Telegram Join My Telegram WhatsApp Join My WhatsApp

Mobile Canteen Scheme 2026: Best ಸ್ವಯಂ ಉದ್ಯೋಗ ಪ್ರಾರಂಭಿಸುವವರಿಗೆ ಗುಡ್‌ ನ್ಯೂಸ್‌, ಇಲ್ಲಿದೆ ಯೋಜನೆಯ ಸಂಪೂರ್ಣ ಮಾಹಿತಿ

ಸ್ವಯಂ ಉದ್ಯೋಗದ ಯೋಜನೆ ಹೊಂದುರುವವರೇ ಈ ಯೋಜನೆಯ ಬಗ್ಗೆ ತಿಳಿದುಕೊಳ್ಳಿ (Mobile Canteen Scheme)

ಇಂದಿನ ಸಂದರ್ಭಗಳಲ್ಲಿ ಸ್ವಯಂ ಉದ್ಯೋಗವು ಎಷ್ಟು ಪ್ರಾಮುಖ್ಯತೆಯನ್ನು ಪಡೆಯುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ 9 To 5 ಕೆಲಸವನ್ನು ನಿರ್ವಹಿಸಲಾಗದೆ ಎಲ್ಲರೂ ಸ್ವಯಂ ಉದ್ಯೋಗದ ಕಡೆ ಗಮನ ಹರಿಸುತ್ತಿದ್ದಾರೆ ಅಂತೆಯೇ ಈಗ ಕರ್ನಾಟಕ ಸರ್ಕಾರ ಅಂತವರಿಗೆ ಒಂದು ಹೊಸ ಯೋಜನೆಯನ್ನು ತಂದಿದೆ ಚಾಟ್ಸ್ ಹಾಗೂ ಫಾಸ್ಟ್ ಫುಡ್ ಗಳನ್ನು ಮಾರಾಟ ಮಾಡುವ ಮೊಬೈಲ್ ಕ್ಯಾಂಟೀನ್ (Mobile Canteen Scheme) ವ್ಯಾಪಾರಕ್ಕೆ ಇಂದಿನ ಸಂದರ್ಭದಲ್ಲಿ ಉತ್ತಮ ಬೇಡಿಕೆ ಇದೆ ಕಡಿಮೆ ಬಂಡವಾಳವನ್ನು ಹೂಡುವುದರ ಮೂಲಕ ಹೆಚ್ಚು ಲಾಭವನ್ನು ಗಳಿಸಿ ಜೀವನ ಗುಣಮಟ್ಟವನ್ನು ಸುಧಾರಿಸುವ ಇಂದಿನ ಯುವಜನತೆಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ ನೀವು ಸಹ ಇಂತಹ ಮೊಬೈಲ್ ಕ್ಯಾಂಟೀನ್ ಉದ್ಯಮವನ್ನು ಆರಂಭಿಸಲು ಯೋಜನೆ ಇದ್ದು ಸಾವಲಂಬಿಯಾಗಿ ಬದುಕಬೇಕೆಂದು ಅಂದುಕೊಂಡಿದ್ದರೆ ನಿಮಗಾಗಿ ಕರ್ನಾಟಕ ಸರ್ಕಾರದ ಈ ಯೋಜನೆಯು ಸಹಕಾರ ನೀಡಲಿದೆ ಯೋಜನೆಯ ಸಂಪೂರ್ಣ ಮಾಹಿತಿಯನ್ನು ತಿಳಿದು ಅರ್ಜಿ ಸಲ್ಲಿಸುವುದರ ಮೂಲಕ ತಮ್ಮ ಸ್ವಯಂ ಉದ್ಯೋಗವನ್ನು ಪ್ರಾರಂಭಿಸಬೇಕೆಂಬ ಪ್ರಕ್ರಿಯೆಯನ್ನು ಇಂದೇ ಆರಂಭಿಸಿ

ಹೆಚ್ಚುವರಿ ಮಾಹಿತಿ : Dairy farming Loan Scheme 2026, Big Opportunity : ಯೋಜನೆಯ ವಿವರ, ಸಾಲದ ಮೊತ್ತ, ಸಬ್ಸಿಡಿ ಹಾಗೂ ಅರ್ಹತೆಯ ಬಗ್ಗೆ ಇಲ್ಲಿದೆ ಮಾಹಿತಿ

