BSNL Junior Telecom Officer Posts
ಕೇಂದ್ರ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ ಒದಗಿ ಬಂದಿದೆ. ಭಾರತ್ ಸಂಚಾರ ನಿಗಮ್ ಲಿಮಿಟೆಡ್ (BSNL) ಸಂಸ್ಥೆಯು ಜೂನಿಯರ್ ಟೆಲಿಕಾಂ ಅಧಿಕಾರಿ (JTO) ಹುದ್ದೆಗಳ ಭರ್ತಿಗಾಗಿ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ವಿಜ್ಞಾನ ವಿಭಾಗ ಅಥವಾ ಇಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿರುವ ಅರ್ಹ ಅಭ್ಯರ್ಥಿಗಳು ಈ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಉತ್ತಮ ವೇತನದ ಸೌಲಭ್ಯ, ಉದ್ಯೋಗ ಭದ್ರತೆ ಹಾಗೂ ವೃತ್ತಿಜೀವನದಲ್ಲಿ ಬೆಳವಣಿಗೆಯ ಅವಕಾಶಗಳನ್ನು ಒದಗಿಸುವ ಈ ಹುದ್ದೆಗಳು ಕೇಂದ್ರ ಸರ್ಕಾರಿ ಉದ್ಯೋಗವನ್ನು ಪಡೆಯಬೇಕು ಅಂದುಕೊಂಡಿರುವವರಿಗೆ ಉತ್ತಮ ಅವಕಾಶವಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಹತಾ ಮಾನದಂಡಗಳು, ಆಯ್ಕೆ ಪ್ರಕ್ರಿಯೆ ಹಾಗೂ ಅರ್ಜಿ ಸಲ್ಲಿಸುವ ವಿಧಾನವನ್ನು ಓದಿ ಪರಿಶೀಲಿಸಿ ನಿಗದಿತ ಅವಧಿಯೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ನೇಮಕಾತಿ ಅಧಿಸೂಚನೆಯ ಪಕ್ಷಿ ನೋಟ
| ವಿವರ | ಮಾಹಿತಿ |
| ನೇಮಕಾತಿ ಸಂಸ್ಥೆ ಹೆಸರು | ಭಾರತ್ ಸಂಚಾರ ನಿಗಮ್ ಲಿಮಿಟೆಡ್ (BSNL) |
| ಹುದ್ದೆಗಳ ಹೆಸರು | ಜೂನಿಯರ್ ಟೆಲಿಕಾಂ ಅಧಿಕಾರಿ (JTO) |
| ಒಟ್ಟು ಹುದ್ದೆಗಳ ಸಂಖ್ಯೆ | 100 |
| ಕೆಲಸ ನಿರ್ವಹಣೆಯ ಸ್ಥಳ | ಅಖಿಲ ಭಾರತ |
| ವೇತನ | ತಿಂಗಳಿಗೆ- 16,400/- ರೂಗಳಿಂದ 40,500/- ರೂಗಳ ವರೆಗೆ |
ನೇಮಕಾತಿಗೆ ಸಂಬಂಧಿಸಿದ ಅರ್ಹತಾ ಮಾನದಂಡಗಳು
ವಿದ್ಯಾರ್ಹತೆ ವಿವರ
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಆಗುವ ಸಂದರ್ಭದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಬಿ.ಇ(B.E), ಬಿ.ಟೆಕ್ (B.Tech), ಎಂ.ಇ (M.E), ಎಂ.ಟೆಕ್ (M. Tech), ಅಥವಾ ಎಂ ಎಸ್ ಸಿ (M.Sc), ಪದವಿಯನ್ನು ಪೂರ್ಣಗೊಳಿಸಬೇಕು
ವಯೋಮಿತಿ ವಿವರ
ಅಭ್ಯರ್ಥಿಗಳು ದಿನಾಂಕ: 01-01-2026 ರಂತೆ ಕನಿಷ್ಠ 20 ವರ್ಷಗಳನ್ನು ಹಾಗೂ ಗರಿಷ್ಠ 30 ವರ್ಷಗಳ ವಯಸ್ಸನ್ನು ಹೊಂದಿರಬೇಕು
ವಯೋಮಿತಿ ಸಡಿಲಿಕೆ
ಈ ನೇಮಕಾತಿಗೆ ಕೇಂದ್ರ ಸರ್ಕಾರದ ವಯೋಮಿತಿ ಸಡಿಲಿಕೆ ಕಾಯ್ದೆ ಅಡಿಯಲ್ಲಿ ಗರಿಷ್ಠ ವಯೋಮಿತಿಯನ್ನು ಈ ಕೆಳಕಂಡಂತೆ ನಿಗದಿಪಡಿಸಲಾಗಿದೆ
