500 ಸಹಾಯಕ ಫೋರ್ ಮ್ಯಾನ್ ಹಾಗೂ ತಂತ್ರಜ್ಞಾನ ಹುದ್ದೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಆಹ್ವಾನ (MCL Recruitment 2026)
ಮಹಾನದಿ ಕೋಲ್ ಫೀಲ್ಡ್ ಲಿಮಿಟೆಡ್ ನೇಮಕಾತಿ ಅಧಿಸೂಚನೆ ಪ್ರಕಾರ 500 ಸಹಾಯಕ ಫೋರ್ ಮ್ಯಾನ್ ಹಾಗೂ ತಂತ್ರಜ್ಞಾನ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿರುತ್ತದೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಮೂಲಕ ಸರ್ಕಾರಿ ಉದ್ಯೋಗ ಕನಸನ್ನು ನನಸು ಮಾಡಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 28 ಮೇ 2026 ರಂದು ಅಥವಾ ಮೊದಲು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವುದು ಉತ್ತಮ.

ಮಹಾನದಿ ಗೋಲ್ ಫೀಲ್ಡ್ ಲಿಮಿಟೆಡ್ (MCL Recruitment) ಹುದ್ದೆಯ ಅಧಿ ಸೂಚನೆ
ಸಂಸ್ಥೆಯ ಹೆಸರು : ಮಹಾನದಿ ಕೋಲ್ ಫೀಲ್ಡ್ಸ್ ಲಿಮಿಟೆಡ್
ಒಟ್ಟು ಹುದ್ದೆಗಳ ಸಂಖ್ಯೆ : 500
ಹುದ್ದೆಯ ಸ್ಥಳ : ಒಡಿಸ್ಸಾ
ಹುದ್ದೆ ಹೆಸರು : ಸಹಾಯಕ ಫೋರ್ ಮ್ಯಾನ್ ಹಾಗೂ ತಂತ್ರಜ್ಞ
ಸಂಬಳ (ತಿಂಗಳಿಗೆ) : 47330/- ರೂಗಳು
ಮಹಾನದಿ ಕೊಲ್ ಫೀಲ್ಡ್ ನೇಮಕಾತಿ (MCL Recruitment) 2026 ವಿವರಗಳು ಈ ಕೆಳಕಂಡಂತಿವೆ
| ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
| ಸಹಾಯಕ ಫೋರ್ ಮ್ಯಾನ್ (ಎಲೆಕ್ಟ್ರಿಕಲ್ ವಿಭಾಗ), (ತರಬೇತಿ ವಿಭಾಗ) ಟೀ & ಎಸ್ ಗ್ರಾ-ಸಿ (ಇ & ಎಂ) | 150 |
| ತಂತ್ರಜ್ಞ (ಎಲೆಕ್ಟ್ರಿಷಿಯನ್ ವಿಭಾಗ), (ತರಬೇತಿ ವಿಭಾಗ), ಕೆಟಗರಿ -3 (ಇ & ಎಂ) | 350 |
ಮಹಾನದಿ ಕೋಲ್ ಫೀಲ್ಡ್ ನೇಮಕಾತಿಯ (MCL Recruitment) ಶೈಕ್ಷಣಿಕ ಅರ್ಹತೆ

| ಹುದ್ದೆಯ ಹೆಸರು | ಹೊಂದಿರಬೇಕಾದ ಶೈಕ್ಷಣಿಕ ಅರ್ಹತೆ |
