Telegram Join Our Telegram WhatsApp Join Our WhatsApp

Best Courses After PUC Arts in 2026: ಉನ್ನತ ಶಿಕ್ಷಣದ ಕೋರ್ಸುಗಳ ಬಗ್ಗೆ ಮತ್ತು ಭವಿಷ್ಯದ ಉದ್ಯೋಗಾವಕಾಶಗಳ ಬಗ್ಗೆ ಸಂಪೂರ್ಣ ಮಾಹಿತಿ

PUC Arts ನಂತರದ ಈ ಪ್ರಮುಖ ಕೋರ್ಸುಗಳ ಬಗ್ಗೆ ತಿಳಿದುಕೊಳ್ಳಿ

 

PUC Arts ನಂತರ ಯಾವ ಕೋರ್ಸ್ ಆಯ್ಕೆ ಮಾಡಬೇಕು, ಪಿಯುಸಿ ಆರ್ಟ್ಸ್ ನಂತರ ಸರ್ಕಾರಿ ಉದ್ಯೋಗ ಪಡೆಯಲು ಯಾವ ಕೋರ್ಸ್ ಉತ್ತಮವಾಗಿದೆ. BA, BA LLB, BSW, BBA, Journalism, BCA ಅಥವಾ Digital Marketing – ಯಾವುದು ಉತ್ತಮ? ಎಂಬ ಪ್ರಶ್ನೆಗಳು ಪಿಯುಸಿ ಆರ್ಟ್ಸ್ ಅನ್ನು ಪೂರ್ಣಗೊಳಿಸಿದ ಅನೇಕ ವಿದ್ಯಾರ್ಥಿಗಳಲ್ಲಿ ಕಂಡುಬರುವುದು ಸಾಮಾನ್ಯವಾಗಿದೆ

ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನು ಓದಿರುವ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಮತ್ತು ಮೆಡಿಕಲ್ ನಂತಹ ಕೋರ್ಸುಗಳು, ವಾಣಿಜ್ಯ ವಿಭಾಗವನ್ನು ಓದಿರುವವರು ಬಿಕಾಂ, ಬಿಬಿಎ ಅಥವಾ ಸಿಎ ಕೋರ್ಸ್ ಗಳನ್ನು ಓದುತ್ತಾರೆ. ಆದರೆ PUC Arts ವಿಭಾಗದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಕಡಿಮೆ ಅವಕಾಶಗಳಿವೆ ಎಂದು ಕೆಲವರು ಭಾವಿಸುತ್ತಾರೆ, ಆದರೆ ಇದು ಸಂಪೂರ್ಣವಾಗಿ ತಪ್ಪು ಕಲ್ಪನೆಯಾಗಿದೆ. ವಾಸ್ತವದಲ್ಲಿ ಪಿಯುಸಿ ಆರ್ಟ್ಸ್ ನಂತರ ಸರ್ಕಾರಿ ಉದ್ಯೋಗ, ಕಾನೂನು ಶಿಕ್ಷಣ, ಸಮಾಜ ಸೇವೆ, ಆಡಳಿತ, ಪತ್ರಿಕೋದ್ಯಮ, ಬ್ಯಾಂಕಿಂಗ್, ಡಿಜಿಟಲ್ ಮಾರ್ಕೆಟಿಂಗ್, ಕಂಪ್ಯೂಟರ್ ವಿನ್ಯಾಸ, ಪ್ರವಾಸೋದ್ಯಮ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಳ್ಳುವಂತಹ ಅವಕಾಶಗಳು ದೊರೆಯುತ್ತವೆ

PUC Arts ವಿಭಾಗದಲ್ಲಿ ಇತಿಹಾಸ, ಅರ್ಥಶಾಸ್ತ್ರ ರಾಜ್ಯಶಾಸ್ತ್ರ ಮನೋವಿಜ್ಞಾನ, ಸಮಾಜಶಾಸ್ತ್ರ ಭೂಗೋಳಶಾಸ್ತ್ರ ಕನ್ನಡ ಮತ್ತು ಇಂಗ್ಲಿಷ್ ನಂತಹ ವಿಷಯಗಳನ್ನು ಅಧ್ಯಯನ ಮಾಡಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಜ್ಞಾನ, ವಿಶ್ಲೇಷಣಾ ಸಾಮರ್ಥ್ಯ, ಬರವಣಿಗೆಯ ಕೌಶಲ್ಯ, ಸಮೂಹನ ಸಾಮರ್ಥ್ಯ ಮತ್ತು ಸಾಮಾಜಿಕ ಅರಿವು ಬೆಳೆಯುತ್ತದೆ. ಈ ಕೌಶಲ್ಯಗಳು KPSC, UPSC, SSC, IBPS, Banking, ಪೊಲೀಸ್ ಇಲಾಖೆ, ಶಿಕ್ಷಣ, ಮಾಧ್ಯಮ ಮತ್ತು ಆಡಳಿತ ಕ್ಷೇತ್ರಗಳಲ್ಲಿ ಬಹಳ ಉಪಯುಕ್ತವಾಗಿವೆ.

ಹೀಗಾಗಿ ಪಿಯುಸಿ ಆರ್ಟ್ಸ್ ನಂತರ ಸರಿಯಾದ ಕೋರ್ಸ್ ಅನ್ನು ಆಯ್ಕೆ ಮಾಡುವಾಗ ವಿದ್ಯಾರ್ಥಿಗಳು ತಮ್ಮ ಆಸಕ್ತಿ, ಸಾಮರ್ಥ್ಯ, ಭವಿಷ್ಯದ ಉದ್ಯೋಗ ಗುರಿ ಮತ್ತು ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು

ಪ್ರಸ್ತುತ ಲೇಖನದಲ್ಲಿ PUC Arts ನಂತರದಲ್ಲಿ ಇರುವಂತಹ ಉನ್ನತ ಶಿಕ್ಷಣದ ಕೋರ್ಸುಗಳು, ಅವುಗಳ ಅವಧಿ, ಭವಿಷ್ಯದ ಉದ್ಯೋಗಾವಕಾಶಗಳು ಮತ್ತು ಪಿಯುಸಿ ಆರ್ಟ್ಸ್ ನಂತರ ಇರುವ ಹೆಚ್ಚು ಸಂಬಳ ನೀಡುವ ಕೆಲಸಗಳು ಹಾಗೂ ಪ್ರಶ್ನೋತ್ತರಗಳ ಬಗ್ಗೆ ಮಾಹಿತಿಯನ್ನು ಸಂಪೂರ್ಣವಾಗಿ ನೀಡಿದ್ದೇವೆ ಈ ಲೇಖನವನ್ನು ಸಂಪೂರ್ಣವಾಗಿ ಓದುವುದರ ಮೂಲಕ ಪಿಯುಸಿ ಆರ್ಟ್ಸ್ ನಂತರದ ಪ್ರಮುಖ ಕೋರ್ಸ್ ಗಳ ಬಗ್ಗೆ ಮಾಹಿತಿ ಪಡೆಯಿರಿ.

PUC Arts ನಂತರ ಕೋರ್ಸ್ ಆಯ್ಕೆ ಮಾಡುವಾಗ ಗಮನಿಸಬೇಕಾದ ಅಂಶಗಳು

ಪಿಯುಸಿ ಆರ್ಟ್ಸ್ ನಂತರ ಕೋರ್ಸ್ ಅನ್ನು ಆಯ್ಕೆ ಮಾಡುವಾಗ ಕೇವಲ ಕುಟುಂಬದವರು, ಸ್ನೇಹಿತರು ಅಥವಾ ಸಂಬಂಧಿಕರು ಆಯ್ಕೆ ಮಾಡಿಕೊಂಡ ಕೋರ್ಸ್ ಅನ್ನು ಆಯ್ಕೆ ಮಾಡಿಕೊಂಡು ಓದುವುದು ಸರಿಯಾದ ವಿಧಾನವಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಗೂ ಸಹ ಅವರದೇ ಆದ ಆಸಕ್ತಿ, ಸಾಮರ್ಥ್ಯ ಮತ್ತು ವಿಭಿನ್ನ ವೃತ್ತಿ ಗುರಿಗಳನ್ನು ಹೊಂದಿರುತ್ತಾರೆ ಆದ್ದರಿಂದ ಈ ಕೆಳಕಂಡ ಅಂಶಗಳನ್ನು ಕಡ್ಡಾಯವಾಗಿ ಗಮನಿಸಬೇಕು

ಆಸಕ್ತಿಗಳ ಗುರುತಿಸುವಿಕೆ

PUC Arts ಫಲಿತಾಂಶ ಬಂದ ನಂತರ ಮೊದಲು ನಿಮಗೆ ಯಾವ ಕ್ಷೇತ್ರದಲ್ಲಿ ಆಸಕ್ತಿ ಇದೆ ಎಂಬುದನ್ನು ತಿಳಿದುಕೊಳ್ಳಿ. ಇತಿಹಾಸ, ರಾಜಕೀಯ, ಕಾನೂನು, ಶಿಕ್ಷಣ ಮತ್ತು ಬರವಣಿಗೆಯಲ್ಲಿ ಆಸಕ್ತಿ ಇದ್ದರೆ, BA, BA LLB, BSW ಅಥವಾ Journalism ಉತ್ತಮ ಆಯ್ಕೆಗಳಾಗಿವೆ.

ನಿಮಗೇನಾದರೂ ವ್ಯವಹಾರ ಮತ್ತು ನಿರ್ವಹಣೆಯಲ್ಲಿ ಆಸಕ್ತಿ ಇದ್ದರೆ BBA ಕೋರ್ಸ್ ಸೂಕ್ತವಾಗಿದೆ. ಕಂಪ್ಯೂಟರ್ ಕ್ಷೇತ್ರದಲ್ಲಿ ಆಸಕ್ತಿ ಇದ್ದರೆ BCA ಅಥವಾ ಡಿಜಿಟಲ್ ಕೌಶಲ್ಯಗಳ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿರುತ್ತದೆ

ಭವಿಷ್ಯದಲ್ಲಿ ಉದ್ಯೋಗದ ಗುರಿ

ನಿಮ್ಮ ಭವಿಷ್ಯದ ಗುರಿ ಸರ್ಕಾರಿ ಉದ್ಯೋಗವಾಗಿದ್ದರೆ ಬಿಎ ಪದವಿಯು ತುಂಬಾ ಉಪಯುಕ್ತವಾಗಿದೆ. ವಕೀಲರಾಗಲು ಬಯಸಿದರೆ ಐದು ವರ್ಷದ Integrated Law Course ಅನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ ಅಂಶವಾಗಿದೆ. ಶಿಕ್ಷಕರಾಗಲು ಬಯಸಿದರೆ BA ನಂತರ B.Ed. ಮಾಡಬಹುದು. ಮಾಧ್ಯಮ ಕ್ಷೇತ್ರದಲ್ಲಿ ಆಸಕ್ತಿ ಇದ್ದರೆ Journalism and Mass Communication ವಿಭಾಗದ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳುವುದು.

