Krushi Honda ನಿರ್ಮಾಣಕ್ಕೆ 80,000 ರೂಗಳವರೆಗೆ ಸಹಾಯಧನ
ಕರ್ನಾಟಕ ರಾಜ್ಯದ ಕೃಷಿಕರು ಹೆಚ್ಚಾಗಿ ಮಳೆ ನೀರನ್ನು ಅವಲಂಬಿಸಿದ್ದಾರೆ. ಮಳೆ ನೀರಿನಲ್ಲಿ ಲಭ್ಯತೆಯ ಆಧಾರದ ಮೇಲೆ ಕರ್ನಾಟಕದ ಕೃಷಿ ಪದ್ಧತಿಯು ಅವಲಂಬಿತವಾಗಿರುವುದರಿಂದ ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ಪ್ರಮಾಣವು ವರ್ಷದಿಂದ ವರ್ಷಕ್ಕೆ ಬದಲಾಗುತ್ತಿದೆ. ಮತ್ತೊಂದೆಡೆ ಮಳೆಯು ವಿಳಂಬವಾಗಬಹುದು ಅಥವಾ ಕಡಿಮೆ ಪ್ರಮಾಣದಲ್ಲಿ ಮಳೆ ಸುರಿಯುವುದರಿಂದ ರೈತರು ನೀರಿನ ಕೊರತೆಯನ್ನು ಎದುರಿಸುತ್ತಿರುವುದು ಕಂಡುಬರುತ್ತದೆ.
ಮಳೆಗಾಲದಲ್ಲಿ ಸಾಕಷ್ಟು ಮಳೆ ಬಂದರೂ ಆ ನೀರನ್ನು ಸುರಕ್ಷಿತವಾಗಿ ಸಂಗ್ರಹಿಸಿಕೊಳ್ಳಲು ಸೂಕ್ತ ವ್ಯವಸ್ಥೆಗಳು ಇಲ್ಲದಿದ್ದರೆ ಹೆಚ್ಚಿನ ಪ್ರಮಾಣದ ನೀರು ಹೊಲಗಳಿಂದ ಹರಿದು ಹೋಗುತ್ತದೆ. ನಂತರ ಮಳೆ ಕಡಿಮೆಯಾದಾಗ ಅಥವಾ ಬೇಸಿಗೆ ಸಮಯದಲ್ಲಿ ಅದೇ ರೈತರು ವ್ಯವಸಾಯ ಚಟುವಟಿಕೆಗಳಿಗೆ ನೀರಿನ ಕೊರತೆಯಿಂದ ಬೆಳೆಗಳನ್ನು ಉಳಿಸಿಕೊಳ್ಳಲು ಕಷ್ಟ ಪಡುತ್ತಾರೆ. ಈ ಸಮಸ್ಯೆಗೆ ಪರಿಣಾಮಕಾರಿಯಾಗಿ ಪರಿಹಾರವನ್ನು ನೀಡಲು, ಕೃಷಿ ಹೊಂಡ ನಿರ್ಮಾಣ ಯೋಜನೆಯು ಜಾರಿಯಲ್ಲಿದ್ದು ನೀರು ಸಂರಕ್ಷಣಾ ಆಯಮದಲ್ಲಿ ಇದೊಂದು ಪ್ರಮುಖ ಕ್ರಮವಾಗಿದೆ.
ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯು ಕೃಷಿ ಭಾಗ್ಯ ಯೋಜನೆಯ ಉದ್ದೇಶಗಳಲ್ಲಿ ಮಳೆಯ ನೀರಿನ ಸಂರಕ್ಷಣೆ ಮಾಡುವುದು, ಮಳೆ ಆಧಾರಿತ ಕೃಷಿಯ ಉತ್ಪಾದಕತೆಯನ್ನು ಹೆಚ್ಚಿಸುವುದು ಹಾಗೂ ನೀರನ್ನು ಪರಿಣಾಮಕಾರಿಯಾಗಿ ಸಮರ್ಥವಾಗಿ ಬಳಕೆ ಮಾಡುವುದು ಪ್ರಮುಖವಾಗಿದೆ. ಈ ಯೋಜನೆ ಅಡಿಯಲ್ಲಿ Krushi Honda ಗಳ ಜೊತೆಯಲ್ಲಿ ಪಾಲಿಥಿನ್ ಲೈನಿಂಗ್, ಡ್ರಿಪ್ ಸೆಟ್ ಗಳು ಮತ್ತು ಸ್ಪ್ರಿಂಕ್ಲರ್ ಗಳಂತಹ ಸೂಕ್ಷ್ಮ ನೀರಾವರಿ ಘಟಕಗಳಿಗೂ ಸಹ ಪ್ರೋತ್ಸಾಹವನ್ನು ನೀಡಲಾಗುತ್ತದೆ
ಯೋಜನೆ ಅಡಿಯಲ್ಲಿ ಕೃಷಿ ಹೊಂಡ ನಿರ್ಮಾಣಕ್ಕೆ ರೈತರಿಗೆ 80,000 ರೂಗಳವರೆಗೆ ಸಹಾಯಧನ ದೊರೆಯಲಿದೆ. ಈ ಸಹಾಯಧನದ ಮೊತ್ತವು ಸರ್ಕಾರದ ಮಾರ್ಗಸೂಚಿ, ಯೋಜನೆಯ ಘಟಕ, ರೈತರ ವರ್ಗ, ಜಿಲ್ಲೆ ಮತ್ತು ಅನುಮೋದಿತ ಕಾಮಗಾರಿಯ ವೆಚ್ಚದ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ರೈತರು ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಸ್ಥಳೀಯ ಕೃಷಿ ಇಲಾಖೆ ಅಥವಾ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ ಅಗತ್ಯ ಮಾಹಿತಿಯನ್ನು ಪಡೆದ ನಂತರ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಪ್ರಸ್ತುತ ಲೇಖನದಲ್ಲಿ ಕೃಷಿ ಹೊಂಡ ಯೋಜನೆ ಎಂದರೇನು? ಈ ಯೋಜನೆಯನ್ನು ಪಡೆಯಲು ಅರ್ಹತೆ ಎನಿರಬೇಕು? ಅಗತ್ಯ ದಾಖಲೆಗಳು ಯಾವುವು? ಅರ್ಜಿಯನ್ನು ಸಲ್ಲಿಸುವುದು ಹೇಗೆ? ಆಯ್ಕೆ ವಿಧಾನ ಮತ್ತು ಸಹಾಯಧನ ದೊರೆಯುವ ಅಂತಹ ವಿಧಾನಗಳನ್ನು ಸಂಕ್ಷಿಪ್ತವಾಗಿ ವಿವರಿಸಿದ್ದೇವೆ ಸಂಪೂರ್ಣ ಮಾಹಿತಿಯನ್ನು ಓದಿ ಅರ್ಥೈಸಿಕೊಂಡು ಕೃಷಿ ಹೊಂಡ ಯೋಜನೆಗೆ ಅರ್ಜಿ ಸಲ್ಲಿಸಿ.
ಈ ಲೇಖನದ ಮಾಹಿತಿಯನ್ನು ಕರ್ನಾಟಕ ಸರ್ಕಾರ, ಕರ್ನಾಟಕ ಸರ್ಕಾರ ಕೃಷಿ ಇಲಾಖೆ ಮತ್ತು ರೈತ ಮಿತ್ರ ಪೋರ್ಟಲ್ ನಿಂದ ಪಡೆಯಲಾಗಿದೆ
ಸರ್ಕಾರಿ ಅಧಿಸೂಚನೆ: ಈ ಲೇಖನವನ್ನು ಕರ್ನಾಟಕ ಕೃಷಿ ಇಲಾಖೆಯಿಂದ ಲಭ್ಯವಿರುವ ಇತ್ತೀಚಿನ ಮಾರ್ಗಸೂಚಿಗಳನ್ನು ಆಧರಿಸಿ ಸಿದ್ಧಪಡಿಸಲಾಗಿದೆ. ಅರ್ಜಿದಾರರು ಅರ್ಜಿ ಸಲ್ಲಿಸುವ ಮೊದಲು ಇತ್ತೀಚಿನ ಅಧಿಸೂಚನೆಯನ್ನು ಪರಿಶೀಲಿಸಬೇಕು.
ಕೃಷಿ ಹೊಂಡ ಎಂದರೇನು?
ಕೃಷಿ ಹೊಂಡ ಎಂದರೆ ರೈತರು ತಮಗಿರುವ ಸ್ವಂತ ಜಮೀನಿನಲ್ಲಿ ಸಂಗ್ರಹವಾಗುವ ಮಳೆ ನೀರು ಮತ್ತು ಮೇಲ್ಮೈಯಲ್ಲಿ ಹರಿಯುವ ನೀರನ್ನು ಸಂಗ್ರಹಿಸಲು ನಿರ್ಮಿಸುವ ಕೃತಕ ನಿರ್ಮಿತ ನೀರಿನ ಸಂಗ್ರಹ ವ್ಯವಸ್ಥೆಯಾಗಿದೆ. ಮಳೆಗಾಲದಲ್ಲಿ Krushi Honda ದಲ್ಲಿ ಸಂಗ್ರಹವಾಗುವ ನೀರು ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಅಂದರೆ ಬೇಸಿಗೆ ಕಾಲ ಅಥವಾ ನೀರಿನ ಅಭಾವ ಉಂಟಾದಾಗ ಸಂಗ್ರಹವಾಗಿರುವ ಈ ನೀರನ್ನು ಬೆಳೆಗಳಿಗೆ ಬಳಸಿ ಬೆಳವಣಿಗೆಯ ಹಂತದಲ್ಲಿ ಉತ್ತಮ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸಬಹುದು.
ಮಳೆ ಪ್ರಮಾಣವು ಕಡಿಮೆಯಾದ ಸಂದರ್ಭಗಳಲ್ಲಿ ಬೆಳೆಗಳಿಗೆ ನೀರು ನೀಡಲು ಕೃಷಿ ಹೊಂಡದಲ್ಲಿ ಸಂರಕ್ಷಣೆ ಮಾಡಿರುವ ನೀರನ್ನು ಬಳಸುವುದರಿಂದ ರೈತರು ಸಂಪೂರ್ಣವಾಗಿ ಮಳೆಯನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಕಡಿಮೆಯಾಗುತ್ತದೆ ಮತ್ತು ಸರಿಯಾದ ಯೋಜನೆ ಯೊಂದಿಗೆ ಕೃಷಿ ಹೊಂಡವನ್ನು ನಿರ್ಮಿಸಿದರೆ ಅದನ್ನು ಡ್ರಿಪ್ ನೀರಾವರಿ ಅಥವಾ ಸ್ಪ್ರಿಂಕ್ಲರ್ ವ್ಯವಸ್ಥೆಯೊಂದಿಗೆ ಸಂಪರ್ಕಿಸಿ ಕಡಿಮೆ ನೀರಿನಲ್ಲಿ ಹೆಚ್ಚಿನ ಪ್ರದೇಶಕ್ಕೆ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳುವುದರ ಮೂಲಕ ಬೆಳೆಗಳನ್ನು ಪರಿಣಾಮಕಾರಿಯಾಗಿ ಬೆಳೆಯಬಹುದು.
