SSLC ನಂತರ ಇರುವ ಶೈಕ್ಷಣಿಕ ಕೋರ್ಸುಗಳು ಹಾಗೂ ಭವಿಷ್ಯದ ವೃತ್ತಿ ಅವಕಾಶಗಳು
ಎಸ್.ಎಸ್.ಎಲ್.ಸಿ ಪೂರ್ಣಗೊಳಿಸಿದ ನಂತರ ವಿದ್ಯಾರ್ಥಿಗಳ ಶೈಕ್ಷಣಿಕ ನಿರ್ಧಾರಗಳು ಹಾಗೂ ಜೀವನದಲ್ಲಿ ಅತ್ಯಂತ ಮಹತ್ವದ ಅಂತ ಆರಂಭವಾಗುತ್ತದೆ ಈ ಹಂತದಲ್ಲಿ ವಿದ್ಯಾರ್ಥಿಗಳು ತೆಗೆದುಕೊಳ್ಳುವ ಕೋರ್ಸುಗಳು, ವೃತ್ತಿಗಳು ಹಾಗೂ ಸಂಬಂಧಿತ ನಿರ್ಧಾರಗಳು ಭವಿಷ್ಯದ ಉದ್ಯೋಗ, ಆದಾಯದ ಮಟ್ಟ, ಹೊಂದುವಂತಹ ಕೌಶಲ್ಯ ಹಾಗೂ ಉತ್ತಮ ಜೀವನ ಮಟ್ಟದ ಮೇಲೆ ದೀರ್ಘಕಾಲದ ಪರಿಣಾಮವನ್ನು ಬೀರುತ್ತದೆ.
ಹೆಚ್ಚಿನ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ನಂತರ ಯಾವ ಕೋರ್ಸ್ ಆಯ್ಕೆ ಮಾಡಬೇಕು ಯಾವ ಕೋರ್ಸ್ ಅಲ್ಲಿ ಹೆಚ್ಚಿನ ಮಹತ್ವವಿದೆ. ಪಿಯುಸಿ ಉತ್ತಮವೇ, ಡಿಪ್ಲೋಮಾ ಉತ್ತಮವೇ, ಐಟಿಐ ಮಾಡಿದರೆ ಉದ್ಯೋಗ ಸಿಗುತ್ತದೆಯೇ ಇಂಜಿನಿಯರಿಂಗ್ ಓದಲು ಯಾವ ಕೋರ್ಸ್ ಅನ್ನು ಓದಬೇಕು ಎಂಬ ಹತ್ತು ಹಲವು ಪ್ರಶ್ನೆಗಳನ್ನು ಕೇಳುತ್ತಾರೆ ಆದರೆ ಸರಿಯಾದ ಮಾಹಿತಿ ಸೇರಿದ್ದರೆ ಗೊಂದಲ ಉಂಟಾಗುವುದು ಸಹಜ.
ಈ ಲೇಖನದಲ್ಲಿ ನಾವು ಎಸ್ ಎಸ್ ಎಲ್ ಸಿ ನಂತರ ಇರುವ ಪ್ರಮುಖ ಕೋರ್ಸುಗಳು ಹಾಗೂ ಅವುಗಳನ್ನು ಪೂರ್ಣಗೊಳಿಸಲು ಬೇಕಾಗುವ ಅವಧಿ ಹೊಂದಬೇಕಾದ ಅರ್ಹತೆ ಮತ್ತು ಎಸ್ ಎಸ್ ಎಲ್ ಸಿ ನಂತರದ ಕೋರ್ಸುಗಳಲ್ಲಿ ಶಿಕ್ಷಣವನ್ನು ಮುಗಿಸಿದ ನಂತರ ಯಾವ ಕ್ಷೇತ್ರಗಳಲ್ಲಿ ಶಿಕ್ಷಣವನ್ನು ಮುಂದುವರಿಸಬಹುದು ಯಾವ ಯಾವ ವಲಯಗಳಲ್ಲಿ ಉದ್ಯೋಗ ಸಿಗಬಹುದು ಹಾಗೂ ಅಂದಾಜಿತ ಸಂಬಳದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ನೀಡಲಾಗಿದೆ.
ಎಸ್ ಎಸ್ ಎಲ್ ಸಿ ಮುಗಿದ ನಂತರ ವೃತ್ತಿ ಯೋಜನೆ ಏಕೆ ಮುಖ್ಯ
ಯಾವುದೇ ಮನುಷ್ಯನ ಪ್ರತಿ ಜೀವನದ ಯಶಸ್ಸು ಹಾಗೂ ಫಲಿತಾಂಶ ಕೇವಲ ಒಂದು ಪದವಿ ಅಥವಾ ಅಂಕಪಟ್ಟಿ ಪ್ರಮಾಣಪತ್ರದ ಮೇಲೆ ಆಧಾರವಾಗಿ ಅವಲಂಬಿತವಾಗಿರುವುದಿಲ್ಲ, ಪ್ರತಿಯಾಗಿ ಉತ್ತಮ ಶಿಕ್ಷಣದ ಆಯ್ಕೆ ಹಾಗೂ ಸರಿಯಾದ ದಿಕ್ಕಿನಲ್ಲಿ ಆರಂಭವಾಗುವ ಶಿಕ್ಷಣವೇ ಉತ್ತಮ ಭವಿಷ್ಯಕ್ಕೆ ನಾವು ಹಾಕುವ ಅಡಿಪಾಯವಾಗಿದೆ.
ದೀರ್ಘಾವಧಿಯಲ್ಲಿ ಪರಿಣಾಮ ಬೀರುವುದು
ನಾವು ಇಂದು ಆಯ್ಕೆ ಮಾಡುವ ಕೋರ್ಸು ಮುಂದಿನ ಹತ್ತರಿಂದ ಇಪ್ಪತ್ತು ವರ್ಷಗಳ ವೃತ್ತಿ ಜೀವನದ ಮಹತ್ವದ ದಾರಿಯನ್ನು ನಿರ್ಧರಿಸಬಹುದು ಏಕೆಂದರೆ ಎಸ್ ಎಸ್ ಎಲ್ ಸಿ ನಂತರದ ಕೋರ್ಸುಗಳು ಮುಂದೆ ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಕೋರ್ಸ್ ಗಳಿಗೆ ಅಡಿಪಾಯ ಆಗಿರುವುದರಿಂದ ಈ ಪರಿಣಾಮ ದೀರ್ಘಾವಧಿಯಲ್ಲಿ ಪರಿಣಮಿಸುತ್ತದೆ
ಉನ್ನತ ಶಿಕ್ಷಣದ ಅವಕಾಶಗಳು
ಸರಿಯಾದ ಕೋರ್ಸ್ ಗಳನ್ನು ಆಯ್ಕೆ ಮಾಡಿದರೆ ವೃತ್ತಿಪರ ಕೋರ್ಸ್ ಗಳಾದ ಇಂಜಿನಿಯರಿಂಗ್, ವೈದ್ಯಕೀಯ ಕ್ಷೇತ್ರ, ವಾಣಿಜ್ಯ, ಕಲೆ, ಕೃಷಿ ಮತ್ತು ಇನ್ನಿತರ ಕ್ಷೇತ್ರಗಳು ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಮುಂದುವರೆಯಬಹುದು
ಸಿಗಬಹುದಾದ ಉದ್ಯೋಗಾವಕಾಶಗಳು
ಪ್ರತಿ ಕ್ಷೇತ್ರದಲ್ಲೂ ಪ್ರತಿ ಪ್ರತಿ ಶೈಕ್ಷಣಿಕ ಅರ್ಹತೆಗೂ ವಿಧ ವಿಧವಾದ ಉದ್ಯೋಗದ ಅವಕಾಶಗಳಿವೆ. ವಿದ್ಯಾರ್ಥಿಗಳ ಆಸಕ್ತಿ ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ ಕೋರ್ಸುಗಳನ್ನು ಆಯ್ಕೆ ಮಾಡುವುದು ಬಹು ಮುಖ್ಯ ಏಕೆಂದರೆ ವಿಧ್ಯಾರ್ಥಿಗಳ ಆಸಕ್ತಿಗಳನ್ನು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುವುದು ಇಲ್ಲಿ ಪ್ರಮುಖವಾಗಿದೆ
ಕೌಶಲ್ಯ ಅಭಿವೃದ್ಧಿ
ಇಂದಿನ ಸಂದರ್ಭಗಳಲ್ಲಿ ಉದ್ಯೋಗದ ಮಟ್ಟವು ಕಡಿಮೆ ಇರುವುದರಿಂದ ಕೌಶಲ್ಯವನ್ನು ಹೊಂದಿದರೆ ಮಾತ್ರ ಉದ್ಯೋಗಾವಕಾಶಗಳನ್ನು ಹೊಂದಬಹುದು ಅದರಂತೆಯೇ ಉದ್ಯೋಗ ಮಾರುಕಟ್ಟೆಯಲ್ಲಿ ಉದ್ಯೋಗಗಳನ್ನು ಹೊಂದಲು ಪದವಿಯ ಜೊತೆಗೆ ತಾಂತ್ರಿಕ ಹಾಗೂ ಪ್ರಾಯೋಗಿಕ ಕೌಶಲ್ಯಗಳನ್ನು ಸಹ ನಾವು ಕಲಿಯಬೇಕಾಗುತ್ತದೆ
SSLC Result ಬಂದ ನಂತರ ಮೊದಲ 30 ದಿನಗಳಲ್ಲಿ ಏನು ಮಾಡಬೇಕು?
