KMF SHIMUL ಸಂಸ್ಥೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ
ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗಗಳಿಗಾಗಿ ಕಾಯುತ್ತಿರುವ ಸಾವಿರಾರು ಉದ್ಯೋಗಕಾಂಕ್ಷಿಗಳಿಗೆ 2026 ನೇ ವರ್ಷವು ಉತ್ತಮ ವರ್ಷವಾಗಿದೆ. ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತವು ವಿವಿಧ ಹುದ್ದೆಗಳ ನೇಮಕಾತಿ ಸೂಚನೆಯನ್ನು ಅಧಿಕೃತವಾಗಿ ಹೊರಡಿಸಿದೆ. ಈ ನೇಮಕಾತಿ ಮೂಲಕ ಒಟ್ಟು 194 ಹುದ್ದೆಗಳ ನೇಮಕಾತಿಯನ್ನು ನಡೆಸುತ್ತಿದ್ದು ಪದವೀಧರರು, ತಾಂತ್ರಿಕ ಶಿಕ್ಷಣ ಪಡೆದವರು, ಐಟಿಐ ಪಡೆದ ಅಭ್ಯರ್ಥಿಗಳು ಹಾಗೂ ವಿವಿಧ ವೃತ್ತಿಪರ ಕೋರ್ಸ್ ಗಳನ್ನು ಪೂರ್ಣಗೊಳಿಸಿದವರಿಗೆ ಈ ನೇಮಕಾತಿಯಲ್ಲಿ ಉದ್ಯೋಗಾವಕಾಶವನ್ನು ಕಲ್ಪಿಸಲಾಗಿದೆ
ಈ ನೇಮಕಾತಿಯ ಪ್ರಮುಖ ವಿಶೇಷವೇನೆಂದರೆ ಈ ಹುದ್ದೆಗಳಲ್ಲಿ ಉತ್ತಮ ರೀತಿಯ ವೇತನ, ಸರಕಾರಿ ನಿಯಮಗಳ ಪ್ರಕಾರ ಸೇವಾ ಸೌಲಭ್ಯಗಳು ದೊರೆಯುವುದು, ಪದೋನ್ನತಿ ಹೊಂದುವ ಅವಕಾಶಗಳು ಹಾಗೂ ಕರ್ನಾಟಕದ ಪ್ರತಿಷ್ಠಿತ ಹಾಲು ಸಹಕಾರ ಸಂಘದಲ್ಲಿ ಕೆಲಸ ಮಾಡುವ ಅವಕಾಶವು ದೊರೆಯಲಿದ್ದು ಈ ಹುದ್ದೆಗಳು ಸಮಾಜದಲ್ಲಿ ಗೌರವಯುತ ಸ್ಥಾನವನ್ನು ನೀಡಲಿವೆ.
ಪ್ರಸ್ತುತ ಲೇಖನದಲ್ಲಿ ನಾವು ನೇಮಕಾತಿ ಸೂಚನೆಯ ಮಾಹಿತಿ, ವಿದ್ಯಾರ್ಹತೆ ವಿವರ, ವಯೋಮಿತಿ ವಿವರ, ವಯೋಮಿತಿ ಸಡಿಲಿಕೆ ಮಾಹಿತಿ, ವೇತನ ಶ್ರೇಣಿ, ಆನ್ಲೈನ್ ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ, ಅರ್ಜಿ ಸಲ್ಲಿಸುವ ವಿಧಾನ, ಪರೀಕ್ಷೆ ಪಠ್ಯಕ್ರಮ, ಹುದ್ದೆಗಳಿಗೆ ಇರಬೇಕಾದ ಕೌಶಲ್ಯಗಳು, ಪ್ರಶ್ನೋತ್ತರಗಳು ಮತ್ತು ಸಂಬಂಧಪಟ್ಟ ದಿನಾಂಕಗಳನ್ನು ಸಂಪೂರ್ಣವಾಗಿ ನೀಡಿದ್ದೇವೆ ಆದ್ದರಿಂದ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ಇಂದೇ ಅರ್ಜಿ ಸಲ್ಲಿಸಿ
KMF SHIMUL ಇಲಾಖೆಯ ಬಗ್ಗೆ
ಕರ್ನಾಟಕ ಹಾಲು ಮಹಾ ಮಂಡಳಿಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿವಮೊಗ್ಗ ದಾವಣಗೆರೆ ಚಿತ್ರದುರ್ಗ ಜಿಲ್ಲಾ ಸಹಕಾರಿ ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತವು ರೈತರಿಂದ ಹಾಲು ಸಂಗ್ರಹಿಸುವುದು, ಗುಣಮಟ್ಟವನ್ನು ಪರಿಶೀಲಿಸಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ಮತ್ತು ಹಾಲಿನ ಉಪ ಉತ್ಪನ್ನಗಳನ್ನು ಪೂರೈಸುವುದು ಈ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ.
ಈ ಸಂಸ್ಥೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಸ್ಥಿರ ಉದ್ಯೋಗ ಭದ್ರತೆಯ ಜೊತೆಯಲ್ಲಿ ಆಕರ್ಷಿಕ ವೇತನ ಸರಕಾರಿ ನಿಯಮಾವಳಿಗಳ ಪ್ರಕಾರ ಸೌಲಭ್ಯಗಳು ಹಾಗೂ ಭವಿಷ್ಯದಲ್ಲಿ ಉತ್ತಮ ವೃತ್ತಿ ಬೆಳಗವಣಿಗೆ ಅವಕಾಶಗಳನ್ನು ಕಲ್ಪಿಸಿ ಕೊಡುತ್ತದೆ.
KMF SHIMUL ನೇಮಕಾತಿ ಅಧಿಸೂಚನೆಯ ಪ್ರಮುಖ ವಿವರಗಳು
| ಸಂಸ್ಥೆಯ ಹೆಸರು | ಕೆ ಎಂ ಎಫ್- ಶಿಮುಲ್ (KMF SHIMUL) |
| ಹುದ್ದೆಗಳ ಹೆಸರು | ಆಡಳಿತ ಮತ್ತು ಉತ್ಪಾದನಾ ವಿಭಾಗಗಳು |
| ಒಟ್ಟು ಹುದ್ದೆಗಳು | 194 ಹುದ್ದೆಗಳು |
| ಅರ್ಜಿ ಸಲ್ಲಿಕೆ ವಿಧಾನ | ಆನ್ಲೈನ್ |
| ಉದ್ಯೋಗದ ಸ್ಥಳ | ಶಿವಮೊಗ್ಗ ದಾವಣಗೆರೆ ಮತ್ತು ಚಿತ್ರದುರ್ಗ |
| ವೇತನ (ಮಾಸಿಕ) | 34,100/- ರೂಗಳಿಂದ 1,55,200/- ರೂಗಳು |
| ಉದ್ಯೋಗದ ಪ್ರಕಾರ | ಶಾಶ್ವತ ಹುದ್ದೆಗಳು |
| ಆಯ್ಕೆ ವಿಧಾನ | ಲಿಖಿತ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ಸಂದರ್ಶನ |
KMF SHIMUL ನೇಮಕಾತಿಯ ವೃಂದವಾರು ಹುದ್ದೆಗಳ ಹಂಚಿಕೆ
| ಹುದ್ದೆಗಳ ಹೆಸರು | ಖಾಲಿಯಿರುವ ಹುದ್ದೆಗಳ ಸಂಖ್ಯೆ |
| ಸಹಾಯಕ ವ್ಯವಸ್ಥಾಪಕರ ಹುದ್ದೆಗಳು (ಪಶುಸಂಗೋಪನೆ ಮತ್ತು ಕೃತಕ ಗರ್ಭಧಾರಣೆ ವಿಭಾಗ) | 17 ಹುದ್ದೆಗಳು |
| ಸಹಾಯಕ ವ್ಯವಸ್ಥಾಪಕರ ಹುದ್ದೆಗಳು (ಆಡಳಿತ ವಿಭಾಗ) | 1 ಹುದ್ದೆ |
| ಸಹಾಯಕ ವ್ಯವಸ್ಥಾಪಕರ ಹುದ್ದೆಗಳು (ಮೇವು ಮತ್ತು ಆಹಾರ) | 3 ಹುದ್ದೆಗಳು |
| ಮಾಹಿತಿ ನಿರ್ವಹಣೆ ವ್ಯವಸ್ಥೆ / ಸಿಸ್ಟಂ ಆಫೀಸರ್ | 1 ಹುದ್ದೆ |
| ಮಾರುಕಟ್ಟೆ ಅಧಿಕಾರಿ | 2 ಹುದ್ದೆಗಳು |
| ತಾಂತ್ರಿಕ ಅಧಿಕಾರಿ (ಅಭಿಯಂತರ) – ಮೆಕಾನಿಕಲ್ | 1 ಹುದ್ದೆ |
| ತಾಂತ್ರಿಕ ಅಧಿಕಾರಿ (ಅಭಿಯಂತರ) – ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ | 1 ಹುದ್ದೆ |
| ತಾಂತ್ರಿಕ ಅಧಿಕಾರಿ (ಗುಣನಿಯಂತ್ರಣ) – ಕೆಮಿಸ್ಟ್ರಿ | 1 ಹುದ್ದೆ |
| ತಾಂತ್ರಿಕ ಅಧಿಕಾರಿ (ಗುಣನಿಯಂತ್ರಣ) – ಮೈಕ್ರೋಬಯಾಲಜಿ | 1 ಹುದ್ದೆ |
| ತಾಂತ್ರಿಕ ಅಧಿಕಾರಿ (ಡೈರಿ ತಂತ್ರಜ್ಞಾನ) | 14 ಹುದ್ದೆಗಳು |
| ಕೆಮಿಸ್ಟ್ ದರ್ಜೆ-1 (ಕೆಮಿಸ್ಟ್ರಿ) | 2 ಹುದ್ದೆಗಳು |
| ಕೆಮಿಸ್ಟ್ ದರ್ಜೆ-1 (ಮೈಕ್ರೋಬಯಾಲಜಿ) | 2 ಹುದ್ದೆಗಳು |
| ವಿಸ್ತರಣಾಧಿಕಾರಿ ದರ್ಜೆ-3 | 17 ಹುದ್ದೆಗಳು |
| ಆಡಳಿತ ಸಹಾಯಕ ದರ್ಜೆ-2 | 17 ಹುದ್ದೆಗಳು |
| ಲೆಕ್ಕ ಸಹಾಯಕ ದರ್ಜೆ-2 | 12 ಹುದ್ದೆಗಳು |
| ಮಾರುಕಟ್ಟೆ ಸಹಾಯಕ ದರ್ಜೆ-2 | 10 ಹುದ್ದೆಗಳು |
| ಕೆಮಿಸ್ಟ್ ದರ್ಜೆ-2 (ಕೆಮಿಸ್ಟ್ರಿ) | 20 ಹುದ್ದೆಗಳು |
| ಕೆಮಿಸ್ಟ್ ದರ್ಜೆ-2 (ಮೈಕ್ರೋಬಯಾಲಜಿ) | 8 ಹುದ್ದೆಗಳು |
| ಕಿರಿಯ ಸಿಸ್ಟಂ ಆಪರೇಟರ್ | 13 ಹುದ್ದೆಗಳು |
| ಶೀಘ್ರಲಿಪಿಗಾರರು ದರ್ಜೆ-2 | 1 ಹುದ್ದೆ |
| ಕಿರಿಯ ತಾಂತ್ರಿಕರು (ಎಲೆಕ್ಟ್ರಿಕಲ್) | 22 ಹುದ್ದೆಗಳು |
| ಕಿರಿಯ ತಾಂತ್ರಿಕರು (ರೆಫ್ರಿಜರೇಷನ್) | 10 ಹುದ್ದೆಗಳು |
| ಕಿರಿಯ ತಾಂತ್ರಿಕರು (ಬಾಯ್ಲರ್ ಅಟೆಂಡೆಂಟ್) | 12 ಹುದ್ದೆಗಳು |
| ಕಿರಿಯ ತಾಂತ್ರಿಕರು (ಫಿಟ್ಟರ್) | 4 ಹುದ್ದೆಗಳು |
| ಕಿರಿಯ ತಾಂತ್ರಿಕರು (ವೆಲ್ಡರ್) | 2 ಹುದ್ದೆಗಳು |
KMF SHIMUL Recruitment Eligibility Crieteria
- ಸಹಾಯಕ ವ್ಯವಸ್ಥಾಪಕರು (ಪಶುಸಂಗೋಪನೆ ಮತ್ತು ಕೃತಕ ಗರ್ಭಧಾರಣೆ ವಿಭಾಗ): ಪಶುವೈದ್ಯಕೀಯ ವಿಜ್ಞಾನ ಮತ್ತು ಪಶು ಸಂಗೋಪನೆ ವಿಷಯದಲ್ಲಿ ಪದವಿ ಹೊಂದಿರಬೇಕು.
