Telegram Join My Telegram WhatsApp Join My WhatsApp

Bank Of Baroda Recruitments 2026, Big Opportunity : ಹುದ್ದೆಯ ವಿವರ, ಸಂಬಳ, ಆಯ್ಕೆ ವಿಧಾನ ಹಾಗೂ ಅರ್ಜಿ ಸಲ್ಲಿಕೆಯ ಬಗ್ಗೆ ಮಾಹಿತಿ

ಅಪ್ರೆಂಟಿಸ್‌ ಹುದ್ದೆಗಳಿಗೆ ಆನ್‌ ಲೈನ್‌ ಮೂಲಕ ಅರ್ಜಿ ಆಹ್ವಾನ (Bank Of Baroda Recruitments)

ನಮಸ್ಕಾರ ಸ್ನೇಹಿತರೆ, ನೀವೇನಾದರೂ ಪದವಿಯನ್ನು ಮುಗಿಸಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಹುಡುಕುತ್ತಿದ್ದೀರಾ ಹಾಗಿದ್ದರೆ ನಿಮಗೆ ಇದೊಂದು ಸುವರ್ಣ ಅವಕಾಶವಾಗಿದೆ ಬ್ಯಾಂಕ್ ಆಫ್ ಬರೋಡ ಅಖಿಲ ಭಾರತ ಖಾಲಿ ಇರುವ 5000 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದ್ದು ಕರ್ನಾಟಕದ ಅಭ್ಯರ್ಥಿಗಳು ಸೇರಿದಂತೆ ದೇಶದ ಎಲ್ಲಾ ರಾಜ್ಯದ ಅಭ್ಯರ್ಥಿಗಳು ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ಅನುಭವ ಹಾಗೂ ಆಕರ್ಷಕ ವೇತನ ಸಿಗುವುದರಿಂದ ಇಂದೇ ನೇಮಕಾತಿ ಸೂಚನೆಯನ್ನು ಓದಿ ಅರ್ಥೈಸಿಕೊಂಡು Bank Of Baroda Recruitments ಗೆ  ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ತಮ್ಮ ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗವನ್ನು ಪಡೆಯಬೇಕೆಂಬ ಗುರಿಯನ್ನು ಮುಟ್ಟಿ

SBI Bank Recruitment 2026, Big Opportunity : ಹುದ್ದೆಯ ವಿವರ, ವಿದ್ಯಾರ್ಹತೆ, ಸಂಬಳ ಹಾಗೂ ಅರ್ಜಿ ಸಲ್ಲಿಕೆ ಬಗ್ಗೆ ಮಾಹಿತಿ

Bank Of Baroda Recruitments ನ ಅಧಿ ಸೂಚನೆಯ ವಿವರಗಳು

ನೇಮಕಾತಿ ಸಂಸ್ಥೆ ಹೆಸರು :  ಬ್ಯಾಂಕ್ ಆಫ್ ಬರೋಡ ( Bank Of Baroda)
ಒಟ್ಟು ಹುದ್ದೆಗಳ ಸಂಖ್ಯೆ : 5000
ಹುದ್ದೆಗಳ ಹೆಸರು : ಅಪ್ಪ್ರೆಂಟಿಸ್ ಹುದ್ದೆಗಳು
ಕೆಲಸ ನಿರ್ವಹಣೆಯ ಸ್ಥಳ :  ಭಾರತದಲ್ಲಿಡೆ
ಮಾಸಿಕ ವೇತನ :  15,000 ಗಳು ಹಾಗೂ ಉತ್ತಮ ಭತ್ಯೆಗಳು

ಶೈಕ್ಷಣಿಕ ವಿದ್ಯಾರ್ಹತೆ (Educational Qualification)

Bank Of Baroda Recruitments ನ  ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಯಾವುದಾದರೂ ಪದವಿಯನ್ನು ಪೂರ್ಣಗೊಳಿಸಬೇಕು

ವೇತನದ ವಿವರ (Salary)

ಈ Bank Of Baroda Recruitments ಮೂಲಕ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ತಿಂಗಳಿಗೆ 15000/- ರೂಗಳು ಹಾಗೂ ಇದರ ಜೊತೆಯಲ್ಲಿ ಉತ್ತಮ ಭತ್ಯೆಗಳನ್ನು ಮಾಸಿಕವಾಗಿ ನೀಡಲಾಗುತ್ತದೆ

ವಯೋಮಿತಿ (Age Information)

Bank Of Baroda Recruitments ನ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯಸ್ಸು ಒಂದು 5 2018 ಕನಿಷ್ಠ 20 ವರ್ಷಗಳು ಆಗಿದ್ದು ಗರಿಷ್ಠ 27 ವರ್ಷ ವಯೋಮಿತಿಯನ್ನು ಹೊಂದಿರಬೇಕು

