Telegram Join My Telegram WhatsApp Join My WhatsApp

Raita Siri Yojane 2026, Best Scheme : ಕರ್ನಾಟಕ ಸರ್ಕಾರದ ಈ ಯೋಜನೆ ರೈತರಿಗೆ ವರದಾನ, ಸಂಪೂರ್ಣ ವಿವರ ತಿಳಿಯಿರಿ

ಸರ್ಕಾರದ ಯೋಜನೆಯಿಂದ ರೈತರಿಗೆ ಗುಡ್‌ ನ್ಯೂಸ್‌ (Raita Siri Yojane)

ಸ್ನೇಹಿತರೆ ನಮಸ್ಕಾರ ಇತ್ತೀಚಿನ ದಿನಗಳಲ್ಲಿ ಜನರು ಆರೋಗ್ಯ ಸುಧಾರಣೆಗೆ ಹೆಚ್ಚು ಒತ್ತನ್ನು ನೀಡುತ್ತಿದ್ದು ಆರೋಗ್ಯ ಸುಧಾರಣೆಗಾಗಿ ಹಲವು ದೈನಂದಿನ ಚಟುವಟಿಕೆಗಳು ಹಾಗೂ ಆಹಾರ ಪದ್ಧತಿಗಳನ್ನು ಅನುಸರಿಸುತ್ತಿದ್ದಾರೆ ಅದರಂತೆಯೇ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಸಹ ಹಳ್ಳಿಯಿಂದ ಹಿಡಿದು ನಗರ ಪ್ರದೇಶಗಳಲ್ಲಿ ಸಿರಿಧಾನ್ಯಗಳ ಬಳಕೆಯನ್ನು ಹೆಚ್ಚಿಸಿಕೊಂಡಿದ್ದಾರೆ ಈ ಸಿರಿಧಾನ್ಯವನ್ನು ಸೇವಿಸುವುದರಿಂದ ಆರೋಗ್ಯದ ಮಟ್ಟವು ಉತ್ತಮವಾಗಿರುವುದರಿಂದ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಆರೋಗ್ಯದ ಹಿತ ದೃಷ್ಟಿಯಿಂದ ರಾಗಿ, ನವಣೆ, ಅರ್ಕ, ಕೂಡಲು, ಸಾಮೆ, ಕೊರಳೆ ಮುಂತಾದ ಸಿರಿಧಾನ್ಯಗಳನ್ನು ಬಳಸಿ ತಯಾರಿಸುವ ಸಿರಿಧಾನ್ಯದ ಬೆಳೆಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ ಇದನ್ನೇ ಉಪಯೋಗಿಸಿಕೊಂಡು ನಮ್ಮ ರಾಜ್ಯದ ರೈತರು ಆರ್ಥಿಕವಾಗಿ ಸದೃಢರಾಗಲು ಈ ಬೆಳೆಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತಿದೆ ಇದರ ಉದ್ದೇಶದಿಂದ ಕರ್ನಾಟಕ ಸರ್ಕಾರವು ರೈತ ಸಿರಿ ಯೋಜನೆ (Raita Siri Yojane) ಯನ್ನು ಜಾರಿಗೆ ತಂದಿದೆ ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿದ್ದು ಮಾಹಿತಿಯನ್ನು ತಿಳಿದು ಯೋಜನೆಯ ಸದುಪಯೋಗಪಡಿಸಿಕೊಳ್ಳಿ

Read More : Dairy farming Loan Scheme 2026, Big Opportunity : ಯೋಜನೆಯ ವಿವರ, ಸಾಲದ ಮೊತ್ತ, ಸಬ್ಸಿಡಿ ಹಾಗೂ ಅರ್ಹತೆಯ ಬಗ್ಗೆ ಇಲ್ಲಿದೆ ಮಾಹಿತಿ

