Telegram Join Our Telegram WhatsApp Join Our WhatsApp

E Swathu Abhiyana 2026, Big Update: ನಿಮ್ಮ ಮನೆ ಬಾಗಿಲಲ್ಲೇ ಸಿಗಲಿದೆ ಇ ಸ್ವತ್ತು ದಾಖಲೆ, ಇಲ್ಲಿದೆ ಸಂಪೂರ್ಣ ಮಾಹಿತಿ

E Swathu ದಾಖಲೆಯನ್ನು ನಿಮ್ಮ ಮನೆ ಬಾಗಿಲಲ್ಲೇ ಪಡೆಯಲು ಕಾರ್ಯವಿಧಾನ

ಕರ್ನಾಟಕ ರಾಜ್ಯ ಸರ್ಕಾರವು ತನ್ನ ಆಡಳಿತದಲ್ಲಿ ಹೆಚ್ಚಿನ ಪಾರದರ್ಶಕತೆ, ವೇಗವಾಗಿ ಕೆಲಸ ನಿರ್ವಹಣೆ ಮತ್ತು ಎಲ್ಲಾ ಸರ್ಕಾರಿ ಸೇವೆಗಳನ್ನು ಜನಸ್ನೇಹಿಯಾಗಿಸಲು ಕಳೆದ ವರ್ಷಗಳಿಂದ ಅನೇಕ ಡಿಜಿಟಲ್ ಸೇವೆಗಳನ್ನು ಜಾರಿಗೆ ತರುತ್ತಿದೆ. ನಾಗರಿಕರು ಸರ್ಕಾರಿ ಕಚೇರಿಗಳಿಗೆ ಪದೇಪದೇ ಅಲೆದಾಡುವ ಪರಿಸ್ಥಿತಿಯನ್ನು ಕಡಿಮೆ ಮಾಡುವ ಉದ್ದೇಶವನ್ನು ಇಟ್ಟು ಸರ್ಕಾರವು ಅಗತ್ಯ ಸೇವೆಗಳನ್ನು ಆನ್ಲೈನ್ ಹಾಗೂ ಸುಲಭ ರೀತಿಯಲ್ಲಿ ಒದಗಿಸುವ ಉದ್ದೇಶವನ್ನು ಹೊಂದಿದೆಇದರಿಂದ ಹಲವು ಹೊಸ ಯೋಜನೆಯನ್ನು ಅನುಷ್ಠಾನಗೊಳಿಸಿದೆ.

ಈ ಡಿಜಿಟಲ್ ಪರಿವರ್ತನೆಯ ಭಾಗವಾಗಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿ ಅಡಿಯಲ್ಲಿ ಬರುವ ಆಸ್ತಿಗಳ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಲು ನಿರ್ವಹಿಸಲು ಇ ಸ್ವತ್ತು ಎಂಬ ವ್ಯವಸ್ಥೆಯನ್ನು ಜಾರಿಗೆ ತಂದಿದೆ

ಈ ಹೆಚ್ಚಿನ ಕ್ರಮದಿಂದ ಸರ್ಕಾರಿ ಸೇವೆಗಳು, ಜನರ ಮನೆ ಬಾಗಿಲಿಗೆ ತಲುಪುವುದು ಅಷ್ಟೇ ಅಲ್ಲದೆ ಗ್ರಾಮೀಣ ಆಡಳಿತದಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸತೆ ಹೆಚ್ಚುವ ಸಾಧ್ಯತೆ ಇದೆ

ಗ್ರಾಮೀಣ ಪ್ರದೇಶಗಳಲ್ಲಿ ಮನೆ, ನಿವೇಶನ ಅಥವಾ ಆಸ್ತಿಯನ್ನು ಹೊಂದಿರುವ ಅನೇಕ ಪ್ರಮಾಣದ ಜನರಿಗೆ ತಮ್ಮ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯುವುದು, ಏನಾದರೂ ಬದಲಾವಣೆ ಮಾಡುವುದು ಅಥವಾ ಮಾಲೀಕತ್ವವನ್ನು ದೃಢಪಡಿಸಲು ಇರುವ ಪ್ರಕ್ರಿಯೆಯು ತುಂಬಾ ಕಷ್ಟಕರವಾಗಿದೆ.

ಸಣ್ಣದೊಂದು ಸಾಮಾನ್ಯ ದಾಖಲೆಗಾಗಿ ಗ್ರಾಮ ಪಂಚಾಯಿತಿ ನಾಡಕಚೇರಿ ಅಟಲ್ -ಜಿ ಜನಸ್ನೇಹಿ ಕೇಂದ್ರ ಮುಂತಾದ ಕಚೇರಿಗಳಿಗೆ ಹಲವು ಬಾರಿ ಭೇಟಿ ನೀಡುವುದು ಇಂದಿನ ಸಮಯದಲ್ಲಿ ಅಗತ್ಯವಾಗಿದ್ದು ಅಗತ್ಯ ದಾಖಲೆಗಳನ್ನು ಸಲ್ಲಿಸುವುದು ತಾಂತ್ರಿಕ ಸಮಸ್ಯೆಗಳಿಂದ ಸಮಸ್ಯೆಗಳನ್ನು ಎದುರಿಸುವುದು ಸಾಮಾನ್ಯ ವಾಗಿತ್ತು, ಇದರಿಂದ ಸಾರ್ವಜನಿಕರ ಹಣ ಸಮಯ ಶ್ರಮ ಎಲ್ಲವೂ ವ್ಯರ್ಥವಾಗುತ್ತಿತ್ತು.

ಈ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಲು ಕರ್ನಾಟಕ ಸರ್ಕಾರವು ಮನೆಮನೆಗೆ ಇ ಸ್ವತ್ತು ಅಭಿಯಾನ ಎಂಬ ಮಹತ್ವದ ಕಾರ್ಯಕ್ರಮವನ್ನು ಆರಂಭಿಸಿದ್ದು ಈ ಅಭಿಯಾನದ ಪ್ರಮುಖ ಉದ್ದೇಶವೆಂದರೆ ಗ್ರಾಮೀಣ ಪ್ರದೇಶದ ಅರ್ಹ ಆಸ್ತಿಗಳನ್ನು ಹೊಂದಿರುವ ಮಾಲೀಕರಿಗೆ ಇ ಸ್ವತ್ತು ಸೇವೆಯನ್ನು ಅವರ ಮನೆ ಬಾಗಿಲಿಗೆ ತಲುಪಿಸುವುದು ಆಗಿದೆ

ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಗಳ ಮನೆಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ ಅಗತ್ಯ ಮಾಹಿತಿಯನ್ನು ಮತ್ತು ಬೇಕಾಗುವ ಇತರ ಹೆಚ್ಚುವರಿ ಮಾಹಿತಿಗಳನ್ನು ಸ್ಥಳದಲ್ಲಿಯೇ ಸಂಗ್ರಹಿಸಿ ಅರ್ಹ ಫಲಾನುಭವಿಗಳಿಗೆ ಈ ಸ್ವತ್ತು ಪ್ರಮಾಣ ಪತ್ರವನ್ನು ಒದಗಿಸುವ ಸುಲಭ ವ್ಯವಸ್ಥೆಯನ್ನು ರೂಪಿಸಲಾಗುತ್ತದೆ

ಈ ಹೆಚ್ಚಿನ ಕ್ರಮದಿಂದ ಸರ್ಕಾರಿ ಸೇವೆಗಳು, ಜನರ ಮನೆ ಬಾಗಿಲಿಗೆ ತಲುಪುವುದು ಅಷ್ಟೇ ಅಲ್ಲದೆ ಗ್ರಾಮೀಣ ಆಡಳಿತದಲ್ಲಿ ಪಾರದರ್ಶಕತೆ ಮತ್ತು ವಿಶ್ವಾಸತೆ ಹೆಚ್ಚುವ ಸಾಧ್ಯತೆ ಇದೆ

ಪ್ರಸ್ತುತ ಲೇಖನದಲ್ಲಿ ನಾವು E Swathu ಬಗ್ಗೆ ಪರಿಚಯ, ಅಭಿಯಾನದ ಹಿನ್ನೆಲೆ, ಸರಕಾರದ ಉದ್ದೇಶ, ಇ ಸ್ವತ್ತಿನ ಪ್ರಯೋಜನಗಳು, ಡಿಜಿಟಲ್ ದಾಖಲೆಗಳ ಮಹತ್ವ, ಅರ್ಜಿ ಪ್ರಕ್ರಿಯೆ, ಅಗತ್ಯ ದಾಖಲೆಗಳು ಮತ್ತು ಪ್ರಶ್ನೋತ್ತರಗಳನ್ನು ಸಂಪೂರ್ಣವಾಗಿ ನೀಡಿದ್ದೇವೆ, ಆದ್ದರಿಂದ ಪ್ರಸ್ತುತ ಲೇಖನವನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಳ್ಳಿ.

 

ಇ ಸ್ವತ್ತು ಎಂದರೆ ಏನು

E Swathu ಎಂದರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ವಸತಿ ಉದ್ದೇಶದ ಮನೆಗಳು, ನಿವೇಶನಗಳು, ವಾಣಿಜ್ಯ ಕಟ್ಟಡ ಹಾಗೂ ಖಾಲಿ ಜಾಗ ಹಾಗೂ ಇತರೆ ಆಸ್ತಿಗಳ ಮಾಹಿತಿಯನ್ನು ಡಿಜಿಟಲ್ ಆಯಾಮಗಳಲ್ಲಿ ದಾಖಲಿಸಿ ನಿರ್ವಹಿಸುವ ವ್ಯವಸ್ಥೆಯಾಗಿದ್ದು ಈ ಹಿಂದೆ ಕೈಬರಹದ ದಾಖಲೆಗಳು ಹಾಗೂ ಕಾಗದದ ಆಧಾರದ ಮೇಲೆ ನಿರ್ವಹಿಸಲಾಗುತ್ತಿದ್ದ ಮಾಹಿತಿಯನ್ನು ಈಗ ಕಂಪ್ಯೂಟರ್ ಆಧಾರಿತ ಡಿಜಿಟಲ್ ವ್ಯವಸ್ಥೆಯಲ್ಲಿ ಸುರಕ್ಷಿತವಾಗಿ ಹಾಗೂ ಬೇಗನೆ ಸಂಪರ್ಕಿಸುವಂತೆ ಸಂಗ್ರಹಿಸಲಾಗುತ್ತಿದೆ

E Swathu ಎಂದರೆ ಸರಳವಾಗಿ ಹೇಳುವುದಾದರೆ ಇದೊಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಸ್ತಿಗೆ ಸಂಬಂಧಿಸಿದ ಅಧಿಕೃತ ಡಿಜಿಟಲ್ ದಾಖಲೆಯಾಗಿದ್ದು ಇದರಲ್ಲಿ ಆಸ್ತಿ ಮಾಲಿಕರ ಹೆಸರು, ಆಸ್ತಿ ಸಂಖ್ಯೆ, ಖಾತೆ ಮಾಹಿತಿ ಮತ್ತು ತೆರಿಗೆ ವಿವರಗಳು ಸೇರಿದಂತೆ ಇನ್ನು ಪ್ರಮುಖ ಮಾಹಿತಿಗಳನ್ನು ಸೇರಿಸಲಾಗಿದೆ

ಈ ವ್ಯವಸ್ಥೆಯ ಮುಖ್ಯ ಉದ್ದೇಶವು ಕೇವಲ ಡಿಜಿಟಲ್ ದಾಖಲೆ ಸೃಷ್ಟಿಸುವುದು ಅಲ್ಲದೆ ಆಸ್ತಿ ದಾಖಲೆಗಳಲ್ಲಿನ ಪಾರದರ್ಶಕತೆಯನ್ನು ಹೆಚ್ಚಿಸಲು, ನಕಲಿ ದಾಖಲೆ ಸೃಷ್ಟಿಗಳನ್ನು ತಡೆಯಲು, ಆಸ್ತಿ ಸಂಬಂಧಿತ ವ್ಯವಹಾರಗಳನ್ನು ಸುಲಭವಾಗಿ ಆಸ್ತಿಯನ್ನು ಹೊಂದಿರುವ ಸಾರ್ವಜನಿಕರಿಗೆ ವೇಗವಾದ ಸೇವಾ ಸೌಲಭ್ಯಗಳನ್ನು ಒದಗಿಸಲು ಈ ವ್ಯವಸ್ಥೆ ಸಹಕಾರಿಯಾಗಲಿದೆ

E Swathu ಏಕೆ ಅಗತ್ಯವಾಗಿದೆ

ಗ್ರಾಮೀಣ ಪ್ರದೇಶಗಳಲ್ಲಿ ಈ ಹಿಂದೆ ಹಲವು ವರ್ಷಗಳಿಂದ ಮನೆಗಳು ಮತ್ತು ನಿವೇಶನಗಳ ದಾಖಲೆಗಳು ವಿವಿಧ ರೂಪದಲ್ಲಿ ನಿರ್ವಹಿಸಲ್ಪಡುತ್ತಿದ್ದವು ಅಂದರೆ ಕೆಲವು ಪ್ರದೇಶಗಳಲ್ಲಿ ದಾಖಲೆಗಳು ಅಪೂರ್ಣವಾಗಿದ್ದರೆ ಕೆಲವು ಕಡೆ ಪ್ರಸ್ತುತ ಇರುವ ದಾಖಲೆಗಳಲ್ಲಿ ಯಾವುದೇ ತಿದ್ದುಪಡಿಗಳು ಆಗುತ್ತಿರಲಿಲ್ಲ ಇನ್ನೂ ಕೆಲವು ಕಡೆಗಳಲ್ಲಿ ಮಾಲೀಕತ್ವದ ವಿಷಯದಲ್ಲಿ ಸ್ಪಷ್ಟತೆ ಇರುತ್ತಿರಲಿಲ್ಲ

ಇಂತಹ ಸಂದರ್ಭದಲ್ಲಿ ಆಸ್ತಿಗಳ ಮಾರಾಟ, ಭೂಮಿ ಖರೀದಿ-ಮಾರಾಟ ಹಾಗೂ ಒಬ್ಬರಿಂದ ಇನ್ನೊಬ್ಬರಿಗೆ ವರ್ಗಾವಣೆ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿದ್ದವು. ಕೆಲವೊಂದು ಸಂದರ್ಭಗಳಲ್ಲಿ ಒಂದೇ ಆಸ್ತಿಗೆ ಸಂಬಂಧಿಸಿದಂತೆ ಎರಡು ಬೇರೆ ಬೇರೆ ರೀತಿಯ ದಾಖಲೆಗಳು ಕಂಡುಬರುವಂತಹ ಸಮಸ್ಯೆಗಳು ಸಹ ಉಂಟಾಗುತ್ತಿದ್ದವು.

ಈ ಎಲ್ಲ ಸಮಸ್ಯೆಗಳನ್ನು ನಿವಾರಿಸಲು ಕರ್ನಾಟಕ ಸರ್ಕಾರವು ಸಂಬಂಧಿಸಿದ ಆಸ್ತಿ ಮಾಹಿತಿಯನ್ನು ಒಂದೇ ಡಿಜಿಟಲ್ ವೇದಿಕೆಯಲ್ಲಿ ನಿರ್ವಹಿಸುವ ವ್ಯವಸ್ಥೆಯನ್ನು ಜಾರಿಗೆ ತಂದಿದೆ

E Swathu ಎಂಬ ಡಿಜಿಟಲ್ ದಾಖಲೆಯಿಂದ ಮಾಹಿತಿಯು ಸುರಕ್ಷಿತವಾಗಿ ಸಂಗ್ರಹವಾಗುತ್ತದೆ ಅಗತ್ಯವಿದ್ದಲ್ಲಿ ಈ ಎಲ್ಲ ದಾಖಲೆಗಳನ್ನು ಪರಿಶೀಲಿಸುವುದು ಸಹ ಸುಲಭವಾಗುತ್ತದೆ ಅಧಿಕಾರಿಗಳಿಗೂ ಸಾರ್ವಜನಿಕರಿಗೂ ಮಾಹಿತಿ ಲಭ್ಯವಾಗುವುದರಿಂದ ಪಾರದರ್ಶಕ ಆಡಳಿತ ಜೊತೆಯಲ್ಲಿ ವಿಶ್ವಾಸಾರ್ಹತೆಯೂ ಸಹ ಹೆಚ್ಚುತ್ತದೆ

ಮನೆ ಮನೆಗೆ ಈ ಸ್ವತ್ತು ಅಭಿಯಾನ ಇದೊಂದು ಹೊಸ ಹೆಜ್ಜೆ

ಇದುವರೆಗೆ ಇ ಸ್ವತ್ತು ಪ್ರಮಾಣ ಪತ್ರ ಪಡೆಯಲು ಸಾರ್ವಜನಿಕರು ಸರ್ಕಾರಿ ಕಚೇರಿಗಳಾದ ಗ್ರಾಮ ಪಂಚಾಯಿತಿಗೆ ತೆರಳಿ ಅರ್ಜಿ ಸಲ್ಲಿಸಬೇಕಾಗಿತ್ತು ಅರ್ಜಿ ಸಲ್ಲಿಸಿದ ನಂತರ ನಿಗದಿತ ದಿನಾಂಕದಂದು ಅಧಿಕಾರಿಗಳು ಬಂದು ದಾಖಲೆಗಳನ್ನು ಪರಿಶೀಲಿಸುತ್ತಿದ್ದರು

