Telegram Join Our Telegram WhatsApp Join Our WhatsApp

E Shram Card Big Update 2026, ಮೊಬೈಲ್‌ ಮೂಲಕವೇ ಕಾರ್ಡನ್ನು ಪಡೆಯಿರಿ, ಇಲ್ಲಿದೆ ಹಂತ ಹಂತವಾದ ಸಂಪೂರ್ಣ ವಿಧಾನ

ಮನೆಯಲ್ಲೇ ಕುಳಿತು E Shram Card ಅನ್ನು ಮೊಬೈಲ್‌ ನಲ್ಲೇ ಪಡೆಯಿರಿ

ನಮಸ್ಕಾರ ಸ್ನೇಹಿತರೆ, ಇ-ಶ್ರಮ್ ಕಾರ್ಡ್ (e-Shram Card) ಎಂಬುದು ಕೇಂದ್ರ ಸರ್ಕಾರವು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರ ಮಾಹಿತಿಯನ್ನು ಒಂದೇ ವೇದಿಕೆಯಲ್ಲಿ ಸಂಗ್ರಹಿಸಲು ಹಾಗೂ ಕಾರ್ಮಿಕ ಸ್ನೇಹಿ ಯೋಜನೆಗಳನ್ನು ಅವರಿಗೆ ತಲುಪಿಸಲು ಆರಂಭಿಸಿರುವ ಮಹತ್ವದ ಯೋಜನೆಯಾಗಿದೆ. ಈ ಯೋಜನೆಯಡಿ ಗೃಹ ನಿರ್ಮಾಣ ಕಾರ್ಮಿಕರು, ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ಕಾರ್ಮಿಕರು, ಗೃಹ ಸಹಾಯಕರು, ಬೀದಿ ಬದಿಯ ವ್ಯಾಪಾರಿಗಳು, ಆಟೋ ಚಾಲಕರು ಹಾಗೂ ಕಾರು ಚಾಲಕರು, ಸಣ್ಣ ಹಾಗೂ ಮಧ್ಯಮ ವರ್ಗದ ವ್ಯಾಪಾರಿಗಳು, ಮೀನುಗಾರರು, ಕೂಲಿ ಕಾರ್ಮಿಕರು ಹಾಗೂ ಇತರೆ ಅಸಂಘಟಿತ ವಲಯದ ಕಾರ್ಮಿಕರು ಈ ಯೋಜನೆಯಡಿಯಲ್ಲಿ ನೀಡಲಾಗುವ ಇ ಶ್ರಮ್‌ ಕಾರ್ಡ್‌ ಗೆ  ನೋಂದಣಿಯನ್ನು ಮಾಡಿಕೊಳ್ಳಬಹುದು.

ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಕಾರ್ಮಿಕರಿಗೆ 12 ಅಂಕಿಯ ಯುನಿವರ್ಸಲ್ ಅಕೌಂಟ್ ನಂಬರ್ (UAN) ನೀಡಲಾಗುತ್ತದೆ. ಈ ಸಂಖ್ಯೆ ಕಾರ್ಮಿಕರ ಗುರುತಿನ ಸಂಖ್ಯೆಯಾಗಿ ಕಾರ್ಯನಿರ್ವಹಿಸಲಿದ್ದು, ವಿವಿಧ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಉಪಯುಕ್ತವಾಗುತ್ತದೆ. ಇ-ಶ್ರಮ್ ಕಾರ್ಡ್ ಹೊಂದಿರುವವರಿಗೆ ಕೇಂದ್ರ ಸರ್ಕಾರದಿಂದ ನೀಡಲಾಗುವ ಸಾಮಾಜಿಕ ಭದ್ರತಾ ಯೋಜನೆಗಳು, ಕಾರ್ಮಿಕ ಸ್ನೇಹಿ ಯೋಜನೆಗಳು, ಕಲ್ಯಾಣ ಕಾರ್ಯಕ್ರಮಗಳು ಹಾಗೂ ಭವಿಷ್ಯದಲ್ಲಿ ಜಾರಿಗೆ ಬರುವ ವಿಶೇಷ ನೆರವು ಯೋಜನೆಗಳ ಮಾಹಿತಿ ಮತ್ತು ಸೌಲಭ್ಯಗಳು ಸುಲಭವಾಗಿ ಲಭ್ಯವಾಗುವ ಸಾಧ್ಯತೆಯನ್ನು ಈ ಕಾರ್ಡ್‌ ಒದಗಿಸುತ್ತದೆ.

ಈ ಯೋಜನೆಯ ಪ್ರಮುಖ ಪ್ರಯೋಜನಗಳಲ್ಲಿ ಅಪಘಾತವಾದಾಗ ವಿಮಾ ರಕ್ಷಣೆ, ಉದ್ಯೋಗಕ್ಕೆ ಸಂಬಂಧಿಸಿದ ನೆರವುಗಳು, ಸಾಮಾಜಿಕ ಭದ್ರತೆಯನ್ನು ನೀಡುವುದು ಮತ್ತು ತುರ್ತು ಸಂದರ್ಭಗಳಲ್ಲಿ ಸರ್ಕಾರದಿಂದ ನೀಡಬಹುದಾದ ಹಾಗೂ ಕಾರ್ಮಿಕರಿಗೆ ಸಿಗಬಹುದಾದ ಆರ್ಥಿಕ ಸಹಾಯ ಹಾಗೂ ನೆರವು ಸೌಲಭ್ಯಗಳು ಸೇರಿವೆ. ಇಷ್ಟೇ ಅಲ್ಲದೇ, ದೇಶದಲ್ಲಿರುವ ಅಸಂಘಟಿತ ಕಾರ್ಮಿಕರ ನಿಖರ ಮಾಹಿತಿಯನ್ನು ಹಾಗೂ ವಿವರಗಳನ್ನು  ಸಂಗ್ರಹಿಸುವ ಮೂಲಕ ಸರ್ಕಾರವು ಅವರ ಅಗತ್ಯಗಳಿಗೆ ಅನುಗುಣವಾಗಿ ಹೊಸ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತದೆ, ಇದರ ಜೊತೆಯಲ್ಲಿ ಕಾರ್ಮಿಕರ ಜೀವನ ಗುಣಮಟ್ಟವು ಸುಧಾರಿಸುತ್ತದೆ.

ಒಟ್ಟಾರೆ, ಇ-ಶ್ರಮ್ ಕಾರ್ಡ್ ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವ ಸಮಗ್ರ ಅಂಶಗಳ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕಾರ್ಮಿಕರ ಆರ್ಥಿಕ ಸ್ಥಿತಿ ಹಾಗೂ ಸಾಮಾಜಿಕ ಭದ್ರತೆಯನ್ನು ಬಲಪಡಿಸುವ ಮಹತ್ವದ ಯೋಜನೆಯಾಗಿದ್ದು ಪ್ರಸ್ತುತ ಪ್ರಮುಖ ಯಶಸ್ವಿ ಯೋಜನೆ ಆಗಿದೆ.