ಮಳೆ ಬಂದಾಗ ನೀರನ್ನು ಸಂಗ್ರಹಿಸಿ ಮಳೆ ಇಲ್ಲದ ಸಂದರ್ಭಗಳಲ್ಲಿ ಬೆಳೆಗಳನ್ನು ಬೆಳೆಸಲು ಈ ನೀರನ್ನು ಬಳಸುವ ಉದ್ದೇಶವನ್ನು Krushi Honda ದ ಯೋಜನೆಯು ಹೊಂದಿದೆ
ಕೃಷಿ ಹೊಂಡ ನಿರ್ಮಾಣಕ್ಕೆ 80,000 ರೂಗಳ ಸಹಾಯಧನ: ನಿಜವಾದ ಮಾಹಿತಿ ಏನು?
ಕೃಷಿ ಹೊಂಡನಿರ್ಮಾಣಕ್ಕೆ ಸರ್ಕಾರದಿಂದ ಹಲವಾರು ರೀತಿಯ ಆರ್ಥಿಕ ನೆರವು ಯೋಜನೆಗಳು ವರ್ಷಗಳಿಂದ ಜಾರಿಯಲ್ಲಿವೆ ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಕೃಷಿ ಹೊಂಡ ನಿರ್ಮಾಣ ಮತ್ತು ಅದಕ್ಕೆ ಸಂಬಂಧಿಸಿದ ವಿವಿಧ ರೀತಿಯ ನೀರು ಸಂರಕ್ಷಣಾ ಘಟಕಗಳಿಗೆ ಆರ್ಥಿಕ ನೆರವನ್ನು ನೀಡಲಾಗುತ್ತದೆ.
ಈ ಯೋಜನೆಗೆ ಅರ್ಜಿ ಸಲ್ಲಿಸುವ ಎಲ್ಲ ರೈತರಿಗೂ ಖಚಿತವಾಗಿ 80,000 ರೂಗಳ ಸಹಾಯಧನ ಸಿಗುತ್ತದೆ ಎಂಬುದನ್ನು ನಂಬಬಾರದು, ಸಹಾಯಧನದ ಮೊತ್ತವು ಯೋಜನೆಯ ಮಾರ್ಗಸೂಚಿ, ಅನುಮೋದಿತ ವೆಚ್ಚ, ಘಟಕದ ಗಾತ್ರ ಮತ್ತು ಫಲಾನುಭವಿಗಳ ಅರ್ಹತೆ ಆಧಾರದ ಮೇಲೆ ನಿರ್ಧಾರವಾಗುತ್ತದೆ.
ಕೆಲವು ನಿರ್ದಿಷ್ಟ ಯೋಜನೆಗಳಲ್ಲಿ ಕೃಷಿ ಹೊಂಡದ ಜೊತೆಗೆ ಲೈನಿಂಗ್ ಪ್ರಕ್ರಿಯೆ, ನೀರಾವರಿ ಅಥವಾ ಪಂಪ್ಸೆಟ್ ಗಳು ಸೂಕ್ಷ್ಮ ನೀರಾವರಿ ಮತ್ತು ಇತರ ಸಂಬಂಧಿತ ಘಟಕಗಳನ್ನು ಒಳಗೊಂಡು ಒಟ್ಟು ಸಹಾಯಧನದ ಮೊತ್ತವನ್ನು ಲೆಕ್ಕ ಹಾಕಬಹುದು.
ಆದ್ದರಿಂದ 80,000 ರೂಗಳ ಮೊತ್ತವು ಗರಿಷ್ಠ ಸಹಾಯಧನ ಅಥವಾ ಯೋಜನೆಯ ನಿರ್ದಿಷ್ಟ ಘಟಕಕ್ಕೆ ಸಂಬಂಧಿಸಿದ ಮೊತ್ತವಾಗಿರುತ್ತದೆಯೇ ಹೊರತು ಎಲ್ಲಾ ರೈತರಿಗೂ 80,000 ರೂಗಳ ಖಚಿತ ಆರ್ಥಿಕ ಸಹಾಯಧನ ಸಿಗುವುದಿಲ್ಲ ಎಂಬುದನ್ನು ಗಮನಿಸಿ.
ಆದುದರಿಂದ ಅರ್ಜಿ ಸಲ್ಲಿಸುವ ಮೊದಲು ಸ್ಥಳೀಯ ಕೃಷಿ ಇಲಾಖೆ ಕಛೇರಿ ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳಿಂದ ನಿಖರ ಮಾಹಿತಿಯನ್ನು ಪಡೆಯುವುದು ಅತ್ಯಗತ್ಯವಾಗಿದೆ
ಯೋಜನೆಯ ಪ್ರಮುಖ ಮಾಹಿತಿ
| ವಿವರ | ಮಾಹಿತಿ |
| ಯೋಜನೆಯ ಉದ್ದೇಶ | ಮಳೆನೀರು ಸಂಗ್ರಹಣೆ ಮತ್ತು ನೀರಾವರಿ ಸೌಲಭ್ಯ |
| ಪ್ರಮುಖ ಘಟಕ | ಕೃಷಿ ಹೊಂಡ ನಿರ್ಮಾಣ |
| ಸಹಾಯಧನ | ಯೋಜನೆಯ ನಿಯಮಾನುಸಾರ, ಗರಿಷ್ಠ ಮೊತ್ತ ಬದಲಾಗಬಹುದು |
| ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮೊತ್ತ | ₹80,000 ವರೆಗೆ ಎಂದು ಉಲ್ಲೇಖಿಸಲಾಗುತ್ತಿದೆ |
| ಫಲಾನುಭವಿಗಳು | ಅರ್ಹ ರೈತರು |
| ಅರ್ಜಿ ವಿಧಾನ | ಸಂಬಂಧಿತ ಕೃಷಿ ಇಲಾಖೆ / ರೈತ ಸಂಪರ್ಕ ಕೇಂದ್ರ / ಅಧಿಕೃತ ವ್ಯವಸ್ಥೆ |
| ಪಾವತಿ ವಿಧಾನ | ನಿಯಮಾನುಸಾರ ನೇರ ಬ್ಯಾಂಕ್ ಖಾತೆಗೆ |
| ಪ್ರಮುಖ ಉದ್ದೇಶ | ನೀರಿನ ಸಂರಕ್ಷಣೆ ಮತ್ತು ಕೃಷಿ ಉತ್ಪಾದಕತೆ ಹೆಚ್ಚಿಸುವುದು |
ಕೃಷಿ ಹೊಂಡದ ನಿರ್ಮಾಣ ಏಕೆ ಅಗತ್ಯ?
ಇಂದಿನ ದಿನಗಳ ಕೃಷಿ ಪದ್ಧತಿಯಲ್ಲಿ ನೀರಿನ ನಿರ್ವಹಣೆಯು ಅತ್ಯಂತ ಪ್ರಮುಖವಾದ ಅಂಶವಾಗಿದೆ. ಸುರಿಯುವ ಮಳೆಯ ಪ್ರಮಾಣದಲ್ಲಿ ಬದಲಾವಣೆ, ಭೂಗರ್ಭ ಜಲಮಟ್ಟದಲ್ಲಿ ಕುಸಿತ ಮತ್ತು ಹೆಚ್ಚುತ್ತಿರುವ ನೀರಾವರಿ ವೆಚ್ಚದಿಂದ ರೈತರು ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಮಳೆಗಾಲದಲ್ಲಿ ಸುರಿಯುವ ನೀರನ್ನು ಸಂಗ್ರಹಿಸದೇ ಬಿಡುವುದರಿಂದ ಅದು ವೇಗವಾಗಿ ಹರಿದು ಹೋಗುವುದರ ಜೊತೆಯಲ್ಲಿ ಮಣ್ಣಿನಲ್ಲಿರುವ ಪೋಷಕಾಂಶಗಳನ್ನು ಸಹ ಕುಗ್ಗಿಸುತ್ತದೆ. ಆದರೆ Krushi Honda ನಿರ್ಮಾಣವಾದರೆ ಈ ನೀರನ್ನು ಹೊಲದಲ್ಲಿಯೇ ಹಿಡಿದಿಟ್ಟುಕೊಳ್ಳಬಹುದಾಗಿದೆ
ಕೃಷಿ ಹೊಂಡದ ಪ್ರಮುಖ ಅಗತ್ಯತೆಗಳು
- ಮಳೆಗಾಲದಲ್ಲಿ ಸುರಿಯುವ ಹೆಚ್ಚಿನ ಮಳೆ ನೀರನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ
- ಮಳೆಯ ಪ್ರಮಾಣ ಕಡಿಮೆಯಾದಾಗ ಬೆಳೆಗಳಿಗೆ ಸಂರಕ್ಷಿಸಿರುವ ನೀರನ್ನು ನೀಡಬಹುದು
- ಬೆಳೆಗಳ ನಿರ್ಣಾಯಕ ಹಂತದಲ್ಲಿ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳಬಹುದು
- ನೀರನ್ನು ಕೊರತೆಯಿಂದಾಗಿ ಉಂಟಾಗುವ ಬೆಳೆ ನಷ್ಟದ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಬಹುದು
- ತೋಟಗಾರಿಕಾ ಬೆಳೆಗಳನ್ನು ಬೆಳೆಸಲು ಸಹಕಾರಿಯಾಗುತ್ತದೆ
- ಭೂಗರ್ಭ ಅಂತರ್ಜಲ ಮಟ್ಟ ಸುಧಾರಣೆಗೆ ಸಹಕಾರಿಯಾಗುತ್ತದೆ
- ಡ್ರಿಪ್ ಮತ್ತು ಸ್ಪ್ರಿಂಕ್ಲರ್ ನೀರಾವರಿಯೊಂದಿಗೆ ಬಳಸಬಹುದು
- ಮಳೆ ಆಧಾರಿತ ಕೃಷಿಯನ್ನು ಸ್ಥಿರಗೊಳಿಸಬಹುದು
ಕೃಷಿ ಹೊಂಡ ಯೋಜನೆಯ ಪ್ರಮುಖ ಉದ್ದೇಶಗಳು
ಮಳೆ ನೀರಿನ ಸಂರಕ್ಷಣೆ
ಮಳೆಗಾಲದಲ್ಲಿ ಸುರಿಯುವ ಹೆಚ್ಚುವರಿ ಮಳೆಯ ಪ್ರಮಾಣದಿಂದ ಹೊಲಗಳಿಂದ ಹರಿದು ಹೋಗುವ ನೀರನ್ನು ಒಂದು ಕಡೆ ಸಂಗ್ರಹಿಸಿ ಸಂರಕ್ಷಿಸುವುದು ಕೃಷಿ ಹೊಂಡದ ಪ್ರಾಥಮಿಕ ಉದ್ದೇಶವಾಗಿದೆ ಈ ನೀರನ್ನು ನಂತರ ಅವಶ್ಯಕತೆ ಇದ್ದಾಗ ಬೆಳೆಗಳಿಗೆ ಬಳಸಬಹುದು
ಬರದ ಪರಿಸ್ಥಿತಿಯಲ್ಲಿ ಬೆಳೆಗಳ ರಕ್ಷಣೆ
ಮಳೆ ವಿಳಂಬವಾದ ಅಥವಾ ಕೆಲವು ಸಮಯಾವಧಿಯಲ್ಲಿ ಮಳೆ ಬಾರದಿದ್ದಾಗ ಬೆಳೆಗಳು ಒಣಗಿ ಹೋಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಅಂತಹ ಸಂದರ್ಭದಲ್ಲಿ ಕೃಷಿ ಹೊಂಡದಲ್ಲಿ ಸಂಗ್ರಹಿಸುವ ನೀರನ್ನು ಬೆಳೆಗಳಿಗೆ ಬಳಸುವುದರಿಂದ ಹೆಚ್ಚು ಉಪಕಾರಿಯಾಗಿದೆ
ನೀರಾವರಿ ವೆಚ್ಚವನ್ನು ಕಡಿಮೆ ಮಾಡುವುದು
ಬೆಳೆಯನ್ನು ಬೆಳೆಯುವ ಪ್ರದೇಶಕ್ಕೆ ಸಮೀಪದಲ್ಲಿ ನೀರಿನ ಸಂಗ್ರಹವಿದ್ದರೆ ದೂರದ ಮೂಲಗಳಿಂದ ನೀರು ತರುವುದನ್ನು ಮತ್ತು ಅವುಗಳ ಅವಶ್ಯಕತೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಇದರಿಂದ ಕೆಲವೊಂದು ಸಂದರ್ಭದಲ್ಲಿ ನೀರಾವರಿ ವೆಚ್ಚ ಕಡಿಮೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ
ಕೃಷಿ ಉತ್ಪಾದಕತೆಯ ಹೆಚ್ಚಳ
ಸರಿಯಾದ ಸಮಯಕ್ಕೆ ಬೆಳಗಳಿಗೆ ಸರಿಯಾದ ಪ್ರಮಾಣದ ನೀರನ್ನು ಪೂರೈಕೆ ಮಾಡುವುದರಿಂದ ಬೆಳೆಗಳು ಉತ್ತಮವಾಗಿ ಬೆಳೆದು ಹೆಚ್ಚಿನ ಇಳುವರಿಯನ್ನು ನೀಡಲು ಸಹಕಾರಿಯಾಗುತ್ತದೆ ಇದರಿಂದ ಕೃಷಿ ಉತ್ಪಾದಕತೆ ಹೆಚ್ಚಾಗುತ್ತದೆ
ರೈತ ಆದಾಯವನ್ನು ಹೆಚ್ಚಿಸುವುದು
ನೀರಿನ ಲಭ್ಯತೆಯನ್ನು ಪರಿಣಾಮಕಾರಿಯಾಗಿ ಸುಧಾರಿಸಿದರೆ ಒಂದೇ ಹಂಗಾಮಿನ ಬದಲು ಬೇರೆ ಬೇರೆ ಹಂಗಾಮುಗಳಲ್ಲಿ ವಿವಿಧ ರೀತಿಯ ಬೆಳೆಗಳನ್ನು ಬೆಳೆಯುವ ಅವಕಾಶ ದೊರೆಯುತ್ತದೆ ಇದರಿಂದ ರೈತರ ಆದಾಯ ಮಟ್ಟ ಹೆಚ್ಚಾಗುವುದರ ಜೊತೆಯಲ್ಲಿ ಜೀವನಮಟ್ಟ ಸುಧಾರಣೆಗೊಳ್ಳುತ್ತದೆ.
