BSNL JTO ಪರೀಕ್ಷೆಗೆ ನಿಮ್ಮ ತಯಾರಿ ಹೀಗಿದ್ದರೆ ಯಶಸ್ಸು ಖಚಿತ
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಒಂದು ಕೇಂದ್ರ ಸರ್ಕಾರದ ಪ್ರಮುಖ ಸಾರ್ವಜನಿಕ ವಲಯದ ದೂರಸಂಪರ್ಕ ಸಂಸ್ಥೆಯಾಗಿದೆ. ಈ ಸಂಸ್ಥೆಯು ದೇಶದಾದ್ಯಂತ ಲಕ್ಷಾಂತರ ಗ್ರಾಹಕರಿಗೆ ದೂರವಾಣಿ ಸೇವೆಗಳು, ಬ್ರಾಡ್ ಬ್ಯಾಂಡ್, ಫೈಬರ್ ಮತ್ತು ಮೊಬೈಲ್ ಸೇವೆಗಳನ್ನು ಸಮಗ್ರ ಮಟ್ಟದಲ್ಲಿ ಒದಗಿಸುತ್ತಿದೆ.
ಅಂತೆಯೇ ಬಿ.ಎಸ್.ಎನ್.ಎಲ್ ನಲ್ಲಿ ಉದ್ಯೋಗ ಪಡೆಯುವುದು ಸಹ ಅನೇಕ ಇಂಜಿನಿಯರ್ ಪದವೀಧರರ ಕನಸಾಗಿರುತ್ತದೆ. ಈ ಹುದ್ದೆಗಳಲ್ಲಿ ಉತ್ತಮ ವೇತನ ಉದ್ಯೋಗ ಪದ್ಧತಿ ಹಾಗೂ ವೃತ್ತಿ ಜೀವನದಲ್ಲಿ ಸಾಕಷ್ಟು ಉತ್ತಮ ರೀತಿಯ ಬೆಳವಣಿಗೆಯನ್ನು ಹೊಂದುವ ಅವಕಾಶಗಳನ್ನು ಕಾಣಬಹುದು.
2026 ನೇ ಸಾಲಿನಲ್ಲಿ ಬಿಎಸ್ಎನ್ಎಲ್ ಸಂಸ್ಥೆಯು ಜೂನಿಯರ್ ಟೆಲಿಕಾಂ ಆಫೀಸರ್ ಹುದ್ದೆಗಳಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದ್ದು ಈಗಾಗಲೇ ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಕಂಪ್ಯೂಟರ್ ಆಧಾರಿತ ಪರೀಕ್ಷೆಯ ಮೂಲಕ ಆಯ್ಕೆಯಾಗುವುದು ನಿಯಮಾನುಸಾರವಾಗಿದೆ ಆದುದರಿಂದ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಬಯಸುವ ಆಕಾಂಕ್ಷಿಗಳಿಗೆ ಈ ಲೇಖನದಲ್ಲಿ ಸಿಲಬಸ್ ಹಾಗೂ ಪರೀಕ್ಷಾ ವಿಧಾನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
ಈ ಲೇಖನದಲ್ಲಿ ಪರೀಕ್ಷೆಯ ಮಾದರಿ, ಅಂಕಗಳ ಹಂಚಿಕೆ, ಪ್ರಶ್ನೆಗಳ ಸಂಖ್ಯೆ, ನೆಗೆಟಿವ್ ಮಾರ್ಕಿಂಗ್ ಇದೆಯೇ ಇಲ್ಲವೇ, ಅರ್ಹತಾ ಅಂಕಗಳು ಎಷ್ಟು ಮತ್ತು ಸಿಲಬಸ್ ಕುರಿತು ಸಂಪೂರ್ಣ ಮಾಹಿತಿಯನ್ನು ಕನ್ನಡ ಭಾಷೆಯಲ್ಲಿ ನೀಡಲಾಗಿದೆ ಸಂಪೂರ್ಣ ಲೇಖನವನ್ನು ಓದಿ ಪರೀಕ್ಷಾ ತಯಾರಿಯನ್ನು ಆರಂಭಿಸಿ ಹಾಗೂ ಈಗಾಗಲೇ ತಯಾರಿ ಆರಂಭಿಸಿದ್ದಾರೆ ಆ ತಯಾರಿಯನ್ನು ಈ ಲೇಖನವನ್ನು ಓದುವ ಮೂಲಕ ಚುರುಕುಗೊಳಿಸಿ
BSNL JTO ಪರೀಕ್ಷೆ ಎಂದರೆ ಏನು
BSNL JTO ಹುದ್ದೆಯು ತಾಂತ್ರಿಕ ವಿಭಾಗಕ್ಕೆ ಸೇರಿದ ಪ್ರಮುಖ ಹುದ್ದೆಯಾಗಿದ್ದು, ಈ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ದೂರ ಸಂಪರ್ಕ ಜಾಲಗಳ ನಿರ್ವಹಣೆ, ನೆಟ್ವರ್ಕ್ ಕಾರ್ಯಾಚರಣೆ ಮಾಡುವುದು, ಬ್ರಾಡ್ ಬ್ಯಾಂಡ್ ಸೇವೆಗಳ ಒದಗಿಸುವಿಕೆ ಮತ್ತು ಮೇಲ್ವಿಚಾರಣೆ, ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ನೀಡುವುದು, ಫೈಬರ್ ನೆಟ್ವರ್ಕ್ ನಿರ್ವಹಿಸುವುದು ಮತ್ತು ಹೊಸ ಹೊಸ ತಂತ್ರಜ್ಞಾನಗಳ ಬಗ್ಗೆ ಮತ್ತು ಅವುಗಳನ್ನು ಅನುಷ್ಠಾನ ಮಾಡುವ ಸ್ಥಾನದಲ್ಲಿ ಕೆಲಸ ನಿರ್ವಹಿಸಬೇಕಾಗುತ್ತದೆ
ಈ BSNL JTO ಹುದ್ದೆಗಳಿಗೆ ಪ್ರಮುಖವಾಗಿ ಎಲೆಕ್ಟ್ರಾನಿಕ್ಸ್ ಟೆಲಿಕಮ್ಯುನಿಕೇಷನ್, ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಸೈನ್ಸ್ ಸಂಬಂಧಿತ ವಿಭಾಗಗಳಲ್ಲಿ ಇಂಜಿನಿಯರಿಂಗ್ ಪದವಿಯನ್ನು ಹೊಂದಿರುವ ಅಭ್ಯರ್ಥಿಗಳು ಹೆಚ್ಚಾಗಿ ಅರ್ಜಿ ಸಲ್ಲಿಸುತ್ತಾರೆ
ಪ್ರಮುಖ ವಿವರಗಳು
| ವಿವರ | ಮಾಹಿತಿ |
|---|---|
| ನೇಮಕಾತಿ ಸಂಸ್ಥೆ | ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) |
| ಹುದ್ದೆಯ ಹೆಸರು | ಕಿರಿಯ ತಾಂತ್ರಿಕ ಅಧಿಕಾರಿ (JTO) |
| ಒಟ್ಟು ಹುದ್ದೆಗಳು | 100 ಹುದ್ದೆಗಳು |
| ಪರೀಕ್ಷೆಯ ವಿಧಾನ | ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) |
| ಪರೀಕ್ಷೆಯ ಮಾಧ್ಯಮ | ಆನ್ ಲೈನ್ |
| ಒಟ್ಟು ಪ್ರಶ್ನೆಗಳು | 120 ಪ್ರಶ್ನೆಗಳು |
| ಒಟ್ಟು ಅಂಕಗಳು | 480 ಅಂಕಗಳು |
| ಪರೀಕ್ಷೆಯ ಅವಧಿ | 3 ಗಂಟೆಗಳು |
| ನೆಗೆಟಿವ್ ಮಾರ್ಕಿಂಗ್ | ಪ್ರತಿ ತಪ್ಪು ಉತ್ತರಕ್ಕೆ 1 ಅಂಕ ಕಡಿತ |
| ಸರಿಯಾದ ಉತ್ತರ | 4 ಅಂಕಗಳು |
| ಆಯ್ಕೆ ವಿಧಾನ | ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) |
BSNL JTO ನೇಮಕಾತಿಯ ಪರೀಕ್ಷಾ ಮಾದರಿ
BSNL JTO ಹುದ್ದೆಗಳ ಪರೀಕ್ಷೆಯನ್ನು ಅಭ್ಯರ್ಥಿಗಳ ಸಾಮಾನ್ಯ ಜ್ಞಾನ, ತಾಂತ್ರಿಕ ಜ್ಞಾನ ಸಮಸ್ಯೆ ಪರಿಹರಿಸುವ ಸಾಮರ್ಥ್ಯವನ್ನು ಪರೀಕ್ಷಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು ಈ ಪರೀಕ್ಷೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆ ಆಗಿರುತ್ತದೆ
ಈ ಪರೀಕ್ಷೆಯು ಒಟ್ಟು ಮೂರು ಪ್ರಮುಖ ವಿಭಾಗಗಳನ್ನು ಒಳಗೊಂಡಿರುತ್ತದೆ ಅವುಗಳೆಂದರೆ
- Section-I : Engineering Stream-I
- Section-II : Engineering Stream-II
- Section-III : General Ability Test
ಈ ಮೇಲಿನ ಮೂರು ವಿಭಾಗಗಳಿಂದ 120 ಬಹುಆಯ್ಕ ಪ್ರಶ್ನೆಗಳು ಬರುತ್ತವೆ ಪರೀಕ್ಷೆಯ ಅವಧಿಯು 3 ಗಂಟೆಗಳು ಆಗಿದ್ದು ನಿಗದಿತ ಸಮಯದಲ್ಲಿ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ
ಅಂಕಗಳ ಹಂಚಿಕೆ
| ವಿಭಾಗ | ಕೇಳಲಾಗುವ ಪ್ರಶ್ನೆಗಳು | ಅಂಕಗಳು |
|---|---|---|
| Engineering Stream-I | 50 ಪ್ರಶ್ನೆಗಳು | 200 |
| Engineering Stream-II | 50 ಪ್ರಶ್ನೆಗಳು | 200 |
| General Ability Test | 20 ಪ್ರಶ್ನೆಗಳು | 80 |
| ಒಟ್ಟು | 120 ಪ್ರಶ್ನೆಗಳು | 480 |
