Telegram Join Our Telegram WhatsApp Join Our WhatsApp

Agriculture Department Recruitment 2026, Big Opportunity: ಹುದ್ದೆ, ಅರ್ಹತೆ, ವೇತನ ಹಾಗೂ ಅರ್ಜಿ ಸಲ್ಲಿಕೆ ಬಗ್ಗೆ ಮಾಹಿತಿ

Agriculture Officer And Assistant Agriculture Officer Posts

ಕರ್ನಾಟಕ ರಾಜ್ಯದ ಕೃಷಿ ಇಲಾಖೆಯಲ್ಲಿನ ವಿವಿಧ ಹಂತಗಳ ಕೃಷಿ ಅಧಿಕಾರಿ ಹುದ್ದೆಗಳ ಭರ್ತಿಗಾಗಿ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿಯ ಪ್ರಕ್ರಿಯೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಲಿದ್ದು, ಈಗಾಗಲೇ ಅಧಿಕೃತ ಅಧಿಸೂಚನೆ ಪ್ರಕಟಿಸಲಾಗಿದೆ. ಕರ್ನಾಟಕ ಸರ್ಕಾರದಲ್ಲಿನ ಪ್ರತಿಷ್ಠಿತ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ. ಆದ್ದರಿಂದ ಆಸಕ್ತರು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಹತೆಯನ್ನು ಪರಿಶೀಲಿಸಿ, ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸುವುದು ಸೂಕ್ತವಾಗಿದೆ.

ನೇಮಕಾತಿ ಅಧಿಸೂಚನೆಯ ವಿವರಗಳು

ನೇಮಕ ಮಾಡಿಕೊಳ್ಳುತ್ತಿರುವ ಇಲಾಖೆ ಕರ್ನಾಟಕ ಕೃಷಿ ಇಲಾಖೆ (KSDA)
ನಿಗದಿಪಡಿಸಿರುವ ಪರೀಕ್ಷಾ ಮಂಡಳಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
ಒಟ್ಟು ಕಾಲ ಹುದ್ದೆಗಳ ಸಂಖ್ಯೆ 945 ಹುದ್ದೆಗಳು
ಕೆಲಸ ನಿರ್ವಹಣೆಯ ಸ್ಥಳ ಕರ್ನಾಟಕದಾದ್ಯಂತ
ಹುದ್ದೆಗಳ ಹೆಸರು ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳು
ವೇತನ (ಮಾಸಿಕ) 69,250/- ರೂಗಳಿಂದ 1,34,200/- ರೂಗಳ ವರೆಗೆ

 

ಖಾಲಿ ಇರುವ ಹುದ್ದೆಗಳ ಹಂಚಿಕೆ

ಈ ನೇಮಕಾತಿಯ ಮುಖೇನ ಒಟ್ಟು 945 ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗಳಿಗೆ ಅರ್ಜಿಯನ್ನ ಆಹ್ವಾನಿಸಿದ್ದು ಹುದ್ದೆವಾರು ಹಂಚಿಕೆ ಈ ಕೆಳಕಂಡಂತಿದೆ

ಹುದ್ದೆಗಳ ಹೆಸರು ಖಾಲಿ ಇರುವ ಹುದ್ದೆಗಳ ವಿವರ
ಕೃಷಿ ಅಧಿಕಾರಿ 42 RPC + 86 KKR ಒಟ್ಟು 128 ಹುದ್ದೆಗಳು
ಸಹಾಯಕ ಕೃಷಿ ಅಧಿಕಾರಿ 231 RPC + 586 KKR ಒಟ್ಟು 817 ಹುದ್ದೆಗಳು

ಮಾಹಿತಿ:

  • RPC- Residual Parent Cadre ( ಉಳಿದ ಪೋಷಕ ವೃಂದ)
  • KKR- Kalyana Karnata Region (ಕಲ್ಯಾಣ ಕರ್ನಾಟಕ ವೃಂದ)

ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತಾ ಮಾನದಂಡಗಳು

ಶೈಕ್ಷಣಿಕ ವಿದ್ಯಾರ್ಹತೆ

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದೇಶದ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಬಂಧಿತ ಮಂಡಳಿ ಸಂಸ್ಥೆಯಿಂದ ತಾಂತ್ರಿಕ ಪದವಿಗಳನ್ನು ಹೊಂದಿರಬೇಕಾಗುತ್ತದೆ ವಿಶೇಷವಾಗಿ

  • B.Sc Agriculture
  • B.Tech In Biotechnology Or Agriculture Engineering
ವಯೋಮಿತಿ ವಿವರಗಳು

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕನಿಷ್ಠ 21 ವರ್ಷಗಳ ಹಾಗೂ ಗರಿಷ್ಠ 40 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕಾಗುತ್ತದೆ

ವಯೋಮಿತಿ ಸಡಿಲಿಕೆ

ಸರ್ಕಾರವು ಸಾಮಾಜಿಕ ವರ್ಗಗಳ ಆಧಾರದ ಮೇಲೆ ಗರಿಷ್ಠ ವಯೋಮಿತಿಯನ್ನು ಈ ಕೆಳಕಂಡಂತೆ ನೀಡಲಾಗುತ್ತಿದೆ

  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ರ ಅಭ್ಯರ್ಥಿಗಳಿಗೆ ಗರಿಷ್ಠ 45 ವರ್ಷಗಳು ಅಂದರೆ 5 ವರ್ಷಗಳ ಸಡಿಲಿಕೆ
  • ಇತರೆ ಹಿಂದುಳಿದ ವರ್ಗಗಳ 2ಎ 2ಬಿ 3ಎ 3ಬಿ ಅಭ್ಯರ್ಥಿಗಳಿಗೆ ಗರಿಷ್ಠ 43 ವರ್ಷಗಳು ಅಂದರೆ 3 ವರ್ಷಗಳ ಸಡಿಲಿಕೆ
  • ಅಂಗವಿಕಲ, ವಿಶೇಷ ವರ್ಗದ ವಿದ್ಯಾರ್ಥಿಗಳು ಹಾಗೂ ವಿಧವಾ ಅಭ್ಯರ್ಥಿಗಳಿಗೆ ಗರಿಷ್ಠ 50 ವರ್ಷಗಳು ಅಂದರೆ 10 ವರ್ಷಗಳ ವಯೋಮಿತಿ ಸಡಿಲಿಕೆ