ಮೊಬೈಲ್ ಕ್ಯಾಂಟೀನ್  ಸಬ್ಸಿಡಿ ಯೋಜನೆ (Mobile Canteen Scheme) ಎಂದರೆ ಏನು

ಕರ್ನಾಟಕ ಸರ್ಕಾರವು ಇಂದಿನ ಸಂದರ್ಭದಲ್ಲಿ ನಿರುದ್ಯೋಗ ಹೆಚ್ಚಾಗುತ್ತಿರುವುದರಿಂದ ಯುವಕರನ್ನು ಸ್ವಂತ ಉದ್ಯಮಿಗಳನ್ನಾಗಿಸಲು ಮತ್ತು ಜೀವನ ಗುಣಮಟ್ಟವನ್ನು ಸುಧಾರಿಸಿಕೊಳ್ಳಲು ಆರಂಭಿಸಿರುವ Mobile Canteen Scheme ಇದಾಗಿದ್ದು ಈ ಯೋಜನೆಯನ್ನು ಕರ್ನಾಟಕದ ಪ್ರವಾಸೋದ್ಯಮ ನೀತಿ 2020-25 ರ ಯೋಜನೆ ಅಡಿಯಲ್ಲಿ ತರಲಾಗಿದ್ದು ಮೊಬೈಲ್ ಕ್ಯಾಂಟೀನ್ ವಾಹನಗಳನ್ನು ಖರೀದಿಸಲು ಮತ್ತು ಅದನ್ನು ನಿರ್ವಹಿಸಲು ಸರ್ಕಾರವು ಸಬ್ಸಿಡಿ ರೂಪದ ಆರ್ಥಿಕ ಸಹಾಯವನ್ನು ನೀಡುತ್ತಿದೆ

ಈ Mobile Canteen Scheme ನ ಅಡಿಯಲ್ಲಿ ಸಿಗುವ ಸಹಾಯಧನದ ಮೊತ್ತ ಎಷ್ಟು

ಮೊಬೈಲ್ ಕ್ಯಾಂಟೀನ್ ಅನ್ನು ಪ್ರಾರಂಭಿಸಲು ಅರ್ಜಿ ಸಲ್ಲಿಸಿ ಅರ್ಹರಾಗುವ ಫಲಾನುಭವಿಗಳಿಗೆ ಆ ಕ್ಯಾಂಟೀನ್ ವಾಹನವನ್ನು ಖರೀದಿ ಹಾಗೂ ನಿರ್ವಹಿಸಲು ತಗಲುವ ಒಟ್ಟು ಮೊತ್ತದ 70% ಅಷ್ಟು ಅಂದರೆ ಗರಿಷ್ಠ 5 ಲಕ್ಷ ರೂಗಳವರೆಗೆ ಪ್ರವಾಸೋದ್ಯಮ ಇಲಾಖೆಯಿಂದ ನೇರವಾದ ಸಬ್ಸಿಡಿ ಸಹಾಯಧನವು Mobile Canteen Scheme ಮೂಲಕ ದೊರೆಯಲಿದೆ

Mobile Canteen Scheme ಹಾಗೂ ಇದರೊಂದಿಗೆ ಹಾಸ್ಪಿಟಲ್ ಕ್ಷೇತ್ರದಲ್ಲಿ ಸಣ್ಣ ಸಣ್ಣ ಪ್ರಮಾಣದ ಉದ್ಯಮಗಳನ್ನು ಉತ್ತೇಜಿಸಲು ಕೆ ಎಸ್ ಟಿ ಡಿ ಸಿ ಅಂದರೆ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಕಾರ್ಪೊರೇಷನ್ ಸಂಸ್ಥೆಯ ಮೂಲಕ ಒಂದು ತಿಂಗಳ ಅವಧಿಯ ಉಚಿತ ಉದ್ಯಮಶೀಲತೆ ಮತ್ತು ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡಲಾಗುತ್ತಿದ್ದು ಈ ತರಬೇತಿ ಅವಧಿಯಲ್ಲಿ ಹಾಜರಾಗುವ ಅಭ್ಯರ್ಥಿಗಳಿಗೆ ಉಚಿತ ಊಟ ವಸತಿ ಹಾಗೂ ಪ್ರೋತ್ಸಾಹ ಧನದ ಸೌಲಭ್ಯಗಳು ಸಿಗಲಿವೆ

