Telegram Join My Telegram WhatsApp Join My WhatsApp

DRDO Recruitment 2026, Job Opportunity : ಭಾರತ ರಕ್ಷಣಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ, ಇಲ್ಲಿದೆ ಸಂಪೂರ್ಣ ಮಾಹಿತಿ

ಅಪ್ರೆಂಟಿಸ್‌ ಹಾಗೂ ಇಂಟರ್ನ್‌ ಶಿಪ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ (DRDO Recruitment )

ಭಾರತದ ರಕ್ಷಣಾ ಕ್ಷೇತ್ರದ ಪ್ರಾಮುಖ್ಯತೆಯು ದಿನದಿನ ಹೆಚ್ಚುತ್ತಿದೆ ಹಾಗೂ ಮಾನವ ಸಂಪನ್ಮೂಲದ ಅಗತ್ಯತೆಯೂ ಕೂಡ ಅಷ್ಟೇ ಹೆಚ್ಚಾಗುತ್ತಿದೆ ಅದರಂತೆಯೇ ಭಾರತದ ಪ್ರಖ್ಯಾತ ರಕ್ಷಣಾ ಸಂಶೋಧನಾ ಸಂಸ್ಥೆಯಾದ ಡಿಆರ್‌ಡಿಓ ಇದೀಗ 2026 ನೇ ಸಾಲಿನಲ್ಲಿ ಅಪ್ರೆಂಟಿಸ್ ಹಾಗೂ ಇಂಟರ್ನ್‌ ಶಿಪ್ ಇನ್ನೂ ಮುಂತಾದ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ ವಿಶೇಷವಾಗಿ ಕರ್ನಾಟಕದ ಬೆಂಗಳೂರಿನಲ್ಲಿರುವ ಪ್ರಾದೇಶಿಕ ಕಚೇರಿಯಲ್ಲಿ ಸಹ ಹುದ್ದೆಗಳು ಇರುವುದರಿಂದ ಆದಷ್ಟು ಬೇಗ ಅರ್ಹತೆ ಮನದಂಡಗಳನ್ನು ಓದಿ ಅರ್ಥೈಸಿಕೊಂಡು ಅರ್ಜಿ ಸಲ್ಲಿಸಿ ರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡುವುದರಿಂದ ದೇಶಕ್ಕಾಗಿ ಕೆಲಸ ಮಾಡಿರುತ್ತೇವೆ ಎಂಬ ಹೆಮ್ಮೆಯ ಜೊತೆ ಉತ್ತಮ ವೇತನ ಹಾಗೂ ಭತ್ಯೆಗಳು ಸಹ ಸಿಗುತ್ತದೆ ಆದ್ದರಿಂದ ಹಿಂದೆ ಅರ್ಜಿ ಸಲ್ಲಿಸಿ

ಇಂಜಿನಿಯರಿಂಗ್ ಪದವಿಧರರು ಡಿಪ್ಲೋಮಾ ಐಟಿಐ ಬಿಕಾಂ ಬಿಎಸ್ಸಿ ಹಾಗೂ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಅಭ್ಯರ್ಥಿಗಳು ಈ ನೇಮಕಾತಿಗೆ ಅರ್ಜಿಯನ್ನು ಸಲ್ಲಿಸಬಹುದು ಉತ್ತಮ ಸ್ಪೇ ಫಂಡ್ ಜೊತೆಗೆ ಭತ್ಯೆಗಳು ಸೇರಿದಂತೆ ರಕ್ಷಣಾ ಸಂಶೋಧನಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿರುವ ಅನುಭವ ಸಿಗುತ್ತದೆ

