆ ಆದ ಮೆಟಾ ಸಂಸ್ಥೆಯು ಅಧಿಕೃತವಾಗಿ ಪ್ರತಿಕ್ರಿಯೆಯನ್ನು ನೀಡಿದ್ದು ಕಂಪನಿಯ ಪ್ರಕಾರ ವಾಟ್ಸಾಪ್ ಯೂಸರ್ ನೇಮ್ ಫೀಚರ್ ಇನ್ನೂ ಅಭಿವೃದ್ಧಿ ಮತ್ತು ಪರೀಕ್ಷಾ ಹಂತದಲ್ಲಿದ್ದು ಸಾರ್ವಜನಿಕರಿಗೆ ಯಾವುದೇ ರೀತಿಯ ಬಿಡುಗಡೆ ಮಾಡಿಲ್ಲ ಎಂದು ತಿಳಿಸಿದೆ

ಈ ಫೀಚರ್ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲವು ಮಾಹಿತಿಗಳು ಅಧಿಕೃತವಾಗಿಲ್ಲ ಎಂದು ಮೆಟಾ ಸಮಿತಿಯು ಸ್ಪಷ್ಟಪಡಿಸಿದೆ ಹೊಸ ವೈಶಿಷ್ಟವನ್ನು ಬಿಡುಗಡೆ ಮಾಡುವ ಮೊದಲು ಬಳಕೆದಾರರ ಗೌಪ್ಯತೆ, ಸುರಕ್ಷತೆ ಹಾಗೂ ವಿವಿಧ ದೇಶಗಳ ಕಾನೂನು ಅಂಶಗಳನ್ನು ಪರಿಗಣಿಸಿ ಅಗತ್ಯ ಬದಲಾವಣೆಗಳನ್ನು ಮಾಡಿದ ನಂತರವೇ ಈ ಬಿಡುಗಡೆ ಮಾಡಲಾಗುತ್ತದೆ ಎಂದು ಮೆಟಾ ತಿಳಿಸಿದೆ

ಮೆಟಾ ಸಂಸ್ಥೆಯು ಹೇಳುವಂತೆ ಈ ವೈಶಿಷ್ಟ್ಯದ ಉದ್ದೇಶವು ಬಳಕೆದಾರರ ಮೊಬೈಲ್ ಸಂಖ್ಯೆಯನ್ನು ಮರೆಮಾಚಿ ಅವರಿಗೆ ಹೆಚ್ಚಿನ ಸುರಕ್ಷತೆಯನ್ನು ಒದಗಿಸುವುದಾಗಿದೆ ಆದರೆ ಅದೇ ಸಮಯದಲ್ಲಿ ಸೈಬರ್ ಅಪರಾಧಗಳಿಗೆ ಅವಕಾಶ ಸಿಗಬಹುದು ಎಂಬ ಆತಂಕ ಇರುವುದರಿಂದ ಭದ್ರತಾ ವ್ಯವಸ್ಥೆಗಳನ್ನು ಅಳವಡಿಸಿದ ನಂತರವೇ ಅಧಿಕೃತ ಅಧಿಸೂಚನೆಯನ್ನು ಹೊರಡಿಸಲಾಗುವುದು ಎಂದು ತಿಳಿಸಿದೆ.

ಯುಸರ್ ನೇಮ್ ಫೀಚರ್ ನಲ್ಲಿ ಈ ಕೆಳಕಂಡ ಭದ್ರತಾ ವ್ಯವಸ್ಥೆ ಇರಬಹುದು

ಮೆಟಾ ಸಂಸ್ಥೆಯು ಅಭಿವೃದ್ಧಿಪಡಿಸುತ್ತಿರುವ ಮಾಹಿತಿಯ ಪ್ರಕಾರ ಯೂಸರ್ ನೇಮ್ ಫೀಚರ್ ಕೇವಲ ಒಂದು ಹೆಸರು ಆಯ್ಕೆ ಮಾಡುವ ವ್ಯವಸ್ಥೆ ಆಗಿರದೆ ಅದರ ಹಿಂದೆ ಬಳಕೆದಾರರು ಸುರಕ್ಷತೆಯನ್ನು ಕಾಪಾಡುವ ಹಲವಾರು ತಾಂತ್ರಿಕವಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆ ಎಂದು ತಿಳಿಸಿದೆ

ಮೀಸಲಾದ ಯೂಸರ್ ನೇಮ್ ವ್ಯವಸ್ಥೆ

ಮೆಟಾ ಪರಿಚಯಿಸಲು ಉದ್ದೇಶಿಸಿರುವ ಪ್ರಮುಖ ಭದ್ರತಾ ಕ್ರಮಗಳಲ್ಲಿ ಮೀಸಲಾತಿ ಯೂಸರ್ ನೇಮ್ ಸಿಸ್ಟಮ್ ಒಂದಾಗಿದೆ ಈ ವ್ಯವಸ್ಥೆಯ ಮೂಲಕ ಪ್ರಮುಖ ಸರ್ಕಾರಿ ಇಲಾಖೆಗಳು, ಸಾರ್ವಜನಿಕ ಸಂಸ್ಥೆಗಳು, ದೊಡ್ಡ ಬ್ರಾಂಡ್ ಗಳು ಮತ್ತು ಪ್ರಮುಖ ವ್ಯಕ್ತಿಗಳ ಹೆಸರನ್ನು ಮುಂಚಿತವಾಗಿಯೇ ಕಾಯ್ದಿರಿಸಲಾಗುತ್ತದೆ ಉದಾಹರಣೆಗೆ

  • ನ್ಯಾಯಾಂಗ ಸಂಸ್ಥೆಗಳು
  • ಪ್ರಮುಖ ಬ್ಯಾಂಕುಗಳು
  • ಅಂತರಾಷ್ಟ್ರೀಯ ಸಂಸ್ಥೆಗಳು
  • ಸರ್ಕಾರಿ ಇಲಾಖೆಗಳು
  • ಪ್ರಸಿದ್ಧ ಕಂಪನಿಗಳು
  • ಸಾರ್ವಜನಿಕ ವ್ಯಕ್ತಿಗಳ ಅಧಿಕೃತ ಖಾತೆಗಳು

ಇವುಗಳನ್ನು ಸೇರಿದಂತೆ ಇನ್ನೂ ಹೆಚ್ಚಿನ ಹೆಸರಿನಲ್ಲಿ ಸಾಮಾನ್ಯ ಬಳಕೆದಾರರು ಯೂಸರ್ ನೇಮ್ ಗಳನ್ನು ರಚಿಸಲು ಅವಕಾಶ ನೀಡದಿರುವ ಸಾಧ್ಯತೆ ಇದೆ ಇದರಿಂದ ನಕಲಿ ಖಾತೆಗಳ ಸಂಖ್ಯೆ ಕಡಿಮೆಯಾಗುವ ನಿರೀಕ್ಷೆ ಹೆಚ್ಚಾಗಿದೆ

ಹೋಲುವಂತಹ ಯೂಸರ್ ನೇಮ್ ಸರ್ಚ್ಗಳು

ಪ್ರಸ್ತುತ ಟೆಲಿಗ್ರಾಂ ಸೇರಿದಂತೆ ಹಲವು ಅಪ್ಲಿಕೇಶನ್ಗಳಲ್ಲಿ ಯೂಸರ್ ನೇಮ್ ಗಳನ್ನು ಹುಡುಕುವುದು ಸುಲಭವಾಗಿದೆ ಆದರೆ ವಾಟ್ಸಪ್ ಸಂಸ್ಥೆಯು ಮೆಟಾ ಮೂಲಕ ಹೆಚ್ಚಿನ ಸುರಕ್ಷಿತ ವ್ಯವಸ್ಥೆಯನ್ನು ಬಳಸುವ ಸಾಧ್ಯತೆ ಇದೆ ಕಂಪನಿಯ ಮಾಹಿತಿ ಪ್ರಕಾರ ಯಾರನ್ನಾದರೂ ಸಂಪರ್ಕಿಸಲು ಅವರ ಸಂಪೂರ್ಣ ಯೂಸರ್ ನೇಮ್ ಅನ್ನು ತಿಳಿದಿರಬೇಕಾಗುತ್ತದೆ

ಉದಾಹರಣೆಗೆ

ಒಬ್ಬರ Username @NewsByMROfficial ಆಗಿದ್ದರೆ,

“News”

ಅಥವಾ

“NewsBy”

ಎಂದು ಹುಡುಕಿದರೆ ಅವರು ಕಾಣಿಸದೇ ಇರಬಹುದು.