- ಸಹಾಯಕ ವ್ಯವಸ್ಥಾಪಕರು (ಆಡಳಿತ): ಮಾನವ ಸಂಪನ್ಮೂಲ ವಿಷಯದಲ್ಲಿ 2 ವರ್ಷಗಳ ಪೂರ್ಣಾವಧಿ ಎಂ ಬಿ ಎ ಪದವಿ ಜೊತೆಗೆ 3 ವರ್ಷಗಳ ಸೇವಾನುಭವ ಹಾಗೂ ಕಂಪ್ಯೂಟರ್ ಜ್ಞಾನ ಇರಬೇಕು.
- ಸಹಾಯಕ ವ್ಯವಸ್ಥಾಪಕರು (ಮೇವು ಮತ್ತು ಆಹಾರ): ಕೃಷಿ ವಿಜ್ಞಾನ ವಿಷಯದಲ್ಲಿ ಬಿ.ಎಸ್ಸಿ ಪದವಿಯನ್ನು ಪಡೆದಿರಬೇಕು
- ಮಾಹಿತಿ ನಿರ್ವಹಣೆ ವ್ಯವಸ್ಥೆ / ಸಿಸ್ಟಂ ಆಫೀಸರ್ : ಬಿ ಇ ಪದವಿ (ಕಂಪ್ಯೂಟರ್ ಸೈನ್ಸ್) ಅಥವಾ ಇನ್ಫಾರ್ಮೇಷನ್ ಸೈನ್ಸ್ ಇಂಜಿನಿಯರಿಂಗ್ ಪದವಿ ಹೊಂದಿರಬೇಕು.
- ಮಾರುಕಟ್ಟೆ ಅಧಿಕಾರಿ: ಬಿ.ಕಾಂ, ಬಿ.ಎಸ್ಸಿ ಅಥವಾ ಬಿ ಬಿ ಎಂ ಪದವಿ ಜೊತೆಗೆ ಮಾರುಕಟ್ಟೆ ಕ್ಷೇತ್ರದಲ್ಲಿ 3 ವರ್ಷಗಳ ಅನುಭವ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
- ತಾಂತ್ರಿಕ ಅಧಿಕಾರಿ (ಅಭಿಯಂತರ): ಸಂಬಂಧಪಟ್ಟ ವಿಭಾಗದಲ್ಲಿ ಬಿ ಇ ಪದವಿಯನ್ನು ಹೊಂದಿರಬೇಕು
- ತಾಂತ್ರಿಕ ಅಧಿಕಾರಿ (ಗುಣ ನಿಯಂತ್ರಣ): ಎಂ.ಎಸ್ಸಿ – ಕೆಮಿಸ್ಟ್ರಿ ಅಥವಾ ಮೈಕ್ರೋಬಯಾಲಜಿ ಸ್ನಾತಕೋತ್ತರ ಪದವಿಯನ್ನು ಹೊಂದಿರುವುದರ ಜೊತೆಗೆ ಕಂಪ್ಯೂಟರ್ ಜ್ಞಾನ ಇರಬೇಕು.
- ತಾಂತ್ರಿಕ ಅಧಿಕಾರಿ (ಡೈರಿ ಟೆಕ್ನಾಲಜಿ): ಬಿ.ಟೆಕ್ ಡೈರಿ ಟೆಕ್ನಾಲಜಿ ಪದವಿ ಪಡೆಯುವುದರ ಜೊತೆಯಲ್ಲಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
- ಕೆಮಿಸ್ಟ್ ದರ್ಜೆ-1: ಬಿ.ಎಸ್ಸಿ ಪದವಿಯಲ್ಲಿ ಕೆಮಿಸ್ಟ್ರಿ ಅಥವಾ ಮೈಕ್ರೋಬಯಾಲಜಿ ವಿಭಾಗದಲ್ಲಿ ವ್ಯಾಸಂಗ ಮಾಡಿರಬೇಕು ಹಾಗೂ ಡೈರಿ ಅಥವಾ ಆಹಾರ ಸಂಸ್ಕರಣಾ ಘಟಕಗಳಲ್ಲಿ ಕನಿಷ್ಠ 2 ವರ್ಷಗಳ ಅನುಭವ ಹೊಂದಿರಬೇಕು.
- ವಿಸ್ತರಣಾಧಿಕಾರಿ ಮತ್ತು ಆಡಳಿತ ಸಹಾಯಕ: ಯಾವುದೇ ವಿಭಾಗದಲ್ಲಿ ಪದವಿ ಪಡೆದಿರಬೇಕು ಹಾಗೂ ಕಂಪ್ಯೂಟರ್ ನಿರ್ವಹಣೆ ಜ್ಞಾನ ಹೊಂದಿರಬೇಕು.
- ಲೆಕ್ಕ ಸಹಾಯಕ ದರ್ಜೆ-2: ಬಿ.ಕಾಂ ಪದವಿಯೊಂದಿಗೆ ಟ್ಯಾಲಿ -ಜಿ ಎಸ್ ಟಿ ಸರ್ಟಿಫಿಕೇಟ್ ಅಥವಾ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
- ಮಾರುಕಟ್ಟೆ ಸಹಾಯಕ ದರ್ಜೆ-2: ಬಿ ಬಿ ಎಂ, ಬಿ.ಎಸ್ಸಿ ಅಥವಾ ಬಿ.ಕಾಂ ಪದವಿ ಹೊಂದಿರಬೇಕು ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
- ಕೆಮಿಸ್ಟ್ ದರ್ಜೆ-2: ಬಿ.ಎಸ್ಸಿ ಪದವಿಯಲ್ಲಿ ಕೆಮಿಸ್ಟ್ರಿ ಅಥವಾ ಮೈಕ್ರೋಬಯಾಲಜಿ ವಿಷಯದಲ್ಲಿ ವ್ಯಾಸಂಗದ ಜೊತೆಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
- ಕಿರಿಯ ಸಿಸ್ಟಂ ಆಪರೇಟರ್: ಯಾವುದೇ ವಿಭಾಗದ ಪದವಿಯೊಂದಿಗೆ ಕನಿಷ್ಠ 1 ವರ್ಷದ ಡಿಪ್ಲೋಮಾ ಇನ್ ಕಂಪ್ಯೂಟರ್ ಅಪ್ಲಿಕೇಷನ್ ಕೋರ್ಸ್ ಮತ್ತು 3 ವರ್ಷಗಳ ಅನುಭವ ಹೊಂದಿರಬೇಕು.
- ಶೀಘ್ರಲಿಪಿಗಾರರು ದರ್ಜೆ-2: ಯಾವುದೇ ವಿಭಾಗದಲ್ಲಿ ಪದವಿ ಹೊಂದುವುದರ ಜೊತೆಯಲ್ಲಿ ಸೀನಿಯರ್ ಇಂಗ್ಲೀಷ್ ಮತ್ತು ಕನ್ನಡ ಶಾರ್ಟ್ ಹ್ಯಾಂಡ್ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
- ಕಿರಿಯ ತಾಂತ್ರಿಕರು: ಎಸ್.ಎಸ್.ಎಲ್.ಸಿ ಯೊಂದಿಗೆ ಸಂಬಂಧಪಟ್ಟ ಟ್ರೇಡ್ ( ವ್ಯಾಪಾರ) ನಲ್ಲಿ ಐ.ಟಿ.ಐ ತೇರ್ಗಡೆ ಹೊಂದಿರಬೇಕು ಜೊತೆಯಲ್ಲಿ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ (ಎನ್.ಟಿ.ಸಿ / ಎನ್.ಸಿ.ವಿ.ಟಿ) ಯನ್ನು ಕಡ್ಡಾಯವಾಗಿ ಹೊಂದಿರಬೇಕು. ಬಾಯ್ಲರ್ ಅಟೆಂಡೆಂಟ್ ಹುದ್ದೆಗೆ ದರ್ಜೆ-2 ರ ಪ್ರಮಾಣ ಪತ್ರ ಕಡ್ಡಾಯವಾಗಿರುತ್ತದೆ.