ಈ ಮೇಲಿನ ವಯೋಮಿತಿ ಸಡಿಲಿಕೆಯನ್ನು ಕರ್ನಾಟಕ ಸರ್ಕಾರದ ನೇಮಕಾತಿ ವಯೋಮಿತಿ ಸಡಿಲಿಕೆ ಕಾಯ್ದೆ ಅಡಿಯಲ್ಲಿ ನೀಡಲಾಗುತ್ತದೆ

ಆನ್ಲೈನ್ ಅರ್ಜಿ ಶುಲ್ಕ

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ತಮ್ಮ ಮೀಸಲಾತಿ ವರ್ಗಕ್ಕೆ ಸಂಬಂಧಿಸಿದಂತೆ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ

  • ಸಾಮಾನ್ಯ, ಇತರೆ ಹಿಂದುಳಿದ ವರ್ಗಗಳ 2ಎ 2ಬಿ 3ಎ 3ಬಿ ಅಭ್ಯರ್ಥಿಗಳು :  750/- ರೂಗಳು
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ ಅಭ್ಯರ್ಥಿಗಳು ಹಾಗೂ ಪ್ರವರ್ಗ-1 ಕ್ಕೆ ಸೇರಿದ ಅಭ್ಯರ್ಥಿಗಳು : 500/- ರೂಗಳು
  • ಮಾಜಿ ಸೈನಿಕ ಅಭ್ಯರ್ಥಿಗಳು : 250/- ರೂಗಳು

ಅರ್ಜಿ ಶುಲ್ಕವನ್ನು ಆನ್‌ ಲೈನ್‌ ಮೂಲಕ ಡೆಬಿಟ್‌ ಕಾರ್ಡ್‌, ಕ್ರೆಡಿಟ್ ಕಾರ್ಡ್‌, ನೆಟ್‌ ಬ್ಯಾಂಕಿಂಗ್‌, ಯುಪಿಐ ಮೂಲಕ ಮಾತ್ರ ಪಾವತಿಸಿ

ಆಯ್ಕೆಗೊಳ್ಳುವಿಕೆಯ ಹಂತಗಳು

ಈ ನೇಮಕಾತಿಯ ಆಯ್ಕೆ ಪ್ರಕ್ರಿಯೆಯು ಎರಡು ಹಂತಗಳಲ್ಲಿ ನಡೆಯಲಿದ್ದು ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಭಾಷೆಯ ಅರ್ಹತೆ ಹಾಗೂ ಸಂಬಂಧಿತ ವಿಷಯದಲ್ಲಿ ನುರಿತ ಜ್ಞಾನ ಎರಡನ್ನು ಪರೀಕ್ಷಿಸಲು ಪ್ರಾಥಮಿಕ ಹಂತಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ ಅವುಗಳೆಂದರೆ

ಕನ್ನಡ ಭಾಷಾ ಪರೀಕ್ಷೆ : ಅಭ್ಯರ್ಥಿಗಳು ಪ್ರಾದೇಶಿಕ ಭಾಷೆಯಲ್ಲಿ ಓದಲು ಬರೆಯಲು ಅರ್ಥ ಮಾಡಿಕೊಳ್ಳಲು ಹಾಗೂ ಮಾತನಾಡಲು ಬರುತ್ತದೆಯೇ ಎಂಬ ಪ್ರಶ್ನೆಗಳಿಗೆ ಅನುಗುಣವಾಗಿ ಈ ಪರೀಕ್ಷೆ ಇರುತ್ತದೆ

ಸ್ಪರ್ಧಾತ್ಮಕ ಪರೀಕ್ಷೆ : ಈ ಪರೀಕ್ಷೆಯು ಆಫ್ಲೈನ್ ವಿಧಾನದಲ್ಲಿ ನಡೆಯಲಿದ್ದು ವೈಯಮ್ ಅರ ಆಧಾರಿತ ಪರೀಕ್ಷೆ ಆಗಿರುತ್ತದೆ ಈ ಪರಿಚಯದಲ್ಲಿ ಹುದ್ದೆಗಳಿಗೆ ಸಂಬಂಧಿಸಿದ ವಿಶೇಷ ಜ್ಞಾನ ಹಾಗೂ ಕೌಶಲ್ಯ ಹಾಗೂ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ

 

Karnataka Agriculture Department ಬಗ್ಗೆ :

