Telegram Join My Telegram WhatsApp Join My WhatsApp

New Education Policy : Big Update 2026 : ಹೊಸ ಶಿಕ್ಷಣ ನೀತಿ ಜಾರಿ, ನೀತಿಯ ರಚನೆ, ಬದಲಾವಣೆ, ಮಹತ್ವ, ಲಾಭ ಹಾಗೂ ಅನುಕೂಲಗಳ ಬಗ್ಗೆ ಮಾಹಿತಿ

ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ (New Education Policy)

ಇಂದಿನ ಪ್ರಪಂಚದಲ್ಲಿ ಶಿಕ್ಷಣದ ಮಹತ್ವ ಎಲ್ಲರಿಗೂ ತಿಳಿದಿದೆ ಶಿಕ್ಷಣವಿಲ್ಲದೆ ಯಾವ ಕೆಲಸವು ಆಗುವುದಿಲ್ಲ ಅದರಂತೆ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಸಾಂಪ್ರದಾಯಿಕ ವ್ಯವಸ್ಥೆಯಿಂದ ಆಧುನಿಕ ಹಾಗೂ ಜಾಗತಿಕ ಮಟ್ಟಕ್ಕೆ ತಲುಪಿಸುವ ಉದ್ದೇಶದಿಂದ ಭಾರತ ಸರ್ಕಾರವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದೆ ಈ ಶಿಕ್ಷಣ ನೀತಿಯು ಸುಮಾರು 34 ವರ್ಷಗಳ ಬಳಿಕ ದೊಡ್ಡ ಬದಲಾವಣೆಯಿಂದ ಕೂಡಿದ್ದು 2020ರಲ್ಲಿ ಕಾರ್ಯರೂಪಕ್ಕೆ ಬಂದಿದೆ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿ ಪ್ರಾಯೋಗಿಕ ಜ್ಞಾನ ಹೊಸ ಅಧ್ಯಯನ ಹಾಗೂ ಈ ಹೊಸ ಶಿಕ್ಷಣ ನೀತಿ ಯಿಂದ ಹೆಚ್ಚುವರಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಉದ್ದೇಶವನ್ನು ಈ ಹೊಸ ಶಿಕ್ಷಣ ನೀತಿಯು ಹೊಂದಿದೆ

PM Yashaswi Yojana, Best Scheme For Students: ಪ್ರಧಾನ ಮಂತ್ರಿ ಯಶಸ್ವಿ ಯೋಜನೆ.‌ ವರ್ಷಕ್ಕೆ 3 ಲಕ್ಷದವರೆಗೆ ವಿದ್ಯಾರ್ಥಿವೇತನ+ ಉಚಿತ ಲ್ಯಾಪ್‌ ಟಾಪ್.

ಈ ಹಿಂದೆ ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಲ್ಲಿ ವಿದ್ಯಾರ್ಥಿಗಳು ಪಠ್ಯಪುಸ್ತಕ ಆಧಾರಿತ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಿದ್ದರು ಆದರೆ ಇಂದಿನ ಹೊಸ ಶಿಕ್ಷಣ ನೀತಿಯ ಮೂಲಕ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳು ಕೇವಲ ಜ್ಞಾನಕ್ಕಾಗಿ ಅಲ್ಲದೆ ಜೀವನೋಪಾಯವಾಗುವ ಕೌಶಲ್ಯ ಹಾಗೂ ತರಬೇತಿಗಳನ್ನು ಕಲಿಯಲು ಆಸಕ್ತಿ ತೋರುತ್ತಿದ್ದಾರೆ. ಆದುದರಿಂದ ಶಿಕ್ಷಣದ ಪ್ರಾಮುಖ್ಯತೆಯು ಜ್ಞಾನದ ಜೊತೆಯಲ್ಲಿ ಉದ್ಯೋಗ ಸೃಷ್ಟಿಗೂ ಸಹಾಯಕವಾಗಲಿದೆ ಇದರಿಂದ ಉದ್ಯೋಗ ಸೃಷ್ಟಿ ಹಾಗೂ ಉದ್ಯಮಿಗಳ ಮಾರುಕಟ್ಟೆಗೆ ಸುಲಭವಾಗಿ ಹೊಂದಿಕೊಳ್ಳಲು ಸಹಕಾರಿಯಾಗುತ್ತಿದೆ

ಹೊಸ ಶಿಕ್ಷಣ ನೀತಿ ಎಂದರೆ ಏನು?

