Telegram Join Our Telegram WhatsApp Join Our WhatsApp

KSP Recruitment 2026, Big Opportunity: ಪೊಲೀಸ್‌ ಇಲಾಖೆಯಲ್ಲಿ ಬೃಹತ್‌ ನೇಮಕಾತಿ, ಹುದ್ದೆ, ಅರ್ಹತೆ, ಸಂಬಳ ಹಾಗೂ ಅರ್ಜಿ ಸಲ್ಲಿಕೆ ಬಗ್ಗೆ ಮಾಹಿತಿ

Karnataka State Police (KSP) ನಲ್ಲಿ ಸಿವಿಲ್‌ ಪೊಲೀಸ್‌ ಕಾನ್ಸ್ಟೇಬಲ್‌ ಹುದ್ದೆಗಳು

ನಮಸ್ಕಾರ ಸ್ನೇಹಿತರೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನೇಮಕಾತಿ ಸೂಚನೆಯನ್ನು ಹೊರಡಿಸಲಾಗಿದೆ ಪೊಲೀಸ್ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗವನ್ನು ಪಡೆಯಬೇಕೆಂಬ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಿದ್ದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಅರ್ಜಿ ಸಬಹುದಾಗಿರುತ್ತದೆ ಆಕರ್ಷಕ ವೇತನ ಉತ್ತಮ ಭತ್ಯೆಗಳು ಮುಂಬಡ್ತಿ ಹಾಗೂ ಉತ್ತಮ ಭವಿಷ್ಯವನ್ನು ಹೊಂದುವ ಪುರುಷ ಮಹಿಳೆ ಹಾಗೂ ತೃತೀಯ ಲಿಂಗ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ

ನೇಮಕಾತಿ ಅಧಿಸೂಚನೆಯ ವಿವರಗಳು

ನೇಮಕಾತಿ ಸಂಸ್ಥೆ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ
ಪರೀಕ್ಷೆ ಪ್ರಾಧಿಕಾರದ ಹೆಸರು ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಹುದ್ದೆಗಳ ಹೆಸರು ಸಿವಿಲ್ ಪೊಲೀಸ್ ಕಾನ್ಸ್ಟೇಬಲ್
ಒಟ್ಟು ಹುದ್ದೆಗಳ ಸಂಖ್ಯೆ  ಒಟ್ಟು 3991 ಹುದ್ದೆಗಳು  (ಕಲ್ಯಾಣ ಕರ್ನಾಟಕ ವೃಂದ 596) + (ಮಿಕ್ಕುಳಿದ ವೃಂದ 3395)
ಉದ್ಯೋಗ ನಿರ್ವಹಣೆಯ ಸ್ಥಳ ಅಖಿಲ ಕರ್ನಾಟಕ
ಅರ್ಜಿ ಸಲ್ಲಿಸುವ ವಿಧಾನ ಆನ್ಲೈನ್ ಮೂಲಕ ಮಾತ್ರ
ವೇತನ (ಮಾಸಿಕ) 37,500/- ರೂಗಳಿಂದ 76,100/- ರೂವರೆಗೆ

 

KSP ನೇಮಕಾತಿಯ ವೃಂದವಾರು ಹುದ್ದೆಗಳ ಹಂಚಿಕೆ

ವೃಂದ ಖಾಲಿಯಿರುವ ಹುದ್ದೆಗಳ ಸಂಖ್ಯೆ
ಕಲ್ಯಾಣ ಕರ್ನಾಟಕ ವೃಂದ 596
ಮಿಕ್ಕುಳಿದ ವೃಂದ 3395
ಒಟ್ಟು ಹುದ್ದೆಗಳು 3991

 

KSP ಅರ್ಹತಾ ವಿವರಗಳು

KSP ನೇಮಕಾತಿಗೆ ಅರ್ಜಿ ಸಲ್ಲಿಸಲು ಹೊಂದಿರಬೇಕಾದ ವಿದ್ಯಾರ್ಹತೆಯ ವಿವರ

  • ಈ KSP ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಥಿಯನ್ನು ಹೊಂದಿರಬೇಕು
  • ರಾಜ್ಯ ಹಾಗೂ ರಾಷ್ಟ್ರ ಪರೀಕ್ಷೆ ಮಂಡಳಿಗಳಾದ ಸಿಬಿಎಸ್ಸಿ ಮತ್ತು ಐಸಿಎಸ್‌ಸಿ ಮಂಡಳಿಗಳು ನಡೆಸುವ 12ನೇ ತರಗತಿಯ ಪರೀಕ್ಷೆಗಳನ್ನು ಪಿಯುಸಿಗೆ ಸಮಾನ ಎಂದು ಪರಿಗಣಿಸಲಾಗಿದೆ
  • ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ನಡೆಸುವ ಉನ್ನತ ಪ್ರೌಢ ಶಿಕ್ಷಣ ಹಂತದ ಕೋರ್ಸ್ ಅನ್ನು ಪರಿಗಣಿಸಲಾಗುವುದು
  • ಮೂರು ವರ್ಷಗಳ ಕಾಲ ಡಿಪ್ಲೋಮಾ ಮತ್ತು ಎರಡು ವರ್ಷಗಳ ಐಟಿಐ ಕೋರ್ಸ್ ಮುಗಿಸಿ ನಿಗದಿತ ಭಾಷಾ ಪರೀಕ್ಷೆ ಅಂದರೆ ಪ್ರಾದೇಶಿಕ ಭಾಷೆಯಲ್ಲಿ ಉತ್ತೀರ್ಣರಾದವರನ್ನು ತತ್ಸಮಾನ ಎಂದು ಈ ನೇಮಕಾತಿಗೆ ಪರಿಗಣಿಸಲಾಗುತ್ತದೆ
  • ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದಂದು ಅಥವಾ ಕೊನೆಯ ದಿನಾಂಕದ ನಂತರ ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹತೆ ಇರುವುದಿಲ್ಲ

ವಯೋಮಿತಿ ವಿವರಗಳು

KSP ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಪೂರ್ಣಗೊಂಡಿರಬೇಕು

ವಯೋಮಿತಿ ಸಡಿಲಿಕೆಯ ಮಾಹಿತಿ

ಸರ್ಕಾರದ ವಯೋಮಿತಿ ಸಡಿಲಿಕೆ ನಿಯಮಗಳ ಪ್ರಕಾರ ಆದೇಶದನ್ವಯ ಒಂದು ಬಾರಿಗೆ ಅನ್ವಯವಾಗುವಂತೆ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ

  • ಸಾಮಾನ್ಯ ವರ್ಗದ ಅರ್ಹತೆಯನ್ನು ಪಡೆಯುವ ನೇರ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 33 ವರ್ಷಗಳು
  • ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ನೇರ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 35 ವರ್ಷಗಳು
  • ಕರ್ನಾಟಕ ರಾಜ್ಯದ ಅರಣ್ಯ ಪ್ರದೇಶ ಅಥವಾ ಅರೆ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡಕಟ್ಟು ಜನಾಂಗದ ನೇರ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 38 ವರ್ಷಗಳು
  • ಸಾಮಾನ್ಯ ಅರ್ಹತೆಯನ್ನು ಹೊಂದಿರುವ ಈಗಾಗಲೇ ಸೇವಾ ನಿರತ ಅಭ್ಯರ್ಥಿಗಳಿಗೆ 38 ವರ್ಷಗಳು
  • ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಸೇವಾ ನಿರತ ಪರೀಕ್ಷಾ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 40 ವರ್ಷಗಳು
  • ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಅವರು ಸಲ್ಲಿಸಿರುವ ಸೇವಾ ಅವಧಿಯ ಜೊತೆಗೆ ಹೆಚ್ಚುವರಿ ಮೂರು ವರ್ಷಗಳ ರಿಯಾಯಿತಿ ಅಂದರೆ ಹತ್ತು ವರ್ಷ ಸೇವೆ ಸಲ್ಲಿಸಿದ್ದರೆ 13 ವರ್ಷಗಳ ರಿಯಾಯಿತಿ ಸಿಗುತ್ತದೆ

ಹುದ್ದೆಗಳ ವೇತನದ ವಿವರ

ಈ KSP ನೇಮಕಾತಿ ಮೂಲಕ ಆಯ್ಕೆಯಾಗುವ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಅಭ್ಯರ್ಥಿಗಳಿಗೆ ತಿಂಗಳಿಗೆ 37,500/- ರೂಗಳಿಂದ 76,100/- ರೂಗಳ ವರೆಗೆ ಇರುತ್ತದೆ ಇದರ ಜೊತೆಯಲ್ಲಿ ಭತ್ಯೆಗಳು ಸೇರಿರುತ್ತವೆ.

