Telegram Join Our Telegram WhatsApp Join Our WhatsApp

Lost Phone, Big Update 2026: ನಿಮ್ಮ ಫೋನ್‌ ಕಳೆದುಹೋಗಿದೆಯೇ? ಈ ಸುಲಭ ಕೆಲಸ ಮಾಡುವುದರಿಂದ ಮರಳಿ ಪಡೆಯಿರಿ, ಇಲ್ಲಿದೆ ಹಂತ ಹಂತದ ಮಾಹಿತಿ.

ಕಳೆದುಹೋದ ನಿಮ್ಮ ಫೋನನ್ನು ಈ ವಿಧಾನದ ಮೂಲಕ ಮರಳಿ ಪಡೆಯಿರಿ (Lost Phone)

ನಮಸ್ಕಾರ ಸ್ನೇಹಿತರೆ ಇಂದಿನ ದಿನಗಳಲ್ಲಿ ಮೊಬೈಲ್ ಫೋನ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ನಾವು ದಿನನಿತ್ಯ ಬಳಸುವ ಬ್ಯಾಂಕಿಂಗ್ ಸೇವೆಗಳು ಯುಪಿಐ ಪಾವತಿಗಳು ತೆಗೆಯುವ ಫೋಟೋಗಳು ಪ್ರಮುಖ ದಾಖಲೆಗಳು ಸಾಮಾಜಿಕ ಜಾಲತಾಣ ಮುಂತಾದ ಹಲವು ಕೆಲಸಗಳಿಗೆ ಮೊಬೈಲ್ ಪ್ರಮುಖದಾಗಿದೆ ಹೀಗಿರುವಾಗ ಮೊಬೈಲ್ ಏನಾದರೂ ಒಂದು ವೇಳೆ ಕಳೆದು ಹೋದರೆ ಅಥವಾ ಕಳ್ಳತನವಾದರೆ ಭಯ ಮತ್ತು ಆತಂಕವಾಗುವುದು ಸರ್ವೇಸಾಮಾನ್ಯ ಆದರೆ ಈಗ ಮೊಬೈಲ್ ಕಳೆದು ಹೋದರೆ ಗಾಬರಿಯಾಗುವ ಅಥವಾ ಮೊಬೈಲ್ ಸಿಗುವುದಿಲ್ಲ ಎಂದು ನಿರ್ಧಾರಕ್ಕೆ ಬರುವ ಅಗತ್ಯವಿಲ್ಲ ಏಕೆಂದರೆ ಕರ್ನಾಟಕ ಪೊಲೀಸ್ ಇಲಾಖೆಯ ಕೆ ಎಸ್‌ ಪಿ ಅಪ್ಲಿಕೇಶನ್ ಹಾಗೂ ಕೇಂದ್ರ ಸರ್ಕಾರದ ಪೋರ್ಟಲ್ ಮೂಲಕ ನಿಮ್ಮ ಕಳೆದು ಹೋಗಿರುವ ಫೋನನ್ನು ಟ್ರ್ಯಾಕ್ ಮಾಡಲು ಹಾಗೂ ಬ್ಲಾಕ್ ಮಾಡಲು ನಂತರ ಮೊಬೈಲ್ ಸಿಕ್ಕಿದ ನಂತರ ಅನ್ಲಾಕ್ ಮಾಡಿ ನಾವು ನಮ್ಮ Lost Phone ಅನ್ನು ಪಡೆಯಲು ಸಾಧ್ಯವಿದೆ

ಪ್ರಸ್ತುತ ಲೇಖನದಲ್ಲಿ ನಿಮ್ಮ ಮೊಬೈಲ್ ಕಳೆದು ಹೋದ ತಕ್ಷಣ Lost Phone ಪಡೆಯಲು ಯಾವ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಬೇಕು ಏನು ಮಾಡಬೇಕು  ಎಸ್‌ ಪಿ ಅಪ್ಲಿಕೇಶನ್ ನಲ್ಲಿ ಲಾಸ್ಟ್ ರಿಪೋರ್ಟ್ ಹೇಗೆ ಸಲ್ಲಿಸಬೇಕು ಸಿ‌ ಇ ಐ ಆರ್ ಪೋರ್ಟಲ್ ಮೂಲಕ ಕಳೆದು ಹೋಗಿರುವ ಮೊಬೈಲನ್ನು ಹೇಗೆ ಲಾಕ್ ಮಾಡಬೇಕು ಪೊಲೀಸರು ಕಳೆದುಹೋಗಿರುವ ಮೊಬೈಲ್ ಅನ್ನು ಹುಡುಕಿ ಪತ್ತೆ ಮಾಡಿದ ನಂತರ ಅವರಿಂದ ಫೋನನ್ನು ವಾಪಸ್ ಹೇಗೆ ಪಡೆಯಬೇಕು ಇದಕ್ಕೆ ಬೇಕಾಗುವ ಅಗತ್ಯ ದಾಖಲಾತಿಗಳು ಹಾಗೂ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ ಈ ಮಾಹಿತಿಯನ್ನು ತಿಳಿದುಕೊಂಡು ನಿಮ್ಮ ಅಥವಾ ನಿಮ್ಮ ಅಕ್ಕಪಕ್ಕದ ಅಥವಾ ಸ್ನೇಹಿತರ Lost Phone  ಆಗಿದ್ದಲ್ಲಿ ಈ ಮಾಹಿತಿಯನ್ನು ಶೇರ್ ಮಾಡಿ

ಮೊಬೈಲ್ ಕಳೆದು ಹೋದ ತಕ್ಷಣ ಏನು ಮಾಡಬೇಕು

ಕೆಲವರು Lost Phone ಆದ ತಕ್ಷಣ ಗಾಬರಿಯಿಂದ ಏನು ಮಾಡಬೇಕು ಎಂಬುದನ್ನೇ ಮರೆಯುತ್ತಾರೆ ಹಾಗೂ ಕಳೆದುಹೋದ ಮೊಬೈಲ್ ಮತ್ತೆ ಸಿಗುವುದಿಲ್ಲ ಎಂಬ ನಿರ್ಧಾರಕ್ಕೆ ಬರುತ್ತಾರೆ ಆದರೆ ಸರಿಯಾದ ಕ್ರಮವನ್ನು ಅನುಸರಿಸುವುದರ ಮೂಲಕ ನಿಮ್ಮ ಮಾಹಿತಿಯನ್ನು ಸುರಕ್ಷಿತವಾಗಿರಿಸಿ ಮೊಬೈಲ್ ಅನ್ನು ಮರಳಿ ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸಬಹುದು ಈ ಕೆಳಕಂಡ ಕೆಲಸಗಳನ್ನು ಮಾಡುವುದರ ಮೂಲಕ ನಿಮ್ಮ Lost Phone ಅನ್ನು ಮರಳಿ ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸಬಹುದು ಅವುಗಳೆಂದರೆ

