Telegram Join My Telegram WhatsApp Join My WhatsApp

CESCOM Recruitment 2026, Job Opportunity : ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ. ಅರ್ಜಿ ಸಲ್ಲಿಕೆಗೆ ಸಂಪೂರ್ಣ ಮಾಹಿತಿ ಇಲ್ಲಿದೆ

CESCOM Recruitment ಮೂಲಕ 200 ಅಪ್ರೆಂಟಿಸ್‌ ಹುದ್ದೆಗಳಿಗೆ ಆನ್‌ ಲೈನ್‌ ಮೂಲಕ ಅರ್ಜಿ ಆಹ್ವಾನ

ನಮಸ್ಕಾರ ಸ್ನೇಹಿತರೆ,, ವಿದ್ಯುತ್ ಸರಬರಾಜು ನಿಗಮಗಳಲ್ಲಿ ಅಗ್ರಸ್ಥಾನದಲ್ಲಿರುವ ಸೆಸ್ಕಾಂ (ಚಾಮುಂಡೇಶ್ವರಿ ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿಯು) ತನ್ನ 2026 ಅಧಿಕೃತ ನೇಮಕಾತಿ ಅಧಿಸೂಚನೆಯ ಪ್ರಕಾರ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಯನ್ನ ಆನ್ಲೈನ್ ಮೂಲಕ ಆಹ್ವಾನಿಸಲಾಗಿದೆ ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಮೈಸೂರು- ಕರ್ನಾಟಕದಲ್ಲಿ ಮತ್ತು ಜೀವನವನ್ನು ಹುಡುಕುತ್ತಿರುವ ಉದ್ಯೋಗ ಆಕಾಂಕ್ಷಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ ಮುಖ್ಯವಾಗಿ ಪದವೀಧರರು, ಅಂತೆಯೇ 2022 2023 2024 2025 ಹಾಗೂ 2026 ರ ಶೈಕ್ಷಣಿಕ ವರ್ಷಗಳಲ್ಲಿ ಉತ್ತೀರ್ಣರಾದ ಡಿಪ್ಲೋಮಾ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದ್ದು ಈ ಅವಕಾಶವನ್ನು ಬಳಸಿಕೊಳ್ಳಬಹುದು ಆಸಕ್ತ ಅಭ್ಯರ್ಥಿಗಳು 29-05-2026ರಂದು ಅಥವಾ ಮೊದಲು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ತಮ್ಮ ಸರ್ಕಾರಿ ಉದ್ಯೋಗದ ಕನಸನ್ನು ಪೂರ್ಣ ಮಾಡಿಕೊಳ್ಳಬಹುದು

BEML Recruitment 2026, Big Opportunity : ಪದವೀಧರರಿಗೆ ಸುವರ್ಣಾವಕಾಶ, ಅರ್ಜಿ ವಿಧಾನ, ಅರ್ಹತೆ, ವೇತನ ಹಾಗೂ ಅರ್ಜಿ ಸಲ್ಲಿಕೆಯ ಬಗ್ಗೆ ಸಂಪೂರ್ಣ ಮಾಹಿತಿ

CESCOM Recruitment ನ ಹುದ್ದೆಗಳ ಅಧಿಸೂಚನೆ ವಿವರಗಳು

ಸಂಸ್ಥೆಯ ಹೆಸರು : ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಮೈಸೂರು

ಒಟ್ಟು ಹುದ್ದೆಗಳ ಸಂಖ್ಯೆ : 200 ಹುದ್ದೆಗಳು

ಉದ್ಯೋಗದ ಸ್ಥಳ : ಮೈಸೂರು, ಕರ್ನಾಟಕ

ಹುದ್ದೆಗಳ ಹೆಸರು : ಅಪ್ರೆಂಟಿಸ್‌ ಹುದ್ದೆಗಳು

ವೇತನ (ತಿಂಗಳಿಗೆ) : 10,900 ಗಳಿಂದ 12300

CESCOM Recruitment ನೇಮಕಾತಿಯ ಖಾಲಿ ಹುದ್ದೆಗಳ ವಿವರ

ಹುದ್ದೆಯ ಹೆಸರು ಖಾಲಿ ಹುದ್ದೆಗಳ ಸಂಖ್ಯೆ
ಇಂಜಿನಿಯರಿಂಗ್ ಪದವೀಧರ ಅಪ್ರೆಂಟಿಸ್ 80
ತಂತ್ರಜ್ಞಾನ ಡಿಪ್ಲೋಮಾ ಅಪ್ರೆಂಟಿಸ್ 55
ಇಂಜಿನಿಯರಿಂಗ್ ಅಲ್ಲದ ಪದವೀಧರ ಅಪ್ಪ್ರೆಂಟಿಸ್ 65