- ಮೊದಲನೇ ವಾರ – ಸ್ವಯಂ ಮೈಲ್ಯಮಾಪನ
- ಎರಡನೇ ವಾರ – ಕೋರ್ಸುಗಳ ಸಂಶೋಧನೆ
- ಮೂರನೇ ವಾರ – ಕಾಲೇಜು ಅಥವಾ ವಿದ್ಯಾ ಸಂಸ್ಥೆಗಳ ಆಯ್ಕೆ
- ನಾಲ್ಕನೇ ವಾರ – ದಾಖಲಾತಿ ಪ್ರಕ್ರಿಯೆ
ವಿದ್ಯಾರ್ಥಿಗಳ ಪೋಷಕರಿಗೆ ಪ್ರಮುಖ ಸಲಹೆಗಳು
- ಮಕ್ಕಳಿಗೆ ಇರುವ ಆಸಕ್ತಿಯನ್ನು ಗೌರವಿಸಿ
- ನಿಮ್ಮ ಮಕ್ಕಳನ್ನು ಇತರರೊಂದಿಗೆ ಎಂದಿಗೂ ಹೋಲಿಕೆ ಮಾಡಬೇಡಿ
- ವೃತ್ತಿ ಮಾರ್ಗದರ್ಶಕರಿಂದ ಉತ್ತಮ ವೃತ್ತಿ ಮಾರ್ಗದರ್ಶನ ಮತ್ತು ಸಲಹೆಗಳನ್ನು ಪಡೆಯಿರಿ
- ನಿಮ್ಮ ಮಕ್ಕಳ ಮೇಲೇ ನಿರ್ದಿಷ್ಟ ಕೋರ್ಸನ್ನೇ ಓದಬೇಕು ಎಂದು ಒತ್ತಡ ಹಾಕಬೇಡಿ
ವಿದ್ಯಾರ್ಥಿಗಳು ಹಾಗೂ ಪೋಷಕರು ಮಾಡುವ Admission Mistakes
- ಅರ್ಜಿ ಸಲ್ಲಿಕೆಯ ಕೊನೆಯ ದಿನದವರೆಗೆ ಕಾಯುವುದು
- ಕಾಲೇಜು ನೋಂದಾವಣಿಗೊಂಡಿದೆಯೇ ಅಥವಾ ಮಾನ್ಯತೆಯನ್ನು ಪಡೆದಿದೆಯೇ ಎಂದು ಪರಿಶೀಲಿಸದಿರುವುದು
- ಕಡಿಮೆ ಶುಲ್ಕ ಇರುವ ಕಾಲೇಜನ್ನು ಮಾತ್ರ ನೋಡಿ ಆಯ್ಕೆ ಮಾಡುವುದು
- Placement Records ಗಳನ್ನು ಪರಿಶೀಲಿಸದಿರುವುದು
ಎಸ್ ಎಸ್ ಎಲ್ ಸಿ ನಂತರದ ಕೋರ್ಸುಗಳ ಸಂಪೂರ್ಣ ಪಟ್ಟಿ
ಪದವಿಪೂರ್ವ ಕೋರ್ಸುಗಳು ಅಂದರೆ ಪಿಯುಸಿ (PUC)
ಪಿಯುಸಿ ಕೋರ್ಸುಗಳು ಎರಡು ವರ್ಷದ ಅವಧಿಯ ಕೋರ್ಸ್ ಆಗಿದ್ದು ಉನ್ನತ ಶಿಕ್ಷಣವನ್ನು ಆರಂಭಿಸಲು ಆಗುವ SSLC ನಂತರದ ಅಡಿಪಾಯದ ಕೋರ್ಸ್ ಆಗಿದೆ. ಇದರಲ್ಲಿ ಮೂರು ಪ್ರಮುಖ ವಿಭಾಗಗಳು ಬರಲಿದ್ದು ಈ ಕೆಳಕಂಡಂತಿವೆ
ವಿಜ್ಞಾನ ವಿಭಾಗ
ಇಂದಿನ ಸಂದರ್ಭದಲ್ಲಿ ತಂತ್ರಜ್ಞಾನವು ತ್ವರಿತ ಗತಿಯಲ್ಲಿ ಅಭಿವೃದ್ಧಿಯಾಗುತ್ತಿದೆ ಹಾಗೂ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ಮಾಹಿತಿ ತಂತ್ರಜ್ಞಾನ ಹಾಗೂ ವೈಜ್ಞಾನಿಕ ಸಂಶೋಧನೆ ತಂತ್ರಜ್ಞಾನಗಳು ಮುಂದುವರೆಯುತ್ತಿರುವುದರಿಂದ ವಿಜ್ಞಾನ ವಿಭಾಗದಲ್ಲಿ ಹೆಚ್ಚಿನ ಬೇಡಿಕೆ ಇದೆ ಈ ವಿಭಾಗದ ಅಡಿಯಲ್ಲಿ ಬರುವ ಪ್ರಮುಖ ವಿಷಯಗಳೆಂದರೆ
- ಭೌತಶಾಸ್ತ್ರ (Physics)
- ರಸಾಯನಶಾಸ್ತ್ರ (Chemistry)
- ಗಣಿತ (Mathematics)
- ಜೀವಶಾಸ್ತ್ರ (Biology)
- ಕಂಪ್ಯೂಟರ್ ಸೈನ್ಸ್ (Computer Science)
ಈ ಕೋರ್ಸುಗಳನ್ನು ಮುಗಿದ ನಂತರ ಯಾವ ಉದ್ಯೋಗಾವಕಾಶಗಳು ದೊರೆಯುತ್ತವೆ
- ಇಂಜಿನಿಯರ್ (Engineer)
- ವೈದ್ಯಕೀಯ (Medical)
- ಫಾರ್ಮಸಿ (Pharmacy)
- ಕೃಷಿ (Agriculture)
- ನರ್ಸಿಂಗ್ (Nursing)
- ತಂತ್ರಜ್ಞಾನ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಹುದ್ದೆಗಳು (Technology And Research Field)
ವಾಣಿಜ್ಯ ವಿಭಾಗ
ದೇಶದ ಹಣಕಾಸು ಹಾಗೂ ಉದ್ಯಮಶೀಲತೆಯ ತಂತ್ರಗಳನ್ನು ಈ ವಾಣಿಜ್ಯ ವಿಭಾಗದ ಅಡಿಯಲ್ಲಿ ಅಧ್ಯಯನ ಮಾಡಲಾಗುತ್ತದೆ. ಲೆಕ್ಕಶಾಸ್ತ್ರ ಹಾಗೂ ಅರ್ಥಶಾಸ್ತ್ರದ ಆಯಮಗಳನ್ನು ಹೊಂದಿರುವ ವಾಣಿಜ್ಯ ವಿಭಾಗವು ಹಣಕಾಸು ಸಂಬಂಧಿಸಿದ ವಿಧಾನಗಳಲ್ಲಿ ಅಧ್ಯಯನವನ್ನು ಉತ್ತೇಜಿಸುತ್ತದೆ ಇದರ ಅಡಿಯಲ್ಲಿ ಬರುವ ಪ್ರಮುಖ ವಿಷಯಗಳೆಂದರೆ
- ಲೆಕ್ಕಶಾಸ್ತ್ರ (Accountancy)
- ಅರ್ಥಶಾಸ್ತ್ರ (Economics)
- ವ್ಯವಹಾರ ಅಧ್ಯಯನ (Business Studies)
- ಗಣಿತ (Mathematics)
ಮುಂದಿನ ಅವಕಾಶಗಳು
- ಬಿ.ಕಾಂ ಪದವಿ (B.com Degree)
- ಚಾರ್ಟೆಡ್ ಅಕೌಂಟೆಂಟ್ (Chartered Accountant)
- ಕಂಪ್ಯೂಟರ್ ಸೈನ್ಸ್ ((Computer Science)
- ಬ್ಯಾಂಕಿಂಗ್ (Banking)
- ಕ್ಷೇತ್ರ (Finance)
- ಪ್ರಮಾಣೀಕೃತ ನಿರ್ವಹಣಾ ಲೆಕ್ಕಪತ್ರಗಾರ (Certified Management Accountant)
ಕಲಾ ವಿಭಾಗ
ಇಂದಿನ ಸಂದರ್ಭದಲ್ಲಿ ಕಲೆ ಇತಿಹಾಸ ಹಾಗೂ ಭೌಗೋಳಿಕ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮಹತ್ವಗಳು ಹೆಚ್ಚಾಗುತ್ತಿದ್ದು ಕಲಾ ವಿಭಾಗದಲ್ಲಿ ಓದುತ್ತಿರುವವರ ಸಂಖ್ಯೆಯು ಸಹ ಹೆಚ್ಚಾಗಿದೆ ಸರ್ಕಾರಿ ಉದ್ಯೋಗವನ್ನು ಪಡೆಯಬೇಕೆಂಬ ಅಭ್ಯರ್ಥಿಗಳು ಹೆಚ್ಚಾಗಿ ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಇದರಡಿಯಲ್ಲಿ ಬರುವ ಪ್ರಮುಖ ವಿಷಯಗಳೆಂದರೆ
- ಇತಿಹಾಸ (History)
- ರಾಜ್ಯಶಾಸ್ತ್ರ (Political Science)
- ಅರ್ಥಶಾಸ್ತ್ರ (Economics)
- ಸಮಾಜಶಾಸ್ತ್ರ (Sociology)
ಮುಂದಿನ ಅವಕಾಶಗಳು
- ಬಿ.ಎ ಪದವಿ (B.A Degree)
- ಕಾನೂನು ಪದವಿ (Law Degree)
- ಪತ್ರಿಕೋದ್ಯಮ (Journalism)
- ಸರ್ಕಾರಿ ಉದ್ಯೋಗಗಳು (Government Jobs)
ಡಿಪ್ಲೋಮಾ ಕೋರ್ಸಗಳು
