ಕರ್ನಾಟಕ Forest Department ನಲ್ಲಿ ಅರಣ್ಯ ವೀಕ್ಷಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ರಾಜ್ಯದ ಉದ್ಯೋಗ ಆಕಾಂಕ್ಷಿಗಳಿಗೆ ಮತ್ತೊಂದು ಸುವರ್ಣ ಅವಕಾಶ ದೊರೆತಿದೆ. ಕರ್ನಾಟಕ ರಾಜ್ಯದ ಅರಣ್ಯ ಸಂಪತ್ತಿನ ಸಂರಕ್ಷಣೆ ಹಾಗೂ ವನ್ಯಜೀವಿಗಳ ಸಂರಕ್ಷಣೆಯನ್ನು ಮತ್ತಷ್ಟು ಬಲಪಡಿಸುವ ಮಹತ್ವವಾದ ಉದ್ದೇಶವನ್ನು ಹೊಂದಿರುವ ಕರ್ನಾಟಕ ಸರ್ಕಾರವು ಇದೀಗ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಯಲ್ಲಿ ಖಾಲಿ ಇರುವ ಒಟ್ಟು 775 ಅರಣ್ಯ ವೀಕ್ಷಕ ಹುದ್ದೆಗಳ ಭರ್ತಿಗೆ ಅಧಿಕೃತ ನೇಮಕಾತಿ ಸೂಚನೆಯನ್ನು ಹೊರಡಿಸಿದೆ. ಸರ್ಕಾರಿ ಉದ್ಯೋಗವನ್ನು ಪಡೆಯಲು ಕನಸು ಕಾಣುತ್ತಿರುವ ಹಾಗೂ ಪರಿಸರ ಸಂರಕ್ಷಣೆಯ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ
ಈ ನೇಮಕಾತಿಯ ವಿಶೇಷವೇನೆಂದರೆ ಎಸ್ ಎಲ್ ಎಲ್ ಸಿ ಅಂದರೆ ಹತ್ತನೇ ತರಗತಿಯನ್ನು ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ಸಹ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ಈ ಉದ್ಯೋಗಗಳಲ್ಲಿ ಉತ್ತಮ ವೇತನ, ಉದ್ಯೋಗ ಭದ್ರತೆ, ಸರಕಾರಿ ಸೌಲಭ್ಯಗಳು ಹಾಗೂ ರಾಜ್ಯದ ಅರಣ್ಯ ಸಂಪತ್ತಿನ ರಕ್ಷಣೆಯಲ್ಲಿ ನೇರವಾಗಿ ಭಾಗಿಯಾಗುವ ಅವಕಾಶ ದೊರೆಯುತ್ತದೆ
ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿದ್ದು ಅರ್ಜಿ ಸಲ್ಲಿಸುವ ಮುನ್ನ ಹುದ್ದೆಗಳಿಗೆ ಹೊರಡಿಸಲಾಗಿರುವ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದುವುದು ಪ್ರಮುಖವಾಗಿದೆ
ಈ ಲೇಖನದಲ್ಲಿ ಹುದ್ದೆಗಳ ವಿವರ, ಅರ್ಹತೆ, ವಯೋಮಿತಿ, ವೇತನ ಶ್ರೇಣಿ, ಆಯ್ಕೆ ವಿಧಾನ, ಅರ್ಜಿ ಸಲ್ಲಿಸುವ ವಿಧಾನ, ಪರೀಕ್ಷಾ ಸಿಲಬಸ್, ಪ್ರಮುಖ ಸಲಹೆಗಳು, ಅರ್ಜಿ ಸಲ್ಲಿಸುವಾಗ ಆಗುವ ಸಾಮಾನ್ಯ ತಪ್ಪುಗಳು, ಪ್ರಶ್ನೋತ್ತರಗಳು ಹಾಗೂ ಪ್ರಮುಖ ದಿನಾಂಕಗಳು ಸೇರಿದಂತೆ ಎಲ್ಲಾ ಮಾಹಿತಿಯನ್ನು ವಿವರವಾಗಿ ತಿಳಿಸಲಾಗಿದೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ನಂತರ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು Forest Department ನೇಮಕಾತಿಯ ಅಧಿಕೃತ ಅಧಿಸೂಚನೆಯನ್ನು ಕಡ್ಡಾಯವಾಗಿ ಓದಿ. |
Forest Department ನೇಮಕಾತಿ ಮುಖ್ಯಾಂಶಗಳು
| ವಿವರ | ಮಾಹಿತಿ |
|---|---|
| ನೇಮಕಾತಿ ಸಂಸ್ಥೆ | ಕರ್ನಾಟಕ ರಾಜ್ಯ ಅರಣ್ಯ ಇಲಾಖೆ |
| ಹುದ್ದೆಯ ಹೆಸರು | ಅರಣ್ಯ ವೀಕ್ಷಕ (Forest Watcher) |
| ಒಟ್ಟು ಹುದ್ದೆಗಳು | 775 ಹುದ್ದೆಗಳು |
| ಹೊಸ ಹುದ್ದೆಗಳು | 750 ಹುದ್ದೆಗಳು |
| ಹಿಂಬಾಕಿ ಹುದ್ದೆಗಳು | 25 ಹುದ್ದೆಗಳು |
| ಉದ್ಯೋಗ ಸ್ಥಳ | ಕರ್ನಾಟಕದ ವಿವಿಧ ಅರಣ್ಯ ವೃತ್ತಗಳು |
| ಅರ್ಜಿ ವಿಧಾನ | ಸಂಪೂರ್ಣ ಆನ್ಲೈನ್ ವಿಧಾನ |
| ವಿದ್ಯಾರ್ಹತೆ | ಎಸ್ ಎಲ್ ಎಲ್ ಸಿ / ತತ್ಸಮಾನ |
| ಆಯ್ಕೆ ವಿಧಾನ | ಎಸ್ಎಸ್ಎಲ್ಸಿ ಅಂಕಗಳು + ದೈಹಿಕ ಪರೀಕ್ಷೆಗಳು + ದಾಖಲೆ ಪರಿಶೀಲನೆ |
Forest Department ಹುದ್ದೆಗಳ ಸಂಪೂರ್ಣ ವಿವರ
ಈ Forest Department ನೇಮಕಾತಿ ಮೂಲಕ ಒಟ್ಟು 775 ಅರಣ್ಯ ವೀಕ್ಷಕ ಹುದ್ದೆಗಳನ್ನು ವಿವಿಧ ಮೀಸಲಾತಿ ವರ್ಗಗಳ ಅಡಿಯಲ್ಲಿ ಹಂಚಿಕೆ ಮಾಡಲಾಗಿದ್ದು ವೃಂದವಾರು ಹುದ್ದೆಗಳ ಹಂಚಿಕೆ ಈ ಕೆಳಕಂಡಂತಿದೆ
ಹುದ್ದೆಗಳ ವಿಭಾಗವಾರು ಹಂಚಿಕೆ
ಉಳಿಕೆ ಮೂಲ ವೃಂದದ ಹುದ್ದೆಗಳು: 700
ಕಲ್ಯಾಣ ಕರ್ನಾಟಕ ಪ್ರದೇಶದ ಹುದ್ದೆಗಳು: 50
ಹಿಂದಿನ ನೇಮಕಾತಿಯಲ್ಲಿ ಭರ್ತಿಯಾಗದೆ ಉಳಿದ ಹಿಂಬಾಕಿ ಹುದ್ದೆಗಳು: 25
ಈ ಮೇಲಿನ Forest Department ಹುದ್ದೆಗಳು ಕರ್ನಾಟಕದ ವಿವಿಧ ಅರಣ್ಯ ವಲಯಗಳಲ್ಲಿ ಭರ್ತಿ ಮಾಡಲಾಗುತ್ತಿದ್ದು ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕ ರಾಜ್ಯದಾದ್ಯಂತ ವಿವಿಧ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಅವಕಾಶ ಸಿಗುತ್ತದೆ
Forest Department ನ ಅರಣ್ಯ ವೀಕ್ಷಕ ಹುದ್ದೆಯ ಕೆಲಸ ಏನು?
ಅರಣ್ಯ ವೀಕ್ಷಕ ಹುದ್ದೆಯು ಕೇವಲ ಸರ್ಕಾರಿ ಉದ್ಯೋಗವಷ್ಟೇ ಆಗಿರದೆ ಪ್ರಕೃತಿಯ ರಕ್ಷಣೆಗೆ ಸಂಬಂಧಿಸಿದ ಜವಾಬ್ದಾರಿಯುತ ಮತ್ತು ಕರ್ತವ್ಯಯುತ ಹುದ್ದೆಯಾಗಿದೆ
ಅರಣ್ಯ ವೀಕ್ಷಕರ ಪ್ರಮುಖ ಕರ್ತವ್ಯಗಳು
- ಅರಣ್ಯ ಪ್ರದೇಶಗಳ ಉತ್ತಮ ಮೇಲ್ವಿಚಾರಣೆ ಮಾಡುವುದು
- ಅಕ್ರಮವಾಗಿ ಮರಗಳನ್ನು ಕಡಿಯುವುದನ್ನು ತಡೆಯುವುದು
- ಅರಣ್ಯಕ್ಕೆ ಬೆಂಕಿಯನ್ನು ನಿಯಂತ್ರಿಸಲು ಸಹಕರಿಸುವುದು
- ವನ್ಯಜೀವಿಗಳ ಸಂರಕ್ಷಣೆಯಲ್ಲಿ ಪಾಲ್ಗೊಳ್ಳುವುದು
- ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಸೂಚನೆಯಂತೆ ಕಾರ್ಯ ನಿರ್ವಹಣೆ ಮಾಡುವುದು
- ಅಕ್ರಮ ಪ್ರಾಣಿ ಮತ್ತು ಪಕ್ಷಿ ಬೇಟೆಗಳನ್ನು ತಡೆಯಲು ಅಧಿಕಾರಿಗಳಿಗೆ ನೆರವು ನೀಡುವುದು
- ಅರಣ್ಯ ಗಸ್ತು ಕಾರ್ಯಗಳಲ್ಲಿ ಸಮರ್ಪಕವಾಗಿ ಭಾಗವಹಿಸುವುದು
- ಅರಣ್ಯ ಸಂಪತ್ತಿನ ಸಂರಕ್ಷಣೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಅರಣ್ಯ ಸಂಪತ್ತನ್ನು ಕಾಪಾಡುವುದು
ಈ Forest Department ಅರಣ್ಯ ವೀಕ್ಷಕ ಹುದ್ದೆಗಳಲ್ಲಿ ಕೆಲಸ ಮಾಡುವವರಿಗೆ ಪ್ರಕೃತಿಯ ಮಧ್ಯೆ ಕಾರ್ಯ ನಿರ್ವಹಿಸುವ ಅಪರೂಪದ ಅನುಭವದ ಜೊತೆಯಲ್ಲಿ ಉತ್ತಮ ವಾತಾವರಣ ಸಿಗುತ್ತದೆ
Forest Department ನೇಮಕಾತಿಗೆ ಇರಬೇಕಾದ ವಿದ್ಯಾರ್ಹತೆ
ಈ Forest Department ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಕಡ್ಡಾಯವಾಗಿ ಈ ಕೆಳಕಂಡ ಅರ್ಹತೆಯನ್ನು ಹೊಂದಿರಬೇಕಾಗುತ್ತದೆ
- ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್ ಎಲ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು
- ಎಸ್ ಎಲ್ ಎಲ್ ಸಿ ಗೆ ಸಮಾನವಾದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು
ತತ್ಸಮಾನ ವಿದ್ಯಾರ್ಹತೆಯ ಮಾಹಿತಿ
- ಸಿಬಿಎಸ್ಇ ಮಂಡಳಿ ನಡೆಸುವ ಹತ್ತನೇ ತರಗತಿ ಪರೀಕ್ಷೆ
- ಐಸಿಎಸ್ಇ ಮಂಡಳಿ ನಡೆಸುವ 10ನೇ ತರಗತಿ ಪರೀಕ್ಷೆ
- ಇತರೆ ರಾಜ್ಯಗಳ 10ನೇ ತರಗತಿ ಪರೀಕ್ಷೆಗಳು
- ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ಸಂಸ್ಥೆ ನಡೆಸುವ ಪ್ರೌಢ ಶಿಕ್ಷಣ ಮಟ್ಟದ ಪರೀಕ್ಷೆ
ಪ್ರಮುಖ ಸೂಚನೆ : ಅಭ್ಯರ್ಥಿಗಳು Forest Department ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗೆ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡು ಅಂಕಪಟ್ಟಿಯನ್ನು ಪಡೆದಿರಬೇಕಾಗುತ್ತದೆ. ಪರೀಕ್ಷೆಯನ್ನು ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹತೆ ಇರುವುದಿಲ್ಲ.