ಕೋರ್ಸಿನ ಅವಧಿ ಮತ್ತು ವೆಚ್ಚ

ಒಂದು ನಿಗದಿತ ಕೋರ್ಸನ್ನು ಪೂರ್ಣಗೊಳಿಸಲು ಎಷ್ಟು ವರ್ಷ ಕಾಲಾವಧಿ ಬೇಕಾಗುತ್ತದೆ, ಕಾಲೇಜಿನ ಶುಲ್ಕ ಎಷ್ಟಿದೆ ಮತ್ತು ಹೆಚ್ಚುವರಿ ಆಗಬಹುದಾದ ವೆಚ್ಚ ಎಷ್ಟು ಎಂಬುದನ್ನು ಮೊದಲು ಪರಿಶೀಲಿಸಿಕೊಳ್ಳಬೇಕು.

ಉದ್ಯೋಗಾವಕಾಶಗಳು

ಸದರಿ ಕೋರ್ಸ್ ಮುಗಿದ ನಂತರ ಯಾವ ಕ್ಷೇತ್ರದಲ್ಲಿ ಉದ್ಯೋಗಗಳು ಲಭ್ಯವಿರುತ್ತವೆ, ಆರಂಭಿಕ ವೇತನ ಎಷ್ಟಿರುತ್ತದೆ? ಅನುಭವದೊಂದಿಗೆ ಬೆಳವಣಿಗೆ ಅವಕಾಶಗಳು ಎಷ್ಟಿವೆ ಎಂಬುದನ್ನು ಸಹ ತಿಳಿದುಕೊಳ್ಳಬೇಕು

ಹೆಚ್ಚುವರಿ ಕೌಶಲ್ಯಗಳ ಅಭಿವೃದ್ಧಿ

ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ ಕೇವಲ ಪದವಿಯನ್ನು ಪಡೆದರೆ ಸಾಕಾಗುವುದಿಲ್ಲ ಇದರ ಜೊತೆಯಲ್ಲಿ ಕಂಪ್ಯೂಟರ್ ಜ್ಞಾನ, ಇಂಗ್ಲಿಷ್ ಭಾಷೆಯ ಸಂವಹನ ಕೌಶಲ್ಯ, ಡಿಜಿಟಲ್ ಕೌಶಲ್ಯ, MS Office, ಮಾಹಿತಿ ವಿಶ್ಲೇಷಣೆ ಹಾಗೂ ನಿರ್ವಹಣೆ ಮತ್ತು ಪ್ರಾಯೋಗಿಕ ಅಂಶಗಳ ಅನುಭವವು ಸಹ ಬೇಕಾಗುತ್ತದೆ

PUC Arts ನಂತರ ಇರುವ ಪ್ರಮುಖ ಕೋರ್ಸ್‌ ಗಳು

Bachelor of Arts (BA) – ಬ್ಯಾಚುಲರ್ ಆಫ್ ಆರ್ಟ್ಸ್

PUC Arts ನಂತರದಲ್ಲಿ ವಿದ್ಯಾರ್ಥಿಗಳು ಅತಿ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುವ ಆಯ್ಕೆಗಳಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ ಕೋರ್ಸ್ ಪ್ರಮುಖವಾಗಿದೆ ಸರ್ಕಾರಿ ಉದ್ಯೋಗಕ್ಕೆ ತಯಾರಿ ಮಾಡುವ ವಿದ್ಯಾರ್ಥಿಗಳು ಈ ಬಿಎ ಕೋರ್ಸನ್ನು ತೆಗೆದುಕೊಳ್ಳುವುದರಿಂದ ವಿಶೇಷ ಪ್ರಯೋಜನ ದೊರೆಯುತ್ತದೆ

ಕೋರ್ಸಿನ ಅವಧಿ: 3 ವರ್ಷಗಳು

ಓದಬಹುದಾದ ಪ್ರಮುಖ ಅಂಶಗಳು

  • ಇತಿಹಾಸ
  • ರಾಜ್ಯಶಾಸ್ತ್ರ
  • ಅರ್ಥಶಾಸ್ತ್ರ
  • ಸಮಾಜಶಾಸ್ತ್ರ
  • ಮನೋವಿಜ್ಞಾನ
  • ಭೂಗೋಳಶಾಸ್ತ್ರ
  • ಕನ್ನಡ
  • ಇಂಗ್ಲಿಷ್
  • ಪತ್ರಿಕೋದ್ಯಮ
  • ಸಾರ್ವಜನಿಕ ಆಡಳಿತ

ಪ್ರಮುಖ ಪ್ರಯೋಜನಗಳು

PUC Arts ನಂತರ ಬಿಎ ಪದವಿಯನ್ನು ಓದುವುದರಿಂದ ವಿದ್ಯಾರ್ಥಿಗಳಿಗೆ ವಿವಿಧ ವಾಸ್ತವಿಕ ವಿಷಯಗಳಲ್ಲಿ ಆಳವಾದ ಜ್ಞಾನವನ್ನು ಪಡೆದುಕೊಳ್ಳಲು ಸಹಕಾರಿಯಾಗುತ್ತದೆ ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿದ್ಯಾರ್ಥಿಗಳಿಗೆ ಇತಿಹಾಸ, ರಾಜ್ಯಶಾಸ್ತ್ರ ಅರ್ಥಶಾಸ್ತ್ರ ಮತ್ತು ಭೂಗೋಳಶಾಸ್ತ್ರದಂತಹ ವಿಷಯಗಳು ಬಹಳ ಉಪಯುಕ್ತವಾಗುತ್ತವೆ.

ಬಿಎ ಕೋರ್ಸಿನ ನಂತರ ವಿದ್ಯಾರ್ಥಿಗಳು MA, B.Ed., LLB ಮತ್ತು ಇತರ ಉನ್ನತ ಶಿಕ್ಷಣ ಕೋರ್ಸ್ ಗಳನ್ನು ಮುಂದುವರಿಸಬಹುದಾಗಿರುತ್ತದೆ.

ಬಿಎ ನಂತರ ಉದ್ಯೋಗಾವಕಾಶಗಳು

ಸೂಚನೆ: ಸರ್ಕಾರಿ ಉದ್ಯೋಗಗಳ ವಿಷಯದಲ್ಲಿ “ಅಧಿಕೃತ ನೇಮಕಾತಿ ಅಧಿಸೂಚನೆಯ ಪ್ರಕಾರ ಅರ್ಹತೆ ಬದಲಾಗಬಹುದು

  • ಶಿಕ್ಷಕ
  • ಸರ್ಕಾರಿ ಉದ್ಯೋಗಿ
  • ಪತ್ರಕರ್ತ
  • ಸಂಶೋಧನಾ ಸಹಾಯಕ
  • ಆಡಳಿತ ಸಹಾಯಕ
  • ಕಂಟೆಂಟ್ ರೈಟರ್
  • ಸಾಮಾಜಿಕ ಕಾರ್ಯಕರ್ತ
  • ವಿಷಯ ತಜ್ಞ
  • ಮಾನವ ಸಂಪನ್ಮೂಲ ಸಹಾಯಕ

ಸರ್ಕಾರಿ ಉದ್ಯೋಗವನ್ನು ಹೊಂದಬೇಕೆಂಬ ಗುರಿಯನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಬಿಎ ಪದವಿಯು ಅತ್ಯಂತ ಉಪಯುಕ್ತ ಪದವಿ ಕೋರ್ಸ್ ಗಳಲ್ಲಿ ಒಂದಾಗಿದ್ದು ಇಂದಿನ ವಿದ್ಯಾರ್ಥಿಗಳಲ್ಲೂ ಸಹ ಜನಪ್ರಿಯ ಕೋರ್ಸ್ ಆಗಿದೆ

Journalism and Mass Communication (ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ)

ಬರವಣಿಗೆ, ಸುದ್ದಿ, ದೂರದರ್ಶನ, ಮಾಧ್ಯಮ, ರೇಡಿಯೋ, ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಮೀಡಿಯಾ ಗಳಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ Journalism and Mass Communication ಕೋರ್ಸ್ ಉತ್ತಮ ಆಯ್ಕೆಯಾಗಿದೆ

ಕೋರ್ಸಿನ ಅವಧಿ:‌ 3 ವರ್ಷಗಳು

ಅಧ್ಯಯನ ಮಾಡುವ ಪ್ರಮುಖ ವಿಷಯಗಳು

  • ಪತ್ರಿಕೋದ್ಯಮದ ಮೂಲಭೂತ ತತ್ವಗಳು
  • ಸುದ್ದಿ ಬರವಣಿಗೆ
  • ವರದಿ ತಯಾರಿಕೆ
  • ಟಿವಿ ಪತ್ರಿಕೋದ್ಯಮ
  • ರೇಡಿಯೋ ಕಾರ್ಯಕ್ರಮ
  • ಡಿಜಿಟಲ್ ಮೀಡಿಯಾ
  • ಛಾಯಾಗ್ರಹಣ
  • ವಿಡಿಯೋ ಎಡಿಟಿಂಗ್
  • ಸಾಮಾಜಿಕ ಮಾಧ್ಯಮ ನಿರ್ವಹಣೆ

ಇಂದಿನ ದಿನಗಳಲ್ಲಿ ಪತ್ರಿಕೆಗಳ ಜೊತೆಯಲ್ಲಿ ವೆಬ್ ಸೈಟ್‌ ಗಳು, ಯೂಟ್ಯೂಬ್, ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಸುದ್ದಿ ಮಾಧ್ಯಮಗಳು ವೇಗವಾಗಿ ಬೆಳೆಯುತ್ತಿವೆ ಇದರಿಂದ ಪತ್ರಿಕೋದ್ಯಮ ಕ್ಷೇತ್ರವು ಮತ್ತು ಡಿಜಿಟಲ್ ಕಂಟೆಂಟ್ ಕ್ಷೇತ್ರವು ಹೊಸ ಅವಕಾಶಗಳನ್ನು ಸೃಷ್ಟಿ ಮಾಡುತ್ತಿದೆ.

