Telegram Join Our Telegram WhatsApp Join Our WhatsApp

Best Courses After PUC Science In 2026: Here Is The Career Guide, Best Courses, Salary, Jobs & Future

PUC Science ನಂತರದ ಶೈಕ್ಷಣಿಕ ಕೋರ್ಸುಗಳ ಬಗ್ಗೆ ಸಂಪೂರ್ಣ ಮಾಹಿತಿ

ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳನ್ನು ಹೊಂದಬಹುದಾಗಿರುತ್ತದೆ. PUC Science ವಿಭಾಗವನ್ನು ಹೊಂದಿದ ನಂತರ ಯಾವ ಕೋರ್ಸನ್ನು ಆಯ್ಕೆ ಮಾಡಬೇಕು ಎಂಬ ನಿರ್ಧಾರವು ವಿದ್ಯಾರ್ಥಿಗಳ ಭವಿಷ್ಯ ಶಿಕ್ಷಣ ವೃತ್ತಿ ಹಾಗೂ ಆದಾಯ ಮಟ್ಟದ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪರಿಣಾಮ ಬೀರುತ್ತದೆ. ಅನೇಕ ವಿದ್ಯಾರ್ಥಿಗಳು ವೈದ್ಯಕೀಯ ಕ್ಷೇತ್ರ ಇಂಜಿನಿಯರಿಂಗ್ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ಮುಂದುವರೆದರೆ ಇನ್ನು ಕೆಲವರು ಕಂಪ್ಯೂಟರ್, ಡಾಟಾ ಸೈನ್ಸ್ ,ಕೃಷಿ, ನರ್ಸಿಂಗ್ ಫಾರ್ಮಸಿ, ಏವಿಯೇಷನ್‌, ಡಿಸೈನ್, ಪ್ಯಾರಾಮೆಡಿಕಲ್ ಮುಂತಾದ ವೃತ್ತಿಪರ ಕೋರ್ಸ್ ಗಳನ್ನು ಮಾಡಲು ಆಸಕ್ತಿಯನ್ನು ತೋರುತ್ತಾರೆ.

ಇಂದಿನ ದಿನಗಳಲ್ಲಿ ಉದ್ಯೋಗ ಮಾರುಕಟ್ಟೆಯಲ್ಲಿ ಕೇವಲ ಪದವಿ ಪಡೆದರೆ ಸಾಕಾಗುವುದಿಲ್ಲ, ಬದಲಾಗಿ ಉದ್ಯಮಕ್ಕೆ ಬೇಡಿಕೆ ಇರುವ ಅನುಗುಣವಾಗಿ ಕೌಶಲ್ಯಗಳನ್ನು ಬೆಳೆಸಿಕೊಂಡು ಸರಿಯಾದ ಕೋರ್ಸ್ ನ ಆಯ್ಕೆ ಮಾಡುವುದು ಸಹ ಅತ್ಯಂತ ಪ್ರಮುಖವಾಗಿದೆ. ಆದುದರಿಂದ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡಿದ ನಂತರ ಲಭ್ಯವಿರುವ ವಿವಿಧ ಕೋರ್ಸುಗಳು, ಭವಿಷ್ಯದಲ್ಲಿ ಸಿಗಬಹುದಾದ ಉದ್ಯೋಗಾವಕಾಶಗಳು, ಅವುಗಳ ಅರ್ಹತೆ ಮತ್ತು ವೃತ್ತಿ ಯೋಜನೆ ಕುರಿತು ಸರಿಯಾದ ಮಾಹಿತಿಯನ್ನು ತಿಳಿದುಕೊಂಡು ನಂತರ ಶಿಕ್ಷಣವನ್ನು ಮುಂದುವರಿಸುವುದು, ಅತ್ಯಂತ ಪ್ರಮುಖವಾಗಿದೆ.

ಪ್ರಸ್ತುತ ಲೇಖನದಲ್ಲಿ ನಾವು ಪಿಯುಸಿ ವಿಜ್ಞಾನ ನಂತರ ಇರುವ ಪ್ರಮುಖ ಕೋರ್ಸುಗಳು, ವೃತ್ತಿ ಯೋಜನೆ ಹೇಗೆ ಮಾಡಬೇಕು ಮತ್ತು ಅದರ ಮಹತ್ವ, ಫಲಿತಾಂಶ ಬಂದ ಮೊದಲ 30 ದಿನಗಳಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳು ಮಾಡಬೇಕಾದ ಕೆಲಸಗಳು ಮತ್ತು ಅವರಿಗೆ ಸಲಹೆಗಳು ಹಾಗೂ ಮಾಡುವ ಸಾಮಾನ್ಯ ತಪ್ಪುಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ ಆದ್ದರಿಂದ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಪಿಯುಸಿ ವಿಜ್ಞಾನ ನಂತರದ ಕೋರ್ಸ್ಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಿ.

PUC Science ನಂತರ ಇರುವ ಶೈಕ್ಷಣಿಕ ಕೋರ್ಸುಗಳು ಮತ್ತು ಭವಿಷ್ಯದಲ್ಲಿ ಸಿಗುವ ಉದ್ಯೋಗಾವಕಾಶಗಳು

PUC Science ವಿಭಾಗವನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಹಲವು ಶೈಕ್ಷಣಿಕ ಅವಕಾಶಗಳು ಇವೆ. ಈ ಹಿಂದೆ ಮುಖ್ಯವಾಗಿ ಎಂಬಿಬಿಎಸ್ ಅಥವಾ ಇಂಜಿನಿಯರಿಂಗ್ ಅಥವಾ ಟೆಕ್ನಾಲಜಿ ವಿಭಾಗದಲ್ಲಿ ಇಂಜಿನಿಯರಿಂಗನ್ನು ಆಯ್ಕೆ ಮಾಡುತ್ತಿದ್ದರು ಆದರೆ ಈಗ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಹಲವು ರೀತಿಯ ಕೋರ್ಸುಗಳು ಲಭ್ಯವಿದ್ದು ದೇಶದಲ್ಲಿ ಅಲ್ಲದೆ ವಿದೇಶದಲ್ಲಿಯೂ ಸಹ ಉದ್ಯೋಗಾವಕಾಶವನ್ನು ಒದಗಿಸುತ್ತಿದೆ.

PUC Science ವಿದ್ಯಾರ್ಥಿಗಳು ಇಂಜಿನಿಯರಿಂಗ್, ತಂತ್ರಜ್ಞಾನ, ವೈದ್ಯಕೀಯ, ಸಂಶೋಧನೆ, ಕೃಷಿ ಕ್ಷೇತ್ರ, ಕಂಪ್ಯೂಟರ್ ಸೈನ್ಸ್, ಕೃತಕ ಬುದ್ಧಿಮತ್ತೆ, ರೋಬೋಟಿಕ್, ಸೈಬರ್ ಸೆಕ್ಯೂರಿಟಿ, ಡಾಟಾ ಸೈನ್ಸ್, ಬಯೋಟೆಕ್ನಾಲಜಿ ಪರಿಸರ ವಿಜ್ಞಾನ, ಫಾರ್ಮಸಿ, ನರ್ಸಿಂಗ್, ಪ್ಯಾರಾಮೆಡಿಕಲ್, ಆಹಾರ ತಂತ್ರಜ್ಞಾನ, ಗಣಿತ, ಅಂಕಿ ಅಂಶ ಶಾಸ್ತ್ರ ಮತ್ತು ಶಿಕ್ಷಕ ವೃತ್ತಿ ಅಂತಹ ಗೌರವಯುತ ಹಾಗೂ ಉತ್ತಮ ವೇತನವನ್ನು ನೀಡುವ ಕ್ಷೇತ್ರಗಳಲ್ಲಿ ಉದ್ಯೋಗವನ್ನು ಪಡೆಯಬಹುದಾಗಿರುತ್ತದೆ

ಇಂದಿನ ದಿನಗಳಲ್ಲಿ ಭಾರತದಲ್ಲಿ ಡಿಜಿಟಲ್ ತಂತ್ರಜ್ಞಾನವು ಅತ್ಯುತ್ತಮ ರೀತಿಯಲ್ಲಿ ಅಭಿವೃದ್ಧಿ ಗೊಳ್ಳುತ್ತಿದೆ. ಆರೋಗ್ಯ ಸೇವೆ, ನಿರ್ಮಾಣ ಮೂಲ ಸೌಕರ್ಯ, ಔಷಧ ಉದ್ಯಮ, ನವೀಕರಿಸಬಹುದಾದ ಇಂಧನದ ಕ್ಷೇತ್ರ, ಸಂಶೋಧನಾ ಕ್ಷೇತ್ರಗಳಲ್ಲಿ ವಿಶೇಷ ಕೌಶಲ್ಯಗಳನ್ನು ಹೊಂದಿರುವವರಿಗೆ ಹೆಚ್ಚಿನ ಬೇಡಿಕೆ ಇದೆ. ಆದುದರಿಂದ ಸರಿಯಾದ ಕೋರ್ಸ್ ಆಯ್ಕೆ ಮಾಡುವುದರ ಮೂಲಕ ಭವಿಷ್ಯದಲ್ಲಿ ಆಕರ್ಷಕ ವೇತನ ಹಾಗೂ ಸ್ಥಿರ ಉದ್ಯೋಗವನ್ನು ಪಡೆಯಬಹುದಾಗಿರುತ್ತದೆ.

ವಿದ್ಯಾರ್ಥಿಗಳು ಕೋರ್ಸ್ ಅನ್ನು ಆಯ್ಕೆ ಮಾಡುವಾಗ ಕೇವಲ ಈಗಿನ ಉದ್ಯೋಗ ಮಾರುಕಟ್ಟೆಯ ಆಸಕ್ತಿ ಹಾಗೂ ಬೇಡಿಕೆಯನ್ನು ಗಮನಿಸದೆ ಮುಂದಿನ 10 ರಿಂದ 25 ವರ್ಷಗಳ ವೃತ್ತಿ ಬೆಳವಣಿಗೆ ಮತ್ತು ಉದ್ಯೋಗಾವಕಾಶಗಳ ಸ್ಥಿರತೆಯನ್ನು ಸಹ ಪರಿಗಣಿಸಬೇಕಾಗುತ್ತದೆ

PUC Science ನಂತರ ವೃತ್ತಿ ಯೋಜನೆ ಏಕೆ ಮುಖ್ಯ

ಇಂದಿನ ಕಾಲದಲ್ಲಿ ಅನೇಕ ವಿದ್ಯಾರ್ಥಿಗಳು ತಮ್ಮ ಸ್ನೇಹಿತರು ಅಥವಾ ಸಂಬಂಧಿಕರ ಮನೆಗಳಲ್ಲಿ ಯಾವ ಕೋರ್ಸ್ ಅನ್ನು ಆಯ್ಕೆ ಮಾಡುತ್ತಾರೆ ಅದೇ ಕೋರ್ಸ್ ಅನ್ನು ಇವರು ಸಹ ಆಯ್ಕೆ ಮಾಡುತ್ತಾರೆ ಇದು ಭವಿಷ್ಯದಲ್ಲಿ ಆಸಕ್ತಿ ಕಳೆದುಕೊಳ್ಳಲು ಅಥವಾ ಕೋರ್ಸ್ ಅನ್ನು ಮಧ್ಯದಲ್ಲಿ ಬಿಡಲು ಅಥವಾ ಪರಿಣಾಮಕಾರಿಯಾಗಿ ಉದ್ಯೋಗವನ್ನು ಹೊಂದಲು ಸಾಧ್ಯವಾಗದೇ ಇರಬಹುದು.

ವೃತ್ತಿ ಯೋಜನೆಯನ್ನು ಮಾಡುವುದರಿಂದ ವಿದ್ಯಾರ್ಥಿಗಳಿಗೆ ಅವರ ಆಸಕ್ತಿಗಳು ಅವರಿಗಿರುವ ಸಾಮರ್ಥ್ಯ ಇರುವ ಕೌಶಲ್ಯ ಮತ್ತು ಭವಿಷ್ಯದ ಗುರಿಗಳನ್ನು ಸಮಗ್ರ ಮಟ್ಟದಲ್ಲಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದರ ಜೊತೆಯಲ್ಲಿ ಉತ್ತಮ ರೀತಿಯ ಕೋರ್ಸನ್ನು ಸಹ ಆಯ್ಕೆ ಮಾಡಲು ಸುಲಭವಾಗುತ್ತದೆ.

