KMF GUMUL ನೇಮಕಾತಿಯ Exams Tips:
KMF GUMUL ನೇಮಕಾತಿ ಪರೀಕ್ಷೆಗೆ ಕನ್ನಡ, ಇಂಗ್ಲಿಷ್, ಸಾಮಾನ್ಯ ಜ್ಞಾನ, ಕಂಪ್ಯೂಟರ್ ಹಾಗೂ ಸಹಕಾರ ಸಂಘಗಳ ವಿಷಯಗಳಲ್ಲಿ ಯೋಜಿತ ತಯಾರಿ ಅಗತ್ಯ. ಈ ಲೇಖನದಲ್ಲಿ ಸಂಪೂರ್ಣ ಸಿಲಬಸ್, 90 ದಿನಗಳ ಅಧ್ಯಯನ ಯೋಜನೆ, ಪುಸ್ತಕಗಳು ಮತ್ತು ಪ್ರಮುಖ ಪರೀಕ್ಷಾ ಸಲಹೆಗಳನ್ನು ನೀಡಲಾಗಿದೆ.
ಇಂದಿನ ಪ್ರಪಂಚದಲ್ಲಿ ಎಲ್ಲರಿಗೂ ಸರ್ಕಾರಿ ಉದ್ಯೋಗವನ್ನು ಪಡೆಯುವ ಆಸೆಗಳಿರುತ್ತದೆ ಆದರೆ ಸ್ಪರ್ಧೆ ಹೆಚ್ಚಾಗಿರುವುದರಿಂದ ಸರ್ಕಾರಿ ಉದ್ಯೋಗ ಪಡೆಯುವ ಹಾದಿಯು ಸಹ ಕಷ್ಟವಾಗಿದೆ ಆದರೆ ಸರ್ಕಾರಿ ಉದ್ಯೋಗವನ್ನೇ ಪಡೆಯಬೇಕೆಂಬ ಕನಸನ್ನು ಕಟ್ಟಿರುವ ಅಭ್ಯರ್ಥಿಗಳಿಗೆ ಈಗಾಗಲೇ ನೇಮಕಾತಿ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ.
ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಹಾಗೂ ಯಶಸ್ಸನ್ನು ಸಾಧಿಸಲು ಕೇವಲ ಹೆಚ್ಚು ಸಮಯದ ಕಾಲ ಓದಿದಷ್ಟೇ ಸಾಕಾಗುವುದಿಲ್ಲ ಪ್ರತಿಯಾಗಿ ಪರೀಕ್ಷೆಗೆ ನಿಗದಿಪಡಿಸಲಾಗಿರುವ ಪಠ್ಯಕ್ರಮವನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು
ಪ್ರತಿಯೊಂದು ವಿಷಯವನ್ನು ಅದರ ಪ್ರಾಮುಖ್ಯತೆಗೆ ತಕ್ಕಂತೆ ಯೋಜಿತವಾಗಿ ಅಧ್ಯಯನ ಮಾಡಬೇಕು ಮತ್ತು ಓದಿರುವ ಪಠ್ಯಕ್ರಮವನ್ನು ನಿಯಮಿತವಾಗಿ ಮರು ಅಧ್ಯಯನ ಮಾಡುವುದರ ಮೂಲಕ ಹಾಗೂ ಹಿಂದಿನ ವರ್ಷದ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ ಅಭ್ಯಾಸ ಮಾಡುವುದರ ಮೂಲಕ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ.
ವಿಶೇಷವಾಗಿ ಸಹಕಾರ ಸಂಘಗಳು ಹಾಲು ಒಕ್ಕೂಟಗಳು ಹಾಗೂ ವಿವಿಧ ಇಲಾಖೆಗಳ ಸರ್ಕಾರಿ ಉದ್ಯೋಗಗಳ ನೇಮಕಾತಿ ಪರೀಕ್ಷೆಗಳಲ್ಲಿ ಕನ್ನಡ ಭಾಷೆ, ಇಂಗ್ಲಿಷ್ ಭಾಷೆ, ಸಾಮಾನ್ಯ ಜ್ಞಾನ, ಕಂಪ್ಯೂಟರ್ ಜ್ಞಾನ ಹಾಗೂ ಸಹಕಾರ ಸಂಘಗಳಿಗೆ ಸಂಬಂಧಿಸಿದಂತಹ ಪ್ರಮುಖ ವಿಚಾರಗಳಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತದೆ ಆದುದರಿಂದ ಪ್ರತಿಯೊಂದು ವಿಷಯಕ್ಕೂ ಸಮಾನ ಆದ್ಯತೆ ನೀಡುವುದು ಅತ್ಯಗತ್ಯವಾಗಿದೆ.
ನೇಮಕಾತಿ ಮಾಹಿತಿ ಲಿಂಕ್ :KMF GUMUL Recruitment 2026, Big Opportunity: ವಿವಿಧ ಹುದ್ದೆಗಳ ನೇಮಕಾತಿ, ಅರ್ಹತೆ, ಸಂಬಳ, ಅರ್ಜಿ ಸಲ್ಲಿಕೆ ಬಗ್ಗೆ ಸಂಪೂರ್ಣ ಮಾಹಿತಿ
ಲೇಖನದ ಮಾಹಿತಿಗಳು
1. KMF GUMUL ಪರೀಕ್ಷಾ ವಿಧಾನ
2. ಸಂಪೂರ್ಣ ಪಠ್ಯಕ್ರಮ
3. ಕನ್ನಡ ಭಾಷಾ ವಿಷಯಗಳು
4. ಇಂಗ್ಲಿಷ್
5. ಸಾಮಾನ್ಯ ಜ್ಞಾನ
6. ಕಂಪ್ಯೂಟರ್ ಜ್ಞಾನ
7. ಸಹಕಾರ ಸಂಘಗಳು
8. 90 ದಿನಗಳ ತಯಾರಿ ವಿಧಾನ
9. ಉತ್ತಮ ಪುಸ್ತಕಗಳು
10. ಸಂಬಂಧಿಸಿದ ಪ್ರಶ್ನೋತ್ತರಗಳು
Exams ತಯಾರಿಯಲ್ಲಿ ಅನುಸರಿಸಬೇಕಾದ ಮೂಲತತ್ವಗಳು
ಯಾವುದೇ Exams ನಲ್ಲಿ ಉತ್ತಮ ರೀತಿಯಲ್ಲಿ ಯಶಸ್ಸನ್ನು ಸಾಧಿಸಲು ಅಭ್ಯರ್ಥಿಗಳು ಕೆಲವು ಮೂಲಭೂತ ಹಾಗೂ ಪ್ರಮುಖ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ ಈ ನಿಯಮಗಳನ್ನು ಪಾಲಿಸುವುದರಿಂದ ನಿಮ್ಮ ಅಧ್ಯಯನದ ಮಟ್ಟವು ಸರಿಯಾದ ದಿಕ್ಕಿನಲ್ಲಿ ಹಾಗೂ ಯಶಸ್ಸಿನತ್ತ ಸಾಗಿಸಲು ಸಹಕರಿಸುತ್ತವೆ
ಸಂಪೂರ್ಣವಾಗಿ ಪಠ್ಯಕ್ರಮವನ್ನು ಅರ್ಥ ಮಾಡಿಕೊಳ್ಳುವುದು
ಯಾವುದೇ Exams ತಯಾರಿ ಆರಂಭಿಸುವ ಮುನ್ನ ನಿಗದಿಪಡಿಸಲಾಗಿರುವ ಅಧಿಕೃತ ಪಠ್ಯಕ್ರಮವನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ ಯಾವ ವಿಷಯಗಳಿಂದ ಹೆಚ್ಚು ಪ್ರಶ್ನೆಗಳು ಬರುತ್ತವೆ ಯಾವ ಅಧ್ಯಾಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಇದೆ ಹಾಗೂ ಯಾವ ವಿಷಯ ಹಾಗೂ ವಿಚಾರಗಳನ್ನು ಹೆಚ್ಚು ಆಳವಾಗಿ ಓದಬೇಕು ಎಂಬ ಮೊದಲಾದ ಅಂಶಗಳನ್ನು ಗುರುತಿಸಿಕೊಳ್ಳಬೇಕು
ನಂತರ ಪಠ್ಯಕ್ರಮದ ಸ್ಪಷ್ಟ ಅರಿವನ್ನು ಪಡೆಯಬೇಕು ಹೀಗೆ ಮಾಡುವುದರಿಂದ ಸಮಯ ವ್ಯರ್ಥ ಆಗುವುದಿಲ್ಲ ಜೊತೆಯಲ್ಲಿ ಯೋಚಿತ ಅಧ್ಯಯನವನ್ನು ನಡೆಸಲು ಸಹಾಯವಾಗುತ್ತದೆ
ವೇಳಾಪಟ್ಟಿ ರೂಪಿಸುವಿಕೆ
ಅಧ್ಯಯನಕ್ಕೆ ಸಂಬಂಧಿಸಿದ ಒಳ್ಳೆಯ ಹಾಗೂ ಸಮಯೋಚಿತ ವೇಳಾಪಟ್ಟಿಯನ್ನು ರಚಿಸುವುದರಿಂದ ಯಶಸ್ಸಿನ ಮೊದಲ ಹೆಜ್ಜೆಯನ್ನು ಇಡಬಹುದು ಪ್ರತಿದಿನವೂ ನಿಗದಿತ ಸಮಯದಲ್ಲಿ ಹಾಗೂ ಕನಿಷ್ಠ ಗಂಟೆಗಳ ಕಾಲ ಓದುವ ಅಭ್ಯಾಸವನ್ನು ರೂಡಿಸಿಕೊಳ್ಳಬೇಕು ಬೆಳಗಿನ ಸಂದರ್ಭದಲ್ಲಿ ಕಠಿಣ ವಿಚಾರಗಳನ್ನು ಅಧ್ಯಯನ ಮಾಡಿ ಸಂಜೆ ಸಮಯದಲ್ಲಿ ಅದೇ ವಿಷಯಗಳನ್ನು ಮರು ಅಧ್ಯಯನ ಮಾಡಬೇಕಾಗುತ್ತದೆ
ಇದರಿಂದ ಪ್ರಶ್ನೆ ಪತ್ರಿಕೆಗಳ ಅಭ್ಯಾಸವನ್ನು ಯೋಚಿತವಾಗಿ ರೂಪಿಸಬಹುದು ವಾರದ ಕೊನೆಯಲ್ಲಿ ವಾರಪೂರ್ತಿ ಓದಿದ ವಿಷಯಗಳ ಪುನರಾವರ್ತನೆ ಹಾಗೂ ರಿವಿಜನ್ ಮಾಡುವುದರಿಂದ ವಿಷಯಗಳು ಹೆಚ್ಚು ದಿನ ನೆನಪಿನಲ್ಲಿ ಉಳಿಯುತ್ತವೆ
ಪ್ರತಿದಿನವೂ ಮರು ಅಧ್ಯಯನ ಮಾಡುವ ಅಭ್ಯಾಸ
ಈ Competetive Exams ತಯಾರಿಯಲ್ಲಿ ಹೊಸ ವಿಷಯಗಳನ್ನು ಓದುವುದು ಮುಖ್ಯವಾದರೂ ಸಹ ಓರಿದ ವಿಷಯಗಳನ್ನು ಹೆಚ್ಚು ಕಾಲ ಜ್ಞಾಪಕ ಇಟ್ಟುಕೊಳ್ಳುವುದು ಇನ್ನಷ್ಟು ಪ್ರಮುಖವಾಗಿದೆ ಪ್ರತಿದಿನವೂ ಕನಿಷ್ಠ ಒಂದು ಗಂಟೆ ಸಮಯವನ್ನು ಹಿಂದಿನ ದಿನ ಓದಿದ ವಿಚಾರಗಳನ್ನು ಪುನರಾವರ್ತನೆ ಮಾಡಲು ಮೀಸಲಿಡಬೇಕು
ಇದರ ಮೂಲಕ ಮರುದಿನವನ್ನು ಮಾಡಿ ವಿಷಯಗಳನ್ನು ದೀರ್ಘಕಾಲದಲ್ಲಿ ನೆನಪಿನಲ್ಲಿಟ್ಟುಕೊಳ್ಳಬಹುದು ಹಾಗೂ ಪರೀಕ್ಷಾ ಸಮಯದಲ್ಲಿ ಉತ್ತರಗಳನ್ನು ಸುಲಭವಾಗಿ ನೆನಪಿಸಿಕೊಂಡು ಉತ್ತರಿಸಬಹುದು
ಹಿಂದಿನ ವರ್ಷದ ಹಾಗೂ ಮಾದರಿ ಪ್ರಶ್ನೆ ಪತ್ರಿಕೆಗಳ ಅಭ್ಯಾಸ
ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು ಹಾಗೂ ಮಾಕ್ ಟೆಸ್ಟ್ ಗಳನ್ನು ಅಭ್ಯಾಸ ಮಾಡುವುದರಿಂದ ಪರೀಕ್ಷೆಯ ಮಾದರಿ ಪ್ರಶ್ನೆಗಳ ಕಠಿಣತೆ ಸಮಯದ ನಿರ್ವಹಣೆ ಹಾಗೂ ಯಾವ ವಿಷಯಗಳಲ್ಲಿ ಹೆಚ್ಚು ಪ್ರಶ್ನೆ ಬರಬಹುದು ಎಂಬ ಬಗ್ಗೆ ಸ್ಪಷ್ಟತೆ ದೊರೆಯುತ್ತದೆ
ಪ್ರತಿವಾರಕ್ಕೆ ಒಂದು ಬಾರಿ ಕನಿಷ್ಠ ಒಂದು ಸಂಪೂರ್ಣ ಮಾದರಿಯ ಮಾಕ್ ಟೆಸ್ಟ್ ಬರೆಯುವುದು ನಿಮ್ಮ ದುರ್ಬಲತೆ ಹಾಗೂ ಬಲವಾದ ವಿಷಯಗಳನ್ನು ಗುರುತಿಸಿ ಅಧ್ಯಯನವನ್ನು ಸುಧಾರಿಸಿಕೊಳ್ಳಲು ಸಹಕರಿಸುತ್ತದೆ
ಸಮಯ ನಿರ್ವಹಣೆಗೆ ಹೆಚ್ಚಿನ ಒತ್ತು
Exams Preparation ಅವಧಿಯಲ್ಲಿ ಉತ್ತಮ ರೀತಿಯಲ್ಲಿ ಸಮಯ ನಿರ್ವಹಣೆ ಮಾಡುವುದು ಅತ್ಯಂತ ಪ್ರಮುಖ ಕೌಶಲ್ಯವಾಗಿದೆ ಪರೀಕ್ಷೆಯಲ್ಲಿ ಪ್ರತಿಯೊಂದು ಪ್ರಶ್ನೆಗೂ ಸಹ ಎಷ್ಟು ಸಮಯ ನೀಡಬೇಕು ಎಂಬುದನ್ನು ಮೊದಲೇ ಅಭ್ಯಾಸ ಮಾಡಿಕೊಳ್ಳಬೇಕು.
