Telegram Join My Telegram WhatsApp Join My WhatsApp

BPL Card Update 2026, Big Announcement : ನೀವು ಬಿ.ಪಿ.ಎಲ್‌ ಕಾರ್ಡ್‌ ಹೊಂದಿದ್ದರೆ ರದ್ದಾಗುವ ಸಾಧ್ಯತೆ, ಇಂದೇ ಪರಿಶೀಲಿಸಿಕೊಳ್ಳಿ

ನೀವು ಬಿ ಪಿ ಎಲ್‌ ಕಾರ್ಡ್‌ ಹೊಂದಿದ್ದೀರಾ ಇಂದೇ ನಿಮ್ಮ ಕಾರ್ಡ್‌ ಪರಿಶೀಲಿಸಿ (BPL Card Update)

ಕರ್ನಾಟಕ ಸರ್ಕಾರವು ಸಾರ್ವಜನಿಕ ವಿತರಣಾ ಪದ್ಧತಿಯನ್ನು ಅನುಸರಿಸಿ ಕುಟುಂಬಗಳ ಸಾಮಾಜಿಕ ಹಾಗೂ ಆರ್ಥಿಕ ಗುಣಮಟ್ಟವನ್ನು ನಿರ್ಧರಿಸಿ ಕುಟುಂಬಗಳಿಗೆ ರೇಷನ್ ಕಾರ್ಡ್ ಗಳನ್ನು ನೀಡಿದೆ ಆದರೆ ಈ ರೇಷನ್ ಕಾರ್ಡ್ ಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹಾಗೂ ನಕಲಿ ದಾಖಲೆಗಳ ಮೂಲಕ ಬಿಪಿಎಲ್ ಕಾರ್ಡ್ಗಳನ್ನು ಪಡೆದವರನ್ನು ಗುರುತಿಸಲು BPL Card Update ಮೂಲಕ ಸರ್ಕಾರವು ದೊಡ್ಡ ಕ್ರಮವನ್ನು ಕೈಗೊಂಡಿದೆ ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ಪರೀಕ್ಷಿಸಿ ಪರಿಶೀಲಿಸಿ ಕಾರ್ಡ್ ರದ್ದು ಮಾಡಿ ಅಥವಾ ಎಪಿಎಲ್ ಗೆ ವರ್ಗಾವಣೆ ಮಾಡುವುದರ ಮೂಲಕ  ಹಾಗೂ BPL Card Update ಮೂಲಕ ಭರ್ಜರಿ ಕಾರ್ಯಾಚರಣೆಯನ್ನು ಆರಂಭಿಸಿದೆ

ಅದರಂತೆಯೇ ಈ ಕಾರ್ಯವು ವೇಗವಾಗಿ ನಡೆಯುತ್ತಿದ್ದು ವಿಜಯನಗರ ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಗಳು ಪರಿಶೀಲನೆಗೆ ಒಳಪಟ್ಟಿದ್ದು ನೂರಾರು ಕಾರ್ಡ್ ಗಳು ರದ್ದಾಗಿವೆ ಇದರ ಜೊತೆಯಲ್ಲಿ ಸಾವಿರಕ್ಕೂ ಹೆಚ್ಚು ಬಿಪಿಎಲ್ ಕಾರ್ಡ್ ಗಳು ಎಪಿಎಲ್ ಕಾರ್ಡ್ ಗೆ ವರ್ಗಾವಣೆ ಆಗಿವೆ ಈ ಬದಲಾವಣೆಗಳಿಂದ ಸಾವಿರಾರು ಕುಟುಂಬಗಳು ಆತಂಕಕ್ಕೆ ಒಳಗಾಗಿದ್ದು ಫಲಾನುಭವಿಗಳು ಹಿಂದೆ ನಿಮ್ಮ ರೇಷನ್ ಕಾರ್ಡ್ ಅನ್ನು ಪರಿಶೀಲಿಸಿ ಬಿಪಿಎಲ್ ಕಾರ್ಡ್ ನಲ್ಲಿ ಉಳಿದಿದೆಯೋ ಅಥವಾ ತಿಳಿಸಲಾಗಿದೆ ರೇಷನ್ ಕಾರ್ಡ್ ನ ಸ್ಥಿತಿಯನ್ನು ಪರಿಶೀಲಿಸಲು ಸಂಪೂರ್ಣ ಲೇಖನವನ್ನು ಓದಿ