ಸಂಪೂರ್ಣವಾದ ಯೂಸರ್ ನೇಮ್ ಅನ್ನು ನಮೂದಿಸಿದಾಗ ಮಾತ್ರ ಹುಡುಕುವ ಅವಕಾಶ ನೀಡುವ ಸಾಧ್ಯತೆ ಇರುತ್ತದೆ

ಖಾತೆಯ ಮಾಹಿತಿ ತೋರಿಸುವುದು

ಮೆಟಾ ಅಭಿವೃದ್ಧಿಪಡಿಸುತ್ತಿರುವ ಪ್ರಮುಖ ವೈಶಿಷ್ಟವಾದ ಯೂಸರ್ ನೇಮ್ ನಲ್ಲಿ ಖಾತೆ ಮಾಹಿತಿಯ ತೋರಿಸುವಿಕೆಯು ಪ್ರಮುಖವಾಗಿದೆ ಮೊದಲ ಬಾರಿಗೆ ಅಪರಿಚಿತ ಯೂಸರ್ ನೇಮ್ ಇಂದ ಸಂದೇಶ ಬಂದರೆ ಈ ಕೆಳಕಂಡ ಹೆಚ್ಚುವರಿ ಮಾಹಿತಿಯನ್ನು ನಿಮಗೆ ತೋರಿಸಬಹುದು ಉದಾಹರಣೆಗೆ

  • ಇದು ಹೊಸ ಖಾತೆಯೇ
  • ಯಾವ ದೇಶದಿಂದ ಬಳಸಲಾಗುತ್ತಿದೆ
  • ಖಾತೆ ಯಾವಾಗ ಸೃಷ್ಟಿಯಾಗಿದೆ
  • ನೀವು ಈ ಹಿಂದೆ ಖಾತೆಯೊಂದಿಗೆ ಸಂಪರ್ಕ ಹೊಂದಿದ್ದೀರಾ
  • ನಿಮ್ಮೊಂದಿಗೆ ಸಾಮಾನ್ಯವಾಗಿ ವಾಟ್ಸಪ್ ಗ್ರೂಪ್ ಇದೆಯೇ

ಈ ಮೇಲಿನ ಮಾಹಿತಿಗಳ ಆಧಾರದ ಮೇಲೇಗೆ ಬಳಕೆದಾರರು ಸಂದೇಶವನ್ನು ನಂಬಬೇಕೆ ಅಥವಾ ನಂಬ ಬೇಡವೇ ಎಂಬುದನ್ನು ಸುಲಭವಾಗಿ ನಿರ್ಧರಿಸಬಹುದು

ಎಐ ಆಧಾರಿತ ಸ್ಪಾನ್ಗಳ ಗುರುತಿಸುವಿಕೆ

ಮೆಟಾ ಸಂಸ್ಥೆಯು ಈಗಾಗಲೇ ಫೇಸ್ಬುಕ್, ಇನ್ಸ್ಟಾಗ್ರಾಮ್ ಹಾಗೂ whatsapp ನಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅನ್ನು ಬಳಸುತ್ತಿದೆ

ಯೂಸರ್ ನೇಮ್ ಫೀಚರ್ ಜಾರಿಗೆ ಬಂದ ನಂತರ ಎಐ ಇನ್ನಷ್ಟು ಪ್ರಮುಖ ಪಾತ್ರವನ್ನು ವಹಿಸುವ ಸಾಧ್ಯತೆ ಇದೆ

ಈ ವ್ಯವಸ್ಥೆಯು ಕೆಳಕಂಡ ಚಟುವಟಿಕೆಗಳನ್ನು ಪತ್ತೆಹಚ್ಚಲು ಪ್ರಯತ್ನಿಸಬಹುದು

  • ಒಂದೇ ಯೂಸರ್ ನೇಮ್ ನಿಂದ ಸಾವಿರಾರು ಜನರಿಗೆ ಸಂದೇಶ ಕಳುಹಿಸುವುದು
  • ಅನುಮಾನಾಸ್ಪದ ಲಿಂಕ್ ಗಳನ್ನು ಕಳುಹಿಸುವುದು
  • ಸ್ಪ್ಯಾಮ್ ಕ್ಯಾಂಪೇನ್ ನಡೆಸುವುದು‌
  • ನಕಲಿ ಬ್ಯಾಂಕ್ ಅಥವಾ ಸರ್ಕಾರಿ ಸೇವೆಯಂತೆ ನಟಿಸುವುದು
  • ಒಂದೇ ರೀತಿಯ ವಂಚನ ಸಂದೇಶಗಳನ್ನು ಹೆಚ್ಚಿನ ಜನತೆಗೆ ಹರಡುವುದು

ಇಂತಹ ಚಟುವಟಿಕೆಗಳು ಕಂಡು ಬಂದಲ್ಲಿ ಖಾತೆಯನ್ನು ತಾತ್ಕಾಲಿಕವಾಗಿ ನಿರ್ಭಂಧಿಸಿ ಪರಿಶೀಲನೆಗೆ ಒಳಪಡಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ

 

ಬ್ಲಾಕ್ ಮತ್ತು ರಿಪೋರ್ಟ್ ವ್ಯವಸ್ಥೆ

ಪ್ರಸ್ತುತದಲ್ಲಿ ವಾಟ್ಸಪ್ ನಲ್ಲಿ ಬ್ಲಾಕ್ ಮತ್ತು ರಿಪೋರ್ಟ್ ಆಯ್ಕೆಗಳು ಲಭ್ಯವಿವೆ ಯಾವುದೇ ಬಳಕೆದಾರರು ಅನುಮಾನಾಸ್ಪದವಾಗಿ ಕಂಡುಬಂದರೆ ಅವರನ್ನು ರಿಪೋರ್ಟ್ ಅಥವಾ ಬ್ಲಾಕ್ ಮಾಡಬಹುದಾಗಿರುತ್ತದೆ ಯುಸರ್ ನೇಮ್ ಫೀಚರ್ ಬಂದ ನಂತರವೂ ಈ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಸಾಧ್ಯತೆ ಇದೆ

ಬಳಕೆದಾರರು ಯಾವುದೇ ರೀತಿಯ ಅನಮಾನಾಸ್ಪದ ಯೂಸರ್ ನೇಮ್ ಗಳು ಕಂಡುಬಂದರೆ ಈ ಕ್ರಮಗಳನ್ನು ಕೈಗೊಳ್ಳಬಹುದು 

  • ಬ್ಲಾಕ್ ಮಾಡಬಹುದು
  • ರಿಪೋರ್ಟ್ ಮಾಡಬಹುದು
  • ಸ್ಪ್ಯಾಮ್ ಎಂದು ಗುರುತಿಸಬಹುದು
  • ಸ್ಕ್ಯಾಮ್ ಎಂದು ದೂರು ಸಲ್ಲಿಸಬಹುದು‌

ಒಂದೇ ಯೂಸರ್ ನೇಮ್ ನಿಂದ ಹೆಚ್ಚಿನ ಸಂಖ್ಯೆಯ ದೂರುಗಳು ದಾಖಲಾದರೆ ಮೆಟಾ ಸಂಸ್ಥೆಯು ಆ ಖಾತೆಯನ್ನು ಪರಿಶೀಲಿಸಿ ಅಗತ್ಯ ಕ್ರಮವನ್ನು ಕೈಗೊಳ್ಳಬಹುದು

End To End Encryption ಮುಂದುವರೆಯುತ್ತದೆಯೇ?

ಈ ಪ್ರಶ್ನೆಯನ್ನು ಹಲವು ಗ್ರಾಹಕರು ಕೇಳುತ್ತಿದ್ದು ಸದ್ಯಕ್ಕೆ ಲಭ್ಯವಿರುವ ಮಾಹಿತಿಯ ಪ್ರಕಾರ ವಾಟ್ಸಾಪ್ನಲ್ಲಿರುವ End To End Encryption ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಅಂದರೆ

  • ಸಂದೇಶಗಳು
  • ಫೋಟೋಗಳು
  • ಡಾಕ್ಯುಮೆಂಟ್‌ ಗಳು
  • ವಿಡಿಯೋಗಳು
  • ಆಡಿಯೋ ಕರೆಗಳು
  • ವಿಡಿಯೋ ಕರೆಗಳು

ಇವೆಲ್ಲವೂ ಹಿಂದಿನಂತೆಯೇ ಸುರಕ್ಷಿತವಾಗಿ End To End Encryption ಮೂಲಕ ರಕ್ಷಿಸಲ್ಪಡುತ್ತವೆ

ಯೂಸರ್ ನೇಮ್ ಫೀಚರ್ ಕೇವಲ ಗುರುತಿನ ವಿಧಾನವನ್ನು ಮಾತ್ರ ಬದಲಾಯಿಸುತ್ತದೆ

ಯೂಸರ್ ನೇಮ್ ಫೀಚರ್ ಇಂದ ಬಳಕೆದಾರರಿಗೆ ಆಗುವ ಪ್ರಯೋಜನಗಳು

ಸುರಕ್ಷತೆ ಮಟ್ಟದಲ್ಲಿ ಹೆಚ್ಚಳ

ಪ್ರತಿಯೊಬ್ಬರಿಗೂ ತಮ್ಮ ಮೊಬೈಲ್ ಸಂಖ್ಯೆಯನ್ನು ನೀಡುವುದರ ಬದಲಾಗಿ ಯೂಸರ್ ನೇಮ್ ಗಳನ್ನು ನೀಡಿದರೆ ಸುರಕ್ಷತೆ ಹೆಚ್ಚುತ್ತದೆ ಇದರಿಂದ ಮೊಬೈಲ್ ಸಂಖ್ಯೆ ನೀಡುವ ಅಗತ್ಯ ಕಡಿಮೆ ಆಗುತ್ತದೆ

ವ್ಯವಹಾರ ಬಳಕೆದಾರರಿಗೆ ಅನುಕೂಲ

ಸಣ್ಣ ಉದ್ಯಮಿಗಳು, ಸೇವಾ ಪೂರೈಕೆದಾರರು ಮತ್ತು ಆನ್ಲೈನ್ ಮಾರಾಟಗಾರರು ತಮ್ಮ ಯೂಸರ್ ನೇಮ್ ಗಳನ್ನು ಜಾಹಿರಾತುಗಳಲ್ಲಿ ಪ್ರಕಟಿಸಬಹುದು ಇದರಿಂದ ವೈಯಕ್ತಿಕ ಸಂಖ್ಯೆಯು ಸಾರ್ವಜನಿಕವಾಗಿ ಲಭ್ಯವಾಗುವುದಿಲ್ಲ

