City Civil Court ನಲ್ಲಿ ವಿವಿಧ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ
ಕರ್ನಾಟಕ ರಾಜ್ಯದಲ್ಲಿ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಬೆಂಗಳೂರಿನ City Civil Court ನಿಂದ ಮತ್ತೊಂದು ಉತ್ತಮ ಅವಕಾಶ ಒದಗಿ ಬಂದಿದೆ ಬೆಂಗಳೂರು City Civil Court ನೇಮಕಾತಿ 2026ರ ಅಧಿಸೂಚನೆಯ ಪ್ರಕ್ರಿಯೆ ಮೂಲಕ ಶೀಘ್ರಲಿಪಿಗಾರರು, ಚಾಲಕರು, ಆದೇಶ ಜಾರಿಕಾರರು ಹಾಗೂ ಜವಾನ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ
ನ್ಯಾಯಾಂಗ ಇಲಾಖೆಯಲ್ಲಿ ಕೆಲಸ ಮಾಡುವುದರಿಂದ ಸಮಾಜದಲ್ಲಿ ಉತ್ತಮ ಗೌರವ ಸಿಗುವುದರ ಜೊತೆಯಲ್ಲಿ ವೃತ್ತಿ ಜೀವನದ ಅಂಶಗಳಲ್ಲಿ ಸ್ಥಿರತೆಯನ್ನು ಕಾಪಾಡಿಕೊಳ್ಳಬಹುದು ಆದುದರಿಂದ ಅರ್ಹ ಅಭ್ಯರ್ಥಿಗಳು ಕೊನೆ ದಿನಾಂಕದವರೆಗೂ ಕಾಯದೆ ಆದಷ್ಟು ಬೇಗ ಅರ್ಜಿ ಸಲ್ಲಿಸುವುದು ಉತ್ತಮವಾಗಿದೆ
ಪ್ರಸ್ತುತ ಲೇಖನದಲ್ಲಿ City Civil Court ನೇಮಕಾತಿಯ ಹುದ್ದೆಯ ವಿವರ, ವಯೋಮಿತಿ ಮತ್ತು ವಯೋಮಿತಿ ಸಡಿಲಿಕೆ, ವಿದ್ಯಾರ್ಹತೆ, ವೇತನ ಶ್ರೇಣಿ, ಹುದ್ದೆಗಳ ಪ್ರಯೋಜನಗಳು, ಅರ್ಜಿ ಸಲ್ಲಿಕೆ ವಿಧಾನ, ಆಯ್ಕೆ ವಿಧಾನ, ಪ್ರಮುಖ ದಾಖಲೆಗಳು ಹಾಗೂ ಪ್ರಶ್ನೋತ್ತರಗಳನ್ನು ನೀಡಲಾಗಿದೆ ಆದುದರಿಂದ ಪ್ರಸ್ತುತ ಲೇಖನವನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ.
City Civil Court ನೇಮಕಾತಿಯ ಮುಖ್ಯಾಂಶಗಳು
| ವಿವರ | ಮಾಹಿತಿ |
|---|---|
| ನೇಮಕಾತಿ ಸಂಸ್ಥೆ | ಬೆಂಗಳೂರು ನಗರ ಸಿವಿಲ್ ನ್ಯಾಯಾಲಯ (City Civil Court) |
| ಉದ್ಯೋಗ ಪ್ರಕಾರ | ಕರ್ನಾಟಕ ಸರ್ಕಾರಿ ಉದ್ಯೋಗ |
| ಹುದ್ದೆಗಳ ಹೆಸರು | ಶೀಘ್ರಲಿಪಿಗಾರರು ಗ್ರೇಡ್-III, ಬೆರಳಚ್ಚುಗಾರರು, ಚಾಲಕರು, ಆದೇಶ ಜಾರಿಕಾರ, ಜವಾನ ಹುದ್ದೆಗಳು |
| ಒಟ್ಟು ಹುದ್ದೆಗಳು | 22 ಹುದ್ದೆಗಳು |
| ಉದ್ಯೋಗ ಸ್ಥಳ | ಬೆಂಗಳೂರು |
| ಅರ್ಜಿ ಸಲ್ಲಿಸುವ ವಿಧಾನ | ಆನ್ಲೈನ್ (Online) |
| ಅರ್ಜಿ ಆರಂಭ ದಿನಾಂಕ | 01 ಜುಲೈ 2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 30 ಜುಲೈ 2026 |
| ಅಧಿಕೃತ ನೇಮಕಾತಿ | ಬೆಂಗಳೂರು ನಗರ ಸಿವಿಲ್ ನ್ಯಾಯಾಲಯ |
City Civil Court ನಲ್ಲಿ ಕೆಲಸ ಮಾಡುವುದರಿಂದ ಸಿಗುವ ಪ್ರಯೋಜನಗಳು
ಸರ್ಕಾರಿ ಉದ್ಯೋಗವೆಂದರೆ ಕೇವಲ ಮಾಸಿಕ ವೇತನವಲ್ಲದೆ ಅದರೊಂದಿಗೆ ಅನೇಕ ಸೌಲಭ್ಯಗಳು ಸಹ ದೊರೆಯುತ್ತವೆ. ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕ ಸರ್ಕಾರದ ನಿಯಮಾನುಸಾರ ಈ ಕೆಳಕಂಡ ಸೌಲಭ್ಯಗಳು ದೊರೆಯುತ್ತವೆ
- ಉತ್ತಮ ಮಾಸಿಕ ವೇತನ
- ತುಟ್ಟಿ ಭತ್ಯೆ
- ವಾರ್ಷಿಕ ವೇತನ ಹೆಚ್ಚಳ
- ಮನೆ ಬಾಡಿಗೆ ಭತ್ಯೆ
- ಪಿಂಚಣಿ ಸಂಬಂಧಿತ ಪ್ರಯೋಜನಗಳು
- ವೈದ್ಯಕೀಯ ಸೌಲಭ್ಯ
- ಸೇವಾ ಬಡ್ತಿ ಅವಕಾಶ
- ಉದ್ಯೋಗ ಭದ್ರತೆ
- ಸರಕಾರಿ ರಜೆಗಳು
- ಸಮಾಜದಲ್ಲಿ ಉತ್ತಮ ಗೌರವ
ಖಾಸಗಿ ವಲಯದ ಉದ್ಯೋಗಗಳಿಗೆ ಹೋಲಿಸಿದರೆ ಸರ್ಕಾರಿ ಉದ್ಯೋಗಗಳಲ್ಲಿ ಉದ್ಯೋಗದ ಸ್ಥಿರತೆ ಹೆಚ್ಚು ಇದ್ದು ಹೆಚ್ಚಿನ ಅಭ್ಯರ್ಥಿಗಳು ಇಂಥ ನೇಮಕಾತಿಯಲ್ಲಿ ಸಲ್ಲಿಸಲು ಹೆಚ್ಚಿನ ಆಸಕ್ತಿಯನ್ನು ತೋರುತ್ತಾರೆ
City Civil Court ನಲ್ಲಿ ಯಾವ ಯಾವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ
ಈ City Civil Court ನೇಮಕಾತಿ ಮೂಲಕ ಒಟ್ಟು 22 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ವಿವಿಧ ಶೈಕ್ಷಣಿಕ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಪ್ರತ್ಯೇಕ ಹುದ್ದೆಗಳನ್ನು ಮೀಸಲಾಗಿರಿಸಿದೆ ಎಸ್ಎಸ್ಎಲ್ಸಿ ಪಿಯುಸಿ ಹಾಗೂ ಡಿಪ್ಲೋಮಾ ವಿದ್ಯಾರ್ಹತೆಯನ್ನು ಹೊಂದಿರುವ ವಿದ್ಯಾರ್ಥಿಗಳಿಗೆ ಅವಕಾಶವನ್ನು ಕಲ್ಪಿಸಲಾಗಿದೆ
ನೇಮಕಾತಿಯ ಪ್ರಮುಖ ಹುದ್ದೆಗಳು
- ಶೀಘ್ರ ಲಿಪಿಗಾರರು ಗ್ರೇಡ್ 3
- ಬೆರಳಚ್ಚುಗಾರರು
- ಚಾಲಕರು
- ಆದೇಶ ಜಾರಿಕಾರರು
- ಜವಾನರು
ಪ್ರತಿ ಹುದ್ದೆಯು ತನ್ನದೇ ಆದ ಜವಾಬ್ದಾರಿ ಹಾಗೂ ಕರ್ತವ್ಯಗಳನ್ನು ಹೊಂದಿದ್ದು ನ್ಯಾಯಾಲಯದ ಆಡಳಿತ ಹಾಗೂ ನ್ಯಾಯಾಂಗ ಕಾರ್ಯಗಳು ಉಗಮವಾಗಿ ನಡೆಯುವಲ್ಲಿ ಈ ಸಿಬ್ಬಂದಿಗಳ ಪಾತ್ರವು ಪ್ರಮುಖವಾಗಿದೆ
ಹುದ್ದೆಗಳ ಸಂಖ್ಯೆ ಮತ್ತು ಸಂಪೂರ್ಣ ವಿವರ
ನಗರ ಸಿವಿಲ್ ನ್ಯಾಯಾಲಯವು ಪ್ರಸ್ತುತ ಹಾಗೂ ಹಿಂಬಾಕಿ ಉಳಿದಿದ್ದ ಹುದ್ದೆಗಳಿಗೆ ಸೇರಿಸಿ ಒಟ್ಟು 22 ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ ಹುದ್ದೆಗಳ ವಿವರ ಈ ಕೆಳಕಂಡಂತಿದೆ
ಶೀಘ್ರ ಲಿಪಿಗಾರರು ಗ್ರೇಡ್ 3 (ಹಿಂಬಾಕಿ)
ಒಟ್ಟು ಹುದ್ದೆಗಳು : 05
ಈ ಹಿಂದೆ ನೇಮಕಾತಿಗಳಲ್ಲಿ ಭರ್ತಿಯಾಗದೇ ಉಳಿದಿರುವ ಹುದ್ದೆಗಳನ್ನು ಹಿಂಬಾಕಿ ವಿಭಾಗದಲ್ಲಿ ಭರ್ತಿ ಮಾಡಲಾಗುತ್ತಿದ್ದು ಈ ಹುದ್ದೆಗೆ ಶೀಘ್ರ ಲಿಪಿ ಮತ್ತು ಬೆರಳಚ್ಚು ಕೌಶಲ್ಯ ಹೊಂದಿರುವ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ
ಶೀಘ್ರ ಲಿಪಿಗಾರರು ಗ್ರೇಡ್ 3 (ಪ್ರಸ್ತುತ)
ಒಟ್ಟು ಹುದ್ದೆಗಳು : 01
ಇದು ಪ್ರಸ್ತುತ ಕಾಲಿ ಇರುವ ಹುದ್ದೆಯಾಗಿದ್ದು ಆಯ್ಕೆಯಾದ ಅಭ್ಯರ್ಥಿಗೆ ನ್ಯಾಯಾಲಯದ ವಿಭಾಗಗಳಲ್ಲಿ ಕೆಲಸ ಮಾಡುವ ಅವಕಾಶವಿರುತ್ತದೆ
ಬೆರಳಚ್ಚುಗಾರರು (ಹಿಂಬಾಕಿ)
ಒಟ್ಟು ಹುದ್ದೆಗಳು : 01
ಇಂದಿನ ನೇಮಕಾತಿಯಲ್ಲಿ ಭರ್ತಿಯಾಗದೆ ಖಾಲಿ ಉಳಿದಿರುವ ಹುದ್ದೆಯ ಭರ್ತಿ ಪ್ರಕ್ರಿಯೆ
ಬೆರಳಚ್ಚುಗಾರರು (ಪ್ರಸ್ತುತ)