ಕೃಷಿ ಹೊಂಡದಿಂದ ರೈತರಿಗೆ ದೊರೆಯುವ ಪ್ರಮುಖ ಪ್ರಯೋಜನಗಳು
ಮಳೆ ಆಧಾರಿತ ಕೃಷಿಯ ಮೇಲೆ ಅವಲಂಬನೆ ಕಡಿಮೆಯಾಗುತ್ತದೆ
ಇಂದಿನ ಕೃಷಿ ಪದ್ಧತಿಯಲ್ಲಿ ಮಳೆ ಬಂದಾಗ ಮಾತ್ರ ಕೃಷಿ ಚಟುವಟಿಕೆಗಳನ್ನು ಆರಂಭಿಸುವ ಪರಿಸ್ಥಿತಿ ಇದೆ ಆದರೆ ಕೃಷಿ ಹೊಂಡವನ್ನು ನಿರ್ಮಿಸುವುದರಿಂದ ಸಂಗ್ರಹಿಸಿದ ನೀರನ್ನು ಅಗತ್ಯವಿದ್ದಾಗ ಬೆಳೆಗಳಿಗೆ ಬಳಸುವುದರಿಂದ ಮಳೆಯನ್ನು ಆಧರಿಸುವುದನ್ನು ಕಡಿಮೆ ಮಾಡಿಕೊಳ್ಳಬಹುದು.
ಉದಾಹರಣೆಗೆ, 2 ಎಕರೆ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಿದ ರೈತರು ಮಳೆಗಾಲದಲ್ಲಿ ನೀರನ್ನು ಸಂಗ್ರಹಿಸಿ ಬೇಸಿಗೆಯಲ್ಲಿ ತರಕಾರಿ ಬೆಳೆ ಬೆಳೆದು ಹೆಚ್ಚಿನ ಆದಾಯ ಗಳಿಸಬಹುದು.
ಬೆಳೆಗಳಿಗೆ ರಕ್ಷಣಾತ್ಮಕ ನೀರಾವರಿ
ಮಳೆ ಸುರಿಯುವುದು ವಿಳಂಬವಾಗದಾಗ ಅಥವಾ ಬೆಳೆಗಳು ಒಣಗುವ ಸಂದರ್ಭದಲ್ಲಿರುವಾಗ Krushi Honda ದ ನೀರನ್ನು ಬಳಸುವುದರಿಂದ ಬೆಳೆಗಳಿಗೆ ಉತ್ತಮ ನೀರಾವರಿ ಪ್ರಯೋಜನ ದೊರೆಯುತ್ತದೆ ಇದನ್ನು ಸಾಮಾನ್ಯವಾಗಿ ಬೆಳೆಗಳ ನಿರ್ಣಾಯಕ ಅಂತದಲ್ಲಿ ಬಳಸುವುದರಿಂದ ಉತ್ತಮ ರೀತಿಯ ಪ್ರಯೋಜನಗಳನ್ನು ಪಡೆಯಬಹುದು
ತೋಟಗಾರಿಕಾ ಬೆಳೆಗಳಿಗೆ ಅನುಕೂಲ
ದಾಳಿಂಬೆ, ದ್ರಾಕ್ಷಿ, ತೆಂಗು, ಮಾವು, ಅಡಿಕೆ, ತರಕಾರಿ ಹಾಗೂ ಇತರ ರೀತಿಯ ಹೆಚ್ಚಿನ ತೋಟಗಾರಿಕೆ ಬೆಳೆಗಳಿಗೆ ನಿಯಮಿತವಾಗಿ ನೀರಾವರಿ ವ್ಯವಸ್ಥೆಯ ಅಗತ್ಯವಿರುತ್ತದೆ Krushi Honda ದಲ್ಲಿ ಸಂಗ್ರಹಿಸಿರುವ ನೀರನ್ನು ಈ ಬೆಳೆಗಳಿಗೆ ಬಳಸುವುದರಿಂದ ಬೆಳೆಗಳನ್ನು ಉತ್ತಮ ರೀತಿಯಲ್ಲಿ ಬೆಳೆಸಬಹುದು
ಸೂಕ್ಷ್ಮ ನೀರಾವರಿಯೊಂದಿಗೆ ಉತ್ತಮ ಫಲಿತಾಂಶ
ಕೃಷಿ ಹೊಂಡದಲ್ಲಿ ಸಂಗ್ರಹಿಸಿರುವ ನೀರನ್ನು ಅವೈಜ್ಞಾನಿಕವಾಗಿ ಬಳಸುವುದರ ಬದಲು ಡ್ರಿಪ್ ಅಥವಾ ಸ್ಪ್ರಿಂಕ್ಲರ್ ವ್ಯವಸ್ಥೆಯೊಂದಿಗೆ ಬಳಸಿದರೆ ನೀರಿನ ವ್ಯರ್ಥತೆಯನ್ನು ಕಡಿಮೆ ಮಾಡಬಹುದಾಗಿದೆ ಕಡಿಮೆ ಪ್ರಮಾಣದ ನೀರಿನಿಂದ ಹೆಚ್ಚಿನ ಪ್ರದೇಶಕ್ಕೆ ನೀರಾವರಿ ವ್ಯವಸ್ಥೆಯನ್ನು ಕಲ್ಪಿಸಲು ಈ ಸೂಕ್ಷ್ಮ ನೀರಾವರಿ ವ್ಯವಸ್ಥೆಗಳು ಸಹಕರಿಸುತ್ತವೆ
ಪಶುಸಂಗೋಪನೆಗೆ ಸಹಕಾರಿ
ಜಾನುವಾರುಗಳನ್ನು ಸಾಕುವ ರೈತರಿಗೆ ನೀರಿನ ಲಭ್ಯತೆಯು ಕಡಿಮೆಯಾದಾಗ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಾರೆ ಕೃಷಿ ಹೊಂಡದಲ್ಲಿರುವ ನೀರನ್ನು ಜಾನುವಾರುಗಳ ಬಳಕೆಗೆ ಬಳಸುವುದರಿಂದ ಕೃಷಿ ಚಟುವಟಿಕೆಗಳ ಜೊತೆಯಲ್ಲಿ ಪಶುಸಂಗೋಪನೆಯೂ ನೀವು ಸಹ ನಡೆಯುತ್ತದೆ
ಹೆಚ್ಚುವರಿ ಆದಾಯದ ಅವಕಾಶಗಳು
ಕೆಲವು ದೊಡ್ಡ ಕೃಷಿ ಹೊಂಡಗಳಲ್ಲಿ ಸ್ಥಳೀಯ ನಿಯಮಗಳು ಮತ್ತು ತಾಂತ್ರಿಕತೆಯ ಸೂಕ್ತತೆಯನ್ನು ಪರಿಗಣಿಸಿ ಮೀನನ್ನು ಸಹ ಸಾಕಬಹುದಾಗಿರುತ್ತದೆ ಆದರೆ ಈ ಉದ್ದೇಶಕ್ಕಾಗಿ ಕೃಷಿ ಹೊಂಡವನ್ನು ಬಳಸುವ ಮೊದಲು ಸಂಬಂಧಿತ ಇಲಾಖೆಯ ಸಲಹೆಯನ್ನು ಪಡೆದು ಅವರಿಗೆ ಮಾಹಿತಿ ನೀಡುವುದು ಉತ್ತಮವಾಗಿದೆ
ಕೃಷಿ ಹೊಂಡ ಸಹಾಯಧನ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು
ಯೋಜನೆಗೆ ಸಂಬಂಧಿಸಿದ ಅರ್ಹತ ನಿಯಮಗಳು ಅಂತಿಮವಾಗಿ ಸರ್ಕಾರದ ಮಾರ್ಗಸೂಚಿ ಮತ್ತು ನಿಯಮಗಳ ಮೇಲೆ ಅವಲಂಬತವಾಗಿರುತ್ತವೆ. ಈ ಕೆಳಗಿನ ವರ್ಗದ ರೈತರು ಈ ಯೋಜನೆಗೆ ಅರ್ಹರಾಗುವ ಸಾಧ್ಯತೆ ಹೆಚ್ಚಾಗಿದೆ.