ಹೆಚ್ಚುವರಿ ಮಾಹಿತಿ : Aadhar Update 2026, Big Announcement : ಆಧಾರ್‌ ತಿದ್ದುಪಡಿ ಪ್ರಕ್ರಿಯೆ ಈಗ ಸುಲಭ, ಸಂಪೂರ್ಣ ಮಾಹಿತಿ ಇಲ್ಲಿದೆ

ಯಾಕೆ ಈ BPL Card Update ಪ್ರಕ್ರಿಯೆ

ಕರ್ನಾಟಕ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಅನಧಿಕೃತವಾಗಿ ಬಿಪಿಎಲ್ ಕಾರ್ಡ್ಗಳನ್ನು ಹೊಂದಿರುವ ಅನರ್ಹ ಫಲಾನುಭವಿಗಳನ್ನು ಗುರುತಿಸಿ ಕಾಡುಗಳನ್ನು ರದ್ದುಪಡಿಸಲು BPL Card Update ವಿಶೇಷ ಪರಿಶೀಲನ ಕಾರ್ಯಾಚರಣೆ ಆರಂಭಿಸಿದ್ದು ಕುಟುಂಬದ ಆದಾಯದ ಮಟ್ಟ ಆದಾಯ ತೆರಿಗೆ ಪಾವತಿ ಸರ್ಕಾರಿ ಉದ್ಯೋಗವನ್ನು ಹೊಂದಿರುವವರು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಜಮೀನು ಹೊಂದಿರುವುದು ವಾಹನದ ಮಾಲೀಕತ್ವದ ವಿಧಾನ ಸೇರಿದಂತೆ ಹಲವು ಅಂಶಗಳ ಆಧಾರದ ಮೇಲೆ ಕಾಡುಗಳನ್ನು ಮರು ಪರಿಶೀಲಿಸಿ ಬದಲಾವಣೆ ಹಾಗೂ ಕಾಡುಗಳ ವಜಾ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಈ BPL Card Update ಪ್ರಕ್ರಿಯೆಯಲ್ಲಿ ಅನರ್ಹ ಎಂದು ಸಾಬೀತಾದ ಕಾಡುಗಳನ್ನು ರದ್ದುಪಡಿಸುವ ಪ್ರಕ್ರಿಯೆ ಹಾಗೂ ಬಿಪಿಎಲ್ ನಿಂದ ಎಪಿಎಲ್ ಗೆ ವರ್ಗಾಯಿಸುವ ಪ್ರಕ್ರಿಯೆಯು ಮಂಚೂಣಿಯಲ್ಲಿದೆ

ಇದುವರೆಗೂ ಎಷ್ಟು ಕಾಡುಗಳು ರದ್ದಾಗಿವೆ ಎಷ್ಟು ಕಾಡುಗಳು ಬಿಪಿಎಲ್ ನಿಂದ ಎಪಿಎಲ್ ಗೆ ವರ್ಗಾವಣೆಯಾಗಿದೆ

ಇಡೀ ಕರ್ನಾಟಕ ರಾಜ್ಯದಲ್ಲಿ ವಿಜಯನಗರ ಜಿಲ್ಲೆಯಲ್ಲಿ ಹೆಚ್ಚು ಕಾಡುಗಳು ಬದಲಾವಣೆಗೆ ಒಳಪಟ್ಟಿದ್ದು ಜಿಲ್ಲೆಯ ಆರು ತಾಲೂಕುಗಳಿಂದ ಒಟ್ಟು 717 ರೇಷನ್ ಕಾರ್ಡ್ ಗಳು ರದ್ದಾಗಿದ್ದು 1772 ಬಿಪಿಎಲ್ ಕಾರ್ಡ್ ಗಳು ಎಪಿಎಲ್ ಕಾರ್ಡಿಗೆ ವರ್ಗಾವಣೆ ಆಗಿದೆ