ವಯೋಮಿತಿ ಮತ್ತು ವಯೋಮಿತಿ ಸಡಿಲಿಕೆ ಮಾಹಿತಿ
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿಯನ್ನು ಹೊಂದಿರಬೇಕು ಗರಿಷ್ಠ ವಯಸ್ಸಿನ ಮಿತಿಯು ಈ ಕೆಳಕಂಡಂತಿದೆ
- ಸಾಮಾನ್ಯ ವರ್ಗದ ಅಭ್ಯರ್ಥಿಗಳು : 35 ವರ್ಷಗಳು
- ಇತರೆ ಹಿಂದುಳಿದ ವರ್ಗದ ಅಡಿಯಲ್ಲಿ ಬರುವ 2ಎ 2ಬಿ 3ಎ 3 ಬಿ ಅಭ್ಯರ್ಥಿಗಳು : 38 ವರ್ಷಗಳು
- ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ ಒಂದರ ಅಭ್ಯರ್ಥಿಗಳು : 40 ವರ್ಷಗಳು
ರಾಜ್ಯ ಸರ್ಕಾರದ ಆದೇಶದನ್ವಯ ವಯೋಮಿತಿ ಸಡಿಲಿಕೆಯಲ್ಲಿ ಎಲ್ಲ ವರ್ಗಗಳಿಗೂ ಒಂದು ಬಾರಿ ಅನ್ವಯವಾಗುವಂತೆ ಐದು ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ
ಹೆಚ್ಚುವರಿ ವಯೋಮಿತಿ ಸಡಿಲಿಕೆಯ ವಿವರ:
- ಅಂಗವಿಕಲ ಅಭ್ಯರ್ಥಿಗಳು : 10 ವರ್ಷಗಳು
- ವಿಧವಾ ಅಭ್ಯರ್ಥಿಗಳು : 10 ವರ್ಷಗಳು
- ಮಾಜಿ ಸೈನಿಕರು ಮತ್ತು ಎನ್ ಸಿ ಸಿ ಅಭ್ಯರ್ಥಿಗಳಿಗೆ ಹೆಚ್ಚುವರಿ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ
KMF SHIMUL Recruitment 2026 Salary Details
| ಹುದ್ದೆಗಳು | ಮಾಸಿಕ ವೇತನ |
| ಸಹಾಯಕ ವ್ಯವಸ್ಥಾಪಕರು | 83,700/- ರೂಗಳಿಂದ 1,55,200/- ರೂಗಳವರೆಗೆ |
| ತಾಂತ್ರಿಕ ಅಧಿಕಾರಿ | 69,250/- ರೂಗಳಿಂದ 1,34,200/- ರೂಗಳವರೆಗೆ |
| ಕೆಮಿಸ್ಟ್ ದರ್ಜೆ-1 | 54,175/- ರೂಗಳಿಂದ 99,400/- ರೂಗಳವರೆಗೆ |
| ವಿಸ್ತರಣಾಧಿಕಾರಿ | 54,175/- ರೂಗಳಿಂದ 99,400/- ರೂಗಳವರೆಗೆ |
| ಆಡಳಿತ ಸಹಾಯಕ | 44,425/- ರೂಗಳಿಂದ 83,700/- ರೂಗಳವರೆಗೆ |
| ಲೆಕ್ಕ ಸಹಾಯಕ | 44,425/- ರೂಗಳಿಂದ 83,700/- ರೂಗಳವರೆಗೆ |
| ಮಾರುಕಟ್ಟೆ ಸಹಾಯಕ | 44,425/- ರೂಗಳಿಂದ 83,700/- ರೂಗಳವರೆಗೆ |
| ಕಿರಿಯ ಸಿಸ್ಟಮ್ ಆಪರೇಟರ್ | 44,425/- ರೂಗಳಿಂದ 83,700/- ರೂಗಳವರೆಗೆ |
| ಕಿರಿಯ ತಾಂತ್ರಿಕರು | 34,100/- ರೂಗಳಿಂದ 67,600/- ರೂಗಳವರೆಗೆ |
ಈ ಮೇಲ್ಕಂಡ ವೇತನ ಸರಣಿಯ ಜೊತೆಯಲ್ಲಿ ಸರ್ಕಾರದ ನಿಯಮಾವಳಿಗಳ ಪ್ರಕಾರ ದಿನ ಭತ್ಯೆ, ಮನೆ ಬಾಡಿಗೆ ಭತ್ಯೆ, ವೈದ್ಯಕೀಯ ಭತ್ಯೆ, ರಜೆಗಳು, ಕಾರ್ಮಿಕ ಭವಿಷ್ಯ ನಿಧಿ ಸೇರಿದಂತೆ ಇತರ ಸೇವಾ ಸೌಲಭ್ಯಗಳು ಸಹ ದೊರೆಯುತ್ತವೆ
ಆನ್ಲೈನ್ ಅರ್ಜಿ ಶುಲ್ಕ
ಈ KMF SHIMUL ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತಾಗೋರ ಅಭ್ಯರ್ಥಿಗಳು ತಮ್ಮ ಅನ್ವಯಿಕ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕವೇ ಪಾವತಿಸಬೇಕಾಗಿರುತ್ತದೆ ಸೇರಿರುವುದಿಲ್ಲ
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ – ಒಂದು ಹಾಗೂ ಅಂಗವಿಕಲ ಅಭ್ಯರ್ಥಿಗಳು : 500/- ರೂಗಳು
- ಸಾಮಾನ್ಯ ಅಭ್ಯರ್ಥಿಗಳು ಇತರೆ ಹಿಂದುಳಿದ ವರ್ಗದ 2ಎ 2ಬಿ 3ಎ 3 ಬಿ ಅಭ್ಯರ್ಥಿಗಳು : 1,000/-ರೂಗಳು
ಪಾವತಿ ಗೇಟ್ ವೇ ವಿಧಾನಗಳು
- ಡೆಬಿಟ್ ಕಾರ್ಡ್
- ಕ್ರೆಡಿಟ್ ಕಾರ್ಡ್
- ಯುಪಿಐ (ಲಭ್ಯವಿದ್ದಲ್ಲಿ)
- ನೆಟ್ ಬ್ಯಾಂಕಿಂಗ್
ಪ್ರಮುಖ ಸೂಚನೆ : ಯಾವುದೇ ರೀತಿಯ ನಗದು, ಚೆಕ್ ಹಾಗೂ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಸಲ್ಲಿಸಿರುವ ಅರ್ಜಿ ಶುಲ್ಕವನ್ನು ಅಧಿಕೃತ ಎಂದು ಪರಿಗಣಿಸಲಾಗುವುದಿಲ್ಲ
KMF SHIMUL Recruitment ನ ಆಯ್ಕೆ ವಿಧಾನ
ಈ KMF SHIMUL ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ಮೂರು ಹಂತಗಳಲ್ಲಿ ನಡೆಸಲಾಗಿದ್ದು ಈ ಆಯ್ಕೆ ಪ್ರಕ್ರಿಯೆಯು ಸಂಪೂರ್ಣ ಪಾರದರ್ಶಕವಾಗಿರುತ್ತದೆ ಅಭ್ಯರ್ಥಿಗಳ ಅರ್ಹತೆ ಹಾಗೂ ಪ್ರತಿಭೆಯನ್ನು ಆಧರಿಸಿ ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ
ಹಂತ-1 ಲಿಖಿತ ಪರೀಕ್ಷೆ
ಈ KMF SHIMUL ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲು 200 ಅಂಕಗಳಿಗೆ ನಡೆಯುವ ಲಿಖಿತ ಪರೀಕ್ಷೆಗೆ ಹಾಜರಾಗಬೇಕು ಈ ಪರೀಕ್ಷೆಯಲ್ಲಿ ಬರಬಹುದಾದ ಪರೀಕ್ಷೆ ವಿಷಯಗಳು ಈ ಕೆಳಕಂಡಂತಿದೆ
| ವಿಷಯಗಳು | ಅಂಕಗಳು |
| ಕನ್ನಡ ಭಾಷೆ | 50 ಅಂಕಗಳು |
| ಸಾಮಾನ್ಯ ಇಂಗ್ಲಿಷ್ | 25 ಅಂಕಗಳು |
| ಸಾಮಾನ್ಯ ಜ್ಞಾನ | 25 ಅಂಕಗಳು |
| ಸಹಕಾರ ವಿಷಯಗಳು | 50 ಅಂಕಗಳು |
| ಭಾರತದ ಸಂವಿಧಾನ | 25 ಅಂಕಗಳು |
| ಒಕ್ಕೂಟದ ಕಾರ್ಯಚಟುವಟಿಕೆಗಳು | 25 ಅಂಕಗಳು |
ಹಂತ-2 ದಾಖಲೆ ಪರಿಶೀಲನೆ
ಲಿಖಿತ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳನ್ನು ಸುಮಾರು 1:5 ರ ಅನುಪಾತದಲ್ಲಿ ದಾಖಲೆ ಪರಿಶೀಲನೆಗೆ ಕರೆಯಲಾಗುತ್ತದೆ ಈ ಕೆಳಕಂಡಂತಿದೆ
- ಎಸ್ ಎಸ್ ಎಲ್ ಸಿ ಅಂಕಪಟ್ಟಿ
- ಪಿಯುಸಿ, ಡಿಪ್ಲೋಮಾ, ಪದವಿ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರಗಳು
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರ
- ಕನ್ನಡ ಮಾಧ್ಯಮ ಪ್ರಮಾಣ ಪತ್ರ
- ಯೋಜನಾ ನಿರಾಶ್ರಿತರ ಪ್ರಮಾಣ ಪತ್ರ (ಅಗತ್ಯವಿದ್ದಲ್ಲಿ)
- ಅನುಭವ ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ಪಾಸ್ಪೋರ್ಟ್ ಸೈಜ್ ಫೋಟೋ
- ಅಭ್ಯರ್ಥಿಯ ಸಹಿ
- ಫೋಟೋವನ್ನು ಹೊಂದಿರುವ ಅಧಿಕೃತ ಗುರುತಿನ ಚೀಟಿ
ಹಂತ-3 ಮೌಖಿಕ ಸಂದರ್ಶನ
