ಗೃಹಲಕ್ಷ್ಮಿ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್ (Gruhalakshmi Loan Scheme )
ನಮಸ್ಕಾರ ಸ್ನೇಹಿತರೆ ಕರ್ನಾಟಕ ಸರ್ಕಾರವು ಮಹಿಳಾ ಸಬಲೀಕರಣವನ್ನು ಸಾಧಿಸಲು ಮಹತ್ತರವಾದ ಹೆಜ್ಜೆಯನ್ನು ಇಟ್ಟಿದೆ ಅದರಂತೆಯೇ ಕರ್ನಾಟಕ ಸರಕಾರವು ಘೋಷಿಸಿರುವ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ಹೊಂದಿಕೊಂಡಂತೆ ಹೊಸ ಯೋಜನೆಯನ್ನು Gruhalakshmi Loan Scheme ಜಾರಿಗೆ ತರುತ್ತಿದ್ದು ಈ ಯೋಜನೆಯ ಮೂಲಕ ಮಹಿಳೆಯರಿಗೆ 30,000/- ರೂಗಳಿಂದ 3,00,000/- ರೂಗಳ ವರೆಗೆ ಹಣವನ್ನು ಪಡೆಯುವ ಅವಕಾಶವನ್ನು ಒದಗಿಸುತ್ತಿದೆ ಗೃಹಲಕ್ಷ್ಮಿ ಯೋಜನೆ ಎಂದರೆ ಕೇವಲ ತಿಂಗಳಿಗೆ ಸಹಾಯಧನ ಪಡೆಯುವುದಲ್ಲದೆ ಅದರ ಜೊತೆಯಲ್ಲಿ ಆರ್ಥಿಕ ಸಹಾಯ ನೀಡುವ ನಿಟ್ಟಿನಲ್ಲಿ ಮಹಿಳೆಯರನ್ನು ಮಾಲೀಕರನ್ನಾಗಿ ಮಾರ್ಪಡಿಸುವ ಉದ್ದೇಶವನ್ನು ಇಟ್ಟುಕೊಂಡು ಗ್ರಹಲಕ್ಷ್ಮಿ ಮಹಿಳಾ ಸಹಕಾರಿ ಬ್ಯಾಂಕ್ ಎಂಬುದನ್ನು ಆರಂಭಿಸಿದೆ
ಕರ್ನಾಟಕ ಸರ್ಕಾರದ ಅಧಿಕೃತ ವೆಬ್ ಸೈಟ್ : ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ
ಈ Gruhalakshmi Loan Scheme ಯೋಜನೆಯ ಮುಖ್ಯ ಅಂಶವೇನೆಂದರೆ ಗೃಹಲಕ್ಷ್ಮಿ ಫಲಾನುಭವಿಗಳು ಪ್ರತಿ ತಿಂಗಳು ಒಂದು ಸಣ್ಣ ಮೊತ್ತವನ್ನು ಉಳಿತಾಯ ಮಾಡುವ ಮೂಲಕ ಹಾಗೂ ಅದನ್ನು ವ್ಯವಸ್ಥಿತವಾಗಿ ಜಮೆ ಮಾಡುವುದರ ಮೂಲಕ ನೀವು ಸ್ವಂತ ಉದ್ಯಮ ಅಥವಾ ತುರ್ತು ಅವಶ್ಯಕತೆಗಳಿಗಾಗಿ ಮೂರು ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆಯಬಹುದಾಗಿರುತ್ತದೆ ಯೋಜನೆಯ ವಿವರ, ಸಾಲ ಪಡೆಯುವ ಪ್ರಕ್ರಿಯೆ, ಬೇಕಾಗುವ ದಾಖಲಾತಿಗಳು, ಅರ್ಹತೆ ಹಾಗೂ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ಸಂಪೂರ್ಣ ಮಾಹಿತಿಯನ್ನು ಓದಿ ಯೋಜನೆಯ ಪ್ರಯೋಜನ ಪಡೆಯಿರಿ
ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್ ಯೋಜನೆ ಎಂದರೆ ಏನು
ಕರ್ನಾಟಕ ಸರ್ಕಾರವು ಶುರು ಮಾಡುತ್ತಿರುವ ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್ ಕೇವಲ ಸಾಮಾನ್ಯ ಬ್ಯಾಂಕ್ ಆಗಿರದೆ ರಾಜ್ಯದ ಸುಮಾರು 1.24 ಕೋಟಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಹಿತದೃಷ್ಟಿ ಹಾಗೂ ಸಬಲೀಕರಣದ ಉದ್ದೇಶದಿಂದ ಆರಂಭಿಸಲಾಗಿರುವ ಸಹಕಾರಿ ಸಂಘದ ಬ್ಯಾಂಕ್ Gruhalakshmi Loan Scheme ಆಗಿದೆ ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಸಾಲ ಹಾಗೂ ಹೆಚ್ಚಿನ ಬಡ್ಡಿ ದರದಿಂದ ಮಹಿಳೆಯರು ಬೇಸತ್ತು ಹಾಗೂ ಖಾಸಗಿ ಫೈನಾನ್ಸ್ ಮತ್ತು ಹಣದ ಲೇವಾದೇವಿ ಕಾರ್ಯದಿಂದ ಬಡ್ಡಿ ಕಿರುಕುಳ ಹೆಚ್ಚಾಗುತ್ತಿದ್ದು ಈ ಬಲೆಯಿಂದ ಮಹಿಳೆಯರನ್ನು ರಕ್ಷಿಸಿ ಅವರಿಗೆ ಯೋಜನೆಯ ಮೂಲಕ ಆರ್ಥಿಕ ಶಕ್ತಿಯನ್ನು ಒದಗಿಸಿ ಅವರನ್ನು ಆರ್ಥಿಕ ಸಬಲರನ್ನಾಗಿ ಮಾಡುವ ಕರ್ನಾಟಕ ಸರ್ಕಾರದ ಮಹತ್ವ ಯೋಜನೆಯು Gruhalakshmi Loan Scheme ಆಗಿದೆ
ಈ Gruhalakshmi Loan Scheme ಯೋಜನೆಯ ಮುಖ್ಯಾಂಶಗಳು
- ಈ ಯೋಜನೆಗೆ ನೋಂದಣಿಯಾಗುವುದರ ಮೂಲಕ ಕನಿಷ್ಠ 30000 ಗಳ ವರೆಗೆ ಸಾಲವನ್ನು ಪಡೆಯಬಹುದು ಗರಿಷ್ಠ ಸಾಲದ ಮೊತ್ತವು 3 ಲಕ್ಷ ರೂಗಳು ಆಗಿರಲಿದೆ
- ಬಡ್ಡಿ ದರದ ಮೊತ್ತ ವಾರ್ಷಿಕವಾಗಿ ಕೇವಲ 7% ಯಿಂದ 9% ಬಡ್ಡಿಯನ್ನು ಪಾವತಿಸಬೇಕಾಗುತ್ತದೆ ಇಂದಿನ ಸಮಯದಲ್ಲಿ ಇಷ್ಟು ಬಹಳ ಕಡಿಮೆ ಬಡ್ಡಿದರಕ್ಕೆ ಮೂರು ಲಕ್ಷ ರೂಗಳವರೆಗೆ ಸಾಲ ಸೌಲಭ್ಯ ಸಿಗುವುದು ವಿರಳ
- ಈ ಬ್ಯಾಂಕಿನ ವಿಶೇಷತೆ ಈ ಯೋಜನೆಯ ಮೂಲಕ ಸಾಲ ಪಡೆಯಲು ಯಾವುದೇ ಜಾಮೀನು ಅಥವಾ ಗ್ಯಾರಂಟಿ ದಾಖಲೆಗಳನ್ನು ನೀಡುವ ಅವಶ್ಯಕತೆ ಇಲ್ಲ ಕೇವಲ ಸಹಕಾರಿ ಬ್ಯಾಂಕಿನ ಸದಸ್ಯರಾಗುವ ಮೂಲಕ ಈ ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು
Gruhalakshmi Loan Scheme ನಲ್ಲಿ ಸಾಲ ಪಡೆಯುವ ಪ್ರಕ್ರಿಯೆ
