ಅಸಿಸ್ಟೆಂಟ್ ಲೋಕೋ ಪೈಲಟ್, ಟೆಕ್ನಿಷಿಯನ್ ಇತರ ಹುದ್ದೆಗಳಿಗೆ ಅರ್ಜಿ ಆಹ್ವಾನ ( Railway Recruitment )
ಕೇಂದ್ರ ಸರ್ಕಾರದ ಉದ್ಯೋಗವನ್ನು ಪಡೆಯಬೇಕೆಂಬುದು ಎಲ್ಲರ ಮಹದಾಸೆಯಾಗಿರುತ್ತದೆ. ಈ ಉದ್ಯೋಗದ ಕನಸನ್ನು ಪೂರ್ಣಗೊಳಿಸಿಕೊಳ್ಳಲು ರೈಲ್ವೆ ಇಲಾಖೆಯು ಭರ್ಜರಿ ಗುಡ್ ನ್ಯೂಸ್ ನೀಡಿದೆ ಭಾರತೀಯ ರೈಲ್ವೆ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗವನ್ನು ಪಡೆಯಬೇಕೆಂಬ ಆಸೆಯನ್ನು ಹೊಂದಿರುವವರಿಗೆ ಇದೀಗ ದೊಡ್ಡ ಅವಕಾಶ ಒದಗಿದ್ದು ರೈಲ್ವೆ ನೇಮಕಾತಿ ಮಂಡಳಿ ವತಿಯಿಂದ ವಿವಿಧ ಹುದ್ದೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ನೇಮಕಾತಿ ಪ್ರಕ್ರಿಯೆ ಪ್ರಾರಂಭಗೊಂಡಿದೆ ಅಸಿಸ್ಟೆಂಟ್ ಲೋಕೋ ಪೈಲೆಟ್, ಟೆಕ್ನಿಷಿಯನ್ ಹಾಗೂ ಗ್ರೂಪ್ ಡಿ ವೃಂದ ಸೇರಿದಂತೆ ಸಾವಿರಾರು ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಪ್ರಕಟಗೊಂಡಿದ್ದು ಕರ್ನಾಟಕದ ಅಭ್ಯರ್ಥಿಗಳಿಗೂ ಈ ನೇಮಕಾತಿಯಲ್ಲಿ ಅವಕಾಶ ಇರುವುದರಿಂದ ಅಧಿಕೃತ ಅಧಿಸೂಚನೆಯನ್ನು ಆದಷ್ಟು ಬೇಗ ಓದಿ ಅರ್ಜಿ ಸಲ್ಲಿಸಿ ತಮ್ಮ ಕೇಂದ್ರ ಸರ್ಕಾರದ ಉದ್ಯೋಗವನ್ನು ಪಡೆಯಬೇಕೆಂಬ ಕನಸನ್ನು ಸಹಕಾರ ಗೊಳಿಸಿ
Railway Recruitment ಅಧಿಸೂಚನೆಯ ವಿವರ
ಸಂಸ್ಥೆಯ ಹೆಸರು : ರೈಲ್ವೇ ನೇಮಕಾತಿ ಮಂಡಳಿ ( RRB )
ಒಟ್ಟು ಹುದ್ದೆಗಳ ಸಂಖ್ಯೆ : 39700 ಕ್ಕೂ ಹೆಚ್ಚು ಹುದ್ದೆಗಳು
ವಿದ್ಯಾರ್ಹತೆ : SSLC ಯಿಂದ ಪದವಿಯವರೆಗೆ
ಹುದ್ದೆಯ ಸ್ಥಳ : ಭಾರತದೆಲ್ಲೆಡೆ
Railway Recruitment ನ ಹುದ್ದೆ ವಾರು ಹಂಚಿಕೆ
ಈ Railway Recruitment ಅಡಿಯಲ್ಲಿ ಹಲವು ಪ್ರಮುಖ ಹುದ್ದೆಗಳು ಖಾಲಿ ಇದ್ದು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ ಈ ನೇಮಕಾತಿ ದೇಶದ ವಿವಿಧ ರೈಲ್ವೆ ವಲಯಗಳಲ್ಲಿ ನಡೆಯುತ್ತಿದ್ದು ಕರ್ನಾಟಕದ ಬೆಂಗಳೂರು, ಹುಬ್ಬಳ್ಳಿ ಧಾರವಾಡ ಹಾಗೂ ಇತರ ವಲಯಗಳಲ್ಲೂ ಅವಕಾಶಗಳಿವೆ
