Social Media ಬಳಕೆದಾರರಿಗೆ ಮಹತ್ವದ ಸುದ್ದಿ
ನಮಸ್ಕಾರ ಸ್ನೇಹಿತರೆ, Social Media ವನ್ನು ಬಳಸುತ್ತಿರುವ ಕೋಟ್ಯಂತರ ಜನರಿಗೆ ಮಹತ್ವದ ವಿಷಯವೊಂದು ತಿಳಿಯಬೇಕಾಗಿದೆ ಇಂದಿನ ಯುಗದಲ್ಲಿ ಫೇಸಬುಕ್ ಇನ್ಸ್ಟಾಗ್ರಾಮ್ ಮತ್ತು ವಾಟ್ಸಾಪ್ ನಂತಹ ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸುವ ಮೆಟಾ ಸಂಸ್ಥೆಯು ಜನರ ದೈನಂದಿನ ಜೀವನದ ಪ್ರಮುಖ ಭಾಗವಾಗಿದೆ ನಾವು ಮಾಡುವ ಮೆಸೇಜುಗಳು, ತೆಗೆದುಕೊಳ್ಳುವ ಮನರಂಜನೆ, ನಿರ್ವಹಿಸುವ ವ್ಯಾಪಾರಗಳ ಪ್ರಚಾರಗಳು ಹಾಗೂ ಮಾಹಿತಿಗಳನ್ನು ಹಂಚಿಕೊಳ್ಳುವಲ್ಲಿ ಈ ವೇದಿಕೆಗಳನ್ನು ಉತ್ತಮ ರೀತಿಯಲ್ಲಿ ಹಾಗೂ ಸಮಗ್ರವಾಗಿ ಬಳಸಲಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಮೆಟಾ ಸಂಸ್ಥೆಯು ಕೆಲವು ವಿಶೇಷ ಹಾಗೂ ಪ್ರೀಮಿಯಂ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಶುಲ್ಕವನ್ನು ವಿಧಿಸುವ ಕುರಿತು ಪ್ರಮುಖ ಮಾಹಿತಿಯನ್ನು ನೀಡಿದೆ ಇದರಿಂದ ಹಲವಾರು ಸಾಮಾಜಿಕ ಜಾಲತಾಣಗಳನ್ನು ಬಳಸುವ ಬಳಕೆದಾರರಲ್ಲಿ ಕುತೂಹಲಗಳು ಹಾಗೂ ಹಲವು ಪ್ರಶ್ನೆಗಳು ಮೂಡಿರುವುದು ಸಹಜವಾಗಿದೆ. ಆದರೆ ಸಾಮಾನ್ಯ ಜನರು ಬಳಸುವ ಮೂಲಭೂತ ಸೇವೆಗಳಲ್ಲಿ ಯಾವುದೇ ತೊಂದರೆ ಉಂಟಾಗದೆ ಉಚಿತವಾಗಿ ಮುಂದುವರೆಯಲಿದ್ದು ಹೆಚ್ಚುವರಿ ಸೌಲಭ್ಯಗಳನ್ನು ಪಡೆಯುವ ಆಸಕ್ತಿ ಹಾಗೂ ನಿರೀಕ್ಷಿಸಿದವರಿಗೆ ಮಾತ್ರ ಈ ಚಂದದಾರಿಕೆಯೂ ಅಗತ್ಯವಾಗಬಹುದಾಗಿದೆ
Meta Premium (Meta Verified) ಯೋಜನೆ ಎಂದರೇನು
Meta Premium (Meta Verified) ಯೋಜನೆ ಎಂಬುದು ಮೆಟಾ ಕಂಪನಿಯ Facebook, Whatsapp ಮತ್ತು Instagram ಬಳಕೆದಾರರಿಗಾಗಿ ನೀಡುವ ಚಂದಾದಾರಿಕೆಯ ಸೇವೆಯಾಗಿದೆ. ಈ ಯೋಜನೆಯ ಅಡಿಯಲ್ಲಿ ನೀಲಿ ಪರಿಶೀಲನಾ ಗುರುತನ್ನು ನೀಡುವುದು (Blue Tick), ಖಾತೆಗೆ ಹೆಚ್ಚುವರಿ ಭದ್ರತೆಯನ್ನು ಒದಗಿಸುವುದು, ನೇರ ಗ್ರಾಹಕ ಬೆಂಬಲವನ್ನು ಒದಗಿಸುವುದು, ನಕಲಿ ಖಾತೆಗಳಿಂದ ರಕ್ಷಣೆ ಮಾಡುವುದು ಹಾಗೂ ಖಾತೆಯ ವಿಶ್ವಾಸಾರ್ಹತೆಯನ್ನು ಉತ್ತಮ ರೀತಿಯಲ್ಲಿ ಹೆಚ್ಚಿಸುವ ವಿಶೇಷ ಸೌಲಭ್ಯಗಳು ನೀಡುವುದಾಗಿದೆ.
ಏಕೆ ಪರಿಚಯಿಸಲಾಗುತ್ತಿದೆ?
ಇಂದಿನ ದಿನಗಳಲ್ಲಿ ಡಿಜಿಟಲ್ ಪ್ರಕ್ರಿಯೆಯು ತ್ವರಿತ ಗತಿಯಲ್ಲಿ ಸಾಗುತ್ತಿದ್ದು ಆನ್ಲೈನ್ ಭದ್ರತೆ ಮತ್ತು ವೈಯಕ್ತಿಕ ಖಾತೆ ರಕ್ಷಣೆಯು ಅತ್ಯಂತ ಪ್ರಮುಖವಾಗಿದೆ ಈ ಕಾರಣದಿಂದ ಭದ್ರತೆ ಹಾಗೂ ರಕ್ಷಣೆಯನ್ನು ಒದಗಿಸಲು ಈ ಮೆಟಾ ಒನ್ ಪ್ರೀಮಿಯಂ ಅನ್ನು ಪರಿಚಯಿಸಲಾಗುತ್ತಿದ್ದು ಬಳಕೆದಾರರಿಗೆ ಹೆಚ್ಚಿನ ಸುರಕ್ಷತೆ ಮತ್ತು ವಿಶ್ವಾಸಾರ್ಹ ಸೇವೆಗಳನ್ನು ನೀಡುವ ಗುರಿಯನ್ನು ಹೊಂದಿದೆ ಇದರ ಜೊತೆಯಲ್ಲಿ ವಿವಿಧ ಮೆಟಾ ಸೇವೆಗಳ ನಡುವೆ ಉತ್ತಮ ಸಂಪರ್ಕ ಸಾಧನೆ ಸುಲಭವಾಗಿ ನಿರ್ವಹಣೆ ಮಾಡುವುದು ವೇಗವಾಗಿ ಗ್ರಾಹಕರ ಬೆಂಬಲವನ್ನು ಪಡೆಯುವುದು ಹಾಗೂ ಉತ್ತಮ ರೀತಿಯ ವೈಶಿಷ್ಟ್ಯಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ
ಯಾರಿಗಾಗಿ ವಿನ್ಯಾಸಗೊಳಿಸಲಾಗಿದೆ?
ಮೆಟಾ ಒನ್ ಯೋಜನೆಯನ್ನು ಪ್ರಮುಖವಾಗಿ ಕಂಟೆಂಟ್ ಕ್ರಿಯೇಟರ್ಗಳು, ಸಾಮಾಜಿಕ ಮಾಧ್ಯಮದ ಪ್ರಭಾವಿಗಳು, ಸಣ್ಣ ಪ್ರಮಾಣದ ಮತ್ತು ದೊಡ್ಡ ಪ್ರಮಾಣದ ವ್ಯವಹಾರ ಸಂಸ್ಥೆಗಳಿಗೆ ಈ ಪ್ರೀಮಿಯಂ ಸೌಲಭ್ಯಗಳನ್ನು ವಿನ್ಯಾಸಗೊಳಿಸಲಾಗಿದೆ ಸಾಮಾಜಿಕ ಜಾಲತಾಣಗಳ ಖಾತೆಗಳಿಗೆ ಹೆಚ್ಚುವರಿ ಭದ್ರತೆಯನ್ನು ಒದಗಿಸುವುದರ ಜೊತೆಯಲ್ಲಿ ಉತ್ತಮ ಬೆಂಬಲ ಸೇವೆಯನ್ನು ನೀಡುವುದು ಹಾಗೂ ವಿಶ್ವಾಸವನ್ನು ಹೆಚ್ಚಿಸುವ ವಿಶೇಷ ವೈಶಿಷ್ಟ್ಯಗಳನ್ನು ಪಡೆಯಲು ಬಯಸುವವರಿಗೆ ಇದನ್ನು ವಿನ್ಯಾಸಗೊಳಿಸಲಾಗಿದೆ.
Social Media ಪ್ರಮುಖ ಅಂಶಗಳು
1. ಸೇವೆಗಳಲ್ಲಿ ಬದಲಾವಣೆ
ಮೆಟಾ ಸಂಸ್ಥೆಯು ತನ್ನ ಸಂಸ್ಥೆಯಲ್ಲಿ ಬರುವ ವಿವಿಧ Social Media ಗಳನ್ನು ಬಳಸುವ ಬಳಕೆದಾರರ ಅನುಭವವನ್ನು ಉತ್ತಮಗೊಳಿಸಲು ಹಾಗೂ ಸುಭದ್ರ ಗೊಳಿಸಲು ಕೆಲವು ನೂತನ ಬದಲಾವಣೆಗಳನ್ನು ತರುತ್ತಿದೆ ಈವರೆಗೂ ಎಲ್ಲ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗಿದ್ದು ಇನ್ನು ಮುಂದೆ ವಿಶೇಷ ಸೌಲಭ್ಯಗಳನ್ನು ಪಡೆಯಲು ಹಾಗೂ ಹೆಚ್ಚುವರಿ ಫೀಚರ್ಗಳನ್ನು ಪಡೆಯಲು ನಿಗರಿ ಪಡಿಸಿದ ಮೊತ್ತವನ್ನು ಪಾವತಿ ಮಾಡಬೇಕಾದ ಸಾಧ್ಯತೆ ಇರುತ್ತದೆ ಸಾಮಾನ್ಯ ಬಳಕೆದಾರರು ಮೆಟಾ ಸಂಸ್ಥೆಯ ಸಾಮಾಜಿಕ ಜಾಲತಾಣಗಳ ಮೂಲಭೂತ ಸೇವೆಗಳನ್ನು ಈಗಿರುವಂತೆಯೇ ಬಳಸಬಹುದು ಆದರೂ ಹೆಚ್ಚುವರಿ ಸೌಲಭ್ಯಗಳನ್ನು ಪಡೆಯಬೇಕೆಂಬ ಜನರಿಗೆ ವಿಶೇಷ ಯೋಜನೆಗಳನ್ನು ನೀಡಲಾಗಬಹುದು.
