Telegram Join Our Telegram WhatsApp Join Our WhatsApp

Exam Tips For KEA AO And AAO Posts, 90 ದಿನಗಳ Best ಸ್ಟಡಿ ಪ್ಲಾನ್‌ ಹೀಗಿದ್ದರೆ ನಿಮ್ಮ ಯಶಸ್ಸು ಖಚಿತ.

ಈ Exam Tips Follow ಮಾಡಿದರೆ ಸರ್ಕಾರಿ ಉದ್ಯೋಗ ಪಡೆಯುವುದು ಸುಲಭ

ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯಲ್ಲಿ ನೇಮಕಾತಿ ಸೂಚನೆ ಹೊರಡಿಸಲಾಗಿದ್ದು ಈ ನೇಮಕಾತಿ ಮೂಲಕ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಅರ್ಜಿಯನ್ನು ಆನ್ಲೈನ್ ಮೂಲಕ ಆಹ್ವಾನಿಸಿದೆ ಈ ಪರೀಕ್ಷೆಯಲ್ಲಿ ಯಶಸ್ಸನ್ನು ಸಾಧಿಸಲು ಕೇವಲ ಪುಸ್ತಕಗಳನ್ನು ಓದುವುದಷ್ಟೇ ಸಾಲುವುದಿಲ್ಲ ಪ್ರತಿಯಾಗಿ ಸಿಲಬಸ್ ಅನ್ನು ಸಂಪೂರ್ಣವಾಗಿ ಓದಿಕೊಂಡು ಅರ್ಥ ಮಾಡಿಕೊಂಡು ಪ್ರತಿಯೊಂದು ವಿಷಯದ ಪರಿಕಲ್ಪನೆಗಳು ಅದರ ಪ್ರಾಯೋಗಿಕ ಉಪಯೋಗ ಅನುಕೂಲಗಳು ಅನಾನುಕೂಲಗಳು ಮಿತಿಗಳು ಹೆಚ್ಚುವರಿ ಪುಸ್ತಕ ಸಂಪನ್ಮೂಲಗಳು ಮಾಕ್ ಟೆಸ್ಟ್ ಗಳು ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ

ಈ ಲೇಖನದಲ್ಲಿ ನಾವು ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಪರೀಕ್ಷೆಗೆ ನಿಗದಿಪಡಿಸಿರುವ ಸಿಲಬಸ್ ಅನ್ನು ಪ್ರತಿಯೊಂದು ವಿಷಯವಾರು ಸರಳ ರೀತಿಯಲ್ಲಿ ಕನ್ನಡ ಭಾಷೆಯಲ್ಲಿ ವಿವರಿಸಿದ್ದೇವೆ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಲು ಹಾಗೂ ಈ ಹುದ್ದೆಗಳನ್ನು ಸುಲಭವಾಗಿ ಪಡೆಯಲು ಅಗತ್ಯವಾದ ಉತ್ತಮ ರೀತಿಯ ತಯಾರಿ ತಂತ್ರಗಳನ್ನು ಈ ಕೆಳಗಡೆ ತಿಳಿಸಲಾಗಿದೆ

ಅರ್ಜಿ ಸಲ್ಲಿಸಲು :Agriculture Department Recruitment 2026, Big Opportunity: ಹುದ್ದೆ, ಅರ್ಹತೆ, ವೇತನ ಹಾಗೂ ಅರ್ಜಿ ಸಲ್ಲಿಕೆ ಬಗ್ಗೆ ಮಾಹಿತಿ

KEA Website : ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಪರೀಕ್ಷೆಯ ತಯಾರಿಕೆ ಇರಬೇಕಾದ ಮೂಲತತ್ವ ಏನು

ಇದೊಂದೇ ಪರೀಕ್ಷೆಗೆ ಅಲ್ಲದೆ ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆಯಬೇಕಾದರೆ ಮೊದಲು ಒಂದು ವಿಷಯದ ಮೂಲ ಪರಿಕಲ್ಪನೆಯನ್ನು ತಿಳಿದು Exam Tips ಗಳನ್ನು ಅರ್ಥೈಸಿಕೊಂಡು ಅದರ ಬಗ್ಗೆ ಸ್ಪಷ್ಟ ಚಿತ್ರಣವನ್ನು ಪಡೆದರೆ ಮಾತ್ರ ಯಾವುದೇ ರೀತಿಯ ಪ್ರಶ್ನೆಗಳಿಗೆ ಉತ್ತರಿಸಬಹುದಾಗಿರುತ್ತದೆ ಆದುದರಿಂದ ಮೊದಲನೇ ಹಂತದಲ್ಲಿನ ವಿಷಯದ ಮೂಲ ಪರಿಕಲ್ಪನೆಯನ್ನು ತಿಳಿಯುವುದನ್ನು ಮರೆಯಬೇಡಿ ಹಾಗೂ ಈ ವಿಷಯಗಳನ್ನು ತಿಳಿದ ನಂತರವೇ ಮುಂದಿನ ಹಂತಕ್ಕೆ ಹೆಜ್ಜೆ ಇಡಿ. ಪರೀಕ್ಷೆ ತಯಾರಿ ಮಾಡುವಾಗ ಪಾಲಿಸಬೇಕಾದ ಸಾಮಾನ್ಯ ಹಾಗೂ ಪ್ರಮುಖ Exam Tips ಇಲ್ಲಿವೆ

ಈ ಕೆಳಕಂಡ Exam Tips ಗಳನ್ನು ಪಾಲಿಸುವುದರಿಂದ ನೀವು ಪರೀಕ್ಷೆಯಲ್ಲಿ ಯಶಸ್ಸು ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ

  • ಹುದ್ದೆಗಳ ಪರೀಕ್ಷೆಗೆ ನಿಗದಿಪಡಿಸಿರುವ ಸಿಲಬಸ್ ಅಂದರೆ ಪಠ್ಯಕ್ರಮವನ್ನು ಮೊದಲು ಸಂಪೂರ್ಣವಾಗಿ ಓದಿ ಅರ್ಥೈಸಿಕೊಳ್ಳಿ
  • ಸಿಲೆಬಸ್ ನಲ್ಲಿ ನೀಡಲಾಗಿರುವ ಪ್ರಮುಖ ಹಾಗೂ ಪ್ರತಿಯೊಂದು ವಿಚಾರಗಳನ್ನು ವಿಷಯಗಳನ್ನು ಪ್ರತ್ಯೇಕವಾಗಿ ವಿಭಾಗಿಸಿ
  • ಪ್ರತಿನಿತ್ಯವೂ ಕನಿಷ್ಠ 8 ರಿಂದ 10 ಗಂಟೆಗಳ ಕಾಲ ಅಧ್ಯಯನ ಮಾಡಿ ಇದು ನಿಮ್ಮ ಆತ್ಮವಿಶ್ವಾಸ ಹಾಗೂ ಪರೀಕ್ಷಾ ತಯಾರಿಯನ್ನು ಹೆಚ್ಚಿಸುತ್ತದೆ
  • ಪ್ರತಿ ವಾರಕ್ಕೊಮ್ಮೆ ಪರೀಕ್ಷೆಗೆ ನಿಗದಿಪಡಿಸಿರುವ ಮಾಕ್ ಟೆಸ್ಟ್ ಗಳನ್ನು ಬರೆಯಿರಿ ಈ ಟೆಸ್ಟ್ ಗಳಿಗೆ ಲಿಂಕನ್ನು ನಾವು ಕೆಳಗೆ ನೀಡಿದ್ದೇವೆ‌
  • ಈ ಪರೀಕ್ಷೆಗೆ ಸಂಬಂಧಿಸಿದಂತೆ ಹಿಂದಿನ ವರ್ಷದ ಪರೀಕ್ಷೆಯಲ್ಲಿ ನೀಡಲಾಗಿದ್ದ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿ ಅವುಗಳನ್ನು ಬಿಡಿಸಿ ಅವುಗಳ ಉತ್ತರಗಳನ್ನು ಪಡೆಯಿರಿ ಇದರಿಂದ ಪ್ರಶ್ನೆ ಪತ್ರಿಕೆಯ ನೀಲ ನಕ್ಷೆ ತಿಳಿಯುತ್ತದೆ
  • ತುಂಬಾ ದೊಡ್ಡ ವಿಷಯ ಹಾಗೂ ವಿಚಾರಗಳನ್ನು ಓದಿ ಅರ್ಥೈಸಿಕೊಂಡು ಅವುಗಳನ್ನು ಚಿಕ್ಕ ಟಿಪ್ಪಣಿಗಳ ರೂಪದಲ್ಲಿ ತಯಾರಿ ಮಾಡಿಕೊಳ್ಳಿ
  • ಕರ್ನಾಟಕ ಸರ್ಕಾರವು ಇತ್ತೀಚಿಗೆ ಹೊರಡಿಸಿರುವ ಕೃಷಿ ಇಲಾಖೆಯಲ್ಲಿನ ಯೋಜನೆಗಳು ಹಾಗೂ ಅವುಗಳ ಮಹತ್ವವನ್ನು ತಿಳಿದುಕೊಳ್ಳಿ

 ಪಠ್ಯಕ್ರಮದ ವಿವರ ಹಾಗೂ ಪರೀಕ್ಷಾ ತಯಾರಿ ಹೀಗಿರಬೇಕು

1. Exam Tips: Agronomy (ಕೃಷಿಶಾಸ್ತ್ರ)

ಕೃಷಿ ಕ್ಷೇತ್ರದಲ್ಲಿ ಉತ್ಪಾದಕತೆಯನ್ನು ಹೆಚ್ಚಿಸಲು ಕೃಷಿ ಶಿಕ್ಷಣವನ್ನು ಎಲ್ಲೆಡೆ ಉತ್ತೇಜಿಸಲಾಗಿದೆ ಅದರಂತೆ ಕೃಷಿ ಶಾಸ್ತ್ರಕ್ಕೂ ಕೂಡ ಹೆಚ್ಚಿನ ಪ್ರಾಮುಖ್ಯತೆ ದೊರೆತಿದ್ದು ಬೆಳೆಗಳ ಬೆಳವಣಿಗೆಯ ಮಟ್ಟ ಬೆಳೆಗಳ ಉತ್ಪಾದನೆ ಮಣ್ಣಿನ ಆರೋಗ್ಯ ಮತ್ತು ಫಲವತ್ತತೆ ನಿರ್ವಹಣೆ, ನೀರಿನ ನಿರ್ವಹಣೆ ಹಾಗೂ ಕೃಷಿ ಪದ್ಧತಿಗಳನ್ನು ಅಧ್ಯಯನ ಮಾಡುವ ವಿಷಯಕ್ಕೆ ಕೃಷಿ ಶಾಸ್ತ್ರ ಎಂದು ಕರೆಯಲಾಗುತ್ತದೆ

 ಪ್ರಮುಖ ವಿಷಯಗಳು
  • Cropping System (ಬೆಳೆ ಪದ್ಧತಿ) – ಒಂದು ಭೂ ಪ್ರದೇಶದಲ್ಲಿ ಕೃಷಿ ಬೆಳೆಗಳನ್ನು ಬೆಳೆಯುವ ಸಮಗ್ರ ವಿಧಾನಗಳು ಮತ್ತು ಕ್ರಮಗಳು.
  • Crop Rotation (ಬೆಳೆ ಪರಿವರ್ತನೆ) – ಒಂದು ನಿರ್ದಿಷ್ಟ ಕೃಷಿ ಜಮೀನಿನಲ್ಲಿ ವಿವಿಧ ರೀತಿಯ ಬೆಳೆಗಳನ್ನು ಕ್ರಮವಾಗಿ ಬೆಳೆಯುವ ವಿಧಾನಗಳು.
  • Weed Management (ಕಳೆ ನಿರ್ವಹಣೆ) – ಅನುಪಯುಕ್ತ ಕಳೆಗಳನ್ನು ನಿಯಂತ್ರಿಸಿ ಬೆಳೆಗಳ ಉತ್ತಮ ಬೆಳವಣಿಗೆಗೆ ಅನುಕೂಲ ಕಲ್ಪಿಸುವ ವಿಧಾನಗಳು.
  • Irrigation Management (ನೀರಾವರಿ ನಿರ್ವಹಣೆ) – ಬೆಳೆಗಳಿಗೆ ಅಗತ್ಯವಿರುವ ನೀರಿನ ಪ್ರಮಾಣ ಹಾಗೂ ಸೌಲಭ್ಯವನ್ನು ಸರಿಯಾದ ಸಮಯದಲ್ಲಿ ಒದಗಿಸುವುದು ಮತ್ತು ನಿರ್ವಹಿಸುವುದು.
  • Dryland Agriculture (ಒಣಭೂಮಿ ಕೃಷಿ) – ಕಡಿಮೆ ಮಳೆ ಬೀಳುವ ಪ್ರದೇಶಗಳಲ್ಲಿ ನಡೆಸುವ ಉತ್ತಮ ಇಳುವರಿ ನೀಡುವಂತಹ ಕೃಷಿ ಪದ್ಧತಿಗಳು ಮತ್ತು ತಂತ್ರಗಳು.
  • Integrated Farming System (ಸಂಯೋಜಿತ ಕೃಷಿ ಪದ್ಧತಿ) – ಕೃಷಿ ಚಟುವಟಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ, ಮೀನುಗಾರಿಕೆ ಮುಂತಾದವುಗಳನ್ನು ಸಮನ್ವಯ ರೀತಿಯಲ್ಲಿ ವ್ಯವಸ್ಥಿತವಾಗಿ ಇರಿಸುವ ಬಗ್ಗೆ ಅಧ್ಯಯನ.
  • Nutrient Management (ಪೋಷಕಾಂಶ ನಿರ್ವಹಣೆ) – ಬೆಳೆಗಳಿಗೆ ಅಗತ್ಯವಿರುವ ಹಾಗೂ ಕೊರತೆ ಇರುವ ಪೋಷಕಾಂಶಗಳನ್ನು ಸಮತೋಲನವಾಗಿ ಹಾಗೂ ಪೂರಕವಾಗಿ ಒದಗಿಸುವುದು.
ಅಧ್ಯಯನದ ವಿಧಾನ