| ಸಹಾಯಕ ಫೋರ್ ಮ್ಯಾನ್ (ಎಲೆಕ್ಟ್ರಿಕಲ್ ವಿಭಾಗ), (ತರಬೇತಿ ವಿಭಾಗ) ಟೀ & ಎಸ್ ಗ್ರಾ-ಸಿ (ಇ & ಎಂ) | ಡಿಪ್ಲೋಮಾ, ಬಿ.ಇ / ಬಿ.ಟೆಕ್ |
| ತಂತ್ರಜ್ಞ (ಎಲೆಕ್ಟ್ರಿಷಿಯನ್ ವಿಭಾಗ), (ತರಬೇತಿ ವಿಭಾಗ), ಕೆಟಗರಿ -3 (ಇ & ಎಂ) | ಎಸ್ ಎಸ್ ಎಲ್ ಸಿ, ಐ ಟಿ ಐ |
MCL Recruitment ನ ಸಂಬಳದ ವಿವರಗಳು
| ಹುದ್ದೆಯ ಹೆಸರು | ಸಂಬಳ (ಅನ್ವಯಿಕ) |
| ಸಹಾಯಕ ಫೋರ್ ಮ್ಯಾನ್ (ಎಲೆಕ್ಟ್ರಿಕಲ್ ವಿಭಾಗ), (ತರಬೇತಿ ವಿಭಾಗ) ಟೀ & ಎಸ್ ಗ್ರಾ-ಸಿ (ಇ & ಎಂ) | ಮಾಸಿಕ 47,330.25/- ರೂಗಳು |
| ತಂತ್ರಜ್ಞ (ಎಲೆಕ್ಟ್ರಿಷಿಯನ್ ವಿಭಾಗ), (ತರಬೇತಿ ವಿಭಾಗ), ಕೆಟಗರಿ -3 (ಇ & ಎಂ) | ಒಂದು ದಿನಕ್ಕೆ 1,583.32/- ರೂಗಳು |
MCL Recruitment ನ ವಯೋಮಿತಿ
ಮಹಾನದಿ ಕೋಲ್ ಫೀಲ್ಡ್ ಲಿಮಿಟೆಡ್ ನೇಮಕಾತಿಯ ಅಧಿಕೃತ ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು 28-05-2026 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 30 ವರ್ಷ ವಯೋಮಿತಿಯನ್ನು ಹೊಂದಿರಬೇಕು
MCL Recruitment ನ ವಯೋಮಿತಿ ಸಡಿಲಿಕೆ
ಒಬಿಸಿ ಅಭ್ಯರ್ಥಿಗಳು : 3 ವರ್ಷಗಳ ವಯೋಮಿತಿ ಸಡಿಲಿಕೆ
ಎಸ್ಸಿ ಎಸ್ಟಿ ಅಭ್ಯರ್ಥಿಗಳು : 5 ವರ್ಷಗಳ ವಯೋಮಿತಿ ಸಡಿಲಿಕೆ
ಪಿಡಬ್ಲ್ಯೂಡಿ (ಸಾಮಾನ್ಯ) ಅಭ್ಯರ್ಥಿಗಳು : 10 ವರ್ಷಗಳ ವಯೋಮಿತಿ ಸಡಿಲಿಕೆ
ಪಿಡಬ್ಲ್ಯೂಡಿ (ಒಬಿಸಿ) ಅಭ್ಯರ್ಥಿಗಳು : 13 ವರ್ಷಗಳ ವಯೋಮಿತಿ ಸಡಿಲಿಕೆ
ಪಿಡಬ್ಲ್ಯೂಡಿ (ಎಸ್ಸಿ ಎಸ್ಟಿ) ಅಭ್ಯರ್ಥಿಗಳು : 15 ವರ್ಷಗಳ ವಯೋಮಿತಿ ಸಡಿಲಿಕೆ
MCL Recruitment ಆನ್ ಲೈನ್ ಅರ್ಜಿ ಶುಲ್ಕ
ಯು ಆರ್ ಒಬಿಸಿ ಅಭ್ಯರ್ಥಿಗಳು 1180/- ರೂಗಳು
ಎಸ್ಸಿ ಎಸ್ಟಿ, ಪಿಡಬ್ಲ್ಯೂ ಬಿ ಡಿ, ಇ ಎಸ್ ಎಮ್, ಕೋಲ್ ಇಂಡಿಯಾ ಲಿಮಿಟೆಡ್ ನ ಉದ್ಯೋಗಿಗಳು ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ಇರುವುದಿಲ್ಲ.
