Telegram Join My Telegram WhatsApp Join My WhatsApp

Mahila Samruddhi Loan Scheme, Loan Opportunity: ಕಡಿಮೆ ಬಡ್ಡಿ ದರದಲ್ಲಿ ಮಹಿಳೆಯರಿಗೆ 1.4 ಲಕ್ಷ ಸಾಲ ಸೌಲಭ್ಯ.

ಕಡಿಮೆ ಬಡ್ಡಿ ದರದಲ್ಲಿ ಮಹಿಳೆಯರಿಗೆ 1.4 ಲಕ್ಷ ಸಾಲ ಸೌಲಭ್ಯ (Mahila Samruddhi Loan Scheme)

ಸ್ವಂತ ಉದ್ಯಮವನ್ನು ಆರಂಭಿಸಬೇಕೆಂದುಕೊಂಡಿರುವ ಮಹಿಳೆಯರಿಗೆ ದೊಡ್ಡ ಅವಕಾಶ ಕಡಿಮೆ ಬಡ್ಡಿ ದರದಲ್ಲಿ 1.40 ಲಕ್ಷ ಸಾಲ ಯೋಜನೆ ಸ್ವಂತ ಉದ್ಯಮಕ್ಕೆ ಬೆಂಬಲ ನೀಡುವ ಕೇಂದ್ರ ಸರ್ಕಾರದ ಯೋಜನೆ.

ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಸಣ್ಣ ಪ್ರಮಾಣದ ಉದ್ಯಮಗಳ ಪಾತ್ರವು ಪ್ರಮುಖ ಪಾತ್ರ ವಹಿಸುತ್ತದೆ ಆದುದರಿಂದ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತನ್ನು ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಹಿಳಾ ಸಮೃದ್ಧಿ ಯೋಜನೆ ಎಂಬ ಸಾಲ ಸೌಲಭ್ಯವನ್ನು ನೀಡುವ ಯೋಜನೆಯನ್ನು ಜಾರಿಗೆ ತಂದಿದೆ ಇದರಿಂದ ಮಹಿಳೆಯರಿಗೆ ಸಾಲ ಸೌಲಭ್ಯ ದೊರೆತು ಆರ್ಥಿಕ ಸ್ವಾಾವಲಂಬನೆಯನ್ನು ಸಾಧಿಸಿ ಮಹಿಳಾ ಸಬಲೀಕರಣವನ್ನು ಸಾಧಿಸಬಹುದು ಎಂಬುದಾಗಿದೆ.

ಮಹಿಳಾ ಸಮೃದ್ಧಿ ಯೋಜನೆ ಕೇವಲ ಸಾಮಾನ್ಯ ಯೋಜನೆ ಅಲ್ಲದೆ ಈ ಯೋಜನೆಯು ಮಹಿಳೆಯರನ್ನು ದೊಡ್ಡ ದೊಡ್ಡ ಉದ್ಯಮಿಗಳನ್ನಾಗಿಸುವ ಉದ್ದೇಶವನ್ನು ಹೊಂದಿದ್ದು ಸಮಗ್ರ ಮಟ್ಟದಲ್ಲಿ ಮಹಿಳಾ ಸಬಲೀಕರಣವನ್ನು ಸಾಧಿಸುವಲ್ಲಿ ಸಹಕರಿಸುತ್ತದೆ ಈ ಯೋಜನೆಯು ಕಡಿಮೆ ಬಡ್ಡಿದರ ತರಬೇತಿ ಹಾಗೂ ಉದ್ಯಮವನ್ನು ಆರಂಭಿಸುವ ಅವಧಿಯಲ್ಲಿ ಕಂತು ವಿನಾಯಿತಿ ನೀಡುವ ಸೌಲಭ್ಯ ಸೇರಿದಂತೆ ಇನ್ನೂ ಹಲವು ವಿಶೇಷ ಸೌಲಭ್ಯಗಳನ್ನು ಮಹಿಳಾ ಸಮೃದ್ಧಿ ಯೋಜನೆ ಒದಗಿಸುತ್ತದೆ.