ಉತ್ತಮ ವೃತ್ತಿ ಯೋಜನೆಯಿಂದ ಸಿಗುವ ಪ್ರಯೋಜನಗಳು

  • ವಿದ್ಯಾರ್ಥಿ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಒಂದು ವಂತಹ ಕೋರ್ಸ್ ಅನ್ನು ಆಯ್ಕೆ ಮಾಡಲು ಸಹಾಯವಾಗುತ್ತದೆ
  • ಯಾವ ಕೋರ್ಸನ್ನು ಆಯ್ಕೆ ಮಾಡಿಕೊಳ್ಳಬೇಕು. ಎಂದು ಯೋಚಿಸುವ ಸಮಯ ಹಾಗೂ ಹಣದ ವ್ಯರ್ಥ ತಪ್ಪುತ್ತದೆ
  • ಭವಿಷ್ಯದಲ್ಲಿ ಇರಬಹುದಾದ ಉದ್ಯೋಗ ಬೇಡಿಕೆ ಮತ್ತು ಅವಕಾಶಗಳನ್ನು ಮುಂಚಿತವಾಗಿ ಅರ್ಥ ಮಾಡಿಕೊಳ್ಳಲು ಸಹಕರಿಸುತ್ತದೆ
  • ಕೋರ್ಸ್ ಮುಗಿದ ನಂತರ ಉನ್ನತ ಶಿಕ್ಷಣದ ಯೋಜನೆಯನ್ನು ರೂಪಿಸಬಹುದು
  • ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉತ್ತಮ ರೀತಿಯಲ್ಲಿ ಸಿದ್ಧತೆಯನ್ನು ಆರಂಭಿಸಬಹುದು
  • ಉದ್ಯೋಗವನ್ನು ಪಡೆಯುವ ಯೋಜನೆಯ ಜೊತೆಯಲ್ಲಿ ಉದ್ಯಮಿಯಾಗುವ ಅವಕಾಶಗಳನ್ನು ಸಹ ಒಂದಬಹುದು

ವೃತ್ತಿ ಯೋಜನೆ ಎಂದರೆ ಕೇವಲ ನಾವು ಓದುವ ಪದವಿಯನ್ನು ಆಯ್ಕೆ ಮಾಡುವುದಲ್ಲದೆ ಬದಲಾಗಿ ಜೀವನದಲ್ಲಿ ನಾವು ತೆಗೆದುಕೊಳ್ಳಬೇಕಾದ ದೀರ್ಘಾವಧಿ ಗುರಿಯನ್ನು ರೂಪಿಸುವ ಪ್ರಕ್ರಿಯೆಯಾಗಿದೆ ಆದುದರಿಂದ ಪ್ರತಿ ಯೋಜನೆಯು ಶೈಕ್ಷಣಿಕ ಹಂತದಲ್ಲಿ ಪ್ರಮುಖ ಅಂಶವಾಗಿದೆ.

PUC Science ಫಲಿತಾಂಶ ಬಂದ ನಂತರ 30 ದಿನಗಳ ಕಾರ್ಯ ಯೋಜನೆ

PUC Science ಫಲಿತಾಂಶ ಪ್ರಕಟಗೊಂಡ ನಂತರ ಅನೇಕ ವಿದ್ಯಾರ್ಥಿಗಳು ತುರ್ತಾಗಿ ಅವರಿಗೆ ಇಷ್ಟವಾಗುವ ಕಾಲೇಜುಗಳನ್ನು ಆಯ್ಕೆ ಮಾಡುತ್ತಾರೆ ಆದರೆ ಮೊದಲ 30 ದಿನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರೆ ಅಂದುಕೊಂಡಿರುವುದಕ್ಕಿಂತ ಉತ್ತಮ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಆದುದರಿಂದ 30 ದಿನಗಳ ವೇಳಾಪಟ್ಟಿ ಈ ಕೆಳಕಂಡಂತಿದೆ

PUC Science ಫಲಿತಾಂಶ ಬಂದ ಮೊದಲ ವಾರ

  • ವಿಷಯಗಳಲ್ಲಿ ನೀವು ತೆಗೆದುಕೊಂಡಿರುವ ಅಂಕಗಳನ್ನು ವಿಶ್ಲೇಷಿಸಿ ಹಾಗೂ ವಿಮರ್ಶಿಸಿ
  • ಯಾವ ವಿಷಯದಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದೀರಿ ಎಂಬುದನ್ನು ಗಮನಿಸಿ
  • ನಿಮಗೆ ಆಸಕ್ತಿ ಇರುವ ಕ್ಷೇತ್ರಗಳ ಕೋರ್ಸುಗಳನ್ನು ಪಟ್ಟಿ ಮಾಡಿ
  • ನಿಮ್ಮ ಪೋಷಕರೊಂದಿಗೆ ಮುಕ್ತವಾಗಿ ಚರ್ಚೆ ಮಾಡಿ ಇದರಿಂದ ತಿಳುವಳಿಕೆ ದೊರೆಯುತ್ತದೆ

PUC Science ಫಲಿತಾಂಶ ಬಂದ ಎರಡನೇ ವಾರ

  • ವಿವಿಧ ಕೋರ್ಸುಗಳ ಮಾಹಿತಿಗಳನ್ನು ಕಲೆಹಾಕಿ
  • ಪಿಯುಸಿ ಸೈನ್ಸ್ ನಂತರದಲ್ಲಿ ಇರಬಹುದಾದ ಪ್ರವೇಶ ಪರೀಕ್ಷೆಗಳ ಬಗ್ಗೆ ತಿಳಿದುಕೊಳ್ಳಿ
  • ಖಾಸಗಿ ಹಾಗೂ ಸರ್ಕಾರಿ ಕಾಲೇಜುಗಳ ಮಾಹಿತಿಗಳನ್ನು ಪಡೆಯಿರಿ
  • ಕೋರ್ಸಿನ ಅವಧಿ, ಶುಲ್ಕ ಮತ್ತು ಭವಿಷ್ಯದಲ್ಲಿ ಬರಬಹುದಾದ ಉದ್ಯೋಗಾವಕಾಶಗಳನ್ನು ಹೋಲಿಕೆ ಮಾಡಿ

PUC Science ಫಲಿತಾಂಶ ಬಂದ ಮೂರನೇ ವಾರ

  • ದಾಖಲಾತಿಗೆ ಬೇಕಾಗುವ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ
  • ಕೋರ್ಸಿನ ಅವಧಿಯಲ್ಲಿ ಸಿಗಬಹುದಾದ ವಿದ್ಯಾರ್ಥಿ ವೇತನ ಯೋಜನೆಗಳ ಬಗ್ಗೆ ತಿಳಿದುಕೊಳ್ಳಿ
  • ಅರ್ಜಿ ಸಲ್ಲಿಸಲು ನಿಗದಿಗೊಳ್ಳುವ ಕೊನೆಯ ದಿನಾಂಕಗಳನ್ನು ಗಮನದಲ್ಲಿಟ್ಟುಕೊಳ್ಳಿ
  • ನಿಮ್ಮ ಕೋರ್ಸಿಗೆ ಕನಿಷ್ಠ ಮೂರು ಪರ್ಯಾಯ ಕೋರ್ಸುಗಳನ್ನು ಆಯ್ಕೆ ಮಾಡಿಕೊಳ್ಳಿ

PUC Science ಫಲಿತಾಂಶ ಬಂದ ನಾಲ್ಕನೇ ವಾರ

  • ನೀವು ಆರಿಸಿರುವ ಕಾಲೇಜನ್ನು ಅಂತಿಮಗೊಳಿಸಿ
  • ಕಾಲೇಜಿಗೆ ದಾಖಲಾಗುವ ಮೂಲಕ ಪ್ರವೇಶ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ
  • ನಿಮಗೆ ಅಗತ್ಯವಿದ್ದಲ್ಲಿ ಹಾಸ್ಟೆಲ್ ಅಥವಾ ವಸತಿ ವ್ಯವಸ್ಥೆಯ ಬಗ್ಗೆ ಮಾಹಿತಿಯನ್ನು ಕಲೆಹಾಕಿ
  • ಮುಂದಿನ ಶೈಕ್ಷಣಿಕ ಅಧ್ಯಯನಕ್ಕೆ ಬೇಕಾಗುವಂತಹ ಮೂಲಭೂತ ಕೌಶಲ್ಯಗಳನ್ನು ಕಲಿತುಕೊಳ್ಳಿ

ಫಲಿತಾಂಶ ಬಂದ ನಂತರ ಮೊದಲ 30 ದಿನಗಳು ಸರಿಯಾದ ಯೋಜನೆ ರೂಪಿಸುವುದರಿಂದ ಉನ್ನತ ಶಿಕ್ಷಣದ ದಿಕ್ಕು ಹಾಗೂ ಜೀವನವನ್ನು ನಿರ್ಧರಿಸುವಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬಹುದಾಗಿರುತ್ತದೆ ಆದುದರಿಂದ ಈ ಹಂತದಲ್ಲಿ ಯಾವುದೇ ಕಾರಣಕ್ಕೂ ತಪ್ಪು ಮಾಡಬೇಡಿ.

ವಿದ್ಯಾರ್ಥಿಗಳ ಪೋಷಕರಿಗೆ ಸಲಹೆಗಳು

ವಿದ್ಯಾರ್ಥಿಗಳ ವೃತ್ತಿ ಆಯ್ಕೆಯಲ್ಲಿ ಪೋಷಕರ ಪಾತ್ರವು ಅತ್ಯಂತ ಪ್ರಮುಖವಾಗಿದೆ ಏಕೆಂದರೆ ವಿದ್ಯಾರ್ಥಿಗಳು ಶೈಕ್ಷಣಿಕ ಹುಮ್ಮಸ್ಸಿನಲ್ಲಿ ಹಲವು ಕೋರ್ಸ್ ಗಳನ್ನು ತೆಗೆದುಕೊಳ್ಳಲು ಇಷ್ಟಪಡುತ್ತಾರೆ ಹಾಗೂ ಸ್ನೇಹಿತರು ಸೇರುವ ಕಾಲೇಜುಗಳಿಗೆ ಸೇರಲು ಬಯಸುತ್ತಾರೆ ಆದರೆ ಪೋಷಕರು ಹಾಗೂ ವಿದ್ಯಾರ್ಥಿಗಳು ಕೆಲವು ಸಲಹೆಗಳನ್ನು ಖಂಡಿತವಾಗಿ ಪಾಲಿಸಬೇಕಾಗುತ್ತದೆ ಅವುಗಳು ಈ ಕೆಳಕಂಡಂತಿವೆ

ಪೋಷಕರಿಗೆ ಪ್ರಮುಖ ಸಲಹೆಗಳು

 

ಮಗುವಿನ ಆಸಕ್ತಿಗೆ ಆದ್ಯತೆ ನೀಡಬೇಕು

ವಿದ್ಯಾರ್ಥಿಗೆ ಯಾವ ವಿಷಯದಲ್ಲಿ ಆಸಕ್ತಿ ಇದೆ, ಯಾವ ವಿಷಯದಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ ಎಂಬ ಆಧಾರದ ಮೇಲೆ ಕೋರ್ಸ್ ಅನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನೀಡಿ ಆಸಕ್ತಿ ಇಲ್ಲದ ಅಥವಾ ಹೆಚ್ಚು ಬೇಡಿಕೆ ಇರುವ ಕೋರ್ಸ್ ಗೆ ಸೇರಲು ಒತ್ತಾಯಿಸಬೇಡಿ

ಹೋಲಿಕೆ ಮಾಡಬೇಡಿ

ಸಂಬಂಧಿಕರ ಮಕ್ಕಳು ಅಥವಾ ಸ್ನೇಹಿತರೊಂದಿಗೆ ಹೋಲಿಕೆ ಮಾಡುವುದರಿಂದ ವಿದ್ಯಾರ್ಥಿಗಳು ಆತ್ಮವಿಶ್ವಾಸ ಕಳೆದುಕೊಳ್ಳುತ್ತಾರೆ ಇದರಿಂದ ಉತ್ತಮ ರೀತಿಯ ಅಧ್ಯಯನ ಸಾಧ್ಯವಾಗದೇ ಇರಬಹುದು

ಅಂಕಗಳನ್ನು ಮಾತ್ರ ಮಾನದಂಡವಾಗಿಸಬೇಡಿ

ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು ಇಂಜಿನಿಯರಿಂಗ್ ವೈದ್ಯಕೀಯ ಹಾಗೂ ಇತರೆ ವೃತ್ತಿಪರ ಕೋರ್ಸ್ ಗಳನ್ನು ಓದಲೇಬೇಕು ಎನ್ನುವ ನಿರ್ಧಾರಕ್ಕೆ ಬರಬೇಡಿ ಅವರಿಗೆ ಆಸಕ್ತಿ ಇರುವ ವಿಷಯಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ನೀಡಿ

ಅಗತ್ಯವಿದ್ದಲ್ಲಿ ವೃತ್ತಿ ಮಾರ್ಗದರ್ಶನ ಪಡೆಯಿರಿ

ಆಯ್ಕೆ ಮಾಡುವ ಕೋರ್ಸಿಗೆ ಸಂಬಂಧಿಸಿದ ವೃತ್ತಿ ಮಾರ್ಗದರ್ಶಕರನ್ನು ಸಂಪರ್ಕಿಸಿ ಅವರಿಂದ ಸಲಹೆ ಹಾಗೂ ಮಾರ್ಗದರ್ಶನವನ್ನು ಪಡೆಯುವುದು ಉತ್ತಮವಾಗಿದೆ

ಮಾನಸಿಕ ಬೆಂಬಲ ನೀಡಿ

ಪೋಷಕರು ತಮ್ಮ ಮಕ್ಕಳ ಫಲಿತಾಂಶದ ಆಧಾರದ ಮೇಲೆ ಟೀಕಿಸುವ ಬದಲು ಅವರಿಗೆ ಆತ್ಮವಿಶ್ವಾಸ ತುಂಬಿ ಮಾನಸಿಕ ಬೆಂಬಲವನ್ನು ನೀಡಬೇಕು ಇದರಿಂದ ವಿದ್ಯಾರ್ಥಿಗಳು ಶೈಕ್ಷಣಿಕ ಆಸಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾರೆ

ಆರ್ಥಿಕ ಯೋಜನೆ ರೂಪಿಸಿ

ಕೋರ್ಸಿನ ಶುಲ್ಕ, ಪುಸ್ತಕಗಳು, ಹಾಸ್ಟೆಲ್ ವೆಚ್ಚ ಮತ್ತು ಶೈಕ್ಷಣಿಕ ಅವಧಿಯಲ್ಲಿ ಬರಬಹುದಾದ ಇತರೆ ಖರ್ಚುಗಳ ಬಗ್ಗೆ ಮುಂಚಿತವಾಗಿ ಯೋಜನೆಯನ್ನು ರಚಿಸಿ

 

ವಿದ್ಯಾರ್ಥಿಗಳು ಮತ್ತು ಪೋಷಕರು ಮಾಡುವ ಸಾಮಾನ್ಯ ತಪ್ಪುಗಳು

PUC Science ಫಲಿತಾಂಶ ಬಂದ ನಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಸಾಮಾನ್ಯ ತಪ್ಪುಗಳನ್ನು ಮಾಡುತ್ತಾರೆ ಇವು ಭವಿಷ್ಯದಲ್ಲಿ ಶಿಕ್ಷಣವನ್ನು ನಿಲ್ಲಿಸಲು ಅಥವಾ ಪರಿಣಾಮಕಾರಿ ರೀತಿಯಲ್ಲಿ ಉದ್ಯೋಗವನ್ನು ಪಡೆಯದೇ ಇರಲು ಕಾರಣವಾಗಬಹುದು ಆ ಕಾರಣಗಳು ಮತ್ತು ಸಾಮಾನ್ಯ ತಪ್ಪುಗಳು ಈ ಕೆಳಕಂಡಂತಿವೆ

ಸ್ನೇಹಿತರನ್ನು ಅನುಸರಿಸುವುದು

ಸ್ನೇಹಿತರು ಯಾವ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೋ ಅದೇ ಕೋರ್ಸನ್ನು ಆಯ್ದುಕೊಳ್ಳುವುದು ಹಾಗೂ ಅದೇ ಕಾಲೇಜುಗಳಲ್ಲಿ ದಾಖಲಾತಿ ಪಡೆಯುವುದು

ಉದ್ಯೋಗಾವಕಾಶಗಳ ಪರಿಶೀಲನೆ ಮಾಡದಿರುವುದು

ಕೆಲವು ವಿದ್ಯಾರ್ಥಿಗಳು ಕೋರ್ಸಿನ ಹೆಸರು ಹಾಗೂ ಅಲ್ಲಿನ ವ್ಯವಸ್ಥೆಗಳನ್ನು ಹೊಂದುವ ಆಸೆಗಳನ್ನು ಆಧಾರವಾಗಿಟ್ಟುಕೊಂಡು ಕೋರ್ಸ್ ಅನ್ನು ಆಯ್ಕೆ ಮಾಡುತ್ತಾರೆ ಆದರೆ ಸದರಿ ಕೋರ್ಸಿಗೆ ಉದ್ಯೋಗ ಬೇಡಿಕೆ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಬೇಕು

ಪ್ರವೇಶ ಪರೀಕ್ಷೆಗಳ ಮಹತ್ವವನ್ನು ಕಡೆಗಣಿಸುವುದು

ಕೆಲವು ಉತ್ತಮ ಕೋರ್ಸುಗಳನ್ನು ಪಡೆಯಲು ಸೀಟುಗಳ ಸಂಖ್ಯೆ ಕಡಿಮೆ ಇದ್ದಾಗ ಪ್ರವೇಶ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ ಈ ಪ್ರವೇಶ ಪರೀಕ್ಷೆಗಳನ್ನು ಕಡೆಗಣಿಸುತ್ತಾರೆ ಇದರಿಂದ ಅವಕಾಶಗಳನ್ನು ಕಳೆದುಕೊಳ್ಳಬಹುದು

ಕಾಲೇಜಿನ ಗುಣಮಟ್ಟ ಪರಿಶೀಲಿಸದಿರುವುದು

ಜಾಹೀರಾತು ನೋಡುವುದರ ಮೂಲಕ ಅಥವಾ ಕಡಿಮೆ ಶುಲ್ಕವನ್ನು ಪಾವತಿಸಬೇಕೆಂಬ ಅಂಶವನ್ನು ಆಧಾರವಾಗಿಟ್ಟುಕೊಂಡು ಕಾಲೇಜನ್ನು ಆಯ್ಕೆ ಮಾಡಬೇಡಿ

ಕೌಶಲ್ಯ ಅಭಿವೃದ್ಧಿಗೆ ಗಮನ ನೀಡದಿರುವುದು

ಇಂಗ್ಲಿಷ್ ಭಾಷೆ, ಸಂವಹನ, ಕಂಪ್ಯೂಟರ್ ಜ್ಞಾನ, ತಂಡದಲ್ಲಿ ಕೆಲಸ ಮಾಡುವ ಸಾಮರ್ಥ್ಯ ಹಾಗೂ ಸಮಸ್ಯೆಗೆ ಪರಿಹಾರವನ್ನು ಹುಡುಕುವಂತಹ ಕೌಶಲ್ಯವನ್ನು ಹೊಂದದೆ ಇದ್ದಲ್ಲಿ ಉದ್ಯೋಗವಕಾಶ ಪಡೆಯಲು ವಿಫಲವಾಗಬಹುದು

ಒಂದೇ ಆಯ್ಕೆ ಮೇಲೆ ಅವಲಂಬನೆ ಆಗುವುದು

ಕೇವಲ ಒಂದೇ ಕೋರ್ಸ್ ಅಥವಾ ಒಂದೇ ಕಾಲೇಜಿನ ಮೇಲೆ ಅವಲಂಬನೆಯನ್ನು ಮಾಡಿಕೊಳ್ಳುವುದಲ್ಲದೆ ಕನಿಷ್ಠ ಮೂರು ಕೋರ್ಸ್ ಹಾಗೂ ಮೂರು ಕಾಲೇಜುಗಳನ್ನು ಪರ್ಯಾಯ ಆಯ್ಕೆಗಳನ್ನಾಗಿ ಇಟ್ಟುಕೊಳ್ಳಿ

ಭವಿಷ್ಯದ ಬೆಳವಣಿಗೆಯನ್ನು ಕಡೆಗಣಿಸುವುದು

ಪೋಷಕರು ಹಾಗೂ ವಿದ್ಯಾರ್ಥಿಗಳು ಈ ಸಾಮಾನ್ಯ ತಪ್ಪನ್ನು ಮಾಡುತ್ತಾರೆ. ಪ್ರಸ್ತುತ ಉದ್ಯೋಗ ಮಾರುಕಟ್ಟೆಯಲ್ಲಿರುವ ಜನಪ್ರಿಯತೆಯನ್ನು ನೋಡಿ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಆದರೆ ಕೋರ್ಸ್ ಮುಗಿದ ನಂತರ ಉದ್ಯೋಗಾವಕಾಶವನ್ನು ಪಡೆಯಬೇಕಾದರೆ ಮುಂದಿನ ಐದರಿಂದ ಏಳು ವರ್ಷಗಳಲ್ಲಿ ಉದ್ಯೋಗ ಮಾರುಕಟ್ಟೆಯಲ್ಲಿ ಯಾವ ಹುದ್ದೆಗಳಿಗೆ ಹೆಚ್ಚಿನ ಬೇಡಿಕೆ ಇದೆ ಎಂಬುದನ್ನು ನಿರ್ಧರಿಸಬೇಕು

 

PUC Science ನಂತರ ಇರುವ ಪ್ರಮುಖ ಕೋರ್ಸುಗಳ ಸಂಪೂರ್ಣ ಪಟ್ಟಿ

ಎರಡು ವರ್ಷಗಳ PUC Science ಅಧ್ಯಯನದ ನಂತರ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದಾದ ಪ್ರಮುಖ ಕೋರ್ಸುಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ

ವೈದ್ಯಕೀಯ ಕೋರ್ಸುಗಳು (Medical Courses) 

  • MBBS (ವೈದ್ಯಕೀಯ ಪದವಿ ಮತ್ತು ಶಸ್ತ್ರಚಿಕಿತ್ಸಾ ಪದವಿ)
  • BDS (ದಂತ ಶಸ್ತ್ರಚಿಕಿತ್ಸಾ ಪದವಿ)
  • BAMS (ಆಯುರ್ವೇದ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಪದವಿ)
  • BHMS (ಹೋಮಿಯೋಪತಿ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಪದವಿ)
  • BUMS (ಯುನಾನಿ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಪದವಿ)
  • BSMS (ಸಿದ್ಧ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಪದವಿ)
  • BVSc (ಪಶುವೈದ್ಯಕೀಯ ವಿಜ್ಞಾನ ಪದವಿ)
  • BPT (ಫಿಸಿಯೋಥೆರಪಿ ಪದವಿ)
  • BASLP (ಆಡಿಯಾಲಜಿ ಮತ್ತು ಮಾತು-ಭಾಷಾ ಪಥಾಲಜಿ ಪದವಿ)
  • Optometry (ದೃಷ್ಟಿಮಾಪನ ಮತ್ತು ನೇತ್ರ ಆರೈಕೆ ವಿಜ್ಞಾನ)
  • B.Sc Nursing (ಬ್ಯಾಚುಲರ್ ಆಫ್ ಸೈನ್ಸ್ – ನರ್ಸಿಂಗ್)
  • Paramedical Courses (ಅರೆವೈದ್ಯಕೀಯ ಕೋರ್ಸ್‌ಗಳು)
  • Medical Laboratory Technology (ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನ)
  • Radiology Technology (ವಿಕಿರಣ ಚಿತ್ರಣ ತಂತ್ರಜ್ಞಾನ)
  • Operation Theatre Technology (ಶಸ್ತ್ರಚಿಕಿತ್ಸಾ ಕೊಠಡಿ ತಂತ್ರಜ್ಞಾನ)
  • Dialysis Technology (ಡಯಾಲಿಸಿಸ್ ತಂತ್ರಜ್ಞಾನ)
  • Emergency Medicine Technology (ತುರ್ತು ವೈದ್ಯಕೀಯ ತಂತ್ರಜ್ಞಾನ)

ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೋರ್ಸುಗಳು

  • BE (ಬ್ಯಾಚುಲರ್ ಆಫ್ ಎಂಜಿನಿಯರಿಂಗ್ – ಇಂಜಿನಿಯರಿಂಗ್ ಪದವಿ)
  • B.Tech (ಬ್ಯಾಚುಲರ್ ಆಫ್ ಟೆಕ್ನಾಲಜಿ – ತಂತ್ರಜ್ಞಾನ ಪದವಿ)
  • Computer Science Engineering (ಕಂಪ್ಯೂಟರ್ ವಿಜ್ಞಾನ ಮತ್ತು ಎಂಜಿನಿಯರಿಂಗ್)
  • Artificial Intelligence (ಕೃತಕ ಬುದ್ಧಿಮತ್ತೆ)
  • Data Science (ದತ್ತಾಂಶ ವಿಜ್ಞಾನ)
  • Cyber Security (ಸೈಬರ್ ಭದ್ರತೆ)
  • Robotics (ರೋಬೋಟಿಕ್ಸ್ ಮತ್ತು ಸ್ವಯಂಚಾಲಿತ ವ್ಯವಸ್ಥೆಗಳು)
  • Mechanical Engineering (ಯಾಂತ್ರಿಕ ಎಂಜಿನಿಯರಿಂಗ್)
  • Civil Engineering (ನಾಗರಿಕ ಎಂಜಿನಿಯರಿಂಗ್)
  • Electrical Engineering (ವಿದ್ಯುತ್ ಎಂಜಿನಿಯರಿಂಗ್)
  • Electronics & Communication Engineering (ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್)
  • Aerospace Engineering (ವಿಮಾನ ಮತ್ತು ಅಂತರಿಕ್ಷ ಎಂಜಿನಿಯರಿಂಗ್)
  • Aeronautical Engineering (ವಿಮಾನಯಾನ ಎಂಜಿನಿಯರಿಂಗ್)
  • Automobile Engineering (ಆಟೋಮೊಬೈಲ್ ಎಂಜಿನಿಯರಿಂಗ್)
  • Biotechnology Engineering (ಜೈವ ತಂತ್ರಜ್ಞಾನ ಎಂಜಿನಿಯರಿಂಗ್)
  • Chemical Engineering (ರಾಸಾಯನಿಕ ಎಂಜಿನಿಯರಿಂಗ್)
  • Environmental Engineering (ಪರಿಸರ ಎಂಜಿನಿಯರಿಂಗ್)