ಕರ್ನಾಟಕ ಕೃಷಿ ಇಲಾಖೆ ರಾಜ್ಯದ ಪ್ರಮುಖ ಸರ್ಕಾರಿ ಇಲಾಖೆಗಳಲ್ಲಿ ಒಂದಾಗಿದ್ದು ದೇಶದ ತೃತೀಯ ಉತ್ಪಾದನಾ ವಲಯವಾಗಿದೆ. ಇದು ರೈತರ ಸಮಗ್ರ ಅಭಿವೃದ್ಧಿ, ಕೃಷಿ ಉತ್ಪಾದನೆಯ ಹೆಚ್ಚಳ, ಆಧುನಿಕ ಕೃಷಿ ತಂತ್ರಜ್ಞಾನಗಳ ಅಳವಡಿಕೆ, ಪ್ರಚಾರ ಮತ್ತು ಆಹಾರ ಭದ್ರತೆಯನ್ನು ಖಚಿತಪಡಿಸುವ ಉದ್ದೇಶದಿಂದ ಸಮಗ್ರ ಮಟ್ಟದಲ್ಲಿ ಕಾರ್ಯ ನಿರ್ವಹಿಸುತ್ತದೆ. ಈ ಇಲಾಖೆಯು 1899 ರಲ್ಲಿ ಬೆಂಗಳೂರಿನ ಹೆಬ್ಬಾಳ ಪ್ರದೇಶದಲ್ಲಿ ಸ್ಥಾಪನೆಗೊಂಡು ಮುಂದುವರೆದು 1913 ರಲ್ಲಿ ಕೃಷಿ ಶಿಕ್ಷಣ ಹಾಗೂ ಕೃಷಿ ಆಡಳಿತ ಕ್ರಮಗಳನ್ನು ಅಳವಡಿಸಿಕೊಂಡಿತು.

ಕರ್ನಾಟಕ ಕೃಷಿ ಇಲಾಖೆಯ Agriculture Officer And Assistant Agriculture Officer ಹುದ್ದೆಗಳಿಗೆ ಏಕೆ ಅರ್ಜಿ ಸಲ್ಲಿಸಬೇಕು
  • ಸರ್ಕಾರಿ ಉದ್ಯೋಗದ ಭದ್ರತೆಯನ್ನು ಈ ಹುದ್ದೆಗಳು ನೀಡುತ್ತವೆ
  • ಉತ್ತಮ ವೇತನ ಹಾಗೂ ಭತ್ಯೆಗಳು
  • ಮುಂಬಡ್ತಿ ಸೇವೆಗಳು
  • ಕೃಷಿ ವಲಯದಲ್ಲಿ ವಿಶೇಷ ಜ್ಞಾನವನ್ನು ಹೊಂದಬಹುದು
  • ನಿವೃತ್ತಿ ಪೀಚಣಿ ಸೌಲಭ್ಯ ಹಾಗೂ ಇತರೆ ಹೆಚ್ಚುವರಿ ಸರ್ಕಾರಿ ಸೌಲಭ್ಯಗಳು
Agriculture Officer And Assistant Agriculture Officer ಗಳ ಕಾರ್ಯ ಮತ್ತು ಕರ್ತವ್ಯಗಳು
  • ಕೃಷಿ ಇಲಾಖೆಯ ಯೋಜನೆಗಳ ಅನುಷ್ಠಾನ, ಮೇಲ್ವಿಚಾರಣೆ ಹಾಗೂ ನಿರ್ವಹಣೆ
  • ಬೆಳೆ ಪರಿಶೀಲನೆ
  • ರೈತರಿಗೆ ಅರಿವು ಹಾಗೂ ಮಾರ್ಗದರ್ಶನ
  • ಮಣ್ಣಿನ ಪರೀಕ್ಷೆ ಹಾಗೂ ಉತ್ತಮಗೊಳಿಸುವ ತಂತ್ರಗಳ ಬಗ್ಗೆ ರೈತರಿಗೆ ಮಾಹಿತಿ ನೀಡುವುದು
  • ಕೃಷಿ ವಲಯದ ಉತ್ಪಾದನೆಯ ಹೆಚ್ಚಳಕ್ಕೆ ಸಹಕಾರ ನೀಡುವುದು
Agriculture Officer And Assistant Agriculture Officer Posts Career Growth

ನೇಮಕಗೊಂಡ ನಂತರ ಸಹಾಯಕ ಕೃಷಿ ಅಧಿಕಾರಿ -> ಕೃಷಿ ಅಧಿಕಾರಿ -> ಹಿರಿಯ ಕೃಷಿ ಅಧಿಕಾರಿ -> ಕೃಷಿ ಇಲಾಖೆ ಉಪನಿರ್ದೇಶಕ -> ಕೃಷಿ ಇಲಾಖೆ ಜಂಟಿ ನಿರ್ದೇಶಕ ಹುದ್ದೆಗಳಿಗೆ ಪದೋನ್ನತಿ ಹೊಂದುವ ಅವಕಾಶಗಳಿರುತ್ತವೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಕಂಡ ಹಂತಗಳನ್ನು ಅನುಸರಿಸುವುದರ ಮೂಲಕ ಯಶಸ್ವಿಯಾಗಿ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು

ಅಧಿಸೂಚನೆಯ ಪರಿಶೀಲನೆ : ಕರ್ನಾಟಕ ಸರ್ಕಾರ ಕೃಷಿ ಇಲಾಖೆಯು ಅಧಿಕೃತವಾಗಿ ಹೊರಡಿಸಿರುವ ನೇಮಕಾತಿಯಲ್ಲಿ ಸೂಚನೆಯನ್ನು ಸಂಪೂರ್ಣವಾಗಿ ಓದಿಕೊಂಡು ಅರ್ಹತಾ ಮಾನದಂಡಗಳ ಪೂರೈಕೆಯನ್ನು ಪರಿಶೀಲಿಸಿ ಅಧಿಸೂಚನೆಯು ಅಧಿಕೃತ ವೆಬ್ಸೈಟ್ನಲ್ಲಿ ಸಿಗುತ್ತದೆ ಅಥವಾ ಈ ಕೆಳಗೆ ನಾವು ನೀಡಿದ್ದೇವೆ