ಈ KSP  ಹುದ್ದೆಗಳಲ್ಲಿ ಆರಂಭಿಕ ಹಂತದಲ್ಲಿ ಮೂಲ ವೇತನ 37,500/- ರೂಗಳು ಇರಲಿದ್ದು ಸೇವಾ ಅವಧಿ ಮತ್ತು ಕಾಲಕ್ರಮೇಣ ವೇತನದ ಮೊತ್ತವು ಹೆಚ್ಚಳವಾಗುತ್ತದೆ

 ನೇಮಕಾತಿಯ ಆನ್ಲೈನ್ ಅರ್ಜಿ ಶುಲ್ಕ

ಈ KSP ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಈ ಕೆಳಕಂಡ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಬೇಕಾಗಿರುತ್ತದೆ

ಸಾಮಾನ್ಯ ಅರ್ಹತಾ ಅಭ್ಯರ್ಥಿಗಳು, ಹಿಂದುಳಿದ ವರ್ಗಗಳ 2ಎ 2ಬಿ 3ಎ 3ಬಿ ಅಭ್ಯರ್ಥಿಗಳಿಗೆ : 750/- ರೂಗಳು
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ತೃತೀಯ ಲಿಂಗಿಗಳು ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ : 500/- ರೂಗಳು

ಅರ್ಜಿ ಶುಲ್ಕವನ್ನು ಆನ್ಲೈನ್ ಪಾವತಿ ವಿಧಾನಗಳಾದ ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ಯುಪಿಐ ನೆಟ್ ಬ್ಯಾಂಕಿಂಗ್ ರೀತಿಯ ವಿಧಾನಗಳನ್ನು ಅನುಸರಿಸಿ ಮಾತ್ರ ಪಾವತಿ ಮಾಡಬೇಕಾಗಿರುತ್ತದೆ ಪಾವತಿ ಮಾಡಿದ ಶುಲ್ಕವನ್ನು ಹಿಂದಿರುಗಿಸುವ ಅವಕಾಶ ಇರುವುದಿಲ್ಲ

KSP ನೇಮಕಾತಿಯ ಆಯ್ಕೆ ವಿಧಾನ

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ವ್ಯವಸ್ಥಿತ ಹಾಗೂ ಶಿಸ್ತಿನ ಇಲಾಖೆ ಆಗಿರುವುದರಿಂದ ಆಯ್ಕೆ ವಿಧಾನವು ಸಹ ಅಷ್ಟೇ ವ್ಯವಸ್ಥಿತವಾಗಿ ಇರುತ್ತದೆ ಆದ್ದರಿಂದ ಅಭ್ಯರ್ಥಿಗಳು ಆಯ್ಕೆ ವಿಧಾನದ ಮೇಲೆ ಹೆಚ್ಚು ಗಮನ ಹರಿಸಲು ತಿಳಿಸಿದೆ

ಲಿಖಿತ ಪರೀಕ್ಷೆ : ಪರೀಕ್ಷಾರ್ತಿಗಳಿಗೆ 100 ಅಂಕಗಳ ಆಫ್ ಲೈನ್ ಓಎಂಆರ್ ಪದ್ದತಿಯ ಸ್ಪರ್ಧಾತ್ಮಕ ಪರೀಕ್ಷೆಯನ್ನು ಕೈಗೊಳ್ಳಲಾಗುತ್ತದೆ ಈ ಪರೀಕ್ಷೆಯ ಅವಧಿಯು 90 ನಿಮಿಷಗಳಿದ್ದು ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳ ಋಣಾತ್ಮಕ ಮೌಲ್ಯಮಾಪನ ಇರುತ್ತದೆ ಈ ಪರೀಕ್ಷೆಯಲ್ಲಿ ಕನಿಷ್ಠ 30 ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿರುತ್ತದೆ ಇಲ್ಲವಾದಲ್ಲಿ ನೇಮಕಾತಿ ಪ್ರಕ್ರಿಯೆಯಿಂದ ಹೊರಗೂಳಿಯಬೇಕಾಗುತ್ತದೆ

ದೇಹದಾಢ್ಯತೆ ಮತ್ತು ಸಹಿಷ್ಣುತೆ ಪರೀಕ್ಷೆ : ಲಿಖಿತ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಅರ್ಹತೆಯನ್ನು ಪಡೆದ ಅಭ್ಯರ್ಥಿಗಳ 1: 5 ಅಭ್ಯರ್ಥಿಗಳ ಅನುಪಾತದಲ್ಲಿ ದೈಹಿಕ ಪರೀಕ್ಷೆಗೆ ಆಹ್ವಾನಿಸಲಾಗುತ್ತದೆ ನೇರಪುರುಷ ಅಭ್ಯರ್ಥಿಗಳಿಗೆ ಕನಿಷ್ಠ 168 ಸೆಂಟಿಮೀಟರ್ ಎತ್ತರ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಕನಿಷ್ಠ 257 ಸೆಂಟಿಮೀಟರ್ eತ್ತರ ಹಾಗೂ 45 ಕೆಜಿ ತೂಕ ಕಡ್ಡಾಯವಾಗಿ ಇರಬೇಕಾಗಿರುತ್ತದೆ ಈ ಪರೀಕ್ಷೆ ಜೊತೆಯಲ್ಲಿ ಓಡುವುದು ಉದ್ದ ಜಿಗಿತ ಎತ್ತರ ಜಿಗಿತ ಗುಂಡು ಎಸೆತ ಮುಂತಾದ ಅಗತ್ಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ

ವೈದ್ಯಕೀಯ ಪರೀಕ್ಷೆ : ಲಿಖಿತ ಪರೀಕ್ಷೆ ಹಾಗೂ ದೈಹಿಕ ದಾಂಡ್ಯತೆ ಮತ್ತು ಸಹಿತ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳನ್ನು 1:2 ಅನುಪಾತದಲ್ಲಿ ವೈದ್ಯಕೀಯ ಪರೀಕ್ಷೆಗೆ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ ಸಂಬಂಧಪಟ್ಟ ವೈದ್ಯಕೀಯ ಮಂಡಳಿಯು ಶ್ರವಣಶಕ್ತಿ ದೃಷ್ಟಿ ಹಾಗೂ ದೈಹಿಕ ಹಾಗೂ ಮಾನಸಿಕ ನ್ಯೂನ್ಯತೆಗಳನ್ನು ಪರಿಶೀಲಿಸಿ ಅರ್ಹತಾ ವರದಿಗಳನ್ನು ನೀಡುತ್ತಾರೆ

ದಾಖಲಾತಿ ಪರಿಶೀಲನೆ : ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಸಲ್ಲಿಸಿರುವ ದಾಖಲಾತಿಗಳ ನೈಜತೆ ಹಾಗೂ ಅವುಗಳ ಗುಣಮಟ್ಟವನ್ನು ಪರಿಶೀಲನೆ ನಡೆಸುತ್ತಾರೆ