ಈ ಸೇವೆಗಳ ಬದಲಾವಣೆಗಳ ಮೂಲಕ ಸೇವೆಗಳ ಗುಣಮಟ್ಟದಲ್ಲಿ ಹೆಚ್ಚಳ ಮಾಹಿತಿಯನ್ನು ಪಡೆಯಲು ಬೇಕಾಗುವ ಸಮಯ ಮತ್ತು ವೇಗ ಹಾಗೂ ಭದ್ರತೆಯನ್ನು ಹೆಚ್ಚಿಸಲು ಮೆಟಾ ಸಂಸ್ಥೆಯು ಪ್ರಯತ್ನಿಸುತ್ತದೆ ಬಳಕೆದಾರರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಅಂತಹ ಬದಲಾವಣೆಗಳನ್ನು ಜಾರಿಗೆ ತರಲು ಯೋಜಿಸಿದೆ
2. ಹೊಸ ಪ್ರೀಮಿಯಂ ಸೇವೆಗಳು
Social Media ವಿಭಾಗದಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿರುವ ಮೆಟಾ ಸಂಸ್ಥೆಯು ಫೇಸ್ಬುಕ್ ಮತ್ತು ವಾಟ್ಸಪ್ ಬಳಕೆದಾರರಿಗೆ ಹೊಸ ಬದಲಾವಣೆಗಳನ್ನು ತರುವ ಮೂಲಕ ಪ್ರೀಮಿಯಂ ಸೇವೆಗಳನ್ನು ಒದಗಿಸುವ ಯೋಜನೆಯನ್ನು ರೂಪಿಸಿಕೊಳ್ಳುತ್ತದೆ ಈ ಸೇವೆಗಳನ್ನು ಬದಲಾಯಿಸುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಜಾಹೀರಾತುಗಳನ್ನು ತೋರಿಸದೆ ಇರುವುದು ಹೆಚ್ಚುವರಿ ಭದ್ರತಾ ಸೌಲಭ್ಯಗಳನ್ನು ಒದಗಿಸುವುದು ಖಾತೆಯನ್ನು ಅಧಿಕೃತವಾಗಿ ಪರಿಶೀಲನೆ ಮಾಡಿಕೊಳ್ಳುವುದು ವಿಶೇಷ ಗ್ರಾಹಕರನ್ನು ಆಕರ್ಷಿಸುವುದು ಹಾಗೂ ಬೆಂಬಲವನ್ನು ಸೂಚಿಸುವುದು ಇನ್ನೂ ಮುಂತಾದ ಉತ್ತಮ ಹಾಗೂ ಸುಧಾರಿತ ಅವಕಾಶಗಳನ್ನು ಈ ಕೆಳಗೆ ನೀಡಲಾಗಿದೆ.
ವಿಶೇಷವಾಗಿ ವಿಷಯ ಸೃಷ್ಟಿಕರ್ತರು ಅಂದರೆ ಕಂಟೆಂಟ್ ಕ್ರಿಯೇಟರ್ ಉದ್ಯಮಿಗಳು ಮತ್ತು ವೃತ್ತಿಪರ ಬಳಕೆದಾರರಿಗೆ ಈ ಸೇವೆಗಳು ಹೆಚ್ಚು ಉಪಯೋಗವಾಗಲಿವೆ. ಮೆಟಾ ಸಂಸ್ಥೆಯು ಪರಿಚಯಿಸುತ್ತಿರುವ ಪ್ರೀಮಿಯಂ ಯೋಜನೆಗಳ ಮೂಲಕ ಬಳಕೆದಾರರು ತಮ್ಮ ಅವಶ್ಯಕತೆ ಹಾಗೂ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ಸೌಲಭ್ಯಗಳನ್ನು ಸ್ವಯಂ ಆಯ್ಕೆ ಮಾಡಿಕೊಳ್ಳಬಹುದು. ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿನ ಸೇವೆಗಳ ಬಳಕೆ ಮತ್ತಷ್ಟು ಸುಲಭಗೊಂಡು ಪರಿಣಾಮಕಾರಿಯಾಗಿ ಜಾರಿಗೊಳ್ಳುವ ನಿರೀಕ್ಷೆ ಇದೆ
3. ಬದಲಾವಣೆಯ ಕಾರಣಗಳು
ಮೆಟಾ ಸಂಸ್ಥೆಯು ಈ ಸೇವೆಗಳ ಬದಲಾವಣೆಗಳನ್ನು ತರುವ ಮುಖ್ಯ ಉದ್ದೇಶವೆಂದರೆ ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸುವುದು ವೇಗವನ್ನು ಹೆಚ್ಚಿಸುವುದು ಹಾಗೂ ಉತ್ತಮ ಗುಣಮಟ್ಟದ ಪರಿಣಾಮಕಾರಿ ಸೇವೆಗಳನ್ನು ಒದಗಿಸುವುದು ಆಗಿದೆ ಇಂದಿನ ಕಂಪ್ಯೂಟರ್ ತಂತ್ರಜ್ಞಾನ ಕ್ಷೇತ್ರದಲ್ಲಿ ನಿರಂತರವಾಗಿ ನಡೆಯುತ್ತಿರುವ ಸಾಫ್ಟ್ವೇರ್ ಅಭಿವೃದ್ಧಿ ಸೈಬರ್ ಭದ್ರತೆ ಹಾಗೂ ಅದರಲ್ಲಿನ ಸವಾಲುಗಳು ಮತ್ತು Social Mediaಗಳನ್ನು ಬಳಸಿರುವ ಬಳಕೆದಾರರ ಸಂಖ್ಯೆಯಲ್ಲಿ ಆಗದ ಪ್ರಮಾಣದ ಹೆಚ್ಚಳ ಆಗುತ್ತಿರುವುದರಿಂದ ಈ ಹೊಸ ವ್ಯವಸ್ಥೆಗಳನ್ನು ಪರಿಚಯಿಸಲಾಗುತ್ತದೆ.
ಈ ಯೋಜನೆ ಅಡಿಯಲ್ಲಿ ಸಾಮಾನ್ಯ ಗ್ರಾಹಕರಿಗಿಂತ ಹೆಚ್ಚಿನ ಭದ್ರತೆ ಮಾಹಿತಿ ರಕ್ಷಣೆ ಹೊಸ ಸೌಲಭ್ಯಗಳು ಹಾಗೂ ಉತ್ತಮ ರೀತಿಯಲ್ಲಿ ಗ್ರಾಹಕ ಸೇವೆಗಳನ್ನು ಒದಗಿಸಲು ಈ ಮೊತ್ತವನ್ನು ಪಾವತಿಸುವುದು ಅಗತ್ಯವಾಗಿರುತ್ತದೆ ಈ ಕಾರಣದಿಂದ ಹೆಚ್ಚುವರಿ ಸೇವೆಗಳಿಗೆ ಶುಲ್ಕವನ್ನು ಪಾವತಿಸುವ ಅವಕಾಶವನ್ನು ಮಾಡಲಿದ್ದು ಇದರ ಬಳಕೆದಾರರಿಗೆ ಉತ್ತಮ ರೀತಿಯ ಹಾಗೂ ವಿಶ್ವಾಸವನ್ನು ಹೊಂದಿರುವಂತಹ ಸೇವೆಗಳನ್ನು ಒದಗಿಸಲು ಸಹಕರಿಸುತ್ತದೆ
Social Media ಬಳಕೆದಾರರು ಗಮನಿಸಬೇಕಾದ ವಿಷಯ
- ಪ್ರಸ್ತುತ Facebook, Instagram ಮತ್ತು WhatsApp ನ ಮೂಲಭೂತ ಸೇವೆಗಳು ಉಚಿತವಾಗಿಯೇ ಲಭ್ಯವಿವೆ.
- ಶುಲ್ಕ ವಿಧಿಸಲಾಗುವುದು ಎಂದರೆ ಸಾಮಾನ್ಯವಾಗಿ ಹೆಚ್ಚುವರಿ ಅಥವಾ ಪ್ರೀಮಿಯಂ ಸೌಲಭ್ಯಗಳಿಗೆ ಮಾತ್ರ.
- ಯಾವುದೇ ಹೊಸ ಶುಲ್ಕ ಅಥವಾ ಚಂದಾದಾರಿಕೆ ಯೋಜನೆ ಜಾರಿಯಾದರೆ, ಅದರ ಬಗ್ಗೆ ಅಧಿಕೃತ ಪ್ರಕಟಣೆ ನೀಡಲಾಗುತ್ತದೆ.
- ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಅಪೂರ್ಣ ಅಥವಾ ತಪ್ಪು ಮಾಹಿತಿಯನ್ನು ನಂಬುವ ಮೊದಲು ಅಧಿಕೃತ ಪ್ರಕಟಣೆಗಳನ್ನು ಪರಿಶೀಲಿಸುವುದು ಉತ್ತಮ.
- ಆದ್ದರಿಂದ, “Facebook, Instagram ಮತ್ತು WhatsApp ಸಂಪೂರ್ಣವಾಗಿ ಪಾವತಿಸಬೇಕಾದ ಸೇವೆಗಳಾಗುತ್ತಿವೆ” ಎಂಬ ಮಾಹಿತಿ ಸರಿಯಲ್ಲ. ಆದರೆ ಕೆಲವು ಹೆಚ್ಚುವರಿ ಪ್ರೀಮಿಯಂ ಸೇವೆಗಳಿಗೆ ಭವಿಷ್ಯದಲ್ಲಿ ಶುಲ್ಕ ವಿಧಿಸುವ ಸಾಧ್ಯತೆ ಇದೆ.
Social Media ಬಳಕೆದಾರರು ಆತಂಕಪಡುವ ಅಗತ್ಯವಿಲ್ಲ
- ಸೋಶಿಯಲ್ ಮೀಡಿಯಾ ಬಳಕೆದಾರರು ಈ ವಿಷಯದ ಬಗ್ಗೆ ಅನಗತ್ಯ ಆತಂಕಪಡುವ ಅವಶ್ಯಕತೆ ಇಲ್ಲ. ಸಾಮಾನ್ಯ ಬಳಕೆದಾರರಿಗೆ ಪ್ರಸ್ತುತ ಲಭ್ಯವಿರುವ ಮೂಲಭೂತ ಸೇವೆಗಳು ಉಚಿತವಾಗಿಯೇ ಮುಂದುವರಿಯಲಿವೆ.
- ಹೆಚ್ಚುವರಿ ಅಥವಾ ವಿಶೇಷ ಸೌಲಭ್ಯಗಳನ್ನು ಪಡೆಯಲು ಬಯಸುವ ಬಳಕೆದಾರರು ಮಾತ್ರ ಪ್ರೀಮಿಯಂ ಸೇವೆಗಳಿಗೆ ಶುಲ್ಕ ಪಾವತಿಸಬೇಕಾಗಬಹುದು. ಸಾಮಾನ್ಯ ಬಳಕೆಗೆ ಯಾವುದೇ ಕಡ್ಡಾಯ ಶುಲ್ಕ ವಿಧಿಸಲಾಗುವುದಿಲ್ಲ.
- ಉಚಿತವಾಗಿ ಮುಂದುವರಿಯುವ ಸೇವೆಗಳು
- Facebook – ಸಾಮಾನ್ಯ ಬಳಕೆದಾರರಿಗೆ ಉಚಿತವಾಗಿಯೇ ಮುಂದುವರಿಯುತ್ತದೆ.
- Instagram – ಮೂಲಭೂತ ಸೇವೆಗಳು ಉಚಿತವಾಗಿರುತ್ತವೆ.
- WhatsApp – ಸಂದೇಶ ಕಳುಹಿಸುವುದು, ಕರೆ ಮಾಡುವುದು ಸೇರಿದಂತೆ ಪ್ರಮುಖ ಸೇವೆಗಳು ಉಚಿತವಾಗಿಯೇ ಲಭ್ಯವಿರುತ್ತವೆ.