ವಿಜ್ಞಾನ ಪದವಿ ಕೋರ್ಸುಗಳು

  • B.Sc Physics (ಬ್ಯಾಚುಲರ್ ಆಫ್ ಸೈನ್ಸ್ – ಭೌತಶಾಸ್ತ್ರ)
  • B.Sc Chemistry (ಬ್ಯಾಚುಲರ್ ಆಫ್ ಸೈನ್ಸ್ – ರಸಾಯನಶಾಸ್ತ್ರ)
  • B.Sc Mathematics (ಬ್ಯಾಚುಲರ್ ಆಫ್ ಸೈನ್ಸ್ – ಗಣಿತಶಾಸ್ತ್ರ)
  • B.Sc Statistics (ಬ್ಯಾಚುಲರ್ ಆಫ್ ಸೈನ್ಸ್ – ಸಂಖ್ಯಾಶಾಸ್ತ್ರ)
  • B.Sc Computer Science (ಬ್ಯಾಚುಲರ್ ಆಫ್ ಸೈನ್ಸ್ – ಕಂಪ್ಯೂಟರ್ ವಿಜ್ಞಾನ)
  • B.Sc Electronics (ಬ್ಯಾಚುಲರ್ ಆಫ್ ಸೈನ್ಸ್ – ಎಲೆಕ್ಟ್ರಾನಿಕ್ಸ್)
  • B.Sc Biotechnology (ಬ್ಯಾಚುಲರ್ ಆಫ್ ಸೈನ್ಸ್ – ಜೈವ ತಂತ್ರಜ್ಞಾನ)
  • B.Sc Microbiology (ಬ್ಯಾಚುಲರ್ ಆಫ್ ಸೈನ್ಸ್ – ಸೂಕ್ಷ್ಮಜೀವಶಾಸ್ತ್ರ)
  • B.Sc Genetics (ಬ್ಯಾಚುಲರ್ ಆಫ್ ಸೈನ್ಸ್ – ಅನುವಂಶಿಕ ವಿಜ್ಞಾನ)
  • B.Sc Environmental Science (ಬ್ಯಾಚುಲರ್ ಆಫ್ ಸೈನ್ಸ್ – ಪರಿಸರ ವಿಜ್ಞಾನ)
  • B.Sc Forensic Science (ಬ್ಯಾಚುಲರ್ ಆಫ್ ಸೈನ್ಸ್ – ನ್ಯಾಯ ವಿಜ್ಞಾನ)
  • B.Sc Food Technology (ಬ್ಯಾಚುಲರ್ ಆಫ್ ಸೈನ್ಸ್ – ಆಹಾರ ತಂತ್ರಜ್ಞಾನ)

 

ಕೃಷಿ ಮತ್ತು ಸಂಬಂಧಿತ ಕೋರ್ಸುಗಳು

  • B.Sc Agriculture (ಬ್ಯಾಚುಲರ್ ಆಫ್ ಸೈನ್ಸ್ – ಕೃಷಿ ವಿಜ್ಞಾನ)
  • Horticulture (ತೋಟಗಾರಿಕೆ ವಿಜ್ಞಾನ)
  • Forestry (ಅರಣ್ಯ ವಿಜ್ಞಾನ)
  • Sericulture (ರೇಷ್ಮೆ ಕೃಷಿ ವಿಜ್ಞಾನ)
  • Dairy Technology (ಹೈನುಗಾರಿಕೆ ತಂತ್ರಜ್ಞಾನ)
  • Fisheries Science (ಮೀನುಗಾರಿಕೆ ವಿಜ್ಞಾನ)
  • Food Science (ಆಹಾರ ವಿಜ್ಞಾನ)
  • Agricultural Engineering (ಕೃಷಿ ಎಂಜಿನಿಯರಿಂಗ್)

 

ಫಾರ್ಮಸಿ

  • B.Pharm (ಬ್ಯಾಚುಲರ್ ಆಫ್ ಫಾರ್ಮಸಿ – ಔಷಧ ವಿಜ್ಞಾನ ಪದವಿ)
  • Pharm D (ಡಾಕ್ಟರ್ ಆಫ್ ಫಾರ್ಮಸಿ – ಔಷಧ ವಿಜ್ಞಾನ ವೈದ್ಯ ಪದವಿ)
  • D.Pharm (ಡಿಪ್ಲೊಮಾ ಇನ್ ಫಾರ್ಮಸಿ – ಔಷಧ ವಿಜ್ಞಾನ ಡಿಪ್ಲೊಮಾ)

 

ಕಂಪ್ಯೂಟರ್ ಮತ್ತು ಐಟಿ ಕ್ಷೇತ್ರದ ಕೋರ್ಸುಗಳು

  • BCA (ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ – ಕಂಪ್ಯೂಟರ್ ಅನ್ವಯಿಕೆಗಳ ಪದವಿ)
  • BCA (AI) (ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ – ಕೃತಕ ಬುದ್ಧಿಮತ್ತೆ)
  • BCA (Data Science) (ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ – ದತ್ತಾಂಶ ವಿಜ್ಞಾನ)
  • Cloud Computing (ಕ್ಲೌಡ್ ಕಂಪ್ಯೂಟಿಂಗ್ – ಮೇಘ ಗಣಕ ವ್ಯವಸ್ಥೆ)
  • Software Development (ಸಾಫ್ಟ್‌ವೇರ್ ಅಭಿವೃದ್ಧಿ)
  • Ethical Hacking (ನೈತಿಕ ಹ್ಯಾಕಿಂಗ್)
  • Networking (ಕಂಪ್ಯೂಟರ್ ಜಾಲತಾಣ ತಂತ್ರಜ್ಞಾನ)

 

ಇತರೆ ವೃತ್ತಿಪರ ಕೋರ್ಸುಗಳು

  • Architecture (B.Arch) (ಬ್ಯಾಚುಲರ್ ಆಫ್ ಆರ್ಕಿಟೆಕ್ಚರ್ – ವಾಸ್ತುಶಿಲ್ಪ ಪದವಿ)
  • Fashion Technology (ಫ್ಯಾಷನ್ ತಂತ್ರಜ್ಞಾನ)
  • Interior Design (ಒಳಾಂಗಣ ವಿನ್ಯಾಸ)
  • Aviation (ವಿಮಾನಯಾನ)
  • Hotel Management (ಹೋಟೆಲ್ ನಿರ್ವಹಣೆ)
  • Fire & Safety (ಅಗ್ನಿ ಮತ್ತು ಸುರಕ್ಷತಾ ನಿರ್ವಹಣೆ)
  • Animation (ಆನಿಮೇಷನ್ ಮತ್ತು ದೃಶ್ಯ ಪರಿಣಾಮಗಳು)
  • Multimedia (ಬಹುಮಾಧ್ಯಮ ತಂತ್ರಜ್ಞಾನ)
  • Graphic Design (ಗ್ರಾಫಿಕ್ ವಿನ್ಯಾಸ)
  • Industrial Design (ಕೈಗಾರಿಕಾ ವಿನ್ಯಾಸ)

 

ಪ್ರತಿಯೊಂದು ಕೋರ್ಸಿಗೆ ಅಗತ್ಯವಾದ ಕೋರ್ಸಿನ ಅವಧಿ ಮತ್ತು ಭವಿಷ್ಯ

ಕೋರ್ಸಿನ ಹೆಸರು ಕೋರ್ಸಿನ ಅವಧಿ ಭವಿಷ್ಯದ ಉದ್ಯೋಗಗಳು
MBBS ಕೋರ್ಸ್ 5.5 ವರ್ಷಗಳು ವೈದ್ಯರು
BDS ಕೋರ್ಸ್ 5 ವರ್ಷಗಳು ದಂತ ವೈದ್ಯರು
BAMS ಕೋರ್ಸ್ 5.5 ವರ್ಷಗಳು ಆಯುರ್ವೇದ ವೈದ್ಯರು
BHMS ಕೋರ್ಸ್ 5.5 ವರ್ಷಗಳು ಹೋಮಿಯೋಪತಿ ವೈದ್ಯರು
B.Sc Nursing ಕೋರ್ಸ್ 4 ವರ್ಷಗಳು ಆಸ್ಪತ್ರೆಗಳು
B.Pharm ಕೋರ್ಸ್ 4 ವರ್ಷಗಳು ಔಷಧ ಕಂಪನಿಗಳು
Pharm D ಕೋರ್ಸ್ 6 ವರ್ಷಗಳು ಕ್ಲಿನಿಕಲ್‌ ಫಾರ್ಮಾಸಿಸ್ಟ್
BE/B.Tech ಕೋರ್ಸ್ 4 ವರ್ಷಗಳು ಇಂಜಿನಿಯರ್
BCA ಕೋರ್ಸ್ 3-4 ವರ್ಷಗಳು ಸಾಫ್ಟ್‌ ವೇರ್‌ ವಲಯಗಳು
B.Sc Agriculture ಕೋರ್ಸ್ 4 ವರ್ಷಗಳು ಕೃಷಿ ಇಲಾಖೆ
B.Sc Biotechnology ಕೋರ್ಸ್ 3 ವರ್ಷಗಳು ಸಂಶೋಧನೆ
B.Sc Computer Science ಕೋರ್ಸ್ 3 ವರ್ಷಗಳು ಮಾಹಿತಿ ತಂತ್ರಜ್ಞಾನ ಉದ್ಯೋಗ
B.Arch ಕೋರ್ಸ್ 5 ವರ್ಷಗಳು ವಾಸ್ತುಶಿಲ್ಪಿ

 

PUC Science ನಂತರ ಮುಂದಿನ ಕೋರ್ಸುಗಳನ್ನು ಮಾಡಲು ಇರಬೇಕಾದ ಅರ್ಹತಾ ಮಾನದಂಡಗಳು

ವಿದ್ಯಾರ್ಥಿಗಳು ಕೋರ್ಸ್ ಅನ್ನು ಆಯ್ಕೆ ಮಾಡುವ ಮೊದಲು ಯಾವ ಯಾವ ಅರ್ಹತಮಾನದಂಡೆಗಳನ್ನು ಹೊಂದಬೇಕು ಎಂಬುದನ್ನು ಕುಲಂಕುಶವಾಗಿ ಪರಿಶೀಲಿಸಬೇಕಾಗುತ್ತದೆ ಪರಿಶೀಲಿಸದೆ ಇದ್ದಲ್ಲಿ ಅಥವಾ ವೃತ್ತಿ ಯೋಜನೆಯಲ್ಲಿ ಸಮಸ್ಯೆಯನ್ನು ಎದುರಿಸ ಬೇಕಾಗುತ್ತದೆ

ಶೈಕ್ಷಣಿಕ ಅರ್ಹತೆ

  • PUC Science ವಿಭಾಗದಲ್ಲಿ ಉತ್ತೀರ್ಣರಾಗಿರಬೇಕು
  • ಸಂಬಂಧಿತ ವಿಷಯಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆದಿರಬೇಕು
  • ವೈದ್ಯಕೀಯ ಕೋರ್ಸುಗಳಿಗೆ ಫಿಸಿಕ್ಸ್ ಕೆಮಿಸ್ಟ್ರಿ ಬಯಾಲಜಿ ಅಗತ್ಯ
  • ಕೆಲವು ಕೋರ್ಸುಗಳಲ್ಲಿ ಫಿಸಿಕ್ಸ್ ಕೆಮಿಸ್ಟ್ರಿ ಮ್ಯಾಥೆಮೆಟಿಕ್ಸ್ ಕಡ್ಡಾಯವಾಗಿರುತ್ತದೆ

ಪ್ರವೇಶ ಪರೀಕ್ಷೆಗಳು

ಈ ಕೆಳಕಂಡ ಕೋರ್ಸುಗಳಿಗೆ ದಾಖಲಾತಿಯನ್ನು ಪಡೆಯಲು ಪ್ರವೇಶ ಪರೀಕ್ಷೆಯನ್ನು ಬರೆಯುವುದು ಕಡ್ಡಾಯವಾಗಿದೆ ಅವುಗಳೆಂದರೆ

  • ವೈದ್ಯಕೀಯ ಕೋರ್ಸುಗಳು
  • ಇಂಜಿನಿಯರಿಂಗ್
  • ಆರ್ಕಿಟೆಕ್ಚರ್
  • ಕೃಷಿ ವಿಶ್ವವಿದ್ಯಾಲಯಗಳು
  • ಖಾಸಗಿ ವಿಶ್ವವಿದ್ಯಾಲಯಗಳು

ಅಗತ್ಯ ದಾಖಲೆಗಳು

  • ಎಸ್ ಎಸ್ ಎಲ್ ಸಿ ಅಂಕಪಟ್ಟಿ
  • ಪಿಯುಸಿ ಅಂಕಪಟ್ಟಿ
  • ವರ್ಗಾವಣೆ ಪ್ರಮಾಣ ಪತ್ರ
  • ವ್ಯಾಸಂಗ ಪ್ರಮಾಣ ಪತ್ರ
  • ಗುರುತಿನ ಚೀಟಿಯಾದ ಆಧಾರ್ ಕಾರ್ಡ್
  • ಜಾತಿ ಪ್ರಮಾಣ ಪತ್ರ (ಅಗತ್ಯವಿದ್ದಲ್ಲಿ)
  • ಆದಾಯ ಪ್ರಮಾಣ ಪತ್ರ
  • ಪಾಸ್ಪೋರ್ಟ್ ಸೈಜ್ ಭಾವಚಿತ್ರ
  • ಇತರೆ ಪ್ರಮುಖ ದಾಖಲೆಗಳು

ವೃತ್ತಿ ಗುರಿಗಳ ಆಧಾರದ ಮೇಲೆ ಅತ್ಯುತ್ತಮ ಕೋರ್ಸುಗಳ ಸಲಹೆ

ಪ್ರತಿಯೊಬ್ಬ ವಿದ್ಯಾರ್ಥಿಯು ವಿಭಿನ್ನವಾಗಿದ್ದು ಅವರು ನಿಗದಿಪಡಿಸುವ ಗುರಿಯೂ ಸಹ ಅಷ್ಟೇ ವಿಭಿನ್ನವಾಗಿರುತ್ತದೆ ಆದುದರಿಂದ ಗುರಿಗೆ ತಕ್ಕಂತಹ ಕೋರ್ಸ್ ಆಯ್ಕೆ ಮಾಡುವುದು ಸಹ ಪ್ರಮುಖವಾಗಿರುತ್ತದೆ ಯಾವ ಕೋರ್ಸ್ ಅನ್ನು ಓದಿದರೆ ಯಾವ ಉದ್ಯೋಗವನ್ನು ಪಡೆಯಬೇಕೆಂದು ಈ ಕೆಳಗಡೆ ನೀಡಲಾಗಿದೆ

ವೈದ್ಯರಾಗಬೇಕು ಎಂದರೆ

  • MBBS ಕೋರ್ಸ್
  • BDS‌ ಕೋರ್ಸ್
  • BAMS ಕೋರ್ಸ್
  • BHMS ಕೋರ್ಸ್
  • BPT ಕೋರ್ಸ್

ಸಾಫ್ಟ್‌ವೇರ್ ಉದ್ಯೋಗ ಬೇಕಾದರೆ

  • Computer Science Engineering
  • AI
  • Data Science
  • Cyber Security
  • BCA
  • B.Sc Computer Science

ಸರ್ಕಾರಿ ಉದ್ಯೋಗ ಗುರಿಯಾದರೆ

  • B.Sc
  • Agriculture
  • Engineering
  • Nursing
  • Pharmacy

ಈ ಪದವಿಗಳ ನಂತರ UPSC, KPSC, SSC, ಬ್ಯಾಂಕ್, ರೈಲ್ವೆ, ರಕ್ಷಣಾ ಪಡೆ, ಶಿಕ್ಷಕರ ನೇಮಕಾತಿ ಸೇರಿದಂತೆ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಬಹುದು.

