Telegram Join My Telegram WhatsApp Join My WhatsApp

Aadhar Update 2026, Big Announcement : ಆಧಾರ್‌ ತಿದ್ದುಪಡಿ ಪ್ರಕ್ರಿಯೆ ಈಗ ಸುಲಭ, ಸಂಪೂರ್ಣ ಮಾಹಿತಿ ಇಲ್ಲಿದೆ

ತಮ್ಮ ಮೊಬೈಲ್‌ ನಲ್ಲೇ ಆಧಾರ್‌ ತಿದ್ದುಪಡಿ ಮಾಡಬಹುದು ಇಲ್ಲಿದೆ ಹಂತ ಹಂತದ ವಿಧಾನ (Aadhar Update)

ಇಂದು ನಮ್ಮ ಭಾರತ ದೇಶದಲ್ಲಿ ಆಧಾರ್ ಕಾರ್ಡ್ ನ ಅಗತ್ಯತೆ ಹಾಗೂ ಪ್ರಾಮುಖ್ಯತೆ ಎಲ್ಲರಿಗೂ ತಿಳಿದಿದೆ ಅದರಂತೆಯೇ ದೇಶದ ಪ್ರತಿಯೊಬ್ಬ ನಾಗರಿಕರು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರದಿಂದ ನೀಡಲಾಗಿರುವ ಆಧಾರ್ ಕಾರ್ಡನ್ನು ಹೊಂದುವುದು ಅವಶ್ಯಕ ಹಾಗೂ ಅಗತ್ಯವಾಗಿದೆ ಹಾಗೆ ಅದರಲ್ಲಿ ನಮೂದಾಗಿರುವ ಮಾಹಿತಿಯೂ ನಮ್ಮ ಗುರುತನ್ನು ಸೂಚಿಸಲಿದ್ದು ಯಾವುದೇ ತಪ್ಪುಗಳು ಇರಬಾರದು ಆಧಾರ್ ಪ್ರಾರಂಭಿಸಿದ ಸಂದರ್ಭದಲ್ಲಿ ಹೆಚ್ಚು ಸಮಸ್ಯೆಗಳು ಕಂಡುಬಂದಿರುವುದರಿಂದ ತಮ್ಮ ಆಧಾರ್ ಕಾರ್ಡಿನಲ್ಲಿರುವ ಹೆಸರು ಹುಟ್ಟಿದ ದಿನಾಂಕ ಲಿಂಗ ಮೊಬೈಲ್ ನಂಬರ್ ವಿಳಾಸ ಇನ್ನು ಮುಂತಾದ ಮಾಹಿತಿಯನ್ನು ಪರಿಶೀಲಿಸಿ ಬದಲಾವಣೆ ಅವಶ್ಯಕತೆ ಇದ್ದಲ್ಲಿ ಹಿಂದೆ ಬದಲಾಯಿಸಬಹುದು ಈ ಆಧಾರ್ ಕಾರ್ಡ್ ಇಂದಿನ ಜೀವನದಲ್ಲಿ ಸರ್ಕಾರಿ ಸೇವೆಗಳನ್ನು ಪಡೆಯಲು ಬ್ಯಾಂಕ್ ಖಾತೆ ತೆರೆಯಲು ರೇಷನ್ ಕಾರ್ಡ್ ಪಡೆಯಲು ಪಾನ್ ಕಾರ್ಡ್ ಪಡೆಯಲು ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಎಲ್ಪಿಜಿ ಸಬ್ಸಿಡಿ ಮೊಬೈಲ್ಸ್ ಇನ್ ತೆಗೆದುಕೊಳ್ಳಲು ಹಾಗೂ ಇನ್ನೂ ಹೆಚ್ಚು ಕೆಲಸಗಳಿಗೆ ಅವಶ್ಯಕ ಇರುವುದರಿಂದ ಆಧಾರ್ ಕಾರ್ಡ್ನ ಮಾಹಿತಿಯನ್ನು Aadhar Update ಮಾಡುವ ಮೂಲಕ ಸರಿಯಾಗಿ ಇಟ್ಟುಕೊಳ್ಳುವುದು ಉತ್ತಮವಾಗಿದೆ ಇಂದಿನ ಸಂದರ್ಭಗಳಲ್ಲಿ ಪ್ರತಿಯೊಂದು ಕೆಲಸವು ಆಧಾರ್‌ ನ ಮೂಲಕ ನಡೆಯುತ್ತಿರುವುದರಿಂದ ಸರಿಯಾದ ಮಾಹಿತಿಯನ್ನು ಕಾಪಾಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ

ಇಂದಿನ ಸಂದರ್ಭದಲ್ಲಿ ಪ್ರತಿಯೊಂದು ಸೇವೆಯನ್ನು ಪಡೆಯಲು ವೈಯಕ್ತಿಕ ಮಾಹಿತಿಯು ಅಗತ್ಯವಾದಾಗ ಆಧಾರ್ ಕಡ್ಡಾಯವಾಗಿದೆ ಅದರಂತೆಯೇ Aadhar Update ಮನೆ ಬದಲಾಯಿಸಿದ ನಂತರ ವಿಳಾಸ ಬದಲಾವಣೆ ಹುಟ್ಟದ ದಿನಾಂಕ ತಪ್ಪಿದಲ್ಲಿ ಹೆಸರು ತಪ್ಪಿದ್ದಲ್ಲಿ ಅಥವಾ ಭಾವಚಿತ್ರವನ್ನು ಅಪ್ಡೇಟ್ ಮಾಡಬೇಕಾದಲ್ಲಿ ಅಥವಾ ಬೆರಳಚ್ಚು ಅಥವಾ ಐರಿಸ್ ಕ್ರಮಗಳನ್ನು ಅಪ್ಡೇಟ್ ಮಾಡುವುದರಲ್ಲಿ ಮದುವೆಯಾದಾಗ ವಿಳಾಸ ಬದಲಾವಣೆ ಉದ್ಯೋಗದಲ್ಲಿ ಕಾರ್ಮಿಕ ನಿಧಿ ಇನ್ನು ಮುಂತಾದ ಹಲವಾರು ಕಾರಣಗಳಿಂದ ಆಧಾರ್ ಮಾಹಿತಿಯನ್ನು ತಿದ್ದುಪಡಿ ಮಾಡುವ ಅವಶ್ಯಕತೆ ಉಂಟಾಗುತ್ತದೆ ಆದುದರಿಂದ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ಡಿಜಿಟಲ್ ಸೇವೆಗಳ ಮೂಲಕ ಈ ಮಾಹಿತಿಯನ್ನು ಮೊಬೈಲ್ ನಲ್ಲಿ ಬದಲಾವಣೆಗೊಳಿಸಲು ಅವಕಾಶ ಮಾಡಿಕೊಟ್ಟಿದೆ ಅದರಂತೆ ಆಧಾರ್ ವಿಳಾಸ ಮತ್ತು ಮೊಬೈಲ್ ನಂಬರ್ ಅನ್ನು ಅಪ್ಡೇಟ್ ಮಾಡಲು ಸರಳ ಹಾಗೂ ಸುಗಮ ಪ್ರಕ್ರಿಯೆಯನ್ನು ರೂಪಿಸಿದೆ

Aadhar Update ಆಧಾರ್ ಕಾರ್ಡಿನಲ್ಲಿ ಯಾವ ಯಾವ ಮಾಹಿತಿಯನ್ನು ತಿದ್ದುಪಡಿಗೆ ಒಳಪಡಿಸಬಹುದು

  • ಹೆಸರು
  • ಮೊಬೈಲ್ ಸಂಖ್ಯೆ
  • ಇ-ಮೇಲ್ ಐಡಿ
  • ವಿಳಾಸ
  • ಜನ್ಮ ದಿನಾಂಕ
  • ಲಿಂಗ
  • ಫೋಟೋ
  • ಬೆರಳಚ್ಚು ಮತ್ತು ಐರಿಸ್ ಮಾಹಿತಿಗಳು

ಈ Aadhar Update ಎಲ್ಲ ಮಾಹಿತಿಗಳು ಪ್ರತಿಯೊಬ್ಬರ ಆಧಾರ್ ಕಾರ್ಡ್ ಅಲ್ಲೂ ಇದ್ದು ಈ ಮಾಹಿತಿಯನ್ನು ವೈಯಕ್ತಿಕ ವಿವರಗಳಿಗೆ ಅನುಗುಣವಾಗಿ ಸರಿಯಾಗಿ ಹೊಂದಬೇಕಾಗಿರುತ್ತದೆ ಬದಲಾವಣೆಗಳಿದ್ದಲ್ಲಿ ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿವರವನ್ನು ಅಪ್ಡೇಟ್ ಮಾಡಿಸಬಹುದು

ಆನ್ಲೈನ್ ಮೂಲಕ ವಿಳಾಸ ಬದಲಾವಣೆ ಸಾಧ್ಯವಿದೆಯೇ Aadhar Update ?