- ಕರ್ನಾಟಕ ರಾಜ್ಯದ ಅರ್ಹ ರೈತರು
- ಸ್ವಂತ ಕೃಷಿ ಭೂಮಿ ಹೊಂದಿರುವವರು
- ಕೃಷಿ ಚಟುವಟಿಕೆಯಲ್ಲಿ ತೊಡಗಿರುವವರು
- ಕೃಷಿ ಹೊಂಡ ನಿರ್ಮಿಸಲು ಸೂಕ್ತ ಜಮೀನು ಹೊಂದಿರುವವರು
- ಜಮೀನಿನ ದಾಖಲೆಗಳು ಸರಿಯಾಗಿರುವವರು
- ಯೋಜನೆಯ ನಿಯಮಗಳನ್ನು ಪೂರೈಸುವ ರೈತರು
- ಸರ್ಕಾರದ ಮಾರ್ಗಸೂಚಿಯ ಪ್ರಕಾರ ಆದ್ಯತೆ ಪಡೆಯುವ ಸಣ್ಣ ಮತ್ತು ಅತಿಸಣ್ಣ ರೈತರು
ಕೆಲವು ಯೋಜನೆಗಳಲ್ಲಿ ಭೂಮಿಯ ಗಾತ್ರ, ಈ ಹಿಂದೆ ಪಡೆದಿರುವ ಸಹಾಯಧನದ ಫಲಾನುಭವಿಗಳು, ಯೋಜನೆಯ ಘಟಕಗಳ ಲಭ್ಯತೆ ಮತ್ತು ಜಿಲ್ಲಾವಾರು ಗುರಿಗಳಂತ ನಿಯಮಗಳು ಇರುವ ಸಾಧ್ಯತೆ ಇರುತ್ತದೆ ಆದ್ದರಿಂದ ಅರ್ಹತೆಯ ಬಗ್ಗೆ ಅಂತಿಮ ನಿರ್ಧಾರವನ್ನು ಅಧಿಕೃತ ಇಲಾಖೆಯ ಮಾರ್ಗಸೂಚಿ ಆಧಾರದ ಮೇಲೆ ಪರಿಗಣಿಸಲಾಗುತ್ತದೆ.
ಕೃಷಿ ಹೊಂಡ ಸಹಾಯಧನ ಯೋಜನೆಗೆ ಅರ್ಜಿ ಸಲ್ಲಿಸಬೇಕಾಗುವ ದಾಖಲಾತಿಗಳು
ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಈ ಕೆಳಕಂಡ ಕಡ್ಡಾಯ ದಾಖಲಾತಿಗಳನ್ನು ರೈತರು ಸಿದ್ಧಪಡಿಸಿಟ್ಟುಕೊಳ್ಳಬೇಕು
- ಆಧಾರ್ ಕಾರ್ಡ್
- ಪಹಣಿ / RTC ದಾಖಲೆ
- ಜಮೀನಿನ ಮಾಲೀಕತ್ವದ ದಾಖಲೆ
- ಬ್ಯಾಂಕ್ ಪಾಸ್ಬುಕ್ ಅಥವಾ ಖಾತೆ ವಿವರ
- ಮೊಬೈಲ್ ಸಂಖ್ಯೆ
- ಪಾಸ್ಪೋರ್ಟ್ ಅಳತೆಯ ಫೋಟೋ
- ಜಾತಿ ಪ್ರಮಾಣಪತ್ರ – ಅನ್ವಯಿಸಿದರೆ
- ಆದಾಯ ಪ್ರಮಾಣಪತ್ರ – ಅಗತ್ಯವಿದ್ದರೆ
- ಸ್ವಯಂ ಘೋಷಣಾ ಪತ್ರ
- ಆಧಾರ್ ಜೋಡಣೆಗೊಂಡ ಬ್ಯಾಂಕ್ ಖಾತೆ ವಿವರ
- ಇಲಾಖೆಯು ಕೇಳುವ ಇತರೆ ದಾಖಲೆಗಳು
ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ದಾಖಲೆಗಳಲ್ಲಿರುವ ಹೆಸರು, ತಂದೆ ಹೆಸರು, ಜನ್ಮ ದಿನಾಂಕ, ವಿಳಾಸ ಮತ್ತು ಜಮೀನಿನ ವಿವರಗಳನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಈ ಮಾಹಿತಿಗಳಲ್ಲಿ ವ್ಯತ್ಯಾಸಗಳಿದ್ದರೆ ಅದನ್ನು ಸರಿಪಡಿಸಿ ನಂತರ ಅರ್ಜಿಯನ್ನು ಸಲ್ಲಿಸಬೇಕು.
ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ಸಲ್ಲಿಸುವುದು ಹೇಗೆ
Krushi Honda ನಿರ್ಮಾಣ ಸಹಾಯಧನ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನವು ಯೋಜನೆಯ ಪ್ರಸ್ತುತ ನಿಯಮಗಳ ಪ್ರಕಾರ ಬದಲಾಗಬಹುದು. ಕೆಲವೊಂದು ಸಂದರ್ಭಗಳಲ್ಲಿ ರೈತ ಸಂಪರ್ಕ ಕೇಂದ್ರದಿಂದ ಅಥವಾ ತಾಲೂಕು ಕೃಷಿ ಇಲಾಖೆ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ಸಾಮಾನ್ಯವಾಗಿ ಈ ಕೆಳಕಂಡ ಕ್ರಮಗಳನ್ನು ಅನುಸರಿಸಿ ಅರ್ಜಿಯನ್ನು ಸಲ್ಲಿಸುವುದು ಉತ್ತಮ
ಹಂತ-1: ಅಧಿಕೃತ ಮಾಹಿತಿಯ ಪರಿಶೀಲನೆ
ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಸಂಪೂರ್ಣ ಮಾಹಿತಿಯನ್ನು ಪಡೆಯಲು ಮೊದಲು ನಿಮ್ಮ ತಾಲೂಕಿನ ಕೃಷಿ ಇಲಾಖೆ ಅಥವಾ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬೇಕಾಗಿರುತ್ತದೆ. ಪ್ರಸ್ತುತ ವರ್ಷದಲ್ಲಿ ಕೃಷಿ ಹೊಂಡ ಯೋಜನೆಗೆ ಅರ್ಜಿ ಸ್ವೀಕಾರ ಪ್ರಕ್ರಿಯೆಯು ಹೇಗಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬೇಕು
ಹಂತ-2: ಅರ್ಹತೆಯ ಪರಿಶೀಲನೆ
ನಿಮ್ಮ ಜಮೀನಿನ ದಾಖಲೆಗಳು, ವೈಯಕ್ತಿಕ ದಾಖಲೆಗಳು ಮತ್ತು ಇತರೆ ಸಂಬಂಧ ಪಟ್ಟ ಮಾಹಿತಿಗಳು ಯೋಜನೆಯ ನಿಯಮಗಳ ಪ್ರಕಾರ ಇವೆಯೇ ಎಂದು ಪರಿಶೀಲಿಸಿಕೊಳ್ಳಬೇಕು ಇಲಾಖೆಯ ನಿಗದಿಪಡಿಸಿರುವ ನಿಯಮಗಳ ಪ್ರಕಾರ ನೀವು ಅರ್ಹರಾಗಿದ್ದರೆ ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ
ಹಂತ-3: ಅರ್ಜಿ ಸಲ್ಲಿಕೆ
ಅಧಿಕೃತ ಕೃಷಿ ಇಲಾಖೆ ಅಥವಾ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ ಎಲ್ಲ ಮಾಹಿತಿಯನ್ನು ಪಡೆದ ನಂತರ ಅಧಿಕೃತವಾಗಿ ಸೂಚಿಸಲಾಗಿರುವ ಕಚೇರಿಯಲ್ಲಿ ಯೋಜನೆಯ ಮಾಹಿತಿಯನ್ನು ಪಡೆದು ಅರ್ಜಿ ನಮೂನೆಯನ್ನು ಪಡೆಯಬೇಕಾಗಿರುತ್ತದೆ.
ಅರ್ಜಿ ಯನ್ನು ಪಡೆದ ನಂತರ ಅಲ್ಲಿ ಕೇಳಲಾಗುವ ವೈಯಕ್ತಿಕ ಮಾಹಿತಿ, ಜಮೀನಿಗೆ ಸಂಬಂಧಿಸಿದ ಮಾಹಿತಿ, ಬ್ಯಾಂಕ್ ಖಾತೆ ವಿವರಗಳು ಮತ್ತು ವಿಳಾಸಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಎಚ್ಚರಿಕೆಯಿಂದ ನಮೂದಿಸಬೇಕು
ಹಂತ-4: ದಾಖಲೆಗಳ ಸಲ್ಲಿಕೆ
ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ಕೇಳಲಾಗುವ ಕಡ್ಡಾಯ ಮತ್ತು ಹೆಚ್ಚುವರಿ ದಾಖಲಾತಿಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ನೀಡಬೇಕು ಸಾಧ್ಯವಾದಷ್ಟು ಸ್ವಯಂ ದೃಢೀಕೃತ ಪ್ರತಿಗಳನ್ನು ನೀಡಲು ಆದ್ಯತೆ ನೀಡಿ
ಹಂತ-5: ಸ್ಥಳದ ಪರಿಶೀಲನೆ
ಈ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ ಇಲಾಖೆ ಅಧಿಕಾರಿಗಳು ಜಮೀನಿನ ಪರಿಶೀಲನೆ ಮಾಡಬಹುದಾಗಿರುತ್ತದೆ ಕೃಷಿ ಹೊಂಡ ನಿರ್ಮಾಣಕ್ಕೆ ಜಮೀನು ಸೂಕ್ತವಾಗಿದೆಯೇ, ಯಾವುದಾದರೂ ತೊಂದರೆಗಳು ಇವೆಯೇ ಎಂಬುದರ ಬಗ್ಗೆ ಪರಿಶೀಲನೆಯನ್ನು ನಡೆಸಲಾಗುತ್ತದೆ