ಅಂತಿಮ ಆಯ್ಕೆ ಪಟ್ಟಿ : ಈ ಎಲ್ಲಾ ಆಯ್ಕೆ ವಿಧಾನಗಳಲ್ಲಿ ಯಶಸ್ವಿಯಾಗಿ ಪೂರೈಸಿ ಆಯ್ಕೆಗೊಳ್ಳುವ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ ಪ್ರಕಟಿಸಲಾಗುತ್ತದೆ

ಕರ್ನಾಟಕ ರಾಜ್ಯ ಪೊಲೀಸ್‌ (KSP) ಇಲಾಖೆಯ ಬಗ್ಗೆ

ಕರ್ನಾಟಕ ರಾಜ್ಯ ಪೊಲೀಸ್ (Karnataka State Police – KSP) ಇಲಾಖೆಯು ರಾಜ್ಯದ ಪ್ರಮುಖ ಇಲಾಖೆಯಾಗಿದ್ದು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಇರುವ ಪ್ರಮುಖ ಭದ್ರತಾ ಸಂಸ್ಥೆಯಾಗಿದೆ. ಈ ಇಲಾಖೆಯು 1965ರ ಏಪ್ರಿಲ್ 2 ನೇ ತಾರೀಖಿನಂದು ಮೈಸೂರು ರಾಜ್ಯ ಪೊಲೀಸ್ ಇಲಾಖೆಯ ಉತ್ತರಾಧಿಕಾರಿಯಾಗಿ ಸ್ಥಾಪನೆಯಾಯಿತು. ಇದರ ಮುಖ್ಯ ಕಚೇರಿ ಬೆಂಗಳೂರು ನಗರದಲ್ಲಿ ಇದೆ ಹಾಗೂ ಇದು ಕರ್ನಾಟಕ ಸರ್ಕಾರದ ಗೃಹ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುತ್ತದೆ.

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಮುಖ್ಯ ಹಾಗೂ ಪ್ರಾಥಮಿಕ ಉದ್ದೇಶ ರಾಜ್ಯದ ಸಾರ್ವಜನಿಕರ ಜೀವ, ಆಸ್ತಿಗಳನ್ನು ಹಾಗೂ ಹಕ್ಕುಗಳನ್ನು ರಕ್ಷಿಸುವುದಾಗಿದೆ. ಅಪರಾಧ ತಡೆಗಟ್ಟುವುದು, ಉತ್ತಮ ಹಾಗೂ ಪರಿಣಾಮಕಾರಿಯಾಗಿ ತನಿಖೆ ಮಾಡುವುದು, ಸಂಚಾರ ಪದ್ದತಿಗಳ ನಿಯಂತ್ರಣ, ಮಹಿಳೆಯರ ಮತ್ತು ಮಕ್ಕಳ ರಕ್ಷಣೆ, ಸೈಬರ್ ಅಪರಾಧಗಳ ನಿಯಂತ್ರಣ ಹಾಗೂ ನೈಸರ್ಗಿಕ ಹಾಗೂ ಮಾನವ ನಿರ್ಮಿತ ವಿಪತ್ತು ನಿರ್ವಹಣೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಈ ಇಲಾಖೆ ಸೇವೆ ಸಲ್ಲಿಸುತ್ತದೆ. ರಾಜ್ಯದಾದ್ಯಂತ ಸಾವಿರಾರು ಪೊಲೀಸ್ ಠಾಣೆಗಳು, ವಿಶೇಷ ಘಟಕಗಳು ಹಾಗೂ ಮೀಸಲು ಪೊಲೀಸ್ ಪಡೆಗಳ ಮೂಲಕ ಸಾರ್ವಜನಿಕ ಸುರಕ್ಷತೆಯನ್ನು ಖಾತ್ರಿಪಡಿಸಲಾಗುತ್ತದೆ.

“ಸತ್ಯಮೇವ ಜಯತೆ” ಎಂಬ ಸಮಗ್ರ ಧ್ಯೇಯ ವಾಕ್ಯದೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಕರ್ನಾಟಕ ರಾಜ್ಯದ ಜನರ ಶಾಂತಿ, ಭದ್ರತೆ ಮತ್ತು ಸಾಮಾಜಿಕ ಸೌಹಾರ್ದತೆಯನ್ನು ಕಾಪಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ.

ಈ KSP ನೇಮಕಾತಿಗೆ ಏಕೆ ಅರ್ಜಿ ಸಲ್ಲಿಸಬೇಕು

  • ಕರ್ನಾಟಕ ಸರ್ಕಾರದ ಖಾಯಂ ಹುದ್ದೆ
  • ಉತ್ತಮ ವೇತನ, ಭತ್ಯೆಗಳು ಹಾಗೂ ಪದೋನ್ನತಿ ಸೌಲಭ್ಯಗಳು
  • ಸಮಾಜದಲ್ಲಿ ಗೌರವಾನ್ವಿತ ಹುದ್ದೆ
  • ಸಾಮಾಜಿಕ ಶಿಸ್ತಿನ ಇಲಾಖೆ ಆಗಿರುವುದರಿಂದ ಉತ್ತಮ ಪ್ರತಿಕ್ರಿಯೆ
  • ಜನರ ರಕ್ಷಣೆ ಹಾಗೂ ಸಾಮಾಜಿಕ ಸಂರಕ್ಷಣೆಯ ಪ್ರಾಥಮಿಕ ಉದ್ದೇಶ

KSP  Constables ಕೆಲಸದ ವಾತಾವರಣ ಹಾಗೂ ಜವಾಬ್ದಾರಿಗಳು

  • ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು – ರಾಜ್ಯದಲ್ಲಿ ಶಾಂತಿ ಕಾಪಾಡುವುದು, ಭದ್ರತೆ ಒದಗಿಸಿವುದು ಹಾಗೂ ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡುವ ಜೊತೆಗೆ ನೆಡೆಯುವ ಅಪರಾಧಗಳನ್ನು ತಡೆಗಟ್ಟಲು ಗಸ್ತು ತಿರುಗುವುದು.
  • ಅಪರಾಧ ತನಿಖೆ ಮತ್ತು ಪೊಲೀಸ್ ಕಾರ್ಯಗಳಿಗೆ ಸಹಕಾರ – ನೆಡೆದಿರುವ ಅಪರಾಧ ಪ್ರಕರಣಗಳ ತನಿಖೆ ಪ್ರಕ್ರಿಯೆಯಲ್ಲಿ ಮೇಲಾಧಿಕಾರಿಗಳಿಗೆ ನೆರವನ್ನು ನೀಡುವುದು, ಸಾಕ್ಷ್ಯ ಸಂಗ್ರಹಣೆ ಮಾಡುವುದು ಹಾಗೂ ಪೊಲೀಸ್ ಠಾಣೆಯ ದೈನಂದಿನ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುವುದು.
  • ಸಾರ್ವಜನಿಕ ಸುರಕ್ಷತೆ ಮತ್ತು ಸಂಚಾರದ ನಿರ್ವಹಣೆ – ರಸ್ತೆಯ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವುದು, ಎಲ್ಲಾ ರೀತಿಯ ಅಪಘಾತಗಳನ್ನು ತಡೆಗಟ್ಟುವುದು ಹಾಗೂ ಸಾರ್ವಜನಿಕರ ಸುರಕ್ಷತೆಯನ್ನು ಸಂಪೂರ್ಣವಾಗಿ ಖಚಿತಪಡಿಸುವುದು.
  • ಭದ್ರತಾ ವ್ಯವಸ್ಥೆ ಮತ್ತು ತುರ್ತು ಸೇವೆಗಳು – ಸಾರ್ವಜನಿಕರ ಸಭೆಗಳು, ಉತ್ಸವಗಳು, ಜಾತ್ರೆಗಳು, ಚುನಾವಣೆಗಳು ಹಾಗೂ ವಿಪತ್ತು ಉಂಟಾದ ಸಂದರ್ಭಗಳಲ್ಲಿ ಭದ್ರತೆಯನ್ನು ಮತ್ತು ರಕ್ಷಣಾ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸುವುದು.
  • ಜನರ ಸೇವೆ ಮತ್ತು ಕಾನೂನುಗಳ ಜಾರಿ – ಇಲಾಖೆಯ ಅಧಿಕೃತ ವಾರಂಟ್‌ಗಳು ಹಾಗೂ ಅಧಿಕೃತ ಆದೇಶಗಳನ್ನು ಜಾರಿಗೊಳಿಸುವುದು, ಪ್ರಕರಣ ವಿಚಾರಣಾ ಬಂಧಿತರನ್ನು ಸುರಕ್ಷಿತವಾಗಿ ಕರೆದೊಯ್ಯುವುದು ಮತ್ತು ಜನಸ್ನೇಹಿ ಪೊಲೀಸ್ ಸೇವೆಗಳನ್ನು ಒದಗಿಸುವುದು.