Mahila Samruddhi Scheme

Mahila Samruddhi Loan Scheme ಯೋಜನೆಯ ಮುಖ್ಯ ಉದ್ದೇಶ

ಮಹಿಳೆಯರು ಕೇವಲ ಮನೆಗೆ ಸೀಮಿತವಾಗದೆ ತಮ್ಮ ಜೀವನೋಪಾಯಕ್ಕಾಗಿ ತಮ್ಮದೇ ಆದ ಮೂಲವನ್ನು ಪರಿಣಾಮಕಾರಿಯಾಗಿ ನಿರ್ಮಿಸಿಕೊಂಡು ಮಹಿಳಾ ಸಬಲೀಕರಣವನ್ನು ಸಾಧಿಸಬೇಕು ಎಂಬುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.

  • ಮಹಿಳಾ ಸಮೃದ್ಧಿ ಯೋಜನೆಯು ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಪ್ರೇರಣೆ ನೀಡುತ್ತದೆ.
  • ಈ ಯೋಜನೆಯು ಮಹಿಳೆಯರಲ್ಲಿ ಆರ್ಥಿಕ ಸ್ವಾವಲಂಬನೆ ಸಾಧಿಸಲು ಸಹಕರಿಸುತ್ತದೆ.
  • ಈ ಯೋಜನೆಯಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶದ ಹಾಗೂ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಆದ್ಯತೆ ನೀಡಲಾಗುತ್ತದೆ.
  • ಸಾಲ ಸೌಲಭ್ಯದ ಜೊತೆ ಕೌಶಲ್ಯ ತರಬೇತಿ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಉದ್ಯಮಗಳು ಆರಂಭಗೊಂಡು ಉದ್ಯೋಗ ಸೃಷ್ಟಿಸುವಲ್ಲಿ ಸಹಕರಿಸುತ್ತದೆ.

ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದರಿಂದ ಮಹಿಳೆಯರು ಕೇವಲ ಉದ್ಯೋಗವನ್ನು ಹುಡುಕುವವರಾಗದೆ ಉದ್ಯೋಗದಾತರಾಗಿ ಇನ್ನು ಹಲವರಿಗೆ ಉದ್ಯೋಗವನ್ನು ಕಲ್ಪಿಸುವ ಮಟ್ಟವನ್ನು ತಲುಪಬಹುದು.

Mahila Samruddhi Loan Scheme ಪ್ರಮುಖ ಅಂಶಗಳು.

ಕಡಿಮೆ ಬಡ್ಡಿದರ : ವಾರ್ಷಿಕವಾಗಿ ಕೇವಲ 6% ಬಡ್ಡಿದರವನ್ನು ವಿಧಿಸಲಾಗುತ್ತದೆ.

ಗರಿಷ್ಠ ಸಾಲದ ಮೊತ್ತ : 1.40 ಲಕ್ಷದವರೆಗೆ ಇರುತ್ತದೆ.

ಮರಟೋರಿಯಂ ಅವಧಿ :  ಅಂದರೆ ಉದ್ಯಮವನ್ನು ಆರಂಭಿಸಿದ ಆರಂಭಿಕ ಮೂರರಿಂದ ಆರು ತಿಂಗಳು ಇ ಎಂ ಐ ಕಟ್ಟಬೇಕಾಗಿರುವುದಿಲ್ಲ.

ಕೌಶಲ್ಯ ತರಬೇತಿ : ಈ ಯೋಜನೆ ಅಡಿಯಲ್ಲಿ ಉಚಿತ ತರಬೇತಿಯನ್ನು ಕಲ್ಪಿಸಲಾಗಿದ್ದು ಈ ತರಬೇತಿಯನ್ನು ಪಡೆಯಲು ಬೇಕಾಗುವ ಭತ್ಯೆಗಳನ್ನು ಸರ್ಕಾರವೇ ಭರಿಸುತ್ತದೆ.

ಎಸ್ ಹೆಚ್ ಜಿ ಬೆಂಬಲ : ಅಂದರೆ ಸ್ವಸಹಾಯ ಗುಂಪುಗಳಿಗೆ ಮತ್ತು ಗುಂಪು ಆಧಾರಿತ ಉದ್ಯಮಗಳಿಗೆ ಹೆಚ್ಚಿನ ಆದ್ಯತೆ ಹಾಗೂ ಉತ್ತೇಜನ.