ಸಂಶೋಧನಾ ಕ್ಷೇತ್ರಕ್ಕೆ ಹೋಗಬೇಕಾದರೆ

  • Biotechnology
  • Microbiology
  • Genetics
  • Physics
  • Chemistry
  • Mathematics

ಮುಂದೆ M.Sc, Ph.D. ಮಾಡಿ ಸಂಶೋಧನಾ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ವೃತ್ತಿ ನಿರ್ಮಿಸಬಹುದು.

ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಇದ್ದರೆ

  • Agriculture
  • Horticulture
  • Forestry
  • Dairy Science
  • Fisheries

 

PUC Science ನಂತರ ಲಭ್ಯವಿರುವ ಉದ್ಯೋಗದ ವಲಯಗಳು

PUC Science ಅನ್ನು ಅಧ್ಯಯನ ಮಾಡಿದ ನಂತರ ಆಯ್ಕೆ ಮಾಡುವ ಕೋರ್ಸ್ಗೆ ಅನುಗುಣವಾಗಿ ಅನೇಕ ಕ್ಷೇತ್ರಗಳಲ್ಲಿ ಉದ್ಯೋಗವನ್ನು ಪಡೆಯಬಹುದು ವಿಜ್ಞಾನ ವಿಭಾಗವು ಒಂದು ವಿಶೇಷ ವಿಭಾಗವಾಗಿದ್ದು ವಿಜ್ಞಾನ ವಿಭಾಗದಲ್ಲಿ ಓದಿದವರು ಕಲೆ ಮತ್ತು ವಾಣಿಜ್ಯ ವಿಷಯಗಳಲ್ಲಿಯೂ ಸಹ ಉದ್ಯೋಗವನ್ನು ಪಡೆಯಬಹುದಾಗಿರುತ್ತದೆ

ಆರೋಗ್ಯ ಕ್ಷೇತ್ರ

  • ಆಸ್ಪತ್ರೆಗಳು
  • ವೈದ್ಯಕೀಯ ಕಾಲೇಜುಗಳು
  • ಡಯಾಗ್ನೋಸ್ಟಿಕ್ ಸೆಂಟರ್
  • ಲ್ಯಾಬ್
  • ಫಾರ್ಮಸಿ

ಮಾಹಿತಿ ತಂತ್ರಜ್ಞಾನ

  • Software Companies
  • AI Companies
  • Data Analytics
  • Cloud Computing
  • Cyber Security Firms
  • Startup Companies

ಸರ್ಕಾರಿ ಇಲಾಖೆ

  • ಆರೋಗ್ಯ ಇಲಾಖೆ
  • ಕೃಷಿ ಇಲಾಖೆ
  • ಲೋಕೋಪಯೋಗಿ ಇಲಾಖೆ
  • ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ
  • ISRO
  • DRDO
  • BHEL
  • BEL
  • HAL
  • Railways
  • Banking Sector

ಖಾಸಗಿ ಉದ್ಯಮ

  • Manufacturing Companies
  • Automobile Industry
  • Pharmaceutical Companies
  • Construction Companies
  • FMCG Industry
  • Biotechnology Companies

2026ರಲ್ಲಿ ಹೆಚ್ಚು ಬೇಡಿಕೆ ಇರುವ ಪಿಯುಸಿ ಸೈನ್ಸ್ ನಂತರದ ಕೋರ್ಸುಗಳು

Artificial Intelligence ಕೋರ್ಸ್

AI Engineer, Prompt Engineer, Machine Learning Engineer ಮುಂತಾದ ಉದ್ಯೋಗಗಳಿಗೆ ಉತ್ತಮ ಅವಕಾಶಗಳಿವೆ.

Data Science‌ ಕೋರ್ಸ್

ಮಾಹಿತಿ ವಿಶ್ಲೇಷಣೆ, Business Intelligence ಹಾಗೂ Predictive Analytics ಕ್ಷೇತ್ರದಲ್ಲಿ ಪರಿಣಿತರಿಗೆ ಹೆಚ್ಚಿನ ಬೇಡಿಕೆ ಇದೆ.

Cyber Security ಕೋರ್ಸ್

ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಸೈಬರ್ ಭದ್ರತಾ ತಜ್ಞರ ಅಗತ್ಯ ನಿರಂತರವಾಗಿ ಹೆಚ್ಚುತ್ತಿದೆ.

Robotics ಕೋರ್ಸ್

Automation ಹಾಗೂ Industry 4.0 ಬೆಳವಣಿಗೆಯಿಂದ Robotics ಕ್ಷೇತ್ರವು ವೇಗವಾಗಿ ಬೆಳೆಯುತ್ತಿದೆ.

Biotechnology ಕೋರ್ಸ್

ವೈದ್ಯಕೀಯ, ಔಷಧೋದ್ಯಮ, ಕೃಷಿ ಮತ್ತು ಸಂಶೋಧನಾ ಕ್ಷೇತ್ರಗಳಲ್ಲಿ ಉತ್ತಮ ಅವಕಾಶಗಳಿವೆ.

Renewable Energy ಕೋರ್ಸ್

Solar Energy, Wind Energy ಮತ್ತು Green Technology ಕ್ಷೇತ್ರಗಳಲ್ಲಿ ಹೊಸ ಉದ್ಯೋಗಗಳು ಹೆಚ್ಚಾಗುತ್ತಿವೆ.

Semiconductor Technology ಕೋರ್ಸ್

ಚಿಪ್ ತಯಾರಿಕೆ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಷೇತ್ರದಲ್ಲಿ ಭಾರತದಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗುತ್ತಿವೆ.

Healthcare ಕೋರ್ಸ್

ವೈದ್ಯರು, ನರ್ಸ್‌ಗಳು, ಫಾರ್ಮಸಿಸ್ಟ್‌ಗಳು, ಫಿಸಿಯೋಥೆರಪಿಸ್ಟ್‌ಗಳು ಹಾಗೂ ಪ್ಯಾರಾಮೆಡಿಕಲ್ ಸಿಬ್ಬಂದಿಗೆ ಮುಂದಿನ ವರ್ಷಗಳಲ್ಲಿಯೂ ಹೆಚ್ಚಿನ ಬೇಡಿಕೆ ಇರಲಿದೆ.

 

ಸರಿಯಾದ ಕೋರ್ಸನ ಆಯ್ಕೆ ಮಾಡುವಾಗ ಗಮನಿಸಬೇಕಾದ ಪ್ರಮುಖ ಅಂಶಗಳು

ಯಾವುದೇ ಕೋರ್ಸನ್ನು ಆಯ್ಕೆ ಮಾಡಿಕೊಳ್ಳುವ ಮೊದಲು ಈ ಕೆಳಕಂಡ ಪ್ರಶ್ನೆಗಳಿಗೆ ನಿಮ್ಮನ್ನು ನೀವು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಬೇಕಾಗುತ್ತದೆ ಅವುಗಳೆಂದರೆ

  • ಆಯ್ಕೆ ಮಾಡಿಕೊಳ್ಳುತ್ತಿರುವ ಕೋರ್ಸ್ ನಲ್ಲಿ ನನಗೆ ಆಸಕ್ತಿ ಇದೆಯೇ
  • ಮುಂದಿನ ವರ್ಷಗಳಲ್ಲಿಯೂ ಸಹ ಈ ಉದ್ಯೋಗ ವಲಯಕ್ಕೆ ಬೇಡಿಕೆ ಇರುತ್ತದೆಯೇ
  • ಸದರಿ ಕೋರ್ಸಿನ ನಂತರ ಉನ್ನತ ಶಿಕ್ಷಣದ ಅವಕಾಶಗಳು ಇವೆಯೇ
  • ಈ ಕೋರ್ಸ್ ಅನ್ನು ಮುಗಿಸಿದ ನಂತರ ಉದ್ಯೋಗ ದೊರೆಯುವ ಸಾಧ್ಯತೆ ಎಷ್ಟಿದೆ
  • ಖಾಸಗಿ ಮತ್ತು ಸರ್ಕಾರಿ ಕ್ಷೇತ್ರ ಎರಡರಲ್ಲೂ ಅವಕಾಶಗಳು ಸಿಗುತ್ತವೆಯೇ
  • ಪಾವತಿಸಬೇಕಾದ ಶೈಕ್ಷಣಿಕ ಶುಲ್ಕವು ನನ್ನ ಕುಟುಂಬದ ಆರ್ಥಿಕ ಪರಿಸ್ಥಿತಿಗೆ ಹೊಂದಾಣಿಕೆಯಾಗುತ್ತದೆಯೇ
  • ಉದ್ಯಮದಲ್ಲಿ ಅಗತ್ಯವಿರುವ ಕೌಶಲ್ಯಗಳನ್ನು ಈ ಕಾಲೇಜಿನಲ್ಲಿ ಕಲಿಸುತ್ತಾರೆ
  • ಕಾಲೇಜಿನ ಗುಣಮಟ್ಟ ಉತ್ತಮವಾಗಿದೆಯೇ

 

PUC Science ನಂತರದಲ್ಲಿ ಹುಡುಗಿಯರಿಗೆ ಇರುವ ಅತ್ಯುತ್ತಮ ಕೋರ್ಸುಗಳು

ಇಂದಿನ ದಿನಗಳಲ್ಲಿ ಹುಡುಗಿಯರು ಸಹ ಹುಡುಗರಷ್ಟೇ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಹ ಯಶಸ್ಸನ್ನು ಸಾಧಿಸುತ್ತಿದ್ದು ಕೋರ್ಸಿನ ಆಯ್ಕೆಯು ಲಿಂಗದ ಅದರ ಮೇಲೆ ಅಲ್ಲದೆ ಆಸಕ್ತಿ ಸಾಮರ್ಥ್ಯ ಹಾಗೂ ಕೌಶಲ್ಯವನ್ನು ಆದರಿಸಿದೆ ಈ ಮೇಲಿನ ಅಂಶಗಳನ್ನು ಆಧರಿಸಿ ಕೋರ್ಸನ್ನು ಆಯ್ಕೆ ಮಾಡುವುದು ಉತ್ತಮವಾಗಿದೆ

ಎಂ ಬಿ ಬಿ ಎಸ್

ವೈದ್ಯಕೀಯ ಕ್ಷೇತ್ರದಲ್ಲಿ ಶಿಕ್ಷಣ ಪಡೆಯುವ ಹಾಗೂ ಸೇವೆ ಸಲ್ಲಿಸುವ ಅವಕಾಶವನ್ನು ಬಯಸುವವರಿಗೆ ಅತ್ಯುತ್ತಮ ಆಯ್ಕೆಯಾಗಿದೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಸಂಶೋಧನಾ ಸಂಸ್ಥೆಗಳು ಮತ್ತು ಕ್ಲಿನಿಕ್ ಗಳಲ್ಲಿ ಉದ್ಯೋಗಾವಕಾಶವನ್ನು ಪಡೆಯಬಹುದಾಗಿರುತ್ತದೆ

ಬಿ ಎಸ್ ಸಿ (ನರ್ಸಿಂಗ್)

ಆರೋಗ್ಯ ಸೇವಾ ಕ್ಷೇತ್ರದಲ್ಲಿ ನಿರಂತರವಾಗಿ ಹೆಚ್ಚುತ್ತಿರುವ ಬೇಡಿಕೆ ಕೋರ್ಸ್ ಆಗಿದ್ದು ಭಾರತದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಸಹ ಉತ್ತಮ ಉದ್ಯೋಗಾವಕಾಶಗಳು ಈ ಕೋರ್ಸ್ ಮಾಡಿದವರಿಗೆ ಇದೆ

