Telegram Join My Telegram WhatsApp Join My WhatsApp

Mysore District Court Recruitment 2026, Big Opportunity: 93 ಹುದ್ದೆಗಳ ಭರ್ಜರಿ ನೇಮಕಾತಿ ಆರಂಭ

93 ಹುದ್ದೆಗಳ ಭರ್ಜರಿ ನೇಮಕಾತಿ ಅವಕಾಶ (Mysore District Court Recruitment)

ಕರ್ನಾಟಕ ಸರ್ಕಾರದ ಉದ್ಯೋಗವನ್ನು ಪಡೆಯುವುದು ಎಷ್ಟು ಉದ್ಯೋಗ ಆಕಾಂಕ್ಷಿಗಳ ಮಹದಾಸೆಯಾಗಿದೆ ಅದರಂತೆಯೇ ಕರ್ನಾಟಕ ಸರ್ಕಾರದ ಅಡಿಯಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಸುವರ್ಣ ಅವಕಾಶ ಒದಗಿ ಬಂದಿದೆ ಮೈಸೂರು ಜಿಲ್ಲಾ ನ್ಯಾಯಾಲಯ ನೇಮಕಾತಿ ವತಿಯಿಂದ ಪ್ರೋಸೆಸ್ ಸರ್ವರ್ ಕಾಪಿಸ್ಟ್ ಟೆನೋಗ್ರಾಫರ್ ಗ್ರೇಡ್ 3 ಸೇರಿದಂತೆ ಒಟ್ಟು 93 ಹುದ್ದೆಗಳ ನೇಮಕಾತಿ ಅರ್ಜಿ ಸೂಚನೆಯನ್ನು ಪ್ರಕಟಿಸಲಾಗಿದೆ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಹಿಂದೆ ಅರ್ಜಿ ಸಲ್ಲಿಸಿ ತಮ್ಮ ಸರ್ಕಾರಿ ಉದ್ಯೋಗದ ಕನಸನ್ನು ನನಸಾಗಿಸಿಕೊಳ್ಳಬಹುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ಮೇ 2026.

Mysore District Court Recruitment ನ ಪ್ರಮುಖ ಮಾಹಿತಿ..

ವಿವರಗಳು ಸಂಬಂಧಪಟ್ಟ ಮಾಹಿತಿ
ಸಂಸ್ಥೆ ಮೈಸೂರು ಜಿಲ್ಲಾ ನ್ಯಾಯಾಲಯ
ಒಟ್ಟು ಹುದ್ದೆಗಳ ಸಂಖ್ಯೆ 93
ಕೆಲಸದ ಸ್ಥಳ ಮೈಸೂರು, ಕರ್ನಾಟಕ
ಹುದ್ದೆಗಳ ಹೆಸರು ಪಿಯೋನ್, ಸ್ಟೆನೋಗ್ರಾಫರ್ ಗ್ರೇಡ್ 3, ಪ್ರೋಸೆಸ್ ಸರ್ವರ್, ಕಾಪಿಸ್ಟ್
ವೇತನ 27,000 ಗಳಿಂದ 83,700 ಗಳು ಪ್ರತಿ ತಿಂಗಳು
ಅರ್ಜಿ ವಿಧಾನ ಆನ್ಲೈನ್

 

Mysore District Court Recruitment ನ ಹುದ್ದೆವಾರು ವಿವರ.

ಹುದ್ದೆಯ ಹೆಸರು ಹುದ್ದೆಗಳ ಸಂಖ್ಯೆ
ಪಿಯೋನ್ 75
ಪ್ರೋಸೆಸ್ ಸರ್ವರ್ 11
ಕಾಪಿಸ್ಟ್ 3
ಸ್ಟೆನೋಗ್ರಾಫರ್‌ ಗ್ರೇಟ್‌ 3 4

 

Mysore District Court Recruitment ಗೆ ಅರ್ಜಿ ಸಲ್ಲಿಸಲು ಬೇಕಾಗುವ ವಿದ್ಯಾರ್ಹತೆ.

Mysore District Court Recruitment ಅಧಿಸೂಚನೆ ಪ್ರಕಟಣೆಯ ಪ್ರಕಾರ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಳಕಂಡ ವಿದ್ಯಾರ್ಹತೆಯನ್ನು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ.