KSP  Constables ಗಳ ದೈನಂದಿನ ವೇಳಾಪಟ್ಟಿ ಹೀಗಿರುತ್ತದೆ

ಬೆಳಿಗ್ಗೆ ಪೊಲೀಸ್ ಕಾನ್ಸ್ಟೇಬಲ್‌ ಗಳು ಪರೇಡ್ ಮಾಡುವುದು, ದೈಹಿಕ ವ್ಯಾಯಾಮ ಕೈಗೊಳ್ಳುವುದು ಹಾಗೂ ಮೇಲಾಧಿಕಾರಿಗಳಿಂದ ದಿನದ ಕರ್ತವ್ಯಗಳ ಹಾಗೂ ಕಾರ್ಯಾಚರಣೆಗಳ ಕುರಿತು ಸೂಚನೆಗಳನ್ನು ಪಡೆಯುವ ಮೂಲಕ ತಮ್ಮ ಕೆಲಸವನ್ನು ಆರಂಭ ಮಾಡುತ್ತಾರೆ. ನಂತರ ಬೀಟ್ ಪೆಟ್ರೋಲಿಂಗ್, ಸಂಚಾರ ದಟ್ಟಣೆ ನಿಯಂತ್ರಣ, ಠಾಣೆಯಲ್ಲಿ ಸಾರ್ವಜನಿಕರ ದೂರುಗಳ ಸ್ವೀಕಾರ ಮಾಡುವುದು ಹಾಗೂ ಪೊಲೀಸ್ ಠಾಣೆಯ ಆಡಳಿತಾತ್ಮಕ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ. ಮಧ್ಯಾಹ್ನ ಮತ್ತು ಸಂಜೆ ವೇಳೆಯಲ್ಲಿ ಅಪರಾಧಗಳ ತಡೆ ಕಾರ್ಯಾಚರಣೆ, ತನಿಖಾ ಕಾರ್ಯಗಳಿಗೆ ಸಹಾಯ ಮಾಡುವುದು, ವಾರಂಟ್ ಜಾರಿಗೊಳಿಸುವಿಕೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮೇಲ್ವಿಚಾರಣೆಯನ್ನು ನಡೆಸುತ್ತಾರೆ.

ಹಬ್ಬಗಳು, ಜಾತ್ರೆಗಳು, ಸಾರ್ವಜನಿಕ ಸಭೆಗಳಲ್ಲಿ ಹಾಗೂ ವಿಶೇಷ ಕಾರ್ಯಕ್ರಮಗಳಲ್ಲಿ ಭದ್ರತೆಯನ್ನು ಒದಗಿಸುವ ಜವಾಬ್ದಾರಿಯನ್ನೂ ನಿರ್ವಹಿಸುತ್ತಾರೆ. ರಾತ್ರಿ ವೇಳೆಯಲ್ಲಿ ಗಸ್ತು ತಿರುಗುವುದು, ಸಾರ್ವಜನಿಕರ ತುರ್ತು ಕರೆಗಳಿಗೆ ಸ್ಪಂದಿಸುವುದು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಹಾಗೂ ಅಪರಾಧ ತಡೆಗಟ್ಟುವ ಕಾರ್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಕಾನ್ಸ್ಟೇಬಲ್‌ ಗಳ ಪ್ರಮುಖ ಕರ್ತವ್ಯವಾಗಿದೆ.

ಸೂಚನೆ: ಪೊಲೀಸ್ ಕಾನ್ಸ್ಟೇಬಲ್‌ಗಳ ಕರ್ತವ್ಯಗಳ ಸಮಯವು ಶಿಫ್ಟ್ ಮಾದರಿ ವ್ಯವಸ್ಥೆ, ಇರುವ ಹಬ್ಬಗಳು, ನೆಡೆಯುವ ಚುನಾವಣೆಗಳು ಹಾಗೂ ವಿಶೇಷ ಭದ್ರತಾ ಪರಿಸ್ಥಿತಿಗಳ ಆಧಾರದ ಮೇಲೆ ಬದಲಾವಣೆಗೆ ಒಳಪಡಬಹುದು.

KSP  Constables ಗಳ Career Growth ಮಾಹಿತಿ

ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಗೊಂಡು ಉತ್ತಮ ಕೆಲಸ ಹಾಗೂ ಸಾಧನೆಗಳ ಆಧಾರ ಹಾಗೂ ಸೇವಾ ಅವಧಿಯ ಆಧಾರದ ಮೇಲೆ ಹೆಡ್ ಕಾನ್ಸ್ಟೇಬಲ್, ಸಹಾಯಕ ಆರಕ್ಷಕ ಉಪ ನಿರೀಕ್ಷಕ,  ಆರಕ್ಷಕ ಉಪ ನಿರೀಕ್ಷಕ,  ಪೊಲೀಸ್ ಇನ್ಸ್‌ಪೆಕ್ಟರ್ ನಂತರ  ಡಿವೈಎಸ್‌ಪಿ ಹುದ್ದೆಗಳಿಗೆ ಪದೋನ್ನತಿಯನ್ನು  ಹೊಂದಬಹುದಾಗಿರುತ್ತದೆ

KSP  Constables ನೇಮಕಾತಿಗೆ ಅರ್ಜಿ ಸಲ್ಲಿಸುವ ಹಂತ ಹಂತದ ವಿಧಾನಗಳು

ಅರ್ಹ ಆಸಕ್ತ ಅಭ್ಯರ್ಥಿಗಳು ಮೊದಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಹುದ್ದೆಯ ವಿವರ ಅರ್ಹತೆ ಶೈಕ್ಷಣಿಕ ಅರ್ಹತೆ, ದೈಹಿಕ ಅರ್ಹತೆ ಆಯಾಮಗಳನ್ನು ಓದಿ ಅರ್ಥೈಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ

ಮೊದಲನೇ ಹಂತ : ಅರ್ಹ ಅಭ್ಯರ್ಥಿಗಳು ಮೊದಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು

ಎರಡನೇ ಹಂತ : ವೆಬ್ ಸೈಟಿನ ನೇಮಕಾತಿ ವಿಭಾಗಕ್ಕೆ ಹೋಗಿ ಅಲ್ಲಿ ಲಭ್ಯವಿರುವ ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಆಯ್ಕೆಯನ್ನು ಆಯ್ದು ಕೊಳ್ಳಬೇಕು