ಬಿ ಫಾರ್ಮ / ಡಿ ಫಾರ್ಮ

ಔಷಧಗಳ ತಯಾರಿಕೆ, ಆಸ್ಪತ್ರೆಗಳು, ಸಂಶೋಧನಾ ಕೇಂದ್ರಗಳು ಹಾಗೂ ಔಷಧಗಳನ್ನು ಉತ್ಪಾದಿಸುವ ಕಂಪನಿಗಳಲ್ಲಿ ಉದ್ಯೋಗವನ್ನು ಪಡೆಯಬಹುದು

ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್

ಸಾಫ್ಟ್ವೇರ್ ಗಳ ಅಭಿವೃದ್ಧಿ, ಕೃತಕ ಬುದ್ಧಿಮತ್ತೆ, ಮಾಹಿತಿ ವಿಜ್ಞಾನ ಹಾಗೂ ಸೈಬರ್ ಸೆಕ್ಯೂರಿಟಿ ಕ್ಷೇತ್ರಗಳಲ್ಲಿ ಉತ್ತಮ ಉದ್ಯೋಗಾವಕಾಶವನ್ನು ಹಾಗೂ ಬೆಳವಣಿಗೆಯನ್ನು ಹೊಂದಬಹುದು

ಬಯೋ ಟೆಕ್ನಾಲಜಿ

ಸಂಶೋಧನೆ, ಕೃಷಿ, ಔಷಧೋದ್ಯಮ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಬೆಳೆಯುತ್ತಿರುವ ವೃತ್ತಿ ಇದಾಗಿದ್ದು ಉತ್ತಮ ಹಾಗೂ ಆಕರ್ಷಕ ವೇತನವನ್ನು ಈ ಉದ್ಯೋಗಗಳು ನೀಡುತ್ತವೆ

ಬಿ ಸಿ ಎ

ಐಟಿ ಕ್ಷೇತ್ರದಲ್ಲಿ ಉದ್ಯೋಗವನ್ನು ಬಯಸುವವರಿಗೆ ಈ ಕೋರ್ಸ್ ಉತ್ತಮ ಆಯ್ಕೆಯಾಗಿದ್ದು ಎಂ ಸಿ ಎ ಅಥವಾ ವಿಶೇಷ ತಂತ್ರಜ್ಞಾನ ಪ್ರಮಾಣಪತ್ರಗಳನ್ನು ಪಡೆದರೆ ಸುಲಭವಾಗಿ ಉದ್ಯೋಗವನ್ನು ಪಡೆಯಬಹುದು

ಬಿ ಪಿ ಟಿ (ಫಿಜಿಯೋಥೆರಪಿ)

ಕ್ರೀಡಾ ಸಂಸ್ಥೆಗಳು, ವೈದ್ಯಕೀಯ ಕ್ಷೇತ್ರ, ಆಸ್ಪತ್ರೆಗಳು ಹಾಗೂ ದೈಹಿಕ ಪುನರ್ವಸತಿ ಕೇಂದ್ರಗಳಲ್ಲಿ ಉತ್ತಮ ಉದ್ಯೋಗಾವಕಾಶವನ್ನು ಪಡೆಯಬಹುದು

ಕೃಷಿ

ಕೃಷಿ ವಿಜ್ಞಾನ, ಆಹಾರ ಸಂಸ್ಕರಣೆ, ತೋಟಗಾರಿಕೆ ಇಲಾಖೆ ಹಾಗೂ ಇತರೆ ಸರಕಾರ ಇಲಾಖೆಗಳಲ್ಲಿ ಉದ್ಯೋಗಗಳನ್ನು ಪಡೆಯಬಹುದು

ಆರ್ಕಿಟೆಕ್ಚರ್

ಸೃಜನಶೀಲ ಕೌಶಲ್ಯ ಹಾಗೂ ತಾಂತ್ರಿಕ ಜ್ಞಾನ ಹೊಂದಿರುವ ಅಭ್ಯರ್ಥಿಗಳು ಈ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು

ಡಾಟಾ ಸೈನ್ಸ್

ಇಂದಿನ ದಿನಗಳಲ್ಲಿ ತ್ವರಿತ ಗತಿಯಲ್ಲಿ ಹಾಗೂ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಉದ್ಯೋಗ ಕ್ಷೇತ್ರಗಳಲ್ಲಿ ಇದು ಒಂದು ಆಗಿದ್ದು ಉತ್ತಮ ಉದ್ಯೋಗಾವಕಾಶಗಳನ್ನು ಇಂದು ಮತ್ತು ಭವಿಷ್ಯದಲ್ಲಿ ಸೃಷ್ಟಿಸುತ್ತದೆ

PUC Science ನಂತರ ತಿಂಗಳಿಗೆ 40,000 ಹೆಚ್ಚು ಸಂಬಳ ನೀಡಬಹುದಾದ ಕೋರ್ಸುಗಳು

ಯಾವುದೇ ಕೋರ್ಸ್ ಆಗಲಿ ಪೂರ್ಣಗೊಳಿಸಿದ ನಂತರವೇ ತಕ್ಷಣದಲ್ಲಿ ಎಲ್ಲರಿಗೂ ರೂ. 40,000 ರೂಗಳಿಗಿಂತ ಹೆಚ್ಚು ಸಂಬಳವನ್ನು ನೀಡುವ ಉದ್ಯೋಗಗಳನ್ನು ಹುಡುಕಲು ಹಾಗೂ ಸೃಷ್ಟಿಸಲು ಸಾಧ್ಯವಿಲ್ಲ ಆದರೆ ಸೇವಾ ಅವಧಿ ಉತ್ತಮಗೊಂಡ ನಂತರ ಹಾಗೂ ಉತ್ತಮ ಕೌಶಲ್ಯ ಅನುಭವ ಮತ್ತು ಸೂಕ್ತ ಸಂಸ್ಥೆಗಳಲ್ಲಿ ಉದ್ಯೋಗವನ್ನು ಪಡೆದರೆ ಆದಾಯದ ಮಟ್ಟವನ್ನು ಹೆಚ್ಚಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಹೆಚ್ಚು ಸಂಬಳ ನೀಡಬಹುದಾದ ಕೋರ್ಸುಗಳ ಪಟ್ಟಿ ಈ ಕೆಳಕಂಡಂತಿದೆ

  • MBBS
  • Computer Science Engineering
  • Artificial Intelligence
  • Data Science
  • Cyber Security
  • Software Engineering
  • B.Pharm + ಅನುಭವ
  • Pharm D
  • Aerospace Engineering
  • Robotics Engineering
  • Biotechnology
  • B.Arch
  • Petroleum Engineering
  • Electronics Engineering

ಸಲಹೆ: ಸಂಬಳವು ಕಾಲೇಜಿನ ಗುಣಮಟ್ಟ, ಕೌಶಲ್ಯ, ಇಂಟರ್ನ್‌ಶಿಪ್, ಸ್ಥಳ ಮತ್ತು ಕಂಪನಿಯ ಮೇಲೆ ಅವಲಂಬಿತವಾಗಿರುತ್ತದೆ.

ಕೋರ್ಸನ್ನು ಆಯ್ಕೆ ಮಾಡುವ ಮೊದಲು ಪರಿಶೀಲಿಸಬೇಕಾದ ಚೆಕ್‌ ಲಿಸ್ಟ್

  • ನಾನು ಆಯ್ಕೆ ಮಾಡಿಕೊಂಡಿರುವ ವಿಷಯದಲ್ಲಿ ನಿಜವಾಗಿಯೂ ನನಗೆ ಆಸಕ್ತಿ ಇದೆಯೇ‌
  • ನಾನು ಓದಬೇಕೆಂದುಕೊಂಡಿರುವ ಕೋರ್ಸಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇದೆಯೇ
  • ಕೋರ್ಸ್ ಅನ್ನು ಓದಲು ಶುಲ್ಕ ಮತ್ತು ಇತರ ವೆಚ್ಚಗಳನ್ನು ಅಂದಾಜು ಮಾಡಿದ್ದೇನೆಯೇ
  • ಮಾನ್ಯತೆ ಪಡೆದ ಕಾಲೇಜು ಅನ್ನು ಆಯ್ಕೆ ಮಾಡಿಕೊಂಡಿದ್ದೇನೆಯೇ
  • ಉದ್ಯೋಗಾವಕಾಶ ಹಾಗೂ ಉನ್ನತ ಶಿಕ್ಷಣದ ಅವಕಾಶಗಳನ್ನು ಪರಿಶೀಲಿಸಿದ್ದೇನೆಯೇ
  • ವಿದ್ಯಾರ್ಥಿ ವೇತನ ಹಾಗೂ ಶಿಕ್ಷಣ ಸಾಲದ ಬಗ್ಗೆ ಮಾಹಿತಿ ಇದೆಯೇ
  • ಸದರಿ ಕೋರ್ಸ್ ಮುಗಿದ ನಂತರ ಇಂಟರ್ನ್ ಶಿಪ್ ಅವಕಾಶಗಳು ಇವೆಯೇ‌
  • ಕಾಲೇಜಿನಲ್ಲಿ ಪ್ಲೇಸ್ ಮೆಂಟ್ ದಾಖಲೆ ಹೇಗಿದೆ
  • ಓದುತ್ತಿರುವ ಕೋರ್ಸಿನ ಪಠ್ಯಕ್ರಮ ಹಾಗೂ ವಾಸ್ತವದಲ್ಲಿ ಬೇಡಿಕೆ ಇರುವ ವಿಷಯಗಳಿಗೆ ಹೊಂದಾಣಿಕೆ ಇದೆಯೇ‌
  • ಕುಟುಂಬದ ಇತರ ಸದಸ್ಯರೊಂದಿಗೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಂಡಿದ್ದೇನೆ

PUC Science ನಂತರದ ಪ್ರಮುಖ ಎರಡು ಕೋರ್ಸ್ಗಳ ನಡುವಿನ ಹೋಲಿಕೆ

ಅಂಶಗಳು MBBS (ವೈದ್ಯಕೀಯ) BE/B.Tech (ತಂತ್ರಜ್ಞಾನ)
ಕೋರ್ಸಿನ ಅವಧಿ 5.5 ವರ್ಷಗಳು 4 ವರ್ಷಗಳು
ಮುಖ್ಯ ಕ್ಷೇತ್ರ ಆರೋಗ್ಯ ಕ್ಷೇತ್ರ ತಂತ್ರಜ್ಞಾನ ಕ್ಷೇತ್ರ
ಉದ್ಯೋಗ ವೈದ್ಯರು ಇಂಜಿನಿಯರ್
ಉನ್ನತ ಶಿಕ್ಷಣ MD/MS M.Tech
ಸರ್ಕಾರಿ ಅವಕಾಶ ಹೆಚ್ಚು ಹೆಚ್ಚು
ಖಾಸಗಿ ಅವಕಾಶ ಹೆಚ್ಚು ಹೆಚ್ಚು
ಸ್ವಯಂ ಉದ್ಯೋಗ ಕ್ಲಿನಿಕ್ Startup

 

PUC Science ನಂತರದ ಕೆರಿಯರ್ ರೋಡ್ ಮ್ಯಾಪ್

ಹಂತ- 1

PUC Science ಕೋರ್ಸನ್ನು ಪೂರ್ಣಗೊಳಿಸಿ.

ಹಂತ- 2

ನಿಮ್ಮ ಆಸಕ್ತಿ ಮತ್ತು ಸಾಮರ್ಥ್ಯವನ್ನು ಗುರುತಿಸಿ.

ಹಂತ- 3

ನಿಮಗೆ ಸರಿಯಾದ ಕೋರ್ಸ್ ಆಯ್ಕೆ ಮಾಡಿ.

ಹಂತ- 4

ಗುಣಮಟ್ಟದ ಉತ್ತಮ ಕಾಲೇಜಿನಲ್ಲಿ ಪ್ರವೇಶ ಪಡೆಯಿರಿ.

ಹಂತ- 5

ಇಂಟರ್ನ್‌ಶಿಪ್ ಮತ್ತು ಪ್ರಾಜೆಕ್ಟ್ ಅನುಭವಗಳನ್ನು ಪಡೆಯಿರಿ.

ಹಂತ- 6

ಸಂವಹನ ಕೌಶಲ್ಯ, ತಾಂತ್ರಿಕ ಕೌಶಲ್ಯ ಮತ್ತು ಡಿಜಿಟಲ್ ಕೌಶಲ್ಯಗಳನ್ನು ಪರಿಣಾಮಕಾರಿಯಾಗಿ ಬೆಳೆಸಿಕೊಳ್ಳಿ.

ಹಂತ- 7

ಕ್ಯಾಂಪಸ್ ಪ್ಲೇಸ್ಮೆಂಟ್ ಅಥವಾ ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ವೃತ್ತಿ ಗುರಿಗಳನ್ನು ಆರಂಭಿಸಿ.

