Telegram Join Our Telegram WhatsApp Join Our WhatsApp

Best Exams Tips For Central Bank Of India Apprentice 2026: ಸಂಪೂರ್ಣ ಪಠ್ಯಕ್ರಮ, ಪರೀಕ್ಷಾ ವಿಧಾನ ಮತ್ತು ಅತ್ಯುತ್ತಮ 90 ದಿನಗಳ ಅಧ್ಯಯನ ಯೋಜನೆ

ಈ Exams Tips ಅನುಸರಿಸಿ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ಅಪ್ರೆಂಟಿಸ್‌ ಹುದ್ದೆ ಪರೀಕ್ಷೆಗೆ ತಯಾರಾಗಿ

ಭಾರತದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯುವುದು ಲಕ್ಷಾಂತರ ಜನರ ಕನಸಾಗಿದ್ದು ಸರ್ಕಾರಿ ಬ್ಯಾಂಕ್ ನಲ್ಲಿ ಕೆಲಸ ಮಾಡುವ ಅವಕಾಶವನ್ನು ಎಲ್ಲರೂ ಕಾಯುತ್ತಾರೆ ಈ ಉದ್ಯೋಗಗಳಲ್ಲಿ ಉತ್ತಮ ವೇತನ ಪ್ರತಿ ಜೀವನದ ಬೆಳವಣಿಗೆ ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಕೆಲಸದ ಅನುಭವವನ್ನು ನೀಡುತ್ತದೆ ಇದೇ ಕಾರಣಕ್ಕಾಗಿ ಪ್ರತಿ ವರ್ಷವೂ ವಿವಿಧ ಸರಕಾರಿ ಬ್ಯಾಂಕುಗಳು ಅಪ್ರೆಂಟಿಸ್ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆಯನ್ನು ಪ್ರಕಟಿಸುತ್ತವೆ ಅವುಗಳಲ್ಲಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಒಂದಾಗಿದ್ದು ಈ ಬ್ಯಾಂಕು ಸಹ ಅಪ್ರೆಂಟಿಸ್ ನೇಮಕಾತಿಯನ್ನು ಪ್ರಕಟಗೊಳಿಸಿದೆ

ಈ ಅಪ್ರೆಂಟಿಸ್ ನೇಮಕಾತಿ ಮೂಲಕ ಆಯ್ಕೆಯಾಗುವ ಅಪ್ರೆಂಟಿಸ್ ಅಭ್ಯರ್ಥಿಗಳಿಗೆ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ ತರಬೇತಿಯನ್ನು ಪಡೆದು ಬ್ಯಾಂಕಿಂಗ್ ಕಾರ್ಯ ವಿಧಾನವನ್ನು ನೇರವಾಗಿ ಕಲಿಯುವ ಅವಕಾಶವನ್ನು ಒದಗಿಸಲಾಗುತ್ತಿದೆ ಅವಧಿಯಲ್ಲಿ ಅಪ್ರೆಂಟಿಸ್ ಗಳು ಗ್ರಾಹಕ ಸೇವೆಗಳು, ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ, ಖಾತೆಗಳ ನಿರ್ವಹಣೆ, ಸಾಲ ನೀಡುವ ಪ್ರಕ್ರಿಯೆ, ಹಣಕಾಸು ಸಂಬಂಧಿಸಿದ ವ್ಯವಹಾರಗಳು ಸೇರಿದಂತೆ ಬ್ಯಾಂಕಿನಲ್ಲಿ ದಿನನಿತ್ಯ ಆಗುವ ಕೆಲಸಗಳ ಬಗ್ಗೆ ಪ್ರಾಯೋಗಿಕವಾಗಿ ಅನುಭವ ಪಡೆಯುತ್ತಾರೆ ಈ ಅನುಭವ ಭವಿಷ್ಯದಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಶಾಶ್ವತ ಉದ್ಯೋಗವನ್ನು ಪಡೆಯಲು ಸಹಾಯ ಮಾಡುತ್ತವೆ

ಈ ಅಪ್ರೆಂಟಿಸ್ ಹುದ್ದೆಗಳ ಅವಕಾಶವನ್ನು ಪಡೆಯಲು ಅಭ್ಯರ್ಥಿಗಳು ಮೊದಲು ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಆನ್ಲೈನ್ ಮೂಲಕ ತೆಗೆದುಕೊಂಡು ಈ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಬೇಕಾಗುತ್ತದೆ ಆದ್ದರಿಂದ ಪ್ರಸ್ತುತ ಲೇಖನದಲ್ಲಿ ಸಂಪೂರ್ಣ ಸಿಲಬಸ್, ಪ್ರಶ್ನೆಗಳ ಮಾದರಿ, ವಿಷಯವಾರು ಅಂಕಗಳ ಮಾಹಿತಿ, ಸಮಯ ನಿರ್ವಹಣೆ ಮತ್ತು ಸರಿಯಾದ ತಯಾರಿ ವಿಧಾನಗಳನ್ನು ನೀಡಿದ್ದೇವೆ ಆದ್ದರಿಂದ ಈ ಲೇಖನವನ್ನು ಸಂಪೂರ್ಣವಾಗಿ ಓದಿ Exams Tips ಗಳನ್ನು ಅರ್ಥೈಸಿಕೊಂಡು ಪರೀಕ್ಷೆ ತಯಾರಿಯನ್ನು ಆರಂಭಿಸಿ

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್ ಪರೀಕ್ಷೆ ಎಂದರೆ ಏನು

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್ ನೇಮಕಾತಿಯು ತರಬೇತಿ ಆಧಾರಿತ ನೇಮಕಾತಿಯಾಗಿದ್ದು ಈ ನೇಮಕಾತಿಯ ಉದ್ದೇಶವು ಯುವ ಪದವೀಧರರಿಗೆ ಬ್ಯಾಂಕಿಂಗ್ ಕ್ಷೇತ್ರದ ಪ್ರಾಯೋಗಿಕ ಜ್ಞಾನವನ್ನು ಹಾಗೂ ಕಾರ್ಯ ಅನುಭವವನ್ನು ಒದಗಿಸುವುದಾಗಿದೆ

ಆಯ್ಕೆಯಾದ ಅಭ್ಯರ್ಥಿಗಳಿಗೆ ಸದರಿ ಬ್ಯಾಂಕಿನ ವಿವಿಧ ಭಾಗಗಳಲ್ಲಿ ತರಬೇತಿಯನ್ನು ನೀಡಲಾಗುತ್ತದೆ ಈ ತರಬೇತಿ ಅವಧಿಯಲ್ಲಿ ಅಭ್ಯರ್ಥಿಗಳು ಬ್ಯಾಂಕ್ ಸಿಬ್ಬಂದಿಗಳೊಂದಿಗೆ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಿ ಬ್ಯಾಂಕಿಂಗ್ ಸೇವೆಗಳ ಬಗ್ಗೆ ಸಮಗ್ರ ಮಟ್ಟದಲ್ಲಿ ಅರಿವನ್ನು ಪಡೆದುಕೊಳ್ಳುತ್ತಾರೆ

ಈ ತರಬೇತಿಯ ಪ್ರಮುಖ ಉದ್ದೇಶಗಳು

  • ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಕಾರ್ಯವಿಧಾನವನ್ನು ಪ್ರಾಯೋಗಿಕವಾಗಿ ತಿಳಿದುಕೊಳ್ಳುವುದು
  • ಗ್ರಾಹಕರಿಗೆ ಸೇವಕೌಶಲ್ಯವನ್ನು ಅಭಿವೃದ್ಧಿಪಡಿಸುವುದು
  • ಡಿಜಿಟಲ್ ಬ್ಯಾಂಕಿಂಗ್ ಸೇವೆಗಳ ಬಳಕೆಯನ್ನು ಗ್ರಾಹಕರಿಗೆ ತಿಳಿಸುವುದು
  • ಹಣಕಾಸು ವ್ಯವಹಾರ ನಿರ್ವಹಣೆಯ ಬಗ್ಗೆ ಅನುಭವವನ್ನು ಪಡೆಯುವುದು
  • ಭವಿಷ್ಯದ ಬ್ಯಾಂಕಿಂಗ್ ಉದ್ಯೋಗಗಳಿಗೆ ಅಭ್ಯರ್ಥಿಗಳನ್ನು ಸಿದ್ದಗೊಳಿಸುವುದು

ಪರೀಕ್ಷೆಯ ಸಿಲಬಸ್ ಅನ್ನು ತಿಳಿದುಕೊಳ್ಳುವುದು ಏಕೆ ಮುಖ್ಯ

ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ಆರಂಭಿಸುವ ಮೊದಲು Exams Tips ಗಳನ್ನು ಗಮನಿಸದೇ ಯಾವ ವಿಷಯಗಳನ್ನು ಓದಬೇಕು ಎಂಬುದರ ಬಗ್ಗೆ ನಿಖರವಾದ ಮಾಹಿತಿಯನ್ನು ಹೊಂದುವುದಿಲ್ಲ ಇದರ ಪರಿಣಾಮವಾಗಿ ಸಮಯವನ್ನು ಸರಿಯಾಗಿ ಮತ್ತು ವ್ಯವಸ್ಥಿತವಾಗಿ ಬಳಸಿಕೊಳ್ಳಲಾಗದೆ ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಯನ್ನು ಕಡಿಮೆ ಮಾಡಿಕೊಳ್ಳುತ್ತಾರೆ

ಸಿಲಬಸ್ ಮತ್ತು Exams Tips ಗಳನ್ನು ಮುಂಚಿತವಾಗಿ ಅಧ್ಯಯನ ಮಾಡುವುದರಿಂದ ಈ ಪ್ರಯೋಜನಗಳನ್ನು ಪಡೆಯಬಹುದು

  • ಯಾವ ವಿಷಯಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂಬುದನ್ನು ತಿಳಿದುಕೊಳ್ಳಬಹುದು
  • ನಿಗದಿತ ಮಿತಿಯ ಸಮಯವನ್ನು ಪರಿಣಾಮಕಾರಿಯಾಗಿ ಯೋಜಿಸಬಹುದು
  • ಅನಗತ್ಯ ವಿಷಯಗಳನ್ನು ಓದುವ ಸಮಯ ವ್ಯರ್ಥವಾಗುವುದಿಲ್ಲ
  • ಮಾಕ್‌ ಟೆಸ್ಟ್‌ ಗಳಲ್ಲಿ ಉತ್ತಮ ಪ್ರದರ್ಶನವನ್ನು ಕಂಡುಕೊಳ್ಳಬಹುದು
  • ಆತ್ಮವಿಶ್ವಾಸ ಮಟ್ಟದಲ್ಲಿ ಹೆಚ್ಚಳ
  • ಪರೀಕ್ಷೆಯಲ್ಲಿ ವೇಗ ಮತ್ತು ನಿಖರತೆಯನ್ನು ಸಾಧಿಸಬಹುದು

ಸಂಪೂರ್ಣ ಸಿಲಬಸ್ ಅನ್ನು ತಿಳಿದುಕೊಂಡು ಸ್ಪಷ್ಟ ಅರಿವನ್ನು ಪಡೆದುಕೊಳ್ಳುವುದು ಪರೀಕ್ಷಾ ಯಶಸ್ಸಿನಲ್ಲಿ ಮೊದಲ ಹೆಜ್ಜೆಯಾಗಿದೆ

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್ ಪರೀಕ್ಷೆಯ ಮಾದರಿ

ಈ ಪರೀಕ್ಷೆಯು ಸಂಪೂರ್ಣವಾಗಿ ಆನ್ಲೈನ್ ಮೂಲಕ ಕಂಪ್ಯೂಟರ್ ಆಧಾರಿತ ಪರೀಕ್ಷೆ ರೀತಿ ನಡೆಯುತ್ತದೆ ಅಭ್ಯರ್ಥಿಗಳು ಕಂಪ್ಯೂಟರ್ ನಲ್ಲಿ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ ಈ ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆಗಳು ಇರುತ್ತವೆ

ಈ ಪರೀಕ್ಷೆಯಲ್ಲಿ ಒಟ್ಟು 100 ಪ್ರಶ್ನೆಗಳನ್ನು ಕೇಳಲಾಗುತ್ತದೆ ಪ್ರತಿಯೊಂದು ಪ್ರಶ್ನೆಗೂ ಒಂದು ಅಂಕವನ್ನು ನಿಗದಿಪಡಿಸಲಾಗಿದ್ದು 100 ಅಂಕಗಳ ಪರೀಕ್ಷೆಯನ್ನು ಈ ಅಪ್ರೆಂಟಿಸ್ ನೇಮಕಾತಿಯಲ್ಲಿ ನಡೆಸಲಾಗುತ್ತದೆ

ವಿಷಯವಾರು ಪ್ರಶ್ನೆಗಳ ಹಂಚಿಕೆ

ವಿಷಯ  ಒಟ್ಟು  ಪ್ರಶ್ನೆಗಳು ಒಟ್ಟು  ಅಂಕಗಳು
ಸಾಮಾನ್ಯ / ಆರ್ಥಿಕ ಅರಿವು 20 20
ಪರಿಮಾಣಾತ್ಮಕ ಹಾಗೂ ತಾರ್ಕಿಕ ಸಾಮರ್ಥ್ಯ 20 20
ಕಂಪ್ಯೂಟರ್ ಜ್ಞಾನ 20 20
ಸಾಮಾನ್ಯ ಇಂಗ್ಲಿಷ್ 20 20
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಉತ್ಪನ್ನಗಳು ಮತ್ತು ಸೇವೆಗಳು 20 20
ಒಟ್ಟು 100 100

 