 

CESCOM Recruitment ನೇಮಕಾತಿಗೆ ಸಂಬಂಧಿಸಿದ ವೇತನ (ಸ್ಟೇ ಫಂಡ್) ವಿವರ

ಹುದ್ದೆಯ ಹೆಸರು ತಿಂಗಳ ವೇತನ (ಸ್ಟೇ ಫಂಡ್) 
ಇಂಜಿನಿಯರಿಂಗ್ ಪದವೀಧರ ಅಪ್ರೆಂಟಿಸ್ 12,300/- ರೂಗಳು
ತಂತ್ರಜ್ಞಾನ ಡಿಪ್ಲೋಮಾ ಅಪ್ರೆಂಟಿಸ್ 10,900/- ರೂಗಳು
ಇಂಜಿನಿಯರಿಂಗ್ ಅಲ್ಲದ ಪದವೀಧರ ಅಪ್ಪ್ರೆಂಟಿಸ್ 12,300/- ರೂಗಳು

 

ನೇಮಕಾತಿಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತಾ ವಿವರಗಳು

ಈ CESCOM Recruitment ಗೆ  ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪದವೀಧರರು ಇಂಜಿನಿಯರಿಂಗ್ ಅಲ್ಲದ ಪದವೀಧರರು ಹಾಗೂ ಡಿಪ್ಲೋಮಾ ಹೊಂದಿರುವ ಅಭ್ಯರ್ಥಿಗಳು ಪ್ರಮುಖವಾಗಿ 2022 2023 2024 2025 ಮತ್ತು 2026 ಶೈಕ್ಷಣಿಕ ವರ್ಷದಲ್ಲಿ ಪದವಿಯನ್ನು ಪಡೆದವರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ

ಹುದ್ದೆಯ ಹೆಸರು ಹೊಂದಿರಬೇಕಾದ ಶೈಕ್ಷಣಿಕ ಅರ್ಹತೆ
ಇಂಜಿನಿಯರಿಂಗ್ ಪದವೀಧರ ಅಪ್ರೆಂಟಿಸ್ ಬಿ ಇ (B.E) ಅಥವಾ ಬಿ ಟೆಕ್‌ (B.Tech)
ತಂತ್ರಜ್ಞಾನ ಡಿಪ್ಲೋಮಾ ಅಪ್ರೆಂಟಿಸ್ ಡಿಪ್ಲೋಮಾ (Diploma)
ಇಂಜಿನಿಯರಿಂಗ್ ಅಲ್ಲದ ಪದವೀಧರ ಅಪ್ಪ್ರೆಂಟಿಸ್ ಬಿಎ (B.A) ಬಿಕಾಂ (B.Com) ಬಿಬಿಎ (B.B.A) ಬಿಸಿಎ ( B.C.A) ಬಿಎಸ್ಸಿ (B.Sc) ಪದವಿ

 

ನೇಮಕಾತಿಗೆ ಸಂಬಂಧಿಸಿದ ವಯಸ್ಸಿನ ವಿವರಗಳು

ಈ CESCOM Recruitment ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷಗಳು ಆಗಿರಬೇಕು ಗರಿಷ್ಠ ವಯೋಮಿತಿಯ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿರುವುದಿಲ್ಲ

ಅರ್ಜಿ ಶುಲ್ಕ

CESCOM Recruitment ಗೆ  ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವ ಅಗತ್ಯವಿರುವುದಿಲ್ಲ

