CIL Recruitment ಮೂಲಕ ಮೇನೇಜರ್ ಹುದ್ದೆಗಳ ನೇಮಕಾತಿ
ಭಾರತ ದೇಶದ ಸಾರ್ವಜನಿಕ ಕ್ಷೇತ್ರದ ಪ್ರಮುಖ ಸಂಸ್ಥೆಯಾದ ಆಲ್ ಇಂಡಿಯಾ ಲಿಮಿಟೆಡ್ ಸಂಸ್ಥೆಯಲ್ಲಿ ನೇಮಕಾತಿ ಅಧಿಸೂಚನೆ ಪ್ರಕಟಗೊಂಡಿದ್ದು CIL Recruitment ಮೂಲಕ ಮ್ಯಾನೇಜ್ಮೆಂಟ್ ಟ್ರೈನಿಂಗ್ ಹುದ್ದೆಗಳ ಭರ್ತಿಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಇಂಜಿನಿಯರಿಂಗ್ ಹಾಗೂ ಇತರೆ ತಾಂತ್ರಿಕ ವಿಭಾಗಗಳಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಗೆ ಯಾವುದೇ ಲಿಖಿತ ಪರೀಕ್ಷೆ ಬರೆಯುವ ಅವಶ್ಯಕತೆ ಇಲ್ಲ. ಇದು ಒಂದು ಕೇಂದ್ರ ಸರ್ಕಾರದ ಉದ್ಯೋಗ ವಾಗಿದ್ದು ಇಂದೇ ಅರ್ಜಿ ಸಲ್ಲಿಸಿ ತಮ್ಮ ಸರ್ಕಾರಿ ಉದ್ಯೋಗದ ಕನಸನ್ನು ಸಹಕಾರ ಗೊಳಿಸಿ
CIL Recruitment ಹುದ್ದೆಗಳ ಅಧಿಸೂಚನೆಯ ಸಂಪೂರ್ಣ ಮಾಹಿತಿ
ಸಂಸ್ಥೆ ಹೆಸರು : ಕೋಲ್ ಇಂಡಿಯಾ ಲಿಮಿಟೆಡ್
ಅಧಿಕೃತ ವೆಬ್ಸೈಟ್ : ಕೋಲ್ ಇಂಡಿಯಾ ಲಿಮಿಟೆಡ್
ಹುದ್ದೆ ಹೆಸರು : ಮ್ಯಾನೇಜ್ಮೆಂಟ್ ಟ್ರೈನಿ
ಒಟ್ಟು ಹುದ್ದೆಗಳ ಸಂಖ್ಯೆ : 660 ಹುದ್ದೆಗಳು
ಉದ್ಯೋಗ ಸ್ಥಳ : ಅಖಿಲ ಭಾರತದಾದ್ಯಂತ
ಅರ್ಜಿ ಸಲ್ಲಿಸುವಿಕೆ ವಿಧಾನ : ಆನ್ಲೈನ್
CIL Recruitment ಮೂಲಕ ಯಾವ ಯಾವ ವಿಭಾಗಗಳಲ್ಲಿ ನೇಮಕ ಮಾಡಲಾಗುತ್ತದೆ
ಈ ಸಂಸ್ಥೆಯಲ್ಲಿ ತಾಂತ್ರಿಕ ವಿಭಾಗ ಹಾಗೂ ಆಡಳಿತ ವಿಭಾಗಗಳಲ್ಲಿ ನೇಮಕಾತಿ ಮಾಡುತ್ತಿದ್ದು ಒಟ್ಟು 660 ಹುದ್ದೆಗಳಿಗೆ ನೇಮಕಾತಿ ಸೂಚನೆಯನ್ನು ಹೊರಡಿಸಿದೆ ವಿಭಾಗಗಳ ಮಾಹಿತಿ ಈ ಕೆಳಕಂಡಂತಿದೆ
- ಎಲೆಕ್ಟ್ರಿಕಲ್ ವಿಭಾಗ
- ಎಲೆಕ್ಟ್ರಾನಿಕ್ಸ್ ಅಂಡ್ ಟೆಲಿ ಕಮ್ಯುನಿಕೇಷನ್ ವಿಭಾಗ
- ಮೈನಿಂಗ್ ವಿಭಾಗ
- ಸಿವಿಲ್ ವಿಭಾಗ
- ಮೆಕಾನಿಕಲ್ ವಿಭಾಗ
- ಇಂಡಸ್ಟ್ರಿಯಲ್ ಇಂಜಿನಿಯರಿಂಗ್ ವಿಭಾಗ
- ಸಿಸ್ಟಮ್ ಮತ್ತು ಇನ್ಫರ್ಮೇಶನ್ ಟೆಕ್ನಾಲಜಿ ವಿಭಾಗ
- ಜಿಯಾಲಜಿ ವಿಭಾಗ
- ಕಂಪನಿಯ ಸೆಕ್ರೆಟರಿ ವಿಭಾಗ
- ರಾಜ ಭಾಷಾ ವಿಭಾಗ
ಶೈಕ್ಷಣಿಕ ಅರ್ಹತೆ