ಹಂತ-6: ಅನುಮೋದನೆ
ಅರ್ಜಿ ಸಲ್ಲಿಕೆಯ ನಂತರ ಸ್ಥಳ ಪರಿಶೀಲನೆ ಪೂರ್ಣಗೊಂಡ ನಂತರ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಿ ಅನುಮೋದನೆ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ ಈ ಹಂತದಲ್ಲಿ ಆಯ್ಕೆಯಾಗುವ ರೈತರಿಗೆ ಕೃಷಿ ಹೊಂಡದ ಪ್ರಯೋಜನವನ್ನು ಪಡೆಯಲು ಅವಕಾಶ ನೀಡಲಾಗುತ್ತದೆ
ಹಂತ-7: ನಿಯಮಗಳಿಗೆ ಒಳಪಟ್ಟು ಕೃಷಿ ಹೊಂಡ ನಿರ್ಮಾಣ
ಇಲಾಖಾ ನಿಯಮಗಳು ಮತ್ತು ಅಧಿಕಾರಿಗಳ ಮಾರ್ಗದರ್ಶನದಂತೆ ಕೃಷಿ ಹೊಂಡವನ್ನು ನಿರ್ಮಾಣ ಮಾಡಬೇಕು ಯೋಜನೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ನೀಡಲಾಗುವ ಎಲ್ಲಾ ಮಾಹಿತಿಯನ್ನು ಕಡ್ಡಾಯವಾಗಿ ಪಾಲಿಸಿರಬೇಕು
ಹಂತ-8: ಪರಿಶೀಲನೆ ಮತ್ತು ಸಹಾಯಧನ ಬಿಡುಗಡೆ
Krushi Honda ನಿರ್ಮಾಣದ ಕಾಮಗಾರಿಯು ಸಂಪೂರ್ಣವಾಗಿ ಪೂರ್ಣಗೊಂಡ ನಂತರ ಇಲಾಖೆ ಅಧಿಕಾರಿಗಳು ನಿಯಮಾನುಸರ ಪರಿಶೀಲನೆ ನಡೆಸಿ ಅರ್ಹ ಮೊತ್ತದ ಸಹಾಯಧನವನ್ನು ಬಿಡುಗಡೆ ಮಾಡಲಾಗುತ್ತದೆ
ಕೃಷಿ ಹೊಂಡವನ್ನು ನಿರ್ಮಿಸುವ ಮೊದಲು ಗಮನಿಸಬೇಕಾದ ಪ್ರಮುಖ ಅಂಶಗಳು
ಕೃಷಿ ಹೊಂಡವನ್ನು ಯಾವುದೇ ಸ್ಥಳದಲ್ಲಿ ಅಥವಾ ಯಾವುದೇ ಅಳತೆಯಲ್ಲಿ ನಿರ್ಮಿಸುವುದು ಸೂಕ್ತವಲ್ಲ, ಸ್ಥಳದ ಆಯ್ಕೆ ಮತ್ತು ಸುತ್ತಳತೆಗಳು ಪ್ರಮುಖವಾಗಿವೆ. ಕೃಷಿ ಹೊಂಡವನ್ನು ನಿರ್ಮಿಸುವಾಗ ಈ ಕೆಳಕಂಡ ಪ್ರಮುಖ ಅಂಶಗಳನ್ನು ಗಮನಿಸಿ
ಮಳೆ ನೀರು ಹರಿದು ಬರುವ ಸ್ಥಳ
ಮಳೆಗಾಲದಲ್ಲಿ ಸುರಿಯುವ ಹೆಚ್ಚಿನ ಪ್ರಮಾಣದಲ್ಲಿ ಸಹಜವಾಗಿ ಹರಿದು ಬರುವ ಸ್ಥಳವನ್ನು ಗುರುತಿಸಿ ಈ ಸ್ಥಳವನ್ನು ಆಯ್ಕೆ ಮಾಡಿದರೆ ಹೆಚ್ಚಿನ ಪ್ರಮಾಣದ ನೀರನ್ನು ಸಂಗ್ರಹಿಸಲು ಸಹಕಾರಿಯಾಗುತ್ತದೆ
ಮಣ್ಣಿನ ಸ್ವಭಾವ
ಕೃಷಿ ಭೂಮಿಯಲ್ಲಿರುವ ಮಣ್ಣಿನ ನೀರು ಹಿಡಿದಿಡುವ ಸಾಮರ್ಥ್ಯವನ್ನು ಮೊದಲು ಪರೀಕ್ಷಿಸಿ ಅದನ್ನು ಸಹ ಪರಿಗಣಿಸಬೇಕಾಗುತ್ತದೆ ಹೆಚ್ಚು ಸೋರಿಕೆ ಇರುವ ಮಣ್ಣಿನಲ್ಲಿ ಅಗತ್ಯವಿದ್ದಲ್ಲಿ ಲೈನಿಂಗ್ ವ್ಯವಸ್ಥೆಯನ್ನು ಕಲ್ಪಿಸಬೇಕಾಗುತ್ತದೆ ಇದರಿಂದ ಮಣ್ಣಿನಲ್ಲಿ ನೀರನ್ನು ಹಿಡಿದಿರುವ ಸಾಮರ್ಥ್ಯ ಹೆಚ್ಚಾಗುತ್ತದೆ
ಹೊಂಡದ ಗಾತ್ರ
ಜಮೀನಿನ ವಿಸ್ತೀರ್ಣ, ಮಳೆಯ ಪ್ರಮಾಣ ಮತ್ತು ನೀರಿನ ಅಗತ್ಯವನ್ನು ಪರಿಗಣಿಸಿ ಹೊಂಡದ ಗಾತ್ರವನ್ನು ನಿರ್ಧರಿಸಬೇಕಾಗುತ್ತದೆ ಈ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಅಥವಾ ತಾಂತ್ರಿಕ ಸಿಬ್ಬಂದಿಯ ಸಲಹೆಯನ್ನು ಪಡೆಯುವುದರಿಂದ ಹೊಂಡದ ಗಾತ್ರವನ್ನು ನಿರ್ಧರಿಸಿ ನಿರ್ಮಾಣ ಪ್ರಕ್ರಿಯೆಯನ್ನು ಸುಲಭಗೊಳಿಸಬಹುದು
ನೀರಿನ ಹೊರ ಹರಿವು ವ್ಯವಸ್ಥೆ
ಮಳೆಯ ಪ್ರಮಾಣವು ಅತಿಯಾದಾಗ ಹೊಂಡವು ತುಂಬಿ ಹೊಡೆದು ಹೋಗದಂತೆ ಸೂಕ್ತ ನೀರಿನ ಹೊರ ಹರಿವು ವ್ಯವಸ್ಥೆಯನ್ನು ಕಲ್ಪಿಸಬೇಕು. ನಿಗದಿತ ಪ್ರಮಾಣದ ನೀರನ್ನು ಸಂಗ್ರಹಿಸಲು ಕೃಷಿ ಹೊಂಡವನ್ನು ನಿರ್ಮಿಸುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬಂದಲ್ಲಿ ಅದನ್ನು ಬೇರೆ ಕಡೆ ಹರಿಯಲು ವ್ಯವಸ್ಥೆ ಕಲ್ಪಿಸಿರಬೇಕು
ಸುರಕ್ಷತಾ ಕ್ರಮಗಳು
ಕೃಷಿ ಹೊಂಡದ ನಿರ್ಮಾಣದ ನಂತರ ಕೃಷಿ ಹೊಂಡದ ಸುತ್ತ ಬೇಲಿಯನ್ನು ನಿರ್ಮಿಸುವುದು, ಎಚ್ಚರಿಕೆ ಫಲಕಗಳು ಮತ್ತು ಅಗತ್ಯ ರೀತಿಯ ಸುರಕ್ಷತಾ ವ್ಯವಸ್ಥೆಗಳನ್ನು ಅಳವಡಿಸುವುದು ಅತ್ಯಂತ ಪ್ರಮುಖವಾಗಿದೆ. ಕೃಷಿ ಹೊಂಡಗಳು ಅತ್ಯಂತ ಹೆಚ್ಚಿನ ನೀರಿನ ಆಳವನ್ನು ಹೊಂದಿರುವುದರಿಂದ ಮಕ್ಕಳು ಮತ್ತು ಜಾನುವಾರುಗಳ ಸುರಕ್ಷತೆಯನ್ನು ನಿರ್ಲಕ್ಷಿಸಬಾರದು. ಕರ್ನಾಟಕದಲ್ಲಿ ಕೃಷಿ ಹೊಂಡಗಳ ಸುತ್ತ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕು ಎಂಬ ಕ್ರಮಗಳ ಬಗ್ಗೆ ಅಧಿಕಾರಿಗಳು ಮಾಹಿತಿಯನ್ನು ನೀಡುತ್ತಿದ್ದಾರೆ
ಕೃಷಿ ಹೊಂಡದ ನಿರ್ವಹಣೆಯನ್ನು ಹೇಗೆ ಮಾಡಬೇಕು
ಕೃಷಿ ಹೊಂಡವನ್ನು ನಿರ್ಮಿಸಿದ ನಂತರ ಅದನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದಿದ್ದರೆ ಕಾಲಕ್ರಮೇಣ ನೀರನ್ನು ಸಂಗ್ರಹಿಸುವ ಪ್ರಮಾಣ ಕಡಿಮೆಯಾಗಬಹುದು ಅಥವಾ ಕುಸಿದು ಹೋಗುವ ಸಾಮರ್ಥ್ಯ ಹೆಚ್ಚಾಗಿರುತ್ತದೆ. ಆದ್ದರಿಂದ ಕೃಷಿ ಹೊಂಡದ ನಿರ್ವಹಣೆಗೆ ಹೆಚ್ಚಿನ ಗಮನವನ್ನು ಹರಿಸಬೇಕು ಈ ಕೆಳಕಂಡ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳುವುದರಿಂದ ಕೃಷಿ ಹೊಂಡವನ್ನು ಹೆಚ್ಚು ಕಾಲ ಉಳಿಸಿಕೊಳ್ಳಬಹುದು
- ಹೊಂಡಕ್ಕೆ ಮಣ್ಣು ತುಂಬದಂತೆ ನೋಡಿಕೊಳ್ಳಿ
- ಮಳೆಗಾಲದ ಮೊದಲು ಹೊಂಡದ ಸುತ್ತಮುತ್ತ ಸ್ವಚ್ಛಗೊಳಿಸಿ
- ಸೋರಿಕೆ ಕಂಡುಬಂದರೆ ತಕ್ಷಣ ದುರಸ್ತಿ ಮಾಡಿ
- ಪಾಲಿಥೀನ್ ಅಥವಾ ಇತರ ಲೈನಿಂಗ್ ಇದ್ದರೆ ಹಾನಿಯಾಗಿದೆಯೇ ಪರಿಶೀಲಿಸಿ
- ಹೊಂಡದ ಸುತ್ತ ಗಿಡಗಂಟಿಗಳನ್ನು ನಿಯಂತ್ರಿಸಿ
- ಮಕ್ಕಳ ಸುರಕ್ಷತೆಗಾಗಿ ಬೇಲಿ ಮತ್ತು ಎಚ್ಚರಿಕೆ ಫಲಕ ಅಳವಡಿಸಿ
- ನೀರನ್ನು ಅತಿಯಾಗಿ ಬಳಸದೆ ಯೋಜಿತವಾಗಿ ಬಳಸಿ
ಕೃಷಿ ಹೊಂಡದ ನೀರನ್ನು ಪರಿಣಾಮಕಾರಿಯಾಗಿ ಬಳಸುವುದು ಹೇಗೆ?