ಮಾಹಿತಿ ತಿದ್ದುಪಡಿ ಅಗತ್ಯತೆ ಇದ್ದಲ್ಲಿ ಅದನ್ನು ತಿದ್ದುಪಡಿ ಮಾರ್ಪಾಡಿಸಿದರೆ, ಅನುಮೋದನೆಗಾಗಿ ಅನೇಕ ಬಾರಿ ಕಚೇರಿಗಳಿಗೆ ಭೇಟಿ ನೀಡಬೇಕಾಗಿತ್ತು. ಗ್ರಾಮೀಣ ಭಾಗದ ಜನರಿಗೆ ಇದೊಂದು ಸಮಯ ವ್ಯರ್ಥ ಹಾಗೂ ಶ್ರಮ ವ್ಯರ್ಥ ಪ್ರಕ್ರಿಯೆಯಾಗಿತ್ತು. ಇದರ ಜೊತೆಯಲ್ಲಿ ಹಣವು ಸಹ ವ್ಯರ್ಥವಾಗುತ್ತಿತ್ತು

ಈ ಸಮಸ್ಯೆಯನ್ನು ಗಮನಿಸಿದ ಸರ್ಕಾರವು ಮನೆಮನೆಗೆ ಇ ಸ್ವತ್ತು ಅಭಿಯಾನವನ್ನು ಆರಂಭಿಸಿದ್ದು, ಈ ಅಭಿಯಾನದಡಿಯಲ್ಲಿ ಅಧಿಕಾರಿಗಳು ನೇರವಾಗಿ ಗ್ರಾಮಗಳಿಗೆ ಭೇಟಿ ನೀಡಿ ಆಸ್ತಿ ದಾಖಲೆಗಳ ಪರಿಶೀಲನೆ ಮಾಡಿ ಅಗತ್ಯ ದಾಖಲೆಗಳನ್ನು ಸ್ಥಳದಲ್ಲಿಯೇ ಪರಿಶೀಲಿಸಿ ಅರ್ಹ ಫಲಾನುಭವಿಗಳಿಗೆ ಇ ಸ್ವತ್ತು ಸೇವೆಯನ್ನು ಸುಲಭವಾಗಿ ಒದಗಿಸುವಂತೆ ಕರ್ನಾಟಕ ಸರ್ಕಾರವು ಕ್ರಮವನ್ನು ಜರುಗಿಸಲಿದೆ

E Swathu ಕ್ರಮದ ಮೂಲಕ ಸರ್ಕಾರಿ ಸೇವೆಗಳು ಕಚೇರಿಗಳಿಂದ ಜನರ ಮನೆ ಬಾಗಿಲಿಗೆ ನೇರವಾಗಿ ತಲುಪುವ ಹೊಸ ಆಡಳಿತ ವ್ಯವಸ್ಥೆಗೆ ಪ್ರಾರಂಭ ನೀಡಲಿದೆ

ಈ ಅಭಿಯಾನದ ಪ್ರಮುಖ ಉದ್ದೇಶಗಳು

ಕರ್ನಾಟಕ ರಾಜ್ಯ ಸರ್ಕಾರದ E Swathu ಅಭಿಯಾನವು ಪ್ರಮುಖ ಜನಸ್ನೇಹಿ ಯೋಜನೆ ಆಗಿರುವುದರ ಜೊತೆಯಲ್ಲಿ ಹೊಂದಿರುವ  ಪ್ರಾಮುಖ್ಯತೆಗಳು ಈ ಕೆಳಕಂಡಂತಿದೆ

  • ಗ್ರಾಮೀಣ ಪ್ರದೇಶದ ಜನರಿಗೆ ಅವರ ಆಸ್ತಿ ದಾಖಲೆಗಳನ್ನು ಸುಲಭವಾಗಿ ಒದಗಿಸುವ ಪ್ರಕ್ರಿಯೆ
  • ಸರ್ಕಾರಿ ಕಚೇರಿಗಳಿಗೆ ಪದೇ ಪದೇ ಭೇಟಿ ನೀಡುವಾಗ ಅಗತ್ಯವನ್ನು ಕಡಿಮೆ ಮಾಡುವುದು
  • ಆಸ್ತಿ ಮಾಹಿತಿಗಳನ್ನು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿ ಮತ್ತು ಪರಿಣಾಮಕಾರಿಯಾಗಿ ನಿರ್ವಹಿಸುವುದು
  • ದಾಖಲೆ ಪರಿಶೀಲನೆ ಮತ್ತು ಪ್ರಮಾಣ ಪತ್ರ ವಿತರಣೆ ಪ್ರಕ್ರಿಯೆಯಲ್ಲಿ ಯಾವುದೇ ಸಮಯ ವ್ಯರ್ಥವನ್ನು ಮಾಡದೆ ವೇಗಗೊಳಿಸುವುದು
  • ನಾಗರೀಕರ ಸಮಯ ಶ್ರಮ ಹಾಗೂ ಹಣವನ್ನು ಉಳಿಸುವುದು
  • ಪಾರದರ್ಶಕ ಮತ್ತು ಭ್ರಷ್ಟಾಚಾರ ರಹಿತ ಆಡಳಿತ ವ್ಯವಸ್ಥೆಯನ್ನು ತರುವುದು
  • ಗ್ರಾಮೀಣ ಪ್ರದೇಶಗಳಲ್ಲಿಯೂ ಸಹ ಡಿಜಿಟಲ್ ಆಡಳಿತವನ್ನು ಪರಿಣಾಮಕಾರಿಯಾಗಿ ಮತ್ತು ಹೆಚ್ಚು ಉಪಯುಕ್ತಕಾರಿಯಾಗಿ ಜಾರಿಗೆ ತರುವುದು

ಇ ಸ್ವತ್ತು ವ್ಯವಸ್ಥೆಯ ಪ್ರಮುಖ ವೈಶಿಷ್ಟ್ಯಗಳು

ಇ ಸ್ವತ್ತು ವ್ಯವಸ್ಥೆಯು ಗ್ರಾಮೀಣ ಭಾಗದ ಜನರಿಗೆ ಆಸ್ತಿ ನಿರ್ವಹಣೆಯಲ್ಲಿ ಕೆಲವು ಹೊಸ ಅವಕಾಶಗಳನ್ನು ಒದಗಿಸುತ್ತದೆ ಇದರಿಂದ ಜನರು ತಮ್ಮ ಆಸ್ತಿ ಸಂಬಂಧಿಸಿದ ಕಳೆಗಳನ್ನು ಸುಲಭವಾಗಿ ಪಡೆದು ನವೀಕರಿಸಿ ಸುರಕ್ಷಿತವಾಗಿಟ್ಟುಕೊಳ್ಳಬಹುದು ಇದರ ಪ್ರಮುಖ ಲಕ್ಷಣಗಳು ಈ ಕೆಳಕಂಡಂತಿವೆ

  • ದಾಖಲೆಗಳ ಸುರಕ್ಷತೆ ಮಟ್ಟದಲ್ಲಿ ಹೆಚ್ಚಳ ಮಾಡುವುದು
  • ಆಸ್ತಿ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಣೆ ಮಾಡುವುದು
  • ಅಗತ್ಯವಿದ್ದಲ್ಲಿ ಮಾಹಿತಿಯನ್ನು ಸುಲಭವಾಗಿ ಪರಿಶೀಲನೆ ಮಾಡುವುದು
  • ಸರ್ಕಾರಿ ಇಲಾಖೆಗಳ ನಡುವೆ ಆಸ್ತಿ ಸಂಬಂಧಿತ ಮಾಹಿತಿ ವಿನಿಮಯವನ್ನು ಸುಲಭಗೊಳಿಸುವುದು
  • ನಕಲಿ ದಾಖಲೆಗಳನ್ನು ಸೃಷ್ಟಿಸುವಲ್ಲಿ ಸಾಧ್ಯತೆಯನ್ನು ಕಡಿಮೆಗೊಳಿಸಬಹುದು
  • ಭವಿಷ್ಯದಲ್ಲಿ ಡಿಜಿಟಲ್ ಆಡಳಿತವನ್ನು ಮತ್ತಷ್ಟು ಬಲಪಡಿಸಬಹುದು

ಗ್ರಾಮೀಣ ಪ್ರದೇಶದ ಜನರಿಗೆ ಇದೊಂದು ದೊಡ್ಡ ಸಂತಸದ ಸುದ್ದಿ

ಗ್ರಾಮೀಣ ಪ್ರದೇಶದ ಜನರು ಸಾಮಾನ್ಯವಾಗಿ ಸರ್ಕಾರಿ ದಾಖಲೆಗಳನ್ನು ಪಡೆಯಲು ಅಥವಾ ನವೀಕರಿಸಲು ದೂರದ ಗ್ರಾಮ ಪಂಚಾಯಿತಿ ಕಚೇರಿಗಳಿಗೆ ಭೇಟಿ ನೀಡಬೇಕಾಗುತ್ತದೆ ಕೆಲವೊಂದು ಸಂದರ್ಭಗಳಲ್ಲಿ ಒಂದು ಸಾಮಾನ್ಯ ದಾಖಲೆಗಾಗಿ ಹಲವು ಬಾರಿ ಪ್ರಯಾಣ ಮಾಡಬೇಕಾಗುತ್ತದೆ

ಇದರಿಂದ ದಿನಗೂಲಿ ಕಾರ್ಮಿಕರು ತಮ್ಮ ಕೆಲಸವನ್ನು ಕಳೆದುಕೊಳ್ಳುವ ಅಥವಾ ಆದಾಯವನ್ನು ಕಡಿಮೆ ಮಾಡಿಕೊಳ್ಳುವ ಪರಿಸ್ಥಿತಿಯೂ ಸಹ ಉಂಟಾಗುತ್ತದೆ

ಇದೀಗ ಮನೆ ಮನೆಗೆ ಇ ಸ್ವತ್ತು ಅಭಿಯಾನ ಜಾರಿಗೆ ಬಂದ ನಂತರ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸುವ ಮೂಲಕ ಸಾರ್ವಜನಿಕರಿಗೆ ಕಚೇರಿಗಳ ಸುತ್ತಾಟ ವನ್ನು ಬಹುತೇಕ ಕಡಿಮೆಗೊಳಿಸಲಾಗಿದೆ ಇದರಿಂದ ಸಮಯ ಉಳಿತಾಯವಾಗುವುದರ ಜೊತೆಯಲ್ಲಿ ಸರಕಾರದ ಮೇಲೆ ಜನರಿಗೆ ವಿಶ್ವಾಸವು ಹೆಚ್ಚುತ್ತದೆ

ಮುಂದುವರೆದು ಡಿಜಿಟಲ್ ದಾಖಲೆಗಳ ಬಳಕೆ ಹೆಚ್ಚುವುದರಿಂದ ಭವಿಷ್ಯದಲ್ಲಿ ಆಸ್ತಿಯನ್ನು ಖರೀದಿಸುವುದು, ಮಾರಾಟ ಮಾಡುವುದು ವರ್ಗಾವಣೆಗೆ ಒಳಪಡಿಸುವುದು ಬ್ಯಾಂಕುಗಳಲ್ಲಿ ಸಾಲ ತೆಗೆದುಕೊಳ್ಳಲು ಹಾಗೂ ಇತರೆ ಕಾನೂನು ಸಂಬಂಧಪಟ್ಟ ಪ್ರಕ್ರಿಯೆಗಳು ಹೆಚ್ಚು ಸುಲಭವಾಗಲಿವೆ

ಮನೆ ಮನೆಗೆ ಇ ಸ್ವತ್ತು ಅಭಿಯಾನ ಯಾವ ರೀತಿ ಕಾರ್ಯನಿರ್ವಹಿಸುತ್ತದೆ

ಕರ್ನಾಟಕ ಸರ್ಕಾರವು ಗ್ರಾಮೀಣ ಭಾಗದ ಜನರಿಗೆ ಸರ್ಕಾರಿ ಸೇವೆಗಳನ್ನು ಪರಿಣಾಮಕಾರಿಯಾಗಿ ಹಾಗೂ ವೇಗವಾಗಿ ತಲುಪಿಸುವ ಉದ್ದೇಶದಿಂದ ಮನೆ ಮನೆಗೆ ಇ ಸ್ವತ್ತು ಅಭಿಯಾನವನ್ನು ರೂಪಿಸಿದ್ದು ಈ ಅಭಿಯಾನದ ಮುಖ್ಯ ಉದ್ದೇಶವು ಜನರು ಸರ್ಕಾರಿ ಕಚೇರಿಗಳಿಗೆ ಅನಗತ್ಯವಾಗಿ ಭೇಟಿ ಮಾಡುವ ಮತ್ತು ಅಲೆದಾಡುವ ಪರಿಸ್ಥಿತಿಯನ್ನು ತಪ್ಪಿಸಿ ಅಗತ್ಯ ಸೇವೆಗಳನ್ನು ನೇರವಾಗಿ ಗ್ರಾಮ ಮಟ್ಟದಲ್ಲಿಯೇ ಒದಗಿಸುವುದು ಆಗಿದೆ

ಇದುವರೆಗೆ E Swathu ಪ್ರಮಾಣ ಪತ್ರವನ್ನು ಪಡೆಯಲು ಜನರು ಗ್ರಾಮದ ಸರ್ಕಾರಿ ಕಚೇರಿಯಾದ ಗ್ರಾಮ ಪಂಚಾಯಿತಿಗೆ ತೆರಳಿ ಅರ್ಜಿಯನ್ನು ಸಲ್ಲಿಸಿ ದಾಖಲೆ ಪರಿಶೀಲನೆ ಆದ ನಂತರವೇ ಅಗತ್ಯ ತಿದ್ದುಪಡಿಗಳ ನಂತರ ಅಂತಿಮವಾಗಿ ಪ್ರಮಾಣ ಪತ್ರ ಪಡೆಯಲಾಗುತ್ತಿತ್ತು ಆದರೆ ಕೆಲವೊಂದು ಸಂದರ್ಭಗಳಲ್ಲಿ ದಾಖಲೆಗಳಿಗಾಗಿ ಹಲವಾರು ಬಾರಿ ಕಚೇರಿಗೆ ಭೇಟಿ ನೀಡಬೇಕಾಗಿತ್ತು

ಈ ಸಮಸ್ಯೆಯನ್ನು ನಿವಾರಿಸಲು ಅಧಿಕಾರಿಗಳ ತಂಡವು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿಗೆ ದಾಖಲೆಗಳನ್ನು ಪಡೆದು ಪರಿಶೀಲಿಸಿ ಅನುಮೋದನ ಪ್ರಕ್ರಿಯೆಗೆ ಒಳಪಡಿಸುವ ವ್ಯವಸ್ಥೆಯನ್ನು ಸರ್ಕಾರ ರೂಪಿಸುತ್ತಿದ್ದು ಇದರಿಂದ ನಾಗರೀಕರಿಗೆ ಸಾರ್ವಜನಿಕ ಸೇವೆಗಳನ್ನು ಸುಲಭವಾಗಿ ಹಾಗೂ ವೇಗವಾಗಿ ಒದಗಿಸಲಾಗುತ್ತಿದೆ

ಅಭಿಯಾನದ ಕಾರ್ಯವಿಧಾನ

ಈ ಮನೆಮನೆ E Swathu ಅಭಿಯಾನವನ್ನು ಕರ್ನಾಟಕ ಸರ್ಕಾರವು ಅಂತ ಹಂತವಾಗಿ ಅನುಷ್ಠಾನಗೊಳಿಸುವ ಯೋಜನೆಯನ್ನು ರೂಪಿಸಿದೆ ಸಾಮಾನ್ಯವಾಗಿ ಈಗಳ ಕಂಡ ಕಾರ್ಯ ವಿಧಾನವನ್ನು ಅನುಸರಿಸುತ್ತದೆ

ಗ್ರಾಮವಾರು ವೇಳಾಪಟ್ಟಿ ಪ್ರಕಟಣೆ

ಮೊದಲು ಯಾವ ಯಾವ ಗ್ರಾಮಗಳಲ್ಲಿ ಯಾವ ದಿನ ಮನೆಮನೆ ಇ ಸ್ವತ್ತು ಪರಿಶೀಲನೆ ನಡೆಯುತ್ತದೆ ಎಂಬ ಮಾಹಿತಿಯನ್ನು ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಆಡಳಿತದ ಮೂಲಕ ಸಾರ್ವಜನಿಕರಿಗೆ ಮತ್ತು ಮನೆ ಮಾಲೀಕರುಗಳಿಗೆ ತಿಳಿಸಲಾಗುತ್ತದೆ ಗ್ರಾಮ ಸಭೆಗಳು ಸೂಚನಾ ಫಲಕಗಳು ಹಾಗೂ ಸ್ಥಳೀಯ ಮಟ್ಟದಲ್ಲಿನ ಪ್ರಕಟಣೆಗಳ ಮೂಲಕ ಮಾಹಿತಿಯನ್ನು ನೀಡುವ ಯೋಜನೆಯನ್ನು ರೂಪಿಸಿದೆ

ಅಧಿಕಾರಿಗಳ ಗ್ರಾಮ ಭೇಟಿ

ನಿಗದಿತ ದಿನಾಂಕಗಳಂದು ಅಧಿಕಾರಿಗಳು ಮತ್ತು ಸಂಬಂಧಪಟ್ಟ ಸಿಬ್ಬಂದಿಗಳು ಗ್ರಾಮಕ್ಕೆ ಭೇಟಿ ನೀಡುತ್ತಾರೆ ಈ ಸಮಯದಲ್ಲಿ ಸಾರ್ವಜನಿಕರು ಆಸ್ತಿ ದಾಖಲೆಗಳೊಂದಿಗೆ ಸ್ಥಳಕ್ಕೆ ಆಗಮಿಸಿ, ಸ್ಥಳ ಪರಿಶೀಲನೆ ಮಾಡಿಸಬಹುದಾಗಿರುತ್ತದೆ