ಇತರೆ ಹಿಂದುಳಿದ ವರ್ಗಗಳ ಅಡಿಯಲ್ಲಿ ಬರುವ 2ಎ 2ಬಿ 3ಎ 3ಬಿ ಅಭ್ಯರ್ಥಿಗಳು : 3 ವರ್ಷಗಳು
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು : 5 ವರ್ಷಗಳು
ಅಂಗವಿಕಲ (ಸಾಮಾನ್ಯ) ಅಭ್ಯರ್ಥಿಗಳು : 10 ವರ್ಷಗಳು
ಅಂಗವಿಕಲ (ಇತರೆ ಹಿಂದುಳಿದ ವರ್ಗಗಳು) ಅಭ್ಯರ್ಥಿಗಳು : 13 ವರ್ಷಗಳು
ಅಂಗವಿಕಲ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ) ದ ಅಭ್ಯರ್ಥಿಗಳು : 15 ವರ್ಷಗಳು
ವೇತನದ ವಿವರಗಳು
ಈ ನೇಮಕಾತಿ ಮುಖೇನ ಆಯ್ಕೆಗೊಳ್ಳುವ ಜೂನಿಯರ್ ಟೆಲಿಕಾಂ ಅಧಿಕಾರಿಗಳಿಗೆ 16,400/- ರೂಗಳಿಂದ 40,500/- ರೂಗಳ ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ ಈ ಸಂಸ್ಥೆಯು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವುದರಿಂದ ಉತ್ತಮ ಭತ್ಯೆಗಳು ಹಾಗೂ ಮುಂಬಡ್ತಿ ಸೇವೆಗಳು ದೊರೆಯುತ್ತವೆ
ಆನ್ಲೈನ್ ಅರ್ಜಿ ಶುಲ್ಕ
ಸಾಮಾನ್ಯ, ಇತರ ಹಿಂದುಳಿದ ವರ್ಗಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು : 2,000/- ರೂಗಳು
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳು : 1,000/- ರೂಗಳು
ಪಾವತಿ ವಿಧಾನ : ಆನ್ಲೈನ್ ಮೂಲಕ ಮಾತ್ರ (Debit Card/ Credit Card/ Net Banking, UPI)
ಆಯ್ಕೆಯ ಪ್ರಕ್ರಿಯೆಗಳು
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಕಂಡ ಆಯ್ಕೆ ಪ್ರಕ್ರಿಯೆಗೆ ಒಳಪಡಬೇಕಾಗುತ್ತದೆ
ಕಂಪ್ಯೂಟರ್ ಆಧಾರಿತ ಪರೀಕ್ಷೆ : ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಪ್ರಾದೇಶಿಕ ಭಾಷೆ, ಕಂಪ್ಯೂಟರ್ ಜ್ಞಾನ, ಸಾಮಾನ್ಯ ಜ್ಞಾನ, ತಾರ್ಕಿಕತೆ ಹಾಗೂ ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ಹಾಗೂ ಬಿಎಸ್ಎನ್ಎಲ್ ಸಂಸ್ಥೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ
ದಾಖಲೆ ಪರಿಶೀಲನೆ : ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಸಲ್ಲಿಸಿರುವ ಹಾಗೂ ಸಲ್ಲಿಸಬೇಕಾದ ದಾಖಲೆಗಳನ್ನು ಅವುಗಳ ಗುಣಮಟ್ಟ ಹಾಗೂ ನೈಜತೆಯನ್ನು ಇಲ್ಲಿ ಪರೀಕ್ಷಿಸಲಾಗುತ್ತದೆ
ವೈದ್ಯಕೀಯ ಪರೀಕ್ಷೆ : ಅಭ್ಯರ್ಥಿಗಳ ದೈಹಿಕ ಹಾಗೂ ಮಾನಸಿಕ ಮಟ್ಟವನ್ನು ನಿರ್ಧರಿಸಲು ಹಾಗೂ ಅಂಗವಿಕಲ ಅಭ್ಯರ್ಥಿಗಳ ಮೀಸಲಾತಿಯನ್ನು ಕೋರಿರುವ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತದೆ
BSNL ಸಂಸ್ಥೆಯ ಬಗ್ಗೆ
ಭಾರತ್ ಸಂಚಾರ ನಿಗಮ್ ಲಿಮಿಟೆಡ್ (BSNL) ಕೇಂದ್ರ ಸರ್ಕಾರದ ಸ್ವಾಮ್ಯದ ಪ್ರಮುಖ ದೂರಸಂಪರ್ಕ ಸಂಸ್ಥೆಯಾಗಿದೆ. ಇದನ್ನು 1 ಅಕ್ಟೋಬರ್ 2000 ರಂದು ಸ್ಥಾಪಿಸಲಾಯಿತು. BSNL ದೇಶದ ಮೂಲೆ ಮೂಲೆಗೆ ಮೊಬೈಲ್ ಸೇವೆ, ಲ್ಯಾಂಡ್‌ಲೈನ್, ಬ್ರಾಡ್‌ಬ್ಯಾಂಡ್, ಫೈಬರ್ ಇಂಟರ್ನೆಟ್ ಹಾಗೂ ವಿವಿಧ ಡಿಜಿಟಲ್ ಸಂವಹನ ಹಾಗೂ ಸಂಪರ್ಕ ಸೇವೆಗಳನ್ನು ಒದಗಿಸುತ್ತದೆ. ವಿಶೇಷವಾಗಿ ಗ್ರಾಮೀಣ ಮತ್ತು ದೂರದ ಪ್ರದೇಶಗಳಿಗೆ ಸಂಪರ್ಕ ಸೇವೆಗಳನ್ನು ವಿಸ್ತರಿಸುವಲ್ಲಿ ಹಾಗೂ ಪೂರೈಸುವಲ್ಲಿ BSNL ಮಹತ್ವದ ಪಾತ್ರ ವಹಿಸಿದೆ. ಪ್ರಸ್ತುತ ಸಂಸ್ಥೆಯು ಕಂಪ್ಯೂಟರ್ ಯುಗದಲ್ಲಿ ಕೋಟ್ಯಾಂತರ ಗ್ರಾಹಕರಿಗೆ ಸೇವೆ ನೀಡುತ್ತಿದ್ದು, 4G ಹಾಗೂ 5G ತಂತ್ರಜ್ಞಾನ ವಿಸ್ತರಣೆಯತ್ತ ಗಮನ ಹರಿಸಿದೆ. ದೇಶದ ಸಂವಹನ ಮೂಲಸೌಕರ್ಯವನ್ನು ಬಲಪಡಿಸಿ ಮತ್ತು ಡಿಜಿಟಲ್ ಭಾರತ ನಿರ್ಮಾಣದಲ್ಲಿ BSNL ಪ್ರಮುಖ ಕೊಡುಗೆ ನೀಡುತ್ತಿರುವ ಸಾರ್ವಜನಿಕ ವಲಯದ ಸಂಸ್ಥೆಯಾಗಿದ್ದು ಸಾವಿರಾರು ಯುವಕರಿಗೆ ಉದ್ಯೋಗವನ್ನು ನೀಡಿದೆ
BSNL ಸಂಸ್ಥೆಯ ಜೂನಿಯರ್ ಟೆಲಿಕಾಂ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ಮುಖ್ಯ ಅಂಶಗಳು
- ಕೇಂದ್ರ ಸರ್ಕಾರಿ ಹುದ್ದೆ
- ಉತ್ತಮ ವೇತನ ಸೌಲಭ್ಯ, ಭತ್ಯೆಗಳು, ಮುಂಬಡ್ತಿ ಅವಕಾಶಗಳು
- ತಾಂತ್ರಿಕ ವಲಯದ ಕೆಲಸ ನಿರ್ವಹಣೆ
- ಗೌರವಾನ್ವಿತ ಅಧಿಕಾರಿ ಹುದ್ದೆ ಮತ್ತು ದಿನನಿತ್ಯದ ಸೌಲಭ್ಯಗಳು
- ಡಿಜಿಟಲ್ ವಲಯದ ಅಭಿವೃದ್ದಿಗೆ ಕೊಡುಗೆ (Make In India)
- ದೀರ್ಘಕಾಲದಲ್ಲಿ ಕೆಲಸ ಮಾಡುವ ಅವಕಾಶ
BSNL JTO ಅವರ ಕೆಲಸದ ವಾತಾವರಣ ಹಾಗೂ ಜವಾಬ್ದಾರಿಗಳು
- ನೆಟ್ ವರ್ಕ್ ಜಾಲದ ನಿರ್ವಹಣೆ, ಮೇಲ್ವಿಚಾರಣೆ ಮತ್ತು ವಿಪತ್ತು ಪತ್ತೆ ಹಚ್ಚಿ ಸರಿಪಡಿಸುವುದು
- ಬ್ರಾಡ್ ಬ್ಯಾಂಡ್ ನ ವ್ಯವಸ್ಥೆ ನಿರ್ವಹಣೆ ಮತ್ತು ವಿಸ್ತರಿಸುವಿಕೆ
- ಗ್ರಾಹಕರಿಂದ ಸ್ವೀಕೃತಗೊಂಡ ದೂರುಗಳ ಪರಿಶೀಲನೆ ಮತ್ತು ಸರಿಪಡಿಸುವಿಕೆ
- ಗ್ರಾಹಕರ ಸಂಖ್ಯೆ ಹೆಚ್ಚಾಗಿರುವ ಕಡೆ ಹೊಸ ಘಟಕಗಳ ಸ್ಥಾಪನೆಗೆ ಪರೀಕ್ಷೆ ಮತ್ತು ಸಲಹೆ ನೀಡುವುದು
- ತಾಂತ್ರಿಕ ಯೋಜನಾ ವರದಿಗಳನ್ನ ಸಿದ್ದಪಡಿಸಿ ಸಂಸ್ಥೆಯು ಹೊರಡಿಸುವ ಯೋಜನೆಗಳನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರುವುದು.