ವಯೋಮಿತಿ
ಈ Forest Department ನೇಮಕಾತಿಗೆ ಪ್ರಕಟವಾಗಿರುವ ಅಧಿಸೂಚನೆಯ ಪ್ರಕಾರ ಅಧಿಸೂಚನೆ ಪ್ರಕಟಗೊಂಡ ದಿನಾಂಕಕ್ಕೆ ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು.
ಗರಿಷ್ಠ ವಯಮಿತಿಯನ್ನು ಸರ್ಕಾರದ ವಯೋಮಿತಿ ಸಡಿಲಿಕೆ ಆದೇಶದನ್ವಯ ಒಂದು ಬಾರಿಗೆ ಐದು ವರ್ಷದ ಸಡಿಲಿಕೆಯನ್ನು ಸೇರಿಸಿ ಕೆಳಕಂಡಂತೆ ನಿಗದಿಪಡಿಸಲಾಗಿದೆ
| ಅಭ್ಯರ್ಥಿಗಳ ವರ್ಗ | ಗರಿಷ್ಠ ವಯಸ್ಸು (ವರ್ಷಗಳಲ್ಲಿ) |
|---|---|
| ಸಾಮಾನ್ಯ ವರ್ಗ | 30 ವರ್ಷಗಳು |
| ಹಿಂದುಳಿದ ವರ್ಗಗಳ 2ಎ, 2ಬಿ, 3ಎ, 3ಬಿ | 32 ವರ್ಷಗಳು |
| SC/ST ವರ್ಗ ಹಾಗೂ ಪ್ರವರ್ಗ-1 | 33 ವರ್ಷಗಳು |
ಮಾಜಿ ಸೈನಿಕರಿಗೆ:
ಮಾಜಿ ಸೈನಿಕರಿಗೆ ಅವರು ಸಶಸ್ತ್ರ ಪಡೆಗಳಲ್ಲಿ ಸಲ್ಲಿಸಿದ ಸೇವಾ ಅವಧಿಗೆ ಹೆಚ್ಚುವರಿಯಾಗಿ 3 ವರ್ಷ ಸೇರಿಸಿ ಬರುವ ವರ್ಷಗಳ ಆಧಾರದ ಮೇಲೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ
ಅರಣ್ಯ ಪ್ರೇರಕ ಅಭ್ಯರ್ಥಿಗಳಿಗೆ:
ಸಾಮಾನ್ಯ ವರ್ಗ: 40 ವರ್ಷಗಳು
ಹಿಂದುಳಿದ 2ಎ, 2ಬಿ, 3ಎ, 3ಬಿ ವರ್ಗ: 42 ವರ್ಷಗಳು
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ರ ವರ್ಗ: 43 ವರ್ಷಗಳು
ಈ ನೇಮಕಾತಿಗೆ ಯಾರು ಕಡ್ಡಾಯವಾಗಿ ಅರ್ಜಿ ಸಲ್ಲಿಸಬೇಕು
Forest Department ನೇಮಕಾತಿಗೆ ಈ ಕೆಳಕಂಡ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಿದರೆ ಆಯ್ಕೆ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ
- ಎಸ್ ಎಲ್ ಎಲ್ ಸಿ ಯಲ್ಲಿ ಉತ್ತಮ ಅಂಕಗಳನ್ನು ಹೊಂದಿರುವ ಅಭ್ಯರ್ಥಿಗಳು
- ಸರ್ಕಾರಿ ಉದ್ಯೋಗ ಬಯಸುವ ಯುವಕರು ಮತ್ತು ಯುವತಿಯರು
- ಉತ್ತಮ ದೈಹಿಕ ಸಾಮರ್ಥ್ಯವನ್ನು ಹೊಂದಿರುವವರು
- ಪ್ರಕೃತಿ ಹಾಗೂ ಅರಣ್ಯ ಸಂರಕ್ಷಣೆಯಲ್ಲಿ ಕೆಲಸ ಮಾಡಬೇಕೆಂಬ ಆಸಕ್ತಿಯನ್ನು ಹೊಂದಿರುವವರು
- ಕರ್ನಾಟಕದಲ್ಲಿ ಸರ್ಕಾರಿ ಸೇವೆ ಮಾಡಲು ಬಯಸುವ ಅಭ್ಯರ್ಥಿಗಳು
ಈ Forest Department ನೇಮಕಾತಿಯ ಪ್ರಮುಖ ವಿಶೇಷತೆಗಳು
ಈ Forest Department ನೇಮಕಾತಿಯು ಕೆಲವು ಪ್ರಮುಖ ವಿಶೇಷತೆಗಳನ್ನು ಹೊಂದಿದ್ದು ಸರ್ಕಾರಿ ಉದ್ಯೋಗವನ್ನು ಪಡೆಯಬೇಕೆಂಬ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ ಈ ನೇಮಕಾತಿಯ ವಿಶೇಷತೆಗಳು ಈ ಕೆಳಕಂಡಂತಿವೆ
- ಎಸ್ ಎಲ್ ಎಲ್ ಸಿ ಪಾಸ್ ಆದ ಅಭ್ಯರ್ಥಿಗಳಿಗೆ ಅವಕಾಶ
- ಕರ್ನಾಟಕದದಾದ್ಯಂತ ನೇಮಕಾತಿ
- ಒಟ್ಟು 775 ಸರ್ಕಾರಿ ಹುದ್ದೆಗಳು
- ಉತ್ತಮ ಸರ್ಕಾರಿ ವೇತನ
- ಶಾಶ್ವತ ಉದ್ಯೋಗದ ಅವಕಾಶ
- ನಿವೃತ್ತಿ ಸೌಲಭ್ಯಗಳು
- ಸರ್ಕಾರಿ ಭತ್ಯೆಗಳು
- ಪ್ರಕೃತಿ ಸಂರಕ್ಷಣೆಯಲ್ಲಿ ಸೇವೆ ಸಲ್ಲಿಸುವ ಅವಕಾಶ
- ಮಹಿಳಾ ಹಾಗೂ ಪುರುಷ ಅಭ್ಯರ್ಥಿ ಇಬ್ಬರಿಗೂ ಅರ್ಜಿ ಸಲ್ಲಿಕೆಗೆ ಅವಕಾಶ
- ಮೀಸಲಾತಿ ನಿಯಮಗಳ ಅನ್ವಯ
ವೇತನ ಶ್ರೇಣಿ
ಈ Forest Department ನೇಮಕಾತಿ ಮೂಲಕ ಆಯ್ಕೆಯಾಗುವ ಅರಣ್ಯ ವೀಕ್ಷಕ ಅಭ್ಯರ್ಥಿಗಳಿಗೆ ಕರ್ನಾಟಕ ಸರ್ಕಾರದ ವೇತನ ನಿಯಮಾವಳಿಗಳ ಪ್ರಕಾರ ಕೆಳಕಂಡಂತೆ ವೇತನ ಶ್ರೇಣಿ ಅನ್ವಯವಾಗುತ್ತದೆ
ವೇತನ ಶ್ರೇಣಿ:
₹27,500 – 650 – 29,600 – 725 – 32,500 – 800 – 35,700 – 900 – 39,300 – 1000 – 43,300 – 1125 – 46,675
ಇದರ ಜೊತೆಯಲ್ಲಿ ಸರ್ಕಾರದ ನಿಯಮನುಸಾರ ವಿವಿಧ ಭತ್ಯೆಗಳು ಹಾಗೂ ಸರ್ಕಾರಿ ಸೌಲಭ್ಯಗಳು ಸಹ ಸಿಗುತ್ತವೆ
ಸಿಗುವ ಹೆಚ್ಚುವರಿ ಸೌಲಭ್ಯಗಳು
- ಮೂಲ ವೇತನ
- ತುಟ್ಟಿಭತ್ಯೆ (DA)
- ಮನೆ ಬಾಡಿಗೆ ಭತ್ಯೆ (HRA)
- ವೈದ್ಯಕೀಯ ಸೌಲಭ್ಯ
- ಸರ್ಕಾರಿ ರಜೆಗಳು
- ವಾರ್ಷಿಕ ವೇತನ ಹೆಚ್ಚಳ
- ಭವಿಷ್ಯ ನಿಧಿ (PF)
- ನಿವೃತ್ತಿ ಸೌಲಭ್ಯಗಳು
- ಸರ್ಕಾರಿ ವಿಮಾ ಸೌಲಭ್ಯಗಳು
- ಪದೋನ್ನತಿ ಅವಕಾಶಗಳು
ಸರ್ಕಾರಿ ಉದ್ಯೋಗಗಳಲ್ಲಿ ಸೇವಾ ಅವಧಿ ಮತ್ತು ಅನುಭವ ಹೆಚ್ಚಿದಂತೆ ವೇತನ ಮತ್ತು ಬಡ್ತಿ ಹೊಂದುವ ಅವಕಾಶಗಳು ಸಹ ಹೆಚ್ಚಾಗುತ್ತದೆ
ಅರ್ಜಿ ಶುಲ್ಕ
ಈ Forest Department ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ತಮ್ಮ ಮೀಸಲಾತಿ ವರ್ಗದ ಅನ್ವಯ ಈ ಕೆಳಕಂಡಂತೆ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ
| ಅಭ್ಯರ್ಥಿಗಳ ವರ್ಗ | ಅರ್ಜಿ ಶುಲ್ಕ |
|---|---|
| ಸಾಮಾನ್ಯ ವರ್ಗ, ಹಿಂದುಳಿದ ವರ್ಗಗಳ 2ಎ, 2ಬಿ, 3ಎ, 3ಬಿ ಪುರುಷ ಅಭ್ಯರ್ಥಿಗಳು | 200/- ರೂಗಳು |
| ಸಾಮಾನ್ಯ ವರ್ಗ ಹಾಗೂ ಹಿಂದುಳಿದ ವರ್ಗದ ಮಹಿಳೆ/ತೃತೀಯ ಲಿಂಗ | 100/- ರೂಗಳು |
| SC, ST ಹಾಗೂ ಪ್ರವರ್ಗ-1 ಪುರುಷ ಅಭ್ಯರ್ಥಿಗಳು | 100/- ರೂಗಳು |
| SC, ST ಹಾಗೂ ಪ್ರವರ್ಗ-1 ಮಹಿಳೆ/ತೃತೀಯ ಲಿಂಗ | 50/- ರೂಗಳು |
| ಅಂಗವಿಕಲ ಅಭ್ಯರ್ಥಿಗಳು | ಶುಲ್ಕ ವಿನಾಯಿತಿ |
ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಪ್ರವರ್ಗಕ್ಕೆ ಅನ್ವಯವಾಗುವಂತಹ ಶುಲ್ಕವನ್ನು ಮೊದಲೇ ಪರಿಶೀಲಿಸಿ
ಅರ್ಜಿ ಶುಲ್ಕ ಪಾವತಿ ವಿಧಾನ
ಅರ್ಜಿ ಶುಲ್ಕವನ್ನು ಪಾವತಿಸುವಾಗ ಈ ಕೆಳಕಂಡ ವಿಧಾನಗಳನ್ನು ಅನುಸರಿಸಿ ಶುಲ್ಕವನ್ನು ಪಾವತಿ ಮಾಡಬಹುದಾಗಿರುತ್ತದೆ
ಆನ್ ಲೈನ್ ಪಾವತಿ ವಿಧಾನಗಳು
- ಡೆಬಿಟ್ ಕಾರ್ಡ್
- ಕ್ರೆಡಿಟ್ ಕಾರ್ಡ್
- ನೆಟ್ ಬ್ಯಾಂಕಿಂಗ್
- ಯುಪಿಐ
ಆಫ್ ಲೈನ್ ಪಾವತಿ ವಿಧಾನಗಳು
- Forest Department ನೇಮಕಾತಿಯ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತರ ಅರ್ಜಿ ಶುಲ್ಕದ ಚಲನ್ ಡೌನ್ಲೋಡ್ ಮಾಡಿಕೊಳ್ಳಿ.