ನಿಮಗೆ ಸುಲಭ ಎನಿಸುವ ಪ್ರಶ್ನೆಗಳನ್ನು ಮೊದಲೇ ಬಿಡಿಸಿ ಯಾವ ಪ್ರಶ್ನೆಗಳು ಕಷ್ಟಕರ ಎನಿಸುತ್ತವೆ ಅವುಗಳನ್ನು ಕೊನೆಯ ಹಂತಕ್ಕೆ ಇರಿಸಿಕೊಳ್ಳಬೇಕು, ಇದರಿಂದ ಸಮಯದ ಉತ್ತಮ ಬಲಗೆಯಾಗಿ ಹೆಚ್ಚಿನ ಪ್ರಶ್ನೆಗಳಿಗೆ ವಿವರಿಸಲು ಉತ್ತರಿಸಲು ಸಾಧ್ಯವಾಗುತ್ತದೆ
ಪರೀಕ್ಷಾ ಪಠ್ಯಕ್ರಮದ ವಿವರ
ಈ ಸ್ಪರ್ಧಾತ್ಮಕ ಪರೀಕ್ಷೆಯು ಸಾಮಾನ್ಯ ಜ್ಞಾನ, ಕನ್ನಡ ಭಾಷೆ, ಇಂಗ್ಲಿಷ್ ಭಾಷೆ, ಕಂಪ್ಯೂಟರ್ ಜ್ಞಾನ ಹಾಗೂ ಸಹಕಾರ ಸಂಘಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಒಳಗೊಂಡಿದ್ದು ವಿವರವಾದ ಪಠ್ಯಕ್ರಮದ ವಿವರಣೆ ಈ ಕೆಳಕಂಡಂತಿದೆ
ಕನ್ನಡ ಭಾಷೆ
ಕನ್ನಡ ಭಾಷಾ ವಿಷಯವು ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ಹೆಚ್ಚಿನ ಹಾಗೂ ಉತ್ತಮ ಅಂಕಗಳನ್ನು ಪಡೆಯುವಲ್ಲಿ ಸಹಕರಿಸುವ ಪ್ರಮುಖ ವಿಭಾಗವಾಗಿದ್ದು ಈ ವಿಭಾಗದ ಅಡಿಯಲ್ಲಿ ವ್ಯಾಕರಣ ಭಾಷಾಜ್ಞಾನ ಹಾಗೂ ಪದಸಂಪತ್ತನ್ನು ಉತ್ತಮವಾಗಿ ಅಭ್ಯಾಸ ಮಾಡಿದರೆ ಹೆಚ್ಚು ಅಂಕಗಳನ್ನು ಪಡೆಯಬಹುದಾಗಿದೆ
ವ್ಯಾಕರಣ
ವ್ಯಾಕರಣವು ಭಾಷೆಯ ಅಡಿಪಾಯವಾಗಿದ್ದು ಸರಿಯಾದ ಪದ ಬಳಕೆ, ವಾಕ್ಯ ರಚನೆ, ಲಿಂಗ, ವಚನ, ಕಾಲ, ವಿಭಕ್ತಿ, ಅಲಂಕಾರ ಹಾಗೂ ಭಾಷೆ ನಿಯಮಗಳನ್ನು ತಿಳಿದುಕೊಳ್ಳುವುದು ವ್ಯಾಕರಣದ ಪ್ರಮುಖ ಉದ್ದೇಶವಾಗಿದ್ದು ಈ ಪರೀಕ್ಷೆಯಲ್ಲಿ ವ್ಯಾಕರಣಕ್ಕೆ ಸಂಬಂಧಿಸಿದ ಪ್ರಶ್ನೆಗಳು ಹೆಚ್ಚಿನ ಪ್ರಮಾಣದಲ್ಲಿ ಕೇಳಲಾಗುತ್ತದೆ ಆದ್ದರಿಂದ ಪ್ರತಿದಿನವೂ ಸ್ವಲ್ಪ ಸಮಯವನ್ನು ವ್ಯಾಕರಣ ಅಭ್ಯಾಸ ಮಾಡಲು ಮೀಸಲಿಡಿ
ಸಂಧಿ
ಎರಡು ಅಕ್ಷರಗಳು ಅಥವಾ ಎರಡು ಪದಗಳು ಒಂದಾಗುವಾಗ ಉಂಟಾಗುವ ರೂಪಾಂತರದ ಅಂಶವನ್ನು ಸಂಧಿ ಎಂದು ಕರೆಯಲಾಗುತ್ತದೆ ಸಂಧಿಯ ವಿಧಗಳು ಅವುಗಳ ನಿಯಮಗಳು ಹಾಗೂ ಉದಾಹರಣೆಗಳನ್ನು ತಿಳಿದುಕೊಂಡರೆ ಈ ಪರೀಕ್ಷೆಯಲ್ಲಿ ಉತ್ತಮವಾಗಿ ಯಶಸ್ಸನ್ನು ಪಡೆಯಬಹುದು ಸಂಧಿಯ ಪ್ರಶ್ನೆಗಳು ಸಾಮಾನ್ಯವಾಗಿ ಸರಳವಾಗಿರುತ್ತವೆ, ಆದುದರಿಂದ ಕಡೆಗಣಿಸಬೇಡಿ
ಸಮಾಸ
ಎರಡು ಅಥವಾ ಎರಡಕ್ಕಿಂತ ಹೆಚ್ಚಿನ ಪದಗಳನ್ನು ಸೇರಿಸಿ ಹೊಸ ಅರ್ಥವನ್ನು ನೀಡುವ ಪದವನ್ನು ಸಮಾಸ ಪದ ಎಂದು ಕರೆಯಲಾಗುತ್ತದೆ ದ್ವಂದ್ವ, ತತ್ಪುರುಷ, ಕರ್ಮಧಾರಯ ಸೇರಿದಂತೆ ಹಲವು ಸಮಾಸಗಳ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ
ವಿರುದ್ಧಾರ್ಥಕ ಪದಗಳು
ಒಂದು ನಿರ್ದಿಷ್ಟ ಪದಕ್ಕೆ ವಿರುದ್ಧಾರ್ಥವನ್ನು ನೀಡುವ ಪದವನ್ನು ವಿರುದ್ಧಾರ್ಥಕ ಪದ ಎಂದು ಕರೆಯಲಾಗುತ್ತದೆ ಈ ವಿಭಾಗದಲ್ಲಿ ಉತ್ತಮ ರೀತಿಯ ಪದ ಸಂಪತ್ತನ್ನು ಹೊಂದುವುದು ಅಗತ್ಯವಾಗಿರುವುದರಿಂದ ಪ್ರತಿದಿನವೂ ಸಹ ಹೊಸ ವಿರುದ್ಧಾರ್ಥಕ ಪದಗಳನ್ನು ಕಲಿಯಬೇಕಾಗುತ್ತದೆ ಎಲ್ಲಾ ಸಾಮಾನ್ಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿರುದ್ಧಾರ್ಥಕ ಪದಗಳಿಗೆ ಸೇರಿದ ಪ್ರಶ್ನೆ ಇದ್ದೇ ಇರುತ್ತವೆ
ಸಮಾನಾರ್ಥಕ ಪದಗಳು
ಒಂದು ನಿರ್ದಿಷ್ಟ ಪದಕ್ಕೆ ಒಂದೇ ಅರ್ಥವನ್ನು ನೀಡುವ ಹಲವು ಪದಗಳನ್ನು ಮತ್ತು ಅವುಗಳ ಗುಂಪನ್ನು ಸಮಾನಾರ್ಥಕ ಪದಗಳು ಎಂದು ಕರೆಯಲಾಗುತ್ತದೆ ಕನ್ನಡ ಭಾಷೆಯಲ್ಲಿ ಸಮಾನಾರ್ಥಕ ಪದಗಳ ಬಳಕೆ ಹೆಚ್ಚಾಗಿರುವುದರಿಂದ ಇವುಗಳ ಅಭ್ಯಾಸಕ್ಕೆ ಹೆಚ್ಚಿನ ಗಮನವನ್ನು ನೀಡಿ ಪ್ರತಿದಿನ 20 ರಿಂದ 25 ಸಮಾನಾರ್ಥಕ ಪದಗಳನ್ನು ಕಲಿಯುವುದನ್ನು ರೂಢಿಸಿಕೊಳ್ಳಿ
ಗಾದೆಗಳು
ಗಾದೆಗಳು ಜೀವನದ ಅನುಭವವನ್ನು ಸಂದರ್ಭದಲ್ಲಿ ತಕ್ಕಂತೆ ವ್ಯಕ್ತಪಡಿಸುವ ಮಾತುಗಳಾಗಿವೆ. ಪರೀಕ್ಷೆಗಳಲ್ಲಿ ಗಾದೆಯ ಬಳಕೆ, ಗಾದೆಯ ಅರ್ಥ ಹಾಗೂ ಗಾದೆಗಳನ್ನು ಪೂರ್ಣ ಮಾಡಲು ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಲಾಗುತ್ತದೆ ಆದ್ದರಿಂದ ಕನ್ನಡದ ಪ್ರಮುಖ ಗಾದೆಗಳನ್ನು ಒಂದು ಕಡೆ ಪಟ್ಟಿ ಮಾಡಿ ಅಧ್ಯಯನ ಮಾಡಿ
ನುಡಿಗಟ್ಟುಗಳು
ನುಡಿಗಟ್ಟುಗಳು ಭಾಷೆ ಸೌಂದರ್ಯವನ್ನು ಹೆಚ್ಚಿಸುವ ಪದಗುಚ್ಛಗಳಾಗಿದ್ದು ಇವುಗಳ ಅರ್ಥ ಸಾಮಾನ್ಯ ರೂಪಕ್ಕಿಂತ ಭಿನ್ನವಾಗಿರುತ್ತದೆ ಪರೀಕ್ಷೆಗಳಲ್ಲಿ ನುಡಿಗಟ್ಟಿನ ಸರಿಯಾದ ಬಳಕೆ ಹಾಗೂ ಅರ್ಥವನ್ನು ಕೇಳುವ ಸಾಧ್ಯತೆ ಹೆಚ್ಚಿರುತ್ತದೆ ಆದ್ದರಿಂದ ಪ್ರಮುಖ ನುಡಿಗಟ್ಟುಗಳನ್ನು ಅಭ್ಯಾಸ ಮಾಡಿ
ವಾಕ್ಯ ಶುದ್ಧೀಕರಣ
ಸರಿಯಾದ ವ್ಯಾಕರಣ ನಿಯಮಗಳನ್ನು ಅನುಸರಿಸುವುದರ ಮೂಲಕ ಶುದ್ಧ ವಾಕ್ಯದ ರಚನೆ ಮಾಡುವುದಾಗಿದೆ ತಪ್ಪು ಪದದ ಬಳಕೆ ತಪ್ಪಾಗಿದ ವಿಭಕ್ತಿ ಪ್ರತ್ಯಯ ಅಥವಾ ತಪ್ಪಾದ ಕಾಲವನ್ನು ಸರಿಪಡಿಸುವ ಬಗ್ಗೆ ವಿಚಾರಗಳನ್ನು ಅಭ್ಯಾಸ ಮಾಡಬೇಕು ಇದು ಪರೀಕ್ಷೆಯಲ್ಲಿ ಸುಲಭವಾಗಿ ಅಂಕಗಳಿಸಲು ಸಹಕರಿಸುತ್ತದೆ
ತಪ್ಪಾದ ವಾಕ್ಯಗಳ ತಿದ್ದುಪಡಿ
ನಿರ್ದಿಷ್ಟವಾಗಿ ನೀಡಲಾಗಿರುವ ವಾಕ್ಯದಲ್ಲಿ ತಪ್ಪಾಗಿ ನೀಡಿರುವ ವ್ಯಾಕರಣದ ಮೂಲಭೂತ ನಿಯಮಗಳನ್ನು ಗುರುತಿಸಿ ಸರಿಪಡಿಸುವ ಮೂಲಕ ಪ್ರಸಿದ್ಧ ವಾಕ್ಯವನ್ನು ಶುದ್ಧ ವಾಕ್ಯವಾಗಿ ಮಾರ್ಪಾಡಿಸಿ ವಾಕ್ಯ ರಚನೆ ಮಾಡಬೇಕಾಗುವ ಬಗ್ಗೆ ಪ್ರಶ್ನೆಗಳನ್ನು ಸಹ ಕೇಳಲಾಗುತ್ತದೆ ವಾಕ್ಯ ಶುದ್ದಿ ಬಗ್ಗೆ ತಿಳಿದುಕೊಳ್ಳುವುದರಿಂದ ಅಶುದ್ಧ ವಾಕ್ಯ ತಿದ್ದುಪಡಿಯನ್ನು ಸಹ ಸುಲಭವಾಗಿ ಗಮನದಲ್ಲಿಟ್ಟುಕೊಳ್ಳಬಹುದು
ಕನ್ನಡ ಸಾಹಿತ್ಯದ ಮೂಲಭೂತ ಮಾಹಿತಿಗಳು
ಕನ್ನಡ ಸಾಹಿತ್ಯದ ಪ್ರಮುಖ ಲೇಖಕರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಪ್ರಸಿದ್ಧ ಕೃತಿಗಳು, ಪ್ರಮುಖ ಕವಿಗಳು ಮತ್ತು ಸಾಹಿತ್ಯ ಚಳುವಳಿಗಳು ಮುಂತಾದ ಕನ್ನಡ ಸಾಹಿತ್ಯಕ್ಕೆ ಸಂಬಂಧಿಸಿದ ಮೂಲಭೂತ ಮಾಹಿತಿಯನ್ನು ತಿಳಿದುಕೊಳ್ಳಬೇಕು ಹಲವು ಪರೀಕ್ಷೆಗಳಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಪ್ರಶ್ನೆಗಳನ್ನು ಕೇಳಲಾಗಿದೆ.