ದಾಖಲೆಗಳ ತಯಾರಿ : ನೇಮಕಾತಿ ಪ್ರಕ್ರಿಯೆಯಲ್ಲಿ ಅವಶ್ಯಕವಿರುವ ಅಂತಹ ಶೈಕ್ಷಣಿಕ ವಿವರಗಳು ವೈಯಕ್ತಿಕ ವಿವರಗಳು ಸಂವಹನ ಉದ್ದೇಶಕ್ಕಾಗಿ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿ ಭಾವಚಿತ್ರ ಹಾಗು ಸಹಿ ಮುಂತಾದ ಪ್ರಮುಖ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ

ಅರ್ಜಿಯನ್ನು ಭರ್ತಿ ಮಾಡುವಿಕೆ : ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ಮೂಲಕ ಕರ್ನಾಟಕ ಕೃಷಿ ಇಲಾಖೆ ನೇಮಕಾತಿ ಲಿಂಕ್ ಅನ್ನು ಬಳಸಿ ಕೃಷಿ ಅಧಿಕಾರಿ ನೇಮಕಾತಿಗೆ ಸಂಬಂಧಿಸಿದ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಆನ್ಲೈನ್ ಅರ್ಜಿಯನ್ನು ತೆರೆದು ಅಲ್ಲಿ ಕೇಳಲಾಗುವ ವೈಯಕ್ತಿಕ ವಿವರ ಶೈಕ್ಷಣಿಕ ಮಾಹಿತಿ ವಯೋಮಿತಿ ವಿವರ ವಯೋಮಿತಿ ಸಡಿಲಿಕೆಗೆ ಸಂಬಂಧಿಸಿದ ದಾಖಲೆಗಳು ಭಾವಚಿತ್ರ ಹಾಗೂ ಸಹಿ ವಿವರಗಳನ್ನು ನಿರ್ದಿಷ್ಟ ಪಡಿಸಿದ ಜಾಗದಲ್ಲಿ ನಮೂದಿಸಿ

ದಾಖಲೆಗಳ ಅಪ್ಲೋಡ್ : ಅರ್ಜಿ ಪ್ರಕ್ರಿಯೆಯಲ್ಲಿ ಕೇಳಲಾಗುವ ಕಡ್ಡಾಯ ಹಾಗೂ ಅನ್ವಯಿಕ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ಎಚ್ಚರಿಕೆಯಿಂದ ಅಪ್ಲೋಡ್ ಮಾಡಿ ಭಾವಚಿತ್ರವನ್ನು ಅಪ್ಲೋಡ್ ಮಾಡುವಾಗ ಇತ್ತೀಚಿನ ದಿನಗಳ ಭಾವಚಿತ್ರವನ್ನು ಅಪ್ಲೋಡ್ ಮಾಡಿ

ಶುಲ್ಕ ಪಾವತಿ : ಅನ್ವಯಿಕ ವರ್ಗದ ಆಧಾರದ ಮೇಲೆ ನಿರ್ದಿಷ್ಟ ಪಡಿಸಲಾಗಿರುವ ಮೊತ್ತದ ಆನ್ ಲೈನ್ ಅರ್ಜಿ ಶುಲ್ಕವನ್ನು ಪಾವತಿಸಿ

ಅರ್ಜಿ ಸಲ್ಲಿಕೆ : ಎಲ್ಲ ಮಾಹಿತಿಯನ್ನು ನಮೂದಿಸಿ ದಾಖಲೆಗಳನ್ನು ಅಪ್ಲೋಡ್ ಮಾಡಿ ಶುಲ್ಕವನ್ನು ಪಾವತಿಸಿದ ನಂತರ ಎಲ್ಲಾ ವಿವರಗಳನ್ನು ಪರಿಶೀಲಿಸಿ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಸ್ಕ್ರೀನ್ ನ ಮೇಲೆ ಕಾಣುವ ಅಪ್ಲಿಕೇಶನ್ ನಂಬರ್ ಹಾಗೂ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಇಟ್ಟುಕೊಳ್ಳಿ ನೇಮಕಾತಿ ಪ್ರಕ್ರಿಯೆಯಲ್ಲಿ ಇದೊಂದು ಪ್ರಾಥಮಿಕ ದಾಖಲೆಯಾಗಿ ಕಾರ್ಯ ನಿರ್ವಹಿಸುತ್ತದೆ

ನೇಮಕಾತಿಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು

ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ : 30 ಮೇ 2026
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20 ಜೂನ್ 2026
ನಿರ್ದಿಷ್ಟ ಪಡಿಸಿದ ಆನ್ಲೈನ್ ಶುಲ್ಕ ಪಾವತಿಗೆ ಕಡೆ ದಿನಾಂಕ : 22 ಜೂನ್ 2026

ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಲಿಂಕುಗಳು

ಕರ್ನಾಟಕ ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್ (ನೇಮಕಾತಿ ವಿಭಾಗ) ಕರ್ನಾಟಕ ಕೃಷಿ ಇಲಾಖೆ
ಅಧಿಕೃತ ಅಧಿಸೂಚನೆ ಪಿ ಡಿ ಎಫ್ AO AAO Recruitment RPC                                AO AAO Recruitment KKR
ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ Residual Parent Cadre                                        Kalyana Karnata Region  
ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೆಚ್ಚುವರಿ ಮಾಹಿತಿ ನೇಮಕಾತಿ ಮಾಹಿತಿ       ಸರ್ಕಾರಿ ಯೋಜನೆಗಳ ಮಾಹಿತಿ

