Telegram Join My Telegram WhatsApp Join My WhatsApp

PM Internship Scheme, Best Opportunity 2026 : ಯುವಕರಿಗೆ ಉತ್ತಮ ಅವಕಾಶ, ಕೇಂದ್ರ ಸರ್ಕಾರದ ಸ್ಟೇ ಫಂಡ್ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ

PM Internship Scheme ಮೂಲಕ  ಯುವಕರಿಗೆ ದೇಶದ ಪ್ರಖ್ಯಾತ ಕಾರ್ಪೋರೇಟ್‌ ಕಂಪನಿಗಳಲ್ಲಿ ಇಂಟರ್ನ್‌ಶಿಪ್‌ ಅವಕಾಶ

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾದಂತ ಭಾರತವು ಯುವಕರಿಗೆ ಉತ್ತಮ ಉದ್ಯೋಗವನ್ನು ನೀಡುವಲ್ಲಿ ಹಾಗೂ ಉದ್ಯೋಗದ ಅನುಭವ ಕೌಶಲ್ಯ ಅಭಿವೃದ್ಧಿ ಒದಗಿಸುವ ಉದ್ದೇಶವನ್ನು ಹೊಂದಿರುವುದರಿಂದ ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆ ಎನ್ನು ಆರಂಭಿಸಿದೆ ಈ ಯೋಜನೆಯ ಮೂಲಕ ದೇಶದ ಪ್ರಖ್ಯಾತ ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಮಾಡುವ ಅವಕಾಶವನ್ನು ಯುವಕರಿಗೆ ನೀಡಲಾಗುತ್ತಿದೆ ಇದರ  ಮೂಲಕ ಯುವಕರು ಅನುಭವ ಹಾಗೂ ಕೌಶಲ್ಯತೆಯನ್ನು ಪಡೆದು ಮುಂದಿನ ಭವಿಷ್ಯವನ್ನು ಕಟ್ಟಿಕೊಳ್ಳಬಹುದು ಈ PM Internship Scheme ಯೋಜನೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 9000/- ರೂಗಳ ವರೆಗೆ ಸ್ಟೇ ಫಂಡ್ ಹಣವನ್ನು ನೀಡಲಾಗುವುದು

ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳು ಈ  PM Internship Scheme ಗೆ ಅರ್ಜಿ ಹಾಕುವುದರ ಮೂಲಕ ನೇರವಾಗಿ ಕೈಗಾರಿಕೆಯ ಅನುಭವವನ್ನು ಪಡೆಯಬಹುದು ಜೊತೆಯಲ್ಲಿ ಇದೇ ಕ್ಷೇತ್ರದಲ್ಲಿ ಭವಿಷ್ಯದಲ್ಲಿ ಉದ್ಭವವಾಗುವ ಉದ್ಯೋಗವಕಾಶಗಳನ್ನು ಸಹ ಪಡೆಯಬಹುದಾಗಿದೆ ಅಂದರೆ ವಿಶೇಷವಾಗಿ ಎಸೆಸೆಲ್ಸಿ‌, ಪಿಯುಸಿ, ಐಟಿಐ, ಡಿಪ್ಲೋಮಾ, ಪದವಿ ಇಂತಹ ತಾಂತ್ರಿಕ ಹಾಗೂ ತಾಂತ್ರಿಕೇತರ ಶಿಕ್ಷಣವನ್ನು ಹೊಂದಿರುವ ಯುವಕರಿಗೆ ಇದು ಸುವರ್ಣ ಅವಕಾಶವಾಗಿದೆ

PM Yashaswi Yojana, Best Scheme For Students: ಪ್ರಧಾನ ಮಂತ್ರಿ ಯಶಸ್ವಿ ಯೋಜನೆ.‌ ವರ್ಷಕ್ಕೆ 3 ಲಕ್ಷದವರೆಗೆ ವಿದ್ಯಾರ್ಥಿವೇತನ+ ಉಚಿತ ಲ್ಯಾಪ್‌ ಟಾಪ್.

ಪ್ರಧಾನಮಂತ್ರಿ ಇಂಟರ್ನ್ ಶಿಪ್ ಯೋಜನೆ ಎಂದರೆ ಏನು ? 

ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆಯು (PM Internship Scheme) ಕೇಂದ್ರ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಬರುವ ಮಹತ್ವದ ಯೋಜನೆಯಾಗಿದೆ ಕಾರ್ಪೊರೇಟ್ ಕ್ಷೇತ್ರದಲ್ಲಿ ಉತ್ತಮ ಅನುಭವ ನೀಡುವುದು ಕೌಶಲ್ಯತೆಯನ್ನು ಸುಧಾರಿಸುವುದು ಹಾಗೂ ದೇಶದ ಪ್ರಖ್ಯಾತ ಕಂಪನಿಗಳಲ್ಲಿ ಆರರಿಂದ 12 ತಿಂಗಳುಗಳವರೆಗೆ ತರಬೇತಿಯನ್ನು ನೀಡಿ ಅವರ ಮುಂದಿನ ಉದ್ಯೋಗದ ದಾರಿಯನ್ನು ಸುಲಭಗೊಳಿಸುವ ಯೋಜನೆಯಾಗಿದೆ ಅಂದರೆ ಈ ಅವಧಿಯಲ್ಲಿ ಭವಿಷ್ಯದ ಉದ್ಯೋಗಕ್ಕೆ ಬೇಕಾದಂತಹ ತರಬೇತಿಯನ್ನು ಉತ್ತಮ ರೀತಿಯಲ್ಲಿ ನೀಡಲಾಗುತ್ತದೆ

ಈ ಯೋಜನೆಯ ಮುಖ್ಯ ಉದ್ದೇಶಗಳು ಈ ಕೆಳಕಂಡಂತಿವೆ

  • ಕೌಶಲ್ಯತೆಯ ಕೊರತೆಯನ್ನು ಹೊಂದಿರುವ ಯುವಕರಿಗೆ ಉದ್ಯೋಗ ಕೌಶಲ್ಯವನ್ನು ನೀಡಲಾಗುತ್ತದೆ
  • ಇಂದಿನ ಜಗತ್ತಿನಲ್ಲಿ ಕಾರ್ಪೊರೇಟ್ ಕ್ಷೇತ್ರದಲ್ಲಿ ಅನುಭವ ಇದ್ದರೆ ಮಾತ್ರ ಅವರಿಗೆ ಆದ್ಯತೆಯನ್ನು ನೀಡಲಾಗುತ್ತದೆ ಆದುದರಿಂದ ಕಾರ್ಪೊರೇಟ್ ಕ್ಷೇತ್ರದಲ್ಲಿ ಉತ್ತಮ ರೀತಿಯ ಅನುಭವವನ್ನು ಗಳಿಸಲು ಈ ಯೋಜನೆ ಸಹಕರಿಸುತ್ತದೆ
  • ಈ PM Internship Scheme ಯೋಜನೆಗೆ ಅರ್ಹತೆಯನ್ನು ಪಡೆಯುವುದರಿಂದ ಭವಿಷ್ಯದಲ್ಲಿ ಈ ಕ್ಷೇತ್ರದಲ್ಲಿ ಉದ್ಭವಿಸಬಹುದಾದ ಉದ್ಯೋಗವನ್ನು ಆದಷ್ಟು ಬೇಗ ಪರಿಣಾಮಕಾರಿಯಾಗಿ ಪಡೆಯಬಹುದು ಈ ಇಂಟರ್ನ್ಶಿಪ್ ಉದ್ಯೋಗ ಸಿಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ
  • ಶಿಕ್ಷಣವನ್ನು ಮುಗಿಸಿ ಉದ್ಯೋಗವನ್ನು ಹುಡುಕುತ್ತಿರುವ ಯುವಕರಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು ಇಂಟರ್ನ್‌ಶಿಪ್ ಮಾಡುವ ಸಮಯದಲ್ಲೇ ಬೇರೆ ರೀತಿಯ ಕೆಲಸವನ್ನು ನೋಡಿಕೊಳ್ಳಬಹುದು
  • ದೇಶದ ಯುವಕರು ಶಿಕ್ಷಣವನ್ನು ಮುಗಿಸಿ ಉದ್ಯೋಗವನ್ನು ಪಡೆಯುವುದರ ನಡುವೆ ಹೆಚ್ಚು ಸಮಯವನ್ನು ವ್ಯರ್ಥ ಮಾಡುತ್ತಾರೆ ಈ ಇಂಟರ್ನ್ಶಿಪ್ ಮಾಡುವುದರ ಮೂಲಕ ಶಿಕ್ಷಣ ಮತ್ತು ಉದ್ಯೋಗದ ನಡುವಿನ ಇರುವ ಅಂತರವನ್ನು ಕಡಿಮೆ ಮಾಡಬಹುದು

