Telegram Join Our Telegram WhatsApp Join Our WhatsApp

ಕೃಷಿ ಅಧಿಕಾರಿ ಆಗುವುದು ಹೇಗೆ?, 2026 Career Guidance For AO And AAO Posts, ಇಲ್ಲಿದೆ ಸಂಪೂರ್ಣ ಮಾಹಿತಿ

ಈ Career Guidance ಗಳನ್ನು ಅನುಸರಿಸಿದರೆ ಕೃಷಿ ಅಧಿಕಾರಿ ಉದ್ಯೋಗ ಸಾಧ್ಯ

ಕರ್ನಾಟಕ ಸರ್ಕಾರ ಕೃಷಿ ಇಲಾಖೆಯ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಆನ್‌ ಲೈನ್‌ ಮೂಲಕ ಅರ್ಜಿಯನ್ನು ಆಹ್ವಾನಿಸಿದ್ದು ಈಗಾಗಲೇ ಆನ್ಲೈನ್ ಮೂಲಕ ಅರ್ಜಿ ಭರ್ತಿ ಪ್ರಕ್ರಿಯೆಯು ನಡೆಯುತ್ತಿದೆ ಅದರಂತೆಯೇ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಪರೀಕ್ಷಾ ತಯಾರಿ ಜೊತೆಯಲ್ಲಿ ವೃತ್ತಿ ಮಾರ್ಗದರ್ಶನದ  ಬಗ್ಗೆಯೂ ಮಾಹಿತಿಯನ್ನು ಪಡೆದುಕೊಳ್ಳಬೇಕಾಗುತ್ತದೆ

ಈ ಹುದ್ದೆಗಳಲ್ಲಿನ ಮಹತ್ವ ಆಯ್ಕೆಯಾಗುವುದರಿಂದ ಆಗುವ ಪ್ರಯೋಜನಗಳು ಇರಬೇಕಾದ ಕೌಶಲ್ಯಗಳು ಹೊಂದಬೇಕಾದ ಸಾಮರ್ಥ್ಯ ಹಾಗೂ ವ್ಯಕ್ತಿತ್ವ ಲಕ್ಷಣಗಳನ್ನು ವೃತ್ತಿ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಹೇಗೆ ಬಳಸಿಕೊಳ್ಳಬೇಕು, ಗುರಿ ನಿರ್ಧಾರ ಹೇಗಿರಬೇಕು ಮತ್ತು ಉದ್ಯೋಗಾವಕಾಶಗಳ ಅನ್ವೇಷಣೆಯನ್ನು ಹೇಗೆ ಮಾಡಬೇಕೆಂದು ಈ ಲೇಖನದಲ್ಲಿ ನಾವು ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ

ಕೃಷಿಯು ಭಾರತದ ಜನರ ಮೂಲ ಕಸುಬಾಗಿದ್ದು  ಆರ್ಥಿಕತೆಯ ಪ್ರಮುಖವಾಗಿದೆ ಕರ್ನಾಟಕ ರಾಜ್ಯದಲ್ಲಿಯೂ ಕೃಷಿ ಕ್ಷೇತ್ರದ ಅಭಿವೃದ್ಧಿ ಪಾತ್ರ ಅತ್ಯಂತ ಪ್ರಮುಖವಾಗಿದೆ ಕೃಷಿ ಅಧಿಕಾರಿಗಳು ಹಾಗೂ ಸಹಾಯಕ ಕೃಷಿ ಅಧಿಕಾರಿಗಳು ಕೃಷಿ ಉತ್ಪನ್ನಗಳ ಹೆಚ್ಚಳ ಹಾಗೂ ಉತ್ತಮ ಇಳುವರಿಯನ್ನು ಪಡೆಯಲು ರೈತರಿಗೆ ಸಹಕಾರ ನೀಡಿ ರೈತರಿಗೆ ತಾಂತ್ರಿಕ ಸಲಹೆಗಳನ್ನು ನೀಡುತ್ತಾರೆ. ಸರ್ಕಾರದ ಕೃಷಿ ಯೋಜನೆಗಳನ್ನು ಯಾವುದೇ ತೊಂದರೆಗಳಿಲ್ಲದೆ ಪರಿಣಾಮಕಾರಿಯಾಗಿ ಜಾರಿಗೊಳಿಸುವುದರಲ್ಲಿ ಈ ಅಧಿಕಾರಿಗಳ ಪಾತ್ರವು ಪ್ರಮುಖವಾಗಿದೆ

ಕೃಷಿ ವಿಜ್ಞಾನ ಕ್ಷೇತ್ರದಲ್ಲಿ ವಿದ್ಯಾಭ್ಯಾಸ ಮಾಡಿರುವ ಅಭ್ಯರ್ಥಿಗಳಿಗೆ ಈ ಅಧಿಕಾರಿ ಹುದ್ದೆಗಳು ಉತ್ತಮ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಳ್ಳಲು ಸಹಕರಿಸುತ್ತವೆ ಆಕರ್ಷಕ ವೇತನ ಸಮಾಜದಲ್ಲಿ ಉತ್ತಮ ಗೌರವ ತಮ್ಮ ಉದ್ಯೋಗಕ್ಕಿರುವ ಭದ್ರತೆ ಹಾಗೂ ರೈತರ ಸೇವೆ ಮಾಡುವ ಅವಕಾಶ ಇರುವ ಈ ಹುದ್ದೆಗಳಲ್ಲಿ ಸಾವಿರಾರು ಅಭ್ಯರ್ಥಿಗಳು ಈ ಹುದ್ದೆಗಳನ್ನು ಪಡೆಯಬೇಕೆಂಬ ಆಸೆಯನ್ನು ಹೊಂದಿರುತ್ತಾರೆ.

ಈ ಹುದ್ದೆಗಳನ್ನು ಗುರಿಯಾಗಿಸಿಕೊಂಡು ತಯಾರಿಯನ್ನು ಸಹ ನಡೆಸುತ್ತಾರೆ ಆದರೆ ಕೇವಲ ಪರೀಕ್ಷೆಯನ್ನು ಬರೆಯುವುದರಿಂದ ಯಶಸ್ಸು ಸಿಗುವುದಿಲ್ಲ ಪ್ರತಿಯಾಗಿ ಸರಿಯಾದ ವೃತ್ತಿ ಯೋಜನೆ ಕೌಶಲ್ಯಗಳ ಅಭಿವೃದ್ಧಿ ಹಾಗೂ ದೀರ್ಘಾವಧಿಯಲ್ಲಿ ಸಾಧಿಸಬೇಕಾದ ಗುರಿಗಳನ್ನು ನಿರ್ಧರಿಸುವುದು ಸತ್ಯವಾಗಿದೆ ಎಂಬುದನ್ನು  ತಿಳಿಸುತ್ತದೆ

ಕರ್ನಾಟಕ ಸರ್ಕಾರದ ಅಧಿಕೃತ ವೆಬ್‌ ಸೈಟ್‌ ಕರ್ನಾಟಕ ಕೃಷಿ ಇಲಾಖೆ
ಆನ್‌ ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಬಗ್ಗೆ ಮಾಹಿತಿ  ಅರ್ಜಿ ಸಲ್ಲಿಕೆ ಮಾಹಿತಿ
ಪರೀಕ್ಷಾ ಸಲಹೆಗಳನ್ನು ಪಡೆಯಿರಿ ಪರೀಕ್ಷಾ ಸಲಹೆಗಳ ಮಾಹಿತಿ
ನಮ್ಮ ವಾಟ್ಸಾಪ್‌ ಗ್ರೂಪ್‌ ಜಾಯಿನ್‌ ಆಗಲು ಇಲ್ಲಿ ಕ್ಲಿಕ್‌ ಮಾಡಿ
ಹೆಚ್ಚುವರಿ ಮಾಹಿತಿ  ನೇಮಕಾತಿ ಮಾಹಿತಿ    ಸರ್ಕಾರಿ ಯೋಜನೆಗಳ ಮಾಹಿತಿ

ಕರ್ನಾಟಕ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ವೃತ್ತಿ ಮಾರ್ಗದರ್ಶನ

1. ವೃತ್ತಿ ಮಾರ್ಗದರ್ಶನ ಎಂದರೆ ಏನು

ವೃತ್ತಿ ಮಾರ್ಗದರ್ಶನ ಎಂದರೆ ಒಬ್ಬ ವ್ಯಕ್ತಿಯ ಆಸಕ್ತಿ ಅವರ ಸಾಮರ್ಥ್ಯ, ಶೈಕ್ಷಣಿಕ ಅರ್ಹತೆ ಹಾಗೂ ಜೀವನದಲ್ಲಿ ಅವರಿಗಿರುವ ಗುರಿಗಳಿಗೆ ಅನುಗುಣವಾಗಿ ಸೂಕ್ತ ವೃತ್ತಿಯನ್ನು ಆಯ್ಕೆ ಮಾಡಲು ಹಾಗೂ ವೃತ್ತಿ ಜೀವನವನ್ನು ರೂಪಿಸಿಕೊಳ್ಳಲು ಸಹಾಯ ಮಾಡುವ ಪ್ರಕ್ರಿಯೆ ಆಗಿದೆ

ವೃತ್ತಿ ಯೋಜನೆಯ ಮಹತ್ವ
  • ಅಭ್ಯರ್ಥಿಗಳಿಗೆ ಸ್ಪಷ್ಟವಾದ ಗುರಿಗಳನ್ನು ನಿರ್ಧಾರ ಮಾಡಲು ಸಹಕರಿಸುತ್ತದೆ
  • ಜೀವನದ ಸಮಯ ಮತ್ತು ಶ್ರಮದ ವ್ಯತ್ಯಯವನ್ನು ಬಗ್ಗೆ ತಿಳಿದುಕೊಳ್ಳುವುದರಿಂದ ಕಡಿಮೆ ಮಾಡಿಕೊಳ್ಳಬಹುದು
  • ಶೈಕ್ಷಣಿಕ ವಿದ್ಯಾರ್ಹತೆಗೆ ತಕ್ಕಂತೆ ಸರಿಯಾದ ಹಾಗೂ ಹೊಂದುವಂತಹ ಉದ್ಯೋಗಾವಕಾಶಗಳನ್ನು ಗುರುತಿಸುವಲ್ಲಿನೆರವಾಗುತ್ತದೆ
  • ಸರ್ಕಾರಿ ಕೆಲಸಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸಿನ ಸಂಭವವನ್ನು  ಹೆಚ್ಚಿಸುತ್ತದೆ

Career Guidance ಬಗ್ಗೆ ತಿಳಿದುಕೊಳ್ಳುವುದರಿಂದ ಕೃಷಿ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿರುವವರಿಗೆ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳು ಅತ್ಯುತ್ತಮ ಸರ್ಕಾರಿ ವೃತ್ತಿಗಳಾಗಿವೆ. ರೈತರ ಜೊತೆಯಲ್ಲಿ ಪ್ರತಿನಿತ್ಯವೂ ಕೆಲಸ ಮಾಡುವುದರಿಂದ ರೈತರ ಕಷ್ಟಗಳು ಹಾಗೂ ಅವರ ಜೀವನವನ್ನು ಸುಧಾರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕೂಲಂಕುಶವಾಗಿ ತಿಳಿದುಕೊಂಡು ಅವರಿಗೆ ಸಹಾಯ ಮಾಡಬಹುದು

2. ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುವುದು

ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳಿಗೆ ಆಯ್ಕೆ ಆಗಬೇಕೆಂಬ ಗುರಿಯನ್ನು ಹೊಂದಿರುವ ಅಭ್ಯರ್ಥಿಗಳು ಮೊದಲು ತಮ್ಮನ್ನು ತಾವು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಬೇಕು. ಇದರಿಂದ ಹುದ್ದೆಯಲ್ಲಿರುವ ಆಸಕ್ತಿ ಹೊಂದಿರಬೇಕಾದ ಕೌಶಲ್ಯ ಹಾಗೂ ಇತರ ಮಾಹಿತಿಗಳನ್ನು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಬಹುದು.