ಮೇಲಿನ ಅಂಕಗಳ ಹಂಚಿಕೆ ಮಾಹಿತಿಯನ್ನು ಗಮನಿಸಿದರೆ ತಾಂತ್ರಿಕ ವಿಷಯಗಳಿಗೆ ಹೆಚ್ಚಿನ ಮಹತ್ವವನ್ನು ನೀಡಿದ್ದು ಪರೀಕ್ಷೆ ನಡೆಯುವ 480 ಅಂಕಗಳಲ್ಲಿ 400 ಅಂಕಗಳು ಇಂಜಿನಿಯರಿಂಗ್ ಮತ್ತು ತಾಂತ್ರಿಕ ಜ್ಞಾನಕ್ಕೆ ಸಂಬಂಧಿಸಿ ದ ವಿಷಯಗಳಿಂದಲೇ ಬರುತ್ತವೆ. ಆದುದರಿಂದ ಈ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ತಾಂತ್ರಿಕ ವಿಷಯಗಳ ಮೇಲೆ ಹೆಚ್ಚು ಗಮನವನ್ನು ನೀಡಬೇಕಾಗುತ್ತದೆ
ಪರೀಕ್ಷಾ ಸಮಯ
ಈ ಪರೀಕ್ಷೆಗೆ ನಿಗದಿಪಡಿಸಿರುವ ಪ್ರಶ್ನೆ ಪತ್ರಿಕೆಯನ್ನು ಬಗೆಹರಿಸಲು ಸಂಪೂರ್ಣ 3 ಗಂಟೆಗಳ ಕಾಲಾವಕಾಶವನ್ನು ನೀಡಲಾಗಿದೆ ಈ ಅವಧಿಯಲ್ಲಿ ಪರೀಕ್ಷೆಯಲ್ಲಿ ನೀಡುವ ಮೂರು ವಿಭಾಗಗಳಿಗೂ ಉತ್ತರಿಸಬೇಕಾಗುತ್ತದೆ ಆದುದರಿಂದ ಸಮಯ ನಿರ್ವಹಣೆಯು ಪ್ರಮುಖವಾಗಿದೆ
ಮಾರ್ಕಿಂಗ್ ಸಿಸ್ಟಮ್
ಈ ಹುದ್ದೆಗಳಿಗೆ ಹೆಚ್ಚಿನ ಸ್ಪರ್ಧೆ ಇರುವುದರಿಂದ ಹಾಗೂ ತಾಂತ್ರಿಕ ಜ್ಞಾನದ ಅವಶ್ಯಕತೆ ಇರುವುದರಿಂದ ಈ ಪರೀಕ್ಷೆಯಲ್ಲಿ ಸರಿಯಾದ ಉತ್ತರಗಳಿಗೆ ಉತ್ತಮ ಅಂಕಗಳನ್ನು ನೀಡಲಾಗುತ್ತದೆ ಪರೀಕ್ಷೆಯ ಮಾರ್ಕಿಂಗ್ ಸಿಸ್ಟಮ್ ಈ ಕೆಳಗಿನಂತಿದೆ
- ಪ್ರತಿ ಸರಿಯಾದ ಉತ್ತರಕ್ಕೆ 4 ಅಂಕಗಳು
- ಒಂದು ತಪ್ಪಾದ ಉತ್ತರಕ್ಕೆ ಒಂದು ಅಂಕ ಕಡಿತ
ನೆಗೆಟಿವ್ ಮಾರ್ಕಿಂಗ್ ಇರುವುದರಿಂದ ಏನು ಮಾಡಬೇಕು
ಪ್ರತಿ ಸ್ಪರ್ಧಾತ್ಮಕ ಪರೀಕ್ಷೆಯಂತೆಯೇ ಈ ಪರೀಕ್ಷೆಯಲ್ಲೂ ಸಹ ನೆಗೆಟಿವ್ ಮಾರ್ಕಿಂಗ್ ಇರುವುದರಿಂದ ಅನೇಕ ಅಭ್ಯರ್ಥಿಗಳು ಗೊತ್ತಿಲ್ಲದ ಪ್ರಶ್ನೆಗಳಿಗೂ ತಮ್ಮ ಊಹೆಗೆ ಬರುವ ಉತ್ತರಗಳನ್ನು ಉತ್ತರಿಸುತ್ತಾರೆ ಆದರೆ ಈ ಪರೀಕ್ಷೆಯಲ್ಲಿ ನೆಗೆಟಿವ್ ಮಾರ್ಕಿಂಗ್ ಇರುವುದರಿಂದ ಇದೊಂದು ಅಪಾಯಕಾರಿ ಅಭ್ಯಾಸವಾಗಿದ್ದು ಈ ಕೆಳಕಂಡ ಅಂಶಗಳನ್ನು ಗಮನಿಸಿ
- ಪ್ರಶ್ನೆಯನ್ನು ಮೊದಲು ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಂಡ ನಂತರವೇ ಉತ್ತರಿಸಿ. ಅರ್ಧ ಪ್ರಶ್ನೆ ಓದುವ ಮೂಲಕ ಎಂದಿಗೂ ಉತ್ತರಿಸಬೇಡಿ
- ಖಚಿತ ಉತ್ತರ ಗೊತ್ತಿದ್ದರೆ ಮಾತ್ರ ಆಯ್ಕೆ ಮಾಡಿ ನಿಮ್ಮ ಊಹೆಗೆ ಸಂಬಂಧಿಸಿದಂತೆ ಉತ್ತರಿಸಬೇಡಿ
- ಸಮಯವನ್ನು ಉಳಿಸಲು ಸುಲಭವಾದ ಪ್ರಶ್ನೆಗಳಿಗೆ ಮೊದಲು ಉತ್ತರವನ್ನು ನೀಡಿ
- ಪರೀಕ್ಷೆಯ ಕೊನೆಯ ಸಂದರ್ಭಗಳಲ್ಲಿ ಕಷ್ಟದ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ
- ನೀವು ನಿಮ್ಮ ಊಹೆ ಪ್ರಕಾರ ಉತ್ತರ ನೀಡುವುದಾದರೆ ಸರಿಯಾದ ಜ್ಞಾನಕ್ಕೆ ಹತ್ತಿರವಿರುವ ಆಯ್ಕೆಯನ್ನು ಆರಿಸಿ ಬದಲಾಗಿ ಸಂಪೂರ್ಣ ಊಹೆಯ ಆಧಾರದ ಮೇಲೆ ಎಂದಿಗೂ ಉತ್ತರಿಸಬೇಡಿ
ಈ ಮೇಲಿನ ಕ್ರಮಗಳನ್ನು ಅನುಸರಿಸುವುದರಿಂದ ಈ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಬಹುದಾಗಿರುತ್ತದೆ
BSNL JTO ನೇಮಕಾತಿ ಪರೀಕ್ಷೆಯಲ್ಲಿ ಯಾವ ವಿಭಾಗಕ್ಕೆ ಹೆಚ್ಚು ಮಹತ್ವ ನೀಡಬೇಕು
ಈ ಪರೀಕ್ಷೆಯ ಅಂಕಗಳ ಹಂಚಿಕೆಯನ್ನು ಈ ಕೆಳಗೆ ನೀಡಲಾಗಿದೆ ಇದನ್ನು ನೋಡಿದ ನೀವೇ ಯಾವ ವಿಷಯಗಳಿಂದ ಹೆಚ್ಚು ಪ್ರಶ್ನೆಗಳು ಹಾಗೂ ಯಾವ ವಿಭಾಗಕ್ಕೆ ಹೆಚ್ಚಿನ ಮಹತ್ವ ನೀಡಬೇಕೆಂಬ ಅಭಿಪ್ರಾಯಕ್ಕೆ ಬರುತ್ತೀರಿ
- Engineering Stream-I → 200 ಅಂಕಗಳು
- Engineering Stream-II → 200 ಅಂಕಗಳು
- General Ability → 80 ಅಂಕಗಳು
ಈ ಪ್ರಶ್ನೆಯು 480 ಅಂಕಗಳಿಗೆ ನಡೆಯುವುದರಿಂದ ಸುಮಾರು 400 ಅಂಕಗಳು ಅಂದರೆ 83% ಅಂಕಗಳು ತಾಂತ್ರಿಕ ವಿಷಯದಿಂದಲೇ ಬರುತ್ತವೆ
ಆದುದರಿಂದ ಈ ಪರೀಕ್ಷೆಗೆ ತಯಾರಿಯನ್ನು ಮಾಡುತ್ತಿರುವ ಅಭ್ಯರ್ಥಿಗಳು ಮೊದಲು ಇಂಜಿನಿಯರಿಂಗ್ ವಿಷಯಗಳನ್ನು ಸಂಪೂರ್ಣವಾಗಿ ಓದಿದ ನಂತರವೇ ಸಾಮಾನ್ಯ ಜ್ಞಾನಕ್ಕೆ ಸಮಯ ಮೀಸಲಿಡುವುದು ಉತ್ತಮವಾಗಿದೆ.
ಪಡೆಯಬೇಕಾದ ಕನಿಷ್ಠ ಅರ್ಹತಾ ಅಂಕಗಳು
ಈ ಪರೀಕ್ಷೆಯಲ್ಲಿ ಕೇವಲ ಒಟ್ಟು ಅಂಕಗಳನ್ನು ಮಾತ್ರ ಪರಿಗಣಿಸುವುದಿಲ್ಲ ಬದಲಾಗಿ ಪ್ರತಿ ವಿಭಾಗದಲ್ಲಿಯೂ ಸಹ ಕನಿಷ್ಠ ಅರ್ಹತಾ ಅಂಕಗಳನ್ನು ಗಳಿಸುವುದು ಕಡ್ಡಾಯವಾಗಿದೆ ಆದುದರಿಂದ ಕನಿಷ್ಠ ಅರ್ಹತಾ ಅಂಕಗಳ ವಿವರ ಈ ಕೆಳಕಂಡಂತಿದೆ.
ಸಾಮಾನ್ಯ ವರ್ಗ ಮತ್ತು ಇತರೆ ಹಿಂದುಳಿದ ವರ್ಗ:
- ಪರೀಕ್ಷೆಯ ಪ್ರತಿ ವಿಭಾಗದಲ್ಲಿ ಕನಿಷ್ಠ 40% ಅಂಕಗಳು
- ಪರೀಕ್ಷೆಯ ಒಟ್ಟಾರೆ ಅಂಕಗಳಲ್ಲಿ 50% ಅಂಕಗಳು
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಂಗವಿಕಲ ಹಾಗೂ ಆರ್ಥಿಕ ಹಿಂದುಳಿದ ಅಭ್ಯರ್ಥಿಗಳು:
- ಪರೀಕ್ಷೆಯ ಪ್ರತಿ ವಿಭಾಗದಲ್ಲಿ ಕನಿಷ್ಠ 35% ಅಂಕಗಳು
- ಪರೀಕ್ಷೆಯ ಒಟ್ಟಾರೆ ಅಂಕಗಳಲ್ಲಿ 45% ಅಂಕಗಳು
ಮೇಲಿನ ಅಂಶವನ್ನು ಗಮನಿಸಿದಾಗ ಅಭ್ಯರ್ಥಿಗಳು ಕೇವಲ ಒಂದು ವಿಭಾಗದಲ್ಲಿ ಹೆಚ್ಚು ಅಂಕಗಳನ್ನು ಪಡೆದು ಮತ್ತೊಂದು ವಿಭಾಗದಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯದೆ ಇದ್ದರೂ ಸಹ ಯಶಸ್ವಿಯಾಗಿ ಪರೀಕ್ಷೆಯನ್ನು ಎದುರಿಸಬಹುದು ಎಂಬ ಅಂಶವನ್ನು ಬಿಡಬೇಕಾಗುತ್ತದೆ ಪ್ರತಿಯೊಂದು ವಿಭಾಗದಲ್ಲಿಯೂ ಸಹ ಕನಿಷ್ಠ ಅರ್ಹತಾ ಅಂಕಗಳನ್ನು ಗಳಿಸಲೇ ಬೇಕಾಗಿರುತ್ತದೆ
ಅಂತಿಮ ಮೆರಿಟ್ ಪಟ್ಟಿಗೆ ಹೇಗೆ ಆಯ್ಕೆ ಮಾಡಲಾಗುತ್ತದೆ
ಈ ಪರೀಕ್ಷೆಗೆ ಅಂತಿಮ ಮೆರಿಟ್ ಪಟ್ಟಿಯನ್ನು ಪ್ರಕಟಿಸುವಾಗ ಅಭ್ಯರ್ಥಿಗಳನ್ನು ಈ ಕೆಳಕಂಡ ಅಂಶಗಳನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ ಅವುಗಳೆಂದರೆ:
- ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ಪಡೆದ ಒಟ್ಟು ಅಂಕಗಳು
- ಪ್ರತಿ ವಿಭಾಗದಲ್ಲಿ ಪಡೆದ ಕನಿಷ್ಠ ಅರ್ಹತಾ ಅಂಕಗಳು
- ಒಟ್ಟು ಅರ್ಹತಾ ಶೇಕಡವಾರು ಅಂಶಗಳು
- ನೇಮಕಾತಿಯ ಮೀಸಲಾತಿ ನಿಯಮಗಳು
- ದಾಖಲೆ ಪರಿಶೀಲನೆ
ಈ ಮೇಲಿನ ಅಂಶಗಳನ್ನು ನಿರ್ಧರಿಸಿ ಮೆರಿಟ್ ಪಟ್ಟಿಯನ್ನು ಪ್ರಕಟಿಸುವುದರಿಂದ ಪ್ರತಿಯೊಂದು ವಿಭಾಗದಲ್ಲೂ ಸಹ ಸಮಾನವಾಗಿ ಸಿದ್ಧಗೊಳ್ಳಬೇಕಾಗುತ್ತದೆ.