| ಹುದ್ದೆ | ಹುದ್ದೆವಾರು ಪ್ರಸ್ತುತ ಖಾಲಿ ಇರುವ ಹುದ್ದೆಗಳ ಸಂಖ್ಯೆ |
| ಅಸಿಸ್ಟೆಂಟ್ ಲೋಕೋ ಪೈಲೆಟ್ | 11,127 ಹುದ್ದೆಗಳು |
| ಟೆಕ್ನಿಷಿಯನ್ ಗ್ರೇಡ್ 3 | 6,565 ಹುದ್ದೆಗಳು |
| ಗ್ರೂಪ್ ಡಿ ಲೆವೆಲ್-1 | 22,000 ಹುದ್ದೆಗಳು |
| ಟ್ರ್ಯಾಕ್ ಮೆಂಟೇನರ್ | ಹುದ್ದೆಗಳ ಸಂಖ್ಯೆ ಅಗತ್ಯತೆಗೆ ಅನುಗುಣವಾಗಿ ಬದಲಾವಣೆ |
| ಅಸಿಸ್ಟೆಂಟ್ ಅಥವಾ ಹೆಲ್ಪರ್ | ಹುದ್ದೆಗಳ ಸಂಖ್ಯೆ ಅಗತ್ಯತೆಗೆ ಅನುಗುಣವಾಗಿ ಬದಲಾವಣೆ |
ಹೊಂದಿರಬೇಕಾದ ವಿದ್ಯಾರ್ಹತೆ
ಈ Railway Recruitment ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಗಿನ ಆ ವಿದ್ಯಾರ್ಥಿಯನ್ನು ಹೊಂದಿರಬೇಕು
- 10ನೇ ತರಗತಿ ( SSLC )
- ಐಟಿಐ ( ITI )
- ಡಿಪ್ಲೋಮಾ ( DIPLOMA )
- ಯಾವುದೇ ಪದವಿ ( ANY DEGREE )
- ಹುದ್ದೆಗೆ ಸಂಬಂಧಿಸಿದ ಯಾವುದೇ ತಾಂತ್ರಿಕ ಪದವಿ ( ANY TECHNICAL DEGREE )
Railway Recruitment ನಲ್ಲಿ ಪ್ರತ್ಯೇಕ ಹುದ್ದೆಗಳಿಗೆ ವಿದ್ಯಾರ್ಹತೆಯು ಬದಲಾಗುತ್ತದೆ ಆದ್ದರಿಂದ ಅಧಿಸೂಚನೆಯ ವಿವರವನ್ನು ಹುದ್ದೆಗಳಿಗೆ ಅನುಗುಣವಾಗಿ ಓದಿ ನಂತರ ಅರ್ಜಿ ಸಲ್ಲಿಸುವುದು ಉತ್ತಮ
ವಯೋಮಿತಿ ವಿವರ
ಕನಿಷ್ಠ ವಯಸ್ಸು 18 ವರ್ಷ ವಯಸ್ಸಾಗಿರಬೇಕು ಗರಿಷ್ಠ ವಯಸ್ಸು 30 ವರ್ಷಗಳಿಂದ 33 ವರ್ಷ ಇರಬೇಕಾಗುತ್ತದೆ
Railway Recruitment ನ ವಯೋಮಿತಿ ಸಡಿಲಿಕೆ
ಈ Railway Recruitment ನಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ವಯೋಮಿತಿ ಸಡಿಲಿಕೆ ನಿಯಮದ ಪ್ರಕಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗುವುದು
ಆಯ್ಕೆ ಪ್ರಕ್ರಿಯೆ
Railway Recruitment ಒಂದು ಕೇಂದ್ರ ಸರ್ಕಾರದ ಹುದ್ದೆ ಆಗಿರುವುದರಿಂದ ಇದಕ್ಕೆ ಭಾರತದ ಅತ್ಯಂತ ಅರ್ಜಿ ಸಲ್ಲಿಸುತ್ತಾರೆ ಹಾಗೂ ಆಯ್ಕೆ ಪ್ರಕ್ರಿಯೆಯು ಕೂಡ ಸ್ಪರ್ಧಾತ್ಮಕವಾಗಿರುತ್ತದೆ