ಲಿಖಿತ ಪರೀಕ್ಷೆ ಹಾಗೂ ದಾಖಲೆ ಪರಿಶೀಲನೆಯನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸಿದ ಅಭ್ಯರ್ಥಿಗಳನ್ನು 15 ಅಂಕಗಳ ಸಂದರ್ಶನ ಪ್ರಕ್ರಿಯೆಗೆ ಕರೆಯಲಾಗುತ್ತದೆ ಈ ಸಂದರ್ಶನದಲ್ಲಿ ಪ್ರಮುಖವಾಗಿ ಈ ಕೆಳಕಂಡ ವಿಷಯಗಳನ್ನು ಪರೀಕ್ಷಿಸಲಾಗುತ್ತದೆ ಅವುಗಳೆಂದರೆ
- ವಿಷಯದ ಬಗ್ಗೆ ಇರುವ ಜ್ಞಾನ
- ಆತ್ಮವಿಶ್ವಾಸದ ಮಟ್ಟ
- ಸಂವಹನ ಕೌಶಲ್ಯ
- ಆಡಳಿತಾತ್ಮಕ ಅರಿವು
- ವ್ಯಕ್ತಿತ್ವ
- ಸಮಸ್ಯೆ ಪರಿಹಾರ ಸಾಮರ್ಥ್ಯ
ಅಂತಿಮ ಆಯ್ಕೆ ಹೇಗೆ ನಡೆಯುತ್ತದೆ
KMF SHIMUL ನೇಮಕಾತಿಯ ಅಂತಿಮ ಮೆರಿಟ್ ಪಟ್ಟಿಯನ್ನು ಈ ಕೆಳಕಂಡ ಅರ್ಹತೆಗಳ ಆಧಾರದ ಮೇಲೆ ಸಿದ್ಧಪಡಿಸಲಾಗುತ್ತದೆ ಹಾಗೂ ಈ ಪಟ್ಟಿಯೇ ಅಭ್ಯರ್ಥಿಗಳ ಕೊನೆಯ ಆಯ್ಕೆ ಪಟ್ಟಿ ಆಗಿರುತ್ತದೆ ಈ ಕೆಳಕಂಡ ಅರ್ಹತಮಾನದಂಡಗಳನ್ನು ಪೂರೈಸುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆಯ್ಕೆಯಾಗುತ್ತಾರೆ ಅವುಗಳೆಂದರೆ:
- ಲಿಖಿತ ಪರೀಕ್ಷೆಯಲ್ಲಿ ತೆಗೆದುಕೊಂಡಿರುವ ಶೇಕಡ 85 ಅಂಕಗಳಷ್ಟು ತೂಕ
- ಸಂದರ್ಶನದ ಅಂಕಗಳು
- ಮೀಸಲಾತಿಗೆ ಸಂಬಂಧಿಸಿದ ನಿಯಮಗಳು
- ರೋಸ್ಟರ್ ಬಿಂದುವಿನ ವ್ಯವಸ್ಥೆ
KMF SHIMUL ನೇಮಕಾತಿಗೆ ಏಕೆ ಅರ್ಜಿ ಸಲ್ಲಿಸಬೇಕು
KMF SHIMUL ನೇಮಕಾತಿಯು ಸರ್ಕಾರಿ ಹಾಗೂ ಸಹಕಾರ ಕ್ಷೇತ್ರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗ ಆಕಾಂಕ್ಷಿಗಳಿಗೆ ಅತ್ಯುತ್ತಮ ಅವಕಾಶವಾಗಿದ್ದು ಈ ನೇಮಕಾತಿಗೆ ಏಕೆ ಅರ್ಜಿ ಸಲ್ಲಿಸಬೇಕು ಎಂಬ ಪ್ರಶ್ನೆಗೆ ಈ ಕೆಳಕಂಡಂತೆ ಪ್ರಮುಖ ಕಾರಣಗಳನ್ನು ಉತ್ತರವಾಗಿ ನೀಡಲಾಗಿದೆ ಅವುಗಳೆಂದರೆ:
- ಈ ಉದ್ಯೋಗಗಳು ಶಾಶ್ವತ ಉದ್ಯೋಗಗಳಾಗಿವೆ
- ಈ ಉದ್ಯೋಗಗಳಲ್ಲಿ ಉತ್ತಮ ವೇತನ ಸಿಗುತ್ತದೆ
- ವಾರ್ಷಿಕವಾಗಿ ವೇತನದ ಮಟ್ಟದಲ್ಲಿ ಹೆಚ್ಚಳವಾಗುತ್ತದೆ
- ಸರ್ಕಾರದ ನಿಯಮಾನುಸಾರ ಭತ್ಯೆಗಳು ಸಹ ಸಿಗುತ್ತವೆ
- ಕಾರ್ಮಿಕ ಭವಿಷ್ಯ ನಿಧಿ ಹಾಗೂ ಪಿಂಚಣಿಗೆ ಸಂಬಂಧಿಸಿದ ಸೌಲಭ್ಯಗಳು ಸಹ ಸಿಗುತ್ತವೆ
- ವೈದ್ಯಕೀಯ ಸೌಲಭ್ಯಗಳ ಪ್ರಯೋಜನವನ್ನು ಪಡೆಯಬಹುದು
- ಉನ್ನತ ಹುದ್ದೆಗಳಿಗೆ ಇರುವ ಪದೋನ್ನತಿ ಅವಕಾಶಗಳು ಸಹ ಇರುತ್ತದೆ
- ಉದ್ಯೋಗ ಭದ್ರತೆ ದೊರೆಯುತ್ತದೆ
- ವೃತ್ತಿ ಬೆಳವಣಿಗೆ ಸಾಧ್ಯವಿದೆ
- ಕರ್ನಾಟಕದ ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶವನ್ನು ಈ ಹುದ್ದೆಗಳು ನೀಡುತ್ತವೆ
ಈ ಹುದ್ದೆಗಳ ಕೆಲಸದ ವಾತಾವರಣ
KMF SHIMUL ಒಂದು ಹಾಲು ಸಂಸ್ಕರಣ ಸಂಸ್ಥೆಯಾಗಿದ್ದು, ಈ ಸಂಸ್ಥೆಯಲ್ಲಿ ತಂತ್ರಜ್ಞಾನ ಹಾಗೂ ತಂಡದ ಕೆಲಸಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ ಈ ಕೆಲಸದ ವಾತಾವರಣವು ತಾಂತ್ರಿಕ ಜ್ಞಾನವನ್ನು ಆಧರಿಸಿದ್ದು ಈ ಕೆಳಕಂಡ ಪ್ರಮುಖ ಲಕ್ಷಣಗಳನ್ನು ಹೊಂದಿರುತ್ತದೆ ಅವುಗಳೆಂದರೆ
- ಸ್ವಚ್ಛವಾದ ಹಾಗೂ ಸುರಕ್ಷಿತವಾಗಿರುವ ಕಾರ್ಯಸ್ಥಳದ ಲಭ್ಯತೆ
- ಆಧುನಿಕ ಹಾಗೂ ಸುಸಜ್ಜಿತ ಯಂತ್ರೋಪಕರಣಗಳು
- ವೃತ್ತಿಪರ ಕೆಲಸದ ಸಂಸ್ಕೃತಿ ವ್ಯವಸ್ಥೆ
- ಕಂಪ್ಯೂಟರ್ ಆಧರಿತ ಆಡಳಿತ ವ್ಯವಸ್ಥೆ
- ಜ್ಞಾನದ ಉತ್ತಮ ಪ್ರಕ್ರಿಯೆಗೆ ತರಬೇತಿ ಕಾರ್ಯಕ್ರಮಗಳು
- ಅನುಭವಿ ವ್ಯಕ್ತಿಗಳಿಂದ ಮಾರ್ಗದರ್ಶನ
- ಮಹಿಳೆಯರು ಮತ್ತು ಪುರುಷರಿಗೆ ಸಮಾನ ಅವಕಾಶಗಳನ್ನು ಒದಗಿಸುವುದು
KMF SHIMUL ನ ಹುದ್ದೆಗಳ ಪ್ರಮುಖ ಜವಾಬ್ದಾರಿಗಳು
ಸಹಾಯಕ ವ್ಯವಸ್ಥಾಪಕರ ಜವಾಬ್ದಾರಿಗಳು
- ಸಿಬ್ಬಂದಿಗಳನ್ನು ನಿರ್ವಹಿಸುವುದು
- ಯೋಜನೆಗಳನ್ನು ಅನುಷ್ಠಾನ ಗೊಳಿಸುವುದು
- ರೈತರೊಂದಿಗೆ ಸಮನ್ವಯ ಸಾಧಿಸುವುದು
- ಆಡಳಿತಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುವುದು
ತಾಂತ್ರಿಕ ಅಧಿಕಾರಿಗಳ ಜವಾಬ್ದಾರಿಗಳು
- ಸಂಸ್ಥೆಯಲ್ಲಿರುವ ಯಂತ್ರೋಪಕರಣಗಳ ಮೇಲ್ವಿಚಾರಣೆ ನಡೆಸುವುದು
- ತಾಂತ್ರಿಕ ದೋಷಗಳನ್ನು ಪರಿಹರಿಸುವುದು
- ಗುಣಮಟ್ಟ ನಿಯಂತ್ರಣಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಕೈಗೊಳ್ಳುವುದು
- ಉತ್ಪಾದನಾ ಪ್ರಕ್ರಿಯೆಯನ್ನು ಸುಧಾರಣೆಗೊಳಿಸುವುದು
ಕೆಮಿಸ್ಟ್ ಜವಾಬ್ದಾರಿಗಳು
- ಹಾಲಿನ ಗುಣಮಟ್ಟದ ಪರೀಕ್ಷೆ ಮಾಡುವುದು
- ಪ್ರಯೋಗಾಲಯವನ್ನು ನಿರ್ವಹಿಸುವುದು
- ರಾಸಾಯನಿಕ ವಿಶ್ಲೇಷಣೆಯನ್ನು ಮಾಡುವುದು
- ಸಂಬಂಧಿಸಿದ ವರದಿಯನ್ನು ಸಿದ್ಧಪಡಿಸುವುದು
ಆಡಳಿತ ಸಹಾಯಕರ ಜವಾಬ್ದಾರಿಗಳು
- ಸಂಸ್ಥೆಗೆ ಸಂಬಂಧಿಸಿದ ಕಡತ ನಿರ್ವಹಣೆ
- ಕಚೇರಿ ದಾಖಲೆಗಳ ನಿರ್ವಹಣೆ
- ಪತ್ರ ವ್ಯವಹಾರವನ್ನು ನಿರ್ವಹಿಸುವುದು
- ಕಂಪ್ಯೂಟರ್ ನಲ್ಲಿ ಡಾಟಾ ಎಂಟ್ರಿ ಮಾಡುವುದು
ಲೆಕ್ಕ ಸಹಾಯಕರ ಜವಾಬ್ದಾರಿಗಳು
- ಲೆಕ್ಕಪತ್ರಗಳನ್ನು ನಿರ್ವಹಿಸುವುದು
- ಬಿಲ್ಲುಗಳನ್ನು ತಯಾರಿಸುವುದು
- ಬ್ಯಾಂಕಿನಲ್ಲಿ ಹಣದ ವ್ಯವಹಾರಕ್ಕೆ ಸಂಬಂಧಿಸಿದ ಹೊಂದಾಣಿಕೆಯನ್ನು ಏರ್ಪಡಿಸುವುದು
- ಹಣಕಾಸು ವರದಿಗಳನ್ನು ತಯಾರಿಸುವುದು
ಮಾರುಕಟ್ಟೆ ಸಹಾಯಕರ ಜವಾಬ್ದಾರಿಗಳು
- ಮಾರಾಟಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸುವುದು
- ಡೀಲರ್ ಗಳೊಂದಿಗೆ ಸಂಪರ್ಕ ಸಾಧಿಸುವುದು
- ಮಾರುಕಟ್ಟೆ ವಿಶ್ಲೇಷಣೆ ಮಾಡುವುದು
- ಉತ್ಪನ್ನಗಳ ಬಗ್ಗೆ ಪ್ರಚಾರ ಕಾರ್ಯ ಕೈಗೊಳ್ಳುವುದು
ಕಿರಿಯ ತಾಂತ್ರಿಕರ ಜವಾಬ್ದಾರಿಗಳು
- ಸಂಸ್ಥೆಯಲ್ಲಿರುವ ಎಲ್ಲಾ ರೀತಿಯ ಯಂತ್ರಗಳ ನಿರ್ವಹಣೆಯನ್ನು ಮಾಡುವುದು
- ಯಂತ್ರಗಳು ದುರಸ್ತಿ ಹೊಂದಿದಲ್ಲಿ ದುರಸ್ತಿ ಕಾರ್ಯವನ್ನು ನಿರ್ವಹಿಸುವುದು
- ವಿದ್ಯುತ್ ವ್ಯವಸ್ಥೆ ಪರಿಶೀಲನೆ ನಡೆಸುವುದು
- ಸುರಕ್ಷಿತ ನಿಯಮಗಳನ್ನು ಪಾಲಿಸುವುದು
