ಸರ್ಕಾರದ ಈ ಹೊಸ ತಂತ್ರಾಂಶದಿಂದ ರೈತರಿಗೆ ಉಪಯೋಗ (Bhoomi Online Portal)
ಸ್ನೇಹಿತರೆ ನಮಸ್ಕಾರ ನೀವು ಏನಾದರೂ ತಮ್ಮ ಜಮೀನಿಗೆ ಸಂಬಂಧಿಸಿದ ದಾಖಲಾತಿಗಳನ್ನು ವೀಕ್ಷಿಸಬೇಕು ಅಥವಾ ಖಾತೆ ಬದಲಾವಣೆ ಮಾಡಿಸಬೇಕೆ ಮುಖ್ಯವಾಗಿ ಜಮೀನಿನ ಪಹಣಿ ನೋಡಬೇಕೇ ನಿಮ್ಮ ಹೊಲಗಳಿಗೆ ಹೋಗುವ ದಾರಿಯ ನಕ್ಷೆ ಅಥವಾ ವಿಸ್ತೀರ್ಣದ ಮಾಹಿತಿಯನ್ನು ಪಡೆಯಬೇಕೇ ಆಗಿದ್ದಲ್ಲಿ ಇನ್ನು ಮುಂದೆ ತಹಸೀಲ್ದಾರ್ ಕಚೇರಿ, ನಾಡಕಚೇರಿ ಅಥವಾ ನೆಮ್ಮದಿ ಕೇಂದ್ರಗಳಿಗೂ ಹೋಗಬೇಕಾಗಿಲ್ಲ ಅಥವಾ ಮಧ್ಯವರ್ತಿಗಳಿಗೆ ಹೆಚ್ಚಿನ ಹಣ ನೀಡಿ ಮೋಸ ಹೋಗಬೇಕಾಗಿಲ್ಲ ಕರ್ನಾಟಕ ಸರ್ಕಾರವು ಭೂಮಿ ತಂತ್ರಾಂಶ (Bhoomi Online Portal)ವನ್ನು ಜಾರಿಗೆ ತಂದಿದ್ದು ಈ ತಂತ್ರಾಂಶದ ಮೂಲಕ ತಮ್ಮ ಜಮೀನಿಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ಮನೆಯಲ್ಲಿಯೇ ಕುಳಿತು ಮೊಬೈಲ್ ನಿಂದ Bhoomi Online Portal ಅನ್ನು ಸುಲಭವಾಗಿ ವೀಕ್ಷಿಸಬಹುದು ಇದಕ್ಕೆ ಸಂಬಂಧಪಟ್ಟ ಎಲ್ಲ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸಿದ್ದೇವೆ ಸಂಪೂರ್ಣ ಮಾಹಿತಿಯನ್ನು ಓದುವ ಮೂಲಕ ತಂತ್ರಾಂಶದ ಉಪಯೋಗವನ್ನು ಪಡೆದುಕೊಳ್ಳಿ
ರೈತರು ದೇಶದ ಬೆನ್ನೆಲುಬು ರೈತರು ಉತ್ಪಾದಿಸುವ ಕೃಷಿ ಪದಾರ್ಥಗಳನ್ನು ತಿಂದು ನಾವೆಲ್ಲ ಜೀವಿಸಬೇಕಾಗಿದೆ ಅಂತಹ ಅನ್ನದಾತರು ತಮ್ಮ ಜಮೀನಿನ ದಾಖಲೆಗಳನ್ನು ಪಡೆಯಲು ಹಲವಾರು ಕಚೇರಿಗೆ ಸುತ್ತುವ ಅಗತ್ಯತೆ ಇಲ್ಲ ಕರ್ನಾಟಕ ಸರ್ಕಾರವು ರೈತರ ಅನುಕೂಲಕ್ಕಾಗಿ ಭೂಮಿ ಆನ್ಲೈನ್ ಪೋರ್ಟಲ್ ಎಂಬ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದು ಜಮೀನಿನ ಮಾಹಿತಿಯನ್ನು ನಮೂದಿಸಿರುವ ಮೂಲಕ ಕೇವಲ ಐದು ನಿಮಿಷಗಳಲ್ಲಿ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕವೇ ಮನೆಯಲ್ಲೇ ಕುಳಿತು ಎಲ್ಲಾ ಭೂಮಿಗೆ ಸಂಬಂಧಿಸಿದ ದಾಖಲಾತಿಗಳನ್ನು ಸ್ವತಹ ಡೌನ್ಲೋಡ್ ನೀವೇ ಮಾಡಿಕೊಳ್ಳಬಹುದು.