  • ನಿಮ್ಮ ಮೊಬೈಲ್ ನಂಬರಿಗೆ ತಮ್ಮ ಅಕ್ಕ ಪಕ್ಕದಲ್ಲಿರುವವರ ಬೇರೆ ಫೋನ್ ನಿಂದ ಕರೆ ಮಾಡಿ ಪರಿಶೀಲಿಸಿ
  • ನಿಮ್ಮ ಫೋನ್ ಏನಾದರೂ ಸೈಲೆಂಟ್ ಮೋಡ್‌ ನಲ್ಲಿ ಇದೆಯೇ ಎಂದು ಪರಿಶೀಲಿಸಿ
  • ನಿಮ್ಮ ಆಸು ಪಾಸಿನಲ್ಲಿ ಎಲ್ಲೂ ಮೊಬೈಲ್ ಸಿಗದ ಪಕ್ಷದಲ್ಲಿ ತಕ್ಷಣ ಸಿಮ್ ಕಾರ್ಡ್ ಅನ್ನು ಬ್ಲಾಕ್ ಮಾಡಲು ಟೆಲಿಕಾಂ ಕಂಪನಿ ಗೆ ಕರೆ ಮಾಡಿ ಅಥವಾ ಹತ್ತಿರದ ನಿಮ್ಮ ಹಂಚಿಕೆದಾರ ಕಚೇರಿಯನ್ನು ಸಂಪರ್ಕಿಸಿ
  • ನೀವು ನಿಮ್ಮ ಮೊಬೈಲ್ ನಲ್ಲಿ ಲಾಗಿನ್ ಆಗಿರುವ ಜಿ ಮೇಲ್ ಅಕೌಂಟ್ ಅಥವಾ ಇನ್ನಿತರ ಐಡಿಗಳನ್ನು ಉಪಯೋಗಿಸುವುದರ ಮೂಲಕ ಲೊಕೇಶನ್ ಅನ್ನು ಕಂಡುಹಿಡಿಯಿರಿ
  • ನಿಮ್ಮ ಮೊಬೈಲ್ ನಲ್ಲಿರುವ ಫೋನ್ ಪೇ ಗೂಗಲ್ ಪೇ ಬ್ಯಾಂಕಿಂಗ್ ಆಪ್ ಗಳು ಮತ್ತು ಸೋಶಿಯಲ್ ಮೀಡಿಯಾ ಅಕೌಂಟ್‌ ಗಳ ಪಾಸ್ವರ್ಡ್ ಗಳನ್ನು ಬೇರೆ ಫೋನನ್ನು ಬಳಸಿ ಬದಲಾಯಿಸಿ
  • ಕರ್ನಾಟಕ ಪೊಲೀಸ್ ಇಲಾಖೆಯ ಅಧಿಕೃತ ಕೆ ಎಸ್ ಪಿ ಆಪ್ಲಿಕೇಶನ್ ನಲ್ಲಿ ಲಾಸ್ಟ್ ರಿಪೋರ್ಟ್ ಅನ್ನು ಸರಿಯಾದ ಮಾಹಿತಿ ನಮೂದಿಸುವ ಮೂಲಕ ಸಲ್ಲಿಸಿ
  • ನಂತರ ಕೇಂದ್ರ ಸರ್ಕಾರದ ಟೆಲಿಕಾಂ ಅಡಿಯಲ್ಲಿ ಬರುವ ಸಿ‌ ಇ ಐ ಆರ್ ಪೋರ್ಟಲ್ ಮೂಲಕ ಲಾಗಿನ್ ಆಗಿ ನಿಮ್ಮ ಐ.ಎಂ.ಇ.ಐ ನಂಬರನ್ನು ಬ್ಲಾಕ್ ಮಾಡಿ

ಪೋಲಿಸ್ ಇಲಾಖೆಯ ಕೆ ಎಸ್‌ ಪಿ ಅಪ್ಲಿಕೇಶನ್ ಎಂದರೆ ಏನು ಮತ್ತು ಇದರ ಉಪಯೋಗಗಳು

ಕೆ ಎಸ್ ಪಿ ಅಪ್ಲಿಕೇಶನ್ ಒಂದು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಆಗಿದ್ದು ರಾಜ್ಯದ ನಾಗರಿಕರಿಗೆ ಪೊಲೀಸ್ ಇಲಾಖೆಯ ಸೇವೆಗಳನ್ನು ಸುಲಭವಾಗಿ ಒದಗಿಸಲು ಈ ಅಪ್ಲಿಕೇಶನ್ ಅನ್ನು ರಚಿಸಲಾಗಿದೆ ಕಳೆದು ಹೋದ ಮೊಬೈಲ್ ದಾಖಲೆಗಳಾದ ಆಧಾರ್ ಕಾರ್ಡ್ ಪಾನ್ ಕಾರ್ಡ್ ಚಾಲನಾ ಪರವಾನಗಿ ಎಟಿಎಂ ಕಾರ್ಡ್ ಮುಂತಾದ ಇತರೆ ಮೌಲ್ಯಯುತ ವಸ್ತುಗಳು ಕಳೆದು ಹೋಗಿದ್ದರೆ ಲಾಸ್ಟ್ ರಿಪೋರ್ಟ್‌ ಅನ್ನು ಸಲ್ಲಿಸುವ ಮೂಲಕ ಆ Lost Phone ಮರಳಿ ಪಡೆಯಬಹುದಾಗಿದೆ

ಕೆ ಎಸ್ ಪಿ ಅಪ್ಲಿಕೇಶನ್ ನ ಪ್ರಯೋಜನಗಳು

  • ಈ ಅಪ್ಲಿಕೇಶನ್ ಮೂಲಕ ನೀವು Lost Phone ಅಥವಾ ದಾಖಲೆಗಳ ಲಾಸ್ಟ್ ರಿಪೋರ್ಟ್‌ ಸಲ್ಲಿಸಬಹುದು
  • ಕಳೆದು ಹೋದ ಬಗ್ಗೆ ಲಾಸ್ಟ್ ರಿಪೋರ್ಟ್ ಅನ್ನು ಸಲ್ಲಿಸಿದ ನಂತರ ದೂರಿನ ಸ್ಥಿತಿಯನ್ನು ಪರಿಶೀಲಿಸಬಹುದು
  • ಪೋಲಿಸ್ ಇಲಾಖೆಯ ಸೇವೆಗಳನ್ನು ಬಗ್ಗೆ ಮಾಹಿತಿಯನ್ನು ಪಡೆಯಬಹುದು
  • ತುರ್ತು ಸಹಾಯವಾಣಿಯಾದ 112 ಬಗ್ಗೆ ಮಾಹಿತಿಯನ್ನು ತಿಳಿಯಬಹುದು

