KEA VAO ನೇಮಕಾತಿ ಮೂಲಕ 572 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ
ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ ಕರ್ನಾಟಕದ ಲಕ್ಷಾಂತರ ಉದ್ಯೋಗ ಆಕಾಂಕ್ಷಿಗಳಿಗೆ ಕರ್ನಾಟಕ ಸರ್ಕಾರವು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಅತ್ಯುತ್ತಮ ಅವಕಾಶವನ್ನು ನೀಡಿದೆ. ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗಳ ನೇರ ನೇಮಕಾತಿಗೆ ಅಧಿಕೃತ ಅಧಿಸೂಚನೆ ಪ್ರಕಟಗೊಂಡಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 572 VAO ಹುದ್ದೆಗಳನ್ನು ಭರ್ತಿ ಮಾಡಲು ಆನ್ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಿದೆ
ಗ್ರಾಮ ಮಟ್ಟದಲ್ಲಿ ಸರ್ಕಾರದ ವಿವಿಧ ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸುವ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಪ್ರಮುಖ ಹುದ್ದೆಯಾಗಿರುವ ಗ್ರಾಮ ಆಡಳಿತ ಅಧಿಕಾರಿಗೆ (VAO) ಉತ್ತಮ ವೇತನ, ಉದ್ಯೋಗ ಭದ್ರತೆ, ಬಡ್ತಿ ಅವಕಾಶ ಹಾಗೂ ಸರಕಾರದ ವಿವಿಧ ಸೌಲಭ್ಯಗಳು ದೊರೆಯುತ್ತವೆ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಈ ನೇಮಕಾತಿಯು ಉತ್ತಮ ಅವಕಾಶವಾಗಿದೆ
ಪ್ರಸ್ತುತ ಲೇಖನದಲ್ಲಿVAO ಹುದ್ದೆಯ ವಿವರ, ವಯೋಮಿತಿ ಮತ್ತು ವಯೋಮಿತಿ ಸಡಿಲಿಕೆಯ ಮಾಹಿತಿ, ವೇತನ ಶ್ರೇಣಿ, ಆನ್ಲೈನ್ ಅರ್ಜಿ ಶುಲ್ಕ, ಅರ್ಜಿ ಸಲ್ಲಿಕೆ ವಿಧಾನ, ಆಯ್ಕೆ ವಿಧಾನ, ಪರೀಕ್ಷಾ ಸಿಲಬಸ್, 90 ದಿನಗಳ ಅಧ್ಯಯನದ ವೇಳಾಪಟ್ಟಿ, ಪ್ರಶ್ನೋತ್ತರಗಳು ಹಾಗೂ ಕೊನೆಯ ದಿನಾಂಕಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ.
ಆದ್ದರಿಂದ ಈ ಲೇಖನವನ್ನು ಸಂಪೂರ್ಣವಾಗಿ ಓದುವುದರ ಮೂಲಕ ಎಲ್ಲ ಮಾಹಿತಿಯನ್ನು ತಿಳಿದು ಅರ್ಜಿ ಸಲ್ಲಿಸಬಹುದಾಗಿರುತ್ತದೆ
VAO ನೇಮಕಾತಿಯ ಮುಖ್ಯಾಂಶಗಳು
| ವಿವರಗಳು | ಸಂಬಂಧಿಸಿದ ಮಾಹಿತಿ |
|---|---|
| ನೇಮಕಾತಿ ಸಂಸ್ಥೆ | ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) |
| ಇಲಾಖೆ | ಕರ್ನಾಟಕ ಕಂದಾಯ ಇಲಾಖೆ |
| ಹುದ್ದೆಯ ಹೆಸರು | ಗ್ರಾಮ ಆಡಳಿತ ಅಧಿಕಾರಿ (VAO) |
| ಒಟ್ಟು ಹುದ್ದೆಗಳ ಸಂಖ್ಯೆ | 572 ಹುದ್ದೆಗಳು |
| ಉದ್ಯೋಗ ಸ್ಥಳ | ಕರ್ನಾಟಕದಾದ್ಯಂತ |
| ಅರ್ಜಿ ಸಲ್ಲಿಸುವ ವಿಧಾನ | ಆನ್‌ಲೈನ್ ಮೂಲಕ ಮಾತ್ರ |
| ಆಯ್ಕೆ ವಿಧಾನ | ಸ್ಪರ್ಧಾತ್ಮಕ ಪರೀಕ್ಷೆ, ದಾಖಲೆ ಪರಿಶೀಲನೆ, ಅಂತಿಮ ಆಯ್ಕೆ ಪಟ್ಟಿ |
| ವೇತನ ಶ್ರೇಣಿ | 34,100/- ರೂಗಳಿಂದ 67,600/- ರೂಗಳ ವರೆಗೆ |
ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆ ಎಂದರೆ ಏನು
ಗ್ರಾಮ ಆಡಳಿತ ಅಧಿಕಾರಿಯವರು (VAO) ಗ್ರಾಮ ಮಟ್ಟದಲ್ಲಿ ಕಂದಾಯ ಇಲಾಖೆಯ ಪ್ರಮುಖ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ. ನಿರ್ದಿಷ್ಟ ಗ್ರಾಮಕ್ಕೆ ಸಂಬಂಧಿಸಿದ ಭೂ ದಾಖಲೆಗಳ ನಿರ್ವಹಣೆ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ನಿವಾಸ ಪ್ರಮಾಣ ಪತ್ರ, ಪಹಣಿ ದಾಖಲೆಗಳು ಸೇರಿದಂತೆ ಸರ್ಕಾರದ ಇತರ ವಿವಿಧ ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸುವ ಮತ್ತು ಕೆಲಸ ಮಾಡುವ ಜವಾಬ್ದಾರಿ ಈ ಅಧಿಕಾರಿಗಳದ್ದಾಗಿರುತ್ತದೆ
ಇದರ ಜೊತೆಯಲ್ಲಿ ಸಂಬಂಧಪಟ್ಟ ಗ್ರಾಮಗಳಲ್ಲಿ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಮಾಡುವುದು, ಇತರ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಸಾರ್ವಜನಿಕರಿಗೆ ದಾಖಲೆಗಳನ್ನು ಒದಗಿಸುವುದು ಮತ್ತು ಕಂದಾಯ ಇಲಾಖೆಯ ಎಲ್ಲಾ ಸೇವೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ಒದಗಿಸುವ ಮತ್ತು ನಿರ್ವಹಿಸುವ ಜವಾಬ್ದಾರಿಯು ಸಹ VAO ಗಳಿಗೆ ಇರುತ್ತದೆ.