ಕನ್ನಡ ವಿಷಯವನ್ನು ಉತ್ತಮವಾಗಿ ಹೇಗೆ ಓದಬಹುದು
ಕನ್ನಡ ವಿಷಯದಲ್ಲಿ ಕಡಿಮೆ ಅಧ್ಯಯನ ಮಾಡಿ ಉತ್ತಮ ಅಂಕಗಳನ್ನು ಪಡೆಯಲು ಹಲವು ಯೋಜನೆ ಕಾರ್ಯ ವಿಧಾನವನ್ನು ಅನುಸರಿಸಬೇಕಾಗುತ್ತದೆ ಪ್ರತಿದಿನವೂ 20 ಹೊಸ ಪದಗಳನ್ನು ಕಲಿಯುವುದು ವ್ಯಾಕರಣಕ್ಕೆ ಪ್ರತ್ಯೇಕ ಸಮಯ ಮೀಸಲಿಡುವುದು ಸಂಧಿ, ಸಮಾಸ ಹಾಗೂ ಪದಸಂಪತ್ತನ್ನು ಹೆಚ್ಚಿಸಿಕೊಳ್ಳಲು ನಿಯಮಿತವಾಗಿ ಅಭ್ಯಾಸ ಮಾಡಬೇಕು
ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳಲ್ಲಿ ಯಾವ ರೀತಿಯ ಕನ್ನಡ ಭಾಷಾ ವಿಷಯಗಳ ಪ್ರಶ್ನೆಗಳನ್ನು ಕೇಳಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಂಡು ಅಧ್ಯಯನ ಮಾಡಿದರೆ ಕನ್ನಡ ವಿಷಯದ ಮೇಲೆ ಉತ್ತಮ ಹಿಡಿತವನ್ನು ಸಾಧಿಸಿ Exams ನಲ್ಲಿ ಉತ್ತಮ ಅಂಕಗಳನ್ನು ಸಹ ಗಳಿಸಬಹುದು
ಇಂಗ್ಲಿಷ್ ಭಾಷೆ
ಇಂಗ್ಲಿಷ್ ಭಾಷೆಯು ಹಲವು ವಿದ್ಯಾರ್ಥಿಗಳಿಗೆ ಕಷ್ಟ ಎನಿಸಿದರು ಸರಿಯಾದ ವಿಧಾನ ಹಾಗೂ ಯೋಜಿತ ವೇಳಾಪಟ್ಟಿಯನ್ನು ರಚಿಸಿ ಅಭ್ಯಾಸ ಮಾಡುವುದರ ಮೂಲಕ ಉತ್ತಮ ಅಂಕಗಳನ್ನು ಪಡೆಯಬಹುದು ಗ್ರಾಮರ್ ಒಕ್ಯಾಬೋಲರಿ ಹಾಗೂ ಓದುವ ಕೌಶಲ್ಯದ ಮೇಲೆ ಹೆಚ್ಚು ಗಮನ ನೀಡಬೇಕಾಗುತ್ತದೆ ಇಂಗ್ಲಿಷ್ ಭಾಷೆಯು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಮುಖ ಸ್ಥಾನವನ್ನು ಹೊಂದಿರುವುದರಿಂದ ಈ ವಿಷಯವನ್ನು ಓದಲು ಹೆಚ್ಚು ಸಮಯ ನಿಗದಿಪಡಿಸಬೇಕು
Grammar (ವ್ಯಾಕರಣ)
ಗ್ರಾಮರ್ ಎಂದರೆ ಇಂಗ್ಲೀಷ್ ಭಾಷೆಯನ್ನು ಸರಿಯಾಗಿ ಓದಲು ಬರೆಯಲು ಮಾತನಾಡಲು ಸಹಾಯ ಮಾಡುವ ನಿಯಮಗಳ ಗುಂಪಾಗಿದೆ ಇದರಲ್ಲಿ ಪಾರ್ಟ್ಸ್ ಆಫ್ ಸ್ಪೀಚ್, ಸೆಂಟೆನ್ಸ್ ಸ್ಟ್ರಕ್ಚರ್, ವಾಯ್ಸ್, ನರೇಷನ್, ಆರ್ಟಿಕಲ್ಸ್, ಟೆನ್ಸಸ್ ಮುಂತಾದ ವಿಷಯಗಳನ್ನು ಚೆನ್ನಾಗಿ ಅಭ್ಯಾಸ ಮಾಡಬೇಕು. ಗ್ರಾಮರ್ ವಿಷಯದಲ್ಲಿ ಉತ್ತಮ ಅಭ್ಯಾಸ ನಡೆಸಿದರೆ Exams ನಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಬಹುದು
Vocabulary (ಪದಸಂಪತ್ತು)
ವೊಕ್ಯಾಬುಲರಿ ಎಂದರೆ ಇಂಗ್ಲೀಷ್ ಪದಗಳ ಜ್ಞಾನ ಎಂಬ ಅರ್ಥವನ್ನು ನೀಡುತ್ತದೆ ಹೊಸ ಪದಗಳ ಅರ್ಥ ಮತ್ತು ಅವುಗಳ ಬಳಕೆ ಹಾಗೂ ಅವುಗಳ ಸರಿಯಾದ ಉಚ್ಚಾರಣೆಯನ್ನು ತಿಳಿದುಕೊಳ್ಳುವುದು ವೊಕ್ಯಾಬುಲರಿಯ ಪ್ರಮುಖ ಅಂಶವಾಗಿದೆ ಪ್ರತಿದಿನವೂ ಕನಿಷ್ಠ 25 ರಿಂದ 30 ಹೊಸ ಪದಗಳನ್ನು ಕಲಿಯುವ ಅಭ್ಯಾಸ ಮಾಡಿಕೊಳ್ಳಿ ದಿನಪತ್ರಿಕೆಗಳು, ಮ್ಯಾಗಜಿನ್ ಗಳು, ಡಿಕ್ಷನರಿ ಗಳನ್ನು ಓದುವುದನ್ನು ಅಭ್ಯಾಸ ಮಾಡಿಕೊಳ್ಳಿ
Comprehension (ಗದ್ಯಭಾಗ ಅರ್ಥೈಸುವುದು)
ಈ ವಿಭಾಗದಲ್ಲಿ ಒಂದು ನಿರ್ದಿಷ್ಟ ಗದ್ಯಭಾಗವನ್ನು ನೀಡಿ ಅದರ ಆಧಾರದ ಮೇಲೆ ಪ್ರಶ್ನೆಗಳನ್ನು ಕೇಳಲಾಗುತ್ತದೆ ಸಂಪೂರ್ಣ ಗದ್ಯಭಾಗವನ್ನು ಗಮನವಿಟ್ಟು ಓದಿ ಅರ್ಥೈಸಿಕೊಂಡು ಕೇಳಲಾಗುವ ಪ್ರಶ್ನೆಗಳಿಗೆ ವೇಗವಾಗಿ ಹಾಗೂ ಮುಖ್ಯ ಅಂಶಗಳನ್ನು ಗುರುತಿಸಿ ಉತ್ತರ ನೀಡುವ ಅಭ್ಯಾಸ ಮಾಡಿಕೊಂಡರೆ ಇಲ್ಲಿ ಅಂಕಗಳನ್ನು ಸುಲಭವಾಗಿ ಪಡೆಯಬಹುದು
Synonyms (ಸಮಾನಾರ್ಥಕ ಪದಗಳು)
ಸಿನೋನಿಮ್ಸ್ ಎಂದರೆ ಕನ್ನಡ ಅರ್ಥದಲ್ಲಿ ಸಮಾನಾರ್ಥಕ ಪದಗಳು ಎಂದರ್ಥ. ಒಂದೇ ಅರ್ಥವನ್ನು ನೀಡುವ ಇಂಗ್ಲಿಷ್ ಪದಗಳನ್ನು ಸಿನೋನಿಮ್ಸ್ ಎಂದು ಕರೆಯಲಾಗುತ್ತದೆ ಪದ ಸಂಪತ್ತನ್ನು ಹೆಚ್ಚಿಸಿಕೊಂಡು ಈ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರವನ್ನು ನೀಡಬಹುದಾಗಿರುತ್ತದೆ
Antonyms (ವಿರುದ್ಧಾರ್ಥಕ ಪದಗಳು)
ಕನ್ನಡ ಭಾಷೆಯ ವಿರುದ್ಧಾರ್ಥಕ ಪದಕ್ಕೆ ಹೋಲುವ ಇದು, ಒಂದು ಪದಕ್ಕೆ ಇರಬಹುದಾದ ವಿರುದ್ಧ ಪದವನ್ನು ಸೂಚಿಸುವ ಪದಗಳಾಗಿವೆ. ಸರ್ಕಾರಿ ಪರೀಕ್ಷೆಗಳಲ್ಲಿ ಆಂಟನಿಮ್ಸ್ ಗೆ ಸಂಬಂಧಿಸಿದ ಪ್ರಶ್ನೆಗಳನ್ನು ಹೆಚ್ಚಾಗಿ ಕೇಳಲಾಗುತ್ತದೆ ಇಂಗ್ಲಿಷ್ ಭಾಷೆಯಲ್ಲಿನ ಸಾಮಾನ್ಯ ವಿರುದ್ಧಾರ್ಥಕ ಪದಗಳನ್ನು ಒಂದು ಕಡೆ ಪಟ್ಟಿ ಮಾಡಿ ಓದಿ ಅಭ್ಯಾಸ ಮಾಡುವುದರಿಂದ ಈ ಅಂಕಗಳನ್ನು ಸುಲಭವಾಗಿ ಪಡೆಯಬಹುದು
Error Detection (ತಪ್ಪುಗಳ ಗುರುತಿಸುವಿಕೆ)
ನಿರ್ದಿಷ್ಟ ವಿಭಾಗದಲ್ಲಿ ತಪ್ಪಾಗಿರುವ ವಾಕ್ಯಗಳನ್ನು ಗುರುತಿಸಬೇಕು ಅಂದರೆ ಗ್ರಾಮರ್ ನಿಯಮಗಳು, ಟೆನ್ಸ್ ಗಳು, ಆರ್ಟಿಕಲ್, ಪ್ರಿಪೊಸಿಶನ್ ಹಾಗೂ ಸೆಂಟೆನ್ಸ್ ಸ್ಟ್ರಕ್ಚರ್ ಬಗ್ಗೆ ಉತ್ತಮ ಅರಿವನ್ನು ಹೊಂದಿದ್ದರೆ ಈ ತಪ್ಪುಗಳನ್ನು ಸುಲಭವಾಗಿ ಗುರುತಿಸಿ ಉತ್ತರವನ್ನು ನೀಡಬಹುದು ಯಾವ ರೀತಿ ಪ್ರಶ್ನೆಗಳು ಬರಬಹುದು ಎಂಬುದನ್ನು ತಿಳಿಯಲು ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿ
Sentence Improvement (ವಾಕ್ಯಗಳ ತಿದ್ದುಪಡಿ)
ತಪ್ಪಾಗಿ ನೀಡಿರುವ ವಾಕ್ಯವನ್ನು ಸರಿಯಾದ ಗ್ರಾಮರ್ ನಿಯಮಗಳನ್ನು ಬಳಸಿ ತಿದ್ದುಪಡಿ ಮಾಡಿ ಸರಿಯಾದ ವಾಕ್ಯವಾಗಿ ಮಾರ್ಪಾಡಿಸುವುದನ್ನು ವಾಕ್ಯಗಳ ತಿದ್ದುಪಡಿ ಎಂದು ಕರೆಯಲಾಗುತ್ತದೆ ಗ್ರಾಮರ್ ನ ನಿಯಮಗಳು ಹಾಗೂ ವೊಕ್ಯಾಬುಲರಿ ಪದ ಸಂಪತ್ತು ಉತ್ತಮವಾಗಿದ್ದರೆ ಈ ಪ್ರಶ್ನೆಗಳಿಗೆ ಉತ್ತಮ ರೀತಿಯಲ್ಲಿ ಉತ್ತರ ನೀಡಬಹುದು
Fill in the Blanks (ಬಿಟ್ಟ ಸ್ಥಳ ತುಂಬುವುದು)
ನಿರ್ದಿಷ್ಟವಾಗಿ ನೀಡಿರುವ ವಾಕ್ಯದಲ್ಲಿ ಅಥವಾ ಗದ್ಯಭಾಗದಲ್ಲಿ ಖಾಲಿ ಇರುವ ಜಾಗಕ್ಕೆ ಸೂಕ್ತವಾದ ಪದವನ್ನು ಆಯ್ಕೆ ಮಾಡುವ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುತ್ತದೆ ಈ ಪ್ರಶ್ನೆಗಳಿಗೆ ಉತ್ತಮ ರೀತಿಯಲ್ಲಿ ಹಾಗೂ ವೇಗವಾಗಿ ಉತ್ತರ ನೀಡಬಹುದು
Articles (ಆರ್ಟಿಕಲ್)
ಒಂದು ವಾಕ್ಯದಲ್ಲಿ A, An, The ಎಂಬ ಆರ್ಟಿಕಲ್ ಗಳನ್ನು ಸರಿಯಾದ ರೀತಿ ಬಳಕೆ ಮಾಡುವುದು ಹೇಗೆ ಮತ್ತು ಯಾವ ಸಂದರ್ಭಗಳಲ್ಲಿ ಬಳಸಬೇಕು ಎಂಬುದರ ಬಗ್ಗೆ ಪ್ರಶ್ನೆಗಳು ಸಾಮಾನ್ಯವಾಗಿ ಬರುತ್ತವೆ ಇವುಗಳನ್ನು ಉದಾರಣೆಯೊಂದಿಗೆ ಕಲಿತರೆ ಚೆನ್ನಾಗಿ ಜ್ಞಾಪಕ ಇಟ್ಟುಕೊಳ್ಳಬಹುದು
Tenses (ಟೆನ್ಸಸ್)
ಇಂಗ್ಲಿಷ್ ಭಾಷೆಯ ಪ್ರಮುಖ ವಿಷಯ ಟೆನ್ಸ್ ಗಳು. ಪ್ರೆಸೆಂಟ್, ಫಾಸ್ಟ್ ಹಾಗೂ ಫ್ಯೂಚರ್ ಟೆನ್ಸ್ ಗಳನ್ನು ಒಳಗೊಂಡಿದೆ ವಾಕ್ಯಗಳ ರಚನೆಯ ಬಗ್ಗೆ ತಿಳುವಳಿಕೆ ಹೊಂದುವುದುಗಳ ಪ್ರಶ್ನೆಗಳಿಗೆ ಉತ್ತಮವಾಗಿ ಹಾಗೂ ಸುಲಭವಾಗಿ ಉತ್ತರ ನೀಡಬಹುದು
Prepositions (ಪ್ರಿಪೋಸಿಶನ್)
ಎರಡು ಪದಗಳ ನಡುವಿನ ಸಂಬಂಧವನ್ನು ಸೂಚಿಸುವ ಪದಗಳೇ In, On, From, By, ಮುಂತಾದ ಪ್ರಿಪೋಸಿಷನ್ ಗಳನ್ನು ಸರಿಯಾದ ರೀತಿಯಲ್ಲಿ ಹೇಗೆ ಬಳಸಬೇಕು ಎಂಬುದನ್ನು ತಿಳಿದುಕೊಳ್ಳುವುದರಿಂದ ಈ ಪ್ರಶ್ನೆಗಳಿಗೆ ಉತ್ತರವಾಗಿ ಸುಲಭವಾಗಿ
ಇಂಗ್ಲಿಷ್ ವಿಷಯವನ್ನು ಸುಲಭವಾಗಿ ಹೀಗೆ ಓದಬಹುದು
ಪ್ರತಿದಿನವೂ ಇಂಗ್ಲಿಷ್ ಭಾಷೆಯ ದಿನ ಪತ್ರಿಕೆಗಳನ್ನು ಓದುವುದು ಹೊಸ ರೀತಿಯ ವೊಕ್ಯಾಬುಲರಿಯನ್ನು ಅಭ್ಯಾಸ ಮಾಡುವುದು ಗ್ರಾಮರ್ ನ ನಿಯಮಗಳನ್ನು ಅಭ್ಯಾಸ ಮಾಡುವುದರ ಜೊತೆಯಲ್ಲಿ ಕನಿಷ್ಠ ಒಂದು ಪ್ಯಾಸೇಜನ್ನು ಓದಿ ಅದರ ಅರ್ಥವನ್ನು ಸ್ವಂತವಾಗಿ ಬರೆಯಲು ಪ್ರಯತ್ನಿಸುವುದರಿಂದ ಹಾಗೂ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳಲ್ಲಿ ಕೇಳಲಾಗಿರುವ ಇಂಗ್ಲಿಷ್ ಭಾಷಾ ಪ್ರಶ್ನೆಗಳನ್ನು ಪರಿಶೀಲಿಸುವುದರಿಂದ ಹೆಚ್ಚಿನ ಅಂಕಗಳನ್ನು ಗಳಿಸಬಹುದು
