Gruha Jyothi ಯೋಜನೆಯ ಈ ಹೊಸ ಅಪ್ಡೇಟನ್ನು ತಿಳಿದುಕೊಳ್ಳಿ
ಕರ್ನಾಟಕ ಸರ್ಕಾರದ ಮಹತ್ವಕಾಂಕ್ಷೆ ಯೋಜನೆ ಹಾಗೂ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ Gruha Jyothi ಯೋಜನೆಯು ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಉಚಿತವಾಗಿ ವಿದ್ಯುತ್ ಸೌಲಭ್ಯವನ್ನು ಒದಗಿಸುತ್ತಾ ಬಂದಿದೆ. ಇದರಿಂದ ಅರ್ಹ ಕುಟುಂಬಗಳಿಗೆ ಪ್ರತಿ ತಿಂಗಳು ನಿಗದಿತ ಮಿತಿಯವರೆಗೆ ವಿದ್ಯುತ್ ಬಳಕೆಗೆ ಯಾವುದೇ ಹಣವನ್ನು ಪಾವತಿಸುವ ಅಗತ್ಯವಿರುವುದಿಲ್ಲ
ಇದರಿಂದ ಮಧ್ಯಮ ಹಾಗೂ ಸಾಮಾನ್ಯ ವರ್ಗದ ಕುಟುಂಬಗಳ ಮಾಸಿಕ ವೆಚ್ಚದಲ್ಲಿ ಗಣನೀಯ ಪ್ರಮಾಣದ ಉಳಿತಾಯವಾಗಿದೆ ಆದುದರಿಂದ ಸರ್ಕಾರದ ಈ ಜನಪ್ರಿಯ ಕಲ್ಯಾಣ ಯೋಜನೆಯು ಜನಸ್ನೇಹಿ ಯೋಜನೆಯಾಗಿ ಹೊರಬಂದಿದೆ
ಇದೀಗ ಗೃಹ ಜೊತೆ ಯೋಜನೆಗೆ ಸಂಬಂಧಿಸಿದಂತೆ ಇಂಧನ ಇಲಾಖೆ ಹಾಗೂ ಬೆಸ್ಕಾಂ ಸಂಸ್ಥೆಯು ಮಹತ್ವದ ಆದೇಶವನ್ನು ಜಾರಿಗೆ ತಂದಿದೆ ಅದು ಏನೆಂದರೆ ಯೋಜನೆಯ ಲಾಭವು ಸರಿಯಾದ ಫಲಾನುಭವಿಗಳಿಗೆ ಮಾತ್ರ ತಲುಪಬೇಕು ಹಾಗೂ ಈ ಯೋಜನೆ ದಾಖಲೆಗಳಲ್ಲಿ ಯಾವುದೇ ಗೊಂದಲ ಅಥವಾ ತಪ್ಪು ಮಾಹಿತಿ ಇರಬಾರದು ಎಂದು ದೃಢಪಡಿಸುತ್ತಿದೆ ಆದ್ದರಿಂದ ಮನೆ ಮನೆಗೆ ಭೇಟಿ ನೀಡಿ ಭೌತಿಕ ಪರಿಶೀಲನೆ ನಡೆಸಲು ಇಲಾಖೆಯ ಮುಂದಾಗಿದೆ
ಈ ಹೊಸ ಕ್ರಮವನ್ನು ತಂದಿರುವ ಸರ್ಕಾರದ ಪ್ರಮುಖ ವಿಶೇಷತೆ ಏನೆಂದರೆ ಇನ್ನು ಮುಂದೆ ಗ್ರಾಹಕರು ದಾಖಲೆ ತಿದ್ದುಪಡಿ ಅಥವಾ ಪರಿಶೀಲನೆಗಾಗಿ ವಿದ್ಯುತ್ ಕಚೇರಿಗಳಿಗೆ ಪದೇಪದೇ ಅಲೆದಾಡಬೇಕಾಗಿಲ್ಲ ಬದಲಾಗಿ ಬೆಸ್ಕಾಂ ಸಂಸ್ಥೆಯ ಅಧಿಕೃತ ಮೀಟರ್ ಲೀಡರ್ ಗಳು ಮತ್ತು ಸಿಬ್ಬಂದಿಗಳ ನೇರವಾಗಿ ಮನೆ ಭೇಟಿ ಮಾಡಿ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಡಿಜಿಟಲ್ ವ್ಯವಸ್ಥೆಯಲ್ಲಿ ಮಾಹಿತಿಯನ್ನು ನವೀಕರಿಸಿ ನಿರ್ವಹಿಸಲಿದ್ದಾರೆ
ಇದರಿಂದ ಗ್ರಾಹಕರ ಸಮಯ ಉಳಿತಾಯವಾಗುವುದರ ಜೊತೆಯಲ್ಲಿ ಸರ್ಕಾರಿ ಸೇವೆಗಳು ಮತ್ತಷ್ಟು ಸುಲಭವಾಗಿ ಜನರ ಮನೆಯ ಬಾಗಿಲಿಗೆ ತಲುಪುತ್ತಿವೆ
Gruha Jyothi ಯೋಜನೆ ಎಂದರೇನು
Gruha Jyothi ಯೋಜನೆಯು ಕರ್ನಾಟಕ ಸರ್ಕಾರವು ರಾಜ್ಯದ ಗೃಹ ಬಳಕೆಗೆ ಎಂದು ಹಾಗೂ ವಿದ್ಯುತ್ ಗ್ರಾಹಕರಿಗೆ ಉಚಿತ ವಿದ್ಯುತ್ ಸೌಲಭ್ಯವನ್ನು ಒದಗಿಸುವ ಉದ್ದೇಶದಿಂದ ಆರಂಭಿಸುವ ಮಹತ್ವದ ಕಲ್ಯಾಣ ರೀತಿಯ ಯೋಜನೆಯಾಗಿದೆ ಈ ಯೋಜನೆಯಡಿಯಲ್ಲಿ ಅರ್ಹ ಕುಟುಂಬಗಳು ನಿಗದಿತ ಪ್ರಮಾಣದಲ್ಲಿ ವಿದ್ಯುತ್ ಬಳಕೆಯನ್ನು ಮಾಡಬಹುದಾಗಿರುತ್ತದೆ ಇದಕ್ಕೆ ಯಾವುದೇ ಬಿಲ್ ಪಾವತಿಸುವ ಅಗತ್ಯತೆ ಇರುವುದಿಲ್ಲ
ಈ ಯೋಜನೆಯು ಪ್ರಾರಂಭಗೊಂಡ ನಂತರದಿಂದ ರಾಜ್ಯದ ಲಕ್ಷಾಂತರ ಕುಟುಂಬಗಳು ನೇರವಾಗಿ ಪ್ರಯೋಜನ ಪಡೆಯುತ್ತಿವೆ ವಿಶೇಷವಾಗಿ ಗ್ರಾಮೀಣ ಪ್ರದೇಶಗಳು ಕಡಿಮೆ ಆದಾಯವನ್ನು ಹೊಂದಿರುವ ಕುಟುಂಬಗಳು ಮಧ್ಯಮ ವರ್ಗದ ಜನರಿಗೆ ಇದು ಹೆಚ್ಚಿನ ಆರ್ಥಿಕ ನೆರವನ್ನು ನೀಡುತ್ತಿದೆ ವಿದ್ಯುತ್ ವೆಚ್ಚಗಳು ಕಡಿಮೆಯಾಗಿರುವುದರಿಂದ ಕುಟುಂಬಗಳು ತಮ್ಮ ಆದಾಯವನ್ನು ಆರೋಗ್ಯ ಶಿಕ್ಷಣ ಹಾಗೂ ಇತರ ಪ್ರಮುಖ ವೆಚ್ಚಗಳಿಗೆ ಬಳಸಲು ಸಾಧ್ಯವಾಗುತ್ತಿದೆ
ಯೋಜನೆಯ ಯಶಸ್ಸಿನ ಜೊತೆಯಲ್ಲಿ ದಿನೇ ದಿನೇ ಫಲಾನುಭವಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಕರ್ನಾಟಕ ಸರ್ಕಾರವು ದಾಖಲೆಗಳ ನಿಖರತೆಯನ್ನು ಕಾಪಾಡಿಕೊಳ್ಳಲು ಹಾಗೂ ಈ ಯೋಜನೆಯ ದುರುಪಯೋಗವನ್ನು ತಡೆಯಲು ಈ ಹೊಸ ಮನೆ ಮನೆ ಪರಿಶೀಲನಾ ಅಭಿಯಾನವನ್ನು ಆರಂಭಿಸಿದೆ
Gruha Jyothi ಯೋಜನೆಗೆ ಬಂದಿರುವ ಹೊಸ ಅಪ್ಡೇಟ್ ಏನು
ಇಂಧನ ಇಲಾಖೆಯ ಇತ್ತೀಚಿನ ಆದೇಶ ನಿರ್ದೇಶನದಂತೆ ಗೃಹಜೋತಿ ಯೋಜನೆ ಅಡಿಯಲ್ಲಿ ನೋಂದಾಯಿಸಿಕೊಂಡು ಪ್ರಯೋಜನವನ್ನು ಪಡೆಯುತ್ತಿರುವ ಗ್ರಾಹಕರ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸುವ ಕಾರ್ಯವನ್ನು ಆರಂಭಿಸಲಾಗಿದೆ ಈ ಪರಿಶೀಲನೆಯ ಸಂದರ್ಭದಲ್ಲಿ ಫಲಾನುಭವಿಗಳ ಗುರುತಿನ ಮಾಹಿತಿ ಪೂರ್ಣವಿಳಾಸ ವಿದ್ಯುತ್ ಸಂಪರ್ಕದ ವಿವರಗಳು ಹಾಗೂ ಯೋಜನೆಯ ಪ್ರಯೋಜನವನ್ನು ಪಡೆಯಲು ಸಲ್ಲಿಸಿರುವ ದಾಖಲೆಗಳನ್ನು ಪುನರ್ ಪರಿಶೀಲನೆ ಮಾಡಲಾಗುತ್ತದೆ
ಈ ಹಿಂದೆ ಯಾವುದೇ ರೀತಿಯ ಮಾಹಿತಿಯನ್ನು ಬದಲಾಯಿಸಬೇಕಾದರೆ ಅಥವಾ ತಿದ್ದುಪಡಿ ಮಾಡಬೇಕಾದರೆ ಜನರು ಬೆಸ್ಕಾಂ ಕಛೇರಿಗಳಿಗೆ ಭೇಟಿ ನೀಡಬೇಕಾಗಿತ್ತು ಮತ್ತು ಅಲ್ಲಿನ ಹೆಚ್ಚಿನ ಸಮಯವನ್ನು ವ್ಯರ್ಥ ಮಾಡಬೇಕಿತ್ತು ಈ ಅನಗತ್ಯ ಅಂಶಗಳನ್ನು ಸಂಪೂರ್ಣವಾಗಿ ಕಡಿಮೆ ಮಾಡುವ ಉದ್ದೇಶದಿಂದ ಬೆಸ್ಕಾಂ ಸಿಬ್ಬಂದಿಗೆ ಮನೆ ಭೇಟಿ ನೀಡಿ ಸ್ಥಳದಲ್ಲಿಯೇ ದಾಖಲೆಗಳನ್ನು ಪರಿಶೀಲಿಸಲಿದ್ದಾರೆ
ಈ ಹೊಸ ಅಪ್ಡೇಟ್ ನಿಂದ ದಾಖಲೆಗಳಲ್ಲಿರುವ ದೋಷಗಳನ್ನು ತಕ್ಷಣವೇ ಸರಿಪಡಿಸಲು ಹಾಗೂ ಅರ್ಹ ಫಲಾನುಭವಿಗಳಿಗೆ ಯಾವುದೇ ಕಾರಣಕ್ಕೂ ಯೋಜನೆಯ ಲಾಭ ಸ್ಥಗಿತಗೊಳ್ಳದಂತೆ ನೋಡಿಕೊಳ್ಳಲು ತರಲಾಗಿದೆ
ಬೆಸ್ಕಾಂ ಸಿಬ್ಬಂದಿ ಮನೆಗೆ ಬರಲು ಕಾರಣವೇನು
ಕರ್ನಾಟಕ ರಾಜ್ಯ ಸರ್ಕಾರದ ಯೋಜನೆಯದ Gruha Jyothi ಯೋಜನೆಯ ಉದ್ದೇಶವು ಈ ಯೋಜನೆಯ ಲಾಭವು ನಿಜವಾದ ಹಾಗೂ ಅರ್ಹ ಕುಟುಂಬಗಳಿಗೆ ಮಾತ್ರ ದೊರೆಯಬೇಕು ಎಂಬುದು ಆಗಿರುವುದರಿಂದ ಕೆಲವು ಸಂದರ್ಭಗಳಲ್ಲಿ ವಿಳಾಸದಲ್ಲಿ ಬದಲಾವಣೆ, ಅರ್ಜಿ ಸಲ್ಲಿಕೆಯ ನಂತರ ದಾಖಲೆಗಳಲ್ಲಿ ಆಗಿರುವಂತಹ ವ್ಯತ್ಯಾಸಗಳು ಮಾಲೀಕರ ಮಾಹಿತಿ ಅಥವಾ ತಾಂತ್ರಿಕ ದೋಷಗಳಿಂದ ಫಲಾನುಭವಿಗಳಿಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇದ್ದು ಇಂತಹ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ನೀಡುವ ಸಲುವಾಗಿ ಈ ಮನೆಮನೆ ಪರಿಶೀಲನ ಅಭಿಯಾನವನ್ನು ಆರಂಭಿಸಿದೆ