ಕೇವಲ ಕೃಷಿಹೊಂಡವನ್ನು ನಿರ್ಮಾಣ ಮಾಡುವುದರಿಂದ ಮಾತ್ರ ನೀರಿನ ಸಮಸ್ಯೆಯನ್ನು ಸಂಪೂರ್ಣವಾಗಿ ಪರಿಹಾರ ಮಾಡಲು ಸಾಧ್ಯವಿಲ್ಲ. ಆದರೆ ಸಂಗ್ರಹಿಸಿರುವ ನೀರನ್ನು ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ಬಳಸುವುದು ಸಹ ಮುಖ್ಯವಾಗಿದೆ. ಈ ಕೆಳಕಂಡ ಕ್ರಮಗಳನ್ನು ಅನುಸರಿಸುವುದರಿಂದ Krushi Honda ದ ನೀರನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಬಹುದು
ಡ್ರಿಪ್ ನೀರಾವರಿ
ತೋಟಗಾರಿಕೆ ಮತ್ತು ಸಾಲು ಬೆಳೆಗಳ ಕ್ರಮದಲ್ಲಿ ಬೆಳೆದಿರುವ ಬೆಳೆಗಳಿಗೆ ಡ್ರಿಪ್ ನೀರಾವರಿ ವ್ಯವಸ್ಥೆಯು ಸೂಕ್ತವಾಗಿದೆ. ಸಸ್ಯದ ಬೇರಿನ ಭಾಗಕ್ಕೆ ನೀರು ನೇರವಾಗಿ ಬೀಳುವುದರಿಂದ ನೀರಿನ ವ್ಯರ್ಥತೆ ಕಡಿಮೆಯಾಗುತ್ತದೆ ಮತ್ತು ನೀರನ್ನು ಪರಿಣಾಮಕಾರಿಯಾಗಿ ಬಳಸಬಹುದು
ಸ್ಪ್ರಿಂಕ್ಲರ್ ನೀರಾವರಿ
ಕೆಲವೊಂದು ನಿರ್ದಿಷ್ಟ ಪಡಿಸಿರುವ ಬೆಳೆಗಳಿಗೆ ಸ್ಪ್ರಿಂಕ್ಲರ್ ವ್ಯವಸ್ಥೆಯನ್ನು ಅಳವಡಿಸಬಹುದಾಗಿರುತ್ತದೆ ಈ ವ್ಯವಸ್ಥೆಯು ನೀರನ್ನು ಸಮವಾಗಿ ಹಂಚಲು ಸಹಕರಿಸುವುದರ ಜೊತೆಯಲ್ಲಿ ನೀರು ಹಾಳಾಗದಂತೆ ತಡೆಯುತ್ತದೆ
ಬೆಳೆಯ ಯೋಜನೆ
ಸಂಗ್ರಹಿಸಿರುವ ನೀರಿನ ಲಭ್ಯತೆಯನ್ನು ಆಧರಿಸಿ ಬೆಳೆಯನ್ನು ಆಯ್ಕೆ ಮಾಡಿಕೊಳ್ಳಬೇಕಾಗಿರುತ್ತದೆ ಇದರಿಂದ ಹೆಚ್ಚು ನೀರು ಅಗತ್ಯವಿರುವ ಬೆಳೆಯನ್ನು ಬೆಳೆಯುವ ಬದಲು ನೀರಿನ ಅವಶ್ಯಕತೆ ಮಟ್ಟ ಕಡಿಮೆ ಇರುವ ಬೆಳೆಗಳನ್ನು ಪರಿಣಾಮಕಾರಿಯಾಗಿ ಬೆಳೆಯಬಹುದಾಗಿರುತ್ತದೆ ಬೆಳೆಗಳನ್ನು ಆರಂಭಿಸುವ ಮೊದಲು ನೀರಿನ ಸಂಗ್ರಹಣ ಸಾಮರ್ಥ್ಯವನ್ನು ಪರೀಕ್ಷಿಸಿ ಪರಿಗಣಿಸಬೇಕು
ನೀರಿನ ಬಳಕೆಯ ವೇಳಾಪಟ್ಟಿ
ಯಾವ ಬೆಳೆಗಳಿಗೆ, ಯಾವ ಸಮಯದಲ್ಲಿ, ಎಷ್ಟು ನೀರನ್ನು ಪೂರೈಕೆ ಮಾಡಬೇಕು ಎಂಬುದರ ಸಂಪೂರ್ಣ ಜ್ಞಾನವನ್ನು ಪಡೆದುಕೊಂಡಿರಬೇಕು ಈ ಅಂಶಗಳ ಆಧಾರದ ಮೇಲೆ ನೀರಾವರಿ ವೇಳಾಪಟ್ಟಿಯನ್ನು ರೂಪಿಸಿಕೊಂಡರೆ ನೀರನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು.
ರೈತರ ಮಾಡುವ ಸಾಮಾನ್ಯ ತಪ್ಪುಗಳು
ರೈತರು Krushi Honda ವನ್ನು ನಿರ್ಮಾಣ ಮಾಡುವಾಗ ಈ ಕೆಳಕಂಡ ಸಾಮಾನ್ಯ ತಪ್ಪುಗಳನ್ನು ಮಾಡುತ್ತಾರೆ. ಈ ತಪ್ಪುಗಳು ಕೃಷಿ ಹೊಂಡದ ಉಪಯೋಗ ಮತ್ತು ಸಂಗ್ರಹಣ ಸಾಮರ್ಥ್ಯವನ್ನು ಕುಂಠಿತಗೊಳಿಸುವ ಸಾಧ್ಯತೆಯನ್ನು ಹೊಂದಿರುತ್ತವೆ ಆದ್ದರಿಂದ ಈ ಕೆಳಕಂಡ ಅಂಶಗಳನ್ನು ಗಮನಿಸಿ ಈ ತಪ್ಪುಗಳನ್ನು ಮಾಡಬೇಡಿ.
ತಪ್ಪಾದ ಸ್ಥಳವನ್ನು ಆಯ್ಕೆ ಮಾಡುವುದು
ಮಳೆಯ ನೀರು ಹೆಚ್ಚಾಗಿ ಹರಿದು ಬರದೇ ಇರುವ ಸ್ಥಳದಲ್ಲಿ ಕೃಷಿ ಹೊಂಡವನ್ನು ನಿರ್ಮಿಸಿದರೆ ಮಳೆಗಾಲದಲ್ಲಿಯೂ ಸಹ ಸಾಕಷ್ಟು ಪ್ರಮಾಣದ ನೀರು ಸಂಗ್ರಹವಾಗದೆ ಇರಬಹುದು
“ಕೃಷಿ ಇಲಾಖೆಯ ಅಧಿಕಾರಿಗಳು ಸಾಮಾನ್ಯವಾಗಿ ಕೃಷಿ ಹೊಂಡದ ಸ್ಥಳವನ್ನು ಪರಿಶೀಲಿಸಿದ ನಂತರವೇ ಅನುಮೋದನೆ ನೀಡುತ್ತಾರೆ. ಆದ್ದರಿಂದ ಸ್ಥಳದ ಆಯ್ಕೆಯನ್ನು ತಾಂತ್ರಿಕ ಸಲಹೆಯೊಂದಿಗೆ ಮಾಡುವುದು ಉತ್ತಮ.”
ಅಧಿಕಾರಿಗಳ ಸಲಹೆ ಪಡೆಯದೆ ಇರುವುದು
ಕೃಷಿ ಇಲಾಖೆಯ ತಾಂತ್ರಿಕ ಸಿಬ್ಬಂದಿಗಳ ಸಲಹೆ ಪಡೆಯದೆ ಹೊಂಡದ ಗಾತ್ರ ಮತ್ತು ವಿನ್ಯಾಸವನ್ನು ನಿರ್ಧರಿಸುವುದರಿಂದ ಸಮಸ್ಯೆಗಳು ಎದುರಾಗುತ್ತವೆ. ಹೊಂಡದ ಗಾತ್ರ ಮತ್ತು ವಿನ್ಯಾಸವು ನೀರಿನ ಸಂರಕ್ಷಣಾ ಪ್ರಮಾಣವನ್ನು ನಿರ್ಧರಿಸುವುದರಿಂದ ಅಧಿಕಾರಿಗಳ ಸಲಹೆ ಪಡೆಯುವುದು ಉತ್ತಮವಾಗಿದೆ
ನಿರ್ವಹಣೆಯನ್ನು ನಿರ್ಲಕ್ಷಿಸುವುದು
Krushi Honda ದಲ್ಲಿ ಮಣ್ಣು ಮತ್ತು ಕೆಸರು ತುಂಬಿದರೆ ಅದರ ಸಾಮರ್ಥ್ಯ ಕ್ರಮೇಣ ಕಡಿಮೆಯಾಗುತ್ತದೆ ಆದ್ದರಿಂದ ನಿರ್ವಹಣಾ ಕ್ರಮಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದರ ಮೂಲಕ ಹೊಂಡದಲ್ಲಿ ಯಾವುದೇ ರೀತಿಯ ಮಣ್ಣು ಅಥವಾ ಕೆಸರು ತುಂಬದಂತೆ ನೋಡಿಕೊಳ್ಳಬಹುದು
ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದೆ ಇರುವುದು
ಕೃಷಿ ಹೊಂಡವು ಆಳ ಮತ್ತು ಸುತ್ತಳತೆಯಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಹಿಡಿದಿಟ್ಟುಕೊಳ್ಳುವುದರಿಂದ ಮಕ್ಕಳು, ವೃದ್ದರು ಮತ್ತು ಜಾನುವಾರುಗಳ ಸುರಕ್ಷತೆಯನ್ನು ನಿರ್ಲಕ್ಷಿಸಬಾರದು. ಹೊಂಡದ ಸುತ್ತ ಎಚ್ಚರಿಕೆ ಫಲಕಗಳು ಮತ್ತು ತಂತಿ ಬೇಲಿಗಳನ್ನು ನಿರ್ಮಿಸುವುದರಿಂದ ಅಪಾಯಗಳನ್ನು ತಪ್ಪಿಸಬಹುದು
ಸಾಮಾಜಿಕ ಜಾಲತಾಣಗಳ ಮಾಹಿತಿಯನ್ನು ಸಂಪೂರ್ಣವಾಗಿ ನಂಬುವುದು
ಸಹಾಯಧನದ ಮಾಹಿತಿ, ಸಹಾಯಧನದ ಮೊತ್ತ, ಅರ್ಜಿ ಸಲ್ಲಿಕೆ ದಿನಾಂಕ ಅಥವಾ ಅರ್ಹತೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ತಪ್ಪು ಮಾಹಿತಿಗಳನ್ನು ನಂಬಬಾರದು. ಇದರ ಬದಲಾಗಿ ಅಧಿಕೃತ ಇಲಾಖೆ ಮಾಹಿತಿಯನ್ನು ಅಥವಾ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸುವ ಮೂಲಕ ಮಾಹಿತಿಯನ್ನು ಪಡೆದು ಕ್ರಮವಾಗಿ ಅರ್ಜಿಯನ್ನು ಸಲ್ಲಿಸಿ ಯೋಜನೆಯ ಪ್ರಯೋಜನವನ್ನು ಪಡೆಯಬೇಕು.
