ಬ್ಯಾಂಕಿಂಗ್ ಅಪ್ರೆಂಟಿಸ್ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ (SBI Bank Recruitment)
ನಮಸ್ಕಾರ ಸ್ನೇಹಿತರೆ ನೀವು ಪದವಿಯನ್ನು ಮುಗಿಸಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಹುಡುಕುತ್ತಿದ್ದೀರಾ ಹಾಗಿದ್ದರೆ ನಿಮಗೆ ಒಂದು ಸುವರ್ಣ ಅವಕಾಶ ಒದಗಿ ಬಂದಿದ್ದು ಭಾರತದ ಅತಿ ದೊಡ್ಡ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ ಆದ ಹಾಗೂ ರಾಷ್ಟ್ರೀಕೃತಗೊಂಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದಾದ್ಯಂತ ಖಾಲಿ ಇರುವ ಹಲವು ಹುದ್ದೆಗಳಿಗೆ ನೇಮಕಾತಿ ಸೂಚನೆಯನ್ನು ಹೊರಡಿಸಿದೆ ಆದುದರಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು ಅಧಿಕೃತ ಅಧಿಸೂಚನೆಯನ್ನು ಹೋಗಿ ಅರ್ಹರಾಗಿದ್ದರೆ ಇಂದೇ SBI Bank Recruitment ಗೆ ಅರ್ಜಿ ಸಲ್ಲಿಸಿ
|
SBI Recruitments 2026, Big Opportunity : ಹುದ್ದೆಯ ವಿವರ, ಅರ್ಹತೆ, ಸಂಬಳ ಹಾಗೂ ಅರ್ಜಿ ಸಲ್ಲಿಕೆ ಬಗ್ಗೆ ಮಾಹಿತಿ |
SBI Bank Recruitment ನ ನೇಮಕಾತಿ ವಿವರಗಳು
ನೇಮಕಾತಿ ಸಂಸ್ಥೆಯ ಹೆಸರು : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ)
ಹುದ್ದೆಗಳ ಹೆಸರುವ : ಅಪ್ರೆಂಟಿಸ್
ಒಟ್ಟು ಹುದ್ದೆಗಳ ಸಂಖ್ಯೆ : 7150 ಹುದ್ದೆಗಳು
ಉದ್ಯೋಗದ ಸ್ಥಳ : ಭಾರತದಲ್ಲಿಡೆ
ಶೈಕ್ಷಣಿಕ ವಿದ್ಯಾರ್ಹತೆ ವಿವರ
ಈ SBI Bank Recruitment ನ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿಯನ್ನು ಪೂರ್ಣಗೊಳಿಸಬೇಕು. ಬಿಎ, ಬಿಕಾಂ, ಬಿಎಸ್ಸಿ, ಬಿಬಿಎ, ಬಿಬಿಎಮ್ ಮುಂತಾದ ಪದವಿಗಳನ್ನು ಹೊಂದಿರುವವರು ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು
ವಯೋಮಿತಿ ವಿವರ
SBI Bank Recruitment ನ ನೇಮಕಾತಿ ನಿಯಮಗಳ ಪ್ರಕಾರ ಕನಿಷ್ಠ 20 ವರ್ಷ ಹಾಗೂ ಗರಿಷ್ಠ 28 ವರ್ಷ ವಯೋಮಿತಿಯನ್ನು ಹೊಂದಿರಬೇಕು
ವಯೋಮಿತಿ ಸಡಿಲಿಕೆ
ಈ SBI Bank Recruitment ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಭಾರತೀಯ ಸ್ಟೇಟ್ ಬ್ಯಾಂಕ್ ನ ಅಧಿಕೃತ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ವರ್ಗಗಳ ಆಧಾರದ ಮೇಲೆ ನೀಡಲಾಗುವುದು