ಕಂಟೆಂಟ್ ಕ್ರಿಯೇಟರ್ಗಳಿಗೆ ಲಾಭ

ಯೂಟ್ಯೂಬ್, ಇನ್ಸ್ಟಾಗ್ರಾಮ್, ಫೇಸ್ಬುಕ್ ಹಾಗೂ ಬ್ಲಾಗ್ ಕೆಲಸವನ್ನು ಮಾಡುವವರು ತಮ್ಮ ಫಾಲೋರ್ಸ್ ಗಳಿಗೆ ಕೇವಲ ಯೂಸರ್ ನೇಮ್ ಹಂಚಿಕೊಂಡು ವೈಯಕ್ತಿಕ ಸಂಖ್ಯೆಯನ್ನು ನೀಡುವ ಅಗತ್ಯತೆಯನ್ನು ಕಡಿಮೆ ಮಾಡಿಕೊಳ್ಳಬಹುದು

ವಿದ್ಯಾರ್ಥಿಗಳಿಗೆ ಸಹಾಯಕ

ಕಾಲೇಜು, ತರಬೇತಿ ಸಂಸ್ಥೆ ಅಥವಾ ಪ್ರಾಜೆಕ್ಟ್ ಗುಂಪುಗಳಲ್ಲಿ ಹೊಸ ವಿದ್ಯಾರ್ಥಿಗಳೊಂದಿಗೆ ಸಂಪರ್ಕ ಸಾಧಿಸುವಾಗ ವೈಯಕ್ತಿಕ ಸಂಖ್ಯೆ ಮತ್ತು ಮಾಹಿತಿಯನ್ನು ನೀಡುವ ಅಗತ್ಯತೆಯನ್ನು ಕಡಿಮೆ ಮಾಡಿಕೊಳ್ಳುವುದು

ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವವರು

ಉದ್ಯೋಗದಾತರು ಮತ್ತು ಹೆಚ್ ಆರ್ ಗಳ ನಡುವೆ ಸಂಪರ್ಕ ಸಾಧಿಸುವಾಗ ಯೂಸರ್ ನೇಮ್ ಗಳನ್ನು ಬಳಸಬಹುದು ಇದರಿಂದ ಉದ್ಯೋಗ ಪ್ರಕ್ರಿಯೆ ಮುಗಿದ ನಂತರ ಅನಗತ್ಯ ಕರೆಗಳ ಸಮಸ್ಯೆ ಕಡಿಮೆಯಾಗುತ್ತದೆ

ಮಹಿಳೆಯರು ಸುರಕ್ಷತೆಗೆ ಸಹಾಯಕ

ಹಲವು ಮಹಿಳೆಯರು ವೈಯಕ್ತಿಕ ಮೊಬೈಲ್ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ಆದರೆ ಯೂಸರ್ ನೇಮ್ ಗಳನ್ನು ನೀಡುವ ಮೂಲಕ ಸಂಪರ್ಕ ಸಾಧಿಸಿ ಅವಕಾಶ ಮತ್ತು ಸುರಕ್ಷತೆ ದೊರೆತರೆ ಮಾತ್ರ ಮೊಬೈಲ್‌ ಸಂಖ್ಯೆಯನ್ನು ನೀಡಿ ಸುರಕ್ಷತೆಯನ್ನು ಹೆಚ್ಚಿಸಿಕೊಳ್ಳಬಹುದಾಗಿರುತ್ತದೆ

ಯುಸರ್ ನೇಮ್ ಆಯ್ಕೆ ಮಾಡುವಾಗ ಗಮನಿಸಬೇಕಾದ ಅಂಶಗಳು

ಭವಿಷ್ಯದಲ್ಲಿ ಈ ಫೀಚರ್ ಬಿಡುಗಡೆಯಾದ ನಂತರ ಯೂಸರ್ ನೇಮ್ ರಚನೆ ಮಾಡುವಾಗ ಈ ಕೆಳಕಂಡ ಅಂಶಗಳನ್ನು ಗಮನಿಸುವುದು ಕಡ್ಡಾಯವಾಗಿದೆ

  • ನಿಮ್ಮ ನಿಜವಾದ ಹೆಸರು ಅಥವಾ ಬ್ರಾಂಡ್ ಹೆಸರಿಗೆ ಸರಿಹೊಂದುವಂತಹ ಯೂಸರ್ ನೇಮ್ ಗಳನ್ನು ಆಯ್ಕೆ ಮಾಡಿ
  • ಅತಿಯಾದ ಸಂಖ್ಯೆಗಳು ಅಥವಾ ಗೊಂದಲ ಮಾಹಿತಿಯನ್ನು ಉಂಟುಮಾಡುವ ಅಕ್ಷರಗಳನ್ನು ಬಳಸಬೇಡಿ
  • ಸರ್ಕಾರಿ ಇಲಾಖೆ ಅಥವಾ ಪ್ರಸಿದ್ಧ ವ್ಯಕ್ತಿಗಳ ಹೆಸರನ್ನು ಅನುಸರಿಸುವ ಪ್ರಯತ್ನ ಮಾಡಬೇಡಿ
  • ಅಸಭ್ಯ ಅಥವಾ ತಪ್ಪು ಅರ್ಥವನ್ನು ನೀಡುವಂತಹ ಪದಗಳನ್ನು ಬಳಸಬೇಡಿ
  • ಪಾಸ್ವರ್ಡ್ ಅಥವಾ ಒಟಿಪಿಯನ್ನು ಬಳಸಬೇಡಿ

ವಾಟ್ಸಪ್ ಯೂಸರ್ ನೇಮ್ ಫೀಚರ್ ಯಾರಿಗೆ ಹೆಚ್ಚು ಉಪಯುಕ್ತ

ವಾಟ್ಸಪ್ ನ ಈ ಹೆಚ್ಚುವರಿ ಫೀಚರ್ ಬರುತ್ತಿರುವುದರಿಂದ ಈ ಕೆಳಕಂಡ ವರ್ಗದವರಿಗೆ ಹೆಚ್ಚಿನ ಉಪಯೋಗ ಆಗಬಹುದು

  • ಸಣ್ಣ ಮತ್ತು ಮಧ್ಯಮ ಉದ್ಯಮಿಗಳು
  • ಫ್ರೀ ಲಾನ್ಸರ್‌ ಗಳು
  • ಡಿಜಿಟಲ್‌ ಮಾರುಕಟ್ಟೆದಾರರು
  • ಶಿಕ್ಷಕರು
  • ವೈದ್ಯರು
  • ಪತ್ರಕರ್ತರು
  • ಯೂಟ್ಯೂಬರ್‌ ಗಳು
  • ಇನ್ಫ್ಲೂಯನ್ಸರ್‌ ಗಳು
  • ಬ್ಲಾಗರ್‌ ಗಳು
  • ವಿದ್ಯಾರ್ಥಿಗಳು
  • ಉದ್ಯೋಗ ಹುಡುಕುತ್ತಿರುವ ಯುವಕರು
  • ಗ್ರಾಹಕ ಸಲಹಾ ಮತ್ತು ಸೇವಾ ತಂಡಗಳು

 

ಈ ಫೀಚರ್ ಎಲ್ಲರಿಗೂ ಕಡ್ಡಾಯವಾಗುತ್ತದೆಯೇ

ಪ್ರಸ್ತುತದಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಯೂಸರ್ ನೇಮ್ ಫೀಚರ್ ಕಡ್ಡಾಯವಾಗುವ ಸಾಧ್ಯತೆ ಇರುವುದಿಲ್ಲ

ಬೆಳಕೆದಾರರು ಬಯಸಿದರೆ ಮಾತ್ರ ಯೂಸರ್ ನೇಮ್ ಗಳನ್ನು ರಚಿಸಬಹುದು ಅಥವಾ ಹಿಂದಿನಂತೆ ಮೊಬೈಲ್ ಸಂಖ್ಯೆ ಆಧಾರಿತ ವ್ಯವಸ್ಥೆಯನ್ನೇ ಮುಂದುವರಿಸಬಹುದಾಗಿರುತ್ತದೆ ಆದರೆ ಇದರ ಕುರಿತು ಅಂತಿಮ ನಿರ್ಧಾರ ಮೆಟಾ ಸಂಸ್ಥೆಯದಾಗಿರುತ್ತದೆ. ಮೆಟಾ ಸಂಸ್ಥೆಯು ಅಧಿಕೃತವಾಗಿ ಘೋಷಿಸಿದ ನಂತರವೇ ಈ ಮಾಹಿತಿಯು ಸ್ಪಷ್ಟವಾಗಲಿದೆ

ಟೆಲಿಗ್ರಾಂ ಮತ್ತು ಸಿಗ್ನಲ್ ಆಪ್‌ ಗಳಿಗೂ ಕೇಂದ್ರ ಸರ್ಕಾರ ನೋಟಿಸ್ ನೀಡಲು ಕಾರಣವೇನು

ವಾಟ್ಸಪ್ ಯೂಸರ್ ನೇಮ್ ಫೀಚರ್ ಕುರಿತು ಕೇಂದ್ರ ಸರ್ಕಾರವು ಆತಂಕಗಳನ್ನು ನಿರ್ದಿಷ್ಟಪಡಿಸಿ ಕಳವಳ ವ್ಯಕ್ತಪಡಿಸಿದ ನಂತರ ಈ ಕ್ರಮ ಕೇವಲ ವಾಟ್ಸಾಪ್ ಅಥವಾ ಮೆಟಾ ಸಂಸ್ಥೆಗೆ ಸೀಮಿತವಾಗಿರದೆ ಯೂಸರ್ ನೇಮ್ ಆಧಾರಿತ ಚಾಟ್ ವ್ಯವಸ್ಥೆಯನ್ನು ಬಳಸುತ್ತಿರುವ ಟೆಲಿಗ್ರಾಂ ಹಾಗೂ ಸಿಗ್ನಲ್ ಅಪ್ಲಿಕೇಶನ್ ಗಳಿಗೂ ಸಹ ಇದರ ಬಗ್ಗೆ ಮಾಹಿತಿಯನ್ನು ನೀಡಲು ನೋಟಿಸ್ ನೀಡಲಾಗಿದೆ

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಈ ವೇದಿಕೆಗಳಲ್ಲಿ ನಡೆಯುತ್ತಿರುವ ಆನ್ಲೈನ್ ವಂಚನೆಗಳು, ನಕಲಿ ಖಾತೆಗಳ ಬಳಕೆ, ಅಕ್ರಮ ಚಟುವಟಿಕೆಗಳು ಹಾಗೂ ಬಳಕೆದಾರರ ಸುರಕ್ಷತೆಗೆ ಸಂಬಂಧಿಸಿದ ಕ್ರಮಗಳ ಬಗ್ಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಸಂಬಂಧಪಟ್ಟ ಸಂಸ್ಥೆಗಳಿಗೆ ಸೂಚಿಸಿದೆ.