ಈ ಕಾರಣದಿಂದಾಗಿ VAO ಹುದ್ದೆಯನ್ನು ಕರ್ನಾಟಕ ಸರ್ಕಾರವು ಗ್ರೂಪ್- ಸಿ ವೃಂದದಡಿಯಲ್ಲಿ ಪ್ರಮುಖ ಸರ್ಕಾರಿ ಹುದ್ದೆಯಾಗಿ ಪರಿಗಣಿಸಿದೆ
VAO ನೇಮಕಾತಿ ಹುದ್ದೆಗಳ ವಿವರ
ಈ ನೇಮಕಾತಿ ಅಡಿಯಲ್ಲಿ ಒಟ್ಟು 572 VAO ಹುದ್ದೆಗಳು ಖಾಲಿ ಇದ್ದು ಅವುಗಳನ್ನು ಈ ಕೆಳಕಂಡಂತೆ ವೃಂದವಾರು ವಿಂಗಡಿಸಲಾಗಿದೆ
| ಉಳಿಕೆ ಮೂಲವೃಂದ | 505 ಹುದ್ದೆಗಳು |
| ಕಲ್ಯಾಣ ಕರ್ನಾಟಕ ವೃಂದ | 67 ಹುದ್ದೆಗಳು |
| ಒಟ್ಟು ಹುದ್ದೆಗಳು | 572 |
ಜಿಲ್ಲಾವಾರು ಹುದ್ದೆಗಳ ವಿವರ
ಈ ನೇಮಕಾತಿಯಲ್ಲಿ ಖಾಲಿ ಇರುವ VAO ಹುದ್ದೆಗಳನ್ನು ಜಿಲ್ಲಾವಾರು ವಿಂಗಡಿಸಲಾಗಿದೆ ಅವುಗಳ ಮಾಹಿತಿ ಈ ಕೆಳಕಂಡಂತಿದೆ
| ಜಿಲ್ಲೆಯ ಹೆಸರು | ಖಾಲಿಯಿರುವ ಹುದ್ದೆಗಳ ಸಂಖ್ಯೆ |
| ಕಲಬುರಗಿ (ಗುಲ್ಬರ್ಗಾ) | 40 |
| ಬೀದರ್ | 21 |
| ರಾಯಚೂರು | 12 |
| ಬೆಂಗಳೂರು ನಗರ | 20 |
| ಬೆಂಗಳೂರು ಗ್ರಾಮಾಂತರ | 29 |
| ಚಿತ್ರದುರ್ಗ | 15 |
| ಚಿಕ್ಕಬಳ್ಳಾಪುರ | 21 |
| ತುಮಕೂರು | 50 |
| ಶಿವಮೊಗ್ಗ | 18 |
| ಕೋಲಾರ | 22 |
| ಬೆಂಗಳೂರು ದಕ್ಷಿಣ (ರಾಮನಗರ) | 30 |
| ಮೈಸೂರು | 45 |
| ಮಂಡ್ಯ | 50 |
| ಹಾಸನ | 35 |
| ಉಡುಪಿ | 10 |
| ದಕ್ಷಿಣ ಕನ್ನಡ | 20 |
| ಚಾಮರಾಜನಗರ | 31 |
| ಚಿಕ್ಕಮಗಳೂರು | 10 |
| ಬೆಳಗಾವಿ | 48 |
| ಬಾಗಲಕೋಟೆ | 16 |
| ಗದಗ | 14 |
| ಹಾವೇರಿ | 15 |
| ಒಟ್ಟು | 572 |
ಅಭ್ಯರ್ಥಿಗಳು ಆನ್ಲೈನ್ ಮೂಲಕ VAO ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಓದಿ ಜಿಲ್ಲೆಗಳಲ್ಲಿ ಎಷ್ಟು ಹುದ್ದೆಗಳಿವೆ ಎಂಬುದನ್ನು ಪರಿಶೀಲಿಸಿದ ನಂತರ ಅರ್ಜಿ ಸಲ್ಲಿಸುವುದು ಸೂಕ್ತ
ವಿದ್ಯಾರ್ಹತೆ
ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ನಿಗದಿಪಡಿಸಿರುವ ವಿದ್ಯಾರ್ಹತೆಯನ್ನು ಹೊಂದಿರಬೇಕಾಗುತ್ತದೆ
ಅಭ್ಯರ್ಥಿಗಳು ಪಿಯುಸಿ ಅಥವಾ ತತ್ಸಮನ ವಿದ್ಯಾರ್ಹತೆಯನ್ನು ಹೊಂದಿರಬೇಕಾಗುತ್ತದೆ
ತತ್ಸಮಾನ ವಿದ್ಯಾರ್ಹತೆಯ ವಿವರಗಳು
- ಸಿಬಿಎಸ್‌ಸಿ ಮತ್ತು ಐಸಿಐಸಿ ಮಂಡಳಿಯು ನಡೆಸುವ ಕ್ಲಾಸ್ 12 ಪರೀಕ್ಷೆಗಳು ಸೇರಿವೆ
- ಮೂರು ವರ್ಷಗಳ ಡಿಪ್ಲೋಮ ವಿದ್ಯಾರ್ಹತೆ ಅಥವಾ ಎರಡು ವರ್ಷಗಳ ಐಟಿಐ ಕೋರ್ಸ್ ಜೊತೆಯಲ್ಲಿ ಒಂದು ಭಾಷಾ ಕೋರ್ಸ್ ಮತ್ತು ಒಂದು ಯಾವುದಾದರೂ ಶೈಕ್ಷಣಿಕ ವಿಷಯದಲ್ಲಿ ಉತ್ತೀರ್ಣರಾಗಿರಬೇಕು
- ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ವತಿಯಿಂದ ನಡೆಸುವ ಉನ್ನತ ಪ್ರೌಢ ಶಿಕ್ಷಣ ಕೋರ್ಸ್
ಸೂಚನೆ : ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ನಿಗದಿತ ವಿದ್ಯಾರ್ಹತೆಗೆ ಸಂಬಂಧಿಸಿದ ಅಂಕಪಟ್ಟಿಯನ್ನು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಈ ನೇಮಕಾತಿ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ
VAO ನೇಮಕಾತಿ ವಯೋಮಿತಿ ವಿವರ
VAO ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ ವಯಸ್ಸು 18 ವರ್ಷಗಳು ಪೂರ್ಣಗೊಂಡಿರಬೇಕು
ಕರ್ನಾಟಕ ಸರ್ಕಾರದ ವಯೋಮಿತಿ ಸಡಿಲಿಕೆ ಆದೇಶದಂತೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ ಐದು ವರ್ಷಗಳ ಸಡಿಲಿಕೆಯನ್ನು ನೀಡಲಾಗಿದ್ದು ಪರಿಷ್ಕೃತಗೊಂಡಿರುವ ಗರಿಷ್ಠ ವಯೋಮಿತಿ ವಿವರವು ಈ ಕೆಳಕಂಡಂತಿದೆ
- ಸಾಮಾನ್ಯ ವರ್ಗದ ಅಭ್ಯರ್ಥಿಗಳು: 40 ವರ್ಷಗಳು
- ಪ್ರವರ್ಗ 2ಎ 2ಬಿ 3ಎ 3ಬಿ ಅಭ್ಯರ್ಥಿಗಳು: 43 ವರ್ಷಗಳು
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ರ ಅಭ್ಯರ್ಥಿಗಳು: 45 ವರ್ಷಗಳು
ವಿಶೇಷ ವರ್ಗಗಳಿಗೆ ವಯೋಮಿತಿ ಸಡಿಲಿಕೆ
ಕೆಲವು ವಿಶೇಷ ವರ್ಗದ ಅಭ್ಯರ್ಥಿಗಳಿಗೆ ಹೆಚ್ಚುವರಿ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ ಅವುಗಳೆಂದರೆ;
- ಮಾಜಿ ಸೈನಿಕರು ಸೈನ್ಯದಲ್ಲಿ ಸೇವೆ ಸಲ್ಲಿಸಿದ ಅವಧಿಯ ಜೊತೆಗೆ ಹೆಚ್ಚುವರಿ 3 ವರ್ಷಗಳ ವಯೋಮಿತಿ ಸಡಿಲಿಕೆ
- ವಿಶೇಷ ಚೇತನ ಅಭ್ಯರ್ಥಿಗಳು ಗರಿಷ್ಠ 10 ವರ್ಷಗಳ ವಯೋಮಿತಿ ಸಡಿಲಿಕೆ
- ವಿಧವಾ ಅಭ್ಯರ್ಥಿಗಳು ಸರ್ಕಾರದ ನಿಯಮಗಳಿಗೆ ಅನುಗುಣವಾಗಿ 10 ವರ್ಷಗಳ ವಯೋಮಿತಿ ಸಡಿಲಿಕೆ
ಸೂಚನೆ : ಈ ಸೌಲಭ್ಯಗಳನ್ನು ಪಡೆಯಲು ಸರ್ಕಾರದಿಂದ ಸಂಬಂಧಪಟ್ಟ ಪ್ರಮಾಣ ಪತ್ರಗಳನ್ನು ಹೊಂದಿರಬೇಕಾಗುತ್ತದೆ
ವೇತನ ಶ್ರೇಣಿ
VAO ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಕರ್ನಾಟಕ ಸರ್ಕಾರದ ಸಾಮಾನ್ಯ ನೇಮಕಾತಿಯ ವೇತನದ ನಿಯಮಗಳ ಪ್ರಕಾರ ಆಕರ್ಷಕ ಸಂಬಳವನ್ನು ನೀಡಲಾಗುತ್ತದೆ
ವೇತನ ಶ್ರೇಣಿಯ ಮಾಹಿತಿ: ರೂ. 34100-800-35700-900-39300-1000-43300-1125-47800-1250-52800-1375-58300-1500-64300-1650-67600
ಇದರ ಜೊತೆಯಲ್ಲಿ ಸರ್ಕಾರಿ ನೌಕರರಿಗೆ ವಿವಿಧ ರೀತಿಯ ಭತ್ಯೆಗಳು ಮತ್ತು ಸೌಲಭ್ಯಗಳು ಲಭ್ಯವಾಗುತ್ತವೆ ಅವುಗಳಲ್ಲಿ ಪ್ರಮುಖವಾದವು
- ತುಟ್ಟಿಭತ್ಯೆ (DA)
- ಮನೆ ಬಾಡಿಗೆ ಭತ್ಯೆ (HRA)
- ವೈದ್ಯಕೀಯ ಸೌಲಭ್ಯ
- ಪ್ರಯಾಣ ಭತ್ಯೆ
- ವಾರ್ಷಿಕ ವೇತನ ಹೆಚ್ಚಳ
- ರಾಷ್ಟ್ರೀಯ ಪಿಂಚಣಿ ಯೋಜನೆ (NPS)
- ಸರ್ಕಾರಿ ರಜೆಗಳು
- ಬಡ್ತಿ ಅವಕಾಶ
ನೇಮಕಗೊಂಡ VAO ಅಭ್ಯರ್ಥಿಗಳು ಮೊದಲ ಎರಡು ವರ್ಷಗಳ ಕಾಲ ಖಾಯಂ ಪೂರ್ವ ಅವಧಿಯಲ್ಲಿ ಸೇವೆ ಸಲ್ಲಿಸಬೇಕಾಗುತ್ತದೆ ನಂತರ ನಿಯಮಗಳಿಗೆ ಅನುಗುಣವಾಗಿ ಹುದ್ದೆಗಳನ್ನು ಖಾಯಂ ಮಾಡಲಾಗುತ್ತದೆ
VAO ನೇಮಕಾತಿ ಆನ್ಲೈನ್ ಅರ್ಜಿ ಶುಲ್ಕ
ಈ VAO ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೀಸಲಾತಿ ವರ್ಗಕ್ಕೆ ಅನ್ವಯವಾಗುವಂತೆ ಅರ್ಜಿ ಶುಲ್ಕವನ್ನು ಪಾಲಿಸಬೇಕಾಗುತ್ತದೆ ಅರ್ಜಿ ಶುಲ್ಕವನ್ನು ಕೇವಲ ಆನ್ಲೈನ್ ಮೂಲಕ ಮಾತ್ರ ಪಾವತಿಸಬೇಕಾಗುತ್ತದೆ
ಸಾಮಾನ್ಯ ಹಾಗೂ ಇತರ ಹಿಂದುಳಿದ ವರ್ಗಗಳ 2ಎ 2ಬಿ 3ಎ 3ಬಿ ಅಭ್ಯರ್ಥಿಗಳು: 750/- ರೂಗಳು
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕ ಅಭ್ಯರ್ಥಿಗಳು, ಹಾಗೂ ತೃತೀಯ ಲಿಂಗ ಅಭ್ಯರ್ಥಿಗಳು: 500/ ರೂಗಳು