ಮೊಬೈಲ್ ಬಳಸಿಕೊಂಡು ಮನೆಯಲ್ಲಿಯೇ ಕುಳಿತು ಹೇಗೆ ಸುಲಭವಾಗಿ ಇ ಶ್ರಮ್‌ (E Shram Card) ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು ಎಂಬ ಮಾಹಿತಿಯನ್ನು ಇಲ್ಲಿ ವಿವರವಾಗಿ ತಿಳಿಸಲಾಗಿದೆ. ನೀವು ಈಗ ನಿಮ್ಮ ಮೊಬೈಲ್‌ನಲ್ಲಿಯೇ ಸುಲಭವಾಗಿ ನೋಂದಣಿ ಮಾಡಿಕೊಳ್ಳಬಹುದು.

E Shram Card ಗೆ ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು

1. ಅರ್ಜಿದಾರರ ವಯಸ್ಸು 16 ರಿಂದ 59 ವರ್ಷಗಳ ನಡುವೆ ಇರಬೇಕು.

2. ಅರ್ಜಿದಾರರು ಅಸಂಘಟಿತ ವಲಯದ ಕಾರ್ಮಿಕರು ಆಗಿರಬೇಕು. ಉದಾಹರಣೆಗೆ:
     * ಕೃಷಿ ಕಾರ್ಮಿಕರು
     * ಬೀದಿ ಬದಿ ವ್ಯಾಪಾರಿಗಳು
     * ಆಟೋ ಚಾಲಕರು
     * ಮನೆ ಕೆಲಸಗಾರರು
     * ಕಟ್ಟಡ ಕಾರ್ಮಿಕರು ಹಾಗೂ ಇತರೆ ಅಸಂಘಟಿತ ವಲಯದ ಕಾರ್ಮಿಕರು
3. ಅರ್ಜಿದಾರರು ಆದಾಯ ತೆರಿಗೆ (Income Tax) ಪಾವತಿದಾರರಾಗಿರಬಾರದು.
4. ಕಾರ್ಮಿಕರ ಭವಿಷ್ಯ ನಿಧಿ (EPFO) ಅಥವಾ ಕಾರ್ಮಿಕರ ರಾಜ್ಯ ವಿಮಾ ನಿಗಮ (ESIC) ದ ಸದಸ್ಯರಾಗಿರಬಾರದು.

ಇಂತಹ ಅರ್ಹತೆಗಳನ್ನು ಹೊಂದಿರುವವರು ಇ ಶ್ರಮ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಿ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ಪಡೆಯಬಹುದು.

E Shram Card ನ ಮುಖ್ಯ ಉದ್ದೇಶ ಮತ್ತು ಪ್ರಯೋಜನಗಳು

E Shram Card ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದೆ. ಅಸಂಘಟಿತ ವಲಯದ ಕಾರ್ಮಿಕರ ಸಮಗ್ರ ದತ್ತಾಂಶವನ್ನು ಸಂಗ್ರಹಿಸಿ ಅವರಿಗೆ ವಿವಿಧ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

E Shram Card ನಿಂದ ಸಿಗುವ ಪ್ರಮುಖ ಪ್ರಯೋಜನಗಳು

1. ಉಚಿತ ಅಪಘಾತ ವಿಮೆ

ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ (PMSBY) ಅಡಿಯಲ್ಲಿ ನೋಂದಾಯಿತ ಕಾರ್ಮಿಕರಿಗೆ ₹2 ಲಕ್ಷದವರೆಗೆ ಉಚಿತ ಅಪಘಾತ ವಿಮೆ ಸೌಲಭ್ಯ ದೊರೆಯುತ್ತದೆ.

2. ಅಂಗವೈಕಲ್ಯ ಪರಿಹಾರ

  • ಅಪಘಾತದಿಂದ ಸಂಪೂರ್ಣ ಅಂಗವೈಕಲ್ಯ ಉಂಟಾದರೆ ₹2 ಲಕ್ಷ ಪರಿಹಾರ ದೊರೆಯುತ್ತದೆ.
  • ಭಾಗಶಃ ಅಂಗವೈಕಲ್ಯ ಉಂಟಾದರೆ ₹1 ಲಕ್ಷ ಪರಿಹಾರ ನೀಡಲಾಗುತ್ತದೆ.

3. ಸಾಮಾಜಿಕ ಭದ್ರತೆ

ವಿಪತ್ತು ಉಂಟಾಗುವುದು , ತುರ್ತು ಪರಿಸ್ಥಿತಿ ಸಂದರ್ಭಗಳಲ್ಲಿ ಅಥವಾ ವಿಶೇಷ ಸಂದರ್ಭಗಳಲ್ಲಿ ಸರ್ಕಾರ ಘೋಷಿಸುವ ಆರ್ಥಿಕ ಪ್ಯಾಕೇಜ್‌ಗಳು ಹಾಗೂ ನೇರ ನಗದು ವರ್ಗಾವಣೆ (DBT) ಸೌಲಭ್ಯಗಳು ಇ ಶ್ರಮ್‌ ಕಾರ್ಡ್ ಹೊಂದಿರುವವರಿಗೆ ನೇರವಾಗಿ ತಲುಪುವ ಸಾಧ್ಯತೆ ಇರುತ್ತದೆ.

4. ಪಿಂಚಣಿ ಯೋಜನೆಗಳ ಸೌಲಭ್ಯ

ಭವಿಷ್ಯದಲ್ಲಿ ಕೇಂದ್ರ ಸರ್ಕಾರದ ವಿವಿಧ ಪಿಂಚಣಿ ಯೋಜನೆಗಳಾದ ಪ್ರಧಾನಮಂತ್ರಿ ಶ್ರಮ ಯೋಗಿ ಮಾನಧನ್ ಯೋಜನೆ (PM-SYM) ಮತ್ತು ಇತರೆ ಸಾಮಾಜಿಕ ಭದ್ರತಾ ಯೋಜನೆಗಳು ಇವುಗಳಲ್ಲಿ ನೋಂದಾಯಿಸಿಕೊಳ್ಳಲು ಇ ಶ್ರಮ್‌ ಕಾರ್ಡ್ ಸಹಾಯಕವಾಗುತ್ತದೆ.