ರೈತ ಸಿರಿ ಯೋಜನೆ ಎಂದರೆ ಏನು? ಇದರಿಂದ ಸಿಗುವ ಆರ್ಥಿಕ ನೆರವು ಎಷ್ಟು

ರೈತರು ತಮ್ಮ ಕೃಷಿ ಜಮೀನಿನಲ್ಲಿ ಸಿರಿಧಾನ್ಯಗಳನ್ನು ಬೆಳೆದರೆ ಕರ್ನಾಟಕ ಸರ್ಕಾರದಿಂದ ಪ್ರತಿ ಹೆಕ್ಟರ್ ಜಮೀನಿಗೆ 10 ಸಾವಿರ ರೂಪಾಯಿಗಳ ಪ್ರೋತ್ಸಾಹ ಧನ Raita Siri Yojane ಮೂಲಕ ದೊರೆಯಲಿದೆ ಒಬ್ಬ ರೈತರು ಗರಿಷ್ಠ ಎರಡು ಹೆಕ್ಟರಿಗೆ 20 ಸಾವಿರ ವರೆಗೆ ಸಹಾಯಧನವನ್ನು ಪಡೆಯಬಹುದಾಗಿದ್ದು ಈ ಹಣವು ನೇರ ನಗದು ವರ್ಗಾವಣೆ ಅಂದರೆ ಡಿಪಿ ಮೂಲಕ ರೈತರ ಖಾತೆಗೆ ಹಣ ಜಮೆಯಾಗಲಿದೆ

ರೈತರಿಗೆ ಹಣ ಸಿಗುವ ವಿಧಾನ

ರೈತರು ತಮ್ಮ ಕೃಷಿ ಜಮೀನಿನಲ್ಲಿ ಸಿರಿಧಾನ್ಯಗಳನ್ನು ಬೆಳೆಯುವುದರ ಮೂಲಕ ಸರ್ಕಾರದಿಂದ ಸಹಾಯಧನವನ್ನು ಪಡೆಯಬಹುದಾಗಿತ್ತು ಈ ಹಣವು 2 ಕಂತುಗಳಲ್ಲಿ ರೈತರ ಖಾತೆಗೆ ಜಮಾ ಆಗುತ್ತದೆ Raita Siri Yojane ಯ ಕಂತುಗಳ ವಿವರ ಈ ಕೆಳಕಂಡಂತಿದೆ

ಮೊದಲನೇ ಕಂತು – 6,000/- ರೂಗಳು : ಸಿರಿಧಾನ್ಯ ಗಳನ್ನು ಸಂಪೂರ್ಣವಾಗಿ ಬಿತ್ತನೆ ಪ್ರಕ್ರಿಯೆಯನ್ನು ಮಾಡಿದ 30 ದಿನಗಳ ನಂತರ ಜಿಪಿಎಸ್ ಅಂದರೆ ಗ್ಲೋಬಲ್ ಪೊಜಿಶನಿಂಗ್ ಸಿಸ್ಟಮ್ ಆಧಾರಿತ ಛಾಯಾಚಿತ್ರವನ್ನು ಪರಿಶೀಲನೆ ಮಾಡಿ ಪರಿಶೀಲನೆ ಯಶಸ್ವಿಯಾದ ನಂತರ ರೈತರ ಖಾತೆಗೆ 6000 ಸಹಾಯಧನವನ್ನು Raita Siri Yojane ಮೂಲಕ ಜಮಾ ಮಾಡಲಾಗುತ್ತದೆ

ಎರಡನೇ ಕಂತು – 4,000/- ರೂಗಳು : ಈ ಸಹಾಯಧನದ ಮೊತ್ತವನ್ನು ಬೆಳೆಯು, ಕೊಯ್ಲು ಅಥವಾ ಕಟಾವು ಸಮಯದಲ್ಲಿ Raita Siri Yojane ಮೂಲಕ ಪಡೆಯಬಹುದಾಗಿರುತ್ತದೆ ಈ ಹಣವನ್ನು ಪಡೆಯಲು ಯಾವುದೇ ಜಿಪಿಎಸ್ ಪರಿಶೀಲನೆಯ ಅಗತ್ಯತೆ ಇರುವುದಿಲ್ಲ