ವಿಕಲಚೇತನ ಅಭ್ಯರ್ಥಿಗಳು: 250/- ರೂಗಳು
ಗಮನಿಸಿ : ಒಮ್ಮೆ ಪಾವತಿ ಮಾಡಲಾದ ಅರ್ಜಿ ಶುಲ್ಕವನ್ನು ಯಾವುದೇ ಸಂದರ್ಭದಲ್ಲಿಯೂ ಮರುಪಾವತಿ ಮಾಡಲಾಗುವುದಿಲ್ಲ ಆದುದರಿಂದ ಅರ್ಜಿ ಶುಲ್ಕ ಪಾವತಿಸುವ ಮೊದಲು ಎಚ್ಚರಿಕೆಯಿಂದ ವಿವರಗಳನ್ನು ಪರಿಶೀಲಿಸಿ
VAO ನೇಮಕಾತಿಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು
- ಎಸ್ ಎಸ್ ಎಲ್ ಸಿ ಅಂಕಪಟ್ಟಿ
- ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯ ಅಂಕ ಪಟ್ಟಿಗಳು
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ನಿವಾಸ ಪ್ರಮಾಣ ಪತ್ರ
- ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಅಭ್ಯರ್ಥಿಯ ಸಹಿ
- ಮೊಬೈಲ್ ಸಂಖ್ಯೆ
- ಇ-ಮೇಲ್ ಐಡಿ
- ಮೀಸಲಾತಿ ದಾಖಲೆಗಳು
- ದಾಖಲೆಗಳನ್ನು ಸ್ಪಷ್ಟವಾಗಿ ಸರಿಯಾದ ರೀತಿ ಕಾಣುವಂತೆ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವುದು ಕಡ್ಡಾಯವಾಗಿದೆ
ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡುವಾಗ ಮತ್ತು ಅಪ್ಲೋಡ್ ಮಾಡುವಾಗ ಗಮನಿಸಬೇಕಾದ ಪ್ರಮುಖ ವಿಷಯಗಳು
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ನಿಗದಿತ ಗಾತ್ರದ ಫೈಲ್ ಗಳನ್ನು ಮಾತ್ರ ಅಪ್ಲೋಡ್ ಮಾಡಬೇಕಾಗುತ್ತದೆ ಈ ನಿಯಮಗಳನ್ನು ಹೊರತುಪಡಿಸಿ ಯಾವುದೇ ಫೈಲ್ ಅಪ್ಲೋಡ್ ಮಾಡಲು ಪ್ರಯತ್ನಿಸಿದರೆ ಅದು ವಿಫಲವಾಗುತ್ತದೆ.
ಭಾವಚಿತ್ರ
- JPEG ಫಾರ್ಮ್ಯಾಟ್ ಮಾತ್ರ
- 50KB ಇಂದ 200KB
ಸಹಿ
- JPEG ಫಾರ್ಮ್ಯಾಟ್ ಮಾತ್ರ
- 50KB ಇಂದ 70KB
ಸರಿಯಾಗಿ ಕಾಣಿಸದ ಅಥವಾ ಸ್ಪಷ್ಟವಾಗಿರದ ಚಿತ್ರಗಳನ್ನು ಅಪ್ಲೋಡ್ ಮಾಡಿದರೆ ಅರ್ಜಿ ತಿರಸ್ಕೃತವಾಗುವ ಸಾಧ್ಯತೆ ಇರುತ್ತದೆ
ಆನ್ಲೈನ್ ಅರ್ಜಿ ಸಲ್ಲಿಕೆ ವಿಧಾನ
ಹಂತ-1: ಈ VAO ನೇಮಕಾತಿಗೆ ಅರ್ಜಿ ಸಲ್ಲಿಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಮೊದಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಬೇಕು ಭೇಟಿ ನೀಡಿದ ನಂತರ ನೇಮಕಾತಿ ವಿಭಾಗಕ್ಕೆ ಹೋಗಿ ಅಲ್ಲಿ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ ಎಂಬ ಲಿಂಕಿನ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ
ಹಂತ-2: ಮುಖಪುಟದಲ್ಲಿ ಕಾಣುವ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ನಂತರ ಆನ್ಲೈನ್ ಅರ್ಜಿ ಸಲ್ಲಿಕೆ ಲಿಂಕ್ ಎಂಬಲ್ಲಿ ಕ್ಲಿಕ್ ಮಾಡಬೇಕಾಗುತ್ತದೆ
ಹಂತ-3: ಆನ್ಲೈನ್ ಅರ್ಜಿ ಲಿಂಕ್ ಅನ್ನು ತೆರೆದ ನಂತರ ಅಲ್ಲಿ ಕೇಳಲಾಗುವ ವೈಯಕ್ತಿಕ ವಿವರಗಳು, ಸಂವಹನ ವಿವರಗಳು, ಮೀಸಲಾತಿ ವಿವರಗಳು, ವಿಳಾಸದ ಬಗ್ಗೆ ಮಾಹಿತಿ, ಶೈಕ್ಷಣಿಕ ಅರ್ಹತೆಗಳು ಹಾಗೂ ಇತರ ಸಂಬಂಧಿತ ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ
ಹಂತ-4: ಅರ್ಜಿ ಪ್ರಕ್ರಿಯೆಯಲ್ಲಿ ಕೇಳಲಾಗುವ ಎಲ್ಲಾ ಅಗತ್ಯ ದಾಖಲಾತಿಗಳನ್ನು ಅವುಗಳನ್ನು ಸ್ಕ್ಯಾನ್ ಮಾಡುವ ನಿಯಮಗಳನ್ನು ಅನುಸರಿಸಿ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
ಹಂತ-5: ಮುಖಪುಟಕ್ಕೆ ಬಂದು ಆನ್ಲೈನ್ ಅರ್ಜಿ ಸಲ್ಲಿಕೆ ಲಿಂಕ್ ಮೇಲೆ ಕ್ಲಿಕ್ ಮಾಡಿ ಭಾವಚಿತ್ರ ಮತ್ತು ಸಹಿಯನ್ನು ಅಪ್ಲೋಡ್ ಮಾಡಲು ಪ್ರತ್ಯೇಕ ಲಿಂಕ್ ಅನ್ನು ನೀಡಲಾಗಿರುತ್ತದೆ ಮೂಲಕ ನಿಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ ಭಾವಚಿತ್ರ ಮತ್ತು ಸಹಿಯನ್ನು ಅಪ್ಲೋಡ್ ಮಾಡಿ
ಹಂತ-6: ನಿಮ್ಮ ಮೀಸಲಾತಿ ವರ್ಗಕ್ಕೆ ಅನ್ವಯವಾಗುವಂತೆ ನಿಗದಿಪಡಿಸಲಾಗಿರುವ ಪಾವತಿಸಿ ನಂತರ ಬರುವ ಪಾವತಿ ರಶೀದಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ
ಹಂತ-7: ನಿಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಅರ್ಜಿಯನ್ನು ಮುದ್ರಿಸಿಕೊಳ್ಳಬಹುದಾಗಿರುತ್ತದೆ ಹಾಗೂ ಮೊಬೈಲ್ ನಲ್ಲಿ ಒಂದು ಪ್ರತಿಯನ್ನು ಸೇವ್ ಮಾಡಿಕೊಳ್ಳಿ
ಅಭ್ಯರ್ಥಿಗಳು ಗಮನಿಸಬೇಕಾದ ಪ್ರಮುಖ ಅಂಶಗಳು
VAO ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಈ ಕೆಳಕಂಡ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಪಾಲಿಸದಿದ್ದಲ್ಲಿ ಅರ್ಜಿ ಅಪೂರ್ಣವಾಗಬಹುದು ಅಥವಾ ತಿರಸ್ಕಾರಕ್ಕೆ ಒಳಗಾಗಬಹುದು
- ಒಬ್ಬ ಅಭ್ಯರ್ಥಿಯು ಒಂದು ಜಿಲ್ಲೆಗೆ ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ
- ಒಂದಕ್ಕಿಂತ ಹೆಚ್ಚು ಜಿಲ್ಲೆಗಳಿಗೆ ಅರ್ಜಿ ಸಲ್ಲಿಸಿದರೆ ಅರ್ಜಿ ರದ್ದಾಗುತ್ತದೆ
- ತಪ್ಪಾದ ಅಥವಾ ಸುಳ್ಳು ಮಾಹಿತಿಯನ್ನು ನೀಡಿದರೆ ಅಭ್ಯರ್ಥಿ ಆಯ್ಕೆ ಅಥವಾ ಅಭ್ಯರ್ಥಿಯ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಬಹುದು
- ದಾಖಲೆ ಪರಿಶೀಲನೆಯ ಸಂದರ್ಭದಲ್ಲಿ ಎಲ್ಲಾ ಮೂಲ ದಾಖಲಾತಿಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು
- ಕೊನೆ ದಿನಾಂಕದವರೆಗೂ ಕಾಯದೆ ನಿಗದಿತ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಬೇಕು
ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಯ ಆಯ್ಕೆ ವಿಧಾನ
VAO ನೇಮಕಾತಿಯು ಪಾರದರ್ಶಕವಾಗಿದ್ದು ಆಯ್ಕೆ ಪ್ರಕ್ರಿಯೆಯು ಸಹ ಸ್ಪರ್ಧಾತ್ಮಕವಾಗಿ ಇರುತ್ತದೆ ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ ಆಯ್ಕೆ ಪ್ರಕ್ರಿಯೆಯು ಈ ಕೆಳಕಂಡ ಹಂತಗಳನ್ನು ಒಳಗೊಂಡಿರುತ್ತದೆ
- ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ
- ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ
- ದಾಖಲೆ ಪರಿಶೀಲನೆ
- ಅಂತಿಮ ಆಯ್ಕೆ ಪಟ್ಟಿ
ಕಡ್ಡಾಯ ಕನ್ನಡ ಭಾಷಾ ಪರೀಕ್ಷೆ
ಕನ್ನಡ ಭಾಷೆಯು ಕರ್ನಾಟಕದ ಪ್ರಾದೇಶಿಕ ಭಾಷೆ ಆಗಿರುವುದರಿಂದ ಕನ್ನಡ ಭಾಷೆಯನ್ನು ಓದಲು ಬರೆಯಲು ಅರ್ಥ ಮಾಡಿಕೊಳ್ಳಲು ಇರುವ ಸಾಮರ್ಥ್ಯವನ್ನು ಪರೀಕ್ಷಿಸಲು ಈ ಪರೀಕ್ಷೆಯನ್ನು ನಡೆಸಲಾಗುತ್ತದೆ.