ಮುಖ್ಯ ಮಾಹಿತಿ
ಮೆಟಾ ಸಂಸ್ಥೆ ಪರಿಚಯಿಸಬಹುದಾದ ಪಾವತಿ ಆಧಾರಿತ ಸೇವೆಗಳು ಸಾಮಾನ್ಯವಾಗಿ ಹೆಚ್ಚುವರಿ ಸೌಲಭ್ಯಗಳು, ವಿಶೇಷ ವೈಶಿಷ್ಟ್ಯಗಳು ಅಥವಾ ಪ್ರೀಮಿಯಂ ಅನುಭವಕ್ಕೆ ಸಂಬಂಧಿಸಿದವಾಗಿರುತ್ತವೆ. ಆದ್ದರಿಂದ “Facebook, Instagram ಮತ್ತು WhatsApp ಬಳಸಲು ಎಲ್ಲರೂ ಹಣ ಪಾವತಿಸಬೇಕು” ಎಂಬ ಸುದ್ದಿಯನ್ನು ನಂಬುವ ಅಗತ್ಯವಿಲ್ಲ. ಬಳಕೆದಾರರು ಅಧಿಕೃತ ಪ್ರಕಟಣೆಗಳನ್ನು ಮಾತ್ರ ನಂಬಬೇಕು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ವದಂತಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು.
ಪ್ರೀಮಿಯಂ ಸೇವೆಗಳ ಶುಲ್ಕ ಕುರಿತು ಮಾಹಿತಿ
ಇವು ವಿವಿಧ ಮಾಧ್ಯಮ ವರದಿಗಳ ಆಧಾರದ ಅಂದಾಜು ಮಾಹಿತಿ ಮಾತ್ರ. ಅಧಿಕೃತ ದರಗಳನ್ನು ಮೆಟಾ ಸಂಸ್ಥೆ ಪ್ರಕಟಿಸಿಲ್ಲ
ಕೆಲವು ವರದಿಗಳ ಪ್ರಕಾರ, ಪ್ರೀಮಿಯಂ ಅಥವಾ ಹೆಚ್ಚುವರಿ ಸೌಲಭ್ಯಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಕೆಳಗಿನಂತೆ ಶುಲ್ಕಗಳು ಚರ್ಚೆಯಲ್ಲಿವೆ:
| ಪ್ಲಾಟ್ಫಾರ್ಮ್ | ಅಂದಾಜು ಮಾಸಿಕ ಶುಲ್ಕ (USD-ಡಾಲರ್) ನಲ್ಲಿ | ಅಂದಾಜು ಮಾಸಿಕ ಶುಲ್ಕ (INR- ರೂಪಾಯಿ) ನಲ್ಲಿ |
| Instagram Plus | $3.99 | 340/- ರೂಪಾಯಿಗಳಿಂದ 390/- ರೂಪಾಯಿಗಳು |
| Facebook Plus | $3.99 | 340/- ರೂಪಾಯಿಗಳಿಂದ 390/- ರೂಪಾಯಿಗಳು |
| WhatsApp Plus | $2.99 | 250/- ರೂಪಾಯಿಗಳಿಂದ 300/- ರೂಪಾಯಿಗಳು |
ಪ್ರಮುಖ ಸೂಚನೆ
- ಭಾರತದಲ್ಲಿ ಈ ಸೇವೆಗಳಿಗೆ ಸಂಬಂಧಿಸಿದ ಅಧಿಕೃತ ಶುಲ್ಕ ದರಗಳನ್ನು ಇನ್ನೂ ಘೋಷಿಸಲಾಗಿಲ್ಲ.
- ಈ ದರಗಳು ವಿವಿಧ ದೇಶಗಳಲ್ಲಿ ಲಭ್ಯವಿರುವ ಪ್ರೀಮಿಯಂ ಸೇವೆಗಳು ಅಥವಾ ಚಂದಾದಾರಿಕೆ ಯೋಜನೆಗಳಿಗೆ ಸಂಬಂಧಿಸಿರಬಹುದು.
- ಸಾಮಾನ್ಯ ಬಳಕೆದಾರರಿಗೆ ಲಭ್ಯವಿರುವ ಮೂಲಭೂತ ಸೇವೆಗಳು ಇನ್ನೂ ಉಚಿತವಾಗಿಯೇ ಮುಂದುವರಿಯುತ್ತಿವೆ.
- ಯಾವುದೇ ಹೊಸ ಶುಲ್ಕ ಅಥವಾ ಚಂದಾದಾರಿಕೆ ಯೋಜನೆ ಜಾರಿಗೆ ಬಂದರೆ, ಅದರ ಬಗ್ಗೆ ಮೆಟಾ ಸಂಸ್ಥೆಯ ಮೂಲಕ ಮಾಹಿತಿ ನೀಡಲಾಗುತ್ತದೆ.
ಮೆಟಾ ಒನ್ (Meta One) ಯೋಜನೆ ಕುರಿತು ಮಾಹಿತಿ
ಮೆಟಾ ಸಂಸ್ಥೆಯು ತನ್ನ ಕೃತಕ ಬುದ್ಧಿಮತ್ತೆ (AI) ಆಧಾರಿತ ಸೇವೆಗಳನ್ನು ವಿಸ್ತರಿಸುವ ಉದ್ದೇಶದಿಂದ “Meta One” ಎಂಬ ಹೊಸ ಚಂದಾದಾರಿಕೆ ಯೋಜನೆಯನ್ನು ಪರಿಚಯಿಸುವ ಕುರಿತು ವರದಿಗಳು ಹರಿದಾಡುತ್ತಿವೆ. ಈ ಯೋಜನೆಯಡಿ Meta One Plus ಮತ್ತು Meta One Premium ಎಂಬ ಎರಡು ವಿಭಿನ್ನ ಆಯ್ಕೆಗಳನ್ನು ನೀಡುವ ಸಾಧ್ಯತೆ ಇದೆ.
Meta One ಯೋಜನೆಯ ಪ್ರಮುಖ ವೈಶಿಷ್ಟ್ಯಗಳು
1. AI ಆಧಾರಿತ ಚಿತ್ರ (Image) ರಚನೆ ಸೌಲಭ್ಯ
ಮೆಟಾ ಒನ್ ಯೋಜನೆಯ ಮೂಲಕ Social Media ದ ಬಳಕೆದಾರರು ಕೇವಲ ಪದ ಸೂಚನೆಯನ್ನು ನೀಡುವ ಮೂಲಕ ಕೃತಕ ಬುದ್ಧಿಮತ್ತೆ ನೆರವಿನಿಂದ ಚಿತ್ರಗಳನ್ನು ರಚಿಸುವ ಸೌಲಭ್ಯವನ್ನು ಕಲ್ಪಿಸಲಾಗಿರುತ್ತದೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕುವ ಪೋಸ್ಟ್ಗಳು ಜಾಹಿರಾತುಗಳು ಮತ್ತು ಅದರ ವಿನ್ಯಾಸಗಳು ಸೃಜನಾತ್ಮಕ ಕಲಾ ಕೃತಿಗಳು ಹಾಗೂ ಬಳಕೆದಾರರ ವೈಯಕ್ತಿಕತೆಗೆ ತಕ್ಕಂತೆ ವೇಗವಾಗಿ ಮತ್ತು ಸುಲಭವಾಗಿ ಉತ್ತಮ ರೀತಿಯ ಚಿತ್ರಗಳನ್ನು ಸೃಷ್ಟಿಸುವಂತೆ ಈ ಸೌಲಭ್ಯವನ್ನು ಕಲ್ಪಿಸುವುದರಿಂದ ಈ ಸೌಲಭ್ಯ ಸಹಾಯಕವಾಗುತ್ತದೆ
2. AI ಮೂಲಕ ವಿಡಿಯೋ ನಿರ್ಮಾಣ (Video Creation)
ಈ ವಿಶಿಷ್ಟತೆಯ ಮೂಲಕ ಬಳಕೆದಾರರು ಕೇವಲ ಒಂದು ವಿಷಯ ಅಥವಾ ವಿಚಾರಕ್ಕೆ ಸಂಬಂಧಿಸಿದ ಪದಗಳನ್ನು ನೀಡಿ ಚಿತ್ರಗಳನ್ನು ರಚಿಸಿ ಈ ಚಿತ್ರಗಳ ಆಧಾರದ ಮೇಲೆ ಕೃತಕ ಬುದ್ಧಿಮತ್ತೆ ನೆರವಿನಿಂದ ವಿಡಿಯೋಗಳನ್ನು ಸಹ ರಚಿಸಬಹುದಾಗಿರುತ್ತದೆ ವಿಡಿಯೋಗಳನ್ನು ರಚಿಸಲು ಹಾಗೂ ಸಂಪಾದಿಸಲು ಮೊದಲಿನಂತೆ ಹೆಚ್ಚಿನ ತಾಂತ್ರಿಕ ಜ್ಞಾನದ ಅಗತ್ಯವಿಲ್ಲದೆ ಆಕರ್ಷಕ ರೀತಿಯಲ್ಲಿ ಹಾಗೂ ಉತ್ತಮ ಗುಣಮಟ್ಟದ ವಿಷಯವನ್ನು ರಚಿಸಲು ಹಾಗೂ ಸೃಷ್ಟಿಸಲು ಈ ರಚನೆಯು ನೆರವಾಗುತ್ತದೆ
3. ಸುಧಾರಿತ AI ಉಪಕರಣಗಳ ಬಳಕೆ
ಮೆಟಾ ಒನ್ ಚಂದಾದಾರಿಕೆಯೂ ಬಳಕೆದಾರರಿಗೆ ಅತ್ಯಾಧುನಿಕ ರೀತಿಯಲ್ಲಿ ಕೃತಕ ಬುದ್ಧಿಮತ್ತೆ ಸಾಧನಗಳ ಪ್ರವೇಶವನ್ನು ಉಚಿತವಾಗಿ ಒದಗಿಸುತ್ತದೆ ಅಂದರೆ ವಿಷಯ ರಚನೆ ಅಂದರೆ ಕಂಟೆಂಟ್ ಕ್ರಿಯೇಷನ್, ಭಾಷಾಂತರ ಅಂದರೆ ಟ್ರಾನ್ಸ್ಲೇಷನ್, ಚಿತ್ರ ಸಂಪಾದನೆ ಎಂದರೆ ಭಾವಚಿತ್ರದ ರಚನೆ, ಮಾಹಿತಿ ವಿಶ್ಲೇಷಣೆ ಮತ್ತು ಇನ್ನೂ ಹಲವು ರೀತಿಯ ಸೃಜನಾತ್ಮಕ ಕಾರ್ಯಗಳನ್ನು ವೇಗವಾಗಿ ಹಾಗೂ ಪರಿಣಾಮಕಾರಿಯಾಗಿ ನಿರ್ವಹಿಸಲು ಈ ಚಂದಾದಾರಿಕೆಯು ಸಹಾಯಮಾಡುತ್ತದೆ
4. ದೀರ್ಘ ಮತ್ತು ಸಂಕೀರ್ಣ AI ಕಾರ್ಯಗಳನ್ನು ನಿರ್ವಹಿಸುವ ಅವಕಾಶ
ವಿಷಯಗಳ ತಾರ್ಕಿಕ ವಿಶ್ಲೇಷಣೆ, ದೊಡ್ಡ ಪ್ರಮಾಣದಲ್ಲಿ ಯಾವುದಾದರೂ ವಿಷಯವನ್ನು ರಚಿಸಬೇಕೆಂದರೆ ಹಾಗೂ ಬಹು ಅಂತದಲ್ಲಿನ ಕಾರ್ಯ ಯೋಜನೆಗಳನ್ನು ರೂಪಿಸಲು ನಿರ್ವಹಿಸಲು ಹಾಗೂ ಪರಿಣಾಮಕಾರಿಯಾಗಿ ಯೋಜಿಸಲು ಮೆಟಾ ಒನ್ ಚಂದಾದಾರಿಕೆಯು ಹೆಚ್ಚಿನ ಸಾಮರ್ಥ್ಯವನ್ನು ಒದಗಿಸುವುದರ ಜೊತೆಯಲ್ಲಿ ಬಳಕೆದಾರರು ಸಮಯವನ್ನು ಉಳಿತಾಯ ಮಾಡಿಕೊಂಡು ಅವರ ವಿಷಯ ರಚನೆಯ ಗುಣಮಟ್ಟ ಹಾಗೂ ಅಂಶಗಳನ್ನು ಹೆಚ್ಚಿಸಿಕೊಳ್ಳಬಹುದು