ಈ ಎಲ್ಲಾ ಸೌಲಭ್ಯಗಳು ಮಹಿಳೆಯರು ಯಾವುದೇ ಆರ್ಥಿಕ ಒತ್ತಡವಿಲ್ಲದೆ ಉದ್ಯಮವನ್ನು ಆರಂಭಿಸಲು ನೆರವಾಗಲು ಸಹಕರಿಸುತ್ತದೆ.

Mahila Samruddhi Loan Scheme ಮೂಲಕ ಯಾವ ಉದ್ಯಮಗಳನ್ನು ಪ್ರಾರಂಭಿಸಬಹುದು.

ಮಹಿಳಾ ಸಮೃದ್ಧಿ ಯೋಜನೆ ಯ ಮೂಲಕ ಪಡೆದ ಸಾಲದಲ್ಲಿ ವಿವಿಧ ರೀತಿಯ ಉದ್ಯಮಗಳನ್ನು ಆರಂಭಿಸಬಹುದು ಅದರಲ್ಲಿ ಮುಖ್ಯ ಆಯ್ಕೆಗಳು ಈ ಕೆಳಕಂಡಂತಿವೆ.

ಟೈಲರಿಂಗ್ ಮತ್ತು ಪ್ಯಾಶನ್ ವಿಭಾಗ.

close up cropped photo. tailor mending cusstomer's clothing
ಹೊಸ ಹೊಲಿಗೆ ಯಂತ್ರದ ಖರೀದಿ ಮಾಡುವಿಕೆ.
ಬೋಟಿಕ್ ಆರಂಭ.
ಬಟ್ಟೆಗಳ ಎಂಬ್ರಾಯ್ಡರಿ ಕೆಲಸ.

ಬ್ಯೂಟಿ ಹಾಗೂ ವೆಲ್ನೆಸ್ ವಿಭಾಗ.

Young woman enjoying professional skin care done by beautician at spa and beauty salon
ಹೊಸ ಬ್ಯೂಟಿ ಪಾರ್ಲರ್ಗಳ ತೆರೆಯುವಿಕೆ.
ಬ್ಯೂಟಿ ಮತ್ತು ಬಿಸಿನೆಸ್ ನ ಮನೆ ಆಧಾರಿತ ಸೇವೆಗಳು.

ಗೃಹ ಕೈಗಾರಿಕಾ ವಿಭಾಗ.

Indian spicy mixed pickle prepared at home and served in glass jar
ಹಪ್ಪಳ ಉಪ್ಪಿನಕಾಯಿ ಮಸಾಲೆ ಪದಾರ್ಥಗಳ ತಯಾರಿಕೆ ಹಾಗೂ ಮಾರಾಟ.
ಆಹಾರ ಉತ್ಪನ್ನಗಳ ಪ್ಯಾಕಿಂಗ್ ಕೆಲಸ.

ಕರಕುಶಲ ವಸ್ತುಗಳ ವಿಭಾಗ.

Skilled potter shaping the clay into pot on spinning wheel, Indian earthenware.
ಹ್ಯಾಂಡ್ ಬ್ಯಾಗ್ಗಳ ಎಣೆಯುವುದು.
ಅಗರಬತ್ತಿ ಉತ್ಪಾದನೆ.
ಅಲಂಕಾರಿಕ ಮಣ್ಣಿನ ವಸ್ತುಗಳ ತಯಾರಿಕೆ.

ಕೃಷಿ ಸಂಬಂಧಿತ ಉದ್ಯಮ ವಿಭಾಗ.

Goat Farming in Rajasthan: Step-By-Step Guide, Business Plan, Breeds, Setup Cost, Profit, and Requirements
ಹೈನುಗಾರಿಕೆ.
ಕುರಿ ಕೋಳಿ ಹಸು ಸಾಕಣೆ.
ತರಕಾರಿ ಹಾಗೂ ಹಣ್ಣಿನ ವ್ಯಾಪಾರ.

ಸಣ್ಣ ವ್ಯಾಪಾರಗಳ ವಿಭಾಗ.

Tips to Start Your Own Printing Service Shop - All Print Heads
ಕಿರಾಣಿ ಅಂಗಡಿಗಳ ತೆರೆಯುವಿಕೆ.

ಫ್ಯಾನ್ಸಿ ಸ್ಟೋರ್ ಆರಂಭ.