ಪರೀಕ್ಷೆಯ ಪ್ರಮುಖ ವಿವರಗಳು

ವಿವರ ಮಾಹಿತಿ
ಪರೀಕ್ಷೆಯ ವಿಧಾನ ಆನ್‌ಲೈನ್ (CBT) (ಕಂಪ್ಯೂಟರ್‌ ಆಧಾರಿತ ಪರೀಕ್ಷೆ)
ಪ್ರಶ್ನೆಗಳ ಪ್ರಕಾರ ಬಹು ಆಯ್ಕೆ ಪ್ರಶ್ನೆಗಳು (MCQs)
ಒಟ್ಟು ಪ್ರಶ್ನೆಗಳು 100 ಪ್ರಶ್ನೆಗಳು
ಒಟ್ಟು ಅಂಕಗಳು 100 ಅಂಕಗಳು
ಪರೀಕ್ಷೆಯ ಅವಧಿ 60 ನಿಮಿಷಗಳು
ಪ್ರತಿ ಪ್ರಶ್ನೆಗೆ ಅಂಕ 1 ಅಂಕ
ನಕಾರಾತ್ಮಕ ಅಂಕ ಇಲ್ಲ
ಪರೀಕ್ಷೆಯ ಭಾಷೆ ಸಾಮಾನ್ಯ ಇಂಗ್ಲಿಷ್ ವಿಭಾಗವನ್ನು ಹೊರತುಪಡಿಸಿ ಹಿಂದಿ ಮತ್ತು ಇಂಗ್ಲಿಷ್ (ದ್ವಿಭಾಷಾ ವಿಧಾನ)

 

ನೆಗೆಟಿವ್ ಮಾರ್ಕಿಂಗ್ ಇಲ್ಲ‌, ಅಭ್ಯರ್ಥಿಗಳಿಗೆ ಇದು ದೊಡ್ಡ ಅನುಕೂಲ

ಈ ಪರೀಕ್ಷೆಯ ಅತ್ಯಂತ ಪ್ರಮುಖ ಅಂಶವೆಂದರೆ ಈ ಪರೀಕ್ಷೆಯಲ್ಲಿ ಯಾವುದೇ ಋಣಾತ್ಮಕ ಮೌಲ್ಯಮಾಪನ ಇರುವುದಿಲ್ಲ

ಸಾಮಾನ್ಯವಾಗಿ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತಪ್ಪು ಉತ್ತರಗಳಿಗೆ ನಿರ್ದಿಷ್ಟ ಪಡಿಸಿದ ಅಂಕಗಳನ್ನು ಕಡಿತ ಮಾಡಲಾಗುತ್ತದೆ ಆದರೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿಯ ಅಪ್ರೆಂಟಿಸ್ ಪರೀಕ್ಷೆಯಲ್ಲಿ ಅಂತಹ ನಿಯಮ ಇರುವುದಿಲ್ಲ

ನೆಗೆಟಿವ್ ಮಾರ್ಕಿಂಗ್ ಇಲ್ಲದಿರುವುದರಿಂದ ಅಭ್ಯರ್ಥಿಗಳಿಗೆ ದೊರೆಯುವ ಪ್ರಯೋಜನಗಳು

  • ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಅವಕಾಶ ಸಿಗುತ್ತದೆ
  • ಉತ್ತರ ತಿಳಿಯದಿದ್ದರೂ ಊಹಾತ್ಮಕ ಉತ್ತರಗಳನ್ನು ನೀಡಬಹುದು
  • ಅಂಕ ಕಳೆದುಕೊಳ್ಳುವ ಭಯ ಕಡಿಮೆ ಇರುತ್ತದೆ
  • ಹೆಚ್ಚಿನ ಪ್ರಶ್ನೆಗಳನ್ನು ಪ್ರಯತ್ನಿಸುವ ಮೂಲಕ ಒಟ್ಟು ಅಂಕಗಳನ್ನು ಹೆಚ್ಚಿಸಿಕೊಳ್ಳಬಹುದು
  • ಅತಿಯಾದ ಊಹೆ ಮಾಡುವುದಕ್ಕಿಂತ ಸಮಯವನ್ನು ಸರಿಯಾಗಿ ಬಳಸಿಕೊಂಡು ಮೊದಲು ಸುಲಭ ಪ್ರಶ್ನೆಗಳಿಗೆ ಉತ್ತರಿಸಿ ನಂತರ ಊಹಾತ್ಮಕ ಪ್ರಶ್ನೆಗಳಿಗೆ ಉತ್ತರವನ್ನು ನೀಡಬಹುದು

 

60 ನಿಮಿಷಗಳಲ್ಲಿ 100 ಪ್ರಶ್ನೆಗಳಿಗೆ ಉತ್ತರ, ಸಮಯ ನಿರ್ವಹಣೆ ಏಕೆ ಮುಖ್ಯ

ಈ ಪರೀಕ್ಷೆಯ ಮತ್ತೊಂದು ಪ್ರಮುಖ ಸವಾಲು ಎಂದರೆ ಕೇವಲ 60 ನಿಮಿಷಗಳಲ್ಲಿ 100 ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ ಅಂದರೆ ಪ್ರತಿ ಪ್ರಶ್ನೆಗೆ ಅಂದಾಜು 36 ಸೆಕೆಂಡುಗಳಿಗಿಂತ ಕಡಿಮೆ ಸಮಯ ಮಾತ್ರ ಲಭ್ಯವಾಗಿರುತ್ತದೆ ಆದುದರಿಂದ ಈ ಕೆಳಕಂಡ Exams Tips ಅಂಶಗಳನ್ನು ಗಮನಿಸಿ

  • ಸುಲಭವಾದ ಪ್ರಶ್ನೆಗಳಿಗೆ ಮೊದಲು ಉತ್ತರವನ್ನು ನೀಡಿ
  • ಕಷ್ಟವಾದ ಪ್ರಶ್ನೆಗಳ ಮೇಲೆ ಹೆಚ್ಚು ಸಮಯ ನೀಡಬೇಡಿ
  • ಕೊನೆಯಲ್ಲಿ ಸಮಯ ಉಳಿದಿದ್ದರೆ ಉತ್ತರಗಳ ಮರುಪರಿಶೀಲನೆ ಮಾಡಿ
  • ಪರೀಕ್ಷೆ ತಯಾರಿ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಾಕ್ ಟೆಸ್ಟ್ ಗಳನ್ನು ಬರೆಯುವುದರ ಮೂಲಕ ಸಮಯ ನಿರ್ವಹಣೆಯನ್ನು ಕಲಿತುಕೊಳ್ಳಿ

ಪರೀಕ್ಷೆಯಲ್ಲಿ ಕೇಳಲಾಗುವ 5 ಪ್ರಮುಖ ವಿಷಯಗಳು

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್ ನೇಮಕಾತಿಯ ಹುದ್ದೆಗಳಿಗೆ ನಡೆಸುವ ಪರೀಕ್ಷೆಯಲ್ಲಿ ಪ್ರಶ್ನೆಗಳು ಮುಖ್ಯವಾಗಿ ಈ ಕೆಳಕಂಡ ಐದು ವಿಭಾಗಗಳಿಂದ ಬರುತ್ತದೆ. Exams Tips ಗಳನ್ನು ತಿಳಿದುಕೊಳ್ಳುವುದರಿಂದ ಇವುಗಳ ಸಂಪೂರ್ಣ ಮಾಹಿತಿ ಪಡೆಯಬಹುದು ಅವುಗಳೆಂದರೆ

ಸಾಮಾನ್ಯ ಹಾಗೂ ಆರ್ಥಿಕ ಅರಿವು

ಈ ವಿಭಾಗದಲ್ಲಿ ರಾಜ್ಯ, ದೇಶ  ಹಾಗೂ ಅಂತಾರಾಷ್ಟ್ರೀಯ ವಿದ್ಯಮಾನಗಳಿಗೆ ಸಂಬಂಧಿಸಿದಂತೆ ಪ್ರಚಲಿತ ಘಟನೆಗಳು, ಭಾರತೀಯ ಆರ್ಥಿಕತೆ, ಬ್ಯಾಂಕಿಂಗ್ ಜಾಗೃತಿ, ಸರ್ಕಾರಿ ಯೋಜನೆಗಳು ಹಾಗೂ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ

ಪರಿಮಾಣಾತ್ಮಕ ಮತ್ತು ತಾರ್ಕಿಕ ಸಾಮರ್ಥ್ಯ

ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ಸಂಖ್ಯಾ ವಿಶ್ಲೇಷಣೆ, ಫಜಲ್‌ ಗಳು, ಲಾಜಿಕಲ್ ರಿಜನಿಂಗ್ ಹಾಗೂ ಸಮಸ್ಯೆ ಪರಿಹಾರ ಸಾಮರ್ಥ್ಯವನ್ನು ಇಲ್ಲಿ ಪರೀಕ್ಷಿಸಲಾಗುತ್ತದೆ

ಕಂಪ್ಯೂಟರ್ ಜ್ಞಾನ

ಕಂಪ್ಯೂಟರ್ ಮೂಲಭೂತ ಅಂಶಗಳು‌, ಮೈಕ್ರೋಸಾಫ್ಟ್ ಆಫೀಸ್, ನೆಟ್ವರ್ಕಿಂಗ್, ಇಂಟರ್ನೆಟ್ ಮತ್ತು ಸೈಬರ್ ಭದ್ರತೆ ಕುರಿತಂತೆ ಪ್ರಶ್ನೆಗಳು ಇಲ್ಲಿ ಬರುತ್ತವೆ

ಸಾಮಾನ್ಯ ಇಂಗ್ಲಿಷ್

ವ್ಯಾಕರಣ, ಪದ ಸಂಪತ್ತು, ವಾಕ್ಯ ರಚನೆ, ಓದುವಿಕೆ ಮತ್ತು ಭಾಷಾ ಕೌಶಲ್ಯವನ್ನು ಈ ವಿಭಾಗದಲ್ಲಿ ಪ್ರಶ್ನೆಗಳ ಮೂಲಕ ಕೇಳಲಾಗುತ್ತದೆ

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಉತ್ಪನ್ನಗಳು ಮತ್ತು ಸೇವೆಗಳು

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ನೀಡುವ ಉಳಿತಾಯ ಖಾತೆಗಳು, ಸಾಲಗಳು, ವಿಮಾ ಉತ್ಪನ್ನಗಳು, ಸರ್ಕಾರಿ ಯೋಜನೆಗಳು ಹಾಗೂ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳ ಕುರಿತು ಇಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತದೆ

 

ಯಶಸು ಪಡೆಯಲು ಸರಿಯಾದ ಅಧ್ಯಯನ ಯೋಜನೆ ಅಗತ್ಯ

ಬಹುತೇಕ ಅಭ್ಯರ್ಥಿಗಳು Exams Tips ತಿಳಿಯದೇ ಹೆಚ್ಚು ಸಮಯ ಓದಿದ್ದರೆ ನಾವು ಪರೀಕ್ಷೆಯಲ್ಲಿ ಯಶಸ್ಸನ್ನು ಕಾಣಬಹುದೆಂದು ಭಾವಿಸುತ್ತಾರೆ ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ Exams Tips ತಿಳಿದುಕೊಂಡು ಎಷ್ಟು ಸಮಯ ಓದುತ್ತಿರಿ ಎಂಬುದಕ್ಕಿಂತ ಎಷ್ಟು ಪರಿಣಾಮಕಾರಿಯಾಗಿ ಓದುತ್ತಿರಿ ಎಂಬುದು ಮುಖ್ಯವಾಗಿರುತ್ತದೆ

ಉತ್ತಮವಾದ ಅಧ್ಯಯನ ಯೋಜನೆಗಾಗಿ ಈ ಕೆಳಕಂಡ Exams Tips ಅನುಸರಿಸಿ

  • Exams Tips ಮೂಲಕ ಸಂಪೂರ್ಣ ಸಿಲಬಸ್ ಅನ್ನು ಮೊದಲು ಅರ್ಥ ಮಾಡಿಕೊಳ್ಳಿ
  • ವಿಷಯವಾರು ಸಮಯ ಹಂಚಿಕೆ ಯೋಚಿಸಿಕೊಳ್ಳಿ
  • ಪ್ರತಿದಿನ ಕನಿಷ್ಠ ಒಂದು ವಿಷಯವನ್ನು ಸಂಪೂರ್ಣವಾಗಿ ಅಭ್ಯಾಸ ಮಾಡುವುದು
  • ವಾರಕ್ಕೊಮ್ಮೆ ಸಂಪೂರ್ಣ ಮಾಕ್ ಟೆಸ್ಟ್ ಅನ್ನು ಬರೆಯುವುದು
  • ತಪ್ಪಾದ ಪ್ರಶ್ನೆಗಳನ್ನು ವಿಶ್ಲೇಷಿಸಿ ಅದನ್ನು ಅಧ್ಯಯನ ಮಾಡಿ ಸರಿ ಮಾಡಿಕೊಳ್ಳುವುದು
  • ಪ್ರತಿದಿನ 45 ರಿಂದ 50 ನಿಮಿಷಗಳನ್ನು ಪ್ರಚಲಿತ ವಿದ್ಯಮಾನಗಳಿಗೆ ಮೀಸಲಿಡುವುದು
  • ಬ್ಯಾಂಕಿಂಗ್ ಮತ್ತು ಆರ್ಥಿಕ ಪದಗಳ ಪ್ರತ್ಯೇಕ ಟಿಪ್ಪಣಿಯನ್ನು ತಯಾರಿಸಿ ಅಧ್ಯಯನ ಮಾಡುವುದು

Exams Tips ಮೂಲಕ ಸಂಪೂರ್ಣ ಸಿಲಬಸ್‌

ಪರೀಕ್ಷೆಗೆ ಸಂಬಂಧಪಟ್ಟ ಸಂಪೂರ್ಣ ಸಿಲಬಸ್ ಅನ್ನು ಈ ಕೆಳಗೆ ನೀಡಲಾಗಿದೆ. ಈ ಮಾಹಿತಿಯನ್ನು Exams Tips ಗಳ ರೀತಿಯಲ್ಲಿ ಅಧ್ಯಯನ ಮಾಡಿದರೆ ಪರೀಕ್ಷೆಯಲ್ಲಿ ಉತ್ತಮ ಯಶಸ್ಸನ್ನು ಪಡೆದುಕೊಳ್ಳಬಹುದು