ಹೌದು ಆನ್ಲೈನ್ ಮೂಲಕ ಅಗತ್ಯ ಪುರಾವೆಗಳನ್ನು ಒದಗಿಸಿ ಆನ್ಲೈನ್ ನಲ್ಲಿಯೇ ವಿಳಾಸವನ್ನು ಬದಲಾವಣೆಗೊಳಪಡಿಸಬಹುದು ಹಾಗೂ ಅಪ್ಡೇಟ್ ಮಾಡಬಹುದು ಈಗ ಆಧಾರ್ ಸೇವಾ ಕೇಂದ್ರಕ್ಕೆ ಹೋಗದೆ ಮೊಬೈಲ್ ಅಥವಾ ಕಂಪ್ಯೂಟರ್ ಅನ್ನು ಬಳಸಿ ಆಧಾರ್ ವಿಳಾಸವನ್ನು ಆನ್ಲೈನಲ್ಲಿ ಬದಲಾಯಿಸುವ ಅವಕಾಶವನ್ನು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ರಚಿಸಿದೆ ವಿಳಾಸವನ್ನು ಬದಲಾಯಿಸಲು ಬೇಕಾದ ಅಗತ್ಯ ದಾಖಲಾತಿಗಳು ಈ ಕೆಳಕಂಡಂತಿವೆ

ಈ ಕೆಳಕಂಡ ದಾಖಲೆಗಳಲ್ಲಿ ಯಾವುದಾದರು ಒಂದು ದಾಖಲೆ Aadhar Update ಮಾಡಲು ಕಡ್ಡಾಯವಾಗಿ ಬೇಕಾಗುತ್ತದೆ

  • ವಿದ್ಯುತ್ ಬಿಲ್‌
  • ಬ್ಯಾಂಕ್ ಪಾಸ್ ಬುಕ್ (ಭಾವಚಿತ್ರ ಹೊಂದಿರಬೇಕು)
  • ರೆಂಟ್ ಅಗ್ರಿಮೆಂಟ್ (ನೋಟರಿಯ ಆಗಿರಬೇಕು)
  • ಗ್ಯಾಸ್ ಬಿಲ್ ಗ್ಯಾಸ್ ಕನೆಕ್ಷನ್ (ಅಧಿಕೃತ ವಿಳಾಸ ಇದಾಗಿರಬೇಕು)
  • ಪಾಸ್ಪೋರ್ಟ್ (ಚಾಲ್ತಿಯಲ್ಲಿರಬೇಕು)
  • ವೋಟರ್ ಐಡಿ (ಚಾಲ್ತಿಯಲ್ಲಿರಬೇಕು)
  • ಡೊಮಿಸೈಲ್ ಪ್ರಮಾಣ ಪತ್ರ ಅಂದರೆ (ವಾಸಸ್ಥಳ ಪ್ರಮಾಣ ಪತ್ರ ಪಂಚಾಯತಿ ಅಥವಾ ತಾಸಿಲ್ದಾರ್ ಇಂದ ಪಡೆದ ವಾಸ ಸ್ಥಳ ಪ್ರಮಾಣ ಪತ್ರ ಇರಬೇಕು)

ಆನ್ಲೈನ್ ಮೂಲಕ  Aadhar Update ವಿಳಾಸ ತಿದ್ದುಪಡಿ ಮಾಡುವ ಹಂತಗಳು ಯಾವುವು

ನೀವು ಆನ್ಲೈನ್ ಮೂಲಕ  Aadhar Update ವಿಳಾಸವನ್ನು ತಿದ್ದುಪಡಿ ಮಾಡಬೇಕಾದರೆ ಕಡ್ಡಾಯವಾಗಿ ಮೊದಲು ನಿಮ್ಮ ಆಧಾರ್ ಕಾರ್ಡಿಗೆ ಫೋನ್ ನಂಬರ್ ಲಿಂಕ್ ಆಗಬೇಕಾಗಿರುತ್ತದೆ

ಮೊದಲನೇ ಹಂತ : ವಿಳಾಸ ಬದಲಾವಣೆ ಮಾಡಲು ಬಯಸುವವರು ಯುಐಡಿಐ ನ ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಬೇಕು

ಎರಡನೇ ಹಂತ : ಅಲ್ಲಿ ಕೇಳಲಾಗುವ 12 ಸಂಖೆಯ ಆಧಾರ್ ನಂಬರನ್ನು ನಮೂದಿಸಿ ಕ್ಯಾಪ್ಚಾವನ್ನು ನಮೂದಿಸಿ ವೇರಿಫೈ ಮಾಡಬೇಕು ನಂತರ ನೊಂದಾಯಿತ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ ಓಟಿಪಿಯನ್ನು ನಿಗದಿತ ಜಾಗದಲ್ಲಿ ನಮೂದಿಸಿ ಲಾಗಿನ್ ಆಗಬೇಕು

ಮೂರನೇ ಹಂತ : ಲಾಗಿನ್ ಆದ ನಂತರ ಆಧಾರ್ ಡೌನ್ಲೋಡ್ ಆಧಾರ್ ಅಪ್ಡೇಟ್ pvc ಕಾರ್ಡ್ ಡೌನ್ಲೋಡ್ ಮುಂತಾದ ಆಯ್ಕೆಗಳು ಬರುತ್ತವೆ ಅಲ್ಲಿ ನೀವು ಅಪ್ಡೇಟ್ ಆಧಾರ್ ಆನ್ಲೈನ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ

ನಾಲ್ಕನೇ ಹಂತ : ಅಲ್ಲಿ ಕಾಣಿಸುವ ಹೆಸರು ಜನ್ಮ ದಿನಾಂಕ ಲಿಂಗ ಹಾಗೂ ವಿಳಾಸ ಆಯ್ಕೆಗಳು ಕಂಡು ಬಂದು ನೀವು ಅಡ್ರೆಸ್ ಅಪಡೇಟ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು

ಐದನೇ ಹಂತ : ನಂತರ ವಿಳಾಸವನ್ನು ನಮೂದಿಸಲು ನಿಗದಿತ ಸ್ಥಳದಲ್ಲಿ ಹೇಳಲಾಗುವುದು ನೀವು ಯಾವ ಸ್ಥಳಕ್ಕೆ ಬದಲಾವಣೆ ಮಾಡುತ್ತಿರೋ ಆ ವಿಳಾಸವನ್ನು ಇಂಗ್ಲಿಷ್ ಹಾಗೂ ಕನ್ನಡ ಭಾಷೆಯಲ್ಲಿ ನಮೂದಿಸಿ
ಸೂಚನೆ ಇಂಗ್ಲಿಷ್ ಭಾಷೆಯಲ್ಲಿ ನಮೂದು ಮಾಡುವಾಗ ಎಚ್ಚರದಿಂದಿರಿ ಏಕೆಂದರೆ ಇಂಗ್ಲೀಷ್ ಭಾಷೆಯಲ್ಲಿ ನಮೂದು ಮಾಡಿದ ನಂತರ ಸ್ವಯಂ ಚಾಲಿತವಾಗಿ ಕನ್ನಡ ಭಾಷೆಗೆ ಭಾಷಾಂತರ ಆಗುವುದರಿಂದ ಹಲವು ವ್ಯಾಕರಣ ಹಾಗೂ ಒತ್ತಕ್ಷರದ ಸಮಸ್ಯೆಗಳು ಬರಬಹುದು ಎಚ್ಚರಿಕೆಯಿಂದ ಪೂರ್ಣ ವಿಳಾಸವನ್ನು ಕನ್ನಡದಲ್ಲಿ ನೀವೇ ಟೈಪ್ ಮಾಡಿ

ಆರನೇ ಹಂತ : ತಾವು ಬದಲಾವಣೆ ಮಾಡಬೇಕೆಂದಿರುವ ವಿಳಾಸದ ಬಗ್ಗೆ ಹೊಂದಿರುವ ವಿಳಾಸದ ಪುರಾವೆ ಅಂದರೆ ಮೇಲಿನೀಡಿರುವ ಯಾವುದಾದರೂ ಒಂದು ದಾಖಲೆಯನ್ನು ಸ್ಕ್ಯಾನ್ ಮಾಡಿ ನಿಗದಿತ ಗಾತ್ರದಲ್ಲಿ ಪಿಡಿಎಫ್ ಫೈಲ್ ಅನ್ನು ರಚಿಸಿ ಇಲ್ಲಿ ಅಪ್ಲೋಡ್ ಮಾಡಬೇಕಾಗುತ್ತದೆ ಅಪ್ಲೋಡ್ ಮಾಡಿದ ನಂತರ ಒಮ್ಮೆ ರಿವ್ಯೂ ಮೂಲಕ ಪರಿಶೀಲಿಸಿ

ಏಳನೇ ಹಂತ : ಎಲ್ಲ ಮಾಹಿತಿಯನ್ನು ಪರಿಶೀಲಿಸಿ ಅಪ್ಲೋಡ್ ಮಾಡಲಾಗಿರುವ ಪಿಡಿಎಫ್ ಅನ್ನು ಒಂದಲ್ಲ ಎರಡು ಬಾರಿ ಪೊಲೀಸ್ ನಂತರ ರೂ.50 ಗಳ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಈ ಶುಲ್ಕವನ್ನು ಯುಪಿಐ ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಸೇವೆಗಳನ್ನು ಉಪಯೋಗಿಸಿ ಪಾವತಿಸಬಹುದಾಗಿರುತ್ತದೆ