ಝರಾಕ್ಸ್ ಕಂಪ್ಯೂಟರ್ ಅಥವಾ ಪ್ರಿಂಟಿಂಗ್ ಸೇವೆಗಳು.

Mahila Samruddhi Loan Scheme ಸಾಲದ ವಿವರ

ಗರಿಷ್ಠ ಸಾಲ 1.4 ಲಕ್ಷ ರೂಗಳು
ಬಡ್ಡಿದರದ ಮೊತ್ತ 2% ರಿಂದ 6% ವಾರ್ಷಿಕ
ಮರುಪಾವತಿ ಅವಧಿ 3 ವರ್ಷ
ಕಂತು ಪಾವತಿ ವಿಧಾನಾವಧಿ ತ್ರೈಮಾಸಿಕ
ಮರಟೋರಿಯಂ ಅವಧಿ 3 ರಿಂದ 6 ತಿಂಗಳುಗಳು
ಅರ್ಹ ಫನುಭವಿಗಳು ಎಸ್ಸಿ ಎಸ್ಟಿ ಒಬಿಸಿ ಅಲ್ಪಸಂಖ್ಯಾತ ಮಹಿಳೆಯರು

 

Mahila Samruddhi Loan Scheme ಯೋಜನೆಗೆ ಯಾರು ಅರ್ಜಿ ಹಾಕಬಹುದು.

ಮಹಿಳಾ ಸಮೃದ್ಧಿ ಯೋಜನೆಗೆ ಅರ್ಜಿ ಹಾಕಲು ಕೆಲವು ಮೂಲಭೂತ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳೆಂದರೆ.

  • ಅರ್ಜಿದಾರರು 18ರಿಂದ 55 ವರ್ಷದ ಒಳಗಡೆ ಇರಬೇಕು.
  • ಕುಟುಂಬದ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಕಡಿಮೆ ಇರಬೇಕು.
  • ಅರ್ಜಿ ಸಲ್ಲಿಸಲು ಬಯಸುವವರು ಎಸ್ಸಿ ಎಸ್ಟಿ ಒಬಿಸಿ ಅಥವಾ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರಬೇಕು.
  • ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
  • ಈ ಮುಂಚೆ ಯಾವುದೇ ಬ್ಯಾಂಕಿನಲ್ಲಿ ಡಿಫರೆಂಟ್ ಆಗಿರಬಾರದು ಅಂದರೆ ಈ ಹಿಂದೆ ಯಾವುದಾದರು ಲೋನ್ ತೆಗೆದುಕೊಂಡು ಪಾವತಿ ಮಾಡದೆ ಡ್ಯೂ ಇರಬಾರದು.

Mahila Samruddhi Scheme ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು.

Mahila Samruddhi Loan Scheme ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.

  • ಆಧಾರ್ ಕಾರ್ಡ್.
  • ಪಾನ್ ಕಾರ್ಡ್.
  • ಮತದಾರರ ಗುರುತಿನ ಚೀಟಿ.
  • ವಿಳಾಸದ ಪುರಾವೆ. (ರೇಷನ್ ಕಾರ್ಡ್)
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
  • ರಾಷ್ಟ್ರೀಕೃತಗೊಂಡ ಬ್ಯಾಂಕ್ ಪಾಸ್ ಬುಕ್.
  • ಫೋಟೋಗಳು.
  • ವ್ಯವಹಾರ ಯೋಜನೆ. ( Project Report )
  • ಸ್ವ ಸಹಾಯ ಸಂಘಗಳ ಸದಸ್ಯತ್ವ ಗುರುತಿನ ಚೀಟಿ. (ಅನ್ವಯಿಸಿದ್ದಲ್ಲಿ)

Mahila Samruddhi Loan Scheme  ಗೆ ಅರ್ಜಿ ಸಲ್ಲಿಸುವ ವಿಧಾನ.

ಮಹಿಳಾ ಸಮೃದ್ಧಿ ಯೋಜನೆಗೆ ಆನ್ಲೈನ್ ಹಾಗೂ ಆಫ್ಲೈನ್ ವಿಧಾನಗಳಲ್ಲಿ ಅರ್ಜಿ ಸಲ್ಲಿಸಬಹುದು.