ಅರ್ಜಿ ಶುಲ್ಕ ಪಾವತಿ ವಿಧಾನ ಆನ್ಲೈನ್
MCL Recruitment ನ ಆಯ್ಕೆ ಪ್ರಕ್ರಿಯೆ

- ಕಂಪ್ಯೂಟರ್ ಆಧಾರಿತ ಪರೀಕ್ಷೆ : ಈ ಪರೀಕ್ಷೆಯಲ್ಲಿ ಹುದ್ದೆಗೆ ಬೇಕಾಗುವಂತಹ ತಾಂತ್ರಿಕ ಜ್ಞಾನವನ್ನು ಪರೀಕ್ಷಿಸಲು ಪರೀಕ್ಷೆಯನ್ನು ನಡೆಸುತ್ತಾರೆ
- ದಾಖಲೆ ಪರಿಶೀಲನೆ : ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಸಲ್ಲಿಸಿರುವ ವೈಯಕ್ತಿಕ ದಾಖಲೆ ಶೈಕ್ಷಣಿಕ ದಾಖಲೆ ಹಾಗೂ ಅನ್ವಯಿಸಿದ ಅನುಭವ ಪ್ರಮಾಣ ಪತ್ರದ ದಾಖಲೆಯನ್ನು ಈ ಹಂತದಲ್ಲಿ ಪರಿಶೀಲಿಸಲಾಗುತ್ತದೆ
- ಸಂದರ್ಶನ : ಸಂದರ್ಶನದಲ್ಲಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಹುದ್ದೆಗೆ ಅವಶ್ಯಕತೆ ಇರುವ ಕೌಶಲ್ಯ ಹಾಗೂ ಅರ್ಹತೆಗಳನ್ನು ಪರಿಶೀಲಿಸಲಾಗುವುದು
ಮಹಾನದಿ ಕೋಲ್ ಫೀಲ್ಡ್ ಲಿಮಿಟೆಡ್ ನೇಮಕಾತಿ (MCL Recruitment) ಗೆ ಅರ್ಜಿ ಸಲ್ಲಿಕೆ

- ಮಹಾನದಿ colfield ನೇಮಕಾತಿಯ ಅಧಿಕೃತ ಅಧಿಸೂಚನೆ 2026 ರನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ಹಾಗೂ ಅಭ್ಯರ್ಥಿಗಳು ಅರ್ಹತ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಬಹುದು ನೇಮಕಾತಿಗೆ ಅರ್ಜಿ ಸಲ್ಲಿಸುವ ಲಿಂಕನ್ನು ಕೆಳಗೆ ನೀಡಲಾಗಿದೆ
- ಮಹಾನದಿ ಗೋಲ್ ಫೀಲ್ಡ್ ನೇಮಕಾತಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡುವ ಮೊದಲು ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಅನ್ನು ಹೊಂದಿರಬೇಕಾಗುತ್ತದೆ ನಂತರ ವೈಯಕ್ತಿಕ ದಾಖಲೆಗಳಾದ ಗುರುತಿನ ಪ್ರಮಾಣ ಪತ್ರ ವಯಸ್ಸಿನ ಪ್ರಮಾಣ ಪತ್ರ ಶೈಕ್ಷಣಿಕ ಅರ್ಹತೆಯ ದಾಖಲೆಗಳು ರೆಸ್ಯೂಮ್ ಇತರ ಇನ್ನಾವುದೇ ಅನುಭವ ಪ್ರಮಾಣ ಪತ್ರಗಳು ಇದ್ದಲ್ಲಿ ದಾಖಲೆಗಳನ್ನು ಸ್ಕ್ಯಾನ್ ಮಾಡಿಟ್ಟುಕೊಂಡು ಸಿದ್ಧವಾಗಿರಿ