ಡಿಪ್ಲೋಮಾ ಕೋರ್ಸುಗಳು ಅವಧಿಯಲ್ಲಿ ಮೂರು ವರ್ಷದ ಕೋರ್ಸ್ ಗಳು ಆಗಿದ್ದು, ತಾಂತ್ರಿಕ ಶಿಕ್ಷಣ ಹಾಗೂ ನಿರ್ವಹಣೆಯ ಬಗ್ಗೆ ಅಧ್ಯಯನವನ್ನು ಮಾಡುತ್ತವೆ ಡಿಪ್ಲೋಮಾ ಕೋರ್ಸ್ ಅಡಿಯಲ್ಲಿ ಒಟ್ಟು ಐದು ವಿಭಾಗಗಳು ಬರಲಿದ್ದು ವಿಭಾಗಗಳು ಈ ಕೆಳಕಂಡಂತಿವೆ
ಮೆಕ್ಯಾನಿಕಲ್ ಇಂಜಿನಿಯರಿಂಗ್ : ಉತ್ಪಾದನಾ ಕ್ಷೇತ್ರದಲ್ಲಿ ಬಳಸಲಾಗುವಂತಹ ಯಂತ್ರಗಳ ವಿನ್ಯಾಸ ಉತ್ಪಾದನೆ ಮತ್ತು ನಿರ್ವಹಣೆಗೆ ಸಂಬಂಧಿಸಿದ ಅಧ್ಯಯನವನ್ನು ಈ ವಿಭಾಗದಲ್ಲಿ ಮಾಡಲಾಗುತ್ತದೆ
ಸಿವಿಲ್ ಇಂಜಿನಿಯರಿಂಗ್ : ಕಟ್ಟಡಗಳ ನಿರ್ಮಾಣ ರಸ್ತೆಗಳ ನಿರ್ಮಾಣಕ್ಕಾಗಿ ಸೇತುವೆಗಳ ದುರಸ್ತೀಕರಣ ಹಾಗೂ ಸೇತುವೆಗಳ ನಿರ್ಮಾಣ ಮುಂತಾದ ನಿರ್ಮಾಣ ಕಾರ್ಯಗಳಲ್ಲಿ ಸಿವಿಲ್ ಇಂಜಿನಿಯರಿಂಗ್ ಶೈಕ್ಷಣಿಕ ಕ್ಷೇತ್ರವು ಅಧ್ಯಯನ ಮಾಡುತ್ತದೆ
ಕಂಪ್ಯೂಟರ್ ಸೈನ್ಸ್ : ಮಾಹಿತಿ ತಂತ್ರಜ್ಞಾನ ಸಾಫ್ಟ್ವೇರ್ ಡೆವಲಪ್ಮೆಂಟ್ ಪ್ರೋಗ್ರಾಮಿಂಗ್ ಹಾಗೂ ಕಂಪ್ಯೂಟರ್ ತಂತ್ರಜ್ಞಾನಗಳಿಗೆ ಸಂಬಂಧಿಸಿದಂತೆ ಈ ವಿಭಾಗದ ಅಡಿಯಲ್ಲಿ ಅಧ್ಯಯನ ಮಾಡಬಹುದು
ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ : ವಿದ್ಯುನ್ಮಾನ ಉಪಕರಣಗಳು, ಎಲೆಕ್ಟ್ರಿಷಿಯನ್ ಕೆಲಸಗಳು ಹಾಗೂ ವಿದ್ಯುತ್ ಶಕ್ತಿ ಸಾಧನಗಳಿಗೆ ಸಂಬಂಧಿಸಿದ ಉಪಕರಣಗಳ ವಿನ್ಯಾಸ ರಚನೆ ಹಾಗೂ ನಿರ್ವಹಣೆಯ ಬಗ್ಗೆ ಅಧ್ಯಯನ ಮಾಡಬಹುದು
ಆಟೋಮೊಬೈಲ್ ಇಂಜಿನಿಯರಿಂಗ್ : ವಾಹನಗಳಾದ ದ್ವಿಚಕ್ರ ವಾಹನ, ಕಾರು, ಬಸ್ಸು ಮುಂತಾದ ಹತ್ತು ಹಲವು ವಾಹನಗಳ ವಿನ್ಯಾಸ ಹಾಗೂ ದುರಸ್ತಿ ಮಾಡುವ ತಂತ್ರಜ್ಞಾನವನ್ನು ಆಟೋ ಮೊಬೈಲ್ ಇಂಜಿನಿಯರಿಂಗ್ ಅಡಿಯಲ್ಲಿ ಅಧ್ಯಯನ ಮಾಡಬಹುದು
ಐಟಿಐ ಕೋರ್ಸುಗಳು (ITI Courses)
ತ್ವರಿತ ಉದ್ಯೋಗವನ್ನು ಕೇಂದ್ರೀಕೃತಗೊಳಿಸಿರುವ ಕೌಶಲ್ಯ ತರಬೇತಿಯನ್ನು ಐಟಿಐ ಕೋರ್ಸ್ ಒದಗಿಸುತ್ತದೆ. ತಾಂತ್ರಿಕ ಶಿಕ್ಷಣವನ್ನು ಅವಲಂಬಿಸಿರುವ ಈ ಕೋರ್ಸುಗಳು ಕೌಶಲ್ಯ ಆಧಾರಿತ ಗುಣಮಟ್ಟ ಹಾಗೂ ಉತ್ಪಾದನಾ ಚಟುವಟಿಕೆಗಳ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಇದರಡಿಯಲ್ಲಿ ಒಟ್ಟು ಐದು ವಿಭಾಗಗಳು ಬರಲಿದ್ದು ಈ ಕೆಳಕಂಡಂತಿವೆ
ಎಲೆಕ್ಟ್ರಿಷಿಯನ್ ವಿಭಾಗ : ವಿದ್ಯುತ್ ಉಪಕರಣಗಳ ಹಾಗೂ ವಿದ್ಯುತ್ ವ್ಯವಸ್ಥೆಗಳ ಆಡಳಿಕೆ ನಿರ್ವಹಣೆ ಮತ್ತು ನಿರ್ಮಾಣ ಕಾರ್ಯಗಳು
ಫಿಟ್ಟರ್ ವಿಭಾಗ : ಕೈಗಾರಿಕೆಯಲ್ಲಿ ಬಳಸುವಂತಹ ಯಂತ್ರೋಪಕರಣಗಳು ಅವುಗಳ ಜೋಡಣೆ ವ್ಯವಸ್ಥೆ ಮತ್ತು ರಿಪೇರಿ ಹಾಗೂ ದುರಸ್ತಿ ಕಾರ್ಯಗಳ ಬಗ್ಗೆ ಅಧ್ಯಯನ ಮಾಡಲಾಗುತ್ತದೆ
ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್ ವಿಭಾಗ (COPA) : ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್ ಎಂಬ ಈ ವಿಭಾಗವು ಕಂಪ್ಯೂಟರ್ಗೆ ಸಂಬಂಧಿಸಿದ ಭಾಗಗಳ ಜೋಡಣೆ ಮತ್ತು ಡಿಸೈನ್ ಕಾರ್ಯಗಳ ಮೇಲೆ ಅಧ್ಯಯನ ನಡೆಸುತ್ತದೆ
ವೆಲ್ಡರ್ ವಿಭಾಗ : ಲೋಹಗಳಾದಂತಹ ಕಬ್ಬಿಣ ತಾಮ್ರ ಅಲ್ಯೂಮಿನಿಯಂ ಮುಂತಾದ ಲೋಹಗಳ ಜೋಡಣೆ ಮತ್ತು ವೆಲ್ಡಿಂಗ್ ತಂತ್ರಗಾಲಗಳನ್ನು ಇದರಡಿಯಲ್ಲಿ ಅಧ್ಯಯನ ಮಾಡಲಾಗುತ್ತದೆ
ಟರ್ನರ್ ವಿಭಾಗ : ಯಂತ್ರೋಪಕರಣಗಳ ಮೂಲಕ ಅಗತ್ಯ ಇರುವಂತಹ ಲೋಹಗಳ ಸಹಾಯದಿಂದ ಇತರ ಭಾಗಗಳನ್ನು ತಯಾರಿಸುವಲ್ಲಿ ಟರ್ನರ್ ವರ್ಸು ಅಧ್ಯಯನ ನಡೆಸುತ್ತದೆ
ಪ್ಯಾರಾ ಮೆಡಿಕಲ್ ಕೋರ್ಸುಗಳು
ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುವವರಿಗೆ ಹಾಗೂ ಉತ್ತಮ ವೇತನವನ್ನು ಬಯಸುವ ಅಭ್ಯರ್ಥಿಗಳು ಪಾರಮೆಡಿಕಲ್ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಈ ವಲಯದಡಿಯಲ್ಲಿ ಒಟ್ಟು 3 ಮುಖ್ಯ ಕೋರ್ಸುಗಳು ಬಂದಿದ್ದು ಅವುಗಳು ಈ ಕೆಳಕಂಡಂತಿವೆ
ಮೆಡಿಕಲ್ ಲ್ಯಾಬ್ ಟೆಕ್ನಿಷಿಯನ್ : ರಕ್ತ ಪರೀಕ್ಷೆ ಮತ್ತು ಇತರ ದೇಹದ ಭಾಗಗಳ ಅಂಗಾಂಶಗಳ ಸ್ಥಿತಿಯನ್ನು ತಿಳಿಯುವ ಪರೀಕ್ಷೆಗಳ ನಿರ್ವಹಣೆಯನ್ನು ಮೆಡಿಕಲ್ ಲ್ಯಾಬ್ ಟೆಕ್ನಿಷಿಯನ್ ವಿಭಾಗವು ತಿಳಿಸುತ್ತದೆ
ಆಪರೇಷನ್ ಥಿಯೇಟರ್ ಟೆಕ್ನಿಷಿಯನ್ : ಶಸ್ತ್ರ ಚಿಕಿತ್ಸಾ ಕೊಠಡಿಯಲ್ಲಿ ಇರಬೇಕಾದ ಉಪಕರಣಗಳು ಅವುಗಳ ನಿರ್ವಹಣೆ ಹಾಗೂ ಸ್ವಚ್ಛತಾ ಕಾರ್ಯಗಳ ಬಗ್ಗೆ ಆಪರೇಷನ್ ಥಿಯೇಟರ್ ಟೆಕ್ನಿಷಿಯನ್ ನಲ್ಲಿ ಅಧ್ಯಯನ ಮಾಡಲಾಗುತ್ತದೆ
ಎಕ್ಸರೇ ಟೆಕ್ನಿಷಿಯನ್ : ವೈದ್ಯಕೀಯ ಕ್ಷೇತ್ರದಲ್ಲಿ ರೋಗಿಗಳ ದೇಹದ ಭಾಗಗಳು ಮತ್ತು ಅವುಗಳ ಸ್ಥಿತಿಯನ್ನು ತಿಳಿಯುವ ಎಕ್ಸ್ ರೇ ಹಾಗೂ ಇಮೇಜಿಂಗ್ ಕಾರ್ಯಗಳನ್ನು ಎಕ್ಸ್ ರೇ ಟೆಕ್ನಿಷಿಯನ್ ವಲಯವು ಅಧ್ಯಯನದಲ್ಲಿ ಸಹಕರಿಸುತ್ತದೆ
ವೃತ್ತಿಪರ ಕೋರ್ಸುಗಳು ( Professional courses)