Mobile Canteen Scheme ಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು

ನಿವಾಸದ ಅರ್ಹತೆ : ಈ Mobile Canteen Scheme ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಕರ್ನಾಟಕ ರಾಜ್ಯದ ಮೂಲ ನಿವಾಸಿಗಳಾಗಿರಬೇಕು ಬೇರೆ ರಾಜ್ಯದಿಂದ ಬಂದು ಇಲ್ಲಿ ಇರುವ ಅಭ್ಯರ್ಥಿಗಳಿಗೆ ಶರತ್ತು ಮತ್ತು ನಿಯಮಗಳು ಅನ್ವಯವಾಗುತ್ತವೆ

ಸಾಮಾಜಿಕ ಸಮುದಾಯ :  ಈ Mobile Canteen Scheme ಮೂಲಕ ಮೊದಲನೆಯದಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕರಿಗೆ ನೀಡಲಿದ್ದು ಇದನ್ನು ಅವರ ಸಬಲೀಕರಣಕ್ಕಾಗಿ ರೂಪಿಸಿದ ಯೋಜನೆ ಎನ್ನಲಾಗಿದೆ

ವಯೋಮಿತಿ ವಿವರ : Mobile Canteen Scheme ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು 20 ವರ್ಷಗಳಿಂದ 45 ವರ್ಷಗಳ ಒಳಗೆ ಇರಬೇಕು

ಡ್ರೈವಿಂಗ್ ಲೈಸೆನ್ಸ್ : ಅರ್ಜಿದಾರರು ಕಡ್ಡಾಯವಾಗಿ ಸಾರಿಗೆ ಇಲಾಖೆಯ ಲಘು ವಾಹನ ಚಾಲನ ಲೈಸೆನ್ಸ್ ಅನ್ನು ಹೊಂದಿರಬೇಕು ಇಲ್ಲದಿದ್ದರೆ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ

ವಿದ್ಯಾರ್ಹತೆ ವಿವರ : ಕನಿಷ್ಠ 10ನೇ ತರಗತಿ ಅಂದರೆ ಎಸ್ ಎಸ್ ಎಲ್ ಸಿ ಯನ್ನು ಪಾಸ್ ಆಗಿರಬೇಕು

ಆದಾಯದ ಮಿತಿಯ ವಿವರ : ಈ Mobile Canteen Scheme ಗೆ ಅರ್ಜಿ ಸಲ್ಲಿಸುವ ಅರ್ಜಿದಾರರು ನಗರ ಪ್ರದೇಶದಲ್ಲಿ ವಾಸವಾಗಿದ್ದರೆ ಅವರ ವಾರ್ಷಿಕ ಆದಾಯವು 2 ಲಕ್ಷಕ್ಕಿಂತ ಕಡಿಮೆ ಇರಬೇಕು ಮತ್ತು ಗ್ರಾಮೀಣ ಪ್ರದೇಶದ ಅಭ್ಯರ್ಥಿಯಾಗಿದ್ದರೆ ಒಂದು ಪಾಯಿಂಟ್ ಐದು ಲಕ್ಷದ ಒಳಗಡೆ ಆದಾಯದ ಮಿತಿ ಇರಬೇಕಾಗುತ್ತದೆ

ಸರ್ಕಾರಿ ಕೆಲಸ ಹೊಂದಿಲ್ಲದಿರುವುದು : ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಅಥವಾ ಅವರ ಕುಟುಂಬದಲ್ಲಿರುವ ಯಾವುದೇ ಸದಸ್ಯರು ಸರ್ಕಾರಿ ನೌಕರರಾಗಿರಬಾರದು