ಸಾಮಾನ್ಯ ಜ್ಞಾನ
ಸಾಮಾನ್ಯ ಜ್ಞಾನದ ವಿಭಾಗವು ಬಹುತೇಕ ಎಲ್ಲಾ Competetive Exams ಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಲು ಸಹಕರಿಸುವ ಪ್ರಮುಖ ವಿಷಯವಾಗಿದ್ದು ಈ ವಿಭಾಗದಲ್ಲಿ ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ವಿಚಾರಗಳಿಗೆ ಸಂಬಂಧಿಸಿದಂತೆ ವಿವಿಧ ವಿಷಯಗಳಿಂದ ಪ್ರಶ್ನೆಗಳನ್ನು ಕೇಳಲಾಗುತ್ತದೆ ಆದುದರಿಂದ ಸಾಮಾನ್ಯ ಜ್ಞಾನಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕು
ಕರ್ನಾಟಕದ ಇತಿಹಾಸ
ಕರ್ನಾಟಕ ಇತಿಹಾಸದ ಅಡಿಯಲ್ಲಿ ಪ್ರಮುಖ ರಾಜವಂಶಗಳು ಸ್ವಾತಂತ್ರ ಹೋರಾಟಗಳು ಐತಿಹಾಸಿಕ ಸ್ಥಳಗಳು ಸಾಮಾಜಿಕ ಚಳುವಳಿಗಳು ಪ್ರಸಿದ್ಧ ಅರಸರು ಹೊಯ್ಸಳರು ವಿಜಯನಗರ ಸಾಮ್ರಾಜ್ಯ ಮೈಸೂರು ಸಂಸ್ಥಾನ ಹಾಗೂ ಕರ್ನಾಟಕ ಏಕೀಕರಣ ಚಳುವಳಿಯ ಬಗ್ಗೆ ಪ್ರಶ್ನೆಗಳನ್ನು ಹೆಚ್ಚಾಗಿ ಕೇಳಲಾಗುತ್ತದೆ
ಕರ್ನಾಟಕ ಭೂಗೋಳ
ಕರ್ನಾಟಕದ ಜಿಲ್ಲೆಗಳು ಅವುಗಳಿಗೆ ಸಂಬಂಧಿಸಿದ ವಿಶೇಷತೆ ನದಿಗಳು ಅರಣ್ಯಗಳು, ಪರ್ವತಗಳು ಮತ್ತು ಅವುಗಳಿಗೆ ಸಂಬಂಧಿಸಿದ ಮಾಹಿತಿ ಹವಾಮಾನ ವಿಚಾರಗಳು ಕೃಷಿ ಯೋಜನೆಗಳು ಜಲಾಶಯಗಳು ಹಾಗೂ ಖನಿಜ ಸಂಪತ್ತಿನ ಬಗ್ಗೆ ಹೆಚ್ಚಿನ ವಿವರಗಳಲ್ಲಿ ಅಧ್ಯಯನ ಮಾಡಬೇಕಾಗುತ್ತದೆ ನಕ್ಷೆಗಳನ್ನು ತಯಾರಿಸಿ ಓದುವುದರ ಮೂಲಕ ಉತ್ತರಗಳನ್ನು ಸುಲಭವಾಗಿ ನೆನಪಿನಲ್ಲಿ ಇಡಬಹುದು
ಕರ್ನಾಟಕದ ಸಂಸ್ಕೃತಿ
ಕರ್ನಾಟಕ ರಾಜ್ಯದ ಮೂಲದಲ್ಲಿ ಬರುವಂತಹ ಜನಪದ ಕಲೆಗಳು ಪ್ರಸಿದ್ಧ ದೇವಾಲಯಗಳು ಕಲೆಗಳು ಹಬ್ಬಗಳು ಯಕ್ಷಗಾನ ಡೊಳ್ಳುಕುಣಿತ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಂಪರೆಯ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ ಈ ವಿಷಯದಲ್ಲಿ ನೇರ ಪ್ರಶ್ನೆಗಳು ಉದ್ಭವವಾಗುತ್ತವೆ
ಭಾರತೀಯ ಸಂವಿಧಾನ
ಸಂವಿಧಾನವು ಭಾರತದ ಪ್ರಮುಖ ಗ್ರಂಥಗಳಲ್ಲಿ ಒಂದಾಗಿರುವುದರಿಂದ ಸಂವಿಧಾನದ ಅಡಿಯಲ್ಲಿಯೇ ದೇಶವು ನಡೆಯುತ್ತಿದೆ ಸಂವಿಧಾನದ ರಚನೆ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು ರಾಜ್ಯ ನಿರ್ದೇಶಕ ತತ್ವಗಳು ರಾಷ್ಟ್ರಪತಿ ಪ್ರಧಾನ ಮಂತ್ರಿ ಲೋಕಸಭೆ ರಾಜ್ಯಸಭೆ ಸಂಸತ್ತು ಹಾಗೂ ಪ್ರಮುಖ ಸಂವಿಧಾನಿಕ ತಿದ್ದುಪಡಿಗಳ ಬಗ್ಗೆ ಸಮಗ್ರ ರೀತಿಯಲ್ಲಿ ಅಧ್ಯಯನ ನಡೆಸಬೇಕಾಗುತ್ತದೆ
ಭಾರತದ ಇತಿಹಾಸ
ಪ್ರಮುಖ ನಾಗರಿಕತೆಗಳು ಸಿಂಧೂ ನಾಗರಿಕತೆ ಹರಪ್ಪ ನಾಗರಿಕತೆ, ಮೆಹೆಂಜೋದಾರೋ ನಾಗರಿಕತೆ ಹಾಗೂ ಪ್ರಮುಖ ರಾಜವಂಶಗಳಾದ ಮೌರ್ಯರು ಮೊಘಲರು ಗುಪ್ತರು ಬ್ರಿಟಿಷರ ಆಡಳಿತ ಸ್ವಾತಂತ್ರ್ಯ ಸಂಗ್ರಾಮ ಹಾಗೂ ಸ್ವಾತಂತ್ರ್ಯ ಹೋರಾಟಗಳು ಹಾಗೂ ಪ್ರಮುಖ ರಾಷ್ಟ್ರೀಯ ನಾಯಕರಿಗೆ ಸಂಬಂಧಿಸಿದ ಮಾಹಿತಿಗಳಲ್ಲಿ ವಿಷಯಗಳನ್ನು ತಿಳಿದುಕೊಳ್ಳಬೇಕಾಗುತ್ತದೆ
ಪ್ರಮುಖ ವರ್ಷಗಳು ಹಾಗೂ ಸಂಬಂಧಿಸಿದ ಘಟನೆಗಳನ್ನು ಕಿರು ಟಿಪ್ಪಣಿಗಳ ರೀತಿ ಬರೆದು ಇಟ್ಟುಕೊಳ್ಳಿ
ವಿಜ್ಞಾನ
ದೈನಂದಿನ ಚಟುವಟಿಕೆಗಳಲ್ಲಿ ಸಂಬಂಧಿಸಿದ ಜೀವಶಾಸ್ತ್ರ ಪರಿಸರ ಆರೋಗ್ಯ ರಸಾಯನಶಾಸ್ತ್ರ ಹಾಗೂ ತಂತ್ರಜ್ಞಾನ ವಿಷಯಗಳನ್ನು ಕೂಲಂಕುಶವಾಗಿ ಓದಬೇಕಾಗುತ್ತದೆ ವಿಜ್ಞಾನವನ್ನು ಕೇವಲ ಸೂತ್ರಗಳಾಗಿ ಅಲ್ಲದೆ ಅದರ ಪ್ರಾಯೋಗಿಕ ಬಳಕೆಯನ್ನು ಅರಿತುಕೊಂಡು ಅರ್ಥೈಸಿಕೊಂಡು ಓದುವುದರ ಮೂಲಕ ಉತ್ತಮ ರೀತಿಯಲ್ಲಿ ನೆನಪಿಡಬಹುದು
ಪ್ರಚಲಿತ ಘಟನೆಗಳು
ಕಳೆದ ಒಂದು ಅಥವಾ ಎರಡು ವರ್ಷಗಳ ರಾಜ್ಯಕ್ಕೆ ಸಂಬಂಧಿಸಿದ ರಾಷ್ಟ್ರಕ್ಕೆ ಸಂಬಂಧಿಸಿದ ಹಾಗೂ ಅಂತರಾಷ್ಟ್ರೀಯ ಘಟನೆಗಳಿಗೆ ಸಂಬಂಧಿಸಿದ ಪ್ರಮುಖ ಘಟನೆಗಳು ಪ್ರಶಸ್ತಿಗಳು ಕ್ರೀಡಾ ಮಾಹಿತಿ ಸರ್ಕಾರದ ಯೋಜನೆಗಳು ನೇಮಕಾತಿಗಳು ಹಾಗೂ ಪ್ರಮುಖ ಸುದ್ದಿಗಳನ್ನು ಪ್ರತಿದಿನ ಓದಬೇಕಾಗುತ್ತದೆ ದಿನಪತ್ರಿಕೆ ಹಾಗೂ ಮಾಸಿಕವಾಗಿ ಬಿಡುಗಡೆಗೊಳಿಸುವ ಮ್ಯಾಗಜಿನ್ ಗಳನ್ನು ಓದುವುದರಿಂದ ಪ್ರಚಲಿತ ಘಟನೆಗಳನ್ನು ಉತ್ತಮ ರೀತಿಯಲ್ಲಿ ತಿಳಿದುಕೊಳ್ಳಬಹುದು
ಕಂಪ್ಯೂಟರ್ ಜ್ಞಾನ
ಇಂದಿನ ಡಿಜಿಟಲ್ ಯುಗ ಕಂಪ್ಯೂಟರ್ ಯುಗ ಎಂದೇ ತಿಳಿದಿರುವುದರಿಂದ ಈ ಯುಗದಲ್ಲಿ ಪ್ರತಿಯೊಬ್ಬರೂ ಸಹ ಕಂಪ್ಯೂಟರ್ ಜ್ಞಾನ ಹೊಂದುವುದು ಅಗತ್ಯ ಹಾಗೂ ಅವಶ್ಯಕವಾಗಿದೆ ಮೂಲಭೂತ ವಿಷಯಗಳ ಬಗ್ಗೆ ತಿಳುವಳಿಕೆಯನ್ನು ಹೊಂದಿದ್ದರೆ ಈ ವಿಭಾಗದಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಸಹಾಯವಾಗುತ್ತದೆ
ಎಂ. ಎಸ್ ವರ್ಡ್ (MS Word)
ಎಂ ಎಸ್ ವರ್ಡ್ ನಲ್ಲಿ ಡಾಕ್ಯುಮೆಂಟ್ ಗಳ ರಚನೆ, ಫಾರ್ಮ್ಯಾಟ್ ಮಾಡುವುದು, ಟೇಬಲ್ ಗಳನ್ನು ಹಾಕುವುದು, ಬದಲಿಸುವುದು, ಹೆಡರ್ ಮತ್ತು ಫೂಟರ್ ಗಳನ್ನು ಬಳಸುವುದು ಹಾಗೂ ಪ್ರಿಂಟಿಂಗ್ ವಿಧಾನಗಳನ್ನು ತಿಳಿದುಕೊಳ್ಳಬೇಕು ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಸಾಮಾನ್ಯವಾಗಿ ಬಳಸುವ ತಂತ್ರಾಂಶ ಆಗಿರುವುದರಿಂದ ಇದರ ಮೂಲಭೂತ ಜ್ಞಾನ ಹೊಂದುವುದು ಅತ್ಯವಶ್ಯಕವಾಗಿದೆ
ಎಂ. ಎಸ್ ಎಕ್ಸೆಲ್ ಸ್ಪ್ರೆಡ್ ಶೀಟ್ (MS Excel Spreadsheet)
ಎಂ ಎಸ್ ಎಕ್ಸೆಲ್ ನಲ್ಲಿ ಫಾರ್ಮುಲಾಗಳು, ಸೂತ್ರಗಳ ಮೇಲೆ ಕಾರ್ಯಾಚರಣೆ, ಚಾರ್ಟುಗಳು, ರೆಫರೆನ್ಸ್ ಗಳು ಹಾಗೂ ಮಾಹಿತಿಯನ್ನು ನಿರ್ವಹಿಸುವ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ ಕೂಡುವುದು, ಕಳೆಯುವುದು, ಗುಣಾಕಾರ, ಭಾಗಾಕಾರ, ಸುಮಾರು ಅನುಪಾತಗಳಿಗೆ ಸಂಬಂಧಿಸಿದ ಮೂಲಭೂತ ಸೂತ್ರಗಳನ್ನು ತಿಳಿದುಕೊಳ್ಳಬೇಕು
ಎಂ. ಎಸ್ ಪವರ್ ಪಾಯಿಂಟ್ (MS Power Point)
ಪವರ್ ಪಾಯಿಂಟ್ ತಂತ್ರಾಂಶದ ಮೂಲಕ ಪ್ರೆಸೆಂಟೇಶನ್ ಗಳನ್ನು ತಯಾರಿಸುವುದು, ಸ್ಲೈಡ್ ಗಳನ್ನು ರಚಿಸುವುದು, ಅನಿಮೇಷನ್, ಡಿಸೈನ್ ಹಾಗೂ ಟ್ರಾನ್ಸಿಷನ್ ಗಳನ್ನು ರಚಿಸಬೇಕಾಗುತ್ತದೆ. ಇಲಾಖೆ ಹಾಗೂ ಇಲಾಖೆಗೆ ಸಂಬಂಧಿಸಿದ ಪ್ರೆಸೆಂಟೇಷನ್ ಗಳನ್ನು ರಚಿಸುವಲ್ಲಿ ಬೇಕಾಗುವುದರಿಂದ ಇವುಗಳ ಬಗ್ಗೆ ಮೂಲಭೂತ ಜ್ಞಾನ ಹೊಂದಿರಬೇಕು
ಪವರ್ ಪಾಯಿಂಟ್ ಹಾಗೂ ಎಂ ಎಸ್ ಆಫೀಸ್ ಅನ್ನು ಕಲಿಯುವುದರಿಂದ ಸರ್ಕಾರಿ ವಲಯದಲ್ಲಿ ಕೆಲಸ ಪಡೆಯುವುದರ ಜೊತೆಯಲ್ಲಿ ಖಾಸಗಿ ವಲಯಕ್ಕೂ ಸಹ ಹೆಚ್ಚು ಉಪಕಾರಿಯಾಗಿದೆ
ಇಂಟರ್ನೆಟ್ ಮತ್ತು ಇ-ಮೇಲಿಂಗ್ (Internet And E-Mailing)
ಇಂಟರ್ನೆಟ್ ಬಳಸಿ ನಮಗೆ ಬೇಕಾದ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ಹುಡುಕುವುದು, ಸರ್ಚ್ ಇಂಜಿನ್ ಗಳನ್ನು ಬಳಸುವುದು, ಒಂದು ಕಚೇರಿಯಿಂದ ಇನ್ನೊಂದು ಕಚೇರಿಗೆ ಡಿಜಿಟಲ್ ರೂಪದಲ್ಲಿ ಇ-ಮೇಲ್ ಕಳುಹಿಸುವುದು ಅವುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಅಟ್ಯಾಚ್ ಮಾಡುವುದು ಮತ್ತು ಸೈಬರ್ ಸುರಕ್ಷತೆ ಕುರಿತಂತೆ ಮೂಲಭೂತ ಅರಿವು ಪಡೆದುಕೊಳ್ಳುವುದು ಕಡ್ಡಾಯವಾಗಿದೆ
ಹಾರ್ಡ್ ವೇರ್ ಗಳು (Hardware)
ಸಿಪಿಯು, RAM, ROM, ಮದರ್ ಬೋರ್ಡ್, ಸ್ಟೋರೇಜ್ ಘಟಕಗಳು, ಇನ್ಪುಟ್ ಡಿವೈಸ್ ಮತ್ತು ಔಟ್ ಪುಟ್ ಡಿವೈಸ್ ಗಳ ಬಗ್ಗೆ ಮತ್ತು ಅವುಗಳ ಕಾರ್ಯ ವಿಧಾನದ ಬಗ್ಗೆ ತಿಳಿದುಕೊಳ್ಳಬೇಕು ಹಾರ್ಡ್ವೇರ್ ಬಗ್ಗೆ ಮೂಲಭೂತ ಜ್ಞಾನ ಇದ್ದರೆ ಸರಳ ಪ್ರಶ್ನೆಗಳಿಗೆ ಉತ್ತಮ ರೀತಿಯಲ್ಲಿ ಉತ್ತರಿಸಬಹುದು.
