ವಿದ್ಯಾರ್ಥಿನಿಯರಿಗೆ 60 ಸಾವಿರ ರೂಗಳವರೆಗೆ ಸಹಾಯಧನ (Vivo Kanyagyaan Scholorship)
ಇಂದಿನ ಸಮಯದಲ್ಲಿ ಉನ್ನತ ಶಿಕ್ಷಣವನ್ನು ಪಡೆಯುವುದು ಎಲ್ಲರ ಮಹಾದಾಸೆಯಾಗಿರುತ್ತದೆ ಅದರಂತೆಯೇ ಉನ್ನತ ಶಿಕ್ಷಣವನ್ನು ಪಡೆಯಲು ಆರ್ಥಿಕ ಸಮಸ್ಯೆಗಳು ಸೇರಿದಂತೆ ಇನ್ನೂ ಹಲವು ಕಾರಣಗಳಿಂದ ಅನೇಕ ಪ್ರತಿಭಾವಂತ ಹಾಗೂ ಕೌಶಲ್ಯವುಳ್ಳ ವಿದ್ಯಾರ್ಥಿನಿಯರು ತಮ್ಮ ಕನಸುಗಳನ್ನು ಅರ್ಧದಲ್ಲೇ ನಿಲ್ಲಿಸಿರುತ್ತಾರೆ, ಇಂತಹ ವಿದ್ಯಾರ್ಥಿನಿಯರಿಗೆ ನೆರವಾಗಲು ಖಾಸಗಿ ಕಂಪನಿಗಳ ಸಿಎಸ್ಆರ್ ಯೋಜನೆಗಳು ಮಹತ್ವದ ಪಾತ್ರವನ್ನು ವಹಿಸುತ್ತಿದ್ದು ಈ ಸಮಗ್ರ ಯೋಜನೆ ಅಡಿಯಲ್ಲಿ ವಿದ್ಯಾರ್ಥಿನಿಯರಿಗೆ ವಾರ್ಷಿಕ 60,000 ವರೆಗೆ ಸಹಾಯಧನವನ್ನು ನೀಡುವ ಯೋಜನೆಯನ್ನು ರೂಪಿಸಿದೆ ಇದರಲ್ಲಿ ಪ್ರಮುಖವಾದ ಒಂದು ಯೋಜನೆ ಯಾವುದೆಂದರೆ ವಿವೋ ಕನ್ಯಾ ಜ್ಞಾನ್ ವಿದ್ಯಾರ್ಥಿ ವೇತನ 2026.
ಸೂಚನೆ: ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿನಿಯರು ಸ್ಟೆಮ್ ಕೋರ್ಸ್ ಅಂದರೆ ವಿಜ್ಞಾನ ತಂತ್ರಜ್ಞಾನ ಇಂಜಿನಿಯರಿಂಗ್ ಹಾಗೂ ಗಣಿತ ಕ್ಷೇತ್ರದಲ್ಲಿ ಓದುತ್ತಿರುವ ವಿದ್ಯಾರ್ಥಿನಿಯರಿಗೆ ಪ್ರತಿ ವರ್ಷ 60 ಸಾವಿರ ರೂಗಳವರೆಗೆ ಆರ್ಥಿಕ ನೆರವನ್ನು ನೀಡುವ ಯೋಜನೆಯಾಗಿದೆ.

ಈ ಲೇಖನದಲ್ಲಿ ನಾವು ವಿವೋ ಕನ್ಯಾ ಜ್ಞಾನ್ ಯೋಜನೆಗೆ ಯಾರು ಅರ್ಹರು ಅರ್ಜಿ ಸಲ್ಲಿಕೆ ಹೇಗೆ ಮಾಡಬೇಕು ಅಗತ್ಯವಾದ ದಾಖಲೆಗಳು ಯಾವುವು? ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ ಹಾಗೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕದ ಬಗ್ಗೆ ವಿವರವಾಗಿ ತಿಳಿಸಿ ಕೊಡುತ್ತೇವೆ ಆದ್ದರಿಂದ ಈ ಲೇಖನವನ್ನು ಸಂಪೂರ್ಣವಾಗಿ ಓದಿ.
Vivo Kanyagyaan Scholorship ನ ಪ್ರಮುಖ ವಿವರಗಳು.
