ಲೆಕ್ಕಪರಿಶೋಧಕರ ಹುದ್ದೆಗಳಿಗೆ ಅರ್ಜಿ ಆಹ್ವಾನ (SBI Recruitments)
ನಮಸ್ಕಾರ ಸ್ನೇಹಿತರೆ ನೀವೇನಾದರೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಹುಡುಕುತ್ತಿದ್ದೀರಾ ದೇಶದ ಪ್ರತಿಷ್ಠಿತ ರಾಷ್ಟ್ರೀಕೃತ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈಗ ನೇಮಕಾತಿ ಸೂಚನೆಯನ್ನು ಹೊರಡಿಸಿದ್ದು ಈ ನೇಮಕಾತಿ ಮೂಲಕ ಲೆಕ್ಕಪರಿಶೋಧಕರ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಿದೆ ಅಖಿಲ ಭಾರತ ಮಟ್ಟದಲ್ಲಿ ಉದ್ಯೋಗವನ್ನು ಪಡೆಯಬೇಕೆಂಬ ಆಸೆ ಇರುವವರು ಇಂದೇ ಅಧಿಸೂಚನೆಯನ್ನು ಓದಿ ಅರ್ಹತೆಯ ಆಧಾರದ ಮೇಲೆ ಅರ್ಜಿ ಸಲ್ಲಿಸಿ ತಮ್ಮ ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗವನ್ನು ಪಡೆಯಬೇಕೆಂಬ ಕನಸನ್ನು ನನಸಾಗಿಸಿ ಅದರಂತೆಯೇ ಈ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವುದರಿಂದ ಹೆಚ್ಚು ಉದ್ಯೋಗಾವಕಾಶಗಳು ಇವೆ
ಭಾರತದಾದ್ಯಂತ ಖಾಲಿ ಇರುವ 821 ಲೆಕ್ಕಪರಿಶೋಧಕರ SBI Recruitments ಹುದ್ದೆಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು ಈ ಉದ್ಯೋಗದ ವಿವರ, ಒಟ್ಟು ಹುದ್ದೆಗಳು, ಉದ್ಯೋಗದ ಸ್ಥಳ, ಸಂಬಳ, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಬೇಕಾಗುವ ಪ್ರಮುಖ ದಾಖಲೆಗಳು ಹಾಗೂ ಕೊನೆಯ ದಿನಾಂಕದ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದೆ
SBI Recruitments ನ ನೇಮಕಾತಿ ಅಧಿಸೂಚನೆಯ ವಿವರಗಳು
ಸಂಸ್ಥೆಯ ಹೆಸರು : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ( SBI )
ಹುದ್ದೆಗಳ ಹೆಸರು : ಸಮಕಾಲಿನ ಲೆಕ್ಕಪರಿಶೋಧಕರು (Concurrent Auditors)
ಒಟ್ಟು ಹುದ್ದೆಗಳ ಸಂಖ್ಯೆ : 821 ಹುದ್ದೆಗಳು
ಉದ್ಯೋಗ ಸ್ಥಳ : ಅಖಿಲ ಭಾರತ
SBI Recruitments ನ ಶೈಕ್ಷಣಿಕ ಅರ್ಹತೆ ಮಾಹಿತಿ
SBI Recruitments ಬಿಡುಗಡೆ ಮಾಡಿರುವ ಅಧಿಕೃತ ನೇಮಕಾತಿ ಸೂಚನೆ ಪ್ರಕಾರ ನಿಗದಿತ ಶೈಕ್ಷಣಿಕ ಅರ್ಹತೆ ಹಾಗು ಅನುಭವವನ್ನು ಹೊಂದಿರಬೇಕಾಗುತ್ತದೆ
ವಯೋಮಿತಿ ವಿವರ
ಈ SBI Recruitments ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 14-05-2026 ರಂತೆ 65 ವರ್ಷ ವಯಸ್ಸನ್ನು ಮೀರಿರಬಾರದು
SBI Recruitments ನಲ್ಲಿ ಎಷ್ಟು ವೇತನ ಸಿಗುತ್ತದೆ?