ಸಿರಿಧಾನ್ಯಗಳ ಉದ್ಯಮ ಶುರು ಮಾಡುವುದಕ್ಕೆ 10 ಲಕ್ಷದವರೆಗೆ ಸಬ್ಸಿಡಿ ಯೋಜನೆ

ಸಹಾಯಧನದ ಮೊತ್ತ : ಸಿರಿಧಾನ್ಯದ ಬಿತ್ತನೆ ಹಾಗೂ ನಿರ್ವಹಣೆಗೆ ಬೇಕಾಗುವ ಘಟಕದ ಸ್ಥಾಪನೆಗೆ ತಗಲುವ ಯಂತ್ರೋಪಕರಣಗಳ ಒಟ್ಟು ಖರೀದಿ ವೆಚ್ಚದ ಮೇಲೆ ಶೇಕಡ 50 ರಷ್ಟು ಅಥವಾ ಗರಿಷ್ಠ 10 ಲಕ್ಷ ರೂಪಾಯಿ ಮೊತ್ತದವರೆಗೆ ಸಬ್ಸಿಡಿ Raita Siri Yojane ಯಿಂದ ಸಿಗಲಿದೆ

ಯೋಜನೆ ಪಡೆಯುವಲ್ಲಿ ಅರ್ಹತೆ : ಈ ಸಬ್ಸಿಡಿ ಯೋಜನೆಯನ್ನು ರೈತರು ನವ ಉದ್ಯಮಿಗಳು ನೊಂದಾಯಿತ ರೈತ ಸಂಘಗಳು ಅಸಹಾಯ ಗುಂಪುಗಳು ಖಾಸಗಿ ಉದ್ಯಮಿದಾರರು ಹಾಗೂ ರೈತ ಉತ್ಪಾದಕರ ಸಂಸ್ಥೆಗಳು ಈ ಸಬ್ಸಿಡಿ ಯೋಜನೆಯ ಪ್ರಯೋಜನಗಳನ್ನು Raita Siri Yojane ಯಿಂದ ಪಡೆಯಬಹುದು

Raita Siri Yojane ಗೆ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು

  • ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್
  • ಭೂ ದಾಖಲೆಗಳು (ಪಹಣಿ ಮತ್ತು ಮ್ಯುಟೇಶನ್)
  • ಬ್ಯಾಂಕ್ ಖಾತೆಯ ಜೆರಾಕ್ಸ್ ಪ್ರತಿ
  • ಪೂರ್ಣವಾದ ಕಾರ್ಯ ಯೋಜನೆ ಅಂದರೆ ಪ್ರಾಜೆಕ್ಟ್ ರಿಪೋರ್ಟ್
  • ಯಂತ್ರೋಪಕರಣಗಳ ಖರೀದಿಯ ಕೊಟೇಶನ್ (ಸಂಸ್ಕರಣ ಘಟಕವನ್ನು ನಿರ್ಮಾಣ ಮಾಡಲು)
  • ವಿದ್ಯುತ್ ಸರಬರಾಜು ಮಂಜೂರಾತಿ ಪತ್ರ (ಹತ್ತಿರದ ವಿದ್ಯುತ್ ಸರಬರಾಜು ಸಂಸ್ಥೆಯಿಂದ ಪಡೆದುಕೊಳ್ಳಬೇಕು)
  • ಸ್ಥಳೀಯ ಸಂಸ್ಥೆಯ ಪರವಾನಗಿ
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಾಗಿದ್ದರೆ ಜಾತಿ ಪ್ರಮಾಣ ಪತ್ರ ಅಗತ್ಯವಾಗಿರುತ್ತದೆ