| Read More :Raita Siri Yojane 2026, Best Scheme : ಕರ್ನಾಟಕ ಸರ್ಕಾರದ ಈ ಯೋಜನೆ ರೈತರಿಗೆ ವರದಾನ, ಸಂಪೂರ್ಣ ವಿವರ ತಿಳಿಯಿರಿ |
ಭೂಮಿ ಆನ್ಲೈನ್ ಪೋರ್ಟಲ್ ಎಂದರೆ ಏನು
ಈ ಮೊದಲು ಭೂಮಿಗೆ ಸಂಬಂಧಿಸಿದ ಎಲ್ಲ ದಾಖಲಾತಿಗಳನ್ನು ಕೈಬರಹದಲ್ಲಿ ನಿರ್ವಹಿಸಿ ಸಂಗ್ರಹಿಸಲಾಗುತ್ತಿತ್ತು ಹಾಗೂ ನಿರ್ವಹಿಸಲಾಗುತ್ತಿತ್ತು ಆದರೆ 2000 ನೇ ಇಸವಿಯ ನಂತರ ಕೈಬರಹ ಪದ್ಧತಿಯಲ್ಲಿ ಆಗುತ್ತಿದ್ದ ತೊಂದರೆ ಆಗುವ ಅಕ್ರಮಗಳನ್ನು ತಡೆಯಲು ಕರ್ನಾಟಕ ಸರ್ಕಾರವು ಈ Bhoomi Online Portal ತಂತ್ರಾಂಶವನ್ನು ಜಾರಿಗೊಳಿಸಿತು ಈ Bhoomi Online Portal ತಂತ್ರಾಂಶದ ಮೂಲಕ ಡಿಜಿಟಲ್ ಸೇವೆಗಳನ್ನು ಪೂರೈಸುವುದರ ಜೊತೆಯಲ್ಲಿ ಪಾರದರ್ಶಕತೆಯನ್ನು ತರುವುದು ಮತ್ತು ಕಚೇರಿಗಳಿಗೆ ಸುತ್ತುವ ವ್ಯವಸ್ಥೆಯನ್ನು ಕಡಿಮೆಗೊಳಿಸಿದೆ ಇದನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿದ ಸರ್ಕಾರವು ರಾಜ್ಯದ ಎಲ್ಲಾ 175 ತಾಲೂಕುಗಳಲ್ಲಿ ಆ ತಾಲೂಕುಗಳ ಭೂ ದಾಖಲೆಗಳನ್ನು ಡಿಜಿಟಲ್ ಪ್ರತಿಗಳನ್ನು ಮಾಡುವುದರ ಮೂಲಕ ಭೂಮಿ ತಂತ್ರಾಂಶವನ್ನು ಜಾರಿಗೆ ತಂದಿದೆ ಈ ತಂತ್ರಾಂಶವು ಭೂಮಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ನೀಡುವುದರ ಜೊತೆಯಲ್ಲಿ ಪಾರದರ್ಶಕತೆ ಮತ್ತು ನಿಖರತೆಯನ್ನು ಕಾಪಾಡುತ್ತದೆ
ಈ Bhoomi Online Portal ನಿಂದ ರೈತರಿಗೆ ಲಾಭಗಳು
ಕಡಿಮೆ ಸಮಯದಲ್ಲಿ ಲೋನ್ ಮತ್ತು ಇನ್ಸೂರೆನ್ಸ್ : ರೈತರು ತಮ್ಮ ಕೃಷಿ ಜಮೀನಿನ ಮೇಲೆ ಬೆಳೆ ಸಾಲವನ್ನು ಪಡೆಯಲು ಅಥವಾ ಬೆಳೆಗಳ ರಕ್ಷಣೆ ಉದ್ದೇಶಕ್ಕಾಗಿ ಬೆಳೆ ವಿಮೆ ಮಾಡಿಸಲು ಬೇಕಾಗುವ ಮಾಹಿತಿಯನ್ನು ಸಂಪೂರ್ಣವಾಗಿ ಪಹಣಿಯಲ್ಲೇ ಪಡೆಯಬಹುದು ಈ ಪಹಣಿಯು Bhoomi Online Portal ಭೂಮಿ ಆನ್ಲೈನ್ ಪೋರ್ಟಲ್ ನಲ್ಲಿ ತಕ್ಷಣವೇ ಸಿಗುತ್ತದೆ