ಪ್ರತಿ ಬೆಳೆಗೆ ಉತ್ತಮ ಬಿತ್ತನೆ ಬೀಜದ ಆಯ್ಕೆ, ಬಿತ್ತನೆಯ ಸಮಯ, ಬಿತ್ತನೆ ಮಾಡಬೇಕಾದ ಬೀಜಗಳ ಪ್ರಮಾಣ, ಹಾಕಬೇಕಾದ ಗೊಬ್ಬರದ ಪ್ರಮಾಣ ಹಾಗೂ ಉತ್ತಮ ಉತ್ಪಾದನಾ ತಂತ್ರಗಳನ್ನು ಟೇಬಲ್ ರೂಪದಲ್ಲಿ ತಯಾರಿಸಿಕೊಳ್ಳಿ ಇದು ಈ ಪರೀಕ್ಷೆಯಲ್ಲಿ ಪ್ರಾಥಮಿಕ ಅಂಶವಾಗಿ ಕಾರ್ಯನಿರ್ವಹಿಸುತ್ತದೆ ಈ ಟೇಬಲ್ ಅನ್ನು ನೀವು ಸರಿಯಾಗಿ ತಿಳಿದುಕೊಂಡರೆ ಪ್ರಾಥಮಿಕ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರವನ್ನು ನೀಡಬಹುದು

2. Exam Tips : Soil Science and Agricultural Chemistry (ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ) 

ಮಣ್ಣಿನ ರಚನೆ, ಮಣ್ಣಿನ ಗುಣಲಕ್ಷಣಗಳು ಹಾಗೂ ಬೆಳೆಗಳನ್ನು ಬೆಳೆಯಬೇಕಾದರೆ ಬೇಕಾಗುವ ಸಸ್ಯ ಪೋಷಕಾಂಶಗಳ ಬಗ್ಗೆ ಈ ಪರಿಕಲ್ಪನೆಯನ್ನು ಅಧ್ಯಯನ ಮಾಡಬೇಕಾಗುತ್ತದೆ ಇದರ ಅಡಿಯಲ್ಲಿ ಬರುವ ಪ್ರಮುಖ ವಿಷಯಗಳೆಂದರೆ

  • Soil Formation (ಮಣ್ಣಿನ ರಚನೆ) – ಮಣ್ಣಿನಲ್ಲಿರುವ ಶಿಲೆಗಳು ಮತ್ತು ಸಾವಯವ ಪದಾರ್ಥಗಳಿಂದ ಮಣ್ಣು ರೂಪುಗೊಳ್ಳುವ ಪ್ರಕ್ರಿಯೆಯ ಬಗ್ಗೆ ವಿಷಯಗಳು.
  • Soil Texture (ಮಣ್ಣಿನ ವಿನ್ಯಾಸ) – ಮಣ್ಣು, ಮರಳು, ಸಿಲ್ಟ್, ಜೇಡಿಮಣ್ಣಿನ ಪ್ರಮಾಣದಿಂದ ಮಣ್ಣಿನ ಆಕಾರದಲ್ಲಿ ಹಾಗೂ ತೇವದಲ್ಲಿ ನಿರ್ಧಾರವಾಗುವ ಗುಣಲಕ್ಷಣ.
  • Soil Fertility (ಮಣ್ಣಿನ ಫಲವತ್ತತೆ) – ಸಸ್ಯಗಳಿಗೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುವ ಸಾಮರ್ಥ್ಯ ಮಣ್ಣಿಗೆ ಇದೆಯೇ ಎಂದು ತಿಳಿಯುವುದು.
  • Soil pH (ಮಣ್ಣಿನ ಪಿಎಚ್ ಮೌಲ್ಯ) – ಮಣ್ಣಿನ ಆಮ್ಲೀಯತೆ ಪ್ರಮಾಣ ಅಥವಾ ಕ್ಷಾರೀಯತೆ ಮಟ್ಟವನ್ನು ಸೂಚಿಸುವ ಮಾನದಂಡ.
  • Macro Nutrients (ಮುಖ್ಯ ಪೋಷಕಾಂಶಗಳು) – ಸಸ್ಯಗಳಿಗೆ ಬೆಳವಣಿಗೆ ಹೊಂದಲು ಬೇಕಾಗುವ ಹೆಚ್ಚಿನ ಪ್ರಮಾಣದ ಪೋಷಕಾಂಶಗಳು.
  • Micro Nutrients (ಸೂಕ್ಷ್ಮ ಪೋಷಕಾಂಶಗಳು) – ಸಸ್ಯಗಳಿಗೆ ಅಲ್ಪ ಪ್ರಮಾಣದಲ್ಲಿ ಪೂರೈಕೆಯಿದ್ದರೂ ಸಾಕಾಗುವ ಅಗತ್ಯವಿರುವ ಪೋಷಕಾಂಶಗಳು.
  • Organic Matter (ಸಾವಯವ ಪದಾರ್ಥ) – ಸಸ್ಯಗಳು ಹಾಗೂ ಕಾಲಕ್ರಮೇಣ ಭೂಮಿ ಸೇರುವ ಪ್ರಾಣಿ ಅವಶೇಷಗಳಿಂದ ಮಣ್ಣಿಗೆ ಸೇರುವ ಜೈವಿಕ ವಸ್ತುವಿನ ಅಂಶಗಳು.
Exam Tips

NPK, ಸೆಕೆಂಡರಿ ನ್ಯೂಟ್ರಿಯೆಂಟ್ಸ್ ಹಾಗೂ ಮೈಕ್ರೋನ್ಯೋಟ್ರಿಯೆಂಟ್ಸ್ ಲಕ್ಷಣಗಳು, ಕೊರತೆಗಳು, ಪರಿಹಾರ ಕ್ರಮಗಳು ಹಾಗೂ ನಿರ್ವಹಣೆ ಬಗ್ಗೆ ಚಾರ್ಟ್ ಅನ್ನು ರಚಿಸಿ ಏಕೆಂದರೆ ಚಾರ್ಟಿನ ಮೂಲಕ ಪಟ್ಟಿಯನ್ನು ತಯಾರಿಸಿದರೆ ಸುಲಭವಾಗಿ ನೆನಪಿನಲ್ಲಿ ಇಡಬಹುದು

3. Exam Tips : Genetics and Plant Breeding (ತಳಿಶಾಸ್ತ್ರ ಮತ್ತು ಸಸ್ಯ ಸಂತಾನೋತ್ಪತ್ತಿ)

ಈ ಪರಿಕಲ್ಪನೆಯಲ್ಲಿ ಸಸ್ಯಗಳ ಅನುವಂಶಿಕ ಗುಣಲಕ್ಷಣಗಳು ಮತ್ತು ಅವುಗಳ ವರ್ಗಾವಣೆ ಹಾಗೂ ಉತ್ತಮ ಇಳುವರಿ ಯನ್ನು ನೀಡುವಂತಹ ತಳಿಗಳ ಅಭಿವೃದ್ಧಿಯ ಬಗ್ಗೆ ಈ ವಿಷಯವು ಹೆಚ್ಚು ಗಮನ ಹರಿಸುತ್ತದೆ

ಪ್ರಮುಖ ವಿಷಯಗಳು
  • Mendel Laws (ಮೆಂಡಲ್ ನಿಯಮಗಳು) – ಸಸಿಗಳ ಮತ್ತು ಅವುಗಳ ಅನುವಂಶಿಕ ಗುಣಗಳ ವರ್ಗಾವಣೆಯ ವಿಧಾನ ಹಾಗೂ ಪ್ರಕ್ರಿಯೆಯನ್ನು ವಿವರಿಸುವ ಮೂಲಭೂತ ತತ್ವಗಳು.
  • Hybridization (ಸಂಕರೀಕರಣ) – ಉತ್ತಮ ಗುಣಗಳಿಗಾಗಿ ಎರಡು ಸಸ್ಯ ತಳಿಗಳನ್ನು ಸಂಯೋಜಿಸಿ ಕೃಷಿ ಮಾಡುವ ವಿಧಾನ.
  • Selection Methods (ಆಯ್ಕೆ ವಿಧಾನಗಳು) – ಉತ್ತಮ ಗುಣಲಕ್ಷಣಗಳನ್ನು ಹೊಂದಿರುವ ಸಸ್ಯಗಳನ್ನು ಅಧ್ಯಯನ ಮಾಡಿ ಆರಿಸಿಕೊಂಡು ಇಳುವರಿಯನ್ನು ಅಭಿವೃದ್ಧಿಪಡಿಸುವ ವಿಧಾನಗಳು.
  • Mutation Breeding (ಉತ್ಪರಿವರ್ತನೆ ಸಂವರ್ಧನೆ) – ಹೊಸ ಗುಣಗಳನ್ನು ಅಭಿವೃದ್ದಿಪಡಿಸಲು ಜೀನುಗಳಲ್ಲಿ ಬದಲಾವಣೆಯನ್ನು ಉಂಟುಮಾಡುವ ವಿಧಾನಗಳು.
  • Heterosis (ಸಂಕರ ಬಲ) – ಸಂಕರ ಸಂತತಿಯ ಅಂಶಗಳು ಪೋಷಕರಿಗಿಂತ ಉತ್ತಮವಾದ ಕಾರ್ಯಕ್ಷಮತೆ ಹೇಗೆ ತೋರುತ್ತದೆ ಎಂಬುದು.
  • Plant Genetic Resources (ಸಸ್ಯ ಆನುವಂಶಿಕ ಸಂಪನ್ಮೂಲಗಳು) – ಸಸ್ಯಗಳು ಜೀನೀಯ ವೈವಿಧ್ಯತೆ ಹೊಂದಿರುವ ಅಮೂಲ್ಯ ಸಂಪನ್ಮೂಲಗಳು ಎಂದು ಅಧ್ಯಯನ ಮಾಡುವುದು.

ಮೆಂಡಲ್ ನಿಯಮಗಳು ಹಾಗೂ ಬ್ರೀಡಿಂಗ್ ತಂತ್ರ ಹಾಗೂ ವಿಧಾನಗಳನ್ನು ಪುನರಾವರ್ತವಾಗಿ ಓದಿ ಏಕೆಂದರೆ ಇಂದಿನ ಕಂಪ್ಯೂಟರ್ ಯುಗದಲ್ಲಿ ಅನುವಂಶಿಕ ಗುಣಲಕ್ಷಣಗಳನ್ನು ಅರಿತು ಅವುಗಳ ವರ್ಗಾವಣೆ ಮೂಲಕ ಉತ್ತಮ ಇಳುವರಿ ಎಂದು ನೀಡುವಂತಹ ಸ್ಥಳಗಳನ್ನು ಅಭಿವೃದ್ಧಿಪಡಿಸುವುದು ಅವಶ್ಯಕ ಹಾಗೂ ಲಾಭದಾಯಕವಾಗಿದೆ

4. Exam Tips : Horticulture (ತೋಟಗಾರಿಕೆ)

ಹಣ್ಣು, ಹೂವು, ತರಕಾರಿ ಹಾಗೂ ಇತರ ತೋಟಗಾರಿಕಾ ಬೆಳೆಗಳ ಉತ್ಪಾದನೆ ಮತ್ತು ಅದಕ್ಕೆ ಸಂಬಂಧಿಸಿದ ಪರಿಕಲ್ಪನೆ ಇದಾಗಿದೆ ಇದರ ಅಡಿಯಲ್ಲಿ ಬರುವ ಪ್ರಮುಖ ವಿಷಯಗಳೆಂದರೆ

  • Fruit Crops (ಹಣ್ಣಿನ ಬೆಳೆಗಳು) – 
    ನಾವು ತಿನ್ನುವ ಆಹಾರಕ್ಕಾಗಿ ಹಣ್ಣುಗಳನ್ನು ಉತ್ಪಾದಿಸುವ ಕೃಷಿ ಬೆಳೆಗಳ ಬಗ್ಗೆ ಅಧ್ಯಯನ.
  • Vegetable Crops (ತರಕಾರಿ ಬೆಳೆಗಳು) – 
    ಆಹಾರ ತಯಾರಿಕೆಯಲ್ಲಿ ಬಳಸುವ ತರಕಾರಿಗಳನ್ನು ಬೆಳೆಯುವ ವಿವಿಧ ರೀತಿಯ ಕೃಷಿ ಬೆಳೆಗಳನ್ನು ಬೆಳೆಯುವ ವಿಧಾನಗಳು.
  • Floriculture (ಪುಷ್ಪಕೃಷಿ) – 
    ಹೂವುಗಳ ಉತ್ಪಾದನೆ, ಸಂರಕ್ಷಣೆ ಮಾಡುವಿಕೆ ಮತ್ತು  ಮಾರಾಟ ಹಾಗೂ ವ್ಯಾಪಾರಕ್ಕೆ ಸಂಬಂಧಿಸಿದ ಕೃಷಿ ವಿಧಾನಗಳು.
  • Plantation Crops (ತೋಟಗಾರಿಕಾ ವಾಣಿಜ್ಯ ಬೆಳೆಗಳು) – 
    ದೊಡ್ಡ ಪ್ರಮಾಣದಲ್ಲಿ ಬೆಳೆಯುವ ಉತ್ತಮ ಇಳುವರಿಯನ್ನು ನೀಡುವಂತಹ ದೀರ್ಘಾವಧಿಯ ವಾಣಿಜ್ಯ ಬೆಳೆಗಳನ್ನು ಬೆಳೆಯುವ ಪರಿನಾಮಕಾರಿ ವಿಧಾನಗಳು.
  • Spices and Condiments (ಸುಗಂಧ ದ್ರವ್ಯಗಳು ಮತ್ತು ಮಸಾಲೆಗಳು) – 
    ಆಹಾರದ ರುಚಿ ಹೆಚ್ಚಿಸುವ ಹಾಗೂ ಸುವಾಸನೆಯನ್ನು ಹೆಚ್ಚಿಸುವ ಸಸ್ಯಜನ್ಯ ಉತ್ಪನ್ನಗಳನ್ನು ಬೆಳಿಯುವ ವಿಧಾನ ಹಾಗೂ ಪದ್ದತಿಗಳ ಅಧ್ಯಯನ.