ಸಾಮಾನ್ಯ ಹಾಗೂ ಆರ್ಥಿಕ ಅರಿವು

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್ ಪರೀಕ್ಷೆಯಲ್ಲಿರುವ ಸಾಮಾನ್ಯ ಹಾಗೂ ಆರ್ಥಿಕ ಅರಿವು ವಿಭಾಗವು ಅತ್ಯಂತ ಪ್ರಮುಖ ವಿಭಾಗವಾಗಿದ್ದು ಈ ವಿಭಾಗದಲ್ಲಿ ಒಟ್ಟು 20 ಪ್ರಶ್ನೆಗಳನ್ನು ಕೇಳಲಾಗುತ್ತದೆ ಈ ಪ್ರಶ್ನೆಗಳಿಗೆ 20 ಅಂಕಗಳು ಮೀಸಲಾಗಿದ್ದು ಉತ್ತಮ ಅಂಕಗಳನ್ನು ಪಡೆಯಲು ಈ ವಿಭಾಗದಲ್ಲಿ ಕನಿಷ್ಠ 17 ರಿಂದ 18 ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುವ ಗುರಿಯನ್ನು ಹೊಂದಬೇಕು ಸಾಧ್ಯವಾದಷ್ಟು 20 ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡಲು ಪ್ರಯತ್ನಿಸಿ ಮತ್ತು ಸರಿಯಾದ Exams Tips ಗಳನ್ನು ಅರ್ಥಮಾಡಿಕೊಳ್ಳಿ

ಈ ವಿಭಾಗದಲ್ಲಿ ಗಣಿತ ಲೆಕ್ಕಾಚಾರ ಮಾಡುವ ಅಗತ್ಯವಿರುವುದಿಲ್ಲ ಸರಿಯಾದ ಮಾಹಿತಿ ಪ್ರಸ್ತುತ ವಿದ್ಯಮಾನಗಳ ಅರಿವು ಇದ್ದರೆ ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಮೂಲಭೂತ ಜ್ಞಾನ ಇದ್ದರೆ ಸುಲಭವಾಗಿ ಈ ಪ್ರಶ್ನೆಗಳಿಗೆ ಉತ್ತರವನ್ನು ನೀಡಬಹುದಾಗಿರುತ್ತದೆ

ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಚಲಿತ ವಿದ್ಯಮಾನಗಳು

  • ದೇಶದಲ್ಲಿ ನಡೆದ ಪ್ರಮುಖ ಘಟನೆಗಳು
  • ಅಂತರರಾಷ್ಟ್ರೀಯ ಸಮ್ಮೇಳನಗಳು
  • ಹೊಸ ಸರ್ಕಾರಿ ಯೋಜನೆಗಳು
  • ಪ್ರಮುಖ ನೇಮಕಾತಿಗಳು
  • ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ರಾಜ್ಯಪಾಲರ ಸಂಬಂಧಿತ ಮಾಹಿತಿ
  • ಹೊಸ ಕಾನೂನುಗಳು
  • ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಮುಖ ಘೋಷಣೆಗಳು
  • ಪ್ರಮುಖ ಪ್ರಶಸ್ತಿಗಳು
  • ಕ್ರೀಡಾ ಸಾಧನೆಗಳು
  • ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆಗಳು
  • ಬಾಹ್ಯಾಕಾಶ ಸಂಶೋಧನೆ
  • ಪ್ರಮುಖ ದಿನಾಚರಣೆಗಳು

ಭಾರತೀಯ ಆರ್ಥಿಕತೆ

  • ಭಾರತದ ಆರ್ಥಿಕ ವ್ಯವಸ್ಥೆ
  • GDP (Gross Domestic Product)
  • GNP
  • ರಾಷ್ಟ್ರೀಯ ಆದಾಯ
  • ಹಣದುಬ್ಬರ (Inflation)
  • ಹಣದುಬ್ಬರದ ವಿಧಗಳು
  • ನಿರುದ್ಯೋಗ
  • ಆರ್ಥಿಕ ಬೆಳವಣಿಗೆ
  • ಬ್ಯಾಂಕಿಂಗ್ ಕ್ಷೇತ್ರದ ಪಾತ್ರ
  • ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳು
  • ವಾಣಿಜ್ಯ ಬ್ಯಾಂಕ್‌ಗಳ ಕಾರ್ಯಗಳು

ಭಾರತೀಯ ರಿಸರ್ವ್ ಬ್ಯಾಂಕ್

  • RBI ಸ್ಥಾಪನೆಯ ವರ್ಷ
  • RBI ಮುಖ್ಯ ಕಚೇರಿ
  • RBI ಕಾರ್ಯಗಳು
  • ಹಣದುಬ್ಬರ ನಿಯಂತ್ರಣ
  • ಕರೆನ್ಸಿ ಮುದ್ರಣ
  • ಬ್ಯಾಂಕ್‌ಗಳ ಮೇಲ್ವಿಚಾರಣೆ
  • Monetary Policy
  • Repo Rate
  • Reverse Repo Rate
  • CRR
  • SLR
  • ಬ್ಯಾಂಕ್ ರೇಟ್

ಬ್ಯಾಂಕಿಂಗ್ ಜಾಗೃತಿ

  • ಉಳಿತಾಯ ಖಾತೆ (Savings Account)
  • ಚಾಲ್ತಿ ಖಾತೆ (Current Account)
  • ಸ್ಥಿರ ಠೇವಣಿ (Fixed Deposit)
  • ಮರುಕಳಿಸುವ ಠೇವಣಿ (Recurring Deposit)
  • ATM
  • Debit Card
  • Credit Card
  • Cheque
  • Passbook
  • IFSC Code
  • MICR Code
  • KYC
  • Nomination

ಡಿಜಿಟಲ್ ಬ್ಯಾಂಕಿಂಗ್

  • UPI
  • NEFT
  • RTGS
  • IMPS
  • Mobile Banking
  • Internet Banking
  • QR Payment
  • AEPS
  • RuPay Card

ಸರ್ಕಾರದ ಪ್ರಮುಖ ಯೋಜನೆಗಳು

  • ಪ್ರಧಾನ ಮಂತ್ರಿ ಜನಧನ್ ಯೋಜನೆ (PMJDY)
  • ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (PMJJBY)
  • ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY)
  • ಅಟಲ್ ಪಿಂಚಣಿ ಯೋಜನೆ (APY)
  • ಸ್ಟ್ಯಾಂಡ್ ಅಪ್ ಇಂಡಿಯಾ
  • ಸ್ಟಾರ್ಟ್ ಅಪ್ ಇಂಡಿಯಾ
  • ಮುದ್ರಾ ಯೋಜನೆ (PMMY)
  • ಸ್ವಚ್ಛ ಭಾರತ ಅಭಿಯಾನ
  • ಡಿಜಿಟಲ್ ಇಂಡಿಯಾ

ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆ

ಬ್ಯಾಂಕ್‌ಗಳ ವಿಧಗಳು

  • ಸಾರ್ವಜನಿಕ ವಲಯದ ಬ್ಯಾಂಕ್‌ಗಳು
  • ಖಾಸಗಿ ಬ್ಯಾಂಕ್‌ಗಳು
  • ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು (RRB)
  • ಸಹಕಾರಿ ಬ್ಯಾಂಕ್‌ಗಳು
  • ಸಣ್ಣ ಹಣಕಾಸು ಬ್ಯಾಂಕ್‌ಗಳು
  • ಪಾವತಿ ಬ್ಯಾಂಕ್‌ಗಳು

ಪ್ರಮುಖ ವಿಷಯಗಳು

  • ಬ್ಯಾಂಕ್ ವಿಲೀನಗಳು
  • ಬ್ಯಾಂಕ್ ರಾಷ್ಟ್ರೀಯೀಕರಣ
  • NPCI
  • NPA
  • Basel Norms
  • Priority Sector Lending

ಹಣಕಾಸು ಸಂಸ್ಥೆಗಳು

  • RBI
  • NABARD
  • SIDBI
  • EXIM Bank
  • NHB
  • SEBI
  • IRDAI
  • PFRDA

ಬಜೆಟ್ ಮತ್ತು ಆರ್ಥಿಕ ಸಮೀಕ್ಷೆ

  • ಬಜೆಟ್ ಎಂದರೇನು?
  • ಹಣಕಾಸು ಸಚಿವರ ಪಾತ್ರ
  • ಆದಾಯ ಮತ್ತು ವೆಚ್ಚ
  • Fiscal Deficit
  • Revenue Deficit
  • Capital Expenditure
  • Economic Survey

ಪ್ರಮುಖ ದಿನಗಳು ಮತ್ತು ಪ್ರಶಸ್ತಿಗಳು

ಪ್ರಮುಖ ದಿನಗಳು

  • ರಾಷ್ಟ್ರೀಯ ಯುವ ದಿನ
  • ಮಹಿಳಾ ದಿನ
  • ಪರಿಸರ ದಿನ
  • ಯೋಗ ದಿನ
  • ಶಿಕ್ಷಕರ ದಿನ
  • ಗಾಂಧಿ ಜಯಂತಿ

ಪ್ರಶಸ್ತಿಗಳು

  • ಭಾರತ ರತ್ನ
  • ಪದ್ಮ ಪ್ರಶಸ್ತಿಗಳು
  • ಅರ್ಜುನ ಪ್ರಶಸ್ತಿ
  • ದ್ರೋಣಾಚಾರ್ಯ ಪ್ರಶಸ್ತಿ
  • ಜ್ಞಾನಪೀಠ ಪ್ರಶಸ್ತಿ
  • ನೋಬೆಲ್ ಪ್ರಶಸ್ತಿ

ಕ್ರೀಡೆ ವಿಜ್ಞಾನ ಮತ್ತು ತಂತ್ರಜ್ಞಾನ

ಕ್ರೀಡೆ

  • ಒಲಿಂಪಿಕ್ಸ್
  • ಏಷ್ಯನ್ ಗೇಮ್ಸ್
  • ಕಾಮನ್‌ವೆಲ್ತ್ ಗೇಮ್ಸ್
  • ಕ್ರಿಕೆಟ್
  • ಹಾಕಿ
  • ಫುಟ್‌ಬಾಲ್
  • ಬ್ಯಾಡ್ಮಿಂಟನ್

ವಿಜ್ಞಾನ ಮತ್ತು ತಂತ್ರಜ್ಞಾನ

  • ISRO
  • Chandrayaan Mission
  • Aditya-L1
  • Gaganyaan Mission
  • Artificial Intelligence (AI)
  • Quantum Computing
  • Cyber Security

ಭಾರತೀಯ ಸಂವಿಧಾನದ ಮೂಲಭೂತ ಮಾಹಿತಿ

  • ಸಂವಿಧಾನದ ರಚನೆ
  • ಮೂಲಭೂತ ಹಕ್ಕುಗಳು
  • ಮೂಲಭೂತ ಕರ್ತವ್ಯಗಳು
  • ರಾಜ್ಯ ನಿರ್ದೇಶಕ ತತ್ವಗಳು
  • ರಾಷ್ಟ್ರಪತಿ
  • ಉಪರಾಷ್ಟ್ರಪತಿ
  • ಪ್ರಧಾನಮಂತ್ರಿ
  • ಸಂಸತ್ತು
  • ಸುಪ್ರೀಂ ಕೋರ್ಟ್

 

ಈ ವಿಭಾಗದಲ್ಲಿ ಅತ್ಯುತ್ತಮ ಅಧ್ಯಯನ ತಂತ್ರ ಯೋಜನೆ

ಪ್ರತಿದಿನ ಮಾಡಬೇಕಾದ ವಿಷಯಗಳು

  • 30 ನಿಮಿಷಗಳ ಪ್ರಚಲಿತ ವಿದ್ಯಮಾನ ಅಧ್ಯಯನ
  • 20 ನಿಮಿಷ ಬ್ಯಾಕಿಂಗ್‌ ಜಾಗೃತಿ
  • 15 ನಿಮಿಷ ಆರ್ಥಿಕ ವಿಷಯಗಳು
  • 15 ನಿಮಿಷ ರಿವಿಷನ್‌ ಮಾಡುವುದು

ವಾರಕ್ಕೊಮ್ಮೆ ಮಾಡಬೇಕಾದ ವಿಷಯಗಳು

  • ಒಂದು ಪ್ರಚಲಿತ ವಿದ್ಯಾಮಾನದ ಮಾಕ್‌ ಟೆಸ್ಟ್
  • ಬ್ಯಾಂಕಿಂಗ್‌ ಕ್ವಿಜ್
  • ಸರ್ಕಾರಿ ಯೋಜನೆಗಳ ಪುನರಾವರ್ತನೆ
  • RBI ಸಂಬಂಧಿತ ಪ್ರಶ್ನೆಗಳ ಅಭ್ಯಾಸ

Exams Tips: ಈ ವಿಭಾಗದಲ್ಲಿ ತಪ್ಪದೇ ಓದಬೇಕಾದ ವಿಷಯಗಳ ಚೆಕ್ ಲಿಸ್ಟ್

  1. ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಚಲಿತ ವಿದ್ಯಾಮಾನಗಳು
  2. RBI ಮತ್ತು ಹಣಕಾಸು ನೀತಿ
  3. ಬ್ಯಾಂಕಿಂಗ್ ಜಾಗೃತಿ
  4. ಸರ್ಕಾರಿ ಯೋಜನೆಗಳು
  5. ಭಾರತೀಯ ಆರ್ಥಿಕತೆ
  6. ಬಜೆಟ್ ಮತ್ತು ಆರ್ಥಿಕ ಗಣತಿಗಳು
  7. ಹಣಕಾಸು ಸಂಸ್ಥೆಗಳು
  8. ಪ್ರಮುಖ ದಿನಗಳು
  9. ಪ್ರಶಸ್ತಿಗಳು
  10. ಕ್ರೀಡೆ
  11. ವಿಜ್ಞಾನ ಮತ್ತು ತಂತ್ರಜ್ಞಾನ
  12. ಭಾರತೀಯ ಸಂವಿಧಾನದ ಮೂಲ ಮಾಹಿತಿ

ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯಲು ವಿಶೇಷ Exams Tips ಗಳು

  • ಪ್ರತಿದಿನವೂ ಕನಿಷ್ಠ 50 ಪ್ರಚಲಿತ ವಿದ್ಯಮಾನಗಳ ಪ್ರಶ್ನೆಗಳನ್ನು ಅಭ್ಯಾಸ ಮಾಡಿ
  • RBI, SEBI, NABARD, NPCI ಕುರಿತು ಮೂಲಭೂತ ಮಾಹಿತಿಗಳನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡಿ 
  • ಬ್ಯಾಂಕಿಂಗ್ ಸಂಬಂಧಿತ ಹೊಸ ಪದಗಳನ್ನು ಕಲಿತು ಅವುಗಳ ಅರ್ಥವನ್ನು ತಿಳಿದುಕೊಳ್ಳಿ
  • ವಾರಕ್ಕೊಮ್ಮೆ ಸ್ವಯಂ ಪರೀಕ್ಷೆಗಳ ಪ್ರಚಲಿತ ವಿದ್ಯಮಾನಗಳನ್ನು ಪ್ರತ್ಯೇಕವಾಗಿ ಬರೆದುಕೊಂಡು ಸಮಯವಿದ್ದಾಗ ಪುನರಾವರ್ತಿಸಿ
  • ಬ್ಯಾಂಕಿಂಗ್ ಪರೀಕ್ಷೆಗಳ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿ ಇದರಿಂದ ಪ್ರಶ್ನೆಗಳ ಮಾದರಿ ಸುಲಭವಾಗಿ ಅರ್ಥವಾಗುತ್ತದೆ