ಸದಸ್ಯತ್ವ ಪಡೆಯುವಿಕೆ : ಗೃಹಲಕ್ಷ್ಮಿ ಸಹಕಾರಿ ಸಂಘದ ವತಿಯಿಂದ ನೀವು ಸಾಲ ಪಡೆಯಬೇಕಾದರೆ ಮೊದಲು ಸಾವಿರ ರೂಗಳ ಷೇರು ಬಂಡವಾಳದ ಹಣ ಮತ್ತು 250ಗಳ ಶುಲ್ಕ ಸೇರಿ ಒಟ್ಟು 1750 ಗಳನ್ನು ಪಾವತಿ ಮಾಡಿ ಈ ಗೃಹಲಕ್ಷ್ಮಿ ಸಹಕಾರಿ ಸಂಘ ಬ್ಯಾಂಕಿನ ಸದಸ್ಯರಾಗಬಹುದು ನೆನಪಿಡಿ, ಈ ಸಂಘದ ಸದಸ್ಯರಾಗುವುದರಿಂದ ಇನ್ನೂ ಹೆಚ್ಚು ಹಲವು ಪ್ರಯೋಜನಗಳು Gruhalakshmi Loan Scheme ನಿಂದ ಸಿಗಲಿದೆ
ಮಾಸಿಕ ಉಳಿತಾಯ : ಈ Gruhalakshmi Loan Scheme ಸಾಲದ ಸೌಲಭ್ಯವನ್ನು ಪಡೆಯಲು ಸದಸ್ಯರಾದ ನಂತರ ಪ್ರತಿ ತಿಂಗಳೊಮ್ಮೆ ಕನಿಷ್ಠ 200 ರೂಪಾಯಿ ಹಾಗೂ ಗರಿಷ್ಠ ಎಷ್ಟಾದರೂ ಹಣವನ್ನು ನಿಮ್ಮ ಉಳಿತಾಯ ಖಾತೆಗೆ ಜಮಾ ಮಾಡುತ್ತಿರಬೇಕು ಮಾಸಿಕವಾಗಿ ಉತ್ತಮ ಮತದ ಮಟ್ಟದಲ್ಲಿ ಜಮೆ ಮಾಡುತ್ತಿದ್ದರೆ ಸಾಲದ ಹಣ ಹಾಗೂ ಅನುಮೋದನೆಯ ಸಾಧ್ಯತೆ ಹೆಚ್ಚಾಗುತ್ತದೆ
ಸಾಲ ಪಡೆಯುವಿಕೆ ಅರ್ಹತೆ : ಸದಸ್ಯರಾಗಿ ಕನಿಷ್ಠ ಆರು ತಿಂಗಳು ಸತತವಾಗಿ ಉಳಿತಾಯ ಖಾತೆಗೆ ಹಣವನ್ನು ಜಮೆ ಮಾಡುವುದರ ಮೂಲಕ ಸಾಲವನ್ನು ಪಡೆಯುವ ಅರ್ಹತೆಯನ್ನು ನೀವು ಪಡೆಯುತ್ತೀರಿ ತದನಂತರ ಯೋಜನೆಗೆ ಬೇಕಾಗುವ ದಾಖಲಾತಿಗಳನ್ನು ಸಲ್ಲಿಸಿ ಸಾಲವನ್ನು Gruhalakshmi Loan Scheme ಮೂಲಕ ಪಡೆಯಬಹುದು
ಅರ್ಜಿ ಸಲ್ಲಿಕೆ ಎಲ್ಲಿ ಮತ್ತು ಹೇಗೆ : ಈ Gruhalakshmi Loan Scheme ಗೆ ನೀವು ಸದಸ್ಯರಾಗಿ ಆರು ತಿಂಗಳಾದ ನಂತರ ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರ ಅಥವಾ ತಾಲೂಕು ಮಟ್ಟದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿಗೆ ಭೇಟಿ ನೀಡುವುದರ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು ಅಲ್ಲಿ ನಿಮಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿ ನೋಂದಣಿ ಹಾಗೂ ಸಾಲದ ಬಗೆಗಿನ ಮಾಹಿತಿಯನ್ನು ನೀಡಲಾಗುವುದು