- ಈ ಕೆಳಗೆ ನೀಡಲಾದ ಮಹಾನದಿ ಕೊಲ್ ಫೀಲ್ಡ್ ಲಿಮಿಟೆಡ್ನ ನೇಮಕಾತಿಯ ಅಸಿಸ್ಟೆಂಟ್ ಫೋರ್ ಮ್ಯಾನ್ ಹಾಗೂ ತಂತ್ರಜ್ಞ ಹುದ್ದೆಗೆ ಆನ್ಲೈನಲ್ಲಿ ಅರ್ಜಿ ಸಲ್ಲಿಸಿ
ಅರ್ಜಿ ಸಲ್ಲಿಸುವ ಲಿಂಕನ್ನು ಈ ಕೆಳಗಡೆ ನೀಡಲಾಗಿದೆ - ಮಹಾನದಿ ಕೋಲ್ ಫೀಲ್ಡ್ ನೇಮಕಾತಿಯ ಆನ್ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ನಮೂದಿಸಿ ಹಾಗೂ ನವೀಕರಿಸಿ ಅಗತ್ಯ ಪ್ರಮಾಣ ಪತ್ರಗಳನ್ನು ಭಾವಚಿತ್ರ ಹಾಗೂ ಸಹಿಯನ್ನು ಸ್ಕ್ಯಾನ್ ಮಾಡಿ ಇರಿಸಿರುವ ಪ್ರತಿಗಳನ್ನು ಅಪ್ಲೋಡ್ ಮಾಡಿ ಒಂದಲ್ಲ ಎರಡು ಬಾರಿ ಪರಿಶೀಲಿಸಿ. ಅನುಭವ ಪ್ರಮಾಣ ಪತ್ರಗಳು ಅನ್ವಯಿಸಿದೆ ಅಪ್ಲೋಡ್ ಮಾಡಿ
- ಈ ನೇಮಕಾತಿಗೆ ಅರ್ಜಿ ಸಲ್ಲಿಸಿದ ನಂತರ ನಿಮ್ಮ ಅನ್ವಯಿತ ವರ್ಗದ ಪ್ರಕಾರ ಅರ್ಜಿ ಶುಲ್ಕವನ್ನು ಪಾವತಿಸಿ ಅನ್ವಯಿಸಿದರೆ ಮಾತ್ರ ಪಾವತಿಸಿ
- ನಂತರ ಮಹಾನದಿ ಕೂಲ್ ಫೀಲ್ಡ್ ನೇಮಕಾತಿ 2017 ಪೂರ್ಣಗೊಳಿಸಲು ಸಬ್ಮಿಟ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಬಹುದಾಗಿರುತ್ತದೆ
- ಬಹು ಮುಖ್ಯ ಸೂಚನೆ ಎಂದರೆ ಅರ್ಜಿ ಸಂಖ್ಯೆಯನ್ನು ಜೋಪಾನವಾಗಿಟ್ಟುಕೊಳ್ಳಿ ನಂತರ ತಾವು ಸಲ್ಲಿಸಿರುವ ಅರ್ಜಿಯನ್ನು ಪ್ರಿಂಟ್ ಮಾಡಲು ಈ ಸಂಖ್ಯೆಯ ಅವಶ್ಯಕತೆ ಪ್ರಮುಖವಾಗಿರುತ್ತದೆ ಈ ನೋಂದಣಿ ಸಂಖ್ಯೆಯನ್ನು ಬಳಸುವುದರ ಮೂಲಕ ತಮ್ಮ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಬಹುದಾಗಿರುತ್ತದೆ.