BPL Card Update ಮೂಲಕ ಯಾವ ಕಾರಣಗಳಿಂದ ಕಾರ್ಡುಗಳು ರದ್ದಾಗುತ್ತಿವೆ

ಕರ್ನಾಟಕ ರಾಜ್ಯ ಆಹಾರ ಮತ್ತು ಸರಬರಾಜು ಇಲಾಖೆಯ ಮಾಹಿತಿಯ ಪ್ರಕಾರ ಈ ಕೆಳಕಂಡ ಅರ್ಹತೆಯನ್ನು ಹೊಂದಿರುವ ಕುಟುಂಬಗಳ ಬಿಪಿಎಲ್ ಕಾರ್ಡ್ ಗಳು ಅನರ್ಹ ಎಂದು ಗುರುತಿಸಿ ರದ್ದತಿ ಹಾಗೂ ವರ್ಗಾವಣೆಗೆ ಒಳಪಡುತ್ತಿವೆ.  ಈ BPL Card Update ಗೆ  ಕಾರಣಗಳೆಂದರೆ

  • ಕುಟುಂಬದ ಸದಸ್ಯರಲ್ಲಿ ಯಾರಾದರೂ ಸರ್ಕಾರಿ ಉದ್ಯೋಗದಲ್ಲಿ ಇರುವುದು
  • ಸರ್ಕಾರವು ಬಿಪಿಎಲ್ ಕಾರ್ಡನ್ನು ಹೊಂದಲು ನಿಗದಿಪಡಿಸಿರುವ ಆದಾಯದ ಮಟ್ಟಕ್ಕಿಂದ ಹೆಚ್ಚು ಆದಾಯ ಮಟ್ಟ ಇರುವುದು
  • ಹೆಚ್ಚಿನ ಆದಾಯ ಮಟ್ಟದಿಂದ ಆದಾಯ ತೆರಿಗೆ ಪಾವತಿದಾರರಾಗಿರುವುದು
  • 7 ಎಕರಿಗಿಂತ ಹೆಚ್ಚು ಭೂಮಿ ಕೃಷಿ ಅಥವಾ ಕೃಷಿಯ ತರ ಜಮೀನನ್ನು ಹೊಂದಿರುವವರು
  • ವ್ಯಾಪಾರದ ಉದ್ದೇಶದಿಂದ ಜಿ.ಎಸ್‌.ಟಿ ನೋಂದಣಿ ಅಂದರೆ ಸರಕು ಮತ್ತು ಸೇವಾ ತೆರಿಗೆ ನೋಂದಣಿಯನ್ನು ಹೊಂದಿರುವವರು
  • ನಕಲಿ ಮಾಹಿತಿಯನ್ನು ನೀಡಿ ಪಡೆದಿರುವ ಬಿಪಿಎಲ್ ಕಾಡುಗಳು
  • ಉತ್ತಮ ಆರ್ಥಿಕ ಸ್ಥಿತಿಯನ್ನು ಹೊಂದಿರುವುದು ಅಂದರೆ ಈ ಹಿಂದೆ ಆದಾಯದ ಮಟ್ಟ ಕಡಿಮೆ ಇದ್ದು ಆದಾಯದ ಮಟ್ಟ ಹೆಚ್ಚಿದ ಮೇಲೆಯೂ ಬಿಪಿಎಲ್ ಕಾರ್ಡ್ದಾರರಾಗಿ ಉಳಿದಿರುವುದು

ಈ ಮೇಲಿನ ಅರ್ಹತ ಮಾನದಂಡಗಳ ಆಧಾರದ ಮೇಲೆ ಬಿಪಿಎಲ್ ಕಾರ್ಡ್ ನ ಸೌಲಭ್ಯವನ್ನು ಪಡೆಯುತ್ತಿರುವವರ ಸ್ಥಿತಿಯು ರದ್ದತಿ ಹಾಗೂ ವರ್ಗಾವಣೆಗೆ  BPL Card Update ಒಳಪಡುತ್ತಿದೆ ಎಂದು ಇಲಾಖೆ ತಿಳಿಸಿದೆ