ಸಹಕಾರಿ ಸಂಘಗಳ ವಿಷಯಗಳು
ಈ ಸ್ಪರ್ಧಾತ್ಮಕ ಪರೀಕ್ಷೆಯು ಸಹಕಾರಿ ಸಂಘದ ನೇಮಕಾತಿ Exams ಆಗಿರುವುದರಿಂದ ಸಹಕಾರಿ ಸಂಘಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ ಆದುದರಿಂದ ಸಂಬಂಧಿಸಿದ ಸಹಕಾರ ಸಂಘದ ಬಗ್ಗೆ ವಿಷಯವನ್ನು ತಿಳಿದುಕೊಳ್ಳುವುದು ಪ್ರಮುಖವಾಗಿದೆ
ಸಹಕಾರ ಸಂಘದ ಇತಿಹಾಸ
ಭಾರತದಲ್ಲಿ ಹಾಗೂ ಕರ್ನಾಟಕ ರಾಜ್ಯದಲ್ಲಿ ಸಹಕಾರ ಸಂಘಗಳ ಆರಂಭ, ಅವುಗಳ ಬೆಳವಣಿಗೆ, ಅವುಗಳ ಉದ್ದೇಶ ಹಾಗೂ ಕಾರ್ಯ ರಚನೆಗಳ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ ಸಹಕಾರ ತತ್ವಗಳು ಗ್ರಾಮೀಣ ಅಭಿವೃದ್ಧಿಯಲ್ಲಿ ಉತ್ತಮ ಪಾತ್ರ ವಹಿಸುವುದರಿಂದ ಸಹಕಾರ ಸಂಘಗಳ ಪಾತ್ರಗಳನ್ನು ಅರ್ಥ ಮಾಡಿಕೊಳ್ಳಬೇಕು.
ಸಹಕಾರಿ ಸಂಘಗಳ ರಚನೆ
ಸಹಕಾರಿ ಸಂಘಗಳ ಸದಸ್ಯತ್ವ, ವಿವರಗಳು, ಆಡಳಿತ ಮಂಡಳಿಯ ಬಗ್ಗೆ ಜ್ಞಾನ, ಅಧ್ಯಕ್ಷರು, ಕಾರ್ಯದರ್ಶಿಗಳು, ಆಯೋಜನೆಗೊಳ್ಳುವ ಸಭೆಗಳು ಹಾಗೂ ಸಂಘಗಳ ಕಾರ್ಯವಿಧಾನದ ಬಗ್ಗೆ ತಿಳಿದುಕೊಳ್ಳಬೇಕು
ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ
ಸಹಕಾರ ಸಂಘಗಳ ಕಾಯ್ದೆಯಲ್ಲಿ ಸಹಕಾರ ಸಂಘಗಳ ನೋಂದಣಿ ಪ್ರಕ್ರಿಯೆ, ಸದಸ್ಯರ ಹಕ್ಕುಗಳು, ಲೆಕ್ಕಪತ್ರ ನಿರ್ವಹಣೆ ಮತ್ತು ಅವರ ಕರ್ತವ್ಯಗಳು ಆಡಳಿತ ಹಾಗೂ ನಿಯಂತ್ರಣಕ್ಕೆ ಸಂಬಂಧಿಸಿದ ಪ್ರಮುಖ ಪ್ರಶ್ನೆಗಳನ್ನು ಇಲ್ಲಿ ಕೇಳಲಾಗುತ್ತದೆ
ಹಾಲು ಉತ್ಪಾದಕರ ಸಹಕಾರ ಸಂಘಗಳು
ಹಾಲಿನ ಉತ್ಪಾದನೆ, ಸಂಗ್ರಹಣೆ, ಗುಣಮಟ್ಟ ಪರೀಕ್ಷೆ, ಶೇಖರಣೆ, ಶಿತಲೀಕರಣ, ವಿತರಣೆ ಮತ್ತು ಸಂಸ್ಕರಣೆ ಹಾಗೂ ಹಾಲು ಒಕ್ಕೂಟಗಳ ಆಡಳಿತ ವ್ಯವಸ್ಥೆಯ ಬಗ್ಗೆ ಸಮಗ್ರ ಮಾಹಿತಿಯನ್ನು ತಿಳಿದುಕೊಳ್ಳುವ ಮೂಲಕ ಈ ವಿಭಾಗದಲ್ಲಿ ಉತ್ತಮ ರೀತಿಯ ಪ್ರಶ್ನೆಗಳಿಗೆ ವೇಗವಾಗಿ ಉತ್ತರವನ್ನು ನೀಡಬಹುದು
ಅಧ್ಯಯನ ಮಾಡಲು ಉತ್ತಮವಾದ ವಿಧಾನದ ಸಲಹೆ
ಯಾವುದೇ Competetive Exams ನಲ್ಲಿ ಯಶಸ್ಸನ್ನು ಸಾಧಿಸಲು ಹೆಚ್ಚು ಕಾಲ ಓದುವುದಕ್ಕಿಂತ ಸರಿಯಾದ ರೀತಿಯಲ್ಲಿ ಅಧ್ಯಯನದ ಯೋಜನೆಯನ್ನು ರೂಪಿಸಿ ಅದನ್ನು ಕಾರ್ಯರೂಪಕ್ಕೆ ತಂದು ಪರಿಣಾಮಕಾರಿಯಾಗಿ ಅನುಸರಿಸುವ ಮೂಲಕ ಯಶಸ್ಸನ್ನು ಪಡೆಯುವುದು ಮುಖ್ಯವಾಗಿದೆ.
ಉತ್ತಮ ಯೋಜನೆ ಯೊಂದಿಗೆ ಓದಿದರೆ ಕಡಿಮೆ ಸಮಯದಲ್ಲಿಯೇ ಹೆಚ್ಚಿನ ವಿಷಯಗಳನ್ನು ಓದಿ ಅರ್ಥ ಮಾಡಿಕೊಂಡು ದೀರ್ಘಕಾಲ ನೆನಪಿನಲ್ಲಿ ಉಳಿಸಿಕೊಳ್ಳುವುದರ ಮೂಲಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಉದ್ಯೋಗವನ್ನು ಪಡೆಯಬಹುದಾಗಿರುತ್ತದೆ ಯಶಸ್ಸನ್ನು ಗಳಿಸಲು ಅಧ್ಯಯನ ಮಾಡಬಹುದಾದ ಉತ್ತಮ ವಿಧಾನದ ಬಗ್ಗೆ ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ.
ಪ್ರತಿದಿನ ಅಧ್ಯಯನ ಮಾಡುವುದು
ಯಾವುದೇ ಪರೀಕ್ಷೆಯಲ್ಲಾಗಲೀ ಅಥವಾ ಕೆಲಸದಲ್ಲಾಗಲೀ ನಿರಂತರವಾಗಿರುವುದು ಅತ್ಯಂತ ಪ್ರಮುಖವಾಗಿದೆ ಪ್ರತಿದಿನ ಒಂದೇ ಸಮಯದಲ್ಲಿ ಓದುವ ಅಭ್ಯಾಸ ಬೆಳೆಸಿಕೊಳ್ಳಿ ಏಕೆಂದರೆ ಆ ಸಮಯದಲ್ಲಿ ನಮ್ಮ ಮೆದುಳು ಹೆಚ್ಚು ಏಕಾಗ್ರತೆಯಿಂದ ಕೆಲಸ ಮಾಡುತ್ತಿರುತ್ತದೆ ಬೆಳಗ್ಗಿನ ಸಮಯದಲ್ಲಿ ಕಠಿಣ ವಿಷಯಗಳನ್ನು ಅಧ್ಯಯನ ಮಾಡಿ ಸಂಜೆ ರಿವಿಷನ್ ಮಾಡುವ ಸಂದರ್ಭದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಹೆಚ್ಚಾಗಿ ಅಭ್ಯಾಸ ಮಾಡುವುದರಿಂದ ಉತ್ತಮ ರೀತಿಯಲ್ಲಿ ಫಲಿತಾಂಶವನ್ನು ಪಡೆಯಬಹುದು
ಪ್ರತ್ಯೇಕ ನೋಟ್ಸ್ ಗಳ ಕಾಪಾಡಿಕೊಳ್ಳುವಿಕೆ
ಕನ್ನಡ ಭಾಷೆ, ಇಂಗ್ಲಿಷ್ ಭಾಷೆ, ಸಾಮಾನ್ಯ ಜ್ಞಾನ, ಕಂಪ್ಯೂಟರ್ ಜ್ಞಾನ ಹಾಗೂ ಸಹಕಾರ ಸಂಘಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಅಧ್ಯಯನ ಮಾಡಲು ಪ್ರತ್ಯೇಕ ನೋಟ್ ಬುಕ್ ಇಡುವುದು ಉತ್ತಮ ಸಲಹೆಯಾಗಿದೆ ಸಂಪೂರ್ಣ ಪುಸ್ತಕವನ್ನು ಓದುವ ಬದಲು ದುರ್ಬಲ ವಿಷಯಗಳಿಗೆ ಹೆಚ್ಚಿನ ಅವಕಾಶ ಬೇಕು
ಪ್ರತ್ಯೇಕ ಬುಕ್ ಗಳನ್ನು ಓದುವುದು ಸುಲಭ ಹಾಗೂ ಉತ್ತಮ ತಂತ್ರವಾಗಿದೆ ಇದರಿಂದ ಪ್ರಮುಖ ಮಾಹಿತಿಯನ್ನು ವೇಗವಾಗಿ ಓದಿ ನೆನಪಿನಲ್ಲಿಟ್ಟುಕೊಳ್ಳಬಹುದು
ಪ್ರಮುಖ ಅಂಶಗಳನ್ನು ಹೈಲೈಟ್ ಮಾಡಿ
ನೀವು ಓದುವ ಸಂದರ್ಭದಲ್ಲಿ ಪ್ರಮುಖ ದಿನಾಂಕಗಳು, ಸೂತ್ರಗಳು, ಕಾನೂನು ಮತ್ತು ಅವುಗಳ ತಿದ್ದುಪಡಿಗಳು, ವ್ಯಾಖ್ಯಾನಗಳನ್ನು ಹೈಲೈಟ್ ಮಾಡುವುದರ ಮೂಲಕ ಅವುಗಳು ವೇಗವಾಗಿ ಕಣ್ಣಿಗೆ ಕಾಣಿ ಸಿಗುತ್ತವೆ ವಿವಿಧ ಬಣ್ಣದ ಪೆನ್ ಗಳನ್ನು ಬಳಸಿ ಅಥವಾ ಹೈಲೆಟರ್ ಗಳನ್ನು ಬಳಸುವುದರ ಮೂಲಕ ಇವುಗಳನ್ನು ಹೈಲೈಟ್ ಮಾಡಬಹುದಾಗಿರುತ್ತದೆ
ಪರೀಕ್ಷೆಯ ಮುನ್ನ ಈ ಹೈಲೈಟ್ ಮಾಡಿರುವ ಮಾಹಿತಿಯನ್ನು ಓದಿದರು ಹೆಚ್ಚು ಜ್ಞಾನವನ್ನು ಪಡೆದುಕೊಳ್ಳಬಹುದು
ವಾರಕ್ಕೊಮ್ಮೆ ಕಡ್ಡಾಯವಾಗಿ ಮಾಕ್ ಟೆಸ್ಟ್ ತೆಗೆದುಕೊಳ್ಳಿ
ಮಾಕ್ ಟೆಸ್ಟ್ ಗಳನ್ನು ಬರೆಯುವುದರಿಂದ ನೀವು ಯಾವ ಮಟ್ಟದಲ್ಲಿ ಸಿದ್ಧತೆಯನ್ನು ಹೊಂದಿದ್ದೀರಾ ಎಂಬುದನ್ನು ನೀವೇ ಸ್ವತಃ ಅಳೆದುಕೊಳ್ಳಬಹುದಾಗಿರುತ್ತದೆ ಅಭ್ಯಾಸವನ್ನು ಮಾಡಿಕೊಳ್ಳಬೇಕಾದರೆ ಮಾಕ್ ಟೆಸ್ಟ್ ಗಳನ್ನು ಬರೆಯಬೇಕು ಈ ಮಾಕ್ ಟೆಸ್ಟ್ ಗಳನ್ನು ಬರೆಯುವುದರಿಂದ ವೇಗ ಮತ್ತು ಆತ್ಮವಿಶ್ವಾಸ ಎರಡು ಹೆಚ್ಚಾಗುತ್ತವೆ
ಇವುಗಳನ್ನು ಬರೆಯುವುದರಿಂದ ನಮ್ಮನ್ನು ನಾವು ವಿಶ್ಲೇಷಿಸಿಕೊಂಡು ಯಾವ ವಿಷಯದಲ್ಲಿ ಹೆಚ್ಚು ಅಭ್ಯಾಸ ಮಾಡಬೇಕು ಎಂಬುದು ತಿಳಿಯುತ್ತದೆ
ಪ್ರತಿದಿನ ರಿವಿಶನ್ ಮಾಡಬೇಕು
ಹೊಸ ವಿಷಯಗಳನ್ನು ಕಲಿಯುವುದಕ್ಕಿಂತ ಓದಿದ ವಿಷಯಗಳನ್ನು ಹೆಚ್ಚು ಮರು ಅಧ್ಯಯನ ಮಾಡುವುದು ಹಾಗೂ ರಿವಿಷನ್ ಮಾಡುವುದರಿಂದ ವಾರ ಅಂತ್ಯದಲ್ಲಿ ರಿವಿಶನ್ ಗೆ ಆಗುವ ತೊಂದರೆಯನ್ನು ಕಡಿಮೆ ಮಾಡಬಹುದು ಪ್ರತಿದಿನ ರಿವಿಶನ್ ಮಾಡುವುದರಿಂದ ದೈನಂದಿನ ಓದಿರುವ ವಿಚಾರಗಳನ್ನು ಹೆಚ್ಚು ಕಾಲ ಜ್ಞಾಪಕ ಇಟ್ಟುಕೊಳ್ಳಬಹುದು
ಮೊಬೈಲ್ ಬಳಕೆಯನ್ನು ಆದಷ್ಟು ನಿಯಂತ್ರಿಸಿ
ಅಧ್ಯಯನದ ಸಮಯದಲ್ಲಿ ಮೊಬೈಲ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡುವುದರಿಂದ ಸಾಮಾಜಿಕ ಜಾಲತಾಣಗಳ ಮೂಲಕ ಬೇರೆ ಕಡೆ ಹೋಗುವ ಏಕಾಗ್ರತೆಯನ್ನು ಕಡಿಮೆ ಮಾಡಿಕೊಳ್ಳಬಹುದು. ಓದುವ ಸಮಯದಲ್ಲಿ ಮೊಬೈಲನ್ನು ದೂರ ಇಡುವುದು ಅಥವಾ ಬೇರೆ ಸ್ಥಳಗಳಲ್ಲಿ ಇಡುವುದನ್ನು ರೂಢಿಸಿಕೊಳ್ಳಿ
ಆರೋಗ್ಯದ ಕಡೆ ಗಮನವನ್ನು ನೀಡಿ
ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳದೆ ಪರೀಕ್ಷೆಗೆ ಉತ್ತಮ ರೀತಿಯಲ್ಲಿ ತಯಾರಿನ ನಡೆಸಲು ಸಾಧ್ಯವಾಗುವುದಿಲ್ಲ ಸಾಕಷ್ಟು ಪ್ರಮಾಣದಲ್ಲಿ ನಿದ್ದೆ, ಆಹಾರ ಹಾಗೂ ಪ್ರತಿದಿನವೂ ನಿಗದಿತ ಪ್ರಮಾಣದಲ್ಲಿ ವ್ಯಾಯಾಮ ಮಾಡುವುದರಿಂದ ಏಕಾಗ್ರತೆ ಹೆಚ್ಚುತ್ತದೆ ಇದರಿಂದ ಸಮಯದ ನಿರ್ವಹಣೆ ಮತ್ತು ಓದಲು ಏಕಾಗ್ರತೆ ಹೆಚ್ಚಾಗುತ್ತದೆ ಓದುವ ನಡುವೆ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳುವುದು ಉತ್ತಮ ಅಭ್ಯಾಸ
ವೇಗವಾಗಿ ಓದುವ ತಂತ್ರಗಳು
Competetive Exams ಗಳಿಗೆ ಹೆಚ್ಚು ಕಾಲ ಓದಬೇಕೆಂದು ಇಲ್ಲ ಕಡಿಮೆ ಸಮಯದಲ್ಲಾದರೂ ಪರಿಣಾಮಕಾರಿಯಾಗಿ ಮತ್ತು ವೇಗವಾಗಿ ಓದಿ ಅರ್ಥೈಸಿಕೊಳ್ಳುವುದರ ಮೂಲಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಬಹುದಾಗಿರುತ್ತದೆ ವೇಗವಾಗಿ ಓದಲು ಅನುಸರಿಸಬೇಕಾದ ಪ್ರಮುಖ ತಂತ್ರಗಳನ್ನು ಈ ಕೆಳಗಡೆ ನೀಡಲಾಗಿದೆ
- ಅಧ್ಯಯನ ಮಾಡುವ ಮೊದಲು ಪ್ರಮುಖ ವಿಚಾರಧಾರೆ ಹಾಗೂ ಶೀರ್ಷಿಕೆಗಳನ್ನು ಓದಿ ಇದರಿಂದ ಪ್ರಮುಖ ವಿಷಯಗಳು ತಿಳಿಯುತ್ತವೆ.