- ಸರ್ಕಾರ ನಿಗದಿಪಡಿಸಿರುವ ನಿಗದಿತ ಬ್ಯಾಂಕ್ ಶಾಖೆಗೆ ಭೇಟಿ ನೀಡಿ
- ಚಲನ್ ಮೂಲಕ ನಗದನ್ನು ಪಾವತಿಸಬೇಕು
- ಪಾವತಿ ರಸೀದಿಯನ್ನು ಪಡೆದು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು
ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಈ ಕೆಳಕಂಡ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವುದು ಉತ್ತಮ ಈ ದಾಖಲೆಗಳ ಅವಧಿ ಮತ್ತು ನೈಜತೆಯನ್ನು ಮೊದಲೇ ಪರಿಶೀಲಿಸಿಕೊಳ್ಳಿ
- ಎಸ್ ಎಲ್ ಎಲ್ ಸಿ ಅಂಕಪಟ್ಟಿ
- ತತ್ಸಮಾನ ವಿದ್ಯಾರ್ಹತೆ ಹೊಂದಿರುವವರು ಎಸ್ ಎಲ್ ಎಲ್ ಸಿ ಪಾಸಿಂಗ್ ಪ್ರಮಾಣ ಪತ್ರ
- ಜನ್ಮ ದಿನಾಂಕ ದಾಖಲೆ
- ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಮೀಸಲಾತಿ ಪ್ರಮಾಣ ಪತ್ರಗಳು
- ಮಾಜಿ ಸೈನಿಕ ಪ್ರಮಾಣ ಪತ್ರ (ಅಗತ್ಯವಿದ್ದಲ್ಲಿ)
- ಅಂಗವಿಕಲ ಪ್ರಮಾಣ ಪತ್ರ (ಅಗತ್ಯವಿದ್ದಲ್ಲಿ)
- ಅಭ್ಯರ್ಥಿಯ ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
- ಅಭ್ಯರ್ಥಿಯ ಸಹಿ
- ಮೊಬೈಲ್ ಸಂಖ್ಯೆ
- ಇಮೇಲ್ ಐಡಿ ವಿಳಾಸ
ಈ ಮೇಲಿನ ಎಲ್ಲ ದಾಖಲೆಗಳನ್ನು ಸ್ಪಷ್ಟವಾಗಿ ಪಿಡಿಎಫ್ ಅಥವಾ ಜೆಪಿಜಿ ರೂಪದಲ್ಲಿ ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಿ
Forest Department ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
ಈ Forest Department ನೇಮಕಾತಿಗೆ ಅರ್ಜಿಯನ್ನು ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಆನ್ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಯಾವುದೇ ಆಫ್ಲೈನ್, ಅಂಚೆ ಅಥವಾ ಖುದ್ದಾಗಿ ಕಚೇರಿಗೆ ಹಾಜರಾಗಿ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಅರ್ಜಿ ಸಲ್ಲಿಕೆಯ ಹಂತ ಹಂತವಾದ ಮಾಹಿತಿ ಈ ಕೆಳಕಂಡಂತಿದೆ
ಹಂತ-1
ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ (ಅಧಿಕೃತ ವೆಬ್ ಸೈಟ್ ಲಿಂಕ್ ಕೆಳಗೆ ನೀಡಲಾಗಿದೆ)
ಮುಖಪುಟದಲ್ಲಿ ನೇಮಕಾತಿ ವಿಭಾಗವನ್ನು ತೆರೆಯಿರಿ
ಹಂತ-2
ಅರಣ್ಯ ವೀಕ್ಷಕ ನೇರ ನೇಮಕಾತಿ 2026 ಎಂಬ ಅಧಿಸೂಚನೆಯ ಮೇಲೆ ಕ್ಲಿಕ್ ಮಾಡಿ
ಡೌನ್ಲೋಡ್ ಮಾಡಿರುವ ಅಧಿಸೂಚನೆಯನ್ನು ತೆರೆದು ಎಲ್ಲಾ ಷರತ್ತು, ಸೂಚನೆ ಹಾಗೂ ನಿಯಮಗಳನ್ನು ಸಂಪೂರ್ಣವಾಗಿ ಓದಿ
ಹಂತ-3
Apply Online ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ
ಮೊದಲ ಬಾರಿ ಅರ್ಜಿ ಸಲ್ಲಿಸುತ್ತಿದ್ದರೆ ಮೊದಲು ನೋಂದಣಿ ಮಾಡಿಕೊಳ್ಳಿ
ಹಂತ-4
ಅಭ್ಯರ್ಥಿಗಳ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ ಓಟಿಪಿ ನಮೂದಿಸುವ ಮೂಲಕ ದೃಢೀಕರಣ ಮಾಡಿ
ಇತರರ ಆಧಾರ್ ಸಂಖ್ಯೆ ಬಳಸುವುದು ನಿಯಮ ಉಲ್ಲಂಘನೆಯಾಗುತ್ತದೆ ಇಂತಹ ಅರ್ಜಿಗಳನ್ನು ಇಲಾಖೆ ತಿರಸ್ಕರಿಸಬಹುದು
ಹಂತ-5
ಆನ್ಲೈನ್ ಅರ್ಜಿ ತೆರೆದ ನಂತರ ಈ ಕೆಳಕಂಡ ಮಾಹಿತಿಗಳನ್ನು ಸರಿಯಾಗಿ ನಮೂದಿಸಿ
- ಅಭ್ಯರ್ಥಿಯ ಪೂರ್ಣ ಹೆಸರು (ಎಸ್ ಎಲ್ ಎಲ್ ಸಿ ಅಂಕಪಟ್ಟಿಯಲ್ಲಿರುವಂತೆ)
- ತಂದೆ ಮತ್ತು ತಾಯಿ ಹೆಸರು
- ಜನ್ಮ ದಿನಾಂಕ
- ಲಿಂಗ
- ವಿಳಾಸ
- ಮೊಬೈಲ್ ಸಂಖ್ಯೆ
- ಇಮೇಲ್ ಐಡಿ
- ವಿದ್ಯಾರ್ಥಿ ಮೀಸಲಾತಿ ವಿವರಗಳು
ಯಾವುದೇ ತಪ್ಪು ಮಾಹಿತಿಯನ್ನು ನಮೂದಿಸಬೇಡಿ
ಹಂತ-6
ಆನ್ಲೈನ್ ಅರ್ಜಿ ಪ್ರಕ್ರಿಯೆಯಲ್ಲಿ ಕೇಳಲಾಗುವ ಅಗತ್ಯ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
- ಅಭ್ಯರ್ಥಿಯ ಭಾವಚಿತ್ರ
- ಅಭ್ಯರ್ಥಿಯ ಸಹಿ
- ಎಸ್ ಎಸ್ ಎಲ್ ಸಿ ಅಂಕಪಟ್ಟಿ
- ಜಾತಿ ಪ್ರಮಾಣ ಪತ್ರ
- ಮೀಸಲಾತಿ ಪ್ರಮಾಣ ಪತ್ರ
- ಇತರೆ ಅಗತ್ಯ ದಾಖಲಾತಿಗಳು
ಅಧಿಸೂಚನೆಯಲ್ಲಿ ನೀಡಲಾಗಿರುವ ಗಾತ್ರ ಮತ್ತು ಫಾರ್ಮ್ಯಾಟ್ ಗಳನ್ನು ಅನುಸರಿಸಿ ದಾಖಲೆಗಳನ್ನು ಅಪ್ಲೋಡ್ ಮಾಡಬೇಕು
ಹಂತ-7
ಅರ್ಜಿಯಲ್ಲಿ ನಮೂದಿಸಿದ ಎಲ್ಲ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ವಿಶೇಷವಾಗಿ ಈ ಕೆಳಕಂಡ ಅಂಶಗಳನ್ನು ಪರಿಶೀಲಿಸಿ
- ಹೆಸರು
- ಜನ್ಮ ದಿನಾಂಕ
- ಆಧಾರ್ ಸಂಖ್ಯೆ
- ಎಸ್ ಎಲ್ ಎಲ್ ಸಿ ಅಂಕಗಳು
- ಮೊಬೈಲ್ ಸಂಖ್ಯೆ
- ಇಮೇಲ್ ವಿಳಾಸ
ಯಾವುದೇ ಹಂತದಲ್ಲಿಯೂ ತಪ್ಪು ಮಾಹಿತಿ ಕಂಡು ಬಂದಲ್ಲಿ ತಕ್ಷಣವೇ ಸರಿಪಡಿಸಿ
ಹಂತ-8
ಎಲ್ಲ ಮಾಹಿತಿಯನ್ನು ಪರಿಶೀಲಿಸಿದ ನಂತರ ಅರ್ಜಿಯನ್ನು Submit ಎಂಬ ಆಯ್ಕೆಯನ್ನು ಆಯ್ದುಕೊಳ್ಳುವ ಮೂಲಕ ಯಶಸ್ವಿಯಾಗಿ ಅರ್ಜಿಯನ್ನು ಸಲ್ಲಿಸಿ
ಹಂತ-9
Forest Department ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡ ನಂತರ ನಿಮ್ಮ ವರ್ಗಕ್ಕೆ ಅನುಗುಣವಾಗಿ ನಿಗದಿಪಡಿಸಲಾಗಿರುವ ಅರ್ಜಿ ಶುಲ್ಕವನ್ನು ಪಾವತಿ ಮಾಡಿ
ಶುಲ್ಕ ಪಾವತಿಸಿದ ನಂತರ ಅರ್ಜಿ ಸ್ವೀಕೃತಿಯ ದೃಢೀಕರಣ ದೊರೆಯುತ್ತದೆ ಮತ್ತು ಪಾವತಿ ರಸೀದಿ ದೊರೆಯುತ್ತದೆ ಇದನ್ನು ಡೌನ್ಲೋಡ್ ಮಾಡಿ ಇಟ್ಟುಕೊಳ್ಳಿ
ಹಂತ-10
ಅಂತಿಮವಾಗಿ ಭರ್ತಿ ಮಾಡಿದ Forest Department ಅರ್ಜಿಯ ಪಿಡಿಎಫ್ ಪ್ರತಿಯು ಡೌನ್ಲೋಡ್ ಆಗುತ್ತದೆ. ಇದನ್ನು ಮುದ್ರಿಸಿಕೊಂಡು ಸುರಕ್ಷಿತವಾಗಿ ಇಟ್ಟುಕೊಳ್ಳಿ ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ ಒಂದು ಪ್ರತಿಯನ್ನು ಸೇವ್ ಮಾಡಿಟ್ಟುಕೊಳ್ಳಿ ಭವಿಷ್ಯದ ನೇಮಕಾತಿ ಪ್ರಕ್ರಿಯೆಯಲ್ಲಿ ಇದೊಂದು ಪ್ರಾಥಮಿಕ ದಾಖಲೆಯಾಗಿ ಕಾರ್ಯ ನಿರ್ವಹಿಸುತ್ತದೆ.