ಕೆ ಎಸ್ ಪಿ ಮೊಬೈಲ್ ಅಪ್ಲಿಕೇಶನ್ ನಲ್ಲಿ ಲಾಸ್ಟ್ ರಿಪೋರ್ಟ್‌ ಸಲ್ಲಿಸುವ ಹಂತ ಹಂತದ ವಿಧಾನ

ಮೊದಲನೇ ಹಂತ : ಯಾರೇ ನಾಗರಿಕರು ಮೊಬೈಲನ್ನು ಕಳೆದುಕೊಂಡ ನಂತರ ತಕ್ಷಣ ಬೇರೆ ಮೊಬೈಲ್ ನ ಸಹಾಯದಿಂದ ಮೊದಲು ಗೂಗಲ್ ಪ್ಲೇ ಸ್ಟೋರ್ ಅಥವಾ ಆಫ್ ಸ್ಟೋರ್ ನಲ್ಲಿ ಕೆ ಎಸ್ ಪಿ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.

ಎರಡನೇ ಹಂತ : ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿದ ನಂತರ ಪ್ರಸ್ತುತ ನಿಮ್ಮ ಬಳಿ ಇರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಆ ನಿರ್ದಿಷ್ಟ ನಂಬರಿಗೆ ಬರುವ ಓಟಿಪಿ ಎನ್ನು ನಿರ್ದಿಷ್ಟ ಪಡಿಸಿದ ಜಾಗದಲ್ಲಿ ನಮೂದಿಸುವ ಮೂಲಕ ಲಾಗಿನ್ ಆಗಿ

ಮೂರನೇ ಹಂತ :ಅಪ್ಲಿಕೇಶನ್ ಸಂಪೂರ್ಣವಾಗಿ ತೆರೆದ ನಂತರ ಅಲ್ಲಿ ಕಾಣಿಸುವ ಲಾಸ್ಟ್ ರಿಪೋರ್ಟ್ ಅಥವಾ ಲಾಸ್ಟ್ ಅಂಡ್ ಫೌಂಡ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ

ನಾಲ್ಕನೇ ಹಂತ‌ :ಲಾಸ್ಟ್ ರಿಪೋರ್ಟ್ ಅರ್ಜಿಯು ತೆರೆದ ನಂತರ ಅಲ್ಲಿ ಯಾವ ವಸ್ತು ಕಳೆದು ಹೋಗಿದೆ ಎಂಬುದನ್ನು ಕೇಳಲಾಗುತ್ತದೆ ಅಲ್ಲಿ ನೀವು ಮೊಬೈಲ್ ಎಂದು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ

ಆಯ್ಕೆ ಮಾಡಿಕೊಂಡ ನಂತರ ಮೊಬೈಲ್ ನ ಹೆಸರು ಮೊಬೈಲ್ ನ ಬ್ರಾಂಡ್ ಮೊಬೈಲ್ ನ ಮಾಡೆಲ್ ನೇಮ್ ಮೊಬೈಲ್ ನ ಐ.ಎಂ.ಇ.ಐ ನಂಬರ್ ಕಳೆದು ಹೋದ ದಿನಾಂಕ ಮತ್ತು ಸಮಯ ಯಾವ ಸ್ಥಳದಲ್ಲಿ ಫೋನ್ ಕಳೆದು ಹೋಗಿದೆ ಮೊಬೈಲ್ ನಂಬರ್ ಈ ಸಂಬಂಧ ಪ್ರತಿಯೊಂದು ಮಾಹಿತಿಯನ್ನು ನೀವು ಅಲ್ಲಿ ನಮೂದಿಸಬೇಕಾಗುತ್ತದೆ

ನಿಮಗೇನಾದರೂ ಐ.ಎಂ.ಇ.ಐ ನಂಬರ್ ತಿಳಿಯದೆ ಇದ್ದಲ್ಲಿ ನಿಮ್ಮ ಮೊಬೈಲ್ ಬಾಕ್ಸ್ ನ ಮೇಲೆ ಹಿಂದೆ ಐ.ಎಂ.ಇ.ಐ ಸಂಖ್ಯೆ ಇರುತ್ತದೆ ಇಲ್ಲದಿದ್ದರೆ ನೀವು ಮೊಬೈಲನ್ನು ಖರೀದಿಸುವ ಸಂದರ್ಭದಲ್ಲಿ ಪಡೆದಿರುವ ಬಿಲ್ ನ ಮೇಲೆ ಕ್ಯೂಆರ್ ಕೋಡ್ ಅನ್ನು ಅಂಟಿಸಿರುತ್ತಾರೆ ಅದನ್ನು ಉಪಯೋಗಿಸಿಕೊಂಡು ನೀವು ಆಯಮಗಳನ್ನು ತಿಳಿಯಬಹುದು

ಐದನೇ ಹಂತ : ಎಲ್ಲಾ ಮಾಹಿತಿಯನ್ನು ಸರಿಯಾಗಿ ಹಾಗೂ ಎಚ್ಚರಿಕೆಯಿಂದ ನಮೂದಿಸಿದ ನಂತರ ಕೆಲವೊಂದು ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ ಮೊಬೈಲ್ ಖರೀದಿಸುವಾಗ ತಾವು ಪಡೆದಿರುವ ಬಿಲ್ ನ ಪ್ರತಿ , ಸರ್ಕಾರದಿಂದ ವಿತರಣೆಗೊಂಡಿರುವ ಅಧಿಕೃತ ಗುರುತಿನ ಚೀಟಿ ಅಂದರೆ ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್ ಮತ್ತು ಮೊಬೈಲ್ ನ ಫೋಟೋ ಮೊಬೈಲ್ ಬಾಕ್ಸ್ ಫೋಟೋ ಹಾಗೂ ಮೊಬೈಲ್ ಖರೀದಿಯ ಸಂದರ್ಭದಲ್ಲಿ ಸಿಗುವ ಬಿಲ್ಲನ್ನು ಅಪ್ಲೋಡ್ ಮಾಡಬೇಕಾಗುತ್ತದೆ