ಮ್ಯುಟೇಶನ್ ಸ್ಥಿತಿಗತಿಗಳು : ತಮ್ಮ ಜಮೀನು ನಿಮಗೆ ಬರುವ ಮೊದಲು ಯಾರ ಹೆಸರಿನಲ್ಲಿದ್ದು ಮತ್ತು ಯಾವ ರೀತಿಯಿಂದ ನಿಮಗೆ ಜಮೀನು ಬಂದಿದೆ ಜಮೀನು ಮಾರಾಟವಾಗಿದೆಯೇ ಕ್ರಯಕ್ಕೆ ಒಳಪಟ್ಟಿದೆಯೇ ಅಥವಾ ಉತ್ತರ ಅದಿಕಾರದ ಹಕ್ಕಿನ ಬದಲಾವಣೆಯಿಂದ ಬಂದಿದೆಯೇ ಎಂಬ ಸ್ಥಿತಿಯನ್ನು ಮನೆಯಲ್ಲೇ ಕುಳಿತು ಪರಿಶೀಲಿಸಬಹುದಾಗಿದೆ ಭೂಮಿ ಆನ್ಲೈನ್ ತಂತ್ರಾಂಶದಲ್ಲಿ ಪದ್ಧತಿ ಇದ್ದು ಜಮೀನಿನ ವ್ಯವಹಾರಗಳ ಸ್ಥಿತಿಗತಿಗಳನ್ನು Bhoomi Online Portal ಮೂಲಕ ಪರಿಶೀಲಿಸಬಹುದಾಗಿದೆ
ಕೋರ್ಟ್ ವಿವಾದಗಳ ವಿವರಗಳು : ತಮ್ಮ ಜಮೀನಿನ ಮೇಲೆ ಯಾವುದಾದರೂ ನ್ಯಾಯಾಲಯದ ದಾವೆಗಳು ಇದ್ದಾವೆಯೇ ಅಥವಾ ಯಾವುದಾದರೂ ಸಾಲ ಇದೆಯೇ ಎಂದು ಪಹಣಿ ಮೂಲಕ ಸುಲಭವಾಗಿ ಪರಿಶೀಲಿಸಬಹುದು
ಒಟ್ಟಾರಿಯಾಗಿ ಹೇಳುವುದಾದರೆ ಕೃಷಿ ಭೂಮಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ Bhoomi Online Portal ಮೂಲಕ ಪಡೆಯಬಹುದಾಗಿದೆ
ಆನ್ಲೈನ್ ನಲ್ಲಿ ಪಹಣಿ ಮತ್ತು ಮೆಟೇಶನ್ ಅನ್ನು ವೀಕ್ಷಿಸುವುದು ಹೇಗೆ
- ಮೊದಲು ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ ಆದ Bhoomi Online Portal ಲ್ಯಾಂಡ್ ರೆಕಾರ್ಡ್ಸ್ ಕರ್ನಾಟಕ ( ಕರ್ನಾಟಕ ಲ್ಯಾಂಡ್ ರೆಕಾರ್ಡ್ಸ್) ಗೆ ಭೇಟಿ ನೀಡಿ
- ವೆಬ್ಸೈಟ್ನ ಹೋಂ ಪೇಜ್ ನಲ್ಲಿ ಇರುವ ಆರ್‌ಟಿಸಿ ಸೇವೆಗಳು ಎಂಬ ವಿಭಾಗವನ್ನು ಆಯ್ಕೆ ಮಾಡಿಕೊಂಡು ಆರ್ ಟಿ ಸಿ ಮತ್ತು ಎಂ ಆರ್ ವೀಕ್ಷಣೆ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ
- ನಿಮಗೆ ಬೇಕಾಗಿರುವ ವರ್ಷದ ಆಯ್ಕೆಯನ್ನು ಆಯ್ಕೆ ಮಾಡಿ ಅಂದರೆ ನಿಮಗೆ ಈ ವರ್ಷದ ಮಾಹಿತಿ ಬೇಕೆ ಅಥವಾ ಹಳೆಯ ವರ್ಷದ ಮಾಹಿತಿ ಬೇಕೆಂಬುದನ್ನು ಎಚ್ಚರಿಕೆಯಿಂದ ಸೆಲೆಕ್ಟ್ ಮಾಡಿ
- ನಂತರ ನಿಮ್ಮ ಜಿಲ್ಲೆ ಯಾವುದು ತಾಲೂಕಿನ ಆಯ್ಕೆ ಹೋಬಳಿಯ ಮಾಹಿತಿ ಯಾವ ಗ್ರಾಮ ಮತ್ತು ಸರ್ವೆ ನಂಬರನ್ನು ನಮೂದಿಸಿರುವ ಮೂಲಕ ಗೋ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ
- ನಂತರ ಬರುವ ಪುಟದಲ್ಲಿ ಸುರ್ನೋಕ್ ಮತ್ತು ಹಿಸ್ಸಾ ನಂಬರನ್ನು ಸೆಲೆಕ್ಟ್ ಮಾಡಿ ನಿಮಗೆ ಬೇಕಾಗುವ ಅವಧಿಯನ್ನು ಆರಿಸಿ ಹೆಚ್ಚಿ ಡೀಟೇಲ್ಸ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಜಮೀನಿನ ಸಂಪೂರ್ಣ ಮಾಹಿತಿ ಅಂದರೆ ಪಹಣಿ ಮತ್ತು ನ್ಯೂಟೇಷನ್ ಪ್ರತಿಗಳು ಸ್ಕ್ರೀನ್ ನ ಮೇಲೆ ಕಾಣಿಸುತ್ತದೆ
- ಈ ದಾಖಲೆಗಳನ್ನು ವೀಕ್ಷಿಸುವ ಮತ್ತು ಪರಿಶೀಲಿಸುವ ಮೂಲಕ ತಮ್ಮ ಜಮೀನಿನ ಎಲ್ಲಾ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದು
ಭೂಮಿ ಪೋರ್ಟ್ ನಲ್ಲಿ ಉಚಿತವಾಗಿ ವೈಯಕ್ತಿಕ ಖಾತೆ ತೆರೆಯುವುದು ಸಾಧ್ಯವೇ
ಹೌದು Bhoomi Online Portal ಅಲ್ಲಿ ವ್ಯಕ್ತಿಗಳು ತಮ್ಮ ವೈಯಕ್ತಿಕವಾಗಿ ಉಚಿತವಾಗಿ ಖಾತೆಯನ್ನು ತೆರೆಯಬಹುದಾಗಿದೆ ಖಾತೆಯನ್ನು ತೆರೆಯುವ ಹಂತ ಹಂತದ ವಿಧಾನಗಳು ಈ ಕೆಳಕಂಡಂತಿದೆ
- ಮೊದಲು ಭೂಮಿ ಆನ್ಲೈನ್ ಪೋರ್ಟನ್ನು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಲಾಗಿನ್ ಪುಟವನ್ನು ಆಯ್ದುಕೊಳ್ಳಿ
- ಅಲ್ಲಿ ನಿಮಗೆ ಕಾಣಸಿಗುವ ಖಾತೆ ರಚಿಸಿ ಕ್ರಿಯೇಟ್ ಅಕೌಂಟ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ
- ಅಲ್ಲಿ ಕೇಳಲಾಗುವ ಹೆಸರು ಮೊಬೈಲ್ ನಂಬರ್ ಇಮೇಲ್ ಐಡಿ ಹಾಗೂ ಆಧಾರ್ ಸಂಖ್ಯೆಯನ್ನು ನಮೂದಿಸಿ ಓಟಿಪಿಯನ್ನು ಕಳಿಸಿ
- ನಿಮ್ಮ ಆಧಾರ್ ಕಾರ್ಡಿಗೆ ನೊಂದಣಿಯಾಗಿರುವ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ ಆ ಒಟಿಪಿಯನ್ನು ನಿಗದಿತ ಸ್ಥಳದಲ್ಲಿ ನಮೂದಿಸಿ ಪರಿಶೀಲಿಸುವ ಮೂಲಕ ಸಲ್ಲಿಸು ಎಂಬ ಬಟನ್ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಖಾತೆಯು ಯಶಸ್ವಿಯಾಗಿ ತೆರೆಯುತ್ತದೆ