5. ಕಂಟೆಂಟ್ ಕ್ರಿಯೇಟರ್ಗಳಿಗೆ ವಿಶೇಷ ಸೌಲಭ್ಯಗಳು
ಕಂಟೆಂಟ್ ಕ್ರಿಯೇಟರ್ಸ್ ಎಂದೇ ಪ್ರಮುಖವಾಗಿರುವ ವಿಶೇಷ ಸೃಷ್ಟಿಕರ್ತರಿಗೆ ಈ ವಿಶೇಷ ಉಪಕರಣಗಳು ಉತ್ತಮ ರೀತಿಯಲ್ಲಿ ಸಂಪಾದನೆಯನ್ನು ತಂದು ಕೊಡುತ್ತವೆ ಅದರ ಜೊತೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ತಲುಪಿಸಲು ಸಹಾಯ ಮಾಡುತ್ತವೆ ಇದರಿಂದ ಉತ್ತಮ ಗುಣಮಟ್ಟದ ವಿಷಯವನ್ನು ವೇಗವಾಗಿ ಹಾಗೂ ಪರಿಣಾಮಕಾರಿಯಾಗಿ ಸೃಷ್ಟಿಸುವುದರ ಜೊತೆಯಲ್ಲಿ ಹೆಚ್ಚಿನ ಜನರನ್ನು ತಲುಪಬಹುದು
6. ವ್ಯವಹಾರ (Business) ಬಳಕೆದಾರರಿಗೆ ಹೆಚ್ಚುವರಿ ಸೇವೆಗಳು
ಮಧ್ಯಮ ಹಾಗೂ ದೊಡ್ಡ ಮಟ್ಟದ ವ್ಯವಹಾರ ಸಂಸ್ಥೆಗಳು ಮತ್ತು ಉದ್ಯಮಿಗಳಿಗೆ ತನ್ನ ಉದ್ಯಮದ ಗ್ರಾಹಕರೊಂದಿಗೆ ಉತ್ತಮ ರೀತಿಯಲ್ಲಿ ಸಮೂಹನವನ್ನು ನಡೆಸಲು ಜಾಹೀರಾತನ್ನು ನೀಡಲು ಹಾಗೂ ನಿರ್ವಹಿಸಲು ಮಾಹಿತಿ ವಿಶ್ಲೇಷಣೆ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ಮಾರುಕಟ್ಟೆ ಸಾಧನಗಳಂತಹ ಮುಂತಾದ ಪ್ರಮುಖ ಹೆಚ್ಚುವರಿ ಸೇವೆಗಳನ್ನು ಒದಗಿಸುವುದು ಲಭ್ಯವಾಗಿದೆ. ಇದು ಉದ್ಯಮದ ವ್ಯವಹಾರ ಬೆಳವಣಿಗೆಗೆ ಧನಾತ್ಮಕ ರೀತಿಯಲ್ಲಿ ನೆರವಾಗಲಿದ್ದು ಉದ್ಯಮ ಪ್ರಾರಂಭದ ಪ್ರಾಥಮಿಕ ಅಂಶವಾದ ಲಾಭಗಳಿಕೆಗೆ ಉತ್ತಮ ರೀತಿಯಲ್ಲಿ ಸಹಕರಿಸುತ್ತದೆ
7. ಪ್ರೀಮಿಯಂ AI ಅನುಭವ ಮತ್ತು ಹೆಚ್ಚಿನ ಸಾಮರ್ಥ್ಯದ ವೈಶಿಷ್ಟ್ಯಗಳು
ಮೆಟಾ ಒನ್ ಯೋಜನೆ ಬಳಕೆದಾರರಿಗೆ ವೇಗವಾದ ಪ್ರತಿಕ್ರಿಯೆ ದೊರೆಯುತ್ತದೆ ಸಾಮಾನ್ಯ ಗ್ರಾಹಕರಿಗಿಂತ ಹೆಚ್ಚಿನ ಕೃತಕ ಬುದ್ಧಿಮತ್ತೆ ಸಾಮರ್ಥ್ಯವು ದೊರೆಯುತ್ತದೆ ಸುಧಾರಿತ ಹಾಗೂ ವಿಶಿಷ್ಟ ಯೋಜನಾ ಕಾರ್ಯಗಳು ಮತ್ತು ಪ್ರಾಥಮಿಕ ರೀತಿಯಲ್ಲಿ ಪ್ರವೇಶವನ್ನು ಒದಗಿಸುತ್ತದೆ ಇದರಿಂದ ಸಾಮಾನ್ಯ ಬಳಕೆದಾರರಿಗಿಂತ ಪ್ರೀಮಿಯಂ ಬಳಕೆದಾರರು ಉತ್ತಮ ರೀತಿಯ ಹಾಗೂ ಪರಿಣಾಮಕಾರಿ ಕೃತಕ ಬುದ್ಧಿಮತ್ತೆ ಅನುಭವವನ್ನು ಪಡೆಯಲು ಈ ಯೋಜನೆ ಅಡಿಯಲ್ಲಿ ಸಾಧ್ಯವಾಗುತ್ತದೆ
ಯೋಜನೆಯ ಉದ್ದೇಶ
ಮೆಟಾ ಸಂಸ್ಥೆಯ ಪ್ರಮುಖ ಉದ್ದೇಶವು AI ಅಂದರೆ ಕೃತ ಬುದ್ಧಿಮತ್ತೆ ತಂತ್ರಜ್ಞಾನವನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಿ ಹಾಗೂ ನಿರ್ವಹಿಸಿ ತನ್ನ ಬಳಕೆದಾರರಿಗೆ ಅತ್ಯುತ್ತಮ ಅನುಭವವನ್ನು ತ್ವರಿತ ಗತಿಯಲ್ಲಿ ಉತ್ತಮ ಗುಣಮಟ್ಟದಲ್ಲಿ ಒದಗಿಸುವುದಾಗಿದೆ. ವಿಶೇಷವಾಗಿ ಕಂಟೆಂಟ್ ಕ್ರಿಯೇಟರ್ಸ್ ಗಳಿಗೆ, ವೃತ್ತಿಪರರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಮಧ್ಯಮ ಹಾಗೂ ಬೃಹತ್ ವಲಯದ ವ್ಯವಹಾರ ಸಂಸ್ಥೆಗಳಿಗೆ ವೇಗವಾಗಿ ನಿಖರವಾಗಿ ಹಾಗೂ ಪರಿಣಾಮಕಾರಿಯಾಗಿ ಕೃತಕ ಬುದ್ಧಿಮತ್ತೆ ಸೇವೆಗಳನ್ನು ನೀಡುವ ಮೂಲಕ ಅವರ ಸಂಪಾದನೆ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸುವುದು ಮುಖ್ಯ ಉದ್ದೇಶ ಹಾಗೂ ಗುರಿಯಾಗಿದೆ. ಇದರ ಜೊತೆಯಲ್ಲಿ ಸೃಜನಾತ್ಮಕ ಕೆಲಸಗಳನ್ನು ಕಷ್ಟದಿಂದ ಸುಲಭಗೊಳಿಸಿ ಡಿಜಿಟಲ್ ಕ್ಷೇತ್ರದಲ್ಲಿ ಹೊಸ ಅವಕಾಶ ಹಾಗೂ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ದೇಶದ ಸಮಗ್ರ ಉತ್ಪಾದನೆಯನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ.
ಗಮನಿಸಬೇಕಾದ ವಿಷಯ
- ಸಾಮಾನ್ಯ ಬಳಕೆದಾರರಿಗೆ ಲಭ್ಯವಿರುವ Facebook, Instagram ಮತ್ತು WhatsApp ಸೇವೆಗಳು ಉಚಿತವಾಗಿಯೇ ಮುಂದುವರಿಯುತ್ತವೆ.
- Meta One ಮಾದರಿಯ ಯೋಜನೆಗಳು ಹೆಚ್ಚುವರಿ AI ಸೌಲಭ್ಯಗಳನ್ನು ಬಯಸುವ ಬಳಕೆದಾರರಿಗೆ ಮಾತ್ರ ಉದ್ದೇಶಿತವಾಗಿರಬಹುದು.
- ಯೋಜನೆಗಳ ಹೆಸರು, ವೈಶಿಷ್ಟ್ಯಗಳು ಮತ್ತು ಶುಲ್ಕಗಳು ದೇಶದಿಂದ ದೇಶಕ್ಕೆ ಬದಲಾಗುವ ಸಾಧ್ಯತೆ ಇದೆ.
- ಯಾವುದೇ ಹೊಸ ಸೇವೆಗಳ ಬಗ್ಗೆ ಅಧಿಕೃತ ಮಾಹಿತಿಯನ್ನು about.meta.com� ಮೂಲಕ ಪರಿಶೀಲಿಸುವುದು ಉತ್ತಮ.
ಈ ಬದಲಾವಣೆಯಿಂದ ಯಾರಿಗೆ ಹೆಚ್ಚು ಲಾಭವಾಗುತ್ತದೆ?
ಮೆಟಾ ಪರಿಚಯಿಸುತ್ತಿರುವ ಪ್ರೀಮಿಯಂ ಹಾಗೂ AI ಆಧಾರಿತ ಸೇವೆಗಳಿಂದ ಮುಖ್ಯವಾಗಿ ಈ ಕೆಳಗಿನ ವರ್ಗದ ಬಳಕೆದಾರರು ಹೆಚ್ಚು ಪ್ರಯೋಜನ ಪಡೆಯಬಹುದು:
1. ಕಂಟೆಂಟ್ ಕ್ರಿಯೇಟರ್ಗಳು (Content Creaters)
ಮೆಟಾ ಪ್ರೀಮಿಯಂ ಮತ್ತು ಕೃತಕ ಬುದ್ಧಿಮತ್ತೆ ಆಧಾರಿತ ಸೇವೆಗಳು ಕಂಟೆಂಟ್ ಕ್ರಿಯೇಟರ್ಸ್ ಗಳಿಗೆ ಹೆಚ್ಚು ಉಪಯೋಗವಾಗಲಿದೆ ಅಂದರೆ ಕೃತಕ ಬುದ್ಧಿಮತ್ತೆ ಸಹಾಯದಿಂದ ಉತ್ತಮ ರೀತಿಯ ಆಕರ್ಷಕ ಚಿತ್ರಗಳು, ವಿಡಿಯೋ ಕ್ಲಿಪ್ ಗಳು ಮತ್ತು Social Media ಗಳಲ್ಲಿ ಹಾಕಲಾಗುವ ಪೋಸ್ಟ್ ಗಳನ್ನು ವೇಗವಾಗಿ ಮತ್ತು ನಿಖರವಾಗಿ ರಚಿಸಬಹುದಾಗಿರುತ್ತದೆ. ಇದರ ಜೊತೆಯಲ್ಲಿ ಪ್ರೇಕ್ಷಕರ ಆಸಕ್ತಿಗಳು ವೀಕ್ಷಣೆ ಸಮಯ ಹಾಗೂ ಗುಣಮಟ್ಟ ಮತ್ತು ವಿಷಯಗಳನ್ನು ತೊಡಗಿಸಿಕೊಳ್ಳುವಲ್ಲಿ ಮಾಹಿತಿಯನ್ನು ಪಡೆದು ಉತ್ತಮ ವಿಷಯಗಳನ್ನು ಸೃಷ್ಟಿಸಲು ಹಾಗೂ ಹೆಚ್ಚಿನ ಜನರನ್ನು ತಲುಪಲು ಸಹಾಯವಾಗುತ್ತದೆ ಅಂದರೆ ಪ್ರೇಕ್ಷಕರು ಯಾವುದಾದರೂ ಒಂದು ವಸ್ತುವಿನ ಬಗ್ಗೆ ಹುಡುಕಿದರೆ ಆ ವಸ್ತುಗಳ ಮೇಲೆ ವಿವರಣೆಯನ್ನು ನೀಡುವಂತಹ ಚಿತ್ರಗಳು ಹಾಗೂ ವಿಡಿಯೋಗಳನ್ನು ರಚಿಸಲು ಈ ಕೃತಕ ಬುದ್ಧಿಮತ್ತೆ ಅಂಶವು ಸಹಕರಿಸುತ್ತದೆ.