ಒಟ್ಟು ಹುದ್ದೆಗಳು : 06
ಈ ನೇಮಕಾತಿಯಲ್ಲಿ ಅತಿ ಹೆಚ್ಚು ಅವಕಾಶ ಇರುವ ಹುದ್ದೆಗಳಲ್ಲಿ ಬೆರಳಚ್ಚುಗಾರ ಹುದ್ದೆಯು ಒಂದಾಗಿದೆ ಕಂಪ್ಯೂಟರ್ ಟೈಪಿಂಗ್ ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್ ನಲ್ಲಿ ಪರಿಣತಿ ಹೊಂದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ
ಚಾಲಕರು
ಒಟ್ಟು ಹುದ್ದೆಗಳು : 01
ನ್ಯಾಯಾಲಯದ ಅಧಿಕೃತ ವಾಹನಗಳನ್ನು ಚಾಲನೆ ಮಾಡುವ ಜವಾಬ್ದಾರಿ ಚಾಲಕರಿಗೆ ಇದ್ದು ಬಾರಿ ವಾಹನ ಚಾಲನಾ ಪರವಾನಗಿ ಹೊಂದಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿರುತ್ತದೆ
ಆದೇಶ ಜಾರಿಕಾರರು
ಒಟ್ಟು ಹುದ್ದೆಗಳು : 01
ನ್ಯಾಯಾಲಯದ ಆದೇಶಗಳನ್ನು ಸಂಬಂಧಪಟ್ಟ ವ್ಯಕ್ತಿಗಳಿಗೆ ತಲುಪಿಸುವುದು ವಾರೆಂಟ್ ಗಳನ್ನು ಜಾರಿಗೊಳಿಸುವುದು ಸೇರಿದಂತೆ ಇತರೆ ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸುತ್ತಾರೆ
ಜವಾನ
ಒಟ್ಟು ಹುದ್ದೆಗಳು : 07
ನ್ಯಾಯಾಲಯದ ಭದ್ರತೆ ದಾಖಲೆಗಳ ಸಾಗಣೆ, ಕಚೇರಿ ಸಹಾಯಕ ಕಾರ್ಯಗಳು ಹಾಗೂ ಸಾರ್ವಜನಿಕರಿಗೆ ಮಾರ್ಗದರ್ಶನ ಹಾಗೂ ಮಾಹಿತಿ ನೀಡುವಂತಹ ಜವಾಬ್ದಾರಿಯನ್ನು ಜವಾನರು ಕಾರ್ಯನಿರ್ವಹಿಸುತ್ತಾರೆ
ಎಸ್ ಎಸ್ ಎಲ್ ಸಿ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ಸರ್ಕಾರಿ ಉದ್ಯೋಗಾವಕಾಶವಾಗಿದೆ
ಈ City Civil Court ನೇಮಕಾತಿ ಯಾರಿಗೆ ಉತ್ತಮ ಅವಕಾಶ
ಈ ನೇಮಕಾತಿಯು ಕೆಳಕಂಡ ಅಭ್ಯರ್ಥಿಗಳಿಗೆ ಸೂಕ್ತವಾದ ಸರ್ಕಾರಿ ಉದ್ಯೋಗಾವಕಾಶವಾಗಿದೆ
- ಎಸ್ ಎಸ್ ಎಲ್ ಸಿ ಉತ್ತೀರ್ಣಗೊಂಡ ಅಭ್ಯರ್ಥಿಗಳು
- ದ್ವಿತೀಯ ಪಿಯುಸಿ ಉತ್ತೀರ್ಣರಾದ ಅಭ್ಯರ್ಥಿಗಳು
- ಡಿಪ್ಲೋಮಾ ಪೂರ್ಣಗೊಳಿಸಿದ ಅಭ್ಯರ್ಥಿಗಳು
- ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್ ನಲ್ಲಿ ಪರಿಣಿತಿ ಹೊಂದಿರುವವರು
- ಶೀಘ್ರ ಲಿಪಿ ಮತ್ತು ಸ್ಟೆನೋಗ್ರಫಿ ಅರ್ಹತೆ ಹೊಂದಿರುವ ಅಭ್ಯರ್ಥಿಗಳು
- ಭಾರೀ ವಾಹನ ಚಾಲನಾ ಪರವಾನಗಿ ಹೊಂದಿರುವ ಚಾಲಕರು
- ಸರ್ಕಾರಿ ವಲಯದಲ್ಲಿ ಉದ್ಯೋಗವನ್ನು ಪಡೆದು ವೃತ್ತಿ ಜೀವನ ರೂಪಿಸಿಕೊಳ್ಳಬೇಕೆಂದು ಬಯಸುವ ಯುವಕರು
- ಕಲ್ಯಾಣ ಕರ್ನಾಟಕ ಮೀಸಲಾತಿಗೆ ಅರ್ಹ ಅಭ್ಯರ್ಥಿಗಳು
ಈ City Civil Court ನೇಮಕಾತಿ ಮೂಲಕ ವಿವಿಧ ಶೈಕ್ಷಣಿಕ ಹಿನ್ನೆಲೆ ಹಾಗೂ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಸರ್ಕಾರಿ ಉದ್ಯೋಗವನ್ನು ಪಡೆಯುವ ಅವಕಾಶವನ್ನು ಹೊಂದಬಹುದು
ಹುದ್ದೆಗಳ ಸಂಪೂರ್ಣ ವಿವರ
ಬೆಂಗಳೂರು City Civil Court ನೇಮಕಾತಿ 2026 ಅಧಿಕೃತ ಅಧಿಸೂಚನೆಯ ಪ್ರಕಾರ ಪ್ರತಿಯೊಂದು ಹುದ್ದೆಯೂ ಸಹ ನ್ಯಾಯಾಂಗ ವ್ಯವಸ್ಥೆಯಲ್ಲಿ ತನ್ನದೇ ಆದ ಮಹತ್ವವನ್ನು ಹೊಂದಿದ್ದು ನ್ಯಾಯಾಲಯದ ಆಡಳಿತಾತ್ಮಕ ಕಾರ್ಯಗಳು ಸುಗಮವಾಗಿ ನಡೆಯಲು ಶೀಘ್ರ ಲಿಪಿಕಾರರು, ಬೆರಳಚ್ಚುಗಾರರು, ಚಾಲಕರು, ಆದೇಶ ಜಾರಿಕಾರರು ಹಾಗೂ ಜವಾನರು ಪ್ರಮುಖ ಪಾತ್ರ ವಹಿಸುತ್ತಾರೆ
ಆದುದರಿಂದ ಅರ್ಜಿ ಸಲ್ಲಿಸುವ ಮುನ್ನ ಪ್ರತಿಯೊಂದು ಹುದ್ದೆಯ ಕರ್ತವ್ಯಗಳು ಅಗತ್ಯ ಕೌಶಲ್ಯಗಳು ಹಾಗೂ ಭವಿಷ್ಯದ ಅವಕಾಶಗಳ ಬಗ್ಗೆ ತಿಳಿದುಕೊಳ್ಳುವುದು ಪ್ರಮುಖವಾಗಿದೆ
ಶೀಘ್ರ ಲಿಪಿಕಾರರು ಗ್ರೇಡ್ 3 (Stenographer Grade 3)
ಶೀಘ್ರ ಲಿಪಿಕಾರರು ನ್ಯಾಯಾಲಯದ ಪ್ರಮುಖ ಹುದ್ದೆಗಳಲ್ಲಿ ಒಂದಾಗಿದ್ದು ನ್ಯಾಯಾಧೀಶರು ಅಥವಾ ನ್ಯಾಯಾಲಯದ ಅಧಿಕಾರಿಗಳು ಹೇಳುವ ಮಾಹಿತಿಯನ್ನು ಶೀಘ್ರ ಲಿಪಿ ಮೂಲಕ ದಾಖಲಿಸಿ ಅದನ್ನು ಕಂಪ್ಯೂಟರ್ನಲ್ಲಿ ಟೈಪ್ ಮಾಡಿ ಅಧಿಕೃತ ದಾಖಲೆಗಳನ್ನಾಗಿ ಸಿದ್ಧಪಡಿಸುವ ಜವಾಬ್ದಾರಿಯನ್ನು ಈ ಸಿಬ್ಬಂದಿಗಳು ಹೊಂದಿರುತ್ತಾರೆ
ಈ ಹುದ್ದೆಗೆ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಉತ್ತಮ ರೀತಿಯ ಟೈಪಿಂಗ್ ಹಾಗೂ ಶೀಘ್ರ ಲಿಪಿ ಕೌಶಲ್ಯವನ್ನು ಹೊಂದುವುದು ಅಗತ್ಯವಾಗಿದೆ ಸಮಯ ಪಾಲನೆ ವೇಗ ಮತ್ತು ನಿಖರತೆಯನ್ನು ಈ ಹುದ್ದೆಗಳಲ್ಲಿ ಹೊಂದಬೇಕಾಗುತ್ತದೆ
ಪ್ರಮುಖ ಕರ್ತವ್ಯಗಳು
- ನ್ಯಾಯಾಧೀಶರ ನಿರ್ದೇಶನಗಳನ್ನು ಶೀಘ್ರ ಲಿಪಿಯಲ್ಲಿ ನಿಖರವಾಗಿ ದಾಖಲಿಸುವುದು
- ನ್ಯಾಯಾಧೀಶರ ತೀರ್ಪುಗಳು ಹಾಗೂ ಆದೇಶಗಳನ್ನು ಟೈಪ್ ಮಾಡುವುದು
- ನ್ಯಾಯಾಂಗ ಸಭೆಗಳ ಕಾರ್ಯ ವಿವರಗಳನ್ನು ಸಿದ್ಧಪಡಿಸುವುದು
- ನ್ಯಾಯಾಲಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸುರಕ್ಷಿತವಾಗಿ ನಿರ್ವಹಿಸುವುದು
- ಅಗತ್ಯವಿದ್ದಾಗ ವಿವಿಧ ರೀತಿಯ ಆಡಳಿತಾತ್ಮಕ ಕಾರ್ಯಗಳಲ್ಲಿ ಭಾಗವಹಿಸಿ ಸಹಕರಿಸುವುದು
- ಗೌಪ್ಯ ದಾಖಲೆಗಳನ್ನು ರಹಸ್ಯವಾಗಿ ಕಾಪಾಡುವುದು
ಈ ಹುದ್ದೆಗೆ ಬೇಕಾದ ಕೌಶಲ್ಯಗಳು
- ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಶೀಘ್ರ ಲಿಪಿ ಜ್ಞಾನ
- ವೇಗವಾದ ಟೈಪಿಂಗ್ ಕೌಶಲ್ಯಗಳು
- ಭಾಷೆಯ ಮೇಲೆ ಉತ್ತಮ ಹಿಡಿತ
- ಉತ್ತಮ ಕಂಪ್ಯೂಟರ್ ಜ್ಞಾನ
- ಸಮಯ ನಿರ್ವಹಣೆಯ ಕೌಶಲ್ಯ
- ನಿಖರವಾಗಿ ಮತ್ತು ವೇಗವಾಗಿ ಕೆಲಸ ಮಾಡುವ ಸಾಮರ್ಥ್ಯ
ಬೆರಳಚ್ಚುಗಾರರು (Typists)
ಬೆರಳಚ್ಚುಗಾರರು ನ್ಯಾಯಾಲಯದ ದಾಖಲೆ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು ನ್ಯಾಯಾಲಯಕ್ಕೆ ಸಂಬಂಧಿಸಿದ ಅರ್ಜಿಗಳು, ತೀರ್ಪುಗಳು, ನೋಟಿಸ್ ಗಳು, ಆದೇಶಗಳು ಮತ್ತು ಇತರೆ ಅಧಿಕೃತ ದಾಖಲೆಗಳನ್ನು ನಿಖರವಾಗಿ ಟೈಪ್ ಮಾಡಿ ಸಂರಕ್ಷಿಸುವ ಜವಾಬ್ದಾರಿ ಇವರ ಮೇಲಿರುತ್ತದೆ