Career Guidance ಮೂಲಕ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುವುದರಿಂದ ಆಗುವ ಲಾಭಗಳು
  • ಆಸಕ್ತಿಗಳ ಮನವರಿಕೆ
  • ಕೃಷಿ ಕ್ಷೇತ್ರ ಮತ್ತು ಗ್ರಾಮೀಣ ಅಭಿವೃದ್ಧಿಯಲ್ಲಿ ಆಸಕ್ತಿ ಹೊಂದುವುದು
  • ರೈತರೊಂದಿಗೆ ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸಕ್ತಿ
  • ಕೃಷಿ ಬೆಳೆಗಳು ವಾಣಿಜ್ಯ ಬೆಳೆಗಳು ಸಸ್ಯಗಳು ಮಣ್ಣು ಮತ್ತು ಆಧುನಿಕ ಕೃಷಿ ತಂತ್ರಜ್ಞಾನಗಳ ಬಗ್ಗೆ ಕುತೂಹಲವನ್ನು ಹೊಂದುವುದು
  • ಕೌಶಲ್ಯಗಳ ಮನವರಿಕೆ
  • ತಾಂತ್ರಿಕ ರೀತಿಯ ಕೃಷಿ ಜ್ಞಾನವನ್ನು ಮೌಲ್ಯಮಾಪನ ಮಾಡಿಕೊಳ್ಳುವುದು
  • ರೈತರ ಜೊತೆ ಮಾತನಾಡುವಂತಹ ಉತ್ತಮ ಸಂವಹನ ಕೌಶಲ್ಯದ ಮನವರಿಕೆ
  • ಕೃಷಿ ಯೋಜನೆಗಳ ಮತ್ತು ಬೆಳೆಗಳನ್ನು ಉತ್ತಮ ರೀತಿಯಲ್ಲಿ ಇಳುವರಿ ನೀಡುವಂತೆ ಕೈಗೊಳ್ಳುವ ವರದಿ ತಯಾರಿಸುವ ಸಾಮರ್ಥ್ಯಗಳು
  • ಕೃಷಿ ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಮೌಲ್ಯಮಾಪನ ಮಾಡಿಕೊಳ್ಳುವುದು

ಈ ಮೂಲಕ ಹುದ್ದೆಗಳಲ್ಲಿ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುವಾಗ ತಮ್ಮ ಸಾಮರ್ಥ್ಯಗಳು ಮತ್ತು ದುರ್ಬಲತೆಗಳನ್ನು ಗುರುತಿಸಿ ಅವುಗಳನ್ನು ಸುಧಾರಿಸಿಕೊಳ್ಳುವುದರ ಮೂಲಕ ಯಶಸ್ಸನ್ನು ಪಡೆಯುವ ಸಂಭವನೀಯತೆಯನ್ನು ಹೆಚ್ಚಿಸಬಹುದು ಅವುಗಳೆಂದರೆ ನಾಯಕತ್ವದ ಗುಣಗಳನ್ನು ಹೆಚ್ಚಿಸಿಕೊಳ್ಳುವುದು ಜವಾಬ್ದಾರಿತನವನ್ನು ರೂಡಿಸಿಕೊಳ್ಳುವುದು ಪ್ರಾಮಾಣಿಕತೆಯಿಂದ ಇರುವುದು ಸೇವಾ ಮನೋಭಾವವನ್ನು ಹೊಂದುವುದು ಆಗಿದೆ

ವೃತ್ತಿ ಸಾಮರ್ಥ್ಯ

ಕೃಷಿ ಕ್ಷೇತ್ರವು ಉತ್ಪಾದನಾ ವಲಯದಲ್ಲಿ ತೃತೀಯ ವಲಯವಾಗಿದ್ದು ಕೃಷಿಯ ಉತ್ಪಾದನೆಯನ್ನು ಹೆಚ್ಚಿಸುವುದು ಕೃಷಿ ಅಧಿಕಾರಿಗಳ ಪ್ರಾಥಮಿಕ ಜವಾಬ್ದಾರಿಯಾಗಿರುತ್ತದೆ ಅಂತೆಯೇ ಕೃಷಿ ವಿಜ್ಞಾನ ವಿಷಯಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದರ ಜೊತೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಭೂಮಿಗಳಲ್ಲಿ ರೈತರ ಜೊತೆ ಕೆಲಸ ಮಾಡಲು ಸಿದ್ಧತೆ ಅಗತ್ಯವಾಗಿರುತ್ತದೆ

3. ಗುರಿ ನಿರ್ಧಾರ ಮಾಡುವಿಕೆ

ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳನ್ನು ಯಶಸ್ವಿಯಾಗಿ ಪಡೆಯಲು ಈ ಗುರಿಗಳನ್ನು ಹೊಂದುವುದು ಅಗತ್ಯವಾಗಿದೆ ಗುರಿಗಳನ್ನು ಹೊಂದುವುದರಿಂದ ಉದ್ಯೋಗವನ್ನು ಪಡೆಯುವ ಸಂಭವನೀಯತೆಯನ್ನು ಹೆಚ್ಚಿಸಬಹುದು. ಈ ಹುದ್ದೆಗಳಲ್ಲಿ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುವುದು ಎಷ್ಟು ಪ್ರಮುಖವೋ ಹುದ್ದೆಗಳಲ್ಲಿನ ಗುರಿ ನಿರ್ಧಾರಗಳನ್ನು ನಿರ್ಧರಿಸುವದೂ ಸಹ ಅಷ್ಟೇ ಪ್ರಮುಖವಾಗಿರುತ್ತದೆ ಯಶಸ್ವಿ ಕೃಷಿ ಅಧಿಕಾರಿಯಾಗಲು ಈ ಕೆಳಕಂಡ ಗುರಿಗಳನ್ನು ನಿರ್ಧರಿಸುವುದು ಅತ್ಯಗತ್ಯ

ಅಲ್ಪಾವಧಿ ಗುರಿಗಳು
  • ಪರೀಕ್ಷೆಯ ಪಠ್ಯಕ್ರಮವನ್ನು ಪೂರ್ಣವಾಗಿ ಅರ್ಥ ಮಾಡಿಕೊಂಡು ಪೂರ್ಣಗೊಳಿಸುವುದು
  • ಪ್ರತಿದಿನ ಅಧ್ಯಯನ ಮಾಡುವುದು ಹಾಗೂ ಅಧ್ಯಯನದ ಸಮಯವನ್ನು ಹೆಚ್ಚಿಸಿಕೊಳ್ಳುವುದು
  • ಹೆಚ್ಚಾಗಿ ಮಾಕ್ ಟೆಸ್ಟ್ ಗಳನ್ನು ಬರೆಯುವುದು ಇದರಿಂದ ಸಮಯ ನಿರ್ವಹಣೆ ಮತ್ತು ಪ್ರಶ್ನೆಗಳ ರೂಪುರೇಷೆ ತಿಳಿಯುತ್ತದೆ
ದೀರ್ಘಾವಧಿ ಗುರಿಗಳು
  • ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳನ್ನು ಪಡೆಯಲೇಬೇಕೆಂಬ ಗುರಿ ಹೊಂದುವುದು
  • ಕೃಷಿ ಇಲಾಖೆಯಲ್ಲಿ ಉನ್ನತ ಹುದ್ದೆಗಳಿಗೆ ಪದೊನ್ನತಿ ಹೊಂದುವ ಗುರಿಯನ್ನು ಹೊಂದುವುದು
  • ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಉತ್ತಮ ತಜ್ಞರಾಗುವುದು
  • ಗುರಿಗಳನ್ನು ಹೊಂದುವುದು ಸ್ಮಾರ್ಟ್ ಆಗಿದೆ ಅಂದರೆ Specific, Measerable, Achievable And  Relevant Time Bound
 ಕೆರಿಯರ್ ರೋಡ್ ಮ್ಯಾಪ್ ಅಥವಾ ವೃತ್ತಿ ಬೆಳವಣಿಗೆ ಅವಕಾಶಗಳು

ವಿಜ್ಞಾನ ವಿಷಯದಲ್ಲಿ ಅಥವಾ ಕೃಷಿ ಕ್ಷೇತ್ರದಲ್ಲಿ ಪದವಿಯನ್ನು ಪೂರ್ಣಗೊಳಿಸಿದ ನಂತರ ಕೃಷಿ ಮತ್ತು ಸಹಾಯಕ ಕೃಷಿ ಅಧಿಕಾರಿಗಳ ಹುದ್ದೆಗೆ ಉತ್ತಮ ರೀತಿಯಲ್ಲಿ ತಯಾರಿಯನ್ನು ನಡೆಸಿ ಹುದ್ದೆಗಳಿಗೆ ಆಯ್ಕೆಗೊಂಡು ಉತ್ತಮವಾದ ಅನುಭವಗಳಿಕೆ ಹಾಗೂ ಸೇವಾ ಅವಧಿಯನ್ನು ಪೂರೈಸಿದ ನಂತರ ಹಿರಿಯ ಹುದ್ದೆಗಳಿಗೆ ಭರ್ತಿ ಪಡೆದು ವೇತನ ಮಟ್ಟಗಳಲ್ಲಿ ಹೆಚ್ಚಳವನ್ನು ಪಡೆಯುವುದು ಹಾಗೂ ಅಧಿಕಾರದ ವ್ಯಾಪ್ತಿಯನ್ನು ಹೆಚ್ಚಿಸುವಂತಹ ಹುದ್ದೆಗಳಿಗೆ ಪದೋನ್ನತಿ ಹೊಂದುವುದು ಆಗಿದೆ

4. ಪಡೆಯಬೇಕಾದ ಶಿಕ್ಷಣ ಮತ್ತು ಆಯ್ಕೆ ಮಾಡಬೇಕಾದ ಅರ್ಹತೆಗಳು

ಸಂಬಂಧಿತ ಕೊರ್ಸಿನ ಆಯ್ಕೆ

ಈ ಹುದ್ದೆಗಳನ್ನು ಪಡೆಯಬೇಕೆಂಬ ಅಭ್ಯರ್ಥಿಗಳು ಕೃಷಿ ಕ್ಷೇತ್ರದಲ್ಲಿ ಅಧ್ಯಯನವನ್ನು ಮಾಡಬೇಕಾಗುತ್ತದೆ ಕೃಷಿ ಸಂಬಂಧಿತ ಶಿಕ್ಷಣ ಪದ್ಧತಿಯನ್ನು ಅನುಸರಿಸುವುದು ಅತ್ಯಂತವಾಗಿದೆ ಅವುಗಳೆಂದರೆ ಬಿಎಸ್ಸಿ ಅಗ್ರಿಕಲ್ಚರ್, ಬಿ ಟೆಕ್ ಅಗ್ರಿಕಲ್ಚರ್ ಇಂಜಿನಿಯರಿಂಗ್, ಅಗ್ರಿಕಲ್ಚರಲ್ ಡಿಪ್ಲೋಮಾ ಮುಂತಾದ ಕೋರ್ಸುಗಳನ್ನು ಆಯ್ಕೆ ಮಾಡಿಕೊಂಡು ವಿದ್ಯಾರ್ಹತೆಯನ್ನು ಪೂರ್ಣಗೊಳಿಸಬೇಕಾಗುತ್ತದೆ.

