ಪ್ರೋಜೆಕ್ಟ್ ಮೇನೇಜರ್ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ ( CDAC Recruitment )
ಸ್ನೇಹಿತರೆ, ನೀವು ಸರ್ಕಾರಿ ಉದ್ಯೋಗದ ಹುಡುಕಾಟದಲ್ಲಿ ಇದ್ದರೆ ನಿಮಗೊಂದು ಸುವರ್ಣ ಅವಕಾಶವಾದಿ ಬಂದಿದೆ. ನೀವು ಇಂಜಿನಿಯರಿಂಗ್ ಪದವೀಧರರೇ, ಇಂಜಿನಿಯರಿಂಗ್ ಮುಗಿಸಿ ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗ ಹುಡುಕುತ್ತಿದ್ದರೆ ಸಿ ಡ್ಯಾಕ್ (ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ಡ್ ಕಂಪ್ಯೂಟಿಂಗ್) ಸಂಸ್ಥೆಯು ವಿವಿಧ ಹುದ್ದೆಗಳ ಬರ್ತಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ ಈ ಅಧಿಸೂಚನೆಯ ಮೂಲಕ ಪ್ರಾಜೆಕ್ಟ್ ಮ್ಯಾನೇಜರ್ ಹಾಗೂ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಇಂದೇ ಅರ್ಜಿ ಸಲ್ಲಿಸಬಹುದಾಗಿರುತ್ತದೆ ವಿಶೇಷವೇನೆಂದರೆ ಬೆಂಗಳೂರಿನಲ್ಲೂ ಕೆಲಸ ಮಾಡುವ ಅವಕಾಶ ಇರುವುದರಿಂದ ಹಿಂದೆ ಅರ್ಜಿ ಸಲ್ಲಿಸಿ
ನೇಮಕ ಮಾಡಿಕೊಳ್ಳುತ್ತಿರುವ ಸಂಸ್ಥೆ ಹೆಸರು : ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಅಡ್ವಾನ್ಸ್ ಕಂಪನಿ ಸಂಸ್ಥೆ ( C-DAC )
ಒಟ್ಟು ಹುದ್ದೆಗಳು : 60 ಹುದ್ದೆಗಳು
ಹುದ್ದೆಗಳ ಹೆಸರು : ಪ್ರಾಜೆಕ್ಟ್ ಮ್ಯಾನೇಜರ್ ಹಾಗೂ ಇಂಜಿನಿಯರ್
ಕೆಲಸದ ಸ್ಥಳ : ಬೆಂಗಳೂರು, ಕರ್ನಾಟಕ
CDAC Recruitment ಗೆ ಹೊಂದಿರಬೇಕಾದ ಶೈಕ್ಷಣಿಕ ವಿದ್ಯಾರ್ಹತೆ ವಿವರ
ಈ ನೇಮಕಾತಿಯ ಪ್ರಾಜೆಕ್ಟ್ ಮ್ಯಾನೇಜರ್ ಹಾಗೂ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬ್ಯಾಚುಲರ್ ಆಫ್ ಇಂಜಿನಿಯರಿಂಗ್ (B.E) ಬ್ಯಾಚುಲರ್ ಆಫ್ ಟೆಕ್ನಾಲಜಿ (B.Tech) ಅಥವಾ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿ ಉತ್ತೀರ್ಣರಾಗಿರಬೇಕು