ಕರ್ನಾಟಕ ರಾಜ್ಯದಲ್ಲಿ ಬೆಳೆಯುವ ಪ್ರಮುಖ ತೋಟಗಾರಿಕಾ ಬೆಳೆಗಳು ಅವುಗಳನ್ನು ಬೆಳೆಯಲು ಬೇಕಾದ ನೈಸರ್ಗಿಕ ಗುಣಲಕ್ಷಣಗಳು ಮಣ್ಣಿನ PH ಮಟ್ಟ ಮಣ್ಣಿನ ಆರೋಗ್ಯದ ಮಟ್ಟ ಹಾಗೂ ಮಣ್ಣಿನಲ್ಲಿ ಇರಬೇಕಾದ ಪೋಷಕಾಂಶಗಳ ಅಧ್ಯಯನದ ಬಗ್ಗೆ ಹೆಚ್ಚು ಗಮನ ನೀಡಿ

5. Exam Tips : Plant Pathology (ಸಸ್ಯ ರೋಗಶಾಸ್ತ್ರ)

ಕೃಷಿ ಉತ್ಪಾದನೆಯಲ್ಲಿ ಸಸ್ಯಗಳಿಗೆ ಬರಬಹುದಾದಂತಹ ರೋಗಗಳು ಮತ್ತು ಅವುಗಳನ್ನು ಕೀಟನಾಶಕಗಳ ಸಿಂಪಡಿಸುವ ಮೂಲಕ ಹೇಗೆ ನಿರ್ವಹಣೆ ಮಾಡಬಹುದು ಎಂಬ ಪರಿಕಲ್ಪನೆಯಾಗಿದೆ ಇದರಡಿಯಲ್ಲಿ ಬರುವ ಪ್ರಮುಖ ವಿಷಯಗಳೆಂದರೆ

  • Fungal Diseases (ಶಿಲೀಂಧ್ರ ರೋಗಗಳು) – ಸಸ್ಯಗಳ ಮೇಲೆ ಶಿಲೀಂಧ್ರಗಳಿಂದ ಉಂಟಾಗುವ ವಿವಿಧ ರೋಗಗಳ ಗುಂಪು ಮಾಡುವಿಕೆ ಮತ್ತು ಪರಿಹಾರ.
  • Bacterial Diseases (ಬ್ಯಾಕ್ಟೀರಿಯಾ ರೋಗಗಳು) – ಪರಿಣಾಮ ಬೀರುವ ಬ್ಯಾಕ್ಟೀರಿಯಾಗಳಿಂದ ಸಸ್ಯಗಳಲ್ಲಿ ಉಂಟಾಗುವ ಸೋಂಕುಜನ್ಯ ರೋಗಗಳ ಬಗ್ಗೆ ಮಾಡುವ ಅಧ್ಯಯನ.
  • Viral Diseases (ವೈರಸ್ ರೋಗಗಳು) – ಅನುಪಯುಕ್ತ ವೈರಸ್‌ಗಳಿಂದ ಸಸ್ಯಗಳ ಬೆಳವಣಿಗೆಗೆ ಮತ್ತು ಸಸ್ಯ ಆರೋಗ್ಯದ ಮೇಲೆ ಹಾನಿ ಉಂಟುಮಾಡುವ ರೋಗಗಳು.
  • Disease Cycle (ರೋಗ ಚಕ್ರ) – ಸಸ್ಯಗಳಿಗೆ ಬರುವ ರೋಗದ ಆರಂಭದ ಹಂತದಿಂದ ಹರಡುವಿಕೆ ವರೆಗೆ ನಡೆಯುವ ಸಂಪೂರ್ಣ ಪ್ರಕ್ರಿಯೆಯ ಕೂಲಂಕುಷ ಅಧ್ಯಯನ.
  • Integrated Disease Management (ಸಮಗ್ರ ರೋಗ ನಿರ್ವಹಣೆ) – ವಿವಿಧ ವಿಧಾನಗಳನ್ನು ಬಳಸಿ ಸಸ್ಯ ರೋಗಗಳನ್ನು ಪರಿಣಾಮಕಾರಿಯಾಗಿ ಹೇಗೆ ನಿಯಂತ್ರಿಸುವುದು ಎಂಬುದರ ಬಗೆಗಿನ ವಿಷಯಗಳು.

ಸಸ್ಯಗಳಿಗೆ ಬರಬಹುದಾದಂತಹ ರೋಗಗಳ ಬಗ್ಗೆ ಹಾಗೂ ಬಂದಿರುವ ರೋಗದ ಕಾರಣಗಳು ಅದರ ಗುಣಲಕ್ಷಣಗಳು ಮತ್ತು ಯಾವ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ಅಂಶಗಳನ್ನು ಈ ಪರಿಕಲ್ಪನೆ ಅಡಿಯಲ್ಲಿ ಅಧ್ಯಯನ ಮಾಡಬೇಕು

6. Exam Tips : Agricultural Entomology (ಕೃಷಿ ಕೀಟಶಾಸ್ತ್ರ)

ಕೃಷಿ ಉತ್ಪಾದಕ ಬೆಳೆಗಳಿಗೆ ಹಾನಿ ಯನ್ನು ಉಂಟುಮಾಡುವಂತಹ ಕೀಟಗಳು ಹಾಗೂ ಇತರೆ ಅನವಶ್ಯಕ ಜೀವಿಗಳ ಬಗ್ಗೆ ಅಧ್ಯಯನವನ್ನು ಈ ಪರಿಕಲ್ಪನೆಯಲ್ಲಿ ಅಧ್ಯಯನ ಮಾಡಲಾಗುತ್ತದೆ ಇದರ ಅಡಿಯಲ್ಲಿ ಬರುವ ಪ್ರಮುಖ ವಿಷಯಗಳೆಂದರೆ

  • Insect Morphology (ಕೀಟಗಳ ರೂಪರಚನೆ) – ಸಸ್ಯಗಳಿಗೆ ಹರಡುವ ಕೀಟಗಳ ದೇಹದ ಆಕಾರ, ವಿವಿಧ ಅಂಗಗಳು ಮತ್ತು ಅವುಗಳ ರಚನೆಯ ಅಧ್ಯಯನ.
  • Life Cycle (ಜೀವನ ಚಕ್ರ) – ಜನನ ಪ್ರಕ್ರಿಯೆಯಿಂ ಪ್ರೌಢಾವಸ್ಥೆಯ ವರೆಗೆ ಕೀಟ ಜೀವಿಯ ಬೆಳವಣಿಗೆಯ ಹಂತಗಳು.
  • Beneficial Insects (ಉಪಯುಕ್ತ ಕೀಟಗಳು) – ಪರಾಗಸ್ಪರ್ಶ ಕ್ರಿಯೆ, ಕೀಟ ನಿಯಂತ್ರಣ ಹಾಗೂ ನಿರ್ವಹಣೆಗೆ ಸಹಕರಿಸುವ ಕೀಟಗಳು.
  • Integrated Pest Management (ಸಮಗ್ರ ಕೀಟ ನಿರ್ವಹಣೆ) – ವಿವಿಧ ವಿಧಾನಗಳನ್ನು ಬಳಸುವುದರ ಮೂಲಕ ಕೀಟಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ವ್ಯವಸ್ಥೆಗಳು.
  • Biological Control (ಜೈವಿಕ ನಿಯಂತ್ರಣ) – ಸಸ್ಯಗಳ ಮೇಲೆ ನೈಸರ್ಗಿಕ ಶತ್ರುಗಳಿಂದ ಆಗಬಹುದಾದ ಹಾನಿಕಾರಕ ಕೀಟಗಳನ್ನು ನಿಯಂತ್ರಿಸುವ ವಿಧಾನ.

ಈ ಪರಿಕಲ್ಪನೆ ಅಡಿಯಲ್ಲಿ ಪ್ರಮುಖ ಬೆಳೆಗಳು ಹಾಗೂ ಅವುಗಳಿಗೆ ಅಡ್ಡಬಹುದಾದ ಕೀಟಗಳು ಮತ್ತು ಅವುಗಳನ್ನು ನಿಯಂತ್ರಿಸಲು ಕೈಗೊಳ್ಳಬಹುದಾದ ನಿಯಂತ್ರಣ ಕ್ರಮಗಳನ್ನು ಈ ಪರಿಕಲ್ಪನೆಯಲ್ಲಿ ಹೆಚ್ಚಾಗಿ ಅಧ್ಯಯನ ಮಾಡಿ ಕೀಟಗಳನ್ನು ನಿರ್ವಹಿಸುವುದರಿಂದ ಉತ್ತಮ ಇಳುವರಿಯನ್ನು ಪಡೆಯಬಹುದು ಎಂಬ ಪರಿಕಲ್ಪನೆ ಇರುವುದರಿಂದ ಈ ಪರಿಕಲ್ಪನೆಯ ಮೇಲೆ ಹೆಚ್ಚಿನ ಗಮನವನ್ನು ನೀಡಿ

7. Exam Tips : Seed Science and Technology (ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ)

ಉತ್ತಮ ಇಳುವರಿ ಯನ್ನು ನೀಡಬಹುದಾದಂತಹ ಬೀಜಗಳ ಉತ್ಪಾದನೆ ಹೆಚ್ಚು ಕಾಲ ಸಂಸ್ಕರಣೆ ಮಾಡುವುದು ಹಾಗೂ ಹೆಚ್ಚು ಕಾಲ ಗುಣಮಟ್ಟವನ್ನು ಕಾಯ್ದಿರಿಸಲು ನಿಯಂತ್ರಣ ಕ್ರಮಗಳನ್ನು ಇಲ್ಲಿ ಅಧ್ಯಯನ ಮಾಡಬಹುದು

  • Seed Certification (ಬೀಜ ಪ್ರಮಾಣೀಕರಣ) – ಉತ್ತಮ ಇಳುವರಿಯನ್ನು ನೀಡುವಂತಹ ಗುಣಮಟ್ಟದ ಬೀಜಗಳನ್ನು ಅಧಿಕೃತವಾಗಿ ಪರಿಶೀಲಿಸಿ ಪ್ರಮಾಣೀಕರಿಸುವ ಪ್ರಕ್ರಿಯೆ.
  • Seed Testing (ಬೀಜ ಪರೀಕ್ಷೆ) – ಬೀಜಗಳ ಮೊಳಕೆ ಪ್ರಕ್ರಿಯೆ, ಶುದ್ಧತೆ ಕಾಪಾಡುವಿಕೆ ಮತ್ತು ಗುಣಮಟ್ಟದ ಪ್ರಮಾಣವನ್ನು ಪರೀಕ್ಷಿಸುವುದು.
  • Seed Processing (ಬೀಜ ಸಂಸ್ಕರಣೆ) – ಬೀಜಗಳನ್ನು ಸ್ವಚ್ಛಗೊಳಿಸುವುದು, ವಿಂಗಡಿಸುವುದು ಹಾಗೂ ದೀರ್ಘಕಾಲದಲ್ಲಿ ಸಂಗ್ರಹಕ್ಕೆ ಸಿದ್ಧಗೊಳಿಸುವ ಪ್ರಕ್ರಿಯೆ.
  • Seed Storage (ಬೀಜ ಸಂಗ್ರಹಣೆ) – ಬೀಜಗಳ ಉತ್ತಮ ಗುಣಮಟ್ಟವನ್ನು ಕಾಪಾಡಲು ಸೂಕ್ತವಾಗಿ ಹಾಗೂ ಸುರಕ್ಷಿತವಾಗಿ ಸಂಗ್ರಹಿಸುವ ವಿಧಾನ.

ಬೀಜಗಳ ಪ್ರಮಾಣಿಕೃತ ಗುಣಮಟ್ಟ ಮತ್ತು ಬೀಜಗಳ ವರ್ಗಗಳ ಮೇಲೆ ಹೆಚ್ಚು ಹೊತ್ತನ್ನು ನೀಡಿ ಏಕೆಂದರೆ ಉತ್ತಮ ಬಿತ್ತನೆ ಬೀಜಗಳು ಉತ್ತಮ ಇಳುವರಿಯನ್ನು ನೀಡುತ್ತವೆ

8. Exam Tips : Agricultural Economics (ಕೃಷಿ ಅರ್ಥಶಾಸ್ತ್ರ)

ಕೃಷಿ ಕ್ಷೇತ್ರವು ಉತ್ಪಾದನಾ ಕ್ಷೇತ್ರದಲ್ಲಿ ತೃತೀಯ ವಲಯ ಆಗಿರುವುದರಿಂದ ಕೈಗಾರಿಕೆ ಮತ್ತು ಸೇವಾ ವಲಯಗಳ ಜೊತೆಯಲ್ಲಿ ಕೃಷಿ ಕ್ಷೇತ್ರವು ಆರ್ಥಿಕ ಅಭಿವೃದ್ಧಿಗೆ ಹೆಚ್ಚು ಒತ್ತನ್ನು ನೀಡುತ್ತದೆ ಆದುದರಿಂದ ಕೃಷಿ ಉತ್ಪಾದನೆ ಮತ್ತು ಆರ್ಥಿಕತೆ ನಡುವಿನ ಸಂಬಂಧವನ್ನು ಈ ಅಗ್ರಿಕಲ್ಚರಲ್ ಎಕನಾಮಿಕ್ಸ್ ವಿವರಿಸುತ್ತದೆ

  • Demand and Supply (ಬೇಡಿಕೆ ಮತ್ತು ಪೂರೈಕೆ) – ಕೃಷಿ ವಸ್ತುಗಳ ಬೇಡಿಕೆ ಪ್ರಮಾಣ ಹಾಗೂ ಪೂರೈಕೆಯ ಪ್ರಮಾಣದ ನಡುವಿನ ಆರ್ಥಿಕ ಸಂಬಂಧದ ಅಧ್ಯಯನ.
  • Cost Concepts (ವೆಚ್ಚ ಪರಿಕಲ್ಪನೆಗಳು) – ಕೃಷಿ ಉತ್ಪಾದಕಗಳ ಉತ್ಪಾದನೆಗೆ ತಗಲುವ ವಿವಿಧ ರೀತಿಯ ಖರ್ಚು ವೆಚ್ಚಗಳ ತತ್ವಗಳು.
  • Farm Management (ಕೃಷಿ ನಿರ್ವಹಣೆ) – ಕೃಷಿ ಸಂಪನ್ಮೂಲಗಳನ್ನು ಉತ್ತಮ ರೀತಿಯಲ್ಲಿ ಪರಿಣಾಮಕಾರಿಯಾಗಿ ಯೋಜಿಸಿ ನಿಯೋಜಿಸಿ ನಿರ್ವಹಿಸುವ ಕಲೆಗಳು.
  • Agricultural Finance (ಕೃಷಿ ಹಣಕಾಸು) – ಕೃಷಿ ಚಟುವಟಿಕೆಗಳನ್ನು ಕೈಗೊಳ್ಳು ಹಾಗೂ ಹೆಚ್ಚಿಸಲು ಅಗತ್ಯವಾದ ಹಣಕಾಸಿನ ವ್ಯವಸ್ಥೆಯನ್ನು ಒದಗಿಸುವುದು ಮತ್ತು ನಿರ್ವಹಣೆ ಮಾಡುವುದು.
  • Agricultural Policy (ಕೃಷಿ ನೀತಿ) – ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರವು ರೂಪಿಸುವ ಪ್ರಮುಖ ನಿಯಮಗಳು ಮತ್ತು ಯೋಜನೆಗಳ ವಿಷಯಗಳು.