Last Updated : 04-06-2026

Read More : KVAFSU Recruitment 2026, Big Opportunity: ಬೋಧಕ ಹುದ್ದೆಗಳಿಗೆ ಅರ್ಜಿ ಆಹ್ವಾನ, ಹುದ್ದೆ, ಅರ್ಹತೆ, ಸಂಬಳ ಹಾಗೂ ಅರ್ಜಿ ಸಲ್ಲಿಕೆ ಬಗ್ಗೆ ಮಾಹಿತಿ

 

ಈ ನೇಮಕಾತಿಗೆ ಯಾರು ಅರ್ಜಿ ಸಲ್ಲಿಸಬೇಕು 

  • B.Sc Agriculture ಪದವಿ ಹೊಂದಿರುವವರು
  • B.Tech In Biotechnology Or Agriculture Engineering ಪದವಿಯನ್ನು ಹೊಂದಿರುವವರು
  • ಸರ್ಕಾರಿ ಕೆಲಸವನ್ನು ಹುಡುಕುತ್ತಿರುವವರು
  • ಸಾರ್ವಕನಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಅಂದುಕೊಂಡಿರುವವರು

Agriculture Officer And Assistant Agriculture Officer  ಹುದ್ದೆಗಳ Exam Preperation Tips

ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಸರಿಯಾದ ಯೋಜನೆ ಮತ್ತು ನಿರಂತರ ಅಭ್ಯಾಸ ಅಗತ್ಯವಾಗಿದೆ. ಕೆಳಗಿನ ಸಲಹೆಗಳನ್ನು ಅನುಸರಿಸುವ ಮೂಲಕ ನಿಮ್ಮ ಯಶಸ್ಸಿನ ಸಾಧ್ಯತೆಯನ್ನು ಹೆಚ್ಚಿಸಬಹುದು.

 ಪಠ್ಯಕ್ರಮವನ್ನು ಸರಿಯಾದ ರೀತಿಯಲ್ಲಿ ವಿಭಾಗಿಸಿ

ಹುದ್ದೆಗಳಿಗೆ ನೀಡಲಾದ ಸಿಲೆಬಸ್ ಅನ್ನು ವಿಷಯವಾರು ವಿಭಾಗಿಸಿಕೊಳ್ಳಿ. Agronomy & Crop Production, Soil Science, Horticulture & Forestry, Plant Protection, Agricultural Economics & Extension, Agricultural Engineering ಹಾಗೂ Crop Breeding ವಿಷಯಗಳಿಗೆ ಪ್ರತ್ಯೇಕ ಹಾಗೂ ಹೆಚ್ಚಿನ ಸಮಯವನ್ನು ಮೀಸಲಿಡಿ. ಎಲ್ಲಾ ವಿಷಯಗಳ ಪ್ರಮುಖ ಅಧ್ಯಾಯಗಳನ್ನು ಗುರುತಿಸಿ ಅಧ್ಯಯನವನ್ನು ಆರಂಭಿಸಿ.

Agronomy ಮತ್ತು Crop Production ಗೆ ಹೆಚ್ಚಿನ ಆದ್ಯತೆ ನೀಡಿ

ಬೆಳೆಗಳ ಉತ್ಪಾದನೆ, ಕೃಷಿಯ ಪದ್ಧತಿಗಳು, ಕಳೆಯ ನಿಯಂತ್ರಣ, ಬೆಳೆಯ ನಿರ್ವಹಣೆ ಹಾಗೂ ಕೃಷಿ ಹವಾಮಾನಶಾಸ್ತ್ರಕ್ಕೆ ಸಂಬಂಧಿಸಿದ ಹೆಚ್ಚುವರಿ ಪ್ರಶ್ನೆಗಳು ಹೆಚ್ಚಾಗಿ ಕೇಳಲಾಗುವ ಸಾಧ್ಯತೆ ಇದೆ. ವಿವಿಧ ಬೆಳೆಗಳ ಬೆಳವಣಿಗೆಯ ಹಂತಗಳು, ಬಿತ್ತನೆ ವಿಧಾನಗಳು ಮತ್ತು ಉತ್ಪಾದನಾ ತಂತ್ರಜ್ಞಾನಗಳನ್ನು ಚೆನ್ನಾಗಿ ಅಧ್ಯಯನ ಮಾಡಿ ಅರ್ಥಮಾಡಿಕೊಳ್ಳಿ.

Soil Science ವಿಷಯವನ್ನು ಪ್ರಾಯೋಗಿಕವಾಗಿ ಕಲಿಯಿರಿ

ಮಣ್ಣಿನ ಫಲವತ್ತತೆ ಮಟ್ಟ, ಮಣ್ಣಿನಲ್ಲಿರುವ ರಾಸಾಯನಿಕ ಗುಣಲಕ್ಷಣಗಳು, ಇರುವ ಸೂಕ್ಷ್ಮಜೀವಿಗಳು ಹಾಗೂ ಮಣ್ಣು-ನೀರು ಸಂರಕ್ಷಣೆ ಮಾಡುವ ವಿಧಾನಗಳನ್ನು ಹೆಚ್ಚಾಗಿ ಅಧ್ಯಯನ ಮಾಡಿ. ವಿವಿಧ ಪೋಷಕಾಂಶಗಳ ಕೊರತೆಯ ಲಕ್ಷಣಗಳು ಹಾಗೂ ಅವುಗಳಿಗೆ ಇರುವ ಪರಿಹಾರ ಕ್ರಮಗಳನ್ನು ಅಭ್ಯಸಿಸಿ.