  • ಪಿಯೋನ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಹತ್ತನೇ ತರಗತಿ ಪಾಸ್.
  • ಪ್ರೋಸೆಸ್ ಸರ್ವರ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಹತ್ತನೇ ತರಗತಿ ಅಥವಾ ದ್ವಿತೀಯ ಪಿಯುಸಿ ಪಾಸ್.
  • ಕಾಪಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಪಿಯುಸಿ ಅಥವಾ ಪದವಿ ಪಾಸ್.
  • ಸ್ಟೆನೋಗ್ರಾಫರ್ ಗ್ರೇಡ್ 3‌ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಪಿಯುಸಿ ಅಥವಾ ಡಿಪ್ಲೋಮಾ ಅಥವಾ ಪದವಿ ಪಾಸ್.

 

ವೇತನದ ವಿವರ

ಹುದ್ದೆಯ ಹೆಸರು ಸಂಬಳ (ತಿಂಗಳಿಗೆ)
ಪಿಯೋನ್ 27,000/- ರೂಗಳಿಂದ 46,675/- ರೂಗಳು
ಪ್ರೋಸೆಸ್ ಸರ್ವರ್ 31,775/- ರೂಗಳಿಂದ 61,300/- ರೂಗಳು
ಕಾಪಿಸ್ಟ್ 34,100/- ರೂಗಳಿಂದ 67,600/- ರೂಗಳು
ಸ್ಟೆನೋಗ್ರಾಫರ್‌ ಗ್ರೇಟ್‌ 3 44,425/- ರೂಗಳಿಂದ 83,700/- ರೂಗಳು

 

ವಯೋಮಿತಿ

Mysore District Court Recruitment ಗೆ  ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ  ಕನಿಷ್ಠ ವಯಸ್ಸು 18 ವರ್ಷ ವಯಸ್ಸಾಗಿರಬೇಕು.
Mysore District Court Recruitment  ಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸು 40 ವರ್ಷ ವಯಸ್ಸು ಮೀರಿರಬಾರದು.

ವಯೋಮಿತಿ ಸಡಿಲಿಕೆ

ಎಸ್ಸಿ ಎಸ್ಟಿ ಪ್ರವರ್ಗ-1 ವರ್ಗಕ್ಕೆ ಸೇರುವ ಅಭ್ಯರ್ಥಿಗಳಿಗೆ 5 ವರ್ಷಗಳ  ವಯೋಮಿತಿ ಸಡಿಲಿಕೆ.
ಒಬಿಸಿ 2ಎ 2ಬಿ 3ಎ 3ಬಿ ವರ್ಗಕ್ಕೆ ಸೇರುವ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ.
ಅಂಗವಿಕಲ ಹಾಗೂ ವಿಧವಾ ವರ್ಗಕ್ಕೆ ಸೇರುವ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿ ಸಡಿಲಿಕೆ.

ಅರ್ಜಿ ಶುಲ್ಕ

ಪಿಯೋನ್.

ಜನರಲ್ ವರ್ಗ : 200/- ರೂಗಳು.

ಒಬಿಸಿ ವರ್ಗ : 100/- ರೂಗಳು.

ಎಸ್ಸಿ ಎಸ್ಟಿ ವರ್ಗ :  ಶುಲ್ಕ ಇರುವುದಿಲ್ಲ.

ಪ್ರೊಸೆಸ್ ಸರ್ವರ್‌, ಕಾಪಿಯಿಸ್ಟ್, ಸ್ಟೆನೋಗ್ರಾಫರ್ ಗ್ರೇಡ್ 3.

ಜನರಲ್ ವರ್ಗ : 300/- ರೂಗಳು.

ಒಬಿಸಿ ವರ್ಗ : 150/- ರೂಗಳು.

ಎಸ್ ಸಿ ಎಸ್ ಟಿ ವರ್ಗ : ಶುಲ್ಕ ಇಲ್ಲ.

ಅರ್ಜಿ ಶುಲ್ಕವನ್ನು ಕೇವಲ ಆನ್ಲೈನ್ ವಿಧಾನದಲ್ಲಿ ಪಾವತಿ ಮಾಡತಕ್ಕದ್ದು.

ಆಯ್ಕೆ ವಿಧಾನ

 ಸಂದರ್ಶನದ (Interview) ಮೂಲಕ ಆಯ್ಕೆ ಮಾಡಲಾಗುತ್ತದೆ.