ಆದರೆ ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನ್ನಡ ಭಾಷೆಯನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಓದಿರುವ ವಿದ್ಯಾರ್ಥಿಗಳಿಗೆ ಈ ಪರೀಕ್ಷೆಯಿಂದ ವಿನಾಯಿತಿ ದೊರೆಯುತ್ತದೆ
ಪರೀಕ್ಷೆ ವಿವರ:
- ಒಟ್ಟು ಅಂಕಗಳು: 150 ಅಂಕಗಳು
- ಪ್ರಶ್ನೆಗಳ ವಿಧ: ಬಹು ಆಯ್ಕೆ ಪ್ರಶ್ನೆಗಳು
- ಕನಿಷ್ಠ ಅರ್ಹತಾ ಅಂಕ: 50 ಅಂಕಗಳು
ಈ ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಮಾತ್ರ ಮುಂದಿನ ಹಂತದ ಪರೀಕ್ಷೆಯನ್ನು ನೀಡಲಾಗುತ್ತದೆ
ಸ್ಪರ್ಧಾತ್ಮಕ ಪರೀಕ್ಷೆ ಮಾದರಿ
ಈ VAO ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯನ್ನು ಆಫ್ಲೈನ್ ಒ ಎಂ ಆರ್ ವಿಧಾನದಲ್ಲಿ ನಡೆಸಲಾಗುತ್ತದೆ ಈ ಪರೀಕ್ಷೆಯು ಒಟ್ಟು ಎರಡು ಪತ್ರಿಕೆಗಳಿಂದ ಇರುತ್ತವೆ ಅವುಗಳೆಂದರೆ ಪತ್ರಿಕೆ -1 ಸಾಮಾನ್ಯ ಜ್ಞಾನ, ಪತ್ರಿಕೆ -2 ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್ ಮತ್ತು ಕಂಪ್ಯೂಟರ್ ಜ್ಞಾನದ ಬಗ್ಗೆ ಪ್ರಶ್ನೆ ಇರುತ್ತವೆ
ಪತ್ರಿಕೆ – 1
ಸಾಮಾನ್ಯ ಜ್ಞಾನ
- ಪ್ರಶ್ನೆಗಳು – 100
- ಅಂಕಗಳು – 100
- ಪರೀಕ್ಷಾ ಅವಧಿ – 2 ಗಂಟೆ
ಈ ಪತ್ರಿಕೆಯಲ್ಲಿ ಕೆಳಗಿನ ವಿಷಯಗಳಿಂದ ಪ್ರಶ್ನೆಗಳು ಬರಬಹುದು.
- ಭಾರತೀಯ ಇತಿಹಾಸ
- ಕರ್ನಾಟಕ ಇತಿಹಾಸ
- ಭೂಗೋಳ
- ಭಾರತೀಯ ಸಂವಿಧಾನ
- ಅರ್ಥಶಾಸ್ತ್ರ
- ವಿಜ್ಞಾನ
- ಪರಿಸರ
- ಪ್ರಚಲಿತ ವಿದ್ಯಮಾನಗಳು
- ಗ್ರಾಮೀಣ ಅಭಿವೃದ್ಧಿ
- ಪಂಚಾಯತ್ ರಾಜ್
- ಕಂದಾಯ ಇಲಾಖೆ ಕುರಿತು ಮೂಲಭೂತ ಮಾಹಿತಿ
ಪತ್ರಿಕೆ – 2
ಈ ಪತ್ರಿಕೆಯಲ್ಲಿ:
- ಪ್ರಶ್ನೆಗಳು – 100
- ಅಂಕಗಳು – 100
- ಅವಧಿ – 2 ಗಂಟೆಗಳು
ಸಾಮಾನ್ಯ ಕನ್ನಡ
- ವ್ಯಾಕರಣ
- ಗಾದೆಗಳು
- ಸಮಾನಾರ್ಥಕ ಪದಗಳು
- ವಿರೋಧಾರ್ಥಕ ಪದಗಳು
- ವಾಕ್ಯ ರಚನೆ
- ಭಾಷಾ ಜ್ಞಾನ
ಸಾಮಾನ್ಯ ಇಂಗ್ಲಿಷ್
- Grammar
- Vocabulary
- Synonyms
- Antonyms
- Comprehension
- Sentence Correction
ಕಂಪ್ಯೂಟರ್ ಜ್ಞಾನ
- ಕಂಪ್ಯೂಟರ್ ಮೂಲಭೂತ ಪರಿಚಯ
- MS Word
- MS Excel
- Internet
- Cyber Safety
- ಡಿಜಿಟಲ್ ಸೇವೆಗಳು
- ಇ-ಆಡಳಿತ (e-Governance)
ನೆಗೆಟಿವ್ ಮಾರ್ಕಿಂಗ್
ಈ VAO ಪರೀಕ್ಷೆಯಲ್ಲಿ ಋಣಾತ್ಮಕ ಮೌಲ್ಯಮಾಪನ ಇರುವುದರಿಂದ ಅಭ್ಯರ್ಥಿಗಳು ಎಚ್ಚರಿಕೆಯಿಂದ ಉತ್ತರಗಳನ್ನು ಗುರುತು ಮಾಡಬೇಕಾಗಿರುತ್ತದೆ
ಪ್ರತಿ ಸರಿ ಉತ್ತರಕ್ಕೆ: 1 ಅಂಕ
ಪ್ರತಿ ತಪ್ಪು ಉತ್ತರಕ್ಕೆ: 0.25 ಅಂಕ ಕಡಿತ
ಉತ್ತರಿಸದ ಪ್ರಶ್ನೆಗಳಿಗೆ ಸೂಚನೆಯಂತೆ ಒ ಎಂ ಆರ್ ನಲ್ಲಿ ಅಗತ್ಯ ವೃತ್ತವನ್ನು ಗುರುತಿಸಬೇಕು
ಹೆಚ್ಚು ಅಂಕಗಳನ್ನು ಗಳಿಸಲು ಖಚಿತ ಉತ್ತರಗಳನ್ನು ಮಾತ್ರ ಗುರುತು ಮಾಡುವುದು ಉತ್ತಮ
ಕನಿಷ್ಠ ಅರ್ಹತಾ ಅಂಕಗಳು
ಈ VAOಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕನಿಷ್ಠ 35% ಅಂಕಗಳನ್ನು ಗಳಿಸಬೇಕಾಗಿರುತ್ತದೆ ಈ ಅರ್ಹತೆಯನ್ನು ಪೂರೈಸಿದ ಅಭ್ಯರ್ಥಿಗಳಿಗೆ ಮಾತ್ರ ಮುಂದಿನ ದಾಖಲೆ ಪರಿಶೀಲನೆ ಮತ್ತು ಅಂತಿಮ ಆಯ್ಕೆ ಪಟ್ಟಿಗೆ ಪರಿಗಣಿಸಲಾಗುವುದು
VAO ನೇಮಕಾತಿ ಪರೀಕ್ಷೆಯ ಪರೀಕ್ಷಾ ಸಿಲಬಸ್
ಸಾಮಾನ್ಯ ಜ್ಞಾನ ಪತ್ರಿಕೆ
ಈ ಪತ್ರಿಕೆಯಲ್ಲಿ ಸಾಮಾನ್ಯವಾಗಿ ಸಾಮಾನ್ಯ ಜ್ಞಾನ, ಪ್ರಸ್ತುತ ವಿದ್ಯಮಾನಗಳು ಹಾಗೂ ಆಡಳಿತಾತ್ಮಕ ಅರಿವನ್ನು ಪರೀಕ್ಷೆ ಮಾಡಲಾಗುತ್ತದೆ ಈ ವಿಭಾಗದಲ್ಲಿ ಸಾಮಾನ್ಯವಾಗಿ ಈ ಕೆಳಕಂಡ ವಿಚಾರಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ
ಭಾರತೀಯ ಇತಿಹಾಸ
- ಪ್ರಾಚೀನ ಭಾರತ
- ಮಧ್ಯಕಾಲೀನ ಭಾರತ
- ಆಧುನಿಕ ಭಾರತದ ಸ್ವಾತಂತ್ರ್ಯ ಹೋರಾಟ
- ರಾಷ್ಟ್ರೀಯ ಚಳುವಳಿ
- ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರು
ಕರ್ನಾಟಕ ಇತಿಹಾಸ
- ಕನ್ನಡ ರಾಜವಂಶಗಳು
- ವಿಜಯನಗರ ಸಾಮ್ರಾಜ್ಯ
- ಹೊಯ್ಸಳರು
- ಕದಂಬರು
- ಮೈಸೂರು ಸಂಸ್ಥಾನ
- ಕರ್ನಾಟಕ ಏಕೀಕರಣ
ಭಾರತೀಯ ಸಂವಿಧಾನ