ಪ್ರಮುಖ ವಿಷಯಗಳ ಕೋರ್ಸ್ ಗಳ ಜೊತೆಯಲ್ಲಿ ವೃತ್ತಿಪರ ಕೋರ್ಸ್ಗಳು ಸಹ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಈ ಕೋರ್ಸುಗಳಿಗೆ ಹೆಚ್ಚಿನ ವಿದ್ಯಾರ್ಹತೆಯ ಅಗತ್ಯತೆ ಇರುವುದಿಲ್ಲ ಬದಲಾಗಿ ಕೌಶಲ್ಯಗಳು ಪ್ರಮುಖ ಪಾತ್ರ ವಹಿಸುತ್ತವೆ ಈ ವಲಯದಡಿಯಲ್ಲಿ ಒಟ್ಟು ನಾಲ್ಕು ಉಪ ವಿಭಾಗಗಳು ಬಂದಿದ್ದು ಅವುಗಳು ಈ ಕೆಳಕಂಡಂತಿವೆ
ರಿಟೇಲ್ ಮ್ಯಾನೇಜ್ಮೆಂಟ್ : ಉತ್ಪಾದನೆಗೊಂಡ ವಸ್ತುಗಳ ಮಾರಾಟ ಮತ್ತು ಅವುಗಳನ್ನು ಮಾರಾಟ ಪ್ರಕ್ರಿಯೆ, ಗ್ರಾಹಕ ಸೇವೆಗಳ ನಿರ್ವಹಣೆ ಹಾಗೂ ಬೇಡಿಕೆ ಮತ್ತು ಪೂರೈಕೆಗಳ ನಡುವಿನ ಅಂತರವನ್ನು ತಿಳಿದು ನಿರ್ವಹಣೆಯ ಬಗ್ಗೆ ಈ ವಲಯವು ಅಧ್ಯಯನ ನಡೆಸುತ್ತದೆ
ಪ್ರವಾಸೋದ್ಯಮ ವಲಯ : ಇಂದಿನ ದಿನಗಳಲ್ಲಿ ಪ್ರವಾಸದ ಯೋಜನೆಗಳು ಹೆಚ್ಚಾಗುತ್ತಿದ್ದು ಈ ಯೋಜನೆ ಅಡಿಯಲ್ಲಿ ಹೋಟೆಲ್ ಸೇವೆಗಳು ಮತ್ತು ಇತರ ಗೈಡ್ಗಳ ಅವಶ್ಯಕತೆ ಇರುವುದರಿಂದ ಪ್ರವಾಸೋದ್ಯಮ ವಲಯವು ಸಹ ಹೆಚ್ಚಿನ ಲಾಭದಾಯಕವಾಗಿದೆ
ಕೃಷಿ ಕ್ಷೇತ್ರ : ಉತ್ಪಾದನಾ ವಲಯದಲ್ಲಿನ ಎರಡನೇ ವಲಯವಾದ ಕೃಷಿ ಕ್ಷೇತ್ರವು ಆಧುನಿಕ ಕೃಷಿ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕಡಿಮೆ ವೆಚ್ಚದಲ್ಲಿ ಉತ್ತಮ ಇಳುವರಿಯನ್ನು ಪಡೆದು ಉತ್ತಮ ಲಾಭವನ್ನು ಪಡೆಯುವುದರ ಹಿಂದಿನ ಅಧ್ಯಯನವನ್ನು ನಡೆಸುತ್ತದೆ ಆಧುನಿಕ ಕೃಷಿ ತಂತ್ರಜ್ಞಾನಗಳು ಮತ್ತು ಕೃಷಿ ಉದ್ಯಮದ ವಿಚಾರಧಾರೆಗಳನ್ನು ನಾವಿಲ್ಲಿ ಅಧ್ಯಯನ ಮಾಡಬಹುದು
ಫ್ಯಾಶನ್ ಡಿಸೈನಿಂಗ್ : ಉಡುಪಿನ ವಿನ್ಯಾಸ ಹಾಗೂ ದುಬಾರಿ ಬ್ರಾಂಡುಗಳ ಉಡುಪುಗಳನ್ನು ನಿರ್ಮಿಸುವುದು ಹಾಗೂ ರಚಿಸುವುದು ಈ ಫ್ಯಾಷನ್ ಡಿಸೈನಿಂಗ್ ಅಡಿಯಲ್ಲಿ ಬರುತ್ತದೆ ಇದರ ಅಡಿಯಲ್ಲಿ ಇಂಟೀರಿಯರ್ ಡಿಸೈನಿಂಗ್ ಔಟೀರಿಯರ್ ಡಿಸೈನಿಂಗ್ ಮುಂತಾದ ವಿಭಾಗಗಳು ಇರುತ್ತವೆ
ಎಸ್ ಎಸ್ ಎಲ್ ಸಿ ನಂತರ ಮಾಡಬಹುದಾದ ಕೋರ್ಸುಗಳಿಗೆ ಇರಬೇಕಾದ ಅರ್ಹತಮಾನದಂಡಗಳು
| ಕೋರ್ಸು | ಹೊಂದಿರಬೇಕಾದ ಅರ್ಹತೆ | ಕೋರ್ಸಿನ ಅವಧಿ |
| ಪಿಯುಸಿ | SSLC ಉತ್ತೀರ್ಣ | 2 ವರ್ಷಗಳು |
| ಡಿಪ್ಲೋಮಾ | SSLC ಉತ್ತೀರ್ಣ | 3 ವರ್ಷಗಳು |
| ಐಟಿಐ | SSLC ಉತ್ತೀರ್ಣ | 1 ರಿಂದ 2 ವರ್ಷಗಳು |
| ಪ್ಯಾರಾಮೆಡಿಕಲ್ ಕೋರ್ಸ್ | SSLC ಉತ್ತೀರ್ಣ | 1 ರಿಂದ 3 ವರ್ಷಗಳು |
| ವೃತ್ತಿಪರ ಕೋರ್ಸ್ | SSLC ಉತ್ತೀರ್ಣ | 6 ತಿಂಗಳುಗಳಿಂದ 2 ವರ್ಷಗಳು |
ವೃತ್ತಿ ಗುರಿಗಳ ಆಧಾರದ ಮೇಲೆ ಅತ್ಯುತ್ತಮ ಕೋರ್ಸುಗಳು ಸಲಹೆ
ಸರ್ಕಾರಿ ವಲಯದ ಉದ್ಯೋಗಗಳನ್ನು ಪಡೆಯುವವರಿಗೆ :
- ಪಿಯುಸಿ
- ಡಿಪ್ಲೋಮ
- ಐಟಿಐ ಕೋರ್ಸುಗಳು
ಈ ಕೋರ್ಸುಗಳು ರೈಲ್ವೆ ವಲಯ, ರಕ್ಷಣಾ ಕ್ಷೇತ್ರ, ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರಕಾರಿ ನೇಮಕಾತಿಗಳಿಗೆ ಸಹಾಯವಾಗುತ್ತವೆ ಹೆಚ್ಚುವರಿ ಪರೀಕ್ಷೆಗಳಿಗೆ ಪಿಯುಸಿ ಕೋರ್ಸ್ ಅನ್ನು ಆಧಾರವಾಗಿ ತೆಗೆದುಕೊಳ್ಳಲಾಗುತ್ತದೆ
ಬೇಗನೆ ಉದ್ಯೋಗವನ್ನು ಪಡೆಯಲು ಈ ಕೆಳಕಂಡ ಕೋರ್ಸ್ ಗಳನ್ನು ಆಯ್ಕೆ ಮಾಡಿ
- ಐಟಿಐ
- ಪ್ಯಾರ ಮೆಡಿಕಲ್ ಕೋರ್ಸುಗಳು
- ವೃತ್ತಿಪರ ಕೋರ್ಸುಗಳು
ಈ ಕೋರ್ಸುಗಳು ಕಡಿಮೆ ಅವಧಿಯಲ್ಲಿ ಹೆಚ್ಚಿನ ಕೌಶಲ್ಯವನ್ನು ಪಡೆಯುವುದರ ಜೊತೆಯಲ್ಲಿ ಉತ್ತಮ ಉದ್ಯೋಗವಕಾಶಗಳನ್ನು ಹಾಗೂ ಉತ್ತಮ ವೇತನವನ್ನು ಪಡೆಯಬಹುದು
ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಓದುವ ಆಸಕ್ತಿ ಹೊಂದಿದವರಿಗೆ ಈ ಕೋರ್ಸುಗಳು
- ಪಿಯುಸಿ
- ವಿಜ್ಞಾನ
- ಡಿಪ್ಲೋಮಾ
- ಎಂಜಿನಿಯರಿಂಗ್
ಈ ವಿಜ್ಞಾನ ವಿಭಾಗದ ಕೋರ್ಸುಗಳು ಹೆಚ್ಚಿನ ಶಿಕ್ಷಣವನ್ನು ಹೊಂದುವುದರ ಜೊತೆಯಲ್ಲಿ ಉತ್ತಮ ವೇತನ ಹಾಗೂ ಸೇವಾ ಭದ್ರತೆಯ ಉದ್ಯೋಗಗಳನ್ನು ನೀಡುತ್ತವೆ
ವೈದ್ಯಕೀಯ ಕ್ಷೇತ್ರದ ಅವಕಾಶಗಳಿಗಾಗಿ
- ಪಿಯುಸಿಯಲ್ಲಿ ವಿಜ್ಞಾನ ವಿಭಾಗ
- ಪ್ಯಾರಾ ಮೆಡಿಕಲ್ ಕೋರ್ಸಗಳು
ಪ್ರತಿ ಕೋರ್ಸ್ಗಳ ನಂತರ ಲಭ್ಯವಿರುವ ಉದ್ಯೋಗದ ವಲಯಗಳು
ಸರ್ಕಾರಿ ವಲಯಗಳು
ರೈಲ್ವೆ ಇಲಾಖೆ
- ಟೆಕ್ನಿಷಿಯನ್
- ಅಪ್ರೆಂಟಿಸ್
- ಜೂನಿಯರ್ ಸಹಾಯಕ ಹುದ್ದೆಗಳು
ರಕ್ಷಣಾ ಇಲಾಖೆ
- ಸೇನೆ
- ಅರೆ ಸೇನೆ
- ನೌಕಾಪಡೆ
- ವಾಯುಪಡೆ
ಪೊಲೀಸ್ ಇಲಾಖೆ
- ಪೊಲೀಸ್ ಕಾನ್ಸ್ಟೇಬಲ್
- ಸಶಸ್ತ್ರ ಪೊಲೀಸ್ ಮೀಸಲು ಪಡೆ ಪೊಲೀಸ್
ಸಾರ್ವಜನಿಕ ವಲಯ ಉದ್ಯಮಗಳ ಸಂಸ್ಥೆಗಳು
- ತಾಂತ್ರಿಕ ಸಹಾಯಕ
- ಆಪರೇಟರ್
- ಸಹಾಯಕ ಹುದ್ದೆಗಳು
ರಾಜ್ಯ ಸರ್ಕಾರಿ ಇಲಾಖೆಗಳು
- ಕಚೇರಿ ಸಹಾಯಕ
- ತಾಂತ್ರಿಕ ಸಿಬ್ಬಂದಿ
- ತಾಂತ್ರಿಕೇತರ ಸಿಬ್ಬಂದಿ
ಖಾಸಗಿ ವಲಯ
ತಯಾರಿಕಾ ಕೈಗಾರಿಕೆ ವಲಯಗಳು
- ಉತ್ಪಾದನಾ ತಂತ್ರಜ್ಞ ಹುದ್ದೆಗಳು
