Telegram Join My Telegram WhatsApp Join My WhatsApp

SSC Recruitments 2026, Job Opportunity : ಸಿಬ್ಬಂದಿ ಆಯ್ಕೆ ಆಯೋಗದಿಂದ ನೇಮಕಾತಿ, ಅರ್ಜಿ ಸಲ್ಲಿಕೆ, ವಿದ್ಯಾರ್ಹತೆ, ಸಂಬಳ, ಅರ್ಜಿ ಸಲ್ಲಿಕೆಯ ಬಗ್ಗೆ ಸಂಪೂರ್ಣ ಮಾಹಿತಿ

 ಸ್ಟೆನೋಗ್ರಾಫರ್‌ ಸಿ ಹಾಗೂ ಡಿ ವೃಂದದ ಹುದ್ದೆಗಳ ನೇಮಕಾತಿ (SSC Recruitments)

ನಮಸ್ಕಾರ ಸ್ನೇಹಿತರೆ ಭಾರತ ಸರ್ಕಾರದ ಹಲವು ಇಲಾಖೆಗಳಲ್ಲಿ ಗೌರವಾನ್ವಿತ ಹಾಗೂ ಹೆಚ್ಚು ಭದ್ರತೆ ಹೊಂದಿರುವ ಹುದ್ದೆಗಳಲ್ಲಿ ಕೆಲಸ ಪಡೆಯಬೇಕೆಂಬ ಮಹಾದಾಸಯನ್ನು ಹೊಂದಿದ್ದೀರಾ ಹಾಗಿದ್ದರೆ ನೀವು 12ನೇ ತರಗತಿ ಪಾಸ್ ಆಗಿದ್ದರೆ ಸಾಕು, ಸಿಬ್ಬಂದಿ ಆಯ್ಕೆ ಆಯೋಗದ ಮೂಲಕ ನೇಮಕಾತಿ ಅಧಿಸೂಚನೆ ಪ್ರಕಟಗೊಂಡಿದ್ದು ನಿಮಗೆ ಇದೊಂದು ಸುವರ್ಣಾವಕಾಶ ಆಗಿದೆ ಈ ಹುದ್ದೆಗಳ ಭರ್ತಿಗೆ ಅಧಿಕೃತವಾಗಿ ನೇಮಕಾತಿ ಅಧಿಸೂಚನೆ ಆಗಿದ್ದು ಹಿಂದೆ ಅರ್ಜಿ ಸಲ್ಲಿಸಿ, ತಮ್ಮ ಗೌರವಾನ್ವಿತ ಕೇಂದ್ರ ಸರ್ಕಾರಿ ಉದ್ಯೋಗದ ಕನಸನ್ನು ಪೂರ್ಣಗೊಳಿಸಿ.

SSC Recruitments  ಹೊರಡಿಸಿರುವ ಅಧಿಸೂಚನೆಯ ಖಾಲಿ ಹುದ್ದೆಗಳ ವಿವರ

ನೇಮಕ ಮಾಡಿಕೊಳ್ಳುತ್ತಿರುವ ಸಂಸ್ಥೆ : ಸಿಬ್ಬಂದಿ ಆಯ್ಕೆ ಆಯೋಗ (ಎಸ್ ಎಸ್ ಸಿ).
ಹುದ್ದೆಗಳ ಹೆಸರು : ಸ್ಟೆನೋಗ್ರಾಫರ್ ‌ʼಸಿʼ ಹಾಗು ʼಡಿʼ ವೃಂದ.
ಅಧಿಸೂಚನೆಯಾಗಿರುವ ಒಟ್ಟು ಹುದ್ದೆಗಳ ಸಂಖ್ಯೆ :  731 ಹುದ್ದೆಗಳು.
ಕೆಲಸ ನಿರ್ವಹಣೆಯ ಸ್ಥಳ :  ಭಾರತದಾದ್ಯಂತ.

ಹೊಂದಿರಬೇಕಾದ ಶೈಕ್ಷಣಿಕ ಅರ್ಹತೆ

ಈ SSC Recruitments ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10+2 ಅಂದರೆ 12ನೇ ತರಗತಿಯನ್ನು ಸಂಪೂರ್ಣವಾಗಿ ಪೂರ್ಣಗೊಳಿಸಬೇಕು.