ಶಿಕ್ಷಣ ಕ್ಷೇತ್ರದ ವ್ಯವಸ್ಥೆಯನ್ನು ಸುಧಾರಿಸುವ ಹಾಗೂ ವಿದ್ಯಾರ್ಥಿಗಳ ಸಾಮರ್ಥ್ಯ ಅಭಿವೃದ್ಧಿಯನ್ನು ಹೆಚ್ಚಿಸುವ ಉದ್ದೇಶದಿಂದ ರೂಪಿತಗೊಂಡ ಶಿಕ್ಷಣ ಇಲಾಖೆಯ ಸುಧಾರಣಾ ಯೋಜನೆಯ ಹೊಸ ಶಿಕ್ಷಣ ನೀತಿಯಾಗಿದೆ ಇದರ ಮುಖ್ಯ ಗುರಿಯು ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಿಂದ ಹೊರಬಂದು ಆತ ಪೂರ್ಣ ಹಾಗೂ ಕೌಶಲ್ಯ ಆಧಾರಿತ ಶಿಕ್ಷಣ ಪದ್ಧತಿಯನ್ನು ಜಾರಿಗೊಳಿಸಿ ವಿದ್ಯಾರ್ಥಿಗಳಿಗೆ New Education Policy  ನೀಡುವುದಾಗಿದೆ

ಈ ಶಿಕ್ಷಣ ನೀತಿಯ ಮೂಲಕ ಪ್ರಾಥಮಿಕ ಶಾಲಾ ಶಿಕ್ಷಣದಿಂದ ಉನ್ನತ ಶಿಕ್ಷಣವನ್ನು ಪಡೆಯುವವರೆಗೆ ಹಲವು ಪ್ರಮುಖ ಬದಲಾವಣೆ ಹಾಗೂ ಅಭಿವೃದ್ಧಿಗಳನ್ನು ತರಲಾಗಿದೆ ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಅದೇ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಪಡೆದುಕೊಳ್ಳುವಿಕೆ ತಂತ್ರಜ್ಞಾನದ ಅಳವಡಿಕೆ ಉದ್ಯೋಗ ಪರದೆಯ ಶಿಕ್ಷಣ ಮುಂತಾದ ಭವಿಷ್ಯ ರೂಪಿಸಿಕೊಳ್ಳಬಹುದಾದ ವಿಷಯಗಳಿಗೆ ಹೆಚ್ಚು ಒತ್ತನ್ನು New Education Policy ಯಲ್ಲಿ ನೀಡಲಾಗುತ್ತದೆ

New Education Policy ಯಲ್ಲಿ ಆಗಿರುವ ಪ್ರಮುಖ ಬದಲಾವಣೆಗಳು ಯಾವುವು

ಈ ಮೊದಲು ಭಾರತದಲ್ಲಿ ಒಂದರಿಂದ ಹತ್ತನೇ ತರಗತಿಯವರೆಗೆ ಶಾಲಾ ಶಿಕ್ಷಣ ಇದ್ದು ಇದರ ನಂತರ ಎರಡು ವರ್ಷ ಪದವಿಪೂರ್ವ ಶಿಕ್ಷಣ ಇತ್ತು. ಆದರೆ ಇದನ್ನು ಬದಲಿಸಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢ ಶಿಕ್ಷಣ ಪದ್ಧತಿಯನ್ನು ಜಾರಿಗೆ ತರಲಾಗಿದೆ

1ನೇ ತರಗತಿಯಿಂದ  2ನೇ ತರಗತಿ :  ಪೂರ್ವ ಪ್ರಾಥಮಿಕ ಶಿಕ್ಷಣ

3ನೇ ತರಗತಿಯಿಂದ ರಿಂದ 5ನೇ ತರಗತಿ  : ಪ್ರಾಥಮಿಕ ಶಿಕ್ಷಣ

6ನೇ ತರಗತಿಯಿಂದ 8ನೇ ತರಗತಿ:  ಮಾಧ್ಯಮಿಕ ಶಿಕ್ಷಣ

9ನೇ ತರಗತಿಯಿಂದ 12ನೇ ತರಗತಿ ಪ್ರೌಢ ಶಿಕ್ಷಣ

ಈ ಮಾದರಿಯ ಮೂಲಕ ಮಕ್ಕಳು ಹಂತ ಹಂತವಾಗಿ ಮಾನಸಿಕ ಬೆಳವಣಿಗೆಯನ್ನು ಹೊಂದುತ್ತಾರೆ ಅದರಂತೆಯೇ ಕೌಶಲ್ಯ ಹಾಗೂ ಜ್ಞಾನಕ್ಕೆ ಅನುಗುಣವಾಗಿ ಶಿಕ್ಷಣ ಪದ್ಧತಿಯನ್ನು ರೂಪಿಸಿ ನೀಡಲಾಗುತ್ತಿದೆ ಇದು New Education Policy ಯಿಂದ ಸಾಧ್ಯವಾಗುತ್ತಿದೆ

