Telegram Join My Telegram WhatsApp Join My WhatsApp

PM Vidyalakshmi Yojana 2026, Best Education Loan Scheme : ಯೋಜನೆಯ ವಿವರ, ಅರ್ಹತೆ, ಅರ್ಜಿ ಸಲ್ಲಿಕೆ, ಅನುಕೂಲಗಳ ಬಗ್ಗೆ ಸಂಪೂರ್ಣ ಮಾಹಿತಿ

ಉನ್ನತ ಶಿಕ್ಷಣ ಪಡೆಯಬೇಕೆಂಬ ಕನಸು ಹೊಂದಿರುವವರಿಗೆ ಸುವರ್ಣಾವಕಾಶ, ಹತ್ತು ಲಕ್ಷದವರೆಗೆ ಸಾಲ ಸೌಲಭ್ಯ (PM Vidyalakshmi Yojana)

ನಮಸ್ಕಾರ ಸ್ನೇಹಿತರೆ ನೀವು ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರೂ ಉನ್ನತ ಶಿಕ್ಷಣವನ್ನು ಓದುವ ಕನಸು ಇದೆಯಾ ಆದರೆ ಹೆಚ್ಚು ಹಣವನ್ನು ಕಟ್ಟಲಾಗದೆ ಉನ್ನತ ಶಿಕ್ಷಣದ ಕನಸನ್ನು ಮುಂದೂಡಿದ್ದೀರ ಹಾಗಿದ್ದರೆ ನಿಮಗೊಂದು ಸುವರ್ಣ ಅವಕಾಶ ಒದಗಿ ಬಂದಿದೆ ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಯಂದ ಆರ್ಥಿಕ ಕಾರಣದಿಂದಾಗಿ ಉನ್ನತ ಶಿಕ್ಷಣವನ್ನು ನಿಲ್ಲಿಸಿರುವ ಹಾಗೂ ಮುಂದೂಡಿರುವ ವಿದ್ಯಾರ್ಥಿಗಳಿಗೆ ಹಣಕಾಸು ನೆರವು ನೀಡಲು ಈ ಯೋಜನೆಯು ಜಾರಿಗೆ ಬಂದಿದೆ ಯಾವ ವಿದ್ಯಾರ್ಥಿಗಳು ಸಹ ಉನ್ನತ ಶಿಕ್ಷಣವನ್ನು ಪಡೆಯುವುದರಿಂದ ವಂಚಿತರಾಗಬಾರದು ಎಂಬ ಪ್ರಮುಖ ಉದ್ದೇಶದಿಂದ ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೊಳಿಸಿದೆ ಆದುದರಿಂದ ನೀವು ಅಥವಾ ನಿಮ್ಮ ಕುಟುಂಬ ಅಥವಾ ಸ್ನೇಹಿತರು ಯಾರಾದರೂ ಉನ್ನತ ಶಿಕ್ಷಣಕ್ಕಾಗಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದರೆ ಅವರಿಗೆ ಈ PM Vidyalakshmi Yojana ಯೋಜನೆಯನ್ನು ತಿಳಿಸಿ, ನೀವು ಕೂಡ ಉನ್ನತ ಶಿಕ್ಷಣದ ಕನಸನ್ನು ಕಂಡಿದ್ದರೆ ಇಂದೇ ಅರ್ಜಿ ಸಲ್ಲಿಸಿ

PM Yashaswi Yojana, Best Scheme For Students: ಪ್ರಧಾನ ಮಂತ್ರಿ ಯಶಸ್ವಿ ಯೋಜನೆ.‌ ವರ್ಷಕ್ಕೆ 3 ಲಕ್ಷದವರೆಗೆ ವಿದ್ಯಾರ್ಥಿವೇತನ+ ಉಚಿತ ಲ್ಯಾಪ್‌ ಟಾಪ್.