ಉದ್ಯೋಗಾವಕಾಶಗಳು

ಸೂಚನೆ: ಸರ್ಕಾರಿ ಉದ್ಯೋಗಗಳ ವಿಷಯದಲ್ಲಿ “ಅಧಿಕೃತ ನೇಮಕಾತಿ ಅಧಿಸೂಚನೆಯ ಪ್ರಕಾರ ಅರ್ಹತೆ ಬದಲಾಗಬಹುದು

  • ಪತ್ರಕರ್ತ
  • ವರದಿಗಾರ
  • ಸುದ್ದಿ ನಿರೂಪಕ
  • ಕಂಟೆಂಟ್ ರೈಟರ್
  • ಡಿಜಿಟಲ್ ಮೀಡಿಯಾ ಎಕ್ಸಿಕ್ಯೂಟಿವ್
  • ಸೋಶಿಯಲ್ ಮೀಡಿಯಾ ಮ್ಯಾನೇಜರ್
  • ವಿಡಿಯೋ ಎಡಿಟರ್
  • ಬ್ಲಾಗರ್
  • ಕಾಪಿರೈಟರ್

ಬರವಣಿಗೆ ಮತ್ತು ಸೃಜನಶೀಲತೆ ಅಂಶಗಳಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಈ ಕ್ಷೇತ್ರವು ಉತ್ತಮ ಆಯ್ಕೆಯಾಗಿದ್ದು ಈ ಕ್ಷೇತ್ರದಲ್ಲಿ ಉತ್ತಮ ಭವಿಷ್ಯವಿದೆ

Bachelor of Social Work (BSW- ಸಮಾಜ ಕಾರ್ಯದಲ್ಲಿ ಪದವಿ)

ಸಮಾಜ ಸೇವೆ, ಜನರೊಂದಿಗೆ ಕೆಲಸ ಮಾಡುವುದು ಮತ್ತು ಸಮಾಜದಲ್ಲಿರುವ ಹಲವು ರೀತಿಯ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ Bachelor of Social Work (BSW) ಅತ್ಯುತ್ತಮ ಆಯ್ಕೆಯಾಗಿದೆ

ಕೋರ್ಸಿನ ಅವಧಿ:‌ 3 ವರ್ಷಗಳು

ಪ್ರಮುಖ ವಿಷಯಗಳು

  • ಸಮಾಜಶಾಸ್ತ್ರ
  • ಸಾಮಾಜಿಕ ಸಮಸ್ಯೆಗಳು
  • ಗ್ರಾಮೀಣ ಅಭಿವೃದ್ಧಿ
  • ಸಮುದಾಯ ಅಭಿವೃದ್ಧಿ
  • ಮಕ್ಕಳ ಕಲ್ಯಾಣ
  • ಮಹಿಳಾ ಸಬಲೀಕರಣ
  • ಮಾನವ ಹಕ್ಕುಗಳು

ಉದ್ಯೋಗ ಕ್ಷೇತ್ರಗಳು

BSW ಪದವಿಯನ್ನು ಪಡೆದ ವಿದ್ಯಾರ್ಥಿಗಳು NGO, ಸರ್ಕಾರಿ ಯೋಜನೆಗಳು, ಆಸ್ಪತ್ರೆಗಳು, ಅಭಿವೃದ್ಧಿ ಸಮಿತಿಗಳು ಮತ್ತು ಸಮಾಜ ಕಲ್ಯಾಣ ಇಲಾಖೆ ಅಂತಹ ಹಲವು ಇಲಾಖೆಗಳಲ್ಲಿ ಕೆಲಸ ಮಾಡಬಹುದಾಗಿರುತ್ತದೆ

ಪ್ರಮುಖ ಹುದ್ದೆಗಳು

ಸೂಚನೆ: ಸರ್ಕಾರಿ ಉದ್ಯೋಗಗಳ ವಿಷಯದಲ್ಲಿ “ಅಧಿಕೃತ ನೇಮಕಾತಿ ಅಧಿಸೂಚನೆಯ ಪ್ರಕಾರ ಅರ್ಹತೆ ಬದಲಾಗಬಹುದು

  • ಸಮಾಜ ಸೇವಕ
  • ಸಮುದಾಯ ಅಭಿವೃದ್ಧಿ ಅಧಿಕಾರಿ
  • ಯೋಜನಾ ಸಂಯೋಜಕರು
  • NGO ಕಾರ್ಯನಿರ್ವಾಹಕರು
  • ಕಲ್ಯಾಣ ಅಧಿಕಾರಿ
  • ಕೌನ್ಸಿಲರ್ ಸಹಾಯಕ

BSW ಮತ್ತು MSW ಕೋರ್ಸ್ ಗಳನ್ನು ಮಾಡಿಕೊಳ್ಳುವುದರಿಂದ ಸಮಾಜ ಸೇವೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಬಹುದು

BA LLB – ಕಾನೂನು ಕ್ಷೇತ್ರಕ್ಕೆ ಅತ್ಯುತ್ತಮ ಆಯ್ಕೆ

ಕಾನೂನು ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಪಿಯುಸಿ ವಿದ್ಯಾರ್ಥಿಗಳಿಗೆ 5 ವರ್ಷದ Integrated Law Course ಉತ್ತಮ ಆಯ್ಕೆಯಾಗಿದೆ

ಪ್ರಮುಖ ಕೋರ್ಸುಗಳು

  • BA LLB
  • BBA LLB
  • B.Com LLB

ಕೋರ್ಸಿನ ಅವಧಿ:‌ 5 ವರ್ಷಗಳು (ಪಿಯುಸಿ ನಂತರ)

ಕಾನೂನು ಪದವಿಯ ಪ್ರಯೋಜನಗಳು

ಕಾನೂನು ಪದವಿಯನ್ನು ಪಡೆದ ನಂತರ ವಕೀಲರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಬಹುದು. ಮುಂದುವರೆದು ಅನುಭವ ಮತ್ತು ಪರಿಣಿತಿ ಯನ್ನು ಗಳಿಸಿದಂತೆ ಕಾನೂನು ಕ್ಷೇತ್ರದಲ್ಲಿ ಉತ್ತಮ ಆದಾಯ ಮತ್ತು ಗೌರವಯುತ ಸ್ಥಾನವನ್ನು ಪಡೆಯಬಹುದು.

ಉದ್ಯೋಗಾವಕಾಶಗಳು

ಸೂಚನೆ: ಸರ್ಕಾರಿ ಉದ್ಯೋಗಗಳ ವಿಷಯದಲ್ಲಿ “ಅಧಿಕೃತ ನೇಮಕಾತಿ ಅಧಿಸೂಚನೆಯ ಪ್ರಕಾರ ಅರ್ಹತೆ ಬದಲಾಗಬಹುದು

  • ವಕೀಲ
  • ಕಾನೂನು ಸಲಹೆಗಾರ
  • ಕಾರ್ಪೊರೇಟ್ ವಕೀಲರು
  • ಕಾನೂನು ಸಲಹೆಗಾರ
  • ಸಾರ್ವಜನಿಕ ಅಭಿಯೋಜಕರು
  • ಕಾನೂನು ಸಂಶೋಧಕ

ಇದರ ಜೊತೆಯಲ್ಲಿ ನ್ಯಾಯಾಂಗ ಸೇವೆ, ಕಂಪನಿಗಳು, ಕಾನೂನು ಸಂಸ್ಥೆಗಳು ಮತ್ತು ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿಯೂ ಸಹ ಉದ್ಯೋಗಾವಕಾಶವನ್ನು ಪಡೆದುಕೊಳ್ಳಬಹುದು

ಕಾನೂನು, ನ್ಯಾಯಾಂಗ ವ್ಯವಸ್ಥೆ ಮತ್ತು ಸಂವಿಧಾನ ವಿಚಾರಗಳಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಆಯ್ಕೆಯಾಗಿದೆ.

BA ನಂತರ B.Ed. – ಶಿಕ್ಷಕರಾಗಲು ಉತ್ತಮ ಮಾರ್ಗ

ಶಿಕ್ಷಕ ವೃತ್ತಿಯಲ್ಲಿ ಆಸಕ್ತಿಯನ್ನು ಹೊಂದಿರುವ ವಿದ್ಯಾರ್ಥಿಗಳು ಮೊದಲು ಬಿಎ ಪದವಿಯನ್ನು ಪೂರ್ಣಗೊಳಿಸಿ ನಂತರ B.Ed. ಕೋರ್ಸ್ ಅನ್ನು ಮಾಡಬಹುದಾಗಿರುತ್ತದೆ

ಶಿಕ್ಷಣದ ಮಾರ್ಗ: PUC Arts → BA → B.Ed. ಪದವಿಗೆ ಪ್ರವೇಶಾತಿ ಪಡೆಯಬಹುದು

B.Ed. ನಂತರ ಸರ್ಕಾರಿ ಉದ್ಯೋಗಾವಕಾಶಗಳು

  • ಸರ್ಕಾರಿ ಶಾಲಾ ಶಿಕ್ಷಕ
  • ಖಾಸಗಿ ಶಾಲಾ ಶಿಕ್ಷಕ
  • ತರಬೇತಿ ಸಂಸ್ಥೆಯ ಶಿಕ್ಷಕ
  • ಶಿಕ್ಷಣ ಸಲಹೆಗಾರ

ಆದರೆ ಸರ್ಕಾರಿ ಶಿಕ್ಷಕರ ಹುದ್ದೆಗಳಿಗೆ ಸಂಬಂಧಿಸಿದಂತೆ ನೇಮಕಾತಿ ಪರೀಕ್ಷೆಗಳು ಮತ್ತು ಅರ್ಹತೆಗಳನ್ನು ರಾಜ್ಯಗಳ ಇಲಾಖೆಗಳ ನಿಯಮಾನುಸಾರ ಪೂರೈಸಬೇಕಾಗುತ್ತದೆ

Bachelor of Business Administration (BBA-ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್)

ವ್ಯವಹಾರ ನಿರ್ವಹಣೆ ಮತ್ತು ಉದ್ಯಮ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ Bachelor of Business Administration (BBA) ಕೋರ್ಸ್ ಅತ್ಯುತ್ತಮ ಆಯ್ಕೆಯಾಗಿದೆ

ಕೋರ್ಸಿನ ಅವಧಿ:‌ 3 ವರ್ಷಗಳು

ಪ್ರಮುಖ ವಿಷಯಗಳು

  • ವ್ಯವಹಾರ ನಿರ್ವಹಣೆ
  • ಮಾರ್ಕೆಟಿಂಗ್
  • ಮಾನವ ಸಂಪನ್ಮೂಲ ನಿರ್ವಹಣೆ
  • ಹಣಕಾಸು
  • ಉದ್ಯಮಶೀಲತೆ
  • ವ್ಯವಹಾರ ಸಂವಹನ

ಬಿಬಿಎ ನಂತರ ಉದ್ಯೋಗಗಳು

ಸೂಚನೆ: ಸರ್ಕಾರಿ ಉದ್ಯೋಗಗಳ ವಿಷಯದಲ್ಲಿ “ಅಧಿಕೃತ ನೇಮಕಾತಿ ಅಧಿಸೂಚನೆಯ ಪ್ರಕಾರ ಅರ್ಹತೆ ಬದಲಾಗಬಹುದು

  • ಮಾರ್ಕೆಟಿಂಗ್ ಕಾರ್ಯನಿರ್ವಾಹಕ
  • ಮಾನವ ಸಂಪನ್ಮೂಲ ಕಾರ್ಯನಿರ್ವಾಹಕ
  • ಮಾರಾಟ ಕಾರ್ಯನಿರ್ವಾಹಕರು
  • ವ್ಯವಹಾರ ಅಭಿವೃದ್ಧಿ ಕಾರ್ಯನಿರ್ವಾಹಕ
  • ಕಚೇರಿ ವ್ಯವಸ್ಥಾಪಕರು
  • ಕಾರ್ಯಾಚರಣೆ ಕಾರ್ಯನಿರ್ವಾಹಕ

ಬಿಬಿಎ ನಂತರ ಎಂಬಿಎ ಮಾಡಿದರೆ ನಿರ್ವಹಣಾ ಕ್ಷೇತ್ರದಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯುವ ಸಾಧ್ಯತೆ ಇದೆ ಸ್ವಂತ ಉದ್ಯಮ ಆರಂಭಿಸಲು ಬಯಸುವ ಅಭ್ಯರ್ಥಿಗಳಿಗೆ ಈ ಪದವಿ ಉತ್ತಮವಾಗಿದೆ.