ಆರನೇ ಹಂತ : Lost Phone ನ ಎಲ್ಲ ಮಾಹಿತಿಯನ್ನು ನಮೂದಿಸಿ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಅಪ್ಲೋಡ್ ಮಾಡಿದ ನಂತರ ಸಬ್ಮಿಟ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡುವುದರ ಮೂಲಕ ಅರ್ಜಿ ಯಶಸ್ವಿಯಾಗಿ ಸಲ್ಲಿಕೆಯಾಗಿ ನಿಮಗೆ ಸ್ವೀಕೃತಿ ಸಂಖ್ಯೆ ಹಾಗೂ ಅರ್ಜಿ ಸಿಗುತ್ತದೆ ಇದನ್ನು ಡೌನ್ಲೋಡ್ ಮಾಡಿಟ್ಟುಕೊಂಡು ಒಂದು ಪ್ರಿಂಟ್ ತೆಗೆದುಕೊಳ್ಳಿ ಈ ಅಪ್ಲಿಕೇಶನ್ ಅನ್ನು ತಾವು ಪೊಲೀಸ್ ಠಾಣೆಗೆ ಸಲ್ಲಿಸಬೇಕಾಗುವ ಸಂದರ್ಭಗಳು ಕೆಲವೊಮ್ಮೆ ಬರುತ್ತವೆ

ಕೇಂದ್ರ ಸರ್ಕಾರದ ಸಿ.ಇ.ಐ.ಆರ್ ಪೋರ್ಟಲ್ ಎಂದರೆ ಏನು

ಸಿ.ಇ.ಐ.ಆರ್ ಪೋರ್ಟಲ್ ಎಂಬುದು ಕೇಂದ್ರ ಸರ್ಕಾರದ ದೂರಸಂಪರ್ಕ ಇಲಾಖೆಯ ಒಂದು ಅಧಿಕೃತ ಪೋರ್ಟಲ್ ಆಗಿದ್ದು Lost Phone, ಕಳ್ಳತನವಾದ ಹಾಗೂ ಸಿಕ್ಕ ಮೊಬೈಲ್ ಗಳನ್ನು ಬ್ಲಾಕ್ ಮಾಡಿಸಲು ಬಳಸುವ ಅಧಿಕೃತ ಪೋರ್ಟಲ್ ಆಗಿದ್ದು ಈ ಪೋರ್ಟಲ್ ನ ಮೂಲಕವೇ ಕಳೆದುಹೋದ Lost Phone ಅನ್ನು ಬ್ಲಾಕ್ ಅಥವಾ ಅನ್ ಬ್ಲಾಕ್ ಮಾಡಬಹುದು ಈ ಪೋರ್ಟಲ್ ಮೂಲಕ ಈ ಕೆಳಕಂಡ ಉಪಯೋಗಗಳನ್ನು ಪಡೆಯಬಹುದು ಅವುಗಳೆಂದರೆ

  • ಕಳೆದುಹೋದ ಮೊಬೈಲ್ ಫೋನನ್ನು ಮಾಲೀಕತ್ವದ ಪರಿಶೀಲನೆಯ ನಂತರ ಬ್ಲಾಕ್ ಮಾಡಿಸಬಹುದು‌
  • ತಮ್ಮ ಮೊಬೈಲ್ಗೆ ಕೊಟ್ಟಿರುವ ಐ.ಎಂ.ಇ.ಐ ನಂಬರ್ ಅನ್ನು ಈ ಪೋರ್ಟಲ್ ಮೂಲಕ ಟ್ರ್ಯಾಕ್ ಮಾಡಬಹುದು 
  • ಒಂದು ಪಕ್ಷದಲ್ಲಿ ಕಳ್ಳರು ನಿಮ್ಮ ಮೊಬೈಲ್ ನಲ್ಲಿರುವ ಸಿಮ್ ಅನ್ನು ಬದಲಿಸಿದರು ಐ.ಎಂ.ಇ.ಐ ನಂಬರ್ ಮೂಲಕ ಪತ್ತೆ ಮಾಡುವ ಅವಕಾಶ ಈ ಪೋರ್ಟಲ್ ನಿಂದ ಹೆಚ್ಚುತ್ತದೆ
  • ತನಿಖೆ ಮುಗಿದ ನಂತರ ಮರಳಿ ಸಿಗುವ ಫೋನನ್ನು ಮತ್ತೆ ಅನ್ಲಾಕ್ ಮಾಡಲು ಈ ಪೋರ್ಟಲ್ ಸಹಕಾರಿಯಾಗಿದೆ

ಸಿ.ಇ.ಐ.ಆರ್ ಪೋರ್ಟಲ್ ನಲ್ಲಿ ಕಳೆದು ಹೋಗಿರುವ ಮೊಬೈಲ್ ಅನ್ನು ಲಾಕ್ ಮಾಡುವ ವಿಧಾನ 

  • ಮೊದಲು ಸಿ.ಇ.ಐ.ಆರ್ ಪೋರ್ಟಲ್ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು
  • ನಂತರ ಅಲ್ಲಿ ಕಾಣಸಿಗುವ Block Lost Phone ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು
  • ನಂತರ ಆನ್ಲೈನ್ ಅರ್ಜಿ ತೆರೆಯುತ್ತದೆ ಇಲ್ಲಿ ಕಡ್ಡಾಯವಾಗಿ ಕೇಳಲಾಗುವ ಮೊಬೈಲ್ ನಂಬರ್ ಮೊಬೈಲ್ನ ಬ್ರಾಂಡ್ ಹಾಗೂ ಮಾಡೆಲ್ ಕಳೆದು ಹೋದ ಸ್ಥಳ ಕಳೆದುಹೋದ ದಿನಾಂಕ ಮತ್ತು ಸಮಯ ಪೊಲೀಸ್ ಕಂಪ್ಲೇಂಟ್ ನಂಬರ್ ಅಥವಾ ಕೆ ಎಸ್‌ ಪಿ ಆಪ್ ನಲ್ಲಿ ನೀವು ದಾಖಲಿಸಿರುವ ಇ ಲಾಸ್ಟ್ ರಿಪೋರ್ಟನ್ನು ಅದರಲ್ಲಿರುವ ಸರಿಯಾದ ಮಾಹಿತಿಯನ್ನು ನಮೂದಿಸಬೇಕಾಗುತ್ತದೆ
  • ನಂತರ ಎಲ್ಲ ಮಾಹಿತಿಯನ್ನು ಪರಿಶೀಲಿಸಿ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ ಮೊಬೈಲ್ ಖರೀದಿ ಮಾಡುವ ಸಂದರ್ಭದಲ್ಲಿ ತಾವು ಪಡೆಯುವ ಮೊಬೈಲ್ ನ ಇನ್ವಾಯ್ಸ್ ಬಿಲ್ ಹಾಗೂ ಕರ್ನಾಟಕ ಸರ್ಕಾರದಿಂದ ನೀಡಲ್ಪಟ್ಟಿರುವ ಅಧಿಕೃತ ಗುರುತಿನ ಚೀಟಿ ಹಾಗೂ ಕೆ ಎಸ್ ಪಿ ಆಪ್ ನಲ್ಲಿ ನೀವು ದೂರು ದಾಖಲಿಸಿದ ನಂತರ ಬಂದಿರುವ ಸ್ವೀಕೃತಿ ಅರ್ಜಿಯನ್ನು ಇಲ್ಲಿ ಅಪ್ಲೋಡ್ ಮಾಡಬೇಕಾಗುತ್ತದೆ
  • ನಂತರ ನಿಮ್ಮ ಬಳಿ ಪ್ರಸ್ತುತ ಇರುವ ಮೊಬೈಲ್ ನಂಬರನ್ನು ನಮೂದಿಸಿ ಆ ಸಂಖ್ಯೆಗೆ ಬರುವ ಓಟಿಪಿಯನ್ನು ನಮೂದಿಸಿ ವೇರಿಫೈ ಮಾಡಬೇಕಾಗುತ್ತದೆ