ಎಂಟನೇ ಹಂತ : ಪಾವತಿ ಯಶಸ್ವಿಯಾದ ನಂತರ ನಿಮಗೆ ಎಸ್ ಆರ್ ಎನ್ ಸಂಖ್ಯೆಯು ಸ್ವೀಕೃತಗೊಳ್ಳುತ್ತದೆ ಈ ಸಂಖ್ಯೆಯನ್ನು ಹೊಂದುವುದರ ಮೂಲಕ ಅರ್ಜಿಯ ಸ್ಥಿತಿ ಹಾಗೂ ಆಧಾರ್ ಕಾರ್ಡನ್ನು ಡೌನ್ಲೋಡ್ ಮಾಡಿಕೊಳ್ಳಲು ಬಳಸಬಹುದು

ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ಹೊರಡಿಸಿರುವ ಎಂ ಆಧಾರ್ ಆಪ್ ನ ವಿಶೇಷತೆಗಳು ಏನು

ಯು ಐ ಡಿ ಎ ಐ ಸಂಸ್ಥೆಯು ಹೊಸ ಮೊಬೈಲ್ ಆಧಾರ್ ಆಪ್ ಅನ್ನು ಬಿಡುಗಡೆ ಮಾಡಿದ್ದು ಈ ಆಪ್ ನ ಮೂಲಕ ಹಲವು ಸೌಲಭ್ಯಗಳನ್ನು ಪಡೆಯಬಹುದು ಆಧಾರ್ ಡೌನ್ಲೋಡ್ ಅರ್ಜಿಯ ಸ್ಥಿತಿ ಹಾಗೂ ಇನ್ನೂ ಹಲವು ಸೌಲಭ್ಯಗಳನ್ನು ಪಡೆಯಬಹುದು ಈ ಆತ್ಮ ವಿಶೇಷತೆಗಳೇನೆಂದರೆ Aadhar Update ಮಾಹಿತಿಯನ್ನು ನಾವಿಲ್ಲಿ ನೋಡಬಹುದು

  • ಡಿಜಿಟಲ್ ರೂಪದ ಆಧಾರ್ ಕಾರ್ಡನ್ನು ಇಲ್ಲಿ ಬಳಸಬಹುದು
  • ಕ್ಯೂ ಆರ್ ಕೋಡ್ ಆಧಾರಿತ ವೆರಿಫಿಕೇಶನ್ ಅನ್ನು ಇಲ್ಲಿ ಮಾಡಬಹುದು
  • ಆಧಾರ್ ಮಾಹಿತಿಯನ್ನು ಸುರಕ್ಷಿತವಾಗಿ ಹಂಚಿಕೊಳ್ಳಬಹುದು
  • ಆಧಾರ್ ಸೇವೆಗಳನ್ನು ಸುಲಭವಾಗಿ ಪಡೆಯಬಹುದು

ತಿದ್ದುಪಡಿ ಶುಲ್ಕದ ವಿವರಗಳು

ಆನ್ಲೈನ್ ಮೂಲಕ ಮಾಡುವ ತಿದ್ದುಪಡಿ :  50/- ರೂಗಳು
ವಿಳಾಸ ಬದಲಾವಣೆ : 50/- ರೂಗಳು
ಮೊಬೈಲ್ ಸಂಖ್ಯೆ ಬದಲಾವಣೆ : 50/- ರೂಗಳು
ಹೆಸರು, ಜನ್ಮ ದಿನಾಂಕ, ಲಿಂಗ ಅಥವಾ ಹೊಸ ಆಧಾರ್ ಪಡೆಯಲು : 100/- ರೂಗಳು

ಭಾರತ ಸರ್ಕಾರವು ಇತ್ತೀಚೆಗೆ ಆಧಾರ್ ಹೊಂದಿರುವವರು ತಮ್ಮ ಮಾಹಿತಿಗಳಿಗೆ ದಾಖಲೆಗಳನ್ನು ಒದಗಿಸಲು ಕೇಳುತ್ತಿದ್ದು ಆದರ್ಗೆ ಲಾಗಿನ್ ಆಗುವ ಮೂಲಕ ಅಲ್ಲಿ ಕೇಳಲಾಗುವ ದಾಖಲಾತಿಗಳನ್ನು ಅಪ್ಲೋಡ್ ಮಾಡಿ ಉಚಿತವಾಗಿ ಮಾಹಿತಿಯನ್ನು ವಾಲಿಡೇಟ್ ಮಾಡಬಹುದಾಗಿರುತ್ತದೆ Aadhar Update ಕೂಡ ಮಾಡಿಸಬಹುದು

