Armed Police Constable ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಯುವಕರಿಗೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಈ ಹಿಂದೆ ಅಷ್ಟೇ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ನೇಮಕಾತಿ ಸೂಚನೆ ಹೊರಡಿಸಲಾಗಿದ್ದು ಅದರ ನಂತರ ಇಲಾಖೆಯಲ್ಲಿನ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ ಮತ್ತು ಅಧಿಕೃತ ಅಧಿಸೂಚನೆಯನ್ನು ಸಹ ಪ್ರಕಟಿಸಿದೆ ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವ ಈ ಪಡೆಯ ಹುದ್ದೆಗಳು ಯುವಕರಿಗೆ ಗೌರವಯುತ ವೃತ್ತಿ ಜೀವನ ಅವಕಾಶವನ್ನು ಒದಗಿಸುವುದರ ಜೊತೆಯಲ್ಲಿ ಆಕರ್ಷಕ ವೇತನ, ಭತ್ಯೆಗಳು ಹಾಗೂ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಹೊಂದುವ ಅವಕಾಶಗಳನ್ನು ಕಲ್ಪಿಸುತ್ತದೆ.
ಭದ್ರತೆ ಕಾಪಾಡುವುದು ಶಿಸ್ತು ಪಾಲನೆ ಸೇವಾ ಮನೋಭಾವ ಹೊಂದುವುದು ಮತ್ತು ದೇಶಭಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು ಅರ್ಹ ಅಭ್ಯರ್ಥಿಗಳು ಈ ಕೂಡಲೇ ಅಧಿಕೃತ ಅಧಿಸೂಚನೆಯನ್ನು ಓದಿ ಅರ್ಹತಮಾನದಂಡಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಅಭ್ಯರ್ಥಿಗಳಿಗೆ ನೇಮಕಾತಿ ಪ್ರಕ್ರಿಯೆ ಅರ್ಹತೆ ಆಯ್ಕೆ ವಿಧಾನ ವೇತನ ಶ್ರೇಣಿ ಪರೀಕ್ಷಾ ಪಠ್ಯಕ್ರಮ ಹಾಗೂ ಅರ್ಜಿ ಸಲ್ಲಿಕೆ ವಿವರಗಳನ್ನು ಈ ಕೆಳಕಂಡಂತೆ ಲೇಖನದಲ್ಲಿ ನೀಡಲಾಗಿದೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ಇಂದೇ ಅರ್ಜಿ ಸಲ್ಲಿಸಿ
Armed Police Constable ನೇಮಕಾತಿ ಅಧಿಸೂಚನೆಯ ವಿವರಗಳು
Quick Highlights
| ನೇಮಕಾತಿ ಇಲಾಖೆ | ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ (KSP) |
| ನೇಮಕಾತಿ ಪರೀಕ್ಷಾ ಸಂಸ್ಥೆ | ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) |
| ಹುದ್ದೆಗಳ ಹೆಸರು | ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ (Armed Police Constable) (CAR/DAR) |
| ಒಟ್ಟು ಹುದ್ದೆಗಳ ಸಂಖ್ಯೆ | 1600 ಹುದ್ದೆಗಳು |
| ಉದ್ಯೋಗದ ಸ್ಥಳ | ಕರ್ನಾಟಕದಾದ್ಯಂತ, ವಿವಿಧ ಜಿಲ್ಲೆಗಳು, ನಗರಗಳು ಮತ್ತು ಘಟಕಗಳು |
| ಅರ್ಜಿ ಸಲ್ಲಿಕೆ ಬಗೆ | ಆನ್ಲೈನ್ ಮೂಲಕ ಮಾತ್ರ |
| ವೇತನ ಶ್ರೇಣಿ | ಮಾಸಿಕ 37,500/- ರೂಗಳಿಂದ 76,100/- ರೂಗಳು |
| ವಿದ್ಯಾರ್ಹತೆ | ದ್ವಿತೀಯ ಪಿಯುಸಿ ಮತ್ತು ತತ್ಸಮಾನ |
| ಆಯ್ಕೆ ಪ್ರಕ್ರಿಯೆ | ಲಿಖಿತ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ, ದೈಹಿಕ ಮಾನದಂಡ ಪರೀಕ್ಷೆ, ವೈದ್ಯಕೀಯ ಪರೀಕ್ಷೆ, ದಾಖಲೆ ಪರಿಶೀಲನೆ |
ಹುದ್ದೆಗಳ ವೃಂದವಾರು ಹಂಚಿಕೆ ವಿವರ
| ವೃಂದದ ವಿವರ | ಖಾಲಿಯಿರುವ ಹುದ್ದೆಗಳ ಸಂಖ್ಯೆ |
| ಕಲ್ಯಾಣ ಕರ್ನಾಟಕ ವೃಂದ | 179 |
| ಮಿಕ್ಕುಳಿದ ವೃಂದ | 1421 |
| ಒಟ್ಟು ಹುದ್ದೆಗಳ ಸಂಖ್ಯೆ | 1600 |
ವಿದ್ಯಾರ್ಹತೆ ವಿವರ
ಈ Armed Police Constable ನೇಮಕಾತಿಗೆ ಅರ್ಜಿ ಸಲ್ಲಿಸುವವರು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಮಂಡಳಿಯಿಂದ ಈ ಕೆಳಗಿನ ಅರ್ಹತೆಯನ್ನು ಹೊಂದಿರಬೇಕು
ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು
ತತ್ಸಮಾನ ವಿದ್ಯಾರ್ಹತೆಯ ವಿವರ ಈ ಕೆಳಕಂಡಂತಿದೆ :
- ಸಿಬಿಎಸ್ಸಿ ಮತ್ತು ಐಸಿಎಸ್‌ಸಿ ಮಂಡಳಿ ನಡೆಸುವ ಕ್ಲಾಸ್ 12ನೇ ಪರೀಕ್ಷೆ.
- ಭಾರತದ ಇತರೆ ರಾಜ್ಯ ಸರ್ಕಾರಗಳು ಮತ್ತು ಅವುಗಳ ಪರೀಕ್ಷಾ ಮಂಡಳಿಯಿಂದ ನಡೆಯಲ್ಪಡುವ ಕ್ಲಾಸ್ 12ನೇ ಪರೀಕ್ಷೆ.
- ಮೂರು ವರ್ಷಗಳ ಡಿಪ್ಲೋಮಾ ಅಥವಾ ಎರಡು ವರ್ಷಗಳ ಐಟಿಐ ಕೋರ್ಸ್ ಉತ್ತೀರ್ಣ (ನಿಗದಿತ ಭಾಷಾ ಪರೀಕ್ಷೆಗಳ ಉತ್ತೀರ್ಣತೆ ಹೊಂದಿರಬೇಕು).
- ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ರವರ ವತಿಯಿಂದ ನಡೆಯುವ ಉನ್ನತ ಶಿಕ್ಷಣದ ಪ್ರೌಢಶಿಕ್ಷಣದ ಕೋರ್ಸ್.
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆ ದಿನಾಂಕದ ಒಳಗೆ ಅಭ್ಯರ್ಥಿಗಳು ಕಡ್ಡಾಯವಾಗಿ ಅಂಕಪಟ್ಟಿಯನ್ನು ಪಡೆದಿರಬೇಕಾಗುತ್ತದೆ ಪರೀಕ್ಷೆಯನ್ನು ಬರೆದು ಪಲಿತಾಂಶಕ್ಕಾಗಿ ಕಾಯುತ್ತಿರುವವರು ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ
ವಯೋಮಿತಿ ವಿವರ
ಈ Armed Police Constable ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಕಂಡ ವಯೋಮಿತಿ ಯನ್ನು ಹೊಂದಿರಬೇಕು
ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ವಯೋಮಿತಿಯನ್ನು ಹೊಂದಿರಬೇಕು ಹಾಗೂ ಕರ್ನಾಟಕ ಸರ್ಕಾರದ ಆದೇಶದ ಅನುಸಾರ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ ಐದು ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದ್ದು ಪರಿಷ್ಕೃತಗೊಂಡಿರುವ ಗರಿಷ್ಠ ವಯೋಮಿತಿಯ ವಿವರ ಈ ಕೆಳಕಂಡಂತಿದೆ
- ಸಾಮಾನ್ಯ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು : ಗರಿಷ್ಠ 33 ವರ್ಷ.
- ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ ಒಂದು ಮತ್ತು ಇತರೆ ಹಿಂದುಳಿದ ವರ್ಗಗಳ 2ಎ 2ಬಿ 3ಎ 3ಬಿ ಅಭ್ಯರ್ಥಿಗಳು : ಗರಿಷ್ಠ 35 ವರ್ಷಗಳು.
- ಕರ್ನಾಟಕ ರಾಜ್ಯದ ಅರಣ್ಯ ಪ್ರದೇಶಗಳ ನಿವಾಸಿ ಬುಡುಕಟ್ಟು ಅಭ್ಯರ್ಥಿಗಳು : ಗರಿಷ್ಠ 38 ವರ್ಷಗಳು.
- ಮಾಜಿ ಸೈನಿಕ ಅಭ್ಯರ್ಥಿಗಳು : ಅವರು ಸೇವೆ ಸಲ್ಲಿಸಿರುವ ಒಟ್ಟು ಅವಧಿಯ ಜೊತೆಗೆ ಹೆಚ್ಚುವರಿ ಮೂರು ವರ್ಷಗಳ ರಿಯಾಯಿತಿ.
ವೇತನ ಶ್ರೇಣಿ
ಈ ನೇಮಕಾತಿ ಮೂಲಕ ಆಯ್ಕೆಯಾಗುವ Armed Police Constable ಅಭ್ಯರ್ಥಿಗಳಿಗೆ ಮಾಸಿಕ 37,500/- ರೂಗಳಿಂದ 76,100/- ರೂಗಳ ವರೆಗೆ ವೇತನ ಇರುತ್ತದೆ. ಇದರೊಂದಿಗೆ ಸರ್ಕಾರದ ನಿಯಮಾವಳಿಗಳ ಪ್ರಕಾರ ರಾಷ್ಟ್ರೀಯ ಪಿಂಚಣಿ ಯೋಜನೆ ಅನ್ವಯವಾಗುತ್ತದೆ ಇದರ ಜೊತೆಯಲ್ಲಿ ಸಿಗಬಹುದಾದ ಹೆಚ್ಚುವರಿ ಭತ್ಯೆಗಳ ವಿವರ ಈ ಕೆಳಕಂಡಂತಿದೆ
ಪ್ರಯೋಜನಗಳು ಮತ್ತು ಭತ್ಯೆಗಳ ವಿಭಾಗ
- ದಿನ ಭತ್ಯೆ
- ಮನೆ ಬಾಡಿಗೆ ಭತ್ಯೆ
- ವೈದ್ಯಕೀಯ ಭತ್ಯೆ
- ಪ್ರಯಾಣ ಭತ್ಯೆ
- ಸಮವಸ್ತ್ರ ಭತ್ಯೆ
- ಪಿಂಚಣಿ ಸೌಲಭ್ಯ
- ರಜೆ ಸೌಲಭ್ಯಗಳು
ಅರ್ಜಿ ಶುಲ್ಕದ ವಿವರ
ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೇವಲ ಆನ್ಲೈನ್ ಮೂಲಕ ಮಾತ್ರ ಶುಲ್ಕ ಪಾವತಿ ಮಾಡಬೇಕಾಗಿರುತ್ತದೆ ಪಾವತಿ ಮಾಡಬೇಕಾದ ಶುಲ್ಕದ ವಿವರ ಈ ಕೆಳಕಂಡಂತಿದೆ
ಸಾಮಾನ್ಯ ಅರ್ಹತೆಗೆ ಅಭ್ಯರ್ಥಿಗಳು ಮತ್ತು ಇತರೆ ಹಿಂದುಳಿದ ವರ್ಗಗಳ 2ಎ 2ಬಿ 3ಎ 3ಬಿ ಅಭ್ಯರ್ಥಿಗಳು : 750/- ರೂಗಳು.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ ಒಂದು ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳು : 500/- ರೂಗಳು.