ವಯೋಮಿತಿ ಸಡಿಲಿಕೆ ವಿವರ (Age Relaxation)

ಈ Bank Of Baroda Recruitments ಗೆ ವರ್ಗದ ಪ್ರಕಾರ ವಯೋಮಿತಿ ಸಡಿಲಿಕೆ ಯನ್ನು ಭಾರತೀಯ ವಯೋಮಿತಿ ಸಡಿಲಿಕೆ ಕಾಯ್ದೆ ಪ್ರಕಾರ ನೀಡಲಾಗುವುದು ವಯೋಮಿತಿ ಸಡಿಲಿಕೆ ಮಾಹಿತಿ ಈ ಕೆಳಕಂಡಂತಿದೆ

ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು :  03 ವರ್ಷಗಳು
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು :  05 ವರ್ಷಗಳು
ಅಂಗವಿಕಲ ಸಾಮಾನ್ಯ ಅಭ್ಯರ್ಥಿಗಳು :  10 ವರ್ಷಗಳು
ಅಂಗವಿಕಲ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು :  13 ವರ್ಷಗಳು
ಅಂಗವಿಕಲ ಅಭ್ಯರ್ಥಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳು 15 ವರ್ಷಗಳು

ಆನ್ಲೈನ್ ಅರ್ಜಿ ಶುಲ್ಕ ದ ವಿವರ (Online Application Fee)

ಈ Bank Of Baroda Recruitments ಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕವನ್ನು ಅಭ್ಯರ್ಥಿಗಳು ಪಾವತಿಸಬೇಕಾಗಿರುತ್ತದೆ ಪಾವತಿಸಬೇಕಾದ ಮೊತ್ತದ ವಿವರ ಈ ಕೆಳಕಂಡಂತಿದೆ

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳು : 200/- ರೂಗಳು
ಸಾಮಾನ್ಯ ಅಭ್ಯರ್ಥಿ, ಆರ್ಥಿಕ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು, ಇತರೆ ಹಿಂದುಳಿದ ವರ್ಗಗಳ ಪುರುಷ ಅಭ್ಯರ್ಥಿಗಳು :  800/- ರೂಗಳು
ಸಾಮಾನ್ಯ ಅಭ್ಯರ್ಥಿ, ಆರ್ಥಿಕ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು, ಇತರೆ ಹಿಂದುಳಿದ ವರ್ಗಗಳ ಮಹಿಳಾ  ಅಭ್ಯರ್ಥಿಗಳು ಹಾಗೂ ತೃತೀಯಲಿಂಗಿ ಅಭ್ಯರ್ಥಿಗಳು :  600/- ರೂಗಳು
ಅರ್ಜಿ ಶುಲ್ಕವನ್ನು ಕೇವಲ ಆನ್ಲೈನ್ ಮೂಲಕವೇ ಪಾವತಿಸತಕ್ಕದ್ದು ಇತರ ಯಾವುದೇ ಪಾವತಿ ವಿಧಾನಗಳನ್ನು ಅನುಸರಿಸಿದಲ್ಲಿ ಅದನ್ನು ತಪ್ಪಿಸಿ

Bank Of Baroda Recruitments ಗೆ ಅರ್ಜಿ ಸಲ್ಲಿಸುವಿಕೆಯ ಪ್ರಕ್ರಿಯೆ ( Application Process)

  • ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲು ಬ್ಯಾಂಕ್ ಆಫ್ ಬರೋಡ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು (ಅಧಿಕೃತ ವೆಬ್ಸೈಟ್ನ ಲಿಂಕ್ ಅನ್ನು ಕೆಳಗೆ ನೀಡಿದ್ದೇವೆ)
  • ವೆಬ್ಸೈಟ್ ಇರದ ನಂತರ ವೈಯಕ್ತಿಕ ಖಾತೆಯನ್ನು ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸುವುದರ ಮೂಲಕ ಸೃಜಿಸಿಕೊಂಡು ತಮ್ಮ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಅನ್ನು ಪಡೆದುಕೊಳ್ಳಿ
  • ನಂತರ ಲಾಗಿನ್ ಆಯ್ಕೆ ಮೇಲೆ ಕ್ಲಿಕ್ ಮಾಡಿ ತಮ್ಮ ವೈಯಕ್ತಿಕ ಯೂಸರ್ ನೇಮ್ ಹಾಗೂ ಪಾಸ್ವರ್ಡ್ ಅನ್ನು ನಮೂದಿಸಿ ಲಾಗಿನ್ ಆಗಿ
  • ನಂತರ ನಿಮಗೆ ಕಾಣಿಸುವ ಅಪ್ರೆಂಟಿಸ್ ಹುದ್ದೆಗಳಿಗೆ ಆನ್ಲೈನ್ ಅರ್ಜಿ ಎಂಬಲ್ಲಿ ಕ್ಲಿಕ್ ಮಾಡಿ ಆನ್ಲೈನ್ ಅರ್ಜಿ ಬರ್ತಿಯು ತೆರೆಯುತ್ತದೆ ಅಲ್ಲಿ ನಿಮ್ಮ ಎಲ್ಲಾ ಮಾಹಿತಿಗಳಾದ ವೈಯಕ್ತಿಕ ಮಾಹಿತಿ ಶೈಕ್ಷಣಿಕ ಮಾಹಿತಿ ವಯೋಮಿತಿ ವಯೋಮಿತಿ ಸಡಿಲಿಕ್ಕೆ ಹಾಗೂ ಅನುಭವಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ನಮೂದಿಸಿ
  • ಕೇಳಲಾಗುವ ಅಗತ್ಯ ದಾಖಲಾತಿಗಳಾದ ಫೋಟೋ ಸಹಿ ಹಾಗೂ ಇನ್ನಿತರ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಸೂಚನೆ ಪ್ರತ್ಯೇಕ ದಾಖಲೆಗೆ ಪ್ರತ್ಯೇಕ pdf ಅನ್ನು ಅಪ್ಲೋಡ್ ಮಾಡಿ ತಪ್ಪಾಗಿ ಅಪ್ಲೋಡ್ ಮಾಡಬೇಡಿ
  • ತಮಗೆ ಅನ್ವಯವಾಗುವ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ
  • ನಂತರ ನೀವು ನಮೂದಿಸಿರುವ ಮಾಹಿತಿ ಹಾಗೂ ಅಪ್ಲೋಡ್ ಮಾಡಲಾಗಿರುವ ಎಲ್ಲ ದಾಖಲಾತಿಗಳನ್ನು ವೇರಿಫೈ ಮಾಡಿ ನಂತರ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಯಶಸ್ವಿಯಾಗಿ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸಿದ ನಂತರ ಸ್ಕ್ರೀನ್ನ ಮೇಲೆ ಕಾಣುವ ಅರ್ಜಿ ಸಂಖ್ಯೆ ಮತ್ತು ಅರ್ಜಿಯನ್ನು ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದು ಇಟ್ಟುಕೊಳ್ಳಿ ಭವಿಷ್ಯದಲ್ಲಿ ಇದು ತುಂಬಾ ಅವಶ್ಯಕವಾಗಿದೆ

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ ? (Selection Process)

ಆನ್ಲೈನ್ ಪರೀಕ್ಷೆ : ಈ Bank Of Baroda Recruitments ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಆನ್ಲೈನ್ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ ಈ ಪರೀಕ್ಷೆಯಲ್ಲಿ ಹುದ್ದೆಗೆ ಬೇಕಾದ ತಾಂತ್ರಿಕ ಕೌಶಲ್ಯ ಹಾಗೂ ಇನ್ನಿತರ ಸಂಬಂಧ ಪಟ್ಟ ಪ್ರಶ್ನೆಗಳಿಗೆ ಸಂಬಂಧಿಸಿದ ಪರೀಕ್ಷೆ ಇರುತ್ತದೆ

ದಾಖಲೆ ಪರಿಶೀಲನೆ : ಅಭ್ಯರ್ಥಿಗಳು ಆನ್ಲೈನ್ ಅರ್ಜಿ ಯಲ್ಲಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಲಾಗಿರುವ ದಾಖಲೆಗಳು ನೈಜವಾಗಿವೆಯೇ ಎಂದು ದಾಖಲೆ ಪರಿಶೀಲನೆ ನಡೆಸಲಾಗುತ್ತದೆ

ಸಂದರ್ಶನ : ಸಂದರ್ಶನದಲ್ಲಿ ಅಭ್ಯರ್ಥಿಗಳು ಹುದ್ದೆಗೆ ಆಯ್ಕೆಯಾಗಲು ಉತ್ತಮ ಸಂವಹನ ಕೌಶಲ್ಯಗಳನ್ನು ಹೊಂದಿದ್ದಾರೆಯೇ ಹಾಗೂ ಹುದ್ದೆಯ ಬಗ್ಗೆ ಜಾಗರೂಕತೆ ಹಾಗೂ ಸಾಮಾನ್ಯ ಜ್ಞಾನ ಇದೆಯೇ ಎಂದು ಪರಿಶೀಲಿಸಲಾಗುವುದು