ಈ CIL Recruitment ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಿಭಾಗಕ್ಕೆ ತಕ್ಕಂತೆ ವಿದ್ಯಾರ್ಥಿಯನ್ನು ಹೊಂದಿರಬೇಕಾಗುತ್ತದೆ ಅಂದರೆ
- ಬಿ.ಇ (B.E) / ಬಿ.ಟೆಕ್(B.Tech)
- ಎಂ.ಸಿ.ಎ (M.C.A)
- ಎಂ. ಎಸ್. ಸಿ (M.Sc)
- ಸಿ.ಎ (C.A) / ಐ.ಸಿ.ಡಬ್ಲ್ಯೂ.ಎ (I.C.W.A)
ಇತರ ವಿಭಾಗಗಳಿಗೆ ಸಂಬಂಧಿಸಿದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ
CIL Recruitment ಮೂಲಕ ನೇಮಕಗೊಳ್ಳಬಹುದಾದ ಕೆಲವು ವಿಭಾಗಗಳಲ್ಲಿ ತಮ್ಮ ಪದವಿಯಲ್ಲಿ 60% ಅಷ್ಟು ಅಂಕಗಳು ಕಡ್ಡಾಯವಾಗಿರಬಹುದು ಆದುದರಿಂದ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಳ್ಳಿ
ವಯೋಮಿತಿ
ಈ CIL Recruitment ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಆಗಿದ್ದು ಗರಿಷ್ಠ ವಯಮಿತಿಯ ಮಾಹಿತಿ ಈ ಕೆಳಕಂಡಂತಿದೆ
| ಅಭ್ಯರ್ಥಿಗಳ ವರ್ಗ | ಗರಿಷ್ಠ ವಯಸ್ಸು (ವರ್ಷಗಳಲ್ಲಿ) |
| ಸಾಮಾನ್ಯ | 30 ವರ್ಷಗಳು |
| ಇತರೆ ಹಿಂದುಳಿದ ವರ್ಗ | 33 ವರ್ಷಗಳು |
| ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗ | 35 ವರ್ಷಗಳು |
| ಅಂಗವಿಕಲ ಅಭ್ಯರ್ಥಿಗಳ ವರ್ಗ | ವಯೋಮಿತಿ ಸಡಿಲಿಕೆ ನಿಯಮಗಳ ಪ್ರಕಾರ |
CIL Recruitment ನ ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ
- ಈ ನೇಮಕಾತಿಗೆ ಯಾವುದೇ ಲಿಖಿತ ಪರೀಕ್ಷೆಯನ್ನು ಬರೆಯುವ ಅಗತ್ಯತೆ ಇಲ್ಲ
- ದಾಖಲಾತಿ ಪರಿಶೀಲನೆ : ಅಭ್ಯರ್ಥಿಗಳು ನೇಮಕಾತಿಗೆ ಅರ್ಜಿ ಸಲ್ಲಿಸುವಾಗ ನಮೂದಿಸುವ ಹಾಗೂ ಅಪ್ಲೋಡ್ ಮಾಡಿರುವ ಎಲ್ಲಾ ದಾಖಲಾತಿಗಳನ್ನು ದಾಖಲೆ ಪರಿಶೀಲನೆ ಮಾಡಲಾಗುತ್ತದೆ.
- ವೈದ್ಯಕೀಯ ಪರೀಕ್ಷೆ : ಅಭ್ಯರ್ಥಿಗಳು ಹುದ್ದೆಗೆ ಸಂಬಂಧಿಸಿದಂತೆ ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯವಾಗಿದ್ದಾರೆಯೇ ಎಂದು ವೈದ್ಯಕೀಯ ಪರೀಕ್ಷೆ ನೆಡೆಸಲಾಗುತ್ತದೆ.