ಕೆಲವೊಂದು ಸಂದರ್ಭದಲ್ಲಿ Raita Siri Yojane ಗೆ ಅರ್ಜಿದಾರರು ಶರತ್ತು ಮತ್ತು ನಿಬಂಧನೆಗಳ ಒಳಪಟ್ಟು ಇನ್ನೂ ಹೆಚ್ಚಿನ ದಾಖಲೆಗಳನ್ನು ಕೇಳಲಾಗಬಹುದು

Raita Siri Yojane ಯ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ

ಮೊದಲನೇ ಹಂತ : ಈ Raita Siri Yojane ಗೆ ಅರ್ಜಿ ಸಲ್ಲಿಸಲು ಬಯಸುವ ರೈತರು ಮೊದಲು ಸರ್ಕಾರದ ಅಧಿಕೃತ ವೆಬ್ಸೈಟ್ ಆದ ಗೆ ಭೇಟಿ ನೀಡಬೇಕು

ಎರಡನೇ ಹಂತ : ವೆಬ್ಸೈಟ್ ನಲ್ಲಿ ಸಿಗುವ ರೈತ ಸಿರಿ ಯೋಜನೆಯ ಎಲ್ಲಾ ಮಾಹಿತಿಯನ್ನು ಓದಿಕೊಂಡು ಅಲ್ಲಿ ಸಿಗುವ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಬೇಕು

ಮೂರನೇ ಹಂತ : ಅರ್ಜಿ ನಮೂನೆಯನ್ನು ಸಂಪೂರ್ಣವಾಗಿ ಅಲ್ಲಿ ಕೇಳಲಾಗಿರುವ ವೈಯಕ್ತಿಕ ವಿವರ ಬ್ಯಾಂಕ್ ಖಾತೆ ವಿವರ ಸಂವಹನ ವಿವರ ಜಮೀನಿನ ಮಾಹಿತಿ ಹಾಗೂ ಕಾರ್ಯಯೋಜನೆಯ ಎಲ್ಲಾ ಮಾಹಿತಿಗಳನ್ನು ಕೊಟ್ಟಿರುವ ಸ್ಥಳದಲ್ಲಿ ಸ್ಪಷ್ಟವಾಗಿ ನಿಖರವಾಗಿ ಯಾವುದೇ ತಪ್ಪುಗಳಿಲ್ಲದೆ ಸರಿಯಾಗಿ ಭರ್ತಿ ಮಾಡಿ

ನಾಲ್ಕನೇ ಹಂತ :  ಕೇಳಲಾಗುವ ಅಗತ್ಯ ದಾಖಲಾತಿ ಗಳನ್ನು ಜೆರಾಕ್ಸ್ ಪ್ರತಿಯಲ್ಲಿ ಸ್ವಯಂ ದೃಢೀಕರಣ ಮಾಡುವ ಮೂಲಕ ಲಗತಿಸಿ ಅರ್ಜಿಯನ್ನು ಸಿದ್ಧಪಡಿಸಿ

ಐದನೇ ಹಂತ : ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಿ ಅಗತ್ಯ ದಾಖಲೆ ಗಳನ್ನು ಲಗತಿಸಿದ ನಂತರ ನಿಮ್ಮ ಸ್ಥಳೀಯ ಕೃಷಿ ಕಚೇರಿ ಅಂದರೆ ರೈತ ಮಿತ್ರಕೇಂದ್ರಕ್ಕೆ ಸಲ್ಲಿಸಿ