SSC Recruitments 2026, Job Opportunity : ಸಿಬ್ಬಂದಿ ಆಯ್ಕೆ ಆಯೋಗದಿಂದ ನೇಮಕಾತಿ, ಅರ್ಜಿ ಸಲ್ಲಿಕೆ, ವಿದ್ಯಾರ್ಹತೆ, ಸಂಬಳ, ಅರ್ಜಿ ಸಲ್ಲಿಕೆಯ ಬಗ್ಗೆ ಸಂಪೂರ್ಣ ಮಾಹಿತಿ

ಈ DRDO Recruitment ಅಡಿಯಲ್ಲಿ ಯಾವ ಯಾವ ವಿಭಾಗದಲ್ಲಿ ಎಷ್ಟು ಖಾಲಿ ಹುದ್ದೆಗಳಿವೆ

 

ನೇಮಕಾತಿ ಸಂಸ್ಥೆ ಹುದ್ದೆಯ ಹೆಸರು ಖಾಲಿ ಇರುವ ಒಟ್ಟು ಹುದ್ದೆಗಳ ಸಂಖ್ಯೆ
 ಡಿ ಆರ್‌ ಡಿ ಒ  ( GTRE ) ಬೆಂಗಳೂರು ಅಪ್ರೆಂಟಿಸ್‌ ಟ್ರೈನಿ 150 ಹುದ್ದೆಗಳು
ಡಿ ಆರ್‌ ಡಿ ಒ ( ಡಿ ಇ ಬಿ ಇ ಎಲ್ ) ಪದವಿ ಅಪ್ರೆಂಟಿಸ್ 28 ಹುದ್ದೆಗಳು
ಡಿ ಆರ್‌ ಡಿ ಒ‌ ( ಐ ಆರ್‌ ಡಿ ಇ ) ಜೂನಿಯರ್‌ ರಿಸರ್ಚ್‌ ಫೆಲೋ 08 ಹುದ್ದೆಗಳು
ಡಿ ಆರ್‌ ಡಿ ಒ ( ಡಿ ಎಲ್‌ ಆರ್‌ ಎಲ್‌ ) ಇಂಟರ್ನ್‌ ಶಿಪ್ 75 ಹುದ್ದೆಗಳು
ಡಿ ಆರ್‌ ಡಿ ಒ (ಐ ಎನ್‌ ಎಮ್‌ ಎ ಎಸ್‌ ) ಅಪ್ರೆಂಟಿಸ್‌ ಶಿಪ್ 38 ಹುದ್ದೆಗಳು
ಡಿ ಆರ್‌ ಡಿ ಒ (ಟಿ ಬಿ ಆರ್‌ ಎಲ್‌ ) ರಿಸರ್ಚ್‌ ಅಸೋಸಿಯೇಟ್‌ (ಜೂನಿಯರ್‌ ರಿಸರ್ಚ್‌ ಫೆಲೋ) 14 ಹುದ್ದೆಗಳು

 

DRDO Recruitment ಮೂಲಕ ಬೆಂಗಳೂರಿಗರಿಗೆ ಉತ್ತಮ ಅವಕಾಶ

ಕರ್ನಾಟಕದ ಅಭ್ಯರ್ಥಿಗಳಿಗೆ ಈ ನೇಮಕಾತಿಯಲ್ಲಿ ಸೂಚನೆಯೂ ಪ್ರಮುಖದ್ದಾಗಿದೆ ಏಕೆಂದರೆ ಬೆಂಗಳೂರಿನಲ್ಲಿರುವ ಜಿಟಿಆರ್ ಇ ಹಾಗೂ ಟೇಬಲ್ ರಕ್ಷಣಾ ಕೇಂದ್ರಗಳಲ್ಲಿ ದೊಡ್ಡಮಟ್ಟದ ನೇಮಕಾತಿ ಪ್ರಕ್ರಿಯೆ ಪ್ರಾರಂಭಗೊಂಡಿರುವುದರಿಂದ ಬೆಂಗಳೂರಿಗೆ ಆದಷ್ಟು ಬೇಗ ಅರ್ಜಿ ಸಲ್ಲಿಸಿ