5. ಉದ್ಯೋಗ ಮತ್ತು ಕೌಶಲ್ಯ ಅಭಿವೃದ್ಧಿ ಅವಕಾಶಗಳು

ದೇಶಾದ್ಯಂತ ಕಾರ್ಮಿಕರ ಸಮಗ್ರ ಡೇಟಾಬೇಸ್ ನಿರ್ಮಾಣವಾಗುವುದರಿಂದ ಸರ್ಕಾರದ ಕೌಶಲ್ಯ ಅಭಿವೃದ್ಧಿ ತರಬೇತಿಗಳು, ಉದ್ಯೋಗ ಮಾಹಿತಿ ಹಾಗೂ ಹೊಸ ಉದ್ಯೋಗಾವಕಾಶಗಳ ಕುರಿತು ಮಾಹಿತಿಯನ್ನು ಸುಲಭವಾಗಿ ಪಡೆಯಬಹುದು.
ಒಟ್ಟಾರೆ, ಇ ಶ್ರಮ್‌ ಕಾರ್ಡ್ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ವಿಮೆ, ಪಿಂಚಣಿ ಮತ್ತು ಉದ್ಯೋಗ ಸಂಬಂಧಿತ ಸೌಲಭ್ಯಗಳನ್ನು ಪಡೆಯಲು ನೆರವಾಗುವ ಮಹತ್ವದ ಗುರುತಿನ ಚೀಟಿಯಾಗಿದೆ.

ಇ-ಶ್ರಮ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು

  • ಆಧಾರ್ ಕಾರ್ಡ್
  • ಗುರುತಿನ ಚೀಟಿ
  • ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ (OTP ಪಡೆಯಲು ಕಡ್ಡಾಯ)
  • ಬ್ಯಾಂಕ್ ಖಾತೆ ವಿವರಗಳು (ಖಾತೆ ಸಂಖ್ಯೆ ಮತ್ತು IFSC ಕೋಡ್)

ಇ-ಶ್ರಮ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ವಿಧಾನ

1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ : 

ನಿಮ್ಮ ಮೊಬೈಲ್‌ನ ಬ್ರೌಸರ್ (Google Chrome ಅಥವಾ ಇತರೆ ಬ್ರೌಸರ್) ತೆರೆಯಿರಿ. ನಂತರ ಇ-ಶ್ರಮದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು “Register on e-Shram” ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

2. ಭಾಷೆ ಆಯ್ಕೆ : 

ವೆಬ್‌ಸೈಟ್ ತೆರೆದ ನಂತರ ಅಗತ್ಯವಿದ್ದರೆ ಮೇಲ್ಭಾಗದಲ್ಲಿರುವ ಭಾಷೆ ಬದಲಾವಣೆ ಆಯ್ಕೆಯನ್ನು ಬಳಸಿ ನಿಮಗೆ ಅನುಕೂಲವಾದ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ.

3. ಸ್ವಯಂ ನೋಂದಣಿ (Self Registration) : 

  • ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
  • ಕ್ಯಾಪ್ಚಾ ಕೋಡ್ ನಮೂದಿಸಿ.
  • “Send OTP” ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಮೊಬೈಲ್‌ಗೆ ಬಂದ OTP ಅನ್ನು ನಮೂದಿಸಿ ಮತ್ತು Submit ಮಾಡಿ.

4. ಆಧಾರ್ ವಿವರಗಳ ನಮೂದನೆ : 

  • ಆಧಾರ್ ಕಾರ್ಡ್‌ನಲ್ಲಿರುವ 12 ಅಂಕಿಗಳ ಸಂಖ್ಯೆಯನ್ನು ನಮೂದಿಸಿ.
  • ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬಂದ OTP ಅನ್ನು ನಮೂದಿಸಿ ದೃಢೀಕರಿಸಿ.
  • ದೃಢೀಕರಣದ ನಂತರ ಆಧಾರ್‌ನಲ್ಲಿರುವ ಮಾಹಿತಿ ಸ್ವಯಂಚಾಲಿತವಾಗಿ ಕಾಣಿಸುತ್ತದೆ.
  • ಮಾಹಿತಿಯನ್ನು ಪರಿಶೀಲಿಸಿ.

5. ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ : 

  • ಹೆಸರು
  • ಇ-ಮೇಲ್ ಐಡಿ
  • ಮೊಬೈಲ್ ಸಂಖ್ಯೆ
  • ವಿಳಾಸದ ಮಾಹಿತಿ
  • ಸಾಮಾಜಿಕ ವರ್ಗ
  • ತಂದೆ/ಪತಿ ಹೆಸರು ಮುಂತಾದ ವಿವರಗಳನ್ನು ನಮೂದಿಸಿ.

6. ವಿಳಾಸದ ವಿವರ :

ನೀವು ಈಗಿರುವ ವಿಳಾಸವನ್ನು ರಾಜ್ಯ, ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಎಂಬ ವಿರಗಳೊಂದಿಗೆ ಪ್ರಸ್ತುತ ಅಥವಾ ಶಾಶ್ವತ ವಿಳಾಸವನ್ನು ಸರಿಯಾಗಿ ನಮೂದಿಸಿ.

7. ಶೈಕ್ಷಣಿಕ ವಿವರ ಮತ್ತು ಆದಾಯದ ಮಾಹಿತಿ : 

  • ನೀವು ಏನು ಓದಿದ್ದೀರಾ ಎಂಬ ಶೈಕ್ಷಣಿಕ ಅರ್ಹತೆ
  • ಕುಟುಂಬದ ಮಾಸಿಕ ಆದಾಯದ ವಿವರ

8. ಉದ್ಯೋಗದ ವಿವರ : 

ನೀವು ಮಾಡುತ್ತಿರುವ ಕೆಲಸದ ಮಾಹಿತಿಯನ್ನು ನಮೂದಿಸಿ. ಉದಾಹರಣೆಗೆ:

  • ಚಾಲಕ (Driver)
  • ಕಾರ್ಪೆಂಟರ್ (Carpenter)
  • ಟೈಲರ್ (Tailor)
  • ಪೇಂಟರ್ (Painter)
  • ಕೃಷಿ ಕಾರ್ಮಿಕ ಇತ್ಯಾದಿ.

9. ಬ್ಯಾಂಕ್ ಖಾತೆ ವಿವರ : 

ಹಣ ವರ್ಗಾವಣೆಗೆ ಅಗತ್ಯವಾದ:

  • ಬ್ಯಾಂಕ್ ಖಾತೆ ಸಂಖ್ಯೆ
  • IFSC ಕೋಡ್

ಇವುಗಳನ್ನು ಸರಿಯಾಗಿ ನಮೂದಿಸಿ.

10. ಪರಿಶೀಲನೆ ಮತ್ತು ಸಲ್ಲಿಕೆ : 

ನೀವು ನಮೂದಿಸಿದ ಎಲ್ಲಾ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ. ನಂತರ Self Declaration ಗೆ ಒಪ್ಪಿಗೆ ನೀಡಿ Submit ಬಟನ್ ಮೇಲೆ ಕ್ಲಿಕ್ ಮಾಡಿ.

11. E Shram Card ಡೌನ್‌ಲೋಡ್ : 

ನೋಂದಣಿ ಯಶಸ್ವಿಯಾಗಿ ಪೂರ್ಣಗೊಂಡ ನಂತರ ನಿಮ್ಮ 12 ಅಂಕಿಗಳ UAN (Universal Account Number) ಪ್ರದರ್ಶಿಸಲಾಗುತ್ತದೆ. ನಂತರ “Download UAN Card” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ಕಾರ್ಡ್ ಅನ್ನು ನಿಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿ ಉಳಿಸಿಕೊಳ್ಳಬಹುದು.