ಈ ಎಲ್ಲ ವಿಚಾರಗಳನ್ನು ಬೆಚ್ಚ ವಿಚಾರಗಳ ರೀತಿಯಲ್ಲಿ ಟೇಬಲ್ ರೂಪದಲ್ಲಿ ಬರೆದುಕೊಂಡು ಓದಿ ಇದು ಒಂದು ಕಾಲಾನುಕ್ರಮ ಪರೀಕ್ಷಾ ಸಲಹೆಯನ್ನು ನೀಡುತ್ತದೆ

9. Exam Tips : Agricultural Statistics (ಕೃಷಿ ಅಂಕಿಅಂಶಗಳು)

ಕೃಷಿ ಕ್ಷೇತ್ರದಲ್ಲಿನ ವರದಿಗಳು ಮಾಹಿತಿ ಸಂಗ್ರಹಣೆ ವಿಶ್ಲೇಷಣೆ ಮತ್ತು ಅವುಗಳನ್ನು ಹೋಲಿಕೆ ಮಾಡಿ ಹೆಚ್ಚು ಇಳುವರಿಯನ್ನು ಹೇಗೆ ಪಡೆಯಬಹುದು ಎಂಬ ಮಾಹಿತಿಯನ್ನು ಸಂಗ್ರಹಿಸಿ ವಿಶ್ಲೇಷಿಸಿ ಅಳತೆ ಮಾಡುವ ವಿಚಾರಗಳು ಈ ಕೆಳಕಂಡಂತಿವೆ

  • Mean (ಸರಾಸರಿ) – ಕೃಷಿ ಚಟುವಟಿಕೆ ಹಾಗೂ ಉತ್ಪನ್ನಗಳ ಎಲ್ಲ ಮೌಲ್ಯಗಳ ಮೊತ್ತವನ್ನು ಸಂಖ್ಯೆಯಿಂದ ಭಾಗಿಸಿದ ಮೌಲ್ಯದ ವಿಷಯಗಳು.
  • Median (ಮಧ್ಯಕ) – ಕೃಷಿ ವರದಿ ಹಾಗೂ ಮಾಹಿತಿಗಳ ಕ್ರಮಬದ್ಧ ದತ್ತಾಂಶದ ಮಧ್ಯದಲ್ಲಿರುವ ಮೌಲ್ಯವನ್ನು ಮಧ್ಯಕ ಎನ್ನಲಾಗುತ್ತದೆ.
  • Mode (ಬಹುಲಕ) – ಲಭ್ಯವಿರುವ ದತ್ತಾಂಶದಲ್ಲಿ ಹೆಚ್ಚು ಬಾರಿ ಕಾಣಿಸಿಕೊಳ್ಳುವ ಮೌಲ್ಯವನ್ನು ಬಹುಲಕ ಎಂದು ಕರೆಯಲಾಗುತ್ತದೆ.
  • Correlation (ಸಹಸಂಬಂಧ) – ಎರಡು ವರದಿ ಮೌಲ್ಯಗಳ ಗಳ ನಡುವಿನ ಸಂಬಂಧದ ಮಟ್ಟವನ್ನು ಸೂಚಿಸುವ ಅಳತೆಯ ವಿಧಾನ.
  • Regression (ಪ್ರತಿಗಮನ) –  ಎರಡು ಮೌಲ್ಯಗಳ ನಡುವಿನ ಸಂಬಂಧವನ್ನು ಊಹೆ ಮಾಡಲು ಬಳಸುವ ಪರಿಣಾಮಕಾರಿ ಸಂಖ್ಯಾಶಾಸ್ತ್ರೀಯ ವಿಧಾನ.
  • Sampling (ಮಾದರಿ ಆಯ್ಕೆ) –  ಕೃಷಿ ಸಮೂಹದಿಂದ ಪ್ರತಿನಿಧಿಸುವ ಕೆಲವು ಉತ್ತಮ ಘಟಕಗಳನ್ನು ಆಯ್ಕೆ ಮಾಡುವ ವಿಧಾನ.

ಈ ಪರಿಕಲ್ಪನೆ ಅಡಿಯಲ್ಲಿ ಬರುವ ಸೂತ್ರಗಳನ್ನು ಪ್ರತಿನಿತ್ಯ ಅಭ್ಯಾಸ ಮಾಡಿ ಹಾಗೂ ಪ್ರಾಯೋಗಿಕ ಅಭ್ಯಾಸಗೆ ಹೆಚ್ಚಿನ ಒತ್ತನ್ನು ನೀಡಿ ಮೌಟಿಕವಾಗಿ ಅಥವಾ ಥಿಯರಿಟಿಕಲ್ ಆಗಿ ಈ ಸೂತ್ರಗಳನ್ನು ಅಭ್ಯಾಸ ಮಾಡದೆ ಬರೆಯುವುದರ ಮೂಲಕ ಪ್ರತಿದಿನ ಅಭ್ಯಾಸ ಮಾಡಿ

10. Exam Tips : Agricultural Extension (ಕೃಷಿ ವಿಸ್ತರಣೆ)

ಅಭಿವೃದ್ಧಿ ಹೊಂದುತ್ತಿರುವ ಕೃಷಿ ತಂತ್ರಜ್ಞಾನ ಹಾಗೂ ಸಂಶೋಧನಾತ್ಮಕ ವಿಚಾರಗಳನ್ನು ರೈತರಿಗೆ ಪರಿಣಾಮಕವಾಗಿ ತಲುಪಿಸುವ ಪ್ರಕ್ರಿಯೆಯನ್ನು ಈ ಪರಿಕಲ್ಪನೆ ಅಧ್ಯಯನ ಮಾಡುತ್ತದೆ

  • Agricultural Extension Methods (ಕೃಷಿ ವಿಸ್ತರಣಾ ವಿಧಾನಗಳು) – ಕೃಷಿ ಚಟುವಟಿಕೆಗಳನ್ನು ಕೈಗೊಳೂವ ರೈತರಿಗೆ ಉತ್ತಮ ಕೃಷಿ ತಂತ್ರಜ್ಞಾನವನ್ನು ತಲುಪಿಸುವ ವಿವಿಧ ವಿಧಾನಗಳು.
  • Communication Process (ಸಂವಹನ ಪ್ರಕ್ರಿಯೆ) – ಕೃಷಿಗೆ ಸಂಬಂಧಿಸಿದ ಮಾಹಿತಿ ಕಳುಹಿಸುವುದು, ಸ್ವೀಕರಿಸುವುದು ಮತ್ತು ಅರ್ಥ ಮಾಡಿಸುವ ಕ್ರಮಗಳು.
  • Rural Development Programmes (ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳು) – ಗ್ರಾಮಗಳ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಸಾಧಿಸಲು ರೂಪಿಸಿದ ಕೃಷಿ ಸಂಬಂಧಿತ ಯೋಜನೆಗಳು.
  • Training Methods (ತರಬೇತಿ ವಿಧಾನಗಳು) – ಜ್ಞಾನ ಹೆಚ್ಚಿಸಿಕೊಳ್ಳುವುದು ಮತ್ತು ಕೌಶಲ್ಯವನ್ನು ಪರಿಣಾಮಕಾರಿಯಾಗಿ ಅಭಿವೃದ್ಧಿಗೆ ಬಳಸುವ ಬೋಧನಾ ವಿಧಾನಗಳು.

ಕೃಷಿ ಕ್ಷೇತ್ರದಲ್ಲಿನ ಸರ್ಕಾರದ ಯೋಜನೆಗಳು ಹಾಗೂ Extension Model ಮೇಲೆ ಹೆಚ್ಚು ಗಮನ ಹರಿಸಿ ಇದೊಂದು ಪ್ರಾಯೋಗಿಕ ವಿಚಾರ ಆಗಿರುವುದರಿಂದ ಹೆಚ್ಚಿನ ಅಧ್ಯಯನವನ್ನು ಬಯಸುತ್ತದೆ

11. Exam Tips : Agricultural Engineering (ಕೃಷಿ ಇಂಜಿನಿಯರಿಂಗ್)

ಕೃಷಿ ಪದ್ಧತಿಯಲ್ಲಿನ ಯಂತ್ರೋಪಕರಣಗಳ ಅಳವಳಿಕೆ ಹಾಗೂ ನಿರ್ವಹಿಸಬೇಕಾದ ತಾಂತ್ರಿಕ ವಿಧಾನಗಳ ಬಳಕೆಯನ್ನು ಈ ಪರಿಕಲ್ಪನೆ ಅಧ್ಯಯನ ಮಾಡುತ್ತದೆ

  • Farm Machinery (ಕೃಷಿ ಯಂತ್ರೋಪಕರಣಗಳು) – ಕೃಷಿ ಚಟುವಟಿಕೆಗಳನ್ನು ಸುಲಭಗೊಳಿಸಲು ಬಳಸುವ ಯಂತ್ರೋಪಕರಣಗಳ ಬಗೆಗಿನ ವಿಷಯಗಳು
  • Irrigation Engineering (ನೀರಾವರಿ ಇಂಜಿನಿಯರಿಂಗ್) – ನೀರಾವರಿ ಮಾಡುವ ವ್ಯವಸ್ಥೆಗಳ ರಚನೆ ಹಾಗೂ ವಿನ್ಯಾಸ, ನಿರ್ಮಾಣ ಪ್ರಕ್ರಿಯೆ ಮತ್ತು ನಿರ್ವಹಣೆ ವಿಧಾನಗಳ ಅಧ್ಯಯನ.
  • Soil and Water Conservation (ಮಣ್ಣು ಮತ್ತು ನೀರು ಸಂರಕ್ಷಣೆ) – ಮಣ್ಣಿನ ಸವಕಳಿ ಹಾಗೂ ನೀರು ನಷ್ಟ ಆಗುವುದನ್ನು ತಡೆದು ಸಂರಕ್ಷಿಸುವ ವಿಧಾನಗಳು.
  • Farm Power (ಕೃಷಿ ಶಕ್ತಿ) – ಕೃಷಿ ಉತ್ಪಾದಕಗಳನ್ನು ಉತ್ಪಾದಿಸುವಲ್ಲಿ ಬಳಸುವ ಮಾನವ ಶಕ್ತಿ, ಪ್ರಾಣಿ ಶಕ್ತಿ ಮತ್ತು ಯಾಂತ್ರಿಕ ಶಕ್ತಿಯ ವಿಚಾರಗಳು.

ಕೃಷಿ ಪದ್ಧತಿಯಲ್ಲಿ ಬಳಸುವಂತಹ ಟ್ರ್ಯಾಕ್ಟರ್‌, ಪಂಪ್‌ ಸೆಟ್, ಕಳೆನಿರ್ವಾಹಕ ಮುಂತಾದ ಆಧುನಿಕ ಕೃಷಿ ಯಂತ್ರಗಳ ಬಗ್ಗೆ ತಿಳಿದುಕೊಳ್ಳಿ ಮತ್ತು ಸರ್ಕಾರವು ಈ ಕೃಷಿ ಯಂತ್ರಗಳನ್ನು ಖರೀದಿಸಲು ನೀಡುವ ಸಬ್ಸಿಡಿ ಯೋಜನೆಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳಿ

12. Exam Tips : Farm Power and Machinery Engineering (ಕೃಷಿ ವಿದ್ಯುತ್ ಮತ್ತು ಯಂತ್ರೋಪಕರಣಗಳ ಎಂಜಿನಿಯರಿಂಗ್)

ಕೃಷಿ ಉತ್ಪನ್ನಗಳ ಚಟುವಟಿಕೆಗಳಲ್ಲಿ ಬರುವಂತಹ ಯಂತ್ರೋಪಕರಣಗಳು ಹಾಗೂ ಅವುಗಳ ನಿರ್ವಹಣೆಯ ಬಗ್ಗೆ ಈ ವಿಚಾರವು ಅಧ್ಯಯನ ಮಾಡುತ್ತದೆ

  • Tractor Systems (ಟ್ರ್ಯಾಕ್ಟರ್ ವ್ಯವಸ್ಥೆಗಳು) – ಟ್ರ್ಯಾಕ್ಟರಿನ ಎಂಜಿನ್, ಸಂಚಾರ ವಿಧಾನ ಮತ್ತು ನಿಯಂತ್ರಣ ಮಾಡುವಂತಹ ಘಟಕಗಳ ವ್ಯವಸ್ಥೆ.
  • Tillage Implements (ಉಳುಮೆ ಉಪಕರಣಗಳು) – ಭೂಮಿಯನ್ನು ಬಿತ್ತನೆಗಾಗಿ ಸಿದ್ಧಪಡಿಸಲು ಬಳಸುವ ಕೃಷಿ ಉಪಕರಣಗಳು ಮತ್ತು ಯಂತ್ರಗಳು.
  • Harvesting Equipment (ಕೊಯ್ಲು ಉಪಕರಣಗಳು) – ಬೆಳೆ ಕೊಯ್ಲು ಮಾಡಲು ಮತ್ತು ಹೆಚ್ಚು ಕಾಲ ಸಂಗ್ರಹಣೆ ಮಾಡಲು ಬಳಸುವ ಯಂತ್ರೋಪಕರಣಗಳು.
  • Power Transmission (ಶಕ್ತಿ ಪ್ರಸರಣ) – ಎಂಜಿನ್‌ ನಿಂದ ಯಂತ್ರದ ಭಾಗಗಳಿಗೆ ಶಕ್ತಿ ವರ್ಗಾಯಿಸುವ ವ್ಯವಸ್ಥೆಯ ಬಗೆಗಿನ ವಿಚಾರಗಳು.