ಇಂದಿನ ಡಿಜಿಟಲ್ ಯುಗದಲ್ಲಿ ಹೆಚ್ಚಿನ ದಾಖಲೆಗಳು ಕಂಪ್ಯೂಟರ್ ಮೂಲಕ ನಿರ್ವಹಿಸಲಾಗುವುದರಿಂದ ಕಂಪ್ಯೂಟರ್ ಜ್ಞಾನ ಮತ್ತು ವೇಗವಾಗಿ ಟೈಪಿಂಗ್ ಮಾಡುವುದು ಅತ್ಯಂತ ಅಗತ್ಯವಾಗಿದೆ
ಪ್ರಮುಖ ಕರ್ತವ್ಯಗಳು
- ನ್ಯಾಯಾಲಯದ ದಾಖಲೆಗಳನ್ನು ಕಂಪ್ಯೂಟರ್ನಲ್ಲಿ ಯಾವುದೇ ತಪ್ಪಿಲ್ಲದೆ ಟೈಪ್ ಮಾಡುವುದು
- ಅರ್ಜಿಗಳು ಮತ್ತು ಅಧಿಕೃತ ಪತ್ರಗಳನ್ನು ಸಿದ್ಧಪಡಿಸುವುದು
- ದಾಖಲೆಗಳಲ್ಲಿ ಯಾವುದಾದರು ದೋಷಗಳಿದ್ದಲ್ಲಿ ಸರಿ ಮಾಡುವುದು
- ಡಿಜಿಟಲ್ ದಾಖಲೆಗಳನ್ನು ಸುರಕ್ಷಿತವಾಗಿ ನಿರ್ವಹಿಸುವುದು
- ನ್ಯಾಯಾಲಯದಲ್ಲಿ ಇರುವ ವಿವಿಧ ವಿಭಾಗಗಳೊಂದಿಗೆ ಸಮನ್ವಯತೆಯನ್ನು ಸಾಧಿಸುವುದು
ಈ ಹುದ್ದೆಗಳ ವಿಶೇಷತೆ
- ಕಂಪ್ಯೂಟರ್ ಆಧಾರಿತ ಕೆಲಸ
- ನಿಯಮಿತವಾಗಿರುವ ಕಚೇರಿ ಸಮಯ
- ಉತ್ತಮ ರೀತಿಯ ಉದ್ಯೋಗ ಭದ್ರತೆ
- ಭವಿಷ್ಯದಲ್ಲಿ ಪದೋನ್ನತಿ ಅವಕಾಶಗಳು
- ಕಚೇರಿ ಆಡಳಿತದಲ್ಲಿ ಪ್ರಮುಖ ಪಾತ್ರ
ಚಾಲಕರ ಹುದ್ದೆ (Driver)
ಚಾಲಕರ ಹುದ್ದೆಯು ಕೇವಲ ವಾಹನ ಚಾಲನೆಗೆ ಸೀಮಿತವಾಗಿರುವುದಿಲ್ಲ ಪ್ರತಿಯಾಗಿ ನ್ಯಾಯಾಲಯದ ಅಧಿಕೃತ ವಾಹನಗಳನ್ನು ಸುರಕ್ಷಿತವಾಗಿ ಚಾಲನೆ ಮಾಡುವುದು ವಾಹನಗಳ ನಿರ್ವಹಣೆ ಹಾಗೂ ಅಗತ್ಯ ಸಂದರ್ಭಗಳಲ್ಲಿ ನ್ಯಾಯಾಂಗ ಅಧಿಕಾರಿಗಳ ಅಧಿಕೃತ ಪ್ರಯಾಣವನ್ನು ಸುರಕ್ಷಿತವಾಗಿ ಹಾಗೂ ಸುಗಮ ರೀತಿಯಲ್ಲಿ ವಹಿಸಬೇಕಾದ ಜವಾಬ್ದಾರಿಯನ್ನು ಹೊಂದಿರುತ್ತಾರೆ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಭಾರಿ ವಾಹನ ಚಾಲನಾ ಪರವಾನಗಿ ಯನ್ನು ಹೊಂದಿರಬೇಕು
ಚಾಲಕರ ಕರ್ತವ್ಯಗಳು
- ನ್ಯಾಯಾಲಯದ ಅಧಿಕೃತ ವಾಹನಗಳನ್ನು ಸುರಕ್ಷಿತವಾಗಿ ಚಾಲನೆ ಮಾಡಬೇಕು
- ವಾಹನಗಳ ಉತ್ತಮ ನಿರ್ವಹಣೆ
- ವಾಹನಗಳ ದಾಖಲೆಗಳನ್ನು ನವೀಕರಿಸುವ ಬಗ್ಗೆ ಎಚ್ಚರಿಕೆ ಹೊಂದಿರಬೇಕು
- ಸಮಯಕ್ಕೆ ಸರಿಯಾಗಿ ಅಧಿಕಾರಿಗಳನ್ನು ಗಮ್ಯಸ್ಥಾನಕ್ಕೆ ತಲುಪಿಸುವುದು
- ರಸ್ತೆ ಸುರಕ್ಷಿತ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬಬೇಕು
ಅಗತ್ಯ ಕೌಶಲ್ಯಗಳು
- ಸುರಕ್ಷಿತ ವಾಹನ ಚಾಲನಾ ಅನುಭವ ಹೊಂದಿರಬೇಕು
- ಸಂಚಾರಿ ನಿಯಮಗಳ ಅರಿವು ಇರಬೇಕು
- ವಾಹನದ ಸಾಮಾನ್ಯ ತಾಂತ್ರಿಕ ಜ್ಞಾನ ಹೊಂದಿರಬೇಕು
- ಶಿಸ್ತು ಮತ್ತು ಸಮಯ ಪಾಲನೆ ಪಾಲಿಸಬೇಕು
- ಜವಾಬ್ದಾರಿಯುತ ಕಾರ್ಯನಿರ್ವಹಣೆ ಮಾಡಬೇಕು
ಆದೇಶ ಜಾರಿಕಾರ ಹುದ್ದೆ (Process Server)
ನ್ಯಾಯಾಲಯದ ಆದೇಶಗಳನ್ನು ಸಂಬಂಧಪಟ್ಟ ವ್ಯಕ್ತಿಗಳಿಗೆ ತಲುಪಿಸುವ ಜವಾಬ್ದಾರಿಯನ್ನು ಆದೇಶ ಜಾರಿಕಾರರು ಹೊಂದಿರುತ್ತಾರೆ. ನ್ಯಾಯಾಲಯವು ಹೊರಡಿಸುವ ಸಮನ್ಸ್ ಗಳು, ವಾರೆಂಟ್ ಗಳು, ನೋಟಿಸ್ ಗಳು ಹಾಗೂ ಇತರೆ ದಾಖಲೆಗಳನ್ನು ಸಂಬಂಧಪಟ್ಟ ವ್ಯಕ್ತಿಗಳಿಗೆ ಕಾನೂನು ಬದ್ಧವಾಗಿ ತಲುಪಿಸುವುದು ಇವರ ಮುಖ್ಯ ಕರ್ತವ್ಯವಾಗಿದೆ
ಪ್ರಮುಖ ಕರ್ತವ್ಯಗಳು
- ನ್ಯಾಯಾಲಯದ ಆದೇಶಗಳನ್ನು ಸಂಬಂಧಪಟ್ಟ ವ್ಯಕ್ತಿಗಳಿಗೆ ತಲುಪಿಸುವುದು
- ಸಮನ್ಸ್ ಮತ್ತು ನೋಟಿಸ್ ಗಳನ್ನು ಜಾರಿ ಮಾಡುವುದು
- ದಾಖಲೆಗಳನ್ನು ಸರಿಯಾದ ಸಮಯಕ್ಕೆ ಸಲ್ಲಿಸುವುದು
- ನ್ಯಾಯಾಲಯದ ಅಧಿಕಾರಿಗಳೊಂದಿಗೆ ಉತ್ತಮ ರೀತಿಯಲ್ಲಿ ಸಮನ್ವಯವನ್ನು ಸಾಧಿಸುವುದು
- ವಿವಿಧ ಸ್ಥಳಗಳಿಗೆ ಅಧಿಕೃತ ಕರ್ತವ್ಯದ ನಿಮಿತ್ತ ಭೇಟಿ ನೀಡುವುದು
ಹುದ್ದೆಗೆ ಬೇಕಾಗುವ ಪ್ರಮುಖ ಗುಣಗಳು
- ಉತ್ತಮ ಸಂವಹನ ಕೌಶಲ್ಯ
- ಉತ್ತಮ ಸಮಯಪಾಲನ ಗುಣ
- ಜವಾಬ್ದಾರಿಯುತ ಸೇವೆ
- ಕನ್ನಡ ಓದಲು ಮತ್ತು ಬರೆಯಲು ಉತ್ತಮ ಜ್ಞಾನ ಹೊಂದಿರಬೇಕು
- ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವ ಸಾಮರ್ಥ್ಯವನ್ನು ಹೊಂದಿರಬೇಕು
ಜವಾನ ಹುದ್ದೆಗಳು (Peon)
ಜವಾನ ಹುದ್ದೆಗಳು ನ್ಯಾಯಾಲಯದ ಮೂಲ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು ನ್ಯಾಯಾಲಯದ ಒಳಾಂಗಣ ವ್ಯವಸ್ಥೆ ಸುಗಮವಾಗಿ ಕಾರ್ಯನಿರ್ವಹಿಸಲು ಇವರ ಜವಾಬ್ದಾರಿ ಅತ್ಯಗತ್ಯವಾಗಿದೆ
ಈ ನೇಮಕಾತಿಯಲ್ಲಿ ಒಟ್ಟು 7 ಜವಾಣ ಹುದ್ದೆಗಳು ಇರುವುದರಿಂದ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಯನ್ನು ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ
ಪ್ರಮುಖ ಕರ್ತವ್ಯಗಳು
- ನ್ಯಾಯಾಲಯದ ದಾಖಲೆಗಳನ್ನು ವಿವಿಧ ವಿಭಾಗಗಳಿಗೆ ಸುರಕ್ಷಿತವಾಗಿ ಸಾಗಿಸುವುದು
- ನ್ಯಾಯಾಲಯದ ಕೊಠಡಿಗಳನ್ನು ನಿರ್ವಹಿಸುವುದು
- ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡುವುದು
- ಕಚೇರಿ ದಾಖಲೆಗಳನ್ನು ಸಾಗಿಸುವುದು
- ನ್ಯಾಯಾಧೀಶರು ಹಾಗೂ ಸಿಬ್ಬಂದಿಗಳಿಗೆ ಅಗತ್ಯ ಸಹಕಾರ ನೀಡುವುದು
- ನ್ಯಾಯಾಲಯದ ಸಭಾಂಗಣ ವ್ಯವಸ್ಥೆಯನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳುವುದು
- ಅಂಚೆ ಹಾಗೂ ಅಧಿಕೃತ ದಾಖಲೆಗಳನ್ನು ತಲುಪಿಸುವುದು
ಅಗತ್ಯ ಕೌಶಲ್ಯಗಳು
- ಕನ್ನಡ ಭಾಷೆ ಓದು ಮತ್ತು ಬರವಣಿಗೆ ಉತ್ತಮ ರೀತಿಯಲ್ಲಿ ಬರಬೇಕು
- ಶಿಸ್ತು ಪಾಲನೆ ಮತ್ತು ಪ್ರಾಮಾಣಿಕತೆ ಕಾಪಾಡಿಕೊಳ್ಳಬೇಕು
- ದೈಹಿಕವಾಗಿ ಆರೋಗ್ಯವಾಗಿರಬೇಕು
- ತಂಡದೊಂದಿಗೆ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿರಬೇಕು
- ಸಾರ್ವಜನಿಕರೊಂದಿಗೆ ಉತ್ತಮ ರೀತಿಯಲ್ಲಿ ವರ್ತಿಸಬೇಕು
ಬೆಂಗಳೂರು ಸಿವಿಲ್ ನ್ಯಾಯಾಲಯದಲ್ಲಿ ಕೆಲಸ ಮಾಡುವುದರ ವಿಶೇಷತೆಗಳು
ಈ City Civil Court ನಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಕೇವಲ ಮಾಸಿಕ ವೇತನವಲ್ಲದೆ ವೃತ್ತಿಪರ ಬೆಳವಣಿಗೆಗೂ ಸಹ ಅಗತ್ಯ ಅವಕಾಶಗಳನ್ನು ಕಲ್ಪಿಸಲಾಗಿದೆ ಈ ಹುದ್ದೆಗಳ ಪ್ರಮುಖ ಅನುಕೂಲಗಳೆಂದರೆ