ಸಂಬಳದ ವಿವರ

ಈ SSC Recruitments ನ ಪ್ರಕ್ರಿಯೆ ಮೂಲಕ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಸಿಬ್ಬಂದಿ ಆಯ್ಕೆ ಆಯೋಗದ ಅಧಿಕೃತಮಾನದಂಡಗಳ ಪ್ರಕಾರ ಮಾಸಿಕ ಸಂಬಳವನ್ನು ನೀಡಲಾಗುತ್ತದೆ ಈ ಎಸ್ ಎಸ್ ಸಿ ಸಂಸ್ಥೆಯು ಅಂತರ ರಾಜ್ಯ ನೇಮಕಾತಿಗಳನ್ನು ಕೈಗೊಳ್ಳುವುದರಿಂದ ಪ್ರತ್ಯೇಕ ರಾಜ್ಯಗಳಲ್ಲಿ ಪ್ರತ್ಯೇಕ ಸಂಬಳದ ಚೌಕಟ್ಟು ಇರುತ್ತದೆ.

ವಯೋಮಿತಿಯ ವಿವರ

ಈ SSC Recruitments ಗೆ  ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ 30 ವರ್ಷ ವಯಸ್ಸಿನೊಳಗೆ ಇರಬೇಕು.

ವಯೋಮಿತಿ ಸಡಿಲಿಕೆ

ಈ SSC Recruitments ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ವಯೋಮಿತಿ ಸರೀಕೆಯನ್ನು ಸಿಬ್ಬಂದಿ ಆಯ್ಕೆ ಆಯೋಗದ ನಿಯಮಗಳ ಪ್ರಕಾರ ನೀಡಲಾಗುವುದು ಈ ಮಾಹಿತಿ ಕೆಳಕಂಡಂತಿದೆ.

ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ :  03 ವರ್ಷಗಳು.
ಪರಿಶಿಷ್ಟ ಜಾತಿ ಅಭ್ಯರ್ಥಿಗಳು ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ :  05 ವರ್ಷಗಳು.
ಅಂಗವಿಕಲ (ಕಾಯ್ದಿರಿಸದೆ ಇರುವ ಅಥವಾ ಆರ್ಥಿಕವಾಗಿ ಹಿಂದುಳಿದ ವರ್ಗಗಳ) ಅಭ್ಯರ್ಥಿಗಳಿಗೆ : 10 ವರ್ಷಗಳು.
ಅಂಗವಿಕಲ (ಇತರೆ ಹಿಂದುಳಿದ ವರ್ಗಗಳ) ಅಭ್ಯರ್ಥಿಗಳಿಗೆ : 13 ವರ್ಷಗಳು.
ಅಂಗವಿಕಲ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ) ಅಭ್ಯರ್ಥಿಗಳಿಗೆ : 15 ವರ್ಷಗಳು.

ಆನ್ಲೈನ್ ಅರ್ಜಿ ಶುಲ್ಕ ಪಾವತಿ

ಸಾಮಾನ್ಯ ವರ್ಗ ಹಾಗೂ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ :  100/- ರೂಗಳು.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಂಗವಿಕಲ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಪಾವತಿ ಇರುವುದಿಲ್ಲ.

SSC Recruitments ನ ಅರ್ಜಿ ಶುಲ್ಕದ ಪಾವತಿಯನ್ನು ಆನ್ಲೈನ್ ಮೂಲಕವೇ ಮಾಡಬೇಕಾಗುತ್ತದೆ ಇತರ ಯಾವುದೇ ಪಾವತಿ ವಿಧಾನಗಳನ್ನು ಅನುಸರಿಸಿದರೆ ಅದು ಮಾನ್ಯ ವಾಗುವುದಿಲ್ಲ ಎಂಬುದನ್ನು ತಿಳಿದುಕೊಳ್ಳಿ.

SSC Recruitments ನ ಆಯ್ಕೆ ಪ್ರಕ್ರಿಯೆ

ಕಂಪ್ಯೂಟರ್ ಆಧಾರಿತ ಪರೀಕ್ಷೆ : ಈ ಪರೀಕ್ಷೆಯಲ್ಲಿ ಸಾಮಾನ್ಯ ಬುದ್ಧಿ ಮತ್ತೆ ತಾರ್ಕಿಕತೆ ಸಾಮಾನ್ಯ ಅರಿವು ಹಾಗೂ ಇಂಗ್ಲೀಷ್ ಭಾಷೆಯನ್ನು ಒಳಗೊಂಡ ಕಂಪ್ಯೂಟರ್ ಆಧಾರಿತ ಪರೀಕ್ಷೆ ಇರುತ್ತದೆ.