ಈ SBI Recruitments ಮೂಲಕ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಮಾಸಿಕ 45,000/- ರೂಗಳಿಂದ 80,000/- ರೂಗಳ ವರೆಗೆ ವೇತನವನ್ನು ನೀಡಲಾಗುತ್ತದೆ ಇದರ ಜೊತೆಯಲ್ಲಿ ಹಲವು ಭತ್ಯೆಗಳೂ ಕೂಡ ಸೇರಿರುತ್ತವೆ
SBI Recruitments ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೀಗಿದೆ
ಮೊದಲನೇ ಹಂತ : ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲು ಎಸ್ ಬಿ ಐ ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ ಅಧಿಕ ವೆಬ್ಸೈಟ್ನ ಲಿಂಕ್
ಎರಡನೇ ಹಂತ : ವೆಬ್ ಸೈಟನ್ನು ತೆರೆದ ನಂತರ ಅಲ್ಲಿ ಕರೆಂಟ್ ಓಪನಿಂಗ್ ಕರಿಯರ್ ವಿಭಾಗವನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ
ಮೂರನೇ ಹಂತ : ನೇಮಕಾತಿಯಲ್ಲಿ ಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ತಮ್ಮ ಅರ್ಹತೆಯನ್ನು ಪರಿಶೀಲಿಸಿಕೊಳ್ಳಿ
ನಾಲ್ಕನೇ ಹಂತ : ಅಲ್ಲಿ ಕಾಣಸಿಗುವ ಅಪ್ಲೈ ಫಾರ್ ಕನ್ಕರೆಂಟ್ ಆಡಿಟರ್ ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅರ್ಜಿ ಬರ್ತಿ ತೆರೆಯುತ್ತದೆ
ಐದನೇ ಹಂತ : ಆನ್ಲೈನ್ ಅರ್ಜಿ ತೆರೆದ ನಂತರ ಅಲ್ಲಿ ಕೇಳಲಾಗುವ ಎಲ್ಲಾ ಮಾಹಿತಿಯನ್ನು ತಪ್ಪಿಲ್ಲದೆ ಎಚ್ಚರವಾಗಿ ಸರಿಯಾಗಿ ನಮೂದಿಸಿ ವೈಯಕ್ತಿಕ ಮಾಹಿತಿ ಸಂವಹನ ಮಾಹಿತಿ ಶೈಕ್ಷಣಿಕ ಮಾಹಿತಿ ಹಾಗೂ ಅನುಭವಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ನಮೂದಿಸಿ
ಆರನೇ ಹಂತ : ನಂತರ ಕೇಳಲಾಗುವ ಎಲ್ಲಾ ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡಿ
ಏಳನೇ ಹಂತ : ತಾವು ನಮೂದಿಸಿರುವ ಎಲ್ಲ ಮಾಹಿತಿಯು ಸರಿಯಾಗಿದೆಯೇ ಹಾಗೂ ದಾಖಲಾತಿಗಳು ಸರಿಯಾಗಿ ಅಪ್ಲೋಡ್ ಆಗಿವೆ ಎಂದು ಪರಿಶೀಲಿಸಿಕೊಳ್ಳಿ
ಎಂಟನೇ ಹಂತ : ಅರ್ಜಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅಪ್ಲಿಕೇಶನ್ ಅನ್ನು ಯಶಸ್ವಿಯಾಗಿ ಸಲ್ಲಿಸಬಹುದು ನಂತರ ಪರದೆ ಮೇಲೆ ಕಾಣುವ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಇಟ್ಟುಕೊಳ್ಳಿ
SBI Recruitments ನ ಆಯ್ಕೆ ಪ್ರಕ್ರಿಯೆ
ಶಾರ್ಟ್ ಲಿಸ್ಟಿಂಗ್ : ಈ SBI Recruitments ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಅರ್ಜಿಗಳನ್ನು ಕ್ರೂಢೀಕರಿಸಿ ಅನುಭವದ ಆಧಾರದ ಮೇಲೆ ಶಾರ್ಟ್ಲಿಸ್ಟಿಂಗ್ ಮಾಡಲಾಗುತ್ತದೆ
ಮೆರಿಟ್ ಲಿಸ್ಟ್ : SBI Recruitments ಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಅರ್ಜಿಗಳನ್ನು ಚಾಟ್ ಲಿಸ್ಟ್ ಮಾಡಿ ಅವರ ಅರ್ಹತೆಗಳನ್ನು ಪರಿಶೀಲಿಸಿ ಅವಶ್ಯಕತೆ ಇರುವ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ಮೆರಿಟ್ ಲಿಸ್ಟ್ ಅನ್ನು ಬಿಡುಗಡೆ ಮಾಡಲಾಗುತ್ತದೆ