ಈ ಪರಿಶೀಲನೆಯ ಪ್ರಮುಖ ಉದ್ದೇಶಗಳು
- ತಪ್ಪಾಗಿ ನಮೂದಾಗಿರುವ ಅಥವಾ ಅಪೂರ್ಣ ಮಾಹಿತಿಯನ್ನು ಸರಿಪಡಿಸುವುದು
- ನಕಲಿ ಅಥವಾ ಅನರ್ಹ ನೋಂದಣಿದಾರರನ್ನು ಪತ್ತೆಹಚ್ಚುವುದು ಮತ್ತು ರದ್ದುಪಡಿಸುವುದು
- ಫಲಾನುಭವಿಗಳ ದಾಖಲೆಗಳನ್ನು ನಿಖರವಾಗಿ ಪರಿಶೀಲಿಸುವುದು
- ಅರ್ಹ ಕುಟುಂಬಗಳಿಗೆ ಗೃಹಜೋತಿ ಯೋಜನೆಯ ಪ್ರಯೋಜನವನ್ನು ಖಾತರಿಪಡಿಸುವುದು
- ಸೇವಾಸಿಂದು ಪೋರ್ಟಲ್ ಮೂಲಕ ವಿದ್ಯುತ್ ಸರಬರಾಜುಗೆ ಸಂಬಂಧಿಸಿದ ಇಲಾಖೆಯ ಡಿಜಿಟಲ್ ದಾಖಲೆಗಳನ್ನು ನವೀಕರಿಸುವ ಮೂಲಕ ನಿರ್ವಹಿಸುವುದು
- ಭವಿಷ್ಯದಲ್ಲಿ ಗೃಹಜೋತಿ ಯೋಜನೆಯ ಅನುಷ್ಠಾನವನ್ನು ಮತ್ತಷ್ಟು ಪಾರದರ್ಶಕವಾಗಿ ಇರಿಸುವುದು
ಈ Gruha Jyothi ಯೋಜನೆಯ ಅಪ್ಡೇಟ್ ಕ್ರಮದಿಂದ ಸರ್ಕಾರದ ಮಾಹಿತಿ ವ್ಯವಸ್ಥೆಯು ಇನ್ನಷ್ಟು ವಿಶ್ವಾಸ ಅರ್ಹವಾಗುವುದರ ಜೊತೆಯಲ್ಲಿ ಗ್ರಾಹಕರಿಗೂ ಸಹ ಯಾವುದೇ ಕಚೇರಿ ಸುತ್ತಾಟವಿಲ್ಲದೆ ತಮ್ಮ ವಿದ್ಯುತ್ ದಾಖಲೆಯ ಸಂಬಂಧಿತ ಅಂಶಗಳನ್ನು ಪರಿಶೀಲಿಸಿಕೊಳ್ಳುವ ಅವಕಾಶ ಇದರಿಂದ ದೊರೆಯಲಿದೆ
ಸರ್ಕಾರವು ಈ ಪರಿಶೀಲನೆಗೆ ಏಕೆ ಹೆಚ್ಚಿನ ಆದ್ಯತೆ ನೀಡುತ್ತದೆ
Gruha Jyothi ಯೋಜನೆಯು ಕರ್ನಾಟಕ ಸರ್ಕಾರದ ಅತ್ಯಂತ ಪ್ರಮುಖ ಹಾಗೂ ದೊಡ್ಡ ಸಾಮಾಜಿಕ ಕಲ್ಯಾಣ ಯೋಜನೆಗಳಲ್ಲಿ ಒಂದಾಗಿದ್ದು ಈ ಯೋಜನೆಯ ಮೂಲಕ ಪ್ರತಿದಿನ ಸಾವಿರಾರು ಕೋಟಿ ಮೌಲ್ಯದ ವಿದ್ಯುತ್ ಸಬ್ಸಿಡಿಯನ್ನು ಸರ್ಕಾರ ಭರಿಸುತ್ತಿರುವುದರಿಂದ ಯೋಜನೆಯ ಲಾಭವು ಕೇವಲ ಅರ್ಹ ಕುಟುಂಬಗಳಿಗೆ ಮಾತ್ರ ತಲುಪಬೇಕು ಎಂಬುದು ಆಗಿದೆ
ಇತ್ತೀಚಿನ ದಿನಗಳಲ್ಲಿ ಗ್ರಾಹಕರ ವಿಳಾಸದ ಬದಲಾವಣೆ, ಕುಟುಂಬದ ಮುಖ್ಯಸ್ಥರ ಬದಲಾವಣೆ, ಬಾಡಿಗೆ ಮನೆಗಳಿಗೆ ಸ್ಥಳಾಂತರ ಗೊಳ್ಳುವುದು ಹಾಗೂ ದಾಖಲೆಗಳಿಂದ ಮಾಹಿತಿಯೂ ವ್ಯತ್ಯಾಸದಿಂದ ಕಂಡುಬಂದಿರುವುದರಿಂದ ಗ್ರಾಹಕರಿಗೆ ತಾಂತ್ರಿಕ ಸಮಸ್ಯೆಗಳು ಸಹ ಎದುರಾಗಿವೆ ಎಂಬ ವರದಿಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಮನೆ ಮನೆ ಪರಿಶೀಲನೆ ನಡೆಸುವುದರಿಂದ ದಾಖಲೆಗಳನ್ನು ತಕ್ಷಣವೇ ನವೀಕರಿಸಲು ಹಾಗೂ ಇರುವ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸಹಕಾರವಾಗಲಿದೆ
ಇದರ ಜೊತೆಯಲ್ಲಿ ಸರ್ಕಾರದ ಡಿಜಿಟಲ್ ಆಡಳಿತ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವುದು ಹಾಗೂ ಸೇವೆಗಳನ್ನು ಪಾರದರ್ಶಕವಾಗಿ ಒದಗಿಸುವುದು ಮತ್ತು ಭವಿಷ್ಯದಲ್ಲಿ ಯಾವುದೇ ರೀತಿಯ ನಕಲಿ ನೋಂದಣಿ ಅಥವಾ ಯೋಜನೆಯ ವಂಚನೆಯನ್ನು ತಡೆಯುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ
ಆದುದರಿಂದ ಗೃಹಜೋತಿ ಯೋಜನೆಯ ಫಲಾನುಭವಿಗಳು ಬೆಸ್ಕಾಂ ಸಿಬ್ಬಂದಿಗಳು ಮನೆಯ ಬಳಿ ಬಂದಾಗ ಅಗತ್ಯ ರೀತಿಯಲ್ಲಿ ಸಹಕಾರ ನೀಡಿ ಹೇಳಲಾದ ದಾಖಲಾತಿಗಳನ್ನು ಸಿದ್ಧವಾಗಿಟ್ಟುಕೊಂಡರೆ ಪರಿಶೀಲನೆ ವೇಗವಾಗಿ ಯಾವುದೇ ಅಡೆತಡೆ ಇಲ್ಲದೆ ಮುಂದುವರೆಯುತ್ತದೆ
ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ರಾಜ್ಯಾದ್ಯಂತ ಮನೆ ಮನೆ ಪರಿಶೀಲನ ಅಭಿಯಾನ
Gruha Jyothi ಯೋಜನೆಯ ಅರ್ಹ ಫಲಾನುಭವಿಗಳ ಮಾಹಿತಿಯನ್ನು ಸಂಪೂರ್ಣವಾಗಿ ಪರಿಶೀಲಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರದ ಇಂಧನ ಇಲಾಖೆ ಹಾಗೂ ಬೆಸ್ಕಾಂ ಸಂಸ್ಥೆಯು ವಿಶೇಷವಾಗಿ ಮನೆ ಪರಿಶೀಲನಾ ಅಭಿಯಾನವನ್ನು ಆರಂಭಿಸಿದೆ ಈ ವಿಶೇಷ ಅಭಿಯಾನವು ಜುಲೈ 1ನೇ ತಾರೀಕಿನಿಂದ ಪ್ರಾರಂಭವಾಗಿ ಆಗಸ್ಟ್ 31 ನೇ ತಾರೀಖಿನವರೆಗೆ ಸತತ ಎರಡು ತಿಂಗಳುಗಳ ಕಾಲ ನಡೆಯಲಿದ್ದು ಬೆಸ್ಕಾಂ ವ್ಯಾಪ್ತಿಯ ಎಲ್ಲಾ ಗೃಹಬಳಕೆ ವಿದ್ಯುತ್ ಗ್ರಾಹಕರ ಮನೆಗಳಿಗೆ ಬೆಸ್ಕಾಂ ಸಿಬ್ಬಂದಿ ಭೇಟಿ ನೀಡಲಿದ್ದಾರೆ
ಈ ನಿಗದಿತ ಅವಧಿಯಲ್ಲಿ ಬೆಸ್ಕಾಂ ಮಾತ್ರವಲ್ಲದೆ ರಾಜ್ಯದ ಇನ್ನೂ ಇತರ ವಿವಿಧ ವಿದ್ಯುತ್ ಸರಬರಾಜು ಕಂಪನಿಗಳಾದ ಹೆಸ್ಕಾಂ ಮೆಸ್ಕಾಂ ಚೆಸ್ಕಾಂ ಗಳು ಅವುಗಳ ಸಿಬ್ಬಂದಿಯವರನ್ನು ತಮ್ಮ ವ್ಯಾಪ್ತಿ ಅಡಿಯಲ್ಲಿ ಬರುವ ಪ್ರದೇಶಗಳಿಗೆ ಇದೇ ರೀತಿಯ ಪರಿಶೀಲನಾ ಕಾರ್ಯವನ್ನು ಕೈಗೊಳ್ಳಲು ತಿಳಿಸಲಿದ್ದಾರೆ ಇದರ ಮೂಲಕ ಯೋಜನೆ ಲಾಭ ಪಡೆಯುತ್ತಿರುವ ಪ್ರತಿಯೊಬ್ಬ ಫಲಾನುಭವಿಯ ಮಾಹಿತಿಯನ್ನು ಕೂಲಂಕುಶವಾಗಿ ಮತ್ತು ನೇರವಾಗಿ ಪರಿಶೀಲಿಸಿ ಡಿಜಿಟಲ್ ದಾಖಲೆಗಳನ್ನು ನವೀಕರಿಸುವ ಗುರಿಯನ್ನು ಸರ್ಕಾರದ ಈ ಯೋಜನೆಯು ಹೊಂದಿದೆ
ಈ ಪರಿಶೀಲನೆ ಪ್ರಕ್ರಿಯೆಯು ಸಾಮಾನ್ಯ ಮೀಟರ್ ರೀಡಿಂಗ್ ಪ್ರಕ್ರಿಯೆ ಅಲ್ಲದೆ ಸಂಪೂರ್ಣವಾಗಿ ಗೃಹಜೋತಿ ಯೋಜನೆಗೆ ಸಂಬಂಧಿಸಿದೆ ಫಲಾನುಭವಿಯ ಮಾಹಿತಿ ಪರಿಶೀಲನೆ ದಾಖಲೆಗಳನ್ನು ದೃಢೀಕರಿಸುವುದು ಹಾಗೂ ಇರುವ ಮಾಹಿತಿಯನ್ನು ಪ್ರಸ್ತುತ ಮಾಹಿತಿಯೊಂದಿಗೆ ಅಪ್ಡೇಟ್ ಮಾಡುವ ವಿಶೇಷ ಅಭಿಯಾನವಾಗಿದೆ
ಬೆಸ್ಕಾಂ ಮೀಟರ್ ರೀಡರ್ ಗಳು ಮನೆಗೆ ಬಂದಾಗ ಏನು ಮಾಡುತ್ತಾರೆ
Gruha Jyothi ಯೋಜನೆಯ ಪರಿಶೀಲನಾ ಪ್ರಕ್ರಿಯೆ ಪ್ರಾರಂಭವಾಗಿರುವುದರಿಂದ ಪರಿಶೀಲನೆಗಾಗಿ ಮನೆಗೆ ಬರುವ ಬೆಸ್ಕಾಂ ಸಿಬ್ಬಂದಿಗಳು ಮೊದಲು ಅವರ ಅಧಿಕೃತ ಗುರುತಿನ ಚೀಟಿಯನ್ನು ತೋರಿಸಿ ತಮ್ಮ ಪರಿಚಯವನ್ನು ನೀಡುವುದರ ನಂತರ ಯೋಜನೆಗೆ ಸಂಬಂಧಿಸಿದೆ ದಾಖಲೆ ಪರಿಶೀಲನೆ ವಿದ್ಯುತ್ ಸಂಪರ್ಕದ ವಿವರಗಳು ಹಾಗೂ ಮಾಲೀಕರ ಮಾಹಿತಿಯನ್ನು ದೃಢೀಕರಿಸುತ್ತಾರೆ
ಸಿಬ್ಬಂದಿಗಳು ಪರಿಶೀಲಿಸುವ ಮಾಹಿತಿಗಳು ಈ ಕೆಳಕಂಡಂತಿವೆ
- ವಿದ್ಯುತ್ ಸಂಪರ್ಕವನ್ನು ಹೊಂದಿರುವ ಗ್ರಾಹಕರ ಹೆಸರು
- ಗೃಹ ಜ್ಯೋತಿ ಯೋಜನೆಗೆ ನೋಂದಾಯಿಸಿರುವ ಫಲಾನುಭವಿಯ ಸಂಪೂರ್ಣ ವಿವರಗಳು
- ವಿದ್ಯುತ್ ಸಂಪರ್ಕ ಸಂಖ್ಯೆ
- ಮನೆಯ ಸಂಪೂರ್ಣ ವಿಳಾಸ
- ಕುಟುಂಬದ ಮುಖ್ಯಸ್ಥರ ಮಾಹಿತಿಗಳು
- ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ಸಲ್ಲಿಸಿರುವ ದಾಖಲೆಗಳ ನೈಜತೆ
- ಅಗತ್ಯವಿದ್ದಲ್ಲಿ ಮನೆಯಲ್ಲಿ ವಾಸಿಸುವವರ ವಿವರಗಳು
ಈ ಎಲ್ಲ ಮಾಹಿತಿಯನ್ನು ಪರಿಶೀಲಿಸಿದ ನಂತರ ದಾಖಲೆಗಳು ಸರಿಯಾಗಿದ್ದರೆ ಅದನ್ನು ಸ್ಥಳದಲ್ಲಿಯೇ ಡಿಜಿಟಲ್ ರೀತಿಯಲ್ಲಿ ದಾಖಲಿಸಿ ಪರಿಶೀಲನೆಯನ್ನು ಪೂರ್ಣಗೊಳಿಸುತ್ತಾರೆ
ಡಿಜಿಟಲ್ ಪರಿಶೀಲನೆ ಯಾವುದರ ಮೂಲಕ ನಡೆಯುತ್ತದೆ
Gruha Jyothi ಯೋಜನೆಯ ಮನೆ ಮನೆ ಅಭಿಯಾನದಲ್ಲಿ ಪರಿಶೀಲನೆಯು ಅಧಿಕೃತ ಮೊಬೈಲ್ ಅಪ್ಲಿಕೇಶನ್ ನೊಂದಿಗೆ ನಡೆಯುತ್ತದೆ ಇದೊಂದು ಡಿಜಿಟಲ್ ಪರಿಶೀಲನಾ ಪ್ರಕ್ರಿಯೆಯಾಗಿದ್ದು ಪಾರದರ್ಶಕತೆಯನ್ನು ಕಾಪಾಡಲು ಈ ಕಾರ್ಯ ಯೋಜನೆಯನ್ನು ಜಾರಿಗೆ ತರಲಾಗಿದೆ
ಬೆಸ್ಕಾಂ ಸಿಬ್ಬಂದಿಗಳಿಗೆ ವಿಶೇಷ ರೀತಿಯ ಮೊಬೈಲ್ ಅಪ್ಲಿಕೇಶನ್ ಅನ್ನು ಒದಗಿಸಲಾಗಿದ್ದು ಇದರ ಮೂಲಕ ಸಿಬ್ಬಂದಿಗಳು ಫಲಾನುಭವಿಗಳ ಮಾಹಿತಿಯನ್ನು ಸ್ಥಳದಲ್ಲಿಯೇ ಪರಿಶೀಲಿಸಿ ಆನ್ಲೈನ್ ಮೂಲಕ ಮಾಹಿತಿಯನ್ನು ನಮೂದಿಸಿ ನವೀಕರಿಸುತ್ತಾರೆ
ಈ ವ್ಯವಸ್ಥೆಯ ಪ್ರಮುಖ ಪ್ರಯೋಜನಗಳು
- ಯೋಜನೆಗೆ ಸಂಬಂಧಿಸಿದ ದಾಖಲೆಗಳನ್ನು ತಕ್ಷಣವೇ ಅಪ್ಲೋಡ್ ಮಾಡಬಹುದು
- ಮಾನವೀಯ ತಪ್ಪುಗಳನ್ನು ಕಡಿಮೆಗೊಳಿಸಬಹುದು
- ಮಾಹಿತಿಯನ್ನು ತಕ್ಷಣವೇ ಇಲಾಖೆಯ ಡಾಟಾಬೇಸ್ ನಲ್ಲಿ ಸಂಗ್ರಹಿಸಬಹುದು
- ಭವಿಷ್ಯದಲ್ಲಿ ಯೋಜನೆಯ ಲಾಭ ಪಡೆಯಲು ಯಾವುದೇ ತಾಂತ್ರಿಕ ಅಡಚಣೆ ಉಂಟಾಗುವುದಿಲ್ಲ
- ದಾಖಲೆಗಳ ತಿದ್ದುಪಡಿ ಮತ್ತು ನಮೂದಿಗೆ ಹೆಚ್ಚು ಸಮಯ ಬೇಕಾಗುವುದಿಲ್ಲ
ಈ ಡಿಜಿಟಲ್ ವ್ಯವಸ್ಥೆಯ ಮೊಬೈಲ್ ಅಪ್ಲಿಕೇಶನ್ ಮೂಲಕ ಸೇವಾಸಿಂದು ಪೋರ್ಟಲ್ ನಲ್ಲಿ ಇರುವ ಮಾಹಿತಿಯೊಂದಿಗೆ ನಿಮ್ಮ ದಾಖಲೆಗಳನ್ನು ಪರಿಶೀಲನೆ ಮಾಡಿ ದೃಢೀಕರಿಸಲಾಗುತ್ತದೆ
ಸೇವಾ ಸಿಂಧು ಪೋರ್ಟಲ್ ನ ಮಾಹಿತಿಯೊಂದಿಗೆ ದಾಖಲೆಗಳ ತಾಳೆ
Gruha Jyothi ಅರ್ಜಿ ಸಲ್ಲಿಕೆಯು ಸೇವಾ ಸಿಂಧು ಪೋರ್ಟಲ್ ಮೂಲಕ ಆಗಿರುವುದರಿಂದ ಸಾರ್ವಜನಿಕರು ಅರ್ಜಿ ಸಲ್ಲಿಕೆ ಮಾಡುವಾಗ ನೀಡಿರುವ ಮಾಹಿತಿಯನ್ನು ಈಗಾಗಲೇ ಸೇವಾ ಸಿಂದು ಪೋರ್ಟಲ್ ನಲ್ಲಿ ಸಂಗ್ರಹಿಸಲಾಗಿದೆ ಮನೆಗೆ ಬರುವ ಬೆಸ್ಕಾಂ ಸಿಬ್ಬಂದಿಗಳು ನಿಮ್ಮ ಬಳಿ ಇರುವ ದಾಖಲೆಗಳನ್ನು ಸೇವಾ ಸಿಂಧು ಪೋರ್ಟಲ್ ನಲ್ಲಿ ಸಂಗ್ರಹವಾಗಿರುವ ದಾಖಲೆಗಳೊಂದಿಗೆ ಹೋಲಿಕೆ ಮಾಡಿ ಯಾವುದಾದರು ವ್ಯತ್ಯಾಸವಿದೆಯೇ ಎಂದು ಪರಿಶೀಲಿಸುತ್ತಾರೆ ಸಾಮಾನ್ಯವಾಗಿ ಹೋಲಿಕೆ ಮಾಡುವ ಮಾಹಿತಿಗಳೆಂದರೆ
- ಗ್ರಾಹಕರ ಹೆಸರು ಬದಲಾಗಿದೆಯೇ
- ವಿಳಾಸ ಬದಲಾಗಿದೆಯೇ
- ಕುಟುಂಬದ ಮುಖ್ಯಸ್ಥರ ಮಾಹಿತಿ ಸರಿಯಾಗಿದೆಯೇ ಅಥವಾ ವ್ಯತ್ಯಾಸವಿದೆಯೇ
- ಆಧಾರ್ ಸಂಬಂಧಿತ ವಿವರಗಳು ಹೊಂದಿಕೆ ಆಗುತ್ತಿವೆ
- ವಿದ್ಯುತ್ ಸಂಪರ್ಕವು ಸರಿಯಾದ ಫಲಾನುಭವಿ ಹೆಸರಿನಲ್ಲಿ ಇದೆಯೇ
ಈ ಮೇಲಿನ ವಿವರಗಳನ್ನು ಪರಿಶೀಲಿಸಿದ ನಂತರ ಅಂತಿಮವಾಗಿ ದಾಖಲೆಗಳನ್ನು ದೃಢೀಕರಣ ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ
ಪರಿಶೀಲನೆ ನಂತರ ಘೋಷಣಾ ಪತ್ರಕ್ಕೆ ಸಹಿ
ಮನೆ ಮನೆ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಬೆಸ್ಕಾಂ ಸಿಬ್ಬಂದಿಗಳು ಫಲಾನುಭವಿಗಳು ನೀಡಿರುವ ಮಾಹಿತಿಯ ಸರಿಯಾಗಿದೆ ಎಂಬುದನ್ನು ದೃಢೀಕರಿಸಲು ಅಧಿಕೃತ ಘೋಷಣಾ ಪತ್ರವನ್ನು ಪಡೆಯುತ್ತಾರೆ ಈ ಘೋಷಣಾ ಪತ್ರದಲ್ಲಿ ಈ ಕೆಳಕಂಡ ವಿವರಗಳು ಇರುತ್ತವೆ
- ಯೋಜನೆಯ ಫಲಾನುಭವಿಯ ಹೆಸರು
- ವಿದ್ಯುತ್ ಗ್ರಾಹಕ ಸಂಖ್ಯೆ
- ಸಂಪೂರ್ಣ ವಿಳಾಸ
- ಪರಿಶೀಲಿಸಿದ ದಾಖಲೆಗಳ ವಿವರ ಮತ್ತು ಪಟ್ಟಿ
- ಪರಿಶೀಲನೆ ಮಾಡಿದ ದಿನಾಂಕ ಮತ್ತು ಸಮಯ
- ಪರಿಶೀಲನೆ ನಡೆಸಿದ ಸಿಬ್ಬಂದಿಯ ಮಾಹಿತಿಗಳು
ಈ ಮಾಹಿತಿಯನ್ನು ಹೊಂದಿರುವ ಹಾಗೂ ಪರಿಶೀಲಿಸಿದ ನಂತರ ಮನೆಯ ಮಾಲೀಕರು ಅಥವಾ ಯಜಮಾನರು ಅಥವಾ ವಿದ್ಯುತ್ ಸಂಪರ್ಕ ಹೊಂದಿರುವ ಫಲಾನುಭವಿಯ ಹೆಸರನ್ನು ಪಡೆಯಲಾಗುತ್ತದೆ
ಸಹಿ ಮಾಡುವ ಮುನ್ನ ಎಲ್ಲ ವಿವರಗಳು ಸರಿಯಾಗಿವೆ ಎಂದು ಓದಿ ಅರ್ಥೈಸಿಕೊಂಡು ಪರಿಶೀಲಿಸಿದ ನಂತರ ಸಹಿ ಮಾಡುವುದು ಉತ್ತಮವಾಗಿದೆ ಯಾವುದೇ ಮಾಹಿತಿ ತಪ್ಪಾಗಿದ್ದರೆ ಅಥವಾ ಲೋಪದೋಷಗಳು ಕಂಡುಬಂದಲ್ಲಿ ತಕ್ಷಣವೇ ಸಿಬ್ಬಂದಿಯ ಗಮನಕ್ಕೆ ತಂದು ಸರಿಪಡಿಸಬೇಕು
ಗ್ರಾಹಕರು ಪರಿಶೀಲನ ವೇಳೆ ಗಮನಿಸಬೇಕಾದ ಪ್ರಮುಖ ಅಂಶಗಳು
Gruha Jyothi ಯೋಜನೆಯ ಪರಿಶೀಲನಾ ಕಾರ್ಯವನ್ನು ವೇಗವಾಗಿ ಪೂರ್ಣಗೊಳಿಸಲು ಹಾಗೂ ಯಾವುದೇ ಸಮಯದ ವ್ಯರ್ಥವಿಲ್ಲದೆ ಪೂರ್ಣಗೊಳಿಸಲು ಸಾರ್ವಜನಿಕರ ಸಹಕಾರ ಅತ್ಯಂತ ಪ್ರಮುಖವಾಗಿದ್ದು ಬೆಸ್ಕಾಂ ಸಿಬ್ಬಂದಿಗಳು ಮನೆ ಭೇಟಿ ಮಾಡಿದಾಗ ಈ ಅಂಶಗಳನ್ನು ಪಾಲಿಸಿದರೆ ಪರಿಶೀಲನೆ ವೇಗವಾಗಿ ನಡೆಯುತ್ತದೆ ಹಾಗೂ ಉತ್ತಮ ರೀತಿಯಲ್ಲಿ ಇರುತ್ತದೆ
- ಅಗತ್ಯ ದಾಖಲಾತಿಗಳನ್ನು ಮುಂಚಿತವಾಗಿ ಸಿದ್ಧವಾಗಿಟ್ಟುಕೊಳ್ಳಿ
- ಸಿಬ್ಬಂದಿಗೆ ನಿಖರವಾದ ಮತ್ತು ಸರಿಯಾದ ಮಾಹಿತಿಯನ್ನು ನೀಡಿ
- ಸಿಬ್ಬಂದಿಯ ಗುರುತಿನ ಚೀಟಿಯನ್ನು ಪರಿಶೀಲಿಸಿದ ನಂತರವೇ ದಾಖಲೆಗಳನ್ನು ನೀಡಿ
- ಯಾವುದೇ ದಾಖಲೆಗಳನ್ನು ಮರೆಮಾಚಬೇಡಿ
- ನೀವು ಸಿಬ್ಬಂದಿಗೆ ನೀಡುವ ಮಾಹಿತಿ ಹಾಗೂ ಸಿಬ್ಬಂದಿಯವರು ನಿಮಗೆ ನೀಡುವ ಮಾಹಿತಿಯನ್ನು ಗಮನದಿಂದ ಪರಿಶೀಲಿಸಿ
- ಘೋಷಣಾ ಪತ್ರಿಕೆ ಸಹಿ ಮಾಡುವ ಮುನ್ನ ಎಲ್ಲ ವಿವರಗಳನ್ನು ಒಂದಲ್ಲ ಎರಡು ಬಾರಿ ಓದಿ ಅರ್ಥೈಸಿಕೊಳ್ಳಿ
ಈ ಮೇಲಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದರಿಂದ ಪರಿಶೀಲನ ಪ್ರಕ್ರಿಯೆಯು ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತದೆ
ಈ ಅಭಿಯಾನದಿಂದ ಸಾರ್ವಜನಿಕರಿಗೆ ಆಗುವ ಪ್ರಮುಖ ಪ್ರಯೋಜನಗಳು