Bachelor of Commerce (B.Com.-ವಾಣಿಜ್ಯ ಪದವಿ)

ಕೆಲವು ನಿಗದಿತ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಅರ್ಹತೆಯ ಆಧಾರದ ಮೇಲೆ ಪಿಯುಸಿ ಆರ್ಟ್ಸ್ ವಿದ್ಯಾರ್ಥಿಗಳಿಗೆ B.Com ಪ್ರವೇಶದ ಅವಕಾಶವನ್ನು ನೀಡುತ್ತವೆ ಆದರೆ ಪ್ರವೇಶ ಪಡೆಯುವ ನಿಯಮಗಳು ಸಂಸ್ಥೆ ಮತ್ತು ವಿಶ್ವವಿದ್ಯಾಲಯದ ಪ್ರಕಾರ ಬದಲಾಗಬಹುದು ಮತ್ತು ಅರ್ಹತಾ ಪರೀಕ್ಷೆಯನ್ನು ಸಹ ನೀಡಲಾಗಬಹುದು

ಅರ್ಹತೆ:  B.com ಕೋರ್ಸಿನ ಕನಿಷ್ಠ ಮಾಹಿತಿ ಮತ್ತು ಅರಿವನ್ನು ಹೊಂದಿರುವ ಬಗ್ಗೆ ಪರೀಕ್ಷಾ ಅರ್ಹತೆಯನ್ನು ಪಡೆಯಬೇಕಾಗುತ್ತದೆ

ಪ್ರಮುಖ ವಿಷಯಗಳು

  • ಲೆಕ್ಕಪತ್ರ
  • ಅರ್ಥಶಾಸ್ತ್ರ
  • ಹಣಕಾಸು
  • ತೆರಿಗೆ
  • ವ್ಯವಹಾರ ಕಾನೂನು

ಉದ್ಯೋಗಾವಕಾಶಗಳು

ಸೂಚನೆ: ಸರ್ಕಾರಿ ಉದ್ಯೋಗಗಳ ವಿಷಯದಲ್ಲಿ “ಅಧಿಕೃತ ನೇಮಕಾತಿ ಅಧಿಸೂಚನೆಯ ಪ್ರಕಾರ ಅರ್ಹತೆ ಬದಲಾಗಬಹುದು

  • ಲೆಕ್ಕಪರಿಶೋಧಕ
  • ಹಣಕಾಸು ಸಹಾಯಕ
  • ತೆರಿಗೆ ಸಹಾಯಕ
  • ಬ್ಯಾಂಕಿಂಗ್ ಕಾರ್ಯನಿರ್ವಾಹಕ
  • ವ್ಯವಹಾರ ಕಾರ್ಯನಿರ್ವಾಹಕ

B.Com ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ CA, CMAಮತ್ತು CS ಮುಂತಾದ ವೃತ್ತಿಪರ ಕೋರ್ಸ್ ಗಳನ್ನು ಸಹ ಆಯ್ಕೆ ಮಾಡಿಕೊಳ್ಳಬಹುದಾಗಿರುತ್ತದೆ

Bachelor of Computer Applications (BCA-ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್)

ತಂತ್ರಜ್ಞಾನ ಮತ್ತು ಕಂಪ್ಯೂಟರ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳಿಗೆ Bachelor of Computer Applications (BCA) ಕೋರ್ಸ್ ಒಂದು ಅತ್ಯುತ್ತಮ ವೃತ್ತಿ ಜೀವನವನ್ನು ಕಟ್ಟಿಕೊಳ್ಳಲು ಇರುವ ಕೋರ್ಸ್ ಆಗಿದೆ

ಕೆಲವು ಕಾಲೇಜುಗಳಲ್ಲಿ ಗಣಿತ, ಕಂಪ್ಯೂಟರ್ ಜ್ಞಾನ ಮತ್ತು ನಿರ್ದಿಷ್ಟ ವಿಷಯಗಳ ಅರ್ಹತೆ ಕಡ್ಡಾಯವಾಗಿರಬಹುದು ಆದ್ದರಿಂದ ಪ್ರವೇಶ ಪಡೆಯುವ ಮೊದಲು ಸಂಬಂಧಿಸಿದ ಕಾಲೇಜಿನ ಅರ್ಹತಾ ನಿಯಮಗಳನ್ನು ಕಡ್ಡಾಯವಾಗಿ ಪರಿಶೀಲಿಸುವುದು ಅಗತ್ಯವಾಗಿದೆ

ಅರ್ಹತೆ:  BCA ಕೋರ್ಸಿನ ಕನಿಷ್ಠ ಮಾಹಿತಿ ಮತ್ತು ಅರಿವನ್ನು ಹೊಂದಿರುವ ಬಗ್ಗೆ ಪರೀಕ್ಷಾ ಅರ್ಹತೆಯನ್ನು ಪಡೆಯಬೇಕಾಗುತ್ತದೆ

ಕೋರ್ಸಿನ ಅವಧಿ: 3 ವರ್ಷಗಳು

ಕಲಿಯುವ ವಿಷಯಗಳು

  • ಪ್ರೋಗ್ರಾಮಿಂಗ್
  • ವೆಬ್ ಅಭಿವೃದ್ಧಿ
  • ಡೇಟಾಬೇಸ್ ನಿರ್ವಹಣೆ
  • ಕಂಪ್ಯೂಟರ್ ನೆಟ್‌ವರ್ಕ್‌ಗಳು
  • ಸಾಫ್ಟ್‌ವೇರ್ ಅಭಿವೃದ್ಧಿ

ಉದ್ಯೋಗಾವಕಾಶಗಳು

ಸೂಚನೆ: ಸರ್ಕಾರಿ ಉದ್ಯೋಗಗಳ ವಿಷಯದಲ್ಲಿ “ಅಧಿಕೃತ ನೇಮಕಾತಿ ಅಧಿಸೂಚನೆಯ ಪ್ರಕಾರ ಅರ್ಹತೆ ಬದಲಾಗಬಹುದು

  • ವೆಬ್ ಡೆವಲಪರ್
  • ಸಾಫ್ಟ್‌ವೇರ್ ಬೆಂಬಲ ಕಾರ್ಯನಿರ್ವಾಹಕ
  • ಡೇಟಾ ಎಂಟ್ರಿ ಸ್ಪೆಷಲಿಸ್ಟ್
  • ಐಟಿ ಬೆಂಬಲ ಕಾರ್ಯನಿರ್ವಾಹಕ
  • ಜೂನಿಯರ್ ಪ್ರೋಗ್ರಾಮರ್

ಕಂಪ್ಯೂಟರ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿರುವ ವಿದ್ಯಾರ್ಥಿಗಳು BCA ಜೊತೆಗೆ ಹೆಚ್ಚುವರಿ ಪ್ರೋಗ್ರಾಮಿಂಗ್ ಮತ್ತು ಡಿಜಿಟಲ್ ಕೌಶಲ್ಯಗಳನ್ನು ಕಲಿತುಕೊಂಡರೆ ಉದ್ಯೋಗ ಮಾರುಕಟ್ಟೆಯಲ್ಲಿ ಉತ್ತಮ ಸ್ಥಾನಮಾನ ದೊರೆಯುವ ಉದ್ಯೋಗಾವಕಾಶಗಳು ದೊರೆಯುತ್ತವೆ ಮತ್ತು ಉದ್ಯೋಗವನ್ನು ಪಡೆಯುವ ಸಂಭವನೀಯತೆ ಹೆಚ್ಚಾಗಿರುತ್ತದೆ.

Bachelor of Fine Arts (BFA-ಲಲಿತಕಲೆಗಳ ಪದವಿ)

ಚಿತ್ರಕಲೆ, ವಿನ್ಯಾಸ ಮತ್ತು ಸೃಜನಶೀಲತೆಯಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ Bachelor of Fine Arts (BFA) ಉತ್ತಮ ಕೋರ್ಸ್ ಆಗಿದೆ

ಪ್ರಮುಖ ವಿಭಾಗಗಳು

  • ಚಿತ್ರಕಲೆ
  • ಶಿಲ್ಪಕಲೆ
  • ಅನ್ವಯಿಕ ಕಲೆಗಳು
  • ದೃಶ್ಯ ಕಲೆಗಳು
  • ಗ್ರಾಫಿಕ್ ವಿನ್ಯಾಸ

ಉದ್ಯೋಗಾವಕಾಶಗಳು

  • ಗ್ರಾಫಿಕ್ ಡಿಸೈನರ್
  • ಇಲ್ಲಸ್ಟ್ರೇಟರ್
  • ಕಲಾ ಶಿಕ್ಷಕ
  • ಡಿಜಿಟಲ್ ಕಲಾವಿದ
  • ಅನಿಮೇಟರ್
  • ಸೃಜನಾತ್ಮಕ ವಿನ್ಯಾಸಕ

ಡಿಜಿಟಲ್ ಕಲೆ, ಗ್ರಾಫಿಕ್ ಗಳ ವಿನ್ಯಾಸ ಮತ್ತು ಫ್ರೀ ಲಾನ್ಸಿಂಗ್ ಕ್ಷೇತ್ರದಲ್ಲಿ ಸಹ ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಬಹುದಾಗಿರುತ್ತದೆ ವಾಸ್ತವಿಕ ಸಂದರ್ಭಗಳಲ್ಲಿ ಹೆಚ್ಚು ಬೇಡಿಕೆ ಇರುವ ಕೋರ್ಸ್ ಆಗಿದೆ.

Hotel Management and Tourism (ಹೋಟೆಲ್ ನಿರ್ವಹಣೆ ಮತ್ತು ಪ್ರವಾಸೋದ್ಯಮ)

ಪ್ರವಾಸೋದ್ಯಮ‌, ಹೋಟೆಲ್ ಉದ್ಯಮ ಮತ್ತು ಆತಿಥ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಹೋಟೆಲ್ ಮ್ಯಾನೇಜ್ಮೆಂಟ್ ಅಂಡ್ ಟೂರಿಸಂ ಉತ್ತಮ ಆಯ್ಕೆಯಾಗಿದೆ.