ಕಂಪ್ಯೂಟರ್ ಆಧಾರಿತ ಪರೀಕ್ಷೆ – ಹಂತ 1 : ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಸಾಮಾನ್ಯ ಜ್ಞಾನ ಹಾಗೂ ತಾರ್ಕಿತ ವಿಷಯಗಳ ಬಗ್ಗೆ ಪರೀಕ್ಷೆ ನೆಡೆಯುತ್ತದೆ
ಕಂಪ್ಯೂಟರ್ ಆಧಾರಿತ ಪರೀಕ್ಷೆ – ಹಂತ 2 : ಈ ಪರೀಕ್ಷೆಯಲ್ಲಿ ಹುದ್ದೆಗಳಿಗೆ ಬೇಕಾದ ವಿಶೇಷ ಜ್ಞಾನ ಹಾಗೂ ಹೆಚ್ಚುವರಿ ವಿಷಯಗಳ ಬಗ್ಗೆ ಪರೀಕ್ಷೆ ನೆಡೆಯುತ್ತದೆ
ಕೌಶಲ್ಯ ಪರೀಕ್ಷೆ : ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಟೈಪಿಂಗ್ ವೇಗ, ನಿಖರತೆ ಹಾಗೂ ಕೌಶಲ್ಯಗಳನ್ನು ಪರೀಕ್ಷಿಸಲಾಗುತ್ತದೆ.
ದಾಖಲೆಗಳ ನೈಜತೆ ಪರಿಶೀಲನೆ : ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಯಲ್ಲಿ ಸಲ್ಲಿಸಿರುವ ದಾಖಲೆಗಳ ನೈಜತೆ ಹಾಗು ಗುಣಮಟ್ಟವನ್ನು ನೋಡಲಾಗುತ್ತದೆ
ಅಭ್ಯರ್ಥಿಗಳ ವೈದ್ಯಕೀಯ ಪರೀಕ್ಷೆ : ಆಯ್ಕೆಯಾಗುವ ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಹೊಂದಿದ್ದಾರೆಯೇ ಹಾಗೂ ಅಂಗವಿಕಲ ಅಭ್ಯರ್ಥಿಗಳ ವೈದ್ಯಕೀಯ ಪರೀಕ್ಷೆಯನ್ನು ಅವರು ಸಲ್ಲಿಸಿರುವ ವರ್ಗದ ಮೇಲೆ ಪರೀಕ್ಷೆ ಮಾಡಲಾಗುತ್ತದೆ.
Railway Recruitment ನಲ್ಲಿ ಟ್ರ್ಯಾಕ್ ಮೆಂಟೇನರ್ಸ್ ಹಾಗೂ ಇತರ ದೈಹಿಕ ಸಾಮರ್ಥ್ಯ ಹೆಚ್ಚಿರಬೇಕಾದ ಹುದ್ದೆಗಳಿಗೆ ದೈಹಿಕ ಪರೀಕ್ಷೆ ಕೂಡ ಇರಬಹುದಾಗಿರುತ್ತದೆ
ವೇತನದ ಮಾಹಿತಿ
ಈ Railway Recruitment ಮೂಲಕ ನೇಮಕಗೊಂಡ ಅಭ್ಯರ್ಥಿಗಳಿಗೆ ಉತ್ತಮ ವೇತನದ ಜೊತೆಯಲ್ಲಿ ಹಲವು ರೀತಿಯ ಭತ್ಯೆಗಳನ್ನೂ ಸಹ ನೀಡಲಾಗುತ್ತದೆ ವೇತನದ ವಿವರ ಈ ಕೆಳಕಂಡಂತಿದೆ
| ಹುದ್ದೆಯ ಹೆಸರು | ಮಾಸಿಕ ವೇತನ ( ರೂಪಾಯಿಗಳಲ್ಲಿ ) |
| ಅಸಿಸ್ಟೆಂಟ್ ಲೋಕೋ ಪೈಲೆಟ್ | 35,000/- ರೂಗಳಿಂದ 45,000/- ರೂಗಳು |
| ಟೆಕ್ನಿಷಿಯನ್ ಗ್ರೇಟ್ 3 | 29,000/- ರೂಗಳಿಂದ 38,000/- ರೂಗಳು |