BSNL JTO ಅವರ ಒಂದು ದಿನದ ದಿನಚರಿಯನ್ನು ಈ ರೀತಿ ನೋಡಬಹುದು
- ನೆಟ್ ವರ್ಕ್ ಪರಿಶೀಲನೆ ಮಾಡುವುದು
- ಕ್ಷೇತ್ರದ ಪರಿಶೀಲನೆ ಕೈಗೊಳ್ಳುವುದು
- ಗ್ರಾಹಕರ ಸಮಸ್ಯೆಗಳನ್ನು ನೋಡುವುದು ಹಾಗೂ ಪರಿಹಾರ ನೀಡುವುದು
- ಅಗತ್ಯವಿರುವ ಸೌಲಭ್ಯಗಳ ಮೇಲ್ವಿಚಾರಣೆ ನೆಡೆಸುವುದು
- ತಂಡದ ಸದಸ್ಯರ ನಡುವೆ ಸಮನ್ವಯ ಸಾಧಿಸುವುದು
BSNL JTO ಹುದ್ದೆಯ Career Growth
ನೇಮಕಗೊಂಡ ಜೂನಿಯರ್ ಟೆಲಿಕಾಂ ಅಧಿಕಾರಿ ಹುದ್ದೆಯಿಂದ ಉತ್ತಮ ಕಾರ್ಯ ನಿರ್ವಹಣೆ ಮತ್ತು ಪರಿಣಾಮಕಾರಿ ಫಲಿತಾಂಶದಿಂದ ಮುಂದೆ ಉಪ ವಿಭಾಗೀಯ ಇಂಜಿನಿಯರ್-> ವಿಭಾಗೀಯ ಇಂಜಿನಿಯರ್-> ಹಿರಿಯ ವಿಭಾಗೀಯ ಇಂಜಿನಿಯರ್-> ಸಹಾಯಕ ಪ್ರಧಾನ ವ್ಯವಸ್ಥಾಪಕರು-> ಉಪ ಪ್ರಧಾನ ವ್ಯವಸ್ಥಾಪಕರು ನಂತರದ ಹುದ್ದೆಗಳಿಗೆ ಪದೋನ್ನತಿಯನ್ನು ಹೊಂದುವ ಅವಕಾಶಗಳು ಹೆಚ್ಚಾಗಿರುತ್ತವೆ.
ಅರ್ಜಿ ಸಲ್ಲಿಕೆ ಪ್ರಕ್ರಿಯೆ
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಅಗತ್ಯವಿರುವ ದಾಖಲೆಗಳು ಹಾಗೂ ಮಾಹಿತಿಯನ್ನು ಸಿದ್ಧಪಡಿಸಿಕೊಳ್ಳಿ
- ಬಿ.ಎಸ್.ಎನ್.ಎಲ್ ನ ಅಧಿಕೃತ ವೆಬ್ ಸೈಟ್‌ಗೆ ಭೇಟಿ ನೀಡಿ ನೇಮಕಾತಿ ವಿಭಾಗವನ್ನು ತೆರೆಯಿರಿ
- ನೇಮಕಾತಿಗೆ ಸಂಬಂಧಿಸಿದಂತೆ ನೀಡಲಾಗಿರುವ ಅಧಿಕೃತ ಅಧಿಸೂಚನೆಯನ್ನು ತೆರೆದು ವಿವರಗಳನ್ನು ಎಚ್ಚರಿಕೆಯಿಂದ ಓದಿ
- ಹುದ್ದೆಯ ಆನ್ಲೈನ್ ಅರ್ಜಿ ಸಲ್ಲಿಕೆ ಲಿಂಕ್ ಮೇಲೆ ಕ್ಲಿಕ್ ಮಾಡಿ ಮೊದಲು ನೋಂದಣಿ ಮಾಡಿಕೊಳ್ಳಿ
- ನೊಂದಣಿ ಮಾಡಿಕೊಂಡ ನಂತರ ಯೂಸರ್ ನೇಮ್ ಹಾಗೂ ಪಾಸ್ವರ್ಡ್ ಅನ್ನು ನಮೂದಿಸುವ ಮೂಲಕ ಲಾಗಿನ್ ಆಗಿ
- ಅಲ್ಲಿ ನಿರ್ದಿಷ್ಟ ಪಡಿಸಿರುವ ಜೂನಿಯರ್ ಟೆಲಿಕಾಂ ಅಧಿಕಾರಿ ಹುದ್ದೆಗಳಿಗೆ ಅರ್ಜಿಯನ್ನು ನೀಡಲಾಗಿದ್ದು ಅದನ್ನು ತೆರೆದು ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ನಮೂದಿಸಿ
- ನಿರ್ದಿಷ್ಟಪಡಿಸಿರುವ ದಾಖಲಾತಿಗಳನ್ನು ಅವುಗಳ ಗರಿಷ್ಠ ಗಾತ್ರ ಹಾಗೂ ದಾಖಲೆಗಳ ಸ್ಕ್ಯಾನ್ ನಿಯಮಗಳನ್ನು ಓದಿಕೊಂಡು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
- ವರ್ಗಕ್ಕೆ ಅನ್ವಯವಾಗುವಂತೆ ಅಧಿಕೃತವಾಗಿ ನಿರ್ದಿಷ್ಟ ಪಡಿಸಿರುವ ಮೊತ್ತದ ಆನ್ ಲೈನ್ ಅರ್ಜಿ ಶುಲ್ಕವನ್ನು ಪಾವತಿಸಿ
- ನಂತರ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಎಲ್ಲ ಮಾಹಿತಿ ಹಾಗೂ ದಾಖಲಾತಿಗಳನ್ನು ಪರಿಶೀಲಿಸಿ ಸಬ್ಮಿಟ್ ಮಾಡಿ
ಸ್ಕ್ರೀನ್ ನ ಮೇಲೆ ಕಾಣುವ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಅಥವಾ ಸೇವ್ ಮಾಡಿ ಇಟ್ಟುಕೊಳ್ಳಿ ಇದು ನೇಮಕಾತಿ ಪ್ರಕ್ರಿಯೆಯಲ್ಲಿ ನಿಮ್ಮ ಪ್ರಮುಖ ವೈಯಕ್ತಿಕ ದಾಖಲೆಯಾಗಿದೆ