PM Vidyalakshmi Yojana ಯೋಜನೆ ಎಂದರೆ ಏನು

ಹಣಕಾಸಿನ ತೊಂದರೆಗಳಿಂದ ಉನ್ನತ ಶಿಕ್ಷಣವನ್ನು ಪಡೆಯಲು ಅಸಾಧ್ಯವಾದ ವಿದ್ಯಾರ್ಥಿಗಳಿಗೆ ಈ ಯೋಜನೆಯು ಭದ್ರ ಬುನಾದಿಯಾಗಿದೆ ಅಂದರೆ ಈ ಯೋಜನೆಯ ಮೂಲಕ ಸಿಗುವ ಸಾಲಕ್ಕೆ ಯಾವುದೇ ಮೇಲಾದಾರ ಅಥವಾ ಖಾತರಿಯ ಅವಶ್ಯಕತೆ ಇರುವುದಿಲ್ಲ ಇದು ಕೇವಲ ಸಾಲವಲ್ಲದೆ ವಿದ್ಯಾರ್ಥಿಗಳ ಪಾಲಿಗೆ ಉನ್ನತ ಶಿಕ್ಷಣವನ್ನು ಪೂರೈಸಲು ಇರುವಂತಹ ಅವಕಾಶವಾಗಿದೆ ಈ ಸಾಲಕ್ಕೆ ಶೂರಿಟಿ ನೀಡುವ ಅಗತ್ಯವಿಲ್ಲ ಆದುದರಿಂದ ಈ ವಿದ್ಯಲಕ್ಷ್ಮಿ ಯೋಜನೆಯು ಇತರ ಯೋಜನೆಗಿಂತ ವಿಭಿನ್ನವಾಗಿದೆ

ಈ PM Vidyalakshmi Yojana ಯ ಪ್ರಮುಖ ಉದ್ದೇಶಗಳು

  • ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ನೆರವು ಹಾಗೂ ಭರವಸೆಯನ್ನು ನೀಡುವುದು
  • ಶಿಕ್ಷಣದ ಉದ್ದೇಶದಿಂದ ಶಾಲಾ ಪಡೆಯುವ ಆಸಕ್ತಿಯನ್ನು ಹೊಂದಿರುವವರಿಗೆ ಪ್ರಕ್ರಿಯೆಯನ್ನು ಸರಳಿಕೃತಗೊಳಿಸುವುದು
  • ಒಂದೇ ಪೋರ್ಟಲ್ ಮೂಲಕ ಅಭ್ಯರ್ಥಿಗಳು ಬಯಸುವ ಬ್ಯಾಂಕ್ ನ ಮೂಲಕ ಸಾಲ ಸೌಲಭ್ಯವನ್ನು ಒದಗಿಸುವುದು
  • ದೇಶದಲ್ಲಿ ಉನ್ನತ ಶಿಕ್ಷಣದ ಪ್ರಮಾಣವನ್ನು ಹೆಚ್ಚಿಸಿ ಬಲಪಡಿಸುವುದು
  • ಈ ಯೋಜನೆಯು ಕೇವಲ ದೇಶಿಯ ಶಿಕ್ಷಣಕ್ಕಾಗಿ ಅಲ್ಲದೆ ವಿದೇಶಿ ಶಿಕ್ಷಣಕ್ಕೂ ಹಣಕಾಸು ನೆರವನ್ನು ನೀಡಲಿದೆ

 