ಆಯ್ಕೆ ಮಾಡಬಹುದಾದ ಕೋರ್ಸುಗಳು

  • ಹೋಟೆಲ್ ನಿರ್ವಹಣೆಯಲ್ಲಿ ಪದವಿ
  • ಹೋಟೆಲ್ ನಿರ್ವಹಣೆಯಲ್ಲಿ ಡಿಪ್ಲೊಮಾ
  • ಪ್ರಯಾಣ ಮತ್ತು ಪ್ರವಾಸೋದ್ಯಮ ಕೋರ್ಸ್‌ಗಳು

ಉದ್ಯೋಗಾವಕಾಶಗಳು

ಸೂಚನೆ: ಸರ್ಕಾರಿ ಉದ್ಯೋಗಗಳ ವಿಷಯದಲ್ಲಿ “ಅಧಿಕೃತ ನೇಮಕಾತಿ ಅಧಿಸೂಚನೆಯ ಪ್ರಕಾರ ಅರ್ಹತೆ ಬದಲಾಗಬಹುದು

  • ಹೋಟೆಲ್ ಮ್ಯಾನೇಜರ್
  • ಫ್ರಂಟ್ ಆಫೀಸ್ ಕಾರ್ಯನಿರ್ವಾಹಕ
  • ಆಹಾರ ಮತ್ತು ಪಾನೀಯ ವ್ಯವಸ್ಥಾಪಕ
  • ಪ್ರಯಾಣ ಸಲಹೆಗಾರ
  • ಕಾರ್ಯಕ್ರಮ ಸಂಯೋಜಕರು

ಇತ್ತೀಚಿನ ದಿನಗಳಲ್ಲಿ ಪ್ರವಾಸೋದ್ಯಮ ಕ್ಷೇತ್ರವು ತ್ವರಿತವಾಗಿ ಬೆಳವಣಿಗೆ ಹೊಂದುತ್ತಿರುವುದರಿಂದ ಹೋಟೆಲ್ ಮತ್ತು ಟ್ರಾವೆಲ್ ಉದ್ಯಮದಲ್ಲಿ ವಿವಿಧ ರೀತಿಯ ಉದ್ಯೋಗಾವಕಾಶಗಳನ್ನು ಪಡೆಯಬಹುದಾಗಿರುತ್ತದೆ ಈ ಉದ್ಯೋಗಗಳು ಉತ್ತಮ ವೇತನದ ಜೊತೆಯಲ್ಲಿ ಹಲವು ರೀತಿಯ ಸೌಲಭ್ಯಗಳನ್ನು ಸಹ ನೀಡುತ್ತವೆ

Fashion Design (ಫ್ಯಾಷನ್ ವಿನ್ಯಾಸ)

ಸೃಜನಶೀಲತೆ ಕೌಶಲ್ಯ, ಬಟ್ಟೆಗಳ ವಿನ್ಯಾಸ ಮತ್ತು ಫ್ಯಾಷನ್ ರಚನೆ ಕ್ಷೇತ್ರದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಫ್ಯಾಶನ್ ಡಿಸೈನಿಂಗ್ ಉತ್ತಮ ವೃತ್ತಿಯಾಗಿದ್ದು ಪ್ರಸ್ತುತದಲ್ಲಿ ಉದ್ಯೋಗ ಮಾರುಕಟ್ಟೆಯಲ್ಲಿ ಈ ಕೋರ್ಸಿಗೆ ಹೆಚ್ಚಿನ ಬೇಡಿಕೆ ಇದೆ.

ಪ್ರಮುಖ ವಿಷಯಗಳು

  • ಉಡುಪು ವಿನ್ಯಾಸ
  • ಜವಳಿ ವಿನ್ಯಾಸ
  • ಫ್ಯಾಷನ್ ವಿವರಣೆ
  • ಮಾದರಿ ತಯಾರಿಕೆ
  • ಫ್ಯಾಷನ್ ಮಾರ್ಕೆಟಿಂಗ್

ಉದ್ಯೋಗಾವಕಾಶಗಳು

  • ಫ್ಯಾಷನ್ ಡಿಸೈನರ್
  • ಸ್ಟೈಲಿಸ್ಟ್
  • ಜವಳಿ ವಿನ್ಯಾಸಕ
  • ಫ್ಯಾಷನ್ ಸಲಹೆಗಾರ
  • ಅಂಗಡಿ ಮಾಲೀಕರು

Animation and Multimedia (ಅನಿಮೇಷನ್ ಮತ್ತು ಮಲ್ಟಿಮೀಡಿಯಾ)

ಚಿತ್ರೀಕರಣ, ವಿಡಿಯೋಗ್ರಫಿ, ಗ್ರಾಫಿಕ್ಸ್ ಮತ್ತು ಸೃಜನಶೀಲ ಡಿಜಿಟಲ್ ಕಂಟೆಂಟ್ ರಚನಾತ್ಮಕ ಕ್ಷೇತ್ರದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ Animation and Multimedia ಕೋರ್ಸ್ ಗಳು ಉತ್ತಮವಾಗಿದೆ. ಪ್ರಸ್ತುತದಲ್ಲಿ ಅನಿಮೇಶನ್ ಕ್ಷೇತ್ರವು ಬೇಡಿಕೆಯನ್ನು ದಿನೇ ದಿನೇ ಹೆಚ್ಚಿಸಿಕೊಳ್ಳುತ್ತಿದೆ

ಪ್ರಮುಖ ವಿಷಯಗಳು

  • 2D ಅನಿಮೇಷನ್
  • 3D ಅನಿಮೇಷನ್
  • ಗ್ರಾಫಿಕ್ ವಿನ್ಯಾಸ
  • ವೀಡಿಯೊ ಸಂಪಾದನೆ
  • ದೃಶ್ಯ ಪರಿಣಾಮಗಳು

ಉದ್ಯೋಗಾವಕಾಶಗಳು

  • ಅನಿಮೇಟರ್
  • ವೀಡಿಯೊ ಸಂಪಾದಕ
  • ಗ್ರಾಫಿಕ್ ಡಿಸೈನರ್
  • VFX ಕಲಾವಿದ
  • ಮೋಷನ್ ಗ್ರಾಫಿಕ್ಸ್ ಡಿಸೈನರ್

OTT, ಡಿಜಿಟಲ್ ವಿಡಿಯೋ ಕ್ಷೇತ್ರಗಳು ಮತ್ತು ಯೂಟ್ಯೂಬ್ ನಲ್ಲಿನ ಬೆಳವಣಿಗೆಯಿಂದ ಈ ಕ್ಷೇತ್ರದಲ್ಲಿ ಕೌಶಲ್ಯ ಹೊಂದಿರುವವರಿಗೆ ಹೊಸ ಅವಕಾಶಗಳು ಲಭ್ಯವಾಗುತ್ತಿವೆ ಈ ಉದ್ಯೋಗಗಳಲ್ಲಿ ಆಕರ್ಷಕ ವೇತನ ದೊರೆಯುತ್ತದೆ.

Digital Marketing Course (ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್)

ಪಿಯುಸಿ ಆರ್ಟ್ಸ್ ಕೋರ್ಸ್ ಮುಗಿದ ನಂತರದಲ್ಲಿ ಕಡಿಮೆ ಅವಧಿಯಲ್ಲಿ ಉದ್ಯೋಗಪರ ಕೌಶಲ್ಯವನ್ನು ಕಲಿಯಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಗೆ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಅತ್ಯುತ್ತಮ ಆಯ್ಕೆಯಾಗಿದೆ. ಇಂದಿನ ದಿನಗಳಲ್ಲಿ ಎಲ್ಲಾ ಸರಕು ಮತ್ತು ಸೇವೆಗಳು ಆನ್ಲೈನ್ ಮೂಲಕ ಮಾರುಕಟ್ಟೆಯನ್ನು ತಲುಪುತ್ತಿರುವುದರಿಂದ ಡಿಜಿಟಲ್ ಮಾರ್ಕೆಟಿಂಗ್ ಉತ್ತಮ ಆಯಾಮವನ್ನು ಪಡೆದುಕೊಂಡಿದೆ.

ಕೋರ್ಸಿನ ಅವಧಿ: 3 ತಿಂಗಳುಗಳಿಂದ 1 ವರ್ಷದವರೆಗೆ

ಕಲಿಯುವ ವಿಷಯಗಳು

  • ಎಸ್‌ಇಒ
  • ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್
  • ಗೂಗಲ್ ಜಾಹೀರಾತುಗಳು
  • ವಿಷಯ ಮಾರ್ಕೆಟಿಂಗ್
  • ಇಮೇಲ್ ಮಾರ್ಕೆಟಿಂಗ್
  • ಅಂಗಸಂಸ್ಥೆ ಮಾರ್ಕೆಟಿಂಗ್

ಉದ್ಯೋಗಾವಕಾಶಗಳು

  • SEO ಕಾರ್ಯನಿರ್ವಾಹಕ
  • ಡಿಜಿಟಲ್ ಮಾರ್ಕೆಟಿಂಗ್ ಕಾರ್ಯನಿರ್ವಾಹಕ
  • ಸಾಮಾಜಿಕ ಮಾಧ್ಯಮ ವ್ಯವಸ್ಥಾಪಕ
  • ವಿಷಯ ತಂತ್ರಜ್ಞ
  • ಬ್ಲಾಗರ್

ಸ್ವಂತವಾಗಿ ಬ್ಲಾಗಿಂಗ್ ಶುರು ಮಾಡಬಹುದು ಯೂಟ್ಯೂಬ್ ಚಾನೆಲ್ ಅಥವಾ ಆನ್ಲೈನ್ ವ್ಯವಹಾರಗಳನ್ನು ಆರಂಭಿಸಲು ಬಯಸುವವರಿಗೆ ಈ ಕೌಶಲ್ಯಗಳು ಬಹಳ ಉಪಯುಕ್ತಕಾರಿಯಾಗಿದೆ.

Graphic Designing Course (ಗ್ರಾಫಿಕ್ ವಿನ್ಯಾಸ ಕೋರ್ಸ್)

ಚಿತ್ರ ಮತ್ತು ವಿನ್ಯಾಸಗಳನ್ನು ಅಭಿವೃದ್ಧಿಪಡಿಸುವಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳು ಗ್ರಾಫಿಕ್ ಡಿಸೈನ್ ಕೋರ್ಸ್ ಅನ್ನು ಕಲಿತುಕೊಳ್ಳಬಹುದಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಗ್ರಾಫಿಕ್ ಡಿಸೈನಿಂಗ್ ಕೋರ್ಸಿಗೆ ಬೇಡಿಕೆ ಹೆಚ್ಚುತ್ತಿದ್ದು ಜನರು ಹೆಚ್ಚಾಗಿ ಈ ಆಯಾಮಗಳನ್ನು ಕಲಿಯುತ್ತಿದ್ದಾರೆ.