ಹುದ್ದೆಗಳ ಆಯ್ಕೆ ವಿಧಾನ
Armed Police Constable ಹುದ್ದೆಗಳಿಗೆ ಆಯ್ಕೆ ವಿಧಾನವು ಅತ್ಯಂತ ವ್ಯವಸ್ಥಿತ ಹಾಗೂ ಜಾಗರೂಕತೆಯಿಂದ ನಡೆಯುತ್ತದೆ ಅಭ್ಯರ್ಥಿಗಳ ಆಯ್ಕೆಯನ್ನು ಈ ಕೆಳಕಂಡಂತಹ ಹಂತ ಹಂತದ ವಿಧಾನಗಳಲ್ಲಿ ನಡೆಸಲಾಗುತ್ತದೆ
ಲಿಖಿತ ಪರೀಕ್ಷೆ :
ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಸಾಮಾನ್ಯ ಜ್ಞಾನ, ಬೌದ್ಧಿಕ ಸಾಮರ್ಥ್ಯ, ತಾರ್ಕಿಕ ಚಿಂತನೆ ಮತ್ತು ಭಾಷಾ ಕೌಶಲ್ಯವನ್ನು ಪರೀಕ್ಷಿಸಲು ಈ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಈ ಪರೀಕ್ಷೆಯಲ್ಲಿ ಕರ್ನಾಟಕ ಮತ್ತು ಭಾರತದ ಇತಿಹಾಸ, ಭೌಗೋಳಿಕ ಅಂಶಗಳು, ಪ್ರಸ್ತುತ ಘಟನೆಗಳು, ಸಂವಿಧಾನ, ಗಣಿತ, ಮಾನಸಿಕ ಸಾಮರ್ಥ್ಯ ಹಾಗೂ ವಿಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ ಕನ್ನಡ ಮತ್ತು ಇಂಗ್ಲಿಷ್ ಭಾಷಾಜ್ಞಾನಕ್ಕೂ ಕೂಡ ಮಹತ್ವವನ್ನು ನೀಡಲಾಗಿದೆ. ಲಿಖಿತ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುವುದು ಮುಂದಿನ ಹಂತಗಳಿಗೆ ಉತ್ತಮ ಅರ್ಹತೆಯನ್ನು ಪಡೆಯಲು ಸಹಕರಿಸುತ್ತದೆ. ಲಿಖಿತ ಪರೀಕ್ಷೆಯ ಸಂಪೂರ್ಣ ಸಿಲಬಸ್ ಅನ್ನು ಈ ಕೆಳಗಡೆ ನೀಡಿದ್ದೇವೆ ಅದನ್ನು ಪರಿಶೀಲಿಸಿ
ಸಹಿಷ್ಣುತೆ ಪರೀಕ್ಷೆ :
ಸಹಿಷ್ಣುತೆ ಪರೀಕ್ಷೆ ಮೂಲಕ ಅಭ್ಯರ್ಥಿಗಳ ದೈಹಿಕ ಸಾಮರ್ಥ್ಯ, ದೈಹಿಕ ಸಹಿಷ್ಣುತೆ ಮತ್ತು ಶಕ್ತಿ ಪ್ರಮಾಣಗಳನ್ನು ಪರೀಕ್ಷಿಸಲಾಗುತ್ತದೆ. ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಲು ಉತ್ತಮ ರೀತಿಯ ದೈಹಿಕ ಕಾರ್ಯಕ್ಷಮತೆ ಅಗತ್ಯವಾಗಿರುವುದರಿಂದ ಈ ಪರೀಕ್ಷೆ ಪ್ರಮುಖವಾಗಿದೆ ಈ ಪರೀಕ್ಷೆಯಲ್ಲಿ ಸಾಮಾನ್ಯವಾಗಿ ಓಡುವುದು ದೀರ್ಘ ದೂರದ ಓಟ ಮತ್ತು ಇತರ ದೈಹಿಕ ಚಟುವಟಿಕೆಗಳ ಮೂಲಕ ಅಭ್ಯರ್ಥಿಯ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡಲಾಗುತ್ತದೆ ಇದರ ಜೊತೆಯಲ್ಲಿ ನಿರ್ಧಿಷ್ಟ ಸಮಯದೊಳಗೆ ನಿಗದಿತ ಗುರಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಮಾತ್ರ ಮುಂದಿನ ಹಂತದಲ್ಲಿ ಆಯ್ಕೆ ಪ್ರಕ್ರಿಯೆಗೆ ಒಳಪಡುತ್ತಾರೆ
ದೈಹಿಕ ಮಾನದಂಡ ಪರೀಕ್ಷೆ :
ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ದೈಹಿಕ ಮಾನದಂಡ ವಿವರ ಹಾಗೂ ವಿಚಾರಗಳನ್ನು ಪರಿಶೀಲಿಸಲಾಗುತ್ತದೆ ಅಭ್ಯರ್ಥಿಯ ಎತ್ತರ, ಎದೆಯ ಸುತ್ತಳತೆ ಹಾಗೂ ನಿಗದಿಪಡಿಸಿರುವ ದೈಹಿಕ ಮಾನದಂಡಗಳ ಪ್ರಕಾರ ಅಳೆಯಲಾಗುತ್ತದೆ ಅಭ್ಯರ್ಥಿಗಳು ಈ ಹಂತದಲ್ಲಿ ಆಯ್ಕೆಯಾಗಲು ಅಧಿಸೂಚನೆಯಲ್ಲಿ ಪ್ರಕಟಿಸಿರುವ ಕನಿಷ್ಠ ದೈಹಿಕ ಅರ್ಹತೆಗಳನ್ನು ಪೂರೈಸಬೇಕಾಗುತ್ತದೆ ಈ ಪರೀಕ್ಷೆಯಲ್ಲಿ ಯಾವುದೇ ಸ್ಪರ್ಧಾತ್ಮಕ ಅಂಕಗಳಿಲ್ಲದಿದ್ದರೂ ಮಾನದಂಡಗಳನ್ನು ಪೂರೈಸಲು ಸಾಧ್ಯವಾಗದ ಅಭ್ಯರ್ಥಿಗಳು ಅನರ್ಹರಾಗುತ್ತಾರೆ ಆದುದರಿಂದ ಅರ್ಜಿ ಸಲ್ಲಿಸುವ ಮೊದಲು ತಮ್ಮ ದೈಹಿಕ ಅರ್ಹತೆ ಹಾಗೂ ದೈಹಿಕ ಮಾನದಂಡ ಪರೀಕ್ಷೆಯನ್ನು ಮಾಡಿಕೊಳ್ಳಿ
ವೈದ್ಯಕೀಯ ಪರೀಕ್ಷೆ :
ಅಭ್ಯರ್ಥಿಯ ಆರೋಗ್ಯ ಸ್ಥಿತಿ ಮತ್ತು ಪೊಲೀಸ್ ಇಲಾಖೆಯ ಸೇವೆಗೆ ಅಗತ್ಯವಾದ ದೈಹಿಕ ಕ್ಷಮತೆಯನ್ನು ಖಚಿತಪಡಿಸಿಕೊಳ್ಳಲು ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತದೆ ಈ ಹಂತದಲ್ಲಿ ದೈಹಿಕ ಆರೋಗ್ಯ, ಹೃದಯದ ಆರೋಗ್ಯ, ದೃಷ್ಟಿ, ಶ್ರವಣ ಶಕ್ತಿ ಮತ್ತು ಉಸಿರಾಟಕ್ಕೆ ಸಂಬಂಧಿಸಿದ ಪರೀಕ್ಷೆಗಳನ್ನು ನಡೆಸಲಾಗುತ್ತದೆ ಗಂಭೀರ ಆರೋಗ್ಯ ಸಮಸ್ಯೆ ಅಥವಾ ಪೊಲೀಸ್ ಸೇವೆಗೆ ಅಡ್ಡಿ ಆಗುವಂತಹ ದೈಹಿಕ ರೀತಿಯ ತೊಂದರೆಗಳಿದ್ದಲ್ಲಿ ಅಭ್ಯರ್ಥಿಗಳನ್ನು ಅನರ್ಹಗೊಳಿಸಬಹುದು ಆದುದರಿಂದ ಉತ್ತಮ ರೀತಿಯ ಆರೋಗ್ಯವನ್ನು ಕಾಪಾಡಿಕೊಳ್ಳಿ
ದಾಖಲೆ ಪರಿಶೀಲನೆ :
ದಾಖಲೆ ಪರಿಶೀಲನೆಯು Armed Police Constable ಹುದ್ದೆಗಳ ಅಂತಿಮ ಆಯ್ಕೆ ಪ್ರಕ್ರಿಯೆ ಆಗಿರುತ್ತದೆ ಈ ಹಂತದಲ್ಲಿ ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಸಲ್ಲಿಸಿರುವ ಎಲ್ಲ ಮಾಹಿತಿ ಹಾಗೂ ದಾಖಲೆಗಳ ಮೂಲ ದಾಖಲೆಗಳೊಂದಿಗೆ ದಾಖಲೆ ಪರಿಶೀಲನೆಗೆ ಹಾಜರಾಗಬೇಕಾಗುತ್ತದೆ. ಎಸ್ ಎಸ್ ಎಲ್ ಸಿ ಅಂಕಪಟ್ಟಿ, ಪಿಯುಸಿ ಅಂಕಪಟ್ಟಿ ಮತ್ತು ಪ್ರಮಾಣ ಪತ್ರಗಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸ ಸ್ಥಳ ಪ್ರಮಾಣ ಪತ್ರ, ಸರ್ಕಾರದಿಂದ ನೀಡಲಾಗಿರುವ ಅಧಿಕೃತ ಗುರುತಿನ ಚೀಟಿಗಳು ಮತ್ತು ಮೀಸಲಾತಿಗೆ ಸಂಬಂಧಿಸಿದ ಇತರೆ ಎಲ್ಲಾ ಅಗತ್ಯ ದಾಖಲಾತಿಗಳನ್ನು ಪರೀಕ್ಷಿಸಲಾಗುತ್ತದೆ ದಾಖಲೆಗಳಲ್ಲಿ ಯಾವುದೇ ತಪ್ಪು ಮಾಹಿತಿ ಅಥವಾ ವ್ಯತ್ಯಾಸಗಳು ಕಂಡು ಬಂದರೆ ಅಭ್ಯರ್ಥಿಯ ಆಯ್ಕೆಯನ್ನು ರದ್ದು ಪಡಿಸಬಹುದಾದ ಅಧಿಕಾರವನ್ನು ಇಲಾಖೆ ಹೊಂದಿರುತ್ತದೆ. ಪರಿಶೀಲನೆ ಯಶಸ್ವಿಯಾಗಿ ಪೂರ್ಣಗೊಂಡ ನಂತರ ಅಂತಿಮ ಆಯ್ಕೆ ಪಟ್ಟಿ ಪ್ರಕಟಗೊಳಿಸಲಾಗುತ್ತದೆ
Exam Pattern And Marks Weightage
| ವಿಷಯ | ಅಂಕಗಳು |
| ಸಾಮಾನ್ಯ ಜ್ಞಾನ | 40 |
| ಪ್ರಚಲಿತ ಘಟನೆಗಳು | 20 |
| ರೀಸನಿಂಗ್ | 20 |
| ಕನ್ನಡ | 10 |
| ಇಂಗ್ಲಿಷ್ | 10 |
| ಒಟ್ಟು | 100 |
Physical Eligibility Section
ಪುರುಷ ಅಭ್ಯರ್ಥಿಗಳ ದೈಹಿಕ ಅರ್ಹತೆ
- ಕನಿಷ್ಠ ಎತ್ತರ – 168 ಸೆಂ.ಮೀ
- ಎದೆ ಸುತ್ತಳತೆ – ಕನಿಷ್ಠ 86 ಸೆಂ.ಮೀ
- ವಿಸ್ತರಣೆ – ಕನಿಷ್ಠ 5 ಸೆಂ. ಮೀ
PET ವಿವರ