ಈ Gruhalakshmi Loan Scheme ನಿಂದ ಮಹಿಳೆಯರಿಗೆ ಆಗುವ ಪ್ರಯೋಜನಗಳು
ಬ್ಯಾಂಕ್ ಮಾಲಿಕತ್ವ : ಭಾರತದಲ್ಲಿ ಇದು ಮೊದಲ ಸಹಕಾರಿ ಬ್ಯಾಂಕ್ ಯೋಜನೆ ಯಾಗಿದ್ದು ಮಹಿಳೆಯರೇ ರಚಿಸಿ ಮಹಿಳೆಯರೇ ನಡೆಸಿ ಮಹಿಳೆಯರೇ ನಿರ್ವಹಿಸಿ ಮಹಿಳೆಯರೇ ಮಾಲೀಕರಾಗಿರುವ ಬ್ಯಾಂಕ್ ವ್ಯವಸ್ಥೆ ಈ ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್ ವ್ಯವಸ್ಥೆಯಾಗಿದೆ
ಸುಲಭ ರೀತಿಯಲ್ಲಿ ಸಾಲ ಮರುಪಾವತಿ : ಈ ಸಹಕಾರಿ ಸಂಘ ಬ್ಯಾಂಕ್ ನಿಂದ 30,000 ದಿಂದ 3 lakh ಗಳವರೆಗೆ ಸಾಲವನ್ನು ಪಡೆಯಬಹುದಾದರೂ ನಿಮ್ಮ ಆದಾಯದ ಮಟ್ಟಕ್ಕೆ ತಕ್ಕಂತೆ ಒಂದು ವರ್ಷದಿಂದ ಐದು ವರ್ಷಗಳವರೆಗೆ ಮರುಪಾವತಿ ಅವಧಿಯನ್ನು ನೀಡಲಾಗುತ್ತದೆ ಈ ಅವಧಿಯಲ್ಲಿ ಸುಲಭ ಕಂತುಗಳ ಮೂಲಕ ಸಾಲವನ್ನು ತೀರಿಸಬಹುದಾಗಿರುತ್ತದೆ
ಈ ಸಾಲ ಯೋಜನೆಯ ಉದ್ದೇಶ : ಮಹಿಳೆಯರು ಸ್ವಯಂ ಉದ್ಯೋಗ ಸ್ಥಾಪಿಸಲು ಅಂದರೆ ಬಟ್ಟೆ ವ್ಯಾಪಾರ ಪಶುಸಂಗೋಪನೆ ಹೈನುಗಾರಿಕೆ ಕೃಷಿ ಚಟುವಟಿಕೆಗಳ ಶುರು ಮಕ್ಕಳ ಶಿಕ್ಷಣ ಕೃಷಿ ಉಪಯೋಗಿ ವಸ್ತುಗಳು ವೈದ್ಯಕೀಯ ಹಾಗೂ ತುರ್ತುಪರಿಸ್ಥಿತಿಗಳಲ್ಲಿ ಈ ಹಣವನ್ನು ಪಡೆದು ಬಳಸಬಹುದು
ಹಣಕ್ಕೆ ಸುರಕ್ಷತೆ : ಈ ಗೃಹಲಕ್ಷ್ಮಿ ಸಹಕಾರಿ ಬ್ಯಾಂಕ್ ಯೋಜನೆಯು ಸರ್ಕಾರದಿಂದ ಅನುಮೋದನೆಗೊಂಡಿರುವ ಹಾಗೂ ಸರ್ಕಾರಿ ಬೆಂಬಲಿತ ಸಹಕಾರಿ ಸಂಘದ ಬ್ಯಾಂಕ್ ಆಗಿರುವುದರಿಂದ ನೀವು ಪಾವತಿಸುವ ಹಣಕ್ಕೆ ಸಂಪೂರ್ಣ ಭದ್ರತೆ ಹಾಗೂ ಪರವಸೆ ಇರುತ್ತದೆ
ಮುಖ್ಯವಾಗಿ ಗಮನಿಸಬೇಕಾಗಿರುವ ಅಂಶಗಳು
- ಪ್ರಸ್ತುತದಲ್ಲಿ Gruhalakshmi Loan Scheme ನ ಅರಿವು ಕಡಿಮೆ ಜನರಿಗೆ ಇರುವುದರಿಂದ ಈಗ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು ತಾವು ಆಸಕ್ತಿ ಉಳ್ಳವರಾಗಿದ್ದರೆ ನಿಮ್ಮ ಊರಿನ ಅಥವಾ ನಿಮ್ಮ ಸಮೀಪದ ಅಂಗನವಾಡಿ ಕಾರ್ಯಕರ್ತೆಯರನ್ನು ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳಬಹುದು.
- ಈ ಯೋಜನೆಯ ವಹಿವಾಟುಗಳು ಹಾಗೂ ಹಣದ ವ್ಯವಹಾರಗಳು ಪಾರದರ್ಶಕವಾಗಿರಲು ಡಿಜಿಟಲ್ ಪಾವತಿ ವಿಧಾನಗಳಾದ ಫೋನ್ ಪೇ ಗೂಗಲ್ ಪೇ ನಂತಹ ಡಿಜಿಟಲ್ ಪಾವತಿಗಳಿಗೂ ಅವಕಾಶವನ್ನು ಕಲ್ಪಿಸಲಾಗಿದೆ ತಾವುಗಳು ಬ್ಯಾಂಕ್ ಸಂಪರ್ಕಿಸರೆ ತಮ್ಮ ಖಾತೆಗೆ ಜಮೆ ಹಾಗೂ ನಗದು ಹಿಂಪಡೆತ ಮಾಡಬಹುದು
- ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳು ಅಂದರೆ ಪ್ರಸ್ತುತದಲ್ಲಿ ಕರ್ನಾಟಕ ಸರ್ಕಾರ ಘೋಷಿಸಿರುವ ಗ್ಯಾರಂಟಿ ಯೋಜನೆಗಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯನ್ನು ಪಡೆಯುತ್ತಿರುವ ಪಲಾನುಭವಿಗಳಿಗೆ ಮಾತ್ರ ಈ ಅವಕಾಶ ಸೀಮಿತವಾಗಿದ್ದು ಬೇರೆ ಯಾವುದೇ ವ್ಯಕ್ತಿಗಳು ಈ ಯೋಜನೆಗೆ ಅರ್ಹರಾಗಿರುವುದಿಲ್ಲ
ಈ ಯೋಜನೆಯ ಸಮಗ್ರ ನೋಟ
- ಯೋಜನೆಯ ಹೆಸರು : ಗೃಹಲಕ್ಷ್ಮಿ ಬಹುದ್ದೇಶ ಸಹಕಾರ ಸಂಘ ಗೃಹಲಕ್ಷ್ಮಿ ಮಹಿಳಾ ಸಹಕಾರಿ ಬ್ಯಾಂಕ್
- ಪ್ರಾಥಮಿಕ ಉದ್ದೇಶ : ಕರ್ನಾಟಕದ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿ ಅವರನ್ನು ಆರ್ಥಿಕ ಸಬಲರನ್ನಾಗಿ ಮಾಡಿ ಮಹಿಳಾ ಸಬಲೀಕರಣ ಸಾಧಿಸುವುದು
- ಪ್ರಾರಂಭಿಸಿದ ಇಲಾಖೆ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕರ್ನಾಟಕ ಸರ್ಕಾರ
- ಸಾಲದ ಮೊತ್ತ : 30,000 ಗಳಿಂದ ಮೂರು ಲಕ್ಷ ರೂಗಳು
- ಸಾಲದ ಉದ್ದೇಶ : ರಿಟೇಲ್ ವ್ಯಾಪಾರ ಸ್ವಯಂ ಉದ್ಯೋಗ ಕೃಷಿ ಚಟುವಟಿಕೆ ಪಶುಸಂಗೋಪನೆ ಹೈನುಗಾರಿಕೆ ಮಕ್ಕಳ ವಿದ್ಯಾಭ್ಯಾಸ ವೈದ್ಯಕೀಯ ಖರ್ಚು, ಇತ್ಯಾದಿ ತುರ್ತು ಸಂದರ್ಭಗಳು