Forest Department ಗೆ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಮಾಡುವ ಸಾಮಾನ್ಯ ತಪ್ಪುಗಳು
ಪ್ರತಿ ನೇಮಕಾತಿಯಲ್ಲಿಯೂ ಸಹ ಸಾವಿರಾರು ಅರ್ಜಿಗಳು ಅಭ್ಯರ್ಥಿಗಳು ಮಾಡುವ ಚಿಕ್ಕ ತಪ್ಪುಗಳಿಂದ ಅರ್ಜಿಗಳು ತಿರಸ್ಕಾರವಾಗಬಹುದು ಈ ಅರ್ಜಿ ತಿರಸ್ಕಾರವನ್ನು ತಪ್ಪಿಸಲು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಿ
- ತಪ್ಪಾದ ಮೊಬೈಲ್ ಸಂಖ್ಯೆ ನೀಡುವುದು
- ಅಸ್ಪಷ್ಟ ದಾಖಲೆಗಳನ್ನು ಅಪ್ಲೋಡ್ ಮಾಡುವುದು
- ಇತರ ಆಧಾರ್ ಸಂಖ್ಯೆ ಬಳಸುವುದು
- ತಪ್ಪಾದ ಮೀಸಲಾತಿ ವರ್ಗವನ್ನು ಆಯ್ಕೆ ಮಾಡುವುದು
- ಅರ್ಜಿ ಶುಲ್ಕ ಪಾವತಿಸದೇ ಬಿಡುವುದು
- ಎಸ್ ಎಲ್ ಎಲ್ ಸಿ ಅಂಕಗಳನ್ನು ತಪ್ಪಾಗಿ ನಮೂದಿಸುವುದು
- ಕೊನೆಯ ದಿನಾಂಕದವರೆಗೆ ಅರ್ಜಿ ಸಲ್ಲಿಸಲು ಕಾಯುವುದು
- ಅಪೂರ್ಣವಾಗಿ ಅರ್ಜಿ ಸಲ್ಲಿಸುವುದು
- ತಪ್ಪಾದ ಇಮೇಲ್ ಐಡಿ ವಿಳಾಸವನ್ನು ನಮೂದಿಸುವುದು
- ನಿಗಧಿತ ಸಮಯದಲ್ಲಿ ಅಧಿಕೃತ ವೆಬ್ ಸೈಟ್ ಅನ್ನು ಪರಿಶೀಲಿಸದೇ ಇರುವುದು
ಯಶಸ್ವಿಯಾಗಿ Forest Department ಗೆ ಅರ್ಜಿ ಸಲ್ಲಿಸಲು ಉಪಯುಕ್ತ ಸಲಹೆಗಳು
- ಕೊನೆಯ ದಿನಾಂಕದವರೆಗೂ ಕಾಯದೆ ಮೊದಲೇ ಅರ್ಜಿ ಸಲ್ಲಿಸಿ
- ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸರಿಯಾದ ನೆಟ್ವರ್ಕ್ ಸಂಪರ್ಕವನ್ನು ಬಳಸಿರಿ
- ದಾಖಲೆಗಳನ್ನು ಮುಂಚಿತವಾಗಿ ನಿಯಮಾನುಸಾರ ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಿ
- ಸಲ್ಲಿಸಿದ ಅರ್ಜಿಯ ಪಿಡಿಎಫ್ ಪ್ರತಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ
- ಅರ್ಜಿ ಸಂಖ್ಯೆ ಮತ್ತು ಪಾವತಿ ವಿವರಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಿ
- ಅಧಿಕೃತ ಪ್ರಕಟಣೆಗಳನ್ನು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ನಿಯಮಿತವಾಗಿ ಪರಿಶೀಲಿಸಿ
Forest Department ಅರಣ್ಯ ವೀಕ್ಷಕರ ಹುದ್ದೆಗಳ ಆಯ್ಕೆ ವಿಧಾನ
ಅರಣ್ಯ ವೀಕ್ಷಕ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಈ ಕೆಳಕಂಡ ಸಾಮಾನ್ಯ ಹಾಗೂ ಸುಲಭ ವಿಧಾನಗಳ ಮೂಲಕ ನಡೆಸಲಾಗುತ್ತದೆ ಅವುಗಳೆಂದರೆ
ಹಂತ-1: ಎಸ್ ಎಲ್ ಎಲ್ ಸಿ ಅಂಕಗಳ ಆಧಾರದ ಮೇಲೆ ಪ್ರಾಥಮಿಕ ಆಯ್ಕೆ
ಈ ನೇಮಕಾತಿ ಅಡಿಯಲ್ಲಿ ಅಭ್ಯರ್ಥಿಗಳು ಅರ್ಜಿಯಲ್ಲಿ ನಮೂದಿಸಿರುವ ಎಸ್ ಎಲ್ ಎಲ್ ಸಿ ಅಂಕಗಳ ಆಧಾರದ ಮೇಲೆ ಪ್ರಾಥಮಿಕ ಅರ್ಹತಾ ಪಟ್ಟಿಯನ್ನು ಸಿದ್ಧಪಡಿಸಿ ಈ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ
- 1:20 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಅರ್ಹತಾ ಪಟ್ಟಿಗೆ ಪರಿಗಣಿಸಲಾಗುತ್ತದೆ ಮತ್ತು ಮುಂದಿನ ಹಂತಕ್ಕೆ ಕರೆಯಲಾಗುತ್ತದೆ
- ಅಂದರೆ ಒಂದು ಹುದ್ದೆಗೆ ಸುಮಾರು 20 ಅಭ್ಯರ್ಥಿಗಳನ್ನು ದೈಹಿಕ ಪರೀಕ್ಷೆಗೆ ಆಹ್ವಾನಿಸಲಾಗುತ್ತದೆ
- ಹೆಚ್ಚಿನ ಅಂಕಗಳನ್ನು ಪಡೆದ ಅಭ್ಯರ್ಥಿಗಳಿಗೆ ಮೊದಲ ಆದ್ಯತೆಯನ್ನು ನೀಡಲಾಗುತ್ತದೆ
- ಮೀಸಲಾತಿ ನಿಯಮಗಳನ್ನು ಸಹ ಕಟ್ಟಿ ನಿಟ್ಟಾಗಿ ಪಾಲಿಸಲಾಗುತ್ತದೆ
ಆದುದರಿಂದ ಎಸ್ ಎಸ್ ಎಲ್ ಸಿ ಯಲ್ಲಿ ಪಡೆದ ಅಂಕಗಳು ಈ ನೇಮಕಾತಿಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ
ಹಂತ-2: ಶಾರೀರಿಕ ಮಾನದಂಡಗಳ ಪರೀಕ್ಷೆ
ಈ ಹಂತದಲ್ಲಿ ಅಭ್ಯರ್ಥಿಗಳ ಎತ್ತರ ಹಾಗೂ ದೈಹಿಕ ಮಾನದಂಡಗಳನ್ನು ಕೂಲಂಕುಶವಾಗಿ ಪರಿಶೀಲಿಸಲಾಗುತ್ತದೆ
ಪುರುಷ ಅಭ್ಯರ್ಥಿಗಳಳು: ಕನಿಷ್ಠ 163 ಸೆಂಟಿಮೀಟರ್ ಎತ್ತರ
ಮಹಿಳಾ ಅಭ್ಯರ್ಥಿಗಳು: ಕನಿಷ್ಠ 150 ಸೆಂಟಿಮೀಟರ್ ಎತ್ತರ
ವಿಶೇಷ ವಿನಾಯಿತಿ
Forest Department ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿರುವಂತೆ ಸ್ಥಳೀಯ ಅರಣ್ಯ, ಬುಡುಕಟ್ಟು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ಎತ್ತರದ ಮಾನದಂಡಗಳಲ್ಲಿ ವಿಶೇಷ ವಿನಾಯಿತಿಯನ್ನು ನೀಡಲಾಗುತ್ತದೆ
ಸೂಚನೆ: ಈ ಹಂತದಲ್ಲಿ ಅನರ್ಹರಾದ ಅಭ್ಯರ್ಥಿಗಳಿಗೆ ಮುಂದಿನ ಪರೀಕ್ಷೆಗಳಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ
ಹಂತ-3: ದೈಹಿಕ ಸಹಿಷ್ಣುತೆ ಪರೀಕ್ಷೆ
ಶಾರೀರಿಕ ಮಾನದಂಡಗಳಲ್ಲಿ ಅರ್ಹರಾದ ಅಭ್ಯರ್ಥಿಗಳನ್ನು ಓಟದ ಪರೀಕ್ಷೆಗೆ ಕರೆಯಲಾಗುತ್ತದೆ
- ಪುರುಷ ಅಭ್ಯರ್ಥಿಗಳು 1600 ಮೀಟರ್ ಓಟವನ್ನು ಏಳು ನಿಮಿಷಗಳ ಒಳಗೆ ಪೂರ್ಣಗೊಳಿಸಬೇಕು
- ಮಹಿಳಾ ಅಭ್ಯರ್ಥಿಗಳು 1000 ಮೀಟರ್ ಓಟವನ್ನು ಆರು ನಿಮಿಷದೊಳಗೆ ಪೂರ್ಣಗೊಳಿಸಬೇಕು
- ಮಾಜಿ ಸೈನಿಕ ಅಭ್ಯರ್ಥಿಗಳು 1000 ಮೀಟರ್ ಓಟವನ್ನು ಆರು ನಿಮಿಷದೊಳಗೆ ಪೂರ್ಣಗೊಳಿಸಬೇಕು
ನಿಗದಿತ ಸಮಯದೊಳಗೆ ಓಟದ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಅಭ್ಯರ್ಥಿಗಳು ಮಾತ್ರ ಮುಂದಿನ ಹಂತಕ್ಕೆ ಆಯ್ಕೆಯಾಗುತ್ತಾರೆ
ದೈಹಿಕ ಸಹಿಷ್ಣುತೆ ಪರೀಕ್ಷೆಗೆ ಸಿದ್ಧತೆ ಹೀಗಿರಲಿ
ಓಟದ ಪರೀಕ್ಷೆಯಲ್ಲಿ ಉತ್ತಮ ಸಾಧನೆಯನ್ನು ಪಡೆಯಲು ಅಭ್ಯರ್ಥಿಗಳು ಮುಂಚಿತವಾಗಿ ಈ ಕೆಳಕಂಡ ಅಭ್ಯಾಸಗಳನ್ನು ಮಾಡುವುದು ಅತ್ಯಗತ್ಯ
- ಪ್ರತಿದಿನ ಬೆಳಿಗ್ಗೆ ಓಟದ ಅಭ್ಯಾಸ ಮಾಡಬೇಕು
- ಕಾಲಕ್ರಮೇಣ ವೇಗವನ್ನು ಹೆಚ್ಚಿಸಿಕೊಳ್ಳಬೇಕು