- 1600 ಮೀ ಓಟ
- ಲಾಂಗ್ ಜಂಪ್
- ಹೈ ಜಂಪ್
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಬಗ್ಗೆ
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಭಾರತ ದೇಶದಲ್ಲಿಯೇ ಅತ್ಯಂತ ಪ್ರಮುಖ ಹಾಗೂ ಪ್ರತಿಷ್ಠಿತ ಪೊಲೀಸ್ ಇಲಾಖೆಯಾಗಿದ್ದು, ರಾಜ್ಯದ ಹಾಗೂ ರಾಷ್ಟ್ರದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಭದ್ರತಾ ಸಂಸ್ಥೆಯಾಗಿದೆ. ಸಾರ್ವಜನಿಕ ಜೀವ ಮತ್ತು ಆಸ್ತಿಯನ್ನು ರಕ್ಷಿಸುವುದು, ಅಪರಾಧಗಳನ್ನು ತಡೆಗಟ್ಟುವುದು ಮತ್ತು ನಿಯಂತ್ರಿಸುವುದು ಹಾಗೂ ಅಪರಾಧವನ್ನು ಎಸಗಿದ ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಇದರ ಪ್ರಮುಖ ಕರ್ತವ್ಯಗಳಾಗಿವೆ. ಕರ್ನಾಟಕ ರಾಜ್ಯದಾದ್ಯಂತ ಸಾವಿರಾರು ಪೊಲೀಸ್ ಠಾಣೆಗಳು, ಸಶಸ್ತ್ರ ಪೊಲೀಸ್ ಪಡೆಗಳು (Armed Police Constable), ಸಂಚಾರ ಪೊಲೀಸ್ ಘಟಕಗಳು, ವಿಶೇಷ ವಿಭಾಗಗಳ ಮೂಲಕ ಸೇವೆ ಸಲ್ಲಿಸಲಾಗುತ್ತಿದೆ ಇದರ ಜೊತೆಯಲ್ಲಿ ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಪಡೆಯು ವಿ ಐ ಪಿ ಭದ್ರತೆಯನ್ನು ಒದಗಿಸುವುದು, ಚುನಾವಣಾ ಸಂದರ್ಭದಲ್ಲಿ ಒದಗಿಸುವುದು ಹಾಗೂ ಹೆಚ್ಚಿನ ಜನಸಂದಣಿ ಪ್ರದೇಶಗಳಲ್ಲಿ ನಿಯಂತ್ರಿಸುವುದು ಹಾಗೂ ನೈಸರ್ಗಿಕ ವಿಪತ್ತು ನಿರ್ವಹಣೆಯನ್ನು ಸಹ ಇಲಾಖೆಯ ಪ್ರಮುಖ ಪಾತ್ರ ವಹಿಸುತ್ತದೆ ಮುಂದುವರಿಯ ತಂತ್ರಜ್ಞಾನ ಮತ್ತು ಉತ್ತಮ ರೀತಿಯ ತರಬೇತಿಯೊಂದಿಗೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ರಾಜ್ಯದಲ್ಲಿ ಶಾಂತಿ ಹಾಗೂ ನ್ಯಾಯದ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ
ಈ ನೇಮಕಾತಿಗೆ ಏಕೆ ಅರ್ಜಿ ಸಲ್ಲಿಸಬೇಕು
ಈ ಉದ್ಯೋಗಗಳು ಹಲವಾರು ರೀತಿಯ ಪ್ರತ್ಯಕ್ಷ ಹಾಗೂ ಪರೋಕ್ಷ ಪ್ರಯೋಜನಗಳು ಗಳನ್ನು ಒದಗಿಸುವುದರ ಜೊತೆಯಲ್ಲಿ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದುಕೊಳ್ಳಲು ಸಹಕರಿಸುತ್ತವೆ ಅವುಗಳೆಂದರೆ
- ಸ್ಥಿರ ಹಾಗೂ ಸುರಕ್ಷಿತ ವೃತ್ತಿ ಜೀವನ ಹೊಂದಬಹುದು ಆದುದರಿಂದ ಸರ್ಕಾರಿ ಉದ್ಯೋಗದ ಭದ್ರತೆ ಸಿಗುತ್ತದೆ.
- ಆಕರ್ಷಕ ವೇತನ ಮತ್ತು ಉತ್ತಮ ರೀತಿಯ ಭತ್ಯೆಗಳು, ಹಾಗೂ ಪದೋನ್ನತಿ ಹೊಂದುವ ಅವಕಾಶಗಳು ಇರುತ್ತವೆ.
- ಜನರ ರಕ್ಷಣೆ ಮತ್ತು ಸಮಾಜದಲ್ಲಿ ಕೆಲಸ ಮಾಡುವ ಅವಕಾಶ ದೊರೆಯುತ್ತದೆ ಇದರಿಂದ ಸಮಾಜ ಸೇವ ಮನೋಭಾವ ದೊರೆಯುತ್ತದೆ.
- ಹುದ್ದೆಗಳಿಗೆ ನೇಮಕಾತಿಗೊಂಡ ನಂತರ ಉತ್ತಮ ಕಾರ್ಯಕ್ಷಮತೆ ಹಾಗೂ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದರಿಂದ ಭವಿಷ್ಯದಲ್ಲಿ ಉನ್ನತ ಹುದ್ದೆಗಳಿಗೆ ಬಡ್ತಿ ಹೊಂದಬಹುದು.
- ನಿವೃತ್ತಿ ಹೊಂದಿದ ನಂತರ ಪಿಂಚಣಿ ಮತ್ತು ಇತರೆ ಸರ್ಕಾರಿ ಸೌಲಭ್ಯಗಳನ್ನು ಪಡೆಯಬಹುದು.
Armed Police Constable ಹುದ್ದೆಗಳ ವಾತಾವರಣ ಮತ್ತು ಜವಾಬ್ದಾರಿಗಳು
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಪ್ರಮುಖ ಕರ್ತವ್ಯವಾದ ಕಾನೂನು ಮತ್ತು ಕಾಪಾಡುವುದು ಪ್ರಮುಖ ಜಯವಾಗಿದೆ ರಾಜ್ಯದಾದ್ಯಂತ ಶಾಂತಿ ಕಾಪಾಡುವುದು ಭದ್ರತೆ ಕ್ರಮಗಳನ್ನು ಒದಗಿಸುವುದು ಹಾಗೂ ಸಾರ್ವಜನಿಕ ಸವ್ಯವಸ್ಥೆ ಉಳಿಯುವಂತೆ ಪೊಲೀಸರು ಕಾರ್ಯನಿರ್ವಹಿಸುತ್ತಾರೆ. ಸಮಾಜದಲ್ಲಿ ಆಗುವ ಹಲವು ರೀತಿಯ ಪ್ರತಿಭಟನೆಗಳು ಸಾರ್ವಜನಿಕ ಹಾಗೂ ಸಾಮೂಹಿಕ ಕಾರ್ಯಕ್ರಮಗಳು ಸಂಸ್ಕೃತಿಕ ಹಬ್ಬಗಳು ಹಾಗೂ ವಿಶೇಷವಾಗಿ ಹೆಚ್ಚಿನ ಜನಸಂದಣಿ ಸೇರುವ ಪ್ರದೇಶಗಳಲ್ಲಿ ಜನಸಂದಣಿಯನ್ನು ನಿಯಂತ್ರಿಸಿ ಯಾವುದೇ ಅಹಿತಕರ ಘಟನೆ ನಡೆದಂತೆ ನೋಡಿಕೊಳ್ಳುತ್ತಾರೆ ಕಾನೂನನ್ನು ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಸಮಾಜದಲ್ಲಿ ಶಾಂತಿ ಮತ್ತು ನ್ಯಾಯದ ವಾತಾವರಣವನ್ನು ಕಾಪಾಡುವಲ್ಲಿ ಪೊಲೀಸ್ ಇಲಾಖೆಯ ಪಾತ್ರ ಪ್ರಮುಖವಾಗಿದೆ
ಅಪರಾಧ ತಡೆಗಟ್ಟುವುದು
ಸಮಾಜದಲ್ಲಿ ನಡೆಯುವ ಅಪರಾಧಗಳನ್ನು ತಡೆಗಟ್ಟುವುದು ಹಾಗೂ ಅಪರಾಧವನ್ನು ಎಸಗಿದ ಅಪರಾಧಿಗಳನ್ನು ಕಾನೂನಿನ ಮುಂದೆ ತಂದು ಅವರಿಗೆ ಶಿಕ್ಷೆಯನ್ನು ಕೊಡಿಸುವ ಜವಾಬ್ದಾರಿ ಪೊಲೀಸ್ ಇಲಾಖೆಯ ಎದ್ದಾಗಿದೆ ಕಳ್ಳತನ ಮಾಡುವುದು ದರೋಡೆ ಮಾಡುವುದು ಮೋಸ ಮಾಡುವುದು ಸೈಬರ್ ಅಪರಾಧಗಳನ್ನು ಸಾಗುವುದು ಹಲ್ಲೆ ಮಾಡುವುದು ಹಾಗೂ ಇತರೆ ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಯಲು Armed Police Constable ಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತಾರೆ ಗಸ್ತು ತಿರುಗುವ ಕಾರ್ಯ ಚರಣೆ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸುವುದು ಹಾಗೂ ಉತ್ತಮ ರೀತಿಯ ತನಿಖೆಗಳ ಮೂಲಕ ಅಪರಾಧದ ಪ್ರಮಾಣವನ್ನು ಕಡಿಮೆ ಮಾಡಲು ಎಂದಿಗೂ ಪ್ರಯತ್ನಿಸುತ್ತಾರೆ ಇದರಿಂದ ರಾಜ್ಯದ ಹಾಗೂ ರಾಷ್ಟ್ರದ ನಾಗರಿಕರು ಸುರಕ್ಷಿತ ವಾತಾವರಣದಲ್ಲಿ ಜೀವನ ನಡೆಸಬಹುದಾಗಿರುತ್ತದೆ
ಸಾರ್ವಜನಿಕರ ಭದ್ರತೆ