BSNL JTO ನೇಮಕಾತಿ ಪರೀಕ್ಷೆಗೆ ಸಿಲಬಸ್ ಏಕೆ ತಿಳಿದುಕೊಳ್ಳಬೇಕು
ಅನೇಕ ಅಭ್ಯರ್ಥಿಗಳು ಇದೊಂದು ಸಾಮಾನ್ಯ ತಪ್ಪನ್ನು ಮಾಡುತ್ತಾರೆ ಏನೆಂದರೆ ಸಿಲಬಸ್ ಅನ್ನು ಸಂಪೂರ್ಣವಾಗಿ ತಿಳಿದುಕೊಳ್ಳದೆ ಅಭ್ಯರ್ಥಿಗಳು ಮೊದಲಿನಿಂದಲೇ ಪುಸ್ತಕಗಳನ್ನು ಓದಲು ಪ್ರಾರಂಭಿಸುತ್ತಾರೆ
ಆದರೆ ಸಿಲಬಸ್ ಅನ್ನು ಸಂಪೂರ್ಣವಾಗಿ ತಿಳಿದುಕೊಳ್ಳದೆ ಓದುವುದರಿಂದ ಸಮಯ ವ್ಯರ್ಥವಾಗುವುದರ ಜೊತೆಯಲ್ಲಿ ಆತ್ಮವಿಶ್ವಾಸ ಕುಗ್ಗುತ್ತದೆ. ಸಿಲಬಸ್ ತಿಳಿಯುವುದರಿಂದ ಆಗುವ ಪ್ರಯೋಜನಗಳನ್ನು ಈ ಕೆಳಗಂಡಂತೆ ವಿವರಿಸಬಹುದಾಗಿದೆ
- ಈ ಪರೀಕ್ಷೆಯಲ್ಲಿ ಮುಖ್ಯವಾಗಿ ಮೂರು ವಿಭಾಗಗಳಿರುವುದರಿಂದ ಯಾವ ವಿಷಯಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂಬುದು ತಿಳಿಯುತ್ತದೆ
- ಪರೀಕ್ಷಾ ಸಿಲಬಸ್ ನಲ್ಲಿ ಹೇಳಲಾಗುವ ಮುಖ್ಯ ಅಧ್ಯಾಯಗಳನ್ನು ಮೊದಲು ಪೂರ್ಣಗೊಳಿಸಬಹುದು
- ಸಿಲಬಸ್ ಅನ್ನು ತಿಳಿದುಕೊಂಡರೆ ಅನಗತ್ಯ ವಿಷಯಗಳನ್ನು ಓದುವ ಅವಶ್ಯಕತೆ ಇಲ್ಲ ಎಂಬ ಅಭಿಪ್ರಾಯಕ್ಕೆ ಬರಬಹುದು
- ಸಮಯವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಹಾಗೂ ನಿರ್ವಹಿಸಬಹುದು
- ಮಾಕ್ ಟೆಸ್ಟ್ ಗಳು ಮತ್ತು ಇಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಲು ಹಾಗೂ ಅಭ್ಯಾಸ ಮಾಡಲು ಸುಲಭವಾಗುತ್ತದೆ
- ಸಿಲಬಸ್ ಅನ್ನು ತಿಳಿದುಕೊಳ್ಳುವುದರಿಂದ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಬಹುದು
Engineering Stream–I ಸಂಪೂರ್ಣ ಸಿಲೆಬಸ್ ಮತ್ತು ವಿವರವಾದ ಮಾಹಿತಿ
BSNL JTO ಪರೀಕ್ಷೆಯ Engineering Stream–I ವಿಭಾಗವು ಅಭ್ಯರ್ಥಿಗಳ ಮೂಲ ಎಲೆಕ್ಟ್ರಾನಿಕ್ ಮತ್ತು ದೂರ ಸಂಪರ್ಕ ಜ್ಞಾನಕ್ಕೆ ಸಂಬಂಧಿಸಿದೆ ಇಂಜಿನಿಯರಿಂಗ್ ಜ್ಞಾನವನ್ನು ಪರೀಕ್ಷಿಸುವ ಪ್ರಮುಖ ವಿಭಾಗವಾಗಿದೆ ಈ ವಿಭಾಗದಿಂದ ಒಟ್ಟು 50 ಪ್ರಶ್ನೆಗಳು ಬರಲಿದ್ದು ಒಟ್ಟು 200 ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ ಆದುದರಿಂದ ಈ ವಿಭಾಗವನ್ನು ಉತ್ತಮವಾಗಿ ಸಿದ್ಧಪಡಿಸಿದರೆ ಅಂತಿಮ ಮೇರುಪಟ್ಟಿಯಲ್ಲಿ ಉತ್ತಮ ಸ್ಥಾನವನ್ನು ಪಡೆಯಬಹುದು
1. Materials and Components (ಮೆಟೀರಿಯಲ್ಸ್ ಮತ್ತು ಎಲೆಕ್ಟ್ರಾನಿಕ್ ಘಟಕಗಳು)
- Conductors
- Semiconductors
- Insulators
- Magnetic Materials
- Passive Components
- Active Components
- Resistors
- Capacitors
- Inductors
- Transformers
Conductors
- Copper
- Aluminium
- Silver
- Gold
Semiconductors
- Silicon
- Germanium
- Intrinsic Semiconductor
- Extrinsic Semiconductor
- P-Type Semiconductor
- N-Type Semiconductor
- Doping Process
Magnetic Materials
- Magnetic Flux
- Permeability
- Hysteresis
- Eddy Current
- Magnetic Circuits
Passive Components
- Resistor
- Capacitor
- Inductor
- Transformer
2. Physical Electronics, Electron Devices and Integrated Circuits
Diodes
- PN Junction Diode
- Zener Diode
- LED
- Photo Diode
- Tunnel Diode
- Varactor Diode
Bipolar Junction Transistor (BJT)
- NPN Transistor
- PNP Transistor
- Current Gain
- CE Configuration
- CB Configuration
- CC Configuration
- Biasing
FET (Field Effect Transistor)
- JFET
- MOSFET
- CMOS Technology
SCR (Silicon Controlled Rectifier)
- Construction
- Working Principle
- Triggering Methods
- Applications
Integrated Circuits (ICs)
- Analog IC
- Digital IC
- Linear IC
- Operational Amplifier IC
- CMOS IC
Opto Electronics
- LED
- LCD
- Optical Sensors
- Laser Diodes
- Photo Transistors
3. Network Theory
- Ohm’s Law
- Kirchhoff’s Laws
- Network Theorems
- Mesh Analysis
- Nodal Analysis
- Superposition Theorem
- Thevenin Theorem
- Norton Theorem
- Maximum Power Transfer Theorem
Transient Analysis
- RC Circuit
- RL Circuit
- RLC Circuit
ಅಭ್ಯಾಸ ಮಾಡಬೇಕು.