ಈ ಯೋಜನೆಯ ಮೂಲಕ ಎಷ್ಟು ಸ್ಟೇ ಫಂಡ್ ಮೊತ್ತ ಸಿಗುತ್ತದೆ

ಈ PM Internship Scheme ಯೋಜನೆಯಡಿಯಲ್ಲಿ ಅರ್ಹ ಗೊಳ್ಳುವ ಅಭ್ಯರ್ಥಿಗಳಿಗೆ ಮಾಸಿಕ ಅಂದರೆ ತಿಂಗಳಿಗೊಮ್ಮೆ ಸ್ಟೇ ಫಂಡ್ ದೊರೆಯುತ್ತದೆ ವಿವರ ಈ ಕೆಳಕಂಡಂತಿದೆ

ಪಾಲಿನ ವಿವರ ಸಿಗುವ ಮೊತ್ತ (ರೂಗಳಲ್ಲಿ)
ಕೇಂದ್ರ ಸರ್ಕಾರದ ಪಾಲು 8,100/- ರೂಗಳು
ಕಾರ್ಪೊರೇಟ್ ಕಂಪನಿಯ ಪಾಲು 900/- ರೂಗಳು
ತಿಂಗಳಿಗೆ ಸಿಗುವ ಒಟ್ಟು ಸ್ಟೇ ಫಂಡ್‌ ಮೊತ್ತ 9,000/- ರೂಗಳು
ಅರ್ಹತೆಯ ನಂತರ ಒಂದು ಬಾರಿ ನೀಡುವ ಸ್ಟೇ ಫಂಡ್‌ ಮೊತ್ತ 6,000/- ರೂಗಳು

ಪ್ರಸ್ತುತ ಮಾಹಿತಿಯ ಪ್ರಕಾರ ಸ್ಟಫ್ ಅಂಡ್ ಮಠದಲ್ಲಿ ಕೆಲವು ವ್ಯತ್ಯಾಸಗಳು ಉಂಟಾಗಬಹುದು ಏಕೆಂದರೆ ಇಂಟರ್ನ್‌ಶಿಪ್ ಅವಧಿ ಹಾಗೂ ಕೆಲಸದ ಕ್ಷೇತ್ರವನ್ನು ಅರ್ಹಗೊಂಡ ನಂತರ ನಿರ್ಧರಿಸುವುದರಿಂದ ಸ್ಟೇ ಫಂಡ್ ಮೊತ್ತವು ಬದಲಾಗಬಹುದು

PM Internship Scheme ನ ಇಂಟರ್ನ್‌ಶಿಪ್ ಅವಧಿ

ಈ ಇಂಟರ್ನ್‌ಶಿಪ್ ಅವಧಿಯು ಕಾರ್ಪೊರೇಟ್ ಕಂಪನಿ ಹಾಗೂ ಕಂಪನಿಯ ಕ್ಷೇತ್ರದ ಆಧಾರದ ಮೇಲೆ ಬದಲಾಗಬಹುದು ಅಂದರೆ ತಾಂತ್ರಿಕ ಹಾಗೂ ತಾಂತ್ರಿಕೇತರ ಕ್ಷೇತ್ರದ ಕಂಪನಿಗಳು ಇಂಟರ್ನ್‌ಶಿಪ್ ಅವಧಿಯನ್ನು ಬದಲಾವಣೆಗೆ ಒಳಪಡಿಸಬಹುದು ಆದರೆ ಯಾವುದೇ ಕಂಪನಿಗಳಾದರೂ ಕನಿಷ್ಠ ಆರು ತಿಂಗಳುಗಳಿಂದ ಕನಿಷ್ಠ 12 ತಿಂಗಳವರೆಗೆ ಇಂಟರ್ನ್‌ಶಿಪ್ ಅನ್ನು ನೀಡುತ್ತಾರೆ

ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು

ಈ  PM Internship Scheme ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೆಲವು ಅರ್ಹತಮಾನದಂಡಗಳನ್ನು ಹೊಂದಿರಬೇಕಾಗುತ್ತದೆ ಆ ಅಂಶಗಳು ಈ ಕೆಳಕಂಡಂತಿವೆ