ಮೂರನೇ ಹಂತ : ನಿಗದಿಪಡಿಸಲಾದ ಹುದ್ದೆಗಳಿಗೆ ಹೊರಡಿಸಲಾಗಿರುವ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಹತಮಾನದಂಡಗಳನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಿ

ನಾಲ್ಕನೇ ಹಂತ : ಅಪ್ಲೈ ಆನ್ಲೈನ್ ಎಂಬ ಆಯ್ಕೆಯನ್ನು ಆಯ್ದುಕೊಂಡು ಅರ್ಜಿಯಲ್ಲಿ ಕೇಳಲಾಗುವ ವೈಯಕ್ತಿಕ ಶೈಕ್ಷಣಿಕ ಸಂವಹನ ಹಾಗೂ ದೈಹಿಕ ಮಟ್ಟದ ವಿವರಗಳನ್ನು ನಿಖರವಾಗಿ ಎಚ್ಚರಿಕೆಯಿಂದ ಭರ್ತಿ ಮಾಡಿ

ಐದನೇ ಹಂತ : ಅರ್ಜಿಯಲ್ಲಿ ಕೇಳಲಾಗುವ ಕಡ್ಡಾಯ ಹಾಗೂ ಅನ್ವಯವಾಗುವ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಅಭ್ಯರ್ಥಿಯ ಭಾವಚಿತ್ರ ಹಾಗು ಸಹಿಯನ್ನು ಸ್ಕ್ಯಾನ್ ಮಾಡಲು ಇರಬೇಕಾದ ಗರಿಷ್ಠ ಗಾತ್ರದ ನಿಯಮಗಳನ್ನು ಪರಿಶೀಲಿಸಿ ನಂತರ ಸಬ್ಮಿಟ್ ಮಾಡಿ

  • ಭಾವಚಿತ್ರ 50 ಕೆ ಬಿ ಯಿಂದ 200 ಕೆ ಬಿ ಇರಬೇಕು
  • ಸಹಿಯನ್ನು ಕಪ್ಪು ಇಂಕಿನ ಪೆನ್ನಿನಲ್ಲಿ ಮಾಡಿ ಇದರ ಗರಿಷ್ಠ ಗಾತ್ರವು 50ಕೆಜಿಯಿಂದ 70 ಕೆಬಿ ಇರಬೇಕು
  • ಈ ಎರಡು ಚಿತ್ರಗಳು ಜೆಪಿಜಿ ಫಾರ್ಮೆಟ್ ನಲ್ಲೆ ಇರಬೇಕು

ಆರನೇ ಹಂತ : ಅಭ್ಯರ್ಥಿಗಳ ಪ್ರವರ್ಗಕ್ಕೆ ಅನ್ವಯಿಕ ನಿರ್ದಿಷ್ಟ ಪಡಿಸಿರುವ ಆನ್ಲೈನ್ ಅರ್ಜಿ ಶುಲ್ಕವನ್ನು ಪಾವತಿಸಿ ಪಾವತಿಸದಿಯನ್ನು ಪಡೆದುಕೊಳ್ಳಿ

ಏಳನೇ ಹಂತ : ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿದ ನಂತರ ನಮೂದಿಸಿರುವ ಮಾಹಿತಿ ಹಾಗೂ ಅಪ್ಲೋಡ್ ಮಾಡಲು ಆಗಿರುವ ದಾಖಲಾತಿಗಳು ಸರಿಯಾಗಿವೆ ಎಂದು ಪರಿಶೀಲಿಸಿ ಅರ್ಜಿಯನ್ನು ಸಬ್ಮಿಟ್ ಮಾಡಿ ನಂತರ ಬರುವ ಅರ್ಜಿಯನ್ನು ಪ್ರಿಂಟ್ ತೆಗೆದು ಇಟ್ಟುಕೊಳ್ಳಿ

ಈ KSP ನೇಮಕಾತಿಗೆ ಪ್ರಮುಖವಾಗಿ ಯಾರು ಅರ್ಜಿ ಸಲ್ಲಿಸಬೇಕು

  • ದ್ವಿತೀಯ ಪಿಯುಸಿ ಅಥವಾ ನಿಗಧಿಪಡಿಸಿರುವ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರುವವರು
  • ಸರ್ಕಾರಿ ಉದ್ಯೋಗವನ್ನು ಪಡೆಯಬೇಕು ಎಂದಿರುವವರು
  • ಆಕರ್ಷಕ ವೇತನ ಭತ್ಯೆ ಹಾಗೂ ಉತ್ತಮ ಮುಂಬಡ್ತಿ ಅವಕಾಶಗಳನ್ನು ಹೊಂದಬೇಕು ಎಂದುಕೊಂಡಿರುವವರು
  • ತನಿಖೆ, ರಕ್ಷಣೆ, ಬೆಂಗಾವಲು ಹಾಗೂ ಇತರ ರಕ್ಷಣಾತ್ಮಕ ಕ್ಷೇತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಇರುವವರು
  • ರಾಜ್ಯದ ಸಾಮಾಜಿಕ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕೆಂಬ ಮಹತ್ವಾಮಾಖಕ್ಷೆ ಹೊಂದಿರುವವರು

Constables ಗಳಿಗೆ ಇರಬೇಕಾದ ಪ್ರಮುಖ ಕೌಶಲ್ಯಗಳು

  • ಉತ್ತಮವಾದ ದೈಹಿಕ ಸಾಮರ್ಥ್ಯ ಮತ್ತು ಫಿಟ್ನೆಸ್ ಸ್ಥಿತಿ.
  • ಶಿಸ್ತು ಪಾಲನೆ, ಪ್ರಾಮಾಣಿಕವಾಗಿ ಇರಿವುದು ಮತ್ತು ಕರ್ತವ್ಯನಿಷ್ಠೆ ಕಾಪಾಡುವುದು.
  • ಧೈರ್ಯ ಪ್ರವೃತ್ತಿ ಹಾಗೂ ತುರ್ತು ಪರಿಸ್ಥಿತಿಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ಸಾಮರ್ಥ್ಯವನ್ನು ಹೊಂದಿರುವುದು.
  • ಸಾರ್ವಜನಿಕರೊಂದಿಗೆ ಉತ್ತಮ ಪೊಲೀಸ್‌ ಸ್ನೇಹಿ ಸಂವಹನ ಕೌಶಲ್ಯ ಹೊಂದುವುದು.
  • ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ಮತ್ತು ಬೇಗನೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಕೌಶಲ್ಯ.
  • ಕಾನೂನುಗಳು ಮತ್ತು ಪೊಲೀಸ್ ಇಲಾಖೆಯ ನಿಯಮಗಳ ಮೂಲಭೂತ ಜ್ಞಾನ ಹೊಂದಿರುವುದು.
  • ಇತರ ಹಾಗೂ ತಮ್ಮ ತಂಡಗಳೊಂದಿಗೆ ಸಮನ್ವಯ ಸಾದಿಸಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಇರುವುದು.
  • ಕೆಲಸದ ಒತ್ತಡದ ಪರಿಸ್ಥಿತಿಗಳಲ್ಲಿ ಕೆಲಸ ಮಾಡುವ ಮಾನಸಿಕ ದೃಢತೆಯನ್ನು ಹೊಂದುವುದು.
  • ಉತ್ತಮ ವೀಕ್ಷಣಾ ಕೌಶಲ್ಯ ಮತ್ತು ಅಪರಾಧಗಳ ಪತ್ತೆಯಲ್ಲಿ ಉತ್ತಮ ಸಾಮರ್ಥ್ಯ ಹೊಂದಿರುವುದು.
  • ಸಾರ್ವಜನಿಕರ ನಡುವೆ ಇರುವುದರಿಂದ ಸೇವಾ ಮನೋಭಾವದಿಂದ ಇದ್ದು ಹಾಗೂ ಜನಸ್ನೇಹಿ ವರ್ತನೆಯನ್ನು ಸಾಧಿಸುವುದು.