ಸೂಚನೆ: ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ದಾಖಲೆಗಳು ಮತ್ತು ಬ್ಯಾಂಕ್ ವಿವರಗಳನ್ನು ಸರಿಯಾಗಿ ಪರಿಶೀಲಿಸಿ. ತಪ್ಪು ಮಾಹಿತಿ ನೀಡಿದರೆ ನೋಂದಣಿ ಪ್ರಕ್ರಿಯೆಯಲ್ಲಿ ಸಮಸ್ಯೆಗಳು ಉಂಟಾಗಬಹುದು.

ಅರ್ಜಿಯನ್ನು ಸಲ್ಲಿಸಿದ ನಂತರ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ

  • ಮೊದಲು ಇ ಶ್ರಮ್ ಯೋಜನೆಯ ಅಧಿಕೃತ ವೆಬ್ಸೈಟ್ ಅನ್ನು ತೆರೆಯಿರಿ
  • ನೀಡಲಾಗಿರುವ 12 ಸಂಖ್ಯೆಯ ಯು ಎ ಎನ್ ನಂಬರನ್ನು ನಮೂದಿಸಿ ಓಟಿಪಿಯನ್ನು ಕಳುಹಿಸಿ
  • ನೊಂದಾವಣಿ ಗೊಂಡಿರುವ ಮೊಬೈಲ್ ಸಂಖ್ಯೆಗೆ ಓಟಿಪಿ ಬರುತ್ತದೆ ಓಟಿಪಿಯನ್ನು ನಮೂದಿಸಿ ದೃಢೀಕರಿಸಿ
  • ನಂತರ ನಿಮ್ಮ ಅರ್ಜಿ ಸ್ಥಿತಿಯನ್ನು ಪರಿಶೀಲಿಸಬಹುದು

E Shram Card ಅಪ್ಡೇಟ್ ಮಾಡುವ ವಿಧಾನ

ಒಮ್ಮೆ ನೋಂದಾವಣೆಗೊಂಡ ನಂತರ ಕಾರ್ಡಿನ ವಿವರಗಳನ್ನು ನವೀಕರಣಕ್ಕೆ ಅಥವಾ ಬದಲಾವಣೆಗೆ ಒಳಪಡಿಸಬೇಕೆಂದರೆ ಈ ಕಾರ್ಡಿನ ವಿವರಗಳನ್ನು ಅಪ್ಡೇಟ್ ಮಾಡಬಹುದಾಗಿರುತ್ತದೆ. ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಯು. ಎ. ಎನ್ ನಂಬರ್ ಹಾಗೂ ಒಟಿಪಿಯನ್ನು ನಮೂದಿಸುವ ಮೂಲಕ ಖಾತೆಗೆ ಲಾಗಿನ್ ಆಗಿ ಅಲ್ಲಿ ‌Update Your Details ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡುವುದರ ಮೂಲಕ ತಮ್ಮ ವೈಯಕ್ತಿಕ ವಿವರಗಳು, ವಿಳಾಸದ ವಿವರಗಳು, ಶೈಕ್ಷಣಿಕ ವಿವರ, ಕುಟುಂಬದ ಆದಾಯದ ಮಾಹಿತಿ, ಉದ್ಯೋಗದ ವಿವರ, ಬ್ಯಾಂಕ್ ಖಾತೆ ವಿವರ ಹಾಗೂ ಮುಂತಾದ ಪ್ರಮುಖ ಮಾಹಿತಿಗಳನ್ನು ನವೀಕರಣಕ್ಕೆ ಒಳಪಡಿಸಬಹುದಾಗಿರುತ್ತದೆ

ಇ ಶ್ರಮ್ ಕಾರ್ಡ್ ಹಾಗೂ ಕಾರ್ಮಿಕ ಕಾರ್ಡ್ ನಡುವಿನ ವ್ಯತ್ಯಾಸಗಳು

ಅಂಶಗಳು ಇ ಶ್ರಮ್‌ ಕಾರ್ಡ್ ಕಾರ್ಮಿಕ ಕಾರ್ಡ್
ಅನ್ವಯಿಸುವ ವ್ಯಾಪ್ತಿ ಭಾರತ ದೇಶದಾದ್ಯಂತ ನಿಗಧಿತ ರಾಜ್ಯದಲ್ಲಿ ಮಾತ್ರ
ನೋಂದಣಿ ವಿಧಾನ ಆನ್‌ ಲೈನ್ ಆನ್‌ ಲೈನ್‌ / ಆಫ್‌ ಲೈನ್

ಈ E Shram Card ಗೆ ಯಾರು ಅರ್ಜಿ ಸಲ್ಲಿಸಲು ಅರ್ಹತೆ ಇರುವುದಿಲ್ಲ

  • ರಾಜ್ಯ ಸರ್ಕಾರಿ ಅಥವಾ ಕೇಂದ್ರ ಸರ್ಕಾರ ನೌಕರರು.
  • ಕಾರ್ಮಿಕ ಭವಿಷ್ಯ ನಿಧಿ ಸೌಲಭ್ಯವನ್ನು ಹೊಂದಿರುವ ಸದಸ್ಯರು.
  • ರಾಜ್ಯ ಕಾರ್ಮಿಕ ವಿಮಾ ಸಂಸ್ಥೆಯಲ್ಲಿ ಸದಸ್ಯತ್ವವನ್ನು ಹೊಂದಿರುವವರು.
  • ಆದಾಯ ತೆರಿಗೆಯನ್ನು ಪಾವತಿಸುತ್ತಿರುವವರು.

ಇ ಶ್ರಮ್ ಕಾರ್ಡಿನ ಪ್ರಮುಖ ವೈಶಿಷ್ಟ್ಯಗಳು

ಇ ಶ್ರಮ್ ಕಾರ್ಡ್ ಒಂದು ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ಆರಂಭಿಸಿರುವ ಯೋಜನೆಯಾಗಿದ್ದು‌, ಈ ಕಾರ್ಡಿನ ನೋಂದಣಿ ಪೂರ್ಣಗೊಂಡ ನಂತರ ಕಾರ್ಮಿಕರಿಗೆ 12 ಅಂಕಿಯ ಯುನಿವರ್ಸಲ್ ಅಕೌಂಟ್ ನಂಬರ್ ನೀಡಲಾಗುತ್ತದೆ. ಈ ನಂಬರ್ ಕಾರ್ಮಿಕರ ಶಾಶ್ವತ ಗುರುತಿನ ಸಂಖ್ಯೆಯಾಗಿದ್ದು ದೇಶದಾದ್ಯಂತ ಮಾನ್ಯವಾಗಿರುತ್ತದೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಕೆಲಸಕ್ಕಾಗಿ ತೆರಳಿದರು ಸಹ ಇದರ ಪ್ರಯೋಜನಗಳನ್ನು ಪಡೆಯಬಹುದು ಹಾಗೂ ನವೀಕರಣ ಮಾಡಿಕೊಳ್ಳಬಹುದು.