CESCOM Recruitment ನ ಆಯ್ಕೆ ಪ್ರಕ್ರಿಯೆ

ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ನೇಮಕಾತಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ನಂತರ ಅಭ್ಯರ್ಥಿಗಳ ಅರ್ಜಿಗಳನ್ನು ಕ್ರೂಢೀಕರಿಸಿ ಶಾರ್ಟ್ ಲಿಸ್ಟ್ ಮಾಡಲಾಗುತ್ತದೆ ಹೀಗೆ ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳ ನೋಂದಾಯಿತ ಇ-ಮೇಲ್ ಐಡಿ ಮೂಲಕ ಸಂದೇಶವನ್ನು ಕಳುಹಿಸಿ ಅವರನ್ನು ದಾಖಲೆಗಳ ಪರಿಶೀಲನೆಗೆ ಕರೆಯಲಾಗುತ್ತದೆ ಅಭ್ಯರ್ಥಿಗಳು ಮೈಸೂರಿನ ಕಾರ್ಪೊರೇಟ್ ಕಚೇರಿಯ ವಿಭಾಗದಲ್ಲಿ ಬರುವ ಹೆಚ್‌ ಆರ್‌  ವಿಭಾಗದ ಜನರಲ್ ಮ್ಯಾನೇಜರ್ ಅವರ ಕಚೇರಿಯಲ್ಲಿ ತಮ್ಮ ವೈಯಕ್ತಿಕ ದಾಖಲೆ ಶೈಕ್ಷಣಿಕ ಪ್ರಮಾಣ ಪತ್ರಗಳು ವಯೋಮಿತಿ ಸಡಿಲಿಕೆ ಹಾಗೂ ಅನುಭವ ಪ್ರಮಾಣ ಪತ್ರಗಳನ್ನು ಪ್ರಮುಖ ಉದ್ಯೋಗ ದಾಖಲಾತಿಗಳ ಪರಿಶೀಲನೆಗಾಗಿ ಅಭ್ಯರ್ಥಿಗಳು ಖುದ್ದಾಗಿ ಅವರೇ ಹಾಜರಾಗಬೇಕು

ಪ್ರಮುಖ ಸೂಚನೆ:  ಯಾವ ಯಾವ ದಾಖಲೆಗಳನ್ನು ದಾಖಲೆ ಪರಿಶೀಲನೆಗೆ ತರಬೇಕು ಎಂಬ ಮಾಹಿತಿಯನ್ನು ಅಧಿಕೃತ ಅಧಿಸೂಚನೆಯಲ್ಲಿ ತಿಳಿಸಲಾಗಿರುತ್ತದೆ. (ಅಧಿಸೂಚನೆಯನ್ನು ಈ ಕೆಳಗೆ ನೀಡಲಾಗಿದೆ)

ದಾಖಲಾತಿ ಪರಿಶೀಲನೆ ಪೂರ್ಣಗೊಂಡ ನಂತರ ಅರ್ಹತಾ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ

CESCOM Recruitment ನ ಅರ್ಜಿ ಸಲ್ಲಿಕೆ ಪ್ರಕ್ರಿಯೆ

  • ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಸೆಸ್ಕಾಂನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ಹುದ್ದೆಗೆ ಬೇಕಾಗುವಂತಹ ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಪರಿಶೀಲಿಸಿಕೊಂಡು ಅರ್ಜಿ ಸಲ್ಲಿಸಬಹುದಾಗಿರುತ್ತದೆ ಅರ್ಜಿ ಸಲ್ಲಿಸುವ ಲಿಂಕನ್ನು ಕೆಳಗೆ ನೀಡಿದ್ದೇವೆ
  • ಪ್ರಮುಖವಾಗಿ ಆನ್ಲೈನ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು ಸಂವಹನದ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕಾಗುತ್ತದೆ ಅದರ ಜೊತೆಯಲ್ಲಿ ಗುರುತಿನ ಪ್ರಮಾಣ ಪತ್ರ ಶೈಕ್ಷಣಿಕ ಪ್ರಮಾಣ ಪತ್ರ ರೆಸ್ಯುಮ್ ಯಾವುದೇ ಅನುಭವ ಪ್ರಮಾಣ ಪತ್ರ ಹಾಗೆ ವಯಸ್ಸಿನ ಪ್ರಮಾಣ ಪತ್ರ ಸಂಬಂಧಿಸಿದಂತೆ ಎಲ್ಲ ದಾಖಲತೆಗಳನ್ನು ಸ್ಕ್ಯಾನ್ ಮಾಡಿ ಇಟ್ಟುಕೊಳ್ಳಿ
  • ಸೆಸ್ಕಾಂ ಅಪ್ರೆಂಟಿಸ್ ಹುದ್ದೆಗೆ ಆನ್ಲೈನ್ ಅರ್ಜಿ ಸಲ್ಲಿಕೆಗೆ ಈ ಕೆಳಗೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡುವುದರ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ
  • ಅರ್ಜಿ ತೆರೆದ ನಂತರ ಅಲ್ಲಿ ಕೇಳಲಾಗುವ ವೈಯಕ್ತಿಕ ಮಾಹಿತಿ ವಿಳಾಸದ ಮಾಹಿತಿ ಸಂವಹನ ಶೈಕ್ಷಣಿಕ ಹಾಗೂ ಅನುಭವಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನಿಖರವಾಗಿ ಹಾಗೂ ಸ್ಪಷ್ಟವಾಗಿ ನಮೂದಿಸಿ
  • ನಂತರ ಅಪ್ಲೋಡ್ ಮಾಡಲು ಕೇಳಲಾಗುವ ಭಾವಚಿತ್ರ ಸಹಿ ವೈಯಕ್ತಿಕ ಗುರುತಿನ ಪ್ರಮಾಣ ಪತ್ರ ಶೈಕ್ಷಣಿಕ ದಾಖಲೆಗಳು ಅನುಭವಕ್ಕೆ ಸಂಬಂಧಿಸಿದ ದಾಖಲೆಗಳು ಮುಂತಾದ ಅಗತ್ಯ ದಾಖಲೆಗಳನ್ನು ಅದರ ಗರಿಷ್ಠ ಗಾತ್ರವನ್ನು ಗಮನದಲ್ಲಿಟ್ಟು ಸ್ಕ್ಯಾನ್ ಮಾಡಿಕೊಂಡು ಇಟ್ಟಿದ್ದ ಪ್ರತಿಗಳನ್ನು ಅಪ್ಲೋಡ್ ಮಾಡಿ
  • ನಂತರ ಪ್ರಿ ವ್ಯೂ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ತಾವು ನಮೂದಿಸಿರುವ ಎಲ್ಲಾ ಮಾಹಿತಿಯು ಸರಿಯಾಗಿದಿಯೇ ಎಂದು ಒಂದಲ್ಲ ಎರಡು ಬಾರಿ ಎಚ್ಚರಿಕೆಯಿಂದ ಪರಿಶೀಲಿಸಿ ಖಚಿತಪಡಿಸಿಕೊಳ್ಳಿ
  • ನಂತರ ನಿಮ್ಮ ಅನ್ವಯಿತ ವರ್ಗದ ಪ್ರಕಾರ ಆನ್ಲೈನ್ ಅರ್ಜಿ ಶುಲ್ಕವನ್ನು ಪಾವತಿಸಿ
  • ಈ ನೇಮಕಾತಿಯ ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಸಲ್ಲಿಸು ಎಂಬ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ಸ್ಕ್ರೀನ್ ಮೇಲೆ ಬರುವ ನೋಂದಣಿ ಸಂಖ್ಯೆಯನ್ನು ಬರೆದುಕೊಳ್ಳಿ ಹಾಗೂ ಈ ನೋಂದಣಿ ಸಂಖ್ಯೆ ಹಾಗೂ ವೈಯಕ್ತಿಕ ವಿವರಗಳನ್ನು ನಮೂದಿಸುವ ಮೂಲಕ ತಾವು ತಮ್ಮ ಆನ್ಲೈನ್ ಅರ್ಜಿಯನ್ನು ಪ್ರಿಂಟ್ ತೆಗೆದುಕೊಳ್ಳಬಹುದು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 29-05-2026 ಆಗಿರುವುದರಿಂದ ಕೊನೆಯ ಸಂದರ್ಭದಲ್ಲಿ ಸರ್ವರ್ ಸಮಸ್ಯೆ ಎದುರಾಗಬಹುದು ಆದ್ದರಿಂದ ಹಿಂದೆ ಅರ್ಜಿ ಸಲ್ಲಿಸಿ ಅರ್ಜಿಯನ್ನು ಡೌನ್ಲೋಡ್ ಮಾಡಿ ಇಟ್ಟುಕೊಳ್ಳಿ