- ಮೇಲ್ವಿಚಾರಕ ನಿರ್ವಾಹಕ
- ಸಹಾಯಕ ಹುದ್ದೆಗಳು
ಮಾಹಿತಿ ತಂತ್ರಜ್ಞಾನದ ವಲಯಗಳು
- ಕಂಪ್ಯೂಟರ್ ಆಪರೇಟರ್
- ಡಾಟಾ ಎಂಟ್ರಿ ಆಪರೇಟರ್
- ತಾಂತ್ರಿಕ ಸಹಾಯಕ ಸಿಬ್ಬಂದಿ
- ತಾಂತ್ರಿಕ ಬೆಂಬಲ ಸಿಬ್ಬಂದಿ
ಚಿಲ್ಲರೆ ವ್ಯಾಪಾರ ವಿಭಾಗ
- ಸ್ಟೋರ್ ಮಾರಾಟ ಪ್ರತಿನಿಧಿ
- ಅಂಗಡಿ ಸಹಾಯಕ
ಬ್ಯಾಂಕಿಂಗ್ ಕ್ಷೇತ್ರ
- ಡಾಟಾ ಎಂಟ್ರಿ ಆಪರೇಟರ್
- ಗ್ರಾಹಕ ಸೇವಾ ನಿರ್ವಾಹಕ
- ಕಚೇರಿ ಸಹಾಯಕ
- ಲೆಕ್ಕ ಸಹಾಯಕ
ಆರೋಗ್ಯ ಸೇವೆ ವಲಯ
- ಲ್ಯಾಬ್ ಟೆಕ್ನಿಷಿಯನ್
- ಆಸ್ಪತ್ರೆ ಸಹಾಯಕ
- ಕಚೇರಿ ಸಹಾಯಕ
ಸ್ವಯಂ ಉದ್ಯೋಗದ ವಲಯ
ಎಲೆಕ್ಟ್ರಿಷಿಯನ್ ಸೇವೆಗಳು : ಮನೆ ಮತ್ತು ಕೈಗಾರಿಕಾ ನಿರ್ಮಾಣದ ಕಟ್ಟಡಗಳಲ್ಲಿ ವಿದ್ಯುತ್ ಸೇವೆಗಳನ್ನು ಆರಂಭಿಸಬಹುದು ಹಾಗೂ ಆರಂಭಿಸಿದ ನಂತರ ನಿರ್ವಹಣೆಯ ಕಾರ್ಯವನ್ನು ಕೈಗೊಳ್ಳಬಹುದು
ಕೃಷಿ ಸೇವೆಗಳು : ಕೃಷಿ ಬೆಳೆಗಳ ಉತ್ಪಾದನೆ, ಕೃಷಿ ಕ್ಷೇತ್ರದಲ್ಲಿ ಸಲಹೆ ನೀಡುವುದು, ನರ್ಸರಿ ಉದ್ಯಮ ಹಾಗೂ ಇತರ ಕೃಷಿ ಉದ್ಯಮಗಳನ್ನು ಪ್ರಾರಂಭಿಸಬಹುದು
ಮೊಬೈಲ್ ರಿಪೇರಿ : ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದರಿಂದ ಸ್ವಯಂ ಉದ್ಯೋಗದಲ್ಲಿ ಸ್ವಂತ ಮೊಬೈಲ್ ಅಂಗಡಿ ಆರಂಭಿಸಿ ಮೊಬೈಲ್ ರಿಪೇರಿ ಕೌಶಲ್ಯಗಳನ್ನು ಪಡೆದು ಉತ್ತಮ ಲಾಭವನ್ನು ಗಳಿಸಬಹುದು
ಕಂಪ್ಯೂಟರ್ ಸೇವೆಗಳು : ಫೋಟೋಶಾಪ್, ಡಿಜಿಟಲ್ ಸೇವಾ ಕೇಂದ್ರ, ಕಂಪ್ಯೂಟರ್ ತರಬೇತಿ ಕೇಂದ್ರ ಹಾಗೂ ಇನ್ನಿತರ ಕಂಪ್ಯೂಟರ್ ಸಂಬಂಧಿತ ಸೈಬರ್ ಸೆಂಟರ್ ಗಳನ್ನು ತೆರೆಯಬಹುದು
ಸಂಬಳದ ನಿರೀಕ್ಷೆಗಳು
| ಕೋರ್ಸು | ನಿರೀಕ್ಷಿತ ಆರಂಭಿಕ ಸಂಬಳ |
| ಐಟಿಐ | 12,000/- ರೂಗಳಿಂದ 20,000/- ರೂಗಳು |
| ಡಿಪ್ಲೋಮಾ | 15,000/- ರೂಗಳಿಂದ 30,000/- ರೂಗಳು |
| ಪ್ಯಾರಾ ಮೆಡಿಕಲ್ | 15,000/- ರೂಗಳಿಂದ 35,000/- ರೂಗಳು |
| ಪಿಯುಸಿ ನಂತರದ ಸಾಮಾನ್ಯ ಉದ್ಯೋಗಗಳು | 10,000/- ರೂಗಳಿಂದ 18,000/- ರೂಗಳು |
| ಕಂಪ್ಯೂಟರ್ ವಲಯದ ವೃತ್ತಿಪರ ಕೋರ್ಸುಗಳು | 12,000/- ರೂಗಳಿಂದ 25,000/- ರೂಗಳು |
ಅನುಭವ ಕೌಶಲ್ಯ ಹಾಗೂ ಸೇವಾ ಅವಧಿ ಹೆಚ್ಚಿದಂತೆ ಸಂಬಳವೂ ಗಣನೀಯವಾಗಿ ಹೆಚ್ಚುತ್ತದೆ ತಾವು ತಮ್ಮ ಕೌಶಲ್ಯಗಳ ಅಭಿವೃದ್ಧಿ ಸಂವಹನದ ನಿಯಮಗಳು ಹಾಗೂ ಇನ್ನಿತರ ಬದಲಾವಣೆಗಳನ್ನು ಕಾಲಾನುಕ್ರಮಕ್ಕೆ ಮಾಡಿಕೊಳ್ಳುತ್ತೇವೆ
ಎಸ್ ಎಸ್ ಎಲ್ ಸಿ ನಂತರ ಭವಿಷ್ಯದಲ್ಲಿ ಬರಬಹುದಾದಂತಹ ಉನ್ನತ ಶಿಕ್ಷಣದ ಅವಕಾಶಗಳು
ಮೊದಲನೇ ಮಾರ್ಗ : ಎಸ್. ಎಸ್. ಎಲ್. ಸಿ-> ಪಿ. ಯು. ಸಿ -> ಪದವಿ -> ಸ್ನಾತಕೋತ್ತರ ಪದವಿ
ಎರಡನೇ ಮಾರ್ಗ : ಎಸ್. ಎಸ್. ಎಲ್. ಸಿ -> ಡಿಪ್ಲೋಮಾ -> ಬಿ.ಇ ಅಥವಾ ಬಿ. ಟೆಕ್ -> ಎಂ.ಇ ಅಥವಾ ಎಂ. ಟೆಕ್
ಮೂರನೇ ಮಾರ್ಗ : ಎಸ್. ಎಸ್. ಎಲ್. ಸಿ -> ಐ. ಟಿ. ಐ -> ಅಪ್ರೆಂಟಿಸ್ -> ಸರ್ಕಾರಿ ಉದ್ಯೋಗ
ನಾಲ್ಕನೇ ಮಾರ್ಗ : ಎಸ್. ಎಸ್. ಎಲ್. ಸಿ -> ಪ್ಯಾರಾ ಮೆಡಿಕಲ್ -> ಆರೋಗ್ಯ ಕ್ಷೇತ್ರ ಉದ್ಯೋಗ -> ಉನ್ನತ ತರಬೇತಿ
2026ರಲ್ಲಿ ಹೆಚ್ಚು ಬೇಡಿಕೆಯಿರುವ ಕೋರ್ಸ್ಗಳು
- Artificial Intelligence (AI) – ಯಂತ್ರಗಳಿಗೆ ಸ್ವಯಂ ಕಲಿಕೆ, ನಿರ್ಧಾರಗಳನ್ನು ಕೈಗೊಳ್ಳುವಿಕೆ, ಸ್ವಯಂಚಾಲಿತವಾಗಿ ಕಾರ್ಯ ನಿರ್ವಹಣೆ ಮತ್ತು ಸಾಮರ್ಥ್ಯ ಕಲಿಸುವ ತಂತ್ರಜ್ಞಾನ.
- Data Analytics – ದತ್ತಾಂಶಗಳ ವಿಶ್ಲೇಷಣೆ ಉಪಯುಕ್ತ ಮಾಹಿತಿಗಳ ಕಲೆಹಾಕುವಿಕೆ ಮತ್ತು ಕ್ರೋಢೀಕರಣ, ವ್ಯವಹಾರ ಮತ್ತು ನಿರ್ಧಾರಗಳಿಗೆ ನೆರವು ನೀಡುವುದು.
- Cyber Security – ಕಂಪ್ಯೂಟರ್ ಸಿಸ್ಟಮ್ ನ ಜಾಲಗಳು, ಮಾಹಿತಿಗಳ ಸಂಸ್ಕರಣೆ, ಸರ್ಕಾರಿ ಹಾಗೂ ಇತರ ಪ್ರಮುಖ ವ್ಯವಸ್ಥೆಗಳನ್ನು ಸೈಬರ್ ದಾಳಿಯಿಂದ ರಕ್ಷಿಸುವುದು.
- Cloud Computing – ಇಂಟರ್ನೆಟ್ ಮೂಲಕ ದತ್ತಾಂಶಗಳ ವ್ಯವಸ್ಥಿತ ಸಂಗ್ರಹಣೆ, ಸಾಫ್ಟ್ವೇರ್ ಗಳ ರಚನೆ ಮತ್ತು ನಿರ್ವಹಣೆ, ಇಂಟರ್ ನೆಟ್ ಸೇವೆಗಳ ಬಳಕೆ ವ್ಯವಸ್ಥೆ.
- Agriculture Technology – ಆಧುನಿಕ ರೀತಿಯ ತಂತ್ರಜ್ಞಾನದಿಂದ ಕೃಷಿ ಕ್ಷೇತ್ರದಲ್ಲಿ ಉತ್ಪಾದನೆ, ಕೃಷಿ ಇಳುವರಿ ಮತ್ತು ಲಾಭದ ಗುಣಮಟ್ಟ ಹೆಚ್ಚಿಸುವ ವಿಧಾನಗಳು.
- Healthcare Technology – ಆರೋಗ್ಯ ಕ್ಷೇತ್ರದ ಸೇವೆಗಳ ಸುಧಾರಣೆಗೆ ಮತ್ತು ವೈದ್ಯಕೀಯ ತಂತ್ರಜ್ಞಾನಗಳ ಸಮಗ್ರ ಬಳಕೆ ಮತ್ತು ಅಭಿವೃದ್ಧಿ ಕಾರ್ಯಗಳು.
- Computer Science Diploma – ಕಂಪ್ಯೂಟರ್ ಪ್ರೋಗ್ರಾಮಿಂಗ್, ಸಾಫ್ಟ್ವೇರ್ ಗಳ ಅಭಿವೃದ್ಧಿ, ಕಂಪ್ಯೂಟರ್ ಬಗ್ಗೆ ಮೂಲಭೂತ ಜ್ಞಾನದ ಕಲಿಕೆ.