ವಿದ್ಯಾರ್ಥಿಗಳ ಮಾತೃಭಾಷೆಯಲ್ಲಿ ಶಿಕ್ಷಣ

New Education Policy ಮೂಲಕ ಐದನೇ ತರಗತಿಯವರೆಗೆ ಸಾಧ್ಯವಿದ್ದಲ್ಲಿ 8ನೇ ತರಗತಿಯವರೆಗೆ ಪ್ರಾದೇಶಿಕ ಭಾಷೆ ಅಥವಾ ಮಾತೃಭಾಷೆಯಲ್ಲಿ ಶಿಕ್ಷಣ ನೀಡಲು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ ಏಕೆಂದರೆ ಮಾತೃಭಾಷೆಯಲ್ಲಿ ಶಿಕ್ಷಣವನ್ನು ಪೂರೈಸುವುದರಿಂದ ವಿಷಯವನ್ನು ಸುಲಭವಾಗಿ ಅರ್ಥೈಸಿಕೊಂಡು ಕಲಿಕೆಯಲ್ಲಿ ಆಸಕ್ತಿಯನ್ನು ತರುತ್ತಾರೆ

ಅಂಕಗಳಿಗೆ ಕಡಿಮೆ ಮಹತ್ವ

ಈ ಮೊದಲು ಪರೀಕ್ಷೆಗಳಲ್ಲಿ ಅಂಕ ಗಳಿಸುವುದೇ ಮುಖ್ಯ ಉದ್ದೇಶವಾಗಿತ್ತು ಪ್ರಪಂಚದ ಜ್ಞಾನ ತಿಳುವಳಿಕೆ ಹಾಗೂ ವಾಸ್ತವಿಕತೆಯ ಬಗ್ಗೆ ಹೆಚ್ಚು ಒತ್ತನ್ನು ನೀಡಲಾಗುತ್ತಿರಲಿಲ್ಲ ಆದರೆ ಈಗ ಹೊಸ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳು ಕೌಶಲ್ಯವನ್ನು ಕಲಿಯುವುದು ವಿಶ್ಲೇಷಿಸುವುದು ಸಾಮಾನ್ಯ ಅಭಿವೃದ್ಧಿ ಪ್ರಾಯಕೆ ವಿಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುವುದು ಹಾಗೂ ಸೃಜನಶೀಲತೆ ಮುಂತಾದ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದು ಅಂಕಗಳಿಗೆ ನೀಡುವ ಮಹತ್ವವನ್ನು ಕಡಿಮೆ ಮಾಡಲಾಗುತ್ತಿದೆ

ಕೌಶಲ್ಯಾಧಾರಿತ ಶಿಕ್ಷಣ ಪೂರೈಕೆ

New Education Policy ಆರನೇ ತರಗತಿಯಿಂದಲೇ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ವೃತ್ತಿಪರ ತರಬೇತಿ ಕೌಶಲ್ಯಗಳನ್ನು ಪೂರೈಸಲಾಗುತ್ತಿದೆ ಅವುಗಳೆಂದರೆ ಕೋಡಿಂಗ್ ಹಸ್ತಕಲೆ ಕೃಷಿಯ ಬಗ್ಗೆ ಜ್ಞಾನ ಕಾರ್ಮಿಕ ಕೌಶಲ್ಯಗಳು ಉದ್ಯಮಶೀಲತೆ ಪರಿಸರ ಅಭಿವೃದ್ಧಿ ಇನ್ನು ಮುಂತಾದ ವೃತ್ತಿಪರ ಕೌಶಲ್ಯಗಳನ್ನು ಪ್ರಾಥಮಿಕ ಹಂತದಲ್ಲಿ ನೀಡುವುದರಿಂದ ವಿದ್ಯಾರ್ಥಿಗಳು ಪ್ರಪಂಚದ ಜ್ಞಾನವನ್ನು ಬೇಗ ಪಡೆದು ಸಮಾಜದಲ್ಲಿ ಉತ್ತಮ ಉದ್ಯೋಗಗಳನ್ನು ಪಡೆಯಬಹುದು