ರಾಜ್ಯದಲ್ಲಿನ ಸಾರ್ವಜನಿಕರು, ಜೀವ ಭಯವಿಲ್ಲದೆ ಹಾಗೂ ಆಸ್ತಿಯ ರಕ್ಷಣೆಯನ್ನು ಹೊಂದಿ ಜೀವನ ನಡೆಸುವಂತಹ ಪರಿಸರವನ್ನು ಸೃಷ್ಟಿಸುವುದು ಪೋಲಿಸ್ ಇಲಾಖೆಯ ಕರ್ತವ್ಯವಾಗಿದೆ ಜನರು ಯಾವುದೇ ಭಯವಿಲ್ಲದೆ ತಮ್ಮ ದೈನಂದಿನ ಚಟುವಟಿಕೆಗಳನ್ನು ನಡೆಸಲು ಪೊಲೀಸರು ಭದ್ರತಾ ವ್ಯವಸ್ಥೆಯನ್ನು ಒದಗಿಸುತ್ತಾರೆ ರಸ್ತೆಗಳಲ್ಲಿ ಸಾರ್ವಜನಿಕರು ಸೇರಿರುವ ಸ್ಥಳಗಳಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಪರೀಕ್ಷೆ ನಡೆಯುವಾಗ ಹಾಗೂ ವ್ಯವಸ್ಥಿತ ಹಾಗೂ ಉತ್ತಮ ರೀತಿಯಲ್ಲಿ ವ್ಯಾಪಾರ ನಡೆಯುವ ಕೇಂದ್ರಗಳಲ್ಲಿ ಭದ್ರತೆಯನ್ನು ಕಾಪಾಡಲಾಗುತ್ತದೆ ತುರ್ತು ಪರಿಸ್ಥಿತಿಗಳಲ್ಲಿ ವರಿತವಾಗಿ ಸ್ಪಂದಿಸುವ ಮೂಲಕ ಜನರ ನೆರವಿಗೆ ಧಾವಿಸುತ್ತಾರೆ ಇದರಿಂದ ಸಾರ್ವಜನಿಕರ ವಿಶ್ವಾಸವನ್ನು ಸಹ ಗಳಿಸುತ್ತಾರೆ
ವಿ ಐ ಪಿ ಭದ್ರತೆ
ರಾಜ್ಯದಲ್ಲಿನ ಹಾಗೂ ರಾಷ್ಟ್ರದಲ್ಲಿನ ಪ್ರಮುಖ ಗಣ್ಯ ವ್ಯಕ್ತಿಗಳು ನ್ಯಾಯಾಧೀಶರು ರಾಜಕೀಯ ನಾಯಕರು ಹಾಗೂ ಇತರ ವಿಶೇಷ ವ್ಯಕ್ತಿಗಳ ಭದ್ರತೆಯನ್ನು ಹೋಲಿಸಲಾಕೆ ನಿರ್ವಹಿಸುತ್ತದೆ ಅಂದರೆ ಆ ವ್ಯಕ್ತಿಗಳಿಗೆ ಇರಬಹುದಾದ ಭದ್ರತಾ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ರೀತಿಯಲ್ಲಿ ರಕ್ಷಣೆಯನ್ನು ಒದಗಿಸಲಾಗುತ್ತದೆ ಸಾರ್ವಜನಿಕ ಸಭೆಗಳ ಏರ್ಪಡುವಿಕೆ ಅಧಿಕೃತ ಕಾರ್ಯಕ್ರಮಗಳು ಮತ್ತು ಪ್ರವಾಸದ ವೇಳೆ ವಿಶೇಷ ರೀತಿಯ ರಕ್ಷಣಾ ಸೌಲಭ್ಯವನ್ನು ಇವರು ಒದಗಿಸುತ್ತಾರೆ ಇದರ ಜೊತೆಯಲ್ಲಿ ಪೊಲೀಸ್ ಇಲಾಖೆಯ ಉನ್ನತ ಹುದ್ದೆಯ ಅಧಿಕಾರಿಗಳು ಹಾಗೂ ಇತರ ಪ್ರಮುಖ ವ್ಯಕ್ತಿಗಳಿಗೆ ಭದ್ರತಾ ವ್ಯವಸ್ಥೆಯನ್ನು ನೀಡಲಾಗುತ್ತದೆ ಶಶಸ್ತ್ರ ಪೊಲೀಸ್ ಸಿಬ್ಬಂದಿಗಳು ವಿಶೇಷ ತರಬೇತಿಯನ್ನು ಪಡೆದಿರುತ್ತಾರೆ
ಗಲಭೆ ನಿಯಂತ್ರಣ
ಸಮಾಜದಲ್ಲಿ ಶಾಂತಿ ಮತ್ತು ಸವ್ಯವಸ್ಥೆಯನ್ನು ಕಾಪಾಡಲು ಗಲಭೆಗಳನ್ನು ನಿಯಂತ್ರಿಸುವುದು ಅತ್ಯಂತ ಪ್ರಮುಖವಾಗಿದೆ ಧಾರ್ಮಿಕ ಕಾರ್ಯಕ್ರಮಗಳು, ಸಾಮಾಜಿಕ ಮತ್ತು ರಾಜಕೀಯ ಕಾರಣಗಳಿಂದ ಉಂಟಾಗುವ ಉದ್ವಿಗ್ನ ಪರಿಸ್ಥಿತಿಗಳಲ್ಲಿ ಜನರನ್ನು ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸ್ ಪಡೆಗಳು ಕಾರ್ಯನಿರ್ವಹಿಸುತ್ತವೆ. ತಲಪೆಗಳು ಮತ್ತು ಅಶಾಂತಿ ಪರಿಸ್ಥಿತಿಗಳಲ್ಲಿ ಜನರನ್ನು ಸುರಕ್ಷಿಸುವುದನ್ನು ಖಚಿತಪಡಿಸಿಕೊಂಡು ಕಾನೂನು ವ್ಯವಸ್ಥೆಯನ್ನು ಪುನ ಸ್ಥಾಪಿಸಲು ಕ್ರಮ ಕೈಗೊಳ್ಳುತ್ತಾರೆ ಅಗತ್ಯವಿದ್ದಲ್ಲಿ ವಿಶೇಷ ಉಪಕರಣಗಳು ಮತ್ತು ತಂತ್ರಜ್ಞಾನವನ್ನು ಬಳಸಲಾಗುತ್ತದೆ
ಚುನಾವಣಾ ಭದ್ರತೆ
ಭಾರತ ದೇಶ ಒಂದು ಪ್ರಜಾಪ್ರಭುತ್ವ ರಾಷ್ಟ್ರ ಆಗಿರುವುದರಿಂದ ಚುನಾವಣೆಯು ಪ್ರಜಾಪ್ರಭುತ್ವದ ಪ್ರಮುಖ ಅಂಗವಾಗಿದೆ. ಚುನಾವಣೆಗಳು ಶಾಂತಿಯುತವಾಗಿ ನಡೆಯುವಂತೆ ಭದ್ರತೆಯನ್ನು ಒದಗಿಸುವ ಜವಾಬ್ದಾರಿಗಳು ಪೊಲೀಸ್ ಇಲಾಖೆಯ ಮೇಲಿದೆ ಮತಗಟ್ಟೆಗಳನ್ನು ಕಾಪಾಡುವುದು ಮತ ಎಣಿಕೆ ಕೇಂದ್ರಗಳು ಹಾಗೂ ಚುನಾವಣಾ ಸಾಮಗ್ರಿಗಳ ಸುರಕ್ಷತೆಯನ್ನು Armed Police Constable ಗಳು ಖಚಿತಪಡಿಸುತ್ತಾರೆ ಇದರ ಜೊತೆಯಲ್ಲಿ ಮತದಾರರು ಯಾವುದೇ ಭಯವಿಲ್ಲದೆ ಮತ ಚಲಾಯಿಸಲು ಅನುಕೂಲಕರ ವಾತಾವರಣವನ್ನು ನಿರ್ಮಿಸವಲ್ಲಿ ಶಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಗಳು ಶ್ರಮಿಸುತ್ತಾರೆ. ಸಮಾಜದಲ್ಲಿ ನಡೆಯುವ ಅಕ್ರಮ ಚಟುವಟಿಕೆಗಳು ಗಲಭೆಗಳು ಮತ್ತು ಮತದಾನ ಪ್ರಕ್ರಿಯೆಗೆ ಅಡ್ಡಿಯಾಗುವ ಘಟನೆಗಳನ್ನು ತಡೆಗಟ್ಟುವಲ್ಲಿ ಮತ್ತು ಚುನಾವಣೆಯ ಸಂಪೂರ್ಣ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಕಾಪಾಡಲು ಸಹಕರಿಸುತ್ತಾರೆ
ವಿಪತ್ತು ಸಂದರ್ಭಗಳಲ್ಲಿ ಸಹಾಯ ಮಾಡುವುದು
ನೈಸರ್ಗಿಕವಾಗಿ ಭೌಗೋಳಿಕ ಬದಲಾವಣೆಗಳನ್ನು ತರುವಂತಹ ಪ್ರವಾಹಗಳು ಭೂಕುಸಿತ ಅಗ್ನಿವಗಡ ಭೂಕಂಪ ಮುಂತಾದ ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಯು ರಕ್ಷಣಾ ಕಾರ್ಯಗಳನ್ನು ಸಹ ನಡೆಸುತ್ತದೆ ಸಂಕಷ್ಟದಲ್ಲಿ ಸಿಲುಕಿರುವ ಜನರ ರಕ್ಷಣೆ ಅವರನ್ನು ಸ್ಥಳಗಳಿಗೆ ಸ್ಥಳಾಂತರಿಸುವುದು ತುರ್ತು ನೆರವು ಒದಗಿಸುವುದು ಮತ್ತು ರಕ್ಷಣಾ ತಂಡಗಳೊಂದಿಗೆ ಸಮನ್ವಯ ಸಾಧಿಸುವುದು ಇವರ ಕರ್ತವ್ಯವಾಗಿದೆ 20 ಸಂಭವಿಸುವ ಅಥವಾ ಸಂಭವಿಸಿದ ನಂತರದಲ್ಲಿ ಸಾರ್ವಜನಿಕರಿಗೆ ಎಚ್ಚರಿಕೆ ಮತ್ತು ಅಗತ್ಯ ಮಾಹಿತಿ ಮಾರ್ಗದರ್ಶನವನ್ನು ನೀಡಲಾಗುತ್ತದೆ ಈ ಸೇವೆಗಳನ್ನು ಒದಗಿಸುವ ಮೂಲಕ ಜೀವಹಾನಿ ಮತ್ತು ಆಸ್ತಿ ನಷ್ಟವನ್ನು ಕಡಿಮೆ ಮಾಡಲು ಪೊಲೀಸ್ ಇಲಾಖೆ ಸಹಕರಿಸುತ್ತದೆ
ಸಶಸ್ತ್ರ ಪೊಲೀಸ್ ಪಡೆಯ ಮಹತ್ವ
Armed Police Constable ಪಡೆಯು ಕರ್ನಾಟಕ ರಾಜ್ಯದ ಭದ್ರತಾ ವ್ಯವಸ್ಥೆಯ ಪ್ರಮುಖ ಅಂಗವಾಗಿದ್ದು ಗಲಭೆಯನ್ನು ನಿಯಂತ್ರಿಸುವುದು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳನ್ನು ಕೈಗೊಳ್ಳುವುದು ವಿಐಪಿ ಭದ್ರತೆ ಒದಗಿಸುವುದು ಚುನಾವಣಾ ಬದ್ರತೆ ನೀಡುವುದು ಹಾಗೂ ತುರ್ತುಪರಿಸ್ಥಿತಿಗಳಲ್ಲಿ ಈ ಪಡೆಯು ಪ್ರಮುಖ ಪಾತ್ರ ವಹಿಸುತ್ತದೆ ಈ ಪಡೆಯ ಸಿಬ್ಬಂದಿಗಳಿಗೆ ವಿಶೇಷ ತರಬೇತಿ ಮತ್ತು ಆಧುನಿಕ ಶಸ್ತ್ರಾಸ್ತ್ರಗಳಿಂದ ತರಬೇತಿಯನ್ನು ನೀಡಿದ್ದು ಸಜ್ಜುಗೊಂಡಿರುವ ಸಿಬ್ಬಂದಿಗಳಾಗಿರುತ್ತಾರೆ. ಇವರು ರಾಜ್ಯದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ನಿರಂತರವಾಗಿ ಶ್ರಮಿಸುವುದರ ಜೊತೆಯಲ್ಲಿ ಸಾರ್ವಜನಿಕರ ಸುರಕ್ಷತೆ ಮತ್ತು ರಾಜ್ಯದ ಭದ್ರತೆಯನ್ನು ಬಲಪಡಿಸುತ್ತಾರೆ
Armed Police Constable ಗಳ ದೈನಂದಿನ ವೇಳಾಪಟ್ಟಿ
ಬೆಳಗಿನ ಸಮಯದಲ್ಲಿ : ಪರೇಡ್ ಮಾಡುವುದು, ದೈಹಿಕ ವ್ಯಾಯಾಮ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳುವುದು, ರೋಲ್ ಕಾಲ್ ಮಾಡುವುದು.