ಪರಿಮಾಣಾತ್ಮಕ ಸಾಮರ್ಥ್ಯ

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನಡೆಸುವ ಅಪ್ರೆಂಟಿಸ್ ಪರೀಕ್ಷೆಯಲ್ಲಿ ಪರಿಮಾಣಾತ್ಮಕ ಸಾಮರ್ಥ್ಯ ವಿಭಾಗವು ಅಭ್ಯರ್ಥಿಯ ಲೆಕ್ಕಾಚಾರ ಮಾಡುವ ಸಾಮರ್ಥ್ಯ, ಗಣಿತ ಕೌಶಲ್ಯ, ವೇಗ ಹಾಗೂ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ ಈ ವಿಭಾಗದಲ್ಲಿಯೂ ಸಹ 20 ಪ್ರಶ್ನೆಗಳನ್ನು ಕೇಳಲಾಗಿದ್ದು 20 ಅಂಕಗಳು ಇರುತ್ತವೆ. ಸರಿಯಾದ ಅಭ್ಯಾಸ ಮತ್ತು ಸೂತ್ರಗಳಲ್ಲಿಯೂ ಇದ್ದರೆ ಈ ವಿಭಾಗದಲ್ಲಿ ಉತ್ತಮ ಅಂಕಗಳನ್ನು

ಬಹುತೇಕ ವಿದ್ಯಾರ್ಥಿಗಳು ಗಣಿತ ವಿಭಾಗವನ್ನು ಕಠಿಣವೆಂದು ಭಾವಿಸುತ್ತಾರೆ ಆದರೆ ಸರಿಯಾದ Exams Tips ಅನುಸರಿಸಿ ಶಾಲಾ ಮಟ್ಟದ ಮೂಲಭೂತ ಗಣಿತವನ್ನು ಸರಿಯಾಗಿ ಅಧ್ಯಯನ ಮಾಡಿದರೆ ಈ ವಿಭಾಗದಲ್ಲಿ ಹೆಚ್ಚಿನ ಅಂಕವನ್ನು ಪಡೆಯಬಹುದು

ಸಂಖ್ಯಾ ಪದ್ಧತಿ

  • ನೈಸರ್ಗಿಕ ಸಂಖ್ಯೆಗಳು
  • ಪೂರ್ಣ ಸಂಖ್ಯೆಗಳು
  • ಅವಿಭಾಜ್ಯ ಸಂಖ್ಯೆಗಳು
  • ಸಮ ಮತ್ತು ಬೆಸ ಸಂಖ್ಯೆಗಳು
  • LCM ಮತ್ತು HCF
  • ಭಾಗಾಕಾರ ನಿಯಮಗಳು
  • ದಶಮಾಂಶ ಸಂಖ್ಯೆಗಳು
  • ಭಿನ್ನರಾಶಿಗಳು

ಸಂಖ್ಯಾ ಸರಣಿಗಳು

  • Missing Number Series
  • Wrong Number Series
  • Alphabet Series
  • Mixed Series

ಸರಳಿಕರಣ

  • BODMAS
  • Approximation
  • Squares
  • Cubes
  • Square Roots
  • Cube Roots

ಶೇಕಡವಾರು ಪ್ರಶ್ನೆಗಳು

  • Percentage Increase
  • Percentage Decrease
  • Percentage Conversion
  • Percentage Applications

ಲಾಭ ಮತ್ತು ನಷ್ಟ

  • Cost Price
  • Selling Price
  • Profit
  • Loss
  • Discount
  • Marked Price

ಅನುಪಾತ ಮತ್ತು ಪ್ರಮಾಣ

  • Ratio
  • Proportion
  • Partnership
  • Mixture Problems

ಸರಾಸರಿ

  • Average Formula
  • Weighted Average
  • Age Problems
  • Marks Problems

ಸಮಯ ಮತ್ತು ಕೆಲಸ

  • Time and Work
  • Efficiency
  • Pipes and Cistern
  • Work Sharing

ಸಮಯ, ವೇಗ ಮತ್ತು ದೂರ 

  • Train Problems
  • Boat and Stream
  • Relative Speed
  • Average Speed

ದತ್ತಾಂಶ ವಿಶ್ಲೇಷಣೆ

  • Table DI
  • Pie Chart
  • Line Graph
  • Bar Graph
  • Caselet DI

ಗಣಿತ ವಿಭಾಗದಲ್ಲಿ ಹೆಚ್ಚು ಅಂಕಗಳನ್ನು ಪಡೆಯುವ ಉತ್ತಮ ತಂತ್ರಗಳು

  • ಪ್ರತಿನಿತ್ಯ ಕನಿಷ್ಠ 40 ರಿಂದ 50 ಪ್ರಶ್ನೆಗಳನ್ನು ಬಿಡಿಸಿ
  • ಸೂತ್ರಗಳಿಗಾಗಿ ಪ್ರತ್ಯೇಕ ನೋಟ್ಸ್ ಇರಿಸಿಕೊಳ್ಳಿ
  • ಶಾರ್ಟ್ ಕಟ್ ಟ್ರಿಕ್ಸ್ ಗಳನ್ನು ಕಲಿಯಿರಿ
  • ಕ್ಯಾಲ್ಕುಲೇಟರ್ ಬಳಸದೆ ಲೆಕ್ಕ ಹಾಕುವ ಅಭ್ಯಾಸವನ್ನು ರೂಡಿಸಿಕೊಳ್ಳಿ
  • Exams Tips ತಿಳಿದುಕೊಂಡು ಸಮಯ ನಿಗದಿಪಡಿಸಿಕೊಂಡು ಪ್ರಶ್ನೆಗಳನ್ನು ಬಿಡಿಸುವ ಅಭ್ಯಾಸ ಮಾಡಿ

ತಾರ್ಕಿಕ ಸಾಮರ್ಥ್ಯ

ತಾರ್ಕಿಕ ಸಾಮರ್ಥ್ಯ ವಿಭಾಗವು ಅಭ್ಯರ್ಥಿಯ ತಾರ್ಕಿಕ ಚಿಂತನೆ, ಸಮಸ್ಯೆ ಪರಿಹಾರ ಕೌಶಲ್ಯ ಮತ್ತು ವಿಶ್ಲೇಷಣಾ ಸಾಮರ್ಥ್ಯವನ್ನು ಪರೀಕ್ಷಿಸಲು ಈ ವಿಭಾಗದಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತದೆ ಈ ವಿಭಾಗದಲ್ಲಿಯೂ ಸಹ 20 ಪ್ರಶ್ನೆಗಳನ್ನು ನೀಡಲಾಗುತ್ತದೆ

Seating Arrangement

  • Circular Seating
  • Linear Seating
  • Square Arrangement
  • Triangle Arrangement

Puzzle

  • Floor Puzzle
  • Month Puzzle
  • Box Puzzle
  • Scheduling Puzzle

Coding – Decoding

  • Letter Coding
  • Number Coding
  • Symbol Coding
  • Mixed Coding

Blood Relation

  • Father
  • Mother
  • Brother
  • Sister
  • Uncle
  • Aunt
  • Grandfather
  • Cousin

Syllogism

  • Only Conclusion
  • Venn Diagram Method

Inequality

ಉದಾಹರಣೆ:

A > B

B < C

C = D

Direction Sense

  • ಉತ್ತರ
  • ದಕ್ಷಿಣ
  • ಪೂರ್ವ
  • ಪಶ್ಚಿಮ
  • ಎಡ ಮತ್ತು ಬಲ ತಿರುವುಗಳು

Ranking ಮತ್ತು Order

ವ್ಯಕ್ತಿಗಳ ಸ್ಥಾನ ಹಾಗೂ ಕ್ರಮವನ್ನು ಕಂಡುಹಿಡಿಯಬೇಕು.

Alphabet Test

ಅಕ್ಷರಗಳ ಕ್ರಮ, ಸ್ಥಾನ ಹಾಗೂ ಸಂಬಂಧಿತ ಪ್ರಶ್ನೆಗಳು.

Input – Output

ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಕೆಲವೊಮ್ಮೆ ಈ ರೀತಿಯ ಪ್ರಶ್ನೆಗಳು ಬರುತ್ತವೆ.

Statement and Conclusion

ಕೊಟ್ಟಿರುವ ಹೇಳಿಕೆಯಿಂದ ಸರಿಯಾದ ತೀರ್ಮಾನವನ್ನು ಆಯ್ಕೆ ಮಾಡಬೇಕು.

 

ರೀಸನಿಂಗ್ ವಿಭಾಗದಲ್ಲಿ ಉತ್ತಮ ಅಂಕಗಳನ್ನು ಪಡೆಯಲು Exams Tips ಗಳು

  • ಪ್ರತಿದಿನ ಕನಿಷ್ಠ 5 ಫಜಲ್ ಗಳನ್ನು ಅಭ್ಯಾಸ ಮಾಡಿ
  • ಸೀಟಿಂಗ್ ಅರೇಂಜ್ಮೆಂಟ್ ಗೆ ಹೆಚ್ಚು ಸಮಯವನ್ನು ಮೀಸಲಿಡಿ
  • ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಅಧ್ಯಯನ ಮಾಡಿ ಬಿಡಿಸಿ
  • ಮಾಕ್ ಟೆಸ್ಟ್ ಗಳ ಮೂಲಕ ವೇಗ ಹೆಚ್ಚಿಸಿಕೊಳ್ಳಿ
  • ಸುಲಭ ಪ್ರಶ್ನೆಗಳನ್ನು ಮೊದಲು ಉತ್ತರಿಸಿ

 

ಕಂಪ್ಯೂಟರ್ ಜ್ಞಾನ

ಇಂದಿನ ಸಮಯದಲ್ಲಿ ಎಲ್ಲಾ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿಯೂ ಸಹ ಕಂಪ್ಯೂಟರ್ ಜ್ಞಾನವು ಅಗತ್ಯವಾಗಿರುವುದರಿಂದ ಕಂಪ್ಯೂಟರ್ ಮೂಲಭೂತ ಅಂಶಗಳಿಗೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಲಾಗುತ್ತದೆ ಈ ವಿಭಾಗದಲ್ಲಿಯೂ 20 ಪ್ರಶ್ನೆಗಳನ್ನು ಕೇಳಲಾಗುತ್ತದೆ

ಕಂಪ್ಯೂಟರ್ ಮೂಲಭೂತ ಅಂಶಗಳು

  • Computer Introduction
  • Generations of Computer
  • Types of Computer
  • Characteristics of Computer

Input Devices

  • Keyboard
  • Mouse
  • Scanner
  • Joystick
  • Light Pen
  • Barcode Reader

Output Devices

  • Monitor
  • Printer
  • Speaker
  • Projector
  • Plotter

Memory

  • RAM
  • ROM
  • Cache Memory
  • Hard Disk
  • SSD
  • Pen Drive
  • CD/DVD

CPU

  • ALU
  • Control Unit
  • Memory Unit

Hardware

  • Motherboard
  • SMPS
  • Processor
  • Graphic Card
  • Hard Disk

Software

  • System Software
  • Application Software
  • Utility Software

Operating System

  • Windows
  • Linux
  • Android
  • macOS

Operating System ಕಾರ್ಯಗಳು

  • File Management
  • Memory Management
  • Process Management
  • Security

Microsoft Office

MS Word

  • Formatting
  • Tables
  • Mail Merge

MS Excel

  • Formula
  • Functions
  • Charts
  • Sorting
  • Filtering

MS PowerPoint

  • Presentation
  • Animation
  • Slide Design

Internet

  • WWW
  • Browser
  • Search Engine
  • URL
  • Domain
  • Email

Networking

  • LAN
  • MAN
  • WAN
  • Router
  • Switch
  • Modem
  • IP Address

OSI Model

  1. Physical Layer
  2. Data Link Layer
  3. Network Layer
  4. Transport Layer
  5. Session Layer
  6. Presentation Layer
  7. Application Layer

Computer Security

  • Virus
  • Worm
  • Trojan
  • Malware
  • Spyware
  • Firewall
  • Antivirus
  • Phishing
  • Cyber Crime

Digital Banking

  • Mobile Banking
  • Internet Banking
  • UPI
  • QR Code
  • Debit Card
  • Credit Card
  • ATM
  • AEPS
  • IMPS
  • NEFT
  • RTGS

ಕಂಪ್ಯೂಟರ್ ಜ್ಞಾನ ವಿಭಾಗಕ್ಕೆ ಉತ್ತಮ Exams Tips ಗಳು

  • ಪ್ರತಿದಿನ ಕನಿಷ್ಠ ಒಂದು ಗಂಟೆ ಕಂಪ್ಯೂಟರ್ ನೋಟ್ಸ್ ಗಳನ್ನು ಓದಿ
  • ಶಾರ್ಟ್ ಕಟ್ ಕೀಗಳನ್ನು ಕಂಠಪಾಠ ಮಾಡಿ
  • ನೆಟ್ವರ್ಕಿಂಗ್ ಮತ್ತು OSI ಮಾಡೆಲ್ ಬಗ್ಗೆ ಹೆಚ್ಚು ಗಮನವನ್ನು ಹರಿಸಿ
  • ಸೈಬರ್ ಭದ್ರತೆ ಕುರಿತ ಮೂಲಭೂತ ವಿಷಯಗಳನ್ನು ಅಭ್ಯಾಸ ಮಾಡಿಕೊಳ್ಳಿ
  • ಡಿಜಿಟಲ್ ಬ್ಯಾಂಕಿಂಗ್ ಸೇವಗಳ ಕಾರ್ಯವಿಧಾನಗಳ ಬಗ್ಗೆ ತಿಳಿದುಕೊಳ್ಳಿ