ಪದವಿ ಕೋರ್ಸುಗಳನ್ನು ಮಾಡುವುದರಿಂದ ಹೆಚ್ಚಿನ ಉದ್ಯೋಗಾವಕಾಶಗಳನ್ನು ಹಾಗೂ ಭಡ್ತಿ ಸೌಲಭ್ಯಗಳನ್ನು ಪಡೆಯಬಹುದು ಆದರೆ ಡಿಪ್ಲೋಮಾ ಕೋರ್ಸ್ ಗಳನ್ನು ಮಾಡುವ ಅಭ್ಯರ್ಥಿಗಳಿಗೆ ಕೆಲವು ತಾಂತ್ರಿಕ ಹುದ್ದೆಗಳಲ್ಲಿ ಮಾತ್ರ ಅವಕಾಶ ದೊರೆಯಬಹುದು ಮತ್ತು ಅವಕಾಶಗಳು ಕಡಿಮೆ ಇರುತ್ತದೆ

ವೃತ್ತಿಪರ ವಿಷಯಗಳಲ್ಲಿ ಪ್ರಮಾಣ ಪತ್ರಗಳನ್ನು ಹೊಂದುವುದು : ಕೃಷಿ ಕ್ಷೇತ್ರದಲ್ಲಿನ ಕೌಶಲ್ಯಗಳು ಉತ್ತಮ ಜ್ಞಾನ ಹಾಗೂ ಉದ್ಯೋಗಾವಕಾಶವನ್ನು ಹೆಚ್ಚಿಸುವಂತಹ ಅಧಿಕೃತ ತರಬೇತಿಗಳ ಪ್ರಮಾಣ ಪತ್ರಗಳನ್ನು ಹೊಂದುವುದರಿಂದ ಹುದ್ದೆಯನ್ನು ಪಡೆಯಲು ಸಹಾಯವಾಗುತ್ತದೆ ಅವುಗಳೆಂದರೆ

ಆರ್ಗನಿಕ್ ಫಾರ್ಮಿಂಗ್ ಸಾವಯುವ ಕೃಷಿ : ರಾಸಾಯನಿಕ ಗೊಬ್ಬರಗಳನ್ನು ಬಳಸದೆ ನೈಸರ್ಗಿಕವಾಗಿ ದೊರೆಯುವ ಗೊಬ್ಬರ ಬೀಜ ಹಾಗೂ ಬಿತ್ತನೆ ಪದ್ಧತಿಗಳನ್ನು ಬಳಸಿ ಬೆಳೆ ಬೆಳೆಯುವ ಕೃಷಿ ಪದ್ಧತಿಗಳು

ಪ್ರಿಸಿಶನ್ ಅಗ್ರಿಕಲ್ಚರ್ ಅಂದರೆ ನಿಖರ ಕೃಷಿ : ಉತ್ತಮ ತಂತ್ರಜ್ಞಾನವನ್ನು ಬಳಸಿ ಸಂಪನ್ಮೂಲಗಳನ್ನು ಪರಿಣಾಮಕಾರಿಯಾಗಿ ನಿಯೋಜಿಸಿ ನಿಖರವಾಗಿ ಕೃಷಿ ಪದ್ಧತಿಯನ್ನು ನಿರ್ವಹಿಸುವ ವಿಧಾನ

ಜಿ ಐ ಎಸ್ ಅಪ್ಲಿಕೇಶನ್ ಗಳು : ಪ್ರದೇಶದ ಭೌಗೋಳಿಕ ಮಾಹಿತಿಯನ್ನು ಅರ್ಥ ಮಾಡಿಕೊಂಡು ವಿಶ್ಲೇಷಿಸಿ ಅದಕ್ಕೆ ತಕ್ಕಂತಹ ಕೃಷಿ ಯೋಜನೆಯನ್ನು ಮತ್ತು ಕೃಷಿ ಪದ್ಧತಿಯನ್ನು ರೂಪಿಸುವ ತಂತ್ರಜ್ಞಾನ

ಅಗ್ರಿಕಲ್ಚರಲ್ ಮಾರ್ಕೆಟಿಂಗ್ ಕೃಷಿ ಮಾರುಕಟ್ಟೆ : ಕೃಷಿ ಉತ್ಪನ್ನಗಳನ್ನು ಉತ್ಪಾದನೆ ಮಾಡಿದ ನಂತರ ಅವುಗಳನ್ನು ಪರಿಣಾಮಕಾರಿಯಾಗಿ ಮಾರಾಟ ಮಾಡುವುದು ಬೆಂಬಲ ಬೆಲೆಯನ್ನು ನಿಗದಿ ಮಾಡುವುದು ವಿತರಣೆ ಪ್ರಕ್ರಿಯೆಯನ್ನು ಚುರುಕುಗೊಳಿಸುವುದು

ಕೃಷಿ ಕ್ಷೇತ್ರದಲ್ಲಿ ಸೈದ್ದಾಂತಿಕ ಜ್ಞಾನದ ಜೊತೆಯಲ್ಲಿ ಪ್ರಾಯೋಗಿಕ ಕೌಶಲ್ಯಗಳು ಸಹ ಪ್ರಮುಖ ಪಾತ್ರ ವಹಿಸುತ್ತವೆ ಸೈದ್ದಾಂತಿಕ ವಿಷಯಗಳು ಜ್ಞಾನದ ಹೆಚ್ಚಳಕ್ಕೆ ಕಾರಣವಾದರೆ ಪ್ರಾಯೋಗಿಕ ಕೌಶಲ್ಯಗಳು ಇಂದಿನ ಪ್ರಪಂಚದಲ್ಲಿ ಬೇಡಿಕೆ ಪೂರೈಕೆ ಹಾಗೂ ಉತ್ಪಾದನಾ ಚಟುವಟಿಕೆಗಳು ಹೇಗೆ ನಡೆಯುತ್ತವೆ ಎಂಬುದು ಪ್ರಾಯೋಗಿಕ ಕೌಶಲ್ಯಗಳ ಮೂಲಕ ಮಾತ್ರ ತಿಳಿಯುತ್ತದೆ

5. ಉತ್ತಮ ಕೌಶಲ್ಯ ಅಭಿವೃದ್ಧಿ ಮಾಡಿಕೊಳ್ಳುವುದು

ಈ ಹುದ್ದೆಗಳನ್ನು ಪಡೆಯುವುದರ ಜೊತೆಯಲ್ಲಿ ಹುದ್ದೆಗೆ ಅವಶ್ಯಕವಿರುವ ಕೌಶಲ್ಯಗಳನ್ನು ಹೊಂದುವುದು ಮತ್ತು ದಿನದಿಂದ ದಿನಕ್ಕೆ ಅವುಗಳನ್ನು ಅಭಿವೃದ್ಧಿ ಮಾಡಿಕೊಳ್ಳುವುದು ತುಂಬಾ ಅವಶ್ಯಕವಾಗಿದೆ ಅವುಗಳೆಂದರೆ

 ರೈತ ಸ್ನೇಹಿ ಸಂವಹನ ಕೌಶಲ್ಯ : ರೈತರಿಗೆ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುವ ಉತ್ತಮ ಗುಣಮಟ್ಟದ ತಾಂತ್ರಿಕ ಮಾಹಿತಿಯನ್ನು ಸರಳವಾಗಿ ಅವರಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸುವ ಉತ್ತಮ ಸಂವಹನ ಕೌಶಲ್ಯ ಜ್ಞಾನವನ್ನು ಹೊಂದಬೇಕು

ನಾಯಕತ್ವದ ಗುಣ : ಸರ್ಕಾರವು ಪ್ರಾರಂಭಿಸುವ ಹಾಗೂ ಪ್ರಸ್ತುತ ಇರುವ ಕೃಷಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲು ಮತ್ತು ಮೇಲ್ವಿಚಾರಣೆ ಮತ್ತು ನಿರ್ವಹಣೆ ಮಾಡಲು ಉತ್ತಮ ನಾಯಕತ್ವ ಗುಣವನ್ನು ಹೊಂದಬೇಕು

ಸಮಸ್ಯೆಗೆ ಪರಿಹಾರವನ್ನು ಕಲ್ಪಿಸುವ ಕೌಶಲ್ಯ : ಕೃಷಿ ಬೆಳವಣಿಗೆ ಬರಬಹುದಾದ ರೋಗಗಳು ಕೀಟಗಳ ಸಮಸ್ಯೆಗಳು ಹಾಗೂ ಮಣ್ಣಿನ ಗುಣಮಟ್ಟದಲ್ಲಿ ಆಗುವ ಏರುಪೇರು ಸಮಸ್ಯೆಗಳನ್ನು ಕೂಲಂಕುಶವಾಗಿ ತ್ವರಿತ ಗತಿಯಲ್ಲಿ ಪರಿಶೀಲಿಸಿ ಪರಿಹಾರವನ್ನು ನೀಡುವ ಹಾಗೂ ಸೂಚಿಸುವ ಸಾಮರ್ಥ್ಯವನ್ನು ಹೊಂದಿರಬೇಕು

 ಸಮಯ ನಿರ್ವಹಣಾ ಕೌಶಲ್ಯ :  ಈ ಎಲ್ಲಾ ಕೌಶಲ್ಯಗಳನ್ನು ಇರುವ ಕಡಿಮೆ ಮತ್ತು ಪರಿಣಾಮಾತ್ಮಕ ಸಮಯದಲ್ಲಿ ನಿರ್ವಹಣೆ ಮಾಡಬೇಕಾಗುತ್ತದೆ ಕ್ಷೇತ್ರಗಳಿಗೆ ಭೇಟಿ ನೀಡುವುದು ವರದಿಗಳನ್ನು ಸಿದ್ಧಪಡಿಸುವುದು ಮತ್ತು ಆಡಳಿತಾತ್ಮಕ ಕಾರ್ಯಗಳನ್ನು ಉತ್ತಮ ರೀತಿಯಲ್ಲಿ ಸಮರ್ಥವಾಗಿ ನಿರ್ವಹಿಸುವ ಕೌಶಲ್ಯವನ್ನು ಹೊಂದಿರಬೇಕು

ಡಿಜಿಟಲ್ ಕೌಶಲ್ಯಗಳ ಪ್ರಾಮುಖ್ಯತೆ : ಈ ಹುದ್ದೆಗಳಲ್ಲಿ ಕಂಪ್ಯೂಟರ್ ಜ್ಞಾನವು ಅಗತ್ಯವಾಗಿರುವುದರಿಂದ ಸಾಮಾನ್ಯ ಕಂಪ್ಯೂಟರ್ ಜ್ಞಾನವನ್ನು ಹೊಂದುವುದು ಅವಶ್ಯಕವಾಗಿದೆ ಏಕೆಂದರೆ ವರದಿಗಳನ್ನು ತಯಾರಿಸಲು ಟೈಪಿಂಗ್ ಮಾಡುವುದು, ಕೃಷಿ ಪೋರ್ಟಲ್ ಗಳಲ್ಲಿ ಮಾಹಿತಿಯನ್ನು ತುಂಬಲು ಮೊಬೈಲ್ ಅಪ್ಲಿಕೇಶನ್ ಗಳಲ್ಲಿ ಮಾಹಿತಿಯನ್ನು ಸೇರಿಸಲು ಹಾಗೂ ಪೋರ್ಟಲ್ ಗಳಲ್ಲಿ ಡಿಜಿಟಲ್ ದಾಖಲೆಗಳನ್ನು ನಿರ್ವಹಿಸಲು ಡಿಜಿಟಲ್ ಕೌಶಲ್ಯಗಳು ಅಗತ್ಯವಾಗಿದೆ ಆದದರಿಂದ ಪರೀಕ್ಷಾ ತಯಾರಿಯಲ್ಲಿ ಕಂಪ್ಯೂಟರ್ ಜ್ಞಾನಕ್ಕೆ ಸಂಬಂಧಿಸಿ ದಂತಹ ಪ್ರಶ್ನೆಗಳು ಹಾಗೂ ಅಧ್ಯಯನವನ್ನು ಮಾಡಲೇಬೇಕು