- ಮೂಲಭೂತ ಹಕ್ಕುಗಳು
- ಮೂಲಭೂತ ಕರ್ತವ್ಯಗಳು
- ರಾಜ್ಯದ ನಿರ್ದೇಶಕ ತತ್ವಗಳು
- ರಾಷ್ಟ್ರಪತಿ
- ಪ್ರಧಾನಮಂತ್ರಿ
- ರಾಜ್ಯಪಾಲ
- ಮುಖ್ಯಮಂತ್ರಿ
- ಸಂಸತ್ತು
- ನ್ಯಾಯಾಂಗ
- ಚುನಾವಣಾ ಆಯೋಗ
ಭೂಗೋಳ
- ಭಾರತ ಭೂಗೋಳ
- ಕರ್ನಾಟಕ ಭೂಗೋಳ
- ನದಿಗಳು
- ಪರ್ವತಗಳು
- ಹವಾಮಾನ
- ಕೃಷಿ
- ನೈಸರ್ಗಿಕ ಸಂಪನ್ಮೂಲಗಳು
ಅರ್ಥಶಾಸ್ತ್ರ
- ಭಾರತೀಯ ಆರ್ಥಿಕತೆ
- ಬ್ಯಾಂಕಿಂಗ್
- ಬಜೆಟ್
- ತೆರಿಗೆ ವ್ಯವಸ್ಥೆ
- ಹಣದುಬ್ಬರ
- ಗ್ರಾಮೀಣ ಅಭಿವೃದ್ಧಿ
ವಿಜ್ಞಾನ
- ಭೌತಶಾಸ್ತ್ರ
- ರಸಾಯನಶಾಸ್ತ್ರ
- ಜೀವಶಾಸ್ತ್ರ
- ಪರಿಸರ ವಿಜ್ಞಾನ
- ಆರೋಗ್ಯ
ಪ್ರಚಲಿತ ವಿದ್ಯಮಾನಗಳು
- ಕರ್ನಾಟಕ
- ಭಾರತ
- ಅಂತರರಾಷ್ಟ್ರೀಯ ಘಟನೆಗಳು
- ಕ್ರೀಡೆ
- ಪ್ರಶಸ್ತಿಗಳು
- ಸರ್ಕಾರಿ ಯೋಜನೆಗಳು
- ಹೊಸ ಕಾಯ್ದೆಗಳು
ಸಾಮಾನ್ಯ ಕನ್ನಡ
ಈ ಪತ್ರಿಕೆ ವಿಭಾಗದಲ್ಲಿ ಅಭ್ಯರ್ಥಿಯ ಕನ್ನಡ ಭಾಷಾಜ್ಞಾನವನ್ನು ಪರೀಕ್ಷಿಸಲಾಗುತ್ತದೆ ಈ ಪತ್ರಿಕೆಯಲ್ಲಿ ಸಾಮಾನ್ಯವಾಗಿ ಈ ಕೆಲಕಂಡ ಪ್ರಮುಖ ವಿಷಯಗಳು ಬರಬಹುದು
- ಕನ್ನಡ ವ್ಯಾಕರಣ
- ಸಂಧಿ
- ಸಮಾಸ
- ವಿರೋಧಾರ್ಥಕ ಪದಗಳು
- ಸಮಾನಾರ್ಥಕ ಪದಗಳು
- ಗಾದೆಗಳು
- ನುಡಿಗಟ್ಟುಗಳು
- ವಾಕ್ಯ ಶುದ್ಧೀಕರಣ
- ಪತ್ರ ಬರವಣಿಗೆ
- ಓದು ಗ್ರಹಿಕೆ
ಸಾಮಾನ್ಯ ಇಂಗ್ಲಿಷ್
ಅಭ್ಯರ್ಥಿಗಳಿಗೆ ಇಂಗ್ಲಿಷ್ ಜ್ಞಾನವು ಅನಿವಾರ್ಯವಾಗಿರುವುದರಿಂದ ಈ ವಿಭಾಗದಲ್ಲಿ ಮೂಲಭೂತ ಇಂಗ್ಲಿಷ್ ಭಾಷಾ ಜ್ಞಾನವನ್ನು ಪರೀಕ್ಷಿಸಲಾಗುತ್ತದೆ ಪ್ರಮುಖ ವಿಚಾರಗಳೆಂದರೆ
- Grammar
- Vocabulary
- Synonyms
- Antonyms
- Tenses
- Active & Passive Voice
- Direct & Indirect Speech
- Sentence Correction
- Comprehension
- Fill in the Blanks
ಕಂಪ್ಯೂಟರ್ ಜ್ಞಾನ
ಇಂದಿನ ಎಲ್ಲಾ ಸರ್ಕಾರಿ ಸೇವೆಗಳಲ್ಲಿ ಕಂಪ್ಯೂಟರ್ ಜ್ಞಾನವು ಅಗತ್ಯವಾಗಿರುವುದರಿಂದ ಈ ವಿಭಾಗದಲ್ಲಿ ಕೆಳಕಂಡ ವಿಷಯಗಳ ಬಗ್ಗೆ ಪ್ರಶ್ನೆಗಳು ಬರುತ್ತವೆ
- Computer Basics
- Hardware & Software
- Operating System
- MS Word
- MS Excel
- MS PowerPoint
- Internet
- Cyber Security
- Digital India
- e-Governance
- Online Services
VAO ಪರೀಕ್ಷೆಗೆ 90 ದಿನಗಳ ಅಧ್ಯಯನ ಯೋಜನೆ
ಸರಿಯಾದ ಯೋಜನೆಯೊಂದಿಗೆ VAO ಪರೀಕ್ಷಾ ತಯಾರಿಯನ್ನು ನಡೆಸಿದರೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸನ್ನು ಸಾಧಿಸಬಹುದಾಗಿರುತ್ತದೆ. ಈ 90 ದಿನಗಳ ಅಧ್ಯಯನ ಯೋಜನೆಯನ್ನು ಅನುಸರಿಸುವುದರ ಮೂಲಕ ಕಡಿಮೆ ಸಮಯದಲ್ಲಿ ಹೆಚ್ಚಿನ ಅಧ್ಯಯನ ವ್ಯಾಪ್ತಿಯನ್ನು ತಲುಪಿ ಸರಿಯಾದ ರೀತಿಯಲ್ಲಿ ತಯಾರಿಯನ್ನು ಮಾಡಿ ಯಶಸ್ಸನ್ನು ಸಾಧಿಸಬಹುದಾಗಿರುತ್ತದೆ
ಮೊದಲ 30 ದಿನಗಳಲ್ಲಿ ಮಾಡಬೇಕಾದ ಕೆಲಸಗಳು
ಪ್ರತಿದಿನವೂ:
- ಸಾಮಾನ್ಯ ಜ್ಞಾನ: 3 ಗಂಟೆಗಳು
- ಕನ್ನಡ: 1.5 ಗಂಟೆಗಳು
- ಇಂಗ್ಲಿಷ್: 1.5 ಗಂಟೆಗಳು
- ಕಂಪ್ಯೂಟರ್ ಜ್ಞಾನ: 1.5 ಗಂಟೆಗಳು
- ಪ್ರಚಲಿತ ವಿದ್ಯಮಾನಗಳು: 1 ಗಂಟೆ
ಮೊದಲ ತಿಂಗಳ ಅಂತ್ಯದವರೆಗೆ ಪರೀಕ್ಷೆಯ ಎಲ್ಲಾ ಮೂಲಭೂತ ವಿಷಯಗಳ ಮೊದಲ ಸುತ್ತಿನ ಓದನ್ನು ಪೂರ್ಣಗೊಳಿಸಿದರೆ ಪರೀಕ್ಷಾ ತಯಾರಿ, ಸುಲಭವಾಗುತ್ತದೆ
ಎರಡನೇ 30 ದಿನಗಳಲ್ಲಿ ಮಾಡಬೇಕಾದ ಕೆಲಸಗಳು
ಈ ಹಂತದಲ್ಲಿ ಅಭ್ಯಾಸಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕಾಗುತ್ತದೆ
- ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದು
- ಪಠ್ಯವಾರು ಬಹು ಆಯ್ಕೆ ಪ್ರಶ್ನೆಗಳನ್ನು ಬಿಡಿಸುವುದು
- ವಾರಕ್ಕೆ ಕನಿಷ್ಠ ಎರಡು ಸಂಪೂರ್ಣ ಮಾಕ್ ಟೆಸ್ಟ್ ಗಳನ್ನು ತೆಗೆದುಕೊಳ್ಳುವುದು
- ತಪ್ಪುಗಳ ವಿಶ್ಲೇಷಣೆ ಮಾಡುವುದು
- ಮುಖ್ಯ ವಿಷಯಗಳ ಕಿರು ಟಿಪ್ಪಣಿಗಳನ್ನು ತಯಾರಿಸುವುದು
ಕೊನೆಯ 30 ದಿನಗಳಲ್ಲಿ ಮಾಡಬೇಕಾದ ಕೆಲಸಗಳು
ಈ ಹಂತದಲ್ಲಿ ಪರೀಕ್ಷೆಗೆ ಅಂತಿಮ ಮಟ್ಟದ ಸಿದ್ಧತೆಯನ್ನು ಮಾಡಿಕೊಳ್ಳಬೇಕಾಗುತ್ತದೆ