GTRE  ಅಪ್ರೆಂಟಿಸ್ DRDO Recruitment

ಗ್ಯಾಸ್ ಟರ್ಬೈನ್ ರಿಸರ್ಚ್ ಎಸ್ಟಾಬ್ಲಿಷ್ಮೆಂಟ್ ಸಂಸ್ಥೆಯು ಡಿಆರ್‌ಡಿಓ ನ ಅಂಗ ಸಂಸ್ಥೆಯಾಗಿದ್ದು ಈ ಸಂಸ್ಥೆಯಲ್ಲಿ 150 ಅಪ್ರೆಂಟಿಸ್‌ ಹುದ್ದೆಗಳಿಗೆ ಆನ್‌ ಲೈನ್‌  ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ ಪದವಿ ಇಂಜಿನಿಯರಿಂಗ್ ಡಿಪ್ಲೋಮಾ ಹಾಗೂ ಐಟಿಐ ವಿದ್ಯಾರ್ಥಿಯನ್ನು ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು ಆಯ್ಕೆಯಾದವರಿಗೆ ಒಂದು ವರ್ಷದ ಅವಧಿಗೆ ತರಬೇತಿಯನ್ನು ನೀಡಲಾಗುತ್ತದೆ

DEBEL ಅಪ್ರೆಂಟಿಸ್ DRDO Recruitment
ಡೆಬೆಲ್‌  ಒಂದು ಡಿ ಆರ್ ಡಿ ಓ ನ ಅಂಗ ಸಂಸ್ಥೆಯಾಗಿದ್ದು ಡಿಫೆನ್ಸ್ ಬಯೋ ಇಂಜಿನಿಯರಿಂಗ್ ಮತ್ತು ಎಲೆಕ್ಟ್ರೋ ಮೆಡಿಕಲ್ ಲ್ಯಾಬೋರೇಟರಿ ಅಲ್ಲಿ 28 ಪದವಿ ಅಪ್ರೆಂಟಿಸ್ ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಿಎಸ್ಸಿ ಬಿಕಾಂ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಈ ನೇಮಕಾತಿ ಮೂಲಕ ಆಯ್ಕೆ ಆದವರಿಗೆ ಪ್ರತಿ ತಿಂಗಳು 12,300/- ರೂಗಳನ್ನು ನೀಡಲಾಗುತ್ತದೆ

ಈ DRDO Recruitment ಗೆ ಅರ್ಜಿ ಸಲ್ಲಿಸಲು ವಿದ್ಯಾರ್ಹತೆ ಏನು

DRDO Recruitment ಅಧಿಸೂಚನೆಯಲ್ಲಿ ಹುದ್ದೆಗಳಿಗೆ ತಕ್ಕಂತೆ ವಿದ್ಯಾರ್ಹತೆಯನ್ನು ಹೊಂದಿರಬೇಕಾಗುತ್ತದೆ ಹುದ್ದೆಗಳಿಗನುಸಾರ ವಿದ್ಯಾರ್ಹತೆ ನಿಗದಿ ಆಗಿರುವುದರಿಂದ ತಮ್ಮ ವಿದ್ಯಾರ್ಹತೆಯನ್ನು ಪರಿಶೀಲಿಸಿ, ಹೊಂದುವಂತಹ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು

  • ಐಟಿಐ ( ITI )
  • ಡಿಪ್ಲೋಮಾ ( DIPLOMA )
  • ಬಿ ಎಸ್ ಸಿ ( B.Sc )
  • ಬಿಕಾಂ ( B.Com )
  • ಬಿಇ / ಬಿ ಟೆಕ್ ( B.E/B.Tech )
  • ಎಂಇ ಎಮ್ ಟೆಕ್ ( M.E/ M.Tech )
  • ಸ್ನಾತಕೋತ್ತರ ಪದವಿ ( Post Graduation )
  • ಪಿ ಎಚ್ ಡಿ ( P.H.D )