6. ಉದ್ಯೋಗಾವಕಾಶಗಳನ್ನು ಹುಡುಕುವುದು

ಕೃಷಿ ಕ್ಷೇತ್ರದಲ್ಲಿ ಶಿಕ್ಷಣವನ್ನು ಪಡೆದ ನಂತರ ಯಾವ ಯಾವ ಸರ್ಕಾರಿ ಅಥವಾ ಖಾಸಗಿ ಅಥವಾ ಸ್ಟಾರ್ಟಪ್ ಅವಕಾಶಗಳನ್ನು ನಾವು ಪಡೆದುಕೊಳ್ಳಬಹುದು ಎಂದು Career Guidance ಮೂಲಕ ಈ ಕೆಳಗಡೆ ನೀಡಲಾಗಿದೆ

 Government Sector
  • ಕೃಷಿ ಇಲಾಖೆಯಲ್ಲಿ ಹುದ್ದೆಗಳನ್ನು ಪಡೆಯಬಹುದು
  • ತೋಟಗಾರಿಕೆ ಇಲಾಖೆಯಲ್ಲಿ ಹುದ್ದೆಗಳನ್ನು ಪಡೆಯಬಹುದು
  • ನೊಂದಾವಣಿ ಗೊಂಡಿರುವ ರಾಜ್ಯ ಹಾಗೂ ರಾಷ್ಟ್ರ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಹುದ್ದೆಗಳನ್ನು ಹೊಂದಬಹುದು
  • ಕೃಷಿ ಸಂಶೋಧನೆ ಮತ್ತು ಕೃಷಿ ವೈಜ್ಞಾನಿಕ ಸಂಸ್ಥೆಗಳಲ್ಲಿ ಹುದ್ದೆಗಳನ್ನು ಪಡೆಯಬಹುದು
 Private Sector
  • ಬಿತ್ತನೆ ಬೀಜ ಉತ್ಪನ್ನ ಕಂಪನಿಗಳಲ್ಲಿ ಕೆಲಸಗಳು
  • ಕೃಷಿ ಚಟುವಟಿಕೆಗಳಲ್ಲಿ ಸಿಂಪಡಿಸುವ ರಸಗೊಬ್ಬರ ಕಂಪನಿಗಳು
  • ಕೀಟಗಳ ನಿರ್ವಹಣೆಗೆ ಉತ್ಪಾದಿಸುವ ಕೀಟನಾಶಕಗಳ ಸಂಸ್ಥೆಗಳು
  • ಕೃಷಿ ವಲಯದ ಸಲಹಾ ಸಂಸ್ಥೆಗಳು
  1. ಕೃಷಿ ಕ್ಷೇತ್ರದಲ್ಲಿ ಶಿಕ್ಷಣವನ್ನು ಪಡೆಯುವುದರಿಂದ ಸ್ಟಾರ್ಟ್‌ ಅಪ್ ಅವಕಾಶಗಳನ್ನು ಸಹ ಸೃಷ್ಟಿಸಬಹುದು ಕೃಷಿ ಕ್ಷೇತ್ರದಲ್ಲಿ ಹೊಸ ಉದ್ಯಮಗಳು ಈ ಸ್ಟಾರ್ಟ್ ಅಪ್ ಮೂಲಕವೇ ಪರಿಣಾಮಕಾರಿಯಾಗಿ ಬೆಳೆಯುತ್ತಿರುವುದು‌
  2. ಕೃಷಿ ಪದ್ಧತಿಯ ಸಲಹೆಗಳನ್ನು ನೀಡುವುದು ತರಬೇತಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವುದು ಕೃಷಿ ವಿಚಾರಗಳಲ್ಲಿ ಸಾಧಕರ ಹಾಗೂ ಇತರ ಉತ್ತಮ ಕೌಶಲ್ಯಗಳ ಬಗ್ಗೆ ಬರವಣಿಗೆಗಳನ್ನು ಬರೆಯುವುದು
  3. ಸಾವಯುವ ಕೃಷಿ ಮಾಡುವುದು ನರ್ಸರಿಗಳ ನಿರ್ವಹಣೆ ಉತ್ಪಾದಿಸಿದ ಕೃಷಿ ಉತ್ಪನ್ನಗಳ ಉತ್ತಮ ರೀತಿಯ ಸಂಸ್ಕರಣೆ ಹಾಗೂ ಕೃಷಿ ಕ್ಷೇತ್ರದ ಇ ಕಾಮರ್ಸ್ ಉದ್ಯಮಶೀಲತೆಗಳನ್ನು ಸಹ ಆರಂಭಿಸಬಹುದು

7. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪರಿಣಾಮಕಾರಿಯಾಗಿ ತಯಾರಿ ಮಾಡುವುದು ಹೇಗೆ

  • ಅಧ್ಯಯನದ ಯೋಜನೆಯನ್ನು ರೂಪಿಸುವುದು
  • ನಾವು ಮಾಡುವ ಪರೀಕ್ಷಾ ತಯಾರಿಯೂ ಪರಿಣಾಮಕಾರಿಯಾಗಿ ಇರಬೇಕೆಂದರೆ ದೈನಂದಿನ ಓದುವುದಕ್ಕೆ ವೇಳಾಪಟ್ಟಿಯನ್ನು ರೂಪಿಸಿಕೊಳ್ಳಬೇಕು
  • ಸಿಲಬಸ್ ಅನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡು ವಿಷಯವಾರು ಸಮಯದ ಹಂಚಿಕೆಯನ್ನು ಮಾಡಬೇಕು
  • ಪರೀಕ್ಷ ಸಮಯದಲ್ಲಿ ಅಂದುಕೊಂಡ ಸಮಯದಲ್ಲಿ ಓದಬೇಕಾದ ಗುರಿಯನ್ನು ಮುಟ್ಟಲು ವಾರದ ಗುರಿಗಳನ್ನು ನಿಗದಿಪಡಿಸಿಕೊಳ್ಳಿ
  • ಪ್ರತಿ ವಿಷಯಕ್ಕೂ ನಿರ್ದಿಷ್ಟ ಸಮಯವನ್ನು ಮೀಸಲಿಡಿ. ನಿರ್ದಿಷ್ಟ ಸಮಯದಲ್ಲಿ ಪರೀಕ್ಷಾ ತಯಾರಿ ಮಾಡುವುದರಿಂದ ಸಮಯಪ್ರಜ್ಞೆ ಹೆಚ್ಚುತ್ತದೆ ಹಾಗೂ ಕಡಿಮೆ ಸಮಯದಲ್ಲಿ ಹೆಚ್ಚು ವಿಷಯಗಳನ್ನು ಓದಿ ತಿಳಿದುಕೊಳ್ಳಬಹುದು
  • ಪ್ರತಿನಿತ್ಯ ಮಾಕ್ ಟೆಸ್ಟ್ ಗಳನ್ನು ತೆಗೆದುಕೊಳ್ಳುವುದರಿಂದ ಪರೀಕ್ಷೆ ಭಯ ಕಡಿಮೆಯಾಗುವುದರ ಜೊತೆಯಲ್ಲಿ ಉತ್ತರ ನೀಡುವ ವೇಗವು ಹೆಚ್ಚುತ್ತದೆ ಮತ್ತು ತಾವು ತಯಾರಿ ಪ್ರಕ್ರಿಯೆಯಲ್ಲಿ ಮಾಡಬಹುದಾದ ತಪ್ಪುಗಳನ್ನು ಗುರುತಿಸಲು ಸಹಾಯ ಮಾಡುತ್ತದೆ
  • ವಾರಂತ್ಯದಲ್ಲಿ ರಿವಿಶನ್ ಮಾಡುವುದನ್ನು ಮರೆಯಬೇಡಿ ಏಕೆಂದರೆ ವಾರದ ಕೊನೆಯಲ್ಲಿ ಮಾಡುವ ರಿವಿಜನ್ ಹವ್ಯಾಸವು ಆ ವಾರದಲ್ಲಿ ಓದಿರುವ ವಿಚಾರಧಾರೆಗಳನ್ನು ಹಾಗೂ ಸೂತ್ರಗಳನ್ನು ಸುಲಭವಾಗಿ ಗಮನದಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ ಇದರ ಜೊತೆಯಲ್ಲಿ ಮಾಡುವಾಗ ನೀವು ಬರೆಯುವ ಶಾರ್ಟ್ ನೋಟ್ ಗಳನ್ನು ತಯಾರಿ ಮಾಡಿ
  • ಪ್ರಚಲಿತ ಘಟನೆಗಳಿಗೆ ಹೆಚ್ಚಿನ ಗಮನವನ್ನು ನೀಡಿ ಏಕೆಂದರೆ ಯಾವುದೇ ಪರೀಕ್ಷೆಗಳಲ್ಲಿ ಪ್ರಚಲಿತ ವಿದ್ಯಮಾನಗಳು ಹಾಗೂ ಪ್ರಚಲಿತದ ಘಟನೆಗಳ ಬಗ್ಗೆ ಪ್ರಶ್ನೆಗಳನ್ನು ಹೆಚ್ಚಾಗಿ ಕೇಳಲಾಗುತ್ತದೆ ವಿಶೇಷವಾಗಿ ಈ ಹುದ್ದೆಗಳಿಗೆ ಕರ್ನಾಟಕದ ಕೃಷಿ ಯೋಜನೆಗಳ ಮಾಹಿತಿಗಳು
  • ರೈತರ ಹಿತದೃಷ್ಟಿ ಕಾಪಾಡಲು ಸರ್ಕಾರವು ತಂದ ರೈತ ಕಲ್ಯಾಣ ಕಾರ್ಯಕ್ರಮಗಳು
  • ಉತ್ತಮ ಇಳುವರಿಯನ್ನು ಪಡೆಯಲು ಕಡಿಮೆ ವೆಚ್ಚದಿಂದ ಹೆಚ್ಚು ಲಾಭವನ್ನು ಪಡೆಯಲು ಕೃಷಿ ಕ್ಷೇತ್ರದಲ್ಲಿ ತರುವಂತಹ ತಂತ್ರಜ್ಞಾನ ಪದ್ಧತಿಯ ಅಳವಡಿಕೆ
  • ಕೃಷಿ ಕ್ಷೇತ್ರದ ಮೇಲಿನ ಹವಮಾನ ವೈಪರಿತ್ಯ ಹಾಗೂ ಅವಮಾನ ಬದಲಾವಣೆಗಳು
  • ಕೃಷಿ ಮಾರುಕಟ್ಟೆಗೆ ಸಂಬಂಧಿಸಿದ ಇತಿಹಾಸ ಮತ್ತು ಇತ್ತೀಚಿನ ಸುಧಾರಣೆಗಳು
ಪರೀಕ್ಷಾ ತಯಾರಿಗೆ ಸಹಾಯವಾಗುವ ಪುಸ್ತಕಗಳು : 
ವಿಷಯ ಓದಬೇಕಾದ ಪುಸ್ತಕ
Agronomy ವಿಷಯಗಳು Fundamentals of Agronomy
Soil Science ವಿಷಯಗಳು Introductory Soil Science
Horticulture Related ವಿಚಾರಗಳು Principles of Horticulture
  • ಅರುಣ್ ಕಾತ್ಯಾಯನ್ಕೃಷಿಯ ಮೂಲಭೂತ ಅಂಶಗಳು ಪುಸ್ತಕ (ಸಂಪುಟ 1 & 2)
  • ನೇಮ್ ರಾಜ್ ಸುಂದ – ಸಾಮಾನ್ಯ ಕೃಷಿ ಪುಸ್ತಕ
  • ಟಿ.ವೈ. ರೆಡ್ಡಿ ಮತ್ತು ಜಿ.ಎಚ್. ​​ಶಂಕರ ರೆಡ್ಡಿಕೃಷಿ ವಿಜ್ಞಾನದ ತತ್ವಗಳು ಪುಸ್ತಕ [1]