ಈPM Vidyalakshmi Yojana  ಪ್ರಮುಖ ಮುಖ್ಯಾಂಶಗಳು ಈ ಕೆಳಕಂಡಂತಿವೆ

  • ಆರ್ಥಿಕ ಸಂಕಷ್ಟದಿಂದ ಉನ್ನತ ಶಿಕ್ಷಣವನ್ನು ಪಡೆಯಲಾಗದ ವಿದ್ಯಾರ್ಥಿಗಳಿಗೆ 10 ಲಕ್ಷ ರೂಗಳವರೆಗೆ ಸಾಲದ ಸೌಲಭ್ಯವನ್ನು ನೀಡುತ್ತದೆ
  • ಅರ್ಜಿ ಸಲ್ಲಿಸುವ ಅಭ್ಯರ್ಥಿಯ ಕುಟುಂಬದ ವಾರ್ಷಿಕ ಆದಾಯವು 8 ಲಕ್ಷಗಳ ಒಳಗೆ ಇದ್ದರೆ ಪಡೆಯುವ ಒಟ್ಟು ಸಾಲದ ಮೇಲೆ 3% ಬಡ್ಡಿಗೆ ಸಬ್ಸಿಡಿ ಸಿಗಲಿದೆ
  • ಭಾರತದಲ್ಲಿರುವ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಸುಮಾರು 22 ಲಕ್ಷ ವಿದ್ಯಾರ್ಥಿಗಳಿಗೆ ಈ ಸೌಲಭ್ಯವು ದೊರೆಯಲಿದ್ದು ಅರ್ಹ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವವರಿಗೆ ಈ ಸೌಲಭ್ಯ ದೊರೆಯುತ್ತದೆ

ಈ PM Vidyalakshmi Yojana ಗೆ ಯಾರು ಅರ್ಜಿ ಸಲ್ಲಿಸಬಹುದು

  • ಉನ್ನತ ಕಾಲೇಜುಗಳಲ್ಲಿ ಶಿಕ್ಷಣ ಪಡೆಯುವ ಆಸಕ್ತಿ ಇರುವವರು
  • ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು ಅಂದರೆ NIRF ಶ್ರೇಯಾಂಕದ ಉನ್ನತ 200 ರ ಒಳಗೆ ಇರುವ ಸಂಸ್ಥೆಗಳಲ್ಲಿ ದಾಖಲಾತಿಯನ್ನು ಬಯಸುವ ಅಭ್ಯರ್ಥಿಗಳು ಹಾಗೂ ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ದಾಖಲಾತಿಯನ್ನು ಪಡೆದ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು
  • ಅಭ್ಯರ್ಥಿಯ ಕುಟುಂಬದ ಆದಾಯದ ಮಿತಿಯು 8 ಲಕ್ಷಗಳ ಒಳಗೆ ಇದ್ದರೆ ಬಡ್ಡಿ ರಿಯಾಯಿತಿ ಸಿಗುತ್ತದೆ ಒಂದು ಪಕ್ಷದಲ್ಲಿ ಕುಟುಂಬದ ವಾರ್ಷಿಕ ಆದಾಯವು 4.5 ಲಕ್ಷದೊಳಗೆ ಇದ್ದರೆ ಸಾಲದ ಮೇಲಿನ ಸಂಪೂರ್ಣ ಬಡ್ಡಿಯು ರಿಯಾಯಿತಿ ಪಡೆಯುತ್ತದೆ
  • ರಾಷ್ಟ್ರೀಯ ಸಾಂಸ್ಥಿಕ ಅರ್ಹತಾ ಚೌಕಟ್ಟು ಅಂದರೆ NIRF ಶ್ರೇಯಾಂಕದ ಉನ್ನತ ಹಂತದಲ್ಲಿ ಇರುವ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ದಾಖಲಾತಿ ಪಡೆದಿರುವ ಬಗ್ಗೆ ಕಡ್ಡಾಯವಾಗಿ ದಾಖಲೆ ಇರಬೇಕಾಗುತ್ತದೆ