ಈ ಮೇಲಿನ ವಿದ್ಯಾರ್ಥಿಗಳನ್ನು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿ ಸಂಸ್ಥೆಯಿಂದ ಪಡೆದಿರಬೇಕಾಗುತ್ತದೆ

ಸ್ಟೇ ಫಂಡ್‌ ಮೊತ್ತ ಹಾಗೂ ವೇತನ

ಈ DRDO Recruitmentಮೂಲಕ ಅರ್ಹಗೊಂಡ ಅಭ್ಯರ್ಥಿಗಳಿಗೆ ಮಾಸಿಕ ವಾಗಿ ಉತ್ತಮ ಸ್ಟೇ ಫಂಡ್‌ ಹಾಗೂ ವೇತನವನ್ನು ನೀಡಲಾಗುತ್ತದೆ

ಹುದ್ದೆಯ ಹೆಸರು ಸ್ಟೇಫಂಡ್/ವೇತನ (ತಿಂಗಳಿಗೆ)
ಪದವಿ ಅಪ್ರೆಂಟಿಸ್ 12,300/- ರೂಗಳು
ಜೂನಿಯರ್‌ ರಿಸರ್ಚ್‌ ಫೆಲೋ 37,000/- ರೂಗಳು
ಪಾವತಿ ಅಪ್ರೆಂಟಿಸ್ 30,000/- ರೂಗಳು
ರಿಸರ್ಚ್‌ ಅಸೋಸೊಯೇಟ್‌ 67,000/- ರೂಗಳು

 

DRDO Recruitment ಆಯ್ಕೆ ವಿಧಾನ

DRDO Recruitment ನಲ್ಲಿ ಹಲವು ಹುದ್ದೆಗಳು ನೇಮಕಾತಿ ಅಧಿಸೂಚನೆ ಗೊಂಡಿರುವುದರಿಂದ ಪ್ರತ್ಯೇಕ ಹುದ್ದೆಗಳಿಗೆ ಪ್ರತ್ಯೇಕ ಆಯ್ಕೆ ವಿಧಾನ ಇರುತ್ತದೆ

ಮೆರಿಟ್ ಲಿಸ್ಟ್ :  ಅಂದರೆ ನೇಮಕಾತಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಅರ್ಜಿಗಳನ್ನು ಪರಿಶೀಲಿಸಿ ಮೆರಿಟ್ ಪಟ್ಟಿಯನ್ನು ಪ್ರಕಟ ಮಾಡುತ್ತಾರೆ

ಸಂದರ್ಶನ : ಸಂದರ್ಶನದಲ್ಲಿ ಅಭ್ಯರ್ಥಿಯು ಹುದ್ದೆಗೆ ಹೊಂದಿರಬೇಕಾದ ಕನಿಷ್ಠ ಜ್ಞಾನವನ್ನು ಪರಿಶೀಲಿಸಲಾಗುತ್ತಿದೆ

ವಾಕ್‌ ಇನ್ ಇಂಟರ್ವ್ಯೂ : ನೇಮಕಾತಿ ಪ್ರಕ್ರಿಯೆಗೆ ಹೆಚ್ಚಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾದ ಸಂದರ್ಭದಲ್ಲಿ ಯಾವುದೇ ಅಡೆತಡೆ ಇಲ್ಲದೆ ನೇಮಕಾತಿ ಪ್ರಕ್ರಿಯೆಯಲ್ಲಿ ಪೂರ್ಣಗೊಳ್ಳಲು ವಾಕ್‌ ಇನ್ ಇಂಟರ್ವ್ಯೂಗಳನ್ನು ತೆಗೆದುಕೊಳ್ಳಲಾಗುತ್ತದೆ