 

8. Resume ಮತ್ತು ಉದ್ಯೋಗದ ಅರ್ಜಿ ಸಲ್ಲಿಕೆಗೆ ತಯಾರಿ ನಡೆಸುವುದು

  • ತಾವು ಯಾವುದೇ ಉದ್ಯೋಗಕ್ಕೆ ಅರ್ಜಿ ಹಾಕುವ ಮುನ್ನ ನಿಮ್ಮ ರೆಸ್ಯೂಮ್ ಅನ್ನು ಸಿದ್ಧ ಮಾಡಿಟ್ಟುಕೊಳ್ಳುವುದು ಒಳ್ಳೆಯದು. ಈ ರೆಸ್ಯೂಮ್ ನಲ್ಲಿ ವೈಯಕ್ತಿಕ ವಿವರಗಳು ಶೈಕ್ಷಣಿಕ ವಿದ್ಯಾರ್ಥಿ ಇರುವ ಕೌಶಲ್ಯಗಳು ಪ್ರಮಾಣ ಪತ್ರಗಳು ಹಾಗೂ ಕಂಪ್ಯೂಟರ್ ಜ್ಞಾನಕ್ಕೆ ಸಂಬಂಧಿಸಿದೆ ಎಲ್ಲಾ ಮಾಹಿತಿಗಳನ್ನು ಇದರಲ್ಲಿ ನಿರ್ದಿಷ್ಟವಾಗಿ ನಮೂದಿಸಿ ಇದರ ಜೊತೆಯಲ್ಲಿ ನಿಮ್ಮ ಆಸಕ್ತಿಗಳು ಹಾಗೂ ಸಾಮರ್ಥ್ಯವನ್ನು ವಿವರಿಸಿದರೆ ರೆಸ್ಯೂಮ್‌ ನ ಗುಣಮಟ್ಟ ಹೆಚ್ಚುತ್ತದೆ
  • ಆನ್ಲೈನ್ ಅರ್ಜಿಯನ್ನು ತುಂಬುವ ಮುನ್ನ ಎಲ್ಲ ವಿವರಗಳನ್ನು ಓದಿ ಅರ್ಥೈಸಿಕೊಂಡ ನಂತರವೇ ಅರ್ಜಿಯನ್ನು ಸಲ್ಲಿಸಿ ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ದಾಖಲೆಗಳನ್ನು ಪರಿಶೀಲಿಸುವುದು ವಿವರಗಳನ್ನು ಸರಿಯಾಗಿ ನಮೂದಿಸುವುದು ಫೋಟೋ ಹಾಗೂ ಸಹಿಯನ್ನು ಸರಿಯಾದ ರೀತಿಯಲ್ಲಿ ಅಪ್ಲೋಡ್ ಮಾಡುವುದು ಗಮನದಲ್ಲಿರಬೇಕು
  • ವೃತ್ತಿಪರ ಆನ್ಲೈನ್ ಪ್ರೊಫೈಲ್ ನಿರ್ಮಿಸುವುದು ಉದ್ಯೋಗಾವಕಾಶಗಳನ್ನು ಹೆಚ್ಚಿನ ಮಟ್ಟದಲ್ಲಿ ತೆರೆಯುತ್ತದೆ ಭವಿಷ್ಯದಲ್ಲಿ ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳನ್ನು ಶೈಕ್ಷಣಿಕ ಅರ್ಹತೆ ಹಾಗೂ ಕೌಶಲ್ಯದ ಆಧಾರದ ಮೇಲೆ ಪಡೆಯಲು  ಸಹಕರಿಸುತ್ತದೆ
ಅರ್ಜಿ ಸಲ್ಲಿಸುವಾಗ ಮಾಡುವ ಸಾಮಾನ್ಯ ತಪ್ಪುಗಳು
  • ತಪ್ಪಾದ ಅಥವಾ ಸರಿಯಲ್ಲದ ಮಾಹಿತಿಯನ್ನು ನಮೂದಿಸುವುದು
  • ತಪ್ಪು ದಾಖಲೆಗಳನ್ನು ಅಪ್ಲೋಡ್ ಮಾಡುವುದು ಅಥವಾ ದಾಖಲೆಗಳನ್ನು ಅಪ್ಲೋಡ್ ಮಾಡದೇ ಇರುವುದು
  • ಕೊನೆಯ ದಿನಾಂಕದವರೆಗೂ ಕಾದು ನಂತರ ಅರ್ಜಿಯನ್ನು ಸಲ್ಲಿಸುವುದು, ಸರ್ವರ ಸಮಸ್ಯೆ ಎದುರಾದರೆ ಅರ್ಜಿ ಸಲ್ಲಿಕೆ ಕಷ್ಟವಾಗಬಹುದು
  • ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಳ್ಳದೇ ಅರ್ಜಿ ಸಲ್ಲಿಸುವುದು

9. ಸಂದರ್ಶನದಲ್ಲಿ ಇರಬೇಕಾದ ಪ್ರಮುಖ ಕೌಶಲ್ಯಗಳು

Self Introduction : ಸಂದರ್ಶನದಲ್ಲಿ ಮೊದಲು ಕೇಳಲಾಗುವ ಸೆಲ್ಫ್ ಇಂಟ್ರೊಡಕ್ಷನ್ ಅನ್ನು ಆತ್ಮವಿಶ್ವಾಸದಿಂದ ಮತ್ತು ಉತ್ಸಾಹದಿಂದ ನೀಡಬೇಕು ಇಲ್ಲಿ ನಿಮ್ಮ ಮುಖಭಾವ ಹಾಗೂ ನಿಮ್ಮ ವೈಯಕ್ತಿಕ ನಡತೆಯನ್ನು ಪರೀಕ್ಷಿಸಲಾಗುತ್ತದೆ

Body Language : 

  • ಕಣ್ಣಿನ ಸಂಪರ್ಕವನ್ನು ಸಾಧಿಸಬೇಕು
  • ಸರಿಯಾದ ಬಂಗಿಯಲ್ಲಿ ಕುಳಿತುಕೊಳ್ಳಬೇಕು
  • ನಿಮ್ಮ ಮಾತಿನಲ್ಲಿ ಹಾಗೂ ಚಟುವಟಿಕೆಗಳಲ್ಲಿ ಆತ್ಮವಿಶ್ವಾಸವು ಪೂರ್ಣವಾಗಿರಬೇಕು
ಸಂದರ್ಶನದಲ್ಲಿ ಕೇಳಲಾಗುವ ಸಾಮಾನ್ಯ ಪ್ರಶ್ನೆಗಳು
  • ನೀವು ಕೃಷಿ ಅಧಿಕಾರಿಯಾಗಲು ಏಕೆ ಬಯಸುತ್ತೀರಾ?
  • ರೈತರಿಗೆ ಎದುರಾಗುವ ಸಮಸ್ಯೆಗಳನ್ನು ಹೇಗೆ ಯಾವ ರೀತಿ ಪರಿಹರಿಸುತ್ತೀರಾ?
  • ಕರ್ನಾಟಕ ಸರ್ಕಾರದ ಇತ್ತೀಚಿನ ಕೃಷಿ ಸುಧಾರಣೆಗಳು ಹಾಗೂ ಕೃಷಿ ತಂತ್ರಜ್ಞಾನದ ಬಗ್ಗೆ ತಿಳಿಸಿ ಎಂದು ಕೇಳಬಹುದು

ಆತ್ಮವಿಶ್ವಾಸ :  ಸಂದರ್ಶನದಲ್ಲಿ ನಿಮ್ಮ ಮಾತಿನ ವೈಖರಿಯು ಸೌಜನ್ಯಪೂರ್ಣವಾಗಿ ಮತ್ತು ಸ್ಪಷ್ಟವಾಗಿ ಕೂಡಿರಬೇಕು ಯಾವುದೇ ಅನಿಸ್ತಿದೆ ಒಳಗಾಗದೆ ಧೈರ್ಯವಾಗಿ ಹಾಗೂ ಆತ್ಮವಿಶ್ವಾಸದಿಂದ ಸಂವಹನ ನಡೆಸಬೇಕು

ಹಾಜರಿ :  ಸರಿಯಾದ ಸಮಯಕ್ಕೆ ಸಂದರ್ಶನಕ್ಕೆ ಹಾಜರಾಗಬೇಕು
ಡ್ರೆಸ್‌ ಕೋಡ್‌ :  ನಿಗದಿಪಡಿಸಲಾಗಿರುವ ಡ್ರೆಸ್ ಕೋಡ್ ಅಂದರೆ ಉಡುಗೆಯನ್ನು ಹಾಕಿರಬೇಕು

ಸಂದರ್ಶನ ಕಾರ್ಯದ ಜೊತೆಯಲ್ಲಿ ಮಾತನಾಡುವಾಗ ಅತ್ಯಂತ ವಿನಯಶೀಲತೆಯಿಂದ ಮಾತನಾಡಬೇಕು ಹಾಗೂ ವರ್ತಿಸಬೇಕು

10. ವೃತ್ತಿಜೀವನದಲ್ಲಿ ಯಶಸ್ಸು ಸಾಧಿಸುವ ಮಾರ್ಗಗಳು

ಕೃಷಿ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಅನ್ವಯವಾಗುತ್ತಿರುವ ಯೋಜನೆಗಳು ಸಂಶೋಧನೆಗಳು ಉತ್ತಮ ರೀತಿಯ ತಂತ್ರಜ್ಞಾನಗಳು ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳು ಮುಂತಾದ ವಿಚಾರಗಳ ಬಗ್ಗೆ ನಿರಂತರವಾಗಿ ಅಧ್ಯಯನ ಮಾಡುತ್ತಿರಬೇಕು ಏಕೆಂದರೆ ಈ ಅಂಶಗಳು ದಿನ ದಿಂದ ದಿನಕ್ಕೆ ಬದಲಾಗುವುದರಿಂದ ನಿರಂತರ ಕಲಿಕೆ ಇದ್ದರೆ ಮಾತ್ರ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ

  • ಉತ್ತಮ ಕೃಷಿ ತಜ್ಞರು ವಿಶ್ವವಿದ್ಯಾಲಯಗಳನ್ನು ಪ್ರಧ್ಯಾಪಕರು ಕೃಷಿ ಇಲಾಖೆ ಅಧಿಕಾರಗಳ ಜೊತೆಯಲ್ಲಿ ಸಮನ್ವಯವನ್ನು ಸಾಧಿಸಿ ಅವರಿಂದ ಸಲಹೆಗಳನ್ನು ಹಾಗೂ ಮಾರ್ಗದರ್ಶನವನ್ನು ಪಡೆಯಬೇಕು
  • ವೃತ್ತಿ ಜೀವನದಲ್ಲಿ ಪ್ರಾಮಾಣಿಕತೆ ಪಾರದರ್ಶಕತೆ ಹಾಗೂ ಕೆಲಸದ ಮೇಲೆ ಜವಾಬ್ದಾರಿತನವನ್ನು ಇರಿಸಿಕೊಳ್ಳಬೇಕು
  • ಇಂದಿನ ಕಂಪ್ಯೂಟರ್ ಯುಗದಲ್ಲಿ ದಿನದಿಂದ ದಿನಕ್ಕೆ ಬದಲಾವಣೆಗೊಳ್ಳುವ ಹಾಗೂ ಅಪ್ಡೇಟ್ ಆಗುವ ಹೊಸ ತಂತ್ರಜ್ಞಾನಗಳಿಗೆ ಮತ್ತು ನೀತಿಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಏಕೆಂದರೆ ಯಾವ ವ್ಯಕ್ತಿಯು ದೈನಂದಿನ ಬದಲಾವಣೆಗೊಳ್ಳಪಟ್ಟು ಅಪ್ಡೇಟ್ ಆಗುತ್ತಾರೆಯೋ ಅವರಿಗೆ ಹೆಚ್ಚು ಹೊಂದಿಕೊಳ್ಳುವ ಸಾಮರ್ಥ್ಯ ಇರುತ್ತದೆ
  • ಕೃಷಿ ಅಧಿಕಾರಿ ಅಥವಾ ಸಹಾಯಕ ಕೃಷಿ ಅಧಿಕಾರಿ ಮಟ್ಟದಲ್ಲಿ ಆಗುವ ತರಬೇತಿ ಕಾರ್ಯಕ್ರಮಗಳಲ್ಲಿ ಸಮರ್ಪಕವಾಗಿ ಭಾಗವಹಿಸಿ
  • ಕೃಷಿ ಕ್ಷೇತ್ರದಲ್ಲಿ ಉಪಯೋಗವಾಗುವಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಹೊಸ ಪ್ರಮಾಣ ಪತ್ರಗಳನ್ನು ಹಾಗೂ ಸಾಧನಾ ಪತ್ರಗಳನ್ನು ಪಡೆಯಿರಿ
  • ಕೃಷಿ ಕ್ಷೇತ್ರದಲ್ಲಿ ಆಡಳಿತಾತ್ಮಕ ಕೌಶಲ್ಯಗಳನ್ನು ಅರಿತು ನಿರ್ವಹಿಸಿ ಮತ್ತು ಅವುಗಳನ್ನು ಅಳವಡಿಸಿಕೊಂಡು ಅಭಿವೃದ್ಧಿಪಡಿಸುವತ್ತ ಗಮನಹರಿಸಿ
ಹೊಂದಿರಬೇಕಾದ ಕೌಶಲ್ಯ ಪ್ರಾಮುಖ್ಯತೆ
ಸಂವಹನ  ಉತ್ತಮವಾಗಿರಬೇಕು ಮತ್ತು ಸೌಜನ್ಯವಾಗಿರಬೇಕು
ನಾಯಕತ್ವ ಆಕರ್ಷಿತ ಹಾಗೂ ಆತ್ಮವಿಶ್ವಾಸದಿಂದ ಕೂಡಿರಬೇಕು
ಡಿಜಿಟಲ್‌ ಸ್ಕಿಲ್‌ ಗಳು ದಿನವೂ ತಿಳಿದುಕೊಂಡು ಉತ್ತಮ ರೀತಿಯಲ್ಲಿ ಬದಲಾವಣೆ ಆಗಬೇಕು
ಸಮಸ್ಯೆಗೆ ಪರಿಹಾರ ನೀಡುವುದು ಉತ್ತಮವಾಗಿರಬೇಕು ಹಾಗೂ ಪರಿಣಾಮಕಾರಿಯಾಗಿರಬೇಕು

11. ವಿದ್ಯಾರ್ಥಿಗಳು ಮಾಡುವ ಸಾಮಾನ್ಯ ತಪ್ಪುಗಳು ಎಂದರೆ

  • ಇತರರನ್ನು ನೋಡಿ ಅನುಕರಿಸುವುದು ಅಂದರೆ ಕಂಪೇರ್ ಮಾಡಿಕೊಳ್ಳುವುದು
  • ಅಭ್ಯರ್ಥಿಗಳ ಸ್ವಂತ ಶಕ್ತಿಯನ್ನು ನಿರ್ಲಕ್ಷಿಸಿ, ಬೇರೆಯವರ ಆಸಕ್ತಿಯನ್ನು ಸೆಳೆಯುವುದು
  • ಹುದ್ದೆಗೆ ನಿಗದಿಪಡಿಸಿರುವ ಪಠ್ಯಕ್ರಮವನ್ನು ಸಂಪೂರ್ಣವಾಗಿ ಓದದೇ ಇರುವುದು
  • ಯೋಜನೆ ವೇಳಾಪಟ್ಟಿ ಗುರಿ ಹಾಗೂ ರಿವಿಜನ್ ಇಲ್ಲದೆ ತಯಾರಿಯನ್ನು ನಡೆಸುವುದು
  • ಕೇವಲ ಕೃಷಿ ಕ್ಷೇತ್ರದ ಅಧ್ಯಯನವನ್ನು ನಡೆಸಿ ಪ್ರಚಲಿತ ಘಟನೆಗಳ ಬಗ್ಗೆ ಓದುವುದನ್ನು ಕಡೆಗಣಿಸುವುದು
  • ಉತ್ತಮ ಕೌಶಲ್ಯಗಳು ಪ್ರಮಾಣ ಪತ್ರಗಳು ಕಾರ್ಯಕ್ರಮಗಳು, ತರಬೇತಿಗಳು ಅವುಗಳ ಬಗ್ಗೆ ಗಮನವನ್ನು ನೀಡದೇ ಇರುವುದು
  • ಓದಿರುವ ವಿಚಾರಗಳ ಬಗ್ಗೆ ರಿವಿಜನ್ ಅಥವಾ ಮಾಕ್‌ ಟೆಸ್ಟ್ ಗಳನ್ನು ಬರೆಯದೆ ಇರುವುದು ‌

ಈ ಮೇಲಿನ ಸಾಮಾನ್ಯ ತಪ್ಪುಗಳನ್ನು ಮಾಡುವುದರಿಂದ ಯಶಸ್ಸಿನ ಸಾಧ್ಯತೆ ಕಡಿಮೆಯಾಗುತ್ತದೆ ಆದುದರಿಂದ ತಯಾರಿ ಪ್ರಕ್ರಿಯೆಯಲ್ಲಿ ಮತ್ತು ವೃತ್ತಿ ಮಾರ್ಗದರ್ಶನ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುವಾಗ ಈ ರೀತಿಯ ತಪ್ಪುಗಳನ್ನು ಮಾಡಬೇಡಿ

12. ಭವಿಷ್ಯದಲ್ಲಿ ಕೃಷಿ ಕ್ಷೇತ್ರದ ಉದ್ಯೋಗಗಳು

ಭವಿಷ್ಯದಲ್ಲಿ ಅಲ್ಲದೆ ಪ್ರಸ್ತುತದಲ್ಲಿಯೂ ಸಹ ಕೃತಕ ಬುದ್ಧಿಮತ್ತೆ ಅಂದರೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕೃಷಿ ಕ್ಷೇತ್ರದಲ್ಲಿ ಬೆಳೆ ನಿರ್ವಹಣೆ ಮತ್ತು ಉತ್ಪಾದನಾ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಕೃಷಿ ದತ್ತಾಂಶಗಳ ವಿಶ್ಲೇಷಣೆ ಸಂಸ್ಕರಣೆ ಹಾಗೂ ಇನ್ನಿತರ ಹೆಚ್ಚುವರಿ ಮಾಹಿತಿಯನ್ನು ಸ್ವೀಕರಿಸಲು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ತುಂಬಾ ಉಪಯುಕ್ತವಾಗಿದೆ ಡಿಜಿಟಲ್ ಕೃಷಿ ವ್ಯವಸ್ಥೆಗಳ ಭದ್ರತೆಯನ್ನು ಖಚಿತಪಡಿಸಲು ಸೈಬರ್ ಸಿಕ್ಕಿರತಿ ವಿಭಾಗವು ಅಗತ್ಯವಾಗುತ್ತಿದ್ದು ಕೃಷಿ ಕ್ಷೇತ್ರದ ತಂತ್ರಜ್ಞಾನದಲ್ಲಿ ಉತ್ತಮ ರೀತಿಯ ಬೆಳೆಗಳನ್ನು ಬೆಳೆಯುವುದು ಉತ್ತಮ ಗುಣಮಟ್ಟದ ಜಾಗವನ್ನು ಆಯ್ಕೆ ಮಾಡುವುದು ಡ್ರೋನ್ ಗಳನ್ನು ಬಳಸಿ ಔಷದ ಸಿಂಪಡಣೆ ಹಾಗೂ ಕೀಟಗಳ ನಿರ್ವಹಣೆ ಮಾಡುವುದು ಹಾಗೂ ರಾತ್ರಿ ಹೊತ್ತು ಕಾವಲು ಕಾಯದೆ ಇರುವಾಗ ಸೆನ್ಸರ್ ಗಳನ್ನು ಬಳಸಿ ಪಕ್ಷಿಗಳನ್ನು ಮತ್ತು ಇತರ ಬೆಳೆ ಹಾನಿ ಮಾಡುವ ಪ್ರಾಣಿಗಳನ್ನು ದೂರವಿಟ್ಟು ಬೆಳೆಯನ್ನು ರಕ್ಷಿಸುವುದು ಮುಂತಾದ ಕಾರ್ಯಗಳನ್ನು ಮಾಡುತ್ತದೆ

ಇತ್ತೀಚಿನ ದಿನಗಳಲ್ಲಿ ವಿದ್ಯುಚ್ಛಕ್ತಿ ಕೊರತೆಯಿಂದ ಸೌರಶಕ್ತಿ ಮತ್ತು ಜೈವಿಕ ಇಂಧನ ಆಧಾರಿತ ಕೃಷಿ ತಂತ್ರಜ್ಞಾನಗಳು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು ರೈತರು ಸಹ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಲಾಭವನ್ನು ಪಡೆಯುತ್ತ ಹೆಜ್ಜೆ ಹಾಕುತ್ತಿದ್ದಾರೆ

ರೈತರು ಬೆಳೆಯುವ ಕೃಷಿ ಉತ್ಪನ್ನಗಳನ್ನು ಆನ್ಲೈನ್ ವಿಧಾನಗಳಲ್ಲಿ ಮಾರಾಟಕ್ಕೆ ಒಳಪಡಿಸಿ ಹೆಚ್ಚಿನ ಗ್ರಾಹಕರನ್ನು ತಲುಪುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಈ ವ್ಯವಸ್ಥೆಯಿಂದ ರೈತರಿಗೆ ಉತ್ತಮ ಲಾಭ ದೊರೆತು ಅವರ ಜೀವನ ಗುಣಮಟ್ಟವು ಉತ್ತಮವಾಗುತ್ತದೆ