ಸರ್ಕಾರದ ಉದ್ದೇಶವು ಹೊಸ ತಂತ್ರಜ್ಞಾನವನ್ನು ತಡೆಯುವುದಲ್ಲದೇ ಬದಲಾಗಿ ಹೊಸ ವೈಶಿಷ್ಟಗಳು ಭಾರತೀಯ ಕಾನೂನುಗಳು ಮತ್ತು ಬಳಕೆದಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿಪಡಿಸುತ್ತೇವೆಯೇ ಈ ಫೀಚರ್ ಗಳು ರಾಷ್ಟ್ರೀಯ ಭದ್ರತೆಗೆ ಪೂರಕವೇ ಅಥವಾ ಮಾರಕವೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಾಗಿದೆ

ಟೆಲಿಗ್ರಾಂ ಅಪ್ಲಿಕೇಶನ್ ಕುರಿತು ಸರ್ಕಾರದ ಪ್ರಮುಖ ಆತಂಕಗಳು

ಟೆಲಿಗ್ರಾಂ ಅಪ್ಲಿಕೇಶನ್ ಹಲವು ವರ್ಷಗಳಿಂದ ಯೂಸರ್ ನೇಮ್ ವ್ಯವಸ್ಥೆಯನ್ನು ಹೊಂದಿದೆ ಈ ಅಪ್ಲಿಕೇಶನ್ ನ ಮೂಲಕ ಬಳಕೆದಾರರು ತಮ್ಮ ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳದೆ ಇತರರೊಂದಿಗೆ ಸಂಪರ್ಕವನ್ನು ಸಾಧಿಸಬಹುದಾಗಿರುತ್ತದೆ ಆದರೆ ಕಳೆದ ಕೆಲವು ವರ್ಷಗಳಿಂದ ಟೆಲಿಗ್ರಾಂ ಅಪ್ಲಿಕೇಶನ್ ಕುರಿತು ಹಲವು ದೂರುಗಳು ದಾಖಲಾಗಿವೆ. ಅವುಗಳೆಂದರೆ

  • ನಕಲಿ ಹೂಡಿಕೆ ಸಲಹೆಗಳನ್ನು ನೀಡಲು ಗುಂಪುಗಳು
  • ಕ್ರಿಪ್ಟೋ ಕರೆನ್ಸಿ ವಂಚನೆ ಗುಂಪುಗಳು
  • ಪೈರಸಿ ವಿಷಯಗಳ ಹಂಚಿಕೆ
  • ನಕಲಿ ಉದ್ಯೋಗ ಆಫರ್ ಗಳು
  • ಅಕ್ರಮ ಡಿಜಿಟಲ್ ವಿಷಯಗಳ ಪ್ರಸಾರ
  • ಪ್ರಶ್ನೆ ಪತ್ರಿಕೆಗಳ ಸೋರಿಕೆ ಸಂಬಂಧಿತ ಗುಂಪುಗಳು

ಇಂತಹ ಚಟುವಟಿಕೆಗಳನ್ನು ತಡೆಯಲು ಅಪ್ಲಿಕೇಶನ್ಗಳು ಯಾವ ಕ್ರಮವನ್ನು ಕೈಗೊಳ್ಳುತ್ತವೆ ಎಂಬುದರ ಬಗ್ಗೆ ಸರ್ಕಾರವು ಮಾಹಿತಿಯನ್ನು ಕಷ್ಟಪಡಿಸಲು ಕೇಳಿದೆ

 

ಸಿಗ್ನಲ್ ಅಪ್ಲಿಕೇಶನ್ ಕುರಿತು ಸರ್ಕಾರದ ನಿಲುವು

ಸಿಗ್ನಲ್ ಅಪ್ಲಿಕೇಶನ್ ಕೂಡ ಬಳಕೆದಾರರ ಗೌಪ್ಯತೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುವ ವೇದಿಕೆಗಳಲ್ಲಿ ಒಂದಾಗಿದ್ದು ಇದರಲ್ಲಿಯೂ ಸಹ ಯೂಸರ್ ನೇಮ್ ಆಧಾರಿತ ಸಂಪರ್ಕ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ

ಸಿಗ್ನಲ್ ಅಪ್ಲಿಕೇಶನ್ ಸುರಕ್ಷತೆ ಮತ್ತು ಎನ್ಕ್ರಿಪ್ಷನ್ ಗಳಿಗೆ ಪ್ರಸಿದ್ಧವಾಗಿದ್ದರೂ ಯಾವುದೇ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯನ್ನು ಸರಕಾರವು ಸಂಪೂರ್ಣವಾಗಿ ನಿರ್ಲಕ್ಷಿಸಲು ಆಗುವುದಿಲ್ಲ

ಆದುದರಿಂದ ವಾಟ್ಸಾಪ್, ಟೆಲಿಗ್ರಾಂ ಮತ್ತು ಸಿಗ್ನಲ್ ಮೂರು ಮೆಸೇಜ್ ಆಪ್ ಗಳಿಗೂ ಒಂದೇ ರೀತಿಯ ಸುರಕ್ಷಿತ ಮಾನದಂಡಗಳನ್ನು ಅನ್ವಯಿಸುವ ಬಗ್ಗೆ ಸರ್ಕಾರವು ಚಿಂತನೆ ನಡೆಸಿದೆ

ಭಾರತದಲ್ಲಿ ಸೈಬರ್ ವಂಚನೆಗಳು ಏಕೆ ಹೆಚ್ಚುತ್ತಿವೆ

ಭಾರತದಲ್ಲಿ ದಿನೇ ದಿನೇ ಡಿಜಿಟಲ್ ಪಾವತಿ ವ್ಯವಸ್ಥೆಯ ಪ್ರಾಮುಖ್ಯತೆಯು ಹೆಚ್ಚುತ್ತಿದೆ ಡಿಜಿಟಲ್ ಪಾವತಿ ವ್ಯವಸ್ಥೆ ಮತ್ತು ಆನ್ಲೈನ್ ಸೇವೆಗಳ ಬಳಕೆ ವೇಗವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೈಬರ್ ಅಪರಾಧಿಗಳ ಚಟುವಟಿಕೆಗಳು ಸಹ ಹೆಚ್ಚಾಗಿವೆ

ಇಂದಿನ ಸಂದರ್ಭದಲ್ಲಿ ಬಹುತೇಕ ಸರ್ಕಾರಿ ಸೇವೆಗಳು, ಬ್ಯಾಂಕಿಂಗ್, ವ್ಯಾಪಾರ, ಉದ್ಯೋಗ ಪ್ರಕ್ರಿಯೆಗಳು ಮತ್ತು ವಿದ್ಯಾಭ್ಯಾಸ ಮುಂತಾದವುಗಳು ಡಿಜಿಟಲ್ ಆಗಿರುವುದರಿಂದ ವಂಚಕರು ಹೊಸ ಹೊಸ ತಂತ್ರಗಳನ್ನು ಬಳಸುತ್ತಿದ್ದಾರೆ

ಸಾಮಾನ್ಯವಾಗಿ ಕಂಡುಬರುವ ವಂಚನೆಗಳೆಂದರೆ

  • OTP Scam
  • QR Code Scam
  • Fake Customer Care Scam
  • UPI Collect Request Scam
  • Loan Approval Scam
  • Online Shopping Scam
  • Digital Arrest Scam
  • WhatsApp Impersonation Scam
  • Investment Scam
  • Fake Lottery Scam

ಇಂತಹ ಸಂದರ್ಭಗಳಲ್ಲಿ ಹೊಸ ಯೂಸರ್ ನೇಮ್ ಫೀಚರ್ ಬಂದರೆ ಆ ವ್ಯವಸ್ಥೆಯನ್ನು ಇನ್ನು ಹೆಚ್ಚಿನ ಮಟ್ಟದಲ್ಲಿ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಸರ್ಕಾರ ಎಚ್ಚರಿಕೆಯನ್ನು ನೀಡಿದೆ

ಯೂಸರ್ ನೇಮ್ ಫೀಚರ್ ಬಿಡುಗಡೆಯಾದ ನಂತರ ಬಳಕೆದಾರರ ಪಾಲಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳು

ಹೊಸದಾದ ತಂತ್ರಜ್ಞಾನ ಬಂದಾಗ ಅದರ ಪ್ರಯೋಜನಗಳ ಜೊತೆಗೆ ಸುರಕ್ಷಿತ ಕ್ರಮಗಳನ್ನು ಅನುಸರಿಸುವುದು ಸಹ ಅಷ್ಟೇ ಪ್ರಮುಖವಾಗಿದೆ ಈ ಕೆಳಕಂಡ ಸಲಹೆಗಳನ್ನು ಪ್ರತಿಯೊಬ್ಬ ವಾಟ್ಸಪ್ ಬಳಕೆದಾರ ಪಾಲಿಸಬೇಕು