ದಾಖಲಾತಿ ಪರಿಶೀಲನೆ : ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ದಾಖಲಾತಿಗಳ ಗುಣಮಟ್ಟ ಹಾಗೂ ನೈಜತೆಯನ್ನು ಪರಿಶೀಲಿಸಲು ದಾಖಲೆ ಪರಿಶೀಲನೆ ಮಾಡಲಾಗುತ್ತದೆ

ಶೈಕ್ಷಣಿಕ ಗುಣಮಟ್ಟ : ಅಭ್ಯರ್ಥಿಗಳು ತಾವು ಅಭ್ಯಾಸ ಮಾಡುವಾಗ ಪಡೆದಿರುವ ಅಂಕಗಳು ಹಾಗೂ ರಚಿಸಿರುವ ಕಾರ್ಯಯೋಜನೆಗಳ ಆಧಾರದ ಮೇಲೂ ಸಹ ಆಯ್ಕೆ ವಿಧಾನ ನಡೆಯುತ್ತದೆ

ಪ್ರಮುಖ ಸೂಚನೆ
ಕೆಲವು ಹುದ್ದೆಗಳಲ್ಲಿ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕವೂ ಆಯ್ಕೆ ಮಾಡಲಾಗುತ್ತದೆ ಆದ್ದರಿಂದ ಹುದ್ದೆಗೆ ಸಂಬಂಧಿಸಿದ ಅಧಿಸೂಚನೆಯನ್ನು ಗಮನವಿಟ್ಟು ಓದಿ

ಅಗತ್ಯ ದಾಖಲೆಗಳು

ಈ DRDO Recruitment ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಕಂಡ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳೆಂದರೆ

  • ಎಸ್ ಎಸ್ ಎಲ್ ಸಿ ಅಂಕಪಟ್ಟಿ
  • ಪದವಿ
  • ಡಿಪ್ಲೋಮಾ ಅಥವಾ ಇಂಜಿನಿಯರಿಂಗ್ ಅಂಕ ಪಟ್ಟಿಗಳು ಹಾಗೂ ಪ್ರಮಾಣ ಪತ್ರಗಳು
  • ಆಧಾರ್ ಕಾರ್ಡ್
  • ರೆಸ್ಯೂಮ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ ( ಅಗತ್ಯವಿದ್ದಲ್ಲಿ )
  • ಪಾಸ್ಪೋರ್ಟ್ ಸೈಜ್ ಫೋಟೋ‌ ಹಾಗೂ ಸಹಿ
  • ಇತರೆ ಪ್ರಾಜೆಕ್ಟ್ ಗಳ ರಿಪೋರ್ಟ್ ಗಳು
  • ಅನುಭವ ಪ್ರಮಾಣ ಪತ್ರಗಳು
  • NATS/ NAPS ರಿಜಿಸ್ಟ್ರೇಷನ್

DRDO Recruitment ನ ಅರ್ಜಿ ಸಲ್ಲಿಕೆ ಪ್ರಕ್ರಿಯೆ

ಈ DRDO Recruitment ಗೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಅರ್ಜಿಯನ್ನು ಆಯಾ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ಹಂತ ಹಂತದ ಸಲಹೆ ಈ ಕೆಳಕಂಡಂತಿದೆ