ಶೈಕ್ಷಣಿಕ ವಿದ್ಯಾರ್ಹತೆ : 10ನೇ ತರಗತಿ ಪಾಸ್ ದ್ವಿತೀಯ ಪಿಯುಸಿ ಪಾಸ್ ಐಟಿಐ ಫಿಟ್ಟರ್ ಅಥವಾ ಎಲೆಕ್ಟ್ರಾನಿಕ್ ಡಿಪ್ಲೋಮಾ ಇತರ ಯಾವುದೇ ಪದವಿ

ವಯೋಮಿತಿ ಅರ್ಹತೆ : ಈ PM Internship Scheme ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯಸ್ಸು ಕನಿಷ್ಠ 21 ವರ್ಷದಿಂದ ಗರಿಷ್ಠ 24 ವರ್ಷ ವಯೋಮಿತಿಯನ್ನು ಹೊಂದಿರಬೇಕು

ಯೋಜನೆಗೆ ಅರ್ಜಿ ಸಲ್ಲಿಸುವ ಮುನ್ನ ಹೊಂದಿರಬೇಕಾದ ಶರತ್ತುಗಳು : 

  1. PM Internship Scheme ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಭಾರತ ದೇಶದ ನಾಗರಿಕನಾಗಿರಬೇಕು
  2. ಯಾವುದೇ ಇತರ ಕ್ಷೇತ್ರದಲ್ಲಿ ಪೂರ್ಣ ಕಾಲಿಕ ಅಂದರೆ ಫುಲ್ ಟೈಮ್ ಉದ್ಯೋಗದಲ್ಲಿ ಇರಬಾರದು
  3. ಅಂತೆಯೇ ಪೂರ್ಣಕಾಲಿಕ ಶಿಕ್ಷಣವನ್ನು ವ್ಯಾಸಂಗ ಮಾಡುತ್ತಿರಬಾರದು
  4. ಅಂದರೆ ಅಭ್ಯರ್ಥಿಯು ಈಗಾಗಲೇ ಉತ್ತೀರ್ಣರಾಗಿದ್ದು ಉದ್ಯೋಗದ ಹುಡುಕಾಟದಲ್ಲಿ ಇರುವವರಿಗೆ ಈ ಯೋಜನೆಯು ಅನ್ವಯಿಸುತ್ತದೆ

ಪೂರ್ಣಕಾಲಿಕ ಉದ್ಯೋಗದಲ್ಲಿರದೆ ಪೂರ್ಣಕಾಲಿಕ ಶಿಕ್ಷಣವನ್ನು ಪಡೆಯುತ್ತಿರದೇ ಇರುವ ಅಭ್ಯರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು

ಯಾವ ಯಾವ ಕ್ಷೇತ್ರಗಳಲ್ಲಿ ಇಂಟರ್ನ್‌ಶಿಪ್ ಸಿಗುತ್ತದೆ

PM Internship Scheme ಗೆ ಅರ್ಹತೆಗೊಂಡ ನಂತರ ದೇಶದ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಇಂಟರ್ನ್‌ಶಿಪ್ ಅವಕಾಶವನ್ನು ನೀಡಲಾಗುತ್ತದೆ ಈ ವಿವಿಧ ಕ್ಷೇತ್ರಗಳೆಂದರೆ

  • ಫೈನಾನ್ಸ್
  • ಟೆಲಿಕಾಂ
  • ಎನರ್ಜಿ ಸೆಕ್ಟರ್
  • ಮ್ಯಾನುಫ್ಯಾಕ್ಚರಿಂಗ್
  • ಆಟೋಮೊಬೈಲ್
  • ಐಟಿ ಕಂಪನಿ
  • ಹಾಸ್ಪಿಟಾಲಿಟಿ
  • ಟ್ರಾವೆಲ್
  • ಬ್ಯಾಂಕಿಂಗ್
  • ರಿಟೇಲ್

ಇನ್ನೂ ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ ದೊರೆಯುತ್ತದೆ

ಅಗತ್ಯ ದಾಖಲೆಗಳು

  • ಆಧಾರ್ ಕಾರ್ಡ್
  • ಶೈಕ್ಷಣಿಕ ಪ್ರಮಾಣ ಪತ್ರಗಳು
  • ಪಾಸ್ಪೋರ್ಟ್ ಸೈಜ್ ಫೋಟೋ
  • ಬ್ಯಾಂಕ್ ಖಾತೆಯ ವಿವರಗಳು
  • ಮೊಬೈಲ್ ಸಂಖ್ಯೆ
  • ಇಮೇಲ್ ಐಡಿ
  • ರೆಸ್ಯೂಮ್ (ಅನ್ವಯಿಸಿದಲ್ಲಿ)