- ಮೊದಲ ವಾರ ನಿಧಾನ ಗತಿಯಲ್ಲಿ ಓಡಲು ಪ್ರಾರಂಭಿಸಬೇಕು
- ಉಸಿರಾಟದ ನಿಯಂತ್ರಣದ ಮೇಲೆ ಗಮನ ಹರಿಸಬೇಕು
- ಸಾಕಷ್ಟು ನೀರು ಕುಡಿಯಬೇಕು
- ಸಮತೋಲಿತ ಆಹಾರ ಸೇವಿಸಬೇಕು
- ನಿದ್ರೆಗೆ ಆದ್ಯತೆ ನೀಡಬೇಕು
- ದೇಹವನ್ನು ಸದೃಢವಾಗಿಡಲು ನಿಯಮಿತವಾಗಿ ವ್ಯಾಯಾಮ ಮಾಡಬೇಕು
ಹಂತ-4: ದೈಹಿಕ ಸಮರ್ಥತೆ ಪರೀಕ್ಷೆ
ದೈಹಿಕ ಸಹಿಷ್ಣುತೆ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆದ ಅಭ್ಯರ್ಥಿಗಳನ್ನು ದೈಹಿಕ ಸಮರ್ಥತೆ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಈ ಪರೀಕ್ಷೆಯಲ್ಲಿ ಒಟ್ಟು ಐದು ವಿವಿಧ ಕ್ರೀಡಾ ಚಟುವಟಿಕೆಗಳು ಇರುತ್ತವೆ ಅವುಗಳೆಂದರೆ:
- 100 ಮೀಟರ್ ಓಟ
- ಹೈಜಂಪ್
- ಲಾಂಗ್ ಜಂಪ್
- ಶಾರ್ಟ್ ಪುಟ್
- ಇಲಾಖೆ ನಿಗದಿಪಡಿಸುವ ಮತ್ತೊಂದು ದೈಹಿಕ ಪರೀಕ್ಷೆ
ಈ ಒಟ್ಟು ಐದು ಪರೀಕ್ಷೆಗಳಲ್ಲಿ ಕನಿಷ್ಠ ಮೂರು ಪರೀಕ್ಷೆಗಳಲ್ಲಿ ಕಡ್ಡಾಯವಾಗಿ ತೇರ್ಗಡೆಯಾಗಬೇಕು. ಮೂರಕ್ಕಿಂತ ಕಡಿಮೆ ಪರೀಕ್ಷೆಗಳಲ್ಲಿ ಅರ್ಹತೆ ಪಡೆದವರು ನೇಮಕಾತಿ ಪ್ರಕ್ರಿಯೆಯಲ್ಲಿ ಅನರ್ಹರೆಂದು ಪರಿಗಣಿಸಲಾಗುತ್ತದೆ.
ದೈಹಿಕ ಪರೀಕ್ಷೆಗೆ ಉಪಯುಕ್ತ ಸಲಹೆಗಳು
- ಪ್ರತಿ ದಿನ ವಾರ್ಮ್ ಅಪ್ ಮಾಡಿ
- ಜಂಪಿಂಗ್ ಅಭ್ಯಾಸ ಮಾಡಿ
- ಸ್ಟ್ರೆಚಿಂಗ್ ಅಭ್ಯಾಸ ಮಾಡಿ
- ನಿಯಮಿತವಾಗಿ ಓಟದ ಅಭ್ಯಾಸ ಮಾಡಿ
- ಆರೋಗ್ಯಕರ ಆಹಾರ ಸೇವನೆ ಮಾಡಿ
- ಪರೀಕ್ಷೆಗೆ ಮುನ್ನ ಸಾಕಷ್ಟು ವಿಶ್ರಾಂತಿ ಪಡೆಯಿರಿ
- ಕ್ರೀಡಾ ಉಡುಪು ಹಾಗೂ ಸೂಕ್ತವಾಗಿರುವ ಶೂಗಳನ್ನು ಬಳಸಿ
ಹಂತ-5: ಕನ್ನಡ ಭಾಷಾ ಪರೀಕ್ಷೆ
ಈ Forest Department ನೇಮಕಾತಿಗೆ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆ ಬರೆಯುವ ಅವಶ್ಯಕತೆ ಇರುವುದಿಲ್ಲ ಬದಲಾಗಿ ಈ ಕೆಳಕಂಡ ಅಭ್ಯರ್ಥಿಗಳಿಗೆ ಮಾತ್ರ ಈ ಪರೀಕ್ಷೆ ಅನ್ವಯವಾಗುತ್ತದೆ
- ಎಸ್ ಎಸ್ ಎಲ್ ಸಿ ಹಂತದಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಓದದೆ ಇರುವವರು
- ಇಂತಹ ಅಭ್ಯರ್ಥಿಗಳು ಕನ್ನಡ ಭಾಷೆ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಉತ್ತೀರ್ಣರಾಗಬೇಕು
ಸೂಚನೆ: ಕನ್ನಡ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳದ ಅಭ್ಯರ್ಥಿಗಳು ಅಂತಿಮ ಆಯ್ಕೆ ಪಟ್ಟಿಗೆ ಅರ್ಹರಾಗುವುದಿಲ್ಲ
ಹಂತ-6: ತಾತ್ಕಾಲಿಕ ಆಯ್ಕೆ ಪಟ್ಟಿ
ದೈಹಿಕ ಪರೀಕ್ಷೆಯ ನಂತರ ಇಲಾಖೆಯು ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಆಯ್ಕೆ ಪಟ್ಟಿಯನ್ನು ಪ್ರಕಟಿಸುವಾಗ ಇಲಾಖೆಯ ಈ ಕೆಳಕಂಡ ಅಂಶಗಳನ್ನು ಪರಿಗಣಿಸುತ್ತದೆ ಅವುಗಳೆಂದರೆ
- ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಡೆದ ಅಂಕಗಳು
- ಮೀಸಲಾತಿ ನಿಯಮಗಳು
- ದೈಹಿಕ ಪರೀಕ್ಷೆ ಅರ್ಹತೆಯ ಅಂಕಗಳು
- ಕನ್ನಡ ಭಾಷಾ ಪರೀಕ್ಷೆ ಅಂಕಗಳು (ಅಗತ್ಯವಿದ್ದಲ್ಲಿ)
ಈ ಹಂತದಲ್ಲಿ 1:1 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ
ಹಂತ-7: ದಾಖಲೆಗಳ ಪರಿಶೀಲನೆ
ತಾತ್ಕಾಲಿಕವಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಇಲ್ಲಿ ದಾಖಲೆ ಪರಿಶೀಲನೆಗೆ ಒಳಪಡಿಸಲಾಗುತ್ತದೆ ದಾಖಲೆ ಪರಿಶೀಲನೆಯಲ್ಲಿ ಕೇಳಲಾಗುವ ಸಾಮಾನ್ಯ ದಾಖಲೆಗಳೆಂದರೆ:
- ಎಸ್ ಎಸ್ ಎಲ್ ಸಿ ಅಂಕಪಟ್ಟಿ
- ಎಸ್ ಎಸ್ ಎಲ್ ಸಿ ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಮೀಸಲಾತಿ ಪ್ರಮಾಣ ಪತ್ರಗಳು
- ಮಾಜಿ ಸೈನಿಕ ಪ್ರಮಾಣಪತ್ರ (ಆಗತ್ಯವಿದ್ದಲ್ಲಿ)
- ಅಂಗವಿಕಲ ಪ್ರಮಾಣ ಪತ್ರ (ಆಗತ್ಯವಿದ್ದಲ್ಲಿ)
- ಅರ್ಜಿ ಸಲ್ಲಿಸಿರುವ ಸ್ವೀಕೃತಿ ಪ್ರತಿ
- ಇತರೆ ಅಧಿಕೃತ ದಾಖಲೆಗಳು
ಈ ಹಂತದಲ್ಲಿ ಯಾವುದೇ ದಾಖಲೆ ತಪ್ಪಾಗಿದ್ದರೆ ಅಥವಾ ನಕಲಿಯಾಗಿದ್ದರೆ ಆ ಅಭ್ಯರ್ಥಿಯ ಅರ್ಹತೆಯನ್ನು ರದ್ದುಗೊಳಿಸಬಹುದು
ಹಂತ-8: ವೈದ್ಯಕೀಯ ಪರೀಕ್ಷೆ
ದಾಖಲೆ ಪರಿಶೀಲನೆ ಪೂರ್ಣಗೊಂಡ ನಂತರ ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಪರೀಕ್ಷೆಯಲ್ಲಿ ಅಭ್ಯರ್ಥಿಯ ಆರೋಗ್ಯ, ದೃಷ್ಟಿ ಸಾಮರ್ಥ್ಯ, ದೈಹಿಕ ಸಾಮರ್ಥ್ಯ ಹಾಗೂ ಕರ್ತವ್ಯ ನಿರ್ವಹಿಸಲು ಬೇಕಾಗಿರುವ ದೈಹಿಕ ಯೋಗ್ಯತೆಯನ್ನು ಪರಿಶೀಲಿಸಲಾಗುತ್ತದೆ ವೈದ್ಯಕೀಯ ಪರೀಕ್ಷೆಯಲ್ಲಿ ಅನರ್ಹರಾದ ಅಭ್ಯರ್ಥಿಗಳು ಅಂತಿಮ ಆಯ್ಕೆ ಪಟ್ಟಿಗೆ ಅರ್ಹರಿರುವುದಿಲ್ಲ
ಹಂತ-9: ಅಂತಿಮ ಆಯ್ಕೆ ಪಟ್ಟಿ
ಮೇಲಿನ ಎಲ್ಲಾ ಹಂತಗಳಲ್ಲಿ ಅರ್ಹತೆಯನ್ನು ಪಡೆದ ಅಭ್ಯರ್ಥಿಗಳನ್ನು ಪರಿಗಣಿಸಿ ಅಂತಿಮ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸುವಾಗ ಈ ಕೆಳಕಂಡ ಅಂಶಗಳನ್ನು ಪರಿಗಣಿಸಲಾಗುತ್ತದೆ
- ಎಸ್ ಎಲ್ ಎಲ್ ಸಿ ಪರೀಕ್ಷೆಯಲ್ಲಿ ಪಡೆದ ಒಟ್ಟು ಅಂಕಗಳು
- ಮೀಸಲಾತಿ ನಿಯಮಗಳು
- ದೈಹಿಕ ಪರೀಕ್ಷೆಗಳಲ್ಲಿ ಪಡೆದ ಫಲಿತಾಂಶದ ಅಂಕಗಳು
- ದಾಖಲೆ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ಅಭ್ಯರ್ಥಿಗಳು ಗಮನಿಸಬೇಕಾದ ಪ್ರಮುಖ ಅಂಶಗಳು
- ಎಸ್ ಎಸ್ ಎಲ್ ಸಿ ಅಂಕಗಳು ಉತ್ತಮವಾಗಿದ್ದರೆ ಆಯ್ಕೆ ಸಾಧ್ಯತೆ ಹೆಚ್ಚಿರುತ್ತದೆ
- ಮೂಲ ದಾಖಲೆಗಳನ್ನು ಮುಂಚಿತವಾಗಿ ಸಿದ್ಧಪಡಿಸಿಟ್ಟುಕೊಳ್ಳಬೇಕು
- ದೈಹಿಕ ಪರೀಕ್ಷೆಗಳಿಗೆ ಇಂದಿನಿಂದಲೇ ಅಭ್ಯಾಸ ಆರಂಭಿಸಬೇಕು
- ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಿರುವ ಎಲ್ಲಾ ಸೂಚನೆ ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು
- ಯಾವುದೇ ಸುಳ್ಳು ಮಾಹಿತಿ ನೀಡಬಾರದು
- ದೈಹಿಕ ಸಾಮರ್ಥ್ಯ ಮತ್ತು ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಕಾಪಾಡಿಕೊಳ್ಳಬೇಕು
Forest Department ಅರಣ್ಯ ವೀಕ್ಷಕ ಹುದ್ದೆಗೆ 30 ದಿನಗಳ ತಯಾರಿ
ಮೊದಲ ವಾರ : 1 ರಿಂದ 7 ನೇ ದಿನಗಳಲ್ಲಿ ಮಾಡಬೇಕಾದ ಕೆಲಸಗಳು
ಈ ವಾರದಲ್ಲಿ ದೈಹಿಕ ಸಾಮರ್ಥ್ಯವನ್ನು ನಿಧಾನವಾಗಿ ಅಭಿವೃದ್ಧಿಪಡಿಸುವುದರ ಮೇಲೆ ಹೆಚ್ಚು ಗಮನ ಹರಿಸಬೇಕಾಗುತ್ತದೆ
ಮಾಡಬೇಕಾದ ಕೆಲಸಗಳು:
- ಪ್ರತಿ ದಿನ 2 ರಿಂದ 3 ಕಿಲೋಮೀಟರ್ ವಾಕಿಂಗ್ ಮಾಡಿ
- 800 ಮೀಟರ್ ನಿಧಾನಗತಿಯ ಓಟವನ್ನು ಪ್ರಾರಂಭಿಸಿ
- ವಾರ್ಮಪ್ ಮತ್ತು ಸ್ಟ್ರೆಚಿಂಗ್ ಮಾಡಬೇಕು
- 15 ರಿಂದ 20 ನಿಮಿಷಗಳ ಕಾಲ ಕಟ್ಟುನಿಟಿನ ವ್ಯಾಯಾಮ ಮಾಡಬೇಕು
- ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು
- ಪೌಷ್ಟಿಕ ಆಹಾರವನ್ನು ಸೇವಿಸಬೇಕು
ಎರಡನೇ ವಾರ: 8 ರಿಂದ 14 ನೇ ದಿನಗಳಲ್ಲಿಮಾಡಬೇಕಾದ ಕೆಲಸಗಳು
ಈ ಅವಧಿಯಲ್ಲಿ ಓಟದ ವೇಗವನ್ನು ಹೆಚ್ಚಿಸಲು ಪ್ರಾರಂಭಿಸಬೇಕು
ಪ್ರತಿದಿನ ಮಾಡಬೇಕಾದ ಕೆಲಸ
- 1200 ಮೀಟರ್ ಓಟ
- ಸ್ಪ್ರಿಂಟ್ ಅಭ್ಯಾಸ ಮಾಡುವುದು
- ಲಾಂಗ್ ಜಂಪ್ ಅಭ್ಯಾಸ ಮಾಡುವುದು
- ಹೈಜಂಪ್ ಅಭ್ಯಾಸ ಮಾಡುವುದು
- ಸ್ಕ್ಯಾಟ್ ಮತ್ತು ಪುಶ್ ಅಪ್ ವ್ಯಾಯಾಮ ಮಾಡುವುದು
- ದೇಹದ ಸಮತೋಲನವನ್ನು ಕಾಪಾಡಿಕೊಳ್ಳುವ ವ್ಯಾಯಾಮಗಳನ್ನು ಮಾಡುವುದು
ಮೂರನೇ ವಾರ: 15ರಿಂದ 21ನೇ ದಿನ ಮಾಡಬೇಕಾದ ಕೆಲಸಗಳು
ಈ ಹಂತದಲ್ಲಿ ಪರೀಕ್ಷೆಯ ಮಾದರಿಯಂತೆ ಅಭ್ಯಾಸವನ್ನು ಮಾಡಬೇಕಾಗುತ್ತದೆ ಈ ಮೂರನೇ ವಾರದ ಅಭ್ಯಾಸವು ದೈಹಿಕ ಪರೀಕ್ಷೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ
ಪ್ರತಿನಿತ್ಯ ಮಾಡಬೇಕಾದ ಕೆಲಸಗಳು
- ಪುರುಷರು 1400 ಮೀಟರ್ ಓಟ
- ಮಹಿಳೆಯರು 1000 ಮೀಟರ್ ಓಟ
- 100 ಮೀಟರ್ ಸ್ಪ್ರಿಂಟ್
- ಶಾರ್ಟ್ ಪುಟ್, ಲಾಂಗ್ ಜಂಪ್ ಮತ್ತು ಹೈಜಂಪ್ ಅಭ್ಯಾಸ
- ಸ್ಟ್ಯಾಮಿನಾ ಹೆಚ್ಚಿಸುವ ವ್ಯಾಯಾಮ ಗಳನ್ನು ಮಾಡಬೇಕು
ನಾಲ್ಕನೇ ವಾರ 22 ರಿಂದ 30ನೇ ದಿನಮಾಡಬೇಕಾದ ಕೆಲಸಗಳು
ಈ ನಾಲ್ಕನೇ ವಾರದ ಅವಧಿಯಲ್ಲಿ ನಿಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಪರೀಕ್ಷಿಸಿಕೊಳ್ಳಬೇಕು
ಮಾಡಬೇಕಾದ ಕೆಲಸಗಳು
- ಪರೀಕ್ಷೆ ಸಮಯಕ್ಕೆ ಅನುಗುಣವಾಗಿ ಓಟದ ಅಭ್ಯಾಸವನ್ನು ಮಾಡಬೇಕು
- ಲಾಂಗ್ ಜಂಪ್ ಮತ್ತು ಪುನರಾವರ್ತನೆ ಮಾಡಬೇಕು
- ದೇಹಕ್ಕೆ ಉತ್ತಮ ವಿಶ್ರಾಂತಿ ನೀಡಬೇಕು
- ಉತ್ತಮ ಪೌಷ್ಟಿಕಾಂಶದ ಸಮತೋಲಿತ ಆಹಾರ ಸೇವಿಸಬೇಕು
- ದೈಹಿಕ ಗಾಯಗಳಾದಂತೆ ಎಚ್ಚರ ವಹಿಸಬೇಕು
ಆರೋಗ್ಯಕರ ಆಹಾರ ಸಲಹೆಗಳು
ದೈಹಿಕ ಪರೀಕ್ಷೆಗೆ ತಯಾರಾಗುವ ಮೊದಲು ಅಭ್ಯರ್ಥಿಗಳು ಸಮತೋಲಿತ ಆಹಾರವನ್ನು ಸೇವಿಸುವುದು ಅತ್ಯಗತ್ಯವಾಗಿದೆ ಈ ಅವಧಿಯಲ್ಲಿ ಸೇವಿಸಬಹುದಾದ ಆಹಾರ ಪದಾರ್ಥಗಳೆಂದರೆ
- ಹಾಲು
- ಮೊಟ್ಟೆ
- ಹಸಿರು ತರಕಾರಿಗಳು
- ಹಣ್ಣುಗಳು
- ಬಾಳೆಹಣ್ಣು
- ಕಡಲೆಕಾಯಿ
- ಒಣಹಣ್ಣುಗಳು
- ರಾಗಿ
- ಜೋಳ
- ಸಿರಿಧಾನ್ಯಗಳು
- ಸಾಕಷ್ಟು ನೀರು
ಈ ಕೆಳಕಂಡ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಿ
- ಎಣ್ಣೆಯುಕ್ತ ಆಹಾರ
- ಫಾಸ್ಟ್ ಫುಡ್
- ತಂಪು ಪಾನೀಯಗಳು
- ಅತಿಯಾದ ಸಿಹಿ ಪದಾರ್ಥಗಳು
- ಜಂಕ್ ಫುಡ್
ಅಭ್ಯರ್ಥಿಗಳು ಪಾಲಿಸಬೇಕಾದ ಪ್ರಮುಖ ಸೂಚನೆಗಳು
- ಅರ್ಜಿ ಸಲ್ಲಿಸುವ ಮೊದಲು ಹುದ್ದೆಗಳಿಗೆ ಹೊರಡಿಸಿರುವ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಳ್ಳಿ
- ಅರ್ಜಿಯಲ್ಲಿ ತಪ್ಪು ಮಾಹಿತಿಯನ್ನು ಯಾವುದೇ ಕಾರಣಕ್ಕೂ ನಮೂದಿಸಬೇಡಿ
- ದಾಖಲೆಗಳನ್ನು ಸರಿಯಾದ ಗಾತ್ರದಲ್ಲಿ ಅವುಗಳ ನಿಯಮನುಸಾರ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
- ಅರ್ಜಿ ಸಲ್ಲಿಸಿದ ನಂತರ ಅದರ ಪ್ರಿಂಟ್ ಪ್ರತಿಯನ್ನು ತೆಗೆದುಕೊಳ್ಳಿ
- ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ಸದಾ ಸಕ್ರಿಯವಾಗಿ ಇಟ್ಟುಕೊಳ್ಳಿ
- ದೈಹಿಕ ಪರೀಕ್ಷೆಗೆ ಮುಂಚಿತವಾಗಿ ಉತ್ತಮ ರೀತಿಯ ಅಭ್ಯಾಸವನ್ನು ಆರಂಭಿಸಿ
- ಅಧಿಕೃತ ವೆಬ್ನಸೈಟ್ ನಲ್ಲಿ ಪ್ರಕಟವಾಗುವ ಸೂಚನೆ ಮತ್ತು ಪ್ರಕಟಣೆಗಳನ್ನು ನಿಯಮಿತವಾಗಿ ಪರಿಶೀಲಿಸಿ
Forest Department ಗೆ ಆಯ್ಕೆ ಸಾಧ್ಯತೆಯನ್ನು ಹೆಚ್ಚಿಸುವ ಪ್ರಮುಖ ಸಲಹೆಗಳು
- ಎಸ್ ಎಸ್ ಎಲ್ ಸಿ ಪರೀಕ್ಷೆ ಅಂಕಗಳನ್ನು ಸರಿಯಾಗಿ ನಮೂದಿಸಿ
- ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕದವರೆಗೆ ಕಾಯಬೇಡಿ
- ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ದೈಹಿಕ ಅಭ್ಯಾಸ ಮಾಡಿ
- ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಕಾಪಾಡಿಕೊಳ್ಳಿ
- ಎಲ್ಲ ಮೂಲ ದಾಖಲೆಗಳನ್ನು ಒಂದೇ ಫೈಲ್ ನಲ್ಲಿ ವ್ಯವಸ್ಥಿತವಾಗಿಟ್ಟುಕೊಳ್ಳಿ
- ಅಧಿಕೃತ ಪ್ರಕಟಣೆಗಳನ್ನು ಮಾತ್ರ ನಂಬಿ ವದಂತಿಗಳಿಗೆ ಅಥವಾ ಮಧ್ಯವರ್ತಿಗಳಿಗೆ ಕಿವಿ ಕೊಡಬೇಡಿ