Bank Of Baroda Recruitments ಗೆ ಸಂಬಂಧಿಸಿದ ಪ್ರಮುಖ ಲಿಂಕ್ ಗಳು

ಬ್ಯಾಂಕ್ ಆಫ್ ಬರೋಡದ ಅಧಿಕೃತ ನೇಮಕಾತಿ ವಿಭಾಗದ ವೆಬ್ಸೈಟ್‌ : ಬ್ಯಾಂಕ್ ಆಫ್ ಬರೋಡ
ಅಧಿಕೃತ ಅಧಿಸೂಚನೆಯ ಪಿಡಿಎಫ್ : Bank Of Baroda Recruitment Notification
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು :  ಅರ್ಜಿ ಸಲ್ಲಿಕೆ NATS    ಅರ್ಜಿ ಸಲ್ಲಿಕೆ NAPS
ನಮ್ಮ ವಾಟ್ಸಪ್ ಗ್ರೂಪ್ ಸೇರಲು :  ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ದಿನಾಂಕಗಳು (Important Dates)

ಆನ್ಲೈನ್ ಮೂಲಕ ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಕೆಗೆ ಆರಂಭದ ದಿನಾಂಕ : 19-05-2026
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 08-06-2026

ಭಾರತದ ರಾಷ್ಟ್ರೀಕೃತ ಹಾಗೂ ಸಾರ್ವಜನಿಕ ವಲಯದ ಬ್ಯಾಂಕ್ ಆದ ಬ್ಯಾಂಕ್ ಆಫ್ ಬರೋಡ ಸಂಸ್ಥೆಯು 2026 ನೇಮಕಾತಿಯಲ್ಲಿ ಸೂಚನೆ ಮೂಲಕ 5,000 ಅಪ್ರೆಂಟಿಸ್‌ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದ್ದು ಪದವಿ ಮುಗಿಸಿರುವವರು ಈ ನೇಮಕಾತಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುವುದರಿಂದ ಉತ್ತಮ ಕೌಶಲ್ಯ ಜ್ಞಾನ ಹಾಗೂ ಬ್ಯಾಂಕಿಂಗ್ ಕ್ಞಾನವು ವೃದ್ಧಿಯಾಗುತ್ತದೆ ಈ ಜ್ಞಾನವು ಸಹಕಾರಿಯಾಗುವುದರಿಂದ ಹಿಂದೆ ಅರ್ಜಿ ಸಲ್ಲಿಸಿ ತಮ್ಮ ಬ್ಯಾಂಕಿಂಗ್ ಕ್ಷೇತ್ರದ ಉದ್ಯೋಗವನ್ನು ಪಡೆಯಬೇಕೆಂಬ ಕನಸನ್ನು ನನಸಾಗಿಸಿಕೊಳ್ಳಿ

Bank Of Baroda ಆನ್‌ ಲೈನ್‌ ಪರೀಕ್ಷೆಯ ಮಾಕ್‌ ಪರೀಕ್ಷೆಗಳನ್ನು ಅಭ್ಯಸಿಸಲು ಮಾಹಿತಿ  :    ಮಾಕ್‌ ಪರೀಕ್ಷೆ ಅಭ್ಯಾಸ

Bank Of Baroda Recruitments 2026 –  FAQ’s

1) Bank Of Baroda ಅಪ್ರೆಂಟಿಸ್ ಹುದ್ದೆಗಳಿಗೆ ಯಾರು ಯಾರು ಅರ್ಜಿ ಸಲ್ಲಿಸಬಹುದು?
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯನ್ನು ಪಡೆದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

2) ಈ ನೇಮಕಾತಿಯಲ್ಲಿ  ಎಷ್ಟು ಹುದ್ದೆಗಳಿವೆ?
ಬ್ಯಾಂಕ್ ಆಫ್ ಬರೋಡವು ದೇಶಾದ್ಯಂತ 5000 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

3) ಅಭ್ಯರ್ಥಿಗಳ ವಯೋಮಿತಿ ಎಷ್ಟಿರಬೇಕು?
ಅರ್ಜಿ ಸಲ್ಲಿಸಲು ಕನಿಷ್ಠ 20 ವರ್ಷಗಳು ಮತ್ತು ಗರಿಷ್ಠ 27 ವರ್ಷ ವಯಸ್ಸು ಆಗಿರಬೇಕು. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದಂತೆ ವಯೋಮಿತಿ ಸಡಿಲಿಕೆ ಇರುತ್ತದೆ.

4) ಈ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ಹೇಗಿದೆ?
ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ, ದಾಖಲೆ ಪರಿಶೀಲನೆ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

5) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಏನು?
ಅಪ್ರೆಂಟಿಸ್ ಹುದ್ದೆಗಳಿಗೆ 08-06-2026 ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

Leave a Comment