| ಗ್ರೂಪ್ ಡಿ – ಲೆವೆಲ್ 1 | 22,000/- ರೂಗಳಿಂದ 32,000/- ರೂಗಳು |
ಅರ್ಜಿ ಸಲ್ಲಿಕೆ
Railway Recruitment ಗೆ ಅಭ್ಯರ್ಥಿಗಳು ಕಡ್ಡಾಯವಾಗಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು ಅಂಚೆ ಅಥವಾ ಖುದ್ದಾಗಿ ಕಚೇರಿಗೆ ಹೋಗಿ ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಹೇಳಲಾಗಿದೆ
- ಅಧಿಕೃತ ಆರ್ ಆರ್ ಬಿ ವೆಬ್ಸೈಟ್ಗೆ ಭೇಟಿ ನೀಡಿ
- ಈ ಮುಂಚೆ ನೋಂದಣಿ ಆಗದಿದ್ದರೆ ಹೊಸ ನೋಂದಣಿಯನ್ನು ಮಾಡಿಕೊಳ್ಳಿ. (ನೋಂದಣಿ ಹಾಗೂ ಅರ್ಜಿ ಸಲ್ಲಿಕೆಗೆ ಈ ಕೆಳಗೆ ಲಿಂಕನ್ನು ನೀಡಿದ್ದೇವೆ)
- ಯೂಸರ್ ನೇಮ್ ಹಾಗೂ ಪಾಸ್ವರ್ಡ್ ನಮೂದಿಸುವುದರ ಮೂಲಕ ಲಾಗಿನ್ ಆಗಿ
- ಲಾಗಿನ್ ಆದ ನಂತರ ಆರ್ ಆರ್ ಬಿ ಯನ್ನು ಆಯ್ಕೆ ಮಾಡಿ ನಂತರ ಬರುವ ಆನ್ಲೈನ್ ಅರ್ಜಿಯನ್ನು ಎಲ್ಲ ಮಾಹಿತಿಯನ್ನು ನಮೂದಿಸಿ ಭರ್ತಿ ಮಾಡಿ
- ಕೇಳಲಾಗುವ ಎಲ್ಲ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
- ಅನ್ವಯಿಕ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ
- ನಮೂದಿಸಿರುವ ಎಲ್ಲ ಮಾಹಿತಿ ಹಾಗೂ ಅಪ್ಲೋಡ್ ಮಾಡಿರುವ ಎಲ್ಲ ದಾಖಲಾತಿಗಳನ್ನು ಒಮ್ಮೆ ಪರಿಶೀಲಿಸಿ ಸಬ್ಮಿಟ್ ಮಾಡಿ
- ಸಬ್ಮಿಟ್ ಮಾಡಿದ ನಂತರ ಬರುವ ನೊಂದಣಿ ಸಂಖ್ಯೆಯನ್ನು ಬಳಸಿಕೊಂಡು ತಾವು ಸಲ್ಲಿಸಿರುವ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಇಟ್ಟುಕೊಂಡು ಮುಂದಿನ ನೇಮಕಾತಿ ಪ್ರಕ್ರಿಯೆಗಾಗಿ ಅನುಸರಣೆಯಲ್ಲಿರಿ
ಅಗತ್ಯ ದಾಖಲೆಗಳು
ಈ Railway Recruitment ಗೆ ದೇಶದಾದ್ಯಂತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವುದರಿಂದ ಆಯ್ಕೆ ತುಂಬಾ ಸ್ಪರ್ಧಾತ್ಮಕವಾಗಿದ್ದು ತಮ್ಮ ದಾಖಲಾತಿಗಳನ್ನು ನೈಜ ರೀತಿಯಲ್ಲಿ ಇಟ್ಟುಕೊಳ್ಳಲು ಉತ್ತಮವಾಗಿರುತ್ತದೆ ಅಗತ್ಯ ದಾಖಲೆಗಳ ಪಟ್ಟಿ ಈ ಕೆಳಕಂಡಂತಿದೆ