Steady State Analysis
- Phasor
- Impedance
- Admittance
- Resonance
Transmission Lines
- Characteristic Impedance
- Reflection Coefficient
- Standing Wave Ratio
- Power Transmission
4. Electromagnetic Theory
- Coulomb’s Law
- Electric Field
- Electric Potential
- Magnetic Field
- Maxwell’s Equations
- Electromagnetic Waves
Waveguides
- Rectangular Waveguide
- Circular Waveguide
- Modes of Propagation
Transmission Line Theory
- Reflection
- Standing Wave
- Matching
- Losses
Antennas
- Dipole Antenna
- Monopole Antenna
- Loop Antenna
- Horn Antenna
- Radiation Pattern
- Antenna Gain
- Bandwidth
5. Electronic Measurements and Instrumentation
Errors in Measurement
- Absolute Error
- Relative Error
- Percentage Error
Measuring Instruments
- Voltmeter
- Ammeter
- Wattmeter
- Multimeter
- CRO (Cathode Ray Oscilloscope)
- Digital Storage Oscilloscope
Transducers
- Temperature Transducer
- Pressure Transducer
- Displacement Sensor
- Strain Gauge
Telemetry
Data Acquisition Systems
6. Power Electronics
Thyristors
- SCR
- TRIAC
- DIAC
- GTO
Rectifiers
- Half Wave Rectifier
- Full Wave Rectifier
- Bridge Rectifier
Converters
- AC to DC Converter
- DC to DC Converter
- AC Voltage Controller
Inverters
- Single Phase Inverter
- Three Phase Inverter
- PWM Inverter
SMPS (Switched Mode Power Supply)
PWM (Pulse Width Modulation)
- Motor Speed Control
- Inverter Control
- Voltage Regulation
Engineering Stream–I ವಿಭಾಗಕ್ಕೆ ನಿಮ್ಮ ತಯಾರಿ ಹೇಗೆ ಇರಬೇಕು
ಈ ವಿಭಾಗದಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಅಭ್ಯರ್ಥಿಗಳು ಈ ಕೆಳಕಂಡ ತಯಾರಿ ವಿಧಾನವನ್ನು ಅನುಸರಿಸುವುದರ ಮೂಲಕ ಪರಿಣಾಮಕಾರಿಯಾಗಿ ತಯಾರಿಯನ್ನು ನಡೆಸಿ ಯಶಸ್ವಿಯಾಗಿ ಪರೀಕ್ಷೆಯನ್ನು ಗಳಿಸಬಹುದು
- ಮೊದಲು ಎಲೆಕ್ಟ್ರಾನಿಕ್ಸ್ ನ ಮೂಲಭೂತ ಪರಿಕಲ್ಪನೆಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು
- ಸೆಮಿ ಕಂಡಕ್ಟರ್ ಗಳು ನೆಟ್ವರ್ಕ್ ಸಿದ್ದಾಂತಗಳು ಮತ್ತು ಪವರ್ ಎಲೆಕ್ಟ್ರಾನಿಕ್ಸ್ ಅಧ್ಯಾಯಗಳಿಗೆ ಹೆಚ್ಚಿನ ಸಮಯವನ್ನು ನೀಡಿ
- ಸಂಬಂಧಪಟ್ಟ ಸೂತ್ರಗಳನ್ನು ಪ್ರತ್ಯೇಕವಾಗಿ ಬರೆದು ಪ್ರತಿದಿನ ಪುನರಾವರ್ತನೆ ಮಾಡಿ ಆದಷ್ಟು ಕಿರು ಟಿಪ್ಪಣಿಗಳ ರೀತಿಯಲ್ಲಿ ಬರೆದು ನಿಮ್ಮ ತಯಾರಿ ಕೊಠಡಿಯಲ್ಲಿ ಅಂಟಿಸಿಕೊಳ್ಳಿ
- ಸಂಖ್ಯಾಶಾಸ್ತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ನಿಯಮಿತವಾಗಿ ಅಭ್ಯಾಸ ಮಾಡಿ
- ಇಂದಿನ ವರ್ಷದ Engineering Stream–I ಪ್ರಶ್ನೆಗಳನ್ನು ಕುಲಂಕುಶವಾಗಿ ಅಧ್ಯಯನ ಮಾಡಿ ಪರಿಹರಿಸಿ
- ವಾರಕ್ಕೆ ಕನಿಷ್ಠ ಒಂದು ಬಾರಿ ಸಂಪೂರ್ಣ ಮಾಕ್ ಟೆಸ್ಟ್ ಅನ್ನು ಬರೆಯಿರಿ
- ತಯಾರಿ ಸಂದರ್ಭದಲ್ಲಿ ನಿಮ್ಮ ಸಮಯವನ್ನು ಎಂದಿಗೂ ಹಾಳು ಮಾಡಬೇಡಿ ಸಮಯ ನಿರ್ವಹಣೆಗೆ ಹೆಚ್ಚಿನ ಗಮನವನ್ನು ನೀಡಿ
Engineering Stream–II ಸಂಪೂರ್ಣ ಸಿಲೆಬಸ್ ಮತ್ತು ವಿವರವಾದ ಮಾಹಿತಿ
ಈ BSNL JTO ಪರೀಕ್ಷೆಯ Engineering Stream–II ವಿಭಾಗವು ಅಭ್ಯರ್ಥಿಗಳ ಉನ್ನತ ಹಾಗೂ ಗರಿಷ್ಠ ಮಟ್ಟದ ಎಲೆಕ್ಟ್ರಾನಿಕ್ಸ್ ವಿಷಯಗಳು ಸಂವಹನ ತಂತ್ರಜ್ಞಾನ ಕಂಪ್ಯೂಟರ್ ಇಂಜಿನಿಯರಿಂಗ್ ಹಾಗೂ ಮೈಕಲ್ ಕುರಿತು ಇರುವ ಜ್ಞಾನವನ್ನು ಪರೀಕ್ಷಿಸುತ್ತದೆ ಈ ವಿಭಾಗದಲ್ಲಿ ಒಟ್ಟು 50 ಪ್ರಶ್ನೆಗಳನ್ನು ಕೇಳಲಾಗುವುದು ಇದಕ್ಕೆ ಒಟ್ಟು 200 ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ ಆದುದರಿಂದ ಈ ವಿಭಾಗವು ಸಹ ಪ್ರಮುಖವಾಗಿರುವುದರಿಂದ ಈ ಅಂಕಗಳನ್ನು ಗಳಿಸುವುದರಿಂದ ಅಂತಿಮ ಮೆರಿಟ್ ಪಟ್ಟಿಯಲ್ಲಿ ಉತ್ತಮ ಸ್ಥಾನವನ್ನು ಪಡೆಯಬಹುದಾಗಿರುತ್ತದೆ
1. Analog Electronic Circuits
- Amplifiers
- Oscillators
- Operational Amplifier (OP-AMP)
- Power Supply Circuits
- Filters
- Feedback Circuits
- Frequency Response
Amplifiers
- Voltage Amplifier
- Current Amplifier
- Power Amplifier
- Multistage Amplifier
- Gain
- Bandwidth
- Frequency Response
Oscillators
- RC Oscillator
- LC Oscillator
- Hartley Oscillator
- Colpitts Oscillator
- Crystal Oscillator
Operational Amplifier (OP-AMP)
- Ideal OP-AMP
- Inverting Amplifier
- Non-Inverting Amplifier
- Summing Amplifier
- Integrator
- Differentiator
- Comparator
Power Supply Circuits
- Rectifier
- Filter
- Voltage Regulator
- Zener Regulator
- IC Regulator
2. Digital Electronic Circuits
Boolean Algebra
- Boolean Laws
- De Morgan’s Theorem
- Logic Simplification
- Karnaugh Map (K-Map)
Logic Gates
- AND
- OR
- NOT
- NAND
- NOR
- XOR
- XNOR
Flip-Flops
- SR Flip-Flop
- JK Flip-Flop
- D Flip-Flop
- T Flip-Flop
Counters
- Ripple Counter
- Synchronous Counter
- Up Counter
- Down Counter
Registers
- Shift Register
- Universal Shift Register
- Ring Counter
Memories
- RAM
- ROM
- PROM
- EPROM
- EEPROM
- Flash Memory
A/D And D/A Converters
- Analog to Digital Converter
- Digital to Analog Converter
- Resolution
- Quantization
3. Control Systems
- Open Loop System
- Closed Loop System
- Feedback
- Transfer Function
- Stability
- Root Locus
- Frequency Response
- Bode Plot
- Nyquist Plot
Controllers
- P Controller
- PI Controller
- PD Controller
- PID Controller
4. Communication Systems
Modulation
- AM (Amplitude Modulation)
- FM (Frequency Modulation)
- PM (Phase Modulation)
Digital Communication
- ASK
- FSK
- PSK
- PCM
- Delta Modulation
Multiplexing
- TDM
- FDM
- WDM
Optical Fiber Communication
- Optical Fiber Structure
- Types of Optical Fiber
- Total Internal Reflection
- Optical Losses
- Optical Connectors
Satellite Communication
- Satellite Orbit
- Uplink
- Downlink
- Transponder
- VSAT
- GPS
5. Microwave Engineering
Waveguides
- Rectangular Waveguide
- Circular Waveguide
- TE Mode
- TM Mode
Microwave Devices
- Magnetron
- Klystron
- Gunn Diode
- IMPATT Diode
Antennas
- Horn Antenna
- Parabolic Reflector
- Microstrip Antenna
MASER ಮತ್ತು LASER
Wave Propagation
- Ground Wave
- Sky Wave
- Space Wave
6. Computer Engineering
Data Representation
- Binary Number
- Octal
- Decimal
- Hexadecimal
- Number Conversion
Programming Concepts
- Algorithms
- Flowcharts
- Variables
- Loops
- Functions
Computer Architecture
- CPU
- ALU
- Control Unit
- Registers
- Bus System
Memory Organization
- Primary Memory
- Secondary Memory
- Cache Memory
- Virtual Memory
Input And Output Devices
- Keyboard
- Mouse
- Scanner
- Printer
- Monitor
- Storage Devices
7. Microprocessors
Architecture
- 8085 Architecture
- 8086 Architecture
- Registers
- Flags
- Address Bus
- Data Bus
Instruction Set
- Data Transfer Instructions
- Arithmetic Instructions
- Logical Instructions
- Branch Instructions
Interfacing
- Memory Interfacing
- I/O Interfacing
- Interrupts
- DMA
Telecom Applications
- Telephone Exchanges
- Router
- Modem
- Optical Network Equipment
- Switching Systems
Engineering Stream–II ವಿಭಾಗಕ್ಕೆ ತಯಾರಿ ಸಲಹೆಗಳು
ಈ ವಿಭಾಗದಲ್ಲಿ ಉತ್ತಮ ಮಟ್ಟದಲ್ಲಿ ಅಂಕಗಳನ್ನು ಗಳಿಸಲು ಅಭ್ಯರ್ಥಿಗಳು ಈ ವಿಧಾನಗಳನ್ನು ಅನುಸರಿಸಬಹುದು.
- Communication Systems ಮತ್ತು Digital Electronics ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಿ.
- Optical Fiber, Satellite Communication ಮತ್ತು Modulation ವಿಷಯಗಳನ್ನು ಸಂಪೂರ್ಣವಾಗಿ ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿ.
- OP-AMP, Logic Gates ಹಾಗೂ Microprocessor Architecture ಗೆ ಸಂಬಂಧಿಸಿದ ಸೂತ್ರಗಳು ಮತ್ತು ಚಿತ್ರಗಳನ್ನು ಪುನರಾವರ್ತಿಸಿ.
- Control Systems ನಲ್ಲಿ Bode Plot, Root Locus ಮತ್ತು Stability ಸಮಸ್ಯೆಗಳನ್ನು ಹೆಚ್ಚಾಗಿ ಅಭ್ಯಾಸ ಮಾಡಿ.
- ಕಂಪ್ಯೂಟರ್ ಮೂಲಭೂತ ವಿಷಯಗಳು, ಸಂಖ್ಯೆ ಪದ್ಧತಿಗಳು (Number Systems) ಹಾಗೂ Memory Organization ಅನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಿ ಮತ್ತು ಸಂಪೂರ್ಣವಾಗಿ ಅಧ್ಯಯನ ಮಾಡಿ
- ಪ್ರತಿದಿನ ಕನಿಷ್ಠ ಒಂದು ಸಂಪೂರ್ಣ Mock Test ಬರೆಯುವ ಅಭ್ಯಾಸ ಬೆಳೆಸಿಕೊಳ್ಳಿ.
- ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡಿ ವಿಶ್ಲೇಷಿಸಿ ಪ್ರಮುಖ ಅಧ್ಯಾಯಗಳನ್ನು ಗುರುತಿಸಿ.
- ನಿಮಗೆ ಕಠಿಣ ವಿಷಯ ಎನಿಸುವ ಅಧ್ಯಾಯಗಳಿಗೆ ಸಂಕ್ಷಿಪ್ತ ಟಿಪ್ಪಣಿಗಳನ್ನು (Short Notes) ತಯಾರಿಸಿ ನಿಯಮಿತವಾಗಿ ಮರು ಅಭ್ಯಾಸ ಮಾಡಿ.