ಹಾಗೂ ಇನ್ನಿತರೆ ಅನ್ವಯವಾಗುವ ಪ್ರಮಾಣಪತ್ರಗಳು

ಈ ಯೋಜನೆಗೆ ಅರ್ಜಿ ಸಲ್ಲಿಕೆ ವಿಧಾನ

ಈ  PM Internship Scheme ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹಂತವಾರು ನಿಯಮಗಳನ್ನು ಪಾಲಿಸಬೇಕಾಗುತ್ತದೆ

  • ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲು ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವುದರ ಮೂಲಕ ಅರ್ಹತಾ ಮಾನದಂಡಗಳನ್ನು ಪೂರೈಸಬೇಕಾಗುತ್ತದೆ
  • ನಂತರ ಹೊಸ ಖಾತೆ ತೆರೆ ಎಂಬಲ್ಲಿ ಕ್ಲಿಕ್ ಮಾಡುವುದರ ಮೂಲಕ ನೀವು ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆಗೆ ನೋಂದಾವಣೆಗೊಳ್ಳಬೇಕಾಗುತ್ತದೆ
  • ನೋಂದಣಿಗೊಂಡ ನಂತರ ನಿಮಗೆ ನೋಂದಣಿ ಸಂಖ್ಯೆಯು ಬರುತ್ತದೆ ಇದನ್ನು ಉಪಯೋಗಿಸುವುದರ ಮೂಲಕ ಲಾಗಿನ್ ಆಗಿ ತೆರೆಯುವ ಅರ್ಜಿಯನ್ನು ನಿಮ್ಮ ವೈಯಕ್ತಿಕ ವಿವರಗಳು ಹಾಗೂ ಶೈಕ್ಷಣಿಕ ವಿವರಗಳೊಂದಿಗೆ ಭರ್ತಿ ಮಾಡಿ
  • ಅರ್ಜಿ ನಮೂನೆಯಲ್ಲಿ ಕೇಳಲಾಗುವ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾಗುತ್ತದೆ
  • ತಮ್ಮ ಆಸಕ್ತಿಯ ಆಧಾರದ ಮೇಲೆ ನೀವು ಇಂಟರ್ನ್‌ಶಿಪ್ ಪಡೆಯಲು ಬಯಸುವ ಕ್ಷೇತ್ರವನ್ನು ಆಯ್ಕೆ ಮಾಡಿ
  • ಎಲ್ಲ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಿದ ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಿ ಬರುವ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಇಟ್ಟುಕೊಳ್ಳಿ

PM Internship Scheme ಗೆ  ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ

ಈ PM Internship Scheme  ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಅರ್ಜಿಗಳನ್ನು ಕ್ರೂಢೀಕರಿಸಿ ಪರಿಶೀಲನೆಯ ಮೂಲಕ ಆಯ್ಕೆ ಮಾಡಲಾಗುತ್ತದೆ ಈ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಯನ್ನು ಪರಿಶೀಲಿಸುವುದು ಅಭ್ಯರ್ಥಿಗಳ ಆಸಕ್ತಿ ಕ್ಷೇತ್ರವನ್ನು ಪರಿಶೀಲಿಸುವುದು ಇಂಟರ್ನ್‌ಶಿಪ್ ಬಯಸುವ ಸ್ಥಳದ ವಿವರಣೆಯನ್ನು ನೀಡುವುದು ಹಾಗೂ ಅಭ್ಯರ್ಥಿಗಳಿಗೆ ತಮ್ಮ ಶೈಕ್ಷಣಿಕ ಅರ್ಹತೆಗೆ ಲಭ್ಯವಿರುವ ಅವಕಾಶಗಳನ್ನು ಕ್ರೂಢೀಕರಿಸಿ ಪರಿಶೀಲನೆ ಮಾಡಿದ ನಂತರ ಆಯ್ಕೆ ಮಾಡಲಾಗುತ್ತದೆ