ಕರ್ನಾಟಕ ಸರ್ಕಾರದ ಗೃಹ ಜ್ಯೋತಿ ಯೋಜನೆಯ ಮನೆಮನೆ ಪರಿಶೀಲನ ಅಭಿಯಾನವು ಕೇವಲ ದಾಖಲೆ ಪರಿಶೀಲನೆಗೆ ಮಾತ್ರ ಸೀಮಿತವಾಗಿ ಅಲ್ಲದೆ ಇದರ ಮೂಲಕ ಗ್ರಾಹಕರು ಈ ಕೆಳಕಂಡ ಹಲವಾರು ಪ್ರಯೋಜನಗಳನ್ನು ಪಡೆಯಬಹುದಾಗಿರುತ್ತದೆ ಅವುಗಳೆಂದರೆ
- ಕಚೇರಿಗಳಿಗೆ ಅಲ್ಲಿದಾಡುವ ಸಮಯ ತಪ್ಪುತ್ತದೆ
- ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದ ದಾಖಲೆಗಳ ತಿದ್ದುಪಡಿ ಸುಲಭವಾಗುತ್ತದೆ
- ಯೋಜನೆಯ ಲಾಭ ನಿರಂತರವಾಗಿ ಸಿಗುತ್ತದೆ
- ಸರ್ಕಾರಿ ದಾಖಲೆಗಳು ಸರಿಯಾದ ಮಾಹಿತಿಯನ್ನು ಹೊಂದುವುದರಿಂದ ನಿಖರವಾಗುತ್ತದೆ
- ತಾಂತ್ರಿಕ ಸಮಸ್ಯೆಗಳು ಕಡಿಮೆಯಾಗುತ್ತವೆ
- ಜನಸ್ನೇಹಿ ಯೋಜನೆಯ ದುರುಪಯೋಗವನ್ನು ತಡೆಯಬಹುದು
- ಸರ್ಕಾರದ ಡಿಜಿಟಲ್ ಸೇವೆಗಳು ಇನ್ನಷ್ಟು ಪಾರದರ್ಶಕಕ್ಕೆ ತಿರುಗುತ್ತವೆ
- ಭವಿಷ್ಯದಲ್ಲಿ ಹೊಸ ಸೇವೆಗಳನ್ನು ಪಡೆಯಲು ಸುಲಭವಾಗುತ್ತದೆ
ಒಟ್ಟಾರೆಯಾಗಿ ಹೇಳುವುದಾದರೆ ಈ ವಿಶೇಷ ಮನೆ ಮನೆ ಪರಿಶೀಲನಾ ಅಭಿಯಾನವು ಕರ್ನಾಟಕ ಸರ್ಕಾರದ Gruha Jyothi ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹಾಗೂ ಉತ್ತಮ ರೀತಿಯಲ್ಲಿ ಜಾರಿಗೆ ತರಲು ಸರ್ಕಾರ ಕೈಗೊಂಡಿರುವ ಕ್ರಮವಾಗಿದ್ದು ಪ್ರತಿಯೊಬ್ಬ ಫಲಾನುಭವಿಯು ಅಗತ್ಯ ದಾಖಲಾತಿಗಳನ್ನು ಸಿದ್ಧವಾಗಿಟ್ಟುಕೊಂಡು ಬೆಸ್ಕಾಂ ಸಿಬ್ಬಂದಿಗೆ ಸಹಕರಿಸಿ ಪರಿಶೀಲನೆಯನ್ನು ಪೂರ್ಣಗೊಳಿಸಬೇಕಾಗಿರುತ್ತದೆ
ಜುಲೈ ತಿಂಗಳ ವಿದ್ಯುತ್ ಬಿಲ್ಲಿಂಗ್ ನಲ್ಲಿ ಮಹತ್ವದ ಬದಲಾವಣೆ
Gruha Jyothi ಯೋಜನೆಗೆ ಸಂಬಂಧಿಸಿದಂತೆ ಫಲಾನುಭವಿಗಳ ಮನೆ ಪರಿಶೀಲನೆ ಅಭಿಯಾನವು ಆರಂಭವಾಗಿರುವುದರಿಂದ ಇಂಧನ ಇಲಾಖೆಯು ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ವಿದ್ಯುತ್ ಬಿಲ್ಲಿಂಗ್ ವ್ಯವಸ್ಥೆಯಲ್ಲಿ ತಾತ್ಕಾಲಿಕ ಬದಲಾವಣೆಯನ್ನು ಜಾರಿಗೆ ತಂದಿದೆ
ಪ್ರತಿ ತಿಂಗಳು ಮೀಟರ್ ರೀಡರ್ ಗಳು ಮನೆಗಳಿಗೆ ಭೇಟಿ ನೀಡಿ ವಿದ್ಯುತ್ ಮೀಟರ್ ನಲ್ಲಿನ ಯೂನಿಟ್ ಗಳನ್ನು ದಾಖಲಿಸಿ, ಅದರ ಆದರದ ಮೇಲೆ ಬಿಲ್ಲನ್ನು ಸಿದ್ಧಪಡಿಸುತ್ತಿದ್ದರು ಆದರೆ ಈ ಬಾರಿ ಎಲ್ಲಾ ಸಿಬ್ಬಂದಿಗಳು ಪರಿಶೀಲನ ಕಾರ್ಯದಲ್ಲಿ ತೊಡಗಿರುವುದರಿಂದ ಭೌತಿಕ ಮೀಟರ್ ರೀಡಿಂಗ್ ನೀಡಲು ಸಾಧ್ಯವಾಗುವುದಿಲ್ಲ
ಈ ಕಾರಣದಿಂದ ಜುಲೈ ತಿಂಗಳಿಗೆ ಮಾತ್ರ ವಿಶೇಷ ಬಿಲ್ಲಿಂಗ್ ವಿಧಾನವನ್ನು ಅನುಸರಿಸಲಾಗಿದ್ದು ಗ್ರಾಹಕರು ಯಾವುದೇ ಆತಂಕ ಪಡುವ ಅಗತ್ಯತೆ ಇರುವುದಿಲ್ಲ ಇದು ಕೇವಲ ಆಡಳಿತಾತ್ಮಕ ವ್ಯವಸ್ಥೆಯಾಗಿದ್ದು ಪರಿಶೀಲನ ಪ್ರಕ್ರಿಯೆಯ ದೃಷ್ಟಿಯಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ ಈ ಪರಿಶೀಲನ ಪ್ರಕ್ರಿಯೆ ಪೂರ್ಣಗೊಂಡ ನಂತರ ಇಂದಿನಂತೆ ನಿಯಮಿತ ಮೀಟರ್ ರೀಡಿಂಗ್ ಮತ್ತು ಬಿಲ್ಲಿಂಗ್ ಪ್ರಕ್ರಿಯೆ ಪುನರ್ ಆರಂಭಗೊಳ್ಳುತ್ತದೆ
ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ಏಕೆ ಇರುವುದಿಲ್ಲ
Gruha Jyothi ಯೋಜನೆಗೆ ಸಂಬಂಧಿಸಿದೆ ದಾಖಲೆಗಳನ್ನು ಪರಿಶೀಲಿಸಲು ರಾಜದಾದ್ಯಂತ ಸಾವಿರಾರು ಮೀಟರ್ ರೀಡರ್ ಗಳನ್ನು ನಿಯೋಜಿಸಲಾಗಿದ್ದು ಈ ಸಿಬ್ಬಂದಿಗಳೇ ವಿದ್ಯುತ್ ಮೀಟರ್ ಓದಿ ಬಿಲ್ ಸಿದ್ದಪಡಿಸುವ ಪಡಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಾರೆ
ಆದರೆ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಅವರ ಪ್ರಮುಖ ಜವಾಬ್ದಾರಿಯು ಮನೆಮನೆ ಪರಿಶೀಲನೆ ಮಾಡುವುದರಿಂದ ಪ್ರತ್ಯೇಕವಾಗಿ ಮನೆಗೆ ತೆರಳಿ ಮೀಟರ್ ರೀಡಿಂಗ್ ಮಾಡುವ ಬದಲು ತಾತ್ಕಾಲಿಕವಾಗಿ ಸರಾಸರಿ ಬಿಲ್ಲಿಂಗ್ ವ್ಯವಸ್ಥೆಯನ್ನು ಅನುಸರಿಸಲು ಇಲಾಖೆ ನಿರ್ಧರಿಸಿದೆ
ಈ ನಿರ್ಧಾರದಿಂದ ಸಿಬ್ಬಂದಿಯವರು ತಮ್ಮ ಸಮಯವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಪರಿಶೀಲನ ಕಾರ್ಯವನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲು ಸಹಾಯವಾಗುತ್ತದೆ
ಆವರೇಜ್ (ಸರಾಸರಿ) ಬಿಲ್ಲಿಂಗ್ ಎಂದರೆ ಏನು
ಆವರೇಜ್ ಬಿಲ್ಲಿಂಗ್ ಎಂದರೆ ಗ್ರಾಹಕರ ಹಿಂದಿನ ತಿಂಗಳುಗಳ ವಿದ್ಯುತ್ ಬಳಕೆಯನ್ನು ಆಧರಿಸಿ ಪ್ರಸ್ತುತ ತಿಂಗಳ ಬಿಲ್ಲನ್ನು ಸ್ವಯಂ ಚಾಲಿತವಾಗಿ ಸಿದ್ಧಪಡಿಸುವ ವಿಧಾನವಾಗಿದೆ
ಅಂದರೆ ಜುಲೈ ತಿಂಗಳ ವಿದ್ಯುತ್ ಬಿಲ್ ಅನ್ನು ತಯಾರಿಸುವಾಗ ಮನೆಯ ವಿದ್ಯುತ್ ಮೀಟರ್ ಅನ್ನು ಓದದೆ ಬದಲಾಗಿ ಕಳೆದ ಮೂರು ತಿಂಗಳ ವಿದ್ಯುತ್ ಬಳಕೆ ದಾಖಲೆಗಳನ್ನು ಆಧರಿಸಿ ಸರಾಸರಿ ಬಳಕೆಯನ್ನು ಲೆಕ್ಕ ಹಾಕಲಾಗುತ್ತದೆ
ಈ ಲೆಕ್ಕಾಚಾರದ ಆಧಾರದ ಮೇಲೆ ಜುಲೈ ತಿಂಗಳ ವಿದ್ಯುತ್ ಬಿಲ್ಲನ್ನು ಸಿದ್ಧಪಡಿಸಲಾಗುತ್ತದೆ ಈ ಪ್ರಕ್ರಿಯೆ ಸಂಪೂರ್ಣವಾಗಿ ಇಲಾಖೆಯ ಡಿಜಿಟಲ್ ವ್ಯವಸ್ಥೆಯ ಮೂಲಕ ಸ್ವಯಂ ಚಾಲಿತವಾಗಿ ನಡೆಯುತ್ತದೆ
ಸರಾಸರಿ ಬಿಲ್ಲನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ
ಉದಾಹರಣೆಗೆ ನೀವು ಏಪ್ರಿಲ್ ತಿಂಗಳಲ್ಲಿ 82 ಯೂನಿಟ್ ಮೇ ತಿಂಗಳಲ್ಲಿ 91 ಯುನಿಟ್ ಜೂನ್ ತಿಂಗಳಲ್ಲಿ 87 ಯೂನಿಟ್ ಗಳನ್ನು ಬಳಸಿದ್ದಾರೆ ಸರಾಸರಿಯನ್ನು ಲೆಕ್ಕ ಹಾಕಲಾಗುತ್ತದೆ ಈ ಸರಾಸರಿ ಆಧಾರದ ಮೇಲೆ ಜುಲೈ ತಿಂಗಳನ್ನು ಸಿದ್ಧಪಡಿಸಲಾಗುತ್ತದೆ
ಪ್ರತಿಯೊಬ್ಬ ಗ್ರಾಹಕರಿಗೂ ಅವರ ಹಿಂದಿನ ಬಳಕೆ ಮಾಹಿತಿಯನ್ನೇ ಆಧರಿಸಿ ಬಿಲ್ ಸಿದ್ಧಪಡಿಸಲಾಗುತ್ತದೆ ಯಾವುದೇ ಊಹಾತ್ಮಕ ಅಥವಾ ಅಂದಾಜಿನಗರದ ಮೇಲೆ ಬಿಲ್ ನೀಡುವುದಿಲ್ಲ
ಈ ಬದಲಾವಣೆ ಯಾರಿಗೆ ಅನ್ವಯಿಸುತ್ತದೆ
ಜುಲೈ ತಿಂಗಳ ಸರಾಸರಿ ಬಿಲ್ಲಿಂಗ್ ವ್ಯವಸ್ಥೆಯು ಮುಖ್ಯವಾಗಿ ಗೃಹಬಳಕೆ ವಿದ್ಯುತ್ ಸಂಪರ್ಕ ಹೊಂದಿರುವ ಗ್ರಾಹಕರಿಗೆ ಮಾತ್ರ ಅನ್ವಯವಾಗುತ್ತದೆ ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಉಚಿತ ಸೌಲಭ್ಯ ಪಡೆಯುತ್ತಿರುವ ಕುಟುಂಬಗಳು ಹಾಗೂ ಸಾಮಾನ್ಯ ಗೃಹಬಳಕೆ ಗ್ರಾಹಕರು ಈ ವ್ಯವಸ್ಥೆ ವ್ಯಾಪ್ತಿಗೆ ಬರುತ್ತಾರೆ