CESCOM Recruitment ಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು

ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ :  08-05-2026
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 29-05-2026
ಶಾರ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಘೋಷಣೆ ಮಾಡುವ ದಿನಾಂಕ : 05-06-2026
ಶಾರ್ಟ್ ಲಿಸ್ಟ್ ಲಿಸ್ಟ್ ಮಾಡಿದ ಅಭ್ಯರ್ಥಿಗಳ ದಾಖಲೆ ಪರಿಶೀಲನೆಗೆ ನಿಗದಿಪಡಿಸಿರುವ ದಿನಾಂಕ 15-06-2026 ರಿಂದ 19-06-2026 ವರೆಗೆ ಈ ನಡುವೆ ಯಾವುದೇ ಕೆಲಸದ ದಿನದಲ್ಲಿ ಅಭ್ಯರ್ಥಿಗಳನ್ನು ದಾಖಲಾತಿಗಳ ಪರಿಶೀಲನೆಗೆ ಕರೆಯಬಹುದು

CESCOM Recruitment ಗೆ ಸಂಬಂಧಿಸಿದ ಪ್ರಮುಖ ಲಿಂಕ್‌ ಗಳು

ಅಧಿಕೃತ ಅಧಿಸೂಚನೆಯ ಪಿಡಿಎಫ್ ಅನ್ನು ಓದಲು :  CESCom Recruitment PDF
ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ :  ಅರ್ಜಿ ಸಲ್ಲಿಕೆ
ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಲು : ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ
ನಮ್ಮ ವಾಟ್ಸಪ್ ಗ್ರೂಪ್ ಸೇರಲು :  ಇಲ್ಲಿ ಕ್ಲಿಕ್ ಮಾಡಿ

ಮೈಸೂರಿನ ಪ್ರತಿಷ್ಠಿತ ವಿದ್ಯುತ್ ಸರಬರಾಜು ಕಂಪನಿ ಯಾದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಮೈಸೂರು ಈ ಸಂಸ್ಥೆಯು ತನ್ನ 2026ರ ಅಧಿಕೃತ ಅಧಿಸೂಚನೆಯ CESCOM Recruitment ಮೂಲಕ 200 ಅಪ್ಪ್ರೆಂಟಿಸ್ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಪದವಿ ಹಾಗೂ ಇಂಜಿನಿಯರಿಂಗ್ ಪದವಿಯನ್ನು ಹೊಂದಿರುವವರಿಗೆ ಈ ಅವಕಾಶವೂ ತುಂಬಾ ಉಪಯುಕ್ತವಾಗಿದೆ ಆದುದರಿಂದ ಹಿಂದೆ ಅರ್ಜಿ ಸಲ್ಲಿಸಿ ತಮ್ಮ ಸರ್ಕಾರಿ ಉದ್ಯೋಗದ ಕನಸನ್ನು ಪೂರ್ಣಗೊಳಿಸಿಕೊಳ್ಳಿ

FAQ’s Regarding CESCOM Recruitment

1. CESCOM ನೇಮಕಾತಿಯಲ್ಲಿ ಒಟ್ಟು ಎಷ್ಟು ಹುದ್ದೆಗಳಿವೆ?

ಈ ನೇಮಕಾತಿ ಮೂಲಕ ಒಟ್ಟು 200 ಅಪ್ರೆಂಟಿಸ್ ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದರಲ್ಲಿ ಇಂಜಿನಿಯರಿಂಗ್ ಪದವೀಧರ, ಡಿಪ್ಲೋಮಾ ಹಾಗೂ ಇಂಜಿನಿಯರಿಂಗ್ ಅಲ್ಲದ ಪದವೀಧರ ಅಪ್ರೆಂಟಿಸ್ ಹುದ್ದೆಗಳು ಸೇರಿವೆ.