  • ಮೊದಲು ಡಿ ಆರ್ ಡಿ ಓ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು
  • ಭೇಟಿ ನೀಡಿದ ನಂತರ ಅಲ್ಲಿ ನೇಮಕಾತಿ ವಿಭಾಗ ಅಂದರೆ ರೆಕ್ರೂಟ್ಮೆಂಟ್ ಅಥವಾ ಕೆರಿಯರ್ ವಿಭಾಗವನ್ನು ತೆರೆಯಬೇಕು
  • ಅಲ್ಲಿ ಹಲವಾರು ಹುದ್ದೆಗಳಿಗೆ ಅರ್ಜಿಗಳ ಅಧಿಸೂಚನೆ ಲಭ್ಯವಿದ್ದು ನೀವು ಅರ್ಹವಿರುವ ನೇಮಕಾತಿ ಲಿಂಕ್ ನ ಮೇಲೆ ಕ್ಲಿಕ್ ಮಾಡಿ
  • ಸಂಬಂಧಿತ ಲೆಂತ್ ಮೇಲೆ ಕ್ಲಿಕ್ ಮಾಡಿದ ನಂತರ ಅರ್ಜಿ ಯೂರೆಯುತ್ತದೆ ಅಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ ಶೈಕ್ಷಣಿಕ ಮಾಹಿತಿ ಹಾಗೂ ಇತರೆ ಹೇಳಲಾಗುವ ಎಲ್ಲ ಮಾಹಿತಿಯನ್ನು ತಪ್ಪಿಲ್ಲದೆ ಸರಿಯಾಗಿ ಭರ್ತಿ ಮಾಡಿ
  • ನಂತರ ಕೇಳಲಾಗುವ ಅಗತ್ಯ ದಾಖಲಾತಿಗಳನ್ನು ಕ್ಯಾನ್ ಮಾಡಿ ಅದರ ನಿರ್ದೇಶನದಂತೆ ಅಪ್ಲೋಡ್ ಮಾಡಿ.
  • ನಂತರ ಎಲ್ಲ ಮಾಹಿತಿಯನ್ನು ಪರಿಶೀಲಿಸಿ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಿ

ಅಭ್ಯರ್ಥಿಗಳ ಅನುಭವ

ಅಂತರ್ಜಾಲದಲ್ಲಿ ಮತ್ತು ಹಲವು ಆನ್ಲೈನ್ ಸಮುದಾಯಗಳಲ್ಲಿ ಡಿಆರ್‌ಡಿಓ ಮೂಲಕ ಪಡೆದಿರುವ ಕೋರ್ಸುಗಳಿಗೆ ಉತ್ತಮ ಪ್ರತಿಕ್ರಿಯೆ ಇದ್ದು ಹಲವರು ಇದನ್ನು ರಿಸರ್ಚ್ ಅನುಭವಕ್ಕಾಗಿ ಹಾಗೂ ತಮ್ಮ ರೆಸ್ಯೂಮಿನ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ ಅದರಂತೆಯೇ ಡಿಆರ್‌ಡಿಓ ಒಂದು ರಕ್ಷಣಾ ಸಂಸ್ಥೆ ಆಗಿರುವುದರಿಂದ ಉತ್ತಮ ಕೌಶಲ್ಯದ ಜೊತೆ ಭವಿಷ್ಯದಲ್ಲಿ ಉದ್ಯೋಗ ಸಿಗಬಹುದಾದ ಸಂಭವ ಹೆಚ್ಚುತ್ತದೆ

ಪಾವತಿ ಇಂಟರ್ನ್‌ ಶಿಪ್ ಗಳು ಲಭ್ಯ

ಡಿ ಆರ್‌ಡಿಓ ಸಂಸ್ಥೆಯು ಅಂತಿಮ ವರ್ಷದ ಇಂಜಿನಿಯರಿಂಗ್ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪೇಯ್ಡ್‌ ಇಂಟರ್ನ್‌ ಶಿಪ್ ಗಳು  ಕಾರ್ಯ ಕ್ರಮವನ್ನು ಆರಂಭಿಸಿದ್ದು ಈ ಇಂಟರ್ನ್‌ ಶಿಪ್ ಗಳಲ್ಲಿ  30,000/- ರೂಗಳ ವರೆಗೆ ಸ್ಠೇ ಫಂಡ್ ನೀಡಲಾಗುತ್ತದೆ

DRDO Recruitment ನ ಪ್ರಮುಖ ದಿನಾಂಕಗಳು

ಅರ್ಜಿ ಸಲ್ಲಿಕೆ ಆರಂಭವಾಗುವ ದಿನಾಂಕ : ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಿದೆ

ಅರ್ಜಿ ಸಲ್ಲಿಕೆ ಮುಕ್ತಾಯಗೊಳ್ಳುವ ದಿನಾಂಕ :

DRDO DEBEL APPRENTICESHIP : 20-05-2026

GTRE APPRENTICESHIP : 06-06-2026

IRDE JRF : 21-05-2026

DRDO Recruitment ಸಂಬಂಧಿಸಿದ ಪ್ರಮುಖ ಲಿಂಕ್‌ ಗಳು 

ಅಧಿಕೃತ ವೆಬ್ಸೈಟ್ ನೇಮಕಾತಿ ವಿಭಾಗ :  ಡಿ ಆರ್‌ ಡಿ ಒ
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು :  ಅರ್ಜಿ ಸಲ್ಲಿಕೆ
ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು :  ಇಲ್ಲಿ ಕ್ಲಿಕ್ ಮಾಡಿ

ಈ ನೇಮಕಾತಿಗೆ ಪ್ರಮುಖವಾಗಿ ಯಾರು ಅರ್ಜಿ ಸಲ್ಲಿಸಬೇಕು

  • ರಕ್ಷಣಾ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂಬ ಆಸಕ್ತಿ ಇರುವವರು
  • ಸರ್ಕಾರಿ ಉದ್ಯೋಗವನ್ನು ಪಡೆಯಬೇಕೆಂಬ ಆಸಕ್ತಿ ಹೊಂದಿರುವವರು
  • ಇಂಜಿನಿಯರಿಂಗ್ ಡಿಪ್ಲೋಮಾ ಐಟಿಐ ಹಾಗೂ ಇನ್ನಿತರ ಪದವಿ ಪಡೆದ ವಿದ್ಯಾರ್ಥಿಗಳು
  • ಸಂಶೋಧನಾ ಕ್ಷೇತ್ರದಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು
  • ರಕ್ಷಣಾ ಕ್ಷೇತ್ರದಲ್ಲಿ ಅನುಭವವನ್ನು ಹೊಂದಬೇಕೆಂದಿರುವ ಅಭ್ಯರ್ಥಿಗಳು ಈ ನೇಮಕಾತಿಗೆ ಅರ್ಜಿ ಸಲ್ಲಿಸುವುದನ್ನು ತಪ್ಪಿಸಬಾರದು

ಡಿ ಆರ್ ಡಿ ಓ ನೇಮಕಾತಿ ಇಂದಿನ ಯುವಕರಿಗೆ ದೊಡ್ಡ ಅವಕಾಶವನ್ನು ಮುಂದೆ ತಂದಿದೆ ಗಳನ್ನು ಆಹ್ವಾನಿಸುವುದರ ಮೂಲಕ ಅಭ್ಯರ್ಥಿಗಳಿಗೆ ಉದ್ಯೋಗವನ್ನು ಹೊಂದುವ ಅವಕಾಶವನ್ನು ಕಲ್ಪಿಸಿದ್ದು ಕರ್ನಾಟಕ ಸೇರಿದಂತೆ ಬೆಂಗಳೂರಿನ ವಿವಿಧ ಡಿ ಆರ್ ಡಿ ಓ ಕೇಂದ್ರಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಭರ್ತಿ ಮಾಡುವ ಅಧಿಸೂಚನೆಯನ್ನು ಹೊರಡಿಸಿದೆ ಉತ್ತಮ ಸ್ಟಫ್ ಅಂಡ್ ಉತ್ತಮ ಅನುಭವ ಹಾಗೂ ಭವಿಷ್ಯದಲ್ಲಿ ಉತ್ತಮ ಉದ್ಯೋಗವನ್ನು ಪಡೆಯಬಹುದಾದ ಹಾಗೂ ಪಡೆಯಲು ಸಹಕರಿಸುವ ಈ ಕಾರ್ಯಕ್ರಮಗಳನ್ನು ಆರಂಭಿಸಿದ್ದು ಈ ಉದ್ಯೋಗಗಳ ಉಪಯೋಗವನ್ನು ಪಡಿಸಿಕೊಂಡು ತಮ್ಮ ಮುಂದಿನ ಭವಿಷ್ಯವನ್ನು ಬಲಪಡಿಸಿಕೊಳ್ಳಬಹುದು ಎಂಬ ಮಾಹಿತಿಯನ್ನು ತಿಳಿಸಲಾಗಿದೆ