ಜನಪ್ರಿಯ ಸಾಫ್ಟ್ವೇರ್‌ ಗಳು

  • ಫೋಟೋಶಾಪ್
  • ಇಲ್ಲಸ್ಟ್ರೇಟರ್
  • ಕೋರೆಲ್‌ಡ್ರಾವ್
  • ಕ್ಯಾನ್ವಾ
  • ಫಿಗ್ಮಾ

ಉದ್ಯೋಗಾವಕಾಶಗಳು

  • ಗ್ರಾಫಿಕ್ ಡಿಸೈನರ್
  • ಲೋಗೋ ವಿನ್ಯಾಸಕ
  • ಸಾಮಾಜಿಕ ಮಾಧ್ಯಮ ವಿನ್ಯಾಸಕ
  • ಪೋಸ್ಟರ್ ವಿನ್ಯಾಸಕ
  • ಸ್ವತಂತ್ರ ವಿನ್ಯಾಸಕ

ಗ್ರಾಫಿಕ್ ಡಿಸೈನಿಂಗ್ ಕ್ಷೇತ್ರದಲ್ಲಿ ಕೇವಲ ಪ್ರಮಾಣ ಪತ್ರಕ್ಕಿಂತ ನಿಮ್ಮ ಕೌಶಲ್ಯಗಳು ಹೆಚ್ಚು ಪ್ರಮುಖವಾಗಿರುತ್ತದೆ ನೀವು ಉತ್ತಮ ವಿನ್ಯಾಸಗಳನ್ನು ರಚಿಸಿ ಮಾದರಿಗಳನ್ನು ಸಿದ್ಧಪಡಿಸಿಕೊಂಡರೆ ಉದ್ಯೋಗ ಮತ್ತು ಫ್ರೀಲಾನ್ಸ್ ಅವಕಾಶಗಳನ್ನು ಸುಲಭವಾಗಿ ಪಡೆಯಬಹುದು. ಗ್ರಾಫಿಕ್ ಡಿಸೈನಿಂಗ್ ಕೌಶಲ್ಯಗಳು ಹೆಚ್ಚುವರಿ ಕೌಶಲ್ಯಗಳನ್ನು ಬಯಸುತ್ತವೆ.

PUC Arts ನಂತರದ 3 ಅತ್ಯುತ್ತಮ ಕೋರ್ಸ್‌ಗಳು

ಕೋರ್ಸ್‌ ಮತ್ತು ಅವಧಿ ಭವಿಷ್ಯದ ಉದ್ಯೋಗಗಳು
BA: 3 ವರ್ಷಗಳು ಶಿಕ್ಷಕ, ಸರ್ಕಾರಿ ಉದ್ಯೋಗಿ, ಪತ್ರಕರ್ತ
BA LLB: 5 ವರ್ಷಗಳು ವಕೀಲ, ಕಾನೂನು ಸಲಹೆಗಾರ, Legal Advisor
BSW: 3 ವರ್ಷಗಳು Social Worker, NGO ಉದ್ಯೋಗಿ, Project Coordinator

 

PUC Arts ನಂತರ ಅಂದಾಜು ₹30,000+ ಸಂಬಳ ಸಿಗುವ ಉದ್ಯೋಗಗಳು  

ಹುದ್ದೆ ಅಂದಾಜು ವೇತನ
Village Administrative Officer (VAO) ₹30,000+
Police Constable ₹25,000–₹40,000
Government Clerk / Junior Assistant ₹25,000–₹40,000
Railway Jobs ₹25,000–₹40,000+
SSC Government Jobs ₹25,000–₹40,000+
Postal Department Jobs Varies by post
Defence Jobs ₹25,000–₹40,000+
Digital Marketing Executive ₹20,000–₹40,000
Content Writer / Blogger ₹20,000–₹50,000+
Graphic Designer ₹20,000–₹40,000

 

PUC Arts ನಂತರದ ಪ್ರಮುಖ ಕೋರ್ಸುಗಳ ಅವಧಿ ಮತ್ತು ಸರ್ಕಾರಿ ಉದ್ಯೋಗಾವಕಾಶದ ಸಾಧ್ಯತೆಗಳು

ಕೋರ್ಸ್‌ ಮತ್ತು ಅವಧಿ ಸರ್ಕಾರಿ ಉದ್ಯೋಗ ಸಾಧ್ಯತೆ
BA- 3 Years ಹೆಚ್ಚು
BA LLB- 5 Years ಹೆಚ್ಚು
BBA- 3 Years ಕಡಿಮೆ
BSW- 3 Years ಹೆಚ್ಚು

PUC Arts ನಂತರ ಸರ್ಕಾರಿ ಉದ್ಯೋಗದ ಅವಕಾಶಗಳು

PUC Arts ಅನ್ನು ಮುಗಿಸಿರುವ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗ ಕ್ಷೇತ್ರದಲ್ಲಿ ಅನೇಕ ಅವಕಾಶಗಳು ಇವೆ. ಪಿಯುಸಿ ನಂತರ ಕೆಲವು ಹುದ್ದೆಗಳಿಗೆ ನೇರವಾಗಿ ಅರ್ಜಿ ಸಲ್ಲಿಸಬಹುದು ಈ ಕೆಳಕಂಡ ಹುದ್ದೆಗಳಿಗೆ ಪಿಯುಸಿ ಶೈಕ್ಷಣಿಕ ಅರ್ಹತೆಯಾಗಿದೆ

ಪಿಯುಸಿ ಆಧಾರಿತ ಅವಕಾಶಗಳು

  • ಪೊಲೀಸ್ ಕಾನ್ಸ್‌ಟೇಬಲ್
  • ಗ್ರಾಮ ಆಡಳಿತಾಧಿಕಾರಿ
  • ಕ್ಲರ್ಕ್
  • ಅಂಚೆ ಇಲಾಖೆಯ ಕೆಲವು ಹುದ್ದೆಗಳು
  • ರೈಲ್ವೆ ಹುದ್ದೆಗಳು
  • SSC ಸಂಬಂಧಿತ ಹುದ್ದೆಗಳು
  • ರಕ್ಷಣಾ ಇಲಾಖೆಯ ಕೆಲವು ಹುದ್ದೆಗಳು

ಪದವಿ ನಂತರದ ಅವಕಾಶಗಳು

ಬಿಎ ಅಥವಾ ಇತರ ಪದವಿಗಳನ್ನು ಪೂರ್ಣಗೊಳಿಸಿದ ನಂತರ ವಿದ್ಯಾರ್ಥಿಗಳು ಈ ಕೆಳಕಂಡ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಅರ್ಹತೆಯನ್ನು ಪಡೆಯುತ್ತಾರೆ. ಅವುಗಳೆಂದರೆ

  • KPSC
  • UPSC
  • SSC
  • ಬ್ಯಾಂಕಿಂಗ್
  • ಶಿಕ್ಷಕರ ನೇಮಕಾತಿ
  • ಪೊಲೀಸ್ ಸಬ್‌ಇನ್ಸ್‌ಪೆಕ್ಟರ್
  • ವಿವಿಧ ರಾಜ್ಯ ಸರ್ಕಾರಿ ಹುದ್ದೆಗಳು

ಸರ್ಕಾರಿ ಉದ್ಯೋಗದ ಗುರಿ ಹೊಂದಿರುವವರು ಪದವಿ ಶಿಕ್ಷಣದ ಜೊತೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಹ ಪರಿಣಾಮಕಾರಿಯಾಗಿ ತಯಾರಿಯನ್ನು ಆರಂಭಿಸಬಹುದಾಗಿರುತ್ತದೆ. ಈ ತಯಾರಿಯು ಕ್ರಮಬದ್ಧವಾಗಿದ್ದರೆ ಸರ್ಕಾರಿ ಉದ್ಯೋಗಗಳನ್ನು ಆದಷ್ಟು ಬೇಗ ಪಡೆಯಬಹುದು.

PUC Arts ನಂತರದಲ್ಲಿ ಆಸಕ್ತಿಗೆ ತಕ್ಕಂತೆ ಕೋರ್ಸುಗಳ ಆಯ್ಕೆ

ನಿಮ್ಮ ಆಸಕ್ತಿ ಸೂಕ್ತ ಕೋರ್ಸ್
ಸರ್ಕಾರಿ ಉದ್ಯೋಗ BA
ವಕೀಲ BA LLB
ಶಿಕ್ಷಕ BA + B.Ed.
ಪತ್ರಿಕೋದ್ಯಮ Journalism
ಸಮಾಜ ಸೇವೆ BSW
ಬಿಸಿನೆಸ್ BBA
ಕಂಪ್ಯೂಟರ್ BCA
ಕಲೆ ಮತ್ತು ವಿನ್ಯಾಸ BFA
ಡಿಜಿಟಲ್ ಕ್ಷೇತ್ರ Digital Marketing
ಹೋಟೆಲ್ ಕ್ಷೇತ್ರ Hotel Management
ಪ್ರವಾಸೋದ್ಯಮ Travel and Tourism

 

ಈ ಮೇಲಿನ ಮಾರ್ಗದರ್ಶಿ ಪಟ್ಟಿಯ ಪ್ರಕಾರ ವಿದ್ಯಾರ್ಥಿಗಳು ತಮ್ಮ ಆಸಕ್ತಿ ಮತ್ತು ಭವಿಷ್ಯದ ದೀರ್ಘಾವಧಿ ವೃತ್ತಿ ಗುರಿಗೆ ಅನುಗುಣವಾಗುವಂತೆ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

 

PUC Arts ನಂತರ ಯಾವ ಕೋರ್ಸ್ ಅತ್ಯುತ್ತಮ ಆಯ್ಕೆ

ಎಲ್ಲಾ ವಿದ್ಯಾರ್ಥಿಗಳಿಗೂ ಒಂದು ನಿಗದಿತ ಕೋರ್ಸ್ ಅತ್ಯುತ್ತಮ ಎಂದು ಹೇಳಲು ಸಾಧ್ಯವಾಗುವುದಿಲ್ಲ. ವಿದ್ಯಾರ್ಥಿಗಳ ಆಸಕ್ತಿ, ಸಾಮರ್ಥ್ಯ, ವೃತ್ತಿ ಗುರಿಗಳು ಮತ್ತು ದೀರ್ಘಾವಧಿ ಗುರಿಗಳು ಸರಿಯಾದ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳಲು ಪ್ರಮುಖ ಪಾತ್ರ ವಹಿಸುತ್ತವೆ ಈ ಕೆಳಕಂಡ ಅಂಶಗಳನ್ನು ಗಮನಿಸಿ

ಸರ್ಕಾರಿ ಉದ್ಯೋಗವನ್ನು ಪಡೆಯಬೇಕೆಂಬ ಗುರಿ ಇದ್ದರೆ

ಸರ್ಕಾರಿ ಉದ್ಯೋಗವನ್ನು ಪಡೆಯಬೇಕೆಂಬ ಗುರಿಯನ್ನು ಹೊಂದಿದ್ದರೆ BA ಪದವಿಯು ಅತ್ಯಂತ ಸೂಕ್ತ ಆಯ್ಕೆಯಾಗುತ್ತದೆ. ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ಮತ್ತು ಅರ್ಥಶಾಸ್ತ್ರದಂತಹ ವಿಷಯಗಳು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ಜ್ಞಾನವನ್ನು ಹೆಚ್ಚಿಸುವುದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪರಿಣಾಮಕಾರಿಯಾಗಿ ಎದುರಿಸಬಹುದು.