ನೀವು Raita Siri Yojane ಗೆ ಅರ್ಜಿ ಸಲ್ಲಿಸಿದ ನಂತರ ಅಧಿಕಾರಿಗಳು ನಿಮ್ಮ ಕಾರ್ಯ ಯೋಜನೆಯ ಆಧಾರದ ಮೇಲೆ ಪರಿಶೀಲನೆ ನಡೆಸಿ ನಿಮ್ಮ ಜಮೀನಿನಲ್ಲಿ ಸಿರಿಧಾನ್ಯಗಳ ಬೆಳೆಯುವ ಅರ್ಹತೆಗಳನ್ನು ಪರಿಶೀಲಿಸಿ ನೀವು ಯೋಜನೆಗೆ ಅರ್ಹರೆ ಎಂದು ಪರಿಶೀಲನೆ ಮಾಡುತ್ತಾರೆ ನಂತರ ಬಿತ್ತನೆ ಕಾರ್ಯ ಮುಗಿದ ನಂತರ ಮೊದಲನೇ ಕಂತು ಪಾವತಿಯಾಗಿ ನಂತರ ಶ್ರೀ ಧಾನ್ಯಗಳ ಕಟಾವು ಅಥವಾ ಮುಂದಿನ ಕಾರ್ಯ ಹಂತಗಳಲ್ಲಿ ಎರಡನೇ ಕಂತಿನ ಹಣವು ನಿಮ್ಮ ಖಾತೆಯನ್ನು ಸೇರಲಿದೆ

ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ : ಕರ್ನಾಟಕ ರೈತಮಿತ್ರ ಪೋರ್ಟಲ್
ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು :  ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸಲಹೆಗಳು

  • ಸರ್ಕಾರದ ಅಧಿಕೃತ ವೆಬ್ಸೈಟ್ ಮೂಲಕವೇ ನಮೂನೆಯನ್ನು ಡೌನ್ಲೋಡ್ ಮಾಡಿಕೊಂಡು ಅರ್ಜಿ ಸಲ್ಲಿಸಿ, ಬೇರೆ ಯಾವುದೇ ಮಧ್ಯವರ್ತಿಗಳ ಸಂಪರ್ಕವನ್ನು ಮಾಡಬೇಡಿ
  • ಅರ್ಜಿಯನ್ನು ನಮೂದಿಸುವಾಗ ಸ್ಪಷ್ಟವಾಗಿ ನಿಖರವಾಗಿ ಅರ್ಜಿಯನ್ನು ಭರ್ತಿ ಮಾಡಿ
  • ಎಲ್ಲಾ ದಾಖಲಾತಿಗಳನ್ನು ಸ್ಪಷ್ಟವಾಗಿ ಕಾಣುವ ರೀತಿಯಲ್ಲಿ ಪ್ರತಿಗಳನ್ನು ಲಗತಿಸಿ ಸ್ವಯಂ ದೃಢೀಕರಣ ಮಾಡುವುದನ್ನು ಮರೆಯಬೇಡಿ
  • ಉತ್ತಮ ರೀತಿಯ ಕಾರ್ಯಯೋಜನೆಯನ್ನು ರೂಪಿಸಿ ಈ ಕಾರ್ಯಯೋಜನೆಯಲ್ಲಿ ಯಾವುದೇ ಲೋಪದೋಷಗಳಿಲ್ಲದಂತೆ ನೋಡಿಕೊಳ್ಳಿ
  • ಅರ್ಜಿಯನ್ನು ಸಲ್ಲಿಸಿದ ನಂತರ ಹಾಗಾಗಿ ಕಚೇರಿಗೆ ಭೇಟಿ ನೀಡಿ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸಿ
  • ಯೋಜನೆಯ ಅನುಮೋದನೆಗಾಗಿ ಯಾರಾದರೂ ಮಧ್ಯವರ್ತಿಗಳು ತಮ್ಮನ್ನು ಸಂಪರ್ಕಿಸಿದಲ್ಲಿ ಅವರ ಜೊತೆ ಯಾವುದೇ ವ್ಯವಹಾರ ಮಾಡಬೇಡಿ ಏಕೆಂದರೆ ಇದು ಸರ್ಕಾರದ ಪರಿಶೀಲನ ಯೋಜನೆ ಆಗಿರುವುದರಿಂದ ಯಾವುದೇ ಮಧ್ಯವರ್ತಿಗಳ ಮೂಲಕ ಯಾವುದೇ ವ್ಯವಹಾರವನ್ನು ನಡೆಸುವುದಿಲ್ಲ