ಪ್ರಮುಖ ಲಿಂಕ್ ಗಳು
| ವಿವರ | ಸಂಬಂಧಪಟ್ಟ ಲಿಂಕ್ |
| ಅಧಿಕೃತ ವೆಬ್ಸೈಟ್ ನೇಮಕಾತಿ ವಿಭಾಗ | ಬಿ.ಎಸ್.ಎನ್.ಎಲ್ |
| ಅಧಿಕೃತ ಅಧಿಸೂಚನೆಯ ಪಿಡಿಎಫ್ | BSNL JTO Recruitment Notification |
| ಹುದ್ದೆಗಳಿಗೆ ಅರ್ಜಿ ಸಲ್ಲಿಸಲು | ನೋಂದಣಿ ಅರ್ಜಿ ಸಲ್ಲಿಕೆ |
| ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು | ಇಲ್ಲಿ ಕ್ಲಿಕ್ ಮಾಡಿ |
| ಹೆಚ್ಚುವರಿ ಮಾಹಿತಿ ಪಡೆಯಿರಿ | ನೇಮಕಾತಿ ಮಾಹಿತಿ ಸರ್ಕಾರಿ ಯೋಜನೆಗಳ ಮಾಹಿತಿ |
Last Updated On: 04-06-2026
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಕೆಗೆ ಆರಂಭ ದಿನಾಂಕ : 04 ಜೂನ್ 2026
ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 03 ಜುಲೈ 2026
ಅರ್ಜಿಯಲ್ಲಿ ಮಾಹಿತಿ ಬದಲಾವಣೆ ಮಾಡಲು ಇರುವ ಕಾಲಾವಧಿ : 04 ಜುಲೈ 2026 ರಿಂದ 11 ಜುಲೈ 2026
ಕಂಪ್ಯೂಟರ್ ಆಧಾರಿತ ಪರೀಕ್ಷೆಯ ನಿರೀಕ್ಷಿತ ತಿಂಗಳು : ಆಗಸ್ಟ್ 2026
ಈ ನೇಮಕಾತಿಗೆ ಯಾರು ಪ್ರಮುಖವಾಗಿ ಅರ್ಜಿ ಸಲ್ಲಿಸಬೇಕು
- ಬಿ.ಇ(B.E), ಬಿ.ಟೆಕ್ (B.Tech) ಪದವಿ ಪಡೆದವರು
- ಎಂ.ಇ (M.E), ಎಂ.ಟೆಕ್ (M. Tech) ಪದವಿ ಹೊಂದಿರುವವರು
- ಎಂ ಎಸ್ ಸಿ (M.Sc), ಪದವಿಯನ್ನು ಹೊಂದಿರುವವರು
- ಕೇಂದ್ರ ಸರ್ಕಾರಿ ಉದ್ಯೋಗವನ್ನು ಹೊಂದಬೇಕು ಎನ್ನುವವರು
- ಸಂವಹನ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಅಂದುಕೊಂಡಿರುವವರು
- ಉತ್ತಮ ವೇತನ, ಭತ್ಯೆ, ಸೌಲಭ್ಯ ಮತ್ತು ಪದೋನ್ನತಿ ಹೊಂದಬೇಕು ಎನ್ನುವವರು ಈ ನೇಮಕಾತಿಗೆ ತಪ್ಪದೇ ಅರ್ಜಿ ಸಲ್ಲಿಸಿ
BSNL JTO ಅಧಿಕಾರಿಗಳಿಗೆ ಇರಬೇಕಾದ ಪ್ರಮುಖ ಕೌಶಲ್ಯಗಳು
- ನೆಟ್ ವರ್ಕ್ ಬಗ್ಗೆ ತಾಂತ್ರಿಕ ಜ್ಞಾನ
- ನೆಟ್ ವರ್ಕ್ ದೋಷಗಳ ಕಂಡುಹಿಡಿಯುವಿಕೆ ಮತ್ತು ನಿವಾರಣೆ
- ಉತ್ತಮ ಸಂವಹನಾ ಕೌಶಲ್ಯ
- ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಶಕ್ತಿ
- ಗ್ರಾಹಕರಿಗೆ ಹೊಂದಿಕೊಳ್ಳುವಿಕೆ ಮತ್ತು ಗ್ರಾಹಕ ಸ್ನೇಹಿ ಪ್ರವೃತ್ತಿಗಳು
BSNL JTO ಹುದ್ದೆಗಳ Exam Preparation Tips
ನಿಗಧಿಪಡಿಸಿರುವ ಸಿಲೆಬಸ್ ಅನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ – ಮೊದಲು ಎಲ್ಲಾ ವಿಷಯಗಳನ್ನು ಪಟ್ಟಿಯನ್ನು ಮಾಡಿ, ದುರ್ಬಲ ಮತ್ತು ಬಲವಾದ ವಿಷಯಗಳನ್ನು ಗುರುತಿಸಿ.