- ಪರೀಕ್ಷೆಯ ದಿನ ಸಮಯಕ್ಕಿಂತ ಮುಂಚಿತವಾಗಿ ಪರೀಕ್ಷಾ ಕೇಂದ್ರವನ್ನು ತಲುಪಬೇಕು
Forest Department ನೇಮಕಾತಿಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು
Last Updated: 14 July 2026
| ವಿವರ | ದಿನಾಂಕ |
|---|---|
| ಪ್ರಾಧಿಕಾರವು ಅಧಿಸೂಚನೆ ಪ್ರಕಟಣೆ ಮಾಡುವ ದಿನಾಂಕ | 20-07-2026 |
| ಆನ್ಲೈನ್ ಮೂಲಕ ಅರ್ಜಿ ಆರಂಭದ ದಿನಾಂಕ | 01-08-2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 31-08-2026 |
| ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ | 02-09-2026 |
ಪ್ರಮುಖ ಲಿಂಕ್ ಗಳು
ಮಾಹಿತಿಯ ಮೂಲ: ಕರ್ನಾಟಕ ಅರಣ್ಯ ಇಲಾಖೆ ಅಧಿಕೃತ ನೇಮಕಾತಿ ಅಧಿಸೂಚನೆ
| ಅಧಿಕೃತ ವೆಬ್ ಸೈಟ್ | ಕರ್ನಾಟಕ ಅರಣ್ಯ ಇಲಾಖೆ |
| ಅಧಿಕೃತ ಅಧಿಸೂಚನೆ | Karnataka Forest Guard Notification |
| ಅರ್ಜಿ ಸಲ್ಲಿಕೆಯ ಲಿಂಕ್ | ಅರ್ಜಿ ಸಲ್ಲಿಕೆ (01-08-2026) ರ ನಂತರ) |
ಸಂಬಂಧಪಟ್ಟ ಹೆಚ್ಚವರಿ ಲಿಂಕ್ ಗಳು
| ನಮ್ಮ ವಾಟ್ಸಪ್ ಗುಂಪು ಸೇರಲು | ಇಲ್ಲಿ ಕ್ಲಿಕ್ ಮಾಡಿ |
| ಇತರೆ ಸಂಬಂಧಪಟ್ಟ ಹೆಚ್ಚುವರಿ ಮಾಹಿತಿ ಪಡೆಯಿರಿ | ನೇಮಕಾತಿ |
Last Verified: 14 July 2026
ಸೂಚನೆ: Forest Department ಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಲಾಗಿರುವ ಕೊನೆಯ ದಿನಾಂಕದಂದು ಸರ್ವರ್ ಸಮಸ್ಯೆ ಅಥವಾ ತಾಂತ್ರಿಕ ದೋಷಗಳು ಎದುರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಆದ್ದರಿಂದ ಅರ್ಜಿಯನ್ನು ಮೊದಲೇ ಸಲ್ಲಿಸುವುದು ಉತ್ತಮ
ಅರಣ್ಯ ವೀಕ್ಷಕ ಹುದ್ದೆಯ ಪ್ರಯೋಜನಗಳು
ಈ Forest Department ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಈ ಕೆಳಕಂಡಂತಹ ಅನೇಕ ಸರ್ಕಾರಿ ಸೌಲಭ್ಯಗಳು ಮತ್ತು ಪ್ರಯೋಜನಗಳು ಲಭ್ಯವಾಗುತ್ತವೆ ಅವುಗಳೆಂದರೆ
- ಸ್ಥಿರ ಸರ್ಕಾರಿ ಉದ್ಯೋಗ
- ಆಕರ್ಷಕ ವೇತನ
- ವಾರ್ಷಿಕ ವೇತನ ಹೆಚ್ಚಳ
- ಸರ್ಕಾರಿ ಭತ್ಯೆಗಳು
- ವೈದ್ಯಕೀಯ ಸೌಲಭ್ಯ
- ನಿವೃತ್ತಿ ಪ್ರಯೋಜನಗಳು
- ಪದೋನ್ನತಿ ಅವಕಾಶ
- ಸಮಾಜದಲ್ಲಿ ಗೌರವಾನ್ವಿತ ಸ್ಥಾನಮಾನ
- ಪ್ರಕೃತಿ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಸೇವೆ ಸಲ್ಲಿಸುವ ಅವಕಾಶ
ಅಭ್ಯರ್ಥಿಗಳಿಗೆ ಸಲಹೆ
Forest Department ಅರಣ್ಯ ವೀಕ್ಷಕ ಹುದ್ದೆಗೆ ಸ್ಪರ್ಧೆಯು ಹೆಚ್ಚಾಗಿರುವುದರಿಂದ ಹೊರಡಿಸಲಾಗಿರುವ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ಆನ್ಲೈನ್ ಮೂಲಕ ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಿ ದೈಹಿಕ ಪರೀಕ್ಷೆಗಳಿಗೆ ಇಂದಿನಿಂದಲೇ ಅಭ್ಯಾಸವನ್ನು ಆರಂಭಿಸ ಬೇಕಾಗಿರುತ್ತದೆ. ಉತ್ತಮ ಯೋಜನೆ, ನಿಯಮತವಾಗಿ ವ್ಯಾಯಾಮ ಮತ್ತು ಸರಿಯಾದ ದಾಖಲೆಗಳೊಂದಿಗೆ ಸಿದ್ದರಾದರೆ ಈ ನೇಮಕಾತಿಯಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳಬಹುದಾಗಿರುತ್ತದೆ
Karnatakata Forest Department Recruitment 2026: FAQ’s
ಪ್ರಶ್ನೆ-1: ಅರಣ್ಯ ವೀಕ್ಷಕ ಹುದ್ದೆಗೆ ಕನಿಷ್ಠ ವಿದ್ಯಾರ್ಹತೆ ಏನಿರಬೇಕು?
ಉತ್ತರ: ಎಸ್ ಎಲ್ ಎಲ್ ಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು.
ಪ್ರಶ್ನೆ-2: ಫಲಿತಾಂಶಕ್ಕಾಗಿ ಕಾಯುತ್ತಿರುವವರು ಅರ್ಜಿ ಸಲ್ಲಿಸಬಹುದೇ?
ಉತ್ತರ: ಇಲ್ಲ, ಫಲಿತಾಂಶ ಪ್ರಕಟವಾಗಿ ಅಂಕಪಟ್ಟಿ ಹೊಂದಿರಬೇಕು.
ಪ್ರಶ್ನೆ-3: ಆಫ್ಲೈನ್ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದೇ?
ಉತ್ತರ: ಇಲ್ಲ, ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಪ್ರಶ್ನೆ-4: ಸಾಮಾನ್ಯ ಅಭ್ಯರ್ಥಿಗಳ ಅರ್ಜಿ ಸಲ್ಲಿಕೆ ಗರಿಷ್ಠ ವಯೋಮಿತಿ ಎಷ್ಟು?
ಉತ್ತರ: ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 30 ವರ್ಷ ವಯೋಮಿತಿ ಆಗಿದೆ.
ಪ್ರಶ್ನೆ-5: ಈ ನೇಮಕಾತಿಯಲ್ಲಿ ಲಿಖಿತ ಪರೀಕ್ಷೆ ಇದೆಯೇ?
ಉತ್ತರ: ಇಲ್ಲ, ಎಸ್ ಎಲ್ ಎಲ್ ಸಿ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಪ್ರಶ್ನೆ-6: ದೈಹಿಕ ಸಮರ್ಥತೆ ಪರೀಕ್ಷೆಯಲ್ಲಿ ಎಷ್ಟು ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು?
ಉತ್ತರ: ಐದು ಪರೀಕ್ಷೆಯಲ್ಲಿ ಕನಿಷ್ಠ ಮೂರು ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು.
ಪ್ರಶ್ನೆ-7: ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದೇ?
ಉತ್ತರ: ಹೌದು, ಮಹಿಳಾ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಪ್ರಶ್ನೆ-8: ಅರಣ್ಯ ಬುಡಕಟ್ಟು ಅಭ್ಯರ್ಥಿಗಳಿಗೆ ಮೀಸಲಾತಿ ಇದೆಯೇ?
ಉತ್ತರ: ಹೌದು, ನಿಯಮಾನುಸಾರ ವಯೋಮಿತಿ ಸಡಿಲಿಕೆ ಮತ್ತು ಎತ್ತರದ ಅಂಶಗಳಲ್ಲಿ ಮೀಸಲಾತಿ ನೀಡಲಾಗಿದೆ.
ಪ್ರಶ್ನೆ-9: ಅರ್ಜಿ ಶುಲ್ಕವನ್ನು ಹೇಗೆ ಪಾವತಿಸಬಹುದು?
ಉತ್ತರ: ಆನ್ಲೈನ್ ಮೂಲಕ ಅಥವಾ ಚಲನ್ ಮೂಲಕ ಬ್ಯಾಂಕ್ನಲ್ಲಿ ಪಾವತಿ ಮಾಡಬಹುದಾಗಿರುತ್ತದೆ.
ಪ್ರಶ್ನೆ-10: ಅಂತಿಮ ಆಯ್ಕೆ ಯಾವ ಆಧಾರದ ಮೇಲೆ ನಡೆಯುತ್ತದೆ?