2. ಇನ್ಫ್ಲೂಯೆನ್ಸರ್ಗಳು (Influencers)
ಇನ್ಫ್ಲೂಯೆನ್ಸರ್ ಗಳಿಗೆ ತಮ್ಮ Social Media ಗಳ ಪ್ರಭಾವವನ್ನು ಉತ್ತಮ ರೀತಿಯಲ್ಲಿ ಹೆಚ್ಚಿಸಲು ಈ ಕೃತಕ ಬುದ್ಧಿಮತ್ತೆ ಸೇವೆಗಳು ಸಹಕಾರಿಯಾಗಬಹುದು ಅಂದರೆ ಅವರನ್ನು ಹಿಂಬಾಲಿಸುವ ಅನುಯಾಯಿಗಳ ಬೆಳವಣಿಗೆ ಮತ್ತು ಹಾಕುವ ಪೋಸ್ಟ್ ಗಳ ವ್ಯಾಪ್ತಿಗಳು ಮತ್ತು ತಮ್ಮ ಪ್ರೇಕ್ಷಕರೊಂದಿಗೆ ಉತ್ತಮ ರೀತಿಯಲ್ಲಿ ಸಂವಹನ ಕೌಶಲ್ಯಗಳನ್ನು ಸಾಧಿಸಲು ವಿಶೇಷ ರೀತಿಯ ಯೋಜನೆಗಳು ಲಭ್ಯವಾಗಬಹುದು ಇದರಿಂದ ಅವರದೇ ಆದ ವೈಯಕ್ತಿಕ ಬ್ರಾಂಡುಗಳನ್ನು ರಚಿಸಿ ಅವುಗಳ ಮೌಲ್ಯಗಳನ್ನು ಹೆಚ್ಚಿಸುವುದರ ಜೊತೆಗೆ ವಾಣಿಜ್ಯ ಅವಕಾಶಗಳನ್ನು ಸಹ ರಚಿಸಿ ವೃದ್ಧಿಗೊಳಿಸಬಹುದು.
3. ಡಿಜಿಟಲ್ ಮಾರ್ಕೆಟರ್ಗಳು (Digital Marketers)
ಡಿಜಿಟಲ್ ಮಾರ್ಕೆಟರ್ಗಳು ಎಐ ಆಧಾರಿತ ಸೇವೆಗಳ ಅಡಿಯಲ್ಲಿ ಬರುವ ವಿಷಯ ರಚನೆಗಳು ಜಾಹೀರಾತುಗಳ ರಚನೆ ಮತ್ತು ನಿರ್ವಹಣೆ ಮತ್ತು ಅವುಗಳ ಪ್ರಚಾರ ಕಾರ್ಯಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಹಾಗೂ ಸಮಗ್ರ ಮಟ್ಟದಲ್ಲಿ ನಡೆಸಬಹುದು ಗ್ರಾಹಕರಿಗೆ ಇರುವ ಆಸಕ್ತಿಗಳು ಖರೀದಿ ಪ್ರಮಾಣ ಮತ್ತು ಪ್ರವೃತ್ತಿಗಳು ಹಾಗೂ ಜಾಹಿರಾತುಗಳ ಹಾಗೂ ಪ್ರೇಕ್ಷಕರ ಮೇಲೆ ಜಾಹೀರಾತುಗಳು ನೀಡುತ್ತಿರುವ ಮಾಹಿತಿ ಹಾಗೂ ಫಲಿತಾಂಶವನ್ನು ವಿಶ್ಲೇಷಣೆ ಮಾಡಲು ಈ ಸಾಧನಗಳು ಸುಧಾರಿತ ರೀತಿಯಲ್ಲಿ ಸಹಕರಿಸುತ್ತವೆ ಇದರಿಂದ ಮಾರುಕಟ್ಟೆ ಕಾರ್ಯಗಳು ವೇಗವಾಗಿ ನಿಖರವಾಗಿ ಹಾಗೂ ಪರಿಣಾಮಕಾರಿಯಾಗಿ ಪೂರ್ಣಗೊಂಡು ಡಿಜಿಟಲ್ ಮಾರ್ಕೆಟ್ ಗಳಿಗೆ ಸಹಾಯವಾಗುತ್ತದೆ
4. ಉದ್ಯಮಿಗಳು (Business Owners)
ಉದ್ಯಮಿಗಳು ತಮ್ಮ ಉದ್ಯೋಗದ ಮೂಲಕ ಉತ್ಪಾದಿಸುವ ಸರಕು ಉತ್ಪನ್ನಗಳು ಹಾಗೂ ಸೇವೆಗಳನ್ನು ಆನ್ಲೈನ್ ಮೂಲಕ ಪರಿಣಾಮಕಾರಿಯಾಗಿ ಪ್ರಚಾರ ಮಾಡಲು ಈ ಹೆಚ್ಚುವರಿ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು ಅಂದರೆ ಯಾವುದಾದರೂ ಒಂದು ಉತ್ಪನ್ನಕ್ಕೆ ಸಂಬಂಧ ಆಧಾರಿತ ಜಾಹೀರಾತು ರಚನೆ ಹಾಗೂ ನಿರ್ವಹಣೆ ಮತ್ತು ಗ್ರಾಹಕರ ತಲುಪಿವಿಕೆಯ ಮಟ್ಟವನ್ನು ವಿಶ್ಲೇಷಿಸಲು ವ್ಯವಹಾರ ವಿಶ್ಲೇಷಣೆ ಹಾಗೂ ತಾವು ರಚಿಸಿರುವ ಬ್ರಾಂಡ್ ನ ರಕ್ಷಣೆಗಾಗಿ ಹೆಚ್ಚುವರಿ ಸಾಧನಗಳನ್ನು ಬಳಸಿಕೊಳ್ಳಬಹುದು. ಇದರಿಂದ ವ್ಯವಹಾರದ ಬೆಳವಣಿಗೆ ತ್ವರಿತಗತಿಯಲ್ಲಿ ಉತ್ತಮ ರೀತಿಯಲ್ಲಿ ಹೆಚ್ಚಾಗುವುದರ ಜೊತೆಯಲ್ಲಿ ಆದಾಯ ಮಟ್ಟವು ಸಹ ಹೆಚ್ಚಾಗುತ್ತದೆ.
5. ಸೋಶಿಯಲ್ ಮೀಡಿಯಾ ವೃತ್ತಿಪರರು (Social Media Professionals)
ತಮ್ಮ ವೃತ್ತಿಯನ್ನುSocial Media ದಲ್ಲಿ ತೊಡಗಿಸಿಕೊಂಡಿರುವವರ ವೃತ್ತಿಪರರಿಗೆ ಈ ಕೃತಕ ಬುದ್ಧಿಮತ್ತೆ ಉಪಕರಣಗಳು ಕ್ಲಿಷ್ಟತೆ ಸಮಯ ಹಾಗೂ ಹೆಚ್ಚುವರಿ ಶ್ರಮವನ್ನು ಉಳಿಸಬಹುದು ಅಂದರೆ ಉತ್ತಮ ಗುಣಮಟ್ಟದ ಹಾಗೂ ಉತ್ತಮ ರೀತಿಯ ಚಿತ್ರಗಳ ಹಾಗೂ ವಿಡಿಯೋಗಳ ರಚನೆ ವಿಷಯ ರಚನೆ ಕಾರ್ಯಗಳನ್ನು ಹೊಂದಿರುವ ಈ ಅಂಶವು ಮಾಹಿತಿ ವಿಶ್ಲೇಷಣೆ ಹಾಗೂ ಮಾಹಿತಿಗಳ ಯೋಜನೆ ರೂಪಿಸುವಲ್ಲಿ ಕೆಲಸಗಳನ್ನು ವೇಗವಾಗಿ ನಿರ್ವಹಿಸುತ್ತವೆ ಹಾಗೂ ಉತ್ತಮ ರೀತಿಯಲ್ಲಿ ಮಾರ್ಕೆಟಿಂಗ್ ಮಾಡಲು ಸಹಕರಿಸುತ್ತವೆ ಇದರಿಂದ ಅವರ ಉತ್ಪಾದಕತೆ ಮತ್ತು ಕಾರ್ಯಕ್ಷಮತೆ ಹೆಚ್ಚುವುದರ ಜೊತೆಯಲ್ಲಿ ಅವರ ಸಂಪಾದನೆ ಹಾಗೂ ಲಾಭ ಅಂಶವು ಸಹ ಹೆಚ್ಚುತ್ತದೆ
ಸಾಮಾನ್ಯ ಬಳಕೆದಾರರ ಮೇಲೆ ಪರಿಣಾಮ
ಸಾಮಾನ್ಯ ಬಳಕೆದಾರರು ಆತಂಕಪಡುವ ಅಗತ್ಯವಿಲ್ಲ. ಇದುವರೆಗೆ ಬಳಸುತ್ತಿರುವಂತೆ Facebook, Instagram ಮತ್ತು WhatsApp ಸೇವೆಗಳನ್ನು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಬಳಸಬಹುದಾಗಿದೆ.
ಸಾಮಾನ್ಯ ಬಳಕೆದಾರರಿಗೆ ಏನು ಬದಲಾಗುವುದಿಲ್ಲ?
Facebook ಬಳಕೆ ಉಚಿತವಾಗಿಯೇ ಮುಂದುವರಿಯುತ್ತದೆ : ಫೇಸ್ಬುಕ್ ಅನ್ನು ಬಳಸುವ ಸಾಮಾನ್ಯ ಬಳಕೆದಾರರು ಇಂದಿನಂತೆ ಯಾವುದೇ ಶುಲ್ಕವಿಲ್ಲದೆ ಉಚಿತವಾಗಿ ಬಳಸಬಹುದು ದೈನಂದಿನ ಪೋಸ್ಟ್ಗಳನ್ನು ಹಂಚಿಕೊಳ್ಳುವುದು ಭಾವಚಿತ್ರ ಹಾಗು ವಿಡಿಯೋಗಳನ್ನು ಅಪ್ಲೋಡ್ ಮಾಡುವುದು ಸಂಪೂರ್ಣ ಉಚಿತವಾಗಿರುತ್ತದೆ ಇದರ ಜೊತೆಯಲ್ಲಿ ಸ್ನೇಹಿತರೊಂದಿಗೆ ಸಂಪರ್ಕದಲ್ಲಿರುವುದು ಹಾಗೂ ವಿವಿಧ ಗುಂಪುಗಳನ್ನು ಮತ್ತು ವಯಕ್ತಿಕ ಪುಟಗಳನ್ನು ಬಳಸುವುದು ಉಚಿತವಾಗಿಯೇ ಮುಂದುವರೆಯಲಿದ್ದು ಮೂಲಭೂತ ಸೇವೆಗಳಿಗಾಗಿ ಯಾವುದೇ ಪಾವತಿಯನ್ನು ಪಾವತಿಸುವ ಅಗತ್ಯತೆ ಕಡ್ಡಾಯವಾಗಿರುವುದಿಲ್ಲ.