ದಿನನಿತ್ಯ ಅಧ್ಯಯನ ಮಾಡಲು ವೇಳಾಪಟ್ಟಿ ಸಿದ್ದಪಡಿಸಿಕೊಳ್ಳಿ – ಪ್ರತಿ ನಿತ್ಯ ಕಡಿಮೆ ಎಂದರೂ 4 ರಿಂದ 6 ಗಂಟೆಗಳ ಕಾಲ ಓದಿಗೆ ಸಮಯವನ್ನು ಮೀಸಲಿರಿಸಿ.
Engineering Stream-I ಗೆ ಹೆಚ್ಚಿನ ಆದ್ಯತೆ ನೀಡಿ – ಪರೀಕ್ಷೆಯ ಮೊದಲ ಸ್ಟ್ರೀಮ್ ಆಗಿರುವುದರಿಂದ Network Theory Concepts, Electronic Devices Mechanism, Power Electronics Concepts ಮತ್ತು Electromagnetic Theory ವಿಷಯಗಳ ಹೆಚ್ಚಿನ ಮೂಲಭೂತ ತತ್ವಗಳನ್ನು ಹೆಚ್ಚಾಗಿ ಅಧ್ಯಯನ ಮಾಡಿ ಭದ್ರ ಅಡಿಪಾಯವನ್ನು ಹಾಕಿಕೊಳ್ಳಿ.
Engineering Stream-II ನಲ್ಲಿ ಎಲ್ಲಾ Concepts ಗಳು ಸ್ಪಷ್ಟವಾಗಿರಲಿ – Analog & Digital Circuits Concepts, Communication Systems Analysis, Computer Engineering And Machine Learning ವಿಷಯಗಳ ಸೂತ್ರಗಳು ಮತ್ತು ಅನ್ವಯ ಕ್ಷೇತ್ರಗಳನ್ನು ಹೆಚ್ಚಾಗಿ ಅಭ್ಯಾಸ ಮಾಡಿ.
ಸೂತ್ರಗಳ ಕಿರು ನೋಟ್ಸ್ ಅನ್ನು ತಯಾರಿಸಿ – ಪ್ರಮುಖವಾದ ಹಾಗೂ ಕಷ್ಟಕರವಾದ Formula ಗಳು , Theorem ಗಳು ಮತ್ತು Short Notes ಗಳನ್ನು ಒಂದೇ ಪುಸ್ತಕದಲ್ಲಿ ದಾಖಲಿಸಿ. ಇವು ತ್ವರಿತ ರಿವಿಷನ್ ಗೆ ಸಹಾಯ ಮಾಡುತ್ತವೆ
ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿ – ಈ ಹಿಂದೆ ಆಗಿರುವ ಪರೀಕ್ಷೆಗಳ ಪತ್ರಿಕೆಗಳನ್ನು ಓದಿ ಬಿಡಿಸುವುದರಿಂದ ಪ್ರಶ್ನೆಗಳ ಮಾದರಿ ಮತ್ತು ಕಠಿಣತೆಯ ಮಟ್ಟವನ್ನು ತಿಳಿಯಲು ಸಹಾಯವಾಗುತ್ತದೆ.
Mock Tests ಗಳನ್ನು ಹೆಚ್ಚಾಗಿ ತೆಗೆದುಕೊಳ್ಳಿ – ಮಾಕ್ ಪರೀಕ್ಷೆಗಳನ್ನು ಹೆಚ್ಚಾಗಿ ಅಭ್ಯಾಸ ಮಾಡುವುದರಿಂದ ಸಮಯ ನಿರ್ವಹಣೆ ಮತ್ತು ನಿಖರತೆ ಹೆಚ್ಚುತ್ತದೆ. ವಾರಕ್ಕೊಮ್ಮೆ ಮಾಕ್ ಪರೀಕ್ಷೆಗಳನ್ನು ಬರೆಯಿರಿ.
GAT ವಿಭಾಗವನ್ನು ನಿರ್ಲಕ್ಷಿಸಬೇಡಿ – English Language Grammar, Aptitude Concepts, Logical And Numerical Reasoning ಮತ್ತು Current Affairs ಗೆ ಪ್ರತಿದಿನ 1 ಗಂಟೆ ಕಾಲವನ್ನು ಮೀಸಲಿಡಿ.
Telecom Awareness ಮೇಲೆ ಗಮನ ಕೊಡುವುದನ್ನು ಮರೆಯಬೇಡಿ – BSNL ಸಂಸ್ಥೆಯ ಬಗ್ಗೆ, 4G/5G Network, Optical Fiber Cable And Networking, Telecom History ಕುರಿತು ಪುಸ್ತಕಗಳನ್ನು ಓದಿ..