ಹಂತ- 8

ಉನ್ನತ ಶಿಕ್ಷಣ, ಪ್ರಮಾಣಪತ್ರ ಕೋರ್ಸುಗಳು ಅಥವಾ ಸ್ವಯಂ ಉದ್ಯಮದ ಮೂಲಕ ವೃತ್ತಿ ಬೆಳವಣಿಗೆ ಸಾಧಿಸಿ ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಳ್ಳಿ

 

ಕರ್ನಾಟಕದಲ್ಲಿರುವ ಪ್ರಮುಖ ಸರ್ಕಾರಿ ಶಿಕ್ಷಣ ಸಂಸ್ಥೆಗಳು

ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲು ಹಾಗೂ ಪರಿಣಾಮಕಾರಿ ರೀತಿಯಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಕೆಲವು ಸರ್ಕಾರಿ ಪ್ರಮುಖ ಶಿಕ್ಷಣ ಸಂಸ್ಥೆಗಳು ಕರ್ನಾಟಕ ರಾಜ್ಯದಲ್ಲಿವೆ ಅವುಗಳ ಪಟ್ಟಿ ಈ ಕೆಳಕಂಡಂತಿದೆ

  • Visvesvaraya Technological University (VTU) (ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ)
  • Bangalore University (ಬೆಂಗಳೂರು ವಿಶ್ವವಿದ್ಯಾಲಯ)
  • University of Mysore (ಮೈಸೂರು ವಿಶ್ವವಿದ್ಯಾಲಯ)
  • Karnataka State Open University (ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ)
  • University of Agricultural Sciences, Bengaluru (ಬೆಂಗಳೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ)
  • University of Agricultural Sciences, Dharwad (ಧಾರವಾಡ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ)
  • Rajiv Gandhi University of Health Sciences (RGUHS) (ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ)
  • Karnataka Veterinary, Animal and Fisheries Sciences University (ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ)
  • National Institute of Technology Karnataka (NITK) (ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ, ಕರ್ನಾಟಕ)
  • Indian Institute of Science (IISc Bengaluru) (ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರು)

ಜೀವನದ ಯಶಸ್ವಿಗೆ ಅಗತ್ಯವಾದ ಕೌಶಲ್ಯಗಳು

  • ಸಂವಹನ ಕೌಶಲ್ಯ
  • ಇಂಗ್ಲೀಷ್ ಭಾಷಾಜ್ಞಾನ
  • ಕಂಪ್ಯೂಟರ್ ಜ್ಞಾನ
  • ಕೃತಕ ಬುದ್ಧಿಮತ್ತೆಯ ಬಗ್ಗೆ ಇರುವ ಮೂಲಭೂತ ಅರಿವು
  • ಮಾಹಿತಿ ವಿಶ್ಲೇಷಣೆ
  • ಪ್ರೆಸೆಂಟೇಶನ್ ಕೌಶಲ್ಯ
  • ತಂಡದ ಕಾರ್ಯನಿರ್ವಹಣೆ
  • ನಾಯಕತ್ವ ಗುಣಗಳು
  • ಸಮಯ ನಿರ್ವಹಣೆ
  • ಪರಿಹಾರಗಳನ್ನು ಹುಡುಕುವ ಕೌಶಲ್ಯ
  • ಉತ್ತಮ ರೀತಿಯ ಯೋಚನೆ ಮಾಡುವುದು
  • ಸಂದರ್ಶನ ಕೌಶಲ್ಯ
  • ರೆಸ್ಯೂಮ್ ತಯಾರಿ ಮಾಡುವುದು
  • ಡಿಜಿಟಲ್ ಜ್ಞಾನ ಹೊಂದಿಕೊಳ್ಳುವ ಸಾಮರ್ಥ್ಯ

PUC Science ನಂತರದ ವಿದ್ಯಾರ್ಥಿಗಳು ಮಾಡುವ ಸಾಮಾನ್ಯ ತಪ್ಪುಗಳು

  • ಸ್ನೇಹಿತರನ್ನು ಅನುಸರಿಸಿ ಕೋರ್ಸುಗಳ ಆಯ್ಕೆ ಮಾಡುವುದು
  • ಕಾಲೇಜಿನ ಮಾನ್ಯತೆಯನ್ನು ಪರಿಶೀಲಿಸದೆ ಇರುವುದು
  • ಕಾಲೇಜಿನ ಪ್ಲೇಸ್ಮೆಂಟ್ ದಾಖಲೆಗಳ ಬಗ್ಗೆ ಗಮನ ವಹಿಸದೆ ಇರುವುದು
  • ಕೌಶಲ್ಯಾಭಿವೃದ್ಧಿಯನ್ನು ಕಡೆಗಣಿಸುವುದು
  • ಪ್ರವೇಶ ಪರೀಕ್ಷೆಗಳ ಸಿದ್ಧತೆಯನ್ನು ವಿಳಂಬ ಮಾಡುವುದು
  • ಒಂದೇ ಕೋರ್ಸ್ ಮೇಲೆ ಅವಲಂಬಿತರಾಗುವುದು
  • ವಿದ್ಯಾರ್ಥಿ ವೇತನಗಳ ಬಗ್ಗೆ ಮಾಹಿತಿ ಸಂಗ್ರಹಿಸದೆ ಇರುವುದು
  • ದೀರ್ಘಕಾಲದ ವೃತ್ತಿ ಗುರಿಯನ್ನು ನಿರ್ಧರಿಸಿದೆ ಅಲ್ಪಾವಧಿ ಗುರುಗಳನ್ನು ನಿರ್ಧರಿಸುವುದು

ತಜ್ಞರ ಸಲಹೆಗಳು

  • ನಿಮ್ಮ ಆಸಕ್ತಿಯು ನಿಮಗೆ ಉತ್ತಮ ವೃತ್ತಿ ದಾರಿಯನ್ನು ತೋರಿಸುತ್ತದೆ
  • ಹೆಚ್ಚು ಬೇಡಿಕೆ ಇರುವ ಕ್ಷೇತ್ರಗಳಲ್ಲಿ ಅಧ್ಯಯನ ಮಾಡಿ
  • ಪದವಿಯೊಂದೇ ಅಲ್ಲದೆ ಉದ್ಯಮದಲ್ಲಿ ಬೇಕಾಗುವ ಕೌಶಲ್ಯಗಳನ್ನು ಕಾಲೇಜಿನ ಅಧ್ಯಯನ ಸಮಯದಲ್ಲೇ ಕಲಿತುಕೊಳ್ಳಿ
  • ಪ್ರಮಾಣ ಪತ್ರ ಕೋರ್ಸುಗಳನ್ನು ಹೆಚ್ಚಾಗಿ ಮಾಡಿ
  • ಇಂಟರ್ನ್ ಶಿಪ್ ಅನುಭವವನ್ನು ಗಂಭೀರವಾಗಿ ಪರಿಗಣಿಸಿ
  • ವೃತ್ತಿ ಮಾರ್ಗದರ್ಶಕರ ಸಲಹೆಯನ್ನು ಪಡೆಯಲು ಹಿಂಜರಿಯಬೇಡಿ
  • ನಿರಂತರವಾಗಿ ಕಲಿಯುವ ಮನೋಭಾವವನ್ನು ಹೊಂದಿ ‌

 

ವಿದ್ಯಾರ್ಥಿ ವೇತನದ ಸೌಲಭ್ಯಗಳು

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ವಿವಿಧ ಸರ್ಕಾರಿ ಹಾಗೂ ಖಾಸಗಿ ವಲಯಗಳು ನೀಡುವ ವಿದ್ಯಾರ್ಥಿ ವೇತನಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ ಪ್ರಮುಖ ವಿದ್ಯಾರ್ಥಿ ವೇತನದ ಸೌಲಭ್ಯಗಳೆಂದರೆ:

  • ಕೇಂದ್ರ ಸರ್ಕಾರದ ವಿದ್ಯಾರ್ಥಿ ವೇತನಗಳು
  • ರಾಜ್ಯ ಸರ್ಕಾರದ ವಿದ್ಯಾರ್ಥಿ ವೇತನಗಳು
  • ಹಿಂದುಳಿದ ವರ್ಗಗಳ ಇಲಾಖೆಗಳ ವಿದ್ಯಾರ್ಥಿ ವೇತನ
  • ಅಲ್ಪಸಂಖ್ಯಾತರ ವಿದ್ಯಾರ್ಥಿವೇತನ
  • ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಮೆರಿಟ್ ವಿದ್ಯಾರ್ಥಿ ವೇತನ
  • ಪ್ರತಿಭೆ ಆಧಾರಿತ ವಿದ್ಯಾರ್ಥಿ ವೇತನ
  • ಖಾಸಗಿ ಸಂಸ್ಥೆ ಹಾಗೂ ಸಿ ಎಸ್‌ ಆರ್ ಸಹಾಯಧನದ ವಿದ್ಯಾರ್ಥಿ ವೇತನ‌

ಈ ವಿದ್ಯಾರ್ಥಿ ವೇತನಗಳಿಗೆ ಅರ್ಜಿ ಸಲ್ಲಿಸುವ ಮೊದಲು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲಾತಿಗಳನ್ನು ಪರಿಶೀಲಿಸಿ ಅರ್ಹತಮಾನದಂಡಗಳನ್ನು ಪೂರೈಸಿದ ನಂತರವೇ ಅರ್ಜಿ ಸಲ್ಲಿಸಬೇಕಾಗುತ್ತದೆ

PUC Science ಕೋರ್ಸಿನ ನಂತದ ವಿದ್ಯಾರ್ಥಿಗಳ ಯಶೋಗಾಥೆಗಳು

ಯಶೋಗಾಥೆ 1

ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯೊಬ್ಬರು PUC Science ನಂತರ B.Sc Nursing ಆಯ್ಕೆ ಮಾಡಿ, ಉತ್ತಮ ಅಂಕಗಳೊಂದಿಗೆ ಪದವಿ ಪೂರ್ಣಗೊಳಿಸಿ ಇಂದು ಬಹು ವಿಶೇಷ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಯಶೋಗಾಥೆ 2

ಸಾಮಾನ್ಯ ಕುಟುಂಬದ ವಿದ್ಯಾರ್ಥಿಯೊಬ್ಬರು Computer Science Engineering ಓದಿ, ಕಾಲೇಜಿನಲ್ಲಿಯೇ ಕೌಶಲ್ಯಗಳನ್ನು ಬೆಳೆಸಿ ಪ್ರಮುಖ IT ಕಂಪನಿಯಲ್ಲಿ ಉದ್ಯೋಗ ಪಡೆದಿದ್ದಾರೆ.

ಯಶೋಗಾಥೆ 3

ಕೃಷಿ ಹಿನ್ನೆಲೆಯ ವಿದ್ಯಾರ್ಥಿಯೊಬ್ಬರು B.Sc Agriculture ಪೂರ್ಣಗೊಳಿಸಿ, ಆಧುನಿಕ ಕೃಷಿ ತಂತ್ರಜ್ಞಾನ ಬಳಸಿ ಸ್ವಂತ ಉದ್ಯಮ ಆರಂಭಿಸಿ ಹಲವರಿಗೆ ಉದ್ಯೋಗ ನೀಡುತ್ತಿದ್ದಾರೆ.

Best Courses After PUC Science In 2026: FAQ’s

  1. PUC Science ನಂತರದಲ್ಲಿ ಯಾವ ಕೋರ್ಸ್ ಉತ್ತಮ?
    ನಿಮಗೆ ಇರುವ ಆಸಕ್ತಿ, ಸಾಮರ್ಥ್ಯ ಮತ್ತು ವೃತ್ತಿ ಗುರಿಯನ್ನು ಆಧರಿಸಿ ಕೋರ್ಸನ್ನು ಆಯ್ಕೆ ಮಾಡುವುದು ಉತ್ತಮ.
  2. ವೈದ್ಯಕೀಯ ಓದಲು Biology ವಿಷಯ ಕಡ್ಡಾಯವೇ?
    ಹೌದು, ವೈದ್ಯಕೀಯ ಸಂಬಂಧಿತ ಬಹುತೇಕ ಕೋರ್ಸುಗಳಿಗೆ Biology ಅತ್ಯಗತ್ಯ.
  3. PCM ವಿದ್ಯಾರ್ಥಿಗಳು ವೈದ್ಯಕೀಯ ಓದಬಹುದೇ?
    ಸಾಮಾನ್ಯವಾಗಿ ವೈದ್ಯಕೀಯ ಕೋರ್ಸುಗಳಿಗೆ PCB ವಿಭಾಗ ಅಗತ್ಯ.
  4. BCA ನಂತರ Software ಕ್ಷೇತ್ರದಲ್ಲಿ ಉದ್ಯೋಗ ಸಿಗುತ್ತದೆಯೇ?
    ಹೌದು, ಸೂಕ್ತ ಕೌಶಲ್ಯ ಮತ್ತು ಅನುಭವಗಳನ್ನು ಹೊಂದಿದ್ದರೆ ಅವಕಾಶಗಳಿವೆ.
  5. Agriculture ಕ್ಷೇತ್ರದಲ್ಲಿ ಸರ್ಕಾರಿ ಉದ್ಯೋಗಗಳನ್ನು ಹೊಂದಬಹುದೇ?
    ಹೌದು, ಕೃಷಿ ಇಲಾಖೆ ಹಾಗೂ ಸಂಬಂಧಿತ ಸಂಸ್ಥೆಗಳಲ್ಲಿ ಸರ್ಕಾರಿ ಉದ್ಯೋಗದ ಅವಕಾಶಗಳಿವೆ.
  6. ವಿದ್ಯಾರ್ಥಿವೇತನ ಪಡೆಯುವುದು ಹೇಗೆ?
    ಅರ್ಹತೆಯ ಆಧಾರದ ಮೇಲೆ ರಾಜ್ಯ, ಕೇಂದ್ರ ಮತ್ತು ಖಾಸಗಿ ವಿದ್ಯಾರ್ಥಿವೇತನಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.
  7. Engineering ಕೋರ್ಸಿನ ನಂತರ ಉನ್ನತ ಶಿಕ್ಷಣದ ಆಯ್ಕೆಗಳು ಯಾವುವು?
    M.Tech, MBA, MS ಅಥವಾ ವಿಶೇಷ ಪ್ರಮಾಣಪತ್ರ ಕೋರ್ಸುಗಳನ್ನು ಮಾಡಬಹುದು.
  8. Data Science ಭವಿಷ್ಯ ಹೇಗಿದೆ?
    ಮುಂದಿನ ವರ್ಷಗಳಲ್ಲಿಯೂ ಮಾಹಿತಿ ವಿಜ್ಞಾನಕ್ಕೆ ಹೆಚ್ಚಿನ ಬೇಡಿಕೆಯಿರುವ ಕ್ಷೇತ್ರಗಳಲ್ಲಿ ಒಂದಾಗಿದೆ.
  9. ಸರ್ಕಾರಿ ಕಾಲೇಜು ಉತ್ತಮವೇ? ಖಾಸಗಿ ಕಾಲೇಜು ಉತ್ತಮವೇ?
    ಎರಡರಲ್ಲಿಯೂ ಉತ್ತಮ ಸಂಸ್ಥೆಗಳಿವೆ. ಮಾನ್ಯತೆ ಪಡೆಯುವುದು, ಅಧ್ಯಾಪಕರು, ಉತ್ತಮ ಮೂಲಸೌಕರ್ಯ ಮತ್ತು Placement ಗೆ ಸಂಬಂಧಿಸಿದ ದಾಖಲೆಯನ್ನು ಪರಿಶೀಲಿಸಿ ಆಯ್ಕೆ ಮಾಡಿ.
  10. ಕೋರ್ಸ್ ಆಯ್ಕೆ ಮಾಡುವಾಗ ಮುಖ್ಯವಾಗಿ ಏನನ್ನು ಗಮನಿಸಬೇಕು?
    ಆಸಕ್ತಿಯ ಮೌಲ್ಯಮಾಪನ, ಅರ್ಹತೆ, ಉದ್ಯೋಗಾವಕಾಶ, ಕಾಲೇಜಿನ ಗುಣಮಟ್ಟ ಮತ್ತು ಭವಿಷ್ಯದ ಬೆಳವಣಿಗೆ ಅಂಶಗಳನ್ನು ಗಮನಿಸಬೇಕು