Mobile Canteen Scheme ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

  • ಅರ್ಜಿ ನಮೂನೆ (ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಕಚೇರಿಯಲ್ಲಿ ಲಭ್ಯವಿರುತ್ತದೆ)
  • ಆಧಾರ್ ಕಾರ್ಡ್
  • 10ನೇ ತರಗತಿ ಅಂಕಪಟ್ಟಿ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಲಘು ವಾಹನ ಚಾಲನಾ ಲೈಸೆನ್ಸ್
  • ಬ್ಯಾಂಕ್ ಖಾತೆಗೆ ವಿವರಗಳು‌
  • ಪಾಸ್ಪೋರ್ಟ್ ಸೈಜ್ ನ ಎರಡು ಭಾವಚಿತ್ರಗಳು
  • 200 ರೂಪಾಯಿಗಳ ಸ್ಟಾಂಪ್ ಪೇಪರ್ ನಲ್ಲಿ ಕುಟುಂಬದಲ್ಲಿ ಯಾರು ಸರ್ಕಾರಿ ನೌಕರರಾಗಿಲ್ಲ ಮತ್ತು ಈ ಯೋಜನೆಯನ್ನು ಈವರೆಗೂ ಪಡೆದಿಲ್ಲ ಎಂದು ಅಫಿಡವಿಟ್ ಅನ್ನು ಪ್ರಮಾಣೀಕರಿಸಿ ನೀಡಬೇಕಾಗುತ್ತದೆ

ಕೆಲವೊಂದು ಸಂದರ್ಭಗಳಲ್ಲಿ ಇನ್ನೂ ಹೆಚ್ಚುವರಿ ದಾಖಲಾತಿಗಳನ್ನು ಕೇಳಲಾಗುವುದು 

Mobile Canteen Scheme ಗೆ ಅರ್ಜಿ ಸಲ್ಲಿಸುವ ವಿಧಾನ

ಈ ಯೋಜನೆಗೆ ಸರಳವಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು ಯಾವುದೇ ರೀತಿಯ ಅಡಚಣೆಯನ್ನು ಎದುರಿಸದೆ ಅರ್ಜಿಯನ್ನು ಸಲ್ಲಿಸಬಹುದು

ಮೊದಲನೇ ಹಂತ : ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ತಮ್ಮ ಜಿಲ್ಲೆಯಲ್ಲಿ ಇರುವ ಪ್ರವಾಸೋದ್ಯಮ ಇಲಾಖೆಯ ಕಚೇರಿಗೆ ಭೇಟಿ ನೀಡಬೇಕು

ಎರಡನೇ ಹಂತ : ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಶುರುವಾಗಿರುವ ಮೊಬೈಲ್ ಕ್ಯಾಂಟೀನ್ ಯೋಜನೆಯ ಅರ್ಜಿ ನಮೂನೆಯನ್ನು ಪಡೆದುಕೊಳ್ಳಿ

ಮೂರನೇ ಹಂತ : ಅರ್ಜಿಯಲ್ಲಿ ಕೇಳಿದ ಎಲ್ಲಾ ಮಾಹಿತಿಯನ್ನು ಸ್ಪಷ್ಟವಾಗಿ ಸರಿಯಾಗಿ ಕಾಣುವಂತೆ ಭರ್ತಿ ಮಾಡಿ ಅಗತ್ಯ ದಾಖಲಾತಿಗಳನ್ನು ಅಟ್ಯಾಚ್ ಮಾಡಿ ಸಾಧ್ಯವಾದಷ್ಟು ಸ್ವಯಂ ದೃಢೀಕರಿಸಿ ನೀಡಿ

ನಾಲ್ಕನೇ ಹಂತ : ಅರ್ಜಿಗಳ ಸಲ್ಲಿಕೆ ಪೂರ್ಣಗೊಂಡ ನಂತರ ಅಧಿಕಾರಿಗಳು ಅರ್ಜಿಗಳನ್ನು ಪರಿಶೀಲನೆ ಮಾಡಿ ಅರ್ಹ ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಿ ಆಯ್ಕೆಯಾದ ಅಭ್ಯರ್ಥಿಗಳನ್ನು ಒಂದು ತಿಂಗಳಿನ ಅವಧಿಗೆ ಉಚಿತ ಉದ್ಯಮಶೀಲತೆಯ ತರಬೇತಿಗೆ ನಿಯೋಜಿಸಲಾಗುತ್ತದೆ

ಐದನೇ ಹಂತ : ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಮೊಬೈಲ್ ಕ್ಯಾಂಟೀನ್ ಖರೀದಿಸಲು ನಿಗದಿಪಡಿಸುವ ಸಬ್ಸಿಡಿ ಮೊತ್ತವನ್ನು ನೇರವಾಗಿ ನಿಮ್ಮ ಬ್ಯಾಂಕ್‌ ಖಾತೆಗೆ ಬಿಡುಗಡೆ ಮಾಡಲಾಗುತ್ತದೆ