13. ಕೃಷಿ ಅಧಿಕಾರಿಗಳ ವೇತನದ ವಿವರಗಳು

69,250/- ರೂಗಳಿಂದ 1,34,200/- ರೂಗಳ ವರೆಗೆ ಮಾಸಿಕ ವೇತನವನ್ನು ನೀಡಲಾಗುತ್ತದೆ. ಇದರ ಜೊತೆಯಲ್ಲಿ ಉತ್ತಮ ಭತ್ಯೆಗಳು, ಸರ್ಕಾರಿ ಸೌಲಭ್ಯಗಳು ಮತ್ತು ಮುಂಬಡ್ತಿ ಸೌಲಭ್ಯಗಳನ್ನು ಪಡೆಯಬಹುದು

14.AO And AAO ಹುದ್ದೆಗಳ Exam Pattern

ಪತ್ರಿಕೆ ವಿಷಯ ಪ್ರಶ್ನೆಗಳು ಅಂಕಗಳು ಅವಧಿ
ಪತ್ರಿಕೆ-1 ಸಾಮಾನ್ಯ ಪತ್ರಿಕೆ 150 300 2 ಗಂಟೆಗಳು
ಪತ್ರಿಕೆ-2 ಕೃಷಿಗೆ ಸಂಬಂಧಿಸಿದ ವಿಷಯಗಳ ಪತ್ರಿಕೆ 150 300 2 ಗಂಟೆಗಳು
ಒಟ್ಟು ಲಿಖಿತ ಪರೀಕ್ಷೆ 300 600 4 ಗಂಟೆಗಳು

Last Updated : 08-06-2026

15. Syllabus Strategy : 90 ದಿನಗಳ ಪರೀಕ್ಷಾ ತಯಾರಿ ಹೀಗಿದ್ದರೆ ನಿಮ್ಮ ಯಶಸ್ಸು ಖಚಿತ

ಮೊದಲ 30 ದಿನಗಳಲ್ಲಿ ಓದಬೇಕಾದ ವಿಷಯಗಳು
  • Agronomy
  • Soil Science
  • Genetics
  • Horticulture
  • Plant Pathology
ನಂತರದ 30 ದಿನಗಳ ತಯಾರಿ ಮಾಡಬೇಕಾದ ವಿಷಯಗಳು
  • Entomology
  • Economics
  • Statistics
  • Extension
  • Agricultural Engineering
ಕೊನೆಯ 30 ದಿನಗಲ್ಲಿ ಪ್ರಮುಖವಾಗಿ ತಯಾರಿ ಮಾಡಬೇಕಾದ ವಿಷಯಗಳು
  • Biotechnology
  • Food Science
  • Marketing
  • Animal Science
  • Sericulture
  • Forestry

16. AO And AAO Post ಗಳ Promotion Hierarchy

ಈ ನೇಮಕಾತಿ ಮೂಲಕ ನೇಮಕಗೊಂಡ ನಂತರ ಸಹಾಯಕ ಕೃಷಿ ಅಧಿಕಾರಿ -> ಕೃಷಿ ಅಧಿಕಾರಿ -> ಹಿರಿಯ ಕೃಷಿ ಅಧಿಕಾರಿ -> ಕೃಷಿ ಇಲಾಖೆ ಉಪನಿರ್ದೇಶಕ -> ಕೃಷಿ ಇಲಾಖೆ ಜಂಟಿ ನಿರ್ದೇಶಕ ಹುದ್ದೆಗಳಿಗೆ ಪದೋನ್ನತಿ ಹೊಂದುವ ಅವಕಾಶಗಳಿರುತ್ತವೆ.

17. ಕೃಷಿ ಅಧಿಕಾರಿಯ ಒಂದು ದಿನದ ಕಾರ್ಯಚಟುವಟಿಕೆ

  • ಮೊದಲು ಬೆಳಿಗ್ಗೆ ಕ್ಷೇತ್ರ ಭೇಟಿಗಳನ್ನು ಕೈಗೊಳ್ಳುವುದು
  • ರೈತರ ಸಮಸ್ಯೆಗಳನ್ನು ಪರಿಶೀಲನೆ ಮಾಡಿ ಪರಿಹಾರ ಕ್ರಮಗಳನ್ನು ಒದಗಿಸುವುದು
  • ವರದಿಗಳನ್ನು ಸಿದ್ಧಪಡಿಸಿ ಸಲ್ಲಿಸುವುದು
  • ಸರ್ಕಾರದ ಯೋಜನೆಗಳ ಅನುಷ್ಠಾನದ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳುವುದು

18. FAQ’s

  • ಪ್ರಶ್ನೆ: ಕೃಷಿ ಅಧಿಕಾರಿ ಹುದ್ದೆಗಳನ್ನು ಪಡೆಯಬೇಕಾದರೆ ಯಾವ ವಿದ್ಯಾರ್ಹತೆಯನ್ನು ಹೊಂದಿರಬೇಕು?
    ಉತ್ತರ: ಬಿಎಸ್ಸಿ ಕೃಷಿ ಪದವಿ, ಕೃಷಿ ಕ್ಷೇತ್ರದಲ್ಲಿ ಇಂಜಿನಿಯರಿಂಗ್‌ ಪದವಿ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಅಗತ್ಯ.
  • ಪ್ರಶ್ನೆ: ಪ್ರಸ್ತುತ ಅಂತಿಮ ವರ್ಷದ ಪದವಿಯನ್ನು ಓದುತ್ತಿರುವವರು ಅರ್ಜಿ  ಸಲ್ಲಿಸಬಹುದೇ?
    ಉತ್ತರ: ಇಲ್ಲ, ಅಧಿಸೂಚನೆಯ ಮುನ್ನ ನಿಗಧಿತ ವಿದ್ಯಾರ್ಹತೆಯನ್ನು ಹೊಂದಿರಬೇಕು.
  • ಪ್ರಶ್ನೆ: ಕೃಷಿ ಅಧಿಕಾರಿ ವೇತನ ಎಷ್ಟು ಸಿಗುತ್ತದೆ?
    ಉತ್ತರ: 69,250/- ರೂಗಳಿಂದ 1,34,200/- ರೂಗಳ ವರೆಗೆ ಉತ್ತಮ ವೇತನ ಮತ್ತು ಭತ್ಯೆಗಳು ಸಿಗುತ್ತವೆ.
  • ಪ್ರಶ್ನೆ: ಕೃಷಿ ಅಧಿಕಾರಿ ಕೆಲಸದ ಪ್ರಮುಖ ಜವಾಬ್ದಾರಿಗಳೇನು?
    ಉತ್ತರ: ರೈತರಿಗೆ ತಾಂತ್ರಿಕ ಸಲಹೆಗಳನ್ನು ನೀಡುವುದು, ಯೋಜನೆ ಅನುಷ್ಠಾನದಲ್ಲಿ ಸಹಕರಿಸುವುದು ಮತ್ತು ಉತ್ತಮ ಮೇಲ್ವಿಚಾರಣೆ ಮಾಡುವುದು.
  • ಪ್ರಶ್ನೆ: ಪರೀಕ್ಷೆಗೆ ಹೇಗೆ ಪರಿಣಾಮಕಾರಿಯಾಗಿ ತಯಾರಿ ಮಾಡಬೇಕು?
    ಉತ್ತರ: ಸಿಲಬಸ್‌ ಚೆನಚನಾಗಿ ತಿಳಿದುಕೊಂಡು, ಪಠ್ಯಕ್ರಮ ಅಧ್ಯಯನ, ಮಾದರಿ ಪ್ರಶ್ನೆಪತ್ರಿಕೆ ಅಭ್ಯಾಸ ನಿರಂತರವಾಗಿ ಮಾಡಿ ಮಾಕ್‌ ಟೆಸ್ಟ್‌ ಗಳನ್ನು ಚೆನ್ನಾಗಿ ಅಧ್ಯಯನ ಮಾಡಿ.

19. Practical Work Profile 

ಕೃಷಿ ಅಧಿಕಾರಿಯ ಅಂಶವು ಅದರ ಪ್ರಾಯೋಗಿಕ ಕಾರ್ಯಪ್ರವೃತ್ತಿಯ ಪ್ರೊಫೈಲ್‌ನಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಂಡಿರುವ ರೈತರ ಹೊಲಗಳಿಗೆ ಮತ್ತು ತೋಟಗಳಿಗೆ ಭೇಟಿ ನೀಡಿ ಬೆಳೆಗಳನ್ನು ಪರಿಶೀಲನೆ ಮಾಡುವುದು, ಕೀಟಗಳ ಪತ್ತೆಹಚ್ಚುವಿಕೆ ಹಾಗೂ ಬಂದಿರುವ ರೋಗಗಳ ನಿರ್ವಹಣೆಯ ಮತ್ತು ನಿರ್ಮೂಲನೆಗೆ ಸಲಹೆಗಳನ್ನು ನೀಡುವುದು, ಮಣ್ಣಿನ ಆರೋಗ್ಯ ಮತ್ತು ಪರೀಕ್ಷೆ ಆಧಾರಿತ ಮಾರ್ಗದರ್ಶನವನ್ನು ನೀಡುವುದರ ಜೊತೆಗೆ, ಸರ್ಕಾರಿ ಕೃಷಿ ಯೋಜನೆಗಳ ಅನುಷ್ಠಾನದಲ್ಲಿ ಕಾರ್ಯಪ್ರವೃತ್ತರಾಗಿ, ತರಬೇತಿ ಕಾರ್ಯಕ್ರಮಗಳ ಆಯೋಜನೆ ಮಾಡಿ, ಉತ್ತಮ ಹಾಗೂ ಅತ್ಯಾಧುನಿಕ ಕೃಷಿ ತಂತ್ರಜ್ಞಾನಗಳ ಪ್ರಚಾರ ಕಾರ್ಯಕ್ರಮಗಳನ್ನು ಕೈಗೊಂಡು ಹಾಗೂ ಅವುಗಳಿಗೆ ಸಂಬಂಧಿಸಿದ ವರದಿಗಳನ್ನು ತಯಾರಿಸುವ ಕಾರ್ಯಗಳು ಪ್ರಮುಖವಾಗಿವೆ. ರೈತರೊಂದಿಗೆ ನೇರ ಸಂಪರ್ಕದಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ. ಈ ಎಲ್ಲಾ ಅಂಶಗಳು Career Guidance ನಲ್ಲಿ ಸಿಗುತ್ತವೆ