- Renewable Energy Technology – ಗಾಳಿಯಿಂದ ಬರುವ ಸೌರಶಕ್ತಿ, ಗಾಳಿ ಶಕ್ತಿಯಿಂದ ವಿದ್ಯುತ್ ಉತ್ಪಾದನೆ ತಂತ್ರಗಳು ಮತ್ತು ಉತ್ತಮ ಹಾಗೂ ಅಳವಡಿಕೆಯ ತಂತ್ರಜ್ಞಾನ ಅಧ್ಯಯನ.
SSLC ನಂತರ ಕೋರ್ಸ್ ಆಯ್ಕೆ ಮಾಡುವ ಮೊದಲು ಕೇಳಿಕೊಳ್ಳಬೇಕಾದ 10 ಪ್ರಶ್ನೆಗಳು
- ನನಗೆ ಯಾವ ವಿಷಯದಲ್ಲಿ ಹೆಚ್ಚಿನ ಆಸಕ್ತಿ ಇದೆ?
- ನಾನು ಮುಂದೆ ಉನ್ನತ ಶಿಕ್ಷಣವನ್ನು ಮುಂದುವರಿಸಲು ಆಸಕ್ತನಾಗಿದ್ದೇನೆಯೇ?
- ನನಗೆ ಆದಷ್ಟು ಬೇಗ ಉದ್ಯೋಗ ಮಾಡಬೇಕೇ?
- ನಾನು ಸರ್ಕಾರಿ ಉದ್ಯೋಗವನ್ನು ಹೊಂದುವ ಗುರಿಯನ್ನು ಹೊಂದಬೇಕೇ?
- ಖಾಸಗಿ ಕ್ಷೇತ್ರದಲ್ಲಿಯಾದರೂ ಕೆಲಸ ಮಾಡಲು ಆಸಕ್ತನಾಗಿದ್ದೇನೆಯೇ?
- ನನ್ನ ಹಾಗೂ ನನ್ನ ಕುಟುಂಬದ ಆರ್ಥಿಕ ಪರಿಸ್ಥಿತಿ ಹೇಗಿದೆ?
- ಯಾವ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗ ಬೇಡಿಕೆ ಇದೆ?
- ನಾನು ತಾಂತ್ರಿಕ ಶಿಕ್ಷಣವನ್ನು ಓದಲು ಶಕ್ತನಾಗಿದ್ದೇನೆಯೇ?
- ನನ್ನ ಬಲವಾದ ಹಾಗೂ ಹೆಚ್ಚಿನ ಆಸಕ್ತ ವಿಷಯ ಯಾವುದು?
- ನನ್ನ ಶಿಕ್ಷಣ ಮತ್ತು ಉದ್ಯೋಗವನ್ನು ಹೊಂದುವಲ್ಲಿ ಯಾವ ದೀರ್ಘಾವಧಿಯ ಗುರಿಗಳನ್ನು ಹೊಂದಬೇಕು?
SSLC ನಂತರ ಹುಡುಗಿಯರಿಗೆ ಉತ್ತಮ ಕೋರ್ಸ್ಗಳು
- ಪಿ ಯು ಸಿ ವಿಜ್ಞಾನ ವಿಭಾಗ
- ವಾಣಿಜ್ಯ ವಿಭಾಗ
- ಪ್ಯಾರಾ ಮೆಡಿಕಲ್
- ನರ್ಸಿಂಗ್
- ಕಂಪ್ಯೂಟರ್ ಸಂಬಂಧಿತ ಕೋರ್ಸುಗಳು
- ಫ್ಯಾಷನ್ ಡಿಸೈನಿಂಗ್
- ಕೃಷಿ ಕ್ಷೇತ್ರದ ಅಧ್ಯಯನ
- ಡಿಪ್ಲೊಮಾ ಅಥವಾ ಇಂಜಿನಿಯರಿಂಗ್
SSLC ನಂತರ ತಿಂಗಳಿಗೆ ₹30,000ಕ್ಕೂ ಹೆಚ್ಚು ಸಂಬಳವನ್ನು ನೀಡಬಹುದಾದ ಕೋರ್ಸ್ಗಳು
- ಎಂಜಿನಿಯರಿಂಗ್ ಡಿಪ್ಲೋಮಾ
- ಕಂಪ್ಯೂಟರ್ ಸೈನ್ಸ್
- ಆರೋಗ್ಯ ಸೇವಾ ವಿಭಾಗ
- ಎಲೆಕ್ಟ್ರಾನಿಕ್ಸ್ ವಿಭಾಗ
- ಕೈಗಾರಿಕಾ ವ್ಯಾಪಾರಗಳು
SSLC ನಂತರ ಕೋರ್ಸ್ ಆಯ್ಕೆ ಮಾಡುವ ಮೊದಲು ಈ Checklist ಪರಿಶೀಲಿಸಿ
- ಹೊಂದಿರುವ ಆಸಕ್ತಿ
- ಅಗತ್ಯವಿರುವ ಕೌಶಲ್ಯ
- ವೈಯಕ್ತಿಕ ಮತ್ತು ಕುಟುಂಬದ ಆರ್ಥಿಕ ಸ್ಥಿತಿ
- ಪ್ರಸ್ತುತ ಇರುವ ಉದ್ಯೋಗ ಬೇಡಿಕೆ
- ಕೋರ್ಸಿನ ನಂತರ ಇರುವ ಉನ್ನತ ಶಿಕ್ಷಣದ ಅವಕಾಶಗಳು
PUC vs ITI vs Diploma ಹೋಲಿಕೆ
| ಪ್ರಮುಖ ಅಂಶಗಳು | ಪಿ ಯು ಸಿ | ಐ ಟಿ ಐ | ಡಿಪ್ಲೋಮಾ |
| ಅವಧಿ | 2 ವರ್ಷಗಳು | 1 ರಿಂದ 2 ವರ್ಷಗಳು | 3 ವರ್ಷಗಳು |
| ಉನ್ನತ ಶಿಕ್ಷಣದ ಅವಕಾಶಗಳು | ಅತ್ಯುತ್ತಮ | ಮಧ್ಯಮ | ಉತ್ತಮ |
| ಉದ್ಯೋಗ ಪಡೆಯುವ ವೇಗ | ಮಧ್ಯಮ | ಅತ್ಯುತ್ತಮ | ಉತ್ತಮ |
| ಸರ್ಕಾರಿ ಹುದ್ದೆ ಹೊಂದುವ ಸಂಭವ | ಉತ್ತಮ | ಉತ್ತಮ | ಉತ್ತಮ |
| ಇರಬೇಕಾದ ತಾಂತ್ರಿಕ ಕೌಶಲ್ಯ | ಮಧ್ಯಮ | ಹೆಚ್ಚು ಇರಬೇಕು | ಹೆಚ್ಚು ಇರಬೇಕು |
ಕೋರ್ಸುಗಳ ಯಶೋಗಾಥೆಗಳು
- SSLC ನಂತರ ಪಿಯುಸಿ ಕೋರ್ಸಿನಲ್ಲಿ ಕಲಾ ವಿಭಾಗದಲ್ಲಿ ಓದಿದ್ದಕ್ಕೆ ನಮ್ಮ ಸಹೋದ್ಯೋಗಿಯೊಬ್ಬರು ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗವನ್ನು ಪಡೆದುಕೊಂಡರು
- SSLC ನಂತರ ಪಿಯುಸಿ ಕೋರ್ಸಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಓದಿದ್ದಕ್ಕೆ ನಮ್ಮ ಸ್ನೇಹಿತರೊಬ್ಬರು ಪ್ರತಿಷ್ಠಿತ ಕಂಪನಿಯಲ್ಲಿ ಲೆಕ್ಕ ಸಹಾಯಕರಾಗಿ ಮತ್ತು ಲೆಕ್ಕಿಗರಾಗಿ ನೇಮಕಗೊಂಡರು
- SSLC ನಂತರ ಪಿಯುಸಿ ಕೋರ್ಸಿನಲ್ಲಿ ವಿಜ್ಞಾನ ವಿಭಾಗದಲ್ಲಿ ಓದಿದ್ದಕ್ಕೆ ನಮ್ಮ ನೆರೆ ಹೊರೆಯವರು ಒಬ್ಬರು ಡಾಕ್ಟರ್, ಒಬ್ಬರು ಇಂಜಿನಿಯರ್ ಹಾಗೂ ಮೂರು ಜನರು ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ
- SSLC ನಂತರ ಐ ಟಿ ಐ ಕೋರ್ಸನ್ನು ಓದಿದ್ದಕ್ಕೆ ಟಯೋಟ ಕಂಪನಿಯಲ್ಲಿ ಕೆಲಸವನ್ನು ಪಡೆದಿದ್ದಾರೆ
- SSLC ನಂತರ ಪ್ಯಾರಾ ಮೆಡಿಕಲ್ ವಿಭಾಗದಲ್ಲಿ ಓದಿದ್ದಕ್ಕೆ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಹಾಗೂ ಓಟಿ ಟೆಕ್ನಿಷಿಯನ್ ಆಗಿದ್ದಾರೆ
ಕೋರ್ಸುಗಳ ನಂತರದ Career Roadmap
SSLC-> PUC (Science)-> CET/JEE-> B.E Or B. Tech-> Engineer Job
SSLC-> PUC/ITI-> Government Job Preparation-> Success-> Government Job
SSLC-> PUC (Science)-> Medical Course /Para Medical Course-> Health Care Field Jobs
SSLC-> Diploma-> B.E/ B.Tech-> M.E/M.Tech-> Engineer Jobs
SSLC-> Vocational Course-> Own Business/ Interior Design/ Retail Jobs
ಕರ್ನಾಟಕದಲ್ಲಿ ಪ್ರಮುಖ ಸರ್ಕಾರಿ ಸಂಸ್ಥೆಗಳು
- PUC : ಸರ್ಕಾರಿ ಪದವಿಪೂರ್ವ ಕಾಲೇಜುಗಳು
- Diploma : ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳು
- ITI : ಸರ್ಕಾರಿ ITI ಸಂಸ್ಥೆಗಳು
- Paramedical : ಸರ್ಕಾರಿ ಆರೋಗ್ಯ ತರಬೇತಿ ಸಂಸ್ಥೆಗಳು
ವೃತ್ತಿ ಜೀವನದ ಯಶಸ್ವಿಗೆ ಅಗತ್ಯವಾಗುವ ಕೌಶಲ್ಯದ ಅಂಶಗಳು