SBI Bank Recruitment ನ ಅರ್ಜಿ ಶುಲ್ಕ
ಈ ನೇಮಕಾತಿಗಳಿಗೆ ಪಾವತಿಸಬೇಕಾದ ಆನ್ಲೈನ್ ಅರ್ಜಿ ಶುಲ್ಕದ ವಿವರ ಈ ಕೆಳಕಂಡಂತಿದೆ
ಇತರೆ ಹಿಂದುಳಿದ ವರ್ಗಗಳು ಸಾಮಾನ್ಯ ಅಭ್ಯರ್ಥಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ : 300/- ರೂಗಳು
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ
ಅರ್ಜಿ ಶುಲ್ಕದ ಪಾವತಿ ವಿಧಾನ : ಆನ್ಲೈನ್
SBI Bank Recruitment ನ ಮಾಸಿಕ ವೇತನದ ವಿವರ
ಈ ನೇಮಕಾತಿಯ ಅಧಿಸೂಚನೆಯ ವಿವರಗಳ ಪ್ರಕಾರ ತಿಂಗಳಿಗೆ 15,000/- ರೂಗಳ ವರೆಗೆ ವೇತನವನ್ನು ನೀಡಲಾಗುತ್ತದೆ ಇದರ ಜೊತೆಯಲ್ಲಿ ಭತ್ಯೆಗಳು ಸೇರಿರುತ್ತವೆ
ಆಯ್ಕೆ ಪ್ರಕ್ರಿಯೆ ಹೇಗೆ ಇರುತ್ತದೆ
- ಆನ್ಲೈನ್ ಲಿಖಿತ ಪರೀಕ್ಷೆ :
ಈ SBI Bank Recruitment ನಲ್ಲಿ ಲಿಖಿತವಾಗಿ ಆನ್ಲೈನ್ ಪರೀಕ್ಷೆಯನ್ನು ನೀಡಲಿದ್ದು ಈ ಪರೀಕ್ಷೆಯಲ್ಲಿ ಹುದ್ದೆಗೆ ಬೇಕಾದ ಜ್ಞಾನ ಹಾಗೂ ಕೌಶಲ್ಯವನ್ನು ಪರೀಕ್ಷಿಸಿ ನಂತರ ಮುಂದಿನ ಹಂತಗಳನ್ನು ಅನುಸರಿಸಲಾಗುವುದು - ವೈದ್ಯಕೀಯ ಪರೀಕ್ಷೆ : ಅಭ್ಯರ್ಥಿಗಳು ದೈಹಿಕ ಹಾಗು ಮಾನಸಿಕವಾಗಿ ಸದೃಢರಾಗಿದ್ದಾರೆಯೇ ಎಂದು ಪರಿಶೀಲಿಸಲು ಹಾಗೂ ಅಂಗವಿಕಲ ಅಭ್ಯರ್ಥಿಗಳ ಮೀಸಲಾತಿಯನ್ನು ಪಡೆದಿರುವ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗುತ್ತದೆ
- ಸಂದರ್ಶನ : ಸಂದರ್ಶನದಲ್ಲಿ ಅಭ್ಯರ್ಥಿಗಳ ಸಂವಹನದ ಕೌಶಲ್ಯ ಹಾಗೂ ಅಪಾಯ ನಿರ್ವಹಣೆಯ ಬಗ್ಗೆ ಮೌಖಿಕ ಪರೀಕ್ಷೆ ನಡೆಸಲಾಗುವುದು
ಅರ್ಜಿ ಸಲ್ಲಿಕೆಯ ಪ್ರಕ್ರಿಯೆ
- ಮೊದಲು ಭಾರತೀಯ ಸ್ಟೇಟ್ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಪೆಂಡಿಕ್ಸ್ ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ
- ಅಲ್ಲಿ ನೇಮಕಾತಿ ವಿಭಾಗವನ್ನು ತೆರೆದು ಆನ್ಲೈನ್ ಲಿಂಕ್ ಮೂಲಕ ನೋಂದಣಿ ಮಾಡಿಕೊಳ್ಳಿ
- ನೊಂದಣಿ ಸಂಖ್ಯೆ ಹಾಗೂ ವೈಯಕ್ತಿಕ ವಿವರಗಳನ್ನು ನೀಡಿ ನಿಮ್ಮ ಖಾತೆಗೆ ಲಾಗಿನ್ ಆಗಿ
- ಅಲ್ಲಿ ಕಾಣಸಿಗುವ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಕೆ ಎಂಬಲ್ಲಿ ಕ್ಲಿಕ್ ಮಾಡಿ
- ನಂತರ ಆನ್ಲೈನ್ ಅರ್ಜಿಯಲ್ಲಿ ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ಹಾಗೂ ಸ್ಪಷ್ಟವಾಗಿ ಭರ್ತಿ ಮಾಡಿ ಕಡ್ಡಾಯ ವಿವರಗಳನ್ನು ನಮೂದಿಸುವುದನ್ನು ಮರೆಯಬೇಡಿ