KSP Constable Exam Syllabus Preperaion Tips

ಸಾಮಾನ್ಯ ಜ್ಞಾನ (General Knowledge)

ಸಾಮಾನ್ಯ ಜ್ಞಾನದ ವಿಭಾಗವು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಲು ಸಹಕರಿಸುವ ಪ್ರಮುಖ ವಿಷಯವಾಗಿದೆ. ಕರ್ನಾಟಕ ರಾಜ್ಯದ ಇತಿಹಾಸ, ಭಾರತದ ಸ್ವಾತಂತ್ರ್ಯ ಚಳುವಳಿಗಳು, ಭಾರತದ ಸಂವಿಧಾನ, ಭೂಗೋಳಶಾಸ್ತ್ರದ ವಿಚಾರಗಳು, ವಿಜ್ಞಾನ ಮತ್ತು ಅದರ ವಿಚಾರಗಳು,  ಭಾರತ ಹಾಗೂ ಕರ್ನಾಟಕದ ಆರ್ಥಿಕ ಹಾಗೂ ಸರ್ಕಾರಿ ಯೋಜನೆಗಳ ಕುರಿತು ಉತ್ತಮ ಜ್ಞಾನವನ್ನು ಹೊಂದಿರಬೇಕು. ಈ ವಿಷಯಕ್ಕೆ ತಯಾರಿ ನೆಡೆಸುವಾಗ 6ನೇ ತರಗತಿಯಿಂದ ರಿಂದ 10ನೇ ತರಗತಿಯ ಸಮಾಜ ವಿಜ್ಞಾನ ಮತ್ತು ವಿಜ್ಞಾನ ಪುಸ್ತಕಗಳನ್ನು ಓದುವುದು ಉತ್ತಮವಾಗಿದೆ ಇದರಿಂದ ಉತ್ತಮ ಅಡಿಪಾಯ ಆಗುತ್ತದೆ. ಪ್ರತಿದಿನ ಪತ್ರಿಕೆ ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಿ ಹಾಗೂ ಪ್ರಮುಖ ವಿಷಯಗಳ ಬಗ್ಗೆ ಟಿಪ್ಪಣಿಗಳನ್ನು ತಯಾರಿಸಿ. ವಾರಕ್ಕೊಮ್ಮೆ ಮಾಕ್ ಟೆಸ್ಟ್‌ಗಳನ್ನು ಬರೆಯುವುದರಿಂದ ನಿಮ್ಮ ಸಿದ್ಧತೆಯ ಮಟ್ಟವನ್ನು ಮೌಲ್ಯಮಾಪನ ಮಾಡಬಹುದು.

ಮಾನಸಿಕ ಸಾಮರ್ಥ್ಯ (Mental Ability)

ಮಾನಸಿಕ ಸಾಮರ್ಥ್ಯ ವಿಭಾಗವು ಅಭ್ಯರ್ಥಿಗಳಿಗೆ ಇರಬೇಕಾದ ತಾರ್ಕಿಕ ಚಿಂತನೆ, ವಿಶ್ಲೇಷಣಾ ಕೌಶಲ್ಯಗಳು ಮತ್ತು ಸಮಸ್ಯೆಗಳ ಪರಿಹಾರ ಒದಗಿಸುವ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ. ಸರಣಿಗಳು, ಕೋಡಿಂಗ್-ಡಿಕೋಡಿಂಗ್, ರಕ್ತ ಸಂಬಂಧಗಳ ಬಗ್ಗೆ ಪ್ರಶ್ನೆಗಳು, ದಿಕ್ಕುಗಳು, ವರ್ಗೀಕರಣದ ವಿಚಾರಗಳು, ಅಸಮಾನತೆ ಹಾಗೂ ತಾರ್ಕಿಕ ಪ್ರಶ್ನೆಗಳನ್ನು ಹೆಚ್ಚಾಗಿ ಅಭ್ಯಾಸ ಮಾಡಬೇಕು. ಈ ವಿಷಯದಲ್ಲಿ ಹೆಚ್ಚು ಅಂಕ ಗಳಿಸಲು ಪ್ರತಿದಿನ ಕನಿಷ್ಠ 30 ರಿಂದ 40 ಪ್ರಶ್ನೆಗಳನ್ನು ಅಧ್ಯಯನ ಮಾಡಿ ಬಿಡಿಸುವ ಅಭ್ಯಾಸ ಮಾಡುವುದು ಅತ್ಯಗತ್ಯ. ಈ  ಪ್ರಶ್ನೆಗಳನ್ನು ವೇಗವಾಗಿ ಹಾಗೂ ನಿಖರವಾಗಿ ಬಿಡಿಸುವ ಕೌಶಲ್ಯ ಬೆಳೆಸಿಕೊಳ್ಳುವುದರಿಂದ ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಹೆಚ್ಚಾಗಿ ಅಭ್ಯಾಸ ಮಾಡುವುದು ಉತ್ತಮ.

ಪ್ರಚಲಿತ ವಿದ್ಯಮಾನಗಳು (Current Affairs)

ಪ್ರಚಲಿತ ವಿದ್ಯಮಾನಗಳು ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ಅತ್ಯಂತ ಮಹತ್ವದ ವಿಭಾಗವಾಗಿದೆ ಏಕೆಂದರೆ ಈ ಇಲಾಖೆಯು ದೈನಂದಿನ ಕಾರ್ಯ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ವೀಕ್ಷಣೆ ಮಾಡುತ್ತದೆ. ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಪ್ರಮುಖ ಘಟನೆಗಳು, ನೀಡಲಾದ ಪ್ರಶಸ್ತಿಗಳು, ಕ್ರೀಡೆ ವಿಚಾರಗಳು, ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಚಾರಗಳು, ಕರ್ನಾಟಕ ಸರ್ಕಾರಿ ಯೋಜನೆಗಳು ಹಾಗೂ ಪ್ರಮುಖ ನೇಮಕಾತಿಗಳ ಬಗ್ಗೆ ಮಾಹಿತಿಯನ್ನು ಹೊಂದಿರಬೇಕು. ಪ್ರತಿದಿನ  ದಿನಪತ್ರಿಕೆ ಓದುವುದು ರೂಢಿಸಿಕೊಳ್ಳಿ, ಸುದ್ದಿ ವಾಹಿನಿಗಳನ್ನು ವೀಕ್ಷಿಸುವುದು ಹಾಗೂ ಮಾಸಿಕ ಪ್ರಚಲಿತ ಘಟನೆಗಳನ್ನು ಮತ್ತು ಅವರುಗಳ ವಿಚಾರಧಾರೆಗಳನ್ನು ನಿಯತಕಾಲಿಕೆಗಳನ್ನು ಅಧ್ಯಯನ ಮಾಡುವುದು ಉತ್ತಮ. ಪ್ರತಿದಿನ 15 ರಿಂದ 20 ನಿಮಿಷಗಳನ್ನು ಕರೆಂಟ್ ಅಫೇರ್ಸ್ ಗಳ ರಿವಿಷನ್‌ ಗೆ  ಮೀಸಲಿಡುವುದರಿಂದ ಪರೀಕ್ಷೆಯಲ್ಲಿ ಉತ್ತಮ ರೀತಿಯ ಫಲಿತಾಂಶ ಪಡೆಯಬಹುದು.