ಸಂವಹನ ಕೌಶಲ್ಯ : ಸ್ಪಷ್ಟವಾಗಿ ಮಾತನಾಡುವುದು, ಆತ್ಮವಿಶ್ವಾಸದಿಂದ ಇರುವುದು ಹಾಗೂ ಸ್ಪಷ್ಟದ ರೀತಿಯಲ್ಲಿ ಅರ್ಥವಾಗುವಂತೆ ಬರೆಯುವುದು ಹಾಗೂ ಸಂವಹನ ಸ್ನೇಹಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು
ಕಂಪ್ಯೂಟರ್ ಜ್ಞಾನ : ಎಂ.ಎಸ್ ಆಫೀಸ್, ಇಂಟರ್ನೆಟ್ ಇಮೇಲಿಂಗ್, ಮತ್ತು ಡಿಜಿಟಲ್ ಉಪಕರಣಗಳ ಬಳಕೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುವುದು
ಇಂಗ್ಲಿಷ್ ಮೂಲಭೂತ ಜ್ಞಾನ : ಎಲ್ಲ ಉದ್ಯೋಗಗಳಲ್ಲೂ ಇಂಗ್ಲಿಷ್ ಭಾಷೆಯು ಕಡ್ಡಾಯ ಆಗಿರುವುದರಿಂದ ಉದ್ಯೋಗ ಮತ್ತು ಉನ್ನತ ಶಿಕ್ಷಣವನ್ನು ಪಡೆಯಲು ಇಂಗ್ಲಿಷ್ ಜ್ಞಾನವು ಸಹಾಯಕ
ಸಮಸ್ಯೆಗೆ ಪರಿಹಾರ ನೀಡುವ ಕೌಶಲ್ಯ : ಯಾವುದೇ ವೃತ್ತಿಯಲ್ಲಿ ಆಗಲಿ ಸಮಸ್ಯೆ ಬರುವುದು ಸಹಜ ಅಂತಹ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವ ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸುವ ಕೌಶಲ್ಯವನ್ನು ಹೊಂದಬೇಕು
ತಾಂತ್ರಿಕ ಕೌಶಲ್ಯ : ಕ್ಷೇತ್ರಗಳಿಗೆ ಅನುಗುಣವಾಗಿ ಹುದ್ದೆಗಳಿಗೆ ಸಂಬಂಧಿಸಿದ ವಿಶೇಷ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು ಇದು ವಿಶೇಷತೆ ಮತ್ತು ಸಂಬಳದ ಮಟ್ಟವನ್ನು ಹೆಚ್ಚಿಸುತ್ತದೆ
ಸಂದರ್ಶನದ ಕೌಶಲ್ಯ : ಒಬ್ಬ ವ್ಯಕ್ತಿಯನ್ನು ಅವರನ್ನು ಸಂದರ್ಶನ ಮಾಡುವ ಮೂಲಕ ಪೂರ್ಣವಾಗಿ ಅರಿಯಬಹುದಾಗಿರುವುದರಿಂದ ಉದ್ಯೋಗ ಪಡೆಯುವಲ್ಲಿ ಸಂದರ್ಶನದ ಕೌಶಲ್ಯವನ್ನು ಸರಿಯಾಗಿ ರೂಪಿಸಿಕೊಳ್ಳಿ
ಎಸ್ ಎಸ್ ಎಲ್ ಸಿ ನಂತರದಲ್ಲಿ ವಿದ್ಯಾರ್ಥಿಗಳು ಮಾಡುವ ಸಾಮಾನ್ಯ ತಪ್ಪುಗಳು
ಸ್ನೇಹಿತರನ್ನು ಕುರುಡಾಗಿ ಅನುಸರಿಸುವುದು : ಸ್ವಂತ ಶಕ್ತಿಗಳ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳದೆ ಮತ್ತು ಸಾಮರ್ಥ್ಯಗಳನ್ನು ಅರಿಯದೆ ಕೋರ್ಸುಗಳನ್ನು ಆಯ್ಕೆ ಮಾಡುವುದು
ವೈಯಕ್ತಿಕ ಆಸಕ್ತಿಗಳನ್ನು ನಿರ್ಲಕ್ಷಿಸುವುದು : ವಿದ್ಯಾರ್ಥಿಗಳಿಗೆ ಆಸಕ್ತಿ ಇಲ್ಲದೆ ಕ್ಷೇತ್ರಗಳಲ್ಲಿ ಓದುವುದರಿಂದ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ಉಂಟಾಗಿ ಭವಿಷ್ಯದಲ್ಲಿ ತೊಂದರೆ ಉಂಟಾಗಬಹುದು
ಸಂಶೋಧನೆ ಮಾಡದೆ ಕೋರ್ಸುಗಳನ್ನು ಆಯ್ಕೆ ಮಾಡುವುದು : ಕೊರ್ಸಿನ ಭವಿಷ್ಯ ದಲ್ಲಿ ಇರಬಹುದಾದ ಮಹತ್ವ ಹಾಗೂ ವೇತನದ ವಿವರಗಳನ್ನು ತಿಳಿಯದೆ ಸಂಶೋಧನೆ ನಡೆಸದೆ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳುವುದು
ವೇತನಕ್ಕಾಗಿ ಮಾತ್ರ ಆಯ್ಕೆ : ಆಸಕ್ತಿ ಮತ್ತು ಕೌಶಲ್ಯವಿಲ್ಲದ ಕ್ಷೇತ್ರದಲ್ಲಿ ಹೆಚ್ಚಿನ ಸಂಬಳದ ಆಸೆಗೆ ಬಿದ್ದು ಕೋರ್ಸ್ ಗಳನ್ನು ಆಯ್ಕೆ ಮಾಡಬಾರದು
ಕೌಶಲ್ಯ ಅಭಿವೃದ್ಧಿ ನಿರ್ಲಕ್ಷ : ಕೇವಲ ಪ್ರಮಾಣ ಪತ್ರದಿಂದ ಯಶಸ್ಸು ಸಿಗುವುದಿಲ್ಲ ಪ್ರತಿಯಾಗಿ ವೈಯಕ್ತಿಕ ಕೌಶಲ್ಯಗಳನ್ನು ಹಾಗೂ ಇನ್ನಿತರ ಹೆಚ್ಚುವರಿ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸುವುದು ಸಹಾಯಕ
ತಜ್ಞರ ವೃತ್ತಿ ಮಾರ್ಗದರ್ಶನ ಸಲಹೆಗಳು
- ಮೊದಲು ನಿಮಗಿರುವ ಆಸಕ್ತಿ ವಲಯಗಳನ್ನು ಹಾಗೂ ಸಾಮರ್ಥ್ಯಗಳನ್ನು ಗುರುತಿಸಿ ಪರಿಶೀಲಿಸಿ
- ಶಿಕ್ಷಕರು ಮತ್ತು ವಲಯ ಕ್ಷೇತ್ರದ ತಜ್ಞರ ಸಲಹೆಗಳನ್ನು ಪಡೆಯಿರಿ
- ಪ್ರಸ್ತುತದಲ್ಲಿರುವ ಉದ್ಯೋಗ ಮಾರುಕಟ್ಟೆಯ ಪ್ರವೃತ್ತಿ ಹಾಗೂ ಬೇಡಿಕೆಗಳ ಆಯಮಗಳನ್ನು ಅಧ್ಯಯನ ಮಾಡಿ
- ಕೇವಲ ಪದವಿಯನ್ನು ಪಡೆಯದೆ ಕೌಶಲ್ಯಗಳ ಮೇಲು ಹೆಚ್ಚಿನ ಗಮನವನ್ನು ನೀಡಿ
- ಇಂದಿನ ಪ್ರಪಂಚದಲ್ಲಿ ಬರುವ ಹೊಸ ಹೊಸ ತಂತ್ರಜ್ಞಾನಗಳನ್ನು ನಿರಂತರವಾಗಿ ಕಲಿಯಿರಿ ಹಾಗೂ ಅಳವಡಿಸಿಕೊಳ್ಳಿ
- ಇಂಟರ್ನ್ ಶಿಪ್ ಹಾಗೂ ಅಪ್ರೆಂಟಿಸ್ ಅವಕಾಶಗಳ ಮೂಲಕ ಪ್ರಾಯೋಗಿಕ ಅನುಭವವನ್ನು ಹೆಚ್ಚಾಗಿ ಪಡೆಯಿರಿ
- ವೃತ್ತಿ ಗುರಿಗಳನ್ನು ನಿಗದಿಪಡಿಸುವಾಗ ದೀರ್ಘಾವಧಿ ಆಯಾಮವನ್ನು ಅನುಸರಿಸಿ
ವಿದ್ಯಾರ್ಥಿ ವೇತನದ ಸೌಲಭ್ಯಗಳು
- SSP Scholarship (ರಾಜ್ಯ ವಿದ್ಯಾರ್ಥಿ ವೇತನ)
- Vidyasiri (ವಿದ್ಯಾಸಿರಿ-> ರೈತರ ಮಕ್ಕಳಿಗೆ ನೀಡಲಾಗುವುದು)
- National Scholarship Portal (NSP)
- SC/ST Scholarship (ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ)
FAQ’s
ಎಸ್ ಎಸ್ ಎಲ್ ಸಿ ನಂತರ ಯಾವ ಕೋರ್ಸ್ ಉತ್ತಮ?
ವಿದ್ಯಾರ್ಥಿಯ ಆಸಕ್ತಿ ಸಾಮರ್ಥ್ಯ ಹಾಗೂ ವೃತ್ತಿವರಗಳನ್ನು ಅವಲಂಬಿತವಾಗಿರುವ ಕೋರ್ಸ್ ಗಳನ್ನು ಆಯ್ಕೆ ಮಾಡಬೇಕು.
ಪಿಯುಸಿ ಗಿಂತ ಡಿಪ್ಲೋಮಾ ಉತ್ತಮವೇ?
ನೀವೇನಾದರೂ ಇಂಜಿನಿಯರಿಂಗ್ ಅಥವಾ ತಾಂತ್ರಿಕ ಕ್ಷೇತ್ರದಲ್ಲಿ ಉದ್ಯೋಗವನ್ನು ಪಡೆಯುವ ಅಥವಾ ಅಧ್ಯಯನ ಮಾಡುವ ಆಸಕ್ತಿಯನ್ನು ಹೊಂದಿದ್ದರೆ ಡಿಪ್ಲೋಮಾ ಉತ್ತಮ ಆಯ್ಕೆಯಾಗಬಹುದು ಉನ್ನತ ಶಿಕ್ಷಣವನ್ನು ಪಡೆಯುವ ಉದ್ದೇಶವಿದ್ದರೆ ಪಿಯುಸಿ ಆಯ್ಕೆಮಾಡಿಕೊಳ್ಳಿ.
ಐಟಿಐ ನಂತರ ಸರಕಾರಿ ಉದ್ಯೋಗ ಸಿಗಬಹುದೇ?