Mysore District Court Recruitment ಗೆ ಅರ್ಜಿ ಸಲ್ಲಿಸುವ ವಿಧಾನ

  • ಮೈಸೂರು ಜಿಲ್ಲಾ ನ್ಯಾಯಾಲಯದ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು.
  • ಅರ್ಜಿ ಸಲ್ಲಿಸಲು ಬಯಸುವ ಹುದ್ದೆಯ ಸಂಪೂರ್ಣ ನೋಟಿಫಿಕೇಶನ್ ಅನ್ನು ಓದಬೇಕು ಹಾಗೂ ಸರಿಯಾಗಿ ಅರ್ಥೈಸಿಕೊಳ್ಳಬೇಕು.
  • ಅರ್ಜಿ ಸಲ್ಲಿಸಲು ಬಯಸುವ ಹುದ್ದೆಯ ಮುಂದೆ ಅಪ್ಲೈ ಆನ್ಲೈನ್ ಎಂಬಲ್ಲಿ ಕ್ಲಿಕ್ ಮಾಡಬೇಕು.
  • ಅಗತ್ಯ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಬೇಕು
  • ಅರ್ಜಿ ನಮೂನೆಯಲ್ಲಿ ಕಡ್ಡಾಯವಾಗಿ ಅಪ್ಲೋಡ್ ಮಾಡಬೇಕಾದ ದಾಖಲೆಗಳನ್ನು ನಿಗದಿತ ಹಾಗೂ ಗುರುತಿಸಿದ ಕನಿಷ್ಠ ಗಾತ್ರದಲ್ಲಿ ಅಪ್ಲೋಡ್ ಮಾಡಬೇಕು.
  • ಶಿಲ್ಕ ಪಾವತಿ ಮಾಡಬೇಕು ಅಗತ್ಯವಿದ್ದರೆ.
  • ತಾವು ನಮೂದಿಸಿರುವ ಎಲ್ಲ ಮಾಹಿತಿ ಹಾಗೂ ದಾಖಲೆಗಳನ್ನು ಪರಿಶೀಲಿಸಿ ನಂತರ ಸಬ್ಮಿಟ್ ಬಟನ್ ಅನ್ನು ಒತ್ತಿ ಅಪ್ಲಿಕೇಶನ್ ನಂಬರ್ ಅನ್ನು ಸೇವ್ ಮಾಡಿಟ್ಟುಕೊಂಡು ಡೌನ್ಲೋಡ್ ಆಗುವ ಅಪ್ಲಿಕೇಶನ್ ಅನ್ನು ಪ್ರಿಂಟ್ ತೆಗೆದು ಭವಿಷ್ಯದ ಉದ್ದೇಶಕ್ಕಾಗಿ ಇಟ್ಟುಕೊಳ್ಳಿ.

ಪ್ರಮುಖ ದಿನಾಂಕಗಳು

  • ಆನ್ಲೈನಲ್ಲಿ ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ 28 ಏಪ್ರಿಲ್ 2026.
  • ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 31 ಮೇ 2026.
  • ಆನ್ಲೈನ್ನಲ್ಲಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ ಎರಡು ಜೂನ್ 2026.

ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದಂದು ಅಥವಾ ಎರಡು ಮೂರು ದಿನಗಳ ಹಿಂದೆ ಹೆಚ್ಚು ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಪರಿಣಾಮದಿಂದ ಸರ್ವರ್ ಸಮಸ್ಯೆ ಎದುರಾಗಬಹುದು ಆದುದರಿಂದ ಈ ಮಾಹಿತಿಯನ್ನು ಓದಿದ ನಂತರವೇ ಹುದ್ದೆಗೆ ಅರ್ಜಿ ಸಲ್ಲಿಸುವುದು ಉತ್ತಮವಾಗಿರುತ್ತದೆ.

Mysore District Court Recruitment ಗೆ ಸಂಬಂಧಿಸಿದ ಮುಖ್ಯ ಲಿಂಕ್ ಗಳು.

ಅಧಿಕೃತ ವೆಬ್ ಸೈಟ್‌ ಗಾಗಿ :  ಮೈಸೂರು ಜಿಲ್ಲಾ ನ್ಯಾಯಾಲಯ
ಅಧಿಕೃತ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ:    ಪಿಯೋನ್ ಹುದ್ದೆ      ಪ್ರೋಸೆಸ್ ಸರ್ವರ್ ಹುದ್ದೆ    ಕಾಪಿಸ್ಟ್ ಹುದ್ದೆ   – (ಕೀಬೋರ್ಡ್‌ ಲೇಔಟ್)      ಸ್ಟೆನೋಗ್ರಾಫರ್‌ ಗ್ರೇಟ್‌ 3-‌ (ಕೀಬೋರ್ಡ್‌ ಲೇಔಟ್)