ಈ ಯೋಜನೆಯ ಮತ್ತೊಂದು ವಿಶೇಷ ಅಂಶ ಎಂದರೆ ಈ ಕಾರ್ಡಿಗೆ ನೋಂದಣಿ ಪ್ರಕ್ರಿಯೆಯು ಸಂಪೂರ್ಣವಾಗಿ ಉಚಿತವಾಗಿರುತ್ತದೆ ಕಾರ್ಮಿಕರು ಯಾವುದೇ ಶುಲ್ಕವನ್ನು ಪಾವತಿಸದೆ ನೋಂದಣಿಯನ್ನು ಪೂರ್ಣ ಮಾಡಿಕೊಳ್ಳಬಹುದು. ಜೊತೆಗೆ ಈ ಕಾರ್ಡ್ ಹೊಂದಿರುವವರು ತಮ್ಮ ವೈಯಕ್ತಿಕ ವಿವರಗಳು ವಿಳಾಸದ ಮಾಹಿತಿ ಬ್ಯಾಂಕ್ ಖಾತೆ ವಿವರಗಳು ಹಾಗೂ ಉದ್ಯೋಗ ಸಂಬಂಧಿತ ಮಾಹಿತಿಯನ್ನು ಅವರಿಗೆ ಅವಶ್ಯಕತೆ ಅಥವಾ ಅನಿವಾರ್ಯವಿದ್ದಲ್ಲಿ ಆನ್ಲೈನ್ ಮೂಲಕ ಬದಲಾವಣೆ ಗೊಳಿಸಿ ನವೀಕರಣ ಮಾಡಬಹುದು ಹಾಗೂ ಫೋನ್ ಬಳಸಿಕೊಂಡು ಮನೆಯಲ್ಲಿಯೇ ಅರ್ಜಿ ಸಲ್ಲಿಸಿ ಕಾರ್ಡ್ ಪಡೆಯಬಹುದಾಗಿರುತ್ತದೆ ಇದರಿಂದ ಕಾರ್ಮಿಕರಿಗೆ ಸಮಯ ಹಾಗೂ ವೆಚ್ಚಗಳು ಎರಡು ಉಳಿತಾಯ ಆಗುತ್ತವೆ.

E Shram Card ನ ಅಗತ್ಯತೆ ಏನು

  • ಅಸಂಘಟಿತ ವಲಯದ ಕಾರ್ಮಿಕರಿಗೆ ಈ ಕಾರ್ಡ್ ಒಂದು ಗುರುತಿನ ದಾಖಲೆಯಾಗಿ ಇರುತ್ತದೆ.
  • ಕೇಂದ್ರ ಸರ್ಕಾರದ ಹಾಗೂ ರಾಜ್ಯ ಸರ್ಕಾರದ ಕಾರ್ಮಿಕ ಸ್ನೇಹಿ ಯೋಜನೆಗಳಿಗೆ ಸುಲಭವಾಗಿ ಅರ್ಜಿಯನ್ನು ಸಲ್ಲಿಸಬಹುದು.
  • ಸಾಮಾಜಿಕ ಭದ್ರತೆ ವಿಮಾ ಸೌಲಭ್ಯ ಹಾಗೂ ಇನ್ನಿತರ ಯೋಜನೆಗಳಿಗೆ ಪ್ರವೇಶ ಹಾಗೂ ಭದ್ರತೆ ದೊರೆಯುತ್ತದೆ.
  • ಕಾರ್ಮಿಕರಿಗೆ ಸಂಬಂಧಿಸಿದ ಮಾಹಿತಿ ವಿವರಗಳು ಹಾಗೂ ಡೇಟಾ ಬೇಸ್‌ ಅನ್ನು ನಿರ್ಮಾಣ ಮಾಡಲು ಸಹಕರಿಸುತ್ತದೆ.

ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಪ್ರಮುಖ ಅಂಶಗಳು

  • ಆಧಾರ್ ಕಾರ್ಡಿಗೆ ಮೊಬೈಲ್ ನಂಬರ್ ಕಡ್ಡಾಯವಾಗಿ ಲಿಂಕ್ ಆಗಿರಬೇಕು ಇಲ್ಲವಾದಲ್ಲಿ ಒಟಿಪಿ ಬರುವುದಿಲ್ಲ.
  • ತಾವು ನಮೂದಿಸುವ ಬ್ಯಾಂಕ್ ಖಾತೆ ವಿವರಗಳು ಸರಿಯಾಗಿದ್ದು ಬ್ಯಾಂಕ್ ಖಾತೆ ಸಕ್ರಿಯವಾಗಿರಬೇಕು ಯಾವುದೇ ತೊಂದರೆಯನ್ನು ಹೊಂದಿರಬಾರದು ಡಿ ಬಿ ಟಿ ಲಿಂಕ್ ಕಡ್ಡಾಯವಾಗಿ ಆಗಿರಬೇಕು.
  • ಸರಿಯಾದ ಹಾಗೂ ನೀವು ಮಾಡುತ್ತಿರುವ ಉದ್ಯೋಗದ ಮಾಹಿತಿಯನ್ನೇ ನಮೂದಿಸಬೇಕು ಇದನ್ನು ಹೊರತುಪಡಿಸಿ ಬೇರೆ ಉದ್ಯೋಗ ಮಾಹಿತಿಯನ್ನು ನೀಡಬೇಡಿ.
  • ಯು ಎ ಎನ್ ಸಂಖ್ಯೆಯನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಿ ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ.

ಇ ಶ್ರಮ್ ಕಾರ್ಡಿನ ಮಿತಿಗಳು ಮತ್ತು ಅನಾನುಕೂಲತೆಗಳು

  • ಈ ಯೋಜನೆಯು ಉದ್ಯೋಗ ಖಾತರಿ ಯನ್ನು ನೀಡುವುದಿಲ್ಲ ಬದಲಾಗಿ ಭದ್ರತೆಯನ್ನು ಮಾತ್ರ ನೀಡುತ್ತದೆ.
  • ಯೋಜನೆಯ ಸೌಲಭ್ಯಗಳನ್ನು ತಲುಪಿಸುವ ವ್ಯವಸ್ಥೆ ಇದಾಗಿದ್ದು ಮಾಸಿಕವಾಗಿ ಹಣ ನೀಡುವ ಯೋಜನೆಯನ್ನು ರೂಪಿಸಿಲ್ಲ.
  • ಕೇಂದ್ರ ಸರ್ಕಾರಿ ಕಾರ್ಮಿಕ ಸ್ನೇಹಿ ಯೋಜನೆಗಳಿಗೆ ಸ್ವಯಂ ಚಾಲಿತವಾಗಿ ಅರ್ಹತೆ ಸಿಗುವುದಿಲ್ಲ ಬದಲಾಗಿ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.