ರಿವಿಷನ್‌ನ ಅಗತ್ಯತೆ – ಪರೀಕ್ಷೆಗೆ ಮುನ್ನ ಕೊನೆಯ 30 ದಿನಗಳಲ್ಲಿ ಕನಿಷ್ಠ 2–3 ಬಾರಿ ಸಂಪೂರ್ಣ ಸಿಲೆಬಸ್‌ನ್ನು ರಿವಿಷನ್ ಮಾಡಿ. ಈ ಸಮಯದಲ್ಲಿ ಹೊಸ ವಿಷಯಗಳನ್ನು ಓದದೇ ಈಗಾಗಲೇ ಓದಿರುವ ವಿಷಯ ಹಾಗೂ ಪಠ್ಯವನ್ನು ಹೆಚ್ಚು ರಿವಿಷನ್ ಮಾಡಿ. ಇದು ನಿಮ್ಮ ನಿಖರತೆ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ
ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ – ಸಾಕಷ್ಟು ನಿದ್ರೆ ಮಾಡುವುದು, ಸರಿಯಾದ ಆಹಾರ ಪದ್ದತಿ ಮತ್ತು ನಿಯಮಿತ ವಿರಾಮಗಳನ್ನು ತೆಗೆದುಕೊಳ್ಳಿ ಇವುಗಳು ಏಕಾಗ್ರತೆಯನ್ನು ಹೆಚ್ಚಿಸುತ್ತವೆ. ವಿರಾಮವಿಲ್ಲದೇ ಓದಿದರೆ ಓದಿದ ವಿಷಯಗಳ ಬಗ್ಗೆ ಗೊಂದಲ ಉಂಟಾಗಬಹುದು
ಆತ್ಮವಿಶ್ವಾಸ ಉಳಿಸಿಕೊಳ್ಳಿ ಹಾಗೂ ಹೆಚ್ಚಿಸಿಕೊಳ್ಳಿ – ನಿರಂತರ ಅಭ್ಯಾಸ ಮಾಡುವುದು ಮತ್ತು ಯೋಜಿತ ಕಾರ್ಯ ಸಮಯದಲ್ಲಿ ಉತ್ತಮವಾಗಿ ಓದುವುದು ಮತ್ತು ರಿವಿಷನ್ ಮಾಡುವುದರಿಂದ BSNL JTO ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಉದ್ಯೋಗವನ್ನು ಸುಲಭವಾಗಿ ಪಡೆಯಬಹುದು
BSNL JTO ನೇಮಕಾತಿಗೆ ಸಂಬಂಧಿಸಿದ FAQ’s
1. ನನ್ನ ವಯಸ್ಸು 35 ವರ್ಷ, ನಾನು ಅರ್ಜಿ ಸಲ್ಲಿಸಬಹುದೇ?
ನಿಮ್ಮ ವರ್ಗಕ್ಕೆ ಅನುಗುಣವಾಗಿ ನಿಗಧಿಪಡಿಸಿರುವ ವಯೋಮಿತಿ ಸಡಿಲಿಕೆಯ ಮಾಹಿತಿಯನ್ನು ಪರಿಶೀಲಿಸಿ ಅರ್ಹತೆ ಹೊಂದಿದ್ದರೆ ಅರ್ಜಿ ಸಲ್ಲಿಸಬಹುದು
2. BSNL JTO ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ವಿದ್ಯಾರ್ಹತೆ ಏನಿರಬೇಕು?
B.E, B.Tech, M.E, M.Tech, Msc ಪದವಿಗಳನ್ನು ಹೊಂದಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು
3. ಅನುಭವ ಹೊಂದಿರುವುದು ಕಡ್ಡಾಯವೇ?
ಇಲ್ಲ, ಫ್ರೆಷರ್ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು
4. ಈ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಕಂಪ್ಯೂಟರ್ ಆಧಾರಿತ ಪರೀಕ್ಷೆ, ದಾಖಲೆ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆಗಳು ಇರುತ್ತವೆ.
5. ಪದೋನ್ನತಿ ಸೌಲಭ್ಯಗಳು ಇವೆಯೇ?