 

DRDO Recruitment 2026 – Frequently Asked Questions (FAQ)

1. ಈ DRDO ನೇಮಕಾತಿಗೆ ಏನೇನು ವಿದ್ಯಾರ್ಹತೆ ಇರುವವರು ಅರ್ಜಿ ಸಲ್ಲಿಸಬಹುದು?
ಐಟಿಐ, ಡಿಪ್ಲೋಮಾ, B.Sc, B.Com, BE/B.Tech, ME/M.Tech, ಸ್ನಾತಕೋತ್ತರ ಹಾಗೂ PhD ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಅರ್ಜಿ ಸಲ್ಲಿಸಬಹುದು.

2. ಬೆಂಗಳೂರು ನಗರದಲ್ಲಿ ಹುದ್ದೆಗಳಿವೆಯೇ?
ಹೌದು. ಬೆಂಗಳೂರಿನ GTRE ಹಾಗೂ DEBEL ಕೇಂದ್ರಗಳಲ್ಲಿ ಅಪ್ರೆಂಟಿಸ್ ಹಾಗೂ ಇತರೆ ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ಕರ್ನಾಟಕದ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶ.

3. ಆಯ್ಕೆ ವಿಧಾನವು ಯಾವ ರೀತಿಯಾಗಿದೆ?
ಹುದ್ದೆಯ ಪ್ರಕಾರ ಮೆರಿಟ್ ಲಿಸ್ಟ್, ಸಂದರ್ಶನ (Interview), ವಾಕ್-ಇನ್ ಇಂಟರ್ವ್ಯೂ, ದಾಖಲೆ ಪರಿಶೀಲನೆ ಹಾಗೂ ಶೈಕ್ಷಣಿಕ ಅಂಕಗಳ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

4. ವೇತನ ಅಥವಾ ಸ್ಟೈಪೆಂಡ್ ಎಷ್ಟು ಸಿಗುತ್ತದೆ?
ಹುದ್ದೆಗಳ ಆಧಾರದ ಪ್ರಕಾರ ಪ್ರತಿ ತಿಂಗಳು ಸುಮಾರು ₹12,300 ರಿಂದ ₹67,000 ವರೆಗೆ ಸ್ಟೈಪೆಂಡ್/ವೇತನ ಸಿಗಬಹುದು. ಇಂಟರ್ನ್‌ಶಿಪ್‌ಗಳಿಗೆ ಸಹ ಉತ್ತಮ ಸ್ಟೈಪೆಂಡ್ ನೀಡಲಾಗುತ್ತದೆ.

5. ಆನ್‌ ಲೈನ್‌ ಮೂಲಕ ಹೇಗೆ ಸಲ್ಲಿಸಬೇಕು?
ಅಭ್ಯರ್ಥಿಗಳು DRDO ನ ಅಧಿಕೃತ ವೆಬ್‌ಸೈಟ್‌ನ Recruitment/Career ವಿಭಾಗಕ್ಕೆ ಹೋಗಿ, ತಮಗೆ ಹೊಂದುವ ಹುದ್ದೆಯನ್ನು ಆಯ್ಕೆ ಮಾಡಿ, ಆನ್‌ಲೈನ್‌ನಲ್ಲಿ ಅರ್ಜಿ ಫಾರ್ಮ್ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಸಲ್ಲಿಸಬೇಕು.

Leave a Comment