CDAC Recruitment ನ ವೇತನದ ವಿವರ
CDAC Recruitment ಮೂಲಕ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಒಂದು ತಿಂಗಳಿಗೆ 25,000/- ಗಳಿಂದ ರೂ.1,10,000/- ರೂಗಳವರೆಗೆ ವೇತನವನ್ನು ನೀಡಲಾಗುತ್ತದೆ ಇದು ಕೇಂದ್ರ ಸರ್ಕಾರ ಸಂಸ್ಥೆ ಆಗಿರುವುದರಿಂದ ಉತ್ತಮ ರೀತಿಯ ಭತ್ಯೆ ಹಾಗೂ ಸೌಲಭ್ಯಗಳು ಸಿಗುತ್ತವೆ
ವಯೋಮಿತಿ ವಿವರ
ಈ CDAC Recruitment ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಗರಿಷ್ಠ ವಯಸ್ಸು 45 ವರ್ಷ ಮೀರಿರಬಾರದು
ಆನ್ಲೈನ್ ಅರ್ಜಿ ಶುಲ್ಕ
ಈ CDAC Recruitment ಗೆ ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವ ಅಗತ್ಯ ಇರುವುದಿಲ್ಲ ಆದುದರಿಂದ ಇಂದೇ ಅರ್ಜಿ ಸಲ್ಲಿಸಿ
CDAC Recruitment ನ ಆಯ್ಕೆ ಪ್ರಕ್ರಿಯೆ
ವಾಕ್-ಇನ್ ಸಂದರ್ಶನ / ಆನ್ಲೈನ್ ಸಂದರ್ಶನ
ಈ CDAC Recruitment ನ ಸಂದರ್ಶನದಲ್ಲಿ ಹುದ್ದೆಗೆ ಬೇಕಾಗುವ ತಾಂತ್ರಿಕ ಹಾಗೂ ಪ್ರೋಗ್ರಾಮಿಂಗ್ ಸಂಬಂಧಿಸಿದ ಪ್ರಶ್ನೆಗಳು, ಡೇಟಾ ರಚನೆ ಹಾಗೂ ಆಪರೇಟಿಂಗ್ ಬಗ್ಗೆ, ಕಾರ್ಯ ಯೋಜನೆ ಹಾಗೂ ಡೊಮೈನ್ ಗಳಿಗೆ ಹಾಗೂ ಮಾನವ ಸಂಪನ್ಮೂಲ ನಿರ್ವಹಣೆಯ ಬಗ್ಗೆ ಪ್ರಶ್ನೆಗಳನ್ನು ಕೇಳಬಹುದು.
ಉತ್ತಮ ರೀತಿಯಲ್ಲಿ ಹೇಗೆ ತಯಾರಿ ನೆಡೆಸಬಹುದು ಹಾಗೂ ಉತ್ತಮ ಅಭ್ಯಾಸಗಳ ಬಗ್ಗೆ ಕೆಲವು ಸಲಹೆಗಳನ್ನು ಕೆಳಗೆ ನೀಡಿದ್ದೇವೆ.
CDAC Recruitment ಗೆ ಅರ್ಜಿ ಸಲ್ಲಿಸುವ ವಿಧಾನ
- ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲು C-DAC ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು
- ನೇಮಕಾತಿ ಸೂಚನೆಯನ್ನು ಪೂರ್ಣವಾಗಿ ಓದಿಕೊಂಡು ಅರ್ಹತಮಾನದಂಡಗಳನ್ನು ಪೂರೈಸುವವರಾಗಿದ್ದರೆ ಈ ನೇಮಕಾತಿಗೆ ಅರ್ಜಿ ಸಲ್ಲಿಸಿ