- ಪ್ರತಿದಿನ ಸಂಪೂರ್ಣ ಮಾಕ್ ಟೆಸ್ಟ್ ಬರೆಯಿರಿ
- ಉತ್ತಮ ರೀತಿಯಲ್ಲಿ ಸಮಯ ನಿರ್ವಹಣೆ ಮಾಡಿ
- ರಿವಿಜನ್ ಗೆ ಹೆಚ್ಚಿನ ಒತ್ತನ್ನು ನೀಡಿ
- ಪ್ರಚಲಿತ ವಿದ್ಯಮಾನಗಳಿಗೆ ಹೆಚ್ಚಿನ ಗಮನ ಹರಿಸಿ
- ಪ್ರಮುಖ ಸೂತ್ರಗಳನ್ನು ಕಿರು ಟಿಪ್ಪಣಿಗಳ ರೀತಿ ಬರೆದುಕೊಂಡು ನಿಮ್ಮ ತಯಾರಿ ಕೊಠಡಿಯಲ್ಲಿ ಅಂಟಿಸಿಕೊಳ್ಳಿ
- ಪ್ರಮುಖ ದಿನಾಂಕಗಳು, ಪ್ರಮುಖ ವ್ಯಕ್ತಿಗಳು ಮತ್ತು ಪ್ರಶಸ್ತಿಗಳ ಬಗ್ಗೆ ಅಭ್ಯಾಸ ಮಾಡಿ
VAO ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ಉಪಯುಕ್ತ ಸಲಹೆಗಳು
ಅಧಿಕೃತ ಸಿಲಬಸ್ ಓದಿ:
VAO ಪರೀಕ್ಷೆಗೆ ನಿಗದಿಪಡಿಸಲಾಗಿರುವ ಅಗತ್ಯ ಸಿಲಬಸ್ ಅನ್ನು ಮಾತ್ರ ಓದಬೇಕಾಗುತ್ತದೆ ಹೆಚ್ಚುವರಿ ವಿಷಯಗಳನ್ನು ಓದುವುದರಿಂದ ಸಮಯ ವ್ಯರ್ಥವಾಗುವುದರ ಜೊತೆಯಲ್ಲಿ ಹಲವಾರು ಗೊಂದಲಗಳಿಗೆ ಇಡಾಗುವ ಸಾಧ್ಯತೆ ಇರುತ್ತದೆ
ಪ್ರತಿದಿನ ದಿನಪತ್ರಿಕೆಗಳನ್ನು ಓದಿ:
VAO ಪರೀಕ್ಷಾ ತಯಾರಿ ಅವಧಿಯಲ್ಲಿ ಪ್ರತಿದಿನವೂ ಕನ್ನಡ ಹಾಗೂ ಇಂಗ್ಲಿಷ್ ಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳೆಸಿಕೊಳ್ಳಿ ಇದರಿಂದ
- ಸರ್ಕಾರಿ ಯೋಜನೆಗಳು
- ರಾಜ್ಯದ ಸುದ್ದಿ
- ರಾಷ್ಟ್ರದ ಸುದ್ದಿ
- ಅಂತರಾಷ್ಟ್ರೀಯ ಸುದ್ದಿ
- ಆರ್ಥಿಕತೆಗೆ ಸಂಬಂಧಿಸಿದ ವಿಚಾರಗಳು
- ವಿಜ್ಞಾನ ಮತ್ತು ತಂತ್ರಜ್ಞಾನ ಸಂಬಂಧಪಟ್ಟ ಹೆಚ್ಚುವರಿ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿರುತ್ತದೆ
ಸಮಯ ನಿರ್ವಹಣೆ:
VAO ಪರೀಕ್ಷಾ ತಯಾರಿ ಮತ್ತು ಪರೀಕ್ಷೆ ಅವಧಿಯಲ್ಲಿ ಸಮಯವನ್ನು ಉತ್ತಮವಾಗಿ ನಿರ್ವಹಿಸುವುದೇ ಪ್ರಮುಖ ಅಂಶವಾಗಿದೆ ಆದ್ದರಿಂದ ಒಂದೇ ವಿಷಯಕ್ಕೆ ಅಥವಾ ಒಂದೇ ಪ್ರಶ್ನೆಗೆ ಹೆಚ್ಚು ಸಮಯವನ್ನು ವಹಿಸಬೇಡಿ
ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ:
ಪ್ರಸ್ತುತ ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗೆ ಈ ಹಿಂದೆ ನಡೆಸಿರುವ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಬೇಕು ಈ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದರಿಂದ ಈ ಕೆಳಕಂಡ ಪ್ರಯೋಜನಗಳನ್ನು ಪಡೆಯಬಹುದು
- ಪ್ರಶ್ನೆಗಳ ಮಾದರಿ ತಿಳಿಯುತ್ತದೆ
- ಪ್ರಶ್ನೆಗಳ ಕಠಿಣತೆಯ ಮಟ್ಟ ತಿಳಿಯುತ್ತದೆ
- ಸಮಯವನ್ನು ಉತ್ತಮವಾಗಿ ನಿರ್ವಹಿಸಬಹುದು
ಮಾಕ್ ಟೆಸ್ಟ್ ಬರೆಯಿರಿ:
ಮೊದಲ 60 ದಿನಗಳಲ್ಲಿ ವಾರಕ್ಕೆ ಎರಡು ಸಂಪೂರ್ಣ ಮಾಕ್ ಟೆಸ್ಟ್ ಬರೆದರೆ ಕೊನೆಯ 30 ದಿನಗಳಲ್ಲಿ ದಿನಕ್ಕೆ ಎರಡು ಸಂಪೂರ್ಣ ಮಾಕ್ ಟೆಸ್ಟ್ ಗಳನ್ನು ಬರೆಯುವುದರಿಂದ ಈ ಕೆಳಕಂಡ ಪ್ರಯೋಜನಗಳನ್ನು ಪಡೆಯಬಹುದು
- ಆತ್ಮವಿಶ್ವಾಸದ ಹೆಚ್ಚಳ
- ವೇಗದ ಹೆಚ್ಚಳ
- ತಪ್ಪುಗಳು ಕಡಿಮೆಯಾಗುತ್ತವೆ
- ಸಮಯ ನಿರ್ವಹಣೆ ಸುಲಭವಾಗುತ್ತದೆ
ನೆಗೆಟಿವ್ ಮಾರ್ಕಿಂಗ್ ನೆನಪಿಡಿ:
ಈ VAO ಪರೀಕ್ಷೆಯಲ್ಲಿ ತಪ್ಪು ಉತ್ತರಗಳಿಗೆ 0.25 ಅಂಕಗಳನ್ನು ಕಡಿತ ಮಾಡುವುದರಿಂದ ಖಚಿತ ಉತ್ತರಗಳನ್ನು ಮಾತ್ರ ಗುರುತಿಸುವುದು ಉತ್ತಮವಾಗಿದೆ ಊಹಾತ್ಮಕ ಅಥವಾ ಇತರೆ ಸಂಶಯವಾದ ಉತ್ತರಗಳನ್ನು ನೀಡುವುದನ್ನು ತಪ್ಪಿಸಿ
ಅಧ್ಯಯನಕ್ಕೆ ಸಹಾಯಕವಾಗುವ ಉತ್ತಮ ಪುಸ್ತಕಗಳು
ಸಾಮಾನ್ಯ ಜ್ಞಾನ
- ಸ್ಪರ್ಧಾ ವಿಜಯ ಕರ್ನಾಟಕ
- ಸಾಮಾನ್ಯ ಜ್ಞಾನ ವಾರ್ಷಿಕ ಪುಸ್ತಕ
- ಕರ್ನಾಟಕ ಇತಿಹಾಸ ಮತ್ತು ಭೂಗೋಳ
ಕನ್ನಡ
- ಸಾಮಾನ್ಯ ಕನ್ನಡ ವ್ಯಾಕರಣ ಪುಸ್ತಕ
- ಕನ್ನಡ ಭಾಷಾ ಪ್ರಶ್ನೋತ್ತರ ಸಂಕಲನ
ಇಂಗ್ಲಿಷ್
- Objective General English
- Basic English Grammar
ಕಂಪ್ಯೂಟರ್
- Computer Awareness ಪುಸ್ತಕ
- Basic Computer Notes
ಅಭ್ಯರ್ಥಿಗಳು ಮಾಡುವ ಸಾಮಾನ್ಯ ತಪ್ಪುಗಳು
ಅಭ್ಯರ್ಥಿಗಳು VAO ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಸಮಯದಲ್ಲಿ, ಪರೀಕ್ಷಾ ತಯಾರಿ ಮತ್ತು ಪರೀಕ್ಷಾ ಸಮಯದಲ್ಲಿ ಕೆಲವು ಸಾಮಾನ್ಯ ತಪ್ಪುಗಳನ್ನು ಮಾಡುತ್ತಾರೆ ಈ ತಪ್ಪುಗಳಿಂದ ಅರ್ಜಿ ಸಲ್ಲಿಕೆ ಪರೀಕ್ಷಾ ತಯಾರಿ ಅಥವಾ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ ಆದ್ದರಿಂದ ಈ ಕೆಳಕಂಡ ತಪ್ಪುಗಳನ್ನು ತಪ್ಪಿಸಿ