ಸಂದರ್ಶನ : ಮೆರಿಟ್ ಲಿಸ್ಟ್ ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ ಈ ಸಂದರ್ಶನದಲ್ಲಿ ಹುದ್ದೆಗೆ ಬೇಕಾಗಿರುವ ಕೌಶಲ್ಯ ಹಾಗೂ ನಿರ್ವಹಣಾ ಕೌಶಲ್ಯಗಳನ್ನು ಪರೀಕ್ಷಿಸಲಾಗುತ್ತದೆ
SBI Recruitments ಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು
ಆನ್ಲೈನ್ ಮೂಲಕ ನೇಮಕಾತಿಗೆ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 14-05-2026 ಆಗಿದೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 11-06-2026
ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಲಿಂಕ್ ಗಳು
ಅಧಿಕೃತ ಅಧಿಸೂಚನೆ : SBI Recruitment Notification
ಅಧಿಕೃತ ವೆಬ್ಸೈಟ್ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ವಿಭಾಗ
ಅರ್ಜಿ ಸಲ್ಲಿಸಲು ಲಿಂಕ್ : ನೋಂದಣಿ ಅರ್ಜಿ ಸಲ್ಲಿಕೆ
ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು : ಇಲ್ಲಿ ಕ್ಲಿಕ್ ಮಾಡಿ
ಈ SBI Recruitments ನ ಪರೀಕ್ಷೆ ಎದುರಿಸಲು ಪ್ರಮುಖ ಸಲಹೆಗಳು
ಅರ್ಜಿ ಸಲ್ಲಿಸುವಿಕೆ ಹಾಗೂ ಶಾರ್ಟ್ಲಿಸ್ಟಿಂಗ್ ಹಂತದಲ್ಲಿನ ಸಲಹೆಗಳು
ಅನುಭವದ ಪ್ರಾಮುಖ್ಯತೆ : ತಾವು ಅರ್ಜಿ ಸಲ್ಲಿಸುವಾಗ ನಿಮ್ಮ ವಿಶೇಷ ಅನುಭವವನ್ನು ಹೈಲೈಟ್ ಮಾಡಿ ಅಂದರೆ ಹಣಕಾಸು ನಿರ್ವಹಣೆ, ಮೌಲ್ಯಮಾಪನ, ವಿದೇಶಿ ವಿನಿಮಯ ಮುಂತಾದ ಲೆಕ್ಕಪರಿಶೋಧನೆ ಅಂತಹ ಕೌಶಲ್ಯಗಳನ್ನು ಹಾಗೂ ಅಪಾಯದ ಕ್ಷೇತ್ರದ ನಿರ್ವಹಣೆಯನ್ನು ಹೈಲೈಟ್ ಮಾಡಿ
ಸರಿಯಾದ ದಾಖಲೆಗಳನ್ನು ಸಲ್ಲಿಸಿ : ನೇಮಕಾತಿಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ ತಾವು ಅಪ್ಲೋಡ್ ಮಾಡುವ ಎಲ್ಲಾ ಪಿಡಿಎಫ್ ಗಳನ್ನು ಎಚ್ಚರಿಕೆಯಿಂದ ನೋಡಿ ಹಾಗೂ ಸ್ಪಷ್ಟವಾಗಿ ಕಾಣುವ ರೀತಿಯಲ್ಲಿ ಅಪ್ಲೋಡ್ ಮಾಡಿ
ವಿಶೇಷತೆ ಕಾಪಾಡಿಕೊಳ್ಳುವಿಕೆ : ನೀವು ಅರ್ಜಿ ಸಲ್ಲಿಸುವ ಸಮಯದಲ್ಲಿ ನಿಮ್ಮ ಪ್ರೊಫೈಲ್ ನಲ್ಲಿ ವಿಶೇಷತೆಯನ್ನು ಕಾಪಾಡಿಕೊಳ್ಳಿ ಅಂದರೆ ನಿಮ್ಮ ಅನುಭವ ಹಾಗೂ ವಿಶೇಷ ಕೌಶಲ್ಯಗಳನ್ನು ಆದರಿಸಿದ ಮಾಹಿತಿಯನ್ನು ನಮೂದಿಸಿ
ಸಂದರ್ಶನದ ಹಂತದಲ್ಲಿನ ಸಲಹೆಗಳು
ಎಸ್ ಬಿ ಐ ನ ಮಾರ್ಗಸೂಚಿಗಳನ್ನು ಅಭ್ಯಾಸ : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕಿನ ಕಾರ್ಯಾಚರಣೆ ಮತ್ತು ಲೆಕ್ಕಪರಿಶೋಧನೆಗೆ ಸಂಬಂಧಿಸಿದ ಕೈಪಿಡಿಗಳನ್ನು ಸಂಪೂರ್ಣವಾಗಿ ಅಭ್ಯಾಸ ಹಾಗೂ ಇತ್ತೀಚಿನ ಲೆಕ್ಕಪರಿಶೀಲನ ಚೌಕಟ್ಟುಗಳನ್ನು ತಿಳಿದುಕೊಳ್ಳಿ