Krushi Honda ಸಹಾಯಧನ ಪಡೆಯುವ ರೈತರಿಗೆ ಉಪಯುಕ್ತ ಸಲಹೆಗಳು
- ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಯೋಜನೆಯ ಪ್ರಸ್ತುತ ವರ್ಷದ ಮಾರ್ಗಸೂಚಿಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಳ್ಳಿ
- ನಿಮಗೆ ಸಂಬಂಧಿಸಿದ ತಾಲ್ಲೂಕು ಕೃಷಿ ಇಲಾಖೆ ಅಥವಾ ರೈತ ಸಂಪರ್ಕ ಕೇಂದ್ರದಲ್ಲಿ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಿ
- ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಮತ್ತು ಅವುಗಳ ಮಾಹಿತಿಯನ್ನು ಮುಂಚಿತವಾಗಿ ಪರಿಶೀಲಿಸಿ ಸಿದ್ಧಪಡಿಸಿ
- ಬ್ಯಾಂಕ್ ಖಾತೆ ವಿವರಗಳು ಸರಿಯಾಗಿವೆ ಎನ್ಪಿಸಿಐ ಡಿಬಿಟಿ ಲಿಂಕ್ ಆಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ
- ಅರ್ಜಿ ಸಲ್ಲಿಸಿದ ನಂತರ ಸ್ವೀಕೃತಿ ಸಂಖ್ಯೆಯನ್ನು ಮತ್ತು ಪ್ರತಿಯನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಿ
- ಅರ್ಜಿ ಸ್ಥಿತಿಯನ್ನು ಅಧಿಕೃತ ಕಚೇರಿಗೆ ಭೇಟಿ ನೀಡುವ ಮೂಲಕ ನಿಯಮಿತವಾಗಿ ಪರಿಶೀಲಿಸಿಕೊಳ್ಳಿ
- ಯೋಜನೆಯ ಅನುಮೋದನಾ ಪ್ರಕ್ರಿಯೆಯಲ್ಲಿ ಯಾವುದೇ ಅನಧಿಕೃತ ವ್ಯಕ್ತಿಗಳಿಗೆ ಹಣವನ್ನು ನೀಡಬೇಡಿ
- ಕೃಷಿ ಹೊಂಡದ ಗಾತ್ರ ಮತ್ತು ಸುತ್ತಳತೆಯನ್ನು ಅಧಿಕಾರಿಗಳ ಮತ್ತು ತಾಂತ್ರಿಕ ಸಿಬ್ಬಂದಿಗಳ ಸಲಹೆಯಂತೆ ನಿರ್ಧರಿಸಿ ನಿರ್ಮಾಣ ಮಾಡಲು ಕಾಮಗಾರಿ ಪ್ರಾರಂಭಿಸಿ
- ನೀರಿನ ಸಂಗ್ರಹಣೆಯ ಜೊತೆ ಸೂಕ್ಷ್ಮ ನೀರಾವರಿ ವ್ಯವಸ್ಥೆಯನ್ನು ಸಹ ಪರಿಗಣಿಸಿ
- ಕೃಷಿ ಹೊಂಡದ ಸುತ್ತ ಕಡ್ಡಾಯವಾಗಿ ಎಚ್ಚರಿಕೆ ಫಲಕ ಮತ್ತು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಿ
80,000 ರೂಗಳ ಸಹಾಯಧನ, ರೈತರು ಗಮನ ಹರಿಸಬೇಕಾದ ಪ್ರಮುಖ ಸೂಚನೆ
ಸಾಮಾಜಿಕ ಜಾಲತಾಣಗಳಲ್ಲಿ Krushi Honda ನಿರ್ಮಾಣಕ್ಕೆ 80,000 ಗಳ ಸಹಾಯಧನ ಎಂಬ ಮಾಹಿತಿ ಹರಿದಾಡುತ್ತಿದ್ದರೂ ಪ್ರತಿ ರೈತರಿಗೂ ಒಂದೇ ರೀತಿಯ ನಿಗದಿತ ಮೊತ್ತದ ಸಹಾಯಧನವು ಸಿಗುವುದಿಲ್ಲ. ಸಹಾಯಧನದ ಮೊತ್ತವು ಈ ಕೆಳಕಂಡ ಅಂಶಗಳನ್ನು ಆಧರಿಸಿದೆ ಅವುಗಳೆಂದರೆ
- ಯೋಜನೆಯ ಪ್ರಸ್ತುತ ಮಾರ್ಗಸೂಚಿ
- ಸರ್ಕಾರದ ಆ ವರ್ಷದ ಅನುದಾನ
- ಕೃಷಿ ಹೊಂಡದ ಗಾತ್ರ
- ನಿರ್ಮಾಣ ವೆಚ್ಚ
- ರೈತರ ವರ್ಗ
- ಜಿಲ್ಲೆ ಅಥವಾ ತಾಲೂಕುವಾರು ಗುರಿ
- ಪಾಲಿಥೀನ್ ಲೈನಿಂಗ್ ಅಥವಾ ಇತರ ಘಟಕಗಳ ಸೇರ್ಪಡೆ
- ಇಲಾಖೆಯ ಅನುಮೋದನೆ
ಹೀಗಾಗಿ ರೈತರು 80,000 ರೂಗಳ ಖಚಿತ ಸಹಾಯಧನ ಎಂದು ಭಾವಿಸಿ, ಯಾವುದೇ ಖಾಸಗಿ ವ್ಯಕ್ತಿ ಅಥವಾ ಮಧ್ಯವರ್ತಿಗಳಿಗೆ ಹಣವನ್ನು ನೀಡಬಾರದು ಅಥವಾ ಅನಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿಯನ್ನು ಸಲ್ಲಿಸಬಾರದು
ಕೃಷಿ ಹೊಂಡ ಯೋಜನೆಯಿಂದ ರೈತರ ಭವಿಷ್ಯಕ್ಕೆ ಪ್ರಯೋಜನಗಳು ಏನು
ಕೃಷಿ ಹೊಂಡವು ಕೇವಲ ನೀರನ್ನು ಸಂಗ್ರಹಿಸುವ ಗುಂಡಿಯಾಗಿರದೆ, ಇದು ರೈತರ ಕೃಷಿ ವ್ಯವಸ್ಥೆಯನ್ನು ಸ್ಥಿರಗೊಳಿಸುವ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಲು ಇರುವ ಮೂಲಸೌಕರ್ಯವಾಗಿದೆ.
ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸುರಿಯುವ ನೀರನ್ನು ಸಂಗ್ರಹಿಸಿ ಅಗತ್ಯವಿದ್ದಾಗ ಬೆಳೆಗಳಿಗೆ ಬಳಸುವ ಮೂಲಕ ರೈತರು ನೀರಿನಲ್ಲಿ ನಿರ್ವಹಣೆಯನ್ನು ಉತ್ತಮಗೊಳಿಸಿ ಪರಿಣಾಮಕಾರಿಯಾಗಿ ಬಳಸಬಹುದು ವಿಶೇಷವಾಗಿ ಮಳೆಯನ್ನು ಆಧರಿಸಿ ಕೃಷಿಯನ್ನು ಕೈಗೊಳ್ಳುವ ಪ್ರದೇಶಗಳಲ್ಲಿ ಕೃಷಿ ಹೊಂಡವು ಬೆಳೆಗಳ ರಕ್ಷಣೆಗೆ ಸಹಕಾರಿಯಾಗಲಿದೆ.
ನೀರಿನ ಲಭ್ಯತೆಯು ಹೆಚ್ಚಾದರೆ ರೈತರು ಬೆಳೆ ವೈವಿಧ್ಯೀಕರಣವನ್ನು ಮಾಡಬಹುದಾಗಿರುತ್ತದೆ ದೀರ್ಘಾವಧಿ ಧಾನ್ಯಗಳ ಜೊತೆಗೆ ತರಕಾರಿ ತೋಟಗಾರಿಕೆ ಬೆಳೆಗಳು ಮತ್ತು ಇತರ ರೀತಿಯ ಆದಾಯ ಹೆಚ್ಚಿಸುವಂತಹ ಬೆಳೆಗಳನ್ನು ಬೆಳೆದು ಆದಾಯವನ್ನು ಹೆಚ್ಚಿಸಿಕೊಳ್ಳಬಹುದಾಗಿರುತ್ತದೆ
ಇದರ ಜೊತೆಯಲ್ಲಿ ಡ್ರಿಪ್ ನೀರಾವರಿ ವ್ಯವಸ್ಥೆ, ಸ್ಪ್ರಿಂಕ್ಲರ್ ಅಳವಡಿಕೆ, ಮಣ್ಣಿನ ತೇವಾಂಶ ಸಂರಕ್ಷಣೆ ಮತ್ತು ಉತ್ತಮ ರೀತಿಯ ಬೆಳೆ ನಿರ್ವಹಣಾ ಪದ್ಧತಿಗಳನ್ನು ಅಳವಡಿಸಿಕೊಂಡು ಕೃಷಿ ಚಟುವಟಿಕೆಗಳನ್ನು ಕೈಗೊಂಡರೆ ಕೃಷಿ ಪದ್ಧತಿಯು ಹೆಚ್ಚು ಲಾಭದಾಯಕವಾಗಿರುತ್ತದೆ
ಅಧಿಕೃತ ಲಿಂಕ್ ಗಳು
Published: 21 Juy 2026
Last Updated And Verified By Author: 21 July 2026
Reviewed By: Ranganatha B G (Author)
| ಕರ್ನಾಟಕ ಸರ್ಕಾರದ ಅಧಿಕೃತ ವೆಬ್ ಸೈಟ್ | https://karnataka.gov.in/english |
| ಕರ್ನಾಟಕ ಕೃಷಿ ಇಲಾಖೆಯ ಅಧಿಕೃತ ವೆಬ್ ಸೈಟ್ | https://raitamitra.karnataka.gov.in/ |
| ಕೃಷಿ ಸಾಲ- ಸಹಕಾರ ಸಿಂಧು ಪೋರ್ಟಲ್ | https://sahakarasindhu.karnataka.gov.in/ |
| ನಮ್ಮ ವಾಟ್ಸಪ್ ಗುಂಪನ್ನು ಸೇರಲು | ಇಲ್ಲಿ ಕ್ಲಿಕ್ ಮಾಡಿ |
| ಹೆಚ್ಚುವರಿ ಮಾಹಿತಿಗಾಗಿ ಈ ಮುಂದಿನ ಲಿಂಕ್ ಗಳನ್ನು ಅನುಸರಿಸಿ |
FAQ’s- ಪದೇ ಪದೇ ಕೇಳಲಾಗುವ ಪ್ರಶ್ನೋತ್ತರಗಳು
1. ಕೇವಲ ಕರ್ನಾಟಕ ರಾಜ್ಯದ ರೈತರು ಮಾತ್ರ ಅರ್ಜಿ ಸಲ್ಲಿಕೆಗೆ ಅರ್ಹರೇ?
ಉತ್ತರ: ಹೌದು, ಈ Krushi Honda ನಿರ್ಮಾಣ ಯೋಜನೆಯು ಕರ್ನಾಟಕ ಸರ್ಕಾರದ ರೈತ ಸ್ನೇಹಿ ಯೋಜನೆಯಾಗಿದ್ದು ಕರ್ನಾಟಕದ ರೈತರು ಮಾತ್ರ ಅರ್ಜಿ ಸಲ್ಲಿಸಬಹುದು
2. ಈ Krushi Honda ಯೋಜನೆಗೆ ಅರ್ಜಿ ಸಲ್ಲಿಸಲು ಸ್ವಂತ ಜಮೀನು ಹೊಂದುವುದು ಕಡ್ಡಾಯವೇ?
ಉತ್ತರ: ಹೌದು, ಈ ಯಜನೆಗೆ ಅರ್ಜಿ ಸಲ್ಲಿಸಲು ಸ್ವಂತ ಜಮೀನು ಹೊಂದುವುದು ಕಡ್ಡಾಯವಾಗಿದೆ.
3. ಯೋಜನೆಗೆ ಅರ್ಜಿ ಸಲ್ಲಿಸಿದ ಎಲ್ಲರಿಗೂ 80,000 ರೂಗಳ ಸಹಾಯಧನ ದೊರೆಯುತ್ತದೆಯೇ?
ಉತ್ತರ: ಇಲ್ಲ, ಸಹಾಯಧನ ಮೊತ್ತವು ಕಾಮಗಾರಿ ವೆಚ್ಚ, ಹೊಂಡದ ಸುತ್ತಳತೆ, ಪ್ರದೇಶದ ಆಧಾರದ ಮೇಲೆ ನಿರ್ಧರಿತವಾಗುತ್ತದೆ.
4. ಈ Krushi Honda ಯೋಜನೆಯ ಅನುಮೋದನೆಗೆ ಯಾರಿಗಾದರೂ, ಯಾವುದಾದರೂ ಹಣ ನೀಡಬೇಕೇ?
ಉತ್ತರ: ಇಲ್ಲ, ಇದು ಸಂಪೂರ್ಣ ಸರ್ಕಾರಿ ಯೋಜನೆಯಾಗಿದ್ದು ಯಾರಿಗೂ ಯಾವುದೇ ಹಣವನ್ನು ನೀಡುವ ಅವಶ್ಯಕತೆ ಇರುವುದಿಲ್ಲ.