  • ಅಪರಿಚಿತ ಯೂಸರ್ ನೇಮ್ ಗಳನ್ನು ಸುಲಭವಾಗಿ ನಂಬಬಾರದು
  • ಯಾವುದೇ ಯೂಸರ್ ನೇಮ್, ಸರ್ಕಾರಿ ಇಲಾಖೆ, ಬ್ಯಾಂಕ್ ಅಥವಾ ಪ್ರತಿಷ್ಠಿತ ವ್ಯಕ್ತಿಗಳಂತೆ ಕಂಡರೂ ಸಹ ಅದನ್ನು ಅಧಿಕೃತ ಖಾತೆ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು
  • ಅಪರಿಚಿತ ಲಿಂಕ್ ಗಳನ್ನು ಕ್ಲಿಕ್ ಮಾಡಬಾರದು

ಉದಾಹರಣೆಗೆ :

  1. ನಿಮ್ಮ ಖಾತೆ ಬಂದ್ ಅಗಲಿದೆ
  2. ಕೆವೈಸಿ ಅಪ್ಡೇಟ್ ಮಾಡಿ
  3. ಬಹುಮಾನ ಗೆದ್ದಿದ್ದೀರಿ

ಇಂತಹ ಸಂದೇಶಗಳನ್ನು ಮತ್ತು ಅವುಗಳಲ್ಲಿ ನೀಡಲಾಗಿರುವ ಲಿಂಕುಗಳನ್ನು ತೆರೆಯಬೇಡಿ

ಓಟಿಪಿಯನ್ನು ಯಾರಂದಿಗೂ ಹಂಚಿಕೊಳ್ಳಬೇಡಿ

ಬ್ಯಾಂಕ್ ಆಗಲೀ ವಾಟ್ಸಪ್ ಆಗಲೀ ಅಥವಾ ಸರಕಾರದ ಯಾವುದೇ ಇಲಾಖೆ ಎಂದಿಗೂ ನಿಮ್ಮ ಓಟಿಪಿಯನ್ನು ಕೇಳುವುದಿಲ್ಲ ಒಟಿಪಿಯನ್ನು ಕೇಳಿದರೆ ಅದು ಬಹುತೇಕ ವಂಚನೆ ಆಗಿರುತ್ತದೆ

Two Step Verification ಸಕ್ರಿಯಗೊಳಿಸಿ

ವಾಟ್ಸಪ್ ನಲ್ಲಿ ಇರುವ ಹೆಚ್ಚುವರಿ ಸುರಕ್ಷಿತ ಕ್ರಮವಾದ Two Step Verification ಅನ್ನು ಸಕ್ರಿಯಗೊಳಿಸುವುದರಿಂದ ನಿಮ್ಮ ಖಾತೆಗೆ ಹೆಚ್ಚುವರಿ ಭದ್ರತೆ ದೊರೆಯುತ್ತದೆ

ವಾಟ್ಸಪ್ ಅನ್ನು ಯಾವಾಗಲೂ ಅಪ್ಡೇಟ್ ಮಾಡಿ

ಮೆಟಾ ಸಂಸ್ಥೆಯು ನಿರಂತರವಾಗಿ ಗ್ರಾಹಕರ ಸುರಕ್ಷತೆಯನ್ನು ಖಚಿತಪಡಿಸಲು ಹೊಸ ಭದ್ರತಾ ಅಪ್ಡೇಟ್ ಗಳನ್ನು ಬಿಡುಗಡೆ ಮಾಡುತ್ತದೆ ಹಳೆಯ ಆವೃತ್ತಿಗಳನ್ನು ಬಳಸುವುದರಿಂದ ಕೆಲವೊಂದು ಭದ್ರತಾ ಅಪಾಯ ಉಂಟಾಗಬಹುದು ಆದ್ದರಿಂದ ವಾಟ್ಸಪ್ ಅನ್ನು ಯಾವಾಗಲು ಅಪ್ಡೇಟ್ ಮಾಡಿ

ಸ್ಪ್ಯಾಮ್ ಯೂಸರ್ ನೇಮ್ ಗಳನ್ನು ರಿಪೋರ್ಟ್ ಮಾಡಿ

ಯಾವುದೇ ಅನುಮಾನಾಸ್ಪದ ಯೂಸರ್ ನೇಮ್ ಅಥವಾ ಸಂದೇಶ ಕಂಡುಬಂದಲ್ಲಿ ಆ ಖಾತೆಗಳನ್ನು ಅಥವಾ ಯೂಸರ್ ನೇಮ್ ಗಳನ್ನು ರಿಪೋರ್ಟ್ ಮಾಡಿ ಬ್ಲಾಕ್ ಮಾಡಿ

ಯೂಸರ್ ನೇಮ್ ಫೀಚರ್, ಭಾರತದಲ್ಲಿ ಯಾವಾಗ ಬಿಡುಗಡೆಯಾಗಬಹುದು

ಪ್ರಸ್ತುತ ಮಾಹಿತಿಯಂತೆ ಮೆಟಾ ಸಂಸ್ಥೆ ಅಥವಾ ಭಾರತ ಸರ್ಕಾರ ಯಾವುದೇ ಅಧಿಕೃತ ಮಾಹಿತಿಯನ್ನು ಅಥವಾ ಬಿಡುಗಡೆ ದಿನಾಂಕವನ್ನು ಘೋಷಿಸಿಲ್ಲ

ಈ ಹೊಸ ಫೀಚರ್ ಅನ್ನು ಬಿಡುಗಡೆಗೊಳಿಸುವ ಮೊದಲು ಈ ಕೆಳಕಂಡ ಹಂತಗಳನ್ನು ಪೂರ್ಣಗೊಳಿಸುವ ಸಾಧ್ಯತೆ ಇದೆ

  • ಮೆಟಾ ಸಂಸ್ಥೆಯ ಸರ್ಕಾರದೊಡನೆ ಮಾಡುವ ತಾಂತ್ರಿಕ ಚರ್ಚೆ‌
  • ಭದ್ರತಾ ಪರಿಶೀಲನೆ
  • ಸೀಮಿತ ಬಳಕೆದಾರರೊಂದಿಗೆ ಪರೀಕ್ಷೆ
  • ಭಾರತೀಯ ನಿಯಮಗಳಿಗೆ ಅನುಗುಣವಾಗಿ ಬದಲಾವಣೆ ಮಾಡುವ ಸಾಮರ್ಥ್ಯ
  • ಹಂತ ಹಂತವಾಗಿ ಸಾರ್ವಜನಿಕ ಬಿಡುಗಡೆ

ಈ ಕಾರಣಗಳಿಂದಾಗಿ ಈ ಯೂಸರ್ ನೇಮ್ ಫೀಚರ್ ಯಾವಾಗ ಬಿಡುಗಡೆ ಆಗುತ್ತದೆ ಎಂಬುದರ ಬಗ್ಗೆ ನಿಖರವಾದ ದಿನಾಂಕವನ್ನು ಹೇಳಲು ಸಾಧ್ಯವಿಲ್ಲ

ಮೆಟಾ ಮತ್ತು ಭಾರತ ಸರ್ಕಾರದ ನಡುವಿನ ಸಹಕಾರ ಏಕೆ ಮುಖ್ಯ

ಭಾರತವು ವಾಟ್ಸಾಪ್ ಸಂಸ್ಥೆಗೆ ಇರುವ ಅತಿ ದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿದ್ದು ಭಾರತ ಸರ್ಕಾರದ ಮಾರ್ಗಸೂಚಿಗಳನ್ನು ನಿರ್ಲಕ್ಷಿಸುವ ಸಾಧ್ಯತೆ ತೀರಾ ಕಡಿಮೆ ಇದೆ

ಇನ್ನೊಂದು ಕಡೆ ಸರ್ಕಾರವು ಸಹ ತಂತ್ರಜ್ಞಾನದ ಅಭಿವೃದ್ಧಿಯನ್ನು ಸಂಪೂರ್ಣವಾಗಿ ವಿರೋಧಿಸುತ್ತಿಲ್ಲ ಆದರೆ ಹೊಸ ವೈಶಿಷ್ಟಗಳು ಸುರಕ್ಷಿತವಾಗಿರಬೇಕು ಮತ್ತು ಬಳಕೆದಾರರಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು ಎಂಬ ನಿಲುವನ್ನು ಹೊಂದಿರುವುದಾಗಿದೆ

ಬಳಕೆದಾರರು ಅಧಿಕೃತ ಮಾಹಿತಿಯನ್ನು ಮಾತ್ರ ನಂಬುವುದು ಏಕೆ ಮುಖ್ಯ

ಯಾವುದೇ ಹೊಸ ವೈಶಿಷ್ಟ್ಯಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ವದಂತಿಗಳು ಹರಿದಾಡುವುದು ಸಾಮಾನ್ಯವಾಗಿದೆ. ಕೆಲವರು ನಕಲಿ Screenshots, ಸುಳ್ಳು ವಿಡಿಯೋಗಳು ಅಥವಾ ತಪ್ಪು ಮಾಹಿತಿಯನ್ನು ಹಂಚಿಕೊಳ್ಳುವ ಸಾಧ್ಯತೆಯೂ ಇರುತ್ತದೆ