ಆನ್ಲೈನ್ ವಿಧಾನ
  • ಮಹಿಳಾ ಸಮೃದ್ಧಿ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು.
  • ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಬೇಕು.
  • ಅರ್ಜಿಯನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬೇಕು.
  • ನಂತರ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ ಇಟ್ಟುಕೊಳ್ಳಬೇಕು.
ಆಫ್ಲೈನ್ ವಿಧಾನ
  • ಜಿಲ್ಲಾ ಅಭಿವೃದ್ಧಿ ನಿಗಮ ಕಚೇರಿಗೆ ಭೇಟಿ ನೀಡಬೇಕು.
  • ಕಚೇರಿಯಿಂದ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಬೇಕು.
  • ಬೇಕಾಗುವ ದಾಖಲಾತಿಗಳನ್ನು ಲಗತ್ತಿಸಿ ಅರ್ಜಿ ಸಲ್ಲಿಸಬೇಕು.
  • ಕಚೇರಿಯಿಂದ ನೀಡುವ ಅರ್ಜಿ ಸಲ್ಲಿಕೆ ದಾಖಲೆ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು.
ಅಧಿಕೃತ ವೆಬ್‌ ಸೈಟ್ :‌ ಮಹಿಳಾ ಸಮೃಧ್ಧಿ ಯೋಜನಾ
ಮಹಿಳಾ ಸಮೃಧ್ಧಿ ಯೋಜನೆಗೆ ನೋಂದಣಿ : ಇಲ್ಲಿ ಕ್ಲಿಕ್‌ ಮಾಡಿ
ಅರ್ಜಿ ಸಲ್ಲಿಸಲು : ಸೇವಾ ಸಿಂಧು ಪೋರ್ಟಲ್  
ವಾಟ್ಸಾಪ್‌ ಗ್ರೂಪ್‌ ಜಾಯಿನ್‌ ಆಗಲು : ಇಲ್ಲಿ ಕ್ಲಿಕ್‌ ಮಾಡಿ

ಆನ್ಲೈನ್ ಹಾಗೂ ಆಫ್ಲೈನ್ ವಿಧಾನಗಳಲ್ಲಿ ಅರ್ಜಿ ಸಲ್ಲಿಸಿದ ನಂತರ ಇಲಾಖೆಯಿಂದ ಪರಿಶೀಲನೆಗೊಂಡು ನಂತರ ಸಾಲ ಮಂಜೂರಾಗುತ್ತದೆ ಸಾಲದ ಮೊತ್ತವು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಡಿ ಬಿ ಟಿ ಮೂಲಕ ಜಮೆ ಆಗುತ್ತದೆ.

Mahila Samruddhi Loan Scheme ಯೋಜನೆಯ ಮಹತ್ವ

ಇಂದಿನ ಪ್ರಪಂಚದಲ್ಲಿ ಅನೇಕ ಅನೇಕ ಮಹಿಳೆಯರು ಹಣಕಾಸಿನ ತೊಂದರೆಯಿಂದ ತಮ್ಮ ಸ್ವಂತ ಉದ್ಯಮವನ್ನು ಆರಂಭಿಸುವ ಕನಸನ್ನು ಹೊತ್ತಿದ್ದರು ಅದನ್ನು ತ್ಯಜಿಸಿರುತ್ತಾರೆ. ಆದರೆ ಖಾಸಗಿ ಸಾಲ ಸಂಸ್ಥೆಗಳಿಂದ ಸಾಲ ದೊರೆತರೂ ಹೆಚ್ಚಿನ ಬಡ್ಡಿದರ ಇರುವುದರಿಂದ ಹಾಗೂ ಯಾವುದೇ ರೀತಿಯ ಸಹಾಯ ಸಿಗದೇ ಇರುವ ಕಾರಣ ಸಾಲದ ಬಲಗೆ ಸಿಲುಕಿ ವ್ಯವಹಾರವನ್ನು ಮುಚ್ಚುವ ಸ್ಥಿತಿಗೆ ತಲುಪುತ್ತಾರೆ ಆದರೆ ಮಹಿಳಾ ಸಮೃದ್ಧಿ ಯೋಜನೆಯು ಸಾಲ ಸೌಲಭ್ಯವನ್ನು ನೀಡುವುದರ ಜೊತೆಗೆ ಕಡಿಮೆ ಬಡ್ಡಿದರ ಬೇತಿ ಹಾಗೂ ಸಾಲದ ಮರುಪಾವತಿಗಾಗಿ ಹೆಚ್ಚು ಸಮಯವನ್ನು ನೀಡುವುದರಿಂದ ಮಹಿಳೆಯರು ಆತ್ಮವಿಶ್ವಾಸದಿಂದ ತಮ್ಮ ಸ್ವಂತ ಉದ್ಯಮವನ್ನು ಆರಂಭಿಸಿ ಆರ್ಥಿಕವಾಗಿ ಸಬಲರಾಗಿ ಮಹಿಳಾ ಸಬಲೀಕರಣವನ್ನು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.

