ಅಂತರ್ಜಾತಿ ವಿವಾಹ ಆದ ದಂಪತಿಗಳಿಗೆ ಸರ್ಕಾರದಿಂದ 3 ಲಕ್ಷಗಳ ವರೆಗೆ ಸಹಾಯಧನ (Inter Caste Marriage Compensation)
ಸ್ನೇಹಿತರೆ ನಮಸ್ಕಾರ ಭಾರತ ಒಂದು ಜಾತ್ಯತೀತ ರಾಷ್ಟ್ರ ಎಂಬುದು ನಮಗೆಲ್ಲ ತಿಳಿದಿದೆ ಅದರಂತೆಯೇ ಕರ್ನಾಟಕ ರಾಜ್ಯವು ಜಾತೀಯತೆಯನ್ನು ಹೋಗಲಾಡಿಸಲು ಜೊತೆಯಲ್ಲಿ ಸಾಮಾಜಿಕ ಸಮಾನತೆ ಹೊಂದುವ ನಿಟ್ಟಿನಲ್ಲಿ ಒಂದು ಅದ್ಭುತ ಯೋಜನೆಯನ್ನು ಜಾರಿಗೊಳಿಸಿದೆ ಅದೇ ಅಂತರ್ಜಾತಿ ವಿವಾಹ ಪ್ರತ್ಸಾಹ ಧನ ಯೋಜನೆ. ಈ ಯೋಜನೆಯ ಮೂಲಕ ಮದುವೆಯಾಗುವ ಗಂಡು ಅಥವಾ ಹೆಣ್ಣು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ್ದರೆ ಅವರಿಗೆ ಸರ್ಕಾರದಿಂದ ಅಂತರ್ಜಾತಿ ವಿವಾಹ ಪ್ರೋತ್ಸಾಹ ಧನವು ದೊರೆಯಲಿದೆ ಆದ್ದರಿಂದ ನೀವು ಅಥವಾ ನಿಮ್ಮ ಪರಿಚಯಸ್ತರು ಅಥವಾ ಕುಟುಂಬದ ಸದಸ್ಯರು ಅಂತರ್ಜಾತಿ ವಿವಾಹ ಆಗಿದ್ದರೆ ಸರ್ಕಾರದಿಂದ ಬರುವ ಈ ಸಹಾಯಧನವನ್ನು ಮಿಸ್ ಮಾಡಿಕೊಳ್ಳಬೇಡಿ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ಪಡೆದು ನೀವು ಅರ್ಹರಾಗಿದ್ದರೆ ಆದಷ್ಟು ಬೇಗ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಕೆಗೆ ಲಿಂಕನ್ನು ಕೆಳಗೆ ನೀಡಲಾಗಿದೆ
| ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯ ವೆಬ್ಸೈಟ್ : ಸಮಾಜ ಕಲ್ಯಾಣ ಇಲಾಖೆ |
Inter Caste Marriage Compensation ಯೋಜನೆಯ ಪ್ರಮುಖ ಉದ್ದೇಶಗಳು
- ಜಾತಿವಾದದ ವಿರುದ್ಧ ಹೋರಾಡುವುದು
- ಸಮಾಜದಲ್ಲಿ ಸಾಮರಸ್ಯವನ್ನು ಉತ್ತೇಜಿಸುವುದು
- ಅಂಚಿನಲ್ಲಿರುವ ಸಾಮಾಜಿಕ ಸಮುದಾಯಗಳ ಸಬಲೀಕರಣ
- ಆರ್ಥಿಕ ಬೆಂಬಲ ಒದಗಿಸುವುದು
- ಸಾಮಾಜಿಕ ಬದಲಾವಣೆಗೆ ಪ್ರೋತ್ಸಾಹಿಸುವುದು
ಈ Inter Caste Marriage Compensation ಯೋಜನೆಯನ್ನು ಪಡೆಯಲು ಇರುವ ಪ್ರಮುಖ ಷರತ್ತುಗಳು
ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು : ಅಂದರೆ ಇಬ್ಬರಲ್ಲಿ ಒಬ್ಬ ಸಂಗಾತಿಯು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು ಹಾಗೂ ಸಂಬಂಧಪಟ್ಟ ಜಾತಿ ಪ್ರಮಾಣ ಪತ್ರವನ್ನು ಹೊಂದಿರಬೇಕು ಈ ಪ್ರಮಾಣ ಪತ್ರವೂ ಚಾಲ್ತಿಯಲ್ಲಿರಬೇಕು
ಕಡ್ಡಾಯ ನೋಂದಣಿ : ಮದುವೆಯಾಗಿರುವ ಬಗ್ಗೆ ಮದುವೆ ನಂದನಾಧಿಕಾರಿಗಳ ಕಚೇರಿಯಲ್ಲಿ ಅಧಿಕೃತವಾಗಿ ವಿವಾಹನೊಂದಣಿ ಪತ್ರವನ್ನು ಪಡೆದಿರಬೇಕು
ಮೊದಲ ಮದುವೆಯಾಗಿರಬೇಕು : Inter Caste Marriage Compensation ಗೆ ಅರ್ಜಿ ಸಲ್ಲಿಸಲು ಹುಡುಗ ಹಾಗೂ ಹುಡುಗಿ ಗೆ ಸಂಬಂಧಿಸಿದಂತೆ ಈ ಮದುವೆಯು ಮೊದಲನೆ ಮದುವೆಯಾಗಿರಬೇಕು
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : ಮದುವೆಯಾದ ದಂಪತಿಗಳು ಮದುವೆಯಾದ 18 ತಿಂಗಳ ಒಳಗೆ ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ಮಾತ್ರ ಮಾನ್ಯ ಮಾಡಲಾಗುತ್ತದೆ ಈ ಅವಧಿ ಮುಗಿದ ನಂತರ ಅರ್ಜಿ ಸಲ್ಲಿಸಿದರೆ ಈ ಯೋಜನೆಗೆ ಅರ್ಹರ ಆಗುವುದಿಲ್ಲ
ಈ ಯೋಜನೆಯಿಂದ ಎಷ್ಟು ಹಣ ಸಿಗಬಹುದು
3,00,000/- ರೂಗಳು ( ಮೂರು ಲಕ್ಷ ) ಸಹಾಯಧನ : ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಯುವತಿಯನ್ನು ಹಿಂದೂ ಧರ್ಮದ ಬೇರೆ ಜಾತಿಯ ಯುವಕ ಮದುವೆ ಆದರೆ ವಧುವಿಗೆ ಈ ಮೊತ್ತವುವ Inter Caste Marriage Compensation ಮೂಲಕ ಸಿಗಲಿದೆ
2,50,000/- ರೂಗಳು (ಎರಡು ಲಕ್ಷದ ಐವತ್ತು ಸಾವಿರ ) ಸಹಾಯಧನ : ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಯುವಕನು ಹಿಂದೂ ಧರ್ಮದ ಬೇರೆ ಜಾತಿಯ ಯುವತಿಯನ್ನು ಮದುವೆಯಾದರೆ ಈ ಮೊತ್ತವು Inter Caste Marriage Compensation ಮೂಲಕ ಸಿಗುತ್ತದೆ
2,00,000/- ರೂಗಳು (ಎರಡು ಲಕ್ಷ ) ಸಹಾಯಧನ : ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಯುವಕ ಅಥವಾ ಯುವತಿಯರು ಅದೇ ಜಾತಿಯ ಒಳಗಿನ ವಿವಿಧ ಉಪಜಾತಿಗಳ ನಡುವೆ ಮದುವೆ ಆದರೆ ಈ ಮೊತ್ತವು Inter Caste Marriage Compensation ಮೂಲಕ ದೊರೆಯುತ್ತದೆ
ವಿಶೇಷ ಸೂಚನೆ : ಸರ್ಕಾರವು ನೀಡುವ ಈ Inter Caste Marriage Compensation ಮಟ್ಟದಲ್ಲಿ 50 %ರಷ್ಟು ಮಾತ್ರ ಅರ್ಜಿ ಯಶಸ್ವಿಯಾಗಿ ಪರಿಶೀಲಿಸಿದ ನಂತರ ನೀಡಲಾಗುತ್ತದೆ ಉಳಿದ 50 %ರಷ್ಟು ಹಣವನ್ನು ಮುಂದಿನ ಮೂರು ಆರ್ಥಿಕ ವರ್ಷಗಳ ಕಾಲ ಜಂಟಿ ಖಾತೆಯಲ್ಲಿ ಫಿಕ್ಸೆಡ್ ಡೆಪಾಸಿಟ್ ಅನ್ನು ಇರಿಸಲಾಗುತ್ತದೆ ಮೂರು ವರ್ಷಗಳ ನಂತರವೇ ಈ ಹಣವನ್ನು ದಂಪತಿಗಳು ಪಡೆಯಬಹುದಾಗಿರುತ್ತದೆ
ಈ Inter Caste Marriage Compensation ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಸಾಮಾನ್ಯ ಅರ್ಹತೆಗಳು
- ದಂಪತಿಗಳಲ್ಲಿ ಒಬ್ಬರು ಕಡ್ಡಾಯವಾಗಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ್ದು ಕಡ್ಡಾಯವಾಗಿ ಕರ್ನಾಟಕ ನಿವಾಸಿಗಳಾಗಿರಬೇಕು
- ದಂಪತಿಗಳ ವಾರ್ಷಿಕ ಆದಾಯವು 5 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇರಬೇಕು
- ದಂಪತಿಗಳು ಮದುವೆಯಾದ 18 ತಿಂಗಳ ಒಳಗಾಗಿ ಅರ್ಜಿ ಸಲ್ಲಿಸಬೇಕು
- ಮದುವೆಯಾಗಿರುವ ಬಗ್ಗೆ ನೋಂದಣಿ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯವಾಗಿದೆ
Inter Caste Marriage Compensation ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
- ವಧು ಹಾಗೂ ವರನ ಆಧಾರ್ ಕಾರ್ಡ್
- ಇಬ್ಬರ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಅಸ್ತಿತ್ವದಲ್ಲಿರುವುದು
- ವಿವಾಹ ನೊಂದಣಿ ಪತ್ರದ ಪ್ರತಿ
- ಮದುವೆಯ ಗುಂಪಿನ ಫೋಟೋ ಅಂದರೆ ( ವಧು ಮತ್ತು ವರರದು )
- ಅಭ್ಯರ್ಥಿಗಳ ಬ್ಯಾಂಕ್ ಖಾತೆಯ ವಿವರಗಳು
- ಮೊಬೈಲ್ ನಂಬರ್
ಕೆಲವೊಂದು ಸಂದರ್ಭಗಳಲ್ಲಿ Inter Caste Marriage Compensation ಅರ್ಜಿಗೆ ಇನ್ನೂ ಹೆಚ್ಚಿನ ದಾಖಲಾತಿಗಳನ್ನು ಕೇಳಲಾಗಬಹುದು
ಅರ್ಜಿ ಸಲ್ಲಿಸುವುದು ಹೇಗೆ ಇಲ್ಲಿದೆ ಮಾಹಿತಿ
- ಈ Inter Caste Marriage Compensation ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವವರು ಮೊದಲು ಅರ್ಹತ ಮಾನದಂಡಗಳನ್ನು ಓದಿ ಅರ್ಥೈಸಿಕೊಂಡು ನಂತರ ಅರ್ಜಿ ಸಲ್ಲಿಸಬಹುದಾಗಿರುತ್ತದೆ
- ಮೊದಲು ಕರ್ನಾಟಕದ ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು
- ವೆಬ್ಸೈಟ್ ತೆರೆದ ನಂತರ ಅಲ್ಲಿ ವಿವಾಹ ಪ್ರೋತ್ಸಾಹ ಧನ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ
- ನಂತರ ಬರುವ ಅಂತರ್ಜಾತಿ ವಿವಾಹದ ಪ್ರೋತ್ಸಾಹ ಧನ (Inter Caste Marriage Compensation) ಎಂಬ ಆಯ್ಕೆಯನ್ನು ಕ್ಲಿಕ್ ಮಾಡುವುದರ ಮೂಲಕ ನೀವು ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ಧನದ ಅರ್ಜಿಯನ್ನು ಸಲ್ಲಿಸಬಹುದು
- ಅರ್ಜಿಯು ತೆಗೆದ ನಂತರ ವಧು ಹಾಗೂ ವೈರರಿಗೆ ಸಂಬಂಧಿಸಿದ ವೈಯಕ್ತಿಕ ವಿವರಗಳು ಜಾತಿ ವಿವರಗಳು ಆದಾಯ ವಿವರಗಳು ಹಾಗೂ ಮದುವೆಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ
- ಕಡ್ಡಾಯವಾಗಿ ಕೇಳಲಾಗುವ ಎಲ್ಲಾ ದಾಖಲಾತಿಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಯಾವುದೇ ದಾಖಲಾತಿಯನ್ನು ಮಿಸ್ ಮಾಡಬೇಡಿ ಏಕೆಂದರೆ ಪ್ರೋತ್ಸಾಹ ಧನವು ಅನುಮೋದನೆ ಗೊಳ್ಳುವ ಸಂಭವತೆಯು ಕಡಿಮೆಯಾಗಬಹುದು ಆದುದರಿಂದ ಕೇಳಲಾಗು ಎಲ್ಲ ದಾಖಲಾತಿಗಳನ್ನು ಕಡ್ಡಾಯವಾಗಿ ಅಪ್ಲೋಡ್ ಮಾಡಿ