ಆದ್ದರಿಂದ ಮೆಟಾ ಸಂಸ್ಥೆ ಅಥವಾ ವಾಟ್ಸಪ್ ಸಂಸ್ಥೆಯು ಅಧಿಕೃತವಾಗಿ ಪ್ರಕಟಿಸುವವರೆಗೂ ಯಾವುದೇ ವದಂತಿಗಳಿಗೆ ಕಿವಿಗೊಡದೆ ಅಧಿಕೃತ ಮಾಹಿತಿ ಅಥವಾ ಭಾರತ ಸರ್ಕಾರದ ಅಧಿಕೃತ ಪ್ರಕಟಣೆಗಳನ್ನು ಮಾತ್ರ ನಂಬಬೇಕು

ಭಾರತದಲ್ಲಿ ವಾಟ್ಸಪ್ ಯೂಸರ್ ನೇಮ್ ಫೀಚರ್ ಭವಿಷ್ಯ ಏನಾಗಬಹುದು

ವಾಟ್ಸಾಪ್ ಯೂಸರ್ ನೇಮ್ ಟೀಚರ್ ಕುರಿತು ಕೆಲವು ದಿನಗಳಿಂದ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು ಒಂದೆಡೆ ವೈಶಿಷ್ಟ್ಯವು ಬಳಕೆದಾರರ ಗೌಪ್ಯತೆಯನ್ನು ಹೆಚ್ಚಿಸುವ ಮಹತ್ವದ ತಂತ್ರಜ್ಞಾನ ಎಂದು ಪರಿಗಣಿಸಿದರೆ ಮತ್ತೊಂದಡೆ ಇದೇ ವ್ಯವಸ್ಥೆಯು ಸೈಬರ್ ಅಪರಾಧಿಗಳು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯೂ ಹೆಚ್ಚಾಗಿದೆ ಎಂದು ಭಾರತ ಸರ್ಕಾರವು ಎಚ್ಚರಿಕೆ ನಿಲುವನ್ನು ಹೊಂದಿದೆ

ಇಂದಿನ ಡಿಜಿಟಲ್ ಯುಗದಲ್ಲಿ ಪ್ರತಿಯೊಂದು ಹೊಸ ತಂತ್ರಜ್ಞಾನವೂ ಸಹ ಎರಡು ಮುಖಗಳನ್ನು ಹೊಂದಿದೆ. ಒಂದು ಸರಿಯಾದ ರೀತಿಯಲ್ಲಿ ಬಳಸಿದರೆ ಇನ್ನೊಂದು ದುರುಪಯೋಗವಾಗುವಂತಹ ಅಂಶವನ್ನು ಹೊಂದಿರುತ್ತದೆ ಅನುಕೂಲವಾದರೆ ಯಾವುದೇ ತೊಂದರೆ ಇರುವುದಿಲ್ಲ ಆದರೆ ದುರುಪಯೋಗವಾದಾಗ ದೊಡ್ಡ ಪ್ರಮಾಣದ ವಂಚನೆ ಮತ್ತು ಭದ್ರತಾ ಸಮಸ್ಯೆಗಳಿಗೆ ಕಾರಣವಾಗಬಹುದು

ಮೆಟಾ ಕಂಪನಿಯ ಉದ್ದೇಶ ಬಳಕೆದಾರರ ವೈಯಕ್ತಿಕ ಮೊಬೈಲ್ ಸಂಖ್ಯೆಯನ್ನು ಸುರಕ್ಷಿತವಾಗಿರುವುದು ಮತ್ತು ಅವರಿಗೆ ಹೆಚ್ಚಿನ ರಕ್ಷಣೆಯನ್ನು ಒದಗಿಸುವುದಾಗಿದೆ ಆದರೆ ಭಾರತ ಸರ್ಕಾರದ ಉದ್ದೇಶವು ದೇಶದ ನಾಗರಿಕರನ್ನು ಸೈಬರ್ ವಂಚನೆಗಳಿಂದ ರಕ್ಷಿಸುವುದು ಮತ್ತು ರಕ್ಷಣೆಯ ಸಮತೋಲನ ಸಾಧಿಸುವುದಾಗಿದೆ.

ಭಾರತ ಸರ್ಕಾರವು ಮುಂದಿನ ದಿನಗಳಲ್ಲಿ ಈ ಕೆಳಕಂಡ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು

ಪ್ರಸ್ತುತ ಲಭ್ಯವಿರುವ ಮಾಹಿತಿಯ ಪ್ರಕಾರ ಭಾರತ ಸರ್ಕಾರವು ಈ Whatsapp Username Feature ಸಂಪೂರ್ಣವಾಗಿ ತಿರಸ್ಕರಿಸದೆ ಈ ಕೆಳಕಂಡ ಅಂಶಗಳನ್ನು ಪರಿಶೀಲನ ಹಂತದಲ್ಲಿ ಇಟ್ಟಿದೆ ಅವುಗಳೆಂದರೆ

  • ಬಳಕೆದಾರರ ಸುರಕ್ಷತೆ
  • ಸೈಬರ್ ಅಪರಾಧ ತಡೆ
  • ನಕಲಿ ಖಾತೆಗಳ ನಿಯಂತ್ರಣ
  • ರಾಷ್ಟ್ರೀಯ ಭದ್ರತೆ
  • ಭಾರತೀಯ ಮಾಹಿತಿ ತಂತ್ರಜ್ಞಾನ ನಿಯಮಗಳ ಪಾಲನೆ
  • ಕಾನೂನು ಜಾರಿ ಸಂಸ್ಥೆಗಳಿಗೆ ಸಹಕಾರ

ಮೆಟಾ ಸಂಸ್ಥೆಯು ಈ ಮೇಲ್ಕಂಡ ಅಂಶಗಳಿಗೆ ತೃಪ್ತಿಕರ ಉತ್ತರವನ್ನು ನೀಡಿದ ನಂತರವೇ ಯೂಸರ್ ನೇಮ್ ಫೀಚರ್‌ ಅನ್ನು ಬಿಡುಗಡೆ ಮಾಡುವ ಸಾಧ್ಯತೆ ಇರುತ್ತದೆ

ಬಳಕೆದಾರರು ಮಾಡಬೇಕಾದ ಕೆಲಸಗಳು

ಭಾರತದಲ್ಲಿ ವಾಟ್ಸಪ್ ಯೂಸರ್ ನೇಮ್ ಫೀಚರ್ ಇನ್ನೂ ಅಧಿಕೃತವಾಗಿ ಬಿಡುಗಡೆಯಾಗದೆ ಇರುವುದರಿಂದ ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ ಆದರೆ ಡಿಜಿಟಲ್ ಸುರಕ್ಷತೆಗಾಗಿ ಪ್ರತಿಯೊಬ್ಬರು ಈ ಕೆಳಕಂಡ ಸಾಮಾನ್ಯ ಮುನ್ನೆಚ್ಚರಿಕೆಗಳನ್ನು ಪಾಲಿಸಬೇಕು

  1. ಅಪರಿಚಿತ ವಾಟ್ಸಪ್ ಸಂದೇಶಗಳನ್ನು ನಂಬಬಾರದು
  2. ಒಟಿಪಿ ಪಿನ್ ಅಥವಾ ಬ್ಯಾಂಕ್ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು
  3. ಅನುಮಾನಾಸ್ಪದ ಲಿಂಕ್‌ ಗಳ ಮೇಲೆ ಕ್ಲಿಕ್ ಮಾಡಬಾರದು
  4. ವಾಟ್ಸಾಪ್ ಅನ್ನು ಯಾವಾಗಲೂ ಇತ್ತೀಚಿನ ಆವೃತ್ತಿಗೆ ಅಪ್ಡೇಟ್ ಮಾಡಬೇಕು‌
  5. ಅಧಿಕೃತ ಪ್ರಕಟಣೆಗಳನ್ನು ಮಾತ್ರ ನಂಬಬೇಕು

 

ತಜ್ಞರ ಸಲಹೆಗಳು

ಸೈಬರ್ ತಜ್ಞರು ಪ್ರತಿಯೊಬ್ಬ ಬಳಕೆದಾರರು ಈ ಕೆಳಕಂಡ ಅಭ್ಯಾಸಗಳನ್ನು ರೂಡಿಸಿಕೊಂಡರೆ ವಂಚನೆಯಾಗುವ ಸಾಧ್ಯತೆ ಕಡಿಮೆ ಎಂದು ಅಭಿಪ್ರಾಯ ಪಟ್ಟಿದ್ದಾರೆ ಅವುಗಳೆಂದರೆ

  1. ಬಲವಾದ ಸ್ಕ್ರೀನ್ ಲಾಕ್ ಅಥವಾ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಬಳಸುವುದು
  2. ವಾಟ್ಸಾಪ್ ಬ್ಯಾಕ್‌ ಅಪ್‌ ಗೆ ಸುರಕ್ಷಿತ ಗೂಗಲ್ ಅಕೌಂಟ್ ಅನ್ನು ಬಳಸುವುದು
  3. ಅಪರಿಚಿತ ವ್ಯಕ್ತಿಗಳೊಂದಿಗೆ ವೈಯಕ್ತಿಕ ದಾಖಲೆಗಳನ್ನು ಹಂಚಿಕೊಳ್ಳದೇ ಇರುವುದು
  4. ಅಧಿಕೃತ ಪ್ಲೇಸ್ಟೋರ್ ಇಂದ ಮಾತ್ರ ಅಪ್ಲಿಕೇಶನ್ ಎಂದು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡುವುದು
  5. ಯಾವುದೇ ಎಪಿಕೆ ಫೈಲ್ ಗಳನ್ನು ಬಳಸುವುದನ್ನು ತಪ್ಪಿಸಬೇಕು