ಸಂಖ್ಯಾತ್ಮಕ ಸಾಮರ್ಥ್ಯ (Numerical Ability)

ಸಂಖ್ಯಾತ್ಮಕ ಸಾಮರ್ಥ್ಯ ವಿಭಾಗದಲ್ಲಿ ಶೇಕಡಾವಾರು ವಿಚಾರಗಳು, ಅನುಪಾತ ಪ್ರಮಾಣಗಳು, ಸರಾಸರಿ, ಲಾಭ-ನಷ್ಟ, ಸಮಯ ಮತ್ತು ಕೆಲಸ, ಸಮಯ ಮತ್ತು ದೂರ, ಸರಳ ಬಡ್ಡಿ ಹಾಗೂ ಚಕ್ರಬಡ್ಡಿ ವಿಚಾರಗಳಿಗೆ ಸಂಬಂಧಿಸಿದ ವಿಷಯಗಳಿಂದ ಪ್ರಶ್ನೆಗಳು ಹೆಚ್ಚಾಗಿ ಬರುತ್ತವೆ. ಈ ವಿಭಾಗದಲ್ಲಿ ಯಶಸ್ಸು ಪಡೆಯಲು ಮೂಲಭೂತ ಗಣಿತದ ಪರಿಕಲ್ಪನೆಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಪ್ರತಿದಿನ ಕನಿಷ್ಠ ಒಂದು ಗಂಟೆಗಳ ಕಾಲ ಗಣಿತ ವಿಷಯಕ್ಕೆ ಅಭ್ಯಾಸಕ್ಕೆ ಮೀಸಲಿಡಿ. ಪ್ರಮುಖ ಸೂತ್ರಗಳನ್ನು ಪ್ರತ್ಯೇಕವಾಗಿ ಬರೆದು ಶಾರ್ಟ್‌ ನೋಟ್‌ ತಯಾರಿಸಿ ಪುನರಾವರ್ತನೆ ಮಾಡಿ. ಹೆಚ್ಚು ಹೆಚ್ಚು ಮಾದರಿ ಪ್ರಶ್ನೆಗಳನ್ನು ಬಿಡಿಸುವ ಮೂಲಕ ವೇಗ ಮತ್ತು ನಿಖರತೆಯನ್ನು ಹೆಚ್ಚಿಸಿಕೊಳ್ಳಬಹುದು. ನಿಯಮಿತ ಅಭ್ಯಾಸವೇ ಈ ವಿಭಾಗದಲ್ಲಿ ಹೆಚ್ಚು ಅಂಕಗಳನ್ನು ಪಡೆಯಲು ಸಹಕರಿಸುತ್ತದೆ.

KSP Constable Exam ತಯಾರಿಗೆ ಸಹಾಯ ಮಾಡುವ ಪ್ರಮುಖ ಪುಸ್ತಕಗಳು ಹಾಗೂ ಮಾಕ್‌ ಟೆಸ್ಟ್‌ ಸೀರೀಸ್‌ ಗಳು

1. ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳು (General Knowledge)
  • Lucent’s General Knowledge – Lucent Publications
  • Manorama Yearbook – Malayala Manorama Group
  • ಸ್ಪರ್ಧಾ ವಿಜಯ ಕರ್ನಾಟಕ ವಾರ್ಷಿಕಾಂಕ – ಸ್ಪರ್ಧಾ ವಿಜಯ ಕರ್ನಾಟಕ
  • Karnataka Darshana – ಡಾ. ಮಹೇಶ್ ಕುಮಾರ್
2. ಮಾನಸಿಕ ಸಾಮರ್ಥ್ಯಕ್ಕೆ ಸಂಬಂಧಿಸಿದ ಪುಸ್ತಕಗಳು (Mental Ability / Reasoning)
  • A Modern Approach to Verbal & Non-Verbal Reasoning – R.S. Aggarwal
  • Analytical Reasoning – M.K. Pandey
3. ಸಂಖ್ಯಾತ್ಮಕ ಸಾಮರ್ಥ್ಯಕ್ಕೆ ಸಂಬಂಧಿಸಿದ ಪುಸ್ತಕಗಳು (Numerical Ability)
  • Quantitative Aptitude for Competitive Examinations – R.S. Aggarwal
  • Fast Track Objective Arithmetic – Rajesh Verma
4. ಪ್ರಚಲಿತ ವಿದ್ಯಮಾನಗಳ ತಯಾರಿಗೆ ಸಂಬಂಧಿಸಿದ ಪುಸ್ತಕಗಳು (Current Affairs)
  • Pratiyogita Darpan
  • ಸ್ಪರ್ಧಾ ವಿಜಯ ಕರ್ನಾಟಕ ಮಾಸಿಕ ಪತ್ರಿಕೆ
  • Civil Services Chronicle
  • ಪ್ರತಿದಿನದ ಕನ್ನಡ ಮತ್ತು ಇಂಗ್ಲಿಷ್ ದಿನಪತ್ರಿಕೆಗಳು
5. ಹಿಂದಿನ ಪ್ರಶ್ನೆಪತ್ರಿಕೆಗಳು
  • KSP ಪೊಲೀಸ್ ಕಾನ್ಸ್ಟೇಬಲ್ ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳು
  • KSP Mock Tests ಮತ್ತು Practice Sets
  • ಮಾಕ್‌ ಟೆಸ್ಟ್‌ ಗಳನ್ನು ತೆಗೆದುಕೊಳ್ಳುವ ಲಿಂಕ್‌ : ಮಾಕ್‌ ಟೆಸ್ಟ್‌ ಗಳು

KSP Constable Recruitment And Exam ಬಗ್ಗೆ ಪ್ರಮುಖ FAQ’s ಗಳು

1. ನಾನು ಪ್ರಸ್ತುತ ಪಿಯುಸಿ ಓದುತ್ತಾ ಇದ್ದೇನೆ ನಾನು ಅರ್ಜಿ ಸಲ್ಲಿಸಬಹುದೇ?
ಇಲ್ಲ, ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕದ ಮೊದಲೇ ಫಲಿತಾಂಶ ಪಡೆದಿರಬೇಕು

2. KSP ಕಾನ್ಸ್ಟೇಬಲ್ ಹುದ್ದೆಗೆ ಯಾವ ವಿದ್ಯಾರ್ಹತೆಯನ್ನು ಹೊಂದಿರಬೇಕು?
PUC ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಕಡ್ಡಾಯವಾಗಿ ಹೊಂದಿರಬೇಕು.

3. KSP ಕಾನ್ಸ್ಟೇಬಲ್ ಆಯ್ಕೆ ಪ್ರಕ್ರಿಯೆಯಲ್ಲಿ ಯಾವ ಯಾವ ಹಂತಗಳಿವೆ?
ಲಿಖಿತ ಪರೀಕ್ಷೆ, PST, PET, ದಾಖಲೆ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಹಂತಗಳಿಗೆ.

4. ಲಿಖಿತ ಪರೀಕ್ಷೆಯಲ್ಲಿ ಯಾವ ಯಾವ ವಿಷಯಗಳಲ್ಲಿ ಪ್ರಶ್ನೆ ಬರುತ್ತವೆ?
ಸಾಮಾನ್ಯ ಜ್ಞಾನ, ಲಾಜಿಕಲ್‌ ಮತ್ತು ನ್ಮೂಮೆರಿಕ್ ರೀಸನಿಂಗ್, ಕರೆಂಟ್ ಅಫೇರ್ಸ್, ಗಣಿತ ವಿಷಯಗಳು.

5. ದೈಹಿಕ ಪರೀಕ್ಷೆ ಕಡ್ಡಾಯವೇ?
ಹೌದು, ಆಯ್ಕೆಗೆ PST ಮತ್ತು PET ಪರೀಕ್ಷೆ ಕಡ್ಡಾಯವಾಗಿದೆ.