- ಅರ್ಜಿಯಲ್ಲಿ ಕೇಳಲಾಗುವ ಎಲ್ಲಾ ಅಗತ್ಯ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಫೋಟೋ ಹಾಗೂ ಸಹಿಯನ್ನು ಸ್ಕ್ಯಾನ್ ಮಾಡಲು ಬೇಕಾದ ನಿಯಮಗಳನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ
- ನಮೂದಿಸಿರುವ ಎಲ್ಲ ಮಾಹಿತಿಯನ್ನು ಪರಿಶೀಲಿಸಿ ಸಬ್ಮಿಟ್ ಮಾಡಿ
- ನಂತರ ನಿಮ್ಮ ವರ್ಗದ ಪ್ರಕಾರ ಆನ್ಲೈನ್ ಅರ್ಜಿ ಶುಲ್ಕವನ್ನು ಪಾವತಿಸಿ ಪಾವತಿ ರಸಿದಿಯನ್ನು ಪಡೆಯಿರಿ
- ನಂತರ ತಮ್ಮ ನೊಂದಣಿ ಸಂಖ್ಯೆ ಹಾಗೂ ವೈಯಕ್ತಿಕ ವಿವರಗಳನ್ನು ನಮೂದಿಸುವ ಮೂಲಕ ಅಪ್ಲಿಕೇಶನ್ ಡೌನ್ಲೋಡ್ ಮಾಡಿ ಭವಿಷ್ಯದ ಉದ್ದೇಶಕ್ಕಾಗಿ ಇಟ್ಟುಕೊಳ್ಳಿ
SBI Bank Recruitment ಗೆ ಸಂಬಂಧಿಸಿದ ಪ್ರಮುಖ ಲಿಂಕ್ ಗಳು
ಭಾರತೀಯ ಸ್ಟೇಟ್ ಬ್ಯಾಂಕ್ ನ ಅಧಿಕೃತ ವೆಬ್ಸೈಟ್ ನೇಮಕಾತಿ ವಿಭಾಗ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಅರ್ಜಿ ಸಲ್ಲಿಸಲು ನೋಂದಣಿಯಾಗಲು : ನೋಂದಣಿ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ : ಅರ್ಜಿ ಸಲ್ಲಿಕೆ
ಅಧಿಕೃತ ಅಧಿಸೂಚನೆಯನ್ನು ಓದಲು ಪಿಡಿಎಫ್ : SBI BANK APPRENTICE RECRUITMENT NOTIFICATION
ನಮ್ಮ ವಾಟ್ಸಪ್ ಗ್ರೂಪ್ ಸೇರಲು : ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ದಿನಾಂಕಗಳು
- ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 19-05-2026
- ಅರ್ಜಿ ಸಲ್ಲಿಕೆ, ಶುಲ್ಕವನ್ನು ಪಾವತಿ ಹಾಗೂ ಅರ್ಜಿಯಲ್ಲಿನ ಬದಲಾವಣೆ ಸರಿಪಡಿಸಲು ಕೊನೆಯ ದಿನಾಂಕ : 08-06-2026
- ಅರ್ಜಿಯನ್ನು ಪ್ರಿಂಟ್ ತೆಗೆದುಕೊಳ್ಳಲು ಕೊನೆಯ ದಿನಾಂಕ : 23-06-2026
ಭಾರತದ ರಾಷ್ಟ್ರೀಕೃತ ಹಾಗೂ ಅತಿ ದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಯಾವು 2026ರ ನೇಮಕಾತಿ ಸೂಚನೆಯನ್ನು ಅಧಿಕೃತವಾಗಿ ಹೊರಡಿಸಿದ್ದು ಈ ನೇಮಕಾತಿ ಮೂಲಕ 7,150ಗಳನ್ನು ಭಾರತದಾದ್ಯಂತ ನೇಮಕಾತಿ ಮಾಡಿಕೊಳ್ಳಲು ಮುಂದಾಗಿದೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಪಡೆಯಬೇಕೆಂಬ ಅಭ್ಯರ್ಥಿಗಳು ಆದಷ್ಟು ಬೇಗ ಅಧಿಸೂಚನೆಯನ್ನು ಓದಿ ಅರ್ಹತಾ ಮಾನದಂಡಗಳನ್ನು ಪೂರೈಸಿಕೊಂಡು ಅರ್ಜಿ ಸಲ್ಲಿಸಿ ಇದೊಂದು ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವುದರಿಂದ ಹಾಗೂ ವಿದ್ಯಾರ್ಥಿ ಕಡಿಮೆ ಇರುವುದರಿಂದ ಸ್ಪರ್ಧಾತ್ಮಕತೆ ಹೆಚ್ಚಿರಬಹುದು ಆದ್ದರಿಂದ ಇಂದಿನಿಂದಲೇ ತಯಾರಿಯನ್ನು ಆರಂಭಿಸಿ ಎಲ್ಲರಿಗಿಂತ ಮುಂದಿದ್ದು ತಮ್ಮ ಕನಸಿನ SBI Bank Recruitment ನ ಉದ್ಯೋಗವನ್ನು ಪಡೆದುಕೊಳ್ಳಿ