ವಿಳಾಸ ಬದಲಾವಣೆ ಮಾಡುವಾಗ ಗಮನಿಸಬೇಕಾದ ವಿಷಯಗಳು

  • ನೀವು ಲಾಗಿನ್ ಆಗುವ ಸಂದರ್ಭದಲ್ಲಿ ಆಧಾರ್ ನಮೂದಿಸಿದಾಗ ನಿಮ್ಮ ಆಧಾರ್ ಸಂಖ್ಯೆಗೆ ಮೊಬೈಲ್ ನಂಬರ್ ಕಡ್ಡಾಯವಾಗಿ ಲಿಂಕ್ ಆಗಿದ್ದು ರಿಚಾರ್ಜ್ ಇದ್ದು ಯಾವುದೇ ತೊಂದರೆಗಳಿಲ್ಲದೆ ಸಕ್ರಿಯವಾಗಿರಬೇಕು
  • ನೀವು ಭರ್ತಿ ಮಾಡಿರುವ ವಿಳಾಸ ಬದಲಾವಣೆ ಅಥವಾ ಒದಗಿಸುವ ದಾಖಲೆಗಳಲ್ಲಿ ನೀವು ಬದಲಾಯಿಸುತ್ತಿರುವ ಪೂರ್ಣ ವಿವರದ ವಿಳಾಸವನ್ನು ನಮೂದಿಸಿರಬೇಕು ಅರ್ಜಿ ಬರ್ತಿಯಲ್ಲಿ ಯಾವ ಮಾಹಿತಿಯನ್ನು ನಮೂದಿಸಿದ್ದೀರೋ ಆನ್ಲೈನ್ ನಿಗದಿತ ಸ್ಥಳದಲ್ಲೂ ಅದೇ ರೀತಿಯ ವಿಳಾಸವನ್ನು ನಮೂದಿಸಬೇಕು
  • ದಾಖಲೆಯನ್ನು ಅಪ್ಲೋಡ್ ಮಾಡುವಾಗ ನಿಖರವಾಗಿ ಹಾಗೂ ಸ್ಪಷ್ಟವಾಗಿ ಅರ್ಥವಾಗುವ ರೀತಿಯಲ್ಲಿ ಮತ್ತು ಗರಿಷ್ಠ ಗಾತ್ರದ ಒಳಗಡೆ ಇರುವ ಹಾಗೆ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು ಮಾಹಿತಿ ಏನಾದರೂ ನಿಖರವಾಗಿ ಇಲ್ಲದಿದ್ದರೆ ರಿಜೆಕ್ಟ್ ಆಗಬಹುದು
  • ತಾವು ಸ್ಕ್ಯಾನ್ ಮಾಡಿದ ದಾಖಲೆಯನ್ನು ಮಾತ್ರ ಸಂಬಂಧಿತ ಅಪ್ಲೋಡ್ ಆಯ್ಕೆಯಲ್ಲಿ ಅಪ್ಲೋಡ್ ಮಾಡಬೇಕಾಗುತ್ತದೆ ಒದಗಿಸುವ ಪುರಾವೆಯನ್ನು ಹೊರತುಪಡಿಸಿ ಬೇರೆ ಯಾವುದೇ ದಾಖಲೆಯನ್ನು ಅಪ್ಲೋಡ್ ಮಾಡಿದರೆ ಅರ್ಜಿ ತಿರಸ್ಕೃತವಾಗಬಹುದು

ಸಲ್ಲಿಸಿರುವ ಅರ್ಜಿಯ ಸ್ಥಿತಿ ಪರಿಶೀಲನೆ ಹೇಗೆ

ತಾವು ಆಧಾರ್ ಪೋರ್ಟಲ್ ಗೆ ಲಾಗಿನ್ ಆಗುವ ಮೂಲಕ ಅಲ್ಲಿ ಚೆಕ್ ಫಾರ್ ಅಪಡೇಟ್ ಸ್ಟೇಟಸ್ ಎಂಬ ಆಯ್ಕೆಯನ್ನು ಆಯ್ದುಕೊಳ್ಳುವುದರ ಮೂಲಕ ನೀವು ಅರ್ಜಿ ಸಲ್ಲಿಸಿದ ನಂತರ ಬರುವ ಎಸ್ ಆರ್ ಎನ್ ನಂಬರ್ ಅನ್ನು ಬಳಸಿ ಅರ್ಜಿ ಸ್ಥಿತಿಯನ್ನು ಪಡೆಯಬಹುದು

ಜನರಿಗೆ ಆಗುವ ಅನುಕೂಲಗಳು

ಈ ಹೊಸ ಡಿಜಿಟಲ್ ವ್ಯವಸ್ಥೆಯಿಂದ ಸೈಬರ್ ಸೆಂಟರ್ಗೆ ಹೋಗುವ ಅಗತ್ಯತೆ ಕಡಿಮೆಯಾಗಿ ಹಾಗೂ ಆಧಾರ್ ಕೇಂದ್ರದ ಮುಂದೆ ನಿಲ್ಲುವ ಸಾಲು ಸಾಲುಗಳನ್ನು ತಪ್ಪಿಸಬಹುದು ಮನೆಯಿಂದಲೇ ಸೇವೆ ಪಡೆಯಬಹುದಾಗಿರುವುದರಿಂದ ಸಮಯ ಹಾಗೂ ಹಣವನ್ನು ಉಳಿಸಬಹುದು