ಕೋರ್ಸಿನ ವಿಷಯದ ಆಯ್ಕೆಯಲ್ಲಿ ಸ್ವಾತಂತ್ರ್ಯತೆ

ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಲ್ಲಿ ಕಲೆ ವಾಣಿಜ್ಯ ವಿಜ್ಞಾನ ಎಂಬ ವಿಭಾಗಗಳು ಇದ್ದವು ಆದರೆ ಹೊಸ ಶಿಕ್ಷಣ ನೀತಿ ಅಡಿಯಲ್ಲಿ ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಗುಣವಾಗಿ ವೈಯಕ್ತಿಕ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಅಂದರೆ New Education Policy ಮೂಲಕ ವಿದ್ಯಾರ್ಥಿಯು ಗಣಿತ ಕಲಿಕೆಯ ಜೊತೆಯಲ್ಲಿ ಸಂಗೀತ ಕೃಷಿ ಪರಿಸರ ಅಧ್ಯಯನ ಹಾಗೂ ಮಾಹಿತಿ ತಂತ್ರಜ್ಞಾನ ವಿಷಯಗಳನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದಾಗಿರುತ್ತದೆ

ಕಾಲೇಜು ಶಿಕ್ಷಣ ನೀತಿಯಲ್ಲಿ ಮಹಾತರ ಬದಲಾವಣೆ

ಈ ಹಿಂದೆ ಒಂದು ಕೋರ್ಸಿಗೆ ನಿಗದಿಪಡಿಸಿದ ಅವಧಿಯನ್ನು ಪೂರ್ಣಗೊಳಿಸಿದ ನಂತರವೇ ಸಂಬಂಧಪಟ್ಟ ಪ್ರಮಾಣ ಪತ್ರಗಳು ಆದರೆ ಈಗ New Education Policy ಮೂಲಕ ಕಾಲೇಜು ಶಿಕ್ಷಣ ಇಲಾಖೆ ಈ ನಿಯಮವನ್ನು ಬದಲಾಯಿಸಿದ್ದು ಬಹು ನಿರ್ಗಮನ ಆಯ್ಕೆಗಳನ್ನು ಪರಿಚಯಿಸಲಾಗಿದೆ ಅಂದರೆ

ಕೋರ್ಸಿನ 1 ವರ್ಷ ಪೂರ್ಣಗೊಳಿಸಿದರೆ :  ಪ್ರಮಾಣ ಪತ್ರ

ಕೋರ್ಸಿನ 2 ವರ್ಷಗಳನ್ನು ಪೂರ್ಣಗೊಳಿಸಿದರೆ :  ಡಿಪ್ಲೋಮಾ ಪದವಿ

ಕೋರ್ಸಿನ 3 ವರ್ಷಗಳನ್ನು ಪೂರ್ಣಗೊಳಿಸಿದರೆ :  ಪದವಿ

ಕೋರ್ಸಿನ 4 ವರ್ಷಗಳನ್ನು ಪೂರ್ಣಗೊಳಿಸಿದರೆ :  ಸೋಶೋಧನಾ ಪದವಿ

ಎಂಬಂತೆ ಬದಲಾಯಿಸಲಾಗಿದೆ ಇದರಿಂದ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಓದು ನಿಲ್ಲಿಸಿದರು ಹಿಂದಿನ ವರ್ಷದ ಪೂರ್ಣಗೊಳಿಸಿರುವ ಶೈಕ್ಷಣಿಕ ವರ್ಷದ ಆಧಾರದ ಮೇಲೆ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ ಇದರಿಂದ ವಿದ್ಯಾರ್ಥಿಯ ವಿದ್ಯಾಭ್ಯಾಸವು ಎಂದಿಗೂ ವ್ಯರ್ಥ ಆಗುವುದಿಲ್ಲ. ಇದನ್ನು New Education Policy ಸ್ಪಷ್ಟಪಡಿಸುತ್ತದೆ.