SBI Bank Recruitment ನ ಪರೀಕ್ಷೆಯಲ್ಲಿ ಯಶಸ್ವಿಯಾಗಲು ಪ್ರಮುಖ ಸಲಹೆಗಳು
ಸಮಯದ ನಿರ್ವಹಣೆ : ಈ ಆನ್ಲೈನ ಆಧಾರಿತ ಪರೀಕ್ಷೆಯು ಸಾಮಾನ್ಯ ಇಂಗ್ಲಿಷ್ ಕ್ವಾಂಟಿಟಿ ಆಪ್ಟಿಟ್ಯೂಡ್ ಲಾಜಿಕಲ್ ರಿಜನಿಂಗ್ ಮತ್ತು ಕಂಪ್ಯೂಟರ್ ಆಧಾರಿತ ಪ್ರಶ್ನೆಗಳು ಹಾಗೂ ಹಣಕಾಸು ಜಾಗೃತಿಯ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗುವುದು ಹಾಗೂ ಪ್ರತಿಯೊಂದು ವಿಭಾಗವು 15 ನಿಮಿಷಗಳ ಸಮಯಾವಕಾಶವನ್ನು ಹೊಂದಿರುವುದರಿಂದ ಒಂದೇ ವಿಭಾಗಕ್ಕೆ ಹೆಚ್ಚು ಸಮಯವನ್ನು ವ್ಯರ್ಥ ಮಾಡಬೇಡಿ
ಮಾಕ್ ಪರೀಕ್ಷೆಗಳನ್ನು ಅಭ್ಯಸಿಸಲು : ಇಲ್ಲಿ ಕ್ಲಿಕ್ ಮಾಡಿ
ನಿಖರತೆ : ಈ ಪರೀಕ್ಷೆಯಲ್ಲಿ 0.25 ಅಂಕಗಳು ಋಣಾತ್ಮಕ ಇರುವುದರಿಂದ ಅನುಮಾನಸ್ಪದ ಪ್ರಶ್ನೆಗಳನ್ನು ಬಿಟ್ಟು ನಿಖರತೆಗೆ ಹೆಚ್ಚಿನ ಗಮನ ಕೊಡಿ
ಆದ್ಯತೆ : ಕಷ್ಟಕರ ಪ್ರಶ್ನೆಗಳು ಹಾಗೂ ದೀರ್ಘಕಾಲದ ಲೆಕ್ಕಾಚಾರದ ಪ್ರಶ್ನೆಗಳನ್ನು ಬಿಟ್ಟು ಮೊದಲು ಸುಲಭದ ಪ್ರಶ್ನೆಗಳನ್ನು ಪರಿಹರಿಸಿ
ತಯಾರಿಕೆಗಾಗಿ ಸಂಪನ್ಮೂಲಗಳು : ತಮ್ಮ ತಯಾರಿ ಬೇಗವನ್ನು ಹೆಚ್ಚಿಸಲು ಮತ್ತು ಪರಿಚಯ ಮೇಲಿನ ಒತ್ತಡವನ್ನು ನಿರ್ವಹಿಸಲು ಮಾಂತೇಶ್ಗಳನ್ನು ಪ್ರತಿನಿತ್ಯ ತೆಗೆದುಕೊಳ್ಳಿ ಈ ಲಿಂಕ್ ನ ಮೇಲೆ ಕ್ಲಿಕ್ ಮಾಡುವುದರ ಮೂಲಕ ಆನ್ಲೈನ್ ಪರೀಕ್ಷಾ ಸರಣಿಯನ್ನು ತೆಗೆದುಕೊಳ್ಳಬಹುದು ಮಾರ್ಟೆಸ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆ : ಈ ಹಿಂದೆ ಆಗಿರುವ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿ ಹಾಗೂ ನಿಖರತೆಯನ್ನು ಕಾಪಾಡಿಕೊಳ್ಳಿ
ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ನೋಡಲು : ಇಲ್ಲಿ ಕ್ಲಿಕ್ ಮಾಡಿ
ಹಂತಗಳನ್ನು ಅರ್ಥ ಮಾಡಿಕೊಳ್ಳುವುದು : ಪರೀಕ್ಷೆ ಮಾರ್ಗದರ್ಶಿಯಲ್ಲಿ ಉತ್ತಮ ಹಾಗೂ ನಿಖರವಾದ ಹಂತಗಳು ಪರೀಕ್ಷಾ ಅರ್ಹತೆ ಹಾಗೂ ಅಂತವರು ವಿವರಗಳನ್ನು ನೀಡಲಾಗಿದೆ ಪರೀಕ್ಷಾ ಮಾರ್ಗದರ್ಶಿ ಇಲ್ಲಿದೆ ಆಯ್ಕೆ ಪ್ರಕ್ರಿಯೆ ಹಾಗೂ ಇನ್ನಿತರ ಮಾಹಿತಿ ಮಾರ್ಗದರ್ಶಿ