ನಿಮ್ಮ ಕಾರ್ಡ್ ರದ್ದಾದರೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು

ನೀವು ಬಿಪಿಎಲ್ ಕಾರ್ಡನ್ನು ಹೊಂದಲು ಅರ್ಹರಾಗಿದ್ದರು, ಕಾರ್ಡು ರದ್ದತಿಗೆ ಅಥವಾ ವರ್ಗಾವಣೆಗೆ ಒಳಪಟ್ಟಿದ್ದರೆ BPL Card Update ಆಗಿದ್ದರೆ ಈ ಕ್ರಮಗಳನ್ನು ತಕ್ಷಣವೇ ಕೈಗೊಳ್ಳುವುದರ ಮೂಲಕ ತಮ್ಮ ಕಾರ್ಡಿನ ರದ್ದತಿ ಹಾಗೂ ವರ್ಗಾವಣೆ ಕೋರಿಕೆಯನ್ನು ತಡೆದು ಬಿಪಿಎಲ್ ಕಾರ್ಡ್ ನಲ್ಲಿಯೇ ಉಳಿದಿರಬಹುದು

  • ತಾವು ರೇಷನ್ ಪಡೆಯುವ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಅಥವಾ ಸಮೀಪದ ತಾಲೂಕು ಆಹಾರ ಸರಬರಾಜು ಕಚೇರಿಗೆ ಭೇಟಿ ನೀಡಿ
  • ಸರ್ಕಾರವು ಬಿಪಿಎಲ್ ಕಾರ್ಡನ್ನು ಹೊಂದಲು ನಿಗದಿಪಡಿಸಿರುವ ಅಗತ್ಯ ದಾಖಲೆಗಳನ್ನು ಸಲ್ಲಿಸಿ
  • ಪ್ರಮುಖವಾಗಿ ಈ ಬಿಪಿಎಲ್ ಕಾರ್ಡ್ ನಿಗದಿಯಾಗಿರುವುದು ಕುಟುಂಬದ ಆದಾಯ ಮಟ್ಟ ಆಗಿರುವುದರಿಂದ ಚಾಲ್ತಿಯಲ್ಲಿರುವ ಆದಾಯ ಪ್ರಮಾಣ ಪತ್ರವನ್ನು ನೀಡಿ
  • ತಾವು ಹೊಂದಿರುವ ಜಮೀನು ಮತ್ತು ಸರ್ಕಾರಿ ಉದ್ಯೋಗ ಹೊಂದಿಲ್ಲದ ಅಥವಾ ವಾಹನ ಹೊಂದಿಲ್ಲದ ಬಗ್ಗೆ ಸ್ಪಷ್ಟಪಡಿಸಲು ಪ್ರಮಾಣ ಪತ್ರ ಅಂದರೆ ಅಫಿಡವಿಟನ್ನು ನೀಡಿ
  • ಕುಟುಂಬದ ಎಲ್ಲಾ ಸದಸ್ಯರ ಈಕೆ ವೈಸಿ ಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಿರಿ

ನೀವು ಸಲ್ಲಿಸುವ ಎಲ್ಲ ಮಾಹಿತಿಯು ಬಿಪಿಎಲ್ ಕಾರ್ಡನ್ನು ಪಡೆಯಲು BPL Card Update ಗೆ  ಅಧಿಕೃತವಾಗಿ ನಿರ್ಧರಿಸಿರುವ ಮಾನದಂಡಗಳ ಅಡಿಯಲ್ಲಿ ಬರುವುದಾದರೆ ಅಧಿಕಾರಿಗಳು ತಮ್ಮ ಸ್ಥಳ ಪರಿಶೀಲನೆ ನಡೆಸಿ ಅರ್ಹರೆಂದು ಕಂಡುಬಂದರೆ ತಮ್ಮ ಬಿಪಿಎಲ್ ಕಾರ್ಡ್ ರದ್ದತಿ ಅಥವಾ ಬದಲಾವಣೆಗೆ ಒಳಪಟ್ಟಿದ್ದರೆ ಪುನರ್ ಬಿಪಿಎಲ್ ಕಾರ್ಡಿಗೆ ಮರಳಿಸುವ ಸಾಧ್ಯತೆ ಹೆಚ್ಚಿರುತ್ತದೆ