Instagram ನ ಮೂಲಭೂತ ವೈಶಿಷ್ಟ್ಯಗಳು ಉಚಿತವಾಗಿರುತ್ತವೆ : ಇನ್ಸ್ಟಾಗ್ರಾಮ್ ಬಳಕೆದಾರರು ಫೋಟೋ ಅಪ್ಲೋಡ್ ಮಾಡುವುದು, ರೀಲ್ಸ್ ಹಾಕುವುದು, ಸ್ಟೋರಿ ಅಪ್ಲೋಡ್ ಮಾಡುವುದು ಮತ್ತು ವಿಡಿಯೋಗಳನ್ನು ಹಿಂದಿನಂತೆ ಉಚಿತವಾಗಿ ಹಂಚಿಕೆ ಮಾಡಿಕೊಳ್ಳಬಹುದು. ಈಗಿರುವ ಹಾಗೆ ಇತರ ವ್ಯಕ್ತಿಗಳ ಪೋಸ್ಟ್ಗಳನ್ನು ನೋಡುವುದು ಲೈಕ್ ಮಾಡುವುದು ಕಮೆಂಟ್ ಮಾಡುವುದು ಹಾಗೂ ಸಂದೇಶ ಕಳುಹಿಸುವಂತಹ ಮೂಲಭೂತ ಸೌಲಭ್ಯಗಳನ್ನು ಯಾವುದೇ ಪಾವತಿ ಇಲ್ಲದೆ ಬಳಸಬಹುದು ಅದರಂತೆಯೇ ಈ ಇನ್ಸ್ಟಾಗ್ರಾಮ್ ನ ಸಾಮಾನ್ಯ ಬಳಕೆಯಲ್ಲಿ ಸಾಮಾನ್ಯವಾಗಿ ಹೆಚ್ಚಿನ ಯಾವುದೇ ಬದಲಾವಣೆ ಇರುವುದಿಲ್ಲ.
WhatsApp ಸಾಮಾನ್ಯ ಸೇವೆಗಳು ಉಚಿತವಾಗಿಯೇ ಲಭ್ಯವಿರುತ್ತವೆ : ವಾಟ್ಸಪ್ ಮೂಲಕ ನಾವು ಮಾಡುವ ಸಂದೇಶ ಕಳುಹಿಸುವಿಕೆ, ಧ್ವನಿ ಸಂದೇಶಗಳು, ವಿಡಿಯೋ ಕರೆಗಳನ್ನು ಉಚಿತವಾಗಿ ಮಾಡಬಹುದು ಫೋಟೋಗಳು ಹಾಗೂ ವಿಡಿಯೋ ದಾಖಲೆಗಳನ್ನು ಉಚಿತವಾಗಿ ಹಂಚಿಕೊಳ್ಳುವುದು ಸೇರಿದಂತೆ ಎಲ್ಲಾ ರೀತಿಯ ಸಾಮಾನ್ಯ ಸೇವೆಗಳನ್ನು ಬಳಸಬಹುದು ಗ್ರೂಪ್ಗಳನ್ನು ಕ್ರಿಯೇಟ್ ಮಾಡುವುದು ಉಚಿತವಾಗಿರುತ್ತದೆ ಅದರಂತೆಯೇ ಕುಟುಂಬ ಸಹೋದ್ಯೋಗಿಗಳು ಹಾಗೂ ಸ್ನೇಹಿತರೊಂದಿಗೆ ಸಂಪರ್ಕ ಸಾಧಿಸಲು ಈಗ ಇರುವ ಆಡಿಯೋ ಕಾಲ್, ವಿಡಿಯೋ ಕಾಲ್, ಮೆಸೇಜ್ ನೋಟ್ ಹಾಗೂ ವಿಡಿಯೋ ನೋಟ್ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ.
ಈಗಾಗಲೇ ಬಳಸುತ್ತಿರುವ ಪ್ರಮುಖ ಸೌಲಭ್ಯಗಳಿಗೆ ಯಾವುದೇ ಕಡ್ಡಾಯ ಶುಲ್ಕ ಇರುವುದಿಲ್ಲ : ಪ್ರಸ್ತುತ ಈಗಾಗಲೇ ಬಳಸುತ್ತಿರುವ ಫೇಸ್ಬುಕ್ ಇನ್ಸ್ಟಾಗ್ರಾಮ್ ಮತ್ತು ವಾಟ್ಸಾಪ್ನಲ್ಲಿ ಸಾಮಾನ್ಯ ಚಂದಾದಾರಿಕೆಯ ಬಳಕೆದಾರರು ಯಾವುದೇ ವೈಶಿಷ್ಟ್ಯಗಳನ್ನು ಪಡೆಯದೆ ಇದ್ದಲ್ಲಿ ಸಾಮಾನ್ಯ ಗ್ರಾಹಕರಾಗಿ ಮುಂದುವರೆಯಬಹುದು. Social Media ಗಳ ಖಾತೆ ತೆರೆಯುವಿಕೆ ಪೋಸ್ಟ್ಗಳನ್ನು ಹಂಚಿಕೊಳ್ಳುವುದು ಸಂದೇಶಗಳನ್ನು ಕಳುಹಿಸುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸೇವೆಗಳನ್ನು ಬಳಸಲು ಯಾವುದೇ ಕಡ್ಡಾಯವಾದ ಮೊತ್ತವನ್ನು ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ. ಪ್ರೀಮಿಯಂ ಸೇವೆಗಳು ವೈಯಕ್ತಿಕ ಆಯ್ಕೆಯ ಅಂಶಕ್ಕೆ ಬಿಟ್ಟಿದ್ದು ಅವುಗಳನ್ನು ಬಳಸಲು ಇಚ್ಛಿಸಿದರೆ ಬಳಸಬಹುದು ಅಥವಾ ಸಾಮಾನ್ಯ ಗ್ರಾಹಕರಾಗಿ ಮುಂದುವರೆಯಬಹುದು.
Normal User V/S Meta One Premium User
| ವೈಶಿಷ್ಟ್ಯ | ಸಾಮಾನ್ಯ ಬಳಕೆದಾರ | ಮೆಟಾ ಒನ್ |
|---|---|---|
| Facebook ಸೇವೆಗಳು | ಉಚಿತ ಬಳಕೆ | ಉಚಿತ + ಪ್ರೀಮಿಯಂ ಬಳಕೆ |
| Instagram ಸೇವೆಗಳು | ಉಚಿತ ಬಳಕೆ | ಹೆಚ್ಚುವರಿ AI ಬಳಕೆ |
| WhatsApp ಸೇವೆಗಳು | ಉಚಿತ ಬಳಕೆ | ವಿಶೇಷ ಸೌಲಭ್ಯಗಳು ಬಳಕೆ |
| AI Tools ಸೇವೆಗಳು | ಸೀಮಿತ ಬಳಕೆ | ಸುಧಾರಿತ ಸೇವೆಗಳ ಬಳಕೆ |
Social Media ದಲ್ಲಿ ಯಾವ ಬದಲಾವಣೆಗಳು ಆಗಬಹುದು?
1. ಕೆಲವು ವಿಶೇಷ ಅಥವಾ ಪ್ರೀಮಿಯಂ ಫೀಚರ್ಗಳು ಪಾವತಿಸಿದ (Paid) ಬಳಕೆದಾರರಿಗೆ ಮಾತ್ರ ಲಭ್ಯವಾಗಬಹುದು.
ಮೆಟಾ ಸಂಸ್ಥೆಯು ಪರಿಚಯಿಸುತ್ತಿರುವ ಮೆಟಾ ಒನ್ ಪ್ರೀಮಿಯಂ ಯೋಜನೆಯಡಿಯಲ್ಲಿ ಕೆಲವು ಹೆಚ್ಚುವರಿ ಹಾಗೂ ಉತ್ತಮ ಗುಣಮಟ್ಟದ ವಿಶೇಷ ವೈಶಿಷ್ಟ್ಯಗಳು ಪ್ರೀಮಿಯಂ ಬಳಕೆದಾರರಿಗೆ ಮಾತ್ರ ಲಭ್ಯವಾಗುವ ಸಾಧ್ಯತೆಗಳು ಹೆಚ್ಚಾಗಿವೆ ಅಂದರೆ ಈ ವೈಶಿಷ್ಟ್ಯತೆಗಳನ್ನು ಪಡೆಯಲು ಹಾಗೂ ತಲುಪಲು ಹೆಚ್ಚುವರಿ ಶುಲ್ಕವನ್ನು ಪಾಲಿಸಬೇಕಾಗಿರುತ್ತದೆ ಆದರೆ ಸಾಮಾನ್ಯ ಬಳಕೆದಾರರು ಮೂಲಭೂತ ಸೇವೆಗಳನ್ನು ಉಚಿತವಾಗಿ ಬಳಸಬಹುದು ಆದರೆ ವಿಶೇಷ ಕೃತಕ ಬುದ್ಧಿಮತ್ತೆ ಸೌಲಭ್ಯಗಳನ್ನು ಹಾಗೂ ಹೆಚ್ಚುವರಿ ಭದ್ರತಾ ಕಾರ್ಯ ಯೋಜನೆಗಳನ್ನು ಮತ್ತು ಉತ್ತಮ ಗುಣಮಟ್ಟದ ಹಾಗೂ ಸಮಗ್ರ ಮಟ್ಟದ ಉಪಕರಣಗಳನ್ನು ಬಳಸಲು ಚಂದಾದಾರಿಕೆ ಅಗತ್ಯವಾಗಿರುತ್ತದೆ
2. AI ಆಧಾರಿತ ಸುಧಾರಿತ ಸೇವೆಗಳು, ವೃತ್ತಿಪರ ಉಪಕರಣಗಳು ಮತ್ತು ಹೆಚ್ಚುವರಿ ವೈಶಿಷ್ಟ್ಯಗಳು ಚಂದಾದಾರಿಕೆ (Subscription) ಆಧಾರಿತವಾಗಿರಬಹುದು.
ಮೆಟಾ ಒನ್ ಪ್ರೀಮಿಯಂ ಯೋಜನೆ ಅಡಿಯಲ್ಲಿ ಪ್ರಮುಖ ಉದ್ದೇಶವು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಪರಿಣಾಮಕಾರಿ ಹಾಗೂ ಹೆಚ್ಚು ಉತ್ತಮ ರೀತಿಯಲ್ಲಿ ಬಳಸಲು ಅವಕಾಶವನ್ನು ನೀಡುವುದು ಆಗಿದೆ ಕೃತಕ ಬುದ್ಧಿಮತ್ತೆ ಯೋಜನೆಯ ಮೂಲಕ ಭಾವಚಿತ್ರ ಹಾಗೂ ವಿಡಿಯೋ ಕ್ಲಿಪ್ ಗಳ ರಚನೆ ಸುಧಾರಿತ ವಿಷಯ ಸೃಷ್ಟಿ ಮಾಹಿತಿ ವಿಶ್ಲೇಷಣೆ ಮತ್ತು ವೈಯಕ್ತಿಕ ಹಾಗೂ ವೃತ್ತಿಪರ ಕಾರ್ಯಗಳಿಗಾಗಿ ಸೃಷ್ಟಿ ಮಾಡಲಾಗುವ ವಿಶೇಷ ಉಪಕರಣಗಳನ್ನು ತಿಂಗಳ ಅಥವಾ ವರ್ಷದ ಪಾವತಿ ಚಂದದಾರಿಕೆ ಯೋಜನೆಗಳ ಮೂಲಕ ಲಭ್ಯಕ್ಕೆ ಇರಿಸುವ ಸಾಧ್ಯತೆಗಳು ಹೆಚ್ಚಾಗಿವೆ
3. ಕಂಟೆಂಟ್ ಕ್ರಿಯೇಟರ್ಗಳು, ಉದ್ಯಮಿಗಳು ಮತ್ತು ವೃತ್ತಿಪರ ಬಳಕೆದಾರರಿಗೆ ವಿಶೇಷ ಪ್ಯಾಕೇಜ್ಗಳನ್ನು ಪರಿಚಯಿಸುವ ಸಾಧ್ಯತೆ ಇದೆ.