ದೈನಂದಿನ ಕೆಲಸದ ವೇಳಾಪಟ್ಟಿ
ಪ್ರತಿ ಹುದ್ದೆಗೆ ಸಂಬಂಧಿಸಿದಂತೆ ಕೆಲಸದ ವೇಳಾಪಟ್ಟಿ ಮತ್ತು ಜವಾಬ್ದಾರಿ ಬದಲಾಗುತ್ತಿರುತ್ತದೆ ಆದುದರಿಂದ ಸಾಮಾನ್ಯವಾಗಿ ಇರಬಹುದಾದ ಕೆಲಸದ ವೇಳಾಪಟ್ಟಿಯನ್ನು ಈ ಕೆಳಗಡೆ ನೀಡಲಾಗಿದೆ ಅವುಗಳೆಂದರೆ
ಬೆಳಗಿನ ಸಮಯ :
- ಹಾಜರಾತಿ ಹಾಕುವುದು
- ದಿನದ ಕಾರ್ಯ ಹಂಚಿಕೆಯನ್ನು ಪಡೆದುಕೊಳ್ಳುವುದು
- ಸಭೆಗಳಲ್ಲಿ ಪಾಲ್ಗೊಳ್ಳುವುದು
ಮಧ್ಯಾಹ್ನದ ಸಮಯ :
- ತಾಂತ್ರಿಕ ಕಾರ್ಯಗಳನ್ನು ಮಾಡುವುದು
- ದಾಖಲೆಗಳನ್ನು ನಿರ್ವಹಿಸುವುದು
- ದಾಖಲೆಗಳ ಪರಿಶೀಲನೆ ಮಾಡುವುದು
- ಮಾಹಿತಿಗೆ ಸಂಬಂಧಿಸಿದ ವರದಿಯನ್ನು ತಯಾರಿಸುವುದು
ಸಂಜೆ ಸಮಯ :
- ಪ್ರಸ್ತುತ ದಿನದಲ್ಲಿ ಆದ ಕೆಲಸಗಳ ಪರಿಶೀಲನೆ ಮಾಡುವುದು
- ಮುಂದಿನ ದಿನದ ಕೆಲಸದ ಯೋಜನೆಯನ್ನು ರೂಪಿಸುವುದು
- ಸಂಬಂಧಪಟ್ಟ ವರದಿಯನ್ನು ಸಲ್ಲಿಸುವುದು
ಕೆಲವೊಂದು ಉತ್ಪಾದನಾ ಘಟಕಗಳಲ್ಲಿ ಶಿಫ್ಟ್ ವ್ಯವಸ್ಥೆಯು ಸಹ ಇರುತ್ತದೆ ಏಕೆಂದರೆ ಹಾಲಿನ ಸ್ವರಕ್ಷತೆಯನ್ನು 24 ಗಂಟೆಯೂ ಕಾಪಡಬೇಕಾಗಿರುವುದರಿಂದ ಶಿಫ್ಟ್ ವ್ಯವಸ್ಥೆ ಇರುತ್ತದೆ
ವೃತ್ತಿ ಬೆಳವಣಿಗೆ (Career Growth)
KMF SHIMUL ನಲ್ಲಿ ಕೆಲಸ ಆರಂಭಿಸಿದ ನಂತರ ಉತ್ತಮ ಕಾರ್ಯಕ್ಷಮತೆ ಮತ್ತು ಕೌಶಲ್ಯಗಳನ್ನು ಹೊಂದುವ ಉದ್ಯೋಗಿಗಳಿಗೆ ಹಂತವಾಗಿ ಪದೋನ್ನತಿ ಅವಕಾಶಗಳನ್ನು ಕಲ್ಪಿಸಲಾಗುತ್ತದೆ ವೃತ್ತಿ ಬೆಳವಣಿಗೆ ಬಗ್ಗೆ ಮಾಹಿತಿ ಈ ಕೆಳಕಂಡಂತಿದೆ
- ಕಿರಿಯ ತಾಂತ್ರಿಕರು → ಹಿರಿಯ ತಾಂತ್ರಿಕರು → ತಾಂತ್ರಿಕ ಮೇಲ್ವಿಚಾರಕರು → ತಾಂತ್ರಿಕ ಅಧಿಕಾರಿ ಹುದ್ದೆಗಳಿಗೆ ಪದೋನ್ನತಿ
- ಆಡಳಿತ ಸಹಾಯಕ → ಹಿರಿಯ ಆಡಳಿತ ಸಹಾಯಕ → ಕಚೇರಿ ಅಧೀಕ್ಷಕರು → ಸಹಾಯಕ ವ್ಯವಸ್ಥಾಪಕರು ಹುದ್ದೆಗಳಿಗೆ ಪದೋನ್ನತಿ
- ಲೆಕ್ಕ ಸಹಾಯಕ → ಲೆಕ್ಕಾಧಿಕಾರಿ → ಹಣಕಾಸು ಅಧಿಕಾರಿ → ಹಣಕಾಸು ವ್ಯವಸ್ಥಾಪಕರು ಹುದ್ದೆಗಳಿಗೆ ಪದೋನ್ನತಿ
- ವಿಸ್ತರಣಾಧಿಕಾರಿ → ಹಿರಿಯ ವಿಸ್ತರಣಾಧಿಕಾರಿ → ಸಹಾಯಕ ವ್ಯವಸ್ಥಾಪಕರು → ಉಪ ವ್ಯವಸ್ಥಾಪಕರು ಹುದ್ದೆಗಳಿಗೆ ಪದೋನ್ನತಿ
ಈ ನೇಮಕಾತಿಗೆ ಪ್ರಮುಖವಾಗಿ ಯಾರು ಅರ್ಜಿ ಸಲ್ಲಿಸಬೇಕು
ಈ ಕೆಳಕಂಡ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಪ್ರಮುಖವಾಗಿ ಈ ನೇಮಕಾತಿಗೆ ಅರ್ಜಿ ಸಲ್ಲಿಸಬೇಕಾಗಿರುತ್ತದೆ ಈ ನೇಮಕಾತಿಯು ಈ ಕೆಳಕಂಡ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶವಾಗಿದೆ ಅವುಗಳೆಂದರೆ
- ಹೊಸದಾಗಿ ಪದವಿಯನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳು
- ಐಟಿಐ ವಿದ್ಯಾರ್ಥಿಯನ್ನು ಹೊಂದಿರುವಂತಹ ವಿದ್ಯಾರ್ಥಿಗಳು
- ಇಂಜಿನಿಯರಿಂಗ್ ಪದವೀಧರರು
- ಬಿ .ಎಸ್ಸಿ, ಬಿಕಾಂ, ಬಿಬಿಎಂ ಪದವಿ ಹೊಂದಿರುವ ಅಭ್ಯರ್ಥಿಗಳು
- ಡೈರಿ ಟೆಕ್ನಾಲಜಿಯಲ್ಲಿ ಜ್ಞಾನ ಹೊಂದಿರುವ ಪದವೀಧರರು
- ಉತ್ತಮ ರೀತಿಯ ಕಂಪ್ಯೂಟರ್ ಜ್ಞಾನ ಹೊಂದಿರುವ ಅಭ್ಯರ್ಥಿಗಳು
- ಸರ್ಕಾರಿ ಉದ್ಯೋಗವನ್ನು ಪಡೆಯಬೇಕೆಂಬ ಆಕಾಂಕ್ಷೆ ಹೊಂದಿರುವವರು
- ಸರ್ಕಾರಿ ಉದ್ಯೋಗಕ್ಕೆ ತಯಾರಿ ನಡೆಸುತ್ತಿರುವವರು
- ಕರ್ನಾಟಕ ರಾಜ್ಯದಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳು
- ಉತ್ತಮ ಆಕರ್ಷಕ ವೇತನ ಹಾಗೂ ಸ್ಥಿರ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳು ಈ ನೇಮಕಾತಿಗೆ ಕಡ್ಡಾಯವಾಗಿ ಆದಷ್ಟು ಬೇಗ ಅರ್ಜಿ ಸಲ್ಲಿಸಿ
ಹುದ್ದೆಗಳಿಗೆ ಇರಬೇಕಾದ ಪ್ರಮುಖ ಕೌಶಲ್ಯಗಳು
ಈ KMF SHIMUL ನೇಮಕಾತಿಯ ಅಡಿಯಲ್ಲಿ ಆಯ್ಕೆಗೊಳ್ಳುವ ಅಭ್ಯರ್ಥಿಗಳು ವಿವಿಧ ರೀತಿಯ ಆಡಳಿತಾತ್ಮಕ ತಾಂತ್ರಿಕ ಹಾಗೂ ಸಹಾಯಕ ಹುದ್ದೆಗಳಿಗೆ ಆಯ್ಕೆ ಗೊಳ್ಳುವುದರಿಂದ ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆಯ ಜೊತೆಯಲ್ಲಿ ಕೆಲವು ವೃತ್ತಿಪರ ಕೌಶಲ್ಯವನ್ನು ಹೊಂದಿದ್ದರೆ ಉತ್ತಮ ಅವಕಾಶಗಳನ್ನು ಪಡೆಯಬಹುದಾಗಿರುತ್ತದೆ ಅವುಗಳೆಂದರೆ
ಕಂಪ್ಯೂಟರ್ ಜ್ಞಾನ
- ಎಂಎಸ್ ವರ್ಡ್ ಎಕ್ಸೆಲ್ ಮತ್ತು ಪವರ್ ಪಾಯಿಂಟ್ ಗಳನ್ನು ಉತ್ತಮ ರೀತಿಯಲ್ಲಿ ಬಳಸುವುದು
- ಇಂಟರ್ನೆಟ್ ಮತ್ತು ಇ-ಮೇಲ್ ಬಳಕೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವುದು
- ಡೇಟಾ ಎಂಟ್ರಿ ಮಾಡುವುದು
- ಮೂಲಭೂತ ಕಂಪ್ಯೂಟರ್ ಅಪ್ಲಿಕೇಶನ್ ಹೊಂದಿರುವುದು
- ಕಂಪ್ಯೂಟರ್ ಸಾಧನಗಳಾದ ಇನ್ ಪುಟ್ ಔಟ್ ಪುಟ್ ಮತ್ತು ಪ್ರಿಂಟರ್ ಬಗ್ಗೆ ಸಾಮಾನ್ಯ ಜ್ಞಾನ ಹೊಂದುವುದು
ಸಂವಹನ ಕೌಶಲ್ಯ
- ಪ್ರಾದೇಶಿಕ ಭಾಷೆಯಾದ ಕನ್ನಡ ಭಾಷೆಯನ್ನು ಸ್ಪಷ್ಟವಾಗಿ ಮಾತನಾಡುವ ಬರೆಯುವ ಹಾಗೂ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿರಬೇಕು
- ಮೂಲಭೂತ ಇಂಗ್ಲಿಷ್ ಜ್ಞಾನವನ್ನು ಹೊಂದಬೇಕು
- ರೈತರು ಸಹಯೋಗಿಗಳು ಮತ್ತು ಅಧಿಕಾರಿಗಳೊಂದಿಗೆ ಉತ್ತಮ ರೀತಿಯಲ್ಲಿ ಸಮನ್ವಯ ಸಾಧಿಸುವ ಸಾಮರ್ಥ್ಯವನ್ನು ಹೊಂದಿರಬೇಕು
ಸಮಸ್ಯೆ ಪರಿಹಾರ ಸಾಮರ್ಥ್ಯ
- ತಾಂತ್ರಿಕ ಅಥವಾ ಆಡಳಿತಾತ್ಮಕ ಸಮಸ್ಯೆಗಳನ್ನು ಗುರುತಿಸಿ, ಪರಿಣಾಮಕಾರಿಯಾಗಿ ಪರಿಹರಿಸುವ ಕೌಶಲ್ಯ
- ತ್ವರಿತ ಗತಿಯಲ್ಲಿ ಉತ್ತಮ ರೀತಿಯಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುವ ಸಾಮರ್ಥ್ಯ
ಸಮಯ ನಿರ್ವಹಣೆ
- ನೀಡಿರುವ ನಿಗದಿತ ಸಮಯದಲ್ಲಿ ನಿರ್ದಿಷ್ಟ ಪಡಿಸಿರುವ ಕೆಲಸವನ್ನು ಪೂರ್ಣಗೊಳಿಸುವ ಅಭ್ಯಾಸ ರೂಢಿಸಿಕೊಳ್ಳಬೇಕು
- ಆದ್ಯತೆಗಳನ್ನು ಸರಿಯಾದ ರೀತಿಯಲ್ಲಿ ನಿಗದಿಪಡಿಸಿ ಪೂರ್ಣಗೊಳಿಸುವ ಸಾಮರ್ಥ್ಯ