ಸಿ.ಇ.ಐ.ಆರ್ ಪೋರ್ಟಲ್ ಮೂಲಕ ಮೊಬೈಲ್ ಅನ್ನು ಲಾಕ್ ಮಾಡುವುದರಿಂದ ಆಗುವ ಪ್ರಯೋಜನಗಳು

  • Lost Phone ಬಳಸಿಕೊಂಡು ಯಾರಾದರೂ ಹೊಸ ಸಿಮ್ ಅನ್ನು ಹಾಕಿದರೆ ಆ ಫೋನ್ ಕಾರ್ಯ ನಿರ್ವಹಿಸುವುದಿಲ್ಲ
  • ಫೋನ್ ಲಾಕ್ ಆದ ನಂತರ ಮೊಬೈಲ್ ನ ಸ್ಕ್ರೀನ್ ಬ್ಲಾಂಕ್ ಆಗುತ್ತದೆ ಆಗ ಫೋನ್ ತೆಗೆದುಕೊಂಡಿರುವವರು ಮೊಬೈಲ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ
  • ಐ.ಎಂ.ಇ.ಐ ನಂಬರ್ ಅನ್ನು ಹಾಕಿ ಸುಲಭವಾಗಿ ಈ ಪೋರ್ಟಲ್ ನ ಮೂಲಕ ಟ್ರ್ಯಾಕ್ ಮಾಡಬಹುದು
  • ಈ ಪೋರ್ಟಲ್ ಮೂಲಕ Lost Phone ಅನ್ನು ಫೋನನ್ನು ಲಾಕ್ ಮಾಡುವುದರ ಮೂಲಕ ಪೊಲೀಸರಿಗೆ ಮೊಬೈಲನ್ನು ಪತ್ತೆಹಚ್ಚಲು ಸುಲಭವಾಗುತ್ತದೆ

ಪೊಲೀಸರು ತನಿಖೆ ನಂತರ ಮೊಬೈಲ್ ಪತ್ತೆ ಮಾಡಿದರೆ ಏನಾಗುತ್ತದೆ

ಕೆ ಎಸ್ ಪಿ ಅಪ್ಲಿಕೇಶನ್ ಹಾಗೂ ಸಿ.ಇ.ಐ.ಆರ್ ಪೋರ್ಟಲ್ ಮೂಲಕ ನೀವು ಯಶಸ್ವಿಯಾಗಿ ದೂರನ್ನು ಸಲ್ಲಿಸಿ ಪೊಲೀಸರು ತನಿಖೆ ನಡೆಸಿ ಮೊಬೈಲ್ ಸಿಕ್ಕಿದಾಗ ಸಾಮಾನ್ಯವಾಗಿ ಪೊಲೀಸರು ನಿಮಗೆ ಕರೆ ಮಾಡಿ ನಿಮ್ಮ ಮೊಬೈಲ್ ಅನ್ನು ಹಿಂಪಡೆಯಲು ತಿಳಿಸುತ್ತಾರೆ ಕೆಲವೊಮ್ಮೆ ಠಾಣೆಗೆ ಹಾಜರಾಗಲು ತಿಳಿಸುತ್ತಾರೆ ಈ ಸಂದರ್ಭದಲ್ಲಿ ಠಾಣೆಗೆ ತೆಗೆದುಕೊಂಡು ಹೋಗಬೇಕಾದ ದಾಖಲೆಗಳ ವಿವರ ಈ ಕೆಳಕಂಡಂತಿದೆ

  • ಆಧಾರ್ ಕಾರ್ಡ್ ಅಥವಾ ಪಾನ್ ಕಾರ್ಡ್ ನೀವು ಕಂಪ್ಲೇಂಟ್ ನೀಡುವಾಗ ಅಪ್ಲೋಡ್ ಮಾಡಿರುವ ದಾಖಲೆ
  • ಮೊಬೈಲನ್ನು ಖರೀದಿ ಮಾಡುವಾಗ ನಿಮಗೆ ನೀಡಿರುವ ಬಿಲ್
  • ಕೆ ಎಸ್ ಪಿ ಆಪ್ ಮೂಲಕ ಲಾಸ್ಟ ರಿಪೋರ್ಟನ್ನು ಸಲ್ಲಿಸಿರುವ ಬಗ್ಗೆ ನಿಮ್ಮ ಬಳಿ ಇರುವ ಸ್ವೀಕೃತಿ ಪ್ರತಿ
  • ಸಿ.ಇ.ಐ.ಆರ್ ಪೋರ್ಟಲ್ ಮೂಲಕ ಮೊಬೈಲ್ ಅನ್ನು ಲಾಕ್ ಮಾಡಿದಾಗ ನಿಮಗೆ ದೊರೆತಿರುವ ರಿಕ್ವೆಸ್ಟ್ ಐಡಿ ಹಾಗೂ ಸ್ವೀಕೃತಿ ಅರ್ಜಿ
  • ಹೆಚ್ಚುವರಿ ಗುರುತಿನ ದಾಖಲೆಗಳು

ನಂತರ ಪೊಲೀಸರು ಈ ಎಲ್ಲ ದಾಖಲೆಗಳನ್ನು ಪರಿಶೀಲಿಸಿದ ನಂತರ Lost Phone  ನ ಮಾಲೀಕರು ನೀವೇ ಮೊಬೈಲ್ ನಿಜವಾದ ಮಾಲೀಕರಾಗಿದ್ದರೆ ನಿಮಗೆ ಮೊಬೈಲನ್ನು ಹಸ್ತಾಂತರ ಮಾಡುತ್ತಾರೆ