ಹೌದು ರೈಲ್ವೆ ಇಲಾಖೆ ಸಾರ್ವಜನಿಕ ಕ್ಷೇತ್ರದ ಉದ್ಯಮಗಳು ರಕ್ಷಣಾ ಕ್ಷೇತ್ರ ಹಾಗೂ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಆಯ್ಕೆಗಳಿಗೆ ಉದ್ಯೋಗಾವಕಾಶಗಳಿವೆ.
ಯಾವ ಕೋರ್ಸಿನಲ್ಲಿ ಹೆಚ್ಚಿನ ಸಂಬಳ ಸಿಗುತ್ತದೆ?
ಸಂಬಳವು ಕೇವಲ ಶೈಕ್ಷಣಿಕ ಅರ್ಹತೆಯನ್ನು ಅವಲಂಬಿಸದೆ ಕೌಶಲ್ಯ ಅನುಭವ ಸೇವಾ ಅವಧಿ ಮತ್ತು ಇರುವ ಕ್ಷೇತ್ರವನ್ನು ಅವಲಂಬಿಸಿರುತ್ತದೆ ಸಾಮಾನ್ಯವಾಗಿ ಇಂಜಿನಿಯರಿಂಗ್ ವಿಶೇಷ ತಾಂತ್ರಿಕ ಕ್ಷೇತ್ರಗಳು ಹಾಗೂ ವೈದಿಕ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶಗಳು ಸಿಗುತ್ತವೆ.
ಎಸ್ ಎಸ್ ಎಲ್ ಸಿ ನಂತರ ಹುಡುಗಿಯರಿಗೆ ಉತ್ತಮ ಕೋರ್ಸ್ಗಳು ಯಾವುವು?
ಪಿಯುಸಿ, ಡಿಪ್ಲೋಮಾ, ಪ್ಯಾರಾಮೆಡಿಕಲ್, ಫ್ಯಾಷನ್ ಡಿಸೈನಿಂಗ್, ಕೃಷಿ ವಲಯ, ಕಂಪ್ಯೂಟರ್ ಮಾಹಿತಿ ತಂತ್ರಜ್ಞಾನ ಹಾಗೂ ವಾಣಿಜ್ಯ ಕೋರ್ಸುಗಳು ಉತ್ತಮ ಆಯ್ಕೆಗಳಾಗಿವೆ.
Conclusion
ಎಸ್ ಎಸ್ ಎಲ್ ಸಿ ನಂತರ ಎಲ್ಲರಿಗೂ ಒಂದೇ ಪ್ರಶ್ನೆ ಬರುತ್ತದೆ ಅದು ಅತ್ಯುತ್ತಮ ಕೋರ್ಸ್ ಯಾವುದು ಎಂದು. ಆದರೆ ಎಸ್ ಎಸ್ ಎಲ್ ಸಿ ನಂತರದಲ್ಲಿ ಯಾವುದೇ ಅತ್ಯುತ್ತಮ ಕೋರ್ಸ್ ಇರುವುದಿಲ್ಲ ಪ್ರತಿಯಾಗಿ ಉನ್ನತ ಶಿಕ್ಷಣವನ್ನು ಪಡೆಯಲು ನಾವು ಹಾಕಿಕೊಳ್ಳಬಹುದು ಅಡಿಪಾಯದ ಒಂದು ವಿಶೇಷ ಜ್ಞಾನವನ್ನು ಈ ಕೋರ್ಸುಗಳು ನೀಡುತ್ತವೆ ವಿದ್ಯಾರ್ಥಿಗಳ ಆಸಕ್ತಿ ಸರಿಯಾದ ಕೋರ್ಸ್ ಆಯ್ಕೆ ಸಾಮರ್ಥ್ಯದ ಸ್ವಯಂ ಮೌಲ್ಯಮಾಪನ ಆರ್ಥಿಕ ಪರಿಸ್ಥಿತಿ ಹಾಗೂ ವೃತ್ತಿ ಸಂಬಂಧಿಸಿದ ಗುರಿಗಳನ್ನು ಅವಲಂಬಿಸಿರುತ್ತದೆ
ಪಿಯುಸಿ, ಡಿಪ್ಲೋಮಾ, ಐಟಿಐ, ಪ್ಯಾರಾ ಮೆಡಿಕಲ್ ಹಾಗೂ ವೃತ್ತಿಪರ ಕೋರ್ಸ್ ಗಳೆಲ್ಲವೂ ವಿದ್ಯಾರ್ಥಿಗಳಿಗೆ ಉತ್ತಮ ಪ್ರೀತಿಯ ಭವಿಷ್ಯವನ್ನು ನಿರ್ಮಿಸುತ್ತವೆ ಅದರಂತೆಯೇ ಕೇವಲ ಪ್ರಮಾಣ ಪತ್ರಗಳನ್ನು ಪಡೆಯದೆ ಕೌಶಲ್ಯ ಅಭಿವೃದ್ಧಿ ನಿರಂತರ ಕಲಿಕೆ ಮತ್ತು ಪ್ರಾಯೋಗಿಕ ಅನುಭವದ ಮೇಲೆ ಗಮನ ಹರಿಸುವುದು ಯಶಸ್ಸನ್ನು ಪಡೆಯುವ ಪ್ರಮುಖ ಗುಟ್ಟಾಗಿದೆ ಆದ್ದರಿಂದ ತಮ್ಮ ಆಸಕ್ತಿಗಳು ಹಾಗೂ ಕೌಶಲ್ಯಗಳನ್ನು ಸ್ವಯಂ ಮೌಲ್ಯಮಾಪನ ಮಾಡಿಕೊಂಡು ತಮಗೆ ಆಸಕ್ತಿ ಇರುವ ಕ್ಷೇತ್ರಗಳಲ್ಲಿ ಮುಂದುವರೆಯಲು ಸಂಬಂಧಪಟ್ಟ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಿ.
ಪ್ರಸ್ತುತ ಲೇಖನದ ಮಾಹಿತಿಯ ಮೂಲಗಳು
- ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (KSEAB)
- ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA)
- ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (AICTE)
- ರಾಷ್ಟ್ರೀಯ ವೃತ್ತಿಪರ ತರಬೇತಿ ಮಂಡಳಿ (NCVT)
- ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (NSDC)
- ಕರ್ನಾಟಕ ಶಿಕ್ಷಣ ಇಲಾಖೆ
ವೃತ್ತಿ ಮಾರ್ಗದರ್ಶಕರ ಸಂದೇಶ
ಎಸ್ಎಸ್ಎಲ್ಸಿ ಉತ್ತೀರ್ಣರಾಗುವುದು ಒಂದು ಪ್ರಮುಖ ಮೈಲಿಗಲ್ಲು, ಆದರೆ ಉತ್ತೀರ್ಣಗೊಂಡ ನಂತರಗಲ್ಲಿ ಸರಿಯಾದ ಕೋರ್ಸ್ ಗಳನ್ನು ಆಯ್ಕೆ ಮಾಡುವುದು ಇನ್ನೂ ಮುಖ್ಯವಾಗಿದೆ. ಏಕೆಂದರೆ ಅದು ನಿಮ್ಮ ಭವಿಷ್ಯದ ವೃತ್ತಿಜೀವನವನ್ನು ರೂಪಿಸುತ್ತದೆ ಹಾಗೂ ನಿರ್ದರಿಸುತ್ತದೆ. ಎಲ್ಲರಿಗೂ ಒಂದೇ “ಉತ್ತಮ” ಕೋರ್ಸ್ ಎಂದು ಯಾವುದೂ ಇಲ್ಲ. ಅತ್ಯುತ್ತಮ ಕೋರ್ಸ್ ವಿದ್ಯಾರ್ಥಿಯ ಆಸಕ್ತಿಗಳು, ಕೌಶಲ್ಯಗಳು, ವೃತ್ತಿ ಗುರಿಗಳು ಮತ್ತು ಕಲಿಕಾ ಸಾಮರ್ಥ್ಯಗಳನ್ನು ಅವಲಂಬಿಸಿರುತ್ತದೆ.
Author Note : ಪ್ರಸ್ತುತ ಲೇಖನವನ್ನು ಉದ್ಯೋಗಗಳ ಮಾಹಿತಿ, ಸ್ಪರ್ಧಾತ್ಮಕ ಪರೀಕ್ಷೆಗಳು, ವೃತ್ತಿಗಳ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು ಹಾಗೂ ಪ್ರಚಲಿತ ಸುದ್ದಿಗಳ ಕುರಿತು ಸಂಶೋಧನೆ ಆಧರಿಸಿ ಓದುಗರಿಗೆ ಉಪಯುಕ್ತ ಮಾಹಿತಿ ನೀಡುವ ಉದ್ದೇಶದಿಂದ ಸಿದ್ಧಪಡಿಸಲಾಗಿದೆ.
About Author : ಲೇಖಕರು ಉದ್ಯೋಗ, ಶಿಕ್ಷಣ, ಪರೀಕ್ಷಾ ತಯಾರಿ, ವೃತ್ತಿ ಮಾರ್ಗದರ್ಶನ ಹಾಗೂ ಸರ್ಕಾರಿ ಯೋಜನೆಗಳ ಕುರಿತು ನಿರಂತರವಾಗಿ ಮಾಹಿತಿ ಲೇಖನಗಳನ್ನು ಪ್ರಕಟಿಸುತ್ತಿದ್ದು, ವಿದ್ಯಾರ್ಥಿಗಳು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
Disclaimer : ಪ್ರಸ್ತುತ ಲೇಖನದಲ್ಲಿನ ಮಾಹಿತಿ ವಿವಿಧ ಮೂಲಗಳು ಮತ್ತು ಅಧಿಕೃತ ಪ್ರಕಟಣೆಗಳ ಆಧಾರದ ಮೇಲೆ ನೀಡಲಾಗಿದೆ. ನಿಯಮಗಳು, ದಿನಾಂಕಗಳು ಹಾಗೂ ವಿವರಗಳು ಬದಲಾಗಬಹುದಾದ್ದರಿಂದ ಅಧಿಕೃತ ವೆಬ್ಸೈಟ್ಗಳನ್ನು ಪರಿಶೀಲಿಸುವುದು ಸೂಕ್ತ.
Read More : Jobs
Read More : Exam Tips
Exam Tips For KEA AO And AAO Posts, 90 ದಿನಗಳ Best ಸ್ಟಡಿ ಪ್ಲಾನ್ ಹೀಗಿದ್ದರೆ ನಿಮ್ಮ ಯಶಸ್ಸು ಖಚಿತ.
Read More : Career Guidance
ಕೃಷಿ ಅಧಿಕಾರಿ ಆಗುವುದು ಹೇಗೆ?, 2026 Career Guidance For AO And AAO Posts, ಇಲ್ಲಿದೆ ಸಂಪೂರ್ಣ ಮಾಹಿತಿ