ಸಂಬಂಧಿತ ಲಿಂಕ್‌ ಗಳು 

ಕರ್ನಾಟಕ ರಾಜ್ಯದ ಅಧಿಕೃತ ಪ್ರವಾಸೋದ್ಯಮ ಇಲಾಖೆ ವೆಬ್ಸೈಟ್ : ಪ್ರವಾಸೋದ್ಯಮ ಇಲಾಖೆ

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು‌ : ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ಸರ್ಕಾರವು ನಿರುದ್ಯೋಗದಿಂದ ಬಳಲುತ್ತಿರುವ ಯುವಕರಿಗೆ ಮೊಬೈಲ್ ಕ್ಯಾಂಟೀನ್ ಯೋಜನೆಯ ಮೂಲಕ ಸ್ವಯಂ ಉದ್ಯೋಗವನ್ನು ಕಟ್ಟಿಕೊಳ್ಳಲು ಸುವರ್ಣ ಅವಕಾಶವನ್ನು ನೀಡಿದೆ ಆದುದರಿಂದ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಮೊಬೈಲ್ ಕ್ಯಾಂಟೀನ್ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ ತಮ್ಮ ಸ್ವಯಂ ಉದ್ಯೋಗದ ಕನಸನ್ನು ನನಸಾಗಿಸಿಕೊಳ್ಳಿ ಇಂದಿನ ಸಮಯದಲ್ಲಿ ಬೇರೆ ಉದ್ಯೋಗಗಳಿಗಿಂತ ಸ್ವಯಂ ಉದ್ಯೋಗವು ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುತ್ತಿರುವುದರಿಂದ ನೀವು ಕಡಿಮೆ ಹೂಡಿಕೆಯಿಂದ ಹೆಚ್ಚು ಲಾಭವನ್ನು ಗಳಿಸಿ ತಮ್ಮ ಜೀವನ ಗುಣಮಟ್ಟವನ್ನು ಸುಧಾರಿಸಿಕೊಳ್ಳಬಹುದು ಅದರಂತೆಯೇ ಈ ಯೋಜನೆಯು ಸಬ್ಸಿಡಿ ಮೂಲದ ಸಹಾಯಧನವನ್ನು ನೀಡುವುದರಿಂದ ಉದ್ಯಮವನ್ನು ಆರಂಭಿಸಲು ಹಣಕಾಸಿನ ತೊಂದರೆಯನ್ನು ತಕ್ಕಮಟ್ಟಿಗೆ ಸುಧಾರಿಸಲಿದೆ ಆದುದರಿಂದ ಈಗಲೇ ನಿಮ್ಮ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಕಚೇರಿಗೆ ಭೇಟಿ ನೀಡುವುದರ ಮೂಲಕ ಅರ್ಜಿಯನ್ನು ಪಡೆದು ಯಶಸ್ವಿಯಾಗಿ ಅರ್ಜಿ ಸಲ್ಲಿಸಿ ತಮ್ಮ ಮೊಬೈಲ್ ಕ್ಯಾಂಟೀನ್ ಅನ್ನು ಪಡೆಯುವ ಯೋಜನೆಯನ್ನು ಸಹಕಾರ ಗೊಳಿಸಿ

 

Mobile Canteen Scheme – FAQ’s

1) ಮೊಬೈಲ್ ಕ್ಯಾಂಟೀನ್ ಸಬ್ಸಿಡಿ ಯೋಜನೆ ಎಂದರೆ ಏನು?
ಇದು ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ಯುವಕರು ಮೊಬೈಲ್ ಕ್ಯಾಂಟೀನ್ (ಚಾಟ್ಸ್‌, ಫಾಸ್ಟ್ ಫುಡ್‌ ವ್ಯಾಪಾರ) ಆರಂಭಿಸಲು ಸಬ್ಸಿಡಿ ಸಹಾಯಧನ ನೀಡಲಾಗುತ್ತದೆ.