- ಸ್ಥಿರ ಸರಕಾರಿ ಉದ್ಯೋಗ
- ವಿವಿಧ ರೀತಿಯ ಸರ್ಕಾರಿ ಭತ್ಯೆಗಳು
- ಉದ್ಯೋಗ ಭದ್ರತೆ
- ನಿಯಮಿತ ವೇತನ ಮತ್ತು ವಾರ್ಷಿಕ ವೇತನ ಹೆಚ್ಚಳ
- ಪದೋನ್ನತಿ ಅವಕಾಶಗಳು
- ಸಮಾಜದಲ್ಲಿ ಗೌರವಯುತ ಸ್ಥಾನಮಾನ
- ನಿವೃತ್ತಿ ನಂತರದ ಸೌಲಭ್ಯಗಳು
- ಅನುಭವದ ಆಧಾರದ ಮೇಲೆ ಹೆಚ್ಚಿನ ಜವಾಬ್ದಾರಿಗಳ ನಿರ್ವಹಣೆ
ಈ City Civil Court ಹುದ್ದೆಗಳಿಗೆ ಯಾರು ಅರ್ಜಿ ಸಲ್ಲಿಸಬಹುದು (Who Can Apply)
- ಎಸ್ ಎಸ್ ಎಲ್ ಸಿ ಉತ್ತರಣರಾಗಿರುವವರು : ಜವಾನ, ಆದೇಶ ಜಾರಿಕಾರ ಮತ್ತು ಚಾಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕು
- ದ್ವಿತೀಯ ಪಿಯುಸಿ ಉತ್ತೀರ್ಣರು : ಬೆರಳಚ್ಚುಗಾರ ಹಾಗೂ ಶೀಘ್ರ ಲಿಪಿಕಾರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕು
- ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್ ಪ್ರಮಾಣ ಪತ್ರ ಹೊಂದಿರುವ ಅಭ್ಯರ್ಥಿಗಳು : ಬೆರಳಚ್ಚುಗಾರ ಮತ್ತು ಶೀಘ್ರ ಲಿಪಿಕಾರ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕು
- ಭಾರಿ ವಾಹನ ಚಾಲನ ಪರವಾಗಿ ಹೊಂದಿರುವವರು : ಚಾಲಕರ ಹುದ್ದೆಗೆ ಅರ್ಜಿ ಸಲ್ಲಿಸಬೇಕು
ಈ ಮೇಲಿನ ಹುದ್ದೆಗಳಿಗೆ ವಿದ್ಯಾರ್ಹತೆಗೆ ಅನುಗುಣವಾಗಿ ಮಾಹಿತಿಯನ್ನು ನೀಡಲಾಗಿದ್ದು ಸರ್ಕಾರಿ ಸೇವೆಯಲ್ಲಿ ವೃತ್ತಿ ಜೀವನ ಆರಂಭಿಸಲು ಉತ್ತಮ ಅವಕಾಶವನ್ನು ನೀಡಲಾಗಿದೆ
City Civil Court ನೇಮಕಾತಿಯ ವಿದ್ಯಾರ್ಹತೆ ವಿವರ (Qualification Details)
ಶೀಘ್ರ ಲಿಪಿಗಾರರು ಗ್ರೇಡ್-3 ಹುದ್ದೆ
ಪದವಿ ಪೂರ್ವ ಶಿಕ್ಷಣ ಮಂಡಳಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಮೂರು ವರ್ಷಗಳ ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು
ತಾಂತ್ರಿಕ ಅರ್ಹತೆ:
- ಕನ್ನಡ ಬೆರಳಚ್ಚು – ಹಿರಿಯ ದರ್ಜೆ
- ಇಂಗ್ಲಿಷ್ ಬೆರಳಚ್ಚು – ಹಿರಿಯ ದರ್ಜೆ
- ಕನ್ನಡ ಶೀಘ್ರಲಿಪಿ – ಹಿರಿಯ ದರ್ಜೆ
- ಇಂಗ್ಲಿಷ್ ಶೀಘ್ರಲಿಪಿ – ಹಿರಿಯ ದರ್ಜೆ
ಬೆರಳುಚುಗಾರ ಹುದ್ದೆ
ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಮೂರು ವರ್ಷದ ಡಿಪ್ಲೋಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ಪೂರ್ಣಗೊಳಿಸಬೇಕು
ತಾಂತ್ರಿಕ ಅರ್ಹತೆ
- ಕನ್ನಡ ಬೆರಳಚ್ಚು – ಹಿರಿಯ ದರ್ಜೆ
- ಇಂಗ್ಲಿಷ್ ಬೆರಳಚ್ಚು – ಹಿರಿಯ ದರ್ಜೆ
ಚಾಲಕರ ಹುದ್ದೆ
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಸರಕಾರದಿಂದ ಮಾನ್ಯತೆ ಪಡೆದ ತತ್ಸಮಾನ ವಿದ್ಯಾರ್ಥಿ ಹೊಂದಿರಬೇಕು
ಕಡ್ಡಾಯ ಅರ್ಹತೆ
- ಭಾರಿ ವಾಹನ ಚಾಲನ ಪರವಾನಗಿ ಹೊಂದಿರಬೇಕು
- ರಸ್ತೆ ಸುರಕ್ಷಿತ ನಿಯಮಗಳ ಬಗ್ಗೆ ಉತ್ತಮ ಜ್ಞಾನದ ಜೊತೆಯಲ್ಲಿ ವಾಹನ ನಿರ್ವಹಣೆಯ ಮೂಲಭೂತ ಅರಿವು ಇರಬೇಕು
ಆದೇಶ ಜಾರಿಕಾರ ಹುದ್ದೆ
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಥಿ ಹೊಂದಿರಬೇಕು
ಲಘು ವಾಹನ ಅಥವಾ ಭಾರಿ ವಾಹನ ಚಾಲನ ಪರವಾನಗಿ ಹೊಂದಿದ್ದರೆ ಆದ್ಯತೆ ನೀಡಲಾಗಬಹುದು
ಜವಾನ ಹುದ್ದೆ
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಥಿಯನ್ನು ಹೊಂದಿರಬೇಕು
ಕಡ್ಡಾಯ ಅರ್ಹತೆ
ಕನ್ನಡ ಭಾಷೆಯಲ್ಲಿ ಓದಲು ಬರೆಯಲು ಹಾಗೂ ಸ್ಪಷ್ಟವಾಗಿ ಮಾತನಾಡಲು ಬರಬೇಕು
ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಪರಿಶೀಲಿಸಬೇಕಾದ ಪ್ರಮುಖ ವಿಷಯಗಳು
ಆನ್ಲೈನ್ ಮೂಲಕ City Civil Court ಹುದ್ದೆಗಳಿಗೆ ಅರ್ಜಿಯನ್ನು ಭರ್ತಿ ಮಾಡುವ ಮುನ್ನ ಅಭ್ಯರ್ಥಿಗಳು ಈ ಕೆಳಕಂಡ ಮಾಹಿತಿಯನ್ನು ಪರಿಶೀಲಿಸುವುದು ಕಡ್ಡಾಯವಾಗಿದೆ
- ನಿಮ್ಮ ವಿದ್ಯಾರ್ಹತೆಗೆ ಅಧಿಸೂಚನೆ ಹೊಂದಿಕೆಯಾಗುತ್ತದೆಯೇ
- ಅಗತ್ಯ ಪ್ರಮಾಣ ಪತ್ರಗಳು ನಿಮ್ಮ ಬಳಿ ಲಭ್ಯವಿದೆಯೇ
- ಮೀಸಲಾತಿ ಪ್ರಮಾಣ ಪತ್ರಗಳು ಮಾನ್ಯವಾಗಿವೆಯೇ
- ನಿಮ್ಮ ಶೈಕ್ಷಣಿಕ ದಾಖಲೆಗಳಲ್ಲಿ ಹೆಸರು ಜನ್ಮ ದಿನಾಂಕ ಮುಂತಾದ ಪ್ರಮುಖ ಮಾಹಿತಿ ಒಂದೇ ರೀತಿಯಲ್ಲಿದೆಯೇ
- ಟೈಪಿಂಗ್ ಅಥವಾ ಶೀಘ್ರ ಲಿಪಿ ಪ್ರಮಾಣ ಪತ್ರ ಅಗತ್ಯವಿದ್ದಲ್ಲಿ ಅದು ಮಾನ್ಯತೆ ಪಡೆದ ಸಂಸ್ಥೆಯಿಂದ ನೀಡಲ್ಪಟ್ಟಿದೆಯೇ
- ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಲ್ ಎಮ್ ವಿ ಚಾಲನಾ ಪರವಾನಗಿ ಹೊಂದಿದ್ದಾರೆಯೇ
ಈ ಮೇಲಿನ ಅಂಶಗಳನ್ನು ಮುಂಚಿತವಾಗಿ ಪರಿಶೀಲಿಸಿದರೆ ಅರ್ಜಿ ಸಲ್ಲಿಸುವ ಹಾಗೂ ಅರ್ಜಿ ತಿರಸ್ಕೃತವಾಗುವ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಬಹುದು
ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು (Important Documents)
ಈ ಕೆಳಕಂಡ ದಾಖಲೆಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳುವುದರ ಮೂಲಕ ಆನ್ಲೈನ್ ಅರ್ಜಿ ಸಲ್ಲಿಕೆಯಲ್ಲಿ ಯಾವುದೇ ತೊಂದರೆ ಇಲ್ಲದಂತೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು
- ಎಸ್ ಎಸ್ ಎಲ್ ಸಿ ಅಂಕಪಟ್ಟಿ
- ಪಿಯುಸಿ ಅಥವಾ ಡಿಪ್ಲೋಮಾ ಅಂಕ ಪಟ್ಟಿ
- ಆಧಾರ್ ಕಾರ್ಡ್ ಅಥವಾ ಇತರೆ ಗುರುತಿನ ಚೀಟಿಗಳು
- ಟೈಪಿಂಗ್ ಪ್ರಮಾಣ ಪತ್ರ
- ಶೀಘ್ರ ಲಿಪಿ ಪ್ರಮಾಣ ಪತ್ರ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- 371 ಜೆ ಮೀಸಲಾತಿ ಪ್ರಮಾಣ ಪತ್ರ
- ಅಭ್ಯರ್ಥಿಯ ಇತ್ತೀಚಿನ ಭಾವಚಿತ್ರ