ವಕೀಲರಾಗಲು ಬಯಸಿದರೆ

ನೀವೇನಾದರೂ ಕಾನೂನು ಮತ್ತು ವಕೀಲ ವೃತ್ತಿಯಲ್ಲಿ ಜೀವನವನ್ನು ನಿರ್ಮಿಸಿಕೊಳ್ಳಬೇಕೆಂಬ ಆಸಕ್ತಿ ಹೊಂದಿದ್ದರೆ ಐದು ವರ್ಷದ BA LLB ಕೋರ್ಸ್ ಉತ್ತಮ ಆಯ್ಕೆಯಾಗಿದೆ.

ಶಿಕ್ಷಕರಾಗಲು ಬಯಸಿದರೆ

ಶಿಕ್ಷಣ ಕ್ಷೇತ್ರದಲ್ಲಿ ನಿಮ್ಮ ವೃತ್ತಿ ಜೀವನವನ್ನು ಕಟ್ಟಿಕೊಳ್ಳಬೇಕೆಂಬ ಆಸಕ್ತಿ ಹೊಂದಿದ್ದರೆ BA ನಂತರ B.Ed ಪದವಿಯನ್ನು ಮಾಡಬಹುದು

ಮಾಧ್ಯಮ ಕ್ಷೇತ್ರದಲ್ಲಿ ಆಸಕ್ತಿ ಇದ್ದರೆ

ಪತ್ರಿಕೆಗಳು, ಮಾಧ್ಯಮ, ವಾರ್ತೆ ಮತ್ತು ಸಮೂಹ ಸಂಪರ್ಕಗಳ ವಿಷಯಗಳಲ್ಲಿ ಆಸಕ್ತಿ ಇದ್ದರೆ ಜರ್ನಲಿಸಂ ಮತ್ತು ಮಾಸ್ ಕಮ್ಯುನಿಕೇಶನ್ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು

ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿ ಇದ್ದರೆ

ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಡಿಜಿಟಲ್ ಕ್ಷೇತ್ರಗಳ ಮಹತ್ವವನ್ನು ನೋಡಿ ನೀವೇನಾದರೂ ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದರೆ ಡಿಜಿಟಲ್ ಮಾರ್ಕೆಟಿಂಗ್, ಗ್ರಾಫಿಕ್ಸ್ ಡಿಸೈನಿಂಗ್ ಮುಂತಾದ ಕೋರ್ಸ್ ಗಳನ್ನು ಕಲಿಯಬಹುದು.

PUC Arts ನಂತರ ಈ ಕೆಳಕಂಡ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಬೇಕು

ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ ಕೇವಲ ಪದವಿಯನ್ನು ಪಡೆಯುವುದು ಸಾಕಾಗುವುದಿಲ್ಲ ಬದಲಾಗಿ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಕೋರ್ಸಿನ ಜೊತೆಯಲ್ಲಿ ಹೆಚ್ಚುವರಿ ಕೌಶಲ್ಯಗಳನ್ನು ಸಹ ಅಭಿವೃದ್ಧಿಪಡಿಸಿಕೊಳ್ಳಬೇಕು

ಪ್ರಮುಖ ಕೌಶಲ್ಯಗಳು

  • ಉತ್ತಮ ಇಂಗ್ಲಿಷ್ ಸಂವಹನ
  • ಕನ್ನಡ ಮತ್ತು ಇಂಗ್ಲಿಷ್ ಬರವಣಿಗೆ
  • ಕಂಪ್ಯೂಟರ್ ಜ್ಞಾನ
  • MS Office‌
  • ಡಿಜಿಟಲ್ ಕೌಶಲ್ಯ
  • ಸಾರ್ವಜನಿಕ ಭಾಷಣ
  • ತಂಡದಲ್ಲಿ ಕೆಲಸ ಮಾಡುವ ಸಾಮರ್ಥ್ಯ
  • ಸಮಸ್ಯೆ ಪರಿಹಾರ ಸಾಮರ್ಥ್ಯ

ಉದಾಹರಣೆಗೆ ಒಬ್ಬ ವಿದ್ಯಾರ್ಥಿಯು BA ಪದವಿಯನ್ನು ಪಡೆಯುವುದರ ಜೊತೆಯಲ್ಲಿ ಕಂಪ್ಯೂಟರ್ ಜ್ಞಾನ, ಇಂಗ್ಲಿಷ್ ಭಾಷಾ ಸಂವಹನ ಕೌಶಲ್ಯ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಕೌಶಲ್ಯಗಳನ್ನು ಕಲಿತುಕೊಂಡರೆ ಕೇವಲ BA ಪದವಿಗಿಂತ ಹೆಚ್ಚಿನ ಉದ್ಯೋಗಾವಕಾಶಗಳನ್ನು ಪಡೆಯಲು ಸಾಧ್ಯವಾಗುತ್ತದೆ.

PUC Arts ನಂತರ ಮೂರು ವರ್ಷದ ವೃತ್ತಿ ಯೋಜನೆ

 

ಮೊದಲನೇ ವರ್ಷ: ಆಸಕ್ತಿ ಮತ್ತು ಮೂಲಭೂತ ಕೌಶಲ್ಯ

ಮೊದಲ ವರ್ಷದಲ್ಲಿ ನಿಮ್ಮ ಆಸಕ್ತಿಯ ಕ್ಷೇತ್ರವನ್ನು ನೀವು ಅರ್ಥ ಮಾಡಿಕೊಂಡು ಆಯ್ಕೆ ಮಾಡಿಕೊಳ್ಳಬೇಕು. ಕಂಪ್ಯೂಟರ್ ಜ್ಞಾನ ಭಾಷಾ ಕೌಶಲ್ಯಗಳು ಮತ್ತು ಮೂಲಭೂತ ವೃತ್ತಿಪರ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು

ಎರಡನೇ ವರ್ಷ: ಪ್ರಾಯೋಗಿಕ ಅನುಭವ

ಎರಡನೇ ವರ್ಷದಲ್ಲಿ ಇಂಟರ್ನ್ ಶಿಪ್‌, ಪ್ರಮಾಣ ಪತ್ರ ಕೋರ್ಸುಗಳು ಮತ್ತು ಪ್ರಾಯೋಗಿಕ ಅನುಭವವನ್ನು ಪಡೆಯಬೇಕು ನೀವೇನಾದರೂ ಜರ್ನಲಿಸಂ ಮತ್ತು ಮಾಸ್ ಕಮ್ಯುನಿಕೇಶನ್ ಓದಿದ್ದರೆ ಬರವಣಿಗೆ ಮತ್ತು ವರದಿಗಳ ತಯಾರಿಕೆಯಲ್ಲಿ ಅಭ್ಯಾಸ ಮಾಡಬೇಕು ಡಿಜಿಟಲ್ ಮಾರ್ಕೆಟಿಂಗ್ ಕೌಶಲ್ಯಗಳನ್ನು ಕಲಿಯುತ್ತಿದ್ದರೆ ನೈಜ ಪ್ರಾಜೆಕ್ಟ್‌ ಗಳಲ್ಲಿ ಕೆಲಸ ಮಾಡಬೇಕು

ಮೂರನೇ ವರ್ಷ: ಉದ್ಯೋಗ ಅಥವಾ ಉನ್ನತ ಶಿಕ್ಷಣ

ಪದವಿ ಪೂರ್ಣಗೊಳ್ಳುವ ವೇಳೆಗೆ ಉದ್ಯೋಗ ಪಡೆಯುವ ಸ್ಪರ್ಧಾತ್ಮಕ ಪರೀಕ್ಷೆ ಅಥವಾ ಉನ್ನತ ಶಿಕ್ಷಣದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಬೇಕು ನಿಮ್ಮ ದೀರ್ಘಾವಧಿ ಗುರಿಗೆ ಅನುಗುಣವಾಗಿ ಪರೀಕ್ಷಾ ತಯಾರಿಯನ್ನು ಆರಂಭಿಸಬೇಕು ಮತ್ತು ಮುಂದಿನ ಕೋರ್ಸ್ ಗಳಿಗೆ ಸಿದ್ದರಾಗಬೇಕು.

ಅಧಿಕೃತ ಪೋರ್ಟಲ್‌ ಗಳು

Last Updated And Verified By Author: 19 July 2026

University Grants Commission https://www.ugc.gov.in/
National Institute of Open Schooling https://sdmis.nios.ac.in/
All India Survey on Higher Education https://aishe.gov.in/
National Institutional Ranking Framework https://www.nirfindia.org/

 

ಹೆಚ್ಚುವರಿ ಲಿಂಕ್‌ ಗಳು

Last Updated And Verified By Author: 19 July 2026

ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿ ಇಲ್ಲಿ ಕ್ಲಿಕ್‌ ಮಾಡಿ
ದೈನಂದಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

 

FAQ’s (ಪದೇ ಪದೇ ಕೇಳಲಾಗುವ ಪ್ರಶ್ನೋತ್ತರಗಳು)

 

1. PUC Arts ನಂತರ ಯಾವ ಕೋರ್ಸ್ ಅತ್ಯುತ್ತಮವಾಗಿದೆ?
ಉತ್ತರ: BA, BA LLB, BSW, BBA ಮತ್ತು Journalism ಅತ್ಯುತ್ತಮ ಆಯ್ಕೆಯ ಕೋರ್ಸುಗಳಾಗಿವೆ.

2. PUC Arts ನಂತರ ಸರ್ಕಾರಿ ಉದ್ಯೋಗವನ್ನು ಪಡೆಯಬಹುದೇ?
ಉತ್ತರ: ಹೌದು, PUC ಮತ್ತು ಪದವಿ ಆಧಾರಿತ ಸರ್ಕಾರಿ ಉದ್ಯೋಗಗಳನ್ನು ಪಡೆಯಬಹುದು.

3. PUC Arts ನಂತರ BA ಪದವಿ ಮಾಡುವುದು ಉತ್ತಮವೇ?
ಉತ್ತರ: ಹೌದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ BA ಪದವಿಯು ಬಹಳ ಉಪಯುಕ್ತವಾಗಿದೆ.

4. PUC Arts ನಂತರ ಕಾನೂನು ಪದವಿಯನ್ನು ಓದಬಹುದೇ?
ಉತ್ತರ: ಹೌದು, ಐದು ವರ್ಷದ BA LLB ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

5. PUC Arts ನಂತರ ಶಿಕ್ಷಕರಾಗಲು ಯಾವ ಕೋರ್ಸ್‌ ಓದಬೇಕು?
ಉತ್ತರ: BA ಪೂರ್ಣಗೊಳಿಸಿದ ನಂತರ B.Ed. ಪದವಿಯನ್ನು ಪಡೆಯಬೇಕು.

6. PUC Arts ನಂತರ Journalism ಕೋರ್ಸನ್ನು ಓದಬಹುದೇ?
ಉತ್ತರ: ಹೌದು, ಪತ್ರಿಕೋದ್ಯಮ ವೃತ್ತಿಯಲ್ಲಿ ಮುಂದುವರೆಯಲು Journalism ಕೋರ್ಸನ್ನು ಓದಬಹುದು.