ಅರ್ಜಿ ಸಲ್ಲಿಕೆಗೆ ನಿಗದಿಪಡಿಸಿರುವ ಕೊನೆಯ ದಿನಾಂಕ 28 ಮೇ 2026 ಆಗಿರುವುದರಿಂದ ಕೊನೆಯ ದಿನಗಳಲ್ಲಿ ಸರ್ವರ್ ಸಮಸ್ಯೆ ಎದುರಾಗಬಹುದು ಆದುದರಿಂದ ಆದಷ್ಟು ಬೇಗ ಅರ್ಜಿ ಸಲ್ಲಿಸಿ ಸಲ್ಲಿಸಿದ ನಂತರ ಬರುವ ಅಪ್ಲಿಕೇಶನ್ ಅನ್ನು ಭವಿಷ್ಯದ ಉದ್ದೇಶಕ್ಕಾಗಿ ಡೌನ್ಲೋಡ್ ಮಾಡಿಟ್ಟುಕೊಳ್ಳಿ
ಮಹಾನದಿ ಕೋಲ್ ಫೀಲ್ಡ್ ಲಿಮಿಟೆಡ್ ನೇಮಕಾತಿಗೆ (MCL Recruitment) ಸಂಬಂಧಿಸಿದ ಪ್ರಮುಖ ದಿನಾಂಕಗಳು
ಮಹಾನದಿ ಕೋಲ್ ಫೀಲ್ಡ್ ಲಿಮಿಟೆಡ್ ನೇಮಕಾತಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 07-05-2026
ಮಹಾನದಿ ಕೋಲ್ ಫೀಲ್ಡ್ ಲಿಮಿಟೆಡ್ ನೇಮಕಾತಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28-05-2026
ಮಹಾನದಿ ಕೋಲ್ ಫೀಲ್ಡ್ ಲಿಮಿಟೆಡ್ ನೇಮಕಾತಿಗೆ ಸಂಬಂಧಿಸಿದ ಪ್ರಮುಖ ಲಿಂಕ್ ಗಳು
ಅಧಿಕೃತ ಅಧಿಸೂಚನೆಯ ಪಿಡಿಎಫ್ ಅನ್ನು ಓದಲು : ಇಲ್ಲಿ ಕ್ಲಿಕ್ ಮಾಡಿ
ಆನ್ಲೈನಲ್ಲಿ ಅರ್ಜಿ ಸಲ್ಲಿಸಲು (07-05-2026 ರ ನಂತರ) : ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ವೆಬ್ಸೈಟ್ಗೆ ಹೋಗಲು : ಇಲ್ಲಿ ಕ್ಲಿಕ್ ಮಾಡಿ
ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು : ಇಲ್ಲಿ ಕ್ಲಿಕ್ ಮಾಡಿ
ಈ ಮೂಲಕ Mahanadi Coalfields Limited (MCL) ನೇಮಕಾತಿ 2026 ಸರ್ಕಾರಿ ಉದ್ಯೋಗವನ್ನು ಆಶಿಸುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ. 500 ಸಹಾಯಕ ಫೋರ್ ಮ್ಯಾನ್ ಹಾಗೂ ತಂತ್ರಜ್ಞ ಹುದ್ದೆಗಳ ಮೂಲಕ ತಾಂತ್ರಿಕ ಕ್ಷೇತ್ರದಲ್ಲಿ ಸ್ಥಿರವಾದ ಉದ್ಯೋಗವನ್ನು ಪಡೆಯಬಹುದು. ಉತ್ತಮ ಸಂಬಳ, ಕೇಂದ್ರ ಸರ್ಕಾರದ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ ಹಾಗೂ ಸ್ಪಷ್ಟ ಆಯ್ಕೆ ಪ್ರಕ್ರಿಯೆ ಈ ನೇಮಕಾತಿಯ ವಿಶೇಷತೆಗಳಾಗಿವೆ. ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸುವುದು ಅತ್ಯಂತ ಮುಖ್ಯ. ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಸಮಯಕ್ಕೆ ಸರಿಯಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.
Read More: Jobs
Mysore District Court Recruitment 2026, Big Opportunity: 93 ಹುದ್ದೆಗಳ ಭರ್ಜರಿ ನೇಮಕಾತಿ ಆರಂಭ
SBI Recruitment 2026, Big Opportunity: ₹3.75 ಲಕ್ಷ ಸಂಬಳದ ಭರ್ಜರಿ ಉದ್ಯೋಗ ಅವಕಾಶ! ಇಂದೇ ಅರ್ಜಿ ಸಲ್ಲಿಸಿ.
India Post Recruitment 2026, Big Opportunity: ₹34,800 ಸಂಬಳ | Degree ಪಾಸ್ ಆದವರಿಗೆ ಗೋಲ್ಡನ್ ಚಾನ್ಸ್!