ಈ PM Vidyalakshmi Yojana ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ

  • ಮೊದಲನೆಯದಾಗಿ ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಪೋರ್ಟಲ್ ಗೆ ಭೇಟಿ ನೀಡಿ
  • ಭೇಟಿ ನೀಡಿದ ನಂತರ ಹೊಸ ಖಾತೆ ಸೃಜಿಸು ಎಂಬಲ್ಲಿ ಕ್ಲಿಕ್ ಮಾಡಿ ತಮ್ಮ ವೈಯಕ್ತಿಕ ವಿವರಗಳು ಹಾಗೂ ಸಂವಹನದ ಉದ್ದೇಶಕ್ಕಾಗಿ ಇ-ಮೇಲ್ ಹಾಗೂ ಮೊಬೈಲ್ ನಂಬರ್ ಮತ್ತು ಆಧಾರ್ ವಿವರಗಳನ್ನು ನೀಡಿ ತಮ್ಮ ಖಾತೆಯನ್ನು ಸೃಜಿಸಿ
  • ಖಾತೆಯನ್ನು ಸೃಷ್ಟಿಸಿದ ನಂತರ ನೋಂದಣಿ ಸಂಖ್ಯೆ ಹಾಗೂ ಇತರೆ ಮಾಹಿತಿಯ ಮೂಲಕ ಲಾಗಿನ್ ಆಗಿ ಪಿಎಂ ವಿದ್ಯಾ ಲಕ್ಷ್ಮಿ ಯೋಜನೆಗೆ ಆನ್ಲೈನ್ ಅರ್ಜಿ ಸಲ್ಲಿಕೆ ಎಂಬಲ್ಲಿ ಕ್ಲಿಕ್ ಮಾಡಿ
  • ಆನ್ಲೈನ್ ಅರ್ಜಿ ತೆರೆದ ನಂತರ ಅಲ್ಲಿ ನಿಮ್ಮ ವೈಯಕ್ತಿಕ ವಿವರಗಳು ದಾಖಲಾಗಿರುವ ಶೈಕ್ಷಣಿಕ ಸಂಸ್ಥೆ ವಿವರಗಳು ಕುಟುಂಬದ ಆದಾಯದ ವಿವರಗಳು ಹಾಗೂ ಇನ್ನಿತರೆ ಕೇಳಲಾಗುವ ಎಲ್ಲಾ ಮಾಹಿತಿಯನ್ನು ನಮೂದಿಸಿ ಅಗತ್ಯವಿದ್ದಲ್ಲಿ ಪ್ರಮಾಣ ಪತ್ರಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
  • ಈ ಎಲ್ಲ ಮಾಹಿತಿಗಳನ್ನು ಸಲ್ಲಿಸಿದ ನಂತರ ತಾವು ಯಾವ ಬ್ಯಾಂಕಿನಲ್ಲಿ ಖಾತೆ ಹೊಂದಿದ್ದೀರೋ, ಆ ಬ್ಯಾಂಕ್ ಅಥವಾ ನಿಮಗೆ ಇಷ್ಟವಿರುವ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯನ್ನು ಆಯ್ಕೆ ಮಾಡಿ ಸಲ್ಲಿಸಿ
  • ಕೊನೆಯದಾಗಿ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ತಾವು ನಮೂದಿಸಿರುವ ಎಲ್ಲ ಮಾಹಿತಿಯು ಸರಿಯಾಗಿದೆ ಎಂದು ಪರಿಶೀಲಿಸಿ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಿ ನಂತರ ನಿಮ್ಮ ಅರ್ಜಿಯ ನೋಂದಣಿ ಸಂಖ್ಯೆ ಸ್ಕ್ರೀನ್ ನ ಮೇಲೆ ಕಾಣುತ್ತದೆ ಆ ನೊಂದಣಿ ಸಂಖ್ಯೆಯನ್ನು ಬಳಸಿಕೊಂಡು ಪೋರ್ಟಲ್ಲಿಯೇ ತಮ್ಮ ಲೋನ್ ಅಪ್ಲಿಕೇಶನ್ ನ ಸ್ಥಿತಿಯನ್ನು ತಿಳಿಯಬಹುದಾಗಿರುತ್ತದೆ

ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ಅಗತ್ಯ ದಾಖಲೆಗಳು

  • ಆಧಾರ್ ಕಾರ್ಡ್
  • ಪ್ಯಾನ್ ಕಾರ್ಡ್
  • ಶೈಕ್ಷಣಿಕ ಅಂಕಪಟ್ಟಿಗಳು
  • ಶೈಕ್ಷಣಿಕ ವಿದ್ಯಾ ಸಂಸ್ಥೆಯ ದಾಖಲಾತಿ ವಿವರ ಹಾಗೂ ಶುಲ್ಕದ ಬ್ರೇಕ್ ಅಪ್ ಮಾಹಿತಿ
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ವಿಳಾಸದ ಪುರಾವೆಗಳು
  • ಬ್ಯಾಂಕ್ ಖಾತೆ ವಿವರಗಳು
  • ಕೆಲವೊಂದು ಸಂದರ್ಭಗಳಲ್ಲಿ ಇನ್ನೂ ಹೆಚ್ಚುವರಿ ದಾಖಲಾತಿಗಳನ್ನು ಕೇಳಬಹುದು