ಆದರೆ ಈ ಕೆಳಗಿನ ಗ್ರಾಹಕರಿಗೆ ಎಂದಿನಂತೆ ಬಿಲ್ಲಿಂಗ್ ಪ್ರಕ್ರಿಯೆ ಮುಂದುವರೆಯುತ್ತದೆ
- ಉನ್ನತ ಒತ್ತಡ ವಿದ್ಯುತ್ ಸಂಪರ್ಕ ಹೊಂದಿರುವ ಬೃಹತ್ ಕೈಗಾರಿಕೆಗಳು
- ದೊಡ್ಡ ದೊಡ್ಡ ವಾಣಿಜ್ಯ ಸಂಸ್ಥೆಗಳು
- ಕೈಗಾರಿಕೆ ಮತ್ತು ಕಾರ್ಖಾನೆಗಳು
- ನಿರ್ದಿಷ್ಟ ಕೈಗಾರಿಕಾ ವಿದ್ಯುತ್ ಸಂಪರ್ಕಗಳು
- ವಿಶೇಷ ವಾಣಿಜ್ಯ ಬಳಕೆಯ ಗ್ರಾಹಕರು
ಈ ಮೇಲಿನ ವರ್ಗದ ಗ್ರಾಹಕರಿಗೆ ನಿಯಮಿತವಾಗಿ ಮೀಟರ್ ರೀಡಿಂಗ್ ಮತ್ತು ಬಿಲ್ಲಿಂಗ್ ವ್ಯವಸ್ಥೆಯ ಅನ್ವಯವಾಗುತ್ತದೆ
ಸರಾಸರಿ ಬಿಲ್ ಬಂದರೆ ಗ್ರಾಹಕರು ಏನು ಮಾಡಬೇಕು
ಸರಾಸರಿ ಬಿಲ್ ಬಂದ ಕೂಡಲೇ ಗ್ರಾಹಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಮೊದಲು ಬಿಲ್ ನಲ್ಲಿರುವ ವಿವರಗಳನ್ನು ಪರಿಶೀಲಿಸಿ ಅದು ನಿಮ್ಮದೇ ಬಿಲ್ ಆಗಿದೆಯೇ ಎಂದು ಖಚಿತಪಡಿಸಿಕೊಳ್ಳಿ ನಿಮ್ಮ ಹಿಂದಿನ ವಿದ್ಯುತ್ ಬಳಕೆಗೆ ಅನುಗುಣವಾಗಿ ಬಿಲ್ ಬಂದಿದ್ದರೆ ಅದನ್ನು ಎಂದಿನಂತೆ ಪಾವತಿಸಬಹುದು
ಒಂದು ವೇಳೆ ಬಿಲ್ ನಲ್ಲಿ ಅಸಾಮಾನ್ಯ ಪ್ರಮಾಣದ ವ್ಯತ್ಯಾಸ ಕಂಡು ಬಂದರೆ ಅಥವಾ ಲೆಕ್ಕಾಚಾರದಲ್ಲಿ ಯಾವುದಾದರೂ ತಪ್ಪುಗಳು ಕಂಡುಬಂದಲ್ಲಿ ಸಂಬಂಧಿತ ಬೆಸ್ಕಾಂ ಕಚೇರಿ ಅಥವಾ ಸಹಾಯವಾಣಿಯ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದು
ಪರಿಶೀಲನಾ ಅಭಿಯಾನವು ಪೂರ್ಣಗೊಂಡ ನಂತರ ಮುಂದಿನ ತಿಂಗಳುಗಳಲ್ಲಿ ಎಂದಿನಂತೆಯೇ ನೈಜವಾಗಿ ಮೀಟರ್ ರೀಡಿಂಗ್ ಆಧಾರದ ಮೇಲೆ ಬಿಲ್ಲಿಂಗ್ ಮರು ಪ್ರಾರಂಭ ಆಗುತ್ತದೆ ಅಗತ್ಯವಿದ್ದಲ್ಲಿ ನಂತರದ ಬಿಲ್ಲಿಂಗ್ ವ್ಯವಸ್ಥೆಯಲ್ಲಿ ಸೂಕ್ತ ಹೊಂದಾಣಿಕೆಯನ್ನು ಮಾಡಲಾಗಬಹುದು
ಗ್ರಾಹಕರು ಕಡ್ಡಾಯವಾಗಿ ಸಿದ್ಧಪಡಿಸಬೇಕಾದ ದಾಖಲೆಗಳು
ಮನೆ ಮನೆ ಪರಿಶೀಲನಾ ಅಭಿಯಾನಕ್ಕೆ ಭೇಟಿ ನೀಡುವ ಬೆಸ್ಕಾಂ ಸಿಬ್ಬಂದಿಗಳು ಪರಿಶೀಲನಾ ಕಾರ್ಯವನ್ನು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಪೂರ್ಣಗೊಳಿಸಲು ಈ ಕೆಳಕಂಡ ಪ್ರಮುಖ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು ಅವುಗಳೆಂದರೆ:
ಆಧಾರ್ ಕಾರ್ಡ್
ಫಲಾನುಭವಿಗಳ ಗುರುತನ್ನು ದೃಢೀಕರಿಸಲು ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿದ್ದು ಗೃಹಜೋತಿ ಯೋಜನೆಗೆ ನೋಂದಾಯಿಸಿರುವ ವ್ಯಕ್ತಿಯ ಮೂಲ ಆಧಾರ್ ಕಾರ್ಡ್ ಅಥವಾ ಸ್ಪಷ್ಟವಾದ ಜೆರಾಕ್ಸ್ ಪ್ರತಿಯನ್ನು ಕಡ್ಡಾಯವಾಗಿ ಹೊಂದಿರಬೇಕು
ಮತದಾರರ ಗುರುತಿನ ಚೀಟಿ
ಗ್ರಾಹಕರ ವಿಳಾಸ ಮತ್ತು ವ್ಯಕ್ತಿಯ ಗುರುತನ್ನು ಪರಿಶೀಲಿಸಲು ಮತದಾರರ ಗುರುತಿನ ಚೀಟಿಯನ್ನು ಬಳಸಲಾಗುತ್ತದೆ ಕೆಲ ಸಂದರ್ಭದಲ್ಲಿ ಆಧಾರ್ ಕಾರ್ಡ್ ಜೊತೆಗೆ ಮತದಾರರ ಗುರುತಿನ ಚೀಟಿ ಪರಿಶೀಲನೆಯು ಸಹ ನಡೆಯಬಹುದು
ಪಡಿತರ ಚೀಟಿ (ರೇಷನ್ ಕಾರ್ಡ್)
ಕುಟುಂಬದ ಸದಸ್ಯರನ್ನು ಮತ್ತು ಅವರಿಗೆ ಸಂಬಂಧಿಸಿದ ಮಾಹಿತಿಯನ್ನು ಪರಿಶೀಲಿಸಲು ಹಾಗೂ ಗೃಹಜೋತಿ ಯೋಜನೆಯ ಅರ್ಹತೆಯನ್ನು ದೃಢೀಕರಿಸಲು ರೇಷನ್ ಕಾರ್ಡ್ ಹೊಂದುವುದು ಉಪಯುಕ್ತ ದಾಖಲೆಯಾಗಿದೆ
ಪಾನ್ ಕಾರ್ಡ್
ಪಾನ್ ಕಾರ್ಡ್ ಒಂದು ಕಡ್ಡಾಯ ದಾಖಲೆ ಅಲ್ಲದಿದ್ದರೂ ಹೆಚ್ಚುರಿಯಾಗಿ ಗುರುತಿನ ದಾಖಲೆಯಾಗಿ ಕೇಳಬಹುದಾಗಿರುತ್ತದೆ ಸಿಬ್ಬಂದಿಗಳು ಕೇಳಿದರೆ ಮಾತ್ರ ಪಾನ್ ಕಾರ್ಡನ್ನು ತೋರಿಸಿ
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ
ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಫಲಾನುಭವಿಗಳ ಇತ್ತೀಚಿನ ಪಾಸ್ಪೋರ್ಟ್ ಸೈಜ್ ನ ಭಾವಚಿತ್ರವನ್ನು ಸಹ ಕೇಳಲಾಗಬಹುದು ಆದುದರಿಂದ ಒಂದು ಅಥವಾ ಎರಡು ಇತ್ತೀಚಿನ ಭಾವಚಿತ್ರಗಳನ್ನು ಸಿದ್ಧವಾಗಿಟ್ಟುಕೊಳ್ಳಿ
ಬಾಡಿಗೆ ಒಪ್ಪಂದ ಪತ್ರ
ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವವರು ಚಾಲ್ತಿಯಲ್ಲಿರುವ ಅಧಿಕೃತ ಬಾಡಿಗೆ ಕರಾರನ್ನು ಕಡ್ಡಾಯವಾಗಿ ಹೊಂದಿರಬೇಕು ಮತ್ತು ಸಿಬ್ಬಂದಿಗಳು ಕೇಳಿದಾಗ ತೋರಿಸಬೇಕು ಇದರಿಂದ ಫಲಾನುಭವಿಯ ವಾಸ ಸ್ಥಳವನ್ನು ದೃಢೀಕರಿಸಲು ಸಹಕಾರಿಯಾಗುತ್ತದೆ
ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಜಾತಿ ಮತ್ತು ಆದಾಯ ಪ್ರಮಾಣ ಪತ್ರ ದಾಖಲೆಗಳು ಪರಿಶೀಲನೆಗೆ ಕಡ್ಡಾಯ ಅಲ್ಲದಿದ್ದರೂ ಕೆಲವೊಂದು ಸಂದರ್ಭಗಳಲ್ಲಿ ಅಗತ್ಯ ದಾಖಲೆಯನ್ನಾಗಿ ಕೇಳಲಾಗುತ್ತದೆ ಆದ್ದರಿಂದ ಪರಿಶೀಲನೆಗಾಗಿ ಈ ದಾಖಲೆಯನ್ನು ಕೇಳಿದಾಗ ಒದಗಿಸಿ
ದಾಖಲೆಗಳನ್ನು ಮುಂಚಿತವಾಗಿ ಸಿದ್ಧವಾಗಿಟ್ಟುಕೊಳ್ಳುವುದರಿಂದ ಆಗುವ ಪ್ರಯೋಜನಗಳು
Gruha Jyothi ಯೋಜನೆಯ ಪರಿಶೀಲನೆಗೆ ಅಗತ್ಯ ದಾಖಲಾತಿಗಳನ್ನು ಮೊದಲೇ ಸಿದ್ಧಪಡಿಸಿಕೊಳ್ಳುವ ಮೂಲಕ ಪರಿಶೀಲನೆಯನ್ನು ವೇಗವಾಗಿ ಪೂರ್ಣಗೊಳಿಸಬಹುದು ಇದರಿಂದ ಪರಿಶೀಲನೆ ಕೆಲವೇ ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತದೆ ದಾಖಲೆಗಳ ಕೊರತೆಯಿಂದ ಉಂಟಾಗುವ ಅನಗತ್ಯ ವಿಳಂಬ ಮತ್ತು ಸಮಯ ವ್ಯರ್ಥವನ್ನು ತಪ್ಪಿಸಬಹುದು
ಇದರ ಜೊತೆಯಲ್ಲಿ ಯೋಜನೆಯ ಲಾಭವನ್ನು ನಿರಂತರವಾಗಿ ಪಡೆಯಲು ಹಾಗೂ ಪ್ರಯೋಜನವನ್ನು ಪಡೆಯುವಲ್ಲಿ ಮುಂದುವರಿಯಲು ಭವಿಷ್ಯದಲ್ಲಿ ಯಾವುದೇ ದಾಖಲೆ ಸಂಬಂಧಿತ ಸಮಸ್ಯೆಗಳು ಉಂಟಾಗದಂತೆ ಈ ಪೂರ್ವ ಸಿದ್ಧತೆಯನ್ನು ಕೈಗೊಳ್ಳಬೇಕು
ವಂಚಕರ ಬಗ್ಗೆ ಎಚ್ಚರವಹಿಸಿ
Gruha Jyothi ಯೋಜನೆ ಅಡಿಯಲ್ಲಿ ರಾಜ್ಯದಾದ್ಯಂತ ಮನೆ ಮನೆ ಪರಿಶೀಲನಾ ಅಭಿಯಾನವು ನಡೆಯುತ್ತಿರುವ ಸಂದರ್ಭದಲ್ಲಿ ಸಾರ್ವಜನಿಕರು ಪ್ರಮುಖ ಮಾಹಿತಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು
ಯಾವುದೇ ಸರ್ಕಾರಿ ಯೋಜನೆಗಳು ಜಾರಿಯಾದಾಗ ಅದರ ದುರುಪಯೋಗವನ್ನು ಪಡಿಸಿಕೊಳ್ಳಲು ಜನರು ಅಥವಾ ಕೆಲವು ಕಿಡಿಗೇಡಿಗಳು ಪ್ರಯತ್ನಿಸುತ್ತಾರೆ ಆದ್ದರಿಂದ ಗ್ರಹ ಜ್ಯೋತಿ ಯೋಜನೆಯ ಪರಿಶೀಲನೆಗೆ ಸಂಬಂಧಿಸಿದಂತೆ ಯಾವುದೇ ಸಿಬ್ಬಂದಿಗಳು ಬಂದರೆ ಅವರ ಗುರುತನ್ನು ಮೊದಲು ಪರಿಶೀಲಿಸಿಕೊಳ್ಳಿ
ಇಂಧನ ಇಲಾಖೆ ಹಾಗೂ ಬೆಸ್ಕಾಂ ಸಂಸ್ಥೆಯು ಸ್ಪಷ್ಟವಾಗಿ ತಿಳಿಸಿರುವಂತೆ ಈ ಪರಿಶೀಲನಾ ಪ್ರಕ್ರಿಯೆಯು ಸಂಪೂರ್ಣವಾಗಿ ಅಧಿಕೃತವಾಗಿದ್ದು ಗ್ರಾಹಕರಿಂದ ಯಾವುದೇ ಹಣ ಅಥವಾ ಸೇವಾ ಶುಲ್ಕವನ್ನು ಪಾವತಿಸಬೇಕಿಲ್ಲ
ಆದುದರಿಂದ ಸಾರ್ವಜನಿಕರು ತಮ್ಮ ದಾಖಲೆಗಳನ್ನು ನೀಡುವ ಮೊದಲು ಸಿಬ್ಬಂದಿಯ ಗುರುತನ್ನು ಪರಿಶೀಲಿಸುವುದು ಕಡ್ಡಾಯವಾಗಿದೆ ಒಂದು ವೇಳೆ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದರೆ ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿ ನೀಡಿ
ಬೆಸ್ಕಾಂ ಸಿಬ್ಬಂದಿಯ ಅಧಿಕೃತ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಪರಿಶೀಲಿಸಿ
ನಿಮ್ಮ ಮನೆಗೆ ಭೇಟಿ ನೀಡುವ ವ್ಯಕ್ತಿಯು ನಿಜವಾಗಿಯೂ ಬೆಸ್ಕಾಂ ಸಿಬ್ಬಂದಿಗೆ ಎಂಬುದನ್ನು ಪರಿಶೀಲಿಸುವುದು ನಿಮ್ಮ ಪ್ರಾಥಮಿಕ ಜವಾಬ್ದಾರಿಯಾಗಿದೆ
ಅಧಿಕೃತ ಸಿಬ್ಬಂದಿಯು ಮನೆಯ ಬಳಿ ಬಂದಾಗ ಸಾಮಾನ್ಯವಾಗಿ ಇಲಾಖೆಯಿಂದ ನೀಡಲಾಗಿರುವ ಗುರುತಿನ ಚೀಟಿ ಇರುತ್ತದೆ ಇದರಲ್ಲಿ ಸಿಬ್ಬಂದಿಯ ಹೆಸರು, ನಿರ್ವಹಿಸುವ ಹುದ್ದೆ, ಸಿಬ್ಬಂದಿಯ ಸಂಖ್ಯೆ ಹಾಗೂ ಇಲಾಖೆಯ ಹೆಸರಿನ ಜೊತೆಯಲ್ಲಿ ಭಾವಚಿತ್ರ ಇರುತ್ತದೆ
ಒಂದು ವೇಳೆ ಗುರುತಿನ ಚೀಟಿ ತೋರಿಸಲು ನಿರಾಕರಿಸುವುದು ಅಥವಾ ಅನುಮಾನಾಸ್ಪದ ವರ್ತನೆಗಳನ್ನು ಮಾಡಿದರೆ ಯಾವುದೇ ದಾಖಲೆಗಳನ್ನು ನೀಡದೆ ಸಂಬಂಧಿತ ವಿದ್ಯುತ್ ಕಚೇರಿಯನ್ನು ಸಂಪರ್ಕಿಸಿ
ಪರಿಶೀಲನಿಗಾಗಿ ಯಾವುದೇ ಹಣ ನೀಡುವ ಅವಶ್ಯಕತೆ ಇಲ್ಲ
Gruha Jyothi ಯೋಜನೆಯ ಮನೆಮನೆ ಪರಿಶೀಲನಾ ಪ್ರಕ್ರಿಯೆಯು ಸಂಪೂರ್ಣವಾಗಿ ಉಚಿತ ಪ್ರಕ್ರಿಯೆಯಾಗಿದ್ದು ಯಾವುದೇ ಶುಲ್ಕವನ್ನು ಪಾವತಿಸುವ ಅಗತ್ಯತೆ ಇರುವುದಿಲ್ಲ
- ಪರಿಶೀಲನಾ ಶುಲ್ಕ
- ದಾಖಲೆ ಪರಿಶೀಲನೆ ಶುಲ್ಕ
- ನೋಂದಣಿ ಶುಲ್ಕ
- ಸೇವಾ ಶುಲ್ಕ
- ಮನೆಭೇಟಿ ಶುಲ್ಕ
- ಫೋಟೋ ಅಪ್ಲೋಡ್ ಶುಲ್ಕ
- ಡಿಜಿಟಲ್ ಪರಿಶೀಲನ ಶುಲ್ಕ
ಈ ಮೇಲಿನ ಮಾಹಿತಿಯನ್ನು ಒಳಗೊಂಡಂತೆ ಯಾವುದೇ ರೀತಿಯ ಶುಲ್ಕವನ್ನು ಪಾವತಿಸಲು ಸಿಬ್ಬಂದಿಯು ಕೇಳಿದರೆ ಅಥವಾ ನೀಡುವಂತೆ ಹೇಳಿದರೆ ಯಾವುದೇ ಕಾರಣಕ್ಕೂ ನಗದು ಹಣ, ಆನ್ಲೈನ್ ಪಾವತಿ ಅಥವಾ ವೈಯಕ್ತಿಕ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಬಾರದು
ಓಟಿಪಿ ಅಥವಾ ಬ್ಯಾಂಕ್ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ
ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆಗಳು ಹೆಚ್ಚಾಗುತ್ತಿರುವ ಪರಿಣಾಮದಲ್ಲಿ ಸಾರ್ವಜನಿಕರು ಮತ್ತು ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ ಗೃಹಜೋತಿ ಪರಿಶೀಲನೆಯ ಸಿಬ್ಬಂದಿಗಳು ಸಾಮಾನ್ಯವಾಗಿ ಈ ಮಾಹಿತಿಯನ್ನು ಕೇಳುವುದಿಲ್ಲ
- ಗ್ರಾಹಕರ ಬ್ಯಾಂಕ್ ಖಾತೆ ವಿವರಗಳು
- ಎಟಿಎಂ ಕಾರ್ಡ್ ಪಿನ್
- ಯುಪಿಐ ಪಿನ್
- ಯಾವುದೇ ಓಟಿಪಿ
- ನೆಟ್ ಬ್ಯಾಂಕಿಂಗ್ ಪಾಸ್ವರ್ಡ್
- ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ವಿವರಗಳು
ಈ ಮಾಹಿತಿಯನ್ನು ಯಾರಾದರೂ ಕೇಳಿದಲ್ಲಿ ಅದು ವಂಚನೆಯಾಗುವ ಸಾಧ್ಯತೆ ಹೆಚ್ಚಾಗಿದ್ದು ಈ ರೀತಿಯ ವೈಯಕ್ತಿಕ ಹಣಕಾಸು ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ
ದಾಖಲೆಗಳನ್ನು ನೀಡುವಾಗ ಎಚ್ಚರ ವಹಿಸಿ
ಪರಿಶೀಲನೆಗಾಗಿ ದಾಖಲೆಗಳನ್ನು ತೋರಿಸುವುದು ಅಗತ್ಯವಾಗಿದ್ದರು ಮೂಲ ದಾಖಲೆಗಳನ್ನು ಯಾರಿಗೂ ನೀಡಬೇಡಿ ಸಿಬ್ಬಂದಿಗಳು ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಅವುಗಳನ್ನು ಹಿಂಪಡೆದುಕೊಳ್ಳಿ ಅಗತ್ಯವಿದ್ದಲ್ಲಿ ಜೆರಾಕ್ಸ್ ಪ್ರತಿಗಳನ್ನು ನೀಡುವ ಮೂಲಕ ನಿಮ್ಮ ಮೂಲ ದಾಖಲೆಗಳ ಸುರಕ್ಷತೆಯನ್ನು ವಹಿಸಿ
ಅನುಮಾನಾಸ್ಪದ ವರ್ತನೆ ಬಂದರೆ ತಕ್ಷಣ ಸಹಾಯವಾಣಿಯನ್ನು ಸಂಪರ್ಕಿಸಿ
ಪರಿಶೀಲನೆಯ ವೇಳೆ ಯಾವುದೇ ಗೊಂದಲ ಉಂಟಾದಲ್ಲಿ ಅಥವಾ ಸಿಬ್ಬಂದಿಯ ಬಗ್ಗೆ ಅನುಮಾನ ಮೂಡಿದರೆ ತಕ್ಷಣವೇ ಬೆಸ್ಕಾಂನ ಅಧಿಕೃತ ಸಹಾಯವಾಣಿ ಸಂಖ್ಯೆಯಾದ 1912 ಗೆ ಕರೆ ಮಾಡಿ ಈ ಕೆಳಗಿನ ಮಾಹಿತಿಯನ್ನು ಪಡೆಯಬಹುದಾಗಿರುತ್ತದೆ
- ಸಿಬ್ಬಂದಿಯ ಅಧಿಕೃತ ದೃಢೀಕರಣ
- ಪರಿಶೀಲನೆ ಕುರಿತು ಮಾಹಿತಿ
- ವಿದ್ಯುತ್ ಸಂಪರ್ಕ ಸಮಸ್ಯೆಗಳು
- ಗೃಹಜೋತಿ ಯೋಜನೆಗೆ ಸಂಬಂಧಿಸಿದ ಪ್ರಶ್ನೆಗಳು
- ದಾಖಲೆ ಪರಿಶೀಲನೆ ಕುರಿತ ಮಾಹಿತಿ
- ದೂರು ಸಲ್ಲಿಕೆಗಳು
ಈ ಮೇಲ್ಕಂಡ ಯಾವುದೇ ಸಮಸ್ಯೆಯನ್ನು ಸಾಮಾಜಿಕ ಜಾಲತಾಣಗಳ ಮಾಹಿತಿ ಆಧಾರದ ಮೇಲೆ ಅವಲಂಬನೆ ಗೊಳ್ಳದೆ ಅಧಿಕೃತ ಸಹಾಯವಾಣಿಯನ್ನು ಸಂಪರ್ಕಿಸುವುದು ಹೆಚ್ಚು ಸುರಕ್ಷಿತವಾಗಿದೆ ಈ ಮಾಹಿತಿಯು ಗೌಪ್ಯತೆಯಿಂದ ಕೂಡಿರುತ್ತದೆ
ಮಾಹಿತಿಯನ್ನು ಎಲ್ಲಿಂದ ಪಡೆಯಬೇಕು
Gruha Jyothi ಯೋಜನೆಯ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಸಮಗ್ರವಾಗಿ ಕೇವಲ ಅಧಿಕೃತ ಮೂಲಗಳನ್ನು ಬಳಸುವುದರಿಂದ ಮಾತ್ರ ಪಡೆಯಿರಿ ವಿಶೇಷವಾಗಿ ಈ ಕೆಳಕಂಡ ಮೂಲಗಳಿಂದ ಮಾಹಿತಿಯನ್ನು ಪಡೆಯಬಹುದು
- ಸೇವಾಸಿಂದು ಪೋರ್ಟಲ್
- ಬೆಸ್ಕಾಂನ ಅಧಿಕೃತ ವೆಬ್ಸೈಟ್
- ಕರ್ನಾಟಕ ಇಂಧನ ಇಲಾಖೆಯ ಪ್ರಕಟಣೆಗಳು
- ಬೆಸ್ಕಾಂ ಸಹಾಯವಾಣಿ 1912
- ಅಧಿಕೃತ ಪತ್ರಿಕ ಪ್ರಕಟಣೆಗಳು
ವಾಟ್ಸಾಪ್, ಫೇಸ್ ಬುಕ್, ಇನ್ಸ್ಟಾಗ್ರಾಂ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಅನಧಿಕೃತ ಹಾಗೂ ಪರಿಶೀಲಿಸದ ಮಾಹಿತಿಯನ್ನು ನಂಬಬೇಡಿ