ಈ ವಿಚಾರಗಳನ್ನು ಚಿತ್ರಗಳ ಮೂಲಕ ಅಧ್ಯಯನ ಮಾಡಿದರೆ ಸುಲಭವಾಗಿ ಅರ್ಥವಾಗುತ್ತದೆ ಹಾಗೂ ಸುಲಭವಾಗಿ ಜ್ಞಾಪಕ ಇಟ್ಟುಕೊಳ್ಳಬಹುದು

13. Exam Tips : Soil and Water Engineering (ಮಣ್ಣು ಮತ್ತು ನೀರು ಎಂಜಿನಿಯರಿಂಗ್)

ಮಣ್ಣಿನ ಆರೋಗ್ಯ ನಿರ್ವಹಣೆ ಹಾಗೂ ಅತ್ಯಾಧುನಿಕ ನೀರಾವರಿ ಪದ್ಧತಿಗಳ ಬಗ್ಗೆ ಈ ವಿಚಾರ ಇದೆ

  • Irrigation Methods (ನೀರಾವರಿ ವಿಧಾನಗಳು) – ಕೃಷಿ ಬೆಳೆಗಳಿಗೆ ನೀರನ್ನು ಒದಗಿಸುವ ವಿವಿಧ ತಂತ್ರಗಳು ಮತ್ತು ವಿಧಾನಗಳನ್ನು ಅರಿಯುವುದು.
  • Water Requirement (ನೀರಿನ ಅವಶ್ಯಕತೆ) – ಸಸಿಗಳ ಹಾಗೂ ಬೆಳೆಗಳ ಬೆಳವಣಿಗೆಗೆ ಅಗತ್ಯವಾಗುವ ನೀರಿನ ಒಟ್ಟು ಪ್ರಮಾಣವನ್ನು ಅರ್ಥ ಮಾಡಿಕೊಳ್ಳುವುದು.
  • Watershed Management (ಜಲಾನಯನ ಪ್ರದೇಶ ನಿರ್ವಹಣೆ) – ನೀರು ಮತ್ತು ಮಣ್ಣಿನ ಸಂಪನ್ಮೂಲಗಳನ್ನು ಸಮಗ್ರ ಮಟ್ಟದಲ್ಲಿ ಸಂರಕ್ಷಣೆ ಮಾಡುವುದು ಹಾಗೂ ಅಭಿವೃದ್ಧಿಪಡಿಸುವುದು.
  • Drainage (ಒಳಚರಂಡಿ ವ್ಯವಸ್ಥೆ) – ಹೆಚ್ಚುವರಿ ನೀರನ್ನು ಹಾಗೂ ಉಪಯೋಗವಿಲ್ಲದ ನೀರನ್ನು ಭೂಮಿಯಿಂದ ಹೊರಕ್ಕೆ ಹಾಕುವ ವ್ಯವಸ್ಥೆ ಮತ್ತು ವಿಧಾನಗಳು.

ಕರ್ನಾಟಕದ ನೀರಾವರಿ ಯೋಜನೆಗಳು ಅವುಗಳ ಉಪಯೋಗ ಅನಾನುಕೂಲ ಹಾಗೂ ವಿವರಗಳನ್ನು ತಿಳಿದುಕೊಳ್ಳಿ ಪ್ರಮುಖವಾಗಿ ಯೋಜನೆಗಳ ಆರಂಭಿಕ ವರ್ಷ ಹಾಗೂ ಆರಂಭಿಕ ಹಂತದಲ್ಲಿನ ಸವಾಲು ಹಾಗೂ ಪರಿಹಾರಗಳು

14. Exam Tips : Food Science and Nutrition (ಆಹಾರ ವಿಜ್ಞಾನ ಮತ್ತು ಪೋಷಣೆ)

ಕೃಷಿ ಉತ್ಪಾದಕಗಳಿಂದ ಬಂದ ಆಹಾರದ ಪೌಷ್ಟಿಕಾಂಶದ ಮಟ್ಟ ಹಾಗೂ ಅದರ ಗುಣಮಟ್ಟದ ಅಧ್ಯಯನವನ್ನು ಈ ಪರಿಕಲ್ಪನೆಯಲ್ಲಿ ಅಧ್ಯಯನ ಮಾಡಲಾಗುತ್ತದೆ

  • Carbohydrates (ಕಾರ್ಬೋಹೈಡ್ರೇಟ್‌ಗಳು) – ನಮ್ಮ ದೇಹಕ್ಕೆ ಶಕ್ತಿಯನ್ನು ಒದಗಿಸುವ ಪ್ರಮುಖ ಪೋಷಕಾಂಶಗಳ ಗುಂಪುಗಳು.
  • Proteins (ಪ್ರೋಟೀನ್‌ಗಳು) – ದೇಹದ ಬೆಳವಣಿಗೆಗೆ ಮತ್ತು ಅಂಗಾಂಶಗಳ ಉತ್ತಮ ನಿರ್ಮಾಣಕ್ಕೆ ಅಗತ್ಯವಿರುವ ಪೋಷಕಾಂಶಗಳು.
  • Vitamins (ವಿಟಮಿನ್‌ಗಳು) – ದೇಹದ ಕಾರ್ಯಗಳನ್ನು ನಿಯಂತ್ರಿಸಲು ಅತೀ ಪ್ರಮುಖವಾಗಿರರುವ ಅಗತ್ಯ ಸೂಕ್ಷ್ಮ ಪೋಷಕಾಂಶಗಳು.
  • Minerals (ಖನಿಜಾಂಶಗಳು) – ದೇಹದ ಆರೋಗ್ಯವನ್ನು ಮತ್ತು ಉತ್ತಮ ಬೆಳವಣಿಗೆಗೆ ಅಗತ್ಯವಾದ ಖನಿಜ ಪದಾರ್ಥಗಳು.
  • Balanced Diet (ಸಮತೋಲಿತ ಆಹಾರ) – ಎಲ್ಲ ರೀತಿಯ ಅಗತ್ಯ ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ಸಮಗ್ರವಾಗಿ ಹೊಂದಿರುವ ಆಹಾರ.

ಈ ವಿಚಾರಗಳನ್ನು ಸಂಪೂರ್ಣವಾಗಿ ಓದಿ ಕಾಲಾನುಕ್ರಮದ ಚಾರ್ಟ್ ಮೂಲಕ ರಚಿಸಿ ಪ್ರತಿನಿತ್ಯ ಓದುವುದರಿಂದ ಹೆಚ್ಚು ನೆನಪಿನಲ್ಲಿರುತ್ತದೆ ಹಾಗೂ ಪರಿಚಿಕೆ ಹೆಚ್ಚು ಸಹಾಯಕಾರಿ

15. Exam Tips : Food Processing Technology (ಆಹಾರ ಸಂಸ್ಕರಣಾ ತಂತ್ರಜ್ಞಾನ)

ಈ ಕೃಷಿ ಉತ್ಪನ್ನಗಳನ್ನು ಹೆಚ್ಚು ಕಾಲ ಹೇಗೆ ಸಂಸ್ಕರಿಸಬಹುದು ಹಾಗೂ ಸಂಸ್ಕರಣ ಘಟಕದಲ್ಲಿ ಇರಿಸಲು ಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಈ ವಿಷಯದ ಅಡಿಯಲ್ಲಿ ಅಧ್ಯಯನ ಮಾಡಬೇಕು

  • Agricultural Product Preservation (ಕೃಷಿ ಉತ್ಪನ್ನ ಸಂರಕ್ಷಣೆ) – ಕೃಷಿ ವಲಯದ ಉತ್ಪನ್ನಗಳ ಗುಣಮಟ್ಟವನ್ನು ದೀರ್ಘಕಾಲದ ಸಮಯಕ್ಕೆ ಕಾಪಾಡುವ ವಿಧಾನಗಳು.
  • Agricultural Product Drying (ಕೃಷಿ ಉತ್ಪನ್ನ ಒಣಗಿಸುವಿಕೆ) – ಕೃಷಿ ಪದಾರ್ಥಗಳ ತೇವಾಂಶದ ಮಟ್ಟವನ್ನು ಕಡಿಮೆ ಮಾಡಿ ಉತ್ಪನ್ನವನ್ನು ದೀರ್ಘಕಾಲಕ್ಕೆ ಸುರಕ್ಷಿತವಾಗಿಡುವ ಪ್ರಕ್ರಿಯೆ.
  • Agricultural Product Canning (ಕೃಷಿ ಉತ್ಪನ್ನ ಡಬ್ಬೀಕರಣ) – ಉತ್ಪನ್ನಗಳನ್ನು ಡಬ್ಬಿಗಳಲ್ಲಿ ಉತ್ತಮ ರೀತಿಯಲ್ಲಿ ಸಂರಕ್ಷಿಸಿ ದೀರ್ಘಕಾಲ ಸಮಯ ಉಳಿಸುವ ವಿಧಾನ.
  • Agricultural Product Packaging (ಕೃಷಿ ಉತ್ಪನ್ನ ಪ್ಯಾಕೇಜಿಂಗ್) – ಉತ್ಪನ್ನಗಳನ್ನು ರಕ್ಷಣೆಗಾಗಿ ಹಾಳಾಗದಂತೆ ಸೂಕ್ತವಾಗಿ ಪ್ಯಾಕಿಂಗ್ ಮಾಡುವ ಪ್ರಕ್ರಿಯೆ.
  • Agricultural Product Storage (ಕೃಷಿ ಉತ್ಪನ್ನ ಸಂಗ್ರಹಣೆ) – ‌ಕೃಷಿ ಉತ್ಪನ್ನಗಳನ್ನು ಸುರಕ್ಷಿತವಾಗಿ ಸಂಗ್ರಹಣೆ ಮಾಡಿ ಗುಣಮಟ್ಟವನ್ನು ಕಾಪಾಡುವ ವಿಧಾನ.

ಈ ಪ್ರಕ್ರಿಯೆಗಳ ಫ್ಲೋ ಚಾರ್ಟ್ ಗಳನ್ನು ರಚಿಸಿ ಅಂತಹಂತವಾಗಿ ಅರ್ಥಮಾಡಿಕೊಂಡು ಓದಬೇಕು

16. Exam Tips : Food Safety and Quality‌ (ಆಹಾರ ಸುರಕ್ಷತೆ ಮತ್ತು ಗುಣಮಟ್ಟ)

ಕೃಷಿ ಉತ್ಪಾದಕ ವಸ್ತುಗಳನ್ನು ಹೆಚ್ಚು ಕಾಲ ಹೇಗೆ ಸಂಸ್ಕರಿಸಬೇಕು ಹಾಗೂ ಸಂಸ್ಕರಿಸಲು ಇರಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ ಈ ವಿಚಾರಗಳನ್ನು ಓದಬೇಕು

  • Hazard Analysis Critical Control Point (HACCP) (ಅಪಾಯ ವಿಶ್ಲೇಷಣೆ ಮತ್ತು ನಿರ್ಣಾಯಕ ನಿಯಂತ್ರಣ ಬಿಂದುಗಳು) – ಆಹಾರ ಪದಾರ್ಥಗಳ ಸುರಕ್ಷತೆಗಾಗಿ ಅಪಾಯಗಳನ್ನು ಆದಷ್ಟು ಬೇಗ ಗುರುತಿಸಿ ನಿಯಂತ್ರಣಕ್ಕೆ ತರುವ ವ್ಯವಸ್ಥೆ.
  • Good Manufacturing Practice (GMP) (ಉತ್ತಮ ಉತ್ಪಾದನಾ ಪದ್ಧತಿ) – ಸುರಕ್ಷಿತ ಉತ್ಪಾದನೆ ಮತ್ತು ಗುಣಮಟ್ಟದ ಉತ್ಪನ್ನವನ್ನು ತಯಾರಿಸುವಲ್ಲಿ ಅನುಸರಿಸುವ ನಿಯಮಗಳು.
  • Food Standards (ಆಹಾರ ಗುಣಮಟ್ಟದ ಮಾನದಂಡಗಳು) – ಆಹಾರ ಪದಾರ್ಥಗಳ ಸುರಕ್ಷತೆ, ಗುಣಮಟ್ಟ ಮತ್ತು ಶುದ್ಧತೆಯನ್ನು ಕಾಪಾಡಲು ಅಧಿಕೃತ ಮಾನದಂಡಗಳು.
  • Quality Control (ಗುಣಮಟ್ಟ ನಿಯಂತ್ರಣ) – ಕೃಷಿ  ಉತ್ಪನ್ನಗಳ ಗುಣಮಟ್ಟವನ್ನು ಉತ್ತಮ ರೀತಿಯಲ್ಲಿ ಪರಿಶೀಲಿಸಿ ನಿರ್ವಹಿಸುವ ಕ್ರಮಗಳ ವಿಚಾರಗಳು.

ಈ ವಿಚಾರಗಳ ಬಗ್ಗೆ ಹೆಚ್ಚು ಓದಬೇಕಾಗಿದ್ದು ವಿವರವಾದ ಟಿಪ್ಪಣಿಗಳನ್ನು ತಯಾರಿಸಿ ಹಾಗೂ ಕಿರು ನೋಟ್ಸ್ ಮಾಡಿಕೊಳ್ಳಿ

17. Exam Tips : Biotechnology (ಜೈವಿಕ ತಂತ್ರಜ್ಞಾನ)

ಸಸ್ಯಗಳ ಅಭಿವೃದ್ಧಿ ಹಾಗೂ ಸಸ್ಯಗಳ ನಿರ್ವಹಣೆಯಲ್ಲಿ ನಾವು ಮಾಡಬೇಕಾದಂತಹ ನಿರ್ವಹಣೆ ಹಾಗೂ ಸಸ್ಯ ಅಧ್ಯಯನದ ಬಗ್ಗೆ ಇಲ್ಲಿ ಅಧ್ಯಯನ ಮಾಡಬೇಕು

  • Tissue Culture (ಅಂಗಾಂಶ ಸಂವರ್ಧನೆ) – ಸಸ್ಯಗಳ ಅಂಗಾಂಶಗಳಿಂದ ಪ್ರಯೋಗಾಲಯದಲ್ಲಿ ಹೊಸ ಹೊಸ ಉತ್ತಮ ಇಳುವರಿಯನ್ನು ನೀಡುವ ಸಸ್ಯಗಳನ್ನು ಬೆಳೆಸುವ ವಿಧಾನ.
  • Genetic Engineering (ಆನುವಂಶಿಕ ಅಭಿಯಾಂತ್ರಿಕತೆ) – ಜೀವಿಗಳ ಜೀನುಗಳನ್ನು ಸರಿಯಾದ ರೀತಿಯಲ್ಲ್ಲಿ ಬದಲಾಯಿಸಿ ಹೊಸ ಗುಣಗಳನ್ನು ಸೇರಿಸಿ ಬೆಳೆಸುವ ತಂತ್ರಜ್ಞಾನ.
  • Molecular Markers (ಅಣುಮಟ್ಟದ ಗುರುತುಗಳು) – ಜೀನ್ಗಳು ಮತ್ತು ಅವುಗಳ ಗುಣಲಕ್ಷಣಗಳನ್ನು ಗುರುತಿಸಲು ಪರಿಣಾಮಕಾರಿಯಾಗಿ ಬಳಸುವ ಅಣು ಸೂಚಕಗಳು.
  • Transgenic Crops (ಜೀನ್ ಪರಿವರ್ತಿತ ಬೆಳೆಗಳು) – ಬೇರೆ ಜೀವಿಗಳ ಜೀನ್ಗಳನ್ನು ಇನ್ನೊಂದು ಜೀವಿಯ ಜೀನ್‌ ಗಳ ಜೊತೆ ಸೇರಿಸಿ ಅಭಿವೃದ್ಧಿಪಡಿಸಿದ ಬೆಳೆಗಳು.
  • Biofertilizers (ಜೈವಿಕ ಗೊಬ್ಬರಗಳು) – ಸೂಕ್ಷ್ಮಜೀವಿಗಳನ್ನು ಬಳಸುವ ಮೂಲಕ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಗೊಬ್ಬರಗಳು.
  • Biopesticides (ಜೈವಿಕ ಕೀಟನಾಶಕಗಳು) – ನೈಸರ್ಗಿಕ ಜೀವಿಗಳಿಂದ ತಯಾರಿಸಿದ ಸಸ್ಯ ಹಾಗೂ ಪರಿಸರ ಸ್ನೇಹಿ ಕೀಟನಾಶಕಗಳು.
  • Waste Management (ತ್ಯಾಜ್ಯ ನಿರ್ವಹಣೆ) – ತ್ಯಾಜ್ಯಗಳ ಸಂಗ್ರಹಣೆ, ಸಂಸ್ಕರಣೆ ಮತ್ತು ಯಾವುದೇ ತೊಂದರೆ ಇಲ್ಲದೇ ವಿಲೇವಾರಿ ಮಾಡುವ ವಿಧಾನ.
  • Environmental Protection (ಪರಿಸರ ಸಂರಕ್ಷಣೆ) – ಕೃಷಿ ಚಟುವಟಿಕೆಗಳಿಂದ ಪರಿಸರ ಮಾಲಿನ್ಯ ಆಗದಂತೆ ಕಾಪಾಡಿ ಸಂರಕ್ಷಿಸುವ ಕ್ರಮಗಳು.