ಸಾಮಾನ್ಯ ಇಂಗ್ಲಿಷ್

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿಯ ಅಪ್ರೆಂಟಿಸ್ ಪರೀಕ್ಷೆಯಲ್ಲಿ ಸಾಮಾನ್ಯ ಇಂಗ್ಲಿಷ್ ವಿಭಾಗವು ಅಭ್ಯರ್ಥಿಯ ಭಾಷಾಜ್ಞಾನ‌, ವ್ಯಾಕರಣ ಕೌಶಲ್ಯ ಹಾಗೂ ಓದುವ ಮತ್ತು ಅರ್ಥೈಸುವ ಸಾಮರ್ಥ್ಯದ ಜೊತೆಯಲ್ಲಿ ಪದಸಂಪತ್ತನ್ನು ಪರೀಕ್ಷಿಸುತ್ತದೆ ಈ ವಿಭಾಗದಲ್ಲಿಯೂ ಸಹ 20 ಪ್ರಶ್ನೆಗಳನ್ನು ಕೇಳಲಾಗಿದ್ದು 20 ಅಂಕಗಳಿಗೆ ಅಂಕಗಳ ನಿಗದಿಯಾಗಿರುತ್ತದೆ

ಬಹಳಷ್ಟು ಅಭ್ಯರ್ಥಿಗಳು Exams Tips ತಿಳಿದುಕೊಳ್ಳದೇ ಇಂಗ್ಲಿಷ್ ಜ್ಞಾನ ವಿಭಾಗವನ್ನು ಕಷ್ಟವೆಂದು ಭಾವಿಸುತ್ತಾರೆ ಆದರೆ ಮೂಲಭೂತ ವ್ಯಾಕರಣ, ಪದ ಸಂಪತ್ತು, ಓದುವ ಹವ್ಯಾಸ ಇದ್ದರೆ ಈ ವಿಭಾಗದಲ್ಲಿ ಸುಲಭವಾಗಿ ಉತ್ತಮ ಅಂಕಗಳನ್ನು ಪಡೆಯಬಹುದಾಗಿರುತ್ತದೆ ವಿಶೇಷವಾಗಿ ಪ್ರತಿದಿನವೂ ಸಹ ಸ್ವಲ್ಪ ಸಮಯವನ್ನು ಮೀಸಲಿಟ್ಟು ಅಭ್ಯಾಸ ಮಾಡಿದರೆ ಇಂಗ್ಲಿಷ್ ವಿಭಾಗದಲ್ಲಿ ಉತ್ತಮ ಅಂಕಗಳನ್ನು ಪಡೆಯಬಹುದು.

Cloze Test

  • Grammar Rules ಕಲಿಯಿರಿ.
  • Sentence Formation ಅಭ್ಯಾಸ ಮಾಡಿ.
  • Vocabulary ಹೆಚ್ಚಿಸಿಕೊಳ್ಳಿ.
  • Regular Practice ಮಾಡಿ.

Error Detection

  • Subject–Verb Agreement
  • Tenses
  • Articles
  • Prepositions
  • Conjunctions
  • Pronouns
  • Active & Passive Voice

Sentence Improvement

  • ಸರಿಯಾದ Tense
  • Articles
  • Prepositions
  • Sentence Structure
  • Voice
  • Narration

Fill in the Blanks

  • Vocabulary ಹೆಚ್ಚಿಸಿಕೊಳ್ಳಿ.
  • Grammar Rules ಕಲಿಯಿರಿ.
  • ದಿನಕ್ಕೆ ಕನಿಷ್ಠ 20 Fill in the Blanks ಪ್ರಶ್ನೆಗಳನ್ನು ಬಿಡಿಸಿ.

Para Jumbles

  • Logical Thinking
  • Paragraph Flow
  • Sequence Identification

Vocabulary 

  • Synonyms (ಸಮಾನಾರ್ಥಕ ಪದಗಳು)
  • Antonyms (ವಿರುದ್ಧಾರ್ಥಕ ಪದಗಳು)
  • One Word Substitution
  • Idioms and Phrases
  • Word Usage

Vocabulary ಹೆಚ್ಚಿಸಿಕೊಳ್ಳಲು

  • ದಿನಕ್ಕೆ 10 ಹೊಸ ಪದಗಳನ್ನು ಕಲಿಯಿರಿ.
  • Vocabulary Notebook ಇಟ್ಟುಕೊಳ್ಳಿ.
  • Newspaper Editorial ಓದಿ.
  • ವಾರಕ್ಕೊಮ್ಮೆ ಪುನರಾವರ್ತನೆ ಮಾಡಿ.

ಇಂಗ್ಲೀಷ್ ವಿಭಾಗಕ್ಕೆ ಅತ್ಯುತ್ತಮ Exams Tips ಗಳು

  • ಪ್ರತಿದಿನ 45 ನಿಮಿಷಗಳನ್ನು ಗ್ರಾಮರ್ ಅಭ್ಯಾಸ ಮಾಡಲು ಮೀಸಲಿಡಿ
  • 20 ನಿಮಿಷ ವೊಕ್ಯಾಬುಲರಿ ಓದಿ
  • ಒಂದು ರೀಡಿಂಗ್ ಪ್ಯಾಸೇಜ್ ಓದಿ
  • ವಾರಕ್ಕೆ ಎರಡು ಇಂಗ್ಲಿಷ್ ಭಾಷೆಗೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆಗಳಲ್ಲಿ ಇಂಗ್ಲೀಷ್ ಭಾಷೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಅಧ್ಯಯನ ಮಾಡಿ

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಉತ್ಪನ್ನಗಳು ಮತ್ತು ಸೇವೆಗಳು

ಈ ವಿಭಾಗವು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಅಪ್ರೆಂಟಿಸ್ ನೇಮಕಾತಿ ಪರೀಕ್ಷೆಯಲ್ಲಿ ವಿಶೇಷ ವಿಭಾಗವಾಗಿದೆ ಈ ವಿಭಾಗದಲ್ಲಿ ಬ್ಯಾಂಕು ನೀಡುವ ವಿವಿಧ ಹಣಕಾಸು ಸೇವೆಗಳು ಮತ್ತು ಬ್ಯಾಂಕಿಂಗ್ ಉತ್ಪನ್ನಗಳ ಕುರಿತು ಪ್ರಶ್ನೆಗಳನ್ನು ಕೇಳಲಾಗುತ್ತದೆ ಬ್ಯಾಂಕುಗಳ ಮೂಲಭೂತ ಕಾರ್ಯಾಚರಣೆಯ ಅರಿವು ಹೊಂದಿರುವ ಅಭ್ಯರ್ಥಿಗಳಿಗೆ ಈ ವಿಭಾಗದಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಸಹಾಯವಾಗುತ್ತದೆ

ಮೂಲ ಚಿಲ್ಲರೆ ಹೊಣೆಗಾರಿಕೆ ಉತ್ಪನ್ನಗಳು

Savings Account (ಉಳಿತಾಯ ಖಾತೆ)

ಇದು ಸಾಮಾನ್ಯ ಜನರು ಹೆಚ್ಚು ಬಳಸುವ ಬ್ಯಾಂಕ್ ಖಾತೆಯಾಗಿದೆ.

Current Account (ಚಾಲ್ತಿ ಖಾತೆ)

ವ್ಯಾಪಾರಿಗಳು ಹಾಗೂ ಸಂಸ್ಥೆಗಳು ಹೆಚ್ಚಾಗಿ ಬಳಸುವ ಖಾತೆಯಾಗಿದೆ.

Fixed Deposit (ಸ್ಥಿರ ಠೇವಣಿ)

ನಿಗದಿತ ಅವಧಿಗೆ ಹಣ ಹೂಡಿಕೆ ಮಾಡುವ ಯೋಜನೆಯು ಇದಾಗಿದೆ.

Recurring Deposit (ಆವರ್ತಕ ಠೇವಣಿ)

ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಠೇವಣಿ ಮಾಡುವ ಯೋಜನೆ.

Salary Account (ವೇತನ ಖಾತೆ)

ಸಂಬಳ ಪಡೆಯುವ ಉದ್ಯೋಗಿಗಳಿಗೆ ನೀಡುವ ವಿಶೇಷ ಖಾತೆ.

 

ಮೂಲ ಚಿಲ್ಲರೆ ಆಸ್ತಿ ಉತ್ಪನ್ನಗಳು

  • ಬ್ಯಾಂಕು ವೈಯಕ್ತಿಕ ಅಗತ್ಯಗಳಿಗೆ ನೀಡುವ ವೈಯಕ್ತಿಕ ಸಾಲಗಳು
  • ಮನೆ ನಿರ್ಮಾಣ ಅಥವಾ ಖರೀದಿಗೆ ನೀಡುವ ಮನೆ ಸಾಲಗಳು
  • ಉನ್ನತ ಶಿಕ್ಷಣವನ್ನು ಪಡೆಯುವ ಸಲುವಾಗಿ ನೀಡುವ ಶಿಕ್ಷಣ ಸಾಲಗಳು
  • ದ್ವಿಚಕ್ರ ಅಥವಾ ನಾಲ್ಕು ಚಕ್ರದ ವಾಹನಗಳ ಖರೀದಿಗೆ ನೀಡುವ ವಾಹನ ಸಾಲಗಳು
  • ಚಿನ್ನವನ್ನು ಅಡವಿಟ್ಟು ಪಡೆಯುವ ಚಿನ್ನದ ಸಾಲಗಳು
  • ರೈತರಿಗೆ ಕೃಷಿ ಉದ್ದೇಶಕ್ಕಾಗಿ ನೀಡುವ ಕೃಷಿ ಸಾಲಗಳು

ಹೂಡಿಕೆ ಉತ್ಪನ್ನಗಳು

  • Mutual Fund
  • SIP (Systematic Investment Plan)
  • Bonds
  • Government Securities
  • Fixed Income Schemes

ವಿಮಾ ಉತ್ಪನ್ನಗಳು

  • PMJJBY (Pradhan Mantri Jeevan Jyoti Bima Yojana)
  • PMSBY (Pradhan Mantri Suraksha Bima Yojana)
  • ಜೀವ ವಿಮೆ
  • ಸಾಮಾನ್ಯ ವಿಮೆ
  • ಆರೋಗ್ಯ ವಿಮೆ
  • ಅರ್ಹತೆ
  • ಪ್ರೀಮಿಯಂ
  • ವಿಮಾ ಮೊತ್ತ
  • ಪ್ರಮುಖ ಪ್ರಯೋಜನಗಳು

ಡಿಜಿಟಲ್ ಬ್ಯಾಂಕಿಂಗ್ ಸೇವೆಗಳು

  • Internet Banking
  • Mobile Banking
  • UPI
  • QR Payment
  • NEFT
  • RTGS
  • IMPS
  • AEPS
  • BBPS
  • FASTag
  • RuPay Debit Card
  • Credit Card

ಡಿಜಿಟಲ್ ಬ್ಯಾಂಕಿಂಗ್ ಕುರಿತು ತಿಳಿದುಕೊಳ್ಳಬೇಕಾದ ಅಂಶಗಳು

  • ಹಣ ವರ್ಗಾವಣೆ ವಿಧಾನಗಳು
  • ಭದ್ರತಾ ಕ್ರಮಗಳು
  • OTP ಬಳಕೆ
  • Cyber Fraud ನಿಂದ ರಕ್ಷಣೆ
  • UPI PIN ಸುರಕ್ಷತೆ
  • ಸುರಕ್ಷಿತ ಆನ್‌ಲೈನ್ ವ್ಯವಹಾರ

ಪರೀಕ್ಷೆಯಲ್ಲಿ Exams Tips ಜೊತೆಗೆ ಸಮಯ ನಿರ್ವಹಣೆ ಹೇಗೆ ಮಾಡಬೇಕು

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿಯ ಅಪ್ರೆಂಟಿಸ್ ಪರೀಕ್ಷೆಯಲ್ಲಿ 100 ಪ್ರಶ್ನೆಗಳಿಗೆ ಕೇವಲ 60 ನಿಮಿಷಗಳು ಮಾತ್ರ ನಿಗದಿಪಡಿಸಿರುವುದರಿಂದ ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರಶ್ನೆಗಳಿಗೆ ಉತ್ತರವನ್ನು ನೀಡಲು ಈ ಕೆಳಕಂಡ ಶಿಫಾರಸ್ಸು ಮಾಡಿರುವ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಳ್ಳಿ ಮತ್ತು ಇದೇ ರೀತಿ ಅಭ್ಯಾಸ ಮಾಡಿ

ವಿಭಾಗ ಸಮಯ
ಸಾಮಾನ್ಯ ಹಾಗೂ ಆರ್ಥಿಕ ಅರಿವು 10 ನಿಮಿಷಗಳು
ಕಂಪ್ಯೂಟರ್ ಜ್ಞಾನ 10 ನಿಮಿಷಗಳು
ಬ್ಯಾಂಕ್ ಉತ್ಪನ್ನಗಳು ಮತ್ತು ಸೇವೆಗಳು 10 ನಿಮಿಷಗಳು
ಸಾಮಾನ್ಯ ಇಂಗ್ಲಿಷ್ 12 ನಿಮಿಷಗಳು
ಗಣಿತ ಮತ್ತು Reasoning 18 ನಿಮಿಷಗಳು

 

Exams Tips ವಿಭಾಗದಲ್ಲಿ ಮಾಕ್ ಟೆಸ್ಟ್‌ ಗಳ ಮಹತ್ವ

ಮಾಕ್ ಟೆಸ್ಟ್‌ ಗಳನ್ನು ಬರೆಯುವುದರಿಂದ ಪರೀಕ್ಷೆಯ ಮಾದರಿ ಪ್ರಶ್ನೆಗಳ ಮಾದರಿ ಹಾಗೂ ಕಠಿಣತೆಯ ಅಂದಾಜು ನಮಗೆ ಸಿಗುತ್ತದೆ ಮಾಕ್ ಟೆಸ್ಟ್‌ ಗಳನ್ನು ಬರೆಯುವುದರಿಂದ ಈ ಕೆಳಕಂಡ ಪ್ರಯೋಜನವನ್ನು ಪಡೆಯಬಹುದು