ಹೊಸ ಶಿಕ್ಷಣ ನೀತಿಯ ಲಾಭಗಳು ಈ ಕೆಳಕಂಡಂತಿವೆ

ವಿದ್ಯಾರ್ಥಿಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ: ಅಂದರೆ ಪರೀಕ್ಷೆ ಬರೆಯುವುದು ಹಾಗೂ ಹೆಚ್ಚು ಅಂಕಗಳನ್ನು ಪಡೆಯುವಲ್ಲಿ ಪೋಷಕರು ಮಕ್ಕಳ ಮೇಲೆ ಇರುವ ಒತ್ತಡವು ಕಡಿಮೆಯಾಗುತ್ತದೆ ವಿದ್ಯಾರ್ಥಿಗಳು ತಮ್ಮ ಕಲಿಕೆಯನ್ನು ಆನಂದದಾಯಕವಾಗಿ ಹಾಗೂ ಉಪಯುಕ್ತ ಮನೋಭಾವನೆಯಿಂದ ಕಲಿಯುತ್ತಾರೆ

ಉದ್ಯೋಗ ಮಟ್ಟದಲ್ಲಿ ಹೆಚ್ಚಳ : New Education Policy ಕೌಶಲ್ಯಾಧಾರಿತ ಶಿಕ್ಷಣವು ಉತ್ತೇಜನಗೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಉದ್ಯೋಗಕ್ಕೆ ಬೇಕಾಗುವಂತಹ ಪ್ರಾಯೋಗಿಕ ಕಲೆಗಳನ್ನು ಹಾಗೂ ಜ್ಞಾನವನ್ನು ಪಡೆಯುತ್ತಾರೆ ಇದರಿಂದ ಉದ್ಯೋಗ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ

ಆಸಕ್ತಿಗೆ ಅನುಗುಣವಾದ ಶಿಕ್ಷಣ ಪದ್ಧತಿ : ವಿದ್ಯಾರ್ಥಿಗಳು ತಮ್ಮ ಆಸಕ್ತಿ ಹಾಗೂ ವೈಯಕ್ತಿಕ ವಿಚಾರಕ್ಕೆ ತಕ್ಕಂತೆ ವಿಷಯ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರಿಂದ ಅವರ ವೈಯಕ್ತಿಕತೆಗೆ ಬೆಲೆ ಸಿಕ್ಕಿದಂತಾಗಿ ಉತ್ತಮ ವೃತ್ತಿ ಬೆಳವಣಿಗೆ ಸಾಧ್ಯವಾಗುತ್ತದೆ

ತಂತ್ರಜ್ಞಾನ ಆಧಾರಿತ ಕಲಿಕೆ : ಸಾಂಪ್ರದಾಯಿಕ ಕೃಷಿ ಪದ್ಧತಿಯಲ್ಲಿ ವಿದ್ಯಾರ್ಥಿಗಳು ಶಾಲೆಗೆ ಹೋಗಿಯೇ ಶಿಕ್ಷಣವನ್ನು ಕಲಿಯಬೇಕಾಗಿತ್ತು. ಆದರೆ ಇಲ್ಲಿ ಡಿಜಿಟಲ್ ಪ್ಲಾಟ್ಫಾರ್ಮ್ಗಳಾದ ಡಿಜಿಟಲ್ ಕಲ್ಲಿಗೆ ಆನ್ಲೈನ್ ಶಿಕ್ಷಣ ಹಾಗೂ ಸ್ಮಾರ್ಟ್ ಕ್ಲಾಸ್ ಗಳ ಮೂಲಕ ಶಿಕ್ಷಣವನ್ನು ಪಡೆಯಬಹುದು

ಜಾಗತಿಕ ಮಟ್ಟದಲ್ಲಿ ಶಿಕ್ಷಣ ಪದ್ಧತಿಯ ರಚನೆ : New Education Policy ಭಾರತದಲ್ಲಿ ಅಷ್ಟೇ ಅಲ್ಲದೆ ಜಾಗತಿಕ ಮಟ್ಟಕ್ಕೆ ತಲುಪಿಸುವ ಉದ್ದೇಶವನ್ನು ಹೊಂದಿದೆ ಇದರಿಂದ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಭಾರತದ ಹೊಸ ಶಿಕ್ಷಣ ನೀತಿಯು ಪ್ರಾಮುಖ್ಯತೆಯನ್ನು ಪಡೆಯುತ್ತದೆ