Horticulture ಮತ್ತು Plant Protection ಗೆ ವಿಶೇಷ ಗಮನ ಮತ್ತು ಸಮಯ ನೀಡಿ

ಹಣ್ಣುಗಳು, ತರಕಾರಿಗಳು, ಹೂಗಳು ಹಾಗೂ ತೋಟಗಾರಿಕಾ ಬೆಳೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ. ಇದರ ಜೊತೆಗೆ ಪ್ರಮುಖ ಕೀಟಗಳು, ರೋಗಗಳು, ಅವುಗಳ ಲಕ್ಷಣಗಳು ಮತ್ತು ನಿಯಂತ್ರಿಸುವ ಕ್ರಮಗಳ ಬಗ್ಗೆ ಸಂಕ್ಷಿಪ್ತ ವರದಿಗಳನ್ನು ತಯಾರಿಸಿ.

Agricultural Economics ಮತ್ತು Extension ವಿಚಾರಗಳನ್ನು ನಿರ್ಲಕ್ಷಿಸಬೇಡಿ ಹಾಗೂ ಬಿಡಬೇಡಿ

ಕೃಷಿ ಮಾರುಕಟ್ಟೆಗಳ ವ್ಯವಸ್ಥೆ, ಕೃಷಿ ಪದ್ದತಿ ನಿರ್ವಹಣೆ, ರೈತರ ಕಲ್ಯಾಣ ಸಾಧಿಸುವ ಯೋಜನೆಗಳು ಹಾಗೂ ಗ್ರಾಮೀಣ ವಿಸ್ತರಣಾ ವಿಧಾನಗಳ ಬಗ್ಗೆ ತಿಳಿದುಕೊಳ್ಳಿ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೃಷಿ ಯೋಜನೆಗಳ ಬಗ್ಗೆ ಹೆಚ್ಚಾಗಿ ಓದಿ.

 Agricultural Engineering ಮತ್ತು Crop Breeding ವಿಚಾರಗಳನ್ನು ಮುಖ್ಯವಾಗಿ ಅಭ್ಯಾಸ ಮಾಡಿ

ಕೃಷಿಯಲ್ಲಿ ಬಳಸುವ ಯಂತ್ರೋಪಕರಣಗಳು, ನೀರಾವರಿ ಪದ್ಧತಿಗಳು, ಒಳಚರಂಡಿ ವ್ಯವಸ್ಥೆಗಳು, ಅನುವಂಶಿಕತೆ ಮಾಹಿತಿ ಹಾಗೂ ಸಸ್ಯ ತಳಿಶಾಸ್ತ್ರದ ಮೂಲಭೂತ ತತ್ವಗಳನ್ನು ಗಮನದಲ್ಲಿಡಿ. ಪ್ರಮುಖ ವೈಜ್ಞಾನಿಕ ಪದಗಳು ಮತ್ತು ತತ್ವಗಳನ್ನು ಚಾರ್ಟುಗಳ ರೂಪದಲ್ಲಿ ಸಿದ್ಧಪಡಿಸಿ ಇಟ್ಟುಕೊಂಡು ಅಧ್ಯಯನ ಮಾಡಿ

ಮಾಕ್ ಟೆಸ್ಟ್ ಅಧ್ಯಯನ ಹಾಗೂ ರಿವಿಷನ್

ಪ್ರತಿ ವಾರ ಕಡಿಮೆ ಎಂದರೂ ಎರಡು ಮಾಕ್ ಟೆಸ್ಟ್‌ಗಳನ್ನು ತೆಗೆದುಕೊಳ್ಳಿ ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಹೆಚ್ಚಾಗಿ ಅಭ್ಯಾಸ ಮಾಡಿ. ಪರೀಕ್ಷೆಗೆ ಮುನ್ನ ಕೊನೆಯ 15 ದಿನಗಳಲ್ಲಿ ಹೊಸ ವಿಷಯಗಳನ್ನು ಓದುವುದನ್ನು ಬಿಟ್ಟು ಈಗಾಗಲೇ ಓದಿರುವ ವಿಷಯಗಳ ರಿವಿಷನ್‌ ಮಾಡುವುದಕ್ಕೆ ಹೆಚ್ಚಿನ ಸಮಯ ಹಾಗೂ ಆಸಕ್ತಿಯನ್ನು ನೀಡಿ.

ನಿರಂತರ ಅಧ್ಯಯನ ಮಾಡುವುದು, ಸಮಯದ ನಿರ್ವಹಣೆ ಮತ್ತು ನಿಯಮಿತ ಅಭ್ಯಾಸವೇ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಪರೀಕ್ಷೆಯಲ್ಲಿ ಯಶಸ್ಸಿನ ಮುಖ್ಯ ಗುಟ್ಟಾಗಿದೆ. ಪ್ರತಿದಿನದ ಸಣ್ಣ ಪ್ರಯತ್ನಗಳು ಪರೀಕ್ಷೆಯಲ್ಲಿ ದೊಡ್ಡ ಯಶಸ್ಸನ್ನು ತಂದುಕೊಡುವುದರ ಜೊತೆಯಲ್ಲಿ ಉದ್ಯೋಗವನ್ನು ಪಡೆಯಲು ಸಹಕರಿಸುತ್ತವೆ.