2) ಈ ಯೋಜನೆಯಡಿ ಎಷ್ಟು ಶೇಕಡ ಸಬ್ಸಿಡಿ ಸಿಗುತ್ತದೆ?
ಅರ್ಹ ಅಭ್ಯರ್ಥಿಗಳಿಗೆ ಒಟ್ಟು ವೆಚ್ಚದಲ್ಲಿನ 70% ರಷ್ಟು ಅಥವಾ ಗರಿಷ್ಠ 5 ಲಕ್ಷ ರೂಗಳವರೆಗೆ ಸಬ್ಸಿಡಿ ದೊರೆಯಬಹುದು.

3)  ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?
ಕರ್ನಾಟಕದ ಮೂಲ ನಿವಾಸಿಗಳಾಗಿದ್ದು, 20 ರಿಂದ 45 ವರ್ಷ ವಯಸ್ಸಿನ ನಿರುದ್ಯೋಗಿ ಯುವಕರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

4) ಯಾವ ಸಮುದಾಯದವರಿಗೆ ಮೊದಲ ಆದ್ಯತೆ ಇದೆ?
ಈ ಯೋಜನೆಯ ಅಡಿಯಲ್ಲಿ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

5) ಅರ್ಜಿ ಸಲ್ಲಿಸಲು ವಿದ್ಯಾರ್ಹತೆ ಏನಿರಬೇಕು?
ಅಭ್ಯರ್ಥಿಗಳು ಕನಿಷ್ಠ ಹತ್ತನೇ ತರಗತಿ (SSLC) ಪಾಸ್ ಆಗಿರಬೇಕು.

6) ಡ್ರೈವಿಂಗ್ ಲೈಸೆನ್ಸ್ ಹೊಂದಿರುವುದು ಕಡ್ಡಾಯವೇ?
ಹೌದು, ಅರ್ಜಿದಾರರು ಲಘು ವಾಹನ ಚಾಲನಾ ಲೈಸೆನ್ಸ್ (LMV Driving License) ಅನ್ನು ಕಡ್ಡಾಯವಾಗಿ ಹೊಂದಿರಬೇಕು.

7) ಕುಟುಂಬದಲ್ಲಿ ಸರ್ಕಾರಿ ನೌಕರರು ಇದ್ದರೆ ಅರ್ಜಿ ಹಾಕಬಹುದೇ?
ಇಲ್ಲ, ಅರ್ಜಿದಾರರು ಅಥವಾ ಅವರ ಕುಟುಂಬದ ಸದಸ್ಯರುಗಳು ಸರ್ಕಾರಿ ನೌಕರರಾಗಿರಬಾರದು.

8) ಯೋಜನೆಗೆ ಯಾವ ಯಾವ ದಾಖಲೆಗಳು ಬೇಕಾಗುತ್ತವೆ?
ಆಧಾರ್ ಕಾರ್ಡ್, ಜಾತಿ-ಆದಾಯ ಪ್ರಮಾಣ ಪತ್ರ, SSLC ಅಂಕಪಟ್ಟಿ, ಡ್ರೈವಿಂಗ್ ಲೈಸೆನ್ಸ್, ಬ್ಯಾಂಕ್ ಖಾತೆ ವಿವರಗಳು, ಪಾಸ್‌ಪೋರ್ಟ್ ಫೋಟೋ ಸೇರಿದಂತೆ  ಪ್ರಮುಖ ದಾಖಲೆಗಳು ಬೇಕಾಗುತ್ತವೆ.

9) ಅರ್ಜಿಯನ್ನು ಹೇಗೆ ಸಲ್ಲಿಸಬೇಕು?
ತಮ್ಮ ಸಂಬಂಧಿತ ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯ ಕಚೇರಿಗೆ ಭೇಟಿ ನೀಡಿ ಅರ್ಜಿ ನಮೂನೆ ಪಡೆದು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕು.

10) ಯೋಜನೆ ಅಡಿಯಲ್ಲಿ ತರಬೇತಿ ನೀಡಲಾಗುತ್ತದೆಯೇ?
ಹೌದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ತಿಂಗಳ ಉಚಿತ ಉದ್ಯಮಶೀಲತೆ ಮತ್ತು ಕೌಶಲ್ಯ ಅಭಿವೃದ್ಧಿ ತರಬೇತಿ ನೀಡಲಾಗುತ್ತದೆ. ಜೊತೆಗೆ ಊಟ, ವಸತಿ ಮತ್ತು ಪ್ರೋತ್ಸಾಹ ಧನವೂ ಸಿಗುತ್ತದೆ.

 

Leave a Comment