ದಾಖಲೆಗಳ ಪರಿಶೀಲನೆ

ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಕೇಳಿದಾಗ ನೀವು ನೀಡಬೇಕಾಗುತ್ತದೆ ಆ ದಾಖಲೆಗಳಲ್ಲಿ ಯಾವುದಾದರು ವ್ಯತ್ಯಾಸ ಕಂಡು ಬಂದರೆ ಆ ಮಾಹಿತಿಯನ್ನು ದಾಖಲಿಸಿಕೊಳ್ಳಲಾಗುತ್ತದೆ ಸಾಮಾನ್ಯವಾಗಿ ಈ ಕೆಳಕಂಡ ವಿವರಗಳನ್ನು ಪರಿಶೀಲಿಸಲಾಗುತ್ತದೆ

  • ಮಾಲೀಕರ ಹೆಸರು
  • ವಿಳಾಸ
  • ಆಸ್ತಿ ಸಂಖ್ಯೆ
  • ಖಾತೆ ವಿವರ
  • ತೆರಿಗೆ ಮಾಹಿತಿ

ಈ ಎಲ್ಲಾ ವಿವರಗಳನ್ನು ಪರಿಶೀಲಿಸಿ ಡಿಜಿಟಲ್ ದಾಖಲೆಗಳೊಂದಿಗೆ ಹೋಲಿಕೆ ಮಾಡಿ ಮಾಹಿತಿಯನ್ನು ಪಡೆಯಲಾಗುತ್ತದೆ

ತಿದ್ದುಪಡಿ ಪ್ರಕ್ರಿಯೆ

ಯಾವುದೇ ಮಾಹಿತಿ ತಪ್ಪಾಗಿದ್ದರೆ ಅಗತ್ಯ ದಾಖಲೆಗಳನ್ನು ಒದಗಿಸುವುದರ ಮೂಲಕ ತಿದ್ದುಪಡಿಯನ್ನು ಆರಂಭಿಸಲಾಗುತ್ತದೆ ಉದಾಹರಣೆಗೆ

  • ಹೆಸರಿನಲ್ಲಿ ತಪ್ಪುಗಳು
  • ವಿಳಾಸದಲ್ಲಿ ಬದಲಾವಣೆ
  • ಮಾಲಿಕತ್ವಕ್ಕೆ ಸಂಬಂಧಪಟ್ಟಂತೆ ದಾಖಲೆಗಳ ತಪ್ಪು ಮಾಹಿತಿ
  • ದಾಖಲೆಗಳಲ್ಲಿ ದೋಷ

E Swathu ಪ್ರಮಾಣ ಪತ್ರ ವಿತರಣೆ

ದಾಖಲೆಗಳ ಪರಿಶೀಲನೆ ಪೂರ್ಣಗೊಂಡ ನಂತರ ಅರ್ಹ ಫಲಾನುಭವಿಗಳಿಗೆ ಇ ಸ್ವತ್ತು ಪ್ರಮಾಣ ಪತ್ರವನ್ನು ಅಧಿಕಾರಿಗಳು ನೀಡುತ್ತಾರೆ ಅಥವಾ ಡಿಜಿಟಲ್ ವ್ಯವಸ್ಥೆಯಲ್ಲಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗುತ್ತದೆ

ಅಭಿಯಾನದಿಂದ ಯಾರಿಗೆ ಹೆಚ್ಚು ಪ್ರಯೋಜನ

ಅಭಿಯಾನವು ಮುಖ್ಯವಾಗಿ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿರುವ ಕೆಳಗಿನ ಹಾಗೂ ದುರ್ಬಲ ವರ್ಗದ ಜನರಿಗೆ ಅನುಕೂಲವಾಗಲಿದೆ ವಿಶೇಷವಾಗಿ

  • ಮನೆ ಹೊಂದಿರುವ ಕುಟುಂಬಗಳು
  • ಗ್ರಾಮೀಣ ಪ್ರದೇಶದಲ್ಲಿ ಇರುವ ಆಸ್ತಿ ಮಾಲೀಕರು
  • ಹೊಸ ಮನೆ ನಿರ್ಮಿಸಿರುವವರು
  • ನಿವೇಶನ ಹೊಂದಿರುವವರು
  • ಆಸ್ತಿ ದಾಖಲೆ ತಿದ್ದುಪಡಿ ಮಾಡಿಸಬೇಕಾಗಿರುವವರು
  • ಸರ್ಕಾರಿ ಯೋಜನೆಗಳಿಗೆ ಆಸ್ತಿ ದಾಖಲೆ ಅಗತ್ಯವಿರುವವರು
  • ವಾರಸುದಾರರ ಹೆಸರಿಗೆ ಆಸ್ತಿ ವರ್ಗಾವಣೆ ಮಾಡಬೇಕು ಎಂದು ಬಯಸಿರುವವರು

ಸರ್ಕಾರದ ಪ್ರಮುಖ ಉದ್ದೇಶಗಳು

ಈ ಅಭಿಯಾನವು ಕೇವಲ E Swathu ಪ್ರಮಾಣ ಪತ್ರವನ್ನು ವಿತರಿಸುವ ಕಾರ್ಯಕ್ರಮವಲ್ಲದೆ ಗ್ರಾಮೀಣ ಮಟ್ಟದ ಆಡಳಿತದಲ್ಲಿ ಡಿಜಿಟಲ್ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಸರ್ಕಾರವು ಇಟ್ಟಿರುವ ದೊಡ್ಡ ಹೆಜ್ಜೆಯಾಗಿದೆ ಸರ್ಕಾರವು ಈ ಯೋಜನೆ ಮೂಲಕ ಈ ಕೆಳಕಂಡ ಪ್ರಮುಖ ಉದ್ದೇಶಗಳನ್ನು ಸಾಧಿಸಲು ಬಯಸುತ್ತದೆ ಅವುಗಳೆಂದರೆ

ಡಿಜಿಟಲ್ ಆಡಳಿತವನ್ನು ಬಲಪಡಿಸುವುದು

ಸರ್ಕಾರವು ಎಲ್ಲಾ ಆಸ್ತಿ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿ ನಿರ್ವಹಿಸುವುದರಿಂದ ಭವಿಷ್ಯದಲ್ಲಿ ಎಲ್ಲಾ ಮಾಹಿತಿಗಳು ಸುಲಭವಾಗಿ ಲಭ್ಯವಾಗುತ್ತವೆ

ಸಾರ್ವಜನಿಕರಿಗೆ ವೇಗವಾದ ಸೇವೆ ನೀಡುವುದು

ಕಚೇರಿಗಳಿಗೆ ಹಲವಾರು ಬಾರಿ ಭೇಟಿ ನೀಡುವ ಬದಲು ಗ್ರಾಮಮಟ್ಟದಲ್ಲಿಯೇ ಸೇವೆ ದೊರೆಯುವುದರಿಂದ ಸಮಯದಲ್ಲಿ ಉಳಿತಾಯವಾಗುತ್ತದೆ

ಪಾರದರ್ಶಕತೆ ಹೆಚ್ಚಳ

ಎಲ್ಲ ಮಾಹಿತಿಯು ಡಿಜಿಟಲ್ ದಾಖಲೆಗಳ ಮೂಲಕ ಸಂಗ್ರಹಣೆಗೊಂಡು ಸ್ಪಷ್ಟವಾಗಿ ಲಭ್ಯವಾಗುವುದರಿಂದ ಅಕ್ರಮ ಚಟುವಟಿಕೆಗಳಿಗೆ ಅವಕಾಶ ಕಡಿಮೆಯಾಗುತ್ತದೆ

ಭ್ರಷ್ಟಾಚಾರ ನಿಯಂತ್ರಣ

ಈ ಸಂಪೂರ್ಣ ಪ್ರಕ್ರಿಯೆಯು ಡಿಜಿಟಲ್ ದಾಖಲೆಗಳು ಹಾಗೂ ಆನ್ಲೈನ್ ಮೂಲಕ ದಾಖಲಾತಿಗಳು ನಮೂದಾಗುವುದರಿಂದ ಅನಗತ್ಯ ಮಧ್ಯವರ್ತಿಗಳ ಪಾತ್ರ ಕಡಿಮೆಯಾಗುತ್ತದೆ ಇದರಿಂದ ಭ್ರಷ್ಟಾಚಾರ ನಿಯಂತ್ರಣವಾಗುತ್ತದೆ

ಗ್ರಾಮೀಣಾಭಿವೃದ್ಧಿ ಸಾಧನೆ

ಗ್ರಾಮಮಟ್ಟದಲ್ಲಿಯೇ ಈ ಎಲ್ಲಾ ಡಿಜಿಟಲ್ ಸೇವೆಗಳು ದೊರೆಯುವುದರಿಂದ ಸಾರ್ವಜನಿಕರಿಗೆ ಸರಕಾರದ ಮೇಲೆ ವಿಶ್ವಾಸ ಹೆಚ್ಚಿವುದರ ಜೊತೆಯಲ್ಲಿ ಡಿಜಿಟಲ್ ಸೇವೆಗಳನ್ನು ಪ್ರಾದೇಶಿಕ ಮಟ್ಟದಲ್ಲಿಯೇ ಪಡೆಯಬಹುದಾಗಿರುತ್ತದೆ

E Swathu ವ್ಯವಸ್ಥೆಯಿಂದ ಸಿಗುವ ಪ್ರಮುಖ ಪ್ರಯೋಜನಗಳು

ದಾಖಲೆಗಳ ಸುರಕ್ಷತೆ‌

ಕಾಗದ ರೂಪದಲ್ಲಿರುವ ದಾಖಲೆಗಳು ಕಳೆದುಹೋಗುವ, ಹಾಳಾಗುವ ಅಥವಾ ಹರಿದು ಹೋಗುವ ಸಾಧ್ಯತೆ ಇರುತ್ತದೆ ಆದರೆ ಡಿಜಿಟಲ್ ದಾಖಲೆಗಳು ಒಮ್ಮೆ ಸಂಗ್ರಹಿಸಿದರೆ ಅವು ಸುರಕ್ಷಿತವಾಗಿರುತ್ತವೆ

ವೇಗವಾದ ಸೇವೆ

ಆಸ್ತಿ ಮಾಹಿತಿಗೆ ಸಂಬಂಧಿಸಿದ ದಾಖಲೆ ಪರಿಶೀಲನೆ ಮತ್ತು ಪ್ರಮಾಣ ಪತ್ರ ವಿತರಣಾ ಪ್ರಕ್ರಿಯೆಯು ವೇಗವಾಗಿ ನಡೆಯುವುದರಿಂದ ಸಮಯ ವ್ಯರ್ಥವಾಗುವುದಿಲ್ಲ

ಸಮಯದ ಉಳಿತಾಯ

ಗ್ರಾಮ ಪಂಚಾಯಿತಿಗೆ ಹಲವಾರು ಬಾರಿ ಭೇಟಿ ನೀಡುವ ಅವಶ್ಯಕತೆ ಇರುವುದಿಲ್ಲ ಅಧಿಕಾರಿಗಳೇ ಮನೆಗೆ ಬಂದು ಪರಿಶೀಲನೆ ಮಾಡುವುದರಿಂದ ಜನರು ಕಚೇರಿಗೆ ಹೋಗುವುದನ್ನು ತಪ್ಪಿಸಬಹುದು

ಮಾಹಿತಿ ಪಾರದರ್ಶಕತೆ

ಆಸ್ತಿ ಮಾಲೀಕರು, ಆಸ್ತಿ ಎಲ್ಲಿದೆ, ಯಾವ ಖಾತೆಗೆ ಸೇರಿದೆ ಹಾಗೂ ಈ ಆಸ್ತಿಯಲ್ಲಿ ಯಾವ ಅಂಶಗಳಿವೆ ಎಂಬುದು ಸ್ಪಷ್ಟವಾಗಿ ದಾಖಲಾಗುವುದರಿಂದ ಮಾಹಿತಿ ವಿವರಣೆಯಲ್ಲಿ ಪಾರದರ್ಶಕತೆ ಸಾಧಿಸಬಹುದು

ಹಣದ ಉಳಿತಾಯ

ಜನರು ಸರ್ಕಾರಿ ಕಚೇರಿಗಳಿಗೆ ಹೋಗಲು ಖರ್ಚು ಮಾಡಬೇಕಾದ ಪ್ರಯಾಣ ವೆಚ್ಚ ಹಾಗೂ ದಾಖಲೆಗಳಿಗೆ ಆಗುವ ಹೆಚ್ಚುವರಿ ಖರ್ಚನ್ನು ಕಡಿಮೆ ಮಾಡಲಾಗುತ್ತದೆ

ಕಾನೂನು ಬದ್ಧ ದಾಖಲೆಗಳ ನಿರ್ವಹಣೆ

ಡಿಜಿಟಲ್ ದಾಖಲೆಗಳು ಮುಂದಿನ ದಿನಗಳಲ್ಲಿ ಆಸ್ತಿ ಸಂಬಂಧಿತ ವ್ಯವಹಾರಗಳಿಗೆ ಹೆಚ್ಚು ಸಹಕಾರಿಯಾಗಲಿವೆ ಅಂದರೆ ಕಾಗದ ರೂಪದ ದಾಖಲೆಗಳು ಬದಲಾವಣೆಗೆ ಸುಲಭವಾಗಿ ಒಳಪಡಬಹುದು ಆದರೆ ಡಿಜಿಟಲ್ ದಾಖಲೆಗಳ ಬದಲಾವಣೆಗೆ ಹೆಚ್ಚು ಕಾನೂನು ಬದ್ಧ ವ್ಯವಸ್ಥೆಗಳು ಇರುತ್ತವೆ

ಗ್ರಾಮ ಪಂಚಾಯಿತಿಯ ಪಾತ್ರ

E Swathu ವಿತರಣಾ ಪ್ರಕ್ರಿಯೆಯಲ್ಲಿ ಮನೆ ಮನೆಗೆ ಭೇಟಿ ನೀಡುವುದರಿಂದ ಈ ವ್ಯವಸ್ಥೆಯಲ್ಲಿ ಗ್ರಾಮ ಪಂಚಾಯತಿಯ ಪಾತ್ರವು ಅತ್ಯಂತ ಮಹತ್ವದ್ದಾಗಿರುತ್ತದೆ ಈ ಅಭಿಯಾನದಡಿಯಲ್ಲಿ ಗ್ರಾಮ ಪಂಚಾಯತಿಯು ಈ ಕೆಳಕಂಡ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುತ್ತದೆ ಅವುಗಳೆಂದರೆ

  • ದಾಖಲೆ ಪರಿಶೀಲನೆ ಮಾಡುವುದು
  • ಸಾರ್ವಜನಿಕರಿಂದ ಅರ್ಜಿಗಳನ್ನು ಸ್ವೀಕರಿಸುವುದು
  • ಮಾಹಿತಿಗಳನ್ನು ಡಿಜಿಟಲ್ ವ್ಯವಸ್ಥೆಯಲ್ಲಿ ದಾಖಲಿಸುವುದು
  • ಅಗತ್ಯ ತಿದ್ದುಪಡಿಗಳನ್ನು ಮಾಡುವುದು
  • ಪ್ರಮಾಣ ಪತ್ರ ವಿತರಣಾ ಪ್ರಕ್ರಿಯೆಗೆ ಸಹಕಾರ ನೀಡುವುದು
  • ಸಾರ್ವಜನಿಕರಿಗೆ ಮಾರ್ಗದರ್ಶನ ನೀಡುವುದು

ಸಾರ್ವಜನಿಕರ ಸಹಕಾರ ಹೇಗಿರಬೇಕು

ಯಾವುದೇ ಸರ್ಕಾರಿ ಯೋಜನೆಗಳು ಜನಸ್ನೇಹಿ ಯಾಗಿದ್ದರೆ ಅವುಗಳಿಗೆ ಸರ್ಕಾರವು ಯಾವ ರೀತಿ ಸಹಕರಿಸುತ್ತದೆ ಎಂಬುದರ ಜೊತೆಯಲ್ಲಿ ಜನರು ಯಾವ ರೀತಿ ಪ್ರತಿಕ್ರಿಯೆಸುತ್ತಾರೆ ಎಂಬುದು ಸಹ ಅಗತ್ಯವಾಗುತ್ತದೆ ಈ ಕೆಳಕಂಡ ಅಂಶಗಳನ್ನು ಪಾಲಿಸುವುದರಿಂದ ಈ ವ್ಯವಸ್ಥೆಗೆ ಮತ್ತು ಪ್ರಕ್ರಿಯೆ ಪೂರ್ಣಗೊಳಿಸಲು ನೀವು ಕೂಡ ಸಹಕರಿಸಬಹುದು ಅವುಗಳೆಂದರೆ

  • ಅಧಿಕಾರಿಗಳು ದಾಖಲೆಗಳನ್ನು ಕೇಳಿದಾಗ ಸರಿಯಾದ ದಾಖಲೆಗಳನ್ನು ಒದಗಿಸಬೇಕು
  • ಯಾವುದೇ ಕಾರಣಕ್ಕೂ ತಪ್ಪು ಮಾಹಿತಿಯನ್ನು ನೀಡಬಾರದು
  • ಮೂಲ ದಾಖಲೆಗಳನ್ನು ಸುರಕ್ಷಿತವಾಗಿ ಇಟ್ಟುಕೊಂಡು ಜೆರಾಕ್ಸ್ ಪ್ರತಿಗಳನ್ನು ಆದಷ್ಟು ನೀಡಬೇಕು
  • ಅಧಿಕಾರಿಗಳು ಕೇಳುವ ಮಾಹಿತಿಯನ್ನು ಸರಿಯಾಗಿ ಸ್ಪಷ್ಟವಾಗಿ ಸರಿಯಾದ ಸಮಯಕ್ಕೆ ನೀಡಬೇಕು
  • ದಾಖಲೆಗಳಲ್ಲಿ ವ್ಯತ್ಯಾಸ ಕಂಡು ಬಂದರೆ ತಕ್ಷಣವೇ ಅಧಿಕಾರಿಗಳಿಗೆ ತಿಳಿಸಬೇಕು