7. PUC Arts ನಂತರ BBA ಪದವಿಯನ್ನು ಮಾಡಬಹುದೇ?
ಉತ್ತರ: ಹೌದು, ವ್ಯವಹಾರ ನಿರ್ವಹಣೆಯಲ್ಲಿ BBA ಕೋರ್ಸ್ ಉತ್ತಮವಾಗಿದೆ.

8. PUC Arts ನಂತರ Digital Marketing ಕೌಶಲ್ಯಗಳನ್ನು ಕಲಿತರೆ ಉದ್ಯೋಗ ಸಿಗುತ್ತವೆಯೇ?
ಉತ್ತರ: ಹೌದು, ಕಡಿಮೆ ಅವಧಿಯಲ್ಲಿ ಡಿಜಿಟಲ್ ಕೌಶಲ್ಯಗಳನ್ನು ಕಲಿತು ಉದ್ಯೋಗ ಪಡೆಯಬಹುದು.

9. PUC Arts ನಂತರ BCA ಕೋರ್ಸನ್ನು ಅಧ್ಯಯನ ಮಾಡಬಹುದೇ?
ಉತ್ತರ: ಕೆಲವು ಕಾಲೇಜುಗಳ ಅರ್ಹತಾ ನಿಯಮಗಳಂತೆ BCA ಕೋರ್ಸನ್ನು ಓದಬಹುದು.

10. PUC Arts ವಿದ್ಯಾರ್ಥಿಗಳಿಗೆ ಯಾವ ಪ್ರಮುಖ ಕೌಶಲ್ಯಗಳು ಅಗತ್ಯವಾಗಿವೆ?
ಉತ್ತರ: ಕಂಪ್ಯೂಟರ್ ಜ್ಞಾನ, ಇಂಗ್ಲಿಷ್ ಭಾಷೆ, ಸಂವಹನ ಮತ್ತು ಡಿಜಿಟಲ್ ಕೌಶಲ್ಯಗಳು ಅಗತ್ಯವಾಗಿವೆ.

 

ಕೊನೆಯ ಮಾತು

ಪಿಯುಸಿ ಆರ್ಟ್ಸ್ ಪೂರ್ಣಗೊಳಿಸಿದ ನಂತರ ವಿದ್ಯಾರ್ಥಿಗಳ ಮುಂದೆ ಅನೇಕ ಉತ್ತಮ ಕೋರ್ಸುಗಳು ಮತ್ತು ವೃತ್ತಿ ಅವಕಾಶಗಳು ಕಂಡುಬರುತ್ತವೆ. ಉದ್ಯೋಗಾವಕಾಶಗಳು ಕಡಿಮೆ ಇರುವ ವಿಭಾಗ ಎಂದು ಭಾವಿಸುವುದು ಸಂಪೂರ್ಣವಾಗಿ ತಪ್ಪು ಕಲ್ಪನೆಯಾಗಿದೆ. ಇತಿಹಾಸ, ರಾಜ್ಯಶಾಸ್ತ್ರ ಅರ್ಥಶಾಸ್ತ್ರ ಸಮಾಜಶಾಸ್ತ್ರ ಮತ್ತು ಭಾಷಾ ವಿಷಯಗಳ ಜ್ಞಾನವು ಸರ್ಕಾರಿ ಆಡಳಿತ ಶಿಕ್ಷಣ ಮಾಧ್ಯಮ ಕಾನೂನು ಮತ್ತು ಸಮಾಜ ಸೇವೆಯಂತಹ ಕ್ಷೇತ್ರಗಳಲ್ಲಿ ಬಹಳ ಮುಖ್ಯವಾಗಿದೆ

ಪಿಯುಸಿ ಆರ್ಟ್ಸ್ ನಂತರ BA, BA LLB, BSW, Journalism and Mass Communication, BBA, BFA, Hotel Management, Digital Marketing, Graphic Designing, Animation and Multimedia ಇನ್ನೂ ಹೆಚ್ಚಿನ ಕೋರ್ಸ್ ಗಳು ಸೇರಿದಂತೆ ಅನೇಕ ಕೋರ್ಸ್ ಗಳನ್ನು ಆಸಕ್ತಿ ಮತ್ತು ಕೌಶಲ್ಯಗಳ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಬಹುದಾಗಿರುತ್ತದೆ.

ಸರಿಯಾದ ಕೋರ್ಸ್ ಅನ್ನು ಆಯ್ಕೆ ಮಾಡಿಕೊಂಡು ನಿರಂತರವಾಗಿ ಅಧ್ಯಯನ ಮಾಡಿ ಹೆಚ್ಚುವರಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡು ಪ್ರಾಯೋಗಿಕ ಅನುಭವವನ್ನು ಪಡೆಯುವ ಮೂಲಕ ವಿದ್ಯಾರ್ಥಿಗಳು ಉತ್ತಮ ಉದ್ಯೋಗ ಮತ್ತು ಯಶಸ್ವಿ ವೃತ್ತಿ ಜೀವನವನ್ನು ನಿರ್ಮಿಸಿಕೊಳ್ಳಬಹುದು. ಕೋರ್ಸಿನ ಹೆಸರಿಗಿಂತ ಆಸಕ್ತಿ, ಕೌಶಲ್ಯ, ಪರಿಶ್ರಮ  ಮತ್ತು ನಿರಂತರವಾಗಿ ಕಲಿಯುವ ಮನೋಭಾವವು ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸುತ್ತದೆ.

 

Related Articles: Career Guidance

 

Best Courses After PUC Commerce In 2026: Higher Education Chances And Top Career Courses After PUC Commerce in Kannada

Best Courses After PUC Science In 2026: Here Is The Career Guide, Best Courses, Salary, Jobs & Future

Best Courses After PUC in 2026: Top Career Options, Job Opportunities & Expert Guidance

SSLC ನಂತರ ಏನು ಮಾಡಬೇಕು? 2026ರ Best ಕೋರ್ಸ್‌ಗಳು ಮತ್ತು ವೃತ್ತಿ ಅವಕಾಶಗಳ ಬಗ್ಗೆ ಇಲ್ಲಿದೆ ಮಾಹಿತಿ

ಕೃಷಿ ಅಧಿಕಾರಿ ಆಗುವುದು ಹೇಗೆ?, 2026 Career Guidance For AO And AAO Posts, ಇಲ್ಲಿದೆ ಸಂಪೂರ್ಣ ಮಾಹಿತಿ

 

Author Note: ಈ ಲೇಖನವು PUC Arts ನಂತರ ವಿದ್ಯಾರ್ಥಿಗಳು ಆಯ್ಕೆ ಮಾಡಬಹುದಾದ ವಿವಿಧ ಕೋರ್ಸ್‌ಗಳು, ಅವುಗಳ ಅವಧಿ, ಅರ್ಹತೆ, ಪ್ರಯೋಜನಗಳು ಮತ್ತು ಉದ್ಯೋಗಾವಕಾಶಗಳ ಕುರಿತು ಸರಳವಾಗಿ ವಿವರಿಸುತ್ತದೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿ, ಸಾಮರ್ಥ್ಯ ಮತ್ತು ಭವಿಷ್ಯದ ಗುರಿಗೆ ಅನುಗುಣವಾಗಿ ಸೂಕ್ತ ಕೋರ್ಸ್ ಆಯ್ಕೆ ಮಾಡಿಕೊಳ್ಳಲು ಈ ಮಾಹಿತಿ ಸಹಾಯ ಮಾಡುತ್ತದೆ.

***

About Author: ರಂಗನಾಥ ಬಿ ಜಿ ರವರು ಅರ್ಥಶಾಸ್ತ್ರ ವಿಭಾಗದಲ್ಲಿ ಎಂ ಎ ಪದವಿಯನ್ನು ಪಡೆದಿದ್ದು ಕಳೆದ 3 ವರ್ಷಗಳಿಂದ, ಶಿಕ್ಷಣ, ಸರ್ಕಾರಿ ಉದ್ಯೋಗ, ವೃತ್ತಿ ಮಾರ್ಗದರ್ಶನ ಮತ್ತು ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸರಳ ಕನ್ನಡದಲ್ಲಿ ನೀಡುವ ಆಸಕ್ತಿಯುಳ್ಳ ಬ್ಲಾಗರ್ ಆಗಿದ್ದಾರೆ. ವಿದ್ಯಾರ್ಥಿಗಳಿಗೆ ಉಪಯುಕ್ತವಾದ ನಿಖರ, ಸ್ಪಷ್ಟ ಮತ್ತು ಪ್ರಾಯೋಗಿಕ ಮಾಹಿತಿಯನ್ನು ಒದಗಿಸುವುದು ಲೇಖಕರ ಮುಖ್ಯ ಉದ್ದೇಶವಾಗಿದೆ.

***

Disclaimer: ಈ ಲೇಖನದಲ್ಲಿರುವ ಮಾಹಿತಿಯನ್ನು ಸಾಮಾನ್ಯ ಮಾರ್ಗದರ್ಶನಕ್ಕಾಗಿ ನೀಡಲಾಗಿದೆ. ಕೋರ್ಸ್‌ಗಳ ಅವಧಿ, ಅರ್ಹತೆ, ಪ್ರವೇಶ ನಿಯಮಗಳು ಮತ್ತು ಉದ್ಯೋಗಾವಕಾಶಗಳು ಸಂಸ್ಥೆ ಹಾಗೂ ವಿಶ್ವವಿದ್ಯಾಲಯದ ಪ್ರಕಾರ ಬದಲಾಗಬಹುದು. ಪ್ರವೇಶ ಪಡೆಯುವ ಮೊದಲು ಸಂಬಂಧಿಸಿದ ಅಧಿಕೃತ ಸಂಸ್ಥೆಯಿಂದ ಇತ್ತೀಚಿನ ಮಾಹಿತಿಯನ್ನು ಪರಿಶೀಲಿಸಿ.

ರಂಗನಾಥ ಬಿ.ಜಿ ಅವರು ಅರ್ಥಶಾಸ್ತ್ರದಲ್ಲಿ ಎಂ.ಎ ಪದವೀಧರರಾಗಿದ್ದು, ಕಳೆದ ಎರಡು ವರ್ಷಗಳಿಂದ ನೈಜ ಹಾಗೂ ವಿಶ್ವಾಸಾರ್ಹ ಕನ್ನಡ ವಿಷಯಗಳನ್ನು ಪ್ರಕಟಿಸುತ್ತಿದ್ದಾರೆ. ಸರ್ಕಾರಿ ಉದ್ಯೋಗ ಮಾಹಿತಿ, ಪರೀಕ್ಷಾ ತಯಾರಿ ಸಲಹೆಗಳು, ವೃತ್ತಿ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು ಹಾಗೂ ಟ್ರೆಂಡಿಂಗ್ ಸುದ್ದಿಗಳ ಕುರಿತು ಲೇಖನಗಳನ್ನು ಬರೆಯುವಲ್ಲಿ ಪರಿಣತಿ ಹೊಂದಿದ್ದು, ಓದುಗರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುವುದು ಇವರ ಉದ್ದೇಶವಾಗಿದೆ. Please Visit NewsByMr

Leave a Comment