- ಆಧಾರ್ ಕಾರ್ಡ್
- ಎಸ್ ಎಸ್ ಎಲ್ ಸಿ ಅಂಕಪಟ್ಟಿ
- ಐ ಟಿ ಐ, ಡಿಪ್ಲೋಮಾ ಹಾಗೂ ಸಂಬಂಧಿತ ವಿದ್ಯಾರ್ಹತೆಯ ಪ್ರಮಾಣ ಪತ್ರಗಳು
- ಜಾತಿ ಪ್ರಮಾಣ ಪತ್ರ
- ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ (ಸಂವಹನಕ್ಕಾಗಿ)
- ಭಾವಚಿತ್ರ ಹಾಗೂ ಸಹಿ
- ಇನ್ನಿತರ ಅನುಭವ ಪ್ರಮಾಣ ಪತ್ರಗಳು (ಅನ್ವಯಿಸಿದಲ್ಲಿ)
Railway Recruitment ನಲ್ಲ್ಲಿ ಕರ್ನಾಟಕದ ಅಭ್ಯರ್ಥಿಗಳಿಗೆ ವಿಶೇಷ ಅವಕಾಶ
ಬೆಂಗಳೂರಿನಲ್ಲಿರುವ ರೈಲ್ವೆ ವಲಯದಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದು ಆ ಹುದ್ದೆಗಳಲ್ಲಿ ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಕರ್ನಾಟಕ ಅಭ್ಯರ್ಥಿಗಳಿಗೆ ಮೀಸಲಾಗಿರಿಸಲಾಗಿದೆ ಟ್ರ್ಯಾಕ್ ಮೆಂಟೇನರ್ ಅಸಿಸ್ಟೆಂಟ್ ಪಾಯಿಂಟ್ಸ್ಮನ್ ಸೇರಿದಂತೆ ಇನ್ನೂ ಹಲವು ಹುದ್ದೆಗಳಿಗೆ ಸ್ಥಳೀಯ ವೃಂದದ ಅಡಿಯಲ್ಲಿ ಅರ್ಜಿಗಳನ್ನು ತೆರೆಯಲಾಗಿದ್ದು ಅಭ್ಯರ್ಥಿಗಳು ಈ ಅವಕಾಶದ ಸದುಪಯೋಗಪಡಿಸಿಕೊಳ್ಳಿ
ಪ್ರಮುಖ ದಿನಾಂಕಗಳು
ಅರ್ಜಿ ಪ್ರಾರಂಭದ ದಿನಾಂಕ : 15-05-2026
ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : 16-06-2026
ಅರ್ಜಿಯಲ್ಲಿ ಏನಾದರೂ ಬದಲಾವಣೆಗಳಿದ್ದಲ್ಲಿ ಸರಿಪಡಿಸಲು : 17-06-2026 ರಿಂದ 26-06-2026
Railway Recruitment ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಪ್ರಮುಖ ಸಲಹೆಗಳು
- ನೀವು ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಪ್ರತ್ಯೇಕ ಹುದ್ದೆಗೆ ಹೊರಡಿಸಲಾಗಿರುವ ಅಧಿಕೃತ ಅಧಿಸೂಚನೆಯನ್ನು ಗಮನವಿಟ್ಟು ಓದಿ
- ಅರ್ಜಿ ಭರ್ತಿ ಮಾಡುವಾಗ ನಮೂದಿಸುವ ಮಾಹಿತಿ ಹಾಗೂ ಅಪ್ಲೋಡ್ ಮಾಡುವ ದಾಖಲೆಗಳನ್ನು ಸರಿಯಾಗಿ ಅಪ್ಲೋಡ್ ಮಾಡಿದ್ದೀರಾ ಎಂದು ಪರಿಶೀಲಿಸಿಕೊಳ್ಳಿ
- ಸ್ಪರ್ಧೆ ಹೆಚ್ಚಿರುವುದರಿಂದ ಇಂದಿನಿಂದಲೇ ತಯಾರಿಯನ್ನು ಆರಂಭಿಸಿ ಎಲ್ಲರಿಗಿಂತ ಮುಂದ ಇರಿ