- ಒಂದೇ ವಿಷಯವನ್ನು ಹೆಚ್ಚು ಸಮಯ ಅಥವಾ ದೊಡ್ಡ ಪ್ರಮಾಣದಲ್ಲಿ ಓದಬೇಡಿ ಸಣ್ಣ ಸಣ್ಣ ಭಾಗಗಳಾಗಿ ವಿಭಜಿಸಿ ಅಧ್ಯಯನ ಮಾಡಿ.
- ನಿಮಗೆ ಮುಖ್ಯವೆನಿಸುವ ಅಂಶಗಳನ್ನು ಕಿರು ಟಿಪ್ಪಣಿಗಳ ರೀತಿಯಲ್ಲಿ ನೋಟ್ ಮಾಡಿಕೊಳ್ಳಿ.
- ಈಗಾಗಲೇ ಓದಿರುವ ವಿಷಯವನ್ನು ನಿಮ್ಮದೇ ಮಾತು ಅಥವಾ ಶೈಲಿಯಲ್ಲಿ ಪುನರಾವರ್ತಿಸಿ.
- ಪ್ರತಿದಿನ ಕನಿಷ್ಠ 45 ರಿಂದ 50 ನಿಮಿಷಗಳ ಕಾಲ ವೇಗವಾಗಿ ಓದುವ ಅಭ್ಯಾಸವನ್ನು ರೂಡಿಸಿಕೊಳ್ಳಿ.
- ದಿನಪತ್ರಿಕೆ ವಾರಪತ್ರಿಕೆ ಮತ್ತು ಮಾಸಿಕ ಪತ್ರಿಕೆಗಳನ್ನು ಓದುವುದರಿಂದ ಪ್ರಚಲಿತ ಘಟನೆ ಗಳನ್ನು ಉತ್ತಮ ರೀತಿಯಲ್ಲಿ ತಿಳಿದುಕೊಳ್ಳಬಹುದು ಆದ್ದರಿಂದ ಇವುಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಿ.
- ಅನಗತ್ಯ ವಿಷಯಗಳಿಗೆ ಹೆಚ್ಚಿನ ಸಮಯವನ್ನು ವ್ಯಯಿಸಬೇಡಿ ಪರೀಕ್ಷಾ ಸಂದರ್ಭದಲ್ಲಿ ಇದು ನಿಮ್ಮ ಏಕಾಗ್ರತೆಯನ್ನು ಹಾಳುಮಾಡುತ್ತದೆ.
- ಸಮಯವನ್ನು ನಿಗದಿಪಡಿಸಿ ಅಧ್ಯಯನ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.
90 ದಿನಗಳ ಅಧ್ಯಯನ ಯೋಜನೆ ಹೀಗಿರಬೇಕು
Competetive Exams ಗಳಿಗೆ ಹೆಚ್ಚು ಕಾಲ ಓದುವ ಅವಶ್ಯಕತೆ ಇರುವುದಿಲ್ಲ ಸರಿಯಾದ ಯೋಜನೆ ಯೊಂದಿಗೆ 90 ದಿನಗಳನ್ನು ಪರಿಣಾಮಕಾರಿಯಾಗಿ ಹಾಗೂ ಉತ್ತಮ ರೀತಿಯಲ್ಲಿ ಬಳಸಿಕೊಂಡರೆ ಸಂಪೂರ್ಣ ಪಠ್ಯಕ್ರಮವನ್ನು ಪರಿಣಾಮಕಾರಿಯಾಗಿ ಮುಗಿಸಬಹುದಾಗಿರುತ್ತದೆ 90 ದಿನಗಳ ಅಧ್ಯಯನ ಯೋಜನೆ ಈ ಕೆಳಕಂಡಂತಿದೆ
ಮೊದಲ 30 ದಿನಗಳಲ್ಲಿ ಮೂಲಭೂತ ಅಧ್ಯಯನ ಮಾಡಬೇಕು
ಹೊಂದಬೇಕಾದ ಗುರಿ:
- ಸಂಪೂರ್ಣ ಪಠ್ಯಕ್ರಮವನ್ನು ಪರಿಚಯಿಸಿಕೊಂಡು ಅರ್ಥ ಮಾಡಿಕೊಳ್ಳಬೇಕು.
- ಮೂಲಭೂತ ವಿಷಯಗಳನ್ನು ಅಧ್ಯಯನ ಮಾಡಬೇಕು.
- ನೋಟ್ಸ್ ಗಳನ್ನು ತಯಾರಿ ಮಾಡಿಕೊಳ್ಳಬೇಕು.
ಈ ಅವಧಿಯಲ್ಲಿ ಓದಬೇಕಾದ ವಿಷಯಗಳು:
- ಕನ್ನಡ ವ್ಯಾಕರಣ
- ಇಂಗ್ಲಿಷ್ ಗ್ರಾಮರ್
- ಕರ್ನಾಟಕ ಸಾಮಾನ್ಯ ಜ್ಞಾನ
- ಭಾರತೀಯ ಸಂವಿಧಾನ
- ಕಂಪ್ಯೂಟರ್ ಮೂಲಭೂತ ಜ್ಞಾನ
- ಸಹಕಾರ ಸಂಘಗಳ ಪರಿಚಯ
ಪ್ರತಿ ದಿನದ ಯೋಜನೆ:
- ಕನ್ನಡ ಭಾಷೆಗೆ 1 ಗಂಟೆ ಸಮಯ
- ಇಂಗ್ಲಿಷ್ ಭಾಷೆಗೆ 1 ಗಂಟೆ ಸಮಯ
- ಸಾಮಾನ್ಯ ಜ್ಞಾನಕ್ಕೆ 2 ಗಂಟೆಗಳ ಸಮಯ
- ಕಂಪ್ಯೂಟರ್ ಜ್ಞಾನಕ್ಕೆ 1 ಗಂಟೆ ಸಮಯ
- ರಿವಿಶನ್ ಮಾಡಲು 1 ಗಂಟೆ ಸಮಯ
31 ರಿಂದ 60 ದಿನಗಳಲ್ಲಿ ಆಳವಾದ ಅಧ್ಯಯನ ಮಾಡಬೇಕು
ಹೆಚ್ಚು ಗಮನ ನೀಡಬೇಕಾದ ಅಂಶಗಳು:
- ಇಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಬೇಕು
- ಮಾಕ್ ಟೆಸ್ಟುಗಳನ್ನು ಬರೆಯಬೇಕು
- ಪ್ರಚಲಿತ ಘಟನೆಗಳ ಬಗ್ಗೆ ತಿಳಿದುಕೊಳ್ಳಬೇಕು
- ಸಹಕಾರಿ ಸಂಘಗಳ ಕಾಯ್ದೆ ಗೆ ಸಂಬಂಧಿಸಿದ ಅಂಶಗಳು
ಈ ಅವಧಿಯಲ್ಲಿ ಓದಬೇಕಾದ ವಿಷಯಗಳು:
- ವಿಜ್ಞಾನ
- ಕಂಪ್ಯೂಟರ್ ಸಂಬಂಧಿಸಿದ ಅಭ್ಯಾಸಗಳು
- ಹಾಲು ಒಕ್ಕೂಟದ ಆಡಳಿತ ವ್ಯವಸ್ಥೆ
ಪ್ರತಿ ದಿನದ ಯೋಜನೆ:
- 2 ಗಂಟೆಗಳ ಕಾಲ ಸಾಮಾನ್ಯ ಜ್ಞಾನದ ಅಧ್ಯಯನ
- 1 ಗಂಟೆ ಕನ್ನಡ ಭಾಷೆ ಅಧ್ಯಯನ
- 1 ಗಂಟೆ ಇಂಗ್ಲಿಷ್ ಭಾಷೆ ಅಧ್ಯಯನ
- 1 ಗಂಟೆ ಕಂಪ್ಯೂಟರ್ ಜ್ಞಾನ ಅಧ್ಯಯನ
- 1 ಗಂಟೆ ಸಹಕಾರಿ ಸಂಘಗಳ ಅಧ್ಯಯನ
61 ರಿಂದ 90 ದಿನಗಳಲ್ಲಿ ಅಂತಿಮ ತಯಾರಿ ನಡೆಸಬೇಕು
ಈ ಹಂತದಲ್ಲಿ ಹೊಸ ವಿಷಯಗಳನ್ನು ಓದುವ ಬದಲು ಈಗಾಗಲೇ ಓದಿರುವ ವಿಷಯಗಳ ರಿವಿಶನ್ ಮಾಡುವ ಮೇಲೆ ಹೆಚ್ಚು ಗಮನವನ್ನು ನೀಡಿ ಇವುಗಳು ಹೆಚ್ಚು ಜ್ಞಾಪಕ ವಿವರಿಸಿಕೊಳ್ಳಲು ಸಹಕರಿಸುತ್ತವೆ
ಗಮನ ನೀಡಬೇಕಾದ ಅಂಶಗಳು:
- ರಿವಿಜನನ್ನು ಉತ್ತಮ ರೀತಿಯಲ್ಲಿ ಹೆಚ್ಚು ಕಾಲ ಮಾಡಬೇಕು
- ಸಂಪೂರ್ಣ ಪ್ರಮಾಣದಲ್ಲಿ ಮಾಕ್ ಟೆಸ್ಟ್ ಗಳನ್ನು ತೆಗೆದುಕೊಳ್ಳಬೇಕು
- ತಪ್ಪು ಉತ್ತರಗಳ ವಿಶ್ಲೇಷಣೆ ಮಾಡಿ ಅವುಗಳ ಸರಿಯಾದ ಉತ್ತರವನ್ನು ತಿಳಿಸಿಕೊಳ್ಳುವಲ್ಲಿ ವಿವರವನ್ನು ಮತ್ತು ಮಾಹಿತಿಯನ್ನು ಹುಡುಕಬೇಕು
- ಉತ್ತಮ ರೀತಿಯಲ್ಲಿ ಸಮಯ ನಿರ್ವಹಣೆ ಮಾಡಬೇಕಾದ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು
- ಅಧ್ಯಯನ ಸಂದರ್ಭದಲ್ಲಿ ಮಾಡಿಕೊಂಡಿರುವ ಪ್ರಮುಖ ಕಿರು ಟಿಪ್ಪಣಿಗಳ ಮರು ಅಧ್ಯಯನ ಮಾಡಬೇಕು
- ಪರೀಕ್ಷೆಯ ದಿನಾಂಕ ನಿಗದಿಗೊಂಡ ನಂತರ 15 ದಿನಗಳ ಹಿಂದಿನಿಂದ ಸಂಪೂರ್ಣ ಪ್ರಮಾಣದ ಮಾಕ್ ಟೆಸ್ಟ್ ಗಳನ್ನು ಪ್ರತಿದಿನ ಬರೆಯುವುದನ್ನು ರೂಢಿಸಿಕೊಳ್ಳಿ ಆಗ ಸಮಯ ನಿರ್ವಹಣೆ ಮತ್ತು ಪ್ರಶ್ನೆಗಳ ವಾತಾವರಣ ಉತ್ತಮ ರೀತಿಯಲ್ಲಿ ಅರ್ಥವಾಗುತ್ತದೆ
Exams ನ ವಿಷಯವಾರು ಅಂದಾಜು ಪ್ರಶ್ನೆಗಳು
| ವಿಷಯ | ಅಂದಾಜು ಪ್ರಶ್ನೆಗಳು |
| ಕನ್ನಡ ಭಾಷೆ | 20 ರಿಂದ 25 ಪ್ರಶ್ನೆಗಳು |
| ಇಂಗ್ಲಿಷ್ ಭಾಷೆ | 15 ರಿಂದ 20 ಪ್ರಶ್ನೆಗಳು |
| ಸಾಮಾನ್ಯ ಜ್ಞಾನ | 30 ರಿಂದ 35 ಪ್ರಶ್ನೆಗಳು |
| ಕಂಪ್ಯೂಟರ್ ಜ್ಞಾನ | 10 ರಿಂದ 15 ಪ್ರಶ್ನೆಗಳು |
| ಸಹಕಾರ ಸಂಘಗಳ ವಿಚಾರಗಳು | 20 ರಿಂದ 25 ಪ್ರಶ್ನೆಗಳು |
Exams ತಯಾರಿಗಾಗಿ ಉಪಯುಕ್ತ ಪುಸ್ತಕಗಳು
ಕನ್ನಡ ಭಾಷೆ
- ಸ್ಪರ್ಧಾ ಕನ್ನಡ ವ್ಯಾಕರಣ
- ಕನ್ನಡ ವ್ಯಾಕರಣ ದರ್ಪಣ
- ಸಾಮಾನ್ಯ ಕನ್ನಡ ಪ್ರಶ್ನೋತ್ತರ ಸಂಕಲನ
ಇಂಗ್ಲಿಷ್ ಭಾಷೆ
- Objective General English
- High School English Grammar
- Word Power Made Easy
- English Vocabulary Builder
ಸಾಮಾನ್ಯ ಜ್ಞಾನ
- Lucent General Knowledge
- Manorama Yearbook
- Karnataka General Knowledge
- ಸ್ಪರ್ಧಾ ವಿಜಯ Current Affairs
ಕಂಪ್ಯೂಟರ್ ಜ್ಞಾನ
- Objective Computer Awareness
- Computer Fundamentals
- Basic Computer Knowledge Guide
ಸಹಕಾರ ಸಂಘಗಳು
- ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಪುಸ್ತಕ
- ಸಹಕಾರ ಆಡಳಿತ ಕೈಪಿಡಿ
- ಹಾಲು ಉತ್ಪಾದಕರ ಸಂಘಗಳ ಕಾರ್ಯವಿಧಾನ ಪುಸ್ತಕ
- ಹಾಲು ಒಕ್ಕೂಟ ಆಡಳಿತ ಮಾರ್ಗದರ್ಶಿ
ಅತ್ಯುತ್ತಮ Exams Tips
- ಪರೀಕ್ಷೆಯಲ್ಲಿ ಮೊದಲು ಸುಲಭವಾದ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪೂರ್ಣಗೊಳಿಸಿ ಇದರಿಂದ ಆತ್ಮವಿಶ್ವಾಸ ಹೆಚ್ಚುವುದರ ಮೂಲಕ ಉಳಿದ ಘಟನೆ ವಿಷಯಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಬಹುದು
- ಪ್ರತಿದಿನ ಕನಿಷ್ಠ ಪಕ್ಷ 30 ನಿಮಿಷಗಳ ಕಾಲ ಪ್ರಚಲಿತ ಘಟನೆಗಳಿಗೆ ಸಂಬಂಧಿಸಿದ ವಿಚಾರಗಳನ್ನು ಓದಿ ಇತ್ತೀಚಿನ ಘಟನೆಗಳ ಬಗ್ಗೆ ತಿಳಿದುಕೊಳ್ಳುವುದರಿಂದ ಸಾಮಾನ್ಯ ಜ್ಞಾನದ ಗುಣಮಟ್ಟ ಹೆಚ್ಚುತ್ತದೆ
- ವಾರಂತ್ಯದಲ್ಲಿ ಸಂಪೂರ್ಣ ಪ್ರಮಾಣದ ಮಾಕ್ ಟೆಸ್ಟ್ ಅನ್ನು ಬರೆಯಿರಿ ಇದು ನಿಮ್ಮ ದುರ್ಬಲ ವಿಷಯಗಳನ್ನು ಗುರುತಿಸಿ ಅವುಗಳ ಮೇಲೆ ಹೆಚ್ಚಿನ ಅಧ್ಯಯನ ಮಾಡಲು ತಿಳಿಸುತ್ತದೆ
- ಸದರಿ ಸ್ಪರ್ಧಾತ್ಮಕ ಪ್ರಶ್ನೆ ಪತ್ರಿಕೆಗಳ ಹತ್ತು ವರ್ಷಗಳ ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ ಇದರಿಂದ ಪ್ರಶ್ನೆ ಪತ್ರಿಕೆಗಳ ಮಾದರಿ ಹಾಗೂ ಪ್ರಮುಖ ವಿಚಾರಗಳ ಬಗ್ಗೆ ನೀಲಿನಕ್ಷೆ ದೊರೆಯುತ್ತದೆ
- ಪರೀಕ್ಷೆಗೆ 15 ದಿನಗಳ ಮುನ್ನ ಹೊಸ ವಿಷಯಗಳನ್ನು ಓದಲು ಪ್ರಯತ್ನಿಸಬೇಡಿ ಈಗಾಗಲೇ ಓದಿರುವ ವಿಷಯಗಳನ್ನು ಮರುದಿನ ಮಾಡಿ ಒಂದು ವೇಳೆ ನೀವೇನಾದರೂ ಹೊಸ ವಿಷಯಗಳನ್ನು ಓದಿದರೆ ಗೊಂದಲವನ್ನು ಸೃಷ್ಟಿಸಿಕೊಳ್ಳುತ್ತೀರಿ
- ಪರೀಕ್ಷೆಯ ದಿನ ಸಮಯಕ್ಕಿಂತ 40 ರಿಂದ 45 ನಿಮಿಷಗಳ ಮುಂಚಿತವಾಗಿ ಪರೀಕ್ಷಾ ಕೇಂದ್ರವನ್ನು ತಲುಪಿ ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿರುವುದರಿಂದ ಈ ಸೂಚನೆಯನ್ನು ನೀಡಲಾಗಿದೆ ಪರೀಕ್ಷಾ ಕೇಂದ್ರದಲ್ಲಿ ಬೇಕಾಗುವ ಅಗತ್ಯ ದಾಖಲೆಗಳು, ಗುರುತಿನ ಚೀಟಿ, ಪ್ರವೇಶ ಪತ್ರಗಳನ್ನು ಮುಂಚಿತವಾಗಿಯೇ ಸಿದ್ಧಪಡಿಸಿಕೊಳ್ಳಿ ಶಾಂತ ಮನಸ್ಸಿನಿಂದ ಪರೀಕ್ಷೆ ಬರೆಯಿರಿ ಇದು ಉತ್ತಮ ಪರೀಕ್ಷಾ ಫಲಿತಾಂಶಕ್ಕೆ ಸಹಕಾರಿ ಆಗುತ್ತದೆ.