- ಅಭ್ಯರ್ಥಿಯ ಸಹಿ
- ಚಾಲನ ಪರವಾನಗಿ
- ಅಂಗವಿಕಲ ಪ್ರಮಾಣ ಪತ್ರ
ಅಭ್ಯರ್ಥಿಗಳಿಗೆ ಉಪಯುಕ್ತ ಸಲಹೆಗಳು
- ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯ ಪಿಡಿಎಫ್ ಅನ್ನು ಸಂಪೂರ್ಣವಾಗಿ ಓದಿ
- ಸ್ಕ್ಯಾನ್ ಮಾಡುವ ದಾಖಲೆಗಳನ್ನು ಪಿಡಿಎಫ್ ಅಥವಾ ಜೆಪಿಜಿ ರೂಪದಲ್ಲಿ ಇಟ್ಟುಕೊಳ್ಳಿ
- ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ಸರಿಯಾಗಿ ನಮೂದಿಸಿ
- ಕೊನೆಯ ದಿನಾಂಕದವರೆಗೂ ಕಾಯದೆ ಮುಂಚಿತವಾಗಿ ಅರ್ಜಿ ಸಲ್ಲಿಸಿ
- ಅರ್ಜಿ ಸಲ್ಲಿಸಿದ ನಂತರ ಸಂಬಂಧಪಟ್ಟ ಸ್ವೀಕೃತಿಯನ್ನು ಪ್ರಿಂಟ್ ತೆಗೆದುಕೊಳ್ಳಿ
ವಯೋಮಿತಿ ವಿವರ (Age Criteria)
ಈ City Civil Court ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಜುಲೈ 30 2026 ರಂತೆ ಈ ಕೆಳಕಂಡ ವಯೋಮಿತಿಯನ್ನು ಹೊಂದಿರಬೇಕಾಗುತ್ತದೆ
ಕನಿಷ್ಠ ವಯಸ್ಸು 18 ವರ್ಷ
ಗರಿಷ್ಠ ವಯಸ್ಸು:
ಸಾಮಾನ್ಯ ವರ್ಗದ ಅಭ್ಯರ್ಥಿಗಳು : 40 ವರ್ಷಗಳು
ಇತರೆ ಹಿಂದುಳಿದ ವರ್ಗಗಳ 2ಎ 2ಬಿ 3ಎ 3ಬಿ ಅಭ್ಯರ್ಥಿಗಳು : 43 ವರ್ಷಗಳು
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ 1 ರ ಅಭ್ಯರ್ಥಿಗಳು : 45 ವರ್ಷಗಳು
ವಯೋಮಿತಿ ಸಡಿಲಿಕೆ (Age Relaxation)
ಕರ್ನಾಟಕ ಸರ್ಕಾರದ ಆದೇಶದಂತೆ ಈ City Civil Court ನೇಮಕಾತಿಯಲ್ಲಿ ಸಹ ಒಂದು ಬಾರಿ ಅನ್ವಯವಾಗುವಂತೆ 5 ವರ್ಷಗಳ ಹೆಚ್ಚುವರಿ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ
ಇತರೆ ವಯೋಮಿತಿ ಸಡಿಲಿಕೆ ವಿವರಗಳು
ಸಾಮಾನ್ಯ ಮೀಸಲಾತಿ ಸಡಿಲಿಕೆ ಜೊತೆಯಲ್ಲಿ ಕೆಲವು ವಿಶೇಷ ವರ್ಗದ ಅಭ್ಯರ್ಥಿಗಳಿಗೆ ಹೆಚ್ಚುವರಿ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ
- ಸರ್ಕಾರಿ ನೌಕರರಿಗೆ : 10 ವರ್ಷಗಳು
- ಮಾಜಿ ಸೈನಿಕರಿಗೆ : ಸೇವೆ ಸಲ್ಲಿಸಿದ ಅವಧಿಯ ಜೊತೆಗೆ ಹೆಚ್ಚುವರಿ 3 ವರ್ಷಗಳು
- ದೈಹಿಕ ಅಂಗವಿಕಲರಿಗೆ : 10 ವರ್ಷಗಳು
- ವಿಧವಾ ಅಭ್ಯರ್ಥಿಗಳಿಗೆ : 10 ವರ್ಷಗಳು
ವೇತನ ಶ್ರೇಣಿ (Salary Scale)
| ಹುದ್ದೆಯ ಹೆಸರು | ವೇತನ (ಮಾಸಿಕ) |
| ಶೀಘ್ರಲಿಪಿಗಾರರು ಗ್ರೇಡ್–III | ₹44,425 ಗಳಿಂದ ₹83,700 ಗಳವರೆಗೆ |
| ಬೆರಳಚ್ಚುಗಾರರು | ₹34,100 ಗಳಿಂದ ₹67,600 ಗಳವರೆಗೆ |
| ಚಾಲಕರು | ₹34,100 ಗಳಿಂದ ₹67,600 ಗಳವರೆಗೆ |
| ಆದೇಶ ಜಾರಿಕಾರ | ₹31,775 ಗಳಿಂದ ₹61,300 ಗಳವರೆಗೆ |
| ಜವಾನ | ₹27,000 ಗಳಿಂದ ₹46,675 ಗಳವರೆಗೆ |
ಅರ್ಜಿ ಶುಲ್ಕ
ಈ City Civil Court ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೀಸಲಾತಿ ವರ್ಗಕ್ಕೆ ಅನುಗುಣವಾಗಿ ಈ ಕೆಳಕಂಡ ರೀತಿಯ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ
- ಸಾಮಾನ್ಯ ವರ್ಗ : 300/- ರೂಗಳು
- ಇತರೆ ಹಿಂದುಳಿದ ವರ್ಗಗಳ 2ಎ 2ಬಿ 3ಎ 3ಬಿ ಅಭ್ಯರ್ಥಿಗಳು : 150/- ರೂಗಳು
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಂಗವಿಕಲ ಅಭ್ಯರ್ಥಿಗಳು ಹಾಗೂ ಪ್ರವರ್ಗ-1 ರ ಅಭ್ಯರ್ಥಿಗಳು ಯಾವುದೇ ಶುಲ್ಕ ಇಲ್ಲ
ಶುಲ್ಕ ಪಾವತಿ ವಿಧಾನ
ಆನ್ಲೈನ್ ಅರ್ಜಿ ಶುಲ್ಕವನ್ನು ಕಡ್ಡಾಯವಾಗಿ ಎಸ್ ಬಿ ಐ ಕಲೆಕ್ಟ್ ಪೋರ್ಟಲ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ ಈ ಕೆಳಕಂಡ ವಿಧಾನಗಳನ್ನು ಅನುಸರಿಸಿ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ
- ಇಂಟರ್ನೆಟ್ ಬ್ಯಾಂಕಿಂಗ್
- ಡೆಬಿಟ್ ಕಾರ್ಡ್
- ಕ್ರೆಡಿಟ್ ಕಾರ್ಡ್
- ಯುಪಿಐ (ಲಭ್ಯವಿದ್ದಲ್ಲಿ)
ಶುಲ್ಕವನ್ನು ವಿಲೇಖನಾನಾಧಿಕಾರಿಗಳು ನಗರ ಸಿವಿಲ್ ನ್ಯಾಯಾಲಯ ಬೆಂಗಳೂರು ಇವರ ಹೆಸರಿಗೆ ಮಾತ್ರ ಪಾವತಿಸಬೇಕಾಗಿರುತ್ತದೆ
ಯಾವ ವಿಧಾನದಲ್ಲಿ ಶುಲ್ಕ ಪಾವತಿ ಅನುಮತಿ ಇಲ್ಲ
- ಡಿಮ್ಯಾಂಡ್ ಡ್ರಾಫ್ಟ್
- ಪೋಸ್ಟಲ್ ಆರ್ಡರ್
- ನಗದು
- ಚೆಕ್
ಅರ್ಜಿ ಶುಲ್ಕ ಪಾವತಿಸುವಾಗ ಗಮನಿಸಬೇಕಾದ ಪ್ರಮುಖ ಅಂಶಗಳು
- ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿರುವುದನ್ನು ಖಚಿತಪಡಿಸಿಕೊಂಡ ನಂತರ ಅರ್ಜಿ ಶುಲ್ಕವನ್ನು ಪಾವತಿಸಿ
- ಸರಿಯಾದ ಮೀಸಲಾತಿ ವರ್ಗವನ್ನು ಆಯ್ಕೆ ಮಾಡಿಕೊಂಡಿದ್ದೀರಿ ಎಂದು ಪರಿಶೀಲಿಸಿ
- ಪಾವತಿ ಯಶಸ್ವಿಯಾದ ನಂತರ ರಸೀದಿಯನ್ನು ಡೌನ್ಲೋಡ್ ಮಾಡಿಟ್ಟುಕೊಳ್ಳಿ
- ಭವಿಷ್ಯದಲ್ಲಿ ದಾಖಲಾತಿ ಪರಿಶೀಲನೆಗಾಗಿ ಪಾವತಿ ವಿವರಗಳನ್ನು ಸಂರಕ್ಷಿಸಿ
- ಕೊನೆಯ ದಿನಾಂಕದವರೆಗೂ ಕಾಯದೆ ಮುಂಚಿತವಾಗಿಯೇ ಅರ್ಜಿ ಶುಲ್ಕವನ್ನು ಪಾವತಿಸಿ
ಅಭ್ಯರ್ಥಿಗಳಿಗೆ ಪ್ರಮುಖ ಸಲಹೆಗಳು
- ಅರ್ಜಿ ಸಲ್ಲಿಸುವ ಮುನ್ನ ವಯೋಮಿತಿ ಮತ್ತು ಮೀಸಲಾತಿ ಅರ್ಹತೆಯನ್ನು ಕಡ್ಡಾಯವಾಗಿ ಪರಿಶೀಲಿಸಿ
- ವೇತನ ಶ್ರೇಣಿಯನ್ನು ತಿಳಿದು ನಂತರ ನಿಮ್ಮ ಅರ್ಹತೆಗೆ ತಕ್ಕಂತೆ ಹುದ್ದೆಯನ್ನು ಆಯ್ಕೆ ಮಾಡಿ
- ಅರ್ಜಿ ಶುಲ್ಕವನ್ನು ಪಾವತಿಸುವಾಗ ಬ್ಯಾಂಕ್ ವಿವರಗಳನ್ನು ಎಚ್ಚರಿಕೆಯಿಂದ ನಮೂದಿಸಿ
- ಅರ್ಜಿ ಶುಲ್ಕ ಪಾವತಿ ವಿಫಲವಾದರೆ ಮರು ಪ್ರಯತ್ನ ಮಾಡುವ ಮೊದಲು ಬ್ಯಾಂಕಿನಿಂದ ಹಣ ಕಡಿತವಾಗಿದೆ ಎಂಬುದನ್ನು ಪರಿಶೀಲಿಸಿ
- ಅರ್ಜಿ ಮತ್ತು ಪಾವತಿ ರಸೀದಿಯ ಪ್ರಿಂಟನ್ನು ಕಡ್ಡಾಯವಾಗಿ ತೆಗೆದುಕೊಳ್ಳಿ
ಅರ್ಜಿ ಸಲ್ಲಿಕೆ ವಿಧಾನ (Application Process)