ಮಧ್ಯಾಹ್ನದ ಸಮಯದಲ್ಲಿ : ಭದ್ರತಾ ಕರ್ತವ್ಯ ವಹಿಸುವುದು, ಗಸ್ತು ಕಾರ್ಯಾಚರಣೆ ನಡೆಸುವುದು, ವಿಶೇಷ ನಿಯೋಜನೆಗಳ ಕಾರ್ಯನಿರ್ವಹಣೆ.
ಸಂಜೆ ಸಮಯದಲ್ಲಿ : ದೈನಂದಿನ ಕಾರ್ಯದ ವರದಿ ಸಲ್ಲಿಸುವುದು, ಕರ್ತವ್ಯದ ಬದಲಾವಣೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಳ್ಳುವುದು, ತರಬೇತಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದು.
ಕೆಲವೊಂದು ತುರ್ತು ಪರಿಸ್ಥಿತಿ ಹಾಗೂ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಯದಲ್ಲಿ ರಾತ್ರಿ ಕರ್ತವ್ಯವೂ ಸಹ ಇರಬಹುದು
Armed Police Constable Career Growth And Promotion System
Armed Police Constable ಹುದ್ದೆಗಳಿಗೆ ಆಯ್ಕೆಗೊಳ್ಳುವುದರಿಂದ ಈ ಕೆಳಕಂಡ ಉನ್ನತ ಹುದ್ದೆಗಳಿಗೆ ಹೊಂದಬಹುದು ಅವುಗಳೆಂದರೆ:
Armed Police Constable
⬇
Head Constable
⬇
Assistant Sub Inspector (ASI)
⬇
Police Sub Inspector (SI)
⬇
Police Inspector (PI)
⬇
Deputy Superintendent of Police (DSP)
Armed Police Constable ನೇಮಕಾತಿ ಗೆ ಅರ್ಜಿ ಸಲ್ಲಿಸುವ ವಿಧಾನ
- ಈ Armed Police Constable ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿ ಸೂಚನೆಗಳನ್ನು ಓದಿಕೊಂಡು ನಂತರ ಪರೀಕ್ಷೆಯನ್ನು ನಡೆಸುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ ನೇಮಕಾತಿ ವಿಭಾಗವನ್ನು ತೆರೆದು ಶಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ಎಂಬ ಲಿಂಕನ್ನು ಕ್ಲಿಕ್ ಮಾಡಬೇಕು.
- ಹುದ್ದೆಗಳಿಗೆ ಹೊರಡಿಸಲಾಗಿರುವ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ಅರ್ಹತೆ ಮಾನದಂಡಗಳನ್ನು ಪೂರೈಸುವ ಹಾಗಿದ್ದರೆ ಅರ್ಜಿ ಸಲ್ಲಿಸಬಹುದು.
- ಹುದ್ದೆಗಳಿಗೆ ನಿಗದಿಪಡಿಸಲಾಗಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡುವುದರ ಮೂಲಕ ಹೊಸ ಅಭ್ಯರ್ಥಿಗಳಾಗಿದ್ದರೆ ಮೊದಲು ನೋಂದಣಿ ಮಾಡಿಕೊಳ್ಳಬೇಕು.
- ನೋಂದಣಿ ಮಾಡಿಕೊಂಡ ನಂತರ ತಮ್ಮ ರಿಜಿಸ್ಟ್ರೇಷನ್ ನಂಬರ್ ಮತ್ತು ಪಾಸ್ವರ್ಡ್ ಅನ್ನು ನಮೂದಿಸುವ ಮೂಲಕ ನಿಮ್ಮ ಖಾತೆಗೆ ಲಾಗಿನ್ ಆಗಿ.
- ಲಾಗಿನ್ ಆದ ನಂತರ ಆನ್ಲೈನ್ ಅರ್ಜಿ ಯು ತೆರೆಯುತ್ತದೆ ಅಲ್ಲಿ ನಿಮ್ಮ ಎಲ್ಲಾ ಅಗತ್ಯ ಮಾಹಿತಿಗಳನ್ನು ಹಾಗೂ ಸಂವಹನ ಉದ್ದೇಶದ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿಯನ್ನು ತಪ್ಪದೇ ನಮೂದಿಸಿ.
- ಎಲ್ಲ ಮಾಹಿತಿಯನ್ನು ನಮೂದಿಸಿದ ನಂತರ ಹೇಳಲಾಗುವ ಅಗತ್ಯ ಹಾಗೂ ಅನ್ವಯಿಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
- ತಮ್ಮ ವರ್ಗಕ್ಕೆ ಅನ್ವಯಿಸುವಂತೆ ನಿಗದಿಪಡಿಸಿರುವ ಆನ್ಲೈನ್ ಅರ್ಜಿ ಶುಲ್ಕವನ್ನು ಯುಪಿಐ, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ವ್ಯವಸ್ಥೆಗಳನ್ನು ಉಪಯೋಗಿಸಿಕೊಳ್ಳುವುದರ ಮೂಲಕ ಪಾವತಿಸಿ.
- ನಂತರ ನಮೂದಿಸಿರುವ ಮಾಹಿತಿ ಹಾಗೂ ಅಪ್ಲೋಡ್ ಮಾಡಲಾಗಿರುವ ದಾಖಲೆಗಳನ್ನು ಪರಿಶೀಲಿಸಿ ಅರ್ಜಿಯನ್ನು ಸಲ್ಲಿಸು ಎಂಬ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಯಶಸ್ವಿಯಾಗಿ ಅರ್ಜಿಯನ್ನು ಸಲ್ಲಿಸಿ.
- ನಂತರ ಸ್ವೀಕೃತಿ ಅರ್ಜಿಯು ಸ್ಕ್ರೀನ್ ನ ಮೇಲೆ ಕಾಣುತ್ತದೆ ಅದನ್ನು ಸೇವ್ ಮಾಡಿಕೊಳ್ಳಿ ಮತ್ತು ಭವಿಷ್ಯದ ಉದ್ದೇಶಕ್ಕಾಗಿ ಪ್ರಿಂಟ್ ಔಟ್ ತೆಗೆದು ಇಟ್ಟುಕೊಳ್ಳಿ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ಎಸ್ ಎಸ್ ಎಲ್ ಸಿ ಅಂಕಪಟ್ಟಿ
- ಪಿಯುಸಿ ಅಂಕಪಟ್ಟಿ
- ಆಧಾರ್ ಕಾರ್ಡ್
- ಜಾತಿ ಪ್ರಮಾಣಪತ್ರ
- ಆದಾಯ ಪ್ರಮಾಣಪತ್ರ
- ಅಭ್ಯರ್ಥಿಯ ಪಾಸ್‌ಪೋರ್ಟ್ ಸೈಜ್ ಫೋಟೋ
- ಅಭ್ಯರ್ಥಿಯ ಸಹಿ
- ಸಕ್ರಿಯ ಮೊಬೈಲ್ ಸಂಖ್ಯೆ
- ಸಕ್ರಿಯ ಇಮೇಲ್ ಐಡಿ
ಈ ನೇಮಕಾತಿಗೆ ಪ್ರಮುಖವಾಗಿ ಯಾರು ಅರ್ಜಿ ಸಲ್ಲಿಸಬೇಕು
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ Armed Police Constable ಹುದ್ದೆಗಳು ಈ ಕೆಳಕಂಡ ಅರ್ಹತೆಯನ್ನು ಹೊಂದಿರುವವರಿಗೆ ಹೆಚ್ಚು ಸೂಕ್ತವಾಗಿದೆ ಅವುಗಳೆಂದರೆ
- ಪಿಯುಸಿ ಉತ್ತೀರ್ಣಗೊಂಡ ಹಾಗೂ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರುವ ವಿದ್ಯಾರ್ಥಿಗಳು.
- ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗವನ್ನು ಪಡೆಯಬೇಕು ಎಂದುಕೊಂಡಿರುವ ಉದ್ಯೋಗ ಆಕಾಂಕ್ಷಿಗಳು.
- ಪೊಲೀಸ್ ಇಲಾಖೆಯಲ್ಲಿ ಸೇವೆಯನ್ನು ಸಲ್ಲಿಸಬೇಕೆಂಬ ಆಸಕ್ತಿ ಹೊಂದಿರುವವರು.
- ದೈಹಿಕವಾಗಿ ಸದೃಢರಾಗಿರುವ ಅಭ್ಯರ್ಥಿಗಳು.
- ಸಮಾಜ ಸೇವೆ ಮಾಡಲು ಬಯಸುವ ಅಭ್ಯರ್ಥಿಗಳು.
- ಭದ್ರತಾ ಹಾಗೂ ರಕ್ಷಣಾ ಕ್ಷೇತ್ರದಲ್ಲಿ ವೃತ್ತಿಜೀವನ ಕಟ್ಟಿಕೊಳ್ಳಲು ಬಯಸುವವರು.
Armed Police Constable ಹುದ್ದೆಗಳಿಗೆ ಇರಬೇಕಾದ ಪ್ರಮುಖ ಕೌಶಲ್ಯಗಳು
ಶಿಸ್ತು : ಇಲಾಖೆ ಹೊರಡಿಸುವ ಆದೇಶಗಳು ಮತ್ತು ಯೋಜನೆಗಳನ್ನು ಪಾಲಿಸುವುದು ಮತ್ತು ಸಮಯ ಪ್ರಜ್ಞೆಯನ್ನು ಕಾಪಾಡುವುದು.
ದೈಹಿಕ ಸಾಮರ್ಥ್ಯ : ಓಡುವುದು ದೈಹಿಕ ಶಶಿಕತೆಯನ್ನು ಕಾಪಾಡಿಕೊಳ್ಳುವುದು ಮತ್ತು ಸತ್ಯವಂತರಾಗಿರುವುದು.
ಸಂವಹನ ಕೌಶಲ್ಯ : ಸಾರ್ವಜನಿಕರೊಂದಿಗೆ ಉತ್ತಮ ರೀತಿಯ ವರ್ತನೆಯನ್ನು ಕಾಪಾಡಿಕೊಳ್ಳುವುದು ಹಾಗೂ ಜನಸ್ನೇಹಿ ಸಮೂಹನ ಕೌಶಲ್ಯವನ್ನು ಹೊಂದುವುದು.
ತಂಡದ ಕೆಲಸ : ಪೊಲೀಸ್ ಕೆಲಸವೂ ವೈಯಕ್ತಿಕ ಜವಾಬ್ದಾರಿಯಾಗದೆ ತಂಡದ ಜವಾಬ್ದಾರಿ ಆಗಿರುವುದರಿಂದ ಸಹೋದ್ಯೋಗಿಗಳೊಂದಿಗೆ ಸಮಾನತೆ ಮತ್ತು ಸಮನ್ವಯವನ್ನು ಸಾಧಿಸಬೇಕು.
ನಿರ್ಧಾರದ ಸಾಮರ್ಥ್ಯ : ತುರ್ತು ಸಂದರ್ಭಗಳಲ್ಲಿ ಉತ್ತಮ ರೀತಿಯಲ್ಲಿ ಹಾಗೂ ಬೇಗನೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿರಬೇಕು.