5. Krushi Honda ದ ಸಹಾಯಧನದ ಮೊತ್ತವನ್ನು ಚೆಕ್ ಮೂಲಕ ಪಡೆಯಬಹುದೇ?
ಉತ್ತರ: ಇಲ್ಲ, ಈ ಯೋಜನೆಯು ಸಂಪೂರ್ಣವಾಗಿ ಆನ್ ಲೈನ್ ಪ್ರಕ್ರಿಯೆಯಾಗಿದ್ದು ಸಹಾಯಧನದ ಮೊತ್ತವನ್ನು ರೈತರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಜಮೆ ಮಾಡಲಾಗುತ್ತದೆ.
ಕೊನೆಯ ಮಾತು
ಕರ್ನಾಟಕದಲ್ಲಿ ಮಳೆ ನೀರಿನ ಸಂರಕ್ಷಣೆಯು ಮತ್ತು ಕೃಷಿ ನೀರಾವರಿ ಸುಧಾರಣೆಗೆ ಕೃಷಿ ಹೊಂಡಗಳು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿವೆ. ಮಳೆಗಾಲದಲ್ಲಿ ವ್ಯರ್ಥವಾಗಿ ಹರಿದು ಬರುವ ನೀರನ್ನು ಒಂದು ವ್ಯವಸ್ಥಿತ ಹೊಂಡದಲ್ಲಿ ಸಂಗ್ರಹಿಸಿ ಮಳೆ ಪ್ರಮಾಣ ಕಡಿಮೆಯಾದಾಗ ಅಥವಾ ಮಳೆ ಬಾರದಿದ್ದಾಗ ಬೆಳೆಗಳಿಗೆ ಈ ನೀರನ್ನು ಬಳಸುವುದರಿಂದ ರೈತರು ನೀರಿನ ಕೊರತೆಯನ್ನು ನಿರ್ವಹಿಸಲು ಸಾಧ್ಯವಾಗುತ್ತದೆ.
Krushi Honda ವನ್ನು ಡ್ರಿಪ್ ಅಳವಡಿಕೆ ಮತ್ತು ಸ್ಪ್ರಿಂಕ್ಲರ್ ಗಳಂತಹ ನೀರು ಉಳಿತಾಯ ವ್ಯವಸ್ಥೆಗಳೊಂದಿಗೆ ಬಳಸಿದರೆ ಇದರ ಪ್ರಯೋಜನವು ಇನ್ನಷ್ಟು ಹೆಚ್ಚಾಗಲಿದೆ. ತೋಟಗಾರಿಕೆ, ಪಶುಸಂಗೋಪನೆ ಮತ್ತು ಇನ್ನಿತರ ಸಂದರ್ಭದಲ್ಲಿ ಮೀನುಗಾರಿಕೆಯಂತಹ ಹೆಚ್ಚುವರಿ ಚಟುವಟಿಕೆಗಳು ಸಹ ಇದು ಸಹಕಾರಿಯಾಗಲಿದೆ. ಆದರೆ ಮೀನುಗಾರಿಕೆಯನ್ನು ಆರಂಭಿಸಲು ಕೃಷಿ ಇಲಾಖೆ ಅಧಿಕಾರಿಗಳ ಮಾರ್ಗದರ್ಶನ ಮತ್ತು ಒಪ್ಪಿಗೆ ಕಡ್ಡಾಯ
ಆದರೆ ರೈತರು ಸಹಾಯಧನದ ಮೊತ್ತ ಮತ್ತು ಅರ್ಹತೆಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮಾಹಿತಿಯನ್ನು ಯಾವುದೇ ಕಾರಣಕ್ಕೂ ನಂಬಬಾರದು. 80,000 ರೂಗಳ ವರೆಗೆ ಸಹಾಯಧನ ಎಂಬ ಮಾಹಿತಿಯು ಯೋಜನೆಯ ಪ್ರಸ್ತುತ ವರ್ಷದ ನಿಯಮಗಳಿಗೆ ಒಳಪಟ್ಟಿರುತ್ತದೆ. ಆದ್ದರಿಂದ ಅರ್ಜಿ ಸಲ್ಲಿಸುವ ಮೊದಲು ರೈತರು ರೈತ ಸಂಪರ್ಕ ಕೇಂದ್ರ ತಾಲ್ಲೂಕು ಕೃಷಿ ಇಲಾಖೆ ಅಥವಾ ಜಿಲ್ಲಾ ಕೃಷಿ ಇಲಾಖೆಗೆ ಭೇಟಿ ನೀಡಿ ಸರ್ಕಾರಿ ಮೂಲಗಳಿಂದ ಮಾತ್ರ ನಿಖರ ಮಾಹಿತಿಯನ್ನು ಪಡೆದು ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ
ಮಳೆ ನೀರನ್ನು ಸಂರಕ್ಷಣೆ ಮಾಡುವುದು ರೈತರ ಅಗತ್ಯ ಮಾತ್ರವಲ್ಲದೆ ಕೃಷಿಯ ಚಟುವಟಿಕೆಗಳ ಭವಿಷ್ಯವನ್ನು ರಕ್ಷಿಸುವ ಪ್ರಮುಖ ಹೆಜ್ಜೆಯಾಗಿದೆ. ಸರಿಯಾದ ಯೋಜನೆ ಮಾಡುವುದು, ತಾಂತ್ರಿಕ ಸಲಹೆಗಳನ್ನು ಪಡೆಯುವುದು ಮತ್ತು ಸರಕಾರದ ಸಹಾಯಧನವನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಂಡರೆ Krushi Honda ನಿರ್ಮಾಣ ಯೋಜನೆಯು ರೈತರ ಬೆಳೆ ಉತ್ಪಾದನೆ ಮತ್ತು ಆದಾಯವನ್ನು ಸುಧಾರಿಸಲು ಸಹಾಯ ಮಾಡುವ ಪ್ರಮುಖ ಸಂಪನ್ಮೂಲಗಳಾಗಿವೆ
Krushi Honda ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ಅರ್ಹತಾ ಷರತ್ತುಗಳನ್ನು ಓದಿ ಅರ್ಥ ಮಾಡಿಕೊಂಡು ಅಗತ್ಯ ದಾಖಲಾತಿಗಳನ್ನು ಸಿದ್ಧಪಡಿಸಿ ಯಾವುದೇ ಮಧ್ಯವರ್ತಿಗಳ ಮಾತನ್ನು ನಂಬದೇ ತಾವೇ ಖುದ್ದಾಗಿ ಸರ್ಕಾರಿ ಕಚೇರಿಗಳಿಗೆ ಹೋಗಿ ಅರ್ಜಿ ಸಲ್ಲಿಸುವುದು ಉತ್ತಮವಾಗಿದೆ. ಅರ್ಜಿಯನ್ನು ಸಲ್ಲಿಸಿದ ನಂತರ ಸ್ವೀಕೃತಿ ಪ್ರತಿಯನ್ನು ಪಡೆದು ನಿಯಮಿತವಾಗಿ ಅರ್ಜಿ ಸ್ಥಿತಿಯನ್ನು ಪರಿಶೀಲಿಸಿ ಅಧಿಕಾರಿಗಳು ಪರಿಶೀಲನೆಗೆ ಬಂದಾಗ ಅವರಿಗೆ ಉತ್ತಮ ರೀತಿಯಲ್ಲಿ ಸಹಕರಿಸಿ ಅನುಮೋದನಾ ಪ್ರಕ್ರಿಯೆಗೆ ಅವರಿಗೆ ಅಗತ್ಯ ಮಾಹಿತಿಯನ್ನು ನೀಡಬೇಕಾಗುತ್ತದೆ. ಯೋಜನೆಯ ಅನುಮೋದನೆ ಪೂರ್ಣಗೊಂಡ ನಂತರ ನಿರ್ಮಾಣ ಪ್ರಕ್ರಿಯೆಯನ್ನು ಪ್ರಾರಂಭಿಸಿ ಸಂಬಂಧಪಟ್ಟ ಸಹಾಯಧನದ ಮೊತ್ತವನ್ನು ಪಡೆಯುವಲ್ಲಿ ನೀವು ಯಶಸ್ವಿಯಾಗಬಹುದು.
Related Information: Schemes
| PMFBY Crop Insurance 2026 |
Author Note: ಈ ಲೇಖನದಲ್ಲಿ ಕರ್ನಾಟಕ ಸರ್ಕಾರದ Krushi Honda ನಿರ್ಮಾಣ ಸಹಾಯಧನ ಯೋಜನೆಗೆ ಸಂಬಂಧಿಸಿದ ಅರ್ಹತೆ, ಪ್ರಯೋಜನಗಳು, ಅಗತ್ಯ ದಾಖಲೆಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ಸರಳವಾಗಿ ವಿವರಿಸಲಾಗಿದೆ. ಸಹಾಯಧನದ ಮೊತ್ತ ಮತ್ತು ನಿಯಮಗಳು ಬದಲಾಗಬಹುದಾದ್ದರಿಂದ ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಇಲಾಖೆಯಿಂದ ಮಾಹಿತಿ ಪರಿಶೀಲಿಸಿ.
***
About Author: ರಂಗನಾಥ ಬಿ ಜಿ ರವರು ಅರ್ಥಶಾಸ್ತ್ರ ವಿಭಾಗದಲ್ಲಿ ಎಂ ಎ ಪದವಿಯನ್ನು ಹೊಂದಿದ್ದು, ಕಳೆದ 3 ವರ್ಷಗಳಿಂದ, ಸರ್ಕಾರಿ ಯೋಜನೆಗಳು, ಕೃಷಿ, ಶಿಕ್ಷಣ, ಉದ್ಯೋಗ ಹಾಗೂ ಸಾರ್ವಜನಿಕ ಸೇವೆಗಳ ಮಾಹಿತಿಯನ್ನು ವಿಶ್ವಾಸಾರ್ಹ ಮೂಲಗಳಿಂದ ಸಂಗ್ರಹಿಸಿ ಸರಳ ಕನ್ನಡದಲ್ಲಿ ಪ್ರಕಟಿಸುತ್ತಿದ್ದಾರೆ. ಓದುಗರಿಗೆ ನಿಖರ, ನವೀಕೃತ ಹಾಗೂ ಉಪಯುಕ್ತ ಮಾಹಿತಿಯನ್ನು ತಲುಪಿಸುವುದು ಲೇಖಕರ ಪ್ರಮುಖ ಧ್ಯೇಯವಾಗಿದೆ.
***
Disclaimer: ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ ಪ್ರಕಟಿಸಲಾಗಿದೆ. ಸಹಾಯಧನದ ಮೊತ್ತ, ಅರ್ಹತೆ, ದಾಖಲೆಗಳು ಮತ್ತು ಅರ್ಜಿ ವಿಧಾನವು ಸರ್ಕಾರದ ನಿಯಮಗಳ ಪ್ರಕಾರ ಬದಲಾಗಬಹುದು. ಅರ್ಜಿ ಸಲ್ಲಿಸುವ ಮೊದಲು ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರ ಅಥವಾ ಅಧಿಕೃತ ಸರ್ಕಾರಿ ಮೂಲಗಳಿಂದ ನಿಖರ ಮಾಹಿತಿಯನ್ನು ಪರಿಶೀಲಿಸಿ.