- ಕೊನೆಯ ದಿನಾಂಕದಂದು ಅರ್ಜಿ ಸಲ್ಲಿಸಲು ಪ್ರಯತ್ನಿಸುವುದು
- ದಾಖಲೆಗಳನ್ನು ಅಪೂರ್ಣವಾಗಿ ಅಸ್ಪಷ್ಟ ರೀತಿಯಲ್ಲಿ ಅಪ್ಲೋಡ್ ಮಾಡುವುದು
- ತಪ್ಪಾದ ಜಿಲ್ಲೆಯನ್ನು ಆಯ್ಕೆ ಮಾಡುವುದು
- ನೆಗೆಟಿವ್ ಮಾರ್ಕಿಂಗ್ ಅನ್ನು ಗಮನಿಸದಿರುವುದು
- ಅರ್ಜಿ ಸಲ್ಲಿಸಿದ ನಂತರ ಅರ್ಜಿಯನ್ನು ಪ್ರಿಂಟ್ ತೆಗೆದುಕೊಳ್ಳದೆ ಇರುವುದು
- ಮಾಕ್ ಟೆಸ್ಟ್ ಅನ್ನು ಕಡೆಗಣಿಸುವುದು
- ಪ್ರಚಲಿತ ವಿದ್ಯಮಾನಗಳ ಕಡೆ ನಿರ್ಲಕ್ಷ ವಹಿಸುವುದು
ಈ ಮೇಲೆ ತಿಳಿಸಿರುವ ತಪ್ಪುಗಳನ್ನು ಮಾಡುವುದರಿಂದ ಯಶಸ್ಸಿನ ಸಾಧ್ಯತೆ ಕಡಿಮೆಯಾಗುತ್ತಿರುತ್ತದೆ ಆದುದರಿಂದ ಈ ತಪ್ಪುಗಳನ್ನು ಆದಷ್ಟು ತಪ್ಪಿಸಿ ಯಶಸ್ಸಿನ ಸಾಧ್ಯತೆಯನ್ನು ಹೆಚ್ಚಿಸಿಕೊಳ್ಳಿ
ಪ್ರಮುಖವಾಗಿ ಈ ನೇಮಕಾತಿಗೆ ಯಾರು ಅರ್ಜಿ ಸಲ್ಲಿಸಬೇಕು?
- ಪಿಯುಸಿ ಪಾಸಾದ ವಿದ್ಯಾರ್ಥಿಗಳು
- ಡಿಪ್ಲೊಮಾ ಹೊಂದಿರುವವರು
- ಉದ್ಯೋಗಾಕಾಂಕ್ಷಿಗಳು
- ಗ್ರಾಮೀಣ ಅಭ್ಯರ್ಥಿಗಳು
- ಸರ್ಕಾರಿ ಉದ್ಯೋಗ ಆಕಾಂಕ್ಷಿಗಳು
ನೇಮಕಾತಿಯ ಅನುಕೂಲಗಳು ಮತ್ತು ಸವಾಲುಗಳು
ಅನುಕೂಲಗಳು
- ಉತ್ತಮ ಸಂಬಳ
- ಶಾಶ್ವತ ಉದ್ಯೋಗ
- ಸರ್ಕಾರಿ ಸವಲತ್ತುಗಳು
- ಪ್ರಚಾರದ ಅವಕಾಶಗಳು
ಸವಾಲುಗಳು
- ಹೆಚ್ಚಿನ ಸ್ಪರ್ಧೆ
- ಋಣಾತ್ಮಕ ಗುರುತು
- ದೊಡ್ಡ ಪಠ್ಯಕ್ರಮ
VAO ನೇಮಕಾತಿಗೆ ಸಂಬಂಧಪಟ್ಟ ಪ್ರಮುಖ ದಿನಾಂಕಗಳು
Last Updated: 12 July 2026
| ವಿವರ | ದಿನಾಂಕ |
|---|---|
| ಆನ್‌ಲೈನ್ ಮೂಲಕ ಅರ್ಜಿ ಆರಂಭ | 11 ಜುಲೈ 2026 |
| ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಕೊನೆಯ ದಿನ | 30 ಜುಲೈ 2026 |
| ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ | 31 ಜುಲೈ 2026 |
| ನಿರೀಕ್ಷಿತ ಉಳಿಕೆ ಮೂಲ ವೃಂದ ಪರೀಕ್ಷೆ | 04 ಅಕ್ಟೋಬರ್ 2026 |
| ನಿರೀಕ್ಷಿತ ಕಲ್ಯಾಣ ಕರ್ನಾಟಕ ವೃಂದ ಪರೀಕ್ಷೆ | 25 ಅಕ್ಟೋಬರ್ 2026 |
ಅಧಿಕೃತ ಲಿಂಕ್ ಗಳು
ಮಾಹಿತಿ ಮೂಲ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಹಾಗೂ ಕರ್ನಾಟಕ ಕಂದಾಯ ಇಲಾಖೆಯ ಅಧಿಕೃತ ಅಧಿಸೂಚನೆ.
| ಕರ್ನಾಟಕ ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ | ಕರ್ನಾಟಕ ಕಂದಾಯ ಇಲಾಖೆ |
| ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ | ಕರ್ನಾಟಕ ಪರೀಕ್ಷಾ ಪ್ರಾಧಿಕಾರ |
| ಅಧಿಕೃತ ಅಧಿಸೂಚನೆಯನ್ನು ಓದಲು | VAO RPC Region |
| ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು | ಇಲ್ಲಿ ಕ್ಲಿಕ್ ಮಾಡಿ |
ಹೆಚ್ಚುವರಿ ಲಿಂಕ್ ಗಳು
| ನಮ್ಮ ವಾಟ್ಸಪ್ ಗುಂಪು ಸೇರಿ | ಇಲ್ಲಿ ಕ್ಲಿಕ್ ಮಾಡಿ |
| ಇತರೆ ಹೆಚ್ಚುವರಿ ಮಾಹಿತಿಯನ್ನು ಪಡೆಯಿರಿ | ನೇಮಕಾತಿ ಮಾಹಿತಿ |
KEA VAO Recruitment 2026: FAQ’s
ಪ್ರಶ್ನೆ-1. KEA VAO 2026 ನೇಮಕಾತಿಯಲ್ಲಿ ಒಟ್ಟು ಎಷ್ಟು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ?
ಉತ್ತರ: ಒಟ್ಟು 572 ಗ್ರಾಮ ಆಡಳಿತ ಅಧಿಕಾರಿ (VAO) ಹುದ್ದೆಗಳ ನೇಮಕಾತಿ ಪ್ರಾರಂಭವಾಗಿದೆ.
ಪ್ರಶ್ನೆ-2. ಅರ್ಜಿ ಸಲ್ಲಿಸಲು ಕನಿಷ್ಠ ವಿದ್ಯಾರ್ಹತೆ ಏನಿರಬೇಕು?
ಉತ್ತರ: ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದುವುದು ಕಡ್ಡಾಯ.
ಪ್ರಶ್ನೆ-3. ಅಭ್ಯರ್ಥಿಗಳು ಎಷ್ಟು ಜಿಲ್ಲೆಗಳಿಗೆ ಅರ್ಜಿ ಸಲ್ಲಿಸಬಹುದು?
ಉತ್ತರ: ಕೇವಲ ಒಂದು ಜಿಲ್ಲೆಗೆ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
ಪ್ರಶ್ನೆ-4. ಸಾಮಾನ್ಯ ವರ್ಗದ ಅಭ್ಯರ್ಥಿಗಳು ಎಷ್ಟು ಅರ್ಜಿ ಶುಲ್ಕ ಪಾವತಿಸಬೇಕು?
ಉತ್ತರ: ₹750 (₹500 ಅರ್ಜಿ ಶುಲ್ಕ + ₹250 ಪ್ರಕ್ರಿಯೆ ಶುಲ್ಕ).
ಪ್ರಶ್ನೆ-5. ಪರೀಕ್ಷೆಯಲ್ಲಿ ನೆಗೆಟಿವ್ ಮಾರ್ಕಿಂಗ್ ಇದೆಯೇ?