- ತಾಂತ್ರಿಕ ವಿಭಾಗಗಳನ್ನು ಹೊರತುಪಡಿಸಿ ಆಡಳಿತಾತ್ಮಕ ಹುದ್ದೆಗಳಿಗೆ ಸಂದರ್ಶನ ಹಾಗೂ ಹೆಚ್ಚುವರಿ ನೇಮಕಾತಿ ಪ್ರಕ್ರಿಯೆಗಳು ಇರಬಹುದು
ವೇತನದ ವಿವರ
ಈ CIL Recruitment ಮೂಲಕ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ 60,000/- ರೂಗಳಿಂದ 1,80,000/- ರೂಗಳ ವರೆಗೆ ವೇತನವನ್ನು ನೀಡಲಾಗುತ್ತದೆ.
ಇದರ ಜೊತೆಯಲ್ಲಿ ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ, ವೈದ್ಯಕೀಯ ಸೌಲಭ್ಯಗಳು,ಭವಿಷ್ಯ ನಿಧಿ, ಬೋನಸ್ ಹಾಗೂ ಇತರೆ ಭತ್ಯೆಗಳನ್ನು ನೀಡಲಾಗುವುದು
CIL Recruitment ಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು
ಅರ್ಜಿ ಭರ್ತಿ ಪ್ರಕ್ರಿಯೆ ಪ್ರಾರಂಭ : 12-05-2026
ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 11-06-2026
CIL Recruitment ಗೆ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಹೀಗಿದೆ
- ಈCIL Recruitment ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲು ಇಂಡಿಯಾ ಕೋಲ್ ಲಿಮಿಟೆಡ್ ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಕೆರಿಯರ್ ವಿಭಾಗವನ್ನು ತೆರೆದು ಅಲ್ಲಿ ಮ್ಯಾನೇಜ್ಮೆಂಟ್ ಟ್ರೈನಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ
- CIL Recruitment ಗೆ ಅರ್ಜಿ ಸಲ್ಲಿಸುವ ಮುನ್ನ ಅಗತ್ಯ ಮಾಹಿತಿ ಸಂವಹನ ಉದ್ದೇಶಕ್ಕಾಗಿ ಇ-ಮೇಲ್ ಐಡಿ ಮತ್ತು ಫೋನ್ ನಂಬರ್ ಹಾಗೂ ಅಗತ್ಯ ಇಲ್ಲ ದಾಖಲಾತಿಗಳನ್ನು ಸಿದ್ಧವಾಗಿಟ್ಟುಕೊಳ್ಳಿ
- ಮ್ಯಾನೇಜ್ಮೆಂಟ್ ಟ್ರೈನಿಂಗ್ ರಿಕ್ರೂಟ್ಮೆಂಟ್ 2026 ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಮೊದಲು ನೋಂದಾವಣೆಗೊಂಡು ನಂತರ ನೀವು ಅರ್ಜಿ ಬರ್ತಿಯನ್ನು ತೆರೆಯುತ್ತೀರಿ
- ಅರ್ಜಿ ನಮೂನೆಯಲ್ಲಿ ಕೇಳಲಾಗುವ ವೈಯಕ್ತಿಕ ಮಾಹಿತಿ ಶೈಕ್ಷಣಿಕ ಮಾಹಿತಿ ವಯೋಮಿತಿ ಹಾಗೂ ವಯೋಮಿತಿ ಸಡಲಿಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಇನ್ನಿತರ ಎಲ್ಲ ಮಾಹಿತಿಗಳನ್ನು ನಿಖರವಾಗಿ ನಮೂದಿಸಿ
- ಅರ್ಜಿ ಭರ್ತಿಯ ಪ್ರಕ್ರಿಯೆಯಲ್ಲಿ ಕೇಳಲಾಗುವ ಅಗತ್ಯ ದಾಖಲಾತಿಗಳಾದ ವೈಯಕ್ತಿಕ ದಾಖಲೆ ಶೈಕ್ಷಣಿಕ ಪ್ರಮಾಣ ಪತ್ರ ವಯೋಮಿತಿಗೆ ಸಂಬಂಧಿಸಿದ ಪ್ರಮಾಣ ಪತ್ರ ಹಾಗೂ ಇನ್ನಿತರ ಯಾವುದೇ ಅನುಭವ ಪ್ರಮಾಣ ಪತ್ರಗಳು ಇದ್ದಲ್ಲಿ ಸ್ಕ್ಯಾನ್ ಮಾಡಿ ಇಟ್ಟುಕೊಂಡು ಅಪ್ಲೋಡ್ ಮಾಡಿ
- ನಂತರ ಅನ್ವಯಿಕ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ
- ನಂತರ ನೀವು ನಮೂದಿಸಿರುವ ಎಲ್ಲ ಮಾಹಿತಿಯು ಸರಿಯಾಗಿದೆಯೇ ಎಂದು ಪರಿಶೀಲಿಸಲು ರಿವ್ಯೂ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಪರಿಶೀಲಿಸಿ ನಂತರ ಫೈನಲ್ ಸಬ್ಮಿಟ್ ಮಾಡಿ
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು
- ಎಸ್ ಎಸ್ ಎಲ್ ಸಿ ಅಂಕಪಟ್ಟಿ
- ಗೇಟ್ ಪರೀಕ್ಷೆಯ ಅಂಕಪಟ್ಟಿ
- ಪದವಿ ಅಂಕಪಟ್ಟಿ
- ಆಧಾರ್ ಕಾರ್ಡ್
- ಜಾತಿ ಪ್ರಮಾಣ ಪತ್ರ ಅಗತ್ಯವಿದ್ದರೆ ಮಾತ್ರ
- ಅನುಭವ ಪ್ರಮಾಣ ಪತ್ರ
- ಅಭ್ಯರ್ಥಿಯ ಭಾವಚಿತ್ರ ಹಾಗು ಸಹಿ
ಯಾರು ಪ್ರಮುಖವಾಗಿ ಅರ್ಜಿ ಸಲ್ಲಿಸಬೇಕು
- ಗೇಟ್ ಪರೀಕ್ಷೆ ಬರೆದ ಅಭ್ಯರ್ಥಿಗಳು ಕಡ್ಡಾಯವಾಗಿ ಅರ್ಜಿ ಸಲ್ಲಿಸಿ
- ಸಾರ್ವಜನಿಕ ಕ್ಷೇತ್ರದಲ್ಲಿ ಉದ್ಯೋಗವನ್ನು ಬಯಸುವವರು ಈ ನೇಮಕಾತಿಗೆ ಆದಷ್ಟು ಬೇಗ ಅರ್ಜಿ ಸಲ್ಲಿಸಿ
- ಇಂಜಿನಿಯರಿಂಗ್ ಪದವಿಯನ್ನು ಪಡೆದವರು ಅರ್ಜಿ ಸಲ್ಲಿಸಿ
ಈ ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಲಿಂಕ್ಗಳು
ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಲು : ಕೋಲ್ ಇಂಡಿಯಾ ಲಿಮಿಟೆಡ್
ಅಧಿಕೃತ ಅಧಿಸೂಚನೆಯನ್ನು ಓದಲು ಪಿಡಿಎಫ್ : CIL RECRUITMENT NOTIFICATION
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು : ಅರ್ಜಿ ಸಲ್ಲಿಕೆ
ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು : ಇಲ್ಲಿ ಕ್ಲಿಕ್ ಮಾಡಿ
ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಾರ್ವಜನಿಕ ಕ್ಷೇತ್ರದ ಸಂಸ್ಥೆಯಾದ Coal India Limited (CIL) ನಲ್ಲಿ ಪ್ರಕಟವಾದ ಮ್ಯಾನೇಜ್ಮೆಂಟ್ ಟ್ರೈನಿ ಹುದ್ದೆಗಳ ನೇಮಕಾತಿ ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶವಾಗಿದೆ. ಇಂಜಿನಿಯರಿಂಗ್ ಹಾಗೂ ತಾಂತ್ರಿಕ ವಿಭಾಗಗಳಲ್ಲಿ ಪದವಿ ಪಡೆದ ಅಭ್ಯರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳದೆ ಅಧಿಸೂಚನೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಅರ್ಹತೆ ಹೊಂದಿದ್ದರೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಒಟ್ಟು 660 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿರುವುದರಿಂದ ಸ್ಪರ್ಧೆ ಹೆಚ್ಚಿರಬಹುದು. ಆದ್ದರಿಂದ ಕೊನೆಯ ದಿನಾಂಕದವರೆಗೆ ಕಾಯದೇ ಇಂದೇ ಅರ್ಜಿ ಸಲ್ಲಿಸಿ ಕೇಂದ್ರ ಸರ್ಕಾರಿ ಉದ್ಯೋಗದ ನಿಮ್ಮ ಕನಸನ್ನು ನನಸಾಗಿಸಿಕೊಳ್ಳಿ.