ಯೋಜನೆಯ ಸವಾಲುಗಳು

  • PM Vidyalakshmi Yojana ಮೂಲಕ ಶಾಲಾ ಸೌಲಭ್ಯ ಸಿಕ್ಕಿದರು ಈ ಸಾಲದ ಅನುಮೋದನೆ ಸ್ವಲ್ಪ ವಿಳಂಬವಾಗಬಹುದು
  • ಬ್ಯಾಂಕುಗಳ ನಿಯಮಗಳು ಹಾಗೂ ಬ್ಯಾಂಕಿನಿಂದ ಬ್ಯಾಂಕ್ ಗೆ ನಿಯಮಗಳಲ್ಲಿ ಬದಲಾವಣೆ ಇರುವುದರಿಂದ ಗೊಂದಲ ಉಂಟಾಗಬಹುದು
  • ಅಭ್ಯರ್ಥಿಗಳು ಬ್ಯಾಂಕುಗಳು ಕೇಳುವ ಎಲ್ಲಾ ಕಡ್ಡಾಯ ದಾಖಲಾತಿಗಳನ್ನು ಪೂರೈಸಬೇಕು ಇಲ್ಲವಾದಲ್ಲಿ ಅರ್ಜಿ ತಿರಸ್ಕಾರ ಆಗುವ ಸಾಧ್ಯತೆ ಹೆಚ್ಚಿರುತ್ತದೆ

ಸಲಹೆಗಳು

  • ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ವೈಯಕ್ತಿಕ ಶೈಕ್ಷಣಿಕ ಮೀಸಲಾತಿ ಹಾಗೂ ಇನ್ನುಳಿದ ಎಲ್ಲ ದಾಖಲಾತಿಗಳು ಸಿದ್ಧವಾಗಿ ಇಟ್ಟುಕೊಳ್ಳಿ
  • ಪೋರ್ಟನ್ನಲ್ಲಿ ಲಭ್ಯವಿರುವ ಬ್ಯಾಂಕ್ ಗಳ ಬಡ್ಡಿದರವನ್ನು ಹೋಲಿಕೆ ಮಾಡಿ ಕಡಿಮೆ ಬಡ್ಡಿದರ ಹಾಗೂ ಮರುಪಾವತಿ ಅವಧಿ ಉತ್ತಮವಾಗಿರುವ ಬ್ಯಾಂಕನ್ನು ಆಯ್ಕೆ ಮಾಡಿ
  • ಶೈಕ್ಷಣಿಕ ಉದ್ದೇಶಕ್ಕಾಗಿ ಅಗತ್ಯವಿರುವ ಮತ್ತದ ಪ್ರಮಾಣವನ್ನಷ್ಟೇ ಸಾಲವಾಗಿ ಪಡೆಯಿರಿ ಹೆಚ್ಚು ಹಣವನ್ನು ಪಡೆದರೆ ಮರುಪಾವತಿಗೆ ತೊಂದರೆಯಾಗಬಹುದು
  • ಸಾಲವನ್ನು ಪಡೆಯುವ ಮುನ್ನ ಮರುಪಾವತಿ ಅವಧಿ ಮೊತ್ತ ಹಾಗೂ ಪಾಲಿಸಬೇಕಾದ ನಿಯಮಗಳನ್ನು ಮುಂಚಿತವಾಗಿಯೇ ತಿಳಿದುಕೊಳ್ಳಿ ಏಕೆಂದರೆ ಸಾಲವನ್ನು ಪಡೆದ ನಂತರ ಮರುಪಾವತಿ ನಿಯಮಗಳು ಕಷ್ಟಕರವೆನಿಸಬಹುದು