ವಿಷಯ ಸೃಷ್ಟಿಕರ್ತರು, ಡಿಜಿಟಲ್ ಮಾರ್ಕೆಟರ್ ಗಳು ಇನ್ಫ್ಲುಯೆನ್ಸರ್ ಗಳು ಹಾಗೂ ಮಧ್ಯಮ ಹಾಗೂ ಬೃಹತ್ ವಲಯದ ಉದ್ಯಮಿಗಳು ಈ ಚಂದದಾರಿಕೆಯ ಅಂಶವನ್ನು ಗಮನದಲ್ಲಿಟ್ಟುಕೊಂಡು ಮೆಟಾ ಸಂಸ್ಥೆಯ ಈ ವಿಶೇಷ ಪ್ಯಾಕೇಜ್ ಗಳನ್ನು ಖರೀದಿಸಬಹುದು ಹಾಗೂ ತನ್ನ ಗ್ರಾಹಕರಿಗೆ ಪರಿಚಯಿಸಬಹುದು. ಈ ಪ್ಯಾಕೇಜ್ ಗಳಲ್ಲಿ ಉತ್ತಮ ರೀತಿಯ ಸುಧಾರಣೆಗೊಂಡ ವಿಶೇಷ ವಿಶ್ಲೇಷಣಾ ಸಾಧನೆಗಳು ಕೃತಕ ಬುದ್ಧಿಮತ್ತೆ ಸಹಾಯಕ ವಿಷಯಗಳ ರಚನೆ ಮತ್ತು ನಿರ್ವಹಣೆ ಜಾಹೀರಾತು ರಚನೆ ಮತ್ತು ನಿರ್ವಹಣೆ ಹಾಗೂ ಹೆಚ್ಚಿನ ಗ್ರಾಹಕರನ್ನು ತಲುಪುವಿಕೆಯ ಅಂಶಗಳು ಹಾಗೂ ವ್ಯವಹಾರ ವೃತ್ತಿಗೆ ಸಹಾಯಕವಾಗುವ ವಿವಿಧ ರೀತಿಯ ಉತ್ತಮ ವಿಶಿಷ್ಟ ಪ್ರೀಮಿಯಂ ಸೌಲಭ್ಯಗಳನ್ನು ಪಡೆಯುವ ಅಂಶಗಳನ್ನು ಇಲ್ಲಿ ಸೇರಿಸಬಹುದು
Meta One ಯೋಜನೆಯ ಪ್ರಯೋಜನಗಳು
- ಸುಧಾರಿತ AI ಸೌಲಭ್ಯಗಳ ಲಭ್ಯತೆ ಮತ್ತು ಪ್ರಯೋಜನ
- ವೇಗವಾದ ಕಾರ್ಯನಿರ್ವಹಣೆ ಸಾಮರ್ಥ್ಯ
- ಕಂಟೆಂಟ್ ಕ್ರಿಯೇಟರ್ಗಳಿಗೆ ಉತ್ತಮ ರೀತಿಯ ಸಹಕಾರ
- ಮಧ್ಯಮ ಮತ್ತು ಬೃಹತ್ ವ್ಯವಹಾರ ಬೆಳವಣಿಗೆಗೆ ಅನುಕೂಲ
Meta One ಯೋಜನೆಯ ಮಿತಿಗಳು
- ಹೆಚ್ಚುವರಿ ವೆಚ್ಚದ ಅಗತ್ಯತೆ
- ಎಲ್ಲಾ ಬಳಕೆದಾರರಿಗೆ ಅಗತ್ಯತೆ ಅನ್ವಯಿಸುವುದಿಲ್ಲ
- ಕೆಲವು ವೈಶಿಷ್ಟ್ಯಗಳು ಪ್ರದೇಶ ಅಂದರೆ ದೇಶದ ಅಂಶವನ್ನು ಆಧರಿಸಿವೆ.
ಮೆಟಾ ಒನ್ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಲಾಭವೇನು
ಮೆಟಾ ಒನ್ ಯೋಜನೆ ಜಾರಿಯಾದರೆ ವಿದ್ಯಾರ್ಥಿಗಳಿಗೆ ಸುರಕ್ಷಿತ ರೀತಿಯಲ್ಲಿ Social Media ಗಳ ಹಾಗೂ ಮಾಧ್ಯಮದ ಬಳಕೆ ಉತ್ತಮ ರೀತಿಯಲ್ಲಿ ಖಾತೆ ನಿರ್ವಹಣೆ ಮತ್ತು ರಕ್ಷಣೆ ಹಾಗೂ ಹೆಚ್ಚುವರಿ ಡಿಜಿಟಲ್ ಸೌಲಭ್ಯಗಳು ದೊರೆಯಬಹುದಾದ ಸಾಧ್ಯತೆ ಇದೆ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳನ್ನು ಹಂಚಿಕೊಳ್ಳಲು ಹಾಗೂ ಕಲಿಯಲು ವಿದ್ಯಾರ್ಥಿಗಳು ತಮ್ಮ ಖಾತೆಯ ವಿಶ್ವಾಸ ಅರ್ಹತೆಯನ್ನು ಹೆಚ್ಚಿಸಿಕೊಳ್ಳಬಹುದು.
ಮೆಟಾ ಒನ್ ಯೋಜನೆಯಿಂದ ಸಣ್ಣ ಉದ್ಯಮಿಗಳಿಗೆ ಲಾಭವೇ
ಸಣ್ಣ ಉದ್ಯಮಿಗಳಿಗೆ ಮೆಟಾ ಒನ್ ಪ್ರೀಮಿಯಂ ಯೋಜನೆಯ ಮೂಲಕ ಫೇಸ್ಬುಕ್ ಇನ್ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಸೇವೆಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ಬಳಸುವ ಅವಕಾಶವನ್ನು ಒದಗಿಸಬಹುದು ಉತ್ತಮ ರೀತಿಯಲ್ಲಿ ಗ್ರಾಹಕ ಸಂಪರ್ಕ ಸೇವೆಯನ್ನು ಒದಗಿಸುವುದು, ಖಾತೆಗಳಿಗೆ ಹೆಚ್ಚಿನ ಭದ್ರತೆ ಒದಗಿಸುವುದು, ಖಾತೆ ಪರಿಶೀಲನೆ ಹಾಗೂ ವೈಯಕ್ತಿಕ ಬ್ರಾಂಡ್ ರಕ್ಷಣೆ ಹಾಗೂ ಅದರ ವಿಶ್ವಾಸವನ್ನು ಹೆಚ್ಚಿಸಲು ಇದು ಸಹಾಯಕವಾಗಬಹುದು ಡಿಜಿಟಲ್ ಮಾರ್ಕೆಟಿಂಗ್ ಆಯಾಮದಲ್ಲೂ ಸಹ ವ್ಯವಹಾರ ವಿಸ್ತರಣೆಗೆ ಇದು ನೆರವಾಗುತ್ತದೆ.
ಮೆಟಾ ಒನ್ ಯೋಜನೆ ಯಾವಾಗ ಬಿಡುಗಡೆಯಾಗಬಹುದು
ಮೆಟಾ ಒನ್ ಯೋಜನೆ ಕುರಿತು ಸಂಸ್ಥೆಯು ಯಾವುದೇ ಅಧಿಕೃತ ಘೋಷಣೆಯನ್ನು ಅಥವಾ ಬಿಡುಗಡೆ ದಿನಾಂಕವನ್ನು ನಿಗದಿಪಡಿಸಿಲ್ಲ ಪ್ರಸ್ತುತ ಮಾಧ್ಯಮಗಳ ಹಾಗೂ ಆನ್ಲೈನ್ ಮೂಲಗಳ ಪ್ರಕಾರ ಚರ್ಚೆಗಳು ನಡೆಯುತ್ತಿದ್ದು ಅಧಿಕೃತ ಮಾಹಿತಿ ಪ್ರಕಟವಾದ ನಂತರವೇ ನಿಖರ ಮಾಹಿತಿಯು ತಿಳಿಯಲಿದೆ ಹಾಗೂ ಸ್ಪಷ್ಟತೆ ಸಿಗಲಿದೆ.
ಮೆಟಾ ಒನ್ ಕುರಿತು ಹರಿದಾಡುತ್ತಿರುವ ವದಂತಿಗಳು ಮತ್ತು ಸತ್ಯಾಂಶ
ಮೆಟಾ ಒನ್ ಕುರಿತು Social Media ಗಳಲ್ಲಿ ಹಲವು ರೀತಿಯ ವಾದಂತಿಗಳು ಹರಿದಾಡುತ್ತಿದ್ದು ಕೆಲವರು ಇದನ್ನು ಉಚಿತ ಸೇವೆಯ ಒದಗಿಸುವಿಕೆ ಎಂದು ಹೇಳಿದರೆ ಇನ್ನು ಕೆಲವರು ಸಂಪೂರ್ಣವಾಗಿ ಪ್ರೀಮಿಯಂ ಚೆಂದಾದಾರಿಕೆ ಎಂದು ಹೇಳಲಾಗುತ್ತಿದೆ ಆದರೆ ಮೆಟಾ ಸಂಸ್ಥೆಯಿಂದ ಅಧಿಕೃತ ಮಾಹಿತಿ ಪ್ರಕಟವಾಗದೆ ಇರದ ಕಾರಣ ದೃಢೀಕರಿಸಿದ ಮಾಹಿತಿಯನ್ನು ನಂಬಬೇಡಿ ಅಧಿಕೃತ ಘೋಷಣೆಗಳನ್ನು ಪರಿಶೀಲಿಸಲು ಮೆಟಾದ ಅಧಿಕೃತ ವೆಬ್ಸೈಟ್ ಅನ್ನು ಪರಿಶೀಲಿಸಿ.
Frequently Asked Questions (FAQ)
Meta One ಯೋಜನೆಯು ಭಾರತ ದೇಶದಲ್ಲಿ ಲಭ್ಯವಿದೆಯೇ?
ಇಲ್ಲ, ಪ್ರಸ್ತುತ ಭಾರತದಲ್ಲಿ ಅಧಿಕೃತವಾಗಿ ಘೋಷಣೆ ಆಗಿಲ್ಲ.
Facebook ಖಾತೆ ಬಳಸಲು ಹಣ ಪಾವತಿಸಬೇಕೇ?
ಇಲ್ಲ. ಮೂಲಭೂತ ಸೇವೆಗಳನ್ನು ಉಚಿತವಾಗಿ ಪಡೆಯಬಹುದು.
WhatsApp ಉಚಿತವಾಗಿಯೇ ಇರುತ್ತದೆಯೇ?