ನಿಮ್ಮ ಮೊಬೈಲ್ ಅನ್ನು ಮರಳಿ ಪಡೆದುಕೊಂಡ ನಂತರ ಏನು ಮಾಡಬೇಕು

ಪೊಲೀಸರು ತನಿಖೆ ಕೈಗೊಂಡು Lost Phone ಅನ್ನು ಹುಡುಕಿ ನಿಮಗೆ ಹಸ್ತಾಂತರ ಮಾಡಿದ ನಂತರ ನೀವು ಮರಳಿ ಸಿ.ಇ.ಐ.ಆರ್ ಪೋರ್ಟಲ್ ಗೆ ಭೇಟಿ ನೀಡಿ ನಿಮ್ಮ ಮೊಬೈಲ್ ನಂಬರ್ ಹಾಗೂ ಒಟಿಪಿಯನ್ನು ನಮೂದಿಸಿ ಲಾಗಿನ್ ಆದ ನಂತರ ನೀವು ಮೊದಲು ಲಾಕ್ ಮೊಬೈಲ್ ಎಂದು ಆಯ್ದುಕೊಂಡ ಆಯ್ಕೆಯ ಬದಲಿಗೆ ಅನ್ಲಾಕ್‌ ಫೌಂಡ್ ಮೊಬೈಲ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಅದನ್ನು ಪುನಹ ಸಕ್ರಿಯಗೊಳಿಸಬೇಕಾಗಿರುತ್ತದೆ ಇದನ್ನು ಸಕ್ರಿಯಗೊಳಿಸಿದ ನಂತರ ನಿಮ್ಮ ಫೋನ್ ಮೊದಲಿನಂತೆ ಸಾಮಾನ್ಯ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ

ಮೊಬೈಲ್ ಕಳೆದು ಹೋಗದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳು

ಈಗಿನ ಸಂದರ್ಭಗಳಲ್ಲಿ ಮೊಬೈಲ್ ಅನ್ನು ಕಳೆದುಕೊಳ್ಳುವುದು ಸರ್ವೇಸಾಮಾನ್ಯ ಆದರೆ ಮೊಬೈಲ್ನಲ್ಲಿರುವ ನಿಮ್ಮ ಮಾಹಿತಿಯು ಸುರಕ್ಷಿತವಾಗಿ ಇರಬೇಕೆಂದರೆ ನೀವು ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ Lost Phone ಆದ ನಂತರ ಸುರಕ್ಷತೆಗಾಗಿ ಈ ಕ್ರಮಗಳನ್ನು ಅನುಸರಿಸಿ

  • ನಿಮ್ಮ ಫೋನ್ ಗೆ ಬಲವಾದ ಸ್ಕ್ರೀನ್ ಲಾಕ್ ಅನ್ನು ಇಡಿ ಅಂದರೆ ಪಿನ್ ಪಾಸ್ವರ್ಡ್ ಅಥವಾ ಫಿಂಗರ್ ಪ್ರಿಂಟ್ ಪ್ಯಾಟರ್ನ್ ಗಳನ್ನು ಕ್ಲಿಷ್ಟಕರವಾಗಿ ಬಳಸಿ‌
  • ಗೂಗಲ್ ಸೇವೆಯಾದ ಫೈಂಡ್ ಮೈ ಡಿವೈಸ್ ಎಂಬ ಆಯ್ಕೆಯನ್ನು ಆನ್ ಮಾಡಿ ಇಡಿ ಆಯ್ಕೆಯು ನಿಮ್ಮ ಫೋನನ್ನು ವೇಗವಾಗಿ ಪತ್ತೆಹಚ್ಚಲು ಸಹಕರಿಸುತ್ತದೆ
  • ನಿಮ್ಮ ಮೊಬೈಲ್ಗೆ ಸಂಬಂಧಿಸಿದಂತೆ ಎರಡು ಐ.ಎಂ.ಇ.ಐ ನಂಬರ್‌ ಗಳನ್ನು ನೀಡಲಾಗಿರುತ್ತದೆ ಈ ನಂಬರ್ಗಳನ್ನು ನಿಮ್ಮ ನಂಬಿಕೆ ಶೇರ್ ಮಾಡಿ ಅಥವಾ ಮೊಬೈಲ್ ಬಾಕ್ಸ್ ಮೊಬೈಲ್ ಬಿಲ್ ಅಥವಾ ನಿಮ್ಮ ವೈಯಕ್ತಿಕ ಡೈರಿ ಗಳಲ್ಲಿ ಬರೆದು ಇಟ್ಟುಕೊಳ್ಳಿ
  • ನಿಮ್ಮ ಫೋನ್ನಲ್ಲಿ ಇರುವ ಫೋಟೋಗಳು ಕಾಂಟಾಕ್ಟ್ ನಂಬರ್ ಗಳು ಹಾಗೂ ಪ್ರಮುಖ ಡಾಕ್ಯುಮೆಂಟ್ ಗಳನ್ನು ಬ್ಯಾಕಪ್ ಇಟ್ಟುಕೊಳ್ಳಿ
  • ಹೆಚ್ಚು ಜನರಿರುವ ಜಾಗಗಳಾದ ಬಸ್ ನಿಲ್ದಾಣ ರೈಲು ನಿಲ್ದಾಣ ಮಾರುಕಟ್ಟೆ ಹಾಗೂ ಜನಸಂದಣಿ ಪ್ರದೇಶಗಳಲ್ಲಿ ನಿಮ್ಮ ಮೊಬೈಲ್ನ ಮೇಲೆ ಹೆಚ್ಚಿನ ಎಚ್ಚರಿಕೆಯನ್ನು ವಹಿಸಿ
  • ನಿಮ್ಮ ಮೊಬೈಲ್ ನ ವಾಟ್ಸಾಪ್ ಫೇಸ್ ಬುಕ್ ಇನ್ಸ್ಟಾಗ್ರಾಮ್ ಮುಂತಾದ ಸಾಮಾಜಿಕ ಜಾಲತಾಣಗಳ ಮೂಲಕ ನೀವು ಸ್ವೀಕರಿಸಿರುವ ಸಂಬಂಧ ವಿರದ ಲಿಂಕ್ ಗಳ ಮೇಲೆ ಕ್ಲಿಕ್ ಮಾಡುವುದನ್ನು ತಪ್ಪಿಸಿ ಇದರಿಂದ ಮೊಬೈಲ್ ಹ್ಯಾಕ್ ಆಗುವ ಸಾಧ್ಯತೆ ಹೆಚ್ಚಾಗುತ್ತದೆ