ಉತ್ತರ: ಹೌದು. ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.
ಪ್ರಶ್ನೆ-6. ಆಯ್ಕೆ ಪ್ರಕ್ರಿಯೆಯಲ್ಲಿ ಯಾವ ಯಾವ ಹಂತಗಳು ಇರುತ್ತವೆ?
ಉತ್ತರ: ಕನ್ನಡ ಭಾಷಾ ಪರೀಕ್ಷೆ, ಸ್ಪರ್ಧಾತ್ಮಕ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ ಇರುತ್ತದೆ.
ಪ್ರಶ್ನೆ-7. VAO ಹುದ್ದೆಯಲ್ಲಿ ಸಿಗುವ ವೇತನ ಎಷ್ಟು?
ಉತ್ತರ: ₹34,100 ರಿಂದ ₹67,600ರವರೆಗೆ ವೇತನ ದೊರೆಯುತ್ತದೆ.
ಪ್ರಶ್ನೆ-8. ಅರ್ಜಿ ಸಲ್ಲಿಸಲು ಕನಿಷ್ಠ ವಯಸ್ಸು ಎಷ್ಟು ಇರಬೇಕು?
ಉತ್ತರ: ಅಭ್ಯರ್ಥೀಗಳಿಗೆ ಕನಿಷ್ಠ 18 ವರ್ಷಗಳು ಪೂರ್ಣಗೊಂಡಿರಬೇಕು.
ಪ್ರಶ್ನೆ-9. ಸ್ಪರ್ಧಾತ್ಮಕ ಪರೀಕ್ಷೆ ಯಾವ ವಿಧಾನದಲ್ಲಿ ನಡೆಯುತ್ತದೆ?
ಉತ್ತರ: ಆಫ್‌ಲೈನ್ OMR ಆಧಾರಿತ ಬಹು ಆಯ್ಕೆ ಪ್ರಶ್ನೆಗಳ ಪರೀಕ್ಷೆಯನ್ನು ನೆಡೆಸಲಾಗುತ್ತದೆ.
ಪ್ರಶ್ನೆ-10. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಉತ್ತರ: 30 ಜುಲೈ 2026 ಕೊನೆಯ ದಿನಾಂಕವಾಗಿದೆ.
ಪ್ರಶ್ನೆ-11. ನಾನು ಪ್ರಸ್ತುತ ಪಿಯುಸಿ ಓದುತ್ತಿದ್ದೇನೆ, ನಾಣು ಅರ್ಜಿ ಸಲ್ಲಿಸಬಹುದೇ?
ಉತ್ತರ: ಇಲ್ಲ, ಅರ್ಜಿ ಸಲ್ಲಿಸಲು ನಿಗಧಿಯಾಗಿರುವ ಕೊನೆಯ ದಿನಾಂಕದ ಒಳಗೆ ವಿದ್ಯಾರ್ಹತೆ ಹೊಂದಿ ಅಂಕಪಟ್ಟಿಯನ್ನು ಪಡೆದಿರಬೇಕು.
KEA VAO ನೇಮಕಾತಿ 2026ರ ಮೂಲಕ ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗವನ್ನು ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಅತ್ಯುತ್ತಮ ಅವಕಾಶವನ್ನು ನೀಡಲಾಗಿದೆ ಈ ನೇಮಕಾತಿ ಮೂಲಕ ಒಟ್ಟು 572 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿರುವುದರಿಂದ ಈ ನೇಮಕಾತಿಗೆ ಸ್ಪರ್ಧೆಯೂ ಕೂಡ ಹೆಚ್ಚಾಗಿರಲಿದೆ
ಆದ್ದರಿಂದ ಅಭ್ಯರ್ಥಿಗಳು ಇಂದಿನಿಂದಲೇ ಅಧ್ಯಯನವನ್ನು ಆರಂಭಿಸಿ ಸಿಲಬಸ್ ಆಧಾರಿತ ತಯಾರಿಯನ್ನು ಮಾಡಬೇಕಾಗಿರುತ್ತದೆ ಇದರ ಜೊತೆಯಲ್ಲಿ ನಿಯಮಿತ ಅಭ್ಯಾಸ, ಮಾಕ್ ಟೆಸ್ಟ್ ಗಳನ್ನು ಬರೆಯುವುದು, ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಯನ್ನು ಕೂಲಂಕುಶವಾಗಿ ವಿಶ್ಲೇಷಿಸಿ ಸಮಯ ನಿರ್ವಹಣೆಗೆ ಹೆಚ್ಚಿನ ಮಹತ್ವವನ್ನು ನೀಡಬೇಕಾಗುತ್ತದೆ.
ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸುವ ಮೊದಲು ಇಲಾಖೆ ಹೊರಡಿಸಲಾಗಿರುವ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ಎಲ್ಲ ದಾಖಲೆಗಳನ್ನು ಸಿದ್ಧಪಡಿಸಿ ಕೊನೆಯ ದಿನಾಂಕಕ್ಕಾಗಿ ಕಾಯದೆ ಆದಷ್ಟು ಬೇಗ ಮುಂಚಿತವಾಗಿ ಅರ್ಜಿ ಸಲ್ಲಿಸುವುದು, ಉತ್ತಮವಾಗಿದೆ
ಸರಿಯಾದ ಯೋಜನೆ ಮಾಡುವುದು, ನಿರಂತರ ಅಭ್ಯಾಸ ಮಾಡುವುದು ಮತ್ತು ಆತ್ಮವಿಶ್ವಾಸದೊಂದಿಗೆ ತಯಾರಿಯನ್ನು ನಡೆಸಿದರೆ ಗ್ರಾಮ ಆಡಳಿತ ಅಧಿಕಾರಿ ಹುದ್ದೆಯನ್ನು ಪಡೆಯುವ ನಿಮ್ಮ ಕನಸನ್ನು ನನಸಾಗಿಸಬಹುದು
Related Official Informtion:
Karnataka Police CPC Exam Preparation Tips 2026 | Complete And Best Study Plan
Author Note: ಈ VAO ನೇಮಕಾತಿ ಲೇಖನವನ್ನು ಅಧಿಕೃತ ನೇಮಕಾತಿ ಅಧಿಸೂಚನೆ ಹಾಗೂ ಲಭ್ಯ ಮಾಹಿತಿಯ ಆಧಾರದ ಮೇಲೆ ನಿಖರವಾಗಿ ಸಿದ್ಧಪಡಿಸಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ, ಎಲ್ಲಾ ಅರ್ಹತಾ ಮಾನದಂಡಗಳನ್ನು ದೃಢೀಕರಿಸಿ ನಂತರವೇ ಅರ್ಜಿ ಸಲ್ಲಿಸುವುದು ಸೂಕ್ತ.
-*-
About Author: ರಂಗನಾಥ ಬಿ ಜಿ ರವರು ಅರ್ಥಶಾಸ್ತ್ರ ವಿಭಾಗದಲ್ಲಿ ಎಂ ಎ ಪದವಿಯನ್ನು ಪಡೆದಿದ್ದು, ಕಳೆದ 3 ವರ್ಷಗಳಿಂದ ಸರ್ಕಾರಿ ಉದ್ಯೋಗ, ಶಿಕ್ಷಣ, ವಿದ್ಯಾರ್ಥಿವೇತನ, ಸರ್ಕಾರಿ ಯೋಜನೆಗಳು ಹಾಗೂ ನೇಮಕಾತಿ ಮಾಹಿತಿಯನ್ನು ಕನ್ನಡದಲ್ಲಿ ಸರಳವಾಗಿ ಮತ್ತು ವಿಶ್ವಾಸಾರ್ಹವಾಗಿ ಪ್ರಕಟಿಸುವ ಮೂಲಕ ಓದುಗರಿಗೆ ಉಪಯುಕ್ತ ಮಾಹಿತಿಯನ್ನು ನಿರಂತರವಾಗಿ ಒದಗಿಸುತ್ತಿದ್ದಾರೆ. ಜೊತೆಯಲ್ಲಿ ಕರ್ನಾಟಕ ಸರ್ಕಾರದ ಅಧಿಕೃತ ನೇಮಕಾತಿ ಅಧಿಸೂಚನೆಗಳನ್ನು ನಿಯಮಿತವಾಗಿ ವಿಶ್ಲೇಷಿಸಿ ಆಕಾಂಕ್ಷಿಗಳಿಗೆ ನಿಖರ ಮತ್ತು ನವೀಕರಿಸಿದ ಮಾಹಿತಿಯನ್ನು ನೀಡುತ್ತೇವೆ
-*-
Disclaimer: ಈ VAO ನೇಮಕಾತಿ ಲೇಖನವು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಪ್ರಕಟಿಸಲಾಗಿದೆ. ನೇಮಕಾತಿ ದಿನಾಂಕ, ಅರ್ಹತೆ, ಶುಲ್ಕ ಹಾಗೂ ಇತರ ವಿವರಗಳಲ್ಲಿ ಬದಲಾವಣೆಗಳಿರಬಹುದು. ಅಂತಿಮ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ KEA ಅಧಿಸೂಚನೆ ಮತ್ತು ವೆಬ್‌ಸೈಟ್‌ನ್ನು ಕಡ್ಡಾಯವಾಗಿ ಪರಿಶೀಲಿಸಬೇಕು.