ಈ ಯೋಜನೆಯಿಂದ ಸಿಗುವ ಪ್ರಮುಖ ಪ್ರಯೋಜನಗಳು

  • ದೊಡ್ಡ ದೊಡ್ಡ ಕಾರ್ಪೊರೇಟ್ ಕಂಪನಿಗಳಲ್ಲಿ ಕೆಲಸ ಮಾಡಿದ ಅನುಭವ ಸಿಗುತ್ತದೆ
  • ಇಂಟರ್ನ್‌ಶಿಪ್ ಮುಗಿದ ನಂತರ ನೀವು ಇಂಟರ್ನ್ಶಿಪ್ ಮಾಡಿದ ಕ್ಷೇತ್ರಗಳಲ್ಲಿ ಆದಷ್ಟು ಬೇಗ ಉದ್ಯೋಗಾವಕಾಶ ಸಿಗುತ್ತದೆ
  • ಈ PM Internship Scheme ಅರ್ಜಿ ಸಲ್ಲಿಸುವ ಮೂಲಕ ಪ್ರತಿ ತಿಂಗಳು ಸ್ಟೇಫಂಡ್ ರೂಪದಲ್ಲಿ ಹಣಕಾಸಿನ ನೆರವು ಸಿಗುತ್ತದೆ
  • ಇಂಟರ್ನ್‌ಶಿಪ್ ಅನ್ನು ಯಶಸ್ವಿಯಾಗಿ ಮುಗಿಸುವುದರ ಮೂಲಕ ಪ್ರಮಾಣ ಪತ್ರ ಸೇವೆಯನ್ನು ನೀಡಲಾಗುತ್ತದೆ
  • ಇಂಟರ್ನ್‌ಶಿಪ್ ಯೋಜನೆಯಿಂದ ಅಭ್ಯರ್ಥಿಗಳಿಗೆ ಮುಂದಿನ ಉದ್ಯೋಗದಲ್ಲಿ ಬೇಕಾಗುವ ಕೌಶಲ್ಯ ಹಾಗೂ ತಾಂತ್ರಿಕ ಜ್ಞಾನವು ಲಭಿಸುತ್ತದೆ

 

ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆಯ ಅಧಿಕೃತ ವೆಬ್ಸೈಟ್ :  ಪ್ರಧಾನಮಂತ್ರಿ ಇಂಟರ್ನ್‌ಶಿಪ್‌ ಯೋಜನೆ
ಆನ್ಲೈನ್ ಮೂಲಕ ನೋಂದಣಿ ಹಾಗೂ ಅರ್ಜಿ ಸಲ್ಲಿಕೆಗೆ ಲಿಂಕ್ : ಅರ್ಜಿ ಸಲ್ಲಿಕೆ
ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು : ಇಲ್ಲಿ ಕ್ಲಿಕ್ ಮಾಡಿ

ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆಯ ಮೂಲಕ ದೇಶದ ಯುವಕರಿಗೆ ಉತ್ತಮ ರೀತಿ ಅವಕಾಶಗಳನ್ನು ಕೇಂದ್ರ ಸರ್ಕಾರವು ಒದಗಿಸುತ್ತದೆ ಶಿಕ್ಷಣವನ್ನು ಪೂರೈಸಿ, ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು ಉದ್ಯೋಗ ಜೀವನಕ್ಕೆ ಉತ್ತಮ ಬುನಾದಿಯನ್ನು ಹಾಕಿಕೊಡುತ್ತದೆ ಕಾರ್ಪೊರೇಟ್ ಕ್ಷೇತ್ರಗಳಲ್ಲಿ ಹಾಗೂ ದೇಶದ ಪ್ರಮುಖ ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಅನ್ನು ಮಾಡುವ ಮೂಲಕ ಕೌಶಲ್ಯ ಹಾಗೂ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು PM Internship Scheme ಗೆ  ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವವರು ಅವಕಾಶವನ್ನು ತಪ್ಪಿಸಿಕೊಳ್ಳದೆ ಹಿಂದೆ ಅರ್ಜಿ ಸಲ್ಲಿಸಿ ತಮ್ಮ ಇಂಟರ್ನ್‌ಶಿಪ್ ಹಾಗೂ ಭವಿಷ್ಯದ ಉದ್ಯೋಗವನ್ನು ಪಡೆಯುವ ಸಂಭವತೆಯನ್ನು ಹೆಚ್ಚಿಸಿಕೊಳ್ಳಿ

1) PM Internship Scheme ಅಡಿಯಲ್ಲಿ ಎಷ್ಟು ಸ್ಟೈಪೆಂಡ್ ಸಿಗುತ್ತದೆ?