- ಅಪ್ಲೈ ಆನ್ಲೈನ್ ಎಂಬಲ್ಲಿ ಕ್ಲಿಕ್ ಮಾಡಿ ನಂತರ ಇಂಜಿನಿಯರ್ ಹಾಗೂ ಮ್ಯಾನೇಜರ್ ಹುದ್ದೆಗಳಿಗೆ ನೇಮಕಾತಿ ಎಂಬಲ್ಲಿ ಕ್ಲಿಕ್ ಮಾಡಿ
- ಆನ್ಲೈನ್ ಅರ್ಜಿ ತೆರೆದ ನಂತರ ನಿಮ್ಮ ವೈಯಕ್ತಿಕ ಮಾಹಿತಿ, ಶೈಕ್ಷಣಿಕ ಮಾಹಿತಿ, ಅನುಭವದ ಬಗೆಗಿನ ಮಾಹಿತಿ ಹಾಗೂ ಇನ್ನಿತರ ಕೇಳಲಾಗುವ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿಯನ್ನು ನಮೂದಿಸಿ
- ಅರ್ಜಿಯಲ್ಲಿ ಕೇಳಲಾಗುವ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ಸಬ್ಮಿಟ್ ಮಾಡಿ
- ಅರ್ಜಿ ಶುಲ್ಕ ಇರದೇ ಇರುವುದರಿಂದ ಯಾವುದೇ ಪಾವತಿಯನ್ನು ಮಾಡುವ ಅಗತ್ಯತೆ ಇರುವುದಿಲ್ಲ ಉಚಿತವಾಗಿ ಅರ್ಜಿಯನ್ನು ಸಲ್ಲಿಸಿ
- ಎಲ್ಲ ಮಾಹಿತಿಯನ್ನು ಭರ್ತಿ ಮಾಡಿದ ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಿ
ಕೊನೆ ಸಂದರ್ಭದಲ್ಲಿ ಸರ್ವರ್ ಸಮಸ್ಯೆ ಎದುರಾಗಬಹುದು, ಆದುದರಿಂದ ಇಂದೇ ಅರ್ಜಿ ಸಲ್ಲಿಸಿ
ಪ್ರಮುಖ ದಿನಾಂಕಗಳು
ಆನ್ಲೈನ್ ಮೂಲಕ CDAC Recruitment ಗೆ ಅರ್ಜಿ ಭರ್ತಿ ಮಾಡಲು ಆರಂಭದ ದಿನಾಂಕ : 13-05-2026 ಆಗಿದೆ
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : 26-05-2026 ಆಗಿರುತ್ತದೆ
ಪ್ರಮುಖ ಲಿಂಕ್ ಗಳು
ಅಧಿಕೃತ ವೆಬ್ಸೈಟ್ : C-DAC
ಅಧಿಕೃತ ಅಧಿಸೂಚನೆಯನ್ನು ಓದಲು ಪಿಡಿಎಫ್ : CDAC Recruitment Notification
ಆನ್ ಲೈನ್ ಮೂಲಕ ಸಲ್ಲಿಸಲು : ಅರ್ಜಿ ಸಲ್ಲಿಕೆ
ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು : ಇಲ್ಲಿ ಕ್ಲಿಕ್ ಮಾಡಿ
ಪರೀಕ್ಷೆಯನ್ನು ಎದುರಿಸಲು ಕೆಲವು ಸಲಹೆಗಳು
ಪ್ರಾಜೆಕ್ಟ್ ಮ್ಯಾನೇಜರ್ ಹಾಗೂ ಇಂಜಿನಿಯರ್ ಹುದ್ದೆಗಳ ಪರೀಕ್ಷೆಗೆ ಹೆಚ್ಚು ತಾಂತ್ರಿಕ ಜ್ಞಾನವನ್ನು ಮತ್ತು ನಿರ್ವಹಣಾ ಕೌಶಲ್ಯವನ್ನು ಹೊಂದಿರಬೇಕು ಆದುದರಿಂದ ಈ ಪರೀಕ್ಷೆಗೆ ಸಂಬಂಧಿಸಿದ ಮಾರ್ಟೆಸ್ಟ್ ಗಳನ್ನು ಹೆಚ್ಚಾಗಿ ಅಭ್ಯಾಸ ಮಾಡಬೇಕು ಈ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಲು ಕೆಲವು ಸಲಹೆಗಳು ಈ ಕೆಳಕಂಡಂತಿವೆ. ಈ ಸಲಹೆಗಳನ್ನು ಪಾಲಿಸುವುದರ ಮೂಲಕ ನೀವು ಪರೀಕ್ಷೆಗೆ ಉತ್ತಮ ರೀತಿಯಲ್ಲಿ ತಯಾರಿಯನ್ನು ನೆಡೆಸಬಹುದು (Suggestions For CDAC Recruitment Exam Preperation)
- ಮೇನೇಜರ್ ಹುದ್ದೆಯ ಪಾತ್ರಗಳಿಗೆ ನಿಮಗೆ ಹೆಚ್ಚಿನ ಆಸಕ್ತಿ ಇದ್ದಲ್ಲಿ ಅಪಾಯದ ಮೌಲ್ಯಮಾಪನ ಆಯವ್ಯಯ ಅಂದರೆ ಬಜೆಟ್ ಸಂಪನ್ಮೂಲಗಳ ಪರಿಣಾಮಕಾರಿ ಹಂಚಿಕೆ ಹಾಗೂ ಸಂವಹನದ ಕೌಶಲ್ಯಗಳ ಮೇಲೆ ಹೆಚ್ಚು ಗಮನ ನೀಡಿ ಹೆಚ್ಚು ಪರಿಣಾಮಕಾರಿ ಅಭಿವೃದ್ಧಿಯ ಕುರಿತು ನಿಮ್ಮ ತಯಾರಿ ಇರಲಿ
- ಇಂಜಿನಿಯರ್ ಹುದ್ದೆಯ ಪಾತ್ರಗಳಿಗೆ ಆಸಕ್ತಿ ಹೊಂದಿದ್ದರೆ ಕಂಪ್ಯೂಟರ್ ಬಗ್ಗೆ ವಿಜ್ಞಾನ ಮತ್ತು ಎಲೆಕ್ಟ್ರಾನಿಕ್ ವಿಭಾಗದಲ್ಲಿ ಹೆಚ್ಚು ತಯಾರಿ ನಡೆಸಿ ಅಂದರೆ ಆಪರೇಟಿಂಗ್ ಸಿಸ್ಟಮ್ ಕಂಪ್ಯೂಟರ್ ನೆಟ್ವರ್ಕ್ ಆಲ್ಗೊರಿತಂ ಡೇಟಾ ಸ್ಟ್ರಕ್ಚರ್ ಹಾಗೂ ಮೈಕ್ರೋ ಪ್ರೊಸೆಸರ್ ಬಗೆಗಿನ ವಿಷಯಗಳ ಮೇಲೆ ಹೆಚ್ಚು ಗಮನ ನೀಡಿ
- ಸರಿಯಾದ ವಿಷಯವನ್ನು ಅಭ್ಯಾಸ ಮಾಡಿ : ಪ್ರಸ್ತುತದಲ್ಲಿ ಯಾವ ವಿಭಾಗದಲ್ಲಿ ಹೆಚ್ಚು ಉಪಯೋಗವಿದೆ ಮತ್ತು ಪ್ರಸ್ತುತದಲ್ಲಿ ಪರೀಕ್ಷಾ ಅಭ್ಯಾಸಗಳಿಗೆ ಅನುಗುಣವಾಗಿ ತಯಾರಿ ಸಾಮಗ್ರಿಯನ್ನು ಬಳಸಿಕೊಳ್ಳಿ ಪ್ರಿಪರೇಷನ್ ಗೈಡ್ ಇಲ್ಲಿ ಚೆಕ್ ಮಾಡಿ
- ಅಭ್ಯಾಸ ಪತ್ರಿಕೆಗಳು ಹಾಗೂ ಮಾಕ್ ಟೆಸ್ಟ್ ಗಳನ್ನ ಅಭ್ಯಾಸ ಮಾಡುವುದು : ಇಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು ಹಾಗೂ ಲಭ್ಯವಿರುವ ಅಭ್ಯಾಸ ಪತ್ರಿಕೆಗಳನ್ನು ಹೆಚ್ಚಾಗಿ ಅಭ್ಯಾಸ ಮಾಡಿ (ಮಾಕ್ ಟೆಸ್ಟ್ )