ಪಿಯೋನ್ ಹುದ್ದೆಗೆ :  ಅರ್ಜಿ ಸಲ್ಲಿಕೆ 

ಪ್ರೋಸೆಸ್ ಸರ್ವರ್ ಹುದ್ದೆಗೆ :  ಅರ್ಜಿ ಸಲ್ಲಿಕೆ 

ಕಾಪಿಸ್ಟ್ ಹುದ್ದೆಗೆ :  ಅರ್ಜಿ ಸಲ್ಲಿಕೆ 

ಸ್ಟೆನೋಗ್ರಾಫರ್ ಗ್ರೇಡ್ 3 ಹುದ್ದೆಗೆ :  ಅರ್ಜಿ ಸಲ್ಲಿಕೆ 

 

ವಾಟ್ಸಾಪ್ ಗ್ರೂಪ್ ಜಾಯಿನ್ ಆಗಲು :  ಇಲ್ಲಿ ಕ್ಲಿಕ್ ಮಾಡಿ

 

Mysore District Court Recruitment ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಮುಖ್ಯ ಸಲಹೆಗಳು.

  • ಹುದ್ದೆಗೆ ಅರ್ಜಿ ಸಲ್ಲಿಸುವ ಮೊದಲು ಅಧಿಸೂಚನೆಯನ್ನು ಓದಿ ಬೇಕಾಗುವ ಎಲ್ಲಾ ದಾಖಲೆಗಳನ್ನು ಸಿದ್ಧವಾಗಿರಿಸಿ ಹಾಗೂ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿಟ್ಟುಕೊಳ್ಳಿ.
  • ಮೊಬೈಲ್ ಸಂಖ್ಯೆ ಹಾಗೂ ಇಮೇಲ್ ಐಡಿ ಸಕ್ರಿಯವಾಗಿರಲಿ ಏಕೆಂದರೆ ನೇಮಕಾತಿ ಪ್ರಾರಂಭದಿಂದ ನೇಮಕಗೊಳ್ಳುವವರೆಗೂ ಈ ಮೊಬೈಲ್ ನಂಬರ್ ಹಾಗೂ ಇಮೇಲ್ ಐಡಿಗಳ ಮೂಲಕ ಸಂವಹನ ನಡೆಯಬಹುದು.
  • ಅರ್ಜಿ ನಮೂನೆಯನ್ನು ಭರ್ತಿ ಮಾಡುವಾಗ ಎಚ್ಚರದಿಂದ ಮಾಹಿತಿಯನ್ನು ಭರ್ತಿ ಮಾಡಿ ಮಾಹಿತಿ ಬದಲಾವಣೆ ಅವಕಾಶಗಳು ಇಲ್ಲದಿರುವುದರಿಂದ ಫೈನಲ್ ಸಬ್ಮಿಟ್ ಮಾಡುವ ಮುನ್ನ ಒಂದಲ್ಲ ಎರಡು ಬಾರಿ ನೀವು ನಮೂದಿಸಿರುವ ಮಾಹಿತಿ ಹಾಗೂ ಅಪ್ಲೋಡ್ ಮಾಡಿರುವ ದಾಖಲಾತಿಗಳನ್ನು ಪರಿಶೀಲಿಸಿ.
  • ಅರ್ಜಿಯನ್ನು ಸಂಪೂರ್ಣವಾಗಿ ಸಲ್ಲಿಸಿದ ನಂತರ ಅರ್ಜಿ ಸಂಖ್ಯೆಯನ್ನು ಭವಿಷ್ಯದ ಉದ್ದೇಶಕ್ಕಾಗಿ ಸೇವೆ ಮಾಡಿ ಇಟ್ಟುಕೊಳ್ಳಿ ಹಾಗೂ ಅಪ್ಲಿಕೇಶನ್ ಅನ್ನು ಪ್ರಿಂಟ್ ಮಾಡಿ ಇಟ್ಟುಕೊಳ್ಳಿ.

ಮೈಸೂರು ಜಿಲ್ಲಾ ನ್ಯಾಯಾಲಯ ನೇಮಕಾತಿಯು 2026 ನೇ ಸಾಲಿನಲ್ಲಿ ನೇಮಕಾತಿ ಸೂಚನೆಯನ್ನು ಹೊರಡಿಸಿದ್ದು 10ನೇ ತರಗತಿ ಪಾಸ್ ಆದ ಅಭ್ಯರ್ಥಿಗಳಿಂದ ಪದವಿಯನ್ನು ಪಾಸ್ ಮಾಡಿರುವವರೆಗೆ ನೇಮಕಾತಿ ಅದು ಸೂಚನೆಯನ್ನು ಹೊರಡಿಸಿ ಅವಕಾಶವನ್ನು ಕಲ್ಪಿಸಿರುವುದರಿಂದ ಹಿಂದೆ ಅರ್ಜಿ ಸಲ್ಲಿಸಿ ತಮ್ಮ ಸರ್ಕಾರಿ ಉದ್ಯೋಗದ ಕನಸನ್ನು ನನಸಾಗಿಸಿಕೊಳ್ಳಿ.