ಗ್ರಾಹಕರು ಮಾಡುವ ಸಾಮಾನ್ಯ ತಪ್ಪುಗಳು
ಯೋಜನೆಯ ಪರಿಶೀಲನೆಯ ಸಮಯದಲ್ಲಿ ಈ ಕೆಳಕಂಡ ಸಾಮಾನ್ಯ ತಪ್ಪುಗಳನ್ನು ಮಾಡುವುದರಿಂದ ಭವಿಷ್ಯದಲ್ಲಿ ತೊಂದರೆ ಉಂಟಾಗಬಹುದು ಅವುಗಳಲ್ಲಿ ಪ್ರಮುಖವಾದವು
- ಅಗತ್ಯ ದಾಖಲತೆಗಳನ್ನು ಸಿದ್ಧವಾಗಿ ಇಟ್ಟುಕೊಳ್ಳದೆ ಇರುವುದು
- ತಪ್ಪು ಮಾಹಿತಿಯನ್ನು ನೀಡುವುದು
- ಸಿಬ್ಬಂದಿಯ ಗುರುತಿನ ಚೀಟಿಯನ್ನು ಪರಿಶೀಲಿಸದೆ ದಾಖಲೆಯನ್ನು ನೀಡುವುದು
- ಮನೆಗೆ ಬಂದ ಸಿಬ್ಬಂದಿಗೆ ಅನಗತ್ಯವಾಗಿ ಹಣವನ್ನು ನೀಡುವುದು
- ಘೋಷಣಾ ಪತ್ರವನ್ನು ಓದದೆ ಸಹಿ ಮಾಡುವುದು
- ಬಾಡಿಗೆ ಒಪ್ಪಂದ ಪತ್ರದ ಅವಧಿಯನ್ನು ಮೀರಿರುವುದು ಅಥವಾ ನವೀಕರಣಕ್ಕೆ ಒಳಪಡಿಸದೆ ಸಿದ್ಧಪಡಿಸದೆ ಇರುವುದು
- ಅನಧಿಕೃತ ಮೂಲಗಳಿಂದ ಬಂದ ಮಾಹಿತಿಯನ್ನು ನಂಬುವುದು
ಈ ಮೇಲಿನ ತಪ್ಪುಗಳನ್ನು ತಪ್ಪಿಸುವುದರ ಮೂಲಕ ಪರಿಶೀಲನ ಪ್ರಕ್ರಿಯೆಯು ಸುಗಮವಾಗಿ ವೇಗವಾಗಿ ಪೂರ್ಣಗೊಳ್ಳುತ್ತದೆ
ಗ್ರಾಹಕರಿಗೆ ಪ್ರಮುಖ ಸಲಹೆಗಳು
ಗೃಹ ಜ್ಯೋತಿ ಯೋಜನೆಯ ಪ್ರಯೋಜನವನ್ನು ಯಾವುದೇ ಅಡೆತಡೆ ಇಲ್ಲದೆ ತೊಂದರೆ ಇಲ್ಲದೆ ಮುಂದುವರಿಸಿಕೊಂಡು ಹೋಗಲು ಈ ಕೆಳಕಂಡ ಸಲಹೆಗಳನ್ನು ಪಾಲಿಸಿ
- ಎಲ್ಲ ದಾಖಲಾತಿಗಳನ್ನು ಒಂದೇ ಕಡತದಲ್ಲಿ ಸಿದ್ಧವಾಗಿಟ್ಟುಕೊಳ್ಳಿ ಇದು ಬೇಗನೆ ದಾಖಲಾತಿಗಳನ್ನು ನೀಡಲು ಸಹಕಾರಿ
- ಬೆಸ್ಕಾಂ ಸಿಬ್ಬಂದಿಯ ಗುರುತಿನ ಚೀಟಿಯನ್ನು ಮೊದಲನೇದಾಗಿ ಪರಿಶೀಲಿಸಿ
- ಪರಿಶೀಲನೆ ವೇಳೆ ತಪ್ಪು ಮಾಹಿತಿ ನೀಡದೆ ಸರಿಯಾದ ನಿಖರ ಮಾಹಿತಿಯನ್ನು ನೀಡಿ
- ಯಾವುದೇ ಹಣವನ್ನು ಪಾವತಿಸಬೇಡಿ
- ಯಾವುದೇ ಓಟಿಪಿ ಅಥವಾ ಬ್ಯಾಂಕ್ ಸಂಬಂಧಿತ ಮಾಹಿತಿಯನ್ನು ಹಂಚಿಕೊಳ್ಳಬೇಡಿ
- ದಾಖಲೆಗಳ ಜೆರಾಕ್ಸ್ ಪ್ರತಿಗಳನ್ನು ಮುಂಚಿತವಾಗಿ ಸಿದ್ಧಪಡಿಸಿಕೊಳ್ಳಿ
- ಘೋಷಣ ಪತ್ರವನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡ ನಂತರವೇ ಸಹಿ ಮಾಡಿ
- ಯಾವುದೇ ಅನುಮಾನಾಸ್ಪದ ವರ್ತನೆ ಕಂಡು ಬಂದಲ್ಲಿ ತಕ್ಷಣವೇ ಅಧಿಕೃತ ಸಹಾಯವಾಣಿ 1912 ಸಂಪರ್ಕಿಸಿ
ಗೃಹ ಜ್ಯೋತಿ ಯೋಜನೆಯ ಯಶಸ್ಸಿಗೆ ಸಾರ್ವಜನಿಕ ಸಹಕಾರವು ಮುಖ್ಯ
ಈ ವಿಶೇಷ ಮನೆಮನೆ ಪರಿಶೀಲನ ಅಭಿಯಾನವು ಜನರ ಹಿತಾಸಕ್ತಿಯನ್ನು ಕಾಪಾಡಲು ಹಾಗೂ ಯೋಜನೆಯ ಪ್ರಯೋಜನವನ್ನು ಅರ್ಹ ಕುಟುಂಬಗಳಿಗೆ ಯಾವುದೇ ತೊಂದರೆ ಇಲ್ಲದೆ ತಲುಪಿಸಲು ಶುರು ಮಾಡಿರುವುದರಿಂದ ಈ ಅಭಿಯಾನದ ಯಶಸ್ಸು ಕೇವಲ ಸರ್ಕಾರ ಬೆಸ್ಕಾಂ ಅಥವಾ ಸಿಬ್ಬಂದಿಯ ಮೇಲೆ ಅವಲಂಬಿತವಾಗಿರದೆ ಸಾರ್ವಜನಿಕರ ಸಹಾಯವು ಅಷ್ಟೇ ಪ್ರಮುಖವಾಗಿದೆ
ಅಗತ್ಯ ದಾಖಲಾತಿಗಳನ್ನು ಸಿದ್ಧವಾಗಿಟ್ಟುಕೊಂಡು ಸಿಬ್ಬಂದಿಗೆ ಸರಿಯಾದ ಮಾಹಿತಿಯನ್ನು ನೀಡಿ ಅಧಿಕೃತ ಸೂಚನೆಗಳನ್ನು ಪಾಲಿಸುವುದರಿಂದ ಪರಿಶೀಲನ ಪ್ರಕ್ರಿಯೆಯನ್ನು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಪೂರ್ಣಗೊಳಿಸಬಹುದು ಇದರಿಂದ ಗೃಹಜೋತಿ ಯೋಜನೆಯ ಲಾಭವು ಅರ್ಹ ಕುಟುಂಬಗಳಿಗೆ ಯಾವುದೇ ಅಡೆತಡೆ ಇಲ್ಲದೆ ತಲುಪುತ್ತದೆ.
Gruha Jyothi Scheme 2026: FAQ’s
ಪ್ರಶ್ನೆ-1: ಗೃಹ ಜ್ಯೋತಿ ಯೋಜನೆಯ ಪರಿಶೀಲನೆಗೆ ಬೆಸ್ಕಾಂ ಸಿಬ್ಬಂದಿ ಯಾವಾಗ ಮನೆಗೆ ಬರುತ್ತಾರೆ?
ಉತ್ತರ: ಜುಲೈ 1 ನೇ ತಾರೀಖಿನಿಂದ ಆಗಸ್ಟ್ 31ನೇ ತಾರೀಖಿನವರೆಗೆ ಈ ಅಭಿಯಾನ ನಡೆಯುತ್ತದೆ
ಪ್ರಶ್ನೆ-2: ಪರಿಶೀಲನಾ ಸಿಬ್ಬಂದಿಗೆ ಯಾವುದಾದರೂ ಹಣ ನೀಡಬೇಕೇ?
ಉತ್ತರ: ಇಲ್ಲ, ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ ಇದೊಂದು ಉಚಿತ ಪರಿಶೀಲನಾ ಪ್ರಕ್ರಿಯೆಯಾಗಿದೆ
ಪ್ರಶ್ನೆ-3: ಬಾಡಿಗೆ ಮನೆಯಲ್ಲಿರುವವರು ಬಾಡಿಗೆ ಕರಾರು ಪತ್ರ ನೀಡುವುದು ಕಡ್ಡಾಯವೇ?
ಉತ್ತರ: ಹೌದು, ಬಾಡಿಗೆ ಮನೆಯಲ್ಲಿ ವಾಸಿಸುವವರು ಅಧಿಕೃತ ಬಾಡಿಗೆ ಕಾರರನ್ನು ಕಡ್ಡಾಯವಾಗಿ ಒದಗಿಸಬೇಕು
ಪ್ರಶ್ನೆ-4: ಜುಲೈ ತಿಂಗಳಲ್ಲಿ ಮೀಟರ್ ರೀಡಿಂಗ್ ವ್ಯವಸ್ಥೆ ಹೇಗಿರುತ್ತದೆ?
ಉತ್ತರ: ಜುಲೈ ತಿಂಗಳಲ್ಲಿ ನಿರಂತರ ಮೀಟರ್ ರೀಡಿಂಗ್ ಮತ್ತು ಬಿಲ್ಲಿಂಗ್ ವ್ಯವಸ್ಥೆ ಬದಲಾಗಿ ಸರಾಸರಿ ವಿದ್ಯುತ್ ಬಳಕೆಯ ಬಿಲ್ಲಿಂಗ್ ನಡೆಯುತ್ತದೆ
ಪ್ರಶ್ನೆ-5: ಸರಾಸರಿ ಬಿಲ್ಲಿಗ್ ನಲ್ಲಿ ವ್ಯತ್ಯಾಸ ಕಂಡು ಬಂದರೆ ಏನು ಮಾಡಬೇಕು?
ಉತ್ತರ: ಸರಾಸರಿ ಬಿಲ್ಲಿಂಗ್ ನಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಅಧಿಕೃತ ಸಹಾಯವಾಣಿ ಸಂಖ್ಯೆ 1912 ಅನ್ನು ಸಂಪರ್ಕಿಸಬಹುದು
ಪ್ರಶ್ನೆ-6: ಬೆಸ್ಕಾಂ ಸಿಬ್ಬಂದಿಯ ಗುರುತನ್ನು ಪರಿಶೀಲಿಸಲು ಏನು ಮಾಡಬೇಕು?
ಉತ್ತರ: ಬೆಸ್ಕಾಂ ಸಿಬ್ಬಂದಿಗೆ ಇಲಾಖೆ ನೀಡಿರುವ ಗುರುತಿನ ಚೀಟಿಯನ್ನು ಪರಿಶೀಲಿಸಬೇಕು
ಪ್ರಶ್ನೆ-7: ಸಿಬ್ಬಂದಿಗಳು ಮೂಲ ದಾಖಲೆಗಳನ್ನು ಕೇಳಿದರೆ ನೀಡಬೇಕೆ?
ಉತ್ತರ: ಸಾಮಾನ್ಯವಾಗಿ ಸಿಬ್ಬಂದಿಗಳು ಮೂಲ ದಾಖಲೆಯನ್ನು ಕೇಳುವುದಿಲ್ಲ ನೈಜತೆಯನ್ನು ಪರಿಶೀಲಿಸಲು ಕೆಲವೊಂದು ಸಂದರ್ಭದಲ್ಲಿ ಕೇಳಬಹುದು ಸಾಧ್ಯವಾದಷ್ಟು ಜೆರಾಕ್ಸ್ ಪ್ರತಿಗಳನ್ನು ನೀಡಿ
ಪ್ರಶ್ನೆ-8: ಪರಿಶೀಲನೆ ವೇಳೆ ಓಟಿಪಿ ಅಥವಾ ಬ್ಯಾಂಕ್ ವಿವರಗಳನ್ನು ನೀಡಬೇಕು?
ಉತ್ತರ: ಇಲ್ಲ, ಈ ಪರಿಶೀಲನೆಗೆ ಯಾವುದೇ ಓಟಿಪಿ ಅಥವಾ ಬ್ಯಾಂಕ್ ವಿವರಗಳನ್ನು ನೀಡುವ ಅವಶ್ಯಕತೆ ಇರುವುದಿಲ್ಲ
ಪ್ರಶ್ನೆ-9: ಗೃಹ ಜ್ಯೋತಿ ಯೋಜನೆ ಲಾಭ ಪಡೆಯಲು ಈ ಪರಿಶೀಲನೆ ಕಡ್ಡಾಯವೇ?
ಉತ್ತರ: ಹೌದು, ಈ ಯೋಜನೆಯ ಪ್ರಯೋಜನವನ್ನು ಅರ್ಹ ಕುಟುಂಬಗಳಿಗೆ ತಲುಪಿಸಲು ಸರ್ಕಾರ ಯೋಜನೆಯನ್ನು ತಂದಿದ್ದು ಪರಿಶೀಲನೆ ಕಡ್ಡಾಯವಾಗಿರುತ್ತದೆ
ಪ್ರಶ್ನೆ-10: ಪರಿಶೀಲನಾ ಪ್ರಕ್ರಿಯೆಯಲ್ಲಿ ಯಾವುದಾದರೂ ಮಾಹಿತಿ ಬೇಕೆಂದರೆ ಯಾರನ್ನು ಸಂಪರ್ಕಿಸಬೇಕು?