- ಸಂದರ್ಶನ : ಸಂದರ್ಶನದಲ್ಲಿ ಯೋಜನೆಯ ಬಗ್ಗೆ ವಿವರಿಸಲು ಹೇಳಬಹುದಾದರಿಂದ ತಂತ್ರಜ್ಞಾನದ ಬಳಕೆ ಹೃದಯ ಪಾತ್ರ ಬರಬಹುದಾದ ಸಮಸ್ಯೆಗಳು ಹಾಗೂ ಎದುರಿಸಬಹುದಾದ ಸಮಸ್ಯೆಗಳ ಬಗ್ಗೆ ಮತ್ತು ಅವುಗಳನ್ನು ಹೇಗೆ ಜಯಿಸುತ್ತೀರಿ ಎಂಬುದನ್ನು ಸ್ಪಷ್ಟವಾಗಿ ನಿಖರವಾಗಿ ಅಭ್ಯಸಿಸಿ
- ಕೌಶಲ್ಯ ಮೌಲ್ಯಮಾಪನ : ತಾವು ಅಭ್ಯಾಸ ಮಾಡಿರುವ ಪರೀಕ್ಷೆ ಹಾಗೂ ಟೆಸ್ಟ್ ಗಳನ್ನು ಈ ಕೆಳಗಿನ ಎರಡು ಪೋರ್ಟಲ್ ಗಳನ್ನು ಬಳಸಿಕೊಂಡು ಮೌಲ್ಯಮಾಪನ ಮಾಡಿಕೊಳ್ಳಿ
- ಸಮಯದ ನಿರ್ವಹಣೆ : ಈ ಹುದ್ದೆಗಳಿಗೆ ಹೆಚ್ಚು ತಂತ್ರಜ್ಞಾನ ಹಾಗೂ ಕೋಡಿಂಗ್ ಅವಶ್ಯಕತೆ ಇರುವುದರಿಂದ ತಾವು ಸಮಯವನ್ನು ಹೆಚ್ಚು ವ್ಯರ್ಥ ಮಾಡದೆ ಅಧ್ಯಯನ ಮಾಡಬೇಕಾಗುತ್ತದೆ
- ನಿಮ್ಮ ಸಿದ್ಧತೆ ಹೀಗಿರಲಿ : ನೀವು ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿಯಾಗಿದ್ದರೆ ಮೂಲಭೂತ ಕೋಡಿಂಗ್ ಮತ್ತು ಐಟಿ ರಚನೆಗಳ ಮೇಲೆ ಹೆಚ್ಚು ಗಮನ ಹರಿಸಿ ಹಿಂದಿನ ಸಾಲಿನಲ್ಲಿ ಪರೀಕ್ಷೆ ಬರೆದವರ ಸಲಹೆಗಾಗಿ ಈ ಸಲಹೆಗಳನ್ನು ಚೆಕ್ ಮಾಡಿ
CDAC Recruitment 2026 – Top 5 FAQs
1. ಈ ನೇಮಕಾತಿಗೆ ಯಾರು ಅರ್ಜಿ ಸಲ್ಲಿಸಬಹುದು?
B.E, B.Tech ಅಥವಾ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಸಬಹುದು.
2. CDAC Recruitment ನಲ್ಲಿ ಯಾವ ಹಾಗೂ ಎಷ್ಟು ಹುದ್ದೆಗಳಿವೆ?
ಪ್ರಾಜೆಕ್ಟ್ ಮ್ಯಾನೇಜರ್ ಹಾಗೂ ಇಂಜಿನಿಯರ್ ಹುದ್ದೆಗಳಿದ್ದು ಒಟ್ಟು 60 ಹುದ್ದೆಗಳಿವೆ.
3. CDAC Recruitment ಗೆ ಅರ್ಜಿ ಶುಲ್ಕ ಇದೆಯೇ?
ಇಲ್ಲ
4. CDAC Recruitment ನಲ್ಲಿ ಕೆಲಸದ ಸ್ಥಳ ಯಾವುದು?
ಬೆಂಗಳೂರು ಸೇರಿದಂತೆ ಹಲವು ಸ್ಥಳಗಳಲ್ಲಿ ಕೆಲಸದ ಅವಕಾಶ ಇದೆ.
5. CDAC Recruitment ಗೆ ಕೊನೆಯ ಅರ್ಜಿ ದಿನಾಂಕ ಯಾವುದು?
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 26-05-2026 ಆಗಿದೆ. ಇಂದೇ ಅರ್ಜಿ ಸಲ್ಲಿಸಿ