ಮಾನಸಿಕ ಸ್ಥೈರ್ಯ : ಯಾವುದೇ ಒತ್ತಡದ ಪರಿಸ್ಥಿತಿಯಲ್ಲಿ ಯಾವುದೇ ಅಂಶಗಳಿಗೆ ಒಳಗಾಗದೆ ಕಾರ್ಯನಿರ್ವಹಿಸುವ ಮಾನಸಿಕ ದೃಢತೆಯನ್ನು ಮತ್ತು ಸಾಮರ್ಥ್ಯವನ್ನು ಹೊಂದಿರಬೇಕು.
ಪರೀಕ್ಷೆಯ ಸಿಲಬಸ್ ಮತ್ತು ಪರೀಕ್ಷಾ ತಯಾರಿಗೆ ಸಲಹೆಗಳು
ಸಾಮಾನ್ಯ ಜ್ಞಾನ
ಕರ್ನಾಟಕ ರಾಜ್ಯದ Armed Police Constable ಹುದ್ದೆಗಳಿಗೆ ನಡೆಸಲಾಗುವ ಲಿಖಿತ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನದ ವಿಭಾಗವು ಅತ್ಯಂತ ಪ್ರಮುಖವಾಗಿದೆ ಈ ವಿಭಾಗದಲ್ಲಿ ಭಾರತದ ಇತಿಹಾಸ, ಭೂಗೋಳ, ಆರ್ಥಿಕತೆ, ಕ್ರೀಡೆ, ವಿಜ್ಞಾನ, ಪ್ರಮುಖ ವ್ಯಕ್ತಿಗಳು, ಪ್ರಶಸ್ತಿಗಳು ಹಾಗೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಘಟನೆಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ ಅಭ್ಯರ್ಥಿಗಳು ಪ್ರತಿದಿನ ಸುದ್ದಿಗಳನ್ನು ಓದುವುದು ಸಾಮಾನ್ಯ ಜ್ಞಾನದ ಪುಸ್ತಕಗಳನ್ನು ಹೆಚ್ಚು ಅಧ್ಯಯನ ಮಾಡುವುದು ಹಾಗೂ ಮಾಕ್ ಟೆಸ್ಟ್ ಗಳನ್ನು ಅಭ್ಯಾಸ ಮಾಡುವುದರ ಮೂಲಕ ಈ ವಿಭಾಗದಲ್ಲಿ ಹೆಚ್ಚು ಅಂಕಗಳನ್ನು ಗಳಿಸಬಹುದು ಈ ವಿಭಾಗದಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸುವುದರಿಂದ ಮುಂದಿನ ಹಂತಗಳಿಗೆ ಆಯ್ಕೆಗಳು ಸಂಭವನೀಯತೆಯನ್ನು ಹೆಚ್ಚಿಸಿಕೊಳ್ಳಬಹುದು.
ದಿನಪತ್ರಿಕೆಗಳನ್ನು ಓದುವುದು
ಪೊಲೀಸ್ ನೇಮಕಾತಿ ಪರೀಕ್ಷೆಯ ತಯಾರಿಯಲ್ಲಿ ದಿನಪತ್ರಿಕೆಗಳನ್ನು ಓದುವುದು ಅತ್ಯಂತ ಉಪಯುಕ್ತ ಅಭ್ಯಾಸ ಏಕೆಂದರೆ ಈ ಪತ್ರಿಕೆಗಳಲ್ಲಿ ದೇಶ ಹಾಗೂ ವಿದೇಶದ ಬೆಳವಣಿಗೆಗಳು, ಸರ್ಕಾರ ಹೊರಡಿಸುವ ಯೋಜನೆಗಳು, ಆರ್ಥಿಕತೆಯ ಸುದ್ದಿಗಳು, ಕ್ರೀಡೆಯ ಬಗ್ಗೆ ಮಾಹಿತಿ ಹಾಗೂ ಪ್ರಚಲಿತ ಘಟನೆಗಳ ಬಗ್ಗೆ ತಿಳಿದುಕೊಳ್ಳಲು ಪ್ರಮುಖ ಮಾಹಿತಿ ಮೂಲವಾಗಿದೆ ವಿಶೇಷವಾಗಿ ಕನ್ನಡ ಮತ್ತು ಇಂಗ್ಲಿಷ್ ದಿನ ಪತ್ರಿಕೆಗಳನ್ನು ಓದುವುದರಿಂದ ಭಾಷಾಜ್ಞಾನವು ಸಹ ಹೆಚ್ಚಳವಾಗುತ್ತದೆ ಇದರ ಜೊತೆಯಲ್ಲಿ ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುವುದರಿಂದ ಸರಿಯಾದ ಉತ್ತರ ನೀಡಲು ದಿನಪತ್ರಿಕೆ ಓದುವ ಅಭ್ಯಾಸ ಬಹಳ ಸಹಕಾರಿಯಾಗಿದೆ.
ಕರ್ನಾಟಕದ ವಿಷಯಗಳು
ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ರಾಜ್ಯದ ಇತಿಹಾಸ, ಸಂಸ್ಕೃತಿಗಳು, ರಾಜ್ಯಕ್ಕೆ ಸಂಬಂಧಿಸಿದ ಪ್ರಮುಖ ರಾಜವಂಶಗಳು, ಪ್ರಸಿದ್ಧ ವ್ಯಕ್ತಿಗಳು, ನದಿಗಳಿಗೆ ಸಂಬಂಧಿಸಿದ ಅಂಶಗಳು, ಅರಣ್ಯಗಳು ಮತ್ತು ಕಾಯ್ದಿಟ್ಟ ಅರಣ್ಯಗಳು, ಜಿಲ್ಲೆಗಳು ಮತ್ತು ಅವುಗಳಿಗೆ ಸಂಬಂಧಿಸಿದ ವಿಶೇಷತೆ ಹಾಗೂ ಆಡಳಿತ ವ್ಯವಸ್ಥೆಯ ಕುರಿತು ಪ್ರಶ್ನೆಗಳನ್ನು ಕೇಳಬಹುದಾಗಿದೆ ಕರ್ನಾಟಕದ ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಗಳು ಸರ್ಕಾರಿ ಯೋಜನೆಗಳು ಮತ್ತು ಸಾಮಾಜಿಕ ವಿಚಾರಗಳ ಬಗ್ಗೆಯೂ ಸಹ ಜ್ಞಾನವನ್ನು ಹೊಂದುವುದು ಅಗತ್ಯವಾಗಿರುತ್ತದೆ ಅಭ್ಯರ್ಥಿಗಳು ಅಧಿಕೃತ ಮಾಹಿತಿಯನ್ನು ಮಾತ್ರ ಅಧ್ಯಯನ ಮಾಡಬೇಕು.
ಕರ್ನಾಟಕದ ಇತಿಹಾಸ ಭೂಗೋಳ ಮತ್ತು ಆಡಳಿತ ವ್ಯವಸ್ಥೆ
ಕರ್ನಾಟಕದ ಇತಿಹಾಸ, ಭೂಗೋಳ ಮತ್ತು ಆಡಳಿತ ವ್ಯವಸ್ಥೆಯ ಕುರಿತು ವಿಶೇಷ ಗಮನವನ್ನು ಹರಿಸಬೇಕು ವಿಜಯನಗರ ಸಾಮ್ರಾಜ್ಯ, ಹೊಯ್ಸಳರು, ಚಾಲುಕ್ಯರು, ಮೈಸೂರು ಸಂಸ್ಥಾನ ಹಾಗೂ ಸ್ವಾತಂತ್ರ್ಯ ಚಳುವಳಿಗಳನ್ನು ನಡೆಸಿದವರ ಬಗ್ಗೆ ಮತ್ತು ಚಳುವಳಿಗಳಲ್ಲಿ ಕರ್ನಾಟಕದ ಪಾತ್ರದ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ ಭೂಗೋಳ ವಿಭಾಗದಲ್ಲಿ ನದಿಗಳು, ಪರ್ವತಗಳು ಮತ್ತು ಅವುಗಳಿಗೆ ಸಂಬಂಧಿಸಿದ ಪ್ರಮುಖ ಮಾಹಿತಿ, ಹವಾಮಾನ ಮತ್ತು ವೈಪರೀತ್ಯ ಗುಣಲಕ್ಷಣಗಳು ಹಾಗೂ ಕೃಷಿ ವಲಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕೇಳಲಾಗುತ್ತದೆ ಆಡಳಿತ ವಿಭಾಗದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಹುದ್ದೆಗಳಾದ ರಾಜ್ಯಪಾಲರು, ಮುಖ್ಯಮಂತ್ರಿ, ವಿಧಾನಸಭೆ, ಹೈಕೋರ್ಟ್, ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳ ಬಗ್ಗೆ ಪ್ರಶ್ನೆಗಳು ಬರಬಹುದು.
ಭಾರತೀಯ ಸಂವಿಧಾನ
ಪೋಲಿಸ್ ಇಲಾಖೆಯು ಸಾರ್ವಜನಿಕ ವಲಯದ ಒಂದು ರಕ್ಷಣಾ ಪಡೆ ಆಗಿರುವುದರಿಂದ ಸಂವಿಧಾನದ ಬಗ್ಗೆ ಮಾಹಿತಿಯನ್ನು ಹೊಂದುವುದು ಅತ್ಯಂತ ಪ್ರಮುಖವಾಗಿದೆ ಸಂವಿಧಾನದ ರಚನೆ, ಉದ್ದೇಶಗಳು, ಪ್ರಮುಖ ಲಕ್ಷಣಗಳು ಹಾಗೂ ಸಂವಿಧಾನವು ನಿಗದಿಪಡಿಸಿರುವ ಆಡಳಿತ ವ್ಯವಸ್ಥೆಗಳ ಕುರಿತು ಪ್ರಶ್ನೆಗಳನ್ನು ಕೇಳಲಾಗುತ್ತದೆ ರಾಷ್ಟ್ರಪತಿ, ಪ್ರಧಾನಮಂತ್ರಿ, ಸಂಸತ್ತು, ನ್ಯಾಯಾಂಗ ವಿಭಾಗ ಹಾಗೂ ರಾಜ್ಯ ಸರ್ಕಾರಗಳ ಅಧಿಕಾರ ವ್ಯಾಪ್ತಿ ಮತ್ತು ಕರ್ತವ್ಯಗಳ ಬಗ್ಗೆ ವಿಶೇಷ ಜ್ಞಾನ ಇರಬೇಕಾಗುತ್ತದೆ ಸಂವಿಧಾನದ ಮೂಲಭೂತ ತತ್ವಗಳು ಹಾಗೂ ಸಂವಿಧಾನದ ಆಯಾಮಗಳನ್ನು ತಿಳಿದುಕೊಳ್ಳುವುದು ಪೊಲೀಸ್ ಸೇವೆಯಲ್ಲಿ ಕರ್ತವ್ಯ ನಿರ್ವಹಿಸಲು ಪ್ರಮುಖವಾಗಿದೆ. ಅಭ್ಯರ್ಥಿಗಳು ಸಂವಿಧಾನದ ಪ್ರಮುಖ ವಿಧಿಗಳು ಮತ್ತು ಅವುಗಳ ತಿದ್ದುಪಡಿಗಳ ಬಗ್ಗೆ ವಿಶೇಷ ಅಧ್ಯಯನ ಮಾಡುವುದು ಉತ್ತಮ.