- ಅರ್ಹತಮಾನದಂಡ : ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳು ಮಾತ್ರ ಅರ್ಜಿ ಸಲ್ಲಿಸಬಹುದು
- ಸದಸ್ಯತ್ವ ಶುಲ್ಕ : ಒಂದು ಬಾರಿ 1250 ಇದರಲ್ಲಿ 1,000/- ರೂಗಳ ಷೇರು ಹಣ ಹಾಗೂ 250/- ರೂಗಳ ಶುಲ್ಕ ಇರುತ್ತದೆ
- ಕಡ್ಡಾಯವಾಗಿ ಉಳಿತಾಯ ಮಾಡಬೇಕಾದ ಮಾಸಿಕ ಮೊತ್ತ : 200 ರೂಗಳು
ಕರ್ನಾಟಕ ಸರ್ಕಾರವು ಮಹಿಳಾ ಸಬಲೀಕರಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಗೃಹಲಕ್ಷ್ಮಿ ಸಹಕಾರಿ ಬ್ಯಾಂಕಿನ ಯೋಜನೆಯನ್ನು ಜಾರಿಗೆ ತಂದಿದ್ದು ಈ ಯೋಜನೆಯ ಮೂಲಕ ಗೃಹಲಕ್ಷ್ಮಿ ಹಣವನ್ನು ನೀಡುವುದರ ಜೊತೆಯಲ್ಲಿ ತಿಂಗಳಿಗೆ 200/- ರೂಗಳ ಉಳಿತಾಯದ ಹಣವನ್ನು ಬ್ಯಾಂಕ್ ನಲ್ಲಿ ಇರಿಸುವುದರ ಮೂಲಕ ಹಾಗೂ ಬ್ಯಾಂಕಿನ ಸದಸ್ಯತ್ವವನ್ನು ಪಡೆಯುವುದರ ಮೂಲಕ 30,000/- ರೂಗಳಿಂದ 3,00,000/- ರೂಗಳವರೆಗೆ ಹಣಕಾಸು ಸಾಲವನ್ನು ಪಡೆಯುವ ಯೋಜನೆಯನ್ನು ರೂಪಿಸಿದೆ ಈ ಯೋಜನೆಯ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ಆಸಕ್ತಿ ಇದ್ದಲ್ಲಿ ಅರ್ಜಿ ಸಲ್ಲಿಸಿ ತಮ್ಮ ಸ್ವಯಂ ಉದ್ಯೋಗದ ಕನಸು ಅಥವಾ ತುರ್ತುಪರಿಸ್ಥಿತಿಗಳಲ್ಲಿ ಎದುರಾಗಬಹುದಾದ ಆರ್ಥಿಕ ಸಂಕಷ್ಟದಿಂದ ಪಾರಾಗಲು ಇದೊಂದು ಸುವರ್ಣ ಅವಕಾಶವಾಗಿದೆ ಆದ್ದರಿಂದ ಎಲ್ಲಾ ಮಾಹಿತಿಯನ್ನು ತಿಳಿದು ಹಿಂದೆ ಅರ್ಜಿ ಸಲ್ಲಿಸಬಹುದು
ಇದೇ ರೀತಿ ಮಾಹಿತಿಯನ್ನು ಪಡೆಯಲು ನಮ್ಮ ಗ್ರೂಪ್ ಜಾಯಿನ್ ಆಗಲು : ಇಲ್ಲಿ ಕ್ಲಿಕ್ ಮಾಡಿ
Mahila Samruddhi Loan Scheme, Loan Opportunity: ಕಡಿಮೆ ಬಡ್ಡಿ ದರದಲ್ಲಿ ಮಹಿಳೆಯರಿಗೆ 1.4 ಲಕ್ಷ ಸಾಲ ಸೌಲಭ್ಯ.