ಡಿಜಿಟಲ್ ದಾಖಲೆಗಳ ಮಹತ್ವ

ಇಂದಿನ ಡಿಜಿಟಲ್ ಯುಗದಲ್ಲಿ ಪ್ರತಿಯೊಂದು ಇಲಾಖೆಯೂ ಸಹ ಮಾಹಿತಿ ತಂತ್ರಜ್ಞಾನವನ್ನು ಆಧುನಿಕರಣ ಗೊಳಿಸಿ ಅಳವಡಿಸಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಬಳಸುತ್ತಿದ್ದು ಭೂಮಿ, ತೆರಿಗೆ, ಬ್ಯಾಂಕ್, ಗುರುತಿನ ದಾಖಲೆಗಳು, ಮನೆ ಸೇರಿದಂತೆ ಅನೇಕ ಸೇವೆಗಳು ಈಗ ಡಿಜಿಟಲ್ ರೂಪದಲ್ಲಿ ಶೇಖರಣೆ ಆಗಿರುವುದರಿಂದ ಅತಿ ವೇಗವಾಗಿ ಲಭ್ಯವಾಗುತ್ತಿದೆ

ಇದೇ ಆಯಾಮದಡಿಯಲ್ಲಿ E Swathu ಕೂಡ ಗ್ರಾಮೀಣ ಆಸ್ತಿ ದಾಖಲೆಗಳನ್ನು ಆಧುನಿಕ ರೀತಿಯಲ್ಲಿ ನಿರ್ವಹಿಸುವ ಮಹತ್ವದ ಹೆಜ್ಜೆಯಾಗಿದ್ದು ಇದರಿಂದ ಮಾಹಿತಿಯನ್ನು ದೀರ್ಘಾವಧಿವರೆಗೆ ಸುರಕ್ಷಿತವಾಗಿ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ

ಡಿಜಿಟಲ್ ದಾಖಲೆಯ ಮತ್ತೊಂದು ಪ್ರಮುಖ ಪ್ರಯೋಜನವೆಂದರೆ ಮಾಹಿತಿಗಳನ್ನು ಆದಷ್ಟು ಬೇಗ ಹುಡುಕಲು ಸುಲಭವಾಗುತ್ತದೆ ಅಂದರೆ ಈ ಹಿಂದೆ ಹಳೆಯ ದಾಖಲೆಗಳನ್ನು ಹುಡುಕಲು ಸಾಕಷ್ಟು ಸಮಯ ಬೇಕಾಗುತ್ತಿತ್ತು ಹಾಗೂ ಶ್ರಮವು ಕೂಡ ವ್ಯರ್ಥವಾಗುತ್ತಿತ್ತು

ಆದರೆ ಈ ಡಿಜಿಟಲ್ ವ್ಯವಸ್ಥೆಯಿಂದ ಅಗತ್ಯ ಮಾಹಿತಿಯನ್ನು ವೇಗವಾಗಿ ಹುಡುಕುವುದರ ಜೊತೆಯಲ್ಲಿ ಪರಿಶೀಲನೆಗೆ ಅಥವಾ ಬದಲಾವಣೆಗೆ ಒಳಪಡಿಸಬಹುದಾಗಿರುತ್ತದೆ

ಭವಿಷ್ಯದಲ್ಲಿ ಈ ಯೋಜನೆಯಿಂದಾಗುವ ಬದಲಾವಣೆಗಳು

ಮನೆಮನೆಗೆ ಈ ಸ್ವತ್ತು ಅಭಿಯಾನವು ಪರಿಣಾಮಕಾರಿಯಾಗಿ ಜಾರಿಗೆ ಬಂದರೆ ಗ್ರಾಮೀಣ ಆಡಳಿತ ಮಟ್ಟದಲ್ಲಿ ಈ ಕೆಳಕಂಡ ಪ್ರಮುಖ ಬದಲಾವಣೆಗಳನ್ನು ಕಾಣಬಹುದು ಅವುಗಳೆಂದರೆ

  • ಆಸ್ತಿ ದಾಖಲೆಗಳ ನಿರ್ವಹಣೆ ಸುಲಭವಾಗುತ್ತದೆ
  • ಸರ್ಕಾರಿ ಸೇವೆಗಳು ಇನ್ನಷ್ಟು ಜನಸ್ನೇಹಿ ಆಗುತ್ತವೆ
  • ಗ್ರಾಮೀಣ ಜನರಿಗೆ ಸರ್ಕಾರದ ಮೇಲಿನ ವಿಶ್ವಾಸದ ಹೆಚ್ಚಳವಾಗುತ್ತದೆ
  • ಡಿಜಿಟಲ್ ಸೇವೆಗಳ ಬಳಕೆ ಹೆಚ್ಚಾಗುತ್ತದೆ
  • ತಾಂತ್ರಿಕ ವ್ಯವಸ್ಥೆಗಳು ಮತ್ತಷ್ಟು ಬಲಗೊಳ್ಳುತ್ತವೆ
  • ಭವಿಷ್ಯದಲ್ಲಿ ಇನ್ನಷ್ಟು ಸೇವೆಗಳು ಮನೆ ಬಾಗಿಲಿಗೆ ತಲುಪುತ್ತವೆ
  • ಆಸ್ತಿ ಸಂಭಂದಿತ ವ್ಯವಹಾರಗಳು ಇನ್ನಷ್ಟು ಪಾರದರ್ಶಕವಾಗುತ್ತವೆ

E Swathu ದಾಖಲೆ ಏಕೆ ಮುಖ್ಯ

ಪ್ರತಿಯೊಬ್ಬ ಆಸ್ತಿ ಮಾಲೀಕರಿಗೂ ತಮ್ಮ ಮನೆ ನಿವೇಶನ ಅಥವಾ ಹಾಸಿಗೆ ಸಂಬಂಧಿಸಿದ ಇತರೆ ದಾಖಲೆಗಳು ಸರಿಯಾಗಿರುವುದು ಅತ್ಯಂತ ಮುಖ್ಯವಾಗಿರುತ್ತದೆ

ಆಸ್ತಿಯನ್ನು ಖರೀದಿಸುವಾಗ ಮಾರಾಟ ಮಾಡುವಾಗ ತಮ್ಮ ನಂತರ ಇರುವ ವಾರಸುದಾರರಿಗೆ ವರ್ಗಾವಣೆ ಮಾಡುವಾಗ ಅಥವಾ ಬ್ಯಾಂಕಿನಲ್ಲಿ ಸಾಲ ಪಡೆಯುವ ಸಂದರ್ಭಗಳಲ್ಲಿ ಅಧಿಕೃತ ದಾಖಲೆಗಳನ್ನು ಒದಗಿಸುವುದು ಅಗತ್ಯವಾಗಿರುತ್ತದೆ ಇದೇ ಕಾರಣಕ್ಕೆ E Swathu ಪ್ರಮಾಣಪತ್ರಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತಿದೆ

ಈ ಸ್ವತ್ತು ವ್ಯವಸ್ಥೆಯಲ್ಲಿ ಆಸ್ತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಲಾಗುತ್ತದೆ ಇದರಿಂದ ಆಸ್ತಿಯ ಮಾಲೀಕರ ವಿವರಗಳು, ಆಸ್ತಿಯ ವಿಳಾಸ, ಖಾತೆ ಸಂಖ್ಯೆ, ತೆರಿಗೆ ಮಾಹಿತಿ ಸೇರಿದಂತೆ ಹಲವಾರು ರೀತಿಯ ಪ್ರಮುಖ ವಿವರಗಳು ಒಂದೇ ಪ್ರಮಾಣ ಪತ್ರದಲ್ಲಿ ಸುರಕ್ಷಿತವಾಗಿ ಸಂಗ್ರಹವಾಗುತ್ತದೆ

ಇದರಿಂದ ಭವಿಷ್ಯದಲ್ಲಿ ದಾಖಲೆಗಳನ್ನು ಹುಡುಕುವ ಅಥವಾ ಪರಿಶೀಲಿಸುವ ಸಂದರ್ಭದಲ್ಲಿ ಡಿಜಿಟಲ್ ದಾಖಲೆಗಳ ಪ್ರಾಮುಖ್ಯತೆ ಬಹಳ ಉಪಯುಕ್ತವಾಗುತ್ತದೆ

ಈ ಹಿಂದಿನ ವ್ಯವಸ್ಥೆಯಲ್ಲಿ ಕಾಗದದ ದಾಖಲೆಗಳು ಹಾಳಾಗುವುದು ಕಳೆದುಹೋಗುವುದು ಅಥವಾ ಓದಲು ಸಾಧ್ಯವಾಗದಂತಹ ಸಮಸ್ಯೆಗಳು ಎದುರಾಗುತ್ತಿದ್ದವು ಆದರೆ ಇ ಸ್ವತ್ತು ವ್ಯವಸ್ಥೆಯಿಂದ ಈ ಸಮಸ್ಯೆಗಳನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಾಗುತ್ತದೆ

ಆಸ್ತಿ ಮಾಲೀಕರಿಗೆ ಇ ಸ್ವತ್ತಿನಿಂದ ಆಗುವ ಪ್ರಯೋಜನಗಳು

ಡಿಜಿಟಲ್ ದಾಖಲೆಗಳ ಸುರಕ್ಷತೆ

E Swathu ವ್ಯವಸ್ಥೆಯ ಪ್ರಮುಖ ಅಂಶವೆಂದರೆ ದಾಖಲೆಗಳನ್ನು ಸುರಕ್ಷಿತವಾಗಿ ಡಿಜಿಟಲ್ ವ್ಯವಸ್ಥೆಯಲ್ಲಿ ಸಂಗ್ರಹಿಸುವುದು ಕಾಗದ ದಾಖಲೆಗಳಂತೆ ಸುಲಭವಾಗಿ ಹಾಳಾಗುವ ಅಥವಾ ಕಳೆದುಹೋಗುವ ಸಾಧ್ಯತೆಯೂ ತೀರಾ ಕಡಿಮೆಯಾಗುತ್ತದೆ

ಆಸ್ತಿಗಳ ಮಾಹಿತಿಯಲ್ಲಿ ಹೆಚ್ಚಿನ ಪಾರದರ್ಶಕತೆ

ಆಸ್ತಿ ಮಾಲೀಕರ ಹೆಸರು, ಆಸ್ತಿಯ ವಿವರ, ಗ್ರಾಮ ಪಂಚಾಯಿತಿ ದಾಖಲೆಗಳು ಹಾಗೂ ಆಸ್ತಿಗೆ ಸಂಬಂಧಿಸಿದ ಎಲ್ಲ ಮಾಹಿತಿಗಳು ಸ್ಪಷ್ಟವಾಗಿ ದಾಖಲಾಗುತ್ತವೆ ಇದರಿಂದ ಭೂಮಿಯ ಅಥವಾ ಆಸ್ತಿಯ ಮಾಲೀಕತ್ವದ ಬಗ್ಗೆ ಯಾವುದೇ ಗೊಂದಲ ಉಂಟಾಗುವುದಿಲ್ಲ

ನಕಲಿ ದಾಖಲೆಗಳ ನಿಯಂತ್ರಣ

ಈ ಹಿಂದೆ ಕೆಲವು ಸಂದರ್ಭದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸುವುದರ ಮೂಲಕ ವಂಚನೆಗಳನ್ನು ನಡೆಸುವ ಘಟನೆಗಳು ನಡೆಯುತ್ತಿದ್ದವು. ಈ ಡಿಜಿಟಲ್ ವ್ಯವಸ್ಥೆಯಲ್ಲಿ ಮಾಹಿತಿಯನ್ನು ದಾಖಲಿಸುವುದರಿಂದ ಇಂತಹ ಕ್ರಮಗಳಿಗೆ ಕಡಿವಾಣ ಹಾಕಬಹುದಾಗಿದೆ

ಬ್ಯಾಂಕ್ ನಿಂದ ಸಾಲ ಪಡೆಯುವಲ್ಲಿ ಅನುಕೂಲ

ಕೆಲವು ಸಂದರ್ಭದಲ್ಲಿ ಬ್ಯಾಂಕುಗಳು ಸಾಲವನ್ನು ನೀಡಲು ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಕೇಳುತ್ತವೆ ಸರಿಯಾದ ದಾಖಲೆಗಳು ಇದ್ದರೆ ಮಾತ್ರ ಸಾಲ ಪ್ರಕ್ರಿಯೆಯು ಸುಲಭವಾಗಿರುತ್ತದೆ ಮತ್ತು ಹೆಚ್ಚಿನ ಮೊತ್ತದ ಸಾಲವನ್ನು ಪಡೆಯಬಹುದಾಗಿರುತ್ತದೆ ಬ್ಯಾಂಕ್ ಸಾಲದಲ್ಲಿ ಈ ಆಸ್ತಿಯ ಇ ಸ್ವತ್ತು ದಾಖಲೆಯು ಪ್ರಮುಖವಾಗಿರುತ್ತದೆ

ಆಸ್ತಿ ಮಾರಾಟ ಮತ್ತು ಖರೀದಿ ವ್ಯವಸ್ಥೆ ಸುಲಭ

ಆಸ್ತಿಯನ್ನು ಖರೀದಿಸುವ ವ್ಯಕ್ತಿಯು ಆಸ್ತಿಯ ಮಾಹಿತಿಯನ್ನು ಪರಿಶೀಲಿಸಲು ಸಾಧ್ಯವಾಗದೆ ಇದ್ದ ಸಂದರ್ಭದಲ್ಲಿ ಈ ದಾಖಲೆಯನ್ನು ನೀಡುವುದರ ಮೂಲಕ ವ್ಯವಹಾರದಲ್ಲಿ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಬಹುದು ದಾಖಲೆಗಳು ಸ್ಪಷ್ಟವಾಗಿದ್ದರೆ ವ್ಯವಹಾರಗಳು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಪೂರ್ಣಗೊಳ್ಳುತ್ತವೆ

ವಾರಸುದಾರರಿಗೆ ಆಸ್ತಿ ವರ್ಗಾವಣೆ

ಆಸ್ತಿಯ ಮಾಲಿಕತ್ವ ಬದಲಾವಣೆ ಅಥವಾ ವಾರಸುದಾರರಿಗೆ ಆಸ್ತಿ ವರ್ಗಾವಣೆ ಮಾಡುವ ಸಂದರ್ಭದಲ್ಲಿಯೂ ಸಹ ಈ ಡಿಜಿಟಲ್ ದಾಖಲೆಗಳು ಉಪಯುಕ್ತ ದಾಖಲೆಗಳಾಗಿವೆ. ಸರಿಯಾದ ದಾಖಲೆಗಳಿದ್ದರೆ ಈ ವರ್ಗಾವಣೆ ಪ್ರಕ್ರಿಯೆಯು ಸುಲಭವಾಗಿ ಮುಂದುವರಿಯುತ್ತದೆ

ಇ ಸ್ವತ್ತು ದಾಖಲೆಗಳಲ್ಲಿ ಸಾಮಾನ್ಯವಾಗಿ ಯಾವ ಮಾಹಿತಿ ಇರುತ್ತದೆ

ಆಸ್ತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯು ಈ ಸ್ವತ್ತು ದಾಖಲೆಗಳಲ್ಲಿ ಇರುತ್ತದೆ ಸಾಮಾನ್ಯವಾಗಿ E Swathu ದಾಖಲೆಯಲ್ಲಿ ಈ ಕೆಳಕಂಡ ಮಾಹಿತಿಗಳು ಇರುತ್ತವೆ. ಅವುಗಳೆಂದರೆ

  • ಆಸ್ತಿ ಮಾಲೀಕರ ಹೆಸರು
  • ತಂದೆ ಅಥವಾ ಪತಿಯ ಹೆಸರು
  • ಗ್ರಾಮ ಪಂಚಾಯಿತಿಯ ಹೆಸರು
  • ಆಸ್ತಿಯ ವಿಳಾಸ
  • ಮನೆ ಸಂಖ್ಯೆ ಅಥವಾ ಆಸ್ತಿ ಸಂಖ್ಯೆ
  • ವಾರ್ಡ್ ನಂಬರ್ ಮತ್ತು ವಿವರಗಳು
  • ಖಾತೆ ಸಂಖ್ಯೆ
  • ತೆರಿಗೆ ಸಂಬಂಧಿಸಿದ ಮಾಹಿತಿ
  • ಆಸ್ತಿಯ ಸ್ವರೂಪ ಅಂದರೆ ಮನೆ ನಿವೇಶನ ಇತ್ಯಾದಿಗಳು
  • ದಾಖಲೆಗಳ ನವೀಕರಣದ ವಿವರ
  • ಈ ಹಿಂದೆ ನವೀಕರಣಕ್ಕೆ ಒಳಪಟ್ಟ ಪ್ರಮುಖ ವಿವರಗಳು

ಇತ್ತೀಚಿಗೆ ಸಾರ್ವಜನಿಕರು ಎದುರಿಸುತ್ತಿರುವ ತಾಂತ್ರಿಕ ಸಮಸ್ಯೆಗಳು

E Swathu ವ್ಯವಸ್ಥೆಯು ಒಂದು ಡಿಜಿಟಲ್ ವ್ಯವಸ್ಥೆಯಾಗಿದ್ದರೂ ಸಹ ಕೆಲವು ಕಡೆಗಳಲ್ಲಿ ತಾಂತ್ರಿಕ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ದೂರುಗಳು ಸ್ವೀಕೃತವಾಗುತ್ತವೆ ಇವು ಸಾಮಾನ್ಯವಾಗಿ ಸರ್ವರ್ ಸಮಸ್ಯೆಗಳಾಗಿವೆ ಮತ್ತು ದಾಖಲೆ ಪರಿಶೀಲನೆಗೆ ಸಂಬಂಧಿಸಿದ ಸಮಸ್ಯೆಗಳಾಗಿವೆ. ಸಾರ್ವಜನಿಕರಿಂದ ಸ್ವೀಕೃತವಾಗಿರುವ ಸಾಮಾನ್ಯ ಸಮಸ್ಯೆಗಳೆಂದರೆ