ಕರ್ನಾಟಕ ಸರ್ಕಾರವು ಇಂದಿನ ಮಾರುಕಟ್ಟೆಯಲ್ಲಿ ಬೇಡಿಕೆ ಹಚ್ಚುತ್ತಿರುವ ಸಿರಿಧಾನ್ಯಗಳ ಉತ್ಪಾದನೆಯನ್ನು ರೈತರ ಮೂಲಕ ಹೆಚ್ಚಿಸಿ ಇರುವ ಬೇಡಿಕೆಗೆ ತಕ್ಕಂತೆ ಪೂರೈಸಿ, ರೈತರ ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭವನ್ನು ಗಳಿಸಿ ಅವರ ಜನಜೀವನವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಈ ರೈತ ಶ್ರೀ ಯೋಜನೆಯನ್ನು ಜಾರಿಗೆ ತಂದಿದ್ದು ಈ ರೈತ ಶ್ರೀ ಯೋಜನೆಯ ಮೂಲಕ ರೈತರ ತಮ್ಮ ಕೃಷಿ ಜಮೀನಿನಲ್ಲಿ ಸಿರಿಧಾನ್ಯಗಳನ್ನು ಬೆಳೆಯುವ ಮೂಲಕ ಸರ್ಕಾರಿ ದಿಂದ ಸಿಗುವ ಹೆಚ್ಚುವರಿ 10000 ಸಬ್ಸಿಡಿಯನ್ನು ಪಡೆಯಬಹುದಾಗಿರುತ್ತದೆ ಇದರ ಜೊತೆಯಲ್ಲಿ ಸಂಸ್ಕರಣ ಘಟಕಗಳನ್ನು ಸ್ಥಾಪಿಸಲು 10 ಲಕ್ಷ ರೂಗಳವರೆಗೆ ಸಬ್ಸಿಡಿಯನ್ನು ಸಹ ನೀಡುತ್ತಿರುವುದರಿಂದ ರೈತರು ಸ್ವಯಂ ಉದ್ಯೋಗವನ್ನು ಸಹ ಆರಂಭಿಸಬಹುದು ಹಿಂದೆ ಈ ಎಲ್ಲ ಮಾಹಿತಿಯನ್ನು ಓದಿ ಅರ್ಥೈಸಿಕೊಂಡು ಅರ್ಜಿ ಸಲ್ಲಿಸುವ ಮೂಲಕ ಸರ್ಕಾರದ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಿ

 

Raita Siri Yojane 2026 – FAQ’s

1) ರೈತ ಸಿರಿ ಯೋಜನೆ ಎಂದರೆ ಏನು?
ಸಿರಿಧಾನ್ಯ ಬೆಳೆಗಳನ್ನು ಬೆಳೆಯುವ ರೈತರಿಗೆ ಕರ್ನಾಟಕ ಸರ್ಕಾರದಿಂದ ಆರ್ಥಿಕ ಸಹಾಯಧನ ನೀಡುವ ಯೋಜನೆ ಇದಾಗಿದೆ.

2) ಯಾವ ಬೆಳೆಗಳಿಗೆ ಸಹಾಯಧನ ಮೊತ್ತ ಸಿಗುತ್ತದೆ?
ರಾಗಿ, ನವಣೆ, ಸಾಮೆ, ಕೊರಳೆ, ಅರ್ಕ, ಕೂಡಲು ಮುಂತಾದ ಸಿರಿಧಾನ್ಯ ಬೆಳೆಗಳ ಉತ್ಪಾದನೆಗೆ ಸಹಾಯಧನ ಸಿಗುತ್ತದೆ.

3) ರೈತರಿಗೆ ಎಷ್ಟು ಮೊತ್ತ ಸಿಗುತ್ತದೆ?
ಪ್ರತಿ ಹೆಕ್ಟರ್‌ಗೆ ₹10,000 ಸಹಾಯಧನ ಸಿಗುತ್ತದೆ. ಗರಿಷ್ಠವಾಗಿ 2 ಹೆಕ್ಟರ್‌ಗೆ ₹20,000 ರೂಗಳ ವರೆಗೆ ಪಡೆಯಬಹುದು.