ತಾಂತ್ರಿಕ ಜ್ಞಾನ
ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ವಿಷಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ವಿಶೇಷ ತಾಂತ್ರಿಕ ಜ್ಞಾನವನ್ನು ಹಾಗೂ ಪ್ರಾಯೋಗಿಕ ಜ್ಞಾನವನ್ನು ಹೊಂದಿರಬೇಕಾಗುತ್ತದೆ ಇವುಗಳಿಂದ ಕಾರ್ಯಾಚರಣೆಯು ಸುಲಭವಾಗಿದೆ
ತಂಡದೊಂದಿಗೆ ಕೆಲಸ ಮಾಡುವ ಸಾಮರ್ಥ್ಯ
- ಸಹೋದ್ಯೋಗಿಗಳೊಂದಿಗೆ ಸಮನ್ವಯವನ್ನು ಸಾಧಿಸುವುದು
- ಜವಾಬ್ದಾರಿಗಳನ್ನು ಹಂಚಿಕೊಳ್ಳುವುದು
- ತಂಡಕ್ಕೆ ನೀಡಿರುವ ಗುರಿಗಳನ್ನು ಆದಷ್ಟು ಬೇಗ ಸಾಧಿಸಲು ಸಹಕರಿಸುವುದು
ಪರೀಕ್ಷೆಯ ಸಿಲಬಸ್
KMF SHIMUL ನ ಲಿಖಿತ ಪರೀಕ್ಷೆಯು ಒಟ್ಟು 200 ಅಂಕಗಳಿಗೆ ನಡೆಯಲಿದ್ದು ಕನ್ನಡ ಭಾಷೆ ಇಂಗ್ಲಿಷ್ ಭಾಷೆ ಸಾಮಾನ್ಯ ಜ್ಞಾನ ಸಹಕಾರ ವಿಷಯಗಳು ಭಾರತದ ಸಂವಿಧಾನ ಹಾಗೂ ಒಕ್ಕೂಟದ ಕಾರ್ಯಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ವಿಷಯಗಳಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತದೆ ಸಂಪೂರ್ಣವಾದ ವಿವರ ಈ ಕೆಳಕಂಡಂತಿದೆ
ಕನ್ನಡ ಭಾಷೆ
- ವ್ಯಾಕರಣ
- ಸಂಧಿ
- ಸಮಾಸ
- ಸಮಾನಾರ್ಥಕ ಮತ್ತು ವಿರುದ್ಧಾರ್ಥಕ ಪದಗಳು
- ಗಾದೆಗಳು
- ವಾಕ್ಯ ತಿದ್ದುಪಡಿ
- ಓದುವ ಗ್ರಹಿಕೆ ವಿಷಯಗಳು
ಸಾಮಾನ್ಯ ಇಂಗ್ಲಿಷ್
- Grammar
- Vocabulary
- Synonims and Antonyms
- Sentence Improvement
- Reading Comprehension
- Error Detection
ಸಾಮಾನ್ಯ ಜ್ಞಾನ
- ಕರ್ನಾಟಕದ ಇತಿಹಾಸ
- ಭಾರತದ ಇತಿಹಾಸ
- ಭೂಗೋಳಶಾಸ್ತ್ರ
- ಆರ್ಥಿಕತೆ
- ವಿಜ್ಞಾನ
- ಪ್ರಚಲಿತ ವಿದ್ಯಮಾನಗಳು
- ಸರ್ಕಾರಿ ಯೋಜನೆಗಳು
ಭಾರತದ ಸಂವಿಧಾನ
- ಮೂಲಭೂತ ಹಕ್ಕುಗಳು
- ಮೂಲಭೂತ ಕರ್ತವ್ಯಗಳು
- ರಾಜ್ಯ ನಿರ್ದೇಶಕ ತತ್ವಗಳು
- ಪಂಚಾಯತ್ ರಾಜ್
- ಚುನಾವಣಾ ವ್ಯವಸ್ಥೆ
- ಕೇಂದ್ರ ಮತ್ತು ರಾಜ್ಯ ಸರ್ಕಾರದ ರಚನೆ
ಸಹಕಾರ ವಿಷಯಗಳು
- ಕರ್ನಾಟಕ ಸಹಕಾರ ಕಾಯ್ದೆ
- ಸಹಕಾರ ಸಂಘಗಳ ಕಾರ್ಯವೈಖರಿ
- ಸಹಕಾರ ತತ್ವಗಳು
- ಹಾಲು ಉತ್ಪಾದಕರ ಸಂಘಗಳ ವ್ಯವಸ್ಥೆ
ಒಕ್ಕೂಟದ ಕಾರ್ಯ ಚಟುವಟಿಕೆಗಳು
- ಹಾಲಿನ ಸಂಗ್ರಹಣೆ
- ಹಾಲಿನ ಸಂಸ್ಕರಣೆ
- ಗುಣಮಟ್ಟ ನಿಯಂತ್ರಣ
- ಹಾಲು ಉತ್ಪನ್ನಗಳ ವಿತರಣೆ
- ಮಾರುಕಟ್ಟೆ ವ್ಯವಸ್ಥೆ
- ರೈತ ಅಭಿವೃದ್ಧಿ ಕಾರ್ಯಕ್ರಮಗಳು
KMF SHIMUL Recruitment ಪರೀಕ್ಷಾ ತಯಾರಿಗೆ ಉಪಯುಕ್ತ ಸಲಹೆಗಳು
1. ದಿನನಿತ್ಯ ಅಧ್ಯಯನ ಮಾಡಲು ಯೋಜನೆಯನ್ನು ರೂಪಿಸಿ
ಪ್ರತಿ ದಿನ ಕನಿಷ್ಠ ನಾಲ್ಕರಿಂದ ಆರು ಗಂಟೆಗಳ ಕಾಲ ನಿಯಮಿತವಾಗಿ ಓದಲು ಪ್ರಯತ್ನಿಸಿ ಇದರಿಂದ ತಯಾರಿಯ ನಿರಂತರತೆ ಸಾಧ್ಯವಾಗುತ್ತದೆ
2. ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿ
ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡುವುದರಿಂದ ಪರೀಕ್ಷೆ ಮಾದರಿ ಹಾಗೂ ಪ್ರಶ್ನೆಗಳ ಗುಣಲಕ್ಷಣಗಳು ತಿಳಿದು ಬರುತ್ತವೆ
3. ಸಮಯದ ನಿರ್ವಹಣೆಗೆ ಮಾಕ್ ಟೆಸ್ಟ್ ಬರೆಯಿರಿ
ಪರೀಕ್ಷೆಯಲ್ಲಿ ಸಮಯ ನಿರ್ವಹಣೆಯನ್ನು ಉತ್ತಮವಾಗಿ ಸಾಧಿಸಲು ನಿಗದಿತ ಕಾಲಮಿತಿಯಲ್ಲಿ ಮಾಕ್ ಟೆಸ್ಟ್ ಗಳನ್ನು ಬರೆಯಿರಿ
4. ಪ್ರತಿದಿನ ಕರೆಂಟ್ ಅಫೇರ್ಸ್ ಗಳನ್ನು ಓದಿ
ಪ್ರತಿದಿನವೂ ಕನ್ನಡ ಇಂಗ್ಲಿಷ್ ದಿನ ಪತ್ರಿಕೆಗಳು ಹಾಗೂ ವಿಶ್ವಾಸಾರ್ಹ ಸುದ್ದಿ ವಾಹಿನಿಗಳನ್ನು ಓದುವುದು ಉತ್ತಮವಾಗಿದೆ ಇದರ ಜೊತೆಯಲ್ಲಿ ವಾರಪತ್ರಿಕೆ ಹಾಗೂ ಮಾಸಪತ್ರಿಕೆಗಳನ್ನು ಓದುವ ರೂಢಿಯನ್ನು ಬೆಳೆಸಿಕೊಳ್ಳಿ
5. ಸಣ್ಣ ಟಿಪ್ಪಣಿಗಳನ್ನು ತಯಾರಿಸಿ
ನೀವು ಓದುವ ಸಂದರ್ಭದಲ್ಲಿ ಪ್ರಮುಖವೆನಿಸುವ ಟಿಪ್ಪಣಿಗಳನ್ನು ಕಿರು ಟಿಪ್ಪಣಿಗಳಾಗಿ ಬರೆದುಕೊಳ್ಳಿ ಇದು ರಿವಿಶನ್ ಗೆ ಸಹಾಯಕವಾಗುತ್ತದೆ
6. ನಿಮ್ಮ ದುರ್ಬಲ ವಿಷಯಗಳಿಗೆ ಹೆಚ್ಚು ಸಮಯವನ್ನು ಮೀಸಲಿದೆ
ನಿಮಗೆ ಯಾವುದಾದರು ಒಂದು ವಿಷಯವೂ ದುರ್ಬಲ ಅಥವಾ ಕಷ್ಟವೆನಿಸಿದರೆ ಆ ವಿಷಯದ ಅಧ್ಯಯನಕ್ಕೆ ಹೆಚ್ಚು ಸಮಯ ಮತ್ತು ಗಮನವನ್ನು ನೀಡಿ
KMF SHIMUL Recruitment ಪರೀಕ್ಷೆಗೆ ಪುಸ್ತಕಗಳು
ಕನ್ನಡ ಭಾಷೆ
- ಸ್ಪರ್ಧಾ ಕನ್ನಡ ವ್ಯಾಕರಣ
- ಸಾಮಾನ್ಯ ಕನ್ನಡ ಪ್ರಶ್ನೋತ್ತರ ಸಂಕಲನ
ಸಾಮಾನ್ಯ ಇಂಗ್ಲಿಷ್
- Objective General English – S.P. Bakshi
- Word Power Made Easy – Norman Lewis
ಸಾಮಾನ್ಯ ಜ್ಞಾನ
- Lucent’s General Knowledge
- Manorama Yearbook
ಭಾರತದ ಸಂವಿಧಾನ
- ಭಾರತೀಯ ಸಂವಿಧಾನ – M. Laxmikanth (ಕನ್ನಡ/ಇಂಗ್ಲಿಷ್ ಆವೃತ್ತಿ)
ಸಹಕಾರ ವಿಷಯಗಳು
- ಕರ್ನಾಟಕ ಸಹಕಾರ ಕಾಯ್ದೆ
- ಸಹಕಾರ ಸಂಘಗಳ ನಿಯಮಾವಳಿ
- ಹಾಲು ಸಹಕಾರ ವ್ಯವಸ್ಥೆಗೆ ಸಂಬಂಧಿಸಿದ ಅಧ್ಯಯನ ಟಿಪ್ಪಣಿಗಳು
ಅಧ್ಯಯನದ ಸಂಪನ್ಮೂಲಗಳು
- ಕರ್ನಾಟಕ ಸರ್ಕಾರದ ಅಧಿಕೃತ ನೇಮಕಾತಿ ಅಧಿಸೂಚನೆಗಳು
- ಕೆಎಂಎಫ್ ಮತ್ತು ಜಿಲ್ಲಾ ಹಾಲು ಒಕ್ಕೂಟಗಳ ಅಧಿಕೃತ ಪ್ರಕಟಣೆಗಳು
- ಉದ್ಯೋಗ ಸಂಬಂಧಿತ ಇರುವ ಕನ್ನಡದ ವೆಬ್ಸೈಟ್ ಗಳು
- ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು
- ಯೂಟ್ಯೂಬ್ ಮೂಲಕ ಸಿಗುವ ಉಚಿತ ಹಾಗೂ ಪರಿಣಾಮ ಕಾರ್ಯ ತರಬೇತಿಗಳು ಮತ್ತು ತರಗತಿಗಳು
- ಆನ್ಲೈನ್ ವ್ಯವಸ್ಥೆಯಲ್ಲಿ ಸಿಗುವ ಪಿಡಿಎಫ್ ನೋಟ್ಸ್ ಗಳು
- ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಟೆಲಿಗ್ರಾಂ ಮತ್ತು ವಾಟ್ಸಾಪ್ ಅಧ್ಯಯನದ ಗುಂಪುಗಳು
ಮಾಕ್ ಟೆಸ್ಟ್ ಗಳನ್ನು ಏಕೆ ಬರೆಯಬೇಕು?