Mahila Samruddhi Loan Scheme ಯೋಜನೆಯ ಜೀವನದ ಪರಿಣಾಮ

ಪ್ರಮುಖವಾಗಿ ಗ್ರಾಮೀಣ ಪ್ರದೇಶದಲ್ಲಿ ಈಗಾಗಲೇ ಹಲವಾರು ಮಹಿಳೆಯರು ಈ ರೀತಿಯ ಸಾಲದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಂಡು ತಮ್ಮ ಸ್ವಂತ ಉದ್ಯಮಗಳನ್ನು ಸ್ಥಾಪಿಸಿ ಯಶಸ್ಸು ಕಂಡಿದ್ದಾರೆ ವಿಶೇಷವಾಗಿ ರಾಸಾಯ ಸಂಘಗಳ ಮೂಲಕ ಟೈಲರಿಂಗ್ ಆಹಾರ ಉತ್ಪಾದನೆ ಹೈನುಗಾರಿಕೆ ಇನ್ನೂ ಹಲವು ರೀತಿಯ ಉದ್ಯಮಗಳನ್ನು ಸ್ಥಾಪಿಸಿ ಕುಟುಂಬದ ಆದಾಯವನ್ನು ಹೆಚ್ಚಿಸಿ ಮಹಿಳಾ ಸಮುದಾಯದ ಅಭಿವೃದ್ಧಿಗೂ ಕಾರಣಕರ್ತರಾಗಿದ್ದಾರೆ.

ಮಹಿಳಾ ಸಮೃದ್ಧಿ ಯೋಜನೆ ಕೇವಲ ಸಾಲದ ಯೋಜನೆ ಯಲ್ಲದೆ ಈ ಯೋಜನೆಯು ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ ಆದುದರಿಂದ ಸಣ್ಣ ಮೊತ್ತದ ಹಣದಿಂದ ತಮಗಿರುವ ದೊಡ್ಡ ಕನಸುಗಳನ್ನು ಸಾಕಾರಗೊಳಿಸಿ ಸರಿಯಾದ ಯೋಜನೆ ತರಬೇತಿ ಪರಿಶ್ರಮ ಹಾಗೂ ಮಾರುಕಟ್ಟೆ ಸೌಲಭ್ಯಗಳನ್ನು ಅರಿತು ವ್ಯವಹಾರವನ್ನು ಪ್ರಾರಂಭಿಸುವುದರಿಂದ ಜೀವನದಲ್ಲಿ ದೊಡ್ಡ ಯಶಸ್ಸು ಸಿಗಬಹುದು.

ಸ್ವಂತ ಉದ್ಯಮವನ್ನು ಶುರು ಮಾಡಬೇಕು ಅಂದುಕೊಂಡಿರುವ ಮಹಿಳೆಯರಿಗೆ ಇದು ಸರಿಯಾದ ಸಮಯ ಹಾಗೂ ಸುವರ್ಣ ಅವಕಾಶವಾಗಿದೆ ಆದ್ದರಿಂದ ಈ ಯೋಜನೆಯ ಪೂರ್ಣ ಸದುಪಯೋಗ ಪಡೆದುಕೊಳ್ಳಿ, ಮಹಿಳಾ ಸಬಲೀಕರಣವನ್ನು ಸಾಧಿಸಿ.

 

Read More: Schemes

PM Yashaswi Yojana, Best Scheme For Students: ಪ್ರಧಾನ ಮಂತ್ರಿ ಯಶಸ್ವಿ ಯೋಜನೆ.‌ ವರ್ಷಕ್ಕೆ 3 ಲಕ್ಷದವರೆಗೆ ವಿದ್ಯಾರ್ಥಿವೇತನ+ ಉಚಿತ ಲ್ಯಾಪ್‌ ಟಾಪ್.