Expert Quotes

  •  AO ಮತ್ತು AAO ಹುದ್ದೆಗಳ ಪರೀಕ್ಷೆಯಲ್ಲಿ ಉತ್ತಮ ಯಶಸ್ಸು ಪಡೆಯಲು ಪಠ್ಯಕ್ರಮವನ್ನು ಸಂಪೂರ್ಣವಾಗಿ ಅರಿತುಕೊಳ್ಳಬೇಕು ಹಾಗೂ ನಿರಂತರವಾಗಿ ರಿವಿಷನ್‌ ಮಾಡುವುದು ಅತ್ಯಗತ್ಯ By Dr. M. Mahadevappa, Former Vice Chancellor, UAS Dharwad
  • ಪ್ರತಿದಿನದ ಅಧ್ಯಯನ ಮಾಡಬೇಕು, ಹೆಚ್ಚಾಗಿ ಮಾಕ್ ಟೆಸ್ಟ್ ಅಭ್ಯಾಸ ಮತ್ತು ಸಮಯದ ಉತತ್ಮ ನಿರ್ವಹಣೆಯೇ ಸ್ಪರ್ಧಾತ್ಮಕ ಪರೀಕ್ಷೆಯ ಯಶಸ್ಸಿನ ಮೂಲಮಂತ್ರ ಆಗಿದೆ By K. Narayana Gowda, Career Guidance Experts
  • ಕೃಷಿ ವಿಷಯಗಳಲ್ಲಿ ಹೆಚ್ಚಿನ ಹಾಗೂ ಪ್ರಮುಖ ತಾಂತ್ರಿಕ ಜ್ಞಾನ ಹೊಂದಿರುವ ಪರೀಕ್ಷಾ ಅಭ್ಯರ್ಥಿಗಳಿಗೆ ಆಯ್ಕೆಯ ಅವಕಾಶಗಳು ಹೆಚ್ಚಾಗಿರುತ್ತವೆ. By M B Chetti, Agriculture Education Experts
  • ಕೇವಲ ಪರೀಕ್ಷೆಯನ್ನು ಪಾಸ್ ಮಾಡುವುದು ಕೊನೆಯ ಗುರಿಯಾಗಿರಬಾರದು, ಉತ್ತಮ ಕೃಷಿ ಅಧಿಕಾರಿಯಾಗುವ ಸಮಗ್ರ ಮಟ್ಟದ ದೃಷ್ಟಿಕೋನವನ್ನು ಬೆಳೆಸಿಕೊಳ್ಳಿ By R Chandrashekhar, Agricultural Career Mentors

Source : Expert Quotes

Success Story 

  • “2018 ರಲ್ಲಿ  ಆಯ್ಕೆಯಾದ 1st Rank ಪಡೆದ Ninad Vasista ಅವರ ಪ್ರಕಾರ, Soil Science ಮತ್ತು Agronomy ವಿಷಯಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುವುದರಿಂದ ಉತ್ತಮ ಅಂಕಗಳನ್ನು ಪಡೆಯಲು ಸಹಾಯವಾಯಿತು. ಎಂದು ಅಭಿಪ್ರಾಯ ಪಟ್ಟಿದ್ದಾರೆ
  •  2018 ರ ಪರೀಕ್ಷೆಯಲ್ಲಿ ಆಯ್ಕೆಯಾದ 4th Rank, Rishika KS ಅವರ ಪ್ರಕಾರ “ಉತ್ತಮ ಅಧ್ಯಯನ ವೇಳಾಪಟ್ಟಿಯನ್ನು ರಚಿಸಿ ಉತ್ತಮ ರೀತಿಯಲ್ಲಿ ಅಧ್ಯಯನ, ರಿವಿಷನ್‌ ಹಾಗೂ ಮಾಕ್‌ ಟೆಸ್ಟ್‌ ಬರೆದಿದ್ದರಿಂದ ಹೆಚ್ಚು ಅಂಕಗಳ ಜೊತೆಯಲ್ಲಿ ಸಮಯದ ನಿರ್ವಹಣೆಯಲ್ಲಿ ಸಹಾಯಕವಾಯಿತು ಎಂದು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ

Source : Results

Why Trust This Article?

  • ನೇಮಕಾತಿ ಅಧಿಸೂಚನೆಗಳನ್ನು ಓದಿ ಪರಿಶೀಲಿಸಿ ಪ್ರಕಟಿಸಲಾಗಿದೆ
  • ಹಿಂದಿನ ವರ್ಷದ ಪರೀಕ್ಷೆ ಹಾಗೂ ಆಯ್ಕೆಯಾದ ಅಭ್ಯರ್ಥಿಗಳ ಸಲಹೆಗಳನ್ನು ತಿಳಿಸಿಲಾಗಿದೆ
  • Agriculture department ನಲ್ಲಿನ ಅಧಿಕಾರಿಗಳ ಕೆಲಸದ ವಾತಾವರಣವನ್ನು ಅಧ್ಯಯನ ಮಾಡಲಾಗಿದೆ
  • Career guidance experts ಗಳಿಂದ ಯಶಸ್ವಿ ಸಲಹೆಗಳನ್ನು ಒಳಗೊಂಡಿದೆ

Conclusion: 

ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳು ಕೇವಲ ಸರ್ಕಾರಿ ಉದ್ಯೋಗ ಆಗಿರದೆ ಅವುಗಳು ರೈತರ ಜೀವನ ಮಟ್ಟವನ್ನು ಮತ್ತು ಅವರ ಆದಾಯದ ಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ಮಾಡಬಹುದಾದಂತಹ ಸೇವಾ ಅವಕಾಶಗಳಾಗಿವೆ. ಆದುದರಿಂದ ಅಭ್ಯರ್ಥಿಗಳು ಸರಿಯಾದ ವೃತ್ತಿ ಯೋಜನೆಯನ್ನು ರೂಪಿಸಿ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುವುದು ಮತ್ತು ಹುದ್ದೆಗಳಿಗೆ ಬೇಕಾದ ಕೌಶಲ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಬೇಕು ಇದರ ಜೊತೆಯಲ್ಲಿ ಪರೀಕ್ಷಾ ತಯಾರಿ ಹಾಗೂ ನಿರಂತರ ಕಲಿಕೆಯ ಮೂಲಕವೇ ಯಾವುದೇ ಅಭ್ಯರ್ಥಿಗಳು ಈ ಕೃಷಿ ಕ್ಷೇತ್ರದಲ್ಲಿ ಉದ್ಯೋಗವನ್ನು ಪಡೆಯುವುದರ ಮೂಲಕ ಯಶಸ್ಸನ್ನು ಸಾಧಿಸಬಹುದು ಎಂಬುದನ್ನು ತಿಳಿದುಕೊಳ್ಳಬೇಕು

ಕೃಷಿಯ ಭವಿಷ್ಯ ತಂತ್ರಜ್ಞಾನ ಆಧಾರಿತವಾಗುತ್ತಿರುವುದು ಎಷ್ಟು ಮುಖ್ಯವೋ ಕೃಷಿ ಕ್ಷೇತ್ರದಲ್ಲಿ ಅಧಿಕಾರಿಗಳ ಪಾತ್ರವು ಅಷ್ಟೇ ಮುಖ್ಯವಾಗಿರುತ್ತದೆ ತಂತ್ರಜ್ಞಾನ ಎಷ್ಟೇ ಮುಂದುವರೆದರು ರೈತರ ಬೆಳೆಗಳನ್ನು ಬೆಳೆಯಬೇಕು ಹಾಗೂ ರೈತರು ಬೆಳೆದ ಬೆಳೆಯನ್ನೇ ನಾವು ತಿನ್ನಬೇಕಾಗಿರುವುದರಿಂದ ಸಂಪೂರ್ಣ ತಂತ್ರಜ್ಞಾನ ಆಧಾರಿತ ಆಗುವುದು ಕಷ್ಟಕರ ಆದುದರಿಂದ ಈ ಸಂದರ್ಭದಲ್ಲಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳು ರೈತರ ಹಾಗೂ ಆರ್ಥಿಕತೆಯ ಪರವಾಗಿ ಅತ್ಯಂತ ಗೌರವಯುತ ಹಾಗೂ ಭರವಸೆಯನ್ನು ನೀಡುವ ನೃತ್ಯ ಆಯ್ಕೆಗಳಾಗಿವೆ

 

Author Note : ಕೃಷಿ ಅಧಿಕಾರಿ (AO) ಹಾಗೂ ಸಹಾಯಕ ಕೃಷಿ ಅಧಿಕಾರಿ (AAO) ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದ್ದು ಅದರ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿರುವ ಅಭ್ಯರ್ಥಿಗಳಿಗೆ ಸರಿಯಾದ ವೃತ್ತಿ ಮಾರ್ಗದರ್ಶನವನ್ನು ನೀಡುವ ಮತ್ತು ಅಧ್ಯಯನ ದಿಕ್ಕನ್ನು ಒದಗಿಸುವ ಉದ್ದೇಶದಿಂದ ಈ ಲೇಖನವನ್ನು ಸಿದ್ಧಪಡಿಸಲಾಗಿದೆ. ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಹಾಗೂ ನಿಗಧಿಪಡಿಸಲಾದ ಪಠ್ಯಕ್ರಮವನ್ನು ಎಚ್ಚರಿಕೆಯಿಂದ ಪರಿಶೀಲಿಸಿ ತಮ್ಮ ತಯಾರಿಯನ್ನು ಮುಂದುವರಿಸಬೇಕು.

ಈ ಲೇಖನದ ಬಗ್ಗೆ ಲೇಖಕರ ಮಾತುಗಳು: ಸರ್ಕಾರಿ ಹುದ್ದೆಗಳ ಅಧಿಸೂಚನೆ ಮಾಹಿತಿ ನೀಡುವುದು, ಪರೀಕ್ಷಾ ಸಲಹೆಗಳನ್ನು ಹಾಗೂ ವೃತ್ತಿ ಮಾರ್ಗದರ್ಶನದ ಬಗ್ಗೆ ನಾವು ಉತ್ತಮ ರೀತಿಯಲ್ಲಿ ಕಳೆದ 2 ವರ್ಷಗಳಿಂದ ನೀಡುತ್ತಾ ಬಂದಿದ್ದೇವೆ. ಮುಂದುವರೆದು newsbym2001@gmail.com ಅನ್ನು ಸಂಪರ್ಕಿಸಲು ತಿಳಿಸಿದ್ದೇವೆ

Reviewed By: Ranganath B Gopal
Career Guidance Researcher & Government Exam Content Specialist
2+ Years Experience in Karnataka Competitive Exam Guidance

Read More : Jobs

KSP Recruitment 2026, Big Opportunity: ಪೊಲೀಸ್‌ ಇಲಾಖೆಯಲ್ಲಿ ಬೃಹತ್‌ ನೇಮಕಾತಿ, ಹುದ್ದೆ, ಅರ್ಹತೆ, ಸಂಬಳ ಹಾಗೂ ಅರ್ಜಿ ಸಲ್ಲಿಕೆ ಬಗ್ಗೆ ಮಾಹಿತಿ

BSNL Recruitment 2026, Best Opportunity: ಪದವೀಧರರಿಗೆ ಕೇಂದ್ರ ಸರ್ಕಾರಿ ಉದ್ಯೋಗ, ಇಲ್ಲಿದೆ ಸಂಪೂರ್ಣ ಮಾಹಿತಿ.

 

ರಂಗನಾಥ ಬಿ.ಜಿ ಅವರು ಅರ್ಥಶಾಸ್ತ್ರದಲ್ಲಿ ಎಂ.ಎ ಪದವೀಧರರಾಗಿದ್ದು, ಕಳೆದ ಎರಡು ವರ್ಷಗಳಿಂದ ನೈಜ ಹಾಗೂ ವಿಶ್ವಾಸಾರ್ಹ ಕನ್ನಡ ವಿಷಯಗಳನ್ನು ಪ್ರಕಟಿಸುತ್ತಿದ್ದಾರೆ. ಸರ್ಕಾರಿ ಉದ್ಯೋಗ ಮಾಹಿತಿ, ಪರೀಕ್ಷಾ ತಯಾರಿ ಸಲಹೆಗಳು, ವೃತ್ತಿ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು ಹಾಗೂ ಟ್ರೆಂಡಿಂಗ್ ಸುದ್ದಿಗಳ ಕುರಿತು ಲೇಖನಗಳನ್ನು ಬರೆಯುವಲ್ಲಿ ಪರಿಣತಿ ಹೊಂದಿದ್ದು, ಓದುಗರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುವುದು ಇವರ ಉದ್ದೇಶವಾಗಿದೆ. Please Visit NewsByMr

Leave a Comment