ಮೂಲಭೂತ ಹಕ್ಕು ಮತ್ತು ಕರ್ತವ್ಯಗಳು
ಭಾರತೀಯ ನಾಗರಿಕರಿಗೆ ಸಂವಿಧಾನವು ನೀಡಿರುವಂತಹ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ ಮೂಲಭೂತ ಹಕ್ಕುಗಳಾದ ಸಮಾನತೆ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶಿಕ್ಷಣದ ಹಕ್ಕು ಮತ್ತು ಸಾಂಸ್ಕೃತಿಕ ಹಕ್ಕುಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿರಬೇಕು ಇದರ ಜೊತೆಯಲ್ಲಿ ಸಂವಿಧಾನವು ನಾಗರಿಕರಿಗೆ ನೀಡಿರುವ ಮೂಲಭೂತ ಕರ್ತವ್ಯಗಳು ರಾಷ್ಟ್ರೀಯ ಏಕತೆ ಕಾಪಾಡುವಿಕೆ ಮತ್ತು ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವುದು ಹಾಗೂ ಸಂವಿಧಾನವನ್ನು ಗೌರವಿಸುವುದರ ಮೂಲಕ ಇರಬೇಕಾದ ಪ್ರಶ್ನೆಗಳ ಬಗ್ಗೆ ಅರಿವು ಅಗತ್ಯವಾಗಿದೆ ಪೊಲೀಸ್ ಸಿಬ್ಬಂದಿಗಳಿಗೆ ಕಾನೂನು ಮತ್ತು ನಾಗರಿಕ ಹಕ್ಕುಗಳ ಬಗ್ಗೆ ಸ್ಪಷ್ಟ ತಿಳುವಳಿಕೆ ಹೊಂದುವುದು ಅತ್ಯಂತ ಪ್ರಮುಖ ಹಾಗೂ ಅಗತ್ಯವಾಗಿದೆ.
ತಾರ್ಕಿಕ ಸಾಮರ್ಥ್ಯ
ತಾರ್ಕಿಕ ಸಾಮರ್ಥ್ಯ ವಿಭಾಗವು ಅಭ್ಯರ್ಥಿಯ ಯೋಚನಾ ಶಕ್ತಿ, ಸಮಸ್ಯೆ ಪರಿಹಾರ ಕೌಶಲ್ಯ ಮತ್ತು ವಿಶ್ಲೇಷಣಾ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ ಸರಣಿಗೆ ಸಂಬಂಧಿಸಿದ ಪ್ರಶ್ನೆಗಳು ರಕ್ತ ಸಂಬಂಧಗಳು, ಭೌಗೋಳಿಕ ದಿಕ್ಕುಗಳು, ಕೋಡಿಂಗ್ ಮತ್ತು ಡಿಕೋಡಿಂಗ್ ವ್ಯವಸ್ಥೆ, ವರ್ಗೀಕರಣಗಳು, ಸಾದೃಶ್ಯ ಮತ್ತು ಫಜಲ್ ಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಈ ವಿಭಾಗದಲ್ಲಿ ಕೇಳಲಾಗುತ್ತದೆ ಈ ವಿಭಾಗದಲ್ಲಿ ಹೆಚ್ಚು ಅಂಕಗಳನ್ನು ಗಳಿಸಲು ನಿಯಮಿತ ಅಭ್ಯಾಸ ಸಾಕಾಗುತ್ತದೆ ರೀಜನಿಂಗ್ ನ ಎಲ್ಲಾ ಪ್ರಶ್ನೆಗಳನ್ನು ಪ್ರತಿನಿತ್ಯ ಅಭ್ಯಾಸ ಮಾಡುವುದರಿಂದ ವೇಗ ಮತ್ತು ನಿಖರತೆ ಹೆಚ್ಚಿಸುತ್ತದೆ ಇದರಿಂದ ಸಮಯವನ್ನು ಉಳಿಸಬಹುದು.
ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿ
ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡುವುದರಿಂದ ಯಾವ ರೀತಿಯ ಪ್ರಶ್ನೆಗಳು ಬರುತ್ತವೆ ಮತ್ತು ಯಾವ ಯಾವ ವಿಚಾರಗಳಿಗೆ ಎಷ್ಟು ಅಂಕಗಳು ನಿಗದಿಯಾಗಿರುತ್ತವೆ ಎಂಬ ನೀಲನಕ್ಷೆ ತಿಳಿಯುತ್ತದೆ ಇದರಿಂದ ಯಾವ ವಿಭಾಗಕ್ಕೆ ಹೆಚ್ಚು ಒತ್ತು ನೀಡಬೇಕು ಯಾವ ವಿಭಾಗಗಳಿಗೆ ಸಾಮಾನ್ಯ ಅಧ್ಯಯನ ಸಾಕಾಗುತ್ತದೆ ಎಂಬುದು ತಿಳಿಯುತ್ತದೆ ಹಿಂದಿನ ವರ್ಷದ ಪ್ರಶ್ನೆಗಳನ್ನು ಅಭ್ಯಾಸ ಮಾಡುವುದರಿಂದ ನಿರಂತರ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಉತ್ತಮ ಅಂಕಗಳನ್ನು ಪಡೆಯಬಹುದು
ಪ್ರಚಲಿತ ಘಟನೆಗಳು
ಪೊಲೀಸ್ ಇಲಾಖೆಯ Armed Police Constable ಹುದ್ದೆಗಳಿಗೆ ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ವಿಚಾರಗಳು ಪ್ರಮುಖ ಪಾತ್ರ ವಹಿಸುತ್ತವೆ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಪ್ರಮುಖ ಘಟನೆಗಳು, ಬೆಳವಣಿಗೆಗಳು ಮತ್ತು ನಿರ್ಧಾರಗಳು, ವ್ಯಾಪಾರ ಒಪ್ಪಂದಗಳು, ಸರ್ಕಾರಿ ಯೋಜನೆಗಳು, ನಡೆಯುತ್ತಿರುವ ಕೀಡೆಗಳು, ಕ್ರೀಡಾಪಟುಗಳು, ಪ್ರಶಸ್ತಿಗಳು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಸುದ್ದಿಗಳನ್ನು ತಿಳಿದುಕೊಳ್ಳಬೇಕಾಗುತ್ತದೆ ಪ್ರತಿದಿನವೂ ದಿನಪತ್ರಿಕೆ, ಮಾಸಪತ್ರಿಕೆ ಹಾಗೂ ವಿಶ್ವಾಸಾರ್ಹ ಸುದ್ದಿ ಮಾಧ್ಯಮಗಳ ಮೂಲಕ ಮಾಹಿತಿಯನ್ನು ಸಂಗ್ರಹಿಸಿ ಇದರ ಜೊತೆಯಲ್ಲಿ ಕಳೆದ ಆರು ತಿಂಗಳಿಂದ ಒಂದು ವರ್ಷದವರೆಗಿನ ಪ್ರಮುಖ ಘಟನೆಗಳ ಮೇಲೆ ವಿಶೇಷ ಗಮನವನ್ನು ಹರಿಸಬೇಕು. ಇದರಿಂದ ಪ್ರಚಲಿತ ಘಟನೆ ವಿಭಾಗದಲ್ಲಿ ಉತ್ತಮ ಜ್ಞಾನವನ್ನು ಹೊಂದಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಬಹುದು
30 ದಿನಗಳ ಅಧ್ಯಯನ ಯೋಜನೆ
ವಾರ 1 → ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ವಿಚಾರಗಳ ಅಧ್ಯಯನ
ವಾರ 2 → ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳ ಅಧ್ಯಯನ
ವಾರ 3 → ರೀಸನಿಂಗ್ ವಿಷಯಗಳ ಅಧ್ಯಯನ
ವಾರ 4 → ಅಣಕು ಪರೀಕ್ಷೆಗಳನ್ನು ತೆಗೆದುಕೊಳ್ಳುವುದು
ಪರೀಕ್ಷಾ ತಯಾರಿ ಮಾಡುವಾಗ ಅಭ್ಯರ್ಥಿಗಳು ಮಾಡುವ ಸಾಮಾನ್ಯ ತಪ್ಪುಗಳು
- ಪ್ರಚಲಿತ ಘಟನೆಗಳ ಬಗ್ಗೆ ಓದದೇ ಇರುವುದು
- ಮಾಕ್ ಟೆಸ್ಟ್ ಗಳನ್ನು ಅಭ್ಯಾಸ ಮಾಡದೇ ಇರುವುದು
- ಫಿಟ್ನೆಸ್ ಕಡೆ ಗಮನ ನೀಡದೇ ಇರುವುದು
- ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸದೇ ಇರುವುದು
ಪರೀಕ್ಷೆ ತಯಾರಿಕೆ ಸಹಾಯ ಮಾಡುವ ಪುಸ್ತಕಗಳು ಮತ್ತು ಸಂಪನ್ಮೂಲಗಳು
- ಚಾಣಕ್ಯ ಕಣಜ – 2024-25, 2025-26 ಲೇಖಕರು- ಬಿರಾದರ್
- ಇತಿಹಾಸ – ಆರ್ ಮಂಜುನಾಥ್
- ಅರ್ಥಶಾಸ್ತ್ರ – ಗರಣಿ ಕೃಷ್ಣಮೂರ್ತಿ
- ಭಾರತದ ಸಂವಿಧಾನ – ಪಿ ಎಸ್ ಗಂಗಾಧರ್
- ಭೂಗೋಳಶಾಸ್ತ್ರ – (ಭಾರತ ಮತ್ತು ಕರ್ನಾಟಕ ಪ್ರತ್ಯೇಕ) – ರಂಗನಾಥ್
- ವಿಜ್ಞಾನ – ವೆಂಕಟ ರಮಣ
- ಸಾರ್ವಜನಿಕ ಆಡಳಿತ – ಹಾಲಪ್ಪ
- ಸಮಾಜಶಾಸ್ತ್ರ – ಪಿಯುಸಿ ಪುಸ್ತಕಗಳು
- ಮೆಂಟಲ್ ಅಬಿಲಿಟಿ – ಗುರುರಾಜ್ ಬುಲ್ ಬುಲೆ
- ಸಾಮಾನ್ಯ ಕನ್ನಡ – ಗೋಪಾಲ ಕೃಷ್ಣ ಉಡುಪ
- ಸಾಮಾನ್ಯ ಇಂಗ್ಲಿಷ್ – ಶಿವಕುಮಾರ್ ಮಾವಳಿ
- ಕಂಪ್ಯೂಟರ್ ಜ್ಞಾನ – ಗುರುರಾಜ್ ಬುಲ್ ಬುಲೆ
- ಹೆಚ್ಚುವರಿ ಪುಸ್ತಕಗಳು : ಗ್ರೂಪ್-ಸಿ ಪ್ರಶ್ನೋತ್ತರ ಮಾಲಿಕೆ
Armed Police Constable ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಮಾಡುವ ಸಾಮಾನ್ಯ ತಪ್ಪುಗಳು
- ತಪ್ಪಾದ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ನಮೂದಿಸುವುದು.
- ದಾಖಲೆಗಳನ್ನು ಅಸ್ಪಷ್ಟವಾಗಿ ಅಪ್ಲೋಡ್ ಮಾಡುವುದು.
- ಅರ್ಜಿ ಶುಲ್ಕ ಪಾವತಿಸದೇ ಇರುವುದು.
- ಕೊನೆ ದಿನಾಂಕದವರೆಗೆ ಅರ್ಜಿ ಸಲ್ಲಿಸಲು ಕಾಯುವುದು ಮತ್ತು ನಿರ್ಲಕ್ಷ ವಹಿಸುವುದು.
- ವರ್ಗದ ಮಾಹಿತಿಗಳನ್ನು ತಪ್ಪಾಗಿ ನಮೂದಿಸುವುದು.
- ಭಾವಚಿತ್ರವನ್ನು ಸ್ಕ್ಯಾನ್ ಮಾಡಲು ನಿಗದಿಪಡಿಸಿರುವ ಗಾತ್ರವನ್ನು ತಪ್ಪಾಗಿಸುವುದು.
- ಸಹಿಯನ್ನು ಸರಿಯಾಗಿ ಅಪ್ಲೋಡ್ ಮಾಡದಿರುವುದು.