4) ಹಣ ಎಷ್ಟು ಕಂತುಗಳಲ್ಲಿ ಸಿಗುತ್ತದೆ?
ಹಣವು ಎರಡು ಕಂತುಗಳಲ್ಲಿ ನೇರವಾಗಿ ರೈತರ ಬ್ಯಾಂಕ್ ಖಾತೆಗೆ (DBT) ಜಮಾ ಆಗುತ್ತದೆ.

5) ಒಂದನೇ ಕಂತಿನಲ್ಲಿ ಎಷ್ಟು ಹಣ ಸಿಗುತ್ತದೆ?
ಬಿತ್ತನೆ ಮಾಡಿದ ನಂತರ ಪರಿಶೀಲನೆ ಯಶಸ್ವಿಯಾದರೆ ₹6,000 ರೂಗಳ ಮೊದಲ ಕಂತು ಸಿಗುತ್ತದೆ.

6) ಎರಡನೆಯ ಕಂತಿನಲ್ಲಿ ಎಷ್ಟು ಹಣ ಸಿಗುತ್ತದೆ?
ಬೆಳೆ ಕೊಯ್ಲು ಸಮಯದಲ್ಲಿ ₹4,000 ರೂಗಳ ಎರಡನೇ ಕಂತು ರೈತರ ಖಾತೆಗೆ ಜಮಾ ಆಗುತ್ತದೆ.

7) ಸಿರಿಧಾನ್ಯ ಉದ್ಯಮಕ್ಕೆ ಸಬ್ಸಿಡಿ ಯೋಜನೆ ಇದೆಯೇ?
ಹೌದು, ಸಂಸ್ಕರಣ ಘಟಕ ಆರಂಭಿಸಲು ಹಾಗೂ ನಿರ್ವಹಿಸಲು 50% ಸಬ್ಸಿಡಿ ಅಥವಾ ಗರಿಷ್ಠ ₹10 ಲಕ್ಷದವರೆಗೆ ನೆರವು ಸಿಗಬಹುದು.

8) ಯಾರು ಯಾರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು?
ರೈತರು, ನವ ಉದ್ಯಮಿಗಳು, ರೈತ ಸಂಘಗಳು, ಸ್ವಸಹಾಯ ಗುಂಪುಗಳು ಹಾಗೂ ರೈತ ಉತ್ಪಾದಕರ ಸಂಸ್ಥೆಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

9) ಅರ್ಜಿ ಸಲ್ಲಿಸಲು ಯಾವ ಪ್ರಮುಖ ದಾಖಲೆಗಳು ಬೇಕು?
ಆಧಾರ್ ಕಾರ್ಡ್, ಪಹಣಿ, ಬ್ಯಾಂಕ್ ಖಾತೆ ವಿವರ, ಪ್ರಾಜೆಕ್ಟ್ ರಿಪೋರ್ಟ್, ಪಾನ್ ಕಾರ್ಡ್ ಸೇರಿದಂತೆ ಮುಂತಾದ ಅಗತ್ಯ ದಾಖಲೆಗಳು ಬೇಕಾಗುತ್ತವೆ.

10) ಅರ್ಜಿ  ಸಲ್ಲಿಕೆ ಹೇಗೆ?
ಸರ್ಕಾರದ ಅಧಿಕೃತ ವೆಬ್‌ಸೈಟ್‌ನಿಂದ ಅರ್ಜಿ ನಮೂನೆ ಡೌನ್‌ಲೋಡ್ ಮಾಡಿ, ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸ್ಥಳೀಯ ಕೃಷಿ ಕಚೇರಿ/ರೈತ ಮಿತ್ರ ಕೇಂದ್ರಕ್ಕೆ ಸಲ್ಲಿಸಬೇಕು.

Leave a Comment