ಹೊಸ ಶಿಕ್ಷಣ ನೀತಿಯ ಅನಾನುಕೂಲಗಳು ಈ ಕೆಳಗಿವೆ

ಗ್ರಾಮೀಣ ಪ್ರದೇಶಗಳಲ್ಲಿ ಅನುಷ್ಠಾನದ ಸವಾಲು : ತಂತ್ರಜ್ಞಾನ ಇಷ್ಟೆಲ್ಲ ಮುಂದುವರೆದಿದ್ದರೂ ಗ್ರಾಮೀಣ ಶಾಲೆಗಳಲ್ಲಿ ಇಂಟರ್ನೆಟ್ ಹಾಗೂ ಡಿಜಿಟಲ್ ಮೂಲಸೌಕರ್ಯಗಳ ಕೊರತೆ ಇದ್ದು ಹೊಸ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಕಷ್ಟವಾಗಬಹುದು

ಮಾತೃಭಾಷೆ ಶಿಕ್ಷಣದ ಸವಾಲು :  6ನೇ ತರಗತಿವರೆಗೆ ಅಥವಾ 8ನೇ ತರಗತಿಯವರೆಗೆ ಮಾತೃಭಾಷೆಯಲ್ಲಿ ಶಿಕ್ಷಣದ ಕಲಿಕೆಗೆ ಅವಕಾಶ ಇರುವುದರಿಂದ ಮಾತೃಭಾಷೆಯಲ್ಲಿ ಪಡೆಯುವ ಶಿಕ್ಷಣ ಉತ್ತಮವಾಗಿದ್ದರು. ಉನ್ನತ ಶಿಕ್ಷಣಕ್ಕೆ ಎಂದು ಅಥವಾ ಉದ್ಯೋಗಗಳಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರುವುದರಿಂದ ಹೊಂದಿಕೊಳ್ಳುವಲ್ಲಿ ಕಷ್ಟಕರವಾಗಬಹುದು

ಹೊಸ ಶಿಕ್ಷಣ ನೀತಿ ಜಾರಿಗೆ ಸಮಯಾವಕಾಶ : ಈ ಹೊಸ ಶಿಕ್ಷಣ ಮಿತಿಯನ್ನು ದೇಶದಾದ್ಯಂತ ಒಂದೇ ಬಾರಿ ಜಾರಿಗೆ ತರಲು ಸಾಧ್ಯವಿಲ್ಲ ಏಕೆಂದರೆ, ರಾಜಕೀಯ ಅಂಶಗಳು ತಲೆದುಗುವುದರಿಂದ ಈ ನೀತಿಯ ಅನುಷ್ಠಾನ ಸಮಯ ತೆಗೆದುಕೊಳ್ಳುತ್ತದೆ

ಹೊಸ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳಿಗಾಗುವ ಲಾಭಗಳು

  • ಹೊಸ ಶಿಕ್ಷಣ ನೀತಿಯಿಂದ ಶಿಕ್ಷಣವನ್ನು ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಕೇವಲ ಪುಸ್ತಕದ ಜ್ಞಾನ ಅಲ್ಲದೇ ವಾಸ್ತವಿಕತೆ ಜೀವನದ ಕೌಶಲ್ಯಗಳು ತಂತ್ರಜ್ಞಾನ ಆಧಾರಿತ ಶಿಕ್ಷಣ ಉದ್ಯೋಗ ಪಾರ ಕೌಶಲ್ಯಗಳು ಹಾಗೂ ಇನ್ನೂ ಇತರ ಆಧುನಿಕ ಮಟ್ಟದ ಕೌಶಲ್ಯಗಳನ್ನು ಕಲಿಯಬಹುದು ಅದರ ಜೊತೆಯಲ್ಲಿ ವಾಸ್ತವದಲ್ಲಿ ಮುಂಚೂಣಿಯಲ್ಲಿರುವ ಕೋಡಿಂಗ್ ವೈಯಕ್ತಿಕ ಬುದ್ಧಿಮತ್ತೆ ಹಾಗೂ ಉದ್ಯಮಶೀಲ ಕೌಶಲ್ಯಗಳನ್ನು ಆರಂಭಿಕಾಂತದಲ್ಲೇ ಪಡೆಯಬಹುದು
  •  ಹೊಸ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಹಾಗೂ ಆಡಳಿತಾತ್ಮಕ ಜ್ಞಾನ ಹೆಚ್ಚಾಗಿ ಉದ್ಯೋಗಾವಕಾಶ ಹಾಗೂ ಬೆಳವಣಿಗೆ ಪ್ರಮಾಣ ಹೆಚ್ಚುತ್ತದೆ.
  • ಹೊಸ ಶಿಕ್ಷಣ ನೀತಿಯನ್ನು ಶಿಕ್ಷಣ ಪಡೆಯುವುದರ ಜೊತೆಯಲ್ಲಿ ಭವಿಷ್ಯದ ಉದ್ಯೋಗವನ್ನು ಪಡೆಯುವಲ್ಲಿ ಗಮನವಿರಿಸಿ ಈ ಯೋಜನೆಯನ್ನು ರೂಪಿಸಲಾಗಿದೆ ತಂತ್ರಜ್ಞಾನ ಕ್ಷೇತ್ರ ಕೃಷಿ ಕ್ಷೇತ್ರ ಉದ್ಯಮ ಕ್ಷೇತ್ರ ಹಾಗೂ ಇನ್ನಿತರ ಹೆಚ್ಚು ಬೇಡಿಕೆ ಇರಬಹುದಾದ ಕ್ಷೇತ್ರಗಳಲ್ಲಿ ಅವಕಾಶವನ್ನು ಕಲ್ಪಿಸುವುದಾಗಿದೆ