ವಾಟ್ಸಪ್ ಯೂಸರ್ ನೇಮ್ ಕುರಿತ ಸಾರಾಂಶಗಳು

  • ಈ ಫೀಚರ್ ಇನ್ನೂ ಪರೀಕ್ಷಾ ಹಂತದಲ್ಲಿದೆ
  • ಭಾರತದಲ್ಲಿ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಪ್ರಕಟಣೆ ಮಾಡಿಲ್ಲ
  • ಮೆಟಾ ಮತ್ತು ಭಾರತ ಸರ್ಕಾರದ ನಡುವಿನ ಚರ್ಚೆಗಳು ಮುಂದುವರೆದಿದೆ
  • ಅಗತ್ಯ ಚರ್ಚೆಗಳ ನಂತರ ಮಾತ್ರ ಮುಂದಿನ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಇದೆ
  • ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ವದಂತಿಗಳನ್ನು ನಂಬಬೇಡಿ

 

ಲೇಖನದ ಪ್ರಮುಖ ಅಂಶಗಳ ಸಾರಾಂಶ

ಈ ಲೇಖನದಲ್ಲಿ ತಿಳಿದುಕೊಂಡ ಪ್ರಮುಖ ವಿಷಯಗಳು:

  • ವಾಟ್ಸಾಪ್‌ ಯೂಸರ್ ನೇಮ್ ಫೀಚರ್ ಎಂದರೇನು?
  • ಮೆಟಾ ಸಂಸ್ಥೆಯು ಇದನ್ನು ಪರಿಚಯಿಸಲು ಕಾರಣವೇನು?
  • ಭಾರತ ಸರ್ಕಾರ ಏಕೆ ಆತಂಕವನು ವ್ಯಕ್ತಪಡಿಸಿದೆ?
  • ಸೈಬರ್ ಅಪರಾಧಗಳ ಅಪಾಯಗಳೇನು?
  • ಮೆಟಾ ಯಾವ ಭದ್ರತಾ ಕ್ರಮಗಳನ್ನು ಅಭಿವೃದ್ಧಿಪಡಿಸುತ್ತಿದೆ?
  • ಟೆಲಿಗ್ರಾಂ ಮತ್ತು ಸಿಗ್ನಲ್‌ ಅಪ್ಲಿಕೇಶನ್‌ ಗಳಿಗೆ ಸರ್ಕಾರ ನೋಟಿಸ್ ನೀಡಿರುವ ಕಾರಣ.
  • ಬಳಕೆದಾರರು ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳು.
  • ಭವಿಷ್ಯದಲ್ಲಿ ಈ ಫೀಚರ್ ಹೇಗೆ ಅಭಿವೃದ್ಧಿಯಾಗಬಹುದು?

ವಾಟ್ಸಪ್ ಯೂಸರ್ ನೇಮ್ ಫೀಚರ್ ನ ಅನುಕೂಲಗಳು ಮತ್ತು ಅನಾನುಕೂಲಗಳು

ಅನುಕೂಲಗಳು:

  • ಗೌಪ್ಯತೆ
  • ಸಂಖ್ಯೆ ಹಂಚಿಕೆ ಇಲ್ಲ
  • ವ್ಯಾಪಾರ ಸಂವಹನ
  • ಕಡಿಮೆ ಸ್ಪ್ಯಾಮ್

ಅನಾನುಕೂಲಗಳು

  • ನಕಲಿ ಬಳಕೆದಾರಹೆಸರುಗಳು
  • ಫಿಶಿಂಗ್
  • ವಂಚನೆ ಸಾಧ್ಯತೆ
  • ಪರಿಶೀಲನೆ ಸವಾಲುಗಳು

 

Whatsapp Username Feature 2026: FAQʼs

1. ವಾಟ್ಸಪ್ ಯೂಸರ್ ನೇಮ್ ಫೀಚರ್ ಎಂದರೆ ಏನು?
ಉತ್ತರ: ಮೊಬೈಲ್ ಸಂಖ್ಯೆಯಿಲ್ಲದೆ Username ಮೂಲಕ ಜನರನ್ನು ಸಂಪರ್ಕಿಸುವ ವಾಟ್ಸಾಪ್‌ ನ ಹೊಸ ವೈಶಿಷ್ಟ್ಯವಾಗಿದೆ

2. ಈ ಫೀಚರ್ ಭಾರತದಲ್ಲಿ ಬಿಡುಗಡೆಯಾಗಿದೆಯೇ?
ಉತ್ತರ: ಇಲ್ಲ, ಇನ್ನೂ ಪರೀಕ್ಷಾ ಹಂತದಲ್ಲಿದ್ದು ಭಾರತದಲ್ಲಿ ಬಿಡುಗಡೆಯಾಗಿಲ್ಲ.

3. ಸರ್ಕಾರ ಈ ಫೀಚರ್‌ಗೆ ಆಕ್ಷೇಪ ವ್ಯಕ್ತಪಡಿಸಿರುವುದು ಏಕೆ?
ಉತ್ತರ: ಸೈಬರ್ ವಂಚನೆ, ನಕಲಿ ಖಾತೆ, ಭದ್ರತಾ ಆತಂಕಗಳ ಅಂಶಗಳನ್ನು ಪರಿಶೀಲಿಸುತ್ತಿದ್ದು ಆಗಬಹುದಾದ ಅಪಾಯಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ.

4. Username Feature ನಿಂದ ಬಳಕೆದಾರರಿಗೆ ಏನು ಪ್ರಯೋಜನ?
ಉತ್ತರ: ಮೊಬೈಲ್ ಸಂಖ್ಯೆ ಮರೆಮಾಚಿ ಸುರಕ್ಷಿತವಾಗಿ ಸಂವಹನವನ್ನು ನಡೆಸಲು ಅನುಕೂಲವಾಗುತ್ತದೆ.

5. ಮೆಟಾ ಸಂಸ್ಥೆಯು ಯಾವ ಭದ್ರತಾ ಕ್ರಮಗಳನ್ನು ಅಭಿವೃದ್ಧಿಪಡಿಸುತ್ತಿದೆ?
ಉತ್ತರ: ಮೀಸಲಾದ ಯೂಸರ್ ನೇಮ್, AI ಭದ್ರತೆ, ರಿಪೋರ್ಟ್ ಹಾಗೂ ಬ್ಲಾಕ್‌ ಮಾಡುವ ವ್ಯವಸ್ಥೆಗಳನ್ನು ಅಭಿವೃದ್ದಿಪಡಿಸುತ್ತಿದೆ.

6. ಟೆಲಿಗ್ರಾಂ ಮತ್ತು ಸಿಗ್ನಲ್‌ ಅಪ್ಲಿಕೇಶನ್‌ ಗಳಿಗೆ ನೋಟಿಸ್ ಅನ್ನು ಏಕೆ ನೀಡಲಾಗಿದೆ?
ಉತ್ತರ: ನಕಲಿ ಖಾತೆ, ವಂಚನೆ ನಿಯಂತ್ರಣ ಕುರಿತು ಸರ್ಕಾರ ಮಾಹಿತಿಯನ್ನು ಕೋರಿದೆ.

7. Username ಬಂದರೆ ಮೊಬೈಲ್ ಸಂಖ್ಯೆ ಸಂಪೂರ್ಣ ನಿಯಂತ್ರಣವಾಗುತ್ತದೆಯೇ?
ಉತ್ತರ: ಅಧಿಕೃತ ಮಾಹಿತಿಯ ಪ್ರಕಾರ ಯೂಸರ್ ನೇಮ್ ಫೀಚರ್‌ ಬಳಕೆದಾರರ ಆಯ್ಕೆಯಾಗಿದೆ.

8. ಈ ಯೂಸರ್ ನೇಮ್ ಫೀಚರ್ ಎಲ್ಲರಿಗೂ ಕಡ್ಡಾಯವಾಗುತ್ತದೆಯೇ?
ಉತ್ತರ: ಇಲ್ಲ, ಬಳಕೆದಾರರಿಗೆ ಆಯ್ಕೆಯಾಗಿ ನೀಡುವ ಸಾಧ್ಯತೆ ಹೆಚ್ಚಿದೆ.

9. Username Feature ಅನ್ನು ಸುರಕ್ಷಿತವಾಗಿ ಬಳಸುವುದು ಹೇಗೆ?
ಉತ್ತರ: ಒಟಿಪಿ ಹಂಚಿಕೊಳ್ಳಬೇಡಿ, ಅನುಮಾನಾಸ್ಪದ ಖಾತೆಗಳನ್ನು ತಕ್ಷಣ ರಿಪೋರ್ಟ್ ಮಾಡಬೇಕು.

10. ವಾಟ್ಸಪ್ ಯೂಸರ್ ನೇಮ್ ಫೀಚರ್ ಯಾವಾಗ ಬಿಡುಗಡೆಯಾಗಬಹುದು?
ಉತ್ತರ: ಸರ್ಕಾರದ ಪರಿಶೀಲನೆ ನೆಡೆದು ಅನುಮತಿ ದೊರೆತ ನಂತರ ಅಧಿಕೃತವಾಗಿ ಬಿಡುಗಡೆಯಾಗುವ ಸಾಧ್ಯತೆ ಇದೆ.