ಹೌದು, ಪರಿಣಾಮಕಾರಿ ಕೆಲಸ ನಿರ್ವಹಣೆ ಮತ್ತು ಉತ್ತಮ ಪ್ರೊಫೈಲ್ ಹೋದಿದ್ದರೆ ಪದೋನ್ನತಿ ಹೊಂದಬಹುದು
BSNL JTO ಹುದ್ದೆಗಳ ಪರೀಕ್ಷೆಗಳಿಗೆ ಸಂಬಂಧಿಸಿದ ಪುಸ್ತಕಗಳು ಹಾಗೂ ಮಾಕ್ ಟೆಸ್ಟ್ ವಿವರಗಳು
ಇಂಜಿನಿಯರ್ ವಿಭಾಗ-1
| Subject Name | Suggested Book | Author Name |
|---|---|---|
| Materials & Components | Electronic Devices And Circuit Theory | Robert Boylestad |
| Physical Electronics & ICs | Electronic Devices and Circuits | Salivahanan |
| Network Theories | Network Analysis | M.E. Van Valkenburg |
| Power Electronics | Power Electronics | P.S. Bimbhra |
ಇಂಜಿನಿಯರ್ ವಿಭಾಗ-2
| Subject Name | Recommended Book | Name Of Author |
|---|---|---|
| Analog Circuits Concepts | Op-Amps and Linear Integrated Circuits | Ramakant Gayakwad |
| Digital Circuits Concepts | Digital Principles & Applications | Malvino & Leach |
| Communication Systems | Communication Systems | Simon Haykin |
| Operating Systems And Microprocessors | Operating System Concepts, Microprocessor Architecture | Galvin, Ramesh Gaonkar |
GAT ವಿಭಾಗ
- Quantitative Aptitude – Quantitative Aptitude – R.S. Aggarwal
- Reasoning – A Modern Approach to Verbal & Non-Verbal Reasoning – R.S. Aggarw
- English – Objective General English – S.P. Bakshi
- Vocabulary – Word Power Made Easy – Norman Lewis
- GK & Current Affairs – Lucent General Knowledge
- Yearly Current Affairs – Manorama Year Book
BSNL JTO Exam Mock Test – Mock Test Series 2026
ಭಾರತ ಸರ್ಕಾರದ ಪ್ರತಿಷ್ಠಿತ ಹಾಗೂ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆಯಾದ Bharat Sanchar Nigam Limited (BSNL) ವತಿಯಿಂದ 100 ಕಿರಿಯ ಟೆಲಿಕಾಂ ಅಧಿಕಾರಿ (JTO) ಹುದ್ದೆಗಳ ನೇಮಕಾತಿ ಪ್ರಕಟವಾಗಿರುವುದು ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಮಹತ್ವದ ಅವಕಾಶವಾಗಿದೆ. ತಾಂತ್ರಿಕ ವಿದ್ಯಾರ್ಹತೆ ಯನ್ನು ಹೊಂದಿರುವ ಯುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಕೇಂದ್ರ ಸರ್ಕಾರದ ಸಂಸ್ಥೆಯಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಬಹುದು. ಇದರಿಂದ ಗೌರವಾನ್ವಿತ ಹುದ್ದೆ, ಆಕರ್ಷಕ ಸಂಬಳ, ಭತ್ಯೆಗಳು, ಪದೋನ್ನತಿ ಹಾಗೂ ಇತರೆ ಸೌಲಭ್ಯಗಳನ್ನು ಪಡೆಯಬಹುದು.
ಆಸಕ್ತ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಎಚ್ಚರಿಕೆಯಿಂದ ಸಂಪೂರ್ಣವಾಗಿ ಓದಿ, ವಿದ್ಯಾರ್ಹತೆ, ವಯೋಮಿತಿ, ಮೀಸಲಾತಿ, ಆಯ್ಕೆ ಪ್ರಕ್ರಿಯೆ ಹಾಗೂ ಅರ್ಜಿ ಸಲ್ಲಿಕೆ ವಿಧಾನ ಸೇರಿದಂತೆ ಎಲ್ಲ ಮಾಹಿತಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು, ಯಾವುದೇ ತಪ್ಪುಗಳಿಲ್ಲದೆ ನಿಗದಿತ ಅವಧಿಯೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಅತ್ಯಂತ ಮುಖ್ಯವಾಗಿದೆ. ನಾವು ಈ ಲೇಖನದಲ್ಲಿ ಯಾರು ಪ್ರಮುಖವಾಗಿ ಅರ್ಜಿ ಸಲ್ಲಿಸಬೇಕು, ಹುದ್ದೆಯ ಕಾರ್ಯ ಹಾಗೂ ಜವಾಬ್ದಾರಿ, ಯಾವ ಕೌಶಲ್ಯಗಳನ್ನು ಹೊಂದಿರಬೇಕು ಹಾಗೂ ಪರೀಕ್ಷೆಯನ್ನು ಯಶಸ್ವಿಯಾಗಿ ಹೇಗೆ ಎದುರಿಸಬೇಕು ಎಂಬ ಎಲ್ಲಾ ಮಾಹಿತಿಯನ್ನು ನೀಡಿದ್ದೇವೆ
ದೃಢ ಸಂಕಲ್ಪ, ಸರಿಯಾದ ಸಿದ್ಧತೆ ಮತ್ತು ಸಮಯೋಚಿತ ಕ್ರಮದ ಮೂಲಕ ಈ ಅವಕಾಶವನ್ನು ಯಶಸ್ಸಿನ ಮೆಟ್ಟಿಲಾಗಿ ಪರಿವರ್ತಿಸಿಕೊಳ್ಳಬಹುದು. ಆದ್ದರಿಂದ ಅರ್ಹ ಅಭ್ಯರ್ಥಿಗಳು ವಿಳಂಬ ಮಾಡದೆ ಅರ್ಜಿ ಸಲ್ಲಿಸಿ, ಕೇಂದ್ರ ಸರ್ಕಾರದ ಪ್ರತಿಷ್ಠಿತ ಉದ್ಯೋಗವನ್ನು ಪಡೆಯುವ ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಮುಂದಾಗಬೇಕು
Author Note: ಈ ನೇಮಕಾತಿ ಲೇಖನವನ್ನು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ನ ಅಧಿಕೃತ ಅಧಿಸೂಚನೆ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಹೊರಡಿಸಲಾಗಿರುವ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಸೂಚಿಸಿದೆ.