ಬೆಂಗಳೂರಿಗರಿಗೆ ಗುಡ್ ನ್ಯೂಸ್ ಎರಡನೇ ವಿಮಾನ ನಿಲ್ದಾಣಕ್ಕೆ ಸ್ಥಳ ಫಿಕ್ಸ್ ( New International Airport)
ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಕರ್ನಾಟಕದ ಮಹಾನಗರವಾದ ಬೆಂಗಳೂರಿನಲ್ಲಿ ದಿನೇ ದಿನೇ ಟ್ರಾಫಿಕ್ ಸಮಸ್ಯೆ ಹಾಗೂ ಅಂತರಾಷ್ಟ್ರೀಯ ಪ್ರಯಾಣಿಕರಿಗೆ ತೊಂದರೆ ಹೆಚ್ಚಾಗುತ್ತದೆ ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಬೆಂಗಳೂರಿನಲ್ಲಿ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು New International Airport ಅನ್ನು ಸ್ಥಾಪಿಸುವ ಯೋಜನೆಯನ್ನು ರೂಪಿಸಿದೆ ಮುಂದುವರೆದು ಬೆಂಗಳೂರಿನಲ್ಲಿ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಕಾರ್ಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಬೆಂಗಳೂರಿನ ದಕ್ಷಿಣ ಭಾಗದ ಕನಕಪುರ ರಸ್ತೆ ಕಡೆಯಲ್ಲಿ ಹೆಚ್ಚಿನ ಒಲವನ್ನು ನೀಡುತ್ತಿದೆ ಈ ಯೋಜನೆಗಾಗಿ ಎರಡು ಸ್ಥಳಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿತ್ತು ನೆಲಮಂಗಲದ ಬಳಿ ಹಾಗೂ ಕನಕಪುರದ ಬಳಿ ಆದರೆ ಈಗ ಕನಕಪುರ ರಸ್ತೆಯಲ್ಲಿನ ಚುಡಹಳ್ಳಿ ಹಾಗೂ ಸೋಮನಹಳ್ಳಿ ಎಂಬ ಭೂಪ್ರದೇಶವನ್ನು ಒಂದಾಗಿ ವಿಲೀನಗೊಳಿಸಿ ವಿಮಾನ ನಿಲ್ದಾಣವನ್ನು ನಿರ್ಮಿಸುವ ಅವಶ್ಯಕತೆಗೆ ತಕ್ಕಂತೆ ದೊಡ್ಡದಾದ ಹಾಗೂ ಪೂರ್ಣ ಪ್ರಮಾಣದಲ್ಲಿ ಜಾಗವನ್ನು ರೂಪಿಸಿ ಚಿಂತನೆ ನಡೆಸಿದೆ
New International Airport ಬಗ್ಗೆ ಮಾನ್ಯ ಉಪ ಮುಖ್ಯ ಮಂತ್ರಿಗಳ ಅಭಿಪ್ರಾಯ
ಕರ್ನಾಟಕ ರಾಜ್ಯದ ಮಾನ್ಯ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ಈಗಾಗಲೇ ಬೆಂಗಳೂರಿನ ದಕ್ಷಿಣ ಭಾಗದಲ್ಲೇ ವಿಮಾನ ನಿಲ್ದಾಣಕ್ಕೆ ಸೂಕ್ತ ಸ್ಥಳ ಎಂದು ತಿಳಿಸಿದ್ದು ನಿರ್ಮಾಣ ಹಾಗೂ ಆಡಳಿತ ಮಟ್ಟದಲ್ಲಿಯೂ ಇದೆ ಸ್ಥಳಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ ಉಪಮುಖ್ಯಮಂತ್ರಿಗಳು ಈಗಾಗಲೇ ಸಾರ್ವಜನಿಕವಾಗಿ ಹೇಳಿರುವಂತೆ ಸರಕಾರದ ಹಾಗೂ ಜನರಾಧ್ಯತೆ ಕನಕಪುರ ರಸ್ತೆ ಕಡೆಯಲ್ಲಿಯೇ ಇದೆ ವಿಮಾನ ಹಾರಾಟಕ್ಕೂ ಇದು ಸೂಕ್ತ ಜಾಗ ಎಂದು ಹೇಳಿದ್ದಾರೆ ಇದರಿಂದ ಉತ್ತಮ ಸಂಪರ್ಕವನ್ನು ಕಲ್ಪಿಸುವ ವ್ಯವಸ್ಥೆ ಆಗಲಿದೆ ಎಂದು ಅಧಿಕಾರಿಗಳು ಸಹ New International Airport ಬಗ್ಗೆ ಅಭಿಪ್ರಾಯಪಟ್ಟಿದ್ದಾರೆ