ಕೌಶಲ್ಯ ಪರೀಕ್ಷೆ : ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡವರಿಗೆ ಕೌಶಲ್ಯ ಪರೀಕ್ಷೆಯನ್ನು ನೀಡಲಾಗುತ್ತದೆ ಈ ಪರೀಕ್ಷೆಯಲ್ಲಿ ಸಿ ದರ್ಜೆ ಗೆ 100 ಪದಗಳ ವೇಗ ಹಾಗೂ 10 ನಿಮಿಷಗಳ ಕಾಲದಲ್ಲಿ ಲೇಖನವನ್ನು ಪೂರ್ಣಗೊಳಿಸಬೇಕು ಹಾಗೂ ಡಿ ದರ್ಜೆಯಲ್ಲಿ 80 ಪದಗಳ ವೇಗದಲ್ಲಿ 10 ನಿಮಿಷಗಳ ಕಾಲ ಲೇಖನವನ್ನು ಪೂರ್ಣಗೊಳಿಸಬೇಕು.

ದಾಖಲೆ ಪರಿಶೀಲನೆ : ಮೊದಲ ಎರಡು ಹಂತಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆಗೆ ಕರೆಯಲಾಗುತ್ತದೆ ಈ ದಾಖಲೆ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ವೈಯಕ್ತಿಕ ದಾಖಲೆಗಳು ಮೀಸಲಾತಿ ದಾಖಲಾತಿಗಳು ಶೈಕ್ಷಣಿಕ ಪ್ರಮಾಣ ಪತ್ರಗಳು ಜಾತಿ ಪ್ರಮಾಣ ಪತ್ರ ಹಾಗೂ ಇನ್ನಿತರ ದಾಖಲೆಗಳನ್ನು ಅವುಗಳ ನೈಜತೆಯನ್ನು ಪರಿಶೀಲಿಸಲಾಗುವುದು.

ವೈದ್ಯಕೀಯ ಪರೀಕ್ಷೆ : ವೈದ್ಯಕೀಯ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಸದೃಢರಾಗಿದ್ದಾರೆಯೇ ಈ ಹುದ್ದೆಗೆ ಇವರನ್ನು ನೇಮಕ ಮಾಡಬಹುದೇ ಎಂದು ನಿರ್ಧರಿಸಲಾಗುತ್ತದೆ ಅಂಗವಿಕಲ ಅಭ್ಯರ್ಥಿಗಳಿಗೂ ಸಹ ವೈದ್ಯಕೀಯ ಪರೀಕ್ಷೆ ಇರುತ್ತದೆ ಅಂಗವಿಕಲತೆಯ ಸ್ವರೂಪ ಅಂಗವಿಕಲತೆಯ ಪ್ರಮಾಣ ಮುಂತಾದ ಮಾಹಿತಿಯನ್ನು ಇಲ್ಲಿ ಪಡೆಯಲಾಗುತ್ತದೆ.