General Ability Test (Section–III) ಸಿಲೆಬಸ್, ತಯಾರಿ ವಿಧಾನ ಮತ್ತು ಪ್ರಮುಖ ವಿಷಯಗಳು
BSNL JTO ಪರೀಕ್ಷೆಯಲ್ಲಿ ಜನರಲ್ ಅಬಿಲಿಟಿ ಟೆಸ್ಟ್ ವಿಭಾಗವು ಅಭ್ಯರ್ಥಿಗಳ ಸಾಮ್ಯಾನ ಜ್ಞಾನ, ಭಾಷಾ ಕೌಶಲ್ಯ, ಪ್ರಚಲಿತ ವಿದ್ಯಮಾನಗಳ ಅರಿವು ಮತ್ತು ವೈಜ್ಞಾನಿಕ ಚಿಂತನೆಗೆ ಸಂಬಂಧಿಸಿದ ಸಾಮರ್ಥ್ಯವನ್ನು ಪರೀಕ್ಷಿಸುವ ಉದ್ದೇಶದಿಂದ ರೂಪಿಸಲಾಗಿದ್ದು ಈ ವಿಭಾಗದಲ್ಲಿ ಒಟ್ಟು 20 ಪ್ರಶ್ನೆಗಳಿದ್ದು 80 ಅಂಕಗಳನ್ನು ನಿಗದಿಪಡಿಸಲಾಗಿರುತ್ತದೆ
ಈ ವಿಭಾಗದಲ್ಲಿ ಪ್ರಶ್ನೆಗಳ ಸಂಖ್ಯೆ ಕಡಿಮೆ ಇದ್ದರೂ ಸರಿಯಾದ ತಯಾರಿಯನ್ನು ಮಾಡಿದರೆ ಕಡಿಮೆ ಸಮಯದಲ್ಲಿ ಹೆಚ್ಚು ಅಂಕಗಳನ್ನು ಪಡೆಯಬಹುದಾದ ವಿಭಾಗ ಇದಾಗಿದ್ದು ಸಾಮಾನ್ಯ ಜ್ಞಾನ ಇಂಗ್ಲಿಷ್ ಭಾಷೆಯಲ್ಲಿ ಉತ್ತಮ ಹಿಡಿತ ಹೊಂದಿರುವ ಅಭ್ಯರ್ಥಿಗಳು ಈ ವಿಭಾಗದಲ್ಲಿ ಹೆಚ್ಚಿನ ಅಂಕಗಳನ್ನು ಪಡೆಯಬಹುದು ಈ ಪರೀಕ್ಷೆಯಲ್ಲಿ ಮುಖ್ಯವಾಗಿ ಈ ಕೆಳಕಂಡ ವಿಷಯಗಳಿಂದ ಪ್ರಶ್ನೆಗಳನ್ನು ಕೇಳಲಾಗುತ್ತದೆ
1. English Comprehension
- Passage Reading
- Main Idea
- Title Identification
- Synonyms
- Antonyms
- Vocabulary
- Sentence Meaning
- Word Usage
2. English Grammar
- Parts of Speech
- Articles
- Tenses
- Active Voice
- Passive Voice
- Direct and Indirect Speech
- Prepositions
- Conjunctions
- Subject-Verb Agreement
- Error Spotting
- Sentence Improvement
- Fill in the Blanks
3. Basic Communication Skills
- Formal Communication
- Informal Communication
- Email Writing Concepts
- Office Communication
- Telephone Etiquette
- Business Communication Basics
4. Current Affairs
- ರಾಷ್ಟ್ರೀಯ ಸುದ್ದಿಗಳು
- ಅಂತರರಾಷ್ಟ್ರೀಯ ಸುದ್ದಿಗಳು
- ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳು
- ರಾಜ್ಯ ಸರ್ಕಾರದ ಪ್ರಮುಖ ಯೋಜನೆಗಳು
- ವಿಜ್ಞಾನ ಮತ್ತು ತಂತ್ರಜ್ಞಾನ
- ಹೊಸ ಸಂಶೋಧನೆಗಳು
- ಬಾಹ್ಯಾಕಾಶ ಕಾರ್ಯಕ್ರಮಗಳು
- ಕ್ರೀಡಾ ಸುದ್ದಿಗಳು
- ಪ್ರಶಸ್ತಿಗಳು
- ಆರ್ಥಿಕ ಬೆಳವಣಿಗೆಗಳು
- ಪರಿಸರ ಸಂಬಂಧಿತ ಘಟನೆಗಳು
5. General Knowledge
- ಭಾರತದ ಸಂವಿಧಾನ
- ಭಾರತೀಯ ಆರ್ಥಿಕತೆ
- ಪ್ರಮುಖ ದಿನಗಳು
- ರಾಷ್ಟ್ರೀಯ ಚಿಹ್ನೆಗಳು
- ಪ್ರಮುಖ ಸಂಸ್ಥೆಗಳು
- ವಿಶ್ವಸಂಸ್ಥೆ (UNO)
- ವಿಜ್ಞಾನ ಸಂಸ್ಥೆಗಳು
- ಭಾರತೀಯ ವಿಜ್ಞಾನಿಗಳು
- ಪ್ರಮುಖ ಆವಿಷ್ಕಾರಗಳು
- ಪ್ರಸಿದ್ಧ ವ್ಯಕ್ತಿಗಳು
- ಪುಸ್ತಕಗಳು ಮತ್ತು ಲೇಖಕರು
- ಪ್ರಶಸ್ತಿಗಳು
- ಕ್ರೀಡೆ
6. Everyday Science
- Physics ಮೂಲಭೂತ ಅಂಶಗಳು
- Chemistry ಮೂಲಭೂತ ಅಂಶಗಳು
- Biology ಮೂಲಭೂತ ಅಂಶಗಳು
- Human Body
- Nutrition
- Environment
- Energy Sources
- Electricity Basics
- Heat
- Light
- Sound
7. Indian History
ಪ್ರಾಚೀನ ಭಾರತ
- ಸಿಂಧೂ ಕಣಿವೆ ನಾಗರಿಕತೆ
- ವೇದ ಕಾಲ
- ಮೌರ್ಯ ಸಾಮ್ರಾಜ್ಯ
- ಗುಪ್ತ ಸಾಮ್ರಾಜ್ಯ
ಮಧ್ಯಕಾಲೀನ ಭಾರತ
- ದೆಹಲಿ ಸುಲ್ತಾನರು
- ಮೊಘಲ್ ಸಾಮ್ರಾಜ್ಯ
- ವಿಜಯನಗರ ಸಾಮ್ರಾಜ್ಯ
ಆಧುನಿಕ ಭಾರತ
- ಬ್ರಿಟಿಷರ ಆಡಳಿತ
- 1857ರ ಪ್ರಥಮ ಸ್ವಾತಂತ್ರ್ಯ ಸಮರ
- ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- ಸ್ವಾತಂತ್ರ್ಯ ಹೋರಾಟ
- ಮಹಾತ್ಮ ಗಾಂಧೀಜಿ
- ಸುಭಾಷ್ ಚಂದ್ರ ಬೋಸ್
- ಸ್ವಾತಂತ್ರ್ಯ ಚಳವಳಿ
8. Indian Geography
- ಭಾರತದ ಭೌಗೋಳಿಕ ಸ್ಥಾನ
- ರಾಜ್ಯಗಳು ಮತ್ತು ರಾಜಧಾನಿಗಳು
- ಪ್ರಮುಖ ನದಿಗಳು
- ಪರ್ವತಗಳು
- ಮರುಭೂಮಿಗಳು
- ಅರಣ್ಯಗಳು
- ಹವಾಮಾನ
- ಮಣ್ಣು
- ಕೃಷಿ
- ಖನಿಜ ಸಂಪತ್ತು
- ರಾಷ್ಟ್ರೀಯ ಉದ್ಯಾನಗಳು
- ಜೀವವೈವಿಧ್ಯ
9. Telecom Awareness
- Telecom Networks
- Mobile Communication
- GSM
- CDMA
- LTE
- 4G Technology
- 5G Technology
- Fiber Optic Network
- Broadband
- Wi-Fi
- Internet Protocol
- Switching Systems
- Network Security
- Spectrum
10. Basic Scientific Events
- ISRO ಯೋಜನೆಗಳು
- Chandrayaan
- Aditya Mission
- Gaganyaan
- Artificial Intelligence
- Robotics
- Machine Learning
- Quantum Technology
- Green Energy
- Renewable Energy
- Semiconductor Technology
BSNL JTO ಪರೀಕ್ಷೆಗೆ ಸಾಮಾನ್ಯ ತಯಾರಿ ಸಲಹೆಗಳು
- ತಯಾರಿಯನ್ನು ಆರಂಭಿಸುವ ಮೊದಲು ಪರೀಕ್ಷೆಯ ಸಂಪೂರ್ಣ ಸಿಲೆಬಸನ್ನು ಓದಿ ಅರ್ಥೈಸಿಕೊಳ್ಳಿ
- ಸಮಯ ಆಧಾರಿತ ವೇಳಾಪಟ್ಟಿಯನ್ನು ತಯಾರಿಸಿ
- ನಿಮಗೆ ಕಠಿಣವೆನಿಸುವ ವಿಷಯಗಳನ್ನು ಬೆಳಗಿನ ಸಂದರ್ಭ ದಲ್ಲಿ ಓದಿ
- ಪ್ರತಿದಿನವೂ ಕನಿಷ್ಠ 7 ರಿಂದ 9 ಗಂಟೆಗಳ ಕಾಲ ಅಧ್ಯಯನ ಮಾಡಿ ಇದು ನಿಮ್ಮ ನಿರಂತರತೆಯನ್ನು ಅಭಿವೃದ್ಧಿಪಡಿಸುತ್ತದೆ
- ವಾರಕ್ಕೆ ಒಂದು ಬಾರಿ ರಿವಿಷನ್ ಗೆ ಸಮಯವನ್ನು ಮೀಸಲಿಡಿ. ನೀವು ವಾರಪೂರ್ತಿ ಓದಿದ ವಿಷಯಗಳನ್ನು ರಿವಿಶನ್ ಮಾಡಲು ಸಹಾಯವಾಗುತ್ತದೆ
- ಕಿರು ನೋಟ್ಸ್ ಗಳನ್ನು ತಯಾರಿಸಿಕೊಳ್ಳಿ ಇದು ಪರೀಕ್ಷೆಯ ಕೊನೆಯ ಸಂದರ್ಭಗಳಲ್ಲಿ ರಿವಿಜನ್ ಗೆ ಸಹಾಯವಾಗುತ್ತದೆ
- ಸೂತ್ರಗಳು ಮತ್ತು ಪ್ರಮುಖ ಅಂಶಗಳ ಪಟ್ಟಿಯನ್ನು ತಯಾರಿಸಿ ನಿಮ್ಮ ತಯಾರಿ ಕೊಠಡಿಯಲ್ಲಿ ಹಾಕಿಕೊಳ್ಳಿ
- ಮಾಕ್ ಟೆಸ್ಟ್ ಗಳನ್ನು ಬರೆದ ನಂತರ ನಿಮ್ಮ ತಪ್ಪುಗಳನ್ನು ವಿಶ್ಲೇಷಿಸಿ ತಪ್ಪುಗಳಾಗದಂತೆ ಹೆಚ್ಚಿನ ಅಧ್ಯಯನವನ್ನು ಕೈಗೊಂಡು ಸರಿಪಡಿಸಿಕೊಳ್ಳಿ
- ಪರೀಕ್ಷೆಯ ಸಮಯದಲ್ಲಿ ಮೊದಲು ಸುಲಭವಾದ ಪ್ರಶ್ನೆಗಳಿಗೆ ಉತ್ತರಿಸಿ. ನಂತರ ಕಷ್ಟಕರವಾದ ಪ್ರಶ್ನೆಗಳನ್ನು ಎದುರಿಸಲು ಪ್ರಯತ್ನಿಸಿ
- ನೆಗೆಟಿವ್ ಮಾರ್ಕಿಂಗ್ ಇರುವುದರಿಂದ ಊಹೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರವನ್ನು ನೀಡುವುದನ್ನು ತಪ್ಪಿಸಿ
BSNL JTO ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಪ್ರಮುಖ ಸಲಹೆಗಳು
BSNL JTO ಪರೀಕ್ಷೆಯಲ್ಲಿ ಕೇವಲ ಪುಸ್ತಕಗಳನ್ನು ಓದುವುದು ಸಾಕಾಗುವುದಿಲ್ಲ ಬದಲಾಗಿ ಉತ್ತಮ ರೀತಿಯಲ್ಲಿ ಯೋಜನೆ ರೂಪಿಸುವುದು ನಿಯಮಿತವಾಗಿ ಅಭ್ಯಾಸ ಮಾಡುವುದು ಸಮಯದ ಪರಿಣಾಮಕಾರಿ ನಿರ್ವಹಣೆ ಮತ್ತು ನಿರಂತರವಾಗಿ ಮರು ಅಭ್ಯಾಸ ಮಾಡುವುದರಿಂದ ಉತ್ತಮ ಅಂಗಗಳನ್ನು ಪಡೆಯಬಹುದಾಗಿರುತ್ತದೆ.
Engineering Stream–I ಮತ್ತು Engineering Stream–II ವಿಷಯಗಳಿಗೆ ಹೆಚ್ಚಿನ ಆದ್ಯತೆ ನೀಡಿ ಇದರ ಜೊತೆಯಲ್ಲಿ ಜನರಲ್ ಅಬಿಲಿಟಿ ಟೆಸ್ಟ್ ವಿಭಾಗವನ್ನು ನಿರ್ಲಕ್ಷಿಸದೆ ಪ್ರತಿದಿನವೂ ಸ್ವಲ್ಪ ಸಮಯವನ್ನು ಮೀಸಲಿಡಿ ನಿಯಮಿತವಾಗಿ ಮಾಕ್ ಟೆಸ್ಟ್ ಗಳನ್ನು ಬರೆಯಿರಿ
ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿ ಪ್ರಚಲಿತ ವಿದ್ಯಮಾನಗಳ ಅಧ್ಯಯನವು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವುದರಿಂದ ಉತ್ತಮ ಅಂಕಗಳನ್ನು ನೀವು ಪಡೆಯುತ್ತೀರಿ.
BSNL JTO ಪರೀಕ್ಷೆಗೆ 90 ದಿನಗಳ ಅಧ್ಯಯನ ಯೋಜನೆ
ಯಾವುದೇ ಪರೀಕ್ಷೆಯಾಗಲಿ ನಿಗದಿತ ಸಮಯದಲ್ಲಿ ಪರಿಣಾಮಕಾರಿಯಾಗಿ ಅಧ್ಯಯನ ಹಾಗೂ ತಯಾರಿಯನ್ನು ನಡೆಸಲು ನಿಗದಿತ ಸಮಯದ ವೇಳಾಪಟ್ಟಿ ಅನುರೂಪಿಸಿಕೊಳ್ಳಬೇಕಾಗುತ್ತದೆ ಅದರಂತೆಯೇ ಈ ಪರೀಕ್ಷೆಯನ್ನು ಈ ಕೆಳಕಂಡಂತೆ ನೀಡಲಾಗಿದೆ
ಮೊದಲ 30 ದಿನಗಳು: ಸಿಲಬಸ್ ಪೂರ್ಣಗೊಳಿಸಿ
ಪ್ರತಿದಿನದ ಅಧ್ಯಯನ ವೇಳಾಪಟ್ಟಿ
- Engineering Stream–I – 3 ಗಂಟೆ
- Engineering Stream–II – 3 ಗಂಟೆ
- General Ability – 1 ಗಂಟೆ
- Current Affairs – 30 ನಿಮಿಷ
- Revision – 30 ನಿಮಿಷ
ಈ ಹಂತದಲ್ಲಿ ಮಾಡಬೇಕಾದ ಪ್ರಮುಖ ಕೆಲಸಗಳು
- ಎಲ್ಲ ವಿಚಾರಗಳ ಮೂಲಭೂತ ಪರಿಕಲ್ಪನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ
- ಪ್ರತಿಯೊಂದು ಅಧ್ಯಾಯಕ್ಕೆ ಸಂಬಂಧಿಸಿದ ಶಾರ್ಟ್ ನೋಟ್ಸ್ ಅನ್ನು ತಯಾರಿಸಿ
- ಮುಖ್ಯ ಸೂತ್ರಗಳು ಮತ್ತು ಪ್ರಮುಖ ಅಂಶಗಳನ್ನು ಪ್ರತ್ಯೇಕವಾಗಿ ಬರೆದಿಟ್ಟುಕೊಳ್ಳಿ
- ದಿನದ ಕೊನೆ ಸಮಯದಲ್ಲಿ ಓದಿದ ವಿಷಯಗಳನ್ನು ರಿವಿಶನ್ ಮಾಡಿ
31 ರಿಂದ 60ನೇ ದಿನಗಳು: ಅಭ್ಯಾಸ ಮಾಡುವುದು ಮತ್ತು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು
ಮಾಡಬೇಕಾದ ಕೆಲಸಗಳು
- ವಿಷಯವಾರು ಬಹು ಆಯ್ಕೆ ಪ್ರಶ್ನೆಗಳನ್ನು ಬಿಡಿಸಿ
- ಸಂಖ್ಯಾಶಾಸ್ತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಮತ್ತು ಪ್ರಶ್ನೆಗಳಿಗೆ ಅಧ್ಯಯನ ಮಾಡಿ
- ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಬಗೆಹರಿಸಿ
- ಪ್ರತಿವಾರ ಕನಿಷ್ಠ ಎರಡು ಬಾರಿ ಸಂಪೂರ್ಣ ಮಾಕ್ ಟೆಸ್ಟ್ ಬರೆಯಿರಿ
- ತಪ್ಪಾದ ಪ್ರಶ್ನೆಗಳ ಪಟ್ಟಿಯನ್ನು ತಯಾರಿಸಿ ಅವುಗಳಿಗೆ ಹೆಚ್ಚಿನ ಅಧ್ಯಯನವನ್ನು ಮಾಡಿ ಸರಿಪಡಿಸಿಕೊಳ್ಳಿ
ಈ ಹಂತದಲ್ಲಿ ವೇಗ ಮತ್ತು ನಿಖರತೆ ಎರಡನ್ನು ಹೆಚ್ಚಿಸಬಹುದು ಆದುದರಿಂದ 31 ರಿಂದ 60ನೇ ದಿನದ ಅಭ್ಯಾಸವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ
ಕೊನೆಯ 30 ದಿನಗಳು: ರಿವಿಜನ್ ಮತ್ತು ಮಾಕ್ ಟೆಸ್ಟ್ ಗಳನ್ನು ಬರೆಯಿರಿ
BSNL JTO ಪರೀಕ್ಷೆಗೆ ಇರುವ ಕೊನೆಯ 30 ದಿನಗಳನ್ನು ಸಂಪೂರ್ಣವಾಗಿ ರಿವಿಜನ್ ಮತ್ತು ಮಾಕ ಟೆಸ್ಟ್ ಗಳನ್ನು ಬರೆಯಲು ಮೀಸಲಿಡಿ ಇದರಿಂದ ಪ್ರಶ್ನೆಗಳ ನೀಲನಕ್ಷೆ ಹಾಗೂ ಮಾಕ್ ಟೆಸ್ಟ್ ಗಳನ್ನು ಬರೆಯಲು ಸಹಾಯವಾಗುತ್ತದೆ
ಪ್ರತಿದಿನ ಮಾಡಬೇಕಾದ ಕೆಲಸಗಳು
- ಸೂತ್ರಗಳ ರಿವಿಶನ್ ಮಾಡುವುದು
- ಅಧ್ಯಯನದ ಸಂದರ್ಭದಲ್ಲಿ ನೀವು ತಯಾರಿಸಿರುವ ಶಾರ್ಟ್ ನೋಟ್ಸ್ ಗಳನ್ನು ರಿವಿಶನ್ ಮಾಡುವುದು
- ಪ್ರತಿ ದಿನ ಒಂದು ಸಂಪೂರ್ಣ ಮಾಕ್ ಟೆಸ್ಟ್ ತೆಗೆದುಕೊಳ್ಳುವುದು
- ತಪ್ಪುಗಳ ವಿಶ್ಲೇಷಣೆ ಮಾಡುವುದು
- ಪ್ರಚಲಿತ ಘಟನೆಗಳ ಪುನರಾವರ್ತನೆ ಮಾಡುವುದು
ಪರೀಕ್ಷೆಯ ಒಂದು ವಾರದ ಹಿಂದೆ ಮಾಡಬಾರದ ಕೆಲಸಗಳು
- ಯಾವುದೇ ಕಾರಣಕ್ಕೂ ಹೊಸ ವಿಷಯಗಳನ್ನು ಓದಬೇಡಿ ಈಗಾಗಲೇ ಓದಿರುವ ವಿಷಯಗಳ ಮರು ಅಧ್ಯಯನ ಮಾಡಿ
- ಈಗಾಗಲೇ ಓದಿರುವ ವಿಷಯಗಳನ್ನು ಮಾತ್ರ ಪುನರಾವರ್ತಿಸಿ
- ಆತ್ಮವಿಶ್ವಾಸದಿಂದ ಪರೀಕ್ಷೆಗೆ ಸಿದ್ಧರಾಗಿ ಮತ್ತು ಯಾವುದೇ ಭಯದ ವಾತಾವರಣದಲ್ಲಿ ಇರಬೇಡಿ
ಅತ್ಯುತ್ತಮ ಪುಸ್ತಕಗಳು
Engineering Subjects
- Electronic Devices and Circuits
- Network Analysis
- Communication Systems
- Digital Electronics
- Analog Electronics
- Control Systems
- Microprocessors
- Microwave Engineering
General Ability
- English Grammar
- Objective General English
- General Knowledge Manual
- Current Affairs Magazine
- Objective General Science
ಪ್ರತಿದಿನ ಪತ್ರಿಕೆ ಓದುವ ಅಭ್ಯಾಸವೂ ಬಹಳ ಸಹಾಯಕವಾಗುತ್ತದೆ.