ಈ City Civil Court ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಕಂಡ ಸುಲಭ ವಿಧಾನಗಳನ್ನು ಅನುಸರಿಸುವುದರ ಮೂಲಕ ಯಶಸ್ವಿಯಾಗಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ಹಂತ ಹಂತದ ಮಾಹಿತಿ ಈ ಕೆಳಕಂಡಂತಿದೆ
ಹಂತ-1 : ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವುದು
ಮೊದಲು ಅಭ್ಯರ್ಥಿಗಳು ಬೆಂಗಳೂರು ನಗರ ಸಿವಿಲ್ ನ್ಯಾಯಾಲಯದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ ನೇಮಕಾತಿ ವಿಭಾಗವನ್ನು ತೆರೆಯಬೇಕು
ಹಂತ-2 : ಅಧಿಕೃತ ಅಧಿಸೂಚನೆಯನ್ನು ಓದುವುದು
ಅಭ್ಯರ್ಥಿಗಳು ನೇಮಕಾತಿ ವಿಭಾಗವನ್ನು ತೆರೆದ ನಂತರ ಹುದ್ದೆಗಳಿಗೆ ಪ್ರತ್ಯೇಕವಾಗಿ ಹೊರಡಿಸಿರುವ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಬೇಕು ಈ ಹಂತದಲ್ಲಿ ಈ ಕೆಳಕಂಡ ಮಾಹಿತಿಯನ್ನು ಪರಿಶೀಲಿಸಬೇಕು
- ಹುದ್ದೆಗಳ ಸಂಖ್ಯೆ
- ವಯೋಮಿತಿ
- ವಿದ್ಯಾರ್ಹತೆ
- ಮೀಸಲಾತಿ ನಿಯಮಗಳು
- ಆಯ್ಕೆ ವಿಧಾನ
- ಅರ್ಜಿ ಶುಲ್ಕ
- ವೇತನ ಶ್ರೇಣಿ
- ಅಗತ್ಯ ಪ್ರಮಾಣ ಪತ್ರಗಳು
- ಪ್ರಮುಖ ದಿನಾಂಕಗಳು
- ಇತರೆ ಹೆಚ್ಚುವರಿ ದಾಖಲೆಗಳು
ಹಂತ-3 : ಸರಿಯಾದ ಹುದ್ದೆಯ ಆಯ್ಕೆ
ತಮ್ಮ ವಿದ್ಯಾರ್ಹತೆಗೆ ತಕ್ಕಂತೆ ಶೀಘ್ರ ಲಿಪಿಗಾರರು, ಬೆರಳಚ್ಚುಗಾರರು, ಚಾಲಕರು, ಜವಾನರು ಮುಂತಾದ ಹುದ್ದೆಗಳನ್ನು ಆಯ್ಕೆ ಮಾಡಿ
ಹಂತ-4 : ಆನ್ಲೈನ್ ಅರ್ಜಿ ಭರ್ತಿ
ಅಭ್ಯರ್ಥಿಗಳು ಆನ್ಲೈನ್ ಅರ್ಜಿ ತೆರೆದ ನಂತರ ಅಭ್ಯರ್ಥಿಯ ಪೂರ್ಣ ಹೆಸರು, ತಂದೆ ತಾಯಿ ಹೆಸರು, ಜನ್ಮ ದಿನಾಂಕ, ಲಿಂಗ, ರಾಷ್ಟ್ರೀಯತೆ, ಮೊಬೈಲ್ ಸಂಖ್ಯೆ, ಇಮೇಲ್ ವಿಳಾಸ, ನಿವಾಸದ ವಿಳಾಸ, ಪಿನ್ ಕೋಡ್ ಮುಂತಾದವುಗಳನ್ನು ಎಚ್ಚರಿಕೆಯಿಂದ ನಮೂದಿಸಿ
ಹಂತ-5 : ಶೈಕ್ಷಣಿಕ ಮಾಹಿತಿಗಳ ನಮೂದು
ಎಸ್ ಎಸ್ ಎಲ್ ಸಿ, ಪಿಯುಸಿ, ಡಿಪ್ಲೋಮಾ, ಟೈಪಿಂಗ್ ಮುಂತಾದ ಶೈಕ್ಷಣಿಕ ಮಾಹಿತಿಯನ್ನು ಕಡ್ಡಾಯವಾಗಿ ಎಚ್ಚರಿಕೆಯಿಂದ ನಮೂದಿಸಿ
ಹಂತ-6 : ದಾಖಲೆಗಳನ್ನು ಅಪ್ಲೋಡ್ ಮಾಡುವುದು
ಅರ್ಜಿ ಭರ್ತಿ ಮಾಡಿದ ನಂತರ ಅಗತ್ಯ ದಾಖಲೆಗಳನ್ನು ನಿಗಧಿತ ಗಾತ್ರವನ್ನು ಗಮನದಲ್ಲಿಟ್ಟುಕೊಂಡು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾಗುತ್ತದೆ ಸಾಮಾನ್ಯವಾಗಿ ಈ ಕೆಳಕಂಡ ಪ್ರಮಾಣ ಪತ್ರಗಳನ್ನು ಅಪ್ಲೋಡ್ ಮಾಡಲಾಗಬಹುದು
- ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಭಾವಚಿತ್ರ
- ಅಭ್ಯರ್ಥಿಯ ಸಹಿ
- ಎಸ್ ಎಸ್ ಎಲ್ ಸಿ ಅಂಕಪಟ್ಟಿ ಪಿಯುಸಿ ಅಥವಾ ಡಿಪ್ಲೋಮಾ ಅಂಕಪಟ್ಟಿ
- ಟೈಪಿಂಗ್ ಪ್ರಮಾಣ ಪತ್ರ
- ಶೀಘ್ರಲಿಪಿ ಪ್ರಮಾಣ ಪತ್ರ
- 371 ಜೆ ಮೀಸಲಾತಿ ಪ್ರಮಾಣ ಪತ್ರ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಅಂಗವಿಕಲ ಪ್ರಮಾಣ ಪತ್ರ
- ಚಾಲನಾ ಪರವಾಗಿ
ಹಂತ-7 : ಅರ್ಜಿ ಶುಲ್ಕ ಪಾವತಿ
ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿದ ನಂತರ ಪಾವತಿ ವಿಧಾನಗಳನ್ನು ಅನುಸರಿಸಿ ಎಸ್ ಬಿ ಐ ಕಲೆಕ್ಟ್ ಮೂಲಕ ಆನ್ಲೈನರ್ಜಿ ಶುಲ್ಕವನ್ನು ಪಾವತಿ
ಹಂತ-8 : ಅರ್ಜಿ ಪರಿಶೀಲನೆ
ಎಲ್ಲ ಮಾಹಿತಿಯನ್ನು ನಮೂದಿಸಿ ದಾಖಲಾತಿಗಳನ್ನು ಅಪ್ಲೋಡ್ ಮಾಡಿದ ನಂತರ ಪ್ರಿವ್ಯೂ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅರ್ಜಿಯನ್ನು ಪರಿಶೀಲಿಸಬೇಕಾಗುತ್ತದೆ ಇಲ್ಲಿ ನಿಮ್ಮ ಅರ್ಜಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಿ
ಹಂತ-9 : ಅರ್ಜಿ ಸಲ್ಲಿಕೆ
ಎಲ್ಲ ಮಾಹಿತಿಯನ್ನು ಪರಿಶೀಲಿಸಿದ ನಂತರ ಸಲ್ಲಿಸು ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ ನಂತರ ಬರುವ ಅಪ್ಲಿಕೇಶನ್ ನಂಬರ್ ಅಥವಾ ನೋಂದಣಿ ಸಂಖ್ಯೆಯನ್ನು ಸರಿಯಿರಿ
ಹಂತ-10 : ಅರ್ಜಿ ಪ್ರಿಂಟ್
ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ಅರ್ಜಿ ಪ್ರತಿ ಅರ್ಜಿ ಸ್ವೀಕರಿಸಿದಿ ಮತ್ತು ನೋಂದಣಿ ಪತ್ರಗಳನ್ನು ಭವಿಷ್ಯದ ಉದ್ದೇಶಕ್ಕಾಗಿ ಪ್ರಿಂಟ್ ತೆಗೆದು ಇಟ್ಟುಕೊಳ್ಳಿ
City Civil Court ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಮಾಡುವ ಸಾಮಾನ್ಯ ತಪ್ಪುಗಳು
- ತಪ್ಪಾದ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ವಿಳಾಸವನ್ನು ನಮೂದಿಸುವುದು
- ಅಸ್ಪಷ್ಟ ದಾಖಲೆಗಳನ್ನು ಅಪ್ಲೋಡ್ ಮಾಡುವುದು
- ತಪ್ಪಾದ ಜಾತಿ ವರ್ಗ ಆಯ್ಕೆ ಮಾಡುವುದು
- ಶುಲ್ಕ ಪಾವತಿಸದೆ ಅರ್ಜಿ ಪೂರ್ಣವಾಗಿದೆ ಎಂದು ಭಾವಿಸುವುದು
- ದಾಖಲೆಗಳಲ್ಲಿರುವ ಹೆಸರು ಮತ್ತು ಇತರೆ ವಿವರಗಳು ವಿಭಿನ್ನವಾಗಿರುವುದು
- ತಪ್ಪಾದ ಹುದ್ದೆಯನ್ನು ಆಯ್ಕೆ ಮಾಡುವುದು
- ಕೊನೆಯ ದಿನ ಅರ್ಜಿ ಸಲ್ಲಿಸಲು ಪ್ರಯತ್ನಿಸುವುದು
- ಅರ್ಜಿ ಶುಲ್ಕ ಪಾವತಿಸುವಾಗ ತಪ್ಪು ವಿಳಾಸವನ್ನು ನಮೂದಿಸುವುದು
ಯಶಸ್ವಿಯಾಗಿ ಅರ್ಜಿ ಸಲ್ಲಿಸಲು ಉಪಯುಕ್ತ ಸಲಹೆಗಳು
- ಕೊನೆ ದಿನಾಂಕದವರೆಗೆ ಕಾಯಬೇಡಿ
- ವೇಗವಾದ ಇಂಟರ್ನೆಟ್ ಸಂಪರ್ಕವನ್ನು ಬಳಸಿ
- ದಾಖಲೆಗಳನ್ನು ಜೆಪಿಜಿ ರೂಪದಲ್ಲಿ ಮುಂಚಿತವಾಗಿಯೇ ಸಿದ್ಧಪಡಿಸಿ
- ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ಮೂಲಕ ಅರ್ಜಿ ಸಲ್ಲಿಸಿ
- ಅರ್ಜಿ ಸಲ್ಲಿಸಿದ ನಂತರ ಅಪ್ಲಿಕೇಶನ್ ಅನ್ನು ಸುರಕ್ಷಿತವಾಗಿಟ್ಟುಕೊಳ್ಳಿ
- ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಅನ್ನು ಸಕ್ರಿಯವಾಗಿರಿಸಿ
- ಅಧಿಕೃತ ವೆಬ್ಸೈಟ್ಗೆ ನಿಯಮಿತವಾಗಿ ಭೇಟಿ ನೀಡಿ ಪ್ರಕಟಣೆಗಳನ್ನು ಪರಿಶೀಲಿಸಿ