ಈ ಪರಿಕಲ್ಪನೆಗಳನ್ನು ಚಿತ್ರಗಳು ಹಾಗೂ ಅವುಗಳ ವಿವರವಾದ ಪ್ರಕ್ರಿಯೆ ಕ್ರಮಗಳನ್ನು ಬರೆದಿಟ್ಟುಕೊಂಡು ಅಧ್ಯಯನ ಮಾಡುವುದರ ಮೂಲಕ ಸುಲಭವಾಗಿ ನೆನಪಿನಲ್ಲಿಡಬಹುದು

18. Exam Tips : Microbiology (ಸೂಕ್ಷ್ಮ ಜೀವವಿಜ್ಞಾನ)

ಸಸ್ಯಗಳಿಗೆ ಬರಬಹುದಾದಂತಹ ರೋಗಗಳು ಅವುಗಳ ನಿರ್ವಹಣೆ ಹಾಗೂ ತಡೆಯುವ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಇಲ್ಲಿ ಅಧ್ಯಯನ ಮಾಡಬಹುದು

  • Agricultural Bacteria (ಕೃಷಿ ಬ್ಯಾಕ್ಟೀರಿಯಾಗಳು) – ಮಣ್ಣಿನ ಫಲವತ್ತತೆ ಮಟ್ಟ ಮತ್ತು ಸಸ್ಯಗಳ ಬೆಳವಣಿಗೆಗೆ ಸಹಕಾರ ನೀಡುವ ಸೂಕ್ಷ್ಮಜೀವಿಗಳು.
  • Agricultural Fungi (ಕೃಷಿ ಶಿಲೀಂಧ್ರಗಳು) – ಮಣ್ಣಿನಲ್ಲಿ ವಾಸಿಗಳಾಗಿದ್ದು ಸಸ್ಯಗಳ ಮೇಲೆ ಮತ್ತು ಇಳುವರಿಯ ಮೇಲೆ ಪರಿಣಾಮ ಬೀರುವ ಸೂಕ್ಷ್ಮಜೀವಿಗಳು.
  • Agricultural Algae (ಕೃಷಿ ಪಾಚಿಗಳು) – ಮಣ್ಣಿನ ಗುಣಮಟ್ಟವನ್ನು ಸುಧಾರಿಸಿ ಪೋಷಕಾಂಶದ ಪ್ರಮಾಣಗಳನ್ನು ಹೆಚ್ಚಿಸುವ ಜಲ ಸಸ್ಯಗಳು.
  • Agricultural Biofertilizers (ಕೃಷಿ ಜೈವಿಕ ಗೊಬ್ಬರಗಳು) – ಸೂಕ್ಷ್ಮಜೀವಿಗಳ ಮೂಲಕ ಸಸ್ಯಗಳಿಗೆ ಪೂರಕವಾದ ಹಾಗೂ ಅಗತ್ಯ ಪೋಷಕಾಂಶ ಒದಗಿಸುವ ಗೊಬ್ಬರಗಳು.
  • Agricultural Nitrogen Fixation (ಕೃಷಿ ನೈಟ್ರೋಜನ್ ಸ್ಥಿರೀಕರಣ) – ವಾತಾವರಣದಲ್ಲಿ ಇರುವ ನೈಟ್ರೋಜನ್ ಅನ್ನು ಸಸ್ಯಗಳಿಗೆ ಸಿಗುವಂತೆ ಪರಿವರ್ತಿಸುವ ಪ್ರಕ್ರಿಯೆ.

ಸಸ್ಯಗಳಿಗೆ ಸಿಂಪಡಿಸಬಹುದಾದಂತಹ ಪ್ರತಿಜೀವಿ ಇವು ಕೃಷಿ ಇಡುವರಿಯನ್ನು ಹೆಚ್ಚಿಸುತ್ತದೆ ಹಾಗೂ ಈ ಪ್ರತಿಜೀವಿಗಳ ಕೃಷಿ ಬಳಕೆಯನ್ನು ಹೇಗೆ ಮಾಡಬೇಕು ಎಲ್ಲಿ ಮಾಡಬೇಕು ಹಾಗು ಉತ್ತಮ ರೀತಿಯ ನಿರ್ವಹಣೆಯ

19. Exam Tips : Biochemistry (ಜೀವರಸಾಯನಶಾಸ್ತ್ರ)

ಸಸ್ಯಗಳ ಬೆಳವಣಿಗೆಯ ಕ್ರಿಯೆಗಳ ಬಗ್ಗೆ ಇಲ್ಲಿ ಅಧ್ಯಯನ ಮಾಡುತ್ತೇವೆ

  • Agricultural Enzymes (ಕೃಷಿ ಕಿಣ್ವಗಳು) – ಸಸ್ಯಗಳ ಜೈವಿಕ ಪ್ರಕ್ರಿಯೆಗಳ ವೇಗವನ್ನು ಹೆಚ್ಚಿಸುವ ಪ್ರೋಟೀನ್ ಸಂಯುಕ್ತಗಳು.
  • Agricultural Proteins (ಕೃಷಿ ಪ್ರೋಟೀನ್‌ಗಳು) – ಸಸ್ಯ ಬೆಳೆಗಳ ಬೆಳವಣಿಗೆಗೆ ಮತ್ತು ಕೋಶಗಳ ನಿರ್ಮಾಣಕ್ಕೆ ಅಗತ್ಯವಾಗಿರುವ ಪದಾರ್ಥಗಳು.
  • Agricultural Lipids (ಕೃಷಿ ಲಿಪಿಡ್‌ಗಳು) – ಸಸ್ಯಗಳಲ್ಲಿ ಶಕ್ತಿಯನ್ನು ಉತ್ತಮ ರೀತಿಯಲ್ಲಿ ಸಂಗ್ರಹಿಸುವ ಕೊಬ್ಬಿನಂತಹ ಸಾವಯವ ಸಂಯುಕ್ತಗಳು.
  • Agricultural Metabolism (ಕೃಷಿ ಚಯಾಪಚಯ ಕ್ರಿಯೆ) – ಸಸ್ಯಗಳಲ್ಲಿ ನಡೆಯುವ ಶಕ್ತಿಯ ಉತ್ಪಾದನೆ ಮತ್ತು ಶಕ್ತಿಯ ಬಳಕೆಯ ಪ್ರಕ್ರಿಯೆಗಳು.
  • Agricultural Photosynthesis (ಕೃಷಿ ಪ್ರಕಾಶಸಂಶ್ಲೇಷಣೆ) – ಸಸ್ಯಗಳು ಸೂರ್ಯನ ಬೆಳಕಿನ ಸಹಾಯದಿಂದ ತಮ್ಮ ಆಹಾರವನ್ನು ತಾವೇ ತಯಾರಿಸುವ ಜೈವಿಕ ಪ್ರಕ್ರಿಯೆ.

ಸಸ್ಯಗಳ ಬೆಳವಣಿಗೆಯ ಜೈವಿಕ ಕ್ರಿಯೆಗಳ ಲೋಚಾಟನ್ನು ತಯಾರಿಸಿ ಅಧ್ಯಯನ ಮಾಡುವುದರಿಂದ ಅಂತ ಹಂತದ ಬೆಳವಣಿಗೆಯನ್ನು ಅರ್ಥ ಮಾಡಿಕೊಳ್ಳಬಹುದು.

20. Exam Tips : Animal Science (ಪ್ರಾಣಿ ವಿಜ್ಞಾನ)

ಕೃಷಿ ಪದ್ಧತಿಯಲ್ಲಿ ಇರುವಂತಹ ಜಾನುವಾರು ತಳಿಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಬೇಕು

  • Dairy Science (ಕ್ಷೀರ ವಿಜ್ಞಾನ) – ಹಾಲಿನ ಉತ್ಪಾದನೆ, ಸಂಸ್ಕರಣೆ ಮಾಡುವಿಕೆ ಮತ್ತು ಉತ್ತಮ ರೀತಿಯ ನಿರ್ವಹಣೆಯನ್ನು ಅಧ್ಯಯನ ಮಾಡುವ ವಿಜ್ಞಾನ.
  • Poultry (ಕೋಳಿಸಾಕಣೆ) – ಮೊಟ್ಟೆಗಳು ಮತ್ತು ಮಾಂಸದ ಉತ್ಪಾದನೆಗಾಗಿ ಕೋಳಿಗಳನ್ನು ಉತ್ತಮ ರೀತಿಯಲ್ಲಿ ಸಾಕುವ ವಿಧಾನ.
  • Livestock Management (ಜಾನುವಾರು ನಿರ್ವಹಣೆ) – ಜಾನುವಾರುಗಳ ಆರೈಕೆ ಮಾಡುವುದು, ಆರೋಗ್ಯ ಕಾಪಾಡುವುದು ಮತ್ತು ಉತ್ಪಾದನೆಯ ನಿರ್ವಹಣೆಯ ವಿಧಾನ.
  • Animal Nutrition (ಪ್ರಾಣಿ ಪೋಷಣೆ) – ಪ್ರಾಣಿಗಳ ಬೆಳವಣಿಗೆಗೆ ಅಗತ್ಯವಿರುವ ಪೋಷಕಾಂಶಗಳ ಬಗ್ಗೆ ಅಧ್ಯಯನ ಮತ್ತು ಪೂರೈಕೆ.

ಕರ್ನಾಟಕ ರಾಜ್ಯದಲ್ಲಿನ ಪ್ರಮುಖ ಕೃಷಿ ಜಾನುವಾರ ತಳಿಗಳು ಹಾಗೂ ಅವುಗಳ ಇತಿಹಾಸದ ಬಗ್ಗೆ ತಿಳಿದುಕೊಳ್ಳಿ

21. Exam Tips : Apiculture (ಜೇನುಸಾಕಣೆ)

ಜೇನು ಕೃಷಿಯ ಬಗ್ಗೆ ಈ ವಿಷಯವು ಅಧ್ಯಯನ ಮಾಡುತ್ತದೆ

  • Honey Bee Species (ಜೇನುನೊಣಗಳ ಪ್ರಭೇದಗಳು) – ಜೇನನ್ನು ಉತ್ಪಾದಿಸುವ ವಿವಿಧ ಜಾತಿ ಪ್ರಬೇಧಗಳ ಜೇನುನೊಣಗಳ ಗುಂಪುಗಳು.
  • Bee Management (ಜೇನುನೊಣ ನಿರ್ವಹಣೆ) – ಜೇನುನೊಣಗಳ ಸಾಕಣೆ ಮಾಡುವಿಕೆ, ಉತ್ತಮ ಆರೈಕೆ ಮತ್ತು ಉತ್ಪಾದನೆಯ ನಿರ್ವಹಣೆ ವಿಧಾನ.
  • Honey Production (ಜೇನು ಉತ್ಪಾದನೆ) – ಜೇನುನೊಣಗಳಿಂದ ಜೇನನ್ನು ಸಂಗ್ರಹಿಸಿ ಉತ್ಪಾದನೆ ಮಾಡುವ ಪ್ರಕ್ರಿಯೆ.
  • Pollination (ಪರಾಗಸ್ಪರ್ಶ) – ಜೇನು ನೊಣಗಳಿಗೆ ಹೂವಿನ ಪರಾಗವನ್ನು ವರ್ಗಾಯಿಸಿ ಫಲಧಾರಣೆ ಪ್ರಕ್ರಿಯೆಯನ್ನು ನೆರವೇರಿಸುವ ಪ್ರಕ್ರಿಯೆ.

ಜೇನು ಕೃಷಿಗೆ ಸಂಬಂಧಿಸಿದಂತೆ ಈ ಮೇಲಿನ ವಿಷಯಗಳನ್ನು ಅಧ್ಯಯನ ಮಾಡಿ ಇದು ಸಾಮಾನ್ಯ ವಿಷಯವಾದರೂ ಪ್ರಶ್ನೆಗಳು ಬರುವ ಸಾಧ್ಯತೆ ಹೆಚ್ಚಿರುತ್ತದೆ

22. Exam Tips : Sericulture (ರೇಷ್ಮೆ ಕೃಷಿ)

ಇಂದಿನ ಸಮಯದಲ್ಲಿ ರೇಷ್ಮೆ ಕೃಷಿಗೆ ಹೆಚ್ಚು ಬೇಡಿಕೆ ಹಾಗೂ ಬೆಲೆ ಇರುವುದರಿಂದ ಈ ಉತ್ಪಾದನೆಯಲ್ಲಿ ಕರ್ನಾಟಕ ಪ್ರಮುಖ ರಾಜ್ಯವಾಗಿದೆ

  • Mulberry Cultivation (ಮಲ್ಬೆರಿ ಕೃಷಿ) – ರೇಷ್ಮೆ ಹುಳುಗಳ ಆಹಾರಕ್ಕಾಗಿ ಮಲ್ಬೆರಿ (ರೇಷ್ಮೆ) ಸಸ್ಯಗಳನ್ನು ಬೆಳೆಯುವ ವಿಧಾನ.
  • Silkworm Rearing (ರೇಷ್ಮೆ ಹುಳು ಸಾಕಣೆ) – ರೇಷ್ಮೆಯ ಉತ್ಪಾದನೆಗಾಗಿ ರೇಷ್ಮೆ ಹುಳುಗಳನ್ನು ಮೊದಲ ಹಂತದಿಂದ ರೇಷ್ಮೆ ತೆಗೆಯುವ ವರೆಗೆ ಸಾಕುವ ಪ್ರಕ್ರಿಯೆ.
  • Cocoon Production (ಕೋಶ ಉತ್ಪಾದನೆ) – ರೇಷ್ಮೆ ಹುಳುಗಳಿಂದ ರೇಷ್ಮೆ ಕೋಶಗಳನ್ನು ಉತ್ಪಾದನೆ ಮಾಡುವ ಪ್ರಕ್ರಿಯೆ.