ವಿಳಾಸ ಬದಲಾವಣೆ ಸಮಯದಲ್ಲಿ ಜನರು ಮಾಡುವ ಸಾಮಾನ್ಯ ತಪ್ಪುಗಳು

  • ಸ್ಪಷ್ಟವಾಗಿ ಕಾಣದ ದಾಖಲೆಗಳನ್ನು ಅಪ್ಲೋಡ್ ಮಾಡುವುದು
  • ಬೇರೆ ವ್ಯಕ್ತಿಗಳ ದಾಖಲೆಗಳನ್ನು ತಿದ್ದುಪಡಿ ಮಾಡಿ ಬಳಸುವುದು
  • ವಿಳಾಸದಲ್ಲೇ ಒಂದು ಮಾಹಿತಿ ಇದ್ದು ನಮೂದು ಮಾಡುವಾಗ ಇನ್ನೊಂದು ವಿಳಾಸದ ಮಾಹಿತಿಯನ್ನು ತುಂಬುವುದು
  • ತಪ್ಪು ಭಾಷೆಯಲ್ಲಿ ವಿಳಾಸ ನಮ್ಮದು ಮಾಡುವುದು ಅಥವಾ ಸ್ವಯಂ ಚಾಲಿತ ಅಕ್ಷರ ಜನರೇಟ್ ಆದಾಗ ಹಾಗೆಯೇ ಬಿಡುವುದು

ವಿಳಾಸ ಬದಲಾವಣೆ ಮಾಡುವವರಿಗೆ ಸಲಹೆಗಳು

  • ಯುಐಡಿಎ ನ ಅಧಿಕೃತ ವೆಬ್ಸೈಟ್ ಅನ್ನು ಮಾತ್ರ ಬಳಸಿ ತಿದ್ದುಪಡಿ ಮಾಡಿ
  • ಪೂರ್ಣ ಪ್ರಕ್ರಿಯೆಯಲ್ಲಿ ತಮ್ಮ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿ ನಂಬರನ್ನು ಯಾರೆಂದು ಹಂಚಿಕೊಳ್ಳಬೇಡಿ
  • ಶುಲ್ಕವನ್ನು ಪಾವತಿಸುವ ಸಮಯದಲ್ಲಿ ಬೇರೆ ಕೆಲಸವನ್ನು ಮಾಡದೆ ಶುಲ್ಕ ಯಶಸ್ವಿಯಾಗಿ ಪಾವತಿಯಾಗಿ ಮೆಂಟ್ ಬರುವವರೆಗೂ ಕಾಯಿರಿ
  • ಅರ್ಜಿ ಸಲ್ಲಿಸಿದ ಬಳಿಕ ಬರುವ ಅಕನಾಲೆಡ್ಜ್ಮೆಂಟನ್ನು ಕಡ್ಡಾಯವಾಗಿ ಸೇವ್ ಮಾಡಿಕೊಳ್ಳಿ ಅರ್ಜಿಸಿಟಿಯನ್ನು ತಿಳಿಯಲು ಈ ನಂಬರ್ ಕಡ್ಡಾಯವಾಗಿ ಬೇಕು
  • ದಾಖಲೆಗಳನ್ನು ಅಪ್ಲೋಡ್ ಮಾಡುವಾಗ ಸಾಧ್ಯವಾದಷ್ಟು ಪಿಡಿಎಫ್ ಫೈಲ್ಗಳನ್ನು ಅಪ್ಲೋಡ್ ಮಾಡಿ ಏಕೆಂದರೆ ಪಿ ಡಿ ಎಫ್ ಫೈಲ್ ನ ಭಾವಚಿತ್ರ ಗುಣಮಟ್ಟ ಬದಲಾಗುವುದಿಲ್ಲ