New International Airport ಗಾಗಿ ಸ್ಥಳದ ಅಧ್ಯಯನ
ಕರ್ನಾಟಕ ಸರ್ಕಾರದ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಹಾಗೂ ಕೆ ಐ ಎ ಡಿ ಬಿ ಅಧಿಕಾರಿಗಳ ಪ್ರಕಾರ ಶಾರ್ಟ್ ಲಿಸ್ಟ್ ಮಾಡಲಾಗಿರುವ ಕನಕಪುರ ರಸ್ತೆಯ ಜಾಗವನ್ನು ಅಧ್ಯಯನ ನಡೆಸಲು ಸಿಂಗಪುರ್ ದೇಶದ ಮೂಲದ ಕಂಪನಿಯನ್ನು ಸರ್ಕಾರ ಆಯ್ಕೆ ಮಾಡಿದೆ ಎಂಬ ಸುದ್ದಿ ಇದೆ, ಈ ಎರಡು ಭೂಪ್ರದೇಶಗಳನ್ನು ಒಟ್ಟುಗೂಡಿಸಿ ವಿಮಾನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟು ವಿಮಾನ ನಿಲ್ದಾಣದ ನಿರ್ಮಾಣ ನಿರ್ವಹಣೆ ಹಾಗೂ ಪ್ರಾಮುಖ್ಯತೆಗೆ ಹೆಚ್ಚಿನ ಅವಕಾಶ ಸಿಗಲಿದೆ ಎಂದು New International Airport ನಿರ್ಮಾಣದ ಬಗ್ಗೆ ಭಿಪ್ರಾಯಪಟ್ಟಿದ್ದಾರೆ
New International Airport ನಿರ್ಮಾಣಕ್ಕೆ ಏಕೆ ಕನಕಪುರ ರಸ್ತೆಯ ಪ್ರದೇಶವೇ ಸೂಕ್ತ
ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಮತ್ತು ತಮಿಳುನಾಡಿಗೆ ಇದು ಈ ಜಾಗವು ಹತ್ತಿರ ಇರುವುದರಿಂದ ಹೆಚ್ಚಿನ ಅನುಕೂಲವನ್ನು ಒದಗಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ ವಿಮಾನ ನಿಲ್ದಾಣಕ್ಕೆ ಹೆಚ್ಚು ಜಾಗದ ಅವಶ್ಯಕತೆ ಇರುವುದರಿಂದ ಈ ಪ್ರದೇಶದಲ್ಲಿ ಒಂದೇ ಕಡೆ ಅಗತ್ಯಕ್ಕೂ ಹೆಚ್ಚಿನ ಜಾಗವು ಲಭ್ಯವಾಗಲಿದೆ ಪ್ರಸ್ತುತದಲ್ಲಿ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ದೇವನಹಳ್ಳಿಯ ಬಳಿ ಇದ್ದು ಈ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣದ ಮೂಲಕ ಒತ್ತಡವನ್ನು ಕಡಿಮೆ ಮಾಡಬಹುದು ಹಾಗೂ ಅದರ ಅವಶ್ಯಕತೆ ಇದೆ ಎಂದು ಹೇಳಿದ್ದು ಕನಕಪುರ ರಸ್ತೆಯ ಈ ಪ್ರದೇಶವು New International Airport ನಿರ್ಮಾಣಕ್ಕೆ ಎಲ್ಲಾ ಪ್ರದೇಶಗಳಿಗಿಂತ ಹೆಚ್ಚು ಸೂಕ್ತವಾಗಿದೆ ಎಂದು ತಿಳಿಸಿದ್ದಾರೆ
ಪ್ರಸ್ತುತ ಸಂದರ್ಭದಲ್ಲಿ ಸರ್ಕಾರದ ಮುಂದೆ ಬೆಂಗಳೂರು ದಕ್ಷಿಣ ಭಾಗದ ಕನಕಪುರ ರಸ್ತೆಯಲ್ಲಿ ಇರುವ ಈ ಪ್ರದೇಶ ಹಾಗೂ ತುಮಕೂರು ನೆಲಮಂಗಲ ರಸ್ತೆಯ ನಡುವೆ ಇರುವ ಇನ್ನೊಂದು ಜಾಗ ಸೇರಿದಂತೆ ಒಟ್ಟು ಮೂರು ಆಯ್ಕೆಗಳಿವೆ ಆದರೆ ಕನಕಪುರ ರಸ್ತೆಯ ಪ್ರದೇಶವನ್ನು ಹೊರತುಪಡಿಸಿ ಮಿಕ್ಕ ಎರಡು ಪ್ರದೇಶದಲ್ಲಿ ವಿಸ್ತೀರ್ಣ ಕಡಿಮೆ ಇದ್ದು ಹಾಗೂ ಭೂ ಸ್ವಾದಿನ ಪ್ರಕ್ರಿಯೆಯು ಕಷ್ಟಕರವಾಗಲಿದೆ ಆದ್ದರಿಂದ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕನಿಷ್ಠ 4:30 ಸಾವಿರದಿಂದ 5000 ಎಕರೆ ಜಾಗವು ಅವಶ್ಯಕತೆ ಇರುವುದರಿಂದ ಕನಕಪುರ ರಸ್ತೆಯ ಜಾಗ ಸೂಕ್ತ ಎಂದು ತಿಳಿಸಲಾಗಿದ್ದು ಹಾಗೂ ವಾಯು ಪ್ರದೇಶದ ನಿಯಮಗಳಿಗೆ ಹಾಗೂ New International Airport ಗೆ ಕನಕಪುರ ರಸ್ತೆಯ ಜಾಗವು ಸೂಕ್ತವಾಗಿದೆ ಎಂದು ತಿಳಿಸುತ್ತಾರೆ
ಇತರ ಎರಡು ಭೂ ಪ್ರದೇಶಗಳಿಗಿಂದ ಈ ಪ್ರದೇಶಕ್ಕೆ ಹೆಚ್ಚಿನ ಪ್ರಾಮುಖ್ಯತೆ ಏಕೆ
ನೆಲಮಂಗಲ ಭಾಗಕ್ಕಿಂತ ಕನಕಪುರ ರಸ್ತೆ ಜಾಗವನ್ನು ಆಯ್ಕೆ ಮಾಡಿಕೊಳ್ಳಲು ಪ್ರಮುಖ ಕಾರಣ ಎಂದರೆ ಪರಿಸರದ ಮೇಲಾಗುವ ಹಾನಿ ಹಾಗೂ ಜನರಿಗೆ ಇರುವ ಬೇಡಿಕೆಯ ಪ್ರಮಾಣ ಅಂದರೆ ನೆಲಮಂಗಲದ ಸುತ್ತಮುತ್ತಲಿನ ಜಾಗದಲ್ಲಿ ಹೆಚ್ಚು ಮರ ಗಿಡಗಳು ಇದ್ದು ಪರಿಸರ ಇಲಾಖೆಯಿಂದ ಅನುಮತಿ ಪಡೆಯಲು ಹಾಗೂ New International Airport ನಿರ್ಮಿಸಲು ಸವಾಲು ಎದುರಿಸಬೇಕಾಗುತ್ತದೆ ಆದರೆ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ವಿಮಾನ ನಿಲ್ದಾಣದ ಅಗತ್ಯತೆ ಹಾಗೂ ಬೇಡಿಕೆ ತುಂಬಾ ಹೆಚ್ಚಾಗಿದ್ದು ತಮಿಳುನಾಡು ರಾಜ್ಯಕ್ಕೂ ಈ ವಿಮಾನ ನಿಲ್ದಾಣವು ಹತ್ತಿರವಾಗಲಿದೆ ಈ ಪ್ರದೇಶಗಳಲ್ಲಿ ಹೆಚ್ಚು ಕೈಗಾರಿಕಾ ಪ್ರದೇಶಗಳು ಇರುವುದರಿಂದ ಉತ್ತಮ ಸಾರಿಗೆ ಸಂಪರ್ಕ ತೊರೆಯಲಿದೆ ಈಗಾಗಲೇ ದೇವನಹಳ್ಳಿ ಭಾಗದಲ್ಲಿರುವ ಮೊದಲನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಉತ್ತರ ಭಾಗದಲ್ಲಿ ಇರುವುದರಿಂದ ದಕ್ಷಿಣ ಭಾಗದಲ್ಲಿ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗಬೇಕು ಎಂಬ ಬಗ್ಗೆ ಆಸಕ್ತಿ ಜಾಸ್ತಿ ಇದೆ