ಸೇವಾ ದಾಖಲೆಯ ಪ್ರದರ್ಶನ : ನಿಮ್ಮ ಅನುಭವ ಪ್ರಮಾಣ ಪತ್ರ ಹಾಗೂ ಸೇವಾ ದಾಖಲೆಯನ್ನು ಹೆಚ್ಚು ಮೌಲ್ಯಮಾಪನ ಮಾಡುವುದರಿಂದ ತಮ್ಮ ಸಮಗ್ರತೆಯನ್ನು ಕಾಪಾಡಿಕೊಳ್ಳಿ
ಅಪಾಯ ನಿರ್ವಹಣೆಯತ್ತ ಹೆಚ್ಚು ಗಮನವಿರಲಿ : ಅಂದರೆ ಬ್ಯಾಂಕಿನಲ್ಲಿ ನಡೆಯಬಹುದಾದ ವಂಚನೆ ಆದಾಯ ಸೋರಿಕೆ ಹಾಗೂ ಅನುತ್ಪಾದಕ ಆಸ್ತಿಗಳನ್ನು ಕಡಿಮೆ ಮಾಡುವ ವಿಷಯಗಳ ಬಗ್ಗೆ ತಮ್ಮ ಹೆಚ್ಚಿನ ಗಮನವಿರಲಿ ಏಕೆಂದರೆ ಲೆಕ್ಕಪರಿಶೋಧಕ ಹುದ್ದೆಗಳಿಗೆ ಈ ಕೌಶಲಗಳು ಹೆಚ್ಚು ಪ್ರಮುಖವಾದವು
ಈ ಪರೀಕ್ಷೆಯನ್ನು ಎದುರಿಸಲು ಉಪಯುಕ್ತ ಸಂಪನ್ಮೂಲಗಳು
ಮಾರ್ಗಸೂಚಿಯನ್ನು ತಿಳಿಯಲು : ಮಾರ್ಗಸೂಚಿ
ಕಾರ್ಯಾಚರಣೆಯ ಕಾರ್ಯವಿಧಾನಗಳನ್ನು ತಿಳಿಯಲು : ಕಾರ್ಯವಿಧಾನಗಳು
ಕೌಶಲ್ಯ ಹೆಚ್ಚಿಸಿಕೊಳ್ಳಲು : ಕೌಶಲ್ಯವೃದ್ದಿ
ಇಂದಿನ ನೇಮಕಾತಿಯ ಸಂದರ್ಶನದ ಪ್ರಶ್ನೆಗಳನ್ನು ತಿಳಿಯಲು : ಸಂದರ್ಶನದ ಪ್ರಶ್ನೆಗಳು
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 2026ರ ನೇಮಕಾತಿ ಸೂಚನೆಯ ಪ್ರಕಾರ ಸಮಕಾಲಿನ ಲೆಕ್ಕಪರಿಶೋಧಕರ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿಯನ್ನು ಹಿಂದೆ ಸಲ್ಲಿಸಬಹುದಾಗಿರುತ್ತದೆ ಉತ್ತಮ ವೇತನ ಹಾಗೂ ಉತ್ತಮ ಪದ್ಯಗಳ ಜೊತೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಕೆಲಸ ಮಾಡುವಂತಹ ಅನುಭವವನ್ನು ನೀಡುತ್ತದೆ ಆದ್ದರಿಂದ ಇಂದೇ ಅಧಿಸೂಚನೆಯನ್ನು ಓದಿ ಅರ್ಜಿ ಸಲ್ಲಿಸಿ
SBI Recruitments – Frequently Asked Questions (FAQ)
1. ಈ SBI ನೇಮಕಾತಿಯಲ್ಲಿ ಯಾವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ?
ಈ ನೇಮಕಾತಿ ಮೂಲಕ ಸಮಕಾಲಿನ ಲೆಕ್ಕಪರಿಶೋಧಕರು (Concurrent Auditor) ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
2. ಎಷ್ಟು ಹುದ್ದೆಗಳು ಖಾಲಿ ಇವೆ?
821 ಹುದ್ದೆಗಳು ಖಾಲಿ ಇದ್ದು, ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
3. ಅರ್ಜಿ ಸಲ್ಲಿಸಲು ಗರಿಷ್ಠ ವಯಸ್ಸು ಎಷ್ಟಿರಬೇಕು?
ಅಭ್ಯರ್ಥಿಯ ಗರಿಷ್ಠ ವಯಸ್ಸು 14-05-2026 ರಂತೆ 65 ವರ್ಷ ಮೀರಿರಬಾರದು.
4. ಈ ಉದ್ಯೋಗಕ್ಕೆ ಎಷ್ಟು ವೇತನ ಸಿಗುತ್ತದೆ?
ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹45,000 ರಿಂದ ₹80,000 ವರೆಗೆ ವೇತನ ನೀಡಲಾಗುತ್ತದೆ. ಜೊತೆಗೆ ಉತ್ತಮ ಭತ್ಯೆಗಳೂ ಇರುತ್ತದೆ.
5. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಯಾವುದು?
ಈ ನೇಮಕಾತಿಗೆ 11-06-2026 ರೊಳಗೆ ಅಥವಾ ಮೊದಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.