ಉತ್ತರ: ಬೆಸ್ಕಾಂ ಸಂಸ್ಥೆಯ ಅಧಿಕೃತ ಸಹಾಯವಾಣಿ ಸಂಖ್ಯೆ 1912 ಅನ್ನು ಸಂಪರ್ಕಿಸಬೇಕು
ಪ್ರಶ್ನೆ-11: ಸಹಾಯವಾಣಿ ಸಂಖ್ಯೆಗೆ ಕರೆ ಮಾಡಲು ನಮ್ಮಲ್ಲಿ ಮೊಬೈಲ್ ರೀಚಾರ್ಜ್ ಇರಬೇಕೇ?
ಉತ್ತರ: ಇಲ್ಲ, ಇದೊಂದು ಉಚಿತ ಸಹಾಯವಾಣಿ ಸಂಖ್ಯೆಯಾಗಿದ್ದು ದಿನದ 24 ಗಂಟೆ ವಾರದ 7 ದಿನಗಳು ಲಭ್ಯವಿರುತ್ತದೆ
ಲೇಖನದ ಪ್ರಮುಖ ಅಂಶಗಳು
- ಗೃಹಜೋತಿ ಯೋಜನೆಯ ನೈಜತೆಯನ್ನು ಪರಿಶೀಲಿಸಲು ಮನೆ ಮನೆ ಪರಿಶೀಲನ ಅಭಿಯಾನವನ್ನು ಆರಂಭಿಸಲಾಗಿದೆ
- ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಬೆಸ್ಕಾಂ ಸಿಬ್ಬಂದಿ ಮನೆಗೆ ಭೇಟಿ ನೀಡಲಿದ್ದಾರೆ
- ಫಲಾನುಭವಿಗಳು ಅಗತ್ಯ ದಾಖಲೆಗಳನ್ನು ಮುಂಚಿತವಾಗಿ ಸಿದ್ಧಪಡಿಸಿಕೊಂಡು ಪರಿಶೀಲನೆಗೆ ಸಹಕರಿಸಬೇಕು
- ಜುಲೈ ತಿಂಗಳಲ್ಲಿ ಸರಾಸರಿ ಬಿಲ್ಲಿಂಗ್ ವ್ಯವಸ್ಥೆ ಜಾರಿಯಲ್ಲಿರುತ್ತದೆ
- ಸಿಬ್ಬಂದಿಯ ಅಧಿಕೃತ ಗುರುತಿನ ಚೀಟಿಯನ್ನು ಪರಿಶೀಲಿಸಿದ ನಂತರವೇ ಪರಿಶೀಲನ ದಾಖಲೆಗಳನ್ನು ನೀಡಬೇಕು
- ಈ ಪರಿಶೀಲನಾ ಪ್ರಕ್ರಿಯೆಯು ಉಚಿತವಾಗಿದ್ದು ಯಾವುದೇ ಶುಲ್ಕ ಪಾವತಿಸುವ ಅಗತ್ಯತೆ ಇರುವುದಿಲ್ಲ
- ಅನುಮಾನಾಸ್ಪದ ಘಟನೆಗಳು ಅಥವಾ ವರ್ತನೆ ಕಂಡು ಬಂದಲ್ಲಿ ತಕ್ಷಣವೇ ಅಧಿಕೃತ ಸಹಾಯವಾಣಿ 1912 ಅನ್ನು ಸಂಪರ್ಕಿಸಬೇಕು
- ಅಧಿಕೃತ ಮಾಹಿತಿಗಾಗಿ ಬೆಸ್ಕಾಂ ಮತ್ತು ಸೇವಾ ಸಿಂಧು ಪೋರ್ಟಲ್ ಗಳನ್ನು ಅನುಸರಿಸಬೇಕು
ಅಧಿಕೃತ ಲಿಂಕ್ ಗಳು
| ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ | ಇಂಧನ ಇಲಾಖೆ |
| ಬೆಸ್ಕಾಂ ಸಂಸ್ಥೆಯ ಅಧಿಕೃತ ವೆಬ್ಸೈಟ್ | ಬೆಸ್ಕಾಂ (BESCOM) |
| ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಅಧಿಕೃತ ವೆಬ್ಸೈಟ್ | ಗ್ಯಾರಂಟಿ ಯೋಜನೆಗಳು |
| ಗೃಹ ಜೊತೆ ಯೋಜನೆಯ ಅರ್ಜಿ ಸಲ್ಲಿಕೆ ಲಿಂಕ್ | ಅರ್ಜಿ ಸಲ್ಲಿಕೆ |
| ಗೃಹ ಜ್ಯೋತಿ ಯೋಜನೆಯ ಡಿ ಲಿಂಕ್ ಮಾಡುವ ಲಿಂಕ್ | ಡಿ ಲಿಂಕ್ ಮಾಡಲು ಲಿಂಕ್ |
ಹೆಚ್ಚುವರಿ ಲಿಂಕ್ ಗಳು
| ನಮ್ಮ ವಾಟ್ಸಪ್ ಗುಂಪು ಸೇರಲು | ಇಲ್ಲಿ ಕ್ಲಿಕ್ ಮಾಡಿ |
| ಹೆಚ್ಚುವರಿ ಮಾಹಿತಿಗಾಗಿ | ನೇಮಕಾತಿ ಮಾಹಿತಿ |
ಗೃಹ ಜ್ಯೋತಿ ಯೋಜನೆಯು ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ಗೃಹ ಉಪಯೋಗಿ ಉಚಿತ ವಿದ್ಯುತ್ ವ್ಯವಸ್ಥೆಯನ್ನು ಒದಗಿಸುವ ಮಹತ್ವದ ಕಲ್ಯಾಣ ಯೋಜನೆಯಾಗಿದ್ದು ಈ ಯೋಜನೆಯ ಅನುಷ್ಠಾನವು ಪಾರದರ್ಶಕವಾಗಿದ್ದು ನಿಖರವಾದ ದಾಖಲೆಗಳ ನಿರ್ವಹಣೆ ಮತ್ತು ಅರ್ಹ ಫಲಾನುಭವಿಗಳಿಗೆ ಯಾವುದೇ ಅಡೆತಡೆ ಇಲ್ಲದೆ ಸೌಲಭ್ಯವನ್ನು ತಲುಪಿಸುವ ಉದ್ದೇಶದಿಂದ ಬೆಸ್ಕಾಂ ಸಂಸ್ಥೆಯು ಮನೆ ಮನೆ ಪರಿಶೀಲನಾ ಅಭಿಯಾನವನ್ನು ಕೈಗೊಂಡಿದೆ
ಆದ್ದರಿಂದ ಪ್ರತಿಯೊಬ್ಬ ಫಲಾನುಭವಿಯು ಸಹ ತಮ್ಮ ಪರಿಶೀಲನಾ ಪ್ರಕ್ರಿಯೆಯನ್ನು ಸುಲಭವಾಗಿ ಮತ್ತು ವೇಗವಾಗಿ ಪೂರ್ಣಗೊಳಿಸಲು ಆಧಾರ್ ಕಾರ್ಡ್, ವಿದ್ಯುತ್ ಸಂಪರ್ಕದ ದಾಖಲೆಗಳು ಹಾಗೂ ಇತರ ಅಗತ್ಯ ದಾಖಲೆಗಳನ್ನು ಮುಂಚಿತವಾಗಿ ಸಿದ್ಧಪಡಿಸಿಟ್ಟುಕೊಳ್ಳಬೇಕು ಈ ಪ್ರಕ್ರಿಯೆಗೆ ಯಾವುದೇ ರೀತಿ ಹಣ ಪಾವತಿಸದೆ ಅಧಿಕೃತ ಗುರುತಿನ ಚೀಟಿಯನ್ನು ಪರಿಶೀಲಿಸಿದ ನಂತರವೇ ದಾಖಲೆಗಳನ್ನು ನೀಡಬೇಕು
ಜಾಗೃತ ನಾಗರಿಕರಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ ಗಳಲ್ಲಿ ಪ್ರಕಟಗೊಳ್ಳುವ ಮಾಹಿತಿಯನ್ನು ಮಾತ್ರ ನಂಬಬೇಕು. ವದಂತಿಗಳಿಗೆ ಅಥವಾ ಅನಧಿಕೃತ ಮಾಹಿತಿಗಳಿಗೆ ಕಿವಿಗೊಡದೆ ವಂಚಕರಿಂದ ಎಚ್ಚರವಹಿಸಿ ಗೃಹಜೋತಿ ಯೋಜನೆಯ ಪ್ರಯೋಜನವನ್ನು ಯಾವುದೇ ತೊಂದರೆ ಇಲ್ಲದೆ ಮುಂದುವರಿಸಲು ಮನೆ ಮನೆ ಪರಿಶೀಲನ ಪ್ರಕ್ರಿಯೆಯಲ್ಲಿ ಸಹಕರಿಸಿ.
Related Informtion:
Raita Siri Yojane 2026, Best Scheme : ಕರ್ನಾಟಕ ಸರ್ಕಾರದ ಈ ಯೋಜನೆ ರೈತರಿಗೆ ವರದಾನ, ಸಂಪೂರ್ಣ ವಿವರ ತಿಳಿಯಿರಿ
Shed Construction Subsidy Best Scheme 2026: ಅರ್ಜಿ ಪ್ರಕ್ರಿಯೆ, ಅರ್ಹತೆ, ಸಬ್ಸಿಡಿ ಮೊತ್ತ ಸಂಪೂರ್ಣ ಮಾಹಿತಿ
Author Note : ಈ ಲೇಖನವನ್ನು ಗೃಹ ಜ್ಯೋತಿ ಯೋಜನೆಗೆ ಸಂಬಂಧಿಸಿದ ಇತ್ತೀಚಿನ ಪ್ರಕಟಣೆಗಳು, ಇಲಾಖೆಯ ಮಾರ್ಗಸೂಚಿಗಳು ಮತ್ತು ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸಿದ್ಧಪಡಿಸಲಾಗಿದೆ. ಓದುಗರಿಗೆ ಸರಳ, ನಿಖರ ಹಾಗೂ ಉಪಯುಕ್ತ ಮಾಹಿತಿಯನ್ನು ಕನ್ನಡದಲ್ಲಿ ಒದಗಿಸುವುದು ನಮ್ಮ ಉದ್ದೇಶವಾಗಿದೆ. ಯಾವುದೇ ಆಡಳಿತಾತ್ಮಕ ಬದಲಾವಣೆಗಳಿದ್ದರೆ ಅಧಿಕೃತ ಪ್ರಕಟಣೆಗಳಿಗೆ ಆದ್ಯತೆ ನೀಡಬೇಕು.
—*****—
About Author : ರಂಗನಾಥ ಬಿಜಿ ಅವರು ಅರ್ಥಶಾಸ್ತ್ರದಲ್ಲಿ ಎಂ ಎ ಪದವೀಧರರಾಗಿದ್ದು, ಕಳೆದ 3 ವರ್ಷಗಳಿಂದ ಸರ್ಕಾರಿ ಯೋಜನೆಗಳು, ನೇಮಕಾತಿ, ಶಿಕ್ಷಣ, ವೃತ್ತಿ ಮಾರ್ಗದರ್ಶನ ಮತ್ತು ಸಾರ್ವಜನಿಕ ಸೇವೆಗಳ ಕುರಿತು ಕನ್ನಡದಲ್ಲಿ ಮಾಹಿತಿ ನೀಡುವ ಲೇಖಕರಾಗಿದ್ದಾರೆ. ಹಲವು ವರ್ಷಗಳಿಂದ ಕನ್ನಡ ಓದುಗರಿಗೆ ಸರಳ, ವಿಶ್ವಾಸಾರ್ಹ ಹಾಗೂ ಸಂಶೋಧನೆ ಆಧಾರಿತ ಲೇಖನಗಳನ್ನು ಪ್ರಕಟಿಸುತ್ತಿದ್ದು, ಸಾರ್ವಜನಿಕರಿಗೆ ಅಧಿಕೃತ ಮಾಹಿತಿಯನ್ನು ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ತಲುಪಿಸುವುದು ಇವರ ಪ್ರಮುಖ ಉದ್ದೇಶವಾಗಿದೆ.
—*****—
Disclaimer : ಈ ಲೇಖನವು ಮಾಹಿತಿ ನೀಡುವ ಉದ್ದೇಶಕ್ಕಾಗಿ ಮಾತ್ರ ಪ್ರಕಟಿಸಲಾಗಿದೆ. ಗೃಹ ಜ್ಯೋತಿ ಯೋಜನೆ, ಬೆಸ್ಕಾಂ ಪರಿಶೀಲನೆ, ದಾಖಲೆಗಳು ಅಥವಾ ಬಿಲ್ಲಿಂಗ್ ವ್ಯವಸ್ಥೆಗೆ ಸಂಬಂಧಿಸಿದ ನಿಯಮಗಳು ಕಾಲಕಾಲಕ್ಕೆ ಬದಲಾಗಬಹುದು. ಆದ್ದರಿಂದ ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳುವ ಮೊದಲು ಬೆಸ್ಕಾಂ, ಇಂಧನ ಇಲಾಖೆ ಅಥವಾ ಸೇವಾ ಸಿಂಧು ಪೋರ್ಟಲ್‌ನಲ್ಲಿ ಪ್ರಕಟವಾಗುವ ಅಧಿಕೃತ ಮಾಹಿತಿಯನ್ನು ಪರಿಶೀಲಿಸುವುದು ಕಡ್ಡಾಯವಾಗಿದೆ.