  • ಅರ್ಜಿ ಸಲ್ಲಿಸಿದ ನಂತರ ವಿಳಂಬವಾಗುವುದು
  • ಸರ್ವರ್ ಕಾರ್ಯ ನಿರ್ವಹಣೆಯಲ್ಲಿ ಸಮಸ್ಯೆ ಎದುರಾಗುವುದು‌
  • ಮಾಹಿತಿಗಳನ್ನು ಅಪ್ಡೇಟ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುವುದು
  • ಮಾಲೀಕರ ಹೆಸರು ಅಥವಾ ಪೂರ್ಣ ವಿಳಾಸದಲ್ಲಿ ತಪ್ಪು ದಾಖಲೆಗಳಿರುವುದು
  • ದಾಖಲೆ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳ್ಳಲು ವಿಳಂಬವಾಗುವುದು
  • ಡಿಜಿಟಲ್ ದಾಖಲೆಗಳಲ್ಲಿ ಹಳೆಯ ತಿದ್ದುಪಡಿಗೊಳ್ಳದ ಮಾಹಿತಿ ಕಾಣಿಸುವುದು

ಈ ಮೇಲಿನ ಸಮಸ್ಯೆಗಳು ಸೇರಿದಂತೆ ಇನ್ನೂ ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತಿರುವುದರಿಂದ ಅಂತಾಂತವಾಗಿ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಸಂಬಂಧಿತ ಇಲಾಖೆಗಳು ಕ್ರಮ ವಹಿಸುತ್ತಿವೆ

ಸರ್ಕಾರ ಕೈಗೊಂಡಿರುವ ಸುಧಾರಣಾ ಕ್ರಮಗಳು

ಸಾರ್ವಜನಿಕರಿಗೆ E Swathu ವ್ಯವಸ್ಥೆಯಲ್ಲಿ ಉತ್ತಮ ಸೇವೆಯನ್ನು ಒದಗಿಸುವ ಉದ್ದೇಶದಿಂದ ಸರ್ಕಾರವು ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ ಅವುಗಳೆಂದರೆ

  • ಸಾಫ್ಟ್ವೇರ್ ವ್ಯವಸ್ಥೆಗಳ ನವೀಕರಣ
  • ಅಧಿಕಾರಿಗಳಿಗೆ ವಿಶೇಷ ತರಬೇತಿ ನೀಡುವುದು
  • ದಾಖಲೆ ಪರಿಶೀಲನೆಯನ್ನು ವೇಗಗೊಳಿಸುವುದು
  • ಸರ್ವರ್ ಸಾಮರ್ಥ್ಯಗಳನ್ನು ಹೆಚ್ಚಿಸುವುದು
  • ಗ್ರಾಮ ಮಟ್ಟದಲ್ಲಿಯೇ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವುದು
  • ಸಾರ್ವಜನಿಕರಿಗೆ ಜಾಗೃತಿಯನ್ನು ಮೂಡಿಸುವುದು

ಇ ಸ್ವತ್ತು ದಾಖಲೆಯನ್ನು ಪಡೆಯಲು ಇರಬೇಕಾದ ಪ್ರಮುಖ ದಾಖಲೆಗಳು

ಪ್ರತಿ ಪ್ರಕರಣಗಳಲ್ಲೂ ದಾಖಲೆಗಳ ಅಗತ್ಯತೆ ವಿಭಿನ್ನವಾಗಿರಬಹುದು ಏಕೆಂದರೆ ಆಸ್ತಿ ವಿವರಗಳಲ್ಲಿ ಈಗಾಗಲೇ ನಮೂದಾಗಿರುವ ಮಾಹಿತಿ ಆಧಾರದ ಮೇರೆಗೆ ಹೆಚ್ಚುವರಿ ದಾಖಲೆಗಳನ್ನು ಕೇಳುವ ಸಾಧ್ಯತೆ ಇರುತ್ತದೆ ಸಾಮಾನ್ಯವಾಗಿ ಈ ಕೆಳಕಂಡ ದಾಖಲೆಗಳನ್ನು ಕೇಳಲಾಗುತ್ತದೆ

ಗುರುತಿನ ದಾಖಲೆಗಳು

  • ಆಧಾರ್ ಕಾರ್ಡ್
  • ಮತದಾರರ ಗುರುತಿನ ಚೀಟಿ
  • ಅಗತ್ಯವಿದ್ದಲ್ಲಿ ಚಾಲನ ಪರವಾಗಿ

ಆಸ್ತಿ ದಾಖಲೆಗಳು

  • ನೊಂದಾಯಿತ ಮಾರಾಟ ಪತ್ರ ಅಥವಾ ಸಂಬಂಧಪಟ್ಟ ಮಾಲೀಕತ್ವದ ದಾಖಲೆ
  • ಹಿಂದಿನ ಖಾತೆ ದಾಖಲೆ
  • ಗ್ರಾಮ ಪಂಚಾಯಿತಿಯ ದಾಖಲೆ
  • ತೆರಿಗೆ ಪಾವತಿಸಿದ ಬಗ್ಗೆ ರಸೀದಿ

ಇತರೆ ಹೆಚ್ಚುವರಿ ದಾಖಲೆಗಳು

  • ಮೊಬೈಲ್ ಸಂಖ್ಯೆ
  • ಪಾಸ್ಪೋರ್ಟ್ ಸೈಜ್ ನ ಭಾವಚಿತ್ರ
  • ವಾರಸುದಾರರ ದಾಖಲೆಗಳು (ಮಾಲೀಕತ್ವ ಬದಲಾವಣೆಯ ಸಂದರ್ಭದಲ್ಲಿ ವಾರಸುದಾರರ ದಾಖಲೆಗಳನ್ನು ಕೇಳಲಾಗಬಹುದು) 

ಅಗತ್ಯ ದಾಖಲೆಗಳ ಅಂಶವು ಪ್ರಕರಣ ಅಥವಾ ಸಂಬಂಧಿತ ಅಧಿಕಾರಿಗಳ ಸೂಚನೆಯ ಆಧಾರದ ಮೇಲೆ ಬದಲಾಗಬಹುದು

ದಾಖಲೆಗಳಲ್ಲಿ ತಪ್ಪು ಕಂಡುಬಂದರೆ ಏನು ಮಾಡಬೇಕು

E Swathu ದಾಖಲೆಯಲ್ಲಿ ಯಾವುದೇ ರೀತಿಯ ಹೆಸರು, ವಿಳಾಸ ಅಥವಾ ಇತರೆ ಆಸ್ತಿಗೆ ಸಂಬಂಧಿಸಿದ ಮಾಹಿತಿಯಲ್ಲಿ ತಪ್ಪು ಅಂಶಗಳು ಕಂಡು ಬಂದರೆ ಆ ಸಂದರ್ಭದಲ್ಲಿ ಈ ಕೆಳಕಂಡ ಅಂಶಗಳನ್ನು ಕೈಗೊಳ್ಳುವುದರಿಂದ ಅವುಗಳನ್ನು ಪರಿಹರಿಸಿಕೊಳ್ಳಬಹುದು ಅವುಗಳೆಂದರೆ

  • ಸಂಬಂಧಿತ ಗ್ರಾಮ ಪಂಚಾಯತಿಯನ್ನು ಸಂಪರ್ಕಿಸಿ
  • ಅಧಿಕಾರಿಗಳು ಕೇಳುವ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ
  • ತಿದ್ದುಪಡಿ ಅಂಶಕ್ಕೆ ಸಂಬಂಧಪಟ್ಟಂತೆ ಅರ್ಜಿ ನೀಡಬೇಕಾಗುತ್ತದೆ ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ಲಗತಿಸಬೇಕಾಗುತ್ತದೆ
  • ದಾಖಲೆಗಳು ತಿದ್ದುಪಡಿಗೊಂಡ ನಂತರ ಮತ್ತೆ ಮರುಪರಿಶೀಲನೆ ಮಾಡಬೇಕಾಗುತ್ತದೆ

ತಪ್ಪು ಮಾಹಿತಿಯನ್ನು ಕಂಡರೂ ಸಹ ಸರಿಪಡಿಸದೆ ಉಳಿದರೆ ಭವಿಷ್ಯದಲ್ಲಿ ಆಸ್ತಿ ವ್ಯವಹಾರಗಳ ಸಂದರ್ಭಗಳಲ್ಲಿ ದೊಡ್ಡ ಸಮಸ್ಯೆಗಳು ಎದುರಾಗುತ್ತವೆ

ನಾಗರಿಕರು ಗಮನಿಸಬೇಕಾದ ಪ್ರಮುಖ ಅಂಶಗಳು

E Swathu ಸೇವೆಯ ಸಂಪೂರ್ಣ ಪ್ರಯೋಜನವನ್ನು ಪಡೆಯಲು ನಾಗರಿಕರು ಈ ಕೆಳಕಂಡ ಪ್ರಮುಖ ಅಂಶಗಳನ್ನು ಗಮನಿಸಬೇಕಾಗುತ್ತದೆ ಈ ಅಂಶಗಳನ್ನು ಗಮನಿಸುವುದರಿಂದ ಪರಿಶೀಲನ ಪ್ರಕ್ರಿಯೆ ಅರ್ಜಿ ಸಲ್ಲಿಕೆ ಮತ್ತು ಅನುಮೋದನ ಪ್ರಕ್ರಿಯೆಯು ಪರಿಣಾಮಕಾರಿಯಾಗಿರುತ್ತದೆ ಅವುಗಳೆಂದರೆ

ದಾಖಲೆಗಳ ಸುರಕ್ಷತೆ : ಮೂಲ ದಾಖಲೆಗಳು ಹಾಗೂ ಡಿಜಿಟಲ್ ಪ್ರಜೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕಾಗುತ್ತದೆ

ಮಾಹಿತಿ ಪರಿಶೀಲನೆ : ಆಸ್ತಿ ದಾಖಲೆಯಲ್ಲಿನ ಹೆಸರು ವಿಳಾಸ ಆರ್ಥಿಸಂಖ್ಯೆ ತೆರಿಗೆ ಪಾವತಿ ಮತ್ತು ಅಳತೆಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ಸರಿಯಾಗಿ ಪರಿಶೀಲಿಸಬೇಕಾಗುತ್ತದೆ

ತಪ್ಪು ಮಾಹಿತಿ ನೀಡಬೇಡಿ : ದಾಖಲೆಗಳನ್ನು ರಚಿಸುವಾಗ ಸುಳ್ಳು ಮಾಹಿತಿ ನೀಡುವುದರಿಂದ ಭವಿಷ್ಯದಲ್ಲಿ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ

ಅಧಿಕೃತ ಮಾಹಿತಿಯ ಅವಲಂಬನೆ : ಸರ್ಕಾರ ಗ್ರಾಮ ಪಂಚಾಯಿತಿ ಹಾಗೂ ಅಧಿಕೃತ ಆಡಳಿತ ವ್ಯವಸ್ಥೆಗಳು ನೀಡುವ ಪ್ರಕಟಣೆಗಳು ಅಧಿಸೂಚನೆಗಳು ಮತ್ತು ಮಾಹಿತಿಯನ್ನು ಮಾತ್ರ ಯಾವುದೇ ರೀತಿಯ ಅನಗತ್ಯ ಮಾಹಿತಿಗಳನ್ನು ನಂಬಬೇಡಿ

ಮಧ್ಯವರ್ತಿಗಳಿಂದ ಎಚ್ಚರ : ಯಾವುದೇ ಸೇವೆಗಾಗಿ ಅನಧಿಕೃತ ವ್ಯಕ್ತಿಗಳಿಗೆ ಹಣ ನೀಡುವುದು ಅಥವಾ ಅವರ ಸಹಾಯವನ್ನು ಪಡೆಯುವುದನ್ನು ತಪ್ಪಿಸಿ ಅಗತ್ಯವಿದ್ದಲ್ಲಿ ನೇರವಾಗಿ ಸಂಬಂಧಿತ ಕಚೇರಿ ಅಥವಾ ಅಧಿಕಾರಿಯವರನ್ನು ಸಂಪರ್ಕಿಸಿ

ಡಿಜಿಟಲ್ ಆಡಳಿತದತ್ತ ಕರ್ನಾಟಕ ರಾಜ್ಯದ ಹೆಜ್ಜೆ

E Swathu ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಬಲಪಡಿಸುವಲ್ಲಿ ಕರ್ನಾಟಕ ರಾಜ್ಯದ ಡಿಜಿಟಲ್ ಆಡಳಿತ ವ್ಯವಸ್ಥೆಯು ಪ್ರಮುಖ ಪಾತ್ರ ವಹಿಸುತ್ತದೆ ಸರಕಾರವು ಈಗಾಗಲೇ ಹಲವು ಸೇವೆಗಳನ್ನು ಆನ್ಲೈನ್ ಮೂಲಕ ಒದಗಿಸುತ್ತಿದ್ದು ಆಸ್ತಿ ದಾಖಲೆಗಳನ್ನು ಸಹ ಡಿಜಿಟಲ್ ರೂಪದಲ್ಲಿ ನಿರ್ವಹಿಸುವುದರಿಂದ ಆಡಳಿತದಲ್ಲಿ ವೇಗ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಪ್ರಮುಖ ಧ್ಯೇಯವನ್ನು ಹೊಂದಿದೆ

ಮುಂದಿನ ದಿನಗಳಲ್ಲಿ ಭೂಮಿ, ಮನೆ, ತೆರಿಗೆ ಹಾಗೂ ಇತರ ಸರ್ಕಾರಿ ಸೇವೆಗಳ ನಡುವೆ ಉತ್ತಮ ಸಮನ್ವಯವನ್ನು ಸಾಧಿಸಿದರೆ ನಾಗರಿಕರಿಗೆ ಇನ್ನಷ್ಟು ಸುಲಭವಾದ ಸೇವೆಗಳು ನೇರವಾಗಿ ದೊರೆಯುತ್ತವೆ

ಈ ಸ್ವತ್ತು ಪಡೆಯುವ ಮುನ್ನ ತಿಳಿದುಕೊಳ್ಳಬೇಕಾದ ಪ್ರಮುಖ ವಿಷಯಗಳು

E Swathu ವ್ಯವಸ್ಥೆಯ ಪ್ರಮುಖ ಉದ್ದೇಶವು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಆಸ್ತಿಗಳ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿ ನಿರ್ವಹಿಸುವುದಾಗಿದೆ ಆದರೆ ಈ ಸೇವೆಯ ಸಂಪೂರ್ಣ ರೀತಿಯ ಪ್ರಯೋಜನವನ್ನು ಪಡೆಯಲು ಆಸ್ತಿಯನ್ನು ಹೊಂದಿರುವ ಮಾಲೀಕರು ತಮ್ಮ ತಮ್ಮ ಆಸ್ತಿ ದಾಖಲೆಗಳು ಸರಿಯಾಗಿವೆ ಎಂಬುದನ್ನು ಮೊದಲೇ ಪರಿಶೀಲಿಸಿಕೊಳ್ಳುವುದು ಅತ್ಯಂತ ಪ್ರಮುಖವಾಗಿದೆ

ಕೆಲವೊಂದು ಸಂದರ್ಭಗಳಲ್ಲಿ ಮಾಲೀಕರ ಹೆಸರು, ವಿಳಾಸ, ಆಸ್ತಿ ಸಂಖ್ಯೆ ಅಥವಾ ಇತರ ಮಾಹಿತಿಗಳಲ್ಲಿ ಸಣ್ಣಪುಟ್ಟ ತಪ್ಪುಗಳಿರುವುದು ಸಹಜ ಆದರೆ ಇವುಗಳನ್ನು ಸರಿಪಡಿಸದೆ ಇದ್ದಲ್ಲಿ ಮುಂದೆ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಈ ತಪ್ಪುಗಳು ಇರುವುದರಿಂದ ಅರ್ಜಿ ಪ್ರಕ್ರಿಯೆಯಲ್ಲಿ ವಿಳಂಬ ಉಂಟಾಗುವುದರ ಜೊತೆಯಲ್ಲಿ ಸಮಸ್ಯೆಗಳು ಎದುರಾಗುತ್ತವೆ ಆದುದರಿಂದ ಅರ್ಜಿಯನ್ನು ಸಲ್ಲಿಸುವ ಮುನ್ನ ಎಲ್ಲ ದಾಖಲೆಗಳನ್ನು ಒಂದು ಬಾರಿ ಪರಿಶೀಲಿಸಿ

ಇದರ ಜೊತೆಯಲ್ಲಿ ಸರ್ಕಾರದ ಅಧಿಕೃತ ಅಧಿಸೂಚನೆಗಳು ಗ್ರಾಮ ಪಂಚಾಯತಿಯ ಮಾರ್ಗಸೂಚಿಗಳು ಹಾಗೂ ಅಧಿಕೃತ ಮಾಹಿತಿಯನ್ನು ಮಾತ್ರ ಅನುಸರಿಸುವುದು ಅಗತ್ಯವಾಗಿದೆ ಯಾವುದೇ ಅನುಮಾನಗಳು ಕಂಡುಬಂದಲ್ಲಿ ಸಂಬಂಧಿತ ಅಧಿಕಾರಿಯವರಿಂದಲೇ ಮಾಹಿತಿಯನ್ನು ಪಡೆಯಿರಿ ಯಾವುದೇ ಮೂರನೇ ವ್ಯಕ್ತಿಯ ಮಾತು ಹಾಗೂ ಮಾಹಿತಿಯನ್ನು ಅನುಸರಿಸಬೇಡಿ

ಇ ಸ್ವತ್ತು ಪಡೆಯುವ ಪ್ರಕ್ರಿಯೆ

ಭೌಗೋಳಿಕ ಪ್ರದೇಶ ಮತ್ತು ಪ್ರಕರಣಗಳನ್ನು ಅವಲಂಬಿಸಿ ಪ್ರಕ್ರಿಯೆಯಲ್ಲಿ ಕೆಲವು ಮಟ್ಟದ ವ್ಯತ್ಯಾಸಗಳು ಇರಬಹುದು ಆದರೆ ಸಾಮಾನ್ಯವಾಗಿ ಇ ಸ್ವತ್ತು ಸೇವೆಯನ್ನು ಪಡೆಯುವ ಹಂತಗಳು ಈ ಕೆಳಕಂಡಂತಿರುತ್ತವೆ

ಮೊದಲನೇ ಹಂತ : ಅಗತ್ಯ ದಾಖಲೆಗಳ ಸಿದ್ಧಪಡಿಸಿಕೊಳ್ಳುವಿಕೆ

ಮೊದಲು ಆಸ್ತಿ ಹೊಂದಿರುವ ಮಾಲೀಕರು ಈ ಕೆಳಕಂಡ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು

  • ಆಧಾರ್ ಕಾರ್ಡ್
  • ಗುರುತಿನ ದಾಖಲೆ
  • ಮತದಾರರ ಗುರುತಿನ ಚೀಟಿ
  • ಆಸ್ತಿ ಮಾಲಿಕತ್ವದ ದಾಖಲೆ
  • ಹಿಂದಿನ ಖಾತೆ ದಾಖಲೆ
  • ಪಾವತಿಸಿದ ತೆರಿಗೆ ರಸೀದಿ
  • ಮೊಬೈಲ್ ಸಂಖ್ಯೆ

ಎರಡನೇ ಹಂತ : ದಾಖಲೆ ಪರಿಶೀಲನೆ

ಸಂಬಂಧಪಟ್ಟ ಅಧಿಕಾರಿಗಳು ಮನೆಯ ಬಳಿ ಬಂದು ದಾಖಲೆ ಪರಿಶೀಲನೆ ಯನ್ನು ಪ್ರಾರಂಭಿಸಿದಾಗ ಅಧಿಕಾರಿಗಳು ನೀವು ನೀಡುವ ದಾಖಲೆಗಳ ಮಾಹಿತಿ ಸರಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತಾರೆ ಈ ವೇಳೆ ಈ ಕೆಳಕಂಡ ಮಾಹಿತಿಯನ್ನು ಪರಿಶೀಲಿಸಲಾಗುತ್ತದೆ

  • ಮಾಲೀಕರ ಹೆಸರು
  • ವಿಳಾಸ
  • ಆಸ್ತಿ ಸಂಖ್ಯೆ
  • ಮಾಲೀಕತ್ವದ ಮಾಹಿತಿ

ಮೂರನೇ ಹಂತ : ಮಾಹಿತಿ ದೃಢೀಕರಣ

ದಾಖಲೆಗಳಲ್ಲಿ ನೀಡಿರುವ ಮಾಹಿತಿಯನ್ನು ಪ್ರಸ್ತುತ ಈಗಾಗಲೇ ಇರುವ ಡಿಜಿಟಲ್ ದಾಖಲೆಗಳೊಂದಿಗೆ ಹೋಲಿಕೆ ಮಾಡಲಾಗುತ್ತದೆ ಯಾವುದೇ ವ್ಯತ್ಯಾಸಗಳು ಕಂಡುಬಂದಲ್ಲಿ ಅಗತ್ಯ ದಾಖಲೆಗಳ ಆಧಾರದ ಮೇಲೆ ತಿದ್ದುಪಡಿ ಮಾಡಲಾಗುತ್ತದೆ ಅಥವಾ ಹೆಚ್ಚುವರಿ ದಾಖಲೆಗಳು ಬೇಕಾದಲ್ಲಿ ಸಾರ್ವಜನಿಕರಿಗೆ ತಿಳಿಸಲಾಗುತ್ತದೆ

ನಾಲ್ಕನೇ ಹಂತ : ಡಿಜಿಟಲ್ ದಾಖಲಾತಿ

ಪರಿಶೀಲನ ಪ್ರಕ್ರಿಯೆ ಪೂರ್ಣಗೊಂಡ ನಂತರ ಆಸ್ತಿ ಗೆ ಸಂಬಂಧಿಸಿದ ಮಾಹಿತಿಯನ್ನು ಡಿಜಿಟಲ್ ವ್ಯವಸ್ಥೆಯಲ್ಲಿ ದಾಖಲಿಸಲಾಗುತ್ತದೆ ಅಥವಾ ಬದಲಾವಣೆಗೆ ಸಂಬಂಧಪಟ್ಟ ದಾಖಲೆಗಳನ್ನು ಒದಗಿಸಿದ್ದರೆ ನವೀಕರಿಸಲಾಗುತ್ತದೆ

ಐದನೇ ಹಂತ : E Swathu ಪ್ರಮಾಣ ಪತ್ರ

ಮೇಲಿನ ಎಲ್ಲಾ ಹಂತಗಳು ಯಶಸ್ವಿಯಾಗಿ ಪೂರ್ಣಗೊಂಡ ನಂತರ ಇ ಸ್ವತ್ತು ಪ್ರಮಾಣ ಪತ್ರವು ಲಭ್ಯವಾಗುತ್ತದೆ

ಆಸ್ತಿ ದಾಖಲೆಗಳಲ್ಲಿ ತಿದ್ದುಪಡಿ ಮಾಡುವುದು ಹೇಗೆ

ಕೆಲವೊಂದು ವಿಶೇಷ ಸಂದರ್ಭಗಳಲ್ಲಿ ಆಸ್ತಿ ದಾಖಲೆಗಳಲ್ಲಿ ಬದಲಾವಣೆ ಮಾಡಬೇಕಾಗಿರುತ್ತದೆ ಉದಾಹರಣೆಗೆ

  • ಹೆಸರಿನ ತಿದ್ದುಪಡಿ
  • ವಾರಸುದಾರರ ಹೆಸರು ಸೇರಿಸುವುದು
  • ವಿಳಾಸ ಬದಲಾವಣೆ
  • ಆಸ್ತಿ ವರ್ಗಾವಣೆ
  • ಆಸ್ತಿ ವಿವರಗಳಲ್ಲಿ ದೋಷ
  • ಅಳತೆಗೆ ಸಂಬಂಧಿಸಿದ ದೋಷಗಳು

ಇಂತಹ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಭೇಟಿ ಮಾಡಿ ಅವರು ಕೇಳುವ ಅಗತ್ಯ ದಾಖಲಾತಿಗಳು ಮತ್ತು ಮಾಹಿತಿಯನ್ನು ನೀಡುವುದರ ಮೂಲಕ ಪ್ರಾಥಮಿಕ ಹಂತದಲ್ಲಿಯೇ ನಿಮ್ಮ ಮಾಹಿತಿಯನ್ನು ಸರಿಪಡಿಸಿಕೊಳ್ಳಬಹುದಾಗಿರುತ್ತದೆ

ಆಸ್ತಿ ವರ್ಗಾವಣೆ ಸಂದರ್ಭದಲ್ಲಿ ಇ ಸ್ವತ್ತು ದಾಖಲೆಯ ಪಾತ್ರ

ಕುಟುಂಬದ ಸದಸ್ಯರ ಹೆಸರಿಗೆ ಆಸ್ತಿಯನ್ನು ವರ್ಗಾವಣೆ ಮಾಡುವ ಸಂದರ್ಭದಲ್ಲಿ ಅಥವಾ ಆಸ್ತಿಯನ್ನು ಖರೀದಿ ಅಥವಾ ಮಾರಾಟ ಮಾಡುವ ಸಂದರ್ಭದಲ್ಲಿ ಹೊಸ ಮಾಲೀಕರ ಹೆಸರಿಗೆ ದಾಖಲೆ ಬದಲಾವಣೆ ಮಾಡಬೇಕಾಗುತ್ತದೆ

ಈ ಸಂದರ್ಭದಲ್ಲಿ ಸರಿಯಾದ ದಾಖಲೆಗಳನ್ನು ಮತ್ತು ಸಂಬಂಧಿತ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸುವುದರ ಮೂಲಕ ಪ್ರಕ್ರಿಯೆಯನ್ನು ಸುಲಭವಾಗಿ ಹಾಗೂ ವೇಗವಾಗಿ ಮುಗಿಸಬಹುದಾಗಿರುತ್ತದೆ  ಈ ಸ್ವತ್ತು ದಾಖಲೆಯಲ್ಲಿ ಎಲ್ಲಾ ವಿವರಗಳನ್ನು ನವೀಕರಣ ಮಾಡಿಸಿದ್ದರೆ ಹೊಸ ಮಾಲೀಕತ್ವದ ಮಾಹಿತಿ ಡಿಜಿಟಲ್ ದಾಖಲೆಯಲ್ಲಿ ಪ್ರತಿಬಿಂಬಿಸುತ್ತದೆ

E Swathu ದಾಖಲೆಗಳನ್ನು ನಿಯಮಿತವಾಗಿ ಪರಿಶೀಲಿಸುವುದು ಏಕೆ

ಅನೇಕ ಜನರು ಈ ಸಾಮಾನ್ಯ ತಪ್ಪನ್ನು ಮಾಡುತ್ತಾರೆ ಅದು ಏನೆಂದರೆ ಒಂದು ಬಾರಿ ದಾಖಲೆ ಪಡೆದ ನಂತರ ಅದನ್ನು ನಿಯಮಿತ ಕಾಲಮಿತಿಯಲ್ಲಿ ಪರಿಶೀಲಿಸುವುದಿಲ್ಲ ಆದರೆ ಸಮಯಕೊಮ್ಮೆ ದಾಖಲೆಗಳನ್ನು ಪರಿಶೀಲಿಸುವುದು ಉತ್ತಮ ಅಭ್ಯಾಸವಾಗಿದೆ ಪರಿಶೀಲಿಸಬೇಕಾದ ಪ್ರಮುಖ ಅಂಶಗಳೆಂದರೆ

  • ಮಾಲೀಕರ ಹೆಸರು ಸರಿಯಾಗಿದೆಯೇ
  • ವಿಳಾಸ ಸರಿಯಾಗಿದೆಯೇ
  • ಆಸ್ತಿ ಸಂಖ್ಯೆ ಸರಿಯಾಗಿದೆಯೇ
  • ಗ್ರಾಮ ಪಂಚಾಯಿತಿ ಮಾಹಿತಿ ಸರಿಯಾಗಿದೆಯೇ
  • ಯಾವುದೇ ಅನಧಿಕೃತ ಬದಲಾವಣೆಗಳು ಆಗಿವೆಯೇ

ಈ ಮೇಲಿನ ಬದಲಾವಣೆಗಳಿಗೆ ಒಳಪಟ್ಟಂತೆ ಬೇರೆ ಯಾವುದೇ ಮಾಹಿತಿಯು ಬದಲಾವಣೆಯಾಗಿದ್ದರೆ ತಕ್ಷಣ ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸಿ ಅವರಿಗೆ ಮಾಹಿತಿ ನೀಡಬೇಕು

ಸಾರ್ವಜನಿಕರು ಮಾಡುವ ಸಾಮಾನ್ಯ ತಪ್ಪುಗಳು

E Swathuಸೇವೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಈ ಕೆಳಕಂಡ ತಪ್ಪುಗಳನ್ನು ಮಾಡುತ್ತಾರೆ ಇದರಿಂದ ಪ್ರಸ್ತುತದಲ್ಲಿ ಹಾಗೂ ಭವಿಷ್ಯದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಅವುಗಳೆಂದರೆ

ಅಪೂರ್ಣ ಅಸ್ಪಷ್ಟ ದಾಖಲೆಗಳನ್ನು ಸಲ್ಲಿಸುವುದು

ಅಧಿಕಾರಿಗಳು ಕೇಳುವ ಅಗತ್ಯ ದಾಖಲಾತಿಗಳನ್ನು ಸ್ಪಷ್ಟವಾಗಿ ಮತ್ತು ಪೂರ್ಣ ಪ್ರಮಾಣದಲ್ಲಿ ಒದಗಿಸದೆ ಇದ್ದರೆ ಅರ್ಜಿ ಪ್ರಕ್ರಿಯೆ ಮತ್ತು ಅನುಮೋದನ ಪ್ರಕ್ರಿಯೆ ವಿಳಂಬವಾಗಬಹುದು ಕೆಲವೊಂದು ಸಂದರ್ಭಗಳಲ್ಲಿ ತಿರಸ್ಕೃತವಾಗಬಹುದು

ತಪ್ಪು ಮಾಹಿತಿ ನೀಡುವುದು

ಆಸ್ತಿಗೆ ಸಂಬಂಧಿಸಿದಂತೆ ಮಾಲೀಕರ ಹೆಸರು, ವಿಳಾಸ, ತೆರಿಗೆ ರಶೀದಿ, ಅಳತೆ ಮುಂತಾದ ಮಾಹಿತಿಗಳನ್ನು ತಪ್ಪಾಗಿ ನಮೂದಿಸುವುದರಿಂದ ಮುಂದಿನ ದಿನಗಳಲ್ಲಿ ಸಮಸ್ಯೆ ಎದುರಾಗಬಹುದು

ದಾಖಲೆ ಪರಿಶೀಲನೆ ಮಾಡದಿರುವುದು

E Swathuದಾಖಲೆಗಳನ್ನು ಪಡೆದ ನಂತರ ಅದರಲ್ಲಿರುವ ಮಾಹಿತಿಯನ್ನು ಕೂಲಂಕುಶವಾಗಿ ಪರಿಶೀಲಿಸದೆ ಬಿಡುವುದು ದೊಡ್ಡ ತಪ್ಪಾಗುತ್ತದೆ ಡಿಜಿಟಲ್ ದಾಖಲೆಯನ್ನು ಪಡೆದ ನಂತರ ಎಲ್ಲ ಮಾಹಿತಿ ಸರಿಯಾಗಿವೆ ಎಂಬುದು ಪರಿಶೀಲಿಸುವುದು ಅತ್ಯಗತ್ಯ

ಹಳೆ ದಾಖಲೆಗಳನ್ನು ಬಳಸುವುದು

ಆಸ್ತಿಗೆ ಸಂಬಂಧಿಸಿದ ಯಾವುದೇ ಬದಲಾವಣೆ ನಡೆದಿದ್ದರೆ ಸಮಯಕ್ಕೆ ಸರಿಯಾಗಿ ಅವುಗಳನ್ನು ನವೀಕರಿಸಬೇಕು ಮತ್ತು ಯಾವುದೇ ಬದಲಾವಣೆಗಳಾಗಿದ್ದಲ್ಲಿ ಸರಿಪಡಿಸಬೇಕು ಹಳೆಯ ದಾಖಲೆಗಳನ್ನು ನೀಡುವುದರಿಂದ ಮಾಹಿತಿ ಸಂಪೂರ್ಣ ಪ್ರಮಾಣದಲ್ಲಿ ಬದಲಾಗುವುದಿಲ್ಲ

ಮಧ್ಯವರ್ತಿಗಳನ್ನು ನಂಬುವುದು

ಹಲವಾರು ಜನರು ಅಧಿಕೃತ ಕಚೇರಿಗಳನ್ನು ಅಥವಾ ಅಧಿಕಾರಿಗಳನ್ನು ಸಂಪರ್ಕಿಸದೆ ಮಧ್ಯವರ್ತಿಗಳ ಮೂಲಕ ಕೆಲಸ ಮಾಡಲು ಪ್ರಯತ್ನಿಸುತ್ತಾರೆ ಇದರಿಂದ ಸಮಯ ಹಾಗೂ ಹಣ ಎರಡು ವ್ಯರ್ಥವಾಗುತ್ತದೆ ಆದುದರಿಂದ ಅಧಿಕೃತ ಮಾಹಿತಿ ಅಥವಾ ಕಚೇರಿ ಅಧಿಕಾರಿಗಳನ್ನು ಮಾತ್ರ ನಂಬಿ

ಈ ತಪ್ಪುಗಳನ್ನು ಹೇಗೆ ತಪ್ಪಿಸಬಹುದು

ಮೇಲೆ ವಿವರಿಸಲಾಗಿರುವ ಸಾಮಾನ್ಯ ತಪ್ಪುಗಳನ್ನು ಈ ಕೆಳಕಂಡ ಮುನ್ನೆಚ್ಚರಿಕ ಕ್ರಮಗಳನ್ನು ಅನುಸರಿಸುವುದರ ಮೂಲಕ ತಪ್ಪುಸಬೇಕಾಗಿರುತ್ತದೆ ಅವುಗಳೆಂದರೆ

  • ಅರ್ಜಿ ಸಲ್ಲಿಸುವ ಮುನ್ನ ಎಲ್ಲ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿ
  • ದಾಖಲೆಯನ್ನು ಒದಗಿಸುವಾಗ ಅಧಿಕೃತ ದಾಖಲೆಗಳನ್ನು ಮಾತ್ರ ಬಳಸಿ
  • ಅಧಿಕಾರಿಗಳು ತಿಳಿಸುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ
  • ನೀವು ಲಗತ್ತಿಸುವ ಅಥವಾ ನೀಡುವ ದಾಖಲೆಗಳ ಪ್ರತಿಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಿ
  • ಅರ್ಜಿ ಸಲ್ಲಿಕೆ ಪರಿಶೀಲನೆ ಅನುಮೋದನೆ ಮತ್ತು ಪ್ರಮಾಣ ಪತ್ರ ನೀಡಿಕೆಯಲ್ಲಿ ಯಾವುದೇ ಅನುಮಾನ ಅಥವಾ ಮಾಹಿತಿ ಬೇಕಿದ್ದಲ್ಲಿ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿ

ಇ ಸ್ವತ್ತು ಮತ್ತು ಗ್ರಾಮೀಣ ಅಭಿವೃದ್ಧಿ

ಇ ಸ್ವತ್ತು ಯೋಜನೆಯು ಕೇವಲ ದಾಖಲೆ ನಿರ್ವಹಣೆ ಯೋಜನೆ ಆಗಿರಲಿ ಇದು ಗ್ರಾಮೀಣ ಮಟ್ಟದ ಆಡಳಿತವನ್ನು ಉತ್ತಮ ರೀತಿಯ ಡಿಜಿಟಲ್ ಯುಗಕ್ಕೆ ಕೊಂಡುಯುವ ಪ್ರಮುಖ ಹೆಜ್ಜೆಯಾಗಿದೆ ಇದರಿಂದ ದಾಖಲೆಗಳ ರಕ್ಷಣೆ ಮತ್ತು ನಿರ್ವಹಣೆ ಸುಲಭವಾಗುತ್ತದೆ ಇದರ ಜೊತೆಯಲ್ಲಿ ಈ ಕೆಳಕಂಡ ಪ್ರಯೋಜನಗಳನ್ನು ಪಡೆಯಬಹುದಾಗಿರುತ್ತದೆ ಅವುಗಳೆಂದರೆ

  • ಗ್ರಾಮ ಪಂಚಾಯತಿಗಳ ಕಾರ್ಯವೈಖರಿ ಮತ್ತು ಕಾರ್ಯಕ್ಷಮತೆ ಹೆಚ್ಚಳವಾಗುತ್ತದೆ
  • ಸಾರ್ವಜನಿಕರಿಗೆ ಅಗತ್ಯವಿರುವಂತಹ ಸೇವೆ ವೇಗವಾಗಿ ದೊರೆಯುತ್ತದೆ
  • ಆಸ್ತಿಗೆ ಸಂಬಂಧಿಸಿದ ದಾಖಲೆಗಳ ನಿರ್ವಹಣೆ ಸುಲಭವಾಗುತ್ತದೆ
  • ಆಡಳಿತ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹೆಚ್ಚುತ್ತದೆ
  • ಭವಿಷ್ಯದಲ್ಲಿ ಸರ್ಕಾರಿ ಯೋಜನೆಗಳ ಅನುಷ್ಠಾನ ಮತ್ತು ಜಾರಿ ಇನ್ನಷ್ಟು ಪರಿಣಾಮಕಾರಿಯಾಗುತ್ತದೆ

ಇ ಸ್ವತ್ತು ಸೇರಿದಂತೆ ಡಿಜಿಟಲ್ ಸೇವೆಗಳ ಭವಿಷ್ಯ

ಕರ್ನಾಟಕ ರಾಜ್ಯದಲ್ಲಿ ಈಗಾಗಲೇ ಅನೇಕ ಸರ್ಕಾರಿ ಸೇವೆಗಳು ಡಿಜಿಟಲ್ ಸ್ವರೂಪವನ್ನು ಪಡೆದುಕೊಂಡಿದೆ ಭೂಮಿ, ತೆರಿಗೆ ನೋಂದಣಿ, ಗುರುತಿನ ದಾಖಲೆಗಳು ಸೇರಿದಂತೆ ಹಲವು ರೀತಿಯ ಸರ್ಕಾರಿ ಸೇವೆಗಳು ಆನ್ಲೈನ್ ಆಯಾಮದ ಮೂಲಕ ಲಭ್ಯವಾಗುತ್ತಿದೆ

ಇದೇ ನಿಟ್ಟಿನಲ್ಲಿ ಇ ಸ್ವತ್ತು ವ್ಯವಸ್ಥೆಯು ಕೂಡ ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಣೆಗೊಳ್ಳುವ ನೀರಿಕ್ಷೆಯನ್ನು ಇಟ್ಟುಕೊಂಡಿದೆ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡರೆ ಸಾರ್ವಜನಿಕರು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ಸುಲಭವಾಗಿ ಸೇವೆಗಳನ್ನು ಪಡೆಯಲು ಸಾಧ್ಯವಾಗುತ್ತದೆ

ಇ ಸ್ವತ್ತು ವಿಷಯದಲ್ಲಿ ಸರ್ಕಾರ ಮತ್ತು ಸಾರ್ವಜನಿಕರ ಜವಾಬ್ದಾರಿ

ಯಾವುದೇ ಯೋಜನೆಯು ಯಶಸ್ವಿಯಾಗಬೇಕಾದರೆ ಸರ್ಕಾರದ ಜೊತೆಯಲ್ಲಿ ಸಾರ್ವಜನಿಕರ ಸಹಕಾರ ಅಷ್ಟೇ ಮುಖ್ಯವಾಗುತ್ತದೆ ಸರ್ಕಾರ ಮತ್ತು ಸಾರ್ವಜನಿಕರು ವಹಿಸಿಕೊಳ್ಳಬೇಕಾದ ಜವಾಬ್ದಾರಿಗಳು ಈ ಕೆಳಕಂಡಂತಿವೆ

ಸರ್ಕಾರದ ಜವಾಬ್ದಾರಿ

  1. ಉತ್ತಮ ರೀತಿಯಲ್ಲಿ ಡಿಜಿಟಲ್ ವ್ಯವಸ್ಥೆಗಳನ್ನು ನಿರ್ಮಿಸುವುದು ಮತ್ತು ನಿರ್ವಹಿಸುವುದು
  2. ತಾಂತ್ರಿಕ ಸಮಸ್ಯೆಗಳು ಎದುರಾದಾಗ ಆದಷ್ಟು ಬೇಗ ಪರಿಹರಿಸುವುದು
  3. ಇ ಸ್ವತ್ತು ಪರಿಶೀಲನೆಯನ್ನು ಮಾಡುವ ಅಧಿಕಾರಿಗಳಿಗೆ ಉತ್ತಮ ರೀತಿಯ ತರಬೇತಿಯನ್ನು ನೀಡುವುದು
  4. ಇ ಸ್ವತ್ತು ದಾಖಲೆಗಳ ಅರ್ಜಿ ಸಲ್ಲಿಕೆ ಪರಿಶೀಲನೆ ಅನುಮೋದನೆ ಮತ್ತು ಇ ಸ್ವತ್ತು ದಾಖಲೆಯ ಬಗ್ಗೆ ಜಾಗೃತಿ ಮೂಡಿಸುವುದು

ಸಾರ್ವಜನಿಕರ ಜವಾಬ್ದಾರಿಗಳು

  1. ಆಸ್ತಿಗೆ ಸಂಬಂಧಿಸಿದ ನಿಖರವಾದ ಮತ್ತು ಸರಿಯಾದ ದಾಖಲೆಗಳನ್ನು ಮಾತ್ರ ಒದಗಿಸುವುದು
  2. ಕಾಲಕಾಲಕ್ಕೆ ಮಾಹಿತಿಯನ್ನು ಪರಿಶೀಲಿಸುವುದು
  3. ಆಸ್ತಿ ಸಂಬಂಧಿತ ಇ ಸ್ವತ್ತು ದಾಖಲೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು
  4. ಅಧಿಕೃತ ಮಾಹಿತಿ ಮತ್ತು ಪ್ರಕಟಣೆಗಳನ್ನು ಮಾತ್ರ ನಂಬುವುದು
  5. ಬೇರೆ ಸಾರ್ವಜನಿಕರಿಗೆ ಯೋಜನೆ ಬಗ್ಗೆ ತಪ್ಪು ಮಾಹಿತಿ ನೀಡದಿರುವುದು

ಇ ಸ್ವತ್ತು ಸೇವೆಯಿಂದ ಗ್ರಾಮೀಣ ಕುಟುಂಬಕ್ಕೆ ಆಗುವ ದೀರ್ಘಕಾಲಿಕ ಪ್ರಯೋಜನಗಳು

ಇ ಸ್ವತ್ತು ಸೇವೆಯಿಂದ ಮನೆ ಮನೆಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಪ್ರಮಾಣ ಪತ್ರವನ್ನು ನೀಡುವುದರಿಂದ ಈ ಅಭಿಯಾನವು ಸಂಪೂರ್ಣವಾಗಿ ಯಶಸ್ವಿಯಾಗಿ ಗ್ರಾಮೀಣ ಪ್ರದೇಶದ ಕುಟುಂಬಗಳು ಹಲವು ರೀತಿಯ ದೀರ್ಘಕಾಲಿನ ಲಾಭಗಳನ್ನು ಪಡೆಯಬಹುದಾಗಿರುತ್ತದೆ ಅವುಗಳೆಂದರೆ

  • ಕಾನೂನು ಸಂಬಂದಿತ ವಿವಾದಗಳ ಸಾಧ್ಯತೆ ಕಡಿಮೆಯಾಗುತ್ತದೆ
  • ಆಸ್ತಿ ದಾಖಲೆಗಳ ಮೇಲೆ ವಿಶ್ವಾಸ ಹೆಚ್ಚುತ್ತದೆ
  • ಡಿಜಿಟಲ್ ಆಡಳಿತಕ್ಕೆ ಉತ್ತೇಜನ ನೀಡಲಾಗುತ್ತದೆ
  • ಸರ್ಕಾರಿ ಸೇವೆಗಳು ವೇಗವಾಗಿ ದೊರೆಯುತ್ತವೆ
  • ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ನೆರವಾಗುತ್ತದೆ
  • ಭವಿಷ್ಯದ ಪೀಳಿಗೆಗಳಿಗೆ ಸುರಕ್ಷಿತ ದಾಖಲೆಗಳು ಲಭ್ಯವಾಗುತ್ತವೆ

E Swathu ವ್ಯವಸ್ಥೆಯು ಕರ್ನಾಟಕದ ಗ್ರಾಮೀಣ ಭಾಗದ ಭವಿಷ್ಯವನ್ನು ಬದಲಾಯಿಸುತ್ತದೆ

ಹೌದು, ಇ ಸ್ವತ್ತು ವ್ಯವಸ್ಥೆಯು ಕರ್ನಾಟಕ ರಾಜ್ಯದ ಗ್ರಾಮೀಣ ಪ್ರದೇಶದ ಭವಿಷ್ಯವನ್ನು ಪರಿಣಾಮಕಾರಿಯಾಗಿ ಬದಲಾಯಿಸುತ್ತದೆ ಡಿಜಿಟಲ್ ಇಂಡಿಯಾ ಮತ್ತು ಈ ಆಡಳಿತ ಪರಿಕಲ್ಪನೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸರ್ಕಾರಿ ಸೇವೆಗಳನ್ನು ತಂತ್ರಜ್ಞಾನದ ಮೂಲಕ ವಿಶೇಷವಾಗಿ ಜನರಿಗೆ ತಲುಪಿಸುವ ಕಾರ್ಯವನ್ನು ಕೈಗೊಂಡು ಪರಿಣಾಮಕಾರಿಯಾಗಿ ವೇಗಗೊಳಿಸುತ್ತಿವೆ.

ಕರ್ನಾಟಕದಲ್ಲಿ ಈಗಾಗಲೇ ಭೂಮಿ, ತೆರಿಗೆ, ಪಿಂಚಣಿ, ಜನನ ಮತ್ತು ಮರಣ ಪ್ರಮಾಣ ಪತ್ರ ಸೇರಿದಂತೆ ಹಲವು ಸೇವೆಗಳು ಡಿಜಿಟಲ್ ರೂಪದಲ್ಲಿ ಲಭ್ಯವಾಗುತ್ತಿದೆ ಇದೇ ರೀತಿ ಇ ಸ್ವತ್ತು ವ್ಯವಸ್ಥೆಯು ಕೂಡ ಗ್ರಾಮೀಣ ಪ್ರದೇಶದ ಆಸ್ತಿ ನಿರ್ವಹಣೆಯನ್ನು ಆಧುನಿಕರಣ ಗೊಳಿಸಿ ಉತ್ತಮ ರೀತಿಯಲ್ಲಿ ನಿರ್ವಹಿಸುತ್ತದೆ

ಮನೆಮನೆಗೆ ಇ ಸ್ವತ್ತು ಅಭಿಯಾನವು ಯಶಸ್ವಿಯಾಗಿ ಕಾರ್ಯರೂಪಕ್ಕೆ ಬಂದರೆ ಗ್ರಾಮೀಣ ಪ್ರದೇಶದ ಜನರಿಗೆ ಸರ್ಕಾರಿ ಸೇವೆಗಳು ಇನ್ನಷ್ಟು ವೇಗವಾಗಿ ಮತ್ತು ಸುಲಭವಾಗಿ ದೊರೆಯುತ್ತವೆ ಇದರಿಂದ ಸರ್ಕಾರಿ ಕಚೇರಿಗಳ ಮೇಲಿನ ಒತ್ತಡ ಕಡಿಮೆಯಾಗುವುದರ ಜೊತೆಯಲ್ಲಿ ಸಾರ್ವಜನಿಕ ಆಡಳಿತದಲ್ಲಿಯೂ ಸಹ ಉತ್ತಮ ಬದಲಾವಣೆ ಉಂಟಾಗುತ್ತದೆ

ಸಾರ್ವಜನಿಕರಿಗೆ ಪ್ರಮುಖ ಸಲಹೆಗಳು

E Swathu ಸೇವೆಯನ್ನು ಬಳಸುವಾಗ ಈ ಕೆಳಕಂಡ ಸಲಹೆಗಳನ್ನು ಪಾಲಿಸಿದರೆ ಅನಗತ್ಯ ಸಮಸ್ಯೆಗಳನ್ನು ಎದುರಿಸುವ ಸಂಭವನೀಯತೆಯನ್ನು ಕಡಿಮೆಗೊಳಿಸಬಹುದು ಅವುಗಳೆಂದರೆ

ಮೂಲ ದಾಖಲೆಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಿ

ಡಿಜಿಟಲ್ ದಾಖಲೆಯನ್ನು ಪಡೆದ ನಂತರವೂ ಆಸ್ತಿಗೆ ಸಂಬಂಧಿಸಿದ ಮೂಲ ದಾಖಲೆಗಳ ಮಹತ್ವ ಕಡಿಮೆಯಾಗುವುದಿಲ್ಲ ಆದ್ದರಿಂದ ಅವುಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ

ದಾಖಲೆಗಳನ್ನು ಬದಲಾವಣೆ ನಡೆದರೆ ತಕ್ಷಣ ನವೀಕರಣ ಮಾಡಿಸಿ

ಕೆಲವೊಂದು ಸಂದರ್ಭದಲ್ಲಿ ಮಾಲೀಕರ ಹೆಸರು ಬದಲಾವಣೆ, ಮಾಲೀಕತ್ವದ ಬದಲಾವಣೆ, ವಿಳಾಸ ಬದಲಾವಣೆ ಅಥವಾ ಇತರ ಯಾವುದೇ ಬದಲಾವಣೆಗಳು ನಡೆದರೆ ಸಂಬಂಧಿತ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಅಧಿಕಾರಿಗಳು ಕೇಳುವ ಅಗತ್ಯ ದಾಖಲಾತಿಗಳನ್ನು ನೀಡಿ ದಾಖಲೆಗಳನ್ನು ನವೀಕರಿಸಿಕೊಳ್ಳಿ

ಅಧಿಕೃತ ಮಾಹಿತಿಯನ್ನು ಮಾತ್ರ ನಂಬಿ ಮತ್ತು ಅನುಸರಿಸಿ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಅಪೂರ್ಣ ಅಸ್ಪಷ್ಟ ಹಾಗೂ ತಪ್ಪು ಮಾಹಿತಿಯನ್ನು ಯಾವುದೇ ಕಾರಣಕ್ಕೂ ನಂಬಬೇಡಿ, ಸರ್ಕಾರ ಅಥವಾ ಗ್ರಾಮೀಣ ಮಟ್ಟದ ಆಡಳಿತ ವ್ಯವಸ್ಥೆಯಿಂದ ಪ್ರಕಟವಾಗುವ ಅಧಿಕೃತ ಮಾಹಿತಿಯನ್ನು ಮಾತ್ರ ನಂಬಿ ಅನುಸರಿಸಿ ಮತ್ತು ಪರಿಗಣಿಸಿ

ದಾಖಲೆಗಳನ್ನು ನಿಯಮಿತವಾಗಿ ಪರಿಶೀಲಿಸಿ

ಡಿಜಿಟಲ್ ದಾಖಲೆಗಳನ್ನು ಪಡೆದ ನಂತರ ಕೆಲವೊಂದು ತಾಂತ್ರಿಕ ದೋಷಗಳಿಂದ ಬದಲಾವಣೆಗಳು ಆಗಬಹುದು ಆದುದರಿಂದ ಮಾಹಿತಿಯನ್ನು ಕಾಲಕಾಲಕ್ಕೆ ಪರಿಶೀಲಿಸಿ

ಮಧ್ಯವರ್ತಿಗಳಿಂದ ದೂರವಿರಿ

ಸರ್ಕಾರಿ ಸೇವೆಗಳಿಗಾಗಿ ಅನಧಿಕೃತ ವ್ಯಕ್ತಿಗಳಿಗೆ ಹಣ ಪಾವತಿಸುವುದನ್ನು ತಪ್ಪಿಸಿ ಅಗತ್ಯವಿದ್ದಲ್ಲಿ ನೇರವಾಗಿ ಸಂಬಂಧಿತ ಕಚೇರಿ ಅಥವಾ ಅಧಿಕಾರಿಯವರನ್ನು ಸಂಪರ್ಕಿಸಿ

 

ಇ ಸ್ವತ್ತು ಕುರಿತು ಜನರಲ್ಲಿ ಇರುವ ಕೆಲವು ತಪ್ಪು ಕಲ್ಪನೆಗಳು

ತಪ್ಪು ಕಲ್ಪನೆ 1: E Swathu ದಾಖಲೆ ಒಂದು ಇದ್ದರೆ ಬೇರೆ ಯಾವುದೇ ದಾಖಲೆ ಅಗತ್ಯವಿಲ್ಲ

ಇದು ತಪ್ಪು. ಆಸ್ತಿ ಸಂಬಂಧಿತ ವಿವಿಧ ರೀತಿಯ ಕಾನೂನು ಅಥವಾ ಆಡಳಿತಾತ್ಮಕ ಪ್ರಕ್ರಿಯೆಗಳಿಗೆ ಸಂದರ್ಭಾನುಸಾರ ಬೇರೆ ದಾಖಲೆಗಳೂ ಸಹ ಅಗತ್ಯ ಅಗಬಹುದು

ತಪ್ಪು ಕಲ್ಪನೆ 2: ಇ-ಸ್ವತ್ತು ಪಡೆಯುವುದು ತುಂಬಾ ಕಷ್ಟಕರ ಪ್ರಕ್ರಿಯೆ

ಸರಿಯಾದ ದಾಖಲೆಗಳು ಹಾಗೂ ಸಂಬಂಧಿತ ನಿಯಮಗಳನ್ನು ಪಾಲಿಸಿದರೆ ಪ್ರಕ್ರಿಯೆ ಸುಗಮವಾಗಿ ವೇಗವಾಗಿ ಆಗುತ್ತದೆ.