City Civil Court ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ನಂತರ ಏನು ಮಾಡಬೇಕು
- ಆಯ್ಕೆ ವಿಧಾನವನ್ನು ಅರ್ಥ ಮಾಡಿಕೊಳ್ಳಬೇಕು
- ಅಗತ್ಯವಿದ್ದರೆ ಟೈಪಿಂಗ್ ಮತ್ತು ಶೀಘ್ರ ಲಿಪಿಯನ್ನು ಅಭ್ಯಾಸ ಮಾಡಿ ವೇಗವನ್ನು ಹೆಚ್ಚಿಸಿಕೊಳ್ಳಬೇಕು
- ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಮೂಲಭೂತ ವಿಷಯಗಳನ್ನು ಪುನರಾವರ್ತಿಸಬೇಕು
- ದಾಖಲೆಗಳ ಮೂಲ ಪ್ರತಿಯನ್ನು ಸಿದ್ಧವಾಗಿಟ್ಟುಕೊಳ್ಳಬೇಕು
- ಅಧಿಕೃತ ವೆಬ್ ಸೈಟ್ ನಲ್ಲಿ ಪರೀಕ್ಷೆ ಮತ್ತು ಸಂದರ್ಶನದ ಕುರಿತು ಪ್ರಕಟಣೆಗಳನ್ನು ಗಮನಿಸಬೇಕು
ಆಯ್ಕೆ ವಿಧಾನ (Selection Process)
ಶೀಘ್ರ ಲಿಪಿಕಾರರು ಗ್ರೇಡ್ 3 :
- 100 ಅಂಕಗಳ ಅರ್ಹತಾ ಪರೀಕ್ಷೆ
- ಕನಿಷ್ಠ 50 ಅಂಕಗಳನ್ನು ಪಡೆಯಬೇಕು
- 10 ಅಂಕಗಳ ಸಂದರ್ಶನ
ಬೆರಳಚ್ಚುಗಾರರು :
- 100 ಅಂಕಗಳ ಲಿಖಿತ ಪರೀಕ್ಷೆ
- ಕನಿಷ್ಠ 50 ಅಂಕಗಳನ್ನು ಪಡೆಯಬೇಕು
- 10 ಅಂಕಗಳ ಸಂದರ್ಶನ
ಚಾಲಕರ ಹುದ್ದೆಗಳು :
- 50 ಅಂಕಗಳ ಅರ್ಹತಾ ಪರೀಕ್ಷೆ
- 10 ಅಂಕಗಳ ಸಂದರ್ಶನ
ಆದೇಶ ಜಾರಿಕಾರರ ಹುದ್ದೆಗಳು :
ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಇರುವುದಿಲ್ಲ ಬದಲಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಡೆದ ಶೇಕಡವಾರು ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ಸಿದ್ದಪಡಿಸಿ 10 ಅಂಕಗಳ ಸಂದರ್ಶನಕ್ಕೆ ಕರೆಯಲಾಗುತ್ತದೆ
ಜವಾನ ಹುದ್ದೆಗಳು :
ಜವಾನ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಇರುವುದಿಲ್ಲ ಎಸ್ ಎಸ್ ಎಲ್ ಸಿ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ಹಾಗೂ 10 ಅಂಕಗಳಿಗೆ ಸಂದರ್ಶನ
Exam Pattern
| ಹುದ್ದೆ | ಪರೀಕ್ಷೆ | ಅಂಕಗಳು |
|---|---|---|
| ಶೀಘ್ರ ಲಿಪಿಗಾರರು | ಕೌಶಲ್ಯ ಪರೀಕ್ಷೆ + ಸಂದರ್ಶನ | 110 |
| ಬೆರಳಚ್ಚುಗಾರರು | ಲಿಖಿತ ಪರೀಕ್ಷೆ + ಸಂದರ್ಶನ | 110 |
| ಚಾಲಕರು | ಸಾಮಾನ್ಯ ಪರೀಕ್ಷೆ (ಚಾಲನೆ) + ಸಂದರ್ಶನ | 60 |
ದಾಖಲೆ ಪರಿಶೀಲನೆಗೆ ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ಎಸ್ ಎಸ್ ಎಲ್ ಸಿ ಅಂಕಪಟ್ಟಿ
- ಪಿಯುಸಿ ಅಥವಾ ಡಿಪ್ಲೋಮಾ ಪ್ರಮಾಣ ಪತ್ರ
- ಟೈಪಿಂಗ್ ಪ್ರಮಾಣ ಪತ್ರ
- ಶೀಘ್ರ ಲಿಪಿ ಪ್ರಮಾಣ ಪತ್ರ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- 371 ಜೆ ಪ್ರಮಾಣ ಪತ್ರ
- ಚಾಲನಾ ಪರವಾನಗಿ
- ಇತ್ತೀಚಿನ ಭಾವಚಿತ್ರ
- ಅರ್ಜಿ ಸಲ್ಲಿಸಿದ ಪ್ರತಿ
- ಶುಲ್ಕ ಪಾವತಿ ರಸೀದಿಗಳು
City Civil Court ಹುದ್ದೆಗಳ ಪರೀಕ್ಷೆಗೆ ಅಭ್ಯರ್ಥಿಗಳು ಪರೀಕ್ಷೆಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು
ಶೀಘ್ರ ಲಿಪಿಕಾರರು ಮತ್ತು ಬೆರಳಚ್ಚುಗಾರರು :
- ಪ್ರತಿದಿನ ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್ ಅಭ್ಯಾಸ ಮಾಡಬೇಕು
- ಶೀಘ್ರ ಲಿಪಿಯ ವೇಗ ಹೆಚ್ಚಿಸಿಕೊಳ್ಳಬೇಕು
- ಕಂಪ್ಯೂಟರ್ ಬಳಕೆಯಲ್ಲಿ ಪರಿಣಿತಿ ಹೊಂದಬೇಕು
- ಕನ್ನಡ ಮತ್ತು ಇಂಗ್ಲಿಷ್ ವ್ಯಾಕರಣ ಮತ್ತು ಮೂಲಭೂತ ಜ್ಞಾನ ಬೆಳೆಸಿಕೊಳ್ಳಬೇಕು
ಚಾಲಕ ಹುದ್ದೆಗಳು :
- ರಸ್ತೆ ಸುರಕ್ಷಿತ ನಿಯಮಗಳನ್ನು ಅಧ್ಯಯನ ಮಾಡಬೇಕು
- ವಾಹನ ನಿರ್ವಹಣೆಯ ಮೂಲಭೂತ ಮಾಹಿತಿ ತಿಳಿದುಕೊಳ್ಳಬೇಕು
- ಸಂಚಾರ ಚಿಹ್ನೆಗಳ ಬಗ್ಗೆ ಜ್ಞಾನ ಹೊಂದಬೇಕು
ಆದೇಶ ಜಾರಿಕಾರ ಮತ್ತು ಜವಾನ :
- ಎಸ್ ಎಸ್ ಎಲ್ ಸಿ ಮೂಲಭೂತ ವಿಷಯಗಳನ್ನು ಪುನರಾವರ್ತಿಸಬೇಕು
- ಉತ್ತಮ ಸಂವಹನ ಕೌಶಲ್ಯ ಇರಬೇಕು
ಸಂದರ್ಶನಕ್ಕೆ ಹೋಗುವ ಮೊದಲು ಗಮನಿಸಬೇಕಾದ ಅಂಶಗಳು
- ಸಮಯಕ್ಕಿಂತ ಮುಂಚಿತವಾಗಿ ಪರೀಕ್ಷಾ ಅಥವಾ ಸಂದರ್ಶನ ಕೇಂದ್ರವನ್ನು ತಲುಪಬೇಕು
- ಸ್ವಚ್ಛ ಹಾಗೂ ಉತ್ತಮ ಉಡುಪು ಧರಿಸಬೇಕು
- ಎಲ್ಲಾ ಅಗತ್ಯ ದಾಖಲಾತಿಗಳನ್ನು ಒಂದು ಫೈಲ್ ನಲ್ಲಿ ವ್ಯವಸ್ಥಿತವಾಗಿ ಇಡಬೇಕು
- ಆತ್ಮವಿಶ್ವಾಸದಿಂದ ಉತ್ತರಿಸಬೇಕು
- ಪ್ರಶ್ನೆಯನ್ನು ಸಂಪೂರ್ಣವಾಗಿ ಕೇಳಿದ ನಂತರವೇ ಉತ್ತರ ನೀಡಬೇಕು
- ಅನಗತ್ಯ ಮಾತು ಹಾಗೂ ಆತಂಕವನ್ನು ತಪ್ಪಿಸಬೇಕು
City Civil Court ನೇಮಕಾತಿ ಪ್ರಮುಖ ದಿನಾಂಕಗಳು (Important Dates)
Last Updated: 07 July 2026
| ವಿವರ | ದಿನಾಂಕ |
|---|---|
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭ | 01 ಜುಲೈ 2026 |
| ಅರ್ಜಿ ಮೂಲಕ ಸಲ್ಲಿಸಲು ಕೊನೆಯ ದಿನಾಂಕ | 30 ಜುಲೈ 2026 (ರಾತ್ರಿ 11:59) |
| ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ | 30 ಜುಲೈ 2026 (ರಾತ್ರಿ 11:59) |
ಅಧಿಕೃತ ಲಿಂಕ್ ಗಳು (Official Links)
| ಅಧಿಕೃತ ವೆಬ್ ಸೈಟ್ | ಬೆಂಗಳೂರು ನಗರ ಸಿವಿಲ್ ನ್ಯಾಯಾಲಯ (City Civil Court) |
| ಅಧಿಕೃತ ಅಧಿಸೂಚನೆ | City Civil Court Recruitment Notifications |
| ಹುದ್ದೆಗಳಿಗೆ ಅರ್ಜಿ ಸಲ್ಲಿಕೆ | ಸ್ಟೆನೋಗ್ರಾಫರ್ ಗ್ರೇಡ್ 3 ಹುದ್ದೆ |
ಹೆಚ್ಚುವರಿ ಲಿಂಕ್ ಗಳು
| ನಮ್ಮ ವಾಟ್ಸಾಪ್ ಗುಂಪು ಸೇರಲು | ಇಲ್ಲಿ ಕ್ಲಿಕ್ ಮಾಡಿ |
| ಹೆಚ್ಚುವರಿ ಮಾಹಿತಿ | ನೇಮಕಾತಿ |
City Civil Court Recruitment 2026 : FAQ’s
ಪ್ರಶ್ನೆ-1. ಬೆಂಗಳೂರು ನಗರ ಸಿವಿಲ್ ನ್ಯಾಯಾಲಯ ನೇಮಕಾತಿಗೆ ಅರ್ಜಿ ಸಲ್ಲಿಸುವ ವಿಧಾನ ಯಾವುದು?