 

ಪ್ರಸ್ತುತ ಲೇಖನದ ಮಾಹಿತಿಯ ಅಧಿಕೃತ ಮೂಲಗಳು

  • ಭಾರತ ಮತ್ತು ಕರ್ನಾಟಕ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಅಧಿಕೃತ ಪಠ್ಯಕ್ರಮಗಳು
  • ಸರ್ಕಾರಿ ಶಿಕ್ಷಣ ಇಲಾಖೆಯ ಅಧಿಕೃತ ಪ್ರಕಟಣೆಗಳು
  • ಉನ್ನತ ಶಿಕ್ಷಣ ಪ್ರವೇಶಕ್ಕೆ ಹೊರಡಿಸಲಾದ ಮಾರ್ಗಸೂಚಿಗಳು
  • ಉದ್ಯಮಗಳ ಕೌಶಲ್ಯ ಮತ್ತು ಪ್ರವೃತ್ತಿಗಳ ಅಧ್ಯಯನದ ಮಾಹಿತಿ
  • ವೃತ್ತಿ ಮಾರ್ಗದರ್ಶಕರ ಸಾಮಾನ್ಯ ಸಲಹೆಗಳು

ವೃತ್ತಿ ಮಾರ್ಗದರ್ಶಕರ ಸಲಹೆ

ಪ್ರಸ್ತುತದಲ್ಲಿ ಜನಪ್ರಿಯತೆಯನ್ನು ಹೊಂದಿರುವಂತಹ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳುವುದಕ್ಕಿಂತ ಭವಿಷ್ಯದಲ್ಲಿ ಯಾವ ಕೋರ್ಸಿಗೆ ಹೆಚ್ಚಿನ ಬೇಡಿಕೆ ಇರುತ್ತದೆ ಎಂಬುದನ್ನು ಮೊದಲು ಯೋಚಿಸಬೇಕಾಗುತ್ತದೆ. ನಿಮ್ಮ ಸಾಮರ್ಥ್ಯಕ್ಕೆ ಹೊಂದುವಂತಹ ಕೋರ್ಸನ್ನು ಆಯ್ಕೆ ಮಾಡುವುದು ಪ್ರಮುಖವಾಗಿದೆ. ಶಿಕ್ಷಣದ ಜೊತೆಗೆ ಕೌಶಲ್ಯ ಅಭಿವೃದ್ಧಿಗಳನ್ನು ಮಾಡುವುದು ಹಾಗೂ ನಿರಂತರ ಕಲಿಕೆಯನ್ನು ಮಾಡುವುದರಿಂದ ದೀರ್ಘಕಾಲದಲ್ಲಿ ಯಶಸ್ಸನ್ನು ಪಡೆಯಬಹುದಾಗಿರುತ್ತದೆ.

ಲೇಖನಕ್ಕೆ ಸಂಬಂಧಿಸಿದ ಅಧಿಕೃತ ಲಿಂಕ್‌ ಗಳು

ಭಾರತ ಸರ್ಕಾರದ ಅಧಿಕೃತ ವೆಬ್ಸೈಟ್ ಭಾರತ ಶಿಕ್ಷಣ ಇಲಾಖೆ
ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ ಕರ್ನಾಟಕ ಶಿಕ್ಷಣ ಇಲಾಖೆ
ನಮ್ಮ ವಾಟ್ಸಪ್ ಗ್ರೂಪ್ ಸೇರಿ ಇಲ್ಲಿಕ್ಲಿಕ್‌ ಮಾಡಿ
ಹೆಚ್ಚುವರಿ ಮಾಹಿತಿಗಳು ನೇಮಕಾತಿ

ಪರೀಕ್ಷಾ ಸಲಹೆ

ವೃತ್ತಿ ಮಾರ್ಗದರ್ಶನ

ಸರ್ಕಾರಿ ಯೋಜನೆಗಳು

 

PUC Science ನಂತರದ ಕೋರ್ಸ್ ಅನ್ನು ಆಯ್ಕೆ ಮಾಡುವುದು ಜೀವನದ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ ಏಕೆಂದರೆ ಯಾವುದೇ ಕೋರ್ಸ್ ಅನ್ನು ಉತ್ತಮ  ಎಂಬುದನ್ನು ನಿರ್ಧರಿಸುವುದು ಅದು ನಮ್ಮ ಆಸಕ್ತಿ ಸಾಮರ್ಥ್ಯ ಕೌಶಲ್ಯಗಳನ್ನು ಅನುಸರಿಸುತ್ತದೆ. ಆದುದರಿಂದ PUC Science ನ ಫಲಿತಾಂಶ ಬಂದ ನಂತರವೇ ಮೊದಲ 30 ದಿನಗಳಲ್ಲಿ ಉತ್ತಮ ರೀತಿಯಲ್ಲಿ ವೃತ್ತಿ ಯೋಜನೆಯನ್ನು ನಿರೂಪಿಸಿ ಅವುಗಳನ್ನು ಪರಿಣಾಮಕಾರಿಯಾಗಿ ಅನುಸರಿಸಬೇಕು

ಇದರ ಮೂಲಕ ಉತ್ತಮ ಪೋರ್ಸ್ ಗಳನ್ನು ಆಯ್ಕೆ ಮಾಡಿ ಭವಿಷ್ಯದಲ್ಲಿ ಉತ್ತಮ ಹಾಗೂ ಆಕರ್ಷಕ ವೇತನವನ್ನು ನೀಡುವಂತಹ ಹಾಗೂ ಉದ್ಯೋಗ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇರುವಂತಹ ಉದ್ಯೋಗಗಳನ್ನು ಪಡೆದು ಜೀವನವನ್ನು ಉತ್ತಮ ರೀತಿಯಲ್ಲಿ ರಚಿಸಿಕೊಳ್ಳಬಹುದಾಗಿರುತ್ತದೆ ಆದುದರಿಂದ ಪ್ರಸ್ತುತದಲ್ಲಿರುವ ಕೋರ್ಸು ಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ ಮುಂದಿನ ಏಳರಿಂದ ಹತ್ತು ವರ್ಷಗಳಲ್ಲಿ ಯಾವ ಕೋರ್ಸಿಗೆ ಹೆಚ್ಚು ಪ್ರಾಮುಖ್ಯತೆ ದೊರೆಯುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡು ಕೋರ್ಸ್ ಅನ್ನು ಆಯ್ಕೆ ಮಾಡಿ

 

ಲೇಖಕರ ಮಾತು : ಈ ಲೇಖನವು PUC Science ನಂತರದ ಶಿಕ್ಷಣ ಮತ್ತು ವೃತ್ತಿ ಆಯ್ಕೆ ಕುರಿತು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಸರಳ, ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ನೀಡುವ ಉದ್ದೇಶದಿಂದ ಸಿದ್ಧಪಡಿಸಲಾಗಿದೆ. ಕೋರ್ಸ್ ಆಯ್ಕೆ ಮಾಡುವ ಮೊದಲು ಸಂಬಂಧಿತ ಶಿಕ್ಷಣ ಸಂಸ್ಥೆಯ ಅಧಿಕೃತ ಮಾಹಿತಿಯನ್ನು ಪರಿಶೀಲಿಸುವುದು ಉತ್ತಮ.

*****

ಲೇಖಕರ ಬಗ್ಗೆ : ರಂಗನಾಥ ಬಿ ಜಿ ರವರು ಕಳೆದ 3 ವರ್ಷಗಳಿಂದ ಶಿಕ್ಷಣ, ಸರ್ಕಾರಿ ಉದ್ಯೋಗ, ಸ್ಪರ್ಧಾತ್ಮಕ ಪರೀಕ್ಷೆಗಳು, ವೃತ್ತಿ ಮಾರ್ಗದರ್ಶನ ಮತ್ತು ಸರ್ಕಾರಿ ಯೋಜನೆಗಳ ಕುರಿತು ಸರಳ ಕನ್ನಡದಲ್ಲಿ ವಿಶ್ವಾಸಾರ್ಹ ಮಾಹಿತಿಯನ್ನು ನೀಡುವ ಡಿಜಿಟಲ್ ಲೇಖಕರಾಗಿದ್ದಾರೆ. ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಉಪಯುಕ್ತ ವಿಷಯಗಳನ್ನು ಸಂಶೋಧಿಸಿ ಪ್ರಕಟಿಸುವುದು ಇವರ ಪ್ರಮುಖ ಉದ್ದೇಶವಾಗಿದೆ.

*****

Disclaimer : ಈ ಲೇಖನವು ಸಾಮಾನ್ಯ ಮಾಹಿತಿ ಮತ್ತು ವೃತ್ತಿ ಮಾರ್ಗದರ್ಶನದ ಉದ್ದೇಶಕ್ಕಾಗಿ ಮಾತ್ರ ಸಿದ್ಧಪಡಿಸಲಾಗಿದೆ. ಪ್ರವೇಶ ನಿಯಮಗಳು, ಅರ್ಹತಾ ಮಾನದಂಡಗಳು, ಶುಲ್ಕ, ಪಠ್ಯಕ್ರಮ ಮತ್ತು ನೇಮಕಾತಿ ಪ್ರಕ್ರಿಯೆಗಳು ಕಾಲಾನುಗುಣವಾಗಿ ಬದಲಾಗಬಹುದು. ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳುವ ಮೊದಲು ಸಂಬಂಧಿತ ವಿಶ್ವವಿದ್ಯಾಲಯ, ಕಾಲೇಜು ಅಥವಾ ಅಧಿಕೃತ ಸಂಸ್ಥೆಯ ಇತ್ತೀಚಿನ ಮಾಹಿತಿಯನ್ನು ಪರಿಶೀಲಿಸುವುದು ಓದುಗರ ಜವಾಬ್ದಾರಿಯಾಗಿದೆ.

ರಂಗನಾಥ ಬಿ.ಜಿ ಅವರು ಅರ್ಥಶಾಸ್ತ್ರದಲ್ಲಿ ಎಂ.ಎ ಪದವೀಧರರಾಗಿದ್ದು, ಕಳೆದ ಎರಡು ವರ್ಷಗಳಿಂದ ನೈಜ ಹಾಗೂ ವಿಶ್ವಾಸಾರ್ಹ ಕನ್ನಡ ವಿಷಯಗಳನ್ನು ಪ್ರಕಟಿಸುತ್ತಿದ್ದಾರೆ. ಸರ್ಕಾರಿ ಉದ್ಯೋಗ ಮಾಹಿತಿ, ಪರೀಕ್ಷಾ ತಯಾರಿ ಸಲಹೆಗಳು, ವೃತ್ತಿ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು ಹಾಗೂ ಟ್ರೆಂಡಿಂಗ್ ಸುದ್ದಿಗಳ ಕುರಿತು ಲೇಖನಗಳನ್ನು ಬರೆಯುವಲ್ಲಿ ಪರಿಣತಿ ಹೊಂದಿದ್ದು, ಓದುಗರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುವುದು ಇವರ ಉದ್ದೇಶವಾಗಿದೆ. Please Visit NewsByMr

Leave a Comment