  • ನಿಜವಾದ ಪರೀಕ್ಷಾ ಅನುಭವ ದೊರೆಯುತ್ತದೆ
  • ಸಮಯ ನಿರ್ವಹಣೆಯನ್ನು ಸುಧಾರಿಸಬಹುದು
  • ದುರ್ಬಲ ವಿಷಯಗಳನ್ನು ಗುರುತಿಸಿ ಹೆಚ್ಚು ಅಧ್ಯಯನ ಮಾಡಿ ಸರಿಪಡಿಸಿಕೊಳ್ಳಬಹುದು
  • ಪ್ರಶ್ನೆಗಳ ಮಾದರಿ ಅರ್ಥವಾಗುತ್ತದೆ
  • ವೇಗ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ

 

ಮಾಕ್ ಟೆಸ್ಟ್ ಯೋಜನೆ

  • ವಾರಕ್ಕೆ ಕನಿಷ್ಠ ಎರಡು ಮಾಕ್ ಟೆಸ್ಟ್‌ ಗಳನ್ನು ಬರೆಯಿರಿ
  • ಪ್ರತಿಯೊಂದು ಮಾಕ್ ಟೆಸ್ಟ್ ಬರೆದ ನಂತರ ತಪ್ಪುಗಳನ್ನು ವಿಶ್ಲೇಷಿಸಿ ಸರಿಪಡಿಸಿಕೊಳ್ಳಿ
  • ತಪ್ಪಾದ ಪ್ರಶ್ನೆಗಳ ಕಾರಣವನ್ನು ತಿಳಿದು ಮತ್ತೆ ಅಭ್ಯಾಸವನ್ನು ಪುನರಾರಂಭಿಸಿ

ಅಭ್ಯರ್ಥಿಗಳು ಮಾಡುವ ಸಾಮಾನ್ಯ ತಪ್ಪುಗಳು

ಪರೀಕ್ಷೆ ತಯಾರಿಯಲ್ಲಿ ಈ ಕೆಳಕಂಡ ಸಾಮಾನ್ಯ ಮತ್ತು ಚಿಕ್ಕ ತಪ್ಪುಗಳನ್ನು ಮಾಡುವುದರಿಂದ ಪರೀಕ್ಷಾ ತಯಾರಿಯಲ್ಲಿ ದೊಡ್ಡ ಪ್ರಮಾಣದ ಸಮಸ್ಯೆಯನ್ನು ಎದುರಿಸಬಹುದು ಆದ್ದರಿಂದ ಈ ಕೆಳಕಂಡ Exams Tips ಗಳನ್ನು ತಿಳಿದುಕೊಂಡು ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ

  • Exams Tips ತಿಳಿಯದೇ  ಸಿಲಬಸ್‌ ಅನ್ನು ಪೂರ್ಣಗೊಳಿಸದೆ ಮಾಕ್ ಟೆಸ್ಟ್‌ ಗಳನ್ನು ಬರೆಯುವುದು
  • ಪ್ರಚಲಿತ ವಿದ್ಯಮಾನಗಳನ್ನು ನಿರ್ಲಕ್ಷಿಸುವುದು
  • ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡದೇ ಇರುವುದು
  • ಸಮಯ ನಿರ್ವಹಣೆಯ ಬಗ್ಗೆ ಅಭ್ಯಾಸ ಮಾಡದಿರುವುದು
  • ಒಂದೇ ವಿಷಯಕ್ಕೆ ಹೆಚ್ಚು ಸಮಯ ಮೀಸಲಿಟ್ಟು ಉಳಿದ ವಿಷಯಗಳನ್ನು ಬಿಡುವುದು
  • ರಿವಿಶನ್ ಮಾಡದೆ ಹೊಸ ವಿಷಯಗಳ ಮೇಲೆ ಹೆಚ್ಚು ಗಮನ ಹರಿಸುವುದು

ಅಂತಿಮ Exams Tips ಗಳು

ಪ್ರತಿನಿತ್ಯ ಕನಿಷ್ಠ ನಾಲ್ಕರಿಂದ ಐದು ಗಂಟೆಗಳ ಅಧ್ಯಯನವನ್ನು ಮಾಡಿ ಪ್ರತಿಯೊಂದು ವಿಷಯಕ್ಕೂ ಪ್ರತ್ಯೇಕ ಟಿಪ್ಪಣಿಗಳನ್ನು ಸಿದ್ಧಪಡಿಸಿ ಇದು ರಿವಿಶನ್ ಗೆ ಸಹಕಾರಿಯಾಗುತ್ತದೆ. ಪ್ರಚಲಿತ ವಿದ್ಯಮಾನಗಳನ್ನು ಪ್ರತಿದಿನವೂ ಕಡ್ಡಾಯವಾಗಿ ಓದಿ, ಗಣಿತ ಮತ್ತು ರಿಸನಿಂಗ್ ವಿಭಾಗಗಳನ್ನು ನಿಯಮಿತವಾಗಿ ಅಭ್ಯಾಸ ಮಾಡಿ ಬ್ಯಾಂಕಿಂಗ್ ಉತ್ಪನ್ನಗಳು ಮತ್ತು ಡಿಜಿಟಲ್ ಸೇವೆಗಳ ಕುರಿತು ಮೂಲಭೂತ ಜ್ಞಾನವನ್ನು ತಿಳಿದುಕೊಳ್ಳಿ ಪರೀಕ್ಷೆಗೆ ಮುನ್ನ ಸಾಕಷ್ಟು ನಿದ್ರೆ ಮತ್ತು ಆರೋಗ್ಯಕರ ಆಹಾರವನ್ನು ಸೇವಿಸಿ ಆತ್ಮವಿಶ್ವಾಸದಿಂದ ಪರೀಕ್ಷೆಗೆ ಹಾಜರಾಗಿ.

30 ದಿನಗಳ ಅಧ್ಯಯನ ಯೋಜನೆ

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್ ಪರೀಕ್ಷೆಯಲ್ಲಿ ಉತ್ತಮ ಅಂಗಗಳನ್ನು ಪಡೆಯಲು ಉತ್ತಮ ರೀತಿಯ ಅಧ್ಯಯನ ಅಗತ್ಯವಾಗಿದೆ ಪ್ರತಿದಿನ 4 ರಿಂದ 6 ಗಂಟೆಗಳ ಕಾಲ ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಎಲ್ಲಾ ವಿಷಯಗಳನ್ನು ಸುಲಭವಾಗಿ ಪೂರ್ಣಗೊಳಿಸಬಹುದು ಕೆಳಗಿನ 30 ದಿನಗಳ ಅಧ್ಯಯನ ಯೋಜನೆಯು ಸಿಲಬಸ್ ಪೂರ್ಣಗೊಳಿಸಲು ಹಾಗೂ ರಿವಿಜನ್ ಮಾಡಲು ಉತ್ತಮವಾಗಿದೆ

ಮೊದಲನೇ ವಾರದ Exams Tips

ಮೊದಲನೇ ವಾರದಲ್ಲಿ ಸಂಪೂರ್ಣವಾಗಿ ಮೂಲಭೂತ ವಿಷಯಗಳನ್ನು ಅರ್ಥ ಮಾಡಿಕೊಳ್ಳುವ ಗಮನ ಹರಿಸಬೇಕಾಗುತ್ತದೆ

  • ಪರೀಕ್ಷೆಯ ಸಂಪೂರ್ಣ ಸಿಲಬಸ್ ಮತ್ತು ಎಕ್ಸಾಮ್ ಪ್ಯಾಟರ್ನ್ ಅನ್ನು ತಿಳಿದುಕೊಳ್ಳಬೇಕು
  • ಸಾಮಾನ್ಯ ಹಾಗೂ ಆರ್ಥಿಕ ಅರಿವು ವಿಷಯಗಳ ಬಗ್ಗೆ ಅಧ್ಯಯನ ಆರಂಭಿಸಬೇಕು
  • ಪ್ರತಿದಿನ ಪ್ರತಿ ದಿನ ಪ್ರಚಲಿತ ವಿದ್ಯಮಾನಗಳನ್ನು ಓದಬೇಕು
  • ಕಂಪ್ಯೂಟರ್ ಸಂಬಂಧಿತ ಮೂಲಭೂತ ಅಂಶಗಳನ್ನು ಕಲಿತುಕೊಳ್ಳಬೇಕು‌
  • ಗಣಿತದಲ್ಲಿ ಶೇಕಡವಾರು, ಅನುಪಾತ, ಸರಾಸರಿ ಮತ್ತು ಸರಳಿಕರಣವನ್ನು ಅಭ್ಯಾಸ ಮಾಡಬೇಕು
  • ದಿಕ್ಕುಗಳು ಸಂಬಂಧಿತ ಪ್ರಶ್ನೆಗಳನ್ನು ಅಭ್ಯಾಸ ಮಾಡಬೇಕು

 

ಎರಡನೇ ವಾರದ Exams Tips

ಎರಡನೇ ವಾರದ ಸಂದರ್ಭದಲ್ಲಿ ಮಧ್ಯಮ ಮಟ್ಟದ ವಿಷಯಗಳನ್ನು ಪೂರ್ಣಗೊಳಿಸಬೇಕು

  • ಬ್ಯಾಂಕಿಂಗ್ ಜಾಗೃತಿ ಬಗ್ಗೆ ಸಂಪೂರ್ಣವಾಗಿ ಓದಬೇಕು
  • ಆರ್‌ಬಿಐ ಮತ್ತು ಭಾರತೀಯ ಆರ್ಥಿಕತೆ ಕುರಿತು ಅಧ್ಯಯನ ಮಾಡಬೇಕು
  • ಡಾಟಾ ಇಂಟರ್ಪ್ರೆಟೇಶನ್ ಬಗ್ಗೆ ಅಭ್ಯಾಸ ಮಾಡಬೇಕು
  • ಫಜಲ್ ಮತ್ತು ಸೀಟಿಂಗ್ ಅರೇಂಜ್ಮೆಂಟ್ ಬಗ್ಗೆ ಪ್ರಶ್ನೆಗಳನ್ನು ಬಿಡಿಸಬೇಕು
  • ಎಮ್.ಎಸ್ ಆಫೀಸ್, ಇಂಟರ್ನೆಟ್ ಮತ್ತು ನೆಟ್ವರ್ಕಿಂಗ್ ವಿಷಯಗಳನ್ನು ಓದಬೇಕು
  • ರೀಡಿಂಗ್ ಕಾಂಪ್ರಿಹೆಂನ್ಷನ್ ಮತ್ತು ಕ್ಲೋಸ್ ಟೆಸ್ಟ್ ಗಳನ್ನು ಅಭ್ಯಾಸ ಮಾಡಬೇಕು‌
  • ಬ್ಯಾಂಕಿಂಗ್ ಉತ್ಪನ್ನಗಳು ಮತ್ತು ಸೇವೆಗಳ ಕುರಿತು ಟಿಪ್ಪಣಿಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು

 

ಮೂರನೇ ವಾರ Exams Tips

ಮೂರನೇ ವಾರದಲ್ಲಿ ವೇಗ ಮತ್ತು ನಿಖರತೆಯನ್ನು ಅಭಿವೃದ್ಧಿಪಡಿಸಲು ಹೆಚ್ಚು ಗಮನವನ್ನು ನೀಡಬೇಕಾಗುತ್ತದೆ

  • ಪ್ರತಿದಿನ ಸಂಪೂರ್ಣ ಮಾಕ್‌ ಟೆಸ್ಟ್ ಬರೆಯಬೇಕು‌
  • ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ ಅಧ್ಯಯನ ಮಾಡಬೇಕು
  • ಬ್ಯಾಂಕಿಂಗ್ ಸೇವೆಗಳು ಮತ್ತು ವಿಮಾ ಯೋಜನೆಗಳ ಕುರಿತು ಪುನರಾವರ್ತನೆ ಮಾಡಬೇಕು
  • ಪ್ರಚಲಿತ ವಿದ್ಯಮಾನಗಳ ರಿವಿಶನ್ ಮಾಡಬೇಕು
  • ಪದಸಂಪತ್ತು ಮತ್ತು ವ್ಯಾಕರಣಕ್ಕೆ ಸಂಬಂಧಿಸಿದಂತೆ ಅಭ್ಯಾಸ ಮುಂದುವರಿಸಬೇಕು

 

ನಾಲ್ಕನೇ ವಾರ Exams Tips

ನಾಲ್ಕನೇ ವಾರದಲ್ಲಿ ಸಂಪೂರ್ಣವಾಗಿ ರಿವಿಷನ್ ಮತ್ತು ಮಾಕ್‌ ಟೆಸ್ಟ್ ಗಳನ್ನು ಬರೆಯಲು ಮೀಸಲಿಡಬೇಕಾಗುತ್ತದೆ

  • ಪ್ರತಿದಿನ ಒಂದು ಸಂಪೂರ್ಣ ಹಂತದ ಮಾಕ್‌ ಟೆಸ್ಟ್ ಬರೆಯಬೇಕು ‌
  • ದುರ್ಬಲ ವಿಷಯಗಳ ಮೇಲೆ ಹೆಚ್ಚು ಗಮನ ಹರಿಸಬೇಕು
  • ಸೂತ್ರಗಳು, ಶಾರ್ಟ್ ಕಟ್ ಕೀ ಗಳು, ಶಾರ್ಟ್ ಕಟ್ ಟ್ರಿಕ್ಸ್ ಗಳು ಮತ್ತು ಗ್ರಾಮರ್ ನಿಯಮಗಳನ್ನು ಮರು ಪಠಣ ಮಾಡಬೇಕು
  • ಬ್ಯಾಂಕಿಂಗ್ ಪದಗಳು ಮತ್ತು ಡಿಜಿಟಲ್ ಬ್ಯಾಂಕಿಂಗ್ ಸೇವೆಗಳ ಬಗ್ಗೆ ಪುನರಾವರ್ತನೆ ಅತ್ಯವಶ್ಯಕ
  • ಪರೀಕ್ಷೆಗೆ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು

 