New International Airport ನಿರ್ಮಾಣಕ್ಕೆ ಪ್ರಮುಖ ಕಾರಣಗಳು
ಸಾಮರ್ಥ್ಯ ಹೆಚ್ಚಳ : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರೀಕ್ಷಿತ ಪ್ರಯಾಣಿಕರ ಸಾಮರ್ಥ್ಯವು 10 ವರ್ಷದೊಳಗೆ ಹೆಚ್ಚಾಗುವುದರಿಂದ ಸಾಮರ್ಥ್ಯವು ಹೆಚ್ಚಾಗಿ ಕೊರತೆ ಉಂಟಾಗಬಹುದು
ಅತಿ ವೇಗವಾಗಿ ಬೆಳೆಯುತ್ತಿರುವ ಸಂಚಾರ ಪದ್ಧತಿ : ಬೆಂಗಳೂರು ನಗರ ಆದಂತಹ ಪ್ರದೇಶದಲ್ಲಿ ಪ್ರಯಾಣಿಕರು ದಿನ ಹೆಚ್ಚಾಗುತ್ತಿದ್ದಾರೆ ಹಾಗೂ ಸರಕು ಸಾಗಣೆಯ ಪ್ರಕ್ರಿಯೆಯಲ್ಲಿ ಹೆಚ್ಚಿನ ಭಾಗದಲ್ಲಿ ವಾಯು ಸಂಪರ್ಕದ ಮೂಲಕ ಸರಕು ಸಾಗಣೆಯನ್ನು ಬಯಸುತ್ತಿದ್ದಾರೆ
ಪ್ರಾದೇಶಿಕ ಅವಶ್ಯಕತೆ : ಬೆಂಗಳೂರಿನಲ್ಲಿ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾಗುವುದರಿಂದ ಆ ಪ್ರದೇಶದ ಜನಗಳಿಗೆ ಪ್ರಯಾಣದ ಸಮಸ್ಯೆ ಕಡಿಮೆಯಾಗಿ ಸಮಯ ಉಳಿಯುತ್ತದೆ
ಉದ್ಯೋಗ ಸೃಷ್ಟಿ : ವಿಮಾನ ನಿಲ್ದಾಣ ಸ್ಥಾಪನೆ ಆಗುವುದರಿಂದ ಅಲ್ಲಿನ ಸ್ಥಳೀಯ ಜನರಿಗೆ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ
ನಗರದ ಬೆಳವಣಿಗೆ ಮತ್ತು ಸಂಪರ್ಕ : ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ನಿರ್ಮಾಣವಾಗುವುದರಿಂದ ಪ್ರಸ್ತುತ ಇರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ದಟ್ಟಣೆಯನ್ನು ಕಡಿಮೆ ಮಾಡಿ ಅವಲಂಬನೆಯನ್ನು ಸಹ ಕಡಿಮೆಗೊಳಿಸುತ್ತದೆ
ಪ್ರಾದೇಶಿಕ ಅಭಿವೃದ್ಧಿ : ಎರಡನೇ ವಿಮಾನ ನಿಲ್ದಾಣವು ನಿರ್ಮಾಣಗೊಳ್ಳುವುದರಿಂದ ಬೆಂಗಳೂರು ನಗರದ ಒಟ್ಟಾರೆ ಅಭಿವೃದ್ಧಿಗೆ ಸಹಕಾರ ದೊರೆತಂತಾಗುತ್ತದೆ ಹಾಗೂ ಜನರ ಜೀವನ ಮಟ್ಟ ಉತ್ತಮವಾಗುತ್ತದೆ
ಕನಕಪುರ ರಸ್ತೆಯ ಜಾಗವನ್ನು ವಿಮಾನ ನಿಲ್ದಾಣದ ಯೋಜನೆಗೆ New International Airport ಕಾರ್ಯ ಸಾಧ್ಯತೆ ಹಾಗೂ ಸರ್ವೆ ಮಾಡಲು ಕರ್ನಾಟಕ ಸರ್ಕಾರವು ಸಿಂಗಾಪುರ ಮೂಲದ ಮೈನಾಡ್ ಎಪಿಸಿಎಂ ಎಂಬ ವಿಮಾನ ನಿಲ್ದಾಣ ನಿರ್ಮಾಣ ಸಲಹಾ ಸಂಸ್ಥೆಗೆ 4.96 ಕೋಟಿ ರೂಗಳ ಟೆಂಡರ್ ಅನ್ನು ನೀಡಿದೆ ಈ ಸಂಸ್ಥೆಯು ಮುಂದಿನ ನಾಲ್ಕರಿಂದ ಐದು ತಿಂಗಳಲ್ಲಿ ಮೂರು ಸ್ಥಳಗಳ ಅನುಕೂಲ ಅನಾನುಕೂಲ ತಾಂತ್ರಿಕ ಸವಾಲುಗಳು ಪ್ರದೇಶದ ನಿಬಂಧ ಪರಿಸರದ ಹಾನಿ ನಿರ್ಮಾಣದಲ್ಲಿ ಎದುರಾಗಬಹುದಾದ ಸಮಸ್ಯೆಗಳು ವಾಯು ಪ್ರದೇಶದ ತೊಂದರೆಗಳು ಭವಿಷ್ಯದಲ್ಲಿ ಪ್ರಯಾಣಿಕರಿಗೆ ಎದುರಾಗಬಹುದಾದ ಟ್ರಾಫಿಕ್ ಸಮಸ್ಯೆ ಮುಂತಾದ ಸಮಗ್ರ ಮಟ್ಟದ ವರದಿಯನ್ನು ನೀಡಲು ಯೋಚಿಸಿದೆ ಈ ಎಲ್ಲ ವರದಿಗಳು ಬಂದ ನಂತರವೇ ಅಂತಿಮ ನಿರ್ಧಾರವು ಬಂದರು ಪ್ರಸ್ತುತ ತಯಾರಿಗಳ ಪ್ರಕಾರ ಕನಕಪುರ ರಸ್ತೆಯ ಜಾಗವೇ ಉತ್ತಮ ಹಾಗೂ ಫೈನಲ್ ಎಂಬಂತೆ ತೋರುತ್ತಿದೆ
ಒಟ್ಟಾರೆಯಾಗಿ ಹೇಳುವುದಾದರೆ ಕರ್ನಾಟಕ ಸರ್ಕಾರವು ಜನರ ಪ್ರಯಾಣಕ್ಕೆ ಅನುಕೂಲವಾಗುವಂತೆ ಬೆಂಗಳೂರು ನಗರದ ದಕ್ಷಿಣ ಭಾಗದಲ್ಲಿ New International Airport ನಿಲ್ದಾಣವನ್ನು ನಿರ್ಮಿಸುವ ಕಾರ್ಯ ಯೋಜನೆಯನ್ನು ರೂಪಿಸಿದ್ದು ಈ ಯೋಜನೆಯು ಕೆಂಪೇಗೌಡ ಅಂತರಾಷ್ಟ್ರೀಯ ನಿಲ್ದಾಣದ ದಟ್ಟಣೆಯನ್ನು ನಿವಾರಿಸುವುದಿಲ್ಲದೆ ಇಲ್ಲಿನ ಪ್ರಾದೇಶಿಕತೆಗೆ ಹೆಚ್ಚು ಅನುಕೂಲವಾಗಲಿದೆ ಅದರ ಜೊತೆಯಲ್ಲಿ ಈ ಪ್ರದೇಶವು ತಮಿಳುನಾಡಿಗೆ ಹತ್ತಿರ ಇರುವುದರಿಂದ ಅಲ್ಲಿನ ಕೈಗಾರಿಕಾ ಪ್ರದೇಶಗಳಿಗೂ ಹೆಚ್ಚಿನ ಸಂಪರ್ಕ ಸೌಲಭ್ಯ ದೊರೆತಂತಾಗುತ್ತದೆ ವಿಮಾನ ನಿಲ್ದಾಣ ನಿರ್ಮಾಣ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಇದರಿಂದ ಬೆಂಗಳೂರಿನ ಜನತೆಗೆ ಹೆಚ್ಚು ಅನುಕೂಲ ಆಗಲಿ ಇದ್ದು ಪ್ರಯಾಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆಯಾಗಲಿವೆ
ಇದೇ ರೀತಿಯ ಮುಖ್ಯ ಮಾಹಿತಿ ಹಾಗೂ ಸಂದೇಶಗಳನ್ನು ನಮ್ಮ ಪುಟದಲ್ಲಿ ಹಾಕುತ್ತಿರುತ್ತೇವೆ ಆದ್ದರಿಂದ ನಮ್ಮ ಪುಟವನ್ನು ದೈನಂದಿನ ನೋಡುವುದರ ಮೂಲಕ ಉತ್ತಮ ಮಾಹಿತಿಯನ್ನು ಪಡೆಯಬಹುದಾಗಿರುತ್ತದೆ
ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು : ಇಲ್ಲಿ ಕ್ಲಿಕ್ ಮಾಡಿ
Read More News Related TO This Post :
Wodeyar Train Stop: ರಾಮನಗರಕ್ಕೆ ಬಿಗ್ ರಿಲೀಫ್: ಒಡೆಯರ್ ಎಕ್ಸ್ಪ್ರೆಸ್ ರೈಲು ನಿಲುಗಡೆಗೆ ಕೇಂದ್ರ ಅಸ್ತು!