BSNL JTO ಪರೀಕ್ಷೆಗೆ ಅತ್ಯುತ್ತಮ ತಯಾರಿ ತಂತ್ರಗಳು
- ಪರೀಕ್ಷಾ ತಯಾರಿಯನ್ನು ಆರಂಭಿಸುವ ಮೊದಲು ಸಂಪೂರ್ಣ ಸಿಲಬಸ್ ಅನ್ನು ತಿಳಿದುಕೊಳ್ಳಿ ಇದಕ್ಕೆ ಮುಂಚೆ ಯಾವುದೇ ಪುಸ್ತಕಗಳನ್ನು ಓದಲು ಆರಂಭಿಸಬೇಡಿ
- ಪ್ರತಿದಿನವೂ ಯಾವ ವಿಷಯಕ್ಕೆ ಎಷ್ಟು ಸಮಯ ನೀಡಬೇಕು ಯಾವ ವಿಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದನ್ನು ಮುಂಚಿತವಾಗಿ ನಿರ್ಧರಿಸಿ
- ಪರಿಚಯ ಒಟ್ಟು 480 ಅಂಕಗಳಲ್ಲಿ 400 ಅಂಕಗಳು ಇಂಜಿನಿಯರಿಂಗ್ ವಿಭಾಗದಲ್ಲೇ ಬರುವುದರಿಂದ ತಾಂತ್ರಿಕ ವಿಷಯಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಿ ಇದು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ಸಹಾಯ ಮಾಡುತ್ತದೆ
- ಪ್ರತಿದಿನವೂ ಬಹು ಆಯ್ಕೆ ಪ್ರಶ್ನೆಗಳನ್ನು ಅಭ್ಯಾಸ ಮಾಡಿ ದಿನದಲ್ಲಿ ಕನಿಷ್ಠ 100 ಬಹು ಆಯ್ಕೆ ಪ್ರಶ್ನೆಗಳನ್ನು ಬಿಡಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಿ
- ಪರೀಕ್ಷೆಯಲ್ಲಿ ಕೇಳಬಹುದಾದಂತಹ ಸೂತ್ರಗಳನ್ನು ಒಂದು ಕಡೆ ಬರೆದಿಟ್ಟು ಫಾರ್ಮುಲಾ ಬುಕ್ ಅನ್ನು ತಯಾರಿಸಿಕೊಳ್ಳಿ ಇದು ರಿವಿಜನ್ ಮಾಡುವ ಸಮಯದಲ್ಲಿ ತುಂಬಾ ಸಹಾಯಕವಾಗುತ್ತದೆ
- ಪ್ರತಿಯೊಂದು ಅಧ್ಯಾಯದ ವ್ಯಾಖ್ಯಾನಗಳು ಚಿತ್ರಗಳು ಸೂತ್ರಗಳು ಹಾಗೂ ಪ್ರಮುಖ ಅಂಶಗಳ ಕಿರು ನೋಟ್ಸ್ ಗಳನ್ನು ತಯಾರಿಸಿ ಇದು ರಿವಿಜನ್ ಸಮಯದಲ್ಲಿ ಹೆಚ್ಚು ಉಪಯುಕ್ತ
- ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದರಿಂದ ಪ್ರಶ್ನೆಪತ್ರಿಕೆಗಳ ಮಾದರಿ ಮುಖ್ಯ ಅಧ್ಯಾಯಗಳು ಹಾಗೂ ಕಠಿಣತೆಯ ಮಟ್ಟವನ್ನು ತಿಳಿದುಕೊಳ್ಳಬಹುದು ಆದರಿಂದ ಹಿಂದಿನ 5 ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ
- ಮಾಕ್ ಟೆಸ್ಟ್ ಗಳನ್ನು ಬರೆಯುವುದರಿಂದ ಸಮಯ ನಿರ್ವಹಣೆ ಸುಧಾರಣೆಗೊಂಡು ಆತ್ಮವಿಶ್ವಾಸ ಹೆಚ್ಚುವುದರಿಂದ ಹಾಗೂ ದುರ್ಬಲ ವಿಷಯಗಳು ತಿಳಿಯುವುದರಿಂದ ಮೊದಲ ಅರವತ್ತು ದಿನಗಳಲ್ಲಿ ವಾರಕ್ಕೆ ಒಂದು ಸಂಪೂರ್ಣ ಮಾಕ್ ಟೆಸ್ಟ್ ತೆಗೆದುಕೊಳ್ಳಿ ಕೊನೆಯ 30 ದಿನಗಳಲ್ಲಿ ಪ್ರತಿದಿನವೂ ಒಂದೊಂದು ಸಂಪೂರ್ಣ ಮಾಕ್ ಟೆಸ್ಟ್ ಅನ್ನು ತೆಗೆದುಕೊಳ್ಳುವುದು ಉತ್ತಮ
BSNL JTO ಪರೀಕ್ಷೆ ದಿನ ಗಮನಿಸಬೇಕಾದ ಅಂಶಗಳು
ಈ ಕೆಳಕಂಡ ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವ ಮೂಲಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ಹಾಗೂ ಪರೀಕ್ಷಾ ಸಮಯದಲ್ಲಿ ಹೆಚ್ಚು ಆತ್ಮವಿಶ್ವಾಸದಿಂದ ಯಾವುದೇ ಭಯವಿಲ್ಲದೆ ಇರಬಹುದಾಗಿರುತ್ತದೆ ಅವುಗಳೆಂದರೆ
ಪರೀಕ್ಷೆಯ ಮೊದಲು
- ಪ್ರವೇಶ ಪತ್ರವನ್ನು ನಿಮ್ಮೊಡನೆ ತೆಗೆದುಕೊಂಡು ಹೋಗಿದ್ದರಾ ಎಂದು ಪರಿಶೀಲಿಸಿ
- ಪರಿಶೀಲನೆಗೆ ಬೇಕಾಗುವ ಗುರುತಿನ ಚೀಟಿಯನ್ನು ತೆಗೆದುಕೊಂಡು ಹೋಗಿ
- ಪರೀಕ್ಷಾ ಕೇಂದ್ರಕ್ಕೆ ನಿಗದಿತ ಸಮಯಕ್ಕಿಂತ 45 ನಿಮಿಷಗಳ ಹಾಗೂ ಒಂದು ಗಂಟೆ ಮುಂಚೆ ತಲುಪಿ
- ಪರೀಕ್ಷಾ ಆರಂಭಕ್ಕೂ ಮುನ್ನ ನಿಗದಿಪಡಿಸಿರುವ ಪ್ರಮುಖ ಸೂಚನೆಗಳನ್ನು ಓದಿ
ಪರೀಕ್ಷಾ ಸಮಯದಲ್ಲಿ
- ಪ್ರಶ್ನೆ ಪತ್ರಿಕೆಯನ್ನು ಮೊದಲು ಸಂಪೂರ್ಣವಾಗಿ ಒಂದು ಬಾರಿ ಓದಿ
- ಮೊದಲು ಸುಲಭ ಪ್ರಶ್ನೆಗಳಿಗೆ ಉತ್ತರಿಸಿ
- ಕಠಿಣ ಪ್ರಶ್ನೆಗಳಿಗೆ ಹೆಚ್ಚು ಸಮಯ ವ್ಯರ್ಥ ಮಾಡಬೇಡಿ
- ನೆಗೆಟಿವ್ ಪಾರ್ಕಿಂಗ್ ಇರುವುದರಿಂದ ಊಹಾತ್ಮಕ ಉತ್ತರಗಳನ್ನು ನೀಡುವುದನ್ನು ತಪ್ಪಿಸಿ
- ಸಮಯವನ್ನು ಮೂರು ವಿಭಾಗಗಳಾಗಿ ಹಂಚಿಕೊಳ್ಳಿ ಅಂದರೆ ಮೊದಲು ಸುಲಭ ಪ್ರಶ್ನೆಗಳಿಗೆ ಉತ್ತರಿಸುವುದು ನಂತರ ಕಷ್ಟಕರ ಪ್ರಶ್ನೆಗಳಿಗೆ ಉತ್ತರಿಸುವುದು ಹಾಗೂ ಕೊನೆಯಲ್ಲಿ ಉತ್ತರಗಳನ್ನು ಪರಿಶೀಲಿಸುವ ವಿಭಾಗಗಳಾಗಿ ಹಂಚಿಕೊಳ್ಳಿ
ಅಭ್ಯರ್ಥಿಗಳು ಮಾಡುವ ಸಾಮಾನ್ಯ ತಪ್ಪುಗಳು
ಅನೇಕ ಅಭ್ಯರ್ಥಿಗಳು ಈ ಕೆಳಕಂಡ ಸಾಮಾನ್ಯ ತಪ್ಪುಗಳನ್ನು ಮಾಡುವುದರಿಂದ ಪರೀಕ್ಷೆಯಲ್ಲಿ ಯಶಸ್ಸನ್ನು ಕಂಡುಕೊಳ್ಳುವ ಸಂಭವನೀಯತೆಯನ್ನು ಕಡಿಮೆ ಮಾಡಿಕೊಳ್ಳುತ್ತಾರೆ ಈ ಅಂಶಗಳನ್ನು ಗಮನಿಸುವುದರ ಮೂಲಕ ಉತ್ತಮ ಅಂಕಗಳನ್ನು ಗಳಿಸಬಹುದು ಅವುಗಳೆಂದರೆ
- ಸಂಪೂರ್ಣ ಸಿಲಬಸ್ ಅನ್ನು ಪೂರ್ಣಗೊಳಿಸದೆ ಮಾಕ್ ಟೆಸ್ಟ್ ಗಳನ್ನು ಬರೆಯುವುದು
- ಪ್ರಚಲಿತ ಘಟನೆಗಳ ಬಗ್ಗೆ ಅಧ್ಯಯನ ಮಾಡದೆ ಇರುವುದು
- ರಿವಿಜನ್ ಮಾಡದೆ ಹೊಸ ವಿಷಯಗಳನ್ನು ಓದುವುದು
- ಪರಿಣಾಮಕಾರಿಯಾಗಿ ಸಮಯವನ್ನು ನಿರ್ವಹಣೆ ಮಾಡದೇ ಇರುವುದು
- ಸೂತ್ರಗಳನ್ನು ರಿವಿಜನ್ ಮಾಡದೆ ಪರೀಕ್ಷೆಗೆ ಹೋಗುವುದು
- ಊಹಾತ್ಮಕ ಉತ್ತರಗಳನ್ನು ಹೆಚ್ಚಾಗಿ ನೀಡುವುದು
ಯಶಸ್ಸು ಸಾಧಿಸಲು 10 ಪ್ರಮುಖ ಸಲಹೆಗಳು
- ಸಿಲಬಸ್ ಅನ್ನು ಸಂಪೂರ್ಣವಾಗಿ ಓದಿ ಅರ್ಥ ಮಾಡಿಕೊಳ್ಳಿ
- ಪ್ರತಿದಿನ ನಿಗದಿತ ಸಮಯದಲ್ಲಿ ಓದುವ ಅಭ್ಯಾಸ ಬೆಳೆಸಿಕೊಳ್ಳಿ ಇದು ನಿರಂತರತೆಯನ್ನು ಕಾಪಾಡಿಕೊಳ್ಳಲು ಸಹಕರಿಸುತ್ತದೆ
- ಪರೀಕ್ಷೆಯಲ್ಲಿ ತಾಂತ್ರಿಕ ವಿಷಯಗಳಿಗೆ ಹೆಚ್ಚಿನ ಮಹತ್ವ ಇರುವುದರಿಂದ ಈ ವಿಷಯಗಳಿಗೆ ಹೆಚ್ಚಿನ ಸಮಯವನ್ನು ನೀಡಿ
- ಪ್ರತಿದಿನವೂ ಪ್ರಚಲಿತ ಘಟನೆಗಳನ್ನು ಕಡ್ಡಾಯವಾಗಿ ಓದಿ
- ಕಡ್ಡಾಯವಾಗಿ ವಾರಕ್ಕೊಮ್ಮೆ ಮಾಕ್ ಟೆಸ್ಟ್ ಅನ್ನು ಬರೆಯಿರಿ
- ಸಾಧ್ಯವಾದಷ್ಟು ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿ ಇದರಿಂದ ಪ್ರಶ್ನೆಗಳ ವಾತಾವರಣ ತಿಳಿಯುತ್ತದೆ
- ಸೂತ್ರಗಳು ಮತ್ತು ಕಿರು ಟಿಪ್ಪಣಿಗಳನ್ನು ರಿವಿಶನ್ ಮಾಡಿ
- ಪರೀಕ್ಷಾ ತಯಾರಿ ಸಂದರ್ಭದಲ್ಲಿ ಆರೋಗ್ಯಕರ ಆಹಾರ ಸೇವನೆ ಮತ್ತು ಸಮರ್ಪಕ ಮಟ್ಟದಲ್ಲಿ ನಿದ್ರೆ ಮಾಡಿ
- ಪರೀಕ್ಷೆಗೆ ಮುನ್ನ ಆತ್ಮವಿಶ್ವಾಸವನ್ನು ಕಳೆದುಕೊಳ್ಳಬೇಡಿ
- ಪರೀಕ್ಷೆಯ ಸಮಯವನ್ನು ಉತ್ತಮ ರೀತಿಯಲ್ಲಿ ಸಮರ್ಥವಾಗಿ ಬಳಸಿಕೊಳ್ಳಿ
BSNL JTO Recruitment Exam: FAQ’s
ಪ್ರಶ್ನೆ1: BSNL JTO ಪರೀಕ್ಷೆಯಲ್ಲಿ ಒಟ್ಟು ಎಷ್ಟು ಪ್ರಶ್ನೆಗಳು ಇರುತ್ತವೆ?