ಉತ್ತರ: ಅಭ್ಯರ್ಥಿಗಳು ಕೇವಲ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು.
ಪ್ರಶ್ನೆ-2. ಒಟ್ಟು ಎಷ್ಟು ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯಾಗಿದೆ?
ಉತ್ತರ: ಒಟ್ಟು 22 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಕಟಗೊಂಡಿದೆ.
ಪ್ರಶ್ನೆ-3. ಎಸ್ಎಸ್ಎಲ್ಸಿ ವಿದ್ಯಾರ್ಹತೆ ಹೊಂದಿದ್ದರೆ ಯಾವ ಯಾವ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು?
ಉತ್ತರ: ಜವಾನರು, ಆದೇಶ ಜಾರಿಕಾರರು ಹಾಗೂ ಚಾಲಕರ ಹುದ್ದೆಗಳಿಗೆ (ಅಗತ್ಯ ಅರ್ಹತೆಗಳೊಂದಿಗೆ) ಅರ್ಜಿ ಸಲ್ಲಿಸಬಹುದು.
ಪ್ರಶ್ನೆ-4. ಚಾಲಕರ ಹುದ್ದೆಗೆ HMV ಲೈಸೆನ್ಸ್ ಕಡ್ಡಾಯವೇ?
ಉತ್ತರ: ಹೌದು. ಭಾರಿ ವಾಹನ ಚಾಲನಾ ಪರವಾನಗಿ (HMV Licence) ಹೊಂದುವುದು ಕಡ್ಡಾಯವಾಗಿದೆ.
ಪ್ರಶ್ನೆ-5. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಉತ್ತರ: 30 ಜುಲೈ 2026, ರಾತ್ರಿ 11:59 ರವರೆಗೆ ಅರ್ಜಿ ಸಲ್ಲಿಸಬಹುದು.
ಬೆಂಗಳೂರು City Civil Court ನೇಮಕಾತಿಯು ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಅನೇಕ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶವಾಗಿದೆ ಎಸ್ ಎಸ್ ಎಲ್ ಸಿ, ಪಿಯುಸಿ, ಡಿಪ್ಲೋಮಾ ಹಾಗೂ ತಾಂತ್ರಿಕ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ತಮ್ಮ ವಿದ್ಯಾರ್ಥಿಗೆ ಅನುಗುಣವಾಗಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ
ಈ ಹುದ್ದೆಗಳಲ್ಲಿ ಆಕರ್ಷಕ ವೇತನ, ಉದ್ಯೋಗ ಭದ್ರತೆ, ಸರ್ಕಾರದ ವಿವಿಧ ಭತ್ಯೆಗಳು ಹಾಗೂ ವೃತ್ತಿ ಜೀವನದಲ್ಲಿ ಉತ್ತಮ ಬೆಳವಣಿಗೆ ಅವಕಾಶವನ್ನು ಹೊಂದಲು ಈ ನೇಮಕಾತಿ ಸಹಕರಿಸಲಿದ
ವಿಶೇಷವಾಗಿ ಕಲ್ಯಾಣ ಕರ್ನಾಟಕ ಮೀಸಲಾತಿ ವ್ಯಾಪ್ತಿಗೆ ಒಳಪಡುವ ಅಭ್ಯರ್ಥಿಗಳಿಗೆ ಈ ನೇಮಕಾತಿಯಲ್ಲಿ ಅವಕಾಶ ಕಲ್ಪಿಸಿರುವುದರಿಂದ ಸರಕಾರಿ ಸೇವೆಗೆ ಸೇರಲು ಬಯಸುವ ಅನೇಕ ಯುವಕ ಹಾಗೂ ಯುವತಿಯರಿಗೆ ಇದೊಂದು ಉತ್ತಮ ಅವಕಾಶವಾಗಿದೆ
ಈ ಹುದ್ದೆಗಳಲ್ಲಿ ಉತ್ತಮ ವೇತನ, ಶಾಶ್ವತ ಉದ್ಯೋಗ, ಸರಕಾರದ ವಿವಿಧ ಸೌಲಭ್ಯಗಳು, ಮತ್ತು ಭತ್ಯೆಗಳ ಜೊತೆಯಲ್ಲಿ ಉದ್ಯೋಗ ಭದ್ರತೆ ದೊರೆಯುವ ಕಾರಣದಿಂದ ಈ ನೇಮಕಾತಿಯು ಸಾಕಷ್ಟು ಪ್ರಾಮುಖ್ಯತೆಯನ್ನು ಹೊಂದಿದೆ
ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಎಲ್ಲ ದಾಖಲೆಗಳನ್ನು ಸಿದ್ಧಪಡಿಸಿ ಕೊನೆಯ ದಿನಾಂಕದವರೆಗೂ ಕಾಯದೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ. ಸರಿಯಾದ ಯೋಜನೆ ನಿಯಮಿತ ಅಭ್ಯಾಸ ಮತ್ತು ಆತ್ಮವಿಶ್ವಾಸದೊಂದಿಗೆ ಸಿದ್ಧತೆ ನಡೆಸಿದರೆ ಈ ನೇಮಕಾತಿಯಲ್ಲಿ ಉದ್ಯೋಗ ಪಡೆಯುವ ಕನಸನ್ನು ನನಸಾಗಿಸಬಹುದು
Related Articles:
BSNL Recruitment 2026, Best Opportunity: ಪದವೀಧರರಿಗೆ ಕೇಂದ್ರ ಸರ್ಕಾರಿ ಉದ್ಯೋಗ, ಇಲ್ಲಿದೆ ಸಂಪೂರ್ಣ ಮಾಹಿತಿ.
Author Note:
ಈ ಲೇಖನವನ್ನು ಅಧಿಕೃತ ನೇಮಕಾತಿ ಅಧಿಸೂಚನೆ ಹಾಗೂ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಓದುಗರಿಗೆ ಸರಳ ಕನ್ನಡದಲ್ಲಿ ಸಿದ್ಧಪಡಿಸಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ, ನಿಯಮಗಳು ಮತ್ತು ದಿನಾಂಕಗಳನ್ನು ಖಚಿತಪಡಿಸಿಕೊಳ್ಳುವಂತೆ ವಿನಂತಿಸುತ್ತೇವೆ.
–*****–
About Author:
ರಂಗನಾಥ ಬಿ ಜಿ ರವರು ಅರ್ಥಶಾಸ್ತ್ರ ವಿಷಯದಲ್ಲಿ ಎಂ ಎ ಪದವೀಧರರಾಗಿದ್ದು, ಕಳೆದ 3 ವರ್ಷಗಳಿಂದ ಸರ್ಕಾರಿ ಉದ್ಯೋಗ, ಶಿಕ್ಷಣ, ವಿದ್ಯಾರ್ಥಿವೇತನ, ಸರ್ಕಾರಿ ಯೋಜನೆಗಳು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಕನ್ನಡದಲ್ಲಿ ಪ್ರಕಟಿಸುತ್ತಾರೆ. ಓದುಗರಿಗೆ ವಿಶ್ವಾಸಾರ್ಹ, ಸುಲಭವಾಗಿ ಅರ್ಥವಾಗುವ ಮತ್ತು ನಿಯಮಿತವಾಗಿ ನವೀಕರಿಸಿದ ಮಾಹಿತಿಯನ್ನು ಒದಗಿಸುವುದು ಇವರ ಉದ್ದೇಶವಾಗಿದೆ.
–*****–
Disclaimer:
ಈ ಲೇಖನವು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಪ್ರಕಟಿಸಲಾಗಿದೆ. ನೇಮಕಾತಿ ವಿವರಗಳು, ಅರ್ಹತೆ, ದಿನಾಂಕಗಳು ಅಥವಾ ನಿಯಮಗಳಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ. ಅರ್ಜಿ ಸಲ್ಲಿಸುವ ಮೊದಲು ಸಂಬಂಧಿತ ಇಲಾಖೆಯ ಅಧಿಕೃತ ಅಧಿಸೂಚನೆ ಹಾಗೂ ವೆಬ್ಸೈಟ್ನ ಮಾಹಿತಿಯನ್ನೇ ಅಂತಿಮವಾಗಿ ಪರಿಗಣಿಸಿ.