ರೇಷ್ಮೆ ಕೃಷಿಯು ಹೆಚ್ಚು ಲಾಭದಾಯಕ ಹಾಗೂ ಹೆಚ್ಚು ಬೇಡಿಕೆ ಇರುವ ಬೆಳೆ ಆಗಿರುವುದರಿಂದ ರೇಷ್ಮೆ ಉತ್ಪಾದನಾ ಪದ್ಧತಿ ಹಾಗೂ ಇಲ್ಲಿನ ರೂಪಗಳನ್ನು ತಿಳಿಯಿರಿ

23. Exam Tips : Forestry and Environmental Science (ಅರಣ್ಯ ಮತ್ತು ಪರಿಸರ ವಿಜ್ಞಾನ)

ಕೃಷಿ ಪದ್ಧತಿಯಲ್ಲಿ ಕಾಡುಗಳ ಹಾಗೂ ನೈಸರ್ಗಿಕ ವಿಜ್ಞಾನದ ಬಗ್ಗೆ ತಿಳಿದುಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ

  • Forest Types (ಅರಣ್ಯಗಳ ವಿಧಗಳು) – ಹವಾಮಾನ ಸ್ಥಿತಿಗತಿಗಳು, ಸಸ್ಯವರ್ಗಗಳು ಮತ್ತು ಪ್ರದೇಶ ಆಧಾರಿತ ಇರುವ ಅರಣ್ಯಗಳ ವರ್ಗಗಳು.
  • Agroforestry (ಕೃಷಿ ಅರಣ್ಯ ಪದ್ಧತಿ) – ಕೃಷಿ ಬೆಳೆಗಳ ಜೊತೆ ಜೊತೆಯಲ್ಲಿ ಲಾಭದಾಯಕ ಮರಗಳನ್ನು ಬೆಳೆಸುವ ಸಮಗ್ರ ಹಾಗೂ ಉತ್ತಮ ಪದ್ಧತಿ.
  • Biodiversity (ಜೈವಿಕ ವೈವಿಧ್ಯತೆ) – ಜೀವಿಗಳಲ್ಲಿನ ವಿವಿಧ ಜಾತಿಗಳು ಮತ್ತು ಪರಿಸರದ ವ್ಯವಸ್ಥೆಗಳ ವೈವಿಧ್ಯತೆಗಳ ವಿಷಯಗಳು.
  • Climate Change (ಹವಾಮಾನ ಬದಲಾವಣೆ) – ಭೂಮಿಯ ಹವಾಮಾನದಲ್ಲಿ ಆಗುವ ಅಲ್ಪಕಾಲಿಕ ಹಾಗೂ ದೀರ್ಘಕಾಲಿಕ ಬದಲಾವಣೆ ಉಂಟಾಗುವ ಪ್ರಕ್ರಿಯೆ.

ಈ ಮೇಲಿನ ವಿಷಯಗಳಿಗೆ ಈ ಹಿಂದಿನ ಪ್ರಸ್ತುತ ಹಾಗೂ ಭವಿಷ್ಯದಲ್ಲಿ ಎದುರಾಗಬಹುದಾದ ಪರಿಸರದ ಸಮಸ್ಯೆಗಳು ಮತ್ತು ಅವುಗಳ ಪರಿಹಾರ ಕ್ರಮಗಳ ಬಗ್ಗೆ ತಿಳಿದುಕೊಳ್ಳಿ

24. Exam Tips : Agricultural Marketing and Cooperation (ಕೃಷಿ ಮಾರುಕಟ್ಟೆ ಮತ್ತು ಸಹಕಾರ)

ಕೃಷಿ ಉತ್ಪಾದಕಗಳನ್ನು ಮಾರಾಟ ಮಾಡುವ ಪರಿಣಾಮಾತ್ಮಕ ವಿಧಾನಗಳು ಹಾಗೂ ಮಾರುಕಟ್ಟೆ ವ್ಯವಸ್ಥೆಯನ್ನು ಇಲ್ಲಿ ತಿಳಿದುಕೊಳ್ಳಬೇಕಾಗುತ್ತದೆ

  • Agricultural Produce Market Committee (APMC) (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ) – ರೈತರು ಉತ್ಪಾದಿಸಿರುವ ಕೃಷಿ ಉತ್ಪನ್ನಗಳ ಮಾರಾಟವನ್ನು ಮಾಡುವ ಹಾಗೂ ನಿಯಂತ್ರಿಸುವ ಅಧಿಕೃತ ಸಂಸ್ಥೆ.
  • Market Structure (ಮಾರುಕಟ್ಟೆ ರಚನೆ) – ಖರೀದಿಸುವವರು ಹಾಗೂ ಮಾರಾಟಗಾರರ ವ್ಯವಸ್ಥೆಗಳು ಹಾಗೂ ಮಾರಾಟ ಸ್ಪರ್ಧೆಯ ಸ್ವರೂಪಗಳು.
  • Cooperative Societies (ಸಹಕಾರ ಸಂಘಗಳು) – ಸದಸ್ಯರ ಆರ್ಥಿಕ ಅಭಿವೃದ್ಧಿಗಾಗಿ ಸಮಗ್ರ ಮಟ್ಟದಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸುವ ಸಹಕಾರ ಸಂಘಗಳು.
  • Warehousing (ಗೋದಾಮು ಸಂಗ್ರಹಣೆ) – ಕೃಷಿ ಉತ್ಪನ್ನಗಳು ಕೆಡದಂತೆ ಸುರಕ್ಷಿತವಾಗಿ ಸಂಗ್ರಹಿಸುವ ಗೋದಾಮಿನ ವ್ಯವಸ್ಥೆ.

ಕರ್ನಾಟಕದಲ್ಲಿ ಕೃಷಿ ಮಾರುಕಟ್ಟೆ ವ್ಯವಸ್ಥೆ ಸ್ಥಾಪನೆ ವಿಧಾನ ವ್ಯವಸ್ಥೆ ಹಾಗೂ ಅವುಗಳ ಪರಿಣಾಮಾತ್ಮಕ ರೂಪವನ್ನು ತಿಳಿದುಕೊಳ್ಳಿ

25. Exam Tips : Input Marketing (ಇನ್ಪುಟ್ ಮಾರ್ಕೆಟಿಂಗ್)

ಕೃಷಿ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ಹೇಗೆ ಮಾರಾಟ ಮಾಡಬಹುದು ಹಾಗೂ ವಿತರಣೆ ಮಾಡಬಹುದು ಎಂಬ ವಿಚಾರಗಳನ್ನು ಇಲ್ಲಿ ಅಧ್ಯಯನ ಮಾಡಬಹುದು

  • Seed Marketing (ಬೀಜ ಮಾರುಕಟ್ಟೆಗೊಳಿಸುವಿಕೆ) – ಉತ್ತಮ ಇಳುವರಿ ನೀಡುವ ಬೀಜಗಳ ಮಾರಾಟ, ವಿತರಣೆ ಮಾಡುವಿಕೆ ಮತ್ತು ಪ್ರಚಾರ ಮಾಡುವ ಪ್ರಕ್ರಿಯೆ.
  • Fertilizer Marketing (ಗೊಬ್ಬರ ಮಾರುಕಟ್ಟೆಗೊಳಿಸುವಿಕೆ) – ಉತ್ತಮ ಗೊಬ್ಬರಗಳ ಮಾರಾಟ, ಪೂರೈಕೆ ಮಾಡುವಿಕೆ ಮತ್ತು ವಿತರಣೆಯ ವ್ಯಾಪಾರದ ವ್ಯವಸ್ಥೆ.
  • Pesticide Marketing (ಕೀಟನಾಶಕ ಮಾರುಕಟ್ಟೆಗೊಳಿಸುವಿಕೆ) – ಕೀಟನಾಶಕಗಳ ಮತ್ತು ಅವುಗಳ ಉಪಯೋಗಗಳ ಪ್ರಚಾರ, ಮಾರಾಟ ಪ್ರಕ್ರಿಯೆ ಕೈಗೊಳ್ಳುವುದು ಮತ್ತು ವಿತರಿಸುವ ಪ್ರಕ್ರಿಯೆ.
  • Distribution Channels (ವಿತರಣಾ ಮಾರ್ಗಗಳು) – ಕೃಷಿ ಉತ್ಪನ್ನಗಳನ್ನು ಉತ್ಪಾದನೆ ಮಾಡಿದವರಿಂದ ಗ್ರಾಹಕರಿಗೆ ತಲುಪಿಸುವ ಉತ್ತಮ ವ್ಯವಸ್ಥೆ.

ಈ ವಿಚಾರಗಳನ್ನು ಓದುವುದರಿಂದ ಕೃಷಿ ಉತ್ಪಾದನೆ ಹಾಗೂ ವಿತರಣೆಯ ಬಗ್ಗೆ ವ್ಯವಹಾರಿಕ ಜ್ಞಾನ ಬರುತ್ತದೆ ಮತ್ತು ಪ್ರಪಂಚಿಕ ಜ್ಞಾನ ಹೆಚ್ಚುತ್ತದೆ

26. Exam Tips : Principles of Management and Marketing Management (ನಿರ್ವಹಣೆ ಮತ್ತು ಮಾರ್ಕೆಟಿಂಗ್ ನಿರ್ವಹಣೆಯ ತತ್ವಗಳು)

ಕೃಷಿ ಉತ್ಪಾದಕಗಳನ್ನು ಉತ್ತಮ ರೀತಿಯಲ್ಲಿ ಹೇಗೆ ನಿರ್ವಹಣೆ ಮಾಡಬಹುದು ಎಂಬ ವಿಚಾರವನ್ನು ಇಲ್ಲಿ ಅಧ್ಯಯನ ಮಾಡಬಹುದು

  • Agricultural Planning (ಕೃಷಿ ಯೋಜನೆ) – ಕೃಷಿ ಕ್ಷೇತ್ರದಲ್ಲಿನ ಗುರಿಗಳನ್ನು ಸಾಧಿಸಲು ಪೂರ್ವ ಯೋಜಿತವಾಗಿ ರೂಪಿಸುವ ಕಾರ್ಯಯೋಜನೆಗಳು.
  • Agricultural Organizing (ಕೃಷಿ ಸಂಘಟನೆ) – ಕೃಷಿಯ ಸಂಪನ್ಮೂಲಗಳು ಮತ್ತು ಅದರ ಕಾರ್ಯಗಳನ್ನು ವ್ಯವಸ್ಥಿತವಾಗಿ ವಿತರಿಸುವ ಪ್ರಕ್ರಿಯೆ.
  • Agricultural Directing (ಕೃಷಿ ನಿರ್ದೇಶನ) – ಕೃಷಿ ಕಾರ್ಯಗಳನ್ನು ಉತ್ತೇಜಿಸುವಂತೆ ಮಾರ್ಗದರ್ಶನ ನೀಡುವುದು ಮತ್ತು ಸಿಬ್ಬಂದಿಯನ್ನು ಮುನ್ನಡೆಸುವುದು.
  • Agricultural Controlling (ಕೃಷಿ ನಿಯಂತ್ರಣ) – ಕೃಷಿ ಕಾರ್ಯಗಳ ಪ್ರಗತಿಯನ್ನು ಪರಿಶೀಲಿಸಿ ಬೆಳವಣಿಗೆಗಾಗಿ ಅಗತ್ಯ ತಿದ್ದುಪಡಿಗಳನ್ನು ಮಾಡುವ ಪ್ರಕ್ರಿಯೆ.
  • Agricultural Marketing Mix (ಕೃಷಿ ಮಾರುಕಟ್ಟೆ ಮಿಶ್ರಣ) – ಉತ್ಪನ್ನಗಳು, ಪದಾರ್ಥಗಳ ಬೆಲೆ, ಪ್ರಚಾರ ಮಾಡುವಿಕೆ ಮತ್ತು ವಿತರಣೆಯ ಸಂಯೋಜಿತ ತಂತ್ರಗಳು.
  • Agricultural Consumer Behaviour (ಕೃಷಿ ಗ್ರಾಹಕ ವರ್ತನೆ) – ಕೃಷಿ ಉತ್ಪನ್ನಗಳ ಖರೀದಿಯಲ್ಲಿ ಗ್ರಾಹಕರು ಮಾಡುವ ನಿರ್ಧಾರಗಳು ಮತ್ತು ಅವರ ವರ್ತನೆ.