ಮಾಕ್ ಟೆಸ್ಟುಗಳನ್ನು ಬರೆಯುವುದರಿಂದ ಈ ಕೆಳಕಂಡ ಪ್ರಯೋಜನಗಳನ್ನು ಪಡೆಯಬಹುದು ಇದರಿಂದ ಉತ್ತಮ ರೀತಿಯ ಸಮಯ ನಿರ್ವಹಣೆ ಮತ್ತು ಅಂಕಗಳನ್ನು ಗಳಿಸಲು ಸಾಧ್ಯವಾಗುತ್ತದೆ ಅವುಗಳೆಂದರೆ
- ಪರೀಕ್ಷೆಯ ಭಯ ಕಡಿಮೆಯಾಗುತ್ತದೆ
- ಸಮಯ ನಿರ್ವಹಣೆಯ ಬಗ್ಗೆ ಸುಧಾರಣೆ ಸಾಧಿಸಬಹುದು
- ಅಧ್ಯಯನಕ್ಕೆ ಸಂಬಂಧಿಸಿದ ದುರ್ಬಲ ವಿಷಯಗಳನ್ನು ಗುರುತಿಸಿ ನಿವಾರಿಸಿ ಕೊಳ್ಳಬಹುದು
- ಉತ್ತರ ನೀಡುವಲ್ಲಿ ನಿಖರತೆ ಹೆಚ್ಚಾಗುತ್ತದೆ
- ಆತ್ಮವಿಶ್ವಾಸ ಹೆಚ್ಚಾಗುತ್ತದೆ
ವಾರಕ್ಕೆ ಕನಿಷ್ಠ 2ರಿಂದ 3 ಮಾಕ್ ಟೆಸ್ಟ್ ಗಳನ್ನು ಬರೆಯುವುದರಿಂದ ತಮ್ಮ ಪರೀಕ್ಷಾ ತಯಾರಿಯನ್ನು ಉತ್ತಮಗೊಳಿಸಬಹುದು
KMF SHIMUL Recruitment ಗೆ ಅರ್ಜಿ ಸಲ್ಲಿಸುವಾಗ ಅಭ್ಯರ್ಥಿಗಳು ಮಾಡುವ ಸಾಮಾನ್ಯ ತಪ್ಪುಗಳು
ಸಾಮಾನ್ಯವಾಗಿ ಅಭ್ಯರ್ಥಿಗಳು KMF SHIMUL Recruitment ಗೆ ಅರ್ಜಿ ಸಲ್ಲಿಸುವಾಗ ಈ ಕೆಳಕಂಡ ತಪ್ಪುಗಳನ್ನು ಮಾಡುತ್ತಾರೆ ಇದರಿಂದ ನೇಮಕಾತಿ ಪ್ರಕ್ರಿಯೆಯಲ್ಲಿ ತೊಂದರೆಗಳು ಉಂಟಾಗಬಹುದು ಅಥವಾ ನೇಮಕಗೊಂಡ ನಂತರದಲ್ಲಿ ಪರಿಶೀಲನೆಗೆ ಒಳಪಡಬಹುದು ಆದುದರಿಂದ ಈತಪ್ಪುಗಳನ್ನು ಗಮನವಿಟ್ಟು ಓದಿ ಮತ್ತು ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ
- ತಪ್ಪಾದ ವೈಯಕ್ತಿಕ ಮಾಹಿತಿಗಳನ್ನು ನಮೂದಿಸುವುದು
- ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಅಂಕಪಟ್ಟಿಗಳಲ್ಲಿ ಇರುವ ಹೆಸರಿಗಿಂತ ವಿಭಿನ್ನವಾಗಿ ಹೆಸರನ್ನು ನಮೂದಿಸುವುದು
- ತಪ್ಪಾದ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯನ್ನು ನಮೂದಿಸುವುದು
- ಅಸ್ಪಷ್ಟ ಭಾವಚಿತ್ರ ಅತ್ಯಂತ ಹಳೆಯ ಭಾವಚಿತ್ರ ಹಾಗೂ ಸಹಿಯನ್ನು ಸರಿಯಾದ ರೀತಿಯಲ್ಲಿ ಅಪ್ಲೋಡ್ ಮಾಡದೇ ಇರುವುದು
- ಅಗತ್ಯ ದಾಖಲಾತಿಗಳನ್ನು ಅಪ್ಲೋಡ್ ಮಾಡದೇ ಅರ್ಜಿ ಸಲ್ಲಿಸುವುದು ಅಥವಾ ದಾಖಲಾತಿಗಳನ್ನು ತಪ್ಪಾಗಿ ಅಪ್ಲೋಡ್ ಮಾಡುವುದು
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದವರೆಗೆ ಕಾಯುವುದು
- ಅರ್ಜಿ ಶುಲ್ಕವನ್ನು ಪಾವತಿಸದೆ ಅರ್ಜಿ ಪೂರ್ಣಗೊಂಡಿದೆ ಎಂದು ಭಾವಿಸಿ ಸುಮ್ಮನಾಗುವುದು
- ಅರ್ಜಿಯನ್ನು ಸಲ್ಲಿಸಿದ ನಂತರ ಸ್ವೀಕೃತಿ ಪ್ರತಿ ಯನ್ನು ಡೌನ್ಲೋಡ್ ಮಾಡಿಕೊಳ್ಳುತ್ತಿರುವುದು ಅಥವಾ ಪ್ರಿಂಟ್ ತೆಗೆದುಕೊಳ್ಳದೆ ಇರುವುದು
- ಮೀಸಲಾತಿಗೆ ಸಂಬಂಧಿಸಿದ ದಾಖಲಾತಿಗಳನ್ನು ಸರಿಯಾಗಿ ಅಪ್ಲೋಡ್ ಮಾಡದೇ ಇರುವುದು
- ಅಧಿಕೃತ ಅಧಿಸೂಚನೆಯನ್ನು ಓದದೆ ಅರ್ಥಮಾಡಿಕೊಳ್ಳದೆ ಅರ್ಜಿಯನ್ನು ಸಲ್ಲಿಸುವುದು
Important Dates To Keep In Mind
| ವಿವರ | ದಿನಾಂಕ |
| ಅಧಿಕೃತ ಅಧಿಸೂಚನೆ ಹೊರಡಿಸಿದ ದಿನಾಂಕ | 12-06-2026 |
| ಆನ್ಲೈನ್ ಅರ್ಜಿ ಆರಂಭ | 14-06-2026 |
| ಅರ್ಜಿ ಸಲ್ಲಿಸಲು ಕೊನೆಯ ದಿನ | 14-07-2026 |
| ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ | 14-07-2026 |
Last Updated: 28 June 2026
Official Reference Links
| ಅಧಿಕೃತ ವೆಬ್ಸೈಟ್ | ಕೆ ಎಂ ಎಫ್ ಶಿಮುಲ್ (KMF SHIMUL) |
| ಅಧಿಕೃತ ನೇಮಕಾತಿ ಅಧಿಸೂಚನೆ | KMF SHIMUL Notification |
| ಹುದ್ದೆಗಳಿಗೆ ಅರ್ಜಿ ಸಲ್ಲಿಸಲು | ಅರ್ಜಿ ಸಲ್ಲಿಕೆ |
| ನಮ್ಮ ವಾಟ್ಸಪ್ ಗುಂಪು ಸೇರಲು | ಇಲ್ಲಿ ಕ್ಲಿಕ್ ಮಾಡಿ |
| ಹೆಚ್ಚುವರಿ ಮಾಹಿತಿ | ನೇಮಕಾತಿ |
KMF SHIMUL Recruitment : FAQ’s
ಪ್ರಶ್ನೆ-1. ಈ ನೇಮಕಾತಿಯಿಂದ ಎಷ್ಟು ಹುದ್ದೆಗಳ ಭರ್ತಿ ನಡೆಯುತ್ತಿದೆ?
ಉತ್ತರ- ಈ ನೇಮಕಾತಿ ಮೂಲಕ 194 ಹುದ್ದೆಗಳು ಭರ್ತಿಯಾಗುತ್ತಿವೆ
ಪ್ರಶ್ನೆ-2. ಆರ್ಜಿಯನ್ನು ಆಫ್ಲೈನ್ ವಿಧಾನದಲ್ಲಿ ಸಲ್ಲಿಸಬಹುದೆ?
ಉತ್ತರ- ಇಲ್ಲ, ಆನ್ಲೈನ್ ಅರ್ಜಿ ಸಲ್ಲಿಕೆ ಸಂಪೂರ್ಣವಾಗಿ ಆನ್ಲೈನ್ ಮೂಲಕ ಆಗಿದೆ
ಪ್ರಶ್ನೆ-3. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ಹಾಗೂ ಗರಿಷ್ಠ ವಯಮಿತಿ ಎಷ್ಟು?
ಉತ್ತರ- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು 18 ವರ್ಷ ಪೂರ್ಣಗೊಂಡಿರಬೇಕು ಗರಿಷ್ಠ ವಯಸ್ಸು 35 ರಿಂದ 40 ವರ್ಷಗಳವರೆಗೆ ಇರುತ್ತದೆ ಹೆಚ್ಚಿನ ವಿವರಗಳಿಗೆ ವಯೋಮಿತಿ ಸಡಿಲಿಕೆ ಮಾಹಿತಿಯನ್ನು ಓದಿ
ಪ್ರಶ್ನೆ-4. ಆಯ್ಕೆ ವಿಧಾನದ ಹಂತಗಳು ಯಾವುವು?