ಪ್ರಮುಖ ಲಿಂಕ್‌ ಗಳು

PM Vidyalakshmi Yojana ದೇಶದಲ್ಲಿರುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಕನಸನ್ನು ನರಸು ಮಾಡಿಕೊಳ್ಳಲು ಇರುವ ಮಹತ್ವದ ಯೋಜನೆಯಾಗಿದೆ ಆರ್ಥಿಕ ಕಷ್ಟಗಳಿಂದಾಗಿ ಶಿಕ್ಷಣವನ್ನು ಕೈಬಿಡಬೇಕಾದ ಪರಿಸ್ಥಿತಿ ಬಂದಾಗ ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಪ್ರಯೋಜನವನ್ನು ಪಡೆಯಬಹುದು ವಿಶೇಷವೆಂದರೆ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಉದ್ದೇಶಕ್ಕಾಗಿ ಸಾಲವನ್ನು ನೀಡುವ ಪ್ರಕ್ರಿಯೆಯನ್ನು ಸುಲಭಗೊಳಿಸಿರುವುದು ಮುಖ್ಯ ಹೆಜ್ಜೆಯಾಗಿದೆ ಆದುದರಿಂದ ಸರಿಯಾದ ಮಾಹಿತಿ ಹಾಗೂ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ತಮ್ಮ ಉನ್ನತ ಶಿಕ್ಷಣದ ಭವಿಷ್ಯವನ್ನು ಸಹಕಾರ ಗೊಳಿಸಿ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳುವುದು ಈ  PM Vidyalakshmi Yojana ಯೋಜನೆಯ ಉದ್ದೇಶವಾಗಿದೆ

 

PM Vidyalakshmi Yojana –  FAQ’s

1. PM Vidyalakshmi Yojana ಎಂದರೇನು?
ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲ ನೀಡುವ ಕೇಂದ್ರ ಸರ್ಕಾರದ ಯೋಜನೆ.

2. ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?
ಮಾನ್ಯತೆ ಪಡೆದ ಕಾಲೇಜು ಅಥವಾ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ದಾಖಲಾತಿ ಪಡೆದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

3. ಎಷ್ಟು ಸಾಲ ಸಿಗುತ್ತದೆ?
ಅರ್ಹ ವಿದ್ಯಾರ್ಥಿಗಳಿಗೆ ₹10 ಲಕ್ಷದವರೆಗೆ ಶಿಕ್ಷಣ ಸಾಲ ಸೌಲಭ್ಯ ದೊರೆಯಬಹುದು.

4. ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕು?
ಆಧಾರ್ ಕಾರ್ಡ್, ಅಂಕಪಟ್ಟಿ, ಆದಾಯ ಪ್ರಮಾಣ ಪತ್ರ, ಕಾಲೇಜು ದಾಖಲಾತಿ ಪತ್ರ ಹಾಗೂ ಬ್ಯಾಂಕ್ ವಿವರಗಳು ಬೇಕಾಗುತ್ತವೆ.

5. ಅರ್ಜಿ ಹೇಗೆ ಸಲ್ಲಿಸಬೇಕು?
ಅಧಿಕೃತ ಪೋರ್ಟಲ್‌ನಲ್ಲಿ ಖಾತೆ ತೆರೆಯಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Read More: Schemes

Vivo Kanyagyaan Scholorship, Big Update: ವಿದ್ಯಾರ್ಥಿನಿಯರಿಗೆ ವಾರ್ಷಿಕ 60,000 ರೂಗಳ ವರೆಗೆ ವಿದ್ಯಾರ್ಥಿವೇತನ, ಇಂದೇ ಅರ್ಜಿ ಸಲ್ಲಿಸಿ

Free Catalyst Scholarship 2026: 100% ಫೀಸ್ ಉಚಿತ + ಹಾಸ್ಟೆಲ್ + ಇಂಟರ್ನ್‌ಶಿಪ್ | ತಕ್ಷಣ ಅರ್ಜಿ ಹಾಕಿ

Leave a Comment