ಸರ್ಕಾರದ ಈ BPL Card Update ರದ್ಧತಿಗೆ ಕಾರಣವೇನು ಇದರ ಉದ್ದೇಶ ಏನು

ಕರ್ನಾಟಕ ರಾಜ್ಯವು ಸಾರ್ವಜನಿಕ ವಿತರಣಾ ಪದ್ಧತಿಯನ್ನು ಶುರು ಮಾಡಿದ್ದರ ಪ್ರಾಥಮಿಕ ಕಾರಣ ಏನೆಂದರೆ ನಿಜವಾದ ಬಡವರಿಗೆ ಅನ್ನ ಭಾಗ್ಯ ಹಾಗೂ ರಿಯಾಯಿತಿ ದರದ ನ್ಯಾಯಬೆಲೆ ಅಂಗಡಿಗಳಲ್ಲಿ ಮೂಲಭೂತ ಆಹಾರ ಸೇವೆಗಳನ್ನು ಒದಗಿಸುವುದು ಆಗಿದೆ ಹಾಗೂ ಇದರ ಜೊತೆಯಲ್ಲಿ ಇತರ ಯೋಜನೆಗಳನ್ನು ತಲುಪಿಸುವ ಉದ್ದೇಶವನ್ನು ಹೊಂದಿದ್ದು ಅನರ್ಹರು ಬಿಪಿಎಲ್ ಸೌಲಭ್ಯವನ್ನು ಪಡೆಯುವುದರಿಂದ ಸರ್ಕಾರದ ಮೇಲೆ ಹೆಚ್ಚುವರಿ ಆರ್ಥಿಕ ಅವರೇ ಹಾಗೂ ಅರ್ಹರಿಗೆ ಎಲ್ಲಾ ಸೌಲಭ್ಯಗಳು ತಲುಪುವ ಸಾಧ್ಯತೆಯ ಮಟ್ಟ ಕಡಿಮೆಯಾಗುತ್ತಿದೆ ಆದುದರಿಂದ ಸರ್ಕಾರವು ಈ BPL Card Update ಉದ್ದೇಶವನ್ನು ಕೈಗೊಂಡಿದೆ

ಕರ್ನಾಟಕ ರಾಜ್ಯದಲ್ಲಿ ರೇಷನ್ ಕಾರ್ಡ್ ಗಳ ಮರುಪರಿಶೀಲನೆ ಶುರುವಾಗಿ ಉತ್ತಮ ರೀತಿಯಲ್ಲಿ ನಡೆಯುತ್ತಿರುವುದರಿಂದ ಪ್ರತಿಯೊಬ್ಬ ಬಿಪಿಎಲ್ ಕಾರ್ಡ್ ಫಲಾನುಭವಿಗಳು ತಮ್ಮ ಕಾರ್ಡ್ ನ ಸ್ಥಿತಿಯನ್ನು ಪರಿಶೀಲಿಸಿಕೊಳ್ಳುವುದು ಅಗತ್ಯವಾಗಿದೆ ಅನರ್ಹರು ಸೌಲಭ್ಯವನ್ನು ಅನಧಿಕೃತವಾಗಿ ಪಡೆಯುವುದನ್ನು ತಡೆಯುವ ಉದ್ದೇಶದಿಂದ ಹಾಗೂ ನಿಜವಾದ ಬಡ ಕುಟುಂಬಗಳಿಗೆ ಸರ್ಕಾರದ ಅರ್ಹ ಯೋಜನೆಗಳು ತಲುಪುವಂತೆ ಮಾಡುವ ಉದ್ದೇಶವಾಗಿದ್ದು ನೀವು ಬಿಪಿಎಲ್ ಕಾರ್ಡಿಗೆ ಅರ್ಹರಾಗಿದ್ದರು ಏನಾದರೂ ಸಮಸ್ಯೆ ಬಂದಲ್ಲಿ ತಮ್ಮ ತಾಲೂಕಿನ ಆಹಾರ ಇಲಾಖೆಯ ಕಚೇರಿಯನ್ನು ಸಂಪರ್ಕಿಸುವುದರ ಮೂಲಕ ಅವರು ಕೇಳಲಾಗುವ ದಾಖಲಾತಿಗಳನ್ನು ಸಲ್ಲಿಸಿ ತಮ್ಮ ಕಾರ್ಡ್ ಪದ್ಧತಿ ಅಥವಾ ಬದಲಾವಣೆಗೆ ಒಳಪಟ್ಟಿದ್ದರೆ ಪುನರ್ ಬಿಪಿಎಲ್ ಗೆ ಮರಳುವ ಸಾಧ್ಯತೆ ಹೆಚ್ಚಿರುತ್ತದೆ

BPL Card Update – FAQ’s

1) BPL Card Update ಅಂದರೆ ಏನು ಏಕೆ ಈ ಪ್ರಕ್ರಿಯೆ ಆಗುತ್ತಿದೆ ?
ಬಿಪಿಎಲ್ ಕಾರ್ಡ್ ಹೊಂದಿರುವವರನ್ನು ಸರ್ಕಾರ ಮರು ಪರಿಶೀಲಿಸುವ ಪ್ರಕ್ರಿಯೆಯಾಗಿದೆ.