ಕರ್ನಾಟಕ ಕೃಷಿ ಇಲಾಖೆಯ ಕೆಲಸ ಏನು?
  • ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನದ ಅರಿವು ಮತ್ತು ಅಳವಡಿಕೆಯನ್ನು ಉತ್ತೇಜಿಸುವುದು
  • ಉತ್ತಮ ಗುಣಮಟ್ಟದ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ, ಕೀಟನಾಶಕ ಹಾಗೂ ಇಳುವರಿ ಹೆಚ್ಚಿಸುವ ಸಲಹೆ ಹಾಗೂ ಮಾರ್ಗದರ್ಶನ ನೀಡುವುದು
  • ಕೃಷಿ ಯಾಂತ್ರೀಕರಣಕ್ಕೆ ಸಾಲ ಮತ್ತು ಸಬ್ಸಿಡಿ ಸೌಲಭ್ಯ
  • ಮಣ್ಣಿನ ಪರೀಕ್ಷೆ ಮತ್ತು ಮಣ್ಣಿನ ಆರೋಗ್ಯ ಕಾಪಾಡುವ ಬಗ್ಗೆ ಅರಿವು ಮೂಡಿಸುವುದು
  • ಸರ್ಕಾರ ಆರಂಭಿಸುವ ಹಾಗೂ ಪ್ರಸ್ತುತ ಇರುವ ಯೋಜನೆಗಳ ಅನುಷ್ಠಾನ ಹಾಗೂ ನಿರ್ವಹಣಾ ಮೇಲ್ವಿಚಾರಣೆ
ಕರ್ನಾಟಕ ಕೃಷಿ ಇಲಾಖೆಯ ಪ್ರತಿಷ್ಠೆ ಏನು
  • ಕರ್ನಾಟಕ ರಾಜ್ಯದ ಜನರ ಮೂಲ ಹಾಗೂ ಪ್ರಮುಖ ಕಸುಬು ಕೃಷಿಯಾಗಿದೆ
  • ರೈತರ ಕಲ್ಯಾಣ ಹಾಗೂ ಜೀವನ ಗುಣಮಟ್ಟ ಸುಧಾರಣೆ
  • ಆಹಾರ ಭದ್ರತೆ ಹಾಗೂ ಗುಣಮಟ್ಟ ಕಾಪಾಡುವಿಕೆ
  • ತಂತ್ರಜ್ಞಾನ, ಸಂಶೋಧನೆ ಹಾಗೂ ಆಧುನಿಕ ಪದ್ದತಿಗಳ ಅನುಷ್ಠಾನ
ಕೃಷಿ ಅಧಿಕಾರಿಗಳಿಗೆ ಇರಬೇಕಾದ ಪ್ರಮುಖ ಕೌಶಲ್ಯಗಳು
  • ಸಂವಹನ ಕೌಶಲ್ಯ
  • ರೈತ ಸ್ನೇಹಿ ಹಿತಾಸಕ್ತಿ
  • ವರದಿ ತಯಾರು ಮಾಡುವುದು
  • ಕ್ಷೇತ್ರಭೇಟಿಯಲ್ಲಿ ಪ್ರಾವೀಣ್ಯತೆ ಹೊಂದಿರುವುದು
  • ಸಮಸ್ಯೆ ಪರಿಹಾರ ಮತ್ತು ವಿಪತ್ತು ನಿರ್ವಹಣಾ ಕೌಶಲ್ಯ
Agriculture Officer And Assistant Agriculture Officer Notification FAQʼs

1. ಅಂತಿಮ ವರ್ಷದ ಪದವಿ ಓದುತ್ತಿರುವವರು ಅರ್ಜಿ ಸಲ್ಲಸಬಹುದೇ?
ಇಲ್ಲ, ಅರ್ಜಿ ಸಲ್ಲಿಸಲು ನಿರ್ದಿಷ್ಟಪಡಿಸಿರುವ ಪದವಿಯನ್ನು ಹೊಂದಿರಬೇಕು.

2. ಕನ್ನಡ ಭಾಷಾ ಪರೀಕ್ಷೆ ಕಡ್ಡಾಯವೇ?
ಹೌದು, ಈ ಹುದ್ದೆಗೆ ಕನ್ನಡ ಭಾಷಾ ಪರೀಕ್ಷೆಯನ್ನು ಬರೆಯುವುದು ಕಡ್ಡಾಯವಾಗಿದೆ.

3. ಪರೀಕ್ಷಾ ವಿಧಾನ ಯಾವುದು?
ಸ್ಪರ್ಧಾತ್ಮಕ ಪರೀಕ್ಷೆ ಇದ್ದು ಒಎಂಆರ್ ರೀತಿಯಲ್ಲಿ ಪರೀಕ್ಷೆ ನಡೆಯುತ್ತದೆ.

4. ಋಣಾತ್ಮಕ ಅಂಕಗಳು ಇರುತ್ತವೆಯೇ?
ಹೌದು, 0.75 ಋಣಾತ್ಮಕ ಅಂಕ ಇರುತ್ತದೆ.

5. ಬೇರೆ ರಾಜ್ಯದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದೇ?
ಇಲ್ಲ ಕರ್ನಾಟಕ ರಾಜ್ಯದ ನಿವಾಸಿಗಳಾಗಿರಬೇಕು.