ಒಟ್ಟಾರೆಯಾಗಿ ಹೇಳುವುದಾದರೆ ಹೊಸ ಶಿಕ್ಷಣ ನೀತಿಯು ಭಾರತದ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಿಸಲಿದೆ ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಿಂದ ಆಧುನಿಕ ಶಿಕ್ಷಣ ಪದ್ಧತಿಗೆ ಬರಲು ಸಮಯ ಅವಕಾಶ ತೆಗೆದುಕೊಂಡರು ಇದರ ಪರಿಣಾಮವು ಧನಾತ್ಮಕವಾಗಿರುತ್ತದೆ ವಿದ್ಯಾರ್ಥಿಗಳನ್ನು ಕೇವಲ ಪರೀಕ್ಷೆಗಾಗಿ ತಯಾರಿಸುವುದಲ್ಲದೆ ಅವರ ಜೀವನವನ್ನು ಸಹಕಾರ ಗೊಳಿಸಲು ಸಿದ್ಧಗೊಳಿಸುವುದು ಈ ನೀತಿಯ ಪ್ರಮುಖ ಉದ್ದೇಶವಾಗಿದೆ ವಿದ್ಯಾರ್ಥಿಗಳು ಕಲಿಯುವ ಕೌಶಲ್ಯಾಧಾರಿತ ಶಿಕ್ಷಣದಿಂದ ಅವರ ಭವಿಷ್ಯವೂ ಉಜ್ವಲವಾಗಲಿದೆ ಆದರೆ ಗ್ರಾಮೀಣ ಪ್ರದೇಶದಲ್ಲಿನ ಮೂಲಸೌಕರ್ಯದ ಕೊರತೆ ಅನುಷ್ಠಾನದ ಸವಾಲುಗಳನ್ನು ಎದುರಿಸಿ ಸರಿಪಡಿಸಿ ನಂತರ ಅನುಷ್ಠಾನಗೊಳಿಸುವುದರಿಂದ ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶಗಳೆರಡಲ್ಲೂ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸಿ ಭಾರತದ ಶಿಕ್ಷಣ ಕ್ಷೇತ್ರವನ್ನು ಅಭಿವೃದ್ಧಿಪಡಿಸುವಲ್ಲಿ ಸಹಕರಿಸಬಹುದು ಇದರಿಂದ ಭಾರತವು ಒಂದು ಬಲಿಷ್ಠ ರಾಷ್ಟ್ರವಾಗಿ ರೂಪಗೊಳ್ಳುತ್ತದೆ

 

Read More: Jobs.

CIL Recruitment, Job Opportunity 2026 : ಕೋಲ್‌ ಇಂಡಿಯಾ ಲಿಮಿಟೆಡ್‌ ನಲ್ಲಿ ಉದ್ಯೋಗಾವಕಾಶ, ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ ಇಲ್ಲಿದೆ

NMPT Recruitment 2026, Job Opportunity : ಮೇನೇಜರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ, ಅರ್ಜಿ ಸಲ್ಲಿಕೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

CESCOM Recruitment 2026, Job Opportunity : ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ. ಅರ್ಜಿ ಸಲ್ಲಿಕೆಗೆ ಸಂಪೂರ್ಣ ಮಾಹಿತಿ ಇಲ್ಲಿದೆ

Leave a Comment