Free Catalyst Scholarship 2026: 100% ಫೀಸ್ ಉಚಿತ + ಹಾಸ್ಟೆಲ್ + ಇಂಟರ್ನ್‌ಶಿಪ್ | ತಕ್ಷಣ ಅರ್ಜಿ ಹಾಕಿ

Kiran Scholarship 2026 Big Opportunity: ವಿದ್ಯಾರ್ಥಿಗಳಿಗೆ ತಿಂಗಳಿಗೆ ₹20,000 ಸ್ಕಾಲರ್‌ಶಿಪ್!, ಅರ್ಜಿ ಆರಂಭ – ಪೂರ್ಣ ಮಾಹಿತಿ

Best Self Employment Loan: ಸ್ವಯಂ ಉದ್ಯೋಗವನ್ನು ಆರಂಭಿಸುವವರಿಗೆ ಗೋಲ್ಡನ್‌ ಅವಕಾಶ ₹4 ಲಕ್ಷ ಸಾಲ + 50% ಸಬ್ಸಿಡಿ – ಭರ್ಜರಿ ಅವಕಾಶ

Kaveri 2.0 Property Registration Is Fast: ಕಾವೇರಿ 2.0 ಆರಂಭ, ಕೇವಲ 10 ನಿಮಿಷದಲ್ಲಿ ಆಸ್ತಿ ನೋಂದಣಿ! ಇನ್ಮುಂದೆ ಸಂಪೂರ್ಣ ಕಾಗದರಹಿತ ವ್ಯವಸ್ಥೆ

PM Matru Vandana Yojana: ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ, ತಾಯಂದಿರಿಗೆ ₹5000 ಸಹಾಯಧನ! ಅರ್ಜಿ ಹೇಗೆ ಹಾಕುವುದು? ಸಂಪೂರ್ಣ ಮಾಹಿತಿ

PMMSY Subsidy 2026: ಮೀನುಗಾರರಿಗೆ ಭರ್ಜರಿ ಸಿಹಿಸುದ್ದಿ! ₹60 ಲಕ್ಷವರೆಗೆ ಸಹಾಯಧನ – PM ಮತ್ಸ್ಯ ಸಂಪದ ಯೋಜನೆ 2026 ಸಂಪೂರ್ಣ ಮಾಹಿತಿ

AHIDF Scheme 2026: ಪಶುಸಂಗೋಪನೆ ಯೋಜನೆ, 90% ಸಾಲ + 3% ಬಡ್ಡಿ ಸಬ್ಸಿಡಿ! ರೈತರು, ಉದ್ಯಮಿಗಳಿಗೆ ದೊಡ್ಡ ಅವಕಾಶ

Pradhan Manthri Awas Yojana 2.0: ಉಚಿತ ಸೈಟ್ + ಮನೆಗೆ ಸಹಾಯಧನ! ಅರ್ಜಿ ಪ್ರಾರಂಭ – ಈ ಅವಕಾಶ ಮಿಸ್ ಮಾಡಿಕೊಳ್ಳಬೇಡಿ

PM Vishwakarma Yojana: ಪಿಎಂ ವಿಶ್ವಕರ್ಮ ಯೋಜನೆ, ಸ್ವಯಂ ಉದ್ಯೋಗಕ್ಕೆ ₹3 ಲಕ್ಷ ಸಾಲ, ₹15,000 ಟೂಲ್ಕಿಟ್ – ಸಂಪೂರ್ಣ ಮಾಹಿತಿ

Free Computer Training Bangalore 2026: ಬೆಂಗಳೂರಿನಲ್ಲಿ ಉಚಿತ ಕಂಪ್ಯೂಟರ್ ತರಬೇತಿ, ಟ್ಯಾಲಿ, GST ಕಲಿತು ₹25,000 ಸಂಬಳದ ಅವಕಾಶ!

She Mart Yojane 2026: ಮಹಿಳೆಯರಿಗೆ ಸ್ವಂತ ಉದ್ಯಮ ಆರಂಭಿಸಲು ಸುವರ್ಣಾವಕಾಶ – ಸಾಲ, ತರಬೇತಿ, ಮಾರ್ಕೆಟ್ ಸೌಲಭ್ಯ!

Leave a Comment