 

Agriculture Officer And Assistant Agriculture Officer Exam Preparation Resources And Mock Test Links

ಪರೀಕ್ಷೆಯ ಗೂ ತಯಾರಿಗೆ ಮಾಕ್‌ ಟೆಸ್ಟ್‌ ಮತ್ತು ಸಂಪನ್ಮೂಲಗಳು : ಮಾಕ್‌ ಟೆಸ್ಟ್‌ ಗಳು

ಉಪಯೋಗಿತ ಸಂಪನ್ಮೂಲ ಪುಸ್ತಕಗಳು :

Subject Book
Agronomy Concepts Fundamentals of Agronomy
Soil Science Subject Introductory Soil Science
Horticulture Related Concepts Principles of Horticulture
  • ಅರುಣ್ ಕಾತ್ಯಾಯನ್ ಅವರಿಂದ ಕೃಷಿಯ ಮೂಲಭೂತ ಅಂಶಗಳು ಪುಸ್ತಕ (ಸಂಪುಟ 1 & 2)
  • ನೇಮ್ ರಾಜ್ ಸುಂದ ಅವರ ಸಾಮಾನ್ಯ ಕೃಷಿ ಪುಸ್ತಕ
  • ಟಿ.ವೈ. ರೆಡ್ಡಿ ಮತ್ತು ಜಿ.ಎಚ್. ​​ಶಂಕರ ರೆಡ್ಡಿ ಅವರಿಂದ ಕೃಷಿ ವಿಜ್ಞಾನದ ತತ್ವಗಳು ಪುಸ್ತಕ [1]

 

ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳು ಕೃಷಿ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಅತ್ಯುತ್ತಮ ಇದೊಂದು ಸರ್ಕಾರಿ ಉದ್ಯೋಗಾವಕಾಶವಾಗಿದೆ. ಈ ಹುದ್ದೆಗಳ ಮೂಲಕ ಅಭ್ಯರ್ಥಿಗಳು ಉತ್ತಮ ಸಂಬಳ, ಉದ್ಯೋಗ ಭದ್ರತೆ, ವಿವಿಧ ಭತ್ಯೆಗಳು, ಪದೋನ್ನತಿ ಅವಕಾಶಗಳು ಹಾಗೂ ಸರ್ಕಾರಿ ಸೇವೆಯ ಪ್ರತಿಷ್ಠೆಯನ್ನು ಪಡೆಯಬಹುದು. ಜೊತೆಗೆ ರೈತರ ಅಭಿವೃದ್ಧಿ, ಕೃಷಿ ಉತ್ಪಾದಕತೆ ಹೆಚ್ಚಳ ಹಾಗೂ ಕೃಷಿ ಕ್ಷೇತ್ರದ ಸಮಗ್ರ ಬೆಳವಣಿಗೆಯಲ್ಲಿ ನೇರವಾಗಿ ಪಾಲ್ಗೊಳ್ಳುವ ಅವಕಾಶವೂ ಈ ಹುದ್ದೆಗಳಿಂದ ದೊರೆಯುತ್ತದೆ.

ಅರ್ಹ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು, ಶೈಕ್ಷಣಿಕ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ ಹಾಗೂ ಇತರ ಪ್ರಮುಖ ಮಾಹಿತಿಗಳನ್ನು ಪರಿಶೀಲಿಸಿ ನಿಗದಿತ ಅವಧಿಯೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಸಿ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಲು ಈಗಿನಿಂದಲೇ ಸಿಲೆಬಸ್ ಆಧಾರಿತವಾಗಿ ಯೋಜಿತ ಅಧ್ಯಯನ ಆರಂಭಿಸಿ, ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡುವುದು ಹಾಗೂ ನಿಯಮಿತವಾಗಿ ರಿವಿಷನ್ ನಡೆಸುವುದು ಉತ್ತಮ. ಆದ್ದರಿಂದ ಈ ಅಮೂಲ್ಯ ಅವಕಾಶವನ್ನು ಬಿಡದೇ ಸದುಪಯೋಗಪಡಿಸಿಕೊಂಡು, ಕೃಷಿ ಇಲಾಖೆಯಲ್ಲಿ ನಿಮ್ಮ ಕನಸಿನ ಸರ್ಕಾರಿ ಉದ್ಯೋಗವನ್ನು ಪಡೆದು ಯಶಸ್ವಿ ಭವಿಷ್ಯವನ್ನು ರೂಪಿಸಿಕೊಳ್ಳಿ

 

Author Note: ಈ ನೇಮಕಾತಿ ಲೇಖನವನ್ನು ಕರ್ನಾಟಕ ಕೃಷಿ ಇಲಾಖೆಯ ಅಧಿಕೃತ ಅಧಿಸೂಚನೆ ಹಾಗೂ KEA ಪ್ರಕಟಣೆಗಳ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸುವುದು ಸೂಕ್ತ.

 

 

 

ರಂಗನಾಥ ಬಿ.ಜಿ ಅವರು ಅರ್ಥಶಾಸ್ತ್ರದಲ್ಲಿ ಎಂ.ಎ ಪದವೀಧರರಾಗಿದ್ದು, ಕಳೆದ ಎರಡು ವರ್ಷಗಳಿಂದ ನೈಜ ಹಾಗೂ ವಿಶ್ವಾಸಾರ್ಹ ಕನ್ನಡ ವಿಷಯಗಳನ್ನು ಪ್ರಕಟಿಸುತ್ತಿದ್ದಾರೆ. ಸರ್ಕಾರಿ ಉದ್ಯೋಗ ಮಾಹಿತಿ, ಪರೀಕ್ಷಾ ತಯಾರಿ ಸಲಹೆಗಳು, ವೃತ್ತಿ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು ಹಾಗೂ ಟ್ರೆಂಡಿಂಗ್ ಸುದ್ದಿಗಳ ಕುರಿತು ಲೇಖನಗಳನ್ನು ಬರೆಯುವಲ್ಲಿ ಪರಿಣತಿ ಹೊಂದಿದ್ದು, ಓದುಗರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುವುದು ಇವರ ಉದ್ದೇಶವಾಗಿದೆ. Please Visit NewsByMr

Leave a Comment