- ಯೂಸರ್ ನೇಮ್ ಮತ್ತು ಪಾಸ್ವರ್ಡ್ ಗಳನ್ನು ನಮೂದಿಸುವ ಮೂಲಕ ನಿಮ್ಮ ವೈಯಕ್ತಿಕ ಖಾತೆಯಲಾಗಿ ನಿಮ್ಮ ಕೃಷಿ ಜಮೀನಿಗೆ ಸಂಬಂಧಿಸಿದ ಕಲಾತಿಗಳನ್ನು ವೈಯಕ್ತಿಕವಾಗಿ ಪರಿಶೀಲಿಸಬಹುದಾಗಿದೆ
Bhoomi Online Portal ಮೂಲಕ ಜಮೀನಿನ ನಕ್ಷೆ ನೋಡುವ ಪ್ರಕ್ರಿಯೆ
- ಮೊದಲು ಭೂಮಿ ಆನ್ಲೈನ್ ವೆಬ್ ಸೈಟಿನ ಮುಖಪುಟದಲ್ಲಿ ಆದಾಯ ನಕ್ಷೆ ವಿಭಾಗಕ್ಕೆ ಭೇಟಿ ನೀಡಿ
- ಅಲ್ಲಿ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಹಾಗೂ ಕಂದಾಯ ಗ್ರಾಮದ ಹೆಸರನ್ನು ಅಲ್ಲಿ ಸಿಗುವ ಮೆನುವಿನಿಂದ ಆಯ್ಕೆ ಮಾಡಿ
- ನಂತರ ನಮೂದಿಸಲು ಕೇಳುವ ಜಮೀನಿನ ಸರ್ವೆ ನಂಬರ್ ಹಾಗೂ ಸರ್ ನೋಟ್ ನಂಬರನ್ನು ನಮೂದಿಸುವ ಮೂಲಕ ನಂತರ ಕಾಣಸಿಗುವ ನಕ್ಷೆ ವೀಕ್ಷಣೆ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ
- ನಂತರ ಜಮೀನಿನ ಆಸ್ತಿ ಗಡಿಗಳು ಇರುವ ಆದಾಯ ನಕ್ಷೆಯು ಕಾಣಿಸುತ್ತದೆ ಇದನ್ನು ನೀವು ಪರಿಶೀಲಿಸಬಹುದು ಡೌನ್ಲೋಡ್ ಮಾಡಿಕೊಳ್ಳ ಬಹುದು ಅಗತ್ಯವಿದ್ದಲ್ಲಿ ಪ್ರಿಂಟ್ ಕೂಡ ತೆಗೆದುಕೊಳ್ಳಬಹುದು
ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಅಧಿಕೃತ ವೆಬ್ಸೈಟ್ : ಕರ್ನಾಟಕ ಕಂದಾಯ ಇಲಾಖೆ
ಭೂಮಿ ಆನ್ಲೈನ್ ಪೋರ್ಟ ವೆಬ್ಸೈಟ್ : ಭೂಮಿ ಆನ್ ಲೈನ್ ಪೋರ್ಟಲ್
ಭೂಮಿ ಆನ್ಲೈನ್ ಪೋರ್ಟಲ್ಲಿ ಖಾತೆ ರಚಿಸಲು ಇಲ್ಲಿ ಕ್ಲಿಕ್ ಮಾಡಿ : ಖಾತೆ ರಚನೆ
ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು : ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ ಸರ್ಕಾರವು ಭೂಮಿ ಆನ್ಲೈನ್ ತಂತ್ರಾಂಶವನ್ನು ಶುರು ಮಾಡುವುದರ ಮೂಲಕ ರೈತರಿಗೆ ತಮ್ಮ ಜಮೀನಿನ ದಾಖಲಾತಿಗಳನ್ನು ಡಿಜಿಟಲ್ ರೂಪದಲ್ಲಿ ವೀಕ್ಷಿಸಬಹುದಾದ ಅವಕಾಶವನ್ನು ಸೃಷ್ಟಿಸಿದೆ ಈ ಪೋರ್ಟಲ್ ನ ಮೂಲಕ ರೈತರು ಜಮೀನಿಗೆ ಸಂಬಂಧಿಸಿದೆ ಎಲ್ಲಾ ದಾಖಲಾತಿಗಳನ್ನು ಮನೆಯಲ್ಲೇ ಕುಳಿತುಕೊಂಡು ಆನ್ಲೈನ್ ನಲ್ಲಿ ಮೊಬೈಲ್ ಮೂಲಕವೇ ಪಡೆಯಬಹುದಾಗಿದೆ ಇದರಿಂದ ರೈತರು ಕಚೇರಿಗಳಿಗೆ ಅಲೆಯುವುದು ತಪ್ಪಿಸಲಾಗಿದೆ ಮತ್ತು ಜಮೀನಿನ ದಾಖಲೆಗಳ ನಿರ್ವಹಣೆ ಮತ್ತು ಖಾತೆ ಬದಲಾವಣೆ ಪ್ರಕ್ರಿಯೆಗಳಲ್ಲಿ ಹೆಚ್ಚಿನ ಪಾರದರ್ಶಕತೆಯನ್ನು ತರಲಾಗಿದ್ದು ರೈತರಿಗೆ ಈ ಡಿಜಿಟಲ್ ರೂಪದ ಸೇವೆಯು ಸಂಪೂರ್ಣ ಉಪಯೋಗವಾಗಿದೆ ಕರ್ನಾಟಕ ಸರ್ಕಾರದ ಈ ಯೋಜನೆಯ ಜಾರಿಯ ಬಗ್ಗೆ ಒಂದು ಮೆಚ್ಚುಗೆ ಇರಲಿ
Bhoomi Online Portal – FAQ’s
1) ಭೂಮಿ ಆನ್ಲೈನ್ ಪೋರ್ಟಲ್ ಎಂದರೆ ಏನು?
ಇದು ಕರ್ನಾಟಕ ಸರ್ಕಾರದ ವೆಬ್ ಸೈಟ್ ಆಗಿದ್ದು ಜಮೀನು ದಾಖಲೆಗಳನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಲು ಇರುವ ಡಿಜಿಟಲ್ ಪೋರ್ಟಲ್ ಆಗಿದೆ. ಪಹಣಿ, ಮ್ಯುಟೇಶನ್, ನಕ್ಷೆ ಮುಂತಾದ ಮಾಹಿತಿಯನ್ನು ಮೊಬೈಲ್‌ನಲ್ಲೇ ನೋಡಬಹುದು.
2) ಭೂಮಿ ಪೋರ್ಟಲ್‌ನಲ್ಲಿ ಯಾವ ಋೀತಿಯ ಮಾಹಿತಿ ಸಿಗುತ್ತದೆ?
ಪಹಣಿ (RTC), ಮ್ಯುಟೇಶನ್ ವಿವರ, ಜಮೀನಿನ ನಕ್ಷೆ, ಸರ್ವೆ ನಂಬರ್ ಮಾಹಿತಿ ಹಾಗೂ ಇನ್ನೂ ಮುಂತಾದ ಭೂ ದಾಖಲೆಗಳು ಸುಲಭವಾಗಿ ಸಿಗುತ್ತವೆ.
3) ಪಹಣಿ (RTC) ಅನ್ನು ಮೊಬೈಲ್‌ನಲ್ಲಿ ನೋಡಬಹುದೇ?
ಭೂಮಿ ಪೋರ್ಟಲ್‌ಗೆ ಹೋಗಿ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಮತ್ತು ಸರ್ವೆ ನಂಬರ್ ನಮೂದಿಸುವುದರ ಪಹಣಿಯನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು.
4) ಭೂಮಿ ಪೋರ್ಟಲ್‌ನಲ್ಲಿ ಉಚಿತ ಖಾತೆಯನ್ನು ಸಾರ್ವಜನಿಕರು ತೆರೆಯಬಹುದೇ?
ಹೌದು, ಮೊಬೈಲ್ ನಂಬರ್ ಮತ್ತು ಆಧಾರ್ OTP ಬಳಸಿ ಖಾತೆಯನ್ನು ಉಚಿತವಾಗಿ ತೆರೆಯಬಹುದು.
5) ಭೂಮಿ ಪೋರ್ಟಲ್‌ನ ಮುಖ್ಯ ಪ್ರಯೋಜನ ಯಾವುದು?
ತಹಸೀಲ್ದಾರ್ ಕಚೇರಿ ಅಥವಾ ನಾಡಕಚೇರಿಗೆ ಹೋಗದೆ ಮನೆಯಲ್ಲೇ ಜಮೀನಿನ ದಾಖಲೆಗಳನ್ನು ಪಡೆಯಬಹುದು, ಸಮಯ ಮತ್ತು ಹಣ ಎರಡೂ ಉಳಿಯುತ್ತದೆ.