ಮೊಬೈಲ್ ಕಳೆದುಕೊಂಡವರು ಮಾಡುವ ಸಾಮಾನ್ಯ ತಪ್ಪುಗಳು

ಸಾಮಾನ್ಯವಾಗಿ ಜನರು Lost Phone ನಂತರ ಫೋನು ಸಿಗುವುದಿಲ್ಲ ಎಂದು ಈ ಕೆಳಗಿನ ತಪ್ಪುಗಳನ್ನು ಮಾಡುತ್ತಾರೆ ಅವುಗಳು ಈ ಕೆಳಕಂಡಂತಿವೆ

  • ಫೋನನ್ನು ಕಳೆದುಕೊಂಡ ತಕ್ಷಣ ಗಾಬರಿಯಾಗಿ ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಕೆ ಎಸ್ ಪಿ ಆಪ್ ಮೂಲಕ ಲಾಸ್ಟ್ ರಿಪೋರ್ಟ್ ಸಲ್ಲಿಸದೆ ಹಾಗೆಯೇ ಬಿಡುವುದು
  • ತಮ್ಮ ಸುರಕ್ಷಿತವಾದ ಸಿಮ್ ಅನ್ನು ಬ್ಲಾಕ್ ಮಾಡದೆ ಇರುವುದು
  • ಸಿ.ಇ.ಐ.ಆರ್ ಪೋರ್ಟಲ್ ಮೂಲಕ ಐ.ಎಂ.ಇ.ಐ ನಂಬರ್ ಅನ್ನು ಬ್ಲಾಕ್ ಮಾಡದೆ ಇರುವುದು
  • ಸಾಮಾಜಿಕ ಜಾಲತಾಣ, ಯುಪಿಐ ಪಾವತಿ ಅಪ್ಲಿಕೇಶನ್ ಗಳು ಹಾಗೂ ಬ್ಯಾಂಕಿಂಗ್ ಪಾಸ್ವರ್ಡ್ ಗಳನ್ನು ಬದಲಿಸದೆ ಇರುವುದು
  • ಮೊಬೈಲ್ ಗೆ ಸಂಬಂಧಿಸಿದ ಐ.ಎಂ.ಇ.ಎ ನಂಬರನ್ನು ಪ್ರತಿಯಾಗಿ ಉಳಿಸದೇ ಇರುವುದು
  • ಫೋನನ್ನು ತೆಗೆದುಕೊಂಡ ನಂತರ ಫೋನ್ಗೆ ಸಂಬಂಧಿಸಿದ ಬಿಲ್ ಮತ್ತು ಬಾಕ್ಸ್ ಅನ್ನು ಎಸೆದು ಬಿಡುವುದು ಅಥವಾ ಹಾಳು ಮಾಡುವುದು
  • ಈ ತಪ್ಪುಗಳನ್ನು ಮಾಡುವುದರಿಂದ ತಮ್ಮ ಕಳೆದು ಹೋಗಿರುವ ಮೊಬೈಲ್ ಸುಲಭವಾಗಿ ಸಿಗುವ ಸಾಧ್ಯತೆಗಳಿದ್ದರೂ ನೀವು ಮೊಬೈಲನ್ನು ಪಡೆಯಲು ಆಗುವುದಿಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ ತಕ್ಷಣದ ಕ್ರಮಗಳನ್ನು ಕೈಗೊಳ್ಳಿ

ಮೊಬೈಲ್ ಮರಳಿ ಸಿಗುವ ಸಾಧ್ಯತೆ ಎಷ್ಟಿದೆ

ನೀವು ಕೆ ಎಸ್ ಪಿ ಆತ್ಮ ಮೂಲಕ ಲಾಸ್ಟ್ ರಿಪೋರ್ಟ್ ಹಾಗೂ ಸಿ.ಇ.ಐ.ಆರ್ ಪೋರ್ಟಲ್ ಮೂಲಕ ಫೋನನ್ನು ಬ್ಲಾಕ್ ಮಾಡುವುದರ ಮೂಲಕ ಸಂಪೂರ್ಣವಾಗಿ ನಿಮ್ಮ ಫೋನನ್ನು ವಾಪಸ್ ಪಡೆಯುವ ಸಾಧ್ಯತೆಯನ್ನು ಹೆಚ್ಚಿಸಬಹುದು, ಪೊಲೀಸರು ಇದಕ್ಕೆಂದೇ ವಿಶೇಷ ತನಿಖೆಯನ್ನು ನಡೆಸುತ್ತಾರೆ ಹಾಗೂ ನೀವು ನೀಡುವ ದೂರನ್ನು ತ್ವರಿತವಾಗಿ ಆಧರಿಸಿ ಈ ಲಾಸ್ಟ್ ರಿಪೋರ್ಟ್ ಮತ್ತು ಮೊಬೈಲನ್ನು ಬ್ಲಾಕ್ ಮಾಡಿದರೆ, ಮೊಬೈಲ್‌ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ

ಕರ್ನಾಟಕ ಸರ್ಕಾರದ ಅಧಿಕೃತ ವೆಬ್ಸೈಟ್  ಕರ್ನಾಟಕ ರಾಜ್ಯ ಪೊಲೀಸ್
ಕೆ ಎಸ್ ಪಿ ಅಪ್ಲಿಕೇಶನ್ ನ ಮೊಬೈಲ್ ಆಪ್ ಲಿಂಕ್ ‌ಅಪ್ಲಿಕೇಶನ್‌ ಲಿಂಕ್
ಸಿ.ಇ.ಐ.ಆರ್ ಪೋರ್ಟಲ್ ನ ಅಧಿಕೃತ ಪೋರ್ಟಲ್ ಸಿ.ಇ.ಐ.ಆರ್ ಪೋರ್ಟಲ್
ಕಳೆದುಹೋದ ಮೊಬೈಲನ್ನು ಲಾಕ್‌ ಮಾಡಲು ಮೊಬೈಲ್‌ ಲಾಕ್
ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೆಚ್ಚುವರಿ ಮಾಹಿತಿ ನೇಮಕಾತಿ ಮಾಹಿತಿ ‌        ಸರ್ಕಾರಿ ಯೋಜನೆಗಳ ಮಾಹಿತಿ