ಅಭ್ಯರ್ಥಿಗಳು ಮಾಡುವ ಸಾಮಾನ್ಯ ತಪ್ಪುಗಳು
ಅನೇಕ ಅಭ್ಯರ್ಥಿಗಳು ಹೆಚ್ಚು ಕಾಲ ಓದಿದರೂ ಸಹ ಪರೀಕ್ಷೆಯಲ್ಲಿ ಯಶಸ್ಸನ್ನು ಗಳಿಸಲು ಸಾಧ್ಯವಾಗುವುದಿಲ್ಲ ಅಧ್ಯಯನದ ಸಮಯದಲ್ಲಿ ಮಾಡುವ ಸಣ್ಣ ತಪ್ಪುಗಳು Exams ನಲ್ಲಿ ಯಶಸ್ಸನ್ನು ಪಡೆಯುವಲ್ಲಿ ತೊಂದರೆಯನ್ನು ಉಂಟುಮಾಡುತ್ತವೆ ಆದ್ದರಿಂದ ಈ ತಪ್ಪುಗಳನ್ನು ಮೊದಲೇ ತಿಳಿದುಕೊಂಡು ಸರಿಪಡಿಸಿಕೊಳ್ಳುವುದರ ಮೂಲಕ ನಿರೀಕ್ಷೆಗಿಂತ ಹೆಚ್ಚಿನ ಅಂಕಗಳನ್ನು ಪಡೆಯಬಹುದಾಗಿರುತ್ತದೆ.
ಪಠ್ಯಕ್ರಮವನ್ನು ಸಂಪೂರ್ಣವಾಗಿ ಓದದೆ ಇರುವುದು
ಕೆಲವು ವಿದ್ಯಾರ್ಥಿಗಳು ಅಧಿಕೃತ ಪಠ್ಯಕ್ರಮವನ್ನು ಪರಿಶೀಲಿಸದೆ ಎಲ್ಲಾ ವಿಚಾರಗಳನ್ನು ಸಮಾನ ಆದ್ಯತೆ ಮೇರೆಗೆ ಓದುತ್ತಾರೆ. ಇದರ ಜೊತೆಯಲ್ಲಿ ಅನಗತ್ಯ ವಿಷಯಗಳಿಗೂ ಸಹ ಹೆಚ್ಚು ಸಮಯವನ್ನು ನೀಡುತ್ತಾರೆ ಇದರಿಂದ ನಿಗದಿಪಡಿಸಿರುವ ಮುಖ್ಯ ವಿಷಯಗಳನ್ನು ಓದಲು ಸಾಧ್ಯವಾಗದೇ ಇರಬಹುದು ಆದುದರಿಂದ ಪಠ್ಯಕ್ರಮವನ್ನು ಸಂಪೂರ್ಣವಾಗಿ ಮೊದಲು ಓದಬೇಕು
ಅಧ್ಯಯನಕ್ಕೆ ಉತ್ತಮ ಯೋಜನೆಯನ್ನು ರೂಪಿಸದೆ ಇರುವುದು
ದಿನನಿತ್ಯದ ವೇಳಾಪಟ್ಟಿ ಇಲ್ಲದೆ ಓದುವುದರಿಂದ ಯಾವ ವಿಷಯವನ್ನು ಯಾವ ಸಮಯದಲ್ಲಿ ಓದಬೇಕು ಎಂಬ ಗೊಂದಲವು ಉಂಟಾಗುತ್ತದೆ ಇದರ ಜೊತೆಯಲ್ಲಿ ಸಮಯ ನಿರ್ವಹಣೆಯ ಕೊರತೆಯೂ ಸಹ ಉಂಟಾಗುವುದರಿಂದ ಪ್ರತಿನಿತ್ಯ ಯಾವ ಸಮಯದಲ್ಲಿ ಯಾವ ವಿಚಾರಗಳನ್ನು ಓದಬೇಕು ಎಂಬುದರ ಬಗ್ಗೆ ಒಂದು ವೇಳಾಪಟ್ಟಿ ಮತ್ತು ಅಧ್ಯಯನದ ಯೋಜನೆಯನ್ನು ರೂಪಿಸಿ
ರಿವಿಜನ್ ಮಾಡದೇ ಇರುವುದು
ಹೊಸ ವಿಷಯಗಳನ್ನು ಓದಿದಂತೆ ಹಳೆ ವಿಚಾರಗಳು ಮರೆಯುವುದು ಸಹಜ ಆದುದರಿಂದ ಕೆಲವು ವಿದ್ಯಾರ್ಥಿಗಳು ಹೊಸ ವಿಷಯಗಳನ್ನು ಓದಿದ ನಂತರ ಅವುಗಳನ್ನು ರಿವಿಜನ್ ಮಾಡುವುದರಿಂದ ಹೆಚ್ಚು ಕಾಲ ಜ್ಞಾಪಕದಲ್ಲಿಟ್ಟುಕೊಂಡು ಪ್ರಶ್ನೆಗಳಿಗೆ ಉತ್ತಮ ರೀತಿಯಲ್ಲಿ ಉತ್ತರಿಸಬಹುದು ಪ್ರತಿದಿನ ಕನಿಷ್ಠ 1 ಗಂಟೆ ಕಾಲ ರಿವಿಜನ್ ಮಾಡುವುದು ಉತ್ತಮ
ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡದೆ ಇರುವುದು
ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಅಧ್ಯಯನ ಮಾಡದೆ ಇರುವುದರಿಂದ ಪರೀಕ್ಷೆಯ ಮಾದರಿ ಪ್ರಶ್ನೆಗಳ ಗುಣಮಟ್ಟ ಹಾಗೂ ಪರೀಕ್ಷೆಯಲ್ಲಿ ಕೇಳಬಹುದಾದ ಪ್ರಮುಖ ವಿಷಯಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಇವುಗಳನ್ನು ಅಭ್ಯಾಸ ಮಾಡುವುದರಿಂದ ಸಮಯ ನಿರ್ವಹಣೆ ಮತ್ತು ಪ್ರಶ್ನೆಗಳ ಆಯ್ಕೆಯಲ್ಲಿ ಎದುರಾಗಬಹುದಾದ ಸಮಸ್ಯೆಯನ್ನು ಕಡಿಮೆ ಮಾಡಿಕೊಳ್ಳಬಹುದು.
ಮಾಕ್ ಟೆಸ್ಟ್ ಗಳನ್ನು ಬರೆಯದೆ ಇರುವುದು
ಮಾಕ್ ಟೆಸ್ಟ್ ಗಳನ್ನು ಬರೆದಿರುವುದರಿಂದ ನಿಜವಾದ ಪರೀಕ್ಷೆ ಅನುಭವ ದೊರೆಯುವುದಿಲ್ಲ ಪರೀಕ್ಷಾ ಅವಧಿಯಲ್ಲಿ ಉತ್ತಮ ರೀತಿಯ ಸಮಯ ನಿರ್ವಹಣೆ ಸಾಧ್ಯವಾಗದೇ ಇರಬಹುದು ಮತ್ತು ಕೊಟ್ಟಿರುವ ಸಮಯ ಅವಧಿಯಲ್ಲಿ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲು ಸಾಧ್ಯವಾಗದೇ ಇರಬಹುದು ಆದುದರಿಂದ ವಾರಕ್ಕೊಮ್ಮೆ ಸಂಪೂರ್ಣ ಪ್ರಮಾಣದಲ್ಲಿ ಮಾರ್ಟೆಸ್ಟ್ ಅನ್ನು ತೆಗೆದುಕೊಳ್ಳುವುದರಿಂದ ಸಮಯ ನಿರ್ವಹಣೆಯನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬಹುದು
ಒಂದೇ ವಿಷಯಕ್ಕೆ ಹೆಚ್ಚು ಸಮಯವನ್ನು ಮೀಸಲಿಡುವುದು
ಕೆಲವು ವಿದ್ಯಾರ್ಥಿಗಳು ಈ ತಪ್ಪನ್ನು ಸಾಮಾನ್ಯವಾಗಿ ಮಾಡುತ್ತಾರೆ ಅವರಿಗೆ ಇಷ್ಟವಿರುವ ವಿಷಯವನ್ನು ಹೆಚ್ಚು ಪ್ರಮಾಣದಲ್ಲಿ ಓದಿ ಕಷ್ಟಕರವೆನಿಸುವ ವಿಚಾರಗಳನ್ನು ಬಿಟ್ಟುಬಿಡುತ್ತಾರೆ ಆದರೆ Competetive Exams ನಲ್ಲಿ ಎಲ್ಲ ವಿಷಯಗಳಿಂದ ಪ್ರಶ್ನೆಗಳು ಬರುವುದರಿಂದ ಇಷ್ಟವಿರುವ ವಿಷಯವನ್ನು ಕಡಿಮೆ ಓದಿ ತಮಗೆ ಕಷ್ಟವೆನಿಸುವ ವಿಚಾರಗಳ ಬಗ್ಗೆ ಹೆಚ್ಚಿನ ಅಧ್ಯಯನವನ್ನು ಮಾಡಲು ಶ್ರಮವನ್ನು ಹಾಕಬೇಕಾಗುತ್ತದೆ ಮತ್ತು ಸಮತೋಲನವನ್ನು ಕಾಪಾಡಿಕೊಳ್ಳಬೇಕಾಗುತ್ತದೆ
ಪ್ರಚಲಿತ ಘಟನೆಗಳನ್ನು ಓದದೆ ಇರುವುದು
ಸಾಮಾನ್ಯವಾಗಿ ಅಭ್ಯರ್ಥಿಗಳು ಪುಸ್ತಕಗಳನ್ನು ಮಾತ್ರ ಓದಿ ಪರೀಕ್ಷೆಯಲ್ಲಿ ಯಶಸ್ಸನ್ನು ಗಳಿಸಬಹುದೆಂಬ ಅಂಶವನ್ನು ತಲೆಯಲ್ಲಿ ಇಟ್ಟುಕೊಂಡಿರುತ್ತಾರೆ ಆದರೆ ಇತ್ತೀಚಿನ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಘಟನೆಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಗಳನ್ನು ದಿನನಿತ್ಯ ದಿನಪತ್ರಿಕೆ, ವಾರಪತ್ರಿಕೆ ಹಾಗೂ ಮಾಸಿಕ ಪತ್ರಿಕೆಗಳನ್ನು ಓದುವುದರ ಮೂಲಕ ಪ್ರಚಲಿತ ಘಟನೆಗಳನ್ನು ತಿಳಿದುಕೊಳ್ಳಬಹುದು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು
ಆರೋಗ್ಯದ ಕಡೆ ಗಮನ ನೀಡದೆ ಇರುವುದು
ಹೆಚ್ಚು ಸಮಯ ಓದುವ ಉದ್ದೇಶವನ್ನು ಇಟ್ಟುಕೊಂಡು ಸರಿಯಾಗಿ ನಿದ್ರೆ ಮಾಡದಿರುವುದು, ಆಹಾರವನ್ನು ತಿನ್ನದಿರುವುದು, ವ್ಯಾಯಾಮವನ್ನು ನಿರ್ಲಕ್ಷಿಸುವುದು ಈ ರೀತಿ ಮಾಡುತ್ತಾರೆ ಇದರಿಂದ ಆರೋಗ್ಯ ಹದಗೆಟ್ಟು ಏಕಾಗ್ರತೆ ಕಡಿಮೆಯಾಗಿ ಪರಿಣಾಮಕಾರಿ ಅಧ್ಯಯನ ಸಾಧ್ಯವಾಗುವುದಿಲ್ಲ
ಪರೀಕ್ಷೆಯ ಕೊನೆಯ ದಿನಗಳಲ್ಲಿ ಹೊಸ ವಿಷಯಗಳ ಅಧ್ಯಯನ
ಪರೀಕ್ಷೆಗೆ 15 ದಿನಗಳು ಇದ್ದಾಗಿನಿಂದ ಹೊಸ ವಿಷಯಗಳನ್ನು ಅಧ್ಯಯನ ಮಾಡದೆ ಈಗಾಗಲೇ ಅಧ್ಯಯನ ಮಾಡಿರುವ ವಿಷಯಗಳನ್ನು ರಿವಿಶನ್ ಮಾಡಬೇಕು ಹೊಸ ವಿಷಯಗಳನ್ನು ಓದುವುದರಿಂದ ಗೊಂದಲಕ್ಕೆ ಈಡಾಗಬಹುದು
ಆತ್ಮವಿಶ್ವಾಸ ಕಳೆದುಕೊಳ್ಳುವುದು
ಸಿಲಬಸ್ ನಲ್ಲಿ ಒಂದು ಅಥವಾ ಎರಡು ವಿಷಯಗಳನ್ನು ಕಷ್ಟಕರವೆನಿಸುವಂತೆ ಅಂದುಕೊಂಡು ಬೇರೆಲ್ಲ ವಿಷಯಗಳನ್ನು ಅಧ್ಯಯನ ಮಾಡುವಲ್ಲಿ ನಿರಾಸಕ್ತಿ ಉಂಟಾಗಬಹುದು. ಇದರಿಂದ ಆತ್ಮವಿಶ್ವಾಸ ಕಡಿಮೆಯಾಗಿ ಪರೀಕ್ಷೆಯಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವಾಗದೇ ಇರಬಹುದು ಆದುದರಿಂದ ಪರೀಕ್ಷಾ ತಯಾರಿ ಸಮಯದಲ್ಲಿ ಆತ್ಮವಿಶ್ವಾಸದಿಂದಿರಲು ಪ್ರಯತ್ನಿಸಿ
Exams ದಿನ ಪಾಲಿಸಬೇಕಾದ ಪ್ರಮುಖ ಸಲಹೆಗಳು