Exams Tips ಮೂಲಕ ಪ್ರತಿದಿನದ ಅಧ್ಯಯನದ ವೇಳಾಪಟ್ಟಿ

ಸಮಯ ವಿಷಯಗಳು
45 ನಿಮಿಷ ಪ್ರಚಲಿತ ವಿದ್ಯಮಾನ ಮತ್ತು ಬ್ಯಾಂಕಿಂಗ್‌ ಜಾಗೃತಿ
60 ನಿಮಿಷ ಸಂಖ್ಯಾತ್ಮಕ ಸಾಮರ್ಥ್ಯ
60 ನಿಮಿಷ ತಾರ್ಕಿಕ ಸಾಮರ್ಥ್ಯ
30 ನಿಮಿಷ ಕಂಪ್ಯೂಟರ್‌ ಜ್ಞಾನ
30 ನಿಮಿಷ ಇಂಗ್ಲಿಷ್‌ ಗ್ರಾಮರ್‌ ಮತ್ತು ವೊಕ್ಯಾಬುಲರಿ
30 ನಿಮಿಷ ಬ್ಯಾಂಕ್ ಉತ್ಪನ್ನಗಳು ಮತ್ತು ಸೇವೆಗಳು
45 ನಿಮಿಷ ಮಾಕ್‌ ಟೆಸ್ಟ್ ಮತ್ತು ರಿವಿಷನ್

 

ಪರೀಕ್ಷೆಗೆ ಒಂದು ವಾರ ಬಾಕಿ ಇರುವಾಗ ಯಾವ ಕೆಲಸ ಮಾಡಬೇಕು

ಪರೀಕ್ಷೆಗೆ ಒಂದು ವಾರ ಸಮಯ ಇರುವುದು ತಿಳಿದ ನಂತರ ಈ ಸಮಯವನ್ನು ಅತ್ಯಂತ ಮಹತ್ವದ್ದಾಗಿ ಪರಿಗಣಿಸಿ ಈ ಸಮಯದಲ್ಲಿ ಹೊಸ ವಿಷಯಗಳನ್ನು ಕಲಿಯುವುದಕ್ಕಿಂತ ಈಗಾಗಲೇ ಓದಿರುವ ವಿಷಯಗಳನ್ನು ಪುನರಾವರ್ತಿಸುವುದು ಮತ್ತು ಮರುಪಠಣ ಮಾಡುವುದು ಉತ್ತಮವಾಗಿದೆ

ಅವಧಿಯಲ್ಲಿ ಮಾಡಬೇಕಾದ ಕೆಲಸಗಳು

  • ಪ್ರತಿದಿನ ಒಂದು ಮಾಕ್‌ ಟೆಸ್ಟ್ ಬರೆಯಬೇಕು‌
  • ತಪ್ಪಾದ ಪ್ರಶ್ನೆಗಳ ವಿಶ್ಲೇಷಣೆ ಮಾಡಬೇಕು
  • ಪ್ರಚಲಿತ ವಿದ್ಯಮಾನಗಳ ಬಗ್ಗೆ ಸಂಪೂರ್ಣವಾಗಿ ಮರುಪಠಣ ಮಾಡಬೇಕು
  • ಬ್ಯಾಂಕಿಂಗ್ ಉತ್ಪನ್ನಗಳು ಮತ್ತು ಸರ್ಕಾರಿ ಯೋಜನೆಗಳನ್ನು ಮತ್ತೊಮ್ಮೆ ಓದಬೇಕು
  • ಕಂಪ್ಯೂಟರ್ ಶಾರ್ಟ್‌ ಕಟ್ ಕೀಗಳು ಹಾಗೂ ನೆಟ್ವರ್ಕಿಂಗ್ ಸಂಬಂಧಪಟ್ಟ ನೋಟ್ಸ್ ಗಳನ್ನು ಪುನರಾವರ್ತಿಸಬೇಕು
  • ಗ್ರಾಮರ್ ನಿಯಮಗಳನ್ನು ಓದಬೇಕು
  • ಗಣಿತದ ಪ್ರಮುಖ ಸೂತ್ರಗಳನ್ನು ನೆನಪಿಟ್ಟುಕೊಳ್ಳಬೇಕು

ಪರೀಕ್ಷೆ ದಿನ ಪಾಲಿಸಬೇಕಾದ ಪ್ರಮುಖ ಸಲಹೆಗಳು

ಪರೀಕ್ಷೆಯ ದಿನದ ನಿಮ್ಮ ಮನಸ್ಥಿತಿ ಮತ್ತು ಸಮಯ ನಿರ್ವಹಿಸುವ ಕೌಶಲ್ಯವು ಫಲಿತಾಂಶದ ಮೇಲೆ ದೊಡ್ಡ ಪರಿಣಾಮ ಬೀರುವುದರಿಂದ ಪರಿಚಯ ದಿನ ಈ ಕೆಳಕಂಡ ಅಂಶಗಳನ್ನು ಗಮನಿಸಿ

ಪರೀಕ್ಷೆಗೆ ಹೋಗುವ ಮೊದಲು ಅನುಸರಿಸಬೇಕಾದ Exams Tips

  1. ಪ್ರವೇಶ ಪತ್ರವನ್ನು ನಿಮ್ಮೊಡನೆ ತೆಗೆದುಕೊಂಡು ಹೋಗಿದ್ದೀರಾ ಎಂಬುದನ್ನು ಪರಿಶೀಲಿಸಿ
  2. ಮಾನ್ಯವಾಗಿರುವ ಗುರುತಿನ ಚೀಟಿಯನ್ನು ಹೊಂದಿದ್ದೀರಾ ಎಂದು ಪರಿಶೀಲಿಸಿ
  3. ಪರೀಕ್ಷಾ ಕೇಂದ್ರಕ್ಕೆ ಕನಿಷ್ಠ 60 ನಿಮಿಷ ಮುಂಚಿತವಾಗಿ ತಲುಪಿ
  4. ಹಿಂದಿನ ದಿನ ಸಾಕಷ್ಟು ನಿದ್ದೆ ಮಾಡಿ
  5. ಪರೀಕ್ಷೆಗೆ ಹೋಗುವ ಮುನ್ನ ಹಗುರವಾದ ಆಹಾರ ಸೇವಿಸಿ

ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಅನುಸರಿಸಬೇಕಾದ Exams Tips

  1. ಸುಲಭವಾದ ಪ್ರಶ್ನೆಗಳಿಗೆ ಮೊದಲು ಉತ್ತರವನ್ನು ನೀಡಿ
  2. ಒಂದೇ ಪ್ರಶ್ನೆಗೆ ಹೆಚ್ಚು ಸಮಯವನ್ನು ಮೀಸಲಿಡಬೇಡಿ
  3. ಸಮಯವನ್ನು ಗಮನದಲ್ಲಿಟ್ಟುಕೊಂಡು ಸಮಯ ನಿರ್ವಹಣೆ ಮಾಡಿ
  4. ಕೊನೆಯಲ್ಲಿ ಉಳಿದ ಸಮಯವನ್ನು ಉತ್ತರಗಳನ್ನು ಪರಿಶೀಲಿಸಲು ಬಳಸಿಕೊಳ್ಳಿ
  5. ನೆಗೆಟಿವ್ ಮಾರ್ಕಿಂಗ್ ಇಲ್ಲದ ಕಾರಣ ಉತ್ತರಿಸದ ಪ್ರಶ್ನೆಗಳಿಗೆ ಖಾಲಿ ಬಿಡದೆ ಉತ್ತರವನ್ನು ನೀಡಿ

ಪರೀಕ್ಷೆಗೆ ಅಗತ್ಯವಾದ ಚೆಕ್ ಲಿಸ್ಟ್

  1. ಪರೀಕ್ಷಾ ಪ್ರವೇಶ ಪತ್ರ
  2. ಮಾನ್ಯವಾದ ಗುರುತಿನ ಚೀಟಿ
  3. ಅಗತ್ಯವಿದ್ದಲ್ಲಿ ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
  4. ಪರೀಕ್ಷಾ ಕೇಂದ್ರದ ವಿಳಾಸವನ್ನು ಮುಂಚಿತವಾಗಿ ಪರಿಶೀಲಿಸಿ
  5. ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರವನ್ನು ತಲುಪುವುದು
  6. ಅಗತ್ಯ ಸೂಚನೆಗಳನ್ನು ಮುಂಚಿತವಾಗಿ ಓದಿಕೊಳ್ಳುವುದು

Exams Tips: ಅಭ್ಯರ್ಥಿಗಳು ತಪ್ಪಿಸಬೇಕಾದ ಸಾಮಾನ್ಯ ತಪ್ಪುಗಳು

  1. ಪರೀಕ್ಷೆಯ ಕೊನೆಯ ದಿನಗಳಲ್ಲಿ ಹೊಸ ವಿಷಯಗಳನ್ನು ಓದಬೇಡಿ
  2. ಮಾಕ್ ಟೆಸ್ಟ್ ಗಳನ್ನು ಬರೆಯದೆ ಪರೀಕ್ಷೆಗೆ ಹೋಗಬೇಡಿ
  3. ಪ್ರಚಲಿತ ವಿದ್ಯಮಾನಗಳನ್ನು ನಿರ್ಲಕ್ಷಿಸಬೇಡಿ
  4. ಸಮಯ ನಿರ್ವಹಣೆಯ ಅಭ್ಯಾಸ ತಪ್ಪಿಸಬೇಡಿ
  5. ಒಂದೇ ವಿಷಯಕ್ಕೆ ಹೆಚ್ಚು ಸಮಯ ಮೀಸಲು ಇಡಬೇಡಿ
  6. ರಿವಿಜನ್ ಮಾಡುವುದನ್ನು ನಿರ್ಲಕ್ಷಿಸಬೇಡಿ
  7. ಪರೀಕ್ಷೆ ಸಮಯದಲ್ಲಿ ಗಾಬರಿಯಾದಂತೆ ವರ್ತಿಸಬೇಡಿ

ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಪ್ರಮುಖ Exams Tips 

  • ಪ್ರತಿದಿನ 4 ರಿಂದ ಗಂಟೆ ಗಳ ಕಾಲ ಅಧ್ಯಯನ ಮಾಡಿ
  • ಒಂದು ವಿಷಯವನ್ನು ಸಂಪೂರ್ಣವಾಗಿ ಓದಿದ ನಂತರ ಮುಂದಿನ ವಿಷಯವನ್ನು ಅಧ್ಯಯನ ಮಾಡಿ
  • ಪ್ರತಿದಿನ 100 ಬಹು ಆಯ್ಕೆ ಪ್ರಶ್ನೆಗಳನ್ನು ಅಭ್ಯಾಸ ಮಾಡಿ
  • ಪ್ರತಿ ವಾರ ಒಂದು ಸಂಪೂರ್ಣ ಮಾಕ್‌ ಟೆಸ್ಟ್ ತೆಗೆದುಕೊಳ್ಳಿ‌
  • ಬ್ಯಾಂಕಿಂಗ್ ಸುದ್ದಿಗಳನ್ನು ಪ್ರತಿದಿನ ನಿಯಮಿತವಾಗಿ ಓದಿ
  • ಕಂಪ್ಯೂಟರ್ ಹಾಗೂ ಡಿಜಿಟಲ್ ಬ್ಯಾಂಕಿಂಗ್ ವಿಷಯಗಳಿಗೆ ಹೆಚ್ಚಿನ ಗಮನ ನೀಡಿ
  • ಪ್ರಶ್ನೆಗಳನ್ನು ವೇಗವಾಗಿ ಓದಿ ಸರಿಯಾದ ಉತ್ತರವನ್ನು ಆಯ್ಕೆ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ

 

Best Exams Tips For Central Bank Of India Apprentice 2026: FAQ’s

ಪ್ರಶ್ನೆ-1. ಸೆಂಟ್ರಲ್ ಬ್ಯಾಂಕ್ ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು?
ಉತ್ತರ: ಪದವಿಯನ್ನು ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳು ಅಧಿಕೃತ ಅರ್ಹತೆ ಪೂರೈಸಿ ಅರ್ಜಿ ಸಲ್ಲಿಸಬಹುದು.

ಪ್ರಶ್ನೆ-2. ಪರೀಕ್ಷೆಯಲ್ಲಿ ಒಟ್ಟು ಎಷ್ಟು ಪ್ರಶ್ನೆಗಳು ಇರುತ್ತವೆ?
ಉತ್ತರ: ಒಟ್ಟು 100 ಪ್ರಶ್ನೆಗಳು ಕೇಳಲಾಗುತ್ತವೆ, ಪ್ರತಿಯೊಂದಕ್ಕೂ ಒಂದು ಅಂಕವನ್ನು ನಿಗಧಿಪಡಿಸಲಾಗಿದೆ.

ಪ್ರಶ್ನೆ-3. ಸೆಂಟ್ರಲ್ ಬ್ಯಾಂಕ್ ಅಪ್ರೆಂಟಿಸ್ ಪರೀಕ್ಷೆಯ ಅವಧಿ ಎಷ್ಟು ನಿಮಿಷಗಳು ಇರುತ್ತದೆ?
ಉತ್ತರ: ಪರೀಕ್ಷೆಗೆ ಒಟ್ಟು 60 (ಅರವತ್ತು) ನಿಮಿಷಗಳ ಕಾಲಾವಕಾಶ ಮಾತ್ರ ನೀಡಲಾಗುತ್ತದೆ.

ಪ್ರಶ್ನೆ-4. ಪರೀಕ್ಷೆಯಲ್ಲಿ ನೆಗೆಟಿವ್‌ ಮಾರ್ಕಿಂಗ್‌ ಇದೆಯೇ?
ಉತ್ತರ: ಇಲ್ಲ, ತಪ್ಪು ಉತ್ತರಗಳಿಗೆ ಯಾವುದೇ ನೆಗೆಟಿವ್‌ ಮಾರ್ಕಿಂಗ್‌ ಇರುವುದಿಲ್ಲ.

ಪ್ರಶ್ನೆ-5. ಪರೀಕ್ಷೆಯಲ್ಲಿ ಯಾವ ಪ್ರಮುಖ ವಿಷಯಗಳಿಂದ ಪ್ರಶ್ನೆಗಳು ಬರುತ್ತವೆ?
ಉತ್ತರ: ಸಾಮಾನ್ಯ ಅರಿವು, ಗಣಿತ, ಇಂಗ್ಲಿಷ್ ಭಾಷೆ, ಕಂಪ್ಯೂಟರ್ ಜ್ಞಾನ, ಬ್ಯಾಂಕಿಂಗ್ ಜಾಗೃತಿ ವಿಷಯಗಳಿಂದ ಪ್ರಶ್ನೆಗಳು ಬರುತ್ತವೆ.