ಈ ಯೋಜನೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ಒಟ್ಟು ₹9,000/- ವರೆಗೆ ಸ್ಟೈಪೆಂಡ್ ಸಿಗುತ್ತದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾಲು ₹8,100/- ಹಾಗೂ ಕಾರ್ಪೊರೇಟ್ ಕಂಪನಿಯ ಪಾಲು ₹900/- ಇರಬಹುದು. ಜೊತೆಗೆ ಒಂದು ಬಾರಿ ₹6,000/- ಹೆಚ್ಚುವರಿ ಸಹಾಯಧನ ದೊರೆಯುವ ಸಾಧ್ಯತೆ ಇರುತ್ತದೆ.

2) PM Internship Scheme ಗೆ ಯಾರು ಅರ್ಜಿ ಸಲ್ಲಿಸಬಹುದು?

10ನೇ ತರಗತಿ, PUC, ITI, ಡಿಪ್ಲೋಮಾ, ಪದವಿ ಅಥವಾ ತಾಂತ್ರಿಕ/ತಾಂತ್ರಿಕೇತರ ಶಿಕ್ಷಣ ಪಡೆದ ಯುವಕರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಯ ವಯಸ್ಸು ಸಾಮಾನ್ಯವಾಗಿ 21 ರಿಂದ 24 ವರ್ಷಗಳೊಳಗೆ ಇರಬೇಕು ಹಾಗೂ ಪೂರ್ಣಕಾಲಿಕ ಉದ್ಯೋಗ ಅಥವಾ ಶಿಕ್ಷಣದಲ್ಲಿರಬಾರದು.

3) PM Internship Scheme ನಲ್ಲಿ ಯಾವ ಕ್ಷೇತ್ರಗಳಲ್ಲಿ ಇಂಟರ್ನ್‌ಶಿಪ್ ಸಿಗುತ್ತದೆ?

ಈ ಯೋಜನೆಯಡಿ Finance, Telecom, Energy, Manufacturing, Automobile, IT, Hospitality, Travel, Banking ಹಾಗೂ Retail ಸೇರಿದಂತೆ ವಿವಿಧ ಪ್ರಮುಖ ಕ್ಷೇತ್ರಗಳಲ್ಲಿ ಇಂಟರ್ನ್‌ಶಿಪ್ ಅವಕಾಶಗಳನ್ನು ನೀಡಲಾಗುತ್ತದೆ.

4) PM Internship Scheme ಗೆ ಅರ್ಜಿ ಹೇಗೆ ಸಲ್ಲಿಸಬೇಕು?

ಅಭ್ಯರ್ಥಿಗಳು ಯೋಜನೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹೊಸ ಖಾತೆ ತೆರೆಯಬೇಕು. ನಂತರ ವೈಯಕ್ತಿಕ ಹಾಗೂ ಶೈಕ್ಷಣಿಕ ಮಾಹಿತಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ತಮ್ಮ ಆಸಕ್ತಿಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅರ್ಜಿಯನ್ನು ಸಲ್ಲಿಸಬಹುದು.

Read More: Jobs.

CIL Recruitment, Job Opportunity 2026 : ಕೋಲ್‌ ಇಂಡಿಯಾ ಲಿಮಿಟೆಡ್‌ ನಲ್ಲಿ ಉದ್ಯೋಗಾವಕಾಶ, ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ

NMPT Recruitment 2026, Job Opportunity : ಮೇನೇಜರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಕೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

CESCOM Recruitment 2026, Job Opportunity : ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ. ಅರ್ಜಿ ಸಲ್ಲಿಕೆಗೆ ಸಂಪೂರ್ಣ ಮಾಹಿತಿ ಇಲ್ಲಿದೆ

BEML Recruitment 2026, Big Opportunity : ಪದವೀಧರರಿಗೆ ಸುವರ್ಣಾವಕಾಶ, ಅರ್ಜಿ ವಿಧಾನ, ಅರ್ಹತೆ, ವೇತನ ಹಾಗೂ ಅರ್ಜಿ ಸಲ್ಲಿಕೆಯ ಬಗ್ಗೆ ಸಂಪೂರ್ಣ ಮಾಹಿತಿ

Leave a Comment