- ಅಧಿಸೂಚನೆಯನ್ನು ಓದದೆ ಅರ್ಜಿ ಸಲ್ಲಿಸುವುದು.
- ಅರ್ಜಿಯ ಪ್ರಿಂಟೌಟ್ ಅನ್ನು ತೆಗೆದುಕೊಳ್ಳದೆ ಇರುವುದು.
- ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸುವುದು.
ಪ್ರಮುಖ ದಿನಾಂಕಗಳು
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ | 22-06-2026 |
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪಕೊನೆಯ ದಿನಾಂಕ | 22-07-2026 |
| ಆನ್ಲೈನ್ ಅರ್ಜಿ ಶುಲ್ಕವನ್ನು ಪಾವತಿ ಮಾಡಲು ಕೊನೆಯ ದಿನಾಂಕ | 24-07-2026 |
Last Updated : 25-06-2026
Armed Police Constable Recruitment : FAQ’s
1. ಈ ನೇಮಕಾತಿಯಲ್ಲಿ ಒಟ್ಟು ಎಷ್ಟು ಹುದ್ದೆಗಳಿವೆ?
1600 Armed Police Constable ಹುದ್ದೆಗಳಿವೆ.
2. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಯಾವ ವಿದ್ಯಾರ್ಹತೆಯನ್ನು ಹೊಂದಿರಬೇಕು?
ಪಿಯುಸಿ ಅಥವಾ ತತ್ಸಮಾನ ವಿದ್ಯಾ ಅರ್ಹತೆ ಹೊಂದಿರಬೇಕು.
3. ಅರ್ಜಿ ಸಲ್ಲಿಕೆ ವಿಧಾನ ಯಾವುದು?
ಅರ್ಜಿಯನ್ನು ಕೇವಲ ಆನ್ಲೈನ್ ಮೂಲಕ ಮಾತ್ರ ಸಲ್ಲಿಸಲು ಬೇಕಾಗುತ್ತದೆ.
4. ಅರ್ಜಿ ಸಲ್ಲಿಸಲು ಕನಿಷ್ಠ ಹಾಗೂ ಗರಿಷ್ಠ ವಯಸ್ಸು ಎಷ್ಟು, ವಯೋಮಿತಿ ಸಡಿಲಿಕೆ ಇದೆಯೇ?
ಕನಿಷ್ಠ ವಯಸ್ಸು 18 ವರ್ಷದಿಂದ ಗರಿಷ್ಠ ವಯಸ್ಸು 33 ವರ್ಷದ ಒಳಗೆ ಇರಬೇಕು , ವರ್ಗಗಳಿಗೆ ಅನುಸಾರ ವಯೋಮಿತಿ ಸಡಿಲಿಕೆ ಇರುತ್ತದೆ
5. ವೇತನ ಶ್ರೇಣಿ ಎಷ್ಟಿರುತ್ತದೆ?
37,500/- ರೂಗಳಿಂದ 76,100/- ರೂಗಳು.
6. ಆಯ್ಕೆ ಪ್ರಕ್ರಿಯೆಯಲ್ಲಿನ ಹಂತಗಳು ಯಾವುವು?
ಲಿಖಿತ ಪರೀಕ್ಷೆ, ದೈಹಿಕ ಸಹಿಷ್ಣುತೆ ಪರೀಕ್ಷೆ, ದೈಹಿಕ ಮಾನದಂಡ ಪರೀಕ್ಷೆ, ವೈದ್ಯಕೀಯ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ ಇರುತ್ತದೆ.
7. ಆನ್ಲೈನ್ ಅರ್ಜಿ ಶುಲ್ಕದ ಮೊತ್ತ ಎಷ್ಟು?
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ ಒಂದರ ಅಭ್ಯರ್ಥಿಗಳಿಗೆ 500/- ರೂಗಳು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ರೂ.750/- ಗಳು.
8. ಉದ್ಯೋಗದ ಸ್ಥಳ ಎಲ್ಲಿ?
ಕರ್ನಾಟಕ ರಾಜ್ಯದಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಬೇಕು.
9. ನಾನು ಈಗ ದ್ವಿತೀಯ ಪಿಯುಸಿ ಯನ್ನು ಓದುತ್ತಿದ್ದೇನೆ.ನಾನು ಅರ್ಜಿಯನ್ನು ಸಲ್ಲಿಸಬಹುದೇ?
ಇಲ್ಲ, ನಿಗಧಿತ ದಿನಾಂಕದೊಳಗೆ ವಿದ್ಯಾರ್ಹತೆಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದು.
10. ಅಂಚೆ ಮೂಲಕ ಅರ್ಜಿಯನ್ನು ಸಲ್ಲಿಸಬಹುದೇ?
ಇಲ್ಲ, ಕೇವಲ ಆನ್ಲೈನ್ ವಿಧಾನವನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸಬೇಕು ಅಂಚೆ ಮೂಲಕ ಅರ್ಜಿ ಸಲ್ಲಿಸಿದರೆ ಅದನ್ನು ಅಧಿಕೃತವೆಂದು ಪರಿಗಣಿಸಲಾಗುವುದಿಲ್ಲ.
11. ನೇಮಕಾತಿಗೆ ಸಂಬಂಧಿಸಿದ ಅಧಿಕೃತ ಮಾಹಿತಿಯನ್ನು ಎಲ್ಲಿ ಪಡೆಯಬಹುದು?
ಕಾಲಕಾಲಕ್ಕೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ಭೇಟಿ ನೀಡಿ ಮಾಹಿತಿಯನ್ನು ಪಡೆಯಬಹುದು.
12. ನೇಮಕಾತಿಗೆ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದೇ?
ಇಲ್ಲ, ಕೇವಲ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
13. ಪರೀಕ್ಷೆಯಲ್ಲಿ ಋಣಾತ್ಮಕ ಅಂಕ ಇರುತ್ತದೆಯೇ?
ಹೌದು, ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳ ಋಣಾತ್ಮಕ ಮೌಲ್ಯಮಾಪನ ಇರುತ್ತದೆ.
ಅಧಿಕೃತ ಮಾಹಿತಿಗೆ ಸಂಬಂಧಿಸಿದ ಲಿಂಕ್ ಗಳು (Official Source)
| ಅಧಿಕೃತ ವೆಬ್ ಸೈಟ್ | ಕರ್ನಾಟಕ ರಾಜ್ಯ ಪೊಲೀಸ್ ಕರ್ನಾಟಕ ಪರೀಕ್ಷಾ ಪ್ರಾಧಿಕಾರ |
| ಅಧಿಕೃತ ಅಧಿಸೂಚನೆ | APC Notification ಮಿಕ್ಕುಳಿದ ವೃಂದ APC Notification ಕಲ್ಯಾಣ ಕರ್ನಾಟಕ ವೃಂದ |
| ಅರ್ಜಿ ಸಲ್ಲಿಸಲು | ಮಿಕ್ಕುಳಿದ ವೃಂದ ಕಲ್ಯಾಣ ಕರ್ನಾಟಕ ವೃಂದ |
| ನಮ್ಮ ವಾಟ್ಸಾಪ್ ಗ್ರೂಪ್ ಸೇರಿ | ಇಲ್ಲಿ ಕ್ಲಿಕ್ ಮಾಡಿ |
| ಹೆಚ್ಚುವರಿ ಮಾಹಿತಿ | ನೇಮಕಾತಿ ಪರೀಕ್ಷಾ ಸಲಹೆ ವೃತ್ತಿ ಮಾರ್ಗದರ್ಶನ ಸರ್ಕಾರಿ ಯೋಜನೆಗಳು |
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು 2026 ನೇ ಸಾಲಿನ ಅಧಿಕೃತ ನೇಮಕಾತಿ ಸೂಚನೆಯನ್ನು ಹೊರಡಿಸಿದ್ದು Armed Police Constable ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ 2026 ನೇ ವರ್ಷದಲ್ಲಿ ಸರ್ಕಾರಿ ಉದ್ಯೋಗವನ್ನು ಪಡೆಯಲು ಬಯಸುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಸಶಸ್ತ್ರ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಪುರುಷ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಯನ್ನು ಆಹ್ವಾನಿಸಿರುವುದರಿಂದ ಈ ಹುದ್ದೆಗಳಲ್ಲಿ ಉತ್ತಮ ವೇತನ ಉದ್ಯೋಗ ಭದ್ರತೆ ಬಡ್ತಿಯಾವಕಾಶಗಳು ಹಾಗೂ ಸಮಾಜದಲ್ಲಿ ಸೇವೆಯನ್ನು ಸಲ್ಲಿಸುವಂತಹ ಅನೇಕ ಪ್ರಯೋಜನಗಳನ್ನು ಪಡೆಯಬಹುದಾಗಿರುತ್ತದೆ ಅರ್ಜಿಯನ್ನು ಸಲ್ಲಿಸಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ
Related Recruitment Articles:
Karnataka Police CPC Exam Preparation Tips 2026 | Complete And Best Study Plan
Best Courses After PUC in 2026: Top Career Options, Job Opportunities & Expert Guidance
ಲೇಖಕರ ಟಿಪ್ಪಣಿ : ಈ ಲೇಖನವನ್ನು ಓದುಗರಿಗೆ ನಿಖರ, ಉಪಯುಕ್ತ ಹಾಗೂ ಸಮಯೋಚಿತ ಮಾಹಿತಿಯನ್ನು ಒದಗಿಸುವ ಉದ್ದೇಶದಿಂದ ಸಿದ್ಧಪಡಿಸಲಾಗಿದೆ. ಸರ್ಕಾರಿ ಉದ್ಯೋಗ, ಪರೀಕ್ಷಾ ತಯಾರಿ, ವೃತ್ತಿ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು ಹಾಗೂ ಪ್ರಮುಖ ಸುದ್ದಿಗಳ ಕುರಿತು ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಪ್ರಕಟಿಸಲಾಗುತ್ತದೆ. ಯಾವುದೇ ಅಧಿಕೃತ ನಿರ್ಧಾರ ಕೈಗೊಳ್ಳುವ ಮೊದಲು ಅಧಿಕೃತ ಅಧಿಸೂಚನೆಗಳನ್ನು ಪರಿಶೀಲಿಸುವುದು ಸೂಕ್ತ.
*****
ಲೇಖಕರ ಬಗ್ಗೆ : ರಂಗನಾಥ. ಬಿ ಜಿ ರವರು ಸರ್ಕಾರಿ ಉದ್ಯೋಗ ಮಾಹಿತಿ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ, ವೃತ್ತಿ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು ಹಾಗೂ ಪ್ರಸ್ತುತ ಸುದ್ದಿಗಳ ಕುರಿತು ನಿರಂತರವಾಗಿ ಮಾಹಿತಿ ಹಂಚಿಕೊಳ್ಳುವ ಬ್ಲಾಗರ್ ಆಗಿದ್ದಾರೆ. ಓದುಗರಿಗೆ ಸರಳ ಭಾಷೆಯಲ್ಲಿ ಉಪಯುಕ್ತ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ತಲುಪಿಸುವುದು ಇವರ ಪ್ರಮುಖ ಉದ್ದೇಶವಾಗಿದೆ.
*****
Disclaimer : ಈ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿ ವಿವಿಧ ಅಧಿಕೃತ ಮೂಲಗಳಿಂದ ಸಂಗ್ರಹಿಸಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಸಂಬಂಧಿತ ಅಧಿಕೃತ ಪ್ರಕಟಣೆ ಅಥವಾ ವೆಬ್‌ಸೈಟ್ ಪರಿಶೀಲಿಸುವುದು ಓದುಗರ ಜವಾಬ್ದಾರಿಯಾಗಿದೆ.