- ಪರೀಕ್ಷಾ ಕೇಂದ್ರಕ್ಕೆ 40 ರಿಂದ 45 ನಿಮಿಷ ಮುಂಚಿತವಾಗಿ ತಲುಪಿ
- ಪ್ರವೇಶ ಪತ್ರ ಹಾಗೂ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ನಿಮ್ಮೊಡನೆ ತೆಗೆದುಕೊಂಡು ಹೋಗಿ
- ಪ್ರಶ್ನೆ ಪತ್ರಿಕೆಯನ್ನು ಸಂಪೂರ್ಣವಾಗಿ ಓದಿದ ನಂತರವೇ ಉತ್ತರವನ್ನು ನೀಡಲು ಪ್ರಾರಂಭಿಸಿ
- ಪ್ರಶ್ನೆ ಪತ್ರಿಕೆಯನ್ನು ಸಂಪೂರ್ಣವಾಗಿ ಓದಿದ ನಂತರ ಸುಲಭ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ
- ಒಂದೇ ಪ್ರಶ್ನೆಗೆ ಹೆಚ್ಚು ಸಮಯವನ್ನು ಹಾಳು ಮಾಡಬೇಡಿ ಇದರಿಂದ ಬೇರೆ ಪ್ರಶ್ನೆಗಳಿಗೆ ಸಮಯಾವಕಾಶ ಕಡಿಮೆ ಸಿಗಬಹುದು
- Exams ಅವಧಿಯನ್ನು ಮೂರು ಹಂತಗಳಾಗಿ ಹಂಚಿಕೊಳ್ಳಿ. ಅಂದರೆ ಮೊದಲನೇ ಸುತ್ತು ಸುಲಭ ಪ್ರಶ್ನೆಗಳಿಗೆ, ಎರಡನೇ ಸುತ್ತು ಕ್ಲಿಷ್ಟಕರ ಪ್ರಶ್ನೆಗಳಿಗೆ ಮತ್ತು ಮೂರನೇ ಸುತ್ತು ಅಂತಿಮ ಪರಿಶೀಲನೆಗೆ ಎಂಬಂತೆ ಹಂಚಿಕೊಳ್ಳಿ
- ಉತ್ತರಗಳನ್ನು ಕೊನೆಯ ಕ್ಷಣಗಳಲ್ಲಿ ಮತ್ತೊಮ್ಮೆ ಎಚ್ಚರಿಕೆಯಿಂದ ಪರಿಶೀಲಿಸಿ
- Examsಬರೆಯುವಾಗ ಯಾವುದೇ ಆತಂಕಕ್ಕೆ ಒಳಗಾಗದೆ ಆತ್ಮವಿಶ್ವಾಸದಿಂದ ಇದ್ದು ಶಾಂತ ಮನಸ್ಸಿನಿಂದ ಪರಿಚಯವನ್ನು ಎದುರಿಸಿ
Exams Preparation Tips : FAQ’s
1. ಈ ಪರೀಕ್ಷೆಗೆ ಪ್ರತಿ ದಿನ ಎಷ್ಟು ಗಂಟೆ ಓದಬೇಕು?
ಸಾಮಾನ್ಯವಾಗಿ 5 ರಿಂದ 7 ಗಂಟೆಗಳ ಪರಿಣಾಮಕಾರಿ ಅಧ್ಯಯನ ಸಾಕಾಗುತ್ತದೆ.
2. 90 ದಿನಗಳಲ್ಲಿ ಸಂಪೂರ್ಣ ಪಠ್ಯಕ್ರಮ ಮುಗಿಸಬಹುದೇ?
ಹೌದು, ಸರಿಯಾದ ವೇಳಾಪಟ್ಟಿ ಸರಿಯಾದ ಅಧ್ಯಯನ ಯೋಜನೆಯನ್ನು ರೂಪಿಸುವುದರ ಮೂಲಕ ಸಿಲಬಸ್ ಅನ್ನು 90 ದಿನಗಳಲ್ಲಿ ಪೂರ್ಣಗೊಳಿಸಬಹುದು.
3. ಯಾವ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು?
ಪ್ರತಿಯೊಂದು ವಿಷಯಕ್ಕೂ ತನ್ನದೇ ಆದ ಆದ್ಯತೆ ಇದೆ ಹೆಚ್ಚು ಪ್ರಶ್ನೆಗಳು ಎದುರಾಗಬಹುದಾದ ವಿಭಾಗಕ್ಕೆ ಹೆಚ್ಚಿನ ಸಮಯವನ್ನು ಮೀಸಲಿಡಿ.
4. ಇಂದಿನ ವರ್ಷದ ಪ್ರಶ್ನೆ ಪತ್ರಿಕೆಗಳ ಅಧ್ಯಯನ ಮುಖ್ಯವೇ?
ಹೌದು, ಇಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಓದುವುದರಿಂದ ಹಾಗೂ ಅಧ್ಯಯನ ಮಾಡುವುದರಿಂದ ಪ್ರಶ್ನೆಗಳ ವಾತಾವರಣ ಹಾಗೂ ಕ್ಲಿಷ್ಟತೆ ಅರ್ಥವಾಗುತ್ತದೆ.
5. ಮಾಕ್ ಟೆಸ್ಟ್ ಬರೆದರೆ ಆಗುವ ಉಪಯೋಗವೇನು?
ಮಾಕ್ ಟೆಸ್ಟ್ ಗಳನ್ನು ಬರೆಯುವುದರಿಂದ ಸಮಯ ನಿರ್ವಹಣೆ ವೃದ್ಧಿಯಾಗುತ್ತದೆ ಆತ್ಮವಿಶ್ವಾಸ ಹೆಚ್ಚುತ್ತದೆ ಮತ್ತು ಸಿದ್ಧತೆಯ ಮಟ್ಟವನ್ನು ಅಳೆಯಬಹುದು.
6. ಪ್ರಚಲಿತ ಘಟನೆಗಳನ್ನು ಎಷ್ಟು ಅವಧಿಯಿಂದ ಎಷ್ಟು ಅವಧಿಯವರೆಗೆ ಓದಬೇಕು?
Competetive Exams ಅಧಿಸೂಚನೆಯ ಇಂದಿನ ಕನಿಷ್ಠ ಆರು ತಿಂಗಳಿಂದ 12 ತಿಂಗಳ ಪ್ರಚಲಿತ ಘಟನೆಗಳನ್ನು ಕಡ್ಡಾಯವಾಗಿ ಓದಿ
ಸಂಬಂಧಿತ ಲಿಂಕ್ ಗಳು
| KMF ನ ಅಧಿಕೃತ ವೆಬ್ ಸೈಟ್ | KMF |
| ನಮ್ಮ ವಾಟ್ಸಪ್ ಗುಂಪು ಸೇರಲು | ಇಲ್ಲಿ ಕ್ಲಿಕ್ ಮಾಡಿ |
| ಮಾಕ್ ಟೆಸ್ಟ್ ತೆಗೆದುಕೊಳ್ಳಲು | ಮಾಕ್ ಟೆಸ್ಟ್ |
| ಹೆಚ್ಚುವರಿ ಮಾಹಿತಿ | ನೇಮಕಾತಿ |
ಯಾವುದೇ Competetive Exams ಗಳಲ್ಲಿ ಯಶಸ್ಸನ್ನು ಸಾಧಿಸಲು ಕಠಿಣ ಪರಿಶ್ರಮದ ಜೊತೆಯಲ್ಲಿ ಸರಿಯಾದ ಕಾರ್ಯಯೋಜನೆ, ವೇಳಾಪಟ್ಟಿ, ಸಮಯ ನಿರ್ವಹಣೆ, ನಿರಂತರ ಮರು ಅಧ್ಯಯನ, ನಿರಂತರ ಮೌಲ್ಯಮಾಪನ ಹಾಗೂ ಅಧ್ಯಯನ ಮಾಡುವುದು ಅಗತ್ಯವಾಗಿದೆ
ಪರೀಕ್ಷೆ ತಯಾರಿಯನ್ನು ಆರಂಭಿಸುವ ಮೊದಲು ಪಠ್ಯಕ್ರಮವನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ವಿಷಯವಾರು ಅಧ್ಯಯನ ಮಾಡಿದರೆ ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯವಾಗುತ್ತದೆ
ಈ ಲೇಖನದಲ್ಲಿ ನಾವು ಒಂದು Exams ಅನ್ನು ಯಶಸ್ವಿಯಾಗಿ ಎದುರಿಸಲು ಬೇಕಾಗುವ ಎಲ್ಲಾ ಅಧ್ಯಯನದ ಯೋಜನೆ, 90 ದಿನಗಳ ವೇಳಾಪಟ್ಟಿ, ವಿಷಯವಾರು ಸಿಲಬಸ್, ಅಧ್ಯಯನದ ವಿಧಾನ, ಪರೀಕ್ಷಾ ಸಲಹೆ ಪುಸ್ತಕಗಳ ಪಟ್ಟಿ, ಹಾಗೂ ಅಭ್ಯರ್ಥಿಗಳು ಮಾಡುವ ಸಾಮಾನ್ಯ ತಪ್ಪುಗಳನ್ನು ಗಮನದಲ್ಲಿಟ್ಟುಕೊಂಡು ಬರೆದಿರುತ್ತವೆ
ಇದನ್ನು ಸಂಪೂರ್ಣವಾಗಿ ಓದುವುದರಿಂದ ನಿಮ್ಮ ಯಶಸ್ಸಿನ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳಬಹುದು
ಉಲ್ಲೇಖ:
ಅಭ್ಯರ್ಥಿಗಳ ಅಧಿಕೃತ ನೇಮಕಾತಿ ಅಧಿಸೂಚನೆಯನ್ನು ಪರಿಶೀಲಿಸಲಾಗಿದೆ.
Related Articles:
ಲೇಖಕರ ಟಿಪ್ಪಣಿ (Author Note): ನಮಸ್ಕಾರ ಸ್ನೇಹಿತರೇ, ನಾನು ಸರ್ಕಾರಿ ಉದ್ಯೋಗಗಳು, ಸ್ಪರ್ಧಾತ್ಮಕ ಪರೀಕ್ಷೆಗಳು, ವೃತ್ತಿ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು ಹಾಗೂ ಪ್ರಮುಖ ಸುದ್ದಿಗಳ ಕುರಿತು ವಿಶ್ವಾಸಾರ್ಹ ಮತ್ತು ಉಪಯುಕ್ತ ಮಾಹಿತಿಯನ್ನು ಕನ್ನಡದಲ್ಲಿ ಹಂಚಿಕೊಳ್ಳುವ ಬ್ಲಾಗರ್ ಆಗಿದ್ದೇನೆ. ಓದುಗರಿಗೆ ನಿಖರ, ಸುಲಭ ಮತ್ತು ಸಮಯೋಚಿತ ಮಾಹಿತಿಯನ್ನು ತಲುಪಿಸುವುದು ನನ್ನ ಪ್ರಮುಖ ಉದ್ದೇಶವಾಗಿದೆ.
—***—
ಲೇಖಕರ ಕುರಿತು (About Author): ನಮಸ್ತೆ ಗೆಳೆಯರೇ, ನಾಣು ರಂಗನಾಥ ಬಿ ಜಿ, ನಾನು ಕಳೆದ 3 ವರ್ಷಗಳಿಂದ ಸರ್ಕಾರಿ ಉದ್ಯೋಗ ಮಾಹಿತಿ, ಪರೀಕ್ಷಾ ತಯಾರಿ ಸಲಹೆಗಳು, ವೃತ್ತಿ ಮಾರ್ಗದರ್ಶನ ಹಾಗೂ ಸರ್ಕಾರಿ ಯೋಜನೆಗಳ ಕುರಿತು ಲೇಖನಗಳನ್ನು ಬರೆಯುವ ಕನ್ನಡ ಕಂಟೆಂಟ್ ಕ್ರಿಯೇಟರ್. ಅಧಿಕೃತ ಮಾಹಿತಿಯನ್ನು ಸರಳ ಭಾಷೆಯಲ್ಲಿ ಓದುಗರಿಗೆ ತಲುಪಿಸುವ ಮೂಲಕ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಸಹಾಯ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ.
—***—
Disclaimer: ಈ ವೆಬ್ಸೈಟ್ NewsbyMr ನಲ್ಲಿ ಪ್ರಕಟವಾಗುವ ಮಾಹಿತಿಯನ್ನು ಅಧಿಕೃತ ಅಧಿಸೂಚನೆಗಳು ಹಾಗೂ ವಿಶ್ವಾಸಾರ್ಹ ಮೂಲಗಳ ಆಧಾರದ ಮೇಲೆ ಸಿದ್ಧಪಡಿಸಲಾಗುತ್ತದೆ. ಆದಾಗ್ಯೂ, ಯಾವುದೇ ಅರ್ಜಿ ಸಲ್ಲಿಸುವ ಅಥವಾ ನಿರ್ಧಾರ ಕೈಗೊಳ್ಳುವ ಮೊದಲು ಸಂಬಂಧಿತ ಇಲಾಖೆಯ ಅಧಿಕೃತ ವೆಬ್ಸೈಟ್ ಹಾಗೂ ಅಧಿಸೂಚನೆಯನ್ನು ಪರಿಶೀಲಿಸುವುದು ಓದುಗರ ಜವಾಬ್ದಾರಿಯಾಗಿದೆ.