 

Read More: Jobs

Infosys Recruitment 2026, Big Opportunity: 20000 ಫ್ರೆಶರ್‌ ಅಭ್ಯರ್ಥಿಗಳ ನೇಮಕಾತಿ,, ಐಟಿ ಕ್ಷೇತ್ರದಲ್ಲಿ ಮಹತ್ತರ ನೇಮಕಾತಿ

BSNL Recruitment 2026, Big Opportunity: 120 ಸೀನಿಯರ್ ಎಕ್ಸಿಕ್ಯೂಟಿವ್ ಟ್ರೈನೀ ಹುದ್ದೆಗಳು, ಆನ್ಲೈನ್ ನಲ್ಲಿ ಅರ್ಜಿ ಪ್ರಾರಂಭ

Karnataka High Court Recruitment 2026, Big Opportunity: ಪಿಯೋನ್, ವಾಚ್ ಮ್ಯಾನ್, ಸ್ವೀಪರ್ ಹುದ್ದೆಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಆರಂಭ

Punjab National Bank Recruitment 2026, Big Opportunity: ಸ್ಪೆಷಲಿಸ್ಟ್‌ ಆಫೀಸರ್‌ ಹದ್ದೆಗಳ ಭರ್ತಿ, ಇಂದೇ ಅರ್ಜಿ ಸಲ್ಲಿಸಿ

LIC HFL Recruitment 2026, Big Opportunity: 180 ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳು | ₹41,000 ಸಂಬಳ, ಅರ್ಜಿ ಪ್ರಾರಂಭ

SBI Recruitment 2026, Big Opportunity: ₹3.75 ಲಕ್ಷ ಸಂಬಳದ ಭರ್ಜರಿ ಉದ್ಯೋಗ ಅವಕಾಶ! ಇಂದೇ ಅರ್ಜಿ ಸಲ್ಲಿಸಿ.

India Post Recruitment 2026, Big Opportunity: ₹34,800 ಸಂಬಳ | Degree ಪಾಸ್ ಆದವರಿಗೆ ಗೋಲ್ಡನ್ ಚಾನ್ಸ್!

SSC Recruitment 2026, Big Opportunity: SSC ನೇಮಕಾತಿ, 3003 ಹುದ್ದೆಗಳು | 10ನೇ ಪಾಸ್ ಆದ್ರೂ ಸರ್ಕಾರಿ ಕೆಲಸ – ಈಗಲೇ ಅರ್ಜಿ!

Best Vikas Bank Recruitment 2026: 46 ಹುದ್ದೆಗಳು | ಪದವಿ ಪಾಸಾದವರಿಗೆ ಸುವರ್ಣಾವಕಾಶ – ಇಂದೇ ಅರ್ಜಿ ಹಾಕಿ!

Big Central Bank Recruitment 2026: ಸೆಂಟ್ರಲ್ ಬ್ಯಾಂಕ್ ನೇಮಕಾತಿ, ₹1.2 ಲಕ್ಷ ಸಂಬಳ! 26 ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳು – ಅವಕಾಶ ಕೈ ತಪ್ಪಿಸಿಕೊಳ್ಳಬೇಡಿ

Big CBIC Recruitment 2026: 10ನೇ, 12ನೇ, ಡಿಗ್ರಿ ಪಾಸ್ ಅಭ್ಯರ್ಥಿಗಳಿಗೆ ಭರ್ಜರಿ ಕೇಂದ್ರ ಸರ್ಕಾರಿ ಉದ್ಯೋಗ ಅವಕಾಶ!

Big UCSL Recruitment 2026: ಉಡುಪಿ ಶಿಪ್‌ಯಾರ್ಡ್‌ನಲ್ಲಿ ಸೂಪರ್ವೈಸರ್ ಹುದ್ದೆಗಳು – ₹44,000 ಸಂಬಳ! ಈ ಅವಕಾಶ ತಪ್ಪಿಸಿಕೊಳ್ಳಬೇಡಿ

Leave a Comment