E Shram Card Related FAQ’s

1. E Shram Card ನೋಂದಣಿ ಉಚಿತವೇ?

ಹೌದು, ಇ ಶ್ರಮ್ ಕಾರ್ಡ್ ಯೋಜನೆಯ ನೋಂದಣಿ ಹಾಗೂ ಅರ್ಜಿ ಸಲ್ಲಿಕೆ ಹಾಗೂ ಕಾರ್ಡಿನ ಸೌಲಭ್ಯಗಳು ಸಂಪೂರ್ಣ ಉಚಿತವಾಗಿರುತ್ತವೆ.

2. ಇ ಶ್ರಮ್ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು?

ಕನಿಷ್ಠ 16 ವರ್ಷದಿಂದ ಗರಿಷ್ಠ 59 ವರ್ಷಗಳ ವಯೋಮಿತಿಯನ್ನು ಹೊಂದಿರಬೇಕು.

3. ಈ ಇ ಶ್ರಮ್ ಕಾರ್ಡ್ ಗೆ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಬಹುದೇ?

ಹೌದು ನಿಮ್ಮ ಮನೆಯಲ್ಲಿಯೇ ಕುಳಿತು ನಿಮ್ಮ ಮೊಬೈಲ್ ಮೂಲಕ ಈ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು ಹಾಗೂ ಯಶಸ್ವಿಯಾಗಿ ಕಾರ್ಡ್ ಅನ್ನು ಪಡೆಯಬಹುದು.

4. ಯು ಎ ಎನ್ ನಂಬರ್ ಎಂದರೆ ಏನು?

ಯೋಜನೆ ಅಡಿಯಲ್ಲಿ ನೋಂದಾವಣೆಗೊಂಡ ಅರ್ಹ ಅಭ್ಯರ್ಥಿಗೆ ನೀಡುವ 12 ಅಂಕಿಯ ವಿಶಿಷ್ಟ ನೊಂದಣಿ ಸಂಖ್ಯೆಯಾಗಿದ್ದು ಈ ಸಂಖ್ಯೆಯ ಮೂಲಕವೇ ಯೋಜನೆಗಳ ತಲುಪಿವಿಕೆ ಕಾರ್ಯಕ್ರಮ ನಡೆಯುತ್ತದೆ.

5. E Shram Card ಕಳೆದು ಹೋದರೆ ಏನು ಮಾಡಬೇಕು?

ಇ ಶ್ರಮ್ ಕಾರ್ಡ್ ಕಳೆದು ಹೋದರೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ತಮ್ಮ ಖಾತೆಗೆ ಲಾಗಿನ್ ಆಗಿ ಕಾರ್ಡನ್ನು ಮತ್ತೊಮ್ಮೆ ಡೌನ್ಲೋಡ್ ಮಾಡಿಕೊಳ್ಳ ಬಹುದು.

6. E Shram Card ಗೆ ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕು?

ಆಧಾರ್ ಕಾರ್ಡ್, ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್, ಬ್ಯಾಂಕ್ ಖಾತೆ ವಿವರಗಳು ಹಾಗೂ ಯಾವ ವಲಯದಲ್ಲಿ ಕೆಲಸ ಮಾಡುತ್ತೀರಾ ಎಂಬ ವಿವರಗಳು ಬೇಕಾಗುತ್ತದೆ.

7. E Shram Card ನಿಂದ ಯಾವ ಪ್ರಯೋಜನಗಳು ದೊರೆಯುತ್ತವೆ?

ಅಪಘಾತ ವಿಮೆ ಸಾಮಾಜಿಕ ಭದ್ರತೆ ಉದ್ಯೋಗದ ಬಗ್ಗೆ ಮಾಹಿತಿ ಸೌಲಭ್ಯಗಳು ದೊರೆಯುತ್ತವೆ.

8. ಇಪಿಎಫ್ಓ ಅಥವಾ ಇಎಸ್ಐಸಿ ಸದಸ್ಯರು ಈ E Shram Card ಗೆ ಅರ್ಜಿ ಸಲ್ಲಿಸಬಹುದು?

ಇಲ್ಲ, ಇಪಿಎಫ್ಓ ಇಎಸ್ಐಸಿ ಸದಸ್ಯರು ಈ ಕಾರ್ಡಿಗೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.

9. E Shram Card ನ ಅಪಘಾತ ವಿಮೆಯ ಮೊತ್ತ ಎಷ್ಟು?

ಅಪಘಾತ ಸಂಭವಿಸಿದ ಪಕ್ಷದಲ್ಲಿ 2 ಲಕ್ಷ ರೂಗಳ ವರೆಗೆ ವಿಮಾ ಸೌಲಭ್ಯ ದೊರೆಯುತ್ತದೆ.

10. ಇ ಶ್ರಮ್ ಕಾರ್ಡ್ ನಲ್ಲಿ ವಿವರಗಳನ್ನು ನವೀಕರಿಸಬಹುದೇ?

ಹೌದು, ವಿವರಗಳನ್ನು ಅಗತ್ಯವಿದ್ದಲ್ಲಿ ನವೀಕರಣಕ್ಕೆ ಒಳಪಡಿಸಬಹುದು.

11. ನಾವು ಈಗ ಕರ್ನಾಟಕ ರಾಜ್ಯದಲ್ಲಿ ವಾಸವಿದ್ದು ಮುಂದೆ ಬೇರೆ ರಾಜ್ಯಕ್ಕೆ ವಲಸೆ ಹೊಂದಿದರು ಕಾರ್ಡ್ ಮಾನ್ಯವಾಗಿರುತ್ತದೆಯೇ?

ಹೌದು, E Shram Card ಕೇಂದ್ರ ಸರ್ಕಾರದ ಕಾರ್ಮಿಕ ಸೇನೆ ಯೋಜನೆಯಾಗಿದ್ದು ಎಲ್ಲ ರಾಜ್ಯಗಳಲ್ಲಿಯೂ ಇ ಶ್ರಮ್ ಕಾರ್ಡ್ ಮಾನ್ಯವಾಗಿರುತ್ತದೆ.

12. ಕೇಂದ್ರ ಸರ್ಕಾರದ ಭವಿಷ್ಯ ಯೋಜನೆಗಳಲ್ಲಿ ಪ್ರಯೋಜನ ದೊರೆಯುತ್ತದೆಯೇ?

ಹೌದು, ಪ್ರಸ್ತುತ ಈಗಿರುವ ಯೋಜನೆಗಳು ಹಾಗೂ ಭವಿಷ್ಯದಲ್ಲಿ ಬರಬಹುದಾದ ಕಾರ್ಮಿಕ ಕಲ್ಯಾಣ ಯೋಜನೆಗಳ ಪ್ರಯೋಜನವನ್ನು ಸಂಪೂರ್ಣವಾಗಿ ಪಡೆಯಬಹುದು.