ತಪ್ಪು ಕಲ್ಪನೆ 3:  ಈ ಡಿಜಿಟಲ್ ದಾಖಲೆ ಸುರಕ್ಷಿತವಲ್ಲ

ವಾಸ್ತವವಾಗಿ, ಡಿಜಿಟಲ್ ದಾಖಲೆಯ ಉದ್ದೇಶವೇ ಮಾಹಿತಿ ಸುರಕ್ಷಿತವಾಗಿ ಸಂಗ್ರಹಿಸುವುದು ಮತ್ತು ಸುಲಭವಾಗಿ ನಿರ್ವಹಿಸುವುದು ಈ ದಾಖಲೆಯು ಹೆಚ್ಚು ಸುರಕ್ಷಿತವಾಗಿದೆ.

E Swathu Abhiyana 2026 : FAQ’s

1. ಇ ಸ್ವತ್ತು (E Swathu) ಎಂದರೆ ಏನು?

ಉತ್ತರ: ಗ್ರಾಮ ಪಂಚಾಯಿತಿ ಆಸ್ತಿಗಳ ಡಿಜಿಟಲ್ ಆವೃತ್ತಿಯ ದಾಖಲಾತಿ ವ್ಯವಸ್ಥೆಯಾಗಿದೆ.

2. E Swathu ಪ್ರಮಾಣಪತ್ರವು ಯಾರಿಗೆ ಸಿಗುತ್ತದೆ?

ಉತ್ತರ: ಅರ್ಹ ಗ್ರಾಮೀಣ ಆಸ್ತಿ ಮಾಲೀಕರಿಗೆ ಇ ಸ್ವತ್ತು ಪ್ರಮಾಣಪತ್ರ ನೀಡಲಾಗುತ್ತದೆ.

3. ಮನೆ ಮನೆಗೆ ಇ ಸ್ವತ್ತು ಅಭಿಯಾನ ಎಂದರೆ ಏನು?

ಉತ್ತರ: ಮನೆ ಬಾಗಿಲಲ್ಲೇ ಇ-ಸ್ವತ್ತು ಸೇವೆ ನೀಡುವ ಅಭಿಯಾನ.

4. ಇ ಸ್ವತ್ತುಪಡೆಯಲು ಯಾವ ದಾಖಲೆಗಳು ಬೇಕು?

ಉತ್ತರ: ಆಧಾರ್, ಆಸ್ತಿ ದಾಖಲೆ ಹಾಗೂ ಅಗತ್ಯ ದಾಖಲಾತಿಗಳು ಬೇಕಾಗುತ್ತವೆ.

5. ಇ ಸ್ವತ್ತು ಪ್ರಮಾಣಪತ್ರದ ಉಪಯೋಗವೇನು?

ಉತ್ತರ: ಆಸ್ತಿ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ದೃಢೀಕರಿಸಲು ಸಹಕಾರಿಯಾಗಿದೆ

6. ಇ ಸ್ವತ್ತು ದಾಖಲೆ ತಿದ್ದುಪಡಿ ಹೇಗೆ ಮಾಡುವುದು?

ಉತ್ತರ: ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ನೀಡಿ, ಸಂಬಂಧಪಟ್ಟ ದಾಖಲೆಗಳನ್ನು ಲಗತ್ತಿಸಿ ತಿದ್ದುಪಡಿ ಮಾಡಿಸಬಹುದು.

7. ಇ ಸ್ವತ್ತು ಏಕೆ ಆಸ್ತಿ ಮಾಲೀಕರಿಗೆ ಮುಖ್ಯವಾಗಿದೆ?

ಉತ್ತರ: ಆಸ್ತಿ ದಾಖಲೆಗಳನ್ನು ಸುರಕ್ಷಿತವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.

8. ಇ ಸ್ವತ್ತು ಸೇವೆ ಗ್ರಾಮೀಣ ಜನರಿಗೆ ಹೇಗೆ ಸಹಕಾರಿಯಾಗಿದೆ?

ಉತ್ತರ: ಸಮಯ, ಹಣ ಹಾಗೂ ಕಚೇರಿ ಸುತ್ತಾಟವನ್ನು ಕಡಿಮೆ ಮಾಡುತ್ತದೆ.

9. ಇ ಸ್ವತ್ತು ದಾಖಲೆಗಳಲ್ಲಿ ಯಾವ ಮಾಹಿತಿ ಇರುತ್ತದೆ?

ಉತ್ತರ: ಮಾಲೀಕರ ಹೆಸರು, ವಿಳಾಸ ಹಾಗೂ ಆಸ್ತಿ ವಿವರಗಳಿರುತ್ತವೆ.

10. ಇ ಸ್ವತ್ತು ಪ್ರಮಾಣಪತ್ರ ಎಲ್ಲಿ ಪಡೆಯಬಹುದು?

ಉತ್ತರ: ಸಂಬಂಧಿತ ಗ್ರಾಮ ಪಂಚಾಯಿತಿಯ ಮೂಲಕ ಪಡೆಯಬಹುದು.

 

ಅಧಿಕೃತ ಲಿಂಕ್ ಗಳು

Last Updated: 08 July 2026

ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್ ಕರ್ನಾಟಕ ಸರ್ಕಾರ
ಕರ್ನಾಟಕ ಸರ್ಕಾರ ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ ಕರ್ನಾಟಕ ಕಂದಾಯ ಇಲಾಖೆ
ಇ ಸ್ವತ್ತು ಪೋರ್ಟಲ್ ಇ ಸ್ವತ್ತು ಪೋರ್ಟಲ್

 

ಹೆಚ್ಚುವರಿ ಲಿಂಕ್‌ ಗಳು

ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೆಚ್ಚುವರಿ ಮಾಹಿತಿ ನೇಮಕಾತಿ ಮಾಹಿತಿ

ಪರೀಕ್ಷಾ ತಯಾರಿ ಸಲಹೆಗಳು

ವೃತ್ತಿ ಮಾರ್ಗದರ್ಶನ

ಸರ್ಕಾರಿ ಯೋಜನೆಗಳು

 

ಕೊನೆಯ ಮಾತು

ಕರ್ನಾಟಕ ಸರ್ಕಾರವು ಗ್ರಾಮೀಣ ಪ್ರದೇಶದ ಜನರಿಗೆ ಸರ್ಕಾರಿ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಕೈಗೊಂಡಿರುವ ಮಹತ್ವದ ಯೋಜನೆಯಾಗಿದೆ ಈ ಯೋಜನೆಯು ಸಂಪೂರ್ಣವಾಗಿ ಪರಿಣಾಮಕಾರಿಯಾಗಿ ಜಾರಿಯಾದರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಲಕ್ಷಾಂತರ ಆಸ್ತಿ ಮಾಲೀಕರಿಗೆ ಸೂಕ್ತ ದಾಖಲೆಗಳನ್ನು ಪಡೆಯುವ ಪ್ರಕ್ರಿಯೆ ಇನ್ನಷ್ಟು ಸುಲಭವಾಗಿ ವೇಗವಾಗಿ ಹಾಗೂ ಪಾರದರ್ಶಕವಾಗಿ ದೊರೆಯುವ ನಿರೀಕ್ಷೆ ಇದೆ

ಇ ಸ್ವತ್ತು ಕೇವಲ ಒಂದು ಡಿಜಿಟಲ್ ಪ್ರಮಾಣ ಪತ್ರವಲ್ಲ ಬದಲಾಗಿ ಇದು ಗ್ರಾಮೀಣ ಆಸ್ತಿಗಳ ದಾಖಲೆಗಳನ್ನು ಸುರಕ್ಷಿತವಾಗಿ ನಿರ್ವಹಿಸುವ ಆಧುನಿಕ ವ್ಯವಸ್ಥೆಯಾಗಿದೆ ಆಸ್ತಿ ದಾಖಲೆಗಳ ಡಿಜಿಟಲೀಕರಣದಿಂದ ನಕಲಿ ದಾಖಲೆಗಳ ಸಾಧ್ಯತೆ ಕಡಿಮೆಯಾಗುತ್ತದೆ ಮಾಹಿತಿ ನಿರ್ವಹಣೆಯಲ್ಲಿ ಸುಲಭ ಪ್ರಕ್ರಿಯೆಗಳು ಬಂದು ಇದರ ಜೊತೆಯಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ದೊರೆಯುತ್ತದೆ

ನಾಗರಿಕರು ತಮ್ಮ ದಾಖಲೆ ಮಾಹಿತಿಯನ್ನು ನಿಯಮಿತವಾಗಿ ಪರಿಶೀಲಿಸುವುದು ಅಗತ್ಯವಿದ್ದಲ್ಲಿ ಸಮಯಕ್ಕೆ ಸರಿಯಾಗಿ ತಿದ್ದುಪಡಿ ಮಾಡಿಸಿಕೊಳ್ಳುವುದು ಮತ್ತು ಅಧಿಕೃತ ಮಾಹಿತಿಯನ್ನು ಮಾತ್ರ ನಂಬುವುದು ಅತ್ಯಂತ ಪ್ರಮುಖವಾಗಿದೆ

ಮುಂದಿನ ದಿನಗಳಲ್ಲಿ ಡಿಜಿಟಲ್ ಆಡಳಿತವು ಇನ್ನಷ್ಟು ಉತ್ತಮ ರೀತಿಯಲ್ಲಿ ವಿಸ್ತರಣೆಗೊಂಡಂತೆ ಇ ಸ್ವತ್ತು ವ್ಯವಸ್ಥೆಯು ಸಹ ಮಹತ್ವವನ್ನು ಪಡೆದುಕೊಳ್ಳುತ್ತದೆ ಇದರಿಂದ ಪ್ರತಿಯೊಬ್ಬ ಆಸ್ತಿ ಮಾಲೀಕರು ಸಹ ಸರಿಯಾದ ಮಾಹಿತಿ ಮತ್ತು ಸೇವೆಯನ್ನು ಪಡೆಯಬಹುದಾಗಿರುತ್ತದೆ

 

Related Articles:

Gruha Jyothi Scheme Big Update 2026: ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳಿಗೆ ಮಹತ್ವದ ಅಪ್ಡೇಟ್

E-EPIC Download 2026, Big Update: ಮೊಬೈಲ್ ಮತ್ತು ವೆಬ್‌ಸೈಟ್ ಮೂಲಕ ಡಿಜಿಟಲ್ ವೋಟರ್ ಐಡಿ ಡೌನ್‌ಲೋಡ್ ಮಾಡುವ ಸಂಪೂರ್ಣ ವಿಧಾನ

Social Media, Big Update 2026: ವಾಟ್ಸಾಪ್‌, ಫೇಸ್‌ ಬುಕ್‌, ಇನ್ಸ್ಟಾಗ್ರಾಮ್‌ ಬಳಸುವವರಿಗೆ ಬಿಗ್‌ ನ್ಯೂಸ್‌, ಇಲ್ಲಿದೆ ಸಂಪೂರ್ಣ ಮಾಹಿತಿ

Lost Phone, Big Update 2026: ನಿಮ್ಮ ಫೋನ್‌ ಕಳೆದುಹೋಗಿದೆಯೇ? ಈ ಸುಲಭ ಕೆಲಸ ಮಾಡುವುದರಿಂದ ಮರಳಿ ಪಡೆಯಿರಿ, ಇಲ್ಲಿದೆ ಹಂತ ಹಂತದ ಮಾಹಿತಿ.

Shed Construction Subsidy Best Scheme 2026: ಅರ್ಜಿ ಪ್ರಕ್ರಿಯೆ, ಅರ್ಹತೆ, ಸಬ್ಸಿಡಿ ಮೊತ್ತ ಸಂಪೂರ್ಣ ಮಾಹಿತಿ

Free Sewing Machine Scheme 2026: Big Opportunity To Women From The Government, Here Is the Complete Details

 

 

Author Note : ಈ ಲೇಖನವನ್ನು ಸಾರ್ವಜನಿಕರಿಗೆ ಇ-ಸ್ವತ್ತು (E Swathu) ವ್ಯವಸ್ಥೆ ಹಾಗೂ ಮನೆ ಮನೆಗೆ ಇ-ಸ್ವತ್ತು ಅಭಿಯಾನದ ಕುರಿತು ಸರಳ ಮತ್ತು ನಿಖರ ಮಾಹಿತಿಯನ್ನು ನೀಡುವ ಉದ್ದೇಶದಿಂದ ಸಿದ್ಧಪಡಿಸಲಾಗಿದೆ. ಅಧಿಕೃತ ಮಾಹಿತಿಗಾಗಿ ಸಂಬಂಧಿತ ಸರ್ಕಾರಿ ಇಲಾಖೆಯ ಪ್ರಕಟಣೆಗಳನ್ನು ಪರಿಶೀಲಿಸಿ.

—*—

About Author : ರಂಗನಾಥ ಬಿ ಜಿ ರವರು ಅರ್ಥಶಾಸ್ತ್ರ ವಿಷಯದಲ್ಲಿ ಎಂ ಎ ಪದವೀಧರರಾಗಿದ್ದು, ಕಳೆದ 3 ವರ್ಷಗಳಿಂದ ಸರ್ಕಾರಿ ಯೋಜನೆಗಳು, ಉದ್ಯೋಗ ಮಾಹಿತಿ, ಶಿಕ್ಷಣ, ತಂತ್ರಜ್ಞಾನ ಹಾಗೂ ಸಾರ್ವಜನಿಕ ಸೇವೆಗಳ ಕುರಿತು ನಿಖರ, ಸರಳ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಕನ್ನಡದಲ್ಲಿ ಪ್ರಕಟಿಸುವ ಡಿಜಿಟಲ್ ಕ್ರಿಯೇಟರ್‌ ಆಗಿದ್ದಾರೆ.

—*—

Disclaimer : ಈ ಲೇಖನವು ಮಾಹಿತಿ ನೀಡುವ ಉದ್ದೇಶಕ್ಕಾಗಿ ಮಾತ್ರ ಸಿದ್ಧಪಡಿಸಲಾಗಿದೆ. ಯೋಜನೆಯ ನಿಯಮಗಳು, ಅರ್ಹತೆ, ಪ್ರಕ್ರಿಯೆಗಳು ಹಾಗೂ ಅಧಿಕೃತ ಸೂಚನೆಗಳು ಕಾಲಕಾಲಕ್ಕೆ ಬದಲಾಗಬಹುದು. ಅಂತಿಮ ಮಾಹಿತಿಗಾಗಿ ಸಂಬಂಧಿತ ಸರ್ಕಾರಿ ಇಲಾಖೆ ಅಥವಾ ಗ್ರಾಮ ಪಂಚಾಯಿತಿಯನ್ನು ಸಂಪರ್ಕಿಸಿ.

 

 

ರಂಗನಾಥ ಬಿ.ಜಿ ಅವರು ಅರ್ಥಶಾಸ್ತ್ರದಲ್ಲಿ ಎಂ.ಎ ಪದವೀಧರರಾಗಿದ್ದು, ಕಳೆದ ಎರಡು ವರ್ಷಗಳಿಂದ ನೈಜ ಹಾಗೂ ವಿಶ್ವಾಸಾರ್ಹ ಕನ್ನಡ ವಿಷಯಗಳನ್ನು ಪ್ರಕಟಿಸುತ್ತಿದ್ದಾರೆ. ಸರ್ಕಾರಿ ಉದ್ಯೋಗ ಮಾಹಿತಿ, ಪರೀಕ್ಷಾ ತಯಾರಿ ಸಲಹೆಗಳು, ವೃತ್ತಿ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು ಹಾಗೂ ಟ್ರೆಂಡಿಂಗ್ ಸುದ್ದಿಗಳ ಕುರಿತು ಲೇಖನಗಳನ್ನು ಬರೆಯುವಲ್ಲಿ ಪರಿಣತಿ ಹೊಂದಿದ್ದು, ಓದುಗರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುವುದು ಇವರ ಉದ್ದೇಶವಾಗಿದೆ. Please Visit NewsByMr

Leave a Comment