ಈ ಮೇಲಿನ ವಿಚಾರಗಳ ಬಗ್ಗೆ ಸರಳ ರೀತಿಯಲ್ಲಿ ನೋಟ್ಯಾರಿಸಿಕೊಳ್ಳಿ ಹಾಗೂ ಪ್ರಾಯೋಗಿಕ ಅನ್ವಯಗಳನ್ನು ಹೆಚ್ಚಾಗಿ ಮಾಡಿ

ವೇಗವಾಗಿ ಓದುವ ತಂತ್ರಗಳು

  • ತಯಾರಿಕೆ ಮೊದಲು ಸಿಲಬಸ್ ಅನ್ನು ಪೂರ್ಣವಾಗಿ ಅರ್ಥ ಮಾಡಿಕೊಂಡು ವಿಚಾರಗಳ ಮುಖ್ಯ ಸೇರಸಿಕೆಗಳನ್ನು ಓದಿ ಹಾಗೂ ಅರ್ಥೈಸಿಕೊಳ್ಳಿ
  • ಶೀರ್ಷಿಕೆಗಳ ನಂತರ ಉಪಶೀರ್ಷಿಕೆಗಳನ್ನು ಅಷ್ಟೇ ಪ್ರಾಮುಖ್ಯತೆಯಿಂದ ಓದಿ
  • ಪ್ರಮುಖ ಪದಗಳು ಹಾಗೂ ಸೂತ್ರಗಳನ್ನು ಅಂಡರ್ಲೈನ್ ಮಾಡಿ ಅಥವಾ ಹೈಲೈಟ್ ಮಾಡಿ
  • ಪ್ರತಿಯೊಂದು ವಿಚಾರವನ್ನು ಹಾಗೂ ಅಧ್ಯಾಯವನ್ನು ಒಂದು ಪುಟದ ಸಾರಾಂಶವಾಗಿ ಬರೆಯಿರಿ ಸೂತ್ರಗಳನ್ನು ಕಾಲಾನುಕ್ರಮದಲ್ಲಿ ಬರೆಯಿರಿ ಲೋ ಚಾರ್ಟ್ಗಳನ್ನು ಉತ್ತಮ ರೀತಿಯಲ್ಲಿ ರಚಿಸಿ
  • ವಾರಕ್ಕೆ ಒಂದು ಬಾರಿ ವಾರಪೂರ್ತಿ ಓದಿರುವ ವಿಚಾರಗಳನ್ನು ರಿವಿಜನ್ ಮಾಡಿ

ಈ ಪರೀಕ್ಷೆಯನ್ನು ಎದುರಿಸಲು 90 ದಿನಗಳ ಅಧ್ಯಯನ ಯೋಜನೆ

ಮೊದಲ 30 ದಿನಗಳ ತಯಾರಿ ವಿಷಯಗಳು
  • Agronomy
  • Soil Science
  • Genetics
  • Horticulture
  • Plant Pathology
ನಂತರದ 30 ದಿನಗಳ ತಯಾರಿ ವಿಷಯಗಳು
  • Entomology
  • Economics
  • Statistics
  • Extension
  • Agricultural Engineering
ಕೊನೆಯ 30 ದಿನಗಳ ತಯಾರಿ ವಿಷಯಗಳು
  • Biotechnology
  • Food Science
  • Marketing
  • Animal Science
  • Sericulture
  • Forestry

 ಹೆಚ್ಚುವರಿ Exam Tips ಗಳು

  • ಈ ಮೇಲಿನ Exam Tips ಗೆ ಸಂಬಂಧಿಸಿದಂತೆ ಪ್ರತಿದಿನ ಕನಿಷ್ಠ 50 ಭಾಗಕ್ಕೆ ಪ್ರಶ್ನೆಗಳನ್ನು ಅಭ್ಯಾಸ ಮಾಡುವುದರಿಂದ ನಿಮ್ಮ ಪರೀಕ್ಷಾ ತಯಾರಿ ಹೆಚ್ಚುತ್ತದೆ ಹಾಗೂ ಪರಿಣಾಮಕಾರಿಯಾಗಿರುತ್ತದೆ
  • ಇಂದಿನ ಈ ಪರೀಕ್ಷೆಗೆ ಸಂಬಂಧಿಸಿದ ಹತ್ತು ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ ಇವುಗಳನ್ನು ಬಿಡಿಸುವುದರಿಂದ ಪ್ರಶ್ನೆಪತ್ರಿಕೆಯ ರೂಪುರೇಷೆ ಮತ್ತು ನೀಲ ನಕ್ಷೆ ಜೊತೆ Exam Tips ತಿಳಿಯುತ್ತದೆ
  • ಪ್ರತಿದಿನವೂ ಕನಿಷ್ಠ ಒಂದು ಮಾಕ್‌ ಟೆಸ್ಟ್ ಬರೆಯಿರಿ ಇದು ನಿಮ್ಮ ವೇಗವನ್ನು ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ‌.. ಮಾಕ್‌ ಟೆಸ್ಟ್‌ ಲಿಂಕ್
  • ಪ್ರತಿಯೊಂದು ವಿಚಾರಗಳ ಬಗ್ಗೆ ಶಾರ್ಟ್ ನೋಟ್ಸ್ ಗಳನ್ನು ತಯಾರಿಸಿಕೊಳ್ಳಿ ಇದು ರಿವಿಜನ್ ಗೆ ಸಹಕರಿಸುತ್ತದೆ
  • ಕೃಷಿ ಇಲಾಖೆಯಲ್ಲಿನ ಹಾಗೂ ಕೃಷಿ ವಿಶ್ವವಿದ್ಯಾಲಯಗಳ ಪ್ರಕಟಣೆಗಳನ್ನು ನಿಯಮಿತವಾಗಿ ಓದಿ ಇಲ್ಲಿ ಪ್ರಚಲಿತ ಘಟನೆಗಳ ಬಗ್ಗೆ ವಿವರಣೆ ಇರುತ್ತದೆ
  • ಕರ್ನಾಟಕ ಸರ್ಕಾರದ ಕೃಷಿ ಯೋಜನೆಗಳು ಹಾಗೂ ಇತ್ತೀಚಿನ ಕೃಷಿ ಕ್ಷೇತ್ರದಲ್ಲಿನ ಬದಲಾವಣೆ ಮತ್ತು ಅಭಿವೃದ್ಧಿ ಸುದ್ದಿಗಳನ್ನು ಓದಿ
  • Exam Tips ಗೆ ಸಂಪೂರ್ಣವಾಗಿ ಸಿಲಬಸ್ ಅನ್ನು ಓದಿದ ನಂತರ ಹೊಸ ವಿಚಾರಗಳನ್ನು ಓದದೆ ರಿವಿಜನ್ ಗೆ ಹೆಚ್ಚಿನ ಸಮಯವನ್ನು ನೀಡಿ
  • ಪ್ರತಿಯೊಂದು ಕಾನ್ಸೆಪ್ಟ್ ಗಳನ್ನು ಅರ್ಥ ಮಾಡಿಕೊಂಡು ಓದಿದರೆ ಎಲ್ಲ ಪ್ರಶ್ನೆಗಳಿಗೂ ಉತ್ತರವನ್ನು ನೀಡಬಹುದು ಆದರೆ ವಿಚಾರಗಳನ್ನು ಅರ್ಥಮಾಡಿಕೊಳ್ಳದೆ ಓದಿದರೆ ಅವುಗಳ ವಿವರಣೆ ಕಾಲಾನುಕ್ರಮ ಉಪಯೋಗಗಳು ಹಾಗೂ ಇನ್ನಿತರ ಪ್ರಮುಖ ಅಂಶಗಳನ್ನು ನೆನಪಿನಲ್ಲಿ ಇಡಲು ಸಾಧ್ಯವಾಗುವುದಿಲ್ಲ

ಸರಿಯಾದ ಪರೀಕ್ಷೆ ತಯಾರಿಯ ಯೋಜನೆ ನಿರಂತರ ಅಭ್ಯಾಸ ಮಾಡುವುದು ಹಾಗೂ ಪ್ರತಿಯೊಂದು ವಿಷಯಗಳ ಮೂಲಭೂತ ಪರಿಕಲ್ಪನೆಗಳನ್ನು ಓದಿ ಅರ್ಥೈಸಿಕೊಂಡು ಸ್ಪಷ್ಟವಾಗಿ ಹರಿತರೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರವನ್ನು ನಡೆಸುವ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಸರ್ಕಾರಿ ಉದ್ಯೋಗದ ಕನಸನ್ನು ನನಸಾಗಿಸಬಹುದು ಆದುದರಿಂದ ಪರೀಕ್ಷೆ ಮಾರ್ಗದರ್ಶಿಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ಪರೀಕ್ಷೆ ತಯಾರಿಯನ್ನು ಈಗಿಂದಲೇ ಆರಂಭಿಸಿ

ಪರೀಕ್ಷಾ ತಯಾರಿಗಾಗಿ ಪುಸ್ತಕಗಳು Exam Tips

Subject Recommended Book
General Agriculture Agriculture at a Glance – R.K. Sharma
Agriculture Basics Fundamentals of Agriculture Vol. 1 & 2 – Arun Katyayan
Objective Agriculture Objective Agriculture – S.R. Kantwa
Competitive Agriculture A Competitive Book of Agriculture – Nem Raj Sunda
Agronomy Principles of Agronomy – S.R. Reddy
Soil Science Fundamentals of Soil Science – J.A. Daji
Genetics & Plant Breeding Plant Breeding – B.D. Singh
Entomology Agricultural Entomology – V.B. Awasthi
Plant Pathology Plant Pathology – R.S. Mehrotra

 

Expected Subject Weightage (Agriculture Paper) Exam Tips

Subject Expected Weightage
Agronomy 15-20%
Soil Science & Agricultural Chemistry 10-15%
Genetics & Plant Breeding 8-12%
Horticulture 8-12%
Entomology 8-10%
Plant Pathology 8-10%
Agricultural Economics 5-8%
Agricultural Extension 5-8%
Seed Science & Technology 5-8%
Agricultural Engineering 5-8%
Agricultural Marketing 3-5%
Current Agricultural Issues & Schemes 3-5%

KEA Agriculture Officer (AO) & Assistant Agriculture Officer (AAO) Recruitment 2026 : FAQ’s Of Exam Tips

1. ಈ ಹುದ್ದೆಗಳಿಗೆ ಯಾರು ಅರ್ಜಿ ಸಲ್ಲಿಸಬಹುದು?
ಅರ್ಹ ಕೃಷಿ ಪದವಿಯನ್ನು ಪಡೆದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

2. KEA AO ಮತ್ತು AAO ಹುದ್ದೆಗಳ ವೇತನ ಎಷ್ಟು ಇರುತ್ತದೆ?
ತಿಂಗಳಿಗೆ ₹69,250 ರಿಂದ ₹1,34,200 ವರೆಗೆ ವೇತನ ಸಿಗುತ್ತದೆ.

3. KEA AO/AAO ಆಯ್ಕೆ ಪ್ರಕ್ರಿಯೆಯು ಹೇಗಿರುತ್ತದೆ?
ಕನ್ನಡ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.

4. KEA AO/AAO ಪರೀಕ್ಷೆಗೆ ಪಾವತಿಸಬೇಕಾದ ಅರ್ಜಿ ಶುಲ್ಕ ಎಷ್ಟು?
ಅಭ್ಯರ್ಥಿಗಳ ವರ್ಗಗಳ ಆಧಾರದ ಮೇಲೆ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.

5. KEA AO/AAO ಪರೀಕ್ಷೆಗೆ ಮುಖ್ಯ ವಿಷಯಗಳು ಯಾವುವು?
ಕೃಷಿ ವಿಷಯಗಳು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ಘಟನೆಗಳು ಮುಖ್ಯವಾಗಿವೆ.

Candidates Mistakes In Agriculture Officer (AO) & Assistant Agriculture Officer (AAO) Exam Exam Tips

1. ಅಧಿಕೃತ ಸಿಲೆಬಸ್‌ ಅನ್ನು ಸಂಪೂರ್ಣವಾಗಿ ಓದದೇ ಇರುವುದು

ಹಲವು ಅಭ್ಯರ್ಥಿಗಳು ಸಂಪೂರ್ಣ ಸಿಲೆಬಸ್‌ ಪರಿಶೀಲಿಸದೆ ಓದುವುದರಿಂದ ಪ್ರಮುಖ ವಿಷಯಗಳನ್ನು ಕೈಬಿಡುತ್ತಾರೆ.

2. ಕೃಷಿ ವಿಚಾರಗಳಿಗೆ ಕಡಿಮೆ ಆದ್ಯತೆ ನೀಡುವುದು

Agronomy, Soil Science, Horticulture, Entomology ಮುಂತಾದ ಪ್ರಮುಖ ವಿಷಯಗಳನ್ನು ಕಡೆಗಣಿಸುವುದು ಅಂಕಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

3. ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಹಾಗೂ ಅಧ್ಯಯನ ಮಾಡದಿರುವುದು

ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡದೇ ಇದ್ದರೆ ಪ್ರಶ್ನೆಗಳ ಮಾದರಿ ಮತ್ತು ಪರೀಕ್ಷೆಯ ಕಠಿಣತೆಯ ಮಟ್ಟ ತಿಳಿಯದೆ ಹೋಗುತ್ತದೆ.

4. Mock Test ಗಳನ್ನು ಬರೆಯದೇ ಇರುವುದು

ಸಮಯ ನಿರ್ವಹಣೆ ಮತ್ತು ಪ್ರಶ್ನೆಗಳನ್ನು ಬಿಡಿಸುವ ವೇಗ ಕಡಿಮೆಯಾಗುತ್ತದೆ.

5. Current Affairs ಕಡೆ ಕಡಿಮೆ ಗಮನ ಕೊಡುವುದು

ಕೃಷಿ ಕ್ಷೇತ್ರದ ಇತ್ತೀಚಿನ ಯೋಜನೆಗಳು ಮತ್ತು ಸುದ್ದಿಗಳ ವಿಚಾರಗಳ ಬಗ್ಗೆ ಅರಿವು ಕಡಿಮೆಯಾಗುತ್ತದೆ.

Author Note: ಈ ಲೇಖನವು ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಪರೀಕ್ಷಾ ತಯಾರಿಗಾಗಿ ಮಾಹಿತಿ ಹಾಗೂ ಮಾರ್ಗದರ್ಶನ ಉದ್ದೇಶದಿಂದ ಸಿದ್ಧಪಡಿಸಲಾಗಿದೆ. ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಮತ್ತು ಸಿಲೆಬಸ್ ಅನ್ನು ಪರಿಶೀಲಿಸಿ ತಯಾರಿ ನಡೆಸುವುದು ಸೂಕ್ತ.

ರಂಗನಾಥ ಬಿ.ಜಿ ಅವರು ಅರ್ಥಶಾಸ್ತ್ರದಲ್ಲಿ ಎಂ.ಎ ಪದವೀಧರರಾಗಿದ್ದು, ಕಳೆದ ಎರಡು ವರ್ಷಗಳಿಂದ ನೈಜ ಹಾಗೂ ವಿಶ್ವಾಸಾರ್ಹ ಕನ್ನಡ ವಿಷಯಗಳನ್ನು ಪ್ರಕಟಿಸುತ್ತಿದ್ದಾರೆ. ಸರ್ಕಾರಿ ಉದ್ಯೋಗ ಮಾಹಿತಿ, ಪರೀಕ್ಷಾ ತಯಾರಿ ಸಲಹೆಗಳು, ವೃತ್ತಿ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು ಹಾಗೂ ಟ್ರೆಂಡಿಂಗ್ ಸುದ್ದಿಗಳ ಕುರಿತು ಲೇಖನಗಳನ್ನು ಬರೆಯುವಲ್ಲಿ ಪರಿಣತಿ ಹೊಂದಿದ್ದು, ಓದುಗರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುವುದು ಇವರ ಉದ್ದೇಶವಾಗಿದೆ. Please Visit NewsByMr

Leave a Comment