ಉತ್ತರ: ಎಸ್ ಎಸ್ ಎಲ್ ಸಿ ಪರೀಕ್ಷೆಯ ಅಂಕಗಳು, ದೈಹಿಕ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ ಇರುತ್ತದೆ.
Forest Department ನೇಮಕಾತಿಯ ಪ್ರಮುಖ ಅಂಶಗಳ ಸಾರಾಂಶಗಳು
| ವಿವರ | ಮಾಹಿತಿ |
|---|---|
| ನೇಮಕಾತಿ ಇಲಾಖೆ | ಕರ್ನಾಟಕ ಅರಣ್ಯ ಇಲಾಖೆ |
| ಹುದ್ದೆಯ ಹೆಸರು | ಅರಣ್ಯ ವೀಕ್ಷಕರು |
| ಒಟ್ಟು ಹುದ್ದೆಗಳು | 775 ಹುದ್ದೆಗಳು |
| ವಿದ್ಯಾರ್ಹತೆ | ಎಸ್ ಎಲ್ ಎಲ್ ಸಿ / ತತ್ಸಮಾನ |
| ಅರ್ಜಿ ಸಲ್ಲಿಕೆ ವಿಧಾನ | ಆನ್ಲೈನ್ ಮಾತ್ರ |
| ಕನಿಷ್ಠ ವಯಸ್ಸು | 18 ವರ್ಷ ಪೂರ್ಣಗೊಂಡಿರಬೇಕು |
| ಗರಿಷ್ಠ ವಯಸ್ಸು | 30 ರಿಂದ 33 ವರ್ಷಗಳು (ಮೀಸಲಾತಿ ನಿಯಮಗಳನ್ವಯ) |
| ಆಯ್ಕೆ ವಿಧಾನ | ಎಸ್ ಎಲ್ ಎಲ್ ಸಿ ಅಂಕಗಳು + PST + ET + PET + ದಾಖಲೆ ಪರಿಶೀಲನೆ + ವೈದ್ಯಕೀಯ ಪರೀಕ್ಷೆ |
| ವೇತನ ಶ್ರೇಣಿ | 27,500/- ರೂಗಳಿಂದ 46,675/- ರೂಗಳು |
ಅಭ್ಯರ್ಥಿಗಳಿಗೆ ಅಂತಿಮ ಮಾರ್ಗದರ್ಶನ
ಕರ್ನಾಟಕ ಸರ್ಕಾರ ಅರಣ್ಯ ಇಲಾಖೆಯ ಅರಣ್ಯ ವೀಕ್ಷಕ ಹುದ್ದೆಗಳಿಗೆ ನಡೆಸಲಾಗುತ್ತಿರುವ ನೇಮಕಾತಿಯಲ್ಲಿ ಯಶಸ್ಸು ಪಡೆಯಲು ಕೇವಲ ಅರ್ಜಿ ಸಲ್ಲಿಸುವುದು ಅಷ್ಟೇ ಸಾಕಾಗುವುದಿಲ್ಲ ಬದಲಾಗಿ ಅಭ್ಯರ್ಥಿಗಳು ದೈಹಿಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವುದು ದಾಖಲೆಗಳನ್ನು ಸರಿಯಾಗಿ ಸಿದ್ಧಪಡಿಸಿಕೊಳ್ಳುವುದು ಹಾಗೂ ಅಧಿಸೂಚನೆಯಲ್ಲಿ ನೀಡಿರುವ ಪ್ರತಿಯೊಂದು ಸೂಚನೆಯನ್ನು ಕಡ್ಡಾಯವಾಗಿ ಪಾಲಿಸುವುದು ಸಹ ಅತ್ಯಗತ್ಯವಾಗಿರುತ್ತದೆ
Forest Department ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ ಯಾವುದೇ ತಪ್ಪು ಮಾಹಿತಿಯನ್ನು ನೀಡುವುದನ್ನು ತಪ್ಪಿಸಿ, ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ ಹಾಗೂ ಆಧಾರ್ ವಿವರಗಳನ್ನು ಸರಿಯಾಗಿ ನಮೂದಿಸಿ ಮತ್ತು ದಾಖಲೆಗಳನ್ನು ಸ್ಪಷ್ಟವಾಗಿ ಕಾಣುವ ರೀತಿಯಲ್ಲಿ ಅಪ್ಲೋಡ್ ಮಾಡಿ ಹಾಗೂ ಅರ್ಜಿ ಸಲ್ಲಿಸಿದ ನಂತರ ಅದರ ಪ್ರಿಂಟ್ ಔಟ್ ಪ್ರತಿಯನ್ನು ಸುರಕ್ಷಿತವಾಗಿ ನಿಮ್ಮ ಬಳಿ ಇಟ್ಟುಕೊಳ್ಳಿ.
ದೈಹಿಕ ಪರೀಕ್ಷೆಗೆ ಕನಿಷ್ಠ ಒಂದರಿಂದ ಎರಡು ತಿಂಗಳ ಮುಂಚಿತವಾಗಿ ಅಭ್ಯಾಸವನ್ನು ಆರಂಭಿಸಬೇಕು ಓಟ, ಜಂಪಿಂಗ್ ಹಾಗೂ ಇತರೆ ಪರೀಕ್ಷೆಗಳಲ್ಲಿ ಉತ್ತಮ ಸಾಧನೆಯನ್ನು ಮಾಡಲು ಅತ್ಯುತ್ತಮ ಅಭ್ಯಾಸ ಅವಶ್ಯಕವಾಗಿರುತ್ತದೆ. ಈ ಅವಧಿಯಲ್ಲಿ ಆರೋಗ್ಯಕರ ಆಹಾರ ಸೇವನೆ, ನಿಯಮಿತ ವ್ಯಾಯಾಮ ಹಾಗೂ ಸಾಕಷ್ಟು ವಿಶ್ರಾಂತಿ ಕೂಡ ಯಶಸ್ಸಿಗೆ ಸಹಕಾರಿಯಾಗುತ್ತದೆ
ಕೊನೆಯ ಮಾತು
ಕರ್ನಾಟಕ ಸರ್ಕಾರದ Forest Department ನೇಮಕಾತಿ 2026, ಎಸ್ ಎಸ್ ಎಲ್ ಸಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಗೆ ಅತ್ಯುತ್ತಮ ಸರ್ಕಾರಿ ಉದ್ಯೋಗದ ಅವಕಾಶವಾಗಿದೆ. ಈ ನೇಮಕಾತಿ ಮೂಲಕ ಒಟ್ಟು 775 ಅರಣ್ಯ ವೀಕ್ಷಕ ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ರಾಜ್ಯದ ಅನೇಕ ಯುವಕ ಯುವತಿಯರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಸರ್ಕಾರಿ ಸೇವೆಗೆ ಸೇರಲು ಬಯಸುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ.
ಈ ಹುದ್ದೆಗಳಲ್ಲಿ ಉತ್ತಮ ವೇತನ, ಉದ್ಯೋಗ ಭದ್ರತೆ, ಸರಕಾರಿ ಸೌಲಭ್ಯಗಳು ಹಾಗೂ ಪ್ರಕೃತಿ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ದೊರೆಯುವುದರಿಂದ ಇದೊಂದು ಅತ್ಯುತ್ತಮ ಉದ್ಯೋಗ ಅವಕಾಶವಾಗಿದೆ.
ಅರ್ಹ ಅಭ್ಯರ್ಥಿಗಳು 01 ಆಗಸ್ಟ್ 2026 ರಿಂದ 31 ಆಗಸ್ಟ್ 2026 ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ, ದೈಹಿಕ ಪರೀಕ್ಷೆಗೆ ಇಂದಿನಿಂದಲೇ ಸಿದ್ದತೆಯನ್ನು ಆರಂಭಿಸುವುದು ಉತ್ತಮವಾಗಿದೆ. ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ಎಲ್ಲಾ ದಾಖಲೆಗಳನ್ನು ಸರಿಯಾಗಿ ಸಿದ್ಧಪಡಿಸಿ ನಿಗದಿತ ವೇಳಾಪಟ್ಟಿಯಂತೆ ಅರ್ಜಿ ಸಲ್ಲಿಸಿ, ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಂಡರೆ ಈ ಪ್ರತಿಷ್ಠಿತ ಸರ್ಕಾರಿ ಉದ್ಯೋಗವನ್ನು ಪಡೆಯುವ ಅವಕಾಶವನ್ನು ಹೆಚ್ಚಿಸಿಕೊಳ್ಳಬಹುದು.
Related Information: Jobs
Related Information: Exam Tips
Author Note: ಈ Forest Department Recruitment ಲೇಖನವನ್ನು ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ 2026 ಕುರಿತು ಅಧಿಕೃತ ಅಧಿಸೂಚನೆ ಆಧರಿಸಿ ಸರಳ ಕನ್ನಡದಲ್ಲಿ ಸಿದ್ಧಪಡಿಸಲಾಗಿದೆ. ಅಭ್ಯರ್ಥಿಗಳಿಗೆ ಅರ್ಹತೆ, ಆಯ್ಕೆ ವಿಧಾನ, ಅರ್ಜಿ ಪ್ರಕ್ರಿಯೆ ಹಾಗೂ ಪ್ರಮುಖ ದಿನಾಂಕಗಳನ್ನು ಸುಲಭವಾಗಿ ಅರ್ಥವಾಗುವಂತೆ ವಿವರಿಸಲಾಗಿದೆ.
*****
About Author: ರಂಗನಾಥ ಬಿ ಜಿ ರವರು, ಅರ್ಥಶಾಸ್ತ್ರದಲ್ಲಿ ಎಂಎ ಪದವಿಯನ್ನು ಪಡೆದಿದ್ದು, ಕಳೆದ 3 ವರ್ಷಗಳಿಂದ ಸರ್ಕಾರಿ ಉದ್ಯೋಗ, ಶಿಕ್ಷಣ, ಯೋಜನೆಗಳು ಹಾಗೂ ಸಾರ್ವಜನಿಕ ಸೇವೆಗಳ ಕುರಿತು ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಕನ್ನಡದಲ್ಲಿ ಪ್ರಕಟಿಸುತ್ತಿದ್ದಾರೆ. ಓದುಗರಿಗೆ ಉಪಯುಕ್ತ, ಸಮಯೋಚಿತ ಮತ್ತು ಸುಲಭ ಮಾಹಿತಿಯನ್ನು ತಲುಪಿಸುವುದು ಇವರ ಪ್ರಮುಖ ಉದ್ದೇಶವಾಗಿದೆ.
*****
Disclaimer: ಈ Forest Department Recruitment ಲೇಖನವನ್ನು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಕರ್ನಾಟಕ ಅರಣ್ಯ ಇಲಾಖೆಯ ಅಧಿಕೃತ ಅಧಿಸೂಚನೆ ಹಾಗೂ ವೆಬ್ಸೈಟ್ನಲ್ಲಿ ಪ್ರಕಟಿಸಿರುವ ಮಾಹಿತಿಯನ್ನು ಪರಿಶೀಲಿಸಿ ನಂತರವೇ ಅಂತಿಮ ನಿರ್ಧಾರ ಕೈಗೊಳ್ಳಬೇಕು.