2. CESCOM Recruitment  ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?

ಈ ನೇಮಕಾತಿಗೆ 29 ಮೇ 2026 ಕೊನೆಯ ದಿನಾಂಕವಾಗಿದ್ದು, ಆಸಕ್ತ ಅಭ್ಯರ್ಥಿಗಳು ಅದಕ್ಕೂ ಮೊದಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

3. CESCOM ಅಪ್ರೆಂಟಿಸ್ ಹುದ್ದೆಗಳಿಗೆ ಯಾರು ಅರ್ಜಿ ಸಲ್ಲಿಸಬಹುದು?

B.E/B.Tech, Diploma, B.A, B.Com, B.B.A, B.C.A ಮತ್ತು B.Sc ಪದವಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮುಖ್ಯವಾಗಿ 2022 ರಿಂದ 2026ರೊಳಗೆ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

4. CESCOM Recruitment 2026 ನಲ್ಲಿ ವೇತನ ಎಷ್ಟು ನೀಡಲಾಗುತ್ತದೆ?

ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹10,900 ರಿಂದ ₹12,300 ವರೆಗೆ ಸ್ಟೈಪೆಂಡ್ (Stipend) ನೀಡಲಾಗುತ್ತದೆ. ಹುದ್ದೆಯ ಪ್ರಕಾರ ವೇತನದಲ್ಲಿ ವ್ಯತ್ಯಾಸ ಇರಲಿದೆ.

5. CESCOM Recruitment ಗೆ ಅರ್ಜಿ ಶುಲ್ಕ ಇದೆಯೇ?

ಇಲ್ಲ. CESCOM Recruitment 2026 ಗೆ ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ, ಎಲ್ಲಾ ಅಭ್ಯರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಬಹುದು.

6. CESCOM Recruitment 2026 ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

ಅಭ್ಯರ್ಥಿಗಳ ಅರ್ಜಿಗಳನ್ನು ಪರಿಶೀಲಿಸಿ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ನಂತರ ದಾಖಲೆ ಪರಿಶೀಲನೆಗೆ ಕರೆಸಿ, ಅರ್ಹತಾ ಪಟ್ಟಿಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

7. CESCOM Recruitment 2026 ಗೆ ಕನಿಷ್ಠ ವಯೋಮಿತಿ ಎಷ್ಟು?

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷಗಳು ಇರಬೇಕು. ಗರಿಷ್ಠ ವಯೋಮಿತಿಯ ಕುರಿತು ಅಧಿಸೂಚನೆಯಲ್ಲಿ ಸ್ಪಷ್ಟ ಮಾಹಿತಿ ನೀಡಲಾಗಿಲ್ಲ.

8. CESCOM Recruitment 2026 ಗೆ ಹೇಗೆ ಅರ್ಜಿ ಸಲ್ಲಿಸಬೇಕು?

ಅಭ್ಯರ್ಥಿಗಳು CESCOM ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ, ಅಧಿಸೂಚನೆಯನ್ನು ಓದಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Read More: Jobs.

RLDA Recruitment 2026, Big Opportunity: ಸೈಟ್‌ ಇಂಜಿನಿಯರ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭ

IPPB Recruitment 2026, Big Opportunity : ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ ನೇಮಕಾತಿಗೆ ಆನ್‌ ಲೈನ್‌ ನಲ್ಲು ಅರ್ಜಿ ಸಲ್ಲಿಕೆ ಆರಂಭ, ಇಂದೇ ಅರ್ಜಿ ಸಲ್ಲಿಸಿ

Veerashaiva Sahakari Bank Recruitment 2026, Big Opportunity: ಜೂನಿಯರ್ ಅಸಿಸ್ಟೆಂಟ್ ಹಾಗೂ ಅಟೆಂಡೆಂಟ್ ಪೋಸ್ಟ್ ಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಆಹ್ವಾನ

IRIDO Recruitment 2026, Big Opportunity: 6300 ಚಾಲಕ ಹಾಗೂ ಮಲ್ಟಿ ಟಾಸ್ಕಿಂಗ್‌ ಸ್ಟಾಫ್‌ ನೇಮಕಾತಿಗೆ ಅರ್ಜಿ ಸಲ್ಲಿಕೆ ಆರಂಭ

Union Bank Recruitment 2026, Big Opportunity: ಅಪ್ರೆಂಟೈಸ್‌ ಹುದ್ದೆಗಳ ಬೃಹತ್‌ ನೇಮಕಾತಿ. ಇಂದೇ ಅರ್ಜಿ ಸಲ್ಲಿಸಿ.

Leave a Comment