ಉತ್ತರ- ಲಿಖಿತ ಪರೀಕ್ಷೆ, ದಾಖಲೆ ಪರಿಶೀಲನೆ ಹಾಗೂ ಮೌಖಿಕ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು
ಪ್ರಶ್ನೆ-5. ಪಾವತಿಸಬೇಕಾದ ಅರ್ಜಿ ಶುಲ್ಕ ಎಷ್ಟು?
ಉತ್ತರ- ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಪ್ರವರ್ಗ ಒಂದರ ಅಭ್ಯರ್ಥಿಗಳು ಹಾಗೂ ಅಂಗವಿಕಲರಿಗೆ 500 ಗಳು ಮತ್ತು ಇತರೆ ಉಳಿದ ಎಲ್ಲಾ ಅಭ್ಯರ್ಥಿಗಳಿಗೆ 1,000 ರೂಗಳು
ಪ್ರಶ್ನೆ-6. ಹುದ್ದೆಗಳಿಗೆ ನಿಗದಿಪಡಿಸಿರುವ ವೇತನ ಶ್ರೇಣಿ ಏನು?
ಉತ್ತರ- 34,100/- ಗಳಿಂದ ರೂ.1,55,200/- ರೂಗಳ ವರೆಗೆ ಇರುತ್ತದೆ.
ಪ್ರಶ್ನೆ-7. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅನುಭವ ಕಡ್ಡಾಯವೇ?
ಉತ್ತರ- ಕೆಲವು ತಾಂತ್ರಿಕ ಹುದ್ದೆಗಳಿಗೆ ಅನುಭವವು ಕಡ್ಡಾಯವಾಗಿದ್ದು ಇನ್ನೂ ಕೆಲವು ಹುದ್ದೆಗಳಲ್ಲಿ ಹೊಸ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು
ಪ್ರಶ್ನೆ-8. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಉತ್ತರ- 14 ಜುಲೈ 2026.
ಪ್ರಶ್ನೆ-9. ನಾನು ಈಗ ಅಂತಿಮ ವರ್ಷದ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ ನಾನು ಅರ್ಜಿ ಸಲ್ಲಿಸಬಹುದೇ?
ಉತ್ತರ- ಇಲ್ಲ, ನೇಮಕಾತಿ ದಿಸೂಚನೆ ಪ್ರಕಟಗೊಳ್ಳುವ ಮೊದಲು ವಿದ್ಯಾರ್ಥಿಗೆ ಸಂಬಂಧಿಸಿದ ಎಲ್ಲಾ ದಾಖಲಾತಿಗಳನ್ನು ಕಡ್ಡಾಯವಾಗಿ ಹೊಂದಿರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು
ಪ್ರಶ್ನೆ-10. ಆನ್ಲೈನ್ ಅರ್ಜಿ ಶುಲ್ಕವನ್ನು ಅಂಚೆ ಕಚೇರಿ ಮೂಲಕ ಪಾವತಿಸಬಹುದೇ?
ಉತ್ತರ- ಇಲ್ಲ, ಆನ್ಲೈನ್ ಅರ್ಜಿ ಶುಲ್ಕವನ್ನು ಕಡ್ಡಾಯವಾಗಿ ಆನ್ಲೈನ್ ಮೂಲಕವೇ ಪಾವತಿಸಬೇಕು
ಪ್ರಶ್ನೆ-11. ಮೊಬೈಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದೇ?
ಉತ್ತರ- ಹೌದು, ಮೊಬೈಲ್ ಮೂಲಕವೇ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು ಉತ್ತಮ ವೆಬ್ಸೈಟ್ ವೀಕ್ಷಣೆಗಾಗಿ Desktop Mode ಆನ್ ಮಾಡಿಕೊಳ್ಳಿ.
ಪ್ರಶ್ನೆ-12. ಈ ಹುದ್ದೆಗಳಿಗೆ ಕಂಪ್ಯೂಟರ್ ಜ್ಞಾನ ಹೊಂದುವುದು ಕಡ್ಡಾಯವೇ?
ಉತ್ತರ- ಹೌದು, ಈ ಹುದ್ದೆಗಳಿಗೆ ಕಂಪ್ಯೂಟರ್ ಜ್ಞಾನವನ್ನು ಹೊಂದುವುದು ಕಡ್ಡಾಯವಾಗಿದೆ
ಪ್ರಶ್ನೆ-13. ಲಿಖಿತ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಸಂದರ್ಶನದಲ್ಲಿ ಪಡೆದೆ ಇದ್ದರೂ ಉದ್ಯೋಗ ಸಿಗುತ್ತದೆಯೇ?
ಉತ್ತರ- ಲಿಖಿತ ಪರೀಕ್ಷೆಯು ಆಯ್ಕೆ ಪ್ರಕ್ರಿಯೆಯಲ್ಲಿ ಪ್ರಾಥಮಿಕ ಹಂತವಾಗಿದ್ದು ಈ ಅಂಗಗಳ ಆಧಾರದ ಮೇಲೆ ಮುಂದಿನ ನೇಮಕಾತಿ ಪ್ರಕ್ರಿಯೆಗೆ ಒಳಪಡುತ್ತೀರಿ ಹೊರತು ಲಿಖಿತ ಪರೀಕ್ಷೆಯು ಅಂತಿಮ ಹಂತವಾಗಿರುವುದಿಲ್ಲ ಸಂದರ್ಶನದಲ್ಲಿಯೂ ಸಹ ಕನಿಷ್ಠ ಅಂಕಗಳನ್ನು ಪಡೆಯಬೇಕಾಗುತ್ತದೆ.
ಕರ್ನಾಟಕದ ಪ್ರತಿಷ್ಠಿತ ಹಾಲು ಸಹಕಾರ ಸಂಸ್ಥೆಯಾದ ಕೆಎಂಎಫ್ ಸಿಮುಲ್ ಸಂಸ್ಥೆಯು 2026ರ ನೇಮಕಾತಿ ಸೂಚನೆಯನ್ನು ಹೊರಡಿಸಿದ್ದು ಈ ನೇಮಕಾತಿ ಮೂಲಕ 194 ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿದೆ ಈ 194 ಹುದ್ದೆಗಳು ಹಲವು ವಿಭಾಗಗಳನ್ನು ಒಳಗೊಂಡಿದ್ದು ವಿವಿಧ ವಿದ್ಯಾರ್ಥಿ ಹಾಗೂ ಆಸಕ್ತಿಯನ್ನು ಹೊಂದಿರುವ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶವನ್ನು ಒದಗಿಸಿದೆ ಈ ಹುದ್ದೆಗಳಲ್ಲಿ ಉತ್ತಮ ವೇತನ ಸೇವಾ ಭದ್ರತೆ ಪದ್ಧತಿ ಅವಕಾಶಗಳು ಹಾಗೂ ಉತ್ತಮ ರೀತಿಯ ಅಗತ್ಯಗಳು ಸಿಗುವುದರಿಂದ ವೃತ್ತ ಬೆಳವಣಿಗೆಯು ಉತ್ತಮವಾಗಿದೆ.
ಆದುದರಿಂದ ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬೇಡಿ ಯಾವುದೇ ನೇಮಕಾತಿಗೆ ಅರ್ಜಿ ಸಲ್ಲಿಸುವ ಮುನ್ನ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ಅರ್ಹತಮಾನದಂಡಗಳನ್ನು ಪರಿಶೀಲಿಸಿ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿದ ನಂತರವೇ ಅರ್ಜಿಯನ್ನು ಸಲ್ಲಿಸಿ ಕೊನೆಯ ದಿನಗಳಲ್ಲಿ ಸರ್ವ ಸಮಸ್ಯೆ ಎದುರಾಗಬಹುದಾಗಿರುವುದರಿಂದ ಕೊನೆ ದಿನಾಂಕವನ್ನು ಕಾಯದೆ ಮೊದಲೇ ಅರ್ಜಿ ಸಲ್ಲಿಸುವುದು ಉತ್ತಮ
Related Articles:
Best Courses After PUC in 2026: Top Career Options, Job Opportunities & Expert Guidance
Author Note : ಈ ಲೇಖನವು ಅಭ್ಯರ್ಥಿಗಳಿಗೆ KMF SHIMUL Recruitment 2026 ಕುರಿತು ಸಮಗ್ರ ಮತ್ತು ಸರಳ ಮಾಹಿತಿಯನ್ನು ನೀಡುವ ಉದ್ದೇಶದಿಂದ ಸಿದ್ಧಪಡಿಸಲಾಗಿದೆ. ಈ ಲೇಖನವನ್ನು ಓದುಗರಿಗೆ ನಿಖರ, ಉಪಯುಕ್ತ ಹಾಗೂ ಸಮಯೋಚಿತ ಮಾಹಿತಿಯನ್ನು ಒದಗಿಸುವ ಉದ್ದೇಶದಿಂದ ಸಿದ್ಧಪಡಿಸಲಾಗಿದೆ. ಯಾವುದೇ ಅಧಿಕೃತ ನಿರ್ಧಾರ ಕೈಗೊಳ್ಳುವ ಮೊದಲು ಅಧಿಕೃತ ಅಧಿಸೂಚನೆಗಳನ್ನು ಪರಿಶೀಲಿಸುವುದು ಸೂಕ್ತ.
*****
About Author : ರಂಗನಾಥ. ಬಿ ಜಿ ರವರು ಕಳೆದ 3 ವರ್ಷಗಳಿಂದ ಸರ್ಕಾರಿ ಉದ್ಯೋಗ ಮಾಹಿತಿ, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿ, ವೃತ್ತಿ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು ಹಾಗೂ ಪ್ರಸ್ತುತ ಸುದ್ದಿಗಳ ಕುರಿತು ನಿರಂತರವಾಗಿ ಮಾಹಿತಿ ಹಂಚಿಕೊಳ್ಳುವ ಬ್ಲಾಗರ್ ಆಗಿದ್ದಾರೆ. ಇವರು ಓದುಗರಿಗೆ ಸರಳ ಭಾಷೆಯಲ್ಲಿ ಉಪಯುಕ್ತ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ತಲುಪಿಸುವುದು ಇವರ ಪ್ರಮುಖ ಉದ್ದೇಶವಾಗಿದೆ.
*****
Disclaimer : ಈ ವೆಬ್ಸೈಟ್ನಲ್ಲಿ ನೀಡಿರುವ ಮಾಹಿತಿ ವಿವಿಧ ಅಧಿಕೃತ ಮೂಲಗಳಿಂದ ಸಂಗ್ರಹಿಸಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಸಂಬಂಧಿತ ಅಧಿಕೃತ ಪ್ರಕಟಣೆ ಅಥವಾ ವೆಬ್ಸೈಟ್ ಪರಿಶೀಲಿಸುವುದು ಓದುಗರ ಜವಾಬ್ದಾರಿಯಾಗಿದೆ.
ಈ ಮಾಹಿತಿಯು ಉಪಯುಕ್ತವೆನಿಸಿದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಪ್ರತಿದಿನ ಹೊಸ ಸರ್ಕಾರಿ ಉದ್ಯೋಗ ಮಾಹಿತಿಗಾಗಿ ನಮ್ಮ WhatsApp ಮತ್ತು Telegram ಗುಂಪು ಸೇರಿ.