SSC Recruitments ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೀಗಿದೆ

  • ಮೊದಲು ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಸಿಬ್ಬಂದಿ ಆಯ್ಕೆ ಆಯೋಗ ಯಶಸ್ಸಿ ಯ ಅಧಿಕೃತ ವ್ಯಕ್ತಿ ನೀಡುವ ಮೂಲಕ ಕೆನೋಗ್ರಾಫರ್ ಹುದ್ದೆಗೆ ಹೊರಡಿಸಲಾಗಿರುವ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಅರ್ಥೈಸಿಕೊಂಡು ನಂತರ ಅರ್ಜಿ ಸಲ್ಲಿಸಬೇಕು.
  • ಅರ್ಜಿ ಸಲ್ಲಿಸಲು ಬಯಸುವ ಮೊದಲು ಸಂವಹನದ ಉದ್ದೇಶಕ್ಕಾಗಿ ನಿಮ್ಮದೇ ಆದ ಸರಿಯಾಗಿರುವ ಇಮೇಲ್ ಐಡಿ ಹಾಗೂ ಮೊಬೈಲ್ ನಂಬರ್ ಅನ್ನು ಸಿದ್ಧವಾಗಿಟ್ಟುಕೊಳ್ಳಿ ಇದರ ಜೊತೆಯಲ್ಲಿ ನೇಮಕಾತಿ ಅರ್ಜಿ ನಮೂನೆಯನ್ನು ಭರ್ತಿ ಮಾಡಲು ಬೇಕಾದ ಎಲ್ಲಾ ಮಾಹಿತಿಯನ್ನು ಸಿದ್ಧಪಡಿಸಿ ಇಟ್ಟುಕೊಳ್ಳಿ.
  • SSC ಪೋರ್ಟಲ್‌ ನಲ್ಲಿ ತಮ್ಮ ವೈಯಕ್ತಿಕ ಖಾತೆ ಸೃಜಿಸಿ ನಂತರ ಲಾಗಿನ್ ಆಗಿ.
  • ಲಾಗಿನ್ ಆದ ನಂತರ ಅಪ್ಲೈ ಫಾರ್ ಟೆನೋಗ್ರಾಫರ್ ಎಂಬಲ್ಲಿ ಕ್ಲಿಕ್ ಮಾಡುವುದರ ಮೂಲಕ ಆನ್ಲೈನ್ ಅರ್ಜಿ ತೆರೆಯುತ್ತದೆ ಅಲ್ಲಿ ಕೇಳಲಾಗುವ ಎಲ್ಲಾ ಮಾಹಿತಿಯನ್ನು ಕಡ್ಡಾಯವಾಗಿ ನಮೂದಿಸಿ ಹಾಗೂ ಹೇಳಲಾಗುವ ಎಲ್ಲಾ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
  • ವಿಶೇಷ ಸೂಚನೆ ಭಾವಚಿತ್ರ ಹಾಗು ಸಹಿಗೆ ಸಂಬಂಧಿಸಿದಂತೆ ಕೆಲವು ನಿರ್ದಿಷ್ಟ ನಿಯಮಗಳು ಇರುವುದರಿಂದ ಫೋಟೋ ಹಾಗೂ ಸಹಿಯನ್ನು ಅಪ್ಲೋಡ್ ಮಾಡುವ ಮುನ್ನ ನಿಯಮಗಳನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ನಿಯಮಗಳಂತೆಯೇ ಫೋಟೋ ಮತ್ತು ಸಹಿಗಳನ್ನು ಅಪ್ಲೋಡ್ ಮಾಡಿ.
  • ಅರ್ಜಿಯನ್ನು ಭರ್ತಿ ಮಾಡಿದ ನಂತರ ರಿವ್ಯೂ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಪರಿಶೀಲಿಸಿ, ತಮ್ಮ ಅನ್ವಯಿಕ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ.
  • ನಂತರ ಪರದೆ ಮೇಲೆ ಕಾಣುವ ಅಪ್ಲಿಕೇಶನ್ ಅನ್ನು ಪ್ರಿಂಟ್ ತೆಗೆದು ಇಟ್ಟುಕೊಳ್ಳಿ ಹಾಗೂ ಪಿಡಿಎಫ್ ಅನ್ನು ಸೇವ್ ಮಾಡಿಟ್ಟುಕೊಳ್ಳಿ.

SSC Recruitments ಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-05-2026 ಆಗಿರುವುದರಿಂದ ಇಂದೇ ಅರ್ಜಿ ಸಲ್ಲಿಸಿ

ಪ್ರಮುಖ ಲಿಂಕ್ ಗಳು

ಸಿಬ್ಬಂದಿ ಆಯ್ಕೆ ಆಯೋಗದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಲು : Staff Selection Commission (SSC)
ಅಧಿಕೃತ ಅಧಿಸೂಚನೆಯ ಪಿಡಿಎಫ್ ಓದಲು : SSC Stenographer Noticication
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು :     ನೋಂದಣಿ ಮಾಡಲು ಲಿಂಕ್     ಅರ್ಜಿ ಸಲ್ಲಿಕೆಗೆ ಲಿಂಕ್
ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು :  ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ದಿನಾಂಕಗಳು

ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಆರಂಭದ ದಿನಾಂಕ : 24-04-2026
ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಕೊನೆಯ ದಿನಾಂಕ : 15-05-2026

ಪರೀಕ್ಷಾ ತಯಾರಿಗೆ ಪ್ರಮುಖ ಸಲಹೆಗಳು : 

  • ದೈನಂದಿನ ಸ್ಟೆನೋಗ್ರಫಿಯನ್ನು ಅಭ್ಯಾಸ ಮಾಡಿ ವೇಗವನ್ನು ಹೆಚ್ಚಿಸಿಕೊಳ್ಳಿ.
  • ಇಂಗ್ಲಿಷ್‌ ಭಾಷೆಯ ಅಭ್ಯಾಸಕ್ಕೆ ಹೆಚ್ಚು ಆದ್ಯತೆ ನೀಡಿ.
  • ಸ್ಟೆನೋಗ್ರಫಿಯಲ್ಲಿ ವೇಗ ನಿಖರತೆ ಹೆಚ್ಚಿಸಿ.
  • ಹಿಂದಿನ ವರ್ಷದ ಪ್ರಶ್ನೆಪತ್ರಿಕೆ ಗಳನ್ನು ಬಿಡಿಸಿ.
  • ಉತ್ತಮ ಮಾಕ್‌ ಪರೀಕ್ಷೆಗಳನ್ನು ಅಧ್ಯಯನ ಮಾಡಿ.

ಸಿಬ್ಬಂದಿ ಆಯ್ಕೆ ಆಯೋಗವು 2020ರ ನೇಮಕಾತಿ ಅಧಿಸೂಚನೆಯ ಮೂಲಕ ಚಂದ್ರ ಹುದ್ದೆಗಳಿಗೆ ನೇಮಕಾತಿ ಸೂಚನೆಯನ್ನು ಹೊರಡಿಸಿದ್ದು ಈ ನೇಮಕಾತಿಯ ಮೂಲಕ 731 ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು ದ್ವಿತೀಯ ಪಿಯುಸಿ ಯನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಆನ್ಲೈನ್ ಮೂಲಕ SSC Recruitment ಗೆ  ಅರ್ಜಿ ಸಲ್ಲಿಸಬಹುದು ಆದರಿಂದ ಹಿಂದೆ ಅರ್ಜಿ ಸಲ್ಲಿಸಿ ತಮ್ಮ ಸರ್ಕಾರಿ ನೌಕರಿಯ ಕನಸನ್ನು ನನಸಾಗಿಸಿ

 

FAQ’s Regarding SSC Recruitment (Stenographer ‘C’ And ‘D’ Group)

1) SSC Stenographer C & D Recruitment ಗೆ ಯಾರು ಅರ್ಜಿ ಸಲ್ಲಿಸಬಹುದು?
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು

2) SSC Stenographer Recruitment ಗೆ ವಯೋಮಿತಿ ಎಷ್ಟು?
ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ ವಯಸ್ಸು 30 ವರ್ಷ ಇರಬೇಕು.

3) SSC Stenographer C ಮತ್ತು D ಹುದ್ದೆಗಳ ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಕಂಪ್ಯೂಟರ್ ಆಧಾರಿತ ಪರೀಕ್ಷೆ, ಸ್ಟೆನೋಗ್ರಫಿ ಕೌಶಲ್ಯ ಪರೀಕ್ಷೆ,  ದಾಖಲೆ ಪರಿಶೀಲನೆ ಹಾಗೂ  ವೈದ್ಯಕೀಯ ಪರೀಕ್ಷೆ ಇರುತ್ತದೆ

4) SSC Recruitments ಗೆ ಅರ್ಜಿ ಶುಲ್ಕ ಎಷ್ಟು?

  • ಸಾಮಾನ್ಯ (General) ಹಾಗೂ OBC ಅಭ್ಯರ್ಥಿಗಳಿಗೆ: ₹100/-
  • SC/ST, ಮಹಿಳಾ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ: ಯಾವುದೇ ಶುಲ್ಕ ಇರುವುದಿಲ್ಲ.

5) SSC Stenographer Recruitment ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಈ ನೇಮಕಾತಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-05-2026 ಆಗಿದೆ. ಆದ್ದರಿಂದ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸುವುದು ಉತ್ತಮ.

 

Leave a Comment