- ಈ ಅರ್ಜಿಯನ್ನು ಸಲ್ಲಿಸಿದ ನಂತರ ನಿಮಗೆ ಅಪ್ಲಿಕೇಶನ್ ಬರುತ್ತದೆ ಈ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದು ನೀವು ಸೇರುವ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಗೆ ಅಧಿಕಾರಿಗಳು ಕಚೇರಿಗೆ ಅರ್ಜಿಯನ್ನು ಸಲ್ಲಿಸುವುದು ಉತ್ತಮ ಈ ಅರ್ಜಿಯು ಪರಿಶೀಲನೆಗೊಂಡ ನಂತರ ಶೇಕಡ 50ರಷ್ಟು ಮೊತ್ತ ನಿಮ್ಮ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ ಉಳಿದ 50 ಪರ್ಸೆಂಟ್ ಹಣವು ದಂಪತಿಗಳ ಜಾಯಿಂಟ್ ಅಕೌಂಟ್ ನಲ್ಲಿ ಫಿಕ್ಸೆಡ್ ಡೆಪಾಸಿಟ್ ಗೆ ಮೂರು ವರ್ಷಗಳ ಕಾಲ ಇರಿಸಲಾಗಿದ್ದು ನಂತರ ಈ ಹಣವನ್ನು ತೆಗೆದುಕೊಳ್ಳಬಹುದಾಗಿರುತ್ತದೆ
ಅಂತರ್ಜಾತಿ ವಿವಾಹದ ಪ್ರೋತ್ಸಾಹಧನಕ್ಕೆ ಅರ್ಜಿ ಸಲ್ಲಿಸಲು : ಇಲ್ಲಿ ಕ್ಲಿಕ್ ಮಾಡಿ
ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು : ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕದಂತಹ ಒಂದು ಜಾತ್ಯಾತೀತ ರಾಜ್ಯದಲ್ಲಿ ಜಾತೀಯತೆಯನ್ನು ಹೋಗಲಾಡಿಸಲು ಹಾಗೂ ಸಾಮಾಜಿಕ ಭದ್ರತೆಯನ್ನು ಕಾಪಾಡಲು ಕರ್ನಾಟಕ ಸರ್ಕಾರವು ಅಂತರ್ಜಾತಿ ವಿವಾಹದ ಸಹಾಯಧನ ಯೋಜನೆಯನ್ನು ಜಾರಿಗೊಳಿಸಿದೆ ಈ ಯೋಜನೆಯ ಮೂಲಕ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಯುವಕ ಹಾಗೂ ಯುವತಿಯರು ಅಂತರ್ಜಾತಿ ವಿವಾಹದಲ್ಲಿ ಅವರಿಗೆ ಸರ್ಕಾರದಿಂದ ಎರಡು ಲಕ್ಷದಿಂದ 3,5 ವರೆಗೆ ಆರ್ಥಿಕ ಸಹಾಯಧನವು ದೊರೆಯಲಿದೆ ಆದುದರಿಂದ ನಿಮ್ಮ ಕುಟುಂಬದಲ್ಲಿ ಅಥವಾ ನಿಮ್ಮ ಊರಿನಲ್ಲಿ ಅಥವಾ ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾರಾದರೂ ಅಂತರ್ಜಾತಿ ವಿವಾಹ ಆಗಿದ್ದರೆ ಅವರಿಗೆ ಈ ಯೋಜನೆಯ ಬಗ್ಗೆ ತಿಳಿಸುವುದನ್ನು ಮರೆಯಬೇಡಿ.
FAQ’s Regarding Inter Caste Marriage Compensation:
1) ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು?
SC/ST ದಂಪತಿಗಳು ಅಥವಾ ಒಬ್ಬರು SC/ST ಇರಬೇಕು.
2) ಎಷ್ಟು ಪ್ರಮಾಣದಲ್ಲಿ ಸಹಾಯಧನ ಸಿಗುತ್ತದೆ?
₹2 ಲಕ್ಷದಿಂದ ₹3 ಲಕ್ಷವರೆಗೆ ಸಿಗುತ್ತದೆ.
3) ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಯಾವುದು?
ಮದುವೆಯಾದ 18 ತಿಂಗಳೊಳಗೆ ಅರ್ಜಿ ಸಲ್ಲಿಸಬೇಕು.
4) ಅರ್ಜಿ ಸಲ್ಲಿಕೆಗೆ ಯಾವ ಯಾವ ದಾಖಲೆಗಳು ಬೇಕು?
ಆಧಾರ್, ಜಾತಿ, ಆದಾಯ, ವಿವಾಹ ಪ್ರಮಾಣಪತ್ರ ಬೇಕು.
5) ಹಣ ಒಮ್ಮೆಲೇ ಸಿಗುತ್ತದೆಯೇ?
ಇಲ್ಲ, 50% ಮೊದಲು, ಉಳಿದ 50% ಮೂರು ವರ್ಷಗಳ ನಂತರ ದೊರೆಯುತ್ತದೆ.
Read More : Schemes