2) ಸರ್ಕಾರ ಯಾಕೆ BPL ಕಾರ್ಡ್ ಪರಿಶೀಲನೆ ಕಾರ್ಯಾಚರಣೆ ಮಾಡುತ್ತಿದೆ?
ಅನರ್ಹರು ಬಿಪಿಎಲ್ ಸೌಲಭ್ಯ ಪಡೆಯದಂತೆ ತಡೆಯುವ  ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದೆ.

3) ಯಾರ BPL ಕಾರ್ಡ್ ರದ್ದತಿಗೆ ಒಳಪಡಬಹುದು?
ಸರ್ಕಾರಿ ಕೆಲಸ, ಹೆಚ್ಚು ಆದಾಯ, ದೊಡ್ಡ ಜಮೀನು ಅಥವಾ ಉತ್ತಮ ಆರ್ಥಿಕ ಸ್ಥಿತಿ ಇದ್ದವರ ಕಾರ್ಡ್ಗಳು ರದ್ದಾಗಬಹುದು.

4) BPL ಕಾರ್ಡ್ APL ಕಾರ್ಡ್ಗೆ ಏಕೆ ಬದಲಾಗುತ್ತದೆ?
ಕುಟುಂಬದ ಆದಾಯ ಹೆಚ್ಚಾದರೆ ಅಥವಾ ಬಿಪಿಎಲ್ ನಿಯಮಗಳಿಗೆ ಹೊಂದಿಕೆಯಾಗದಿದ್ದರೆ APL ಗೆ ಬದಲಾಗುತ್ತದೆ.

5) ರೇಶನ್ ಕಾರ್ಡ್ ಸ್ಥಿತಿ ಹೇಗೆ ಚೆಕ್ ಮಾಡಬಹುದು?
ಆನ್‌ಲೈನ್‌ನಲ್ಲಿ ಅಥವಾ ಹತ್ತಿರದ ರೇಷನ್ ಅಂಗಡಿ/ಆಹಾರ ಕಚೇರಿಯಲ್ಲಿ ಪರಿಶೀಲಿಸಬಹುದು.

6) ಅರ್ಹರಾಗಿದ್ದರೂ‌ ಕೂಡ ಕಾರ್ಡ್ ರದ್ದಾದರೆ ಏನು ಮಾಡಬೇಕು?
ಆಹಾರ ಇಲಾಖೆಯ ಕಚೇರಿಗೆ ಹೋಗಿ ಅಗತ್ಯ ದಾಖಲೆಗಳನ್ನು ನೀಡಿ ಮರುಪರಿಶೀಲನೆ ಮಾಡಿಸಬೇಕು.

7) ಯಾವ ಯಾವ ದಾಖಲೆಗಳು ಬೇಕಾಗಬಹುದು?
ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಜಮೀನು ಮಾಹಿತಿ ಮತ್ತು ಇತರೆ ಪ್ರಮುಖ ದಾಖಲೆಗಳು ಬೇಕಾಗಬಹುದು.

8) e-KYC ಪ್ರಕ್ರಿಯೆ ಮಾಡಿಸುವುದು ಕಡ್ಡಾಯವೇ?
ಹೌದು, ಕುಟುಂಬದ ಎಲ್ಲ ಸದಸ್ಯರ e-KYC ಕಡ್ಡಾಯವಾಗಿ ಮಾಡಿಸಬೇಕು.

9) ಈ ಪರಿಶೀಲನೆಯ ಮುಖ್ಯ ಉದ್ದೇಶ ಏನು?
ನಿಜವಾದ ಬಡವರಿಗೆ ಮಾತ್ರ ಸರ್ಕಾರದ ಸೌಲಭ್ಯ ತಲುಪಿಸುವುದು.

Leave a Comment