E Shram Card ಗೆ ಸಂಬಂಧಿಸಿದ ಪ್ರಮುಖ ಲಿಂಕ್‌ ಗಳು

ಮಾಹಿತಿ ಸಂಬಂಧಪಟ್ಟ ಲಿಂಕ್
ಅಧಿಕೃತ ವೆಬ್‌ ಸೈಟ್ URL  ಇ ಶ್ರಮ್‌ ಕಾರ್ಡ್‌ ಯೋಜನೆ
ಅರ್ಜಿ ಸಲ್ಲಿಕೆಗೆ ಲಿಂಕ್  ನೋಂದಣಿ    ಅರ್ಜಿ ಸಲ್ಲಿಕೆ
ನಮ್ಮ ವಾಟ್ಸಾಪ್‌ ಗುಂಪು ಸೇರಲು ಇಲ್ಲಿ ಕ್ಲಿಕ್‌ ಮಾಡಿ
ಹೆಚ್ಚುವರಿ ಮಾಹಿತಿ ನೇಮಕಾತಿ  ಪರೀಕ್ಷಾ ಸಲಹೆ   ವೃತ್ತಿ ಮಾರ್ಗದರ್ಶನ  ಸರ್ಕಾರಿ ಯೋಜನೆಗಳು

Last Updated On 13-06-2026

E Shram Card ಗೆ ಸಂಬಂಧಿಸಿದ 2026 ರ ಹೊಸ ಅಪ್ಡೇಟ್‌ ಗಳು

2026-27ನೇ ಆರ್ಥಿಕ ವರ್ಷದಲ್ಲಿ ಕಾರ್ಮಿಕ ಸ್ನೇಹಿ ಯೋಜನೆಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಇ ಶ್ರಮ್‌ ಕಾರ್ಡಿನ ಅಪ್ಡೇಟ್ ಹಾಗೂ ಹೊಸ ಮಾಹಿತಿಯನ್ನು ಸೇರಿಸಲು ಸರ್ಕಾರವು ಚಿಂತನೆಯನ್ನು ನಡೆಸುತ್ತಿದ್ದು, ಈ ಯೋಜನೆಗಳ ಮಾಹಿತಿ ಹಾಗೂ ಅಧಿಸೂಚನೆಗಳನ್ನು ಪ್ರಕಟಿಸಿದಲ್ಲಿ ಅಧಿಕೃತ ವೆಬ್ಸೈಟ್ ಮೂಲಕ ಪ್ರತಿಯೊಂದು ಮಾಹಿತಿಯನ್ನು ತಿಳಿದುಕೊಳ್ಳಬಹುದು.

ತಜ್ಞರ ಸಲಹೆಗಳು

ಇ-ಶ್ರಮ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್‌ನಲ್ಲಿರುವ ಮಾಹಿತಿ‌ ಸರಿಯಾಗಿರಬೇಕು, ಬ್ಯಾಂಕ್ ಖಾತೆ ಸಂಖ್ಯೆ, IFSC ಕೋಡ್ ಹಾಗೂ ಆಧಾರ್‌ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಅತ್ಯಂತ ಜಾಗರೂಕತೆಯಿಂದ ಮತ್ತು ಸರಿಯಾಗಿ ನಮೂದಿಸಬೇಕು. ಯಾವುದೇ ಮಾಹಿತಿಗಳನ್ನು ತಪ್ಪಾಗಿ ನಮೂದಿಸಿದರೆ ನೋಂದಣಿ ಪ್ರಕ್ರಿಯೆಯಲ್ಲಿ ತೊಂದರೆ ಉಂಟಾಗಬಹುದು ಅಥವಾ ಭವಿಷ್ಯದಲ್ಲಿ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಸಮಸ್ಯೆಗಳು ಎದುರಾಗಬಹುದು. ಆದುದರಿಂದ ಎಚ್ಚರಿಕೆಯಿಂದ ಎಲ್ಲಾ ಮಾಹಿತಿಯನ್ನು ನಿಗಧಿತ ಸ್ಥಳಗಳಲ್ಲಿ ನಮೂದಿಸಿ. ನೋಂದಣಿ ಯಶಸ್ವಿಯಾಗಿ ಪೂರ್ಣಗೊಂಡ ನಂತರ ದೊರೆಯುವ 12 ಅಂಕಿಯ UAN (Universal Account Number) ಸಂಖ್ಯೆಯನ್ನು ಸುರಕ್ಷಿತವಾಗಿ ಸೆರೆ ಹಿಡಿದು ದಾಖಲಿಸಿಕೊಂಡು ಇಟ್ಟುಕೊಳ್ಳುವುದು ತುಂಬಾ ಅಗತ್ಯವಾಗಿದೆ. ಈ ಸಂಖ್ಯೆಯು ಮುಂದಿನ ದಿನಗಳಲ್ಲಿ ಕಾರ್ಮಿಕರ ಮಾಹಿತಿ ಪರಿಶೀಲನೆ, ಕಾರ್ಡಿನ ನವೀಕರಣ ಹಾಗೂ ಯೋಜನೆಗಳ ಸೌಲಭ್ಯಗಳನ್ನು ಪಡೆಯಲು ಹಾಗೂ ಅದಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ಉಪಯುಕ್ತವಾಗಿರುತ್ತದೆ.

Conclusion

ಕೇಂದ್ರ ಸರ್ಕಾರದ ಕಾರ್ಮಿಕ ಸ್ನೇಹಿ ಯೋಜನೆಯಾದ ಇ ಶ್ರಮ್‌ ಕಾರ್ಡನ್ನು ಮೊಬೈಲ್ ನಲ್ಲಿಯೇ ಮನೆಯಿಂದಲೇ ಪಡೆದುಕೊಳ್ಳಬಹುದು. ಈ ಕಾರ್ಡಿನ ಮೂಲಕ ಅಸಂಘಟಿತ ವಲಯದ ಕಾರ್ಮಿಕರು ವಿಮಾ ಸೌಲಭ್ಯಗಳು, ಉದ್ಯೋಗ ಭದ್ರತೆ, ಸಾಮಾಜಿಕ ಭದ್ರತೆ ಹಾಗೂ ಕೇಂದ್ರ ಸರ್ಕಾರವು ಹೊರಡಿಸುವ ಕಾರ್ಮಿಕ ಸ್ನೇಹಿ ಯೋಜನೆಗಳು ಹಾಗೂ ಅದರ ಪ್ರಯೋಜನಗಳನ್ನು ಸುಲಭವಾಗಿ ಪಡೆಯಬಹುದಾಗಿರುತ್ತದೆ. ಈ ಯೋಜನೆಗಳು ಕಾರ್ಮಿಕರ ಜೀವನ ಗುಣಮಟ್ಟವನ್ನು ಉತ್ತಮಗೊಳಿಸಲು ಹಾಗೂ ಅವರ ಆದಾಯದ ಮಟ್ಟವನ್ನು ಹೆಚ್ಚಿಸಲು ಸಹಕರಿಸುವುದರ ಜೊತೆಯಲ್ಲಿ ದೇಶದ ಉತ್ಪಾದನೆ ಮಟ್ಟವನ್ನು ಸಹ ಹೆಚ್ಚಿಸುವಲ್ಲಿ ಸಹಕರಿಸುತ್ತವೆ. ದೇಶದ ಕಾರ್ಮಿಕ ಶ್ರಮವು ಉತ್ತಮವಾಗಿದ್ದರೆ ಆದೇಶವು ಉತ್ತಮ ರೀತಿಯಲ್ಲಿ ಅಭಿವೃದ್ಧಿಯನ್ನು ಹೊಂದುತ್ತದೆ ಎಂಬ ಅಭಿಪ್ರಾಯವಿದೆ. ಆದುದರಿಂದ ನೀವೇನಾದರೂ ಅಸಂಘಟಿತ ವಲಯದ ಕಾರ್ಮಿಕರಾಗಿದ್ದರೆ ಹಿಂದೆ ತಮ್ಮ ಮೊಬೈಲ್ ಮೂಲಕ ಅರ್ಜಿಯನ್ನು ಸಲ್ಲಿಸಿ ತಮ್ಮ ಕಾರ್ಡನ್ನು ಪಡೆದುಕೊಳ್ಳುವುದರ ಮೂಲಕ ಸಿಗಬಹುದಾದ ಪ್ರಯೋಜನಗಳನ್ನು ತಪ್ಪದೇ ಪಡೆದುಕೊಳ್ಳಿ