ಉತ್ತರ: ಒಟ್ಟು 120 ಬಹು ಆಯ್ಕೆ ಪ್ರಶ್ನೆಗಳು (MCQs) ಕೇಳಲಾಗುತ್ತವೆ.
ಪ್ರಶ್ನೆ2: BSNL JTO ಪರೀಕ್ಷೆಯ ಒಟ್ಟು ಅಂಕಗಳು ಎಷ್ಟು?
ಉತ್ತರ: ಪರೀಕ್ಷೆಯ ಒಟ್ಟು ಅಂಕಗಳು 480.
ಪ್ರಶ್ನೆ3: ಒಂದು ಸರಿಯಾದ ಉತ್ತರಕ್ಕೆ ಎಷ್ಟು ಅಂಕಗಳು ಸಿಗುತ್ತವೆ?
ಉತ್ತರ: ಪ್ರತಿ ಸರಿಯಾದ ಉತ್ತರಕ್ಕೆ 4 ಅಂಕಗಳು ನೀಡಲಾಗುತ್ತದೆ.
ಪ್ರಶ್ನೆ4: ನೆಗೆಟಿವ್ ಮಾರ್ಕಿಂಗ್ ಇದೆಯೇ?
ಉತ್ತರ: ಹೌದು. ಪ್ರತಿ ತಪ್ಪಾದ ಉತ್ತರಕ್ಕೆ 1 ಅಂಕ ಕಡಿತಗೊಳ್ಳುತ್ತದೆ.
ಪ್ರಶ್ನೆ5: ಪರೀಕ್ಷೆಯ ಅವಧಿ ಎಷ್ಟು?
ಉತ್ತರ: ಪರೀಕ್ಷೆಯ ಒಟ್ಟು ಅವಧಿ 3 ಗಂಟೆಗಳು.
ಪ್ರಶ್ನೆ6: ಯಾವ ವಿಭಾಗಕ್ಕೆ ಹೆಚ್ಚು ಅಂಕಗಳಿವೆ?
ಉತ್ತರ: Engineering Stream–I ಮತ್ತು Engineering Stream–II ತಲಾ 200 ಅಂಕಗಳನ್ನು ಹೊಂದಿದ್ದು, ಒಟ್ಟಾರೆ ಪರೀಕ್ಷೆಯಲ್ಲಿ ಅತ್ಯಂತ ಪ್ರಮುಖ ವಿಭಾಗಗಳಾಗಿವೆ.
BSNL JTO Recruitment: Official Links
| ಅಧಿಕೃತ ವೆಬ್ಸೈಟ್ | ಬಿಎಸ್ಎನ್ಎಲ್ (BSNL) |
| ಹುದ್ದೆಗಳಿಗೆ ಅರ್ಜಿ ಸಲ್ಲಿಸಲು | ಅರ್ಜಿ ಲಿಂಕ್ |
| ಹುದ್ದೆಗಳ ನೇಮಕಾತಿಯ ಸಂಪೂರ್ಣ ಮಾಹಿತಿ | ಇಲ್ಲಿ ಕ್ಲಿಕ್ ಮಾಡಿ |
| ನಮ್ಮ ವಾಟ್ಸಪ್ ಗುಂಪು ಸೇರಲು | ಇಲ್ಲಿ ಕ್ಲಿಕ್ ಮಾಡಿ |
| ಹೆಚ್ಚುವರಿ ಮಾಹಿತಿ | ನೇಮಕಾತಿ ಮಾಹಿತಿ |
Last Updated: 04 July 2026
BSNL JTO ನಡೆಸುವ ಪರೀಕ್ಷೆಯು ತಾಂತ್ರಿಕ ಜ್ಞಾನ ಸಾಮಾನ್ಯ ಜ್ಞಾನ ಮತ್ತು ಸಮಸ್ಯೆಯನ್ನು ಪರಿಹರಿಸುವ ಕೌಶಲ್ಯವನ್ನು ಪರೀಕ್ಷಿಸುವ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಯಾಗಿದ್ದು ಈ ಪರೀಕ್ಷೆಯಲ್ಲಿ ಒಟ್ಟು 120 ಪ್ರಶ್ನೆಗಳನ್ನು ಮತ್ತು ಅವುಗಳಿಗೆ 480 ಅಂಕಗಳನ್ನು ನಿಗದಿಪಡಿಸಲಾಗಿದೆ
ಈ BSNL JTO ಪರೀಕ್ಷೆಯಲ್ಲಿ ಯಶಸ್ಸನ್ನು ಸಾಧಿಸಲು Engineering Stream–I ಮತ್ತು Engineering Stream–II ಹಾಗೂ ಜನರಲ್ ಅಬಿಲಿಟಿ ಟೆಸ್ಟ್ ಎಂಬ ಮೂರು ವಿಭಾಗಗಳನ್ನು ನಿಗದಿಪಡಿಸಿದ್ದು ಎಲ್ಲಾ ವಿಭಾಗಗಳಲ್ಲಿಯೂ ಸಹ ಕನಿಷ್ಠ ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿದೆ ಆದುದರಿಂದ ಎಲ್ಲಾ ವಿಷಯಗಳಿಗೂ ಸಮಾನ ಪ್ರಾಮುಖ್ಯತೆಯನ್ನು ನೀಡಿ ಅಧ್ಯಯನ ಮಾಡಬೇಕು
ಯೋಜಿತ ರೀತಿಯಲ್ಲಿ ಅಧ್ಯಯನ ಮಾಡುವುದು ಸಮಯೋಚಿತ ಅಭ್ಯಾಸದ ಅಂಶ ನಿಯಮಿತವಾಗಿ ಮಾಕ್ ಟೆಸ್ಟ್ ಬರೆಯುವುದು ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದು ಪ್ರಚಲಿತ ವಿದ್ಯಮಾನಗಳ ಮೇಲೆ ನಿರಂತರ ಗಮನವನ್ನು ನೀಡುವುದು ಉತ್ತಮ ಅಂಕಗಳನ್ನು ಪಡೆಯುವಲ್ಲಿ ಸಹಕರಿಸುತ್ತದೆ
ಇದರಿಂದ ಅಂತಿಮ ಮೆರಿಟ್ ಪಟ್ಟಿಯಲ್ಲಿ ಉತ್ತಮ ಸ್ಥಾನವನ್ನು ಪಡೆಯುವ ಅವಕಾಶವನ್ನು ಸಹ ಹೆಚ್ಚಿಸುತ್ತದೆ ಆದುದರಿಂದ ನಿರಂತರವಾಗಿ ಪರಿಶ್ರಮ ಹಾಕುವುದು ಆತ್ಮವಿಶ್ವಾಸದಿಂದ ಇರುವುದು ಮತ್ತು ಶಿಸ್ತುಬದ್ದ ರೀತಿಯಲ್ಲಿ ತಯಾರಿಯನ್ನು ನಡೆಸಿದರೆ BSNL JTO ಕನಸನ್ನು ನನಸಾಗಿಸಿಕೊಳ್ಳಬಹುದು
Related Information Links:
- BSNL Recruitment 2026
- KSP Civil Constable Recruitment 2026
- KSP Armed Police Constable Recruitment 2026
- KMF GUMUL Recruitment 2026
- KMF SHIMUL Recruitment 2026
- CPC Exam Tips
Author Note: ಈ ಲೇಖನವನ್ನು BSNL JTO ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಸಿದ್ಧಪಡಿಸಲಾಗಿದೆ. ಲಭ್ಯವಿರುವ ಅಧಿಕೃತ ಮಾಹಿತಿ, ಪರೀಕ್ಷಾ ಮಾದರಿ ಹಾಗೂ ಉಪಯುಕ್ತ ತಯಾರಿ ಸಲಹೆಗಳ ಆಧಾರದ ಮೇಲೆ ಈ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಅಭ್ಯರ್ಥಿಗಳು ಅಧಿಕೃತ ಪ್ರಕಟಣೆಗಳನ್ನು ಪರಿಶೀಲಿಸಿ ತಯಾರಿ ಮುಂದುವರಿಸಬೇಕು.
******
About Author: ರಂಗನಾಥ ಬಿಜಿ ರವರು ಅರ್ಥಶಾಸ್ತ್ರದಲ್ಲಿ ಎಂ.ಎ ಪದವಿಯನ್ನು ಪಡೆದಿದ್ದು ಕಳೆದ 3 ವರ್ಷಗಳಿಂದ ಸರ್ಕಾರಿ ಉದ್ಯೋಗಗಳು, ಪರೀಕ್ಷಾ ತಯಾರಿ, ವೃತ್ತಿ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು ಹಾಗೂ ಪ್ರಮುಖ ಸುದ್ದಿಗಳ ಕುರಿತು ಮಾಹಿತಿ ನೀಡುವ ಲೇಖಕರಾಗಿದ್ದಾರೆ. ಅಭ್ಯರ್ಥಿಗಳಿಗೆ ನಿಖರ, ಸರಳ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಕನ್ನಡದಲ್ಲಿ ಒದಗಿಸುವುದು ಇವರ ಪ್ರಮುಖ ಉದ್ದೇಶವಾಗಿದೆ.
******
Disclaimer: ಈ ಲೇಖನವು ಮಾಹಿತಿ ನೀಡುವ ಉದ್ದೇಶಕ್ಕಾಗಿ ಮಾತ್ರ ಪ್ರಕಟಿಸಲಾಗಿದೆ. ನೇಮಕಾತಿ, ಪರೀಕ್ಷಾ ಸಿಲಬಸ್ ಅಥವಾ ಇತರ ವಿವರಗಳಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇರುವುದರಿಂದ, ಅಭ್ಯರ್ಥಿಗಳು ಅಂತಿಮ ಮಾಹಿತಿಗಾಗಿ ಸಂಬಂಧಿತ ಇಲಾಖೆಯ ಅಧಿಕೃತ ಪ್ರಕಟಣೆ ಮತ್ತು ವೆಬ್ಸೈಟ್ ಅನ್ನು ಕಡ್ಡಾಯವಾಗಿ ಪರಿಶೀಲಿಸಬೇಕು.