ಈ ಮಾಹಿತಿಗೆ ಸಂಬಂಧಿಸಿದ ಲಿಂಕ್‌ ಗಳು

ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ಜನರಿಗೆ ಡಿಜಿಟಲ್ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಎಂ ಆಧಾರ್ ಆಪ್ ಅನ್ನು ಬಿಡುಗಡೆಗೊಳಿಸಿದ್ದು ಇದರ ಮೂಲಕ ಎಲ್ಲಾ ಸೇವೆಗಳನ್ನು ಮೊಬೈಲ್ ನಲ್ಲಿಯೇ ಪಡೆಯಬಹುದಾಗಿರುತ್ತದೆ ಈ ಪ್ರಕ್ರಿಯೆಯು ಅಂತವಾಗಿ ಜಾರಿಗೆ ಬರುತ್ತಿದ್ದು ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಬದಲಾವಣೆಗಳಿಗೆ ಅವಕಾಶವನ್ನು ಮಾಡಿಕೊಡಲಿದೆ ಆದ್ದರಿಂದ ಜನರು ತಮ್ಮ ಆಧಾರ್ ನಲ್ಲಿ ಯಾವುದೇ ಬದಲಾವಣೆ ಅಥವಾ ತಿದ್ದುಪಡಿಗಳಿದ್ದಲ್ಲಿ ಇಂದೇ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ಸರಿಯಾದ ಮಾಹಿತಿಗೆ ತಿದ್ದುಪಡಿ ಮಾಡಿಕೊಳ್ಳಬಹುದಾಗಿರುತ್ತದೆ

 

Aadhar Update –  FAQ’s

1) ಮೊಬೈಲ್‌ ಮೂಲಕ ತಿದ್ದುಪಡಿ ಮಾಡಬಹುದೇ?
ಹೌದು, ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ UIDAI ಅಧಿಕೃತ ವೆಬ್‌ಸೈಟ್‌ನಲ್ಲಿ ಲಾಗಿನ್ ಮಾಡಿ ವಿಳಾಸ ಸೇರಿದಂತೆ ಕೆಲವು ಮಾಹಿತಿಗಳನ್ನು ಆನ್‌ಲೈನ್‌ನಲ್ಲಿ ತಿದ್ದುಪಡಿ ಮಾಡಬಹುದು.

2) ಆಧಾರ್ ತಿದ್ದುಪಡಿಗೆ ಮೊಬೈಲ್ ನಂಬರ್ ಲಿಂಕ್ ಕಡ್ಡಾಯವೇ ?
ಹೌದು, OTP ಬರಲು ಆಧಾರ್‌ಗೆ ಮೊಬೈಲ್ ನಂಬರ್ ಕಡ್ಡಾಯವಾಗಿ ಲಿಂಕ್ ಆಗಿರಬೇಕಾಗುತ್ತದೆ.

3) ಆಧಾರ್‌ನಲ್ಲಿ ಯಾವ ಯಾವ ಮಾಹಿತಿಯನ್ನು ತಿದ್ದುಪಡಿ ಮಾಡಬಹುದು?
ಹೆಸರು, ವಿಳಾಸ, ಮೊಬೈಲ್ ನಂಬರ್, ಇ-ಮೇಲ್, ಜನ್ಮ ದಿನಾಂಕ, ಲಿಂಗ, ಫೋಟೋ, ಬೆರಳಚ್ಚು ಹಾಗೂ ಐರಿಸ್ ಮಾಹಿತಿಯನ್ನು ಅಪ್ಡೇಟ್ ಮಾಡಬಹುದು.

4) ವಿಳಾಸ ಬದಲಾವಣೆ ಮಾಡಲು ಯಾವ ಯಾವ ದಾಖಲೆ ಬೇಕು?
ವಿದ್ಯುತ್ ಬಿಲ್, ಬ್ಯಾಂಕ್ ಪಾಸ್‌ಬುಕ್, ಗ್ಯಾಸ್ ಬಿಲ್, ವೋಟರ್ ಐಡಿ, ಪಾಸ್‌ಪೋರ್ಟ್ ಅಥವಾ ವಾಸಸ್ಥಳ ಪ್ರಮಾಣ ಪತ್ರಗಳಲ್ಲಿ ಯಾವುದಾದರೂ ಒಂದು ದಾಖಲೆ  ಇರಬೇಕು.

5) ಆಧಾರ್ ತಿದ್ದುಪಡಿಗೆ ಶುಲ್ಕ ಎಷ್ಟಿದೆ?
ವಿಳಾಸ ಅಥವಾ ಮೊಬೈಲ್ ನಂಬರ್ ಬದಲಾವಣೆಗೆ ಸಾಮಾನ್ಯವಾಗಿ ₹50 ಶುಲ್ಕ ಇರುತ್ತದೆ. ಹೆಸರು, ಜನ್ಮ ದಿನಾಂಕ ಮುಂತಾದ ಕೆಲವು ತಿದ್ದುಪಡಿಗಳಿಗೆ ₹100 ವರೆಗೆ ಶುಲ್ಕ ಇರಬಹುದಾಗಿದೆ.

Read More : 

New Education Policy : Big Update 2026 : ಹೊಸ ಶಿಕ್ಷಣ ನೀತಿ ಜಾರಿ, ನೀತಿಯ ರಚನೆ, ಬದಲಾವಣೆ, ಮಹತ್ವ, ಲಾಭ ಹಾಗೂ ಅನುಕೂಲಗಳ ಬಗ್ಗೆ ಮಾಹಿತಿ

 

 

Leave a Comment