ಇಂದಿನ ದಿನಗಳಲ್ಲಿ ಮೊಬೈಲ್ ಅನ್ನು ಕಳೆದುಕೊಳ್ಳುವುದು ಸರ್ವೇಸಾಮಾನ್ಯವಾಗಿದೆ ಆದರೆ ಮೊಬೈಲ್ ಅನ್ನು ಕಳೆದುಕೊಂಡ ತಕ್ಷಣ ಗಾಬರಿಯಾಗದೆ ಮುನ್ನೆಚ್ಚರಿಕ ಕ್ರಮಗಳನ್ನು ಸರಿಯಾದ ಕ್ರಮದಲ್ಲಿ ಅನುಸರಿಸಿದರೆ ನಿಮ್ಮ ಮೊಬೈಲ್ ಅನ್ನು ಮರಳಿ ಪಡೆಯಬಹುದಾಗಿರುತ್ತದೆ ಮೊದಲು ಕೆ ಎಸ್ ಪಿ ಆರ್ ನಲ್ಲಿ ಲಾಸ್ಟ್ ರಿಪೋರ್ಟ್ ಅನ್ನು ಸಲ್ಲಿಸಿ ನಂತರ ಐಎಂಎ ನಂಬರ್ ಅನ್ನು ಬ್ಲಾಕ್ ಮಾಡಿಸಿ ಇದರಿಂದ ನಿಮ್ಮ ಡಾಟಾ ಸುರಕ್ಷಿತವಾಗಿರುವುದರ ಜೊತೆಯಲ್ಲಿ ಮೊಬೈಲ್ ಮರಳಿ ಸಿಗುವ ಸಾಧ್ಯತೆಗಳು ಹೆಚ್ಚಾಗುತ್ತದೆ ಪೊಲೀಸರ ಸಹಾಯ ಹಾಗೂ ಸರಿಯಾದ ದಾಖಲೆಗಳನ್ನು ಒದಗಿಸುವ ಮೂಲಕ ಅನೇಕ ಜನರು ತಮ್ಮ ಕಳೆದುಹೋದ ಫೋನ್ ಗಳನ್ನು ಯಶಸ್ವಿಯಾಗಿ ಮರಳಿ ಪಡೆದಿದ್ದಾರೆ ಆದುದರಿಂದ ನೀವು ಅಥವಾ ನಿಮ್ಮ ಕುಟುಂಬದಲ್ಲಿ ಅಥವಾ ನಿಮ್ಮ ನೆರೆಹೊರೆಯಲ್ಲಿ ಯಾರಾದರೂ ಮೊಬೈಲ್ ಫೋನನ್ನು ಕಳೆದುಕೊಂಡಿದ್ದರೆ ಅವರಿಗೆ ಈ ಲೇಖನವನ್ನು ಶೇರ್ ಮಾಡುವುದರ ಮೂಲಕ ಅವರು ಮೊಬೈಲ್ ಅನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ಸಹಕರಿಸಿ ಹಾಗೂ ಮೊಬೈಲ್ ಅನ್ನು ಹುಡುಕಲು ಸಹಕರಿಸಿ

Lost Phone ಅನ್ನು ಮರಳಿ ಪಡೆಯಲು FAQ’s

  1. ಮೊಬೈಲ್ ಫೋನ್‌ ಕಳೆದು ಹೋದರೆ ಮೊದಲು ಏನು ಮಾಡಬೇಕು?
    ಬೇರೆ ಫೋನ್‌ನಿಂದ ಕರೆ ಮಾಡಿ, ಸಿಮ್ ತಕ್ಷಣ ಬ್ಲಾಕ್ ಮಾಡಿ, ಕೆ ಎಸ್‌ ಪಿ ಆಪ್‌ ನಲ್ಲಿ ರಿಪೋರ್ಟ್‌ ಮಾಡಿ
  2. KSP ಅಪ್ಲಿಕೇಶನ್ ಅನ್ನು ಏಕೆ ಬಳಸಬೇಕು?
    ಕಳೆದುಹೋದ ಮೊಬೈಲ್‌ ಬಗ್ಗೆ ಲಾಸ್ಟ್ ರಿಪೋರ್ಟ್ ಅನ್ನು ಸಲ್ಲಿಸಲು ಬಳಸಬೇಕು.
  3. CEIR ಪೋರ್ಟಲ್ ನ ಅತಿಮುಖ್ಯ ಉಪಯೋಗ ಏನು?
    ಮೊಬೈಲ್ IMEI ಬ್ಲಾಕ್ ಮಾಡುವುದು ಹಾಗೂ ಟ್ರ್ಯಾಕ್ ಮಾಡಲು ಸಹಾಯಮಾಡುತ್ತದೆ.
  4. ಮೊಬೈಲ್ ಸಿಕ್ಕಿದರೆ ಪೊಲೀಸರು ಯಾವ ದಾಖಲಾತಿಗಳನ್ನು ಕೇಳುತ್ತಾರೆ?
    ಮೊಬೈಲ್ ಬಿಲ್, ಆಧಾರ್‌ ಕಾರ್ಡ್, ಲಾಸ್ಟ್ ರಿಪೋರ್ಟ್ ಸ್ವೀಕೃತಿ‌ ಪತ್ರವನ್ನು ತೋರಿಸಬೇಕು.
  5. ಮೊಬೈಲ್ ಮರಳಿ ಸಿಗುವ ಸಾಧ್ಯತೆ ಇದೆಯೇ?
    ಸರಿಯಾದ ದೂರು ನೀಡುವುದರಿಂದ ಮೊಬೈಲ್ ಸಿಗುವ ಅವಕಾಶ ಹೆಚ್ಚುತ್ತದೆ.

ರಂಗನಾಥ ಬಿ.ಜಿ ಅವರು ಅರ್ಥಶಾಸ್ತ್ರದಲ್ಲಿ ಎಂ.ಎ ಪದವೀಧರರಾಗಿದ್ದು, ಕಳೆದ ಎರಡು ವರ್ಷಗಳಿಂದ ನೈಜ ಹಾಗೂ ವಿಶ್ವಾಸಾರ್ಹ ಕನ್ನಡ ವಿಷಯಗಳನ್ನು ಪ್ರಕಟಿಸುತ್ತಿದ್ದಾರೆ. ಸರ್ಕಾರಿ ಉದ್ಯೋಗ ಮಾಹಿತಿ, ಪರೀಕ್ಷಾ ತಯಾರಿ ಸಲಹೆಗಳು, ವೃತ್ತಿ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು ಹಾಗೂ ಟ್ರೆಂಡಿಂಗ್ ಸುದ್ದಿಗಳ ಕುರಿತು ಲೇಖನಗಳನ್ನು ಬರೆಯುವಲ್ಲಿ ಪರಿಣತಿ ಹೊಂದಿದ್ದು, ಓದುಗರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುವುದು ಇವರ ಉದ್ದೇಶವಾಗಿದೆ. Please Visit NewsByMr

Leave a Comment