 

ಸಂಬಂಧಿತ ಅಧಿಕೃತ ಲಿಂಕ್ ಗಳು

Last Updated: 16 July 2026

ವಾಟ್ಸಾಪ್ ಸಂಸ್ಥೆಯ ಅಧಿಕೃತ ವೆಬ್ಸೈಟ್ https://web.whatsapp.com/
ಮೆಟಾ ಸಂಸ್ಥೆಯ ಅಧಿಕೃತ ವೆಬ್ಸೈಟ್ https://www.meta.com/in/
ವಾಟ್ಸಾಪ್ ಮೊಬೈಲ್ ಆವೃತ್ತಿಯ ಅಧಿಕೃತ ಅಪ್ಲಿಕೇಶನ್ ಲಿಂಕ್ ಮೊಬೈಲ್‌ ಅಪ್ಲಿಕೇಶನ್
ವಾಟ್ಸಾಪ್ ವೆಬ್ ನ ಅಧಿಕೃತ ಲಿಂಕ್ https://web.whatsapp.com/

Last Verified: 16 July 2026

Official Source Citations:

ಸಂಬಂಧಿತ ಹೆಚ್ಚುವರಿ ಲಿಂಕ್‌ ಗಳು

ನಮ್ಮ ವಾಟ್ಸಪ್ ಗುಂಪು ಸೇರಿ ಇಲ್ಲಿ ಕ್ಲಿಕ್ ಮಾಡಿ
ಹೆಚ್ಚುವರಿ ಮಾಹಿತಿಯನ್ನು ಪಡೆಯಲು ಈ ಲಿಂಕ್ ಗಳನ್ನು ಅನುಸರಿಸಿ ನೇಮಕಾತಿ ಮಾಹಿತಿ

ಪರೀಕ್ಷಾ ಸಲಹೆಗಳು

ವೃತ್ತಿ ಮಾರ್ಗದರ್ಶನ

ಸರ್ಕಾರಿ ಯೋಜನೆಗಳು

 

ವಾಟ್ಸಪ್ ಯೂಸರ್ ನೇಮ್ ಫೀಚರ್ ಬಳಕೆದಾರರ ಗೌಪ್ಯತೆಯನ್ನು ಹೆಚ್ಚಿಸುವ ಮಹತ್ವಕಾಂಕ್ಷೆಯ ಉದ್ದೇಶವನ್ನು ಹೊಂದಿದೆ ಈ ತಂತ್ರಜ್ಞಾನವು ಮೊಬೈಲ್ ಸಂಖ್ಯೆಯನ್ನು ಬಹಿರಂಗಪಡಿಸದೆ ಸಂವಹನ ನಡೆಸುವ ಅವಕಾಶವನ್ನು ಕಲ್ಪಿಸುವ ಉದ್ದೇಶವನ್ನು ಹೊಂದಿದ್ದು ಡಿಜಿಟಲ್ ಸಂವಹನದ ವಿಧಾನವನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದೆ

ಆದರೆ ಯಾವುದೇ ಹೊಸ ತಂತ್ರಜ್ಞಾನವು ಬಳಕೆದಾರರಿಗೆ ಅನುಕೂಲವಾಗುವುದರ ಜೊತೆಯಲ್ಲಿ ಸುರಕ್ಷಿತವಾಗಿರಬೇಕು ಭಾರತ ಸರ್ಕಾರವು ಸಹ ಇದೇ ಕಾರಣದಿಂದಾಗಿ ಈ ವೈಶಿಷ್ಟ್ಯವನ್ನು ಭದ್ರತಾ ಅಂಶಗಳನ್ನು ಪರಿಶೀಲಿಸಿದ ನಂತರವೇ ಬಿಡುಗಡೆ ಮಾಡುವುದಾಗಿ ತಿಳಿಸಿದೆ. ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಕಲಿ ಖಾತೆಗಳು, ಡಿಜಿಟಲ್ ಅರೆಸ್ಟ್, ಬ್ಯಾಂಕಿಂಗ್ ವಂಚನೆಗಳನ್ನು ತಡೆಯಲು ಸಮರ್ಪಕವಾಗಿ ವ್ಯವಸ್ಥೆಯ ಅವಶ್ಯಕತೆ ಇದೆ ಎಂದು ತಿಳಿಸಿದೆ

ಮೆಟಾ ಸಂಸ್ಥೆ ಮತ್ತು ಭಾರತ ಸರ್ಕಾರದ ನಡುವಿನ ಚರ್ಚೆಗಳು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಹೆಚ್ಚುವರಿ ಸುರಕ್ಷಿತ ವ್ಯವಸ್ಥೆಗಳೊಂದಿಗೆ ವಾಟ್ಸಾಪ್ ಯೂಸರ್ ನೇಮ್ ಫೀಚರ್ ಮುಂದಿನ ದಿನಗಳಲ್ಲಿ ಬಳಕೆದಾರರಿಗೆ ಲಭ್ಯವಾಗುವ ಸಾಧ್ಯತೆ ಇದೆ ಅಲ್ಲಿಯವರೆಗೆ ಅಧಿಕೃತ ಮಾಹಿತಿಯನ್ನು ಮಾತ್ರ ನಂಬುವುದು ಮತ್ತು ಡಿಜಿಟಲ್ ಸುರಕ್ಷತ ನಿಯಮಗಳನ್ನು ಪಾಲಿಸುವುದು ಪ್ರತಿಯೊಬ್ಬ ವಾಟ್ಸಾಪ್ ಬಳಕೆದಾರರ ಪ್ರಮುಖ ಕರ್ತವ್ಯವಾಗಿದೆ

 

Related Articles: Jobs And Exam Tips

Central Bank Of India Recruitment 2026

Central Bank Of India Apprentice 2026

BSNL Recruitment 2026

BSNL JTO

KMF GUMUL Recruitment 2026

KMF GUMUL

KSP Recruitment 2026

Armed Police Constable KSP Recruitment (CAR/DAR) 2026

Karnataka Police CPC Exam

Agriculture Department Recruitment 2026

KEA AO And AAO Posts

 

 

Author Note: ಈ ಲೇಖನವು WhatsApp Username Feature ಕುರಿತು ಲಭ್ಯವಿರುವ ಅಧಿಕೃತ ಮಾಹಿತಿ, ಸಾರ್ವಜನಿಕ ವರದಿಗಳು ಮತ್ತು ತಾಂತ್ರಿಕ ಬೆಳವಣಿಗೆಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಹೊಸ ಅಧಿಕೃತ ಪ್ರಕಟಣೆಗಳು ಬಂದಂತೆ ಮಾಹಿತಿಯಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ.

 

About Author: ರಂಗನಾಥ ಬಿ ಜಿ  ರವರು ಅರ್ಥಶಾಸ್ತ್ರ ವಿಭಾಗದಲ್ಲಿ ಎಂ ಎ ಪದವೀಧರರಾಗಿದ್ದು, ಇವರು ಕಳೆದ 3 ವರ್ಷಗಳಿಂದ ಸರ್ಕಾರಿ ಯೋಜನೆಗಳು, ತಂತ್ರಜ್ಞಾನ, ಉದ್ಯೋಗ, ಶಿಕ್ಷಣ ಮತ್ತು ಡಿಜಿಟಲ್ ಸೇವೆಗಳ ಕುರಿತು ನಿಖರ, ವಿಶ್ವಾಸಾರ್ಹ ಹಾಗೂ ಓದುಗರಿಗೆ ಉಪಯುಕ್ತ ಮಾಹಿತಿಯನ್ನು ಕನ್ನಡದಲ್ಲಿ ಸರಳವಾಗಿ ಪ್ರಕಟಿಸಲು ಸದಾ ಪ್ರಯತ್ನಿಸುತ್ತಿದ್ದಾರೆ.

 

Disclaimer: ಈ ಲೇಖನವು ಮಾಹಿತಿ ನೀಡುವ ಉದ್ದೇಶಕ್ಕಾಗಿ ಮಾತ್ರ ಪ್ರಕಟಿಸಲಾಗಿದೆ. WhatsApp ಅಥವಾ ಭಾರತ ಸರ್ಕಾರದ ಅಧಿಕೃತ ಪ್ರಕಟಣೆಗಳಲ್ಲಿ ಬದಲಾವಣೆಗಳಾಗಬಹುದು. ಯಾವುದೇ ನಿರ್ಧಾರ ಕೈಗೊಳ್ಳುವ ಮೊದಲು ಅಧಿಕೃತ ಮೂಲಗಳನ್ನು ಪರಿಶೀಲಿಸುವುದು ಸೂಕ್ತ.

” ನೀವು ಹಂಚಿಕೊಳ್ಳಲು ಈ ಮಾಹಿತಿ ನಿಮಗೆ ಉಪಯುಕ್ತವೆನಿಸಿದರೆ ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಇಂತಹ ತಂತ್ರಜ್ಞಾನ, ಸರ್ಕಾರಿ ಯೋಜನೆಗಳು ಮತ್ತು ಉದ್ಯೋಗ ಮಾಹಿತಿಗಾಗಿ newsbymr ಗೆ ಭೇಟಿ ನೀಡಿ.”

ರಂಗನಾಥ ಬಿ.ಜಿ ಅವರು ಅರ್ಥಶಾಸ್ತ್ರದಲ್ಲಿ ಎಂ.ಎ ಪದವೀಧರರಾಗಿದ್ದು, ಕಳೆದ ಎರಡು ವರ್ಷಗಳಿಂದ ನೈಜ ಹಾಗೂ ವಿಶ್ವಾಸಾರ್ಹ ಕನ್ನಡ ವಿಷಯಗಳನ್ನು ಪ್ರಕಟಿಸುತ್ತಿದ್ದಾರೆ. ಸರ್ಕಾರಿ ಉದ್ಯೋಗ ಮಾಹಿತಿ, ಪರೀಕ್ಷಾ ತಯಾರಿ ಸಲಹೆಗಳು, ವೃತ್ತಿ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು ಹಾಗೂ ಟ್ರೆಂಡಿಂಗ್ ಸುದ್ದಿಗಳ ಕುರಿತು ಲೇಖನಗಳನ್ನು ಬರೆಯುವಲ್ಲಿ ಪರಿಣತಿ ಹೊಂದಿದ್ದು, ಓದುಗರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುವುದು ಇವರ ಉದ್ದೇಶವಾಗಿದೆ. Please Visit NewsByMr

Leave a Comment