 

Author Note : ಸರ್ಕಾರಿ ಉದ್ಯೋಗಗಳು, ಪರೀಕ್ಷಾ ತಯಾರಿ, ವೃತ್ತಿ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು ಹಾಗೂ ಪ್ರಮುಖ ಸುದ್ದಿಗಳ ಕುರಿತು ನಿಖರ ಮತ್ತು ಉಪಯುಕ್ತ ಮಾಹಿತಿಯನ್ನು ಓದುಗರಿಗೆ ಸರಳ ಕನ್ನಡದಲ್ಲಿ ತಲುಪಿಸುವುದು ನಮ್ಮ ಉದ್ದೇಶವಾಗಿದೆ.

About Author : ಲೇಖಕರು ಸರ್ಕಾರಿ ಉದ್ಯೋಗ ಮಾಹಿತಿ, ಸ್ಪರ್ಧಾತ್ಮಕ ಪರೀಕ್ಷಾ ಸಲಹೆಗಳು, ವೃತ್ತಿ ಮಾರ್ಗದರ್ಶನ ಮತ್ತು ಸರ್ಕಾರಿ ಯೋಜನೆಗಳ ಕುರಿತು ಸಂಶೋಧನೆ ಆಧಾರಿತ ಲೇಖನಗಳನ್ನು ಪ್ರಕಟಿಸುವ ಅನುಭವಿ ಬ್ಲಾಗರ್ ಆಗಿದ್ದಾರೆ.

Disclaimer: ಈ ಲೇಖನದಲ್ಲಿನ ಮಾಹಿತಿ ಸಾರ್ವಜನಿಕ ಹಾಗೂ ಅಧಿಕೃತ ಮೂಲಗಳಿಂದ ಸಂಗ್ರಹಿಸಲಾಗಿದೆ. ಯೋಜನೆಯ ನಿಯಮಗಳು ಕಾಲಕಾಲಕ್ಕೆ ಬದಲಾಗಬಹುದು. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಇ-ಶ್ರಮ್ ವೆಬ್‌ಸೈಟ್‌ನಲ್ಲಿ ಮಾಹಿತಿಯನ್ನು ಪರಿಶೀಲಿಸಿ.

 

ಸಂಬಂಧಿತ ಮಾಹಿತಿಗಳು:

PM Surya Ghar Scheme 2026, Big Update: ಈ ಯೋಜನೆಯಿಂದ ಸಿಗಲಿದೆ ಉಚಿತ ಸೋಲಾರ್‌. ಅರ್ಹತೆ ಹಾಗೂ ಅರ್ಜಿ ಸಲ್ಲಿಕೆಯ ಮಾಹಿತಿ ಇಲ್ಲಿದೆ

Land Purchase Scheme 2026, Big Update: ಸರ್ಕಾರದ ಈ ಯೋಜನೆಯಿಂದ ಭೂಮಿ ಖರೀದಿಗೆ ಸಿಗಲಿದೆ ಸಬ್ಸಿಡಿ ಹಾಗೂ ಸಾಲ, ಸಂಪೂರ್ಣ ಮಾಹಿತಿ ಇಲ್ಲಿದೆ

Raita Siri Yojane 2026, Best Scheme : ಕರ್ನಾಟಕ ಸರ್ಕಾರದ ಈ ಯೋಜನೆ ರೈತರಿಗೆ ವರದಾನ, ಸಂಪೂರ್ಣ ವಿವರ ತಿಳಿಯಿರಿ

Basava Housing Scheme 2026, Big Update : ಪಡೆಯಿರಿ ಉಚಿತ ಮನೆ. ಅರ್ಜಿ, ಅರ್ಹತೆ, ದಾಖಲೆ ಹಾಗೂ ಅರ್ಜಿ ಸಲ್ಲಿಕೆಯ ಬಗ್ಗೆ ಸಂಪೂರ್ಣ ಮಾಹಿತಿ

 

 

ರಂಗನಾಥ ಬಿ.ಜಿ ಅವರು ಅರ್ಥಶಾಸ್ತ್ರದಲ್ಲಿ ಎಂ.ಎ ಪದವೀಧರರಾಗಿದ್ದು, ಕಳೆದ ಎರಡು ವರ್ಷಗಳಿಂದ ನೈಜ ಹಾಗೂ ವಿಶ್ವಾಸಾರ್ಹ ಕನ್ನಡ ವಿಷಯಗಳನ್ನು ಪ್ರಕಟಿಸುತ್ತಿದ್ದಾರೆ. ಸರ್ಕಾರಿ ಉದ್ಯೋಗ ಮಾಹಿತಿ, ಪರೀಕ್ಷಾ ತಯಾರಿ ಸಲಹೆಗಳು, ವೃತ್ತಿ ಮಾರ್ಗದರ್ಶನ, ಸರ್ಕಾರಿ ಯೋಜನೆಗಳು ಹಾಗೂ ಟ್ರೆಂಡಿಂಗ್ ಸುದ್ದಿಗಳ ಕುರಿತು ಲೇಖನಗಳನ್ನು ಬರೆಯುವಲ್ಲಿ ಪರಿಣತಿ ಹೊಂದಿದ್ದು, ಓದುಗರಿಗೆ ಉಪಯುಕ್ತ ಮಾಹಿತಿಯನ್ನು ಒದಗಿಸುವುದು ಇವರ ಉದ್ದೇಶವಾಗಿದೆ. Please Visit NewsByMr

Leave a Comment