6. KSP ಕಾನ್ಸ್ಟೇಬಲ್ ಹುದ್ದೆಯಲ್ಲಿ ಬಡ್ತಿ ಹೊಂದುವ ಅವಕಾಶಗಳಿವೆಯೇ?
ಹೌದು, ಸೇವಾ ಅನುಭವದಿಂದ ಉನ್ನತ ಹುದ್ದೆಗಳಿಗೆ ಬಡ್ತಿಯನ್ನು ಹೊಂದುವುದು ಸಾಧ್ಯವಿದೆ.

CANDIDATES ಮಡುವ COMMON MISTAKES ಗಳು

  • ಇಲಾಖೆ ಹೊರಡಿಸಿರುವ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದದೇ ಅರ್ಜಿ ಸಲ್ಲಿಸುವುದು.
  • ದಾಖಲೆಗಳು ಮತ್ತು ವೈಯಕ್ತಿಕ ಮಾಹಿತಿಯನ್ನು ತಪ್ಪಾಗಿ ನಮೂದಿಸುವುದು ಹಾಗೂ ತಪ್ಪಾಗಿ ಅಪ್ಲೋಡ್‌ ಮಾಡುವುದು.
  • ದೈಹಿಕ ಪರೀಕ್ಷೆಯನ್ನು ಮತ್ತು ತಯಾರಿಯನ್ನು ಕೊನೆಯ ಕ್ಷಣಕ್ಕೆ ಮುಂದೂಡುವುದು.
  • ಕರೆಂಟ್ ಅಫೇರ್ಸ್ ಬಗ್ಗೆ  ಮತ್ತು ಸಾಮಾನ್ಯ ಜ್ಞಾನವನ್ನು ನಿರ್ಲಕ್ಷಿಸುವುದು.
  • ಹಿಂದಿನ ಪ್ರಶ್ನೆಪತ್ರಿಕೆಗಳ ಅಧ್ಯಯನ ಮತ್ತು ಮಾಕ್ ಟೆಸ್ಟ್ ಗಳನ್ನು ಅಭ್ಯಾಸ ಮಾಡದೇ ಇರುವುದು.

ನೆನಪಿನಲ್ಲಿಡಬೇಕಾದ ಪ್ರಮುಖ ದಿನಾಂಕಗಳು

  • ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 08 ಜೂನ್ 2026
  • ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 03 ಜುಲೈ 2026
  • ಆನ್ಲೈನ್ ಅರ್ಜಿ ಶುಲ್ಕವನ್ನು ಪಾವತಿ ಮಾಡಲು ನಿಗದಿಪಡಿಸಿರುವ ಕೊನೆಯ ದಿನಾಂಕ : 04 ಜುಲೈ 2026
  • ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ನ ಲಿಖಿತ ಪರೀಕ್ಷೆಯ ನಿರೀಕ್ಷಿತ ದಿನಾಂಕ : 02 ಆಗಸ್ಟ್ 2026 

ಈ ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಲಿಂಕುಗಳು

ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ ಕರ್ನಾಟಕ ಪೊಲೀಸ್ ಇಲಾಖೆ
ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್  ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಅಧಿಕೃತ ಅಧಿಸೂಚನೆಯ ಪಿಡಿಎಫ್ KSP Recruitment RPC Notification
ಅಧಿಕೃತ ಅಧಿಸೂಚನೆಯ ಪಿಡಿಎಫ್ KSP Recruitment KKR Notification
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು  ಅರ್ಜಿ ಸಲ್ಲಿಕೆ  KKR ವೃಂದ      RPC ವೃಂದ
ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು  ಇಲ್ಲಿ ಕ್ಲಿಕ್ ಮಾಡಿ
ಹೆಚ್ಚುವರಿ ಮಾಹಿತಿ ಪಡೆಯಿರಿ  ನೇಮಕಾತಿ ಮಾಹಿತಿ        ಸರ್ಕಾರಿ ಯೋಜನೆಗಳ ಮಾಹಿತಿ       ಪರೀಕ್ಷಾ ಸಲಹೆಗಳು

Last Updated : 13-06-2026

Conclusion

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಇಲಾಖೆಯಲ್ಲಿನ ಖಾಲಿ ಇರುವ ಒಟ್ಟು 3991 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಕಲ್ಯಾಣ ಕರ್ನಾಟಕ ವೃಂದ ಹಾಗೂ ಮಿಕ್ಕುಳಿದ ವೃಂದ ಗಳಿಂದ ಆನ್ಲೈನ್ ಮೂಲಕ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ ಅಭ್ಯರ್ಥಿಗಳು ಆದಷ್ಟು ಬೇಗ ಅಧಿಕೃತ ಸೂಚನೆಯನ್ನು ಓದಿಕೊಂಡು ಅರ್ಹತೆ ಮಾನದಂಡಗಳನ್ನು ಪರಿಶೀಲಿಸಿ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ಕರ್ನಾಟಕ ರಾಜ್ಯ ಸರ್ಕಾರದಲ್ಲಿನ ಶಿಸ್ತಿನ ಇಲಾಖೆಯದ ಪೊಲೀಸ್ ಇಲಾಖೆಯಲ್ಲಿ ಉದ್ಯೋಗವನ್ನು ಪಡೆಯುವವರಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು ಆಕರ್ಷಕ ವೇತನ, ಭತ್ಯೆಗಳು ಮುಂಬಡ್ತಿ ಹಾಗೂ ಇನ್ನಿತರ ಸರಕಾರಿ ಸೌಲಭ್ಯಗಳು ಸಿಗುವುದರಿಂದ ಇದೊಂದು ಗೌರವಾನ್ವಿತ ಹಾಗೂ ಪ್ರತಿಷ್ಠಿತ ಉದ್ಯೋಗ ವಾಗಿದ್ದು ಸರ್ಕಾರಿ ಉದ್ಯೋಗದ ಕನಸನ್ನು ಕಾಣುತ್ತಿರುವ ಯುವಕರಿಗೆ ಹಾಗೂ ಯುವತಿಯರಿಗೆ ಜೊತೆಯಲ್ಲಿ ತೃತೀಯ ಲಿಂಗಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ

 

Author Note: ಈ ನೇಮಕಾತಿ ಲೇಖನವನ್ನು ಕರ್ನಾಟಕ ರಾಜ್ಯ ಪೊಲೀಸ್‌ ಇಲಾಖೆ  ನೇಮಕಾತಿಯ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ  ಅಧಿಕೃತ ಅಧಿಸೂಚನೆ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಹೊರಡಿಸಲಾಗಿರುವ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಸೂಚಿಸಿದೆ.

ರಂಗನಾಥ ಬಿ.ಜಿ ಅವರು ಅರ್ಥಶಾಸ್ತ್ರದಲ್ಲಿ ಎಂ.ಎ ಪದವೀಧರರಾಗಿದ್ದು, ಕಳೆದ ಎರಡು ವರ್ಷಗಳಿಂದ ನೈಜ ಹಾಗೂ ವಿಶ್ವಾಸಾರ್ಹ ಕನ್ನಡ ವಿಷಯಗಳನ್ನು ಪ್ರಕಟಿಸುತ್ತಿದ್ದಾರೆ. ಸರ್ಕಾರಿ ಉದ್ಯೋಗ ಮಾಹಿತಿ, ಪರೀಕ್ಷಾ ತಯಾರಿ ಸಲಹೆಗಳು, ವೃತ್ತಿ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು ಹಾಗೂ ಟ್ರೆಂಡಿಂಗ್ ಸುದ್ದಿಗಳ ಕುರಿತು ಲೇಖನಗಳನ್ನು ಬರೆಯುವಲ್ಲಿ ಪರಿಣತಿ ಹೊಂದಿದ್ದು, ಓದುಗರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುವುದು ಇವರ ಉದ್ದೇಶವಾಗಿದೆ. Please Visit NewsByMr

Leave a Comment