ಪ್ರಶ್ನೆ-6. ಸಾಮಾನ್ಯ ಅರಿವು ವಿಭಾಗಕ್ಕೆ ಹೇಗೆ ತಯಾರಿ ಮಾಡಿಕೊಳ್ಳಬೇಕು?
ಉತ್ತರ: ಪ್ರತಿದಿನ ಸುದ್ದಿಗಳು ಓದಿ, ದಿನಪತ್ರಿಕೆ ಓದಿ, ಪ್ರಚಲಿತ ವಿದ್ಯಮಾನಗಳನ್ನು ನಿಯಮಿತವಾಗಿ ಪುನರಾವರ್ತನೆ ಮಾಡಿ.

ಪ್ರಶ್ನೆ-7. ಕಂಪ್ಯೂಟರ್ ಜ್ಞಾನ ವಿಭಾಗದಲ್ಲಿ ಯಾವ ವಿಷಯಗಳು ಮುಖ್ಯವಾಗಿವೆ?
ಉತ್ತರ: ಕಂಪ್ಯೂಟರ್ ಮೂಲಭೂತ ಅಂಶಗಳು, ಇಂಟರ್ನೆಟ್ ಆಯಾಮಗಳು, ನೆಟ್‌ವರ್ಕಿಂಗ್ ವ್ಯವಸ್ಥೆ, ಡಿಜಿಟಲ್ ಬ್ಯಾಂಕಿಂಗ್ ಮುಖ್ಯ ವಿಷಯಗಳಾಗಿವೆ.

ಪ್ರಶ್ನೆ-8. ಬ್ಯಾಂಕಿಂಗ್ ಉತ್ಪನ್ನಗಳ ಕುರಿತು ಯಾವ ಯಾವ ಪ್ರಶ್ನೆಗಳು ಕೇಳಲಾಗುತ್ತವೆ?
ಉತ್ತರ: ಖಾತೆಗಳ ವಿಧಗಳು, ಸಾಲಗಳು, ವಿಮೆ, ಹೂಡಿಕೆಗಳ ಕುರಿತು ಪ್ರಶ್ನೆಗಳು ಕೇಳಲಾಗುತ್ತವೆ.

ಪ್ರಶ್ನೆ-9. ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಯಾವ ವಿಧಾನ ಅನುಸರಿಸಬೇಕು?
ಉತ್ತರ: ನಿಯಮಿತ ಅಭ್ಯಾಸ ಮಾಡಬೇಕು, ಮಾಕ್ ಟೆಸ್ಟ್ ಬರೆಯಬೇಕು, ಸಮಯ ನಿರ್ವಹಣೆ ಮಾಡುವುದು ಯಶಸ್ಸನ್ನು ಪಡೆಯಲು ಅತ್ಯಂತ ಮುಖ್ಯವಾಗಿವೆ.

ಪ್ರಶ್ನೆ-10. ಮಾಕ್‌ ಟಸ್ಟ್ ಬರೆಯುವುದು ಪರೀಕ್ಷೆಗೆ ಏಕೆ ಬಹಳ ಮುಖ್ಯ?
ಉತ್ತರ: ಮಾಕ್ ಟೆಸ್ಟ್ ‌ಬರೆಯುವುದರಿಂದ ವೇಗ, ಆತ್ಮವಿಶ್ವಾಸ, ನಿಖರತೆ ಹೆಚ್ಚಿಸಿ ಯಶಸ್ಸಿಗೆ ನೆರವಾಗುತ್ತದೆ.

 

ಸಂಬಂಧಿತ ಅಧಿಕೃತ ಲಿಂಕ್ ಗಳು

Last Updated: 13 July 2026

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕೃತ ವೆಬ್ಸೈಟ್ https://www.centralbank.bank.in/en
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಲಿಂಕ್ ಅರ್ಜಿ ಸಲ್ಲಿಕೆ
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿ ಸಂಪೂರ್ಣ ಮಾಹಿತಿ ಸಂಪೂರ್ಣ ಮಾಹಿತಿ
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್ ಹುದ್ದೆಗಳ ಮಾಕ್‌ ಟೆಸ್ಟ್ ಮಾಕ್‌ ಟೆಸ್ಟ್

 

ಹೆಚ್ಚುವರಿ ಲಿಂಕ್ ಗಳ ಮಾಹಿತಿ

ನಮ್ಮ ವಾಟ್ಸಪ್ ಗುಂಪು ಸೇರಲು ಬಯಸುವವರು ಇಲ್ಲಿ ಕ್ಲಿಕ್ ಮಾಡಿ
ಹೆಚ್ಚುವರಿ ಮಾಹಿತಿಗಳನ್ನು ಈ ಮುಂದೆ ಪಡೆಯಿರಿ ನೇಮಕಾತಿ ಮಾಹಿತಿ

ಪರೀಕ್ಷಾ ತಯಾರಿ ಸಲಹೆಗಳು

ವೃತ್ತಿ ಮಾರ್ಗದರ್ಶನ

ಸರ್ಕಾರಿ ಯೋಜನೆಗಳು

 

 

ಕೊನೆಯ ಮಾತು

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನಡೆಸುತ್ತಿರುವ ಅಪ್ರೆಂಟಿಸ್ ಪರೀಕ್ಷೆಯು ಬ್ಯಾಂಕಿಂಗ್ ಕ್ಷೇತ್ರದಲ್ಲಿ ವೃತ್ತಿ ಜೀವನವನ್ನು ಆರಂಭಿಸಬೇಕೆಂದು ಅಂದುಕೊಂಡಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ. ಈ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಸಂಪೂರ್ಣ ಸಿಲಬಸ್ ನ ಅಧ್ಯಯನ‌, ನಿಮಿತ ಅಭ್ಯಾಸ, ಸಮಯ ನಿರ್ವಹಣೆ ಮತ್ತು ಮಾಕ್‌ ಟೆಸ್ಟ್‌ ಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕಾಗಿರುತ್ತದೆ.

ಈ ಪರೀಕ್ಷೆಯಲ್ಲಿ ನೆಗೆಟಿವ್ ಮಾರ್ಕಿಂಗ್ ಇಲ್ಲದಿರುವ ಕಾರಣ ಅಭ್ಯರ್ಥಿಗಳಿಗೆ ಇದೊಂದು ದೊಡ್ಡ ಅನುಕೂಲವಾಗಿದೆ ಆದ್ದರಿಂದ ಪ್ರತಿಯೊಂದು ಪ್ರಶ್ನೆಯನ್ನು ಸಹ ಪ್ರಯತ್ನಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು.

ಸಾಮಾನ್ಯ ಹಾಗೂ ಆರ್ಥಿಕ ಅರಿವು, ಗಣಿತ ವಿಷಯಗಳು, ಕಂಪ್ಯೂಟರ್ ಜ್ಞಾನ, ಇಂಗ್ಲಿಷ್ ಜ್ಞಾನ ಹಾಗೂ ಬ್ಯಾಂಕಿಂಗ್ ಉತ್ಪನ್ನಗಳು ಮತ್ತು ಸೇವೆಗಳ ಕುರಿತು ಸಮಗ್ರ ಮಟ್ಟದಲ್ಲಿ ತಯಾರಿಯನ್ನು ಆರಂಭಿಸಿ ಮತ್ತು ಉತ್ತಮ ರೀತಿಯಲ್ಲಿ ಅಧ್ಯಯನ ಮಾಡಿದರೆ ಉತ್ತಮ ಫಲಿತಾಂಶವನ್ನು ಪಡೆಯಬಹುದಾಗಿರುತ್ತದೆ.

ಯೋಜಿತ ಅಧ್ಯಯನ, ಆತ್ಮವಿಶ್ವಾಸ ಮತ್ತು ನಿರಂತರ ಪರಿಶ್ರಮದಿಂದ ಯಶಸ್ಸನ್ನು ಪಡೆದುಕೊಳ್ಳಬಹುದಾಗಿರುತ್ತದೆ ಆದ್ದರಿಂದ ಸರಿಯಾದ ತಯಾರಿಯೊಂದಿಗೆ ಪರೀಕ್ಷೆಗೆ ಹಾಜರಾದರೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಅಪ್ರೆಂಟಿಸ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ನಿಮ್ಮ ಬ್ಯಾಂಕಿಂಗ್ ಮತ್ತು ಜೀವನದ ಕನಸನ್ನು ನನಸು ಮಾಡಿಕೊಳ್ಳಬಹುದಾಗಿರುತ್ತದೆ

 

Related Information: Exam Tips

BSNL JTO Exam Best Preparation Tips 2026: ಸಂಪೂರ್ಣ ಸಿಲಬಸ್‌, ಪ್ರಮುಖ ವಿಷಯಗಳು, ಪರೀಕ್ಷಾ ತಯಾರಿ ಮತ್ತು 90 ದಿನಗಳ ಅಧ್ಯಯನ ವೇಳಾಪಟ್ಟಿ

KMF GUMUL Jobs Best Exams Preparation Tips 2026: Complete Syllabus, 90 Days Study Plan, Books & Best Tips in Kannada

Karnataka Police CPC Exam Preparation Tips 2026 | Complete And Best Study Plan

Exam Tips For KEA AO And AAO Posts, 90 ದಿನಗಳ Best ಸ್ಟಡಿ ಪ್ಲಾನ್‌ ಹೀಗಿದ್ದರೆ ನಿಮ್ಮ ಯಶಸ್ಸು ಖಚಿತ.

Related Information: Career Guidance

SSLC ನಂತರ ಏನು ಮಾಡಬೇಕು? 2026ರ Best ಕೋರ್ಸ್‌ಗಳು ಮತ್ತು ವೃತ್ತಿ ಅವಕಾಶಗಳ ಬಗ್ಗೆ ಇಲ್ಲಿದೆ ಮಾಹಿತಿ

Best Courses After PUC in 2026: Top Career Options, Job Opportunities & Expert Guidance

Best Courses After PUC Science In 2026: Here Is The Career Guide, Best Courses, Salary, Jobs & Future

Best Courses After PUC Commerce In 2026: Higher Education Chances And Top Career Courses After PUC Commerce in Kannada

 

Author Note : ಈ ಲೇಖನವನ್ನು ಅಧಿಕೃತ ಅಧಿಸೂಚನೆ ಮತ್ತು ಲಭ್ಯವಿರುವ ಪರೀಕ್ಷಾ ಮಾಹಿತಿಯ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಅಭ್ಯರ್ಥಿಗಳಿಗೆ ಸಿಲೆಬಸ್, ಪರೀಕ್ಷಾ ಮಾದರಿ ಹಾಗೂ ತಯಾರಿ ತಂತ್ರಗಳನ್ನು ಸರಳ ಕನ್ನಡದಲ್ಲಿ ನಿಖರವಾಗಿ ಒದಗಿಸುವುದು ನಮ್ಮ ಉದ್ದೇಶವಾಗಿದೆ.

—–

About Author : ರಂಗನಾಥ ಬಿ ಜಿ ರವರು ಅರ್ಥಶಾಸ್ತ್ರದಲ್ಲಿ ಎಂ ಎ ಪದವೀಧರರಾಗಿದ್ದು ಕಳೆದ 3 ವರ್ಗಳಿಂದ, ಸರ್ಕಾರಿ ಉದ್ಯೋಗ, ನೇಮಕಾತಿ, ಪರೀಕ್ಷಾ ಸಿಲೆಬಸ್, ಶಿಕ್ಷಣ, ವಿದ್ಯಾರ್ಥಿವೇತನ ಮತ್ತು ಸರ್ಕಾರಿ ಯೋಜನೆಗಳ ಕುರಿತು ವಿಶ್ವಾಸಾರ್ಹ ಕನ್ನಡ ಮಾಹಿತಿಯನ್ನು ಪ್ರಕಟಿಸುತ್ತಿದ್ದಾರೆ. ಸರಳ, ನಿಖರ ಹಾಗೂ ಉಪಯುಕ್ತ ಮಾಹಿತಿಯನ್ನು ಓದುಗರಿಗೆ ತಲುಪಿಸುವುದು ಇವರ ಪ್ರಮುಖ ಗುರಿಯಾಗಿದೆ.

—–

Disclaimer : ಈ ಲೇಖನವು ಮಾಹಿತಿ ನೀಡುವ ಉದ್ದೇಶಕ್ಕಾಗಿ ಮಾತ್ರ ಪ್ರಕಟಿಸಲಾಗಿದೆ. ಪರೀಕ್ಷಾ ದಿನಾಂಕ, ಸಿಲೆಬಸ್ ಅಥವಾ ನೇಮಕಾತಿ ನಿಯಮಗಳಲ್ಲಿ ಬದಲಾವಣೆಗಳಿದ್ದರೆ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಹಾಗೂ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ವೆಬ್‌ಸೈಟ್ ಅನ್ನು ಪರಿಶೀಲಿಸಬೇಕು.

ರಂಗನಾಥ ಬಿ.ಜಿ ಅವರು ಅರ್ಥಶಾಸ್ತ್ರದಲ್ಲಿ ಎಂ.ಎ ಪದವೀಧರರಾಗಿದ್ದು, ಕಳೆದ ಎರಡು ವರ್ಷಗಳಿಂದ ನೈಜ ಹಾಗೂ ವಿಶ್ವಾಸಾರ್ಹ ಕನ್ನಡ ವಿಷಯಗಳನ್ನು ಪ್ರಕಟಿಸುತ್ತಿದ್ದಾರೆ. ಸರ್ಕಾರಿ ಉದ್ಯೋಗ ಮಾಹಿತಿ, ಪರೀಕ್ಷಾ ತಯಾರಿ ಸಲಹೆಗಳು, ವೃತ್ತಿ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು ಹಾಗೂ ಟ್ರೆಂಡಿಂಗ್ ಸುದ್ದಿಗಳ ಕುರಿತು ಲೇಖನಗಳನ್ನು ಬರೆಯುವಲ್ಲಿ ಪರಿಣತಿ ಹೊಂದಿದ್ದು, ಓದುಗರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುವುದು ಇವರ ಉದ್ದೇಶವಾಗಿದೆ. Please Visit NewsByMr

Leave a Comment