- ಕೊನೆ ದಿನಾಂಕದವರೆಗೆ ಕಾಯದೆ ಇಂದೇ ಅರ್ಜಿ ಸಲ್ಲಿಸಿ, ಏಕೆಂದರೆ ಕೊನೆ ಸಮಯದಲ್ಲಿ ಸರ್ವ ಸಮಸ್ಯೆ ಎದುರಾಗಬಹುದು
ಹೆಚ್ಚು ಸ್ಪರ್ಧೆ
ಕೇಂದ್ರ ಸರಕಾರಿ ಉದ್ಯೋಗವನ್ನು ಪಡೆಯಬೇಕೆಂದು ಪ್ರತಿಯೊಬ್ಬರು ಬಯಸುವುದರಿಂದ ಹಾಗೂ ಈ ಹುದ್ದೆಗಳಿಗೆ ಕಡಿಮೆ ವಿದ್ಯಾರ್ಥಿಯನ್ನು ಕೇಳಿರುವುದರಿಂದ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಹಾಗೂ ಹೆಚ್ಚು ಸ್ಪರ್ಧೆ ಏರ್ಪಡಬಹುದು ಆದುದರಿಂದ ಈ ಪರೀಕ್ಷೆಯನ್ನು ಎದುರಿಸಲು ಉತ್ತಮ ಅಭ್ಯಾಸಗಳನ್ನು ರೂಪಿಸಿಕೊಂಡು ಅಭ್ಯಾಸ ಮಾಡುವುದರ ಮೂಲಕ ಈ ಉದ್ಯೋಗವನ್ನು ಪಡೆಯಬಹುದಾಗಿರುತ್ತದೆ
ಪ್ರಮುಖ ಲಿಂಕ್ ಗಳು
ಅಧಿಕೃತ ವೆಬ್ಸೈಟ್ : ರೈಲ್ವೆ ನೇಮಕಾತಿ ಮಂಡಳಿ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು : ನೋಂದಣಿಯಾಗಲು (ಖಾತೆ ಸೃಜಿಸಲು) ಅರ್ಜಿ ಸಲ್ಲಿಸಲು
ಅಧಿಕೃತ ಅಧಿಸೂಚನೆಯನ್ನು ಓದಲು ಪಿಡಿಎಫ್ : ಅಧಿಸೂಚನೆ ಪಿ ಡಿ ಎಫ್
ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು : ಇಲ್ಲಿ ಕ್ಲಿಕ್ ಮಾಡಿ
ಕೇಂದ್ರ ಸರ್ಕಾರದ ಪ್ರಮುಖ ಉದ್ಯಮ ಒಂದಾದ ರೈಲ್ವೆ ಇಲಾಖೆಯು 2026 ನೇಮಕಾತಿ ಹೊರಡಿಸಿದ್ದು ಈ ನೇಮಕಾತಿ ಮೂಲಕ ಅಸಿಸ್ಟೆಂಟ್ ಲೋಕೋ ಪೈಲೆಟ್ ಟೆಕ್ನಿಷಿಯನ್ ಸಹಾಯಕ ಹಾಗೂ ಇನ್ನಿತರ ಹಲವಾರು ಹುದ್ದೆಗಳಿಗೆ ನೇಮಕಾತಿ ಸೂಚನೆಯನ್ನು ಕೊಡಿಸಿದ್ದು 10ನೇ ತರಗತಿಯಿಂದ ಪದವಿಯವರೆಗೆ ವಿದ್ಯಾರ್ಥಿಯನ್ನು ಹೊಂದಿರುವ ಅಭ್ಯರ್ಥಿಗಳಿಗೆ ಅರ್ಜಿಯನ್ನು ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ ಇದರ ಜೊತೆಯಲ್ಲಿ ಉತ್ತಮ ವೇತನ ಉದ್ಯೋಗ ಭದ್ರತೆ ಹಾಗೂ ಉತ್ತಮ ರೀತಿಯ ಮೊತ್ತದಲ್ಲಿ ಬತ್ಯಗಳು ಸಹ ಸಿಗುವುದರಿಂದ ಈ ಕೇಂದ್ರ ಸರ್ಕಾರ ಉದ್ಯೋಗವು ವಿಶೇಷವಾಗಿದೆ ತಮ್ಮ ಕೇಂದ್ರ ಸರಕಾರಿ ಉದ್ಯೋಗದ ಕನಸನ್ನು ನನಸಾಗಿಸಿ