ಹೌದು. ಸಾಮಾನ್ಯ ಸೇವೆಗಳು ಉಚಿತವಾಗಿ ಲಭ್ಯವಿರುತ್ತವೆ.
Meta One ಯೋಜನೆಯನ್ನು ಎಲ್ಲರೂ ಖರೀದಿಸಬೇಕೇ?
ಇಲ್ಲ. ಇದು ಪ್ರೀಮಿಯಂ ಬಳಕೆದಾರರು ಮಾತ್ರ ಪಾವತಿ ಮಾಡಿ ಖರೀದಿಸಬಹುದು.
Meta One AI ಸೇವೆಗಳು ಏನು?
ಚಿತ್ರ ರಚನೆ ಮಾಡುವುದು, ವಿಡಿಯೋ ರಚನೆ ಮಾಡುವಿಕೆ, ವಿಷಯ ಸೃಷ್ಟಿ ಮುಂತಾದ ಉಪಯುಕ್ತ ಸೇವೆಗಳು.
ಭವಿಷ್ಯದ ಸಾಧ್ಯತೆ
Social Media ದಲ್ಲಿ ಸಕ್ರಿಯವಾಗಿರುವ ತಜ್ಞರ ಅಭಿಪ್ರಾಯಗಳ ಪ್ರಕಾರ ಮೆಟಾ ಸಂಸ್ಥೆಯು ಭವಿಷ್ಯದಲ್ಲಿ ತನ್ನ ಕೃತಕ ಬುದ್ಧಿಮತ್ತೆ ಮತ್ತು ಪ್ರೀಮಿಯಂ ಸೇವೆಗಳನ್ನು ಇನ್ನಷ್ಟು ಉತ್ತಮ ರೀತಿಯಲ್ಲಿ ಹಾಗೂ ಉತ್ತಮ ಗುಣಮಟ್ಟದ ಅಂಶಗಳಲ್ಲಿ ಸಾಧಿಸುವ ಹಾಗೂ ವಿಸ್ತರಿಸುವ ಸಾಧ್ಯತೆಯನ್ನು ಹೆಚ್ಚಿಸಿದೆ ವಿಶೇಷವಾಗಿ ಕಂಟೆಂಟ್ ಕ್ರಿಯೇಟರ್ ಗಳು ಇನ್ಫ್ಲುಯೆನ್ಸರ್ ಗಳು, ಉದ್ಯಮಿಗಳು ಮತ್ತು ವೃತ್ತಿಪರ ಬಳಕೆದಾರರ ಬೆಳವಣಿಗೆ ಮತ್ತು ಸಮಯವನ್ನು ಉಳಿಸಲು ಉತ್ತಮ ಸುಲಭ ರೀತಿಯ ಸುಧಾರಿತ ಗೊಂಡ ಉಪಕರಣಗಳನ್ನು ವಿಶ್ಲೇಷಣಾ ಸಾಧನೆಗಳನ್ನು ಹಾಗೂ ಉತ್ತಮ ರೀತಿಯ ಹೆಚ್ಚುವರಿ ಭದ್ರತಾ ಸೌಲಭ್ಯಗಳನ್ನು ಚಂದಾದಾರಿಕೆ ರೂಪದಲ್ಲಿ ಆಧಾರ ಮಾಡಿ ಒದಗಿಸಬಹುದೆಂದು ಹೇಳಲಾಗುತ್ತಿದೆ.
ಕೃತಕ ಬುದ್ಧಿಮತ್ತೆ ಮೂಲಕ ಭಾವಚಿತ್ರಗಳು ಹಾಗೂ ವಿಡಿಯೋಗಳ ರಚನೆ, ಸ್ವಯಂ ಚಾಲಿತವಾಗಿ ವಿಶೇಷ ಸೃಷ್ಟಿ ಮಾಡುವುದು ಹಾಗೂ ವೃತ್ತಿಪರ ಕಾರ್ಯಯೋಜನೆಗಳ ಮಟ್ಟದಲ್ಲಿ ವಿಷಯಗಳನ್ನು ನಿರ್ವಹಿಸಲು ಹೊಸ ಯೋಜನೆ ಮತ್ತು ವೈಶಿಷ್ಟ್ಯಗಳನ್ನು ಲಭ್ಯವಾಗುವ ಸಾಧ್ಯತೆಯನ್ನು ಹೆಚ್ಚಿಸಲಾಗಿದೆ ಆದರೂ Facebook, Instagram ಹಾಗೂ Whatsapp ನಂತಹ Social Media ದ ವೇದಿಕೆಗಳ ಮೂಲಭೂತ ಸೇವೆಗಳನ್ನು ಸಾಮಾನ್ಯ ಜನರಿಗೆ ಉಚಿತವಾಗಿಯೇ ಒದಗಿಸಲಿದ್ದು ಹೆಚ್ಚುವರಿ ಸೌಲಭ್ಯಗಳನ್ನು ಪಡೆಯುವಲು ಬಯಸಿದವರಿಗೆ ಮಾತ್ರ ಈ ಪ್ರೀಮಿಯಂ ಸೌಲಭ್ಯಗಳನ್ನು ಒದಗಿಸುವ ಯೋಜನೆ ಇದ್ದು ಸಾಮಾನ್ಯ ಬಳಕೆದಾರರು ಯಾವುದೇ ಆತಂಕಕ್ಕೆ ಒಳಪಡುವ ಅಗತ್ಯತೆ ಇಲ್ಲ
| Social Media ವಿವರ | ಸಂಬಂಧಿಸಿದ ಲಿಂಕ್ ಗಳು | ಹೆಲ್ಪ್ ಸೆಂಟರ್ ಗಳು |
| Meta ದ ಅಧಿಕೃತ ವೆಬ್ ಸೈಟ್ | ಮೆಟಾ | ಮೆಟಾ ಹೆಲ್ಪ್ - ಸೆಂಟರ್ |
| ವಾಟ್ಸಾಪ್ | ವಾಟ್ಸಾಪ್ ಹೆಲ್ಪ್ - ಸೆಂಟರ್ | |
| ಫೇಸ್ ಬುಕ್ | ಫೇಸ್ ಬುಕ್ ಹೆಲ್ಪ್ - ಸೆಂಟರ್ | |
| ಇನ್ಸ್ಟಾಗ್ರಾಮ್ | ಇನ್ಸ್ಟಾಗ್ರಾಮ್ ಹೆಲ್ಪ್ - ಸೆಂಟರ್ |
Last Updated : 15-06-2026
ಕೊನೆಯ ಮಾತು
ಮೆಟಾ ಸಂಸ್ಥೆಯು ಪರಿಚಯಿಸುತ್ತಿರುವ ಮೆಟಾ ಒನ್ ಪ್ರೀಮಿಯಂ ಯೋಜನೆಯ ಬಗ್ಗೆ ಅನೇಕ ಚರ್ಚೆಗಳು ನಡೆಯುತ್ತಿವೆ ಆದರೆ ಫೇಸ್ಬುಕ್ ಇನ್ಸ್ಟಾಗ್ರಾಂ ಹಾಗೂ ವಾಟ್ಸಾಪ್ ಸೇವೆಗಳು ಸಂಪೂರ್ಣವಾಗಿ ಪಾವತಿಗೆ ಒಳಪಡಿಬೇಕಾಗುತ್ತದೆ ಎಂಬ ಮಾಹಿತಿ ಸತ್ಯವಲ್ಲ. ಸಾಮಾನ್ಯವಾಗಿ ಬಳಕೆದಾರರು ಈಗಿನಂತೆ ತಮ್ಮ ಖಾತೆಗಳನ್ನು ಬಳಸುವುದು ಪೋಸ್ಟ್ಗಳನ್ನು ಹಂಚಿಕೊಳ್ಳುವುದು ಸಂದೇಶಗಳನ್ನು ಕಳುಹಿಸುವುದು ಹಾಗೂ ಕರೆಗಳನ್ನು ಮಾಡುವುದು ಮುಂತಾದ ಸೌಲಭ್ಯಗಳನ್ನು ಸೇರಿದಂತೆ ಮೂಲಭೂತ ಸೇವೆಗಳು ಉಚಿತವಾಗಿದ್ದು ಕೇವಲ ಹೆಚ್ಚುವರಿ ಕೃತಕ ಬುದ್ಧಿಮತ್ತೆ ಸೌಲಭ್ಯಗಳನ್ನು ಬಳಸುವ ಹಾಗೂ ಸುಧಾರಿತ ವೃತ್ತಿಪರ ಉಪಕರಣಗಳನ್ನು ವಿಶೇಷ ಪ್ರೀಮಿಯಂ ವೈಶಿಷ್ಟ್ಯಗಳನ್ನು ಬಳಸುವವರಿಗೆ ಮಾತ್ರ ಈ ಯೋಜನೆಯು ಅನ್ವಯವಾಗುವುದು ಆದುದರಿಂದ ಯಾವುದೇ ವದಂತಿಗಳಿಗೆ ಕಿವಿಗೊಡದೆ ಅಧಿಕೃತ ಮಾಹಿತಿಯನ್ನು ಮಾತ್ರ ನಂಬುವುದು ಉತ್ತಮವಾಗಿರುತ್ತದೆ.
ಲೇಖಕರ ಟಿಪ್ಪಣಿ: ಈ ಲೇಖನವು ಅಧಿಕೃತ ಮೂಲಗಳು ಮತ್ತು ವಿಶ್ವಾಸಾರ್ಹ ಮಾಹಿತಿಯ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಸಂಬಂಧಿತ ಇಲಾಖೆಯ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ.
ಲೇಖಕರ ಬಗ್ಗೆ: ರಂಗನಾಥ ಬಿ.ಜಿ. ಅವರು ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದಿದ್ದು, ಕಳೆದ ಎರಡು ವರ್ಷಗಳಿಂದ ಸರ್ಕಾರಿ ಉದ್ಯೋಗಗಳು, ಪರೀಕ್ಷಾ ಸಲಹೆಗಳು, ವೃತ್ತಿ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು ಹಾಗೂ ಪ್ರಮುಖ ಸುದ್ದಿಗಳ ಕುರಿತು ವಿಶ್ವಾಸಾರ್ಹ ಲೇಖನಗಳನ್ನು ಪ್ರಕಟಿಸುತ್ತಿದ್ದಾರೆ.
ಹಕ್ಕುತ್ಯಾಗ ಸೂಚನೆ (Disclaimer): ಈ ವೆಬ್ಸೈಟ್ ಮಾಹಿತಿ ನೀಡುವ ಉದ್ದೇಶಕ್ಕಾಗಿ ಮಾತ್ರ ಕಾರ್ಯನಿರ್ವಹಿಸುತ್ತದೆ. ಇಲ್ಲಿ ಪ್ರಕಟವಾಗುವ ಮಾಹಿತಿಯ ಅಂತಿಮ ದೃಢೀಕರಣಕ್ಕಾಗಿ ಸಂಬಂಧಿತ ಇಲಾಖೆಯ ಅಧಿಕೃತ ವೆಬ್ಸೈಟ್ ಅಥವಾ ಅಧಿಸೂಚನೆಯನ್ನು ಪರಿಶೀಲಿಸಿ. Instagram, Facebook, Whatsapp
Read More :
TRAI New Rules 2026: TRAI ಹೊಸ ನಿಯಮ 2026: ರಿಚಾರ್ಜ್ ದರ ಕಡಿಮೆಯಾಗಲಿದೆ! ಕಾಲ್ & SMS ಮಾತ್ರ ಪ್ಲಾನ್ ಕಡ್ಡಾಯ