ಯೋಜನೆಯ ಹೆಸರು : ವಿವೋ ಕನ್ಯಾ ಜ್ಞಾನ್ ವಿದ್ಯಾರ್ಥಿವೇತನ (Vivo Kanyagyaan Scholorship) 2026.
ವಿದ್ಯಾರ್ಥಿ ವೇತನವನ್ನು ನೀಡುವ ಸಂಸ್ಥೆ : ವಿವೋ ಇಂಡಿಯಾ. (ಸಿಎಸ್ಆರ್ ಫಂಡ್ ಇನಿಷಿಯೇಟಿವ್)
ಯೋಜನೆಯ ಪ್ರಯೋಜನ : 60,000 ರೂಗಳವರೆಗೆ ವಿದ್ಯಾರ್ಥಿ ವೇತನ ಪ್ರತಿ ವರ್ಷ.
ಯೋಜನೆಯ ಅವಧಿ : ಗರಿಷ್ಠ 3 ವರ್ಷಗಳು.
ಅರ್ಜಿ ವಿಧಾನ : ಆನ್ಲೈನ್ ಸಲ್ಲಿಕೆ ಮಾತ್ರ.
ಶೈಕ್ಷಣಿಕ ವಿದ್ಯಾರ್ಹತೆ : ಸ್ಟೆಮ್ ಯುಜಿ ವಿದ್ಯಾರ್ಥಿನಿಯರು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 11-05-2026.
Vivo Kanyagyaan Scholorship ಯೋಜನೆಯ ಪ್ರಮುಖ ಉದ್ದೇಶಗಳು.
- ವಿದ್ಯಾರ್ಥಿನಿಯರಲ್ಲಿ ಸ್ಟೆಮ್ ಶಿಕ್ಷಣವನ್ನು ಉತ್ತೇಜಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
- ಆರ್ಥಿಕವಾಗಿ ಹಿಂದುಳಿದಿದ್ದು ಶಿಕ್ಷಣವನ್ನು ಪಡೆಯುವಲ್ಲಿ ವಿಫಲರಾಗಿದ್ದರೆ ಈ ಯೋಜನೆಯು ವಿದ್ಯಾರ್ಥಿನಿಯರಿಗೆ ಹಾರ್ದಿಕ ಸಹಾಯಧನ ನೀಡುತ್ತದೆ.
- ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಪ್ರೋತ್ಸಾಹ ನೀಡುತ್ತದೆ.
- ಉದ್ಯೋಗದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಸಹಕರಿಸುತ್ತದೆ.
ಈ Vivo Kanyagyaan Scholorship ಯೋಜನೆಯು ಮಹಿಳೆಯರ ಶಿಕ್ಷಣ ಕ್ಷೇತ್ರದಲ್ಲಿ ಸಮಾನ ಅವಕಾಶಗಳನ್ನು ರೂಪಿಸುವ ಪ್ರಮುಖ ಹೆಜ್ಜೆಯನ್ನು ಇಟ್ಟಿದೆ.
Vivo Kanyagyaan Scholorship ನ ಪ್ರಯೋಜನಗಳು ಈ ಕೆಳಕಂಡಂತಿವೆ.
- 60,000 ರೂಗಳವರೆಗೆ ವಿದ್ಯಾರ್ಥಿ ವೇತನ ಪ್ರತಿ ವರ್ಷ ಗರಿಷ್ಠ ಮೂರು ವರ್ಷಗಳವರೆಗೆ.
- ಶಿಕ್ಷಣ ಪಡೆಯುವ ಅವಧಿಯಲ್ಲಿ ತಗಲುವ ವೆಚ್ಚಗಳಿಗೆ ನೆರವು ನೀಡುವುದು. (ಕಾಲೇಜ್ ಫೀಸ್ ಪುಸ್ತಕಗಳು ಹಾಸ್ಟೆಲ್ ಇತ್ಯಾದಿ)
- ಮೆಂಟರ್ಶಿಪ್ ಮತ್ತು ತರಗತಿ ಕಾರ್ಯಕ್ರಮಗಳ ಆಯೋಜಿಸುವಿಕೆ..
- ಶಿಕ್ಷಣ ಮುಗಿದ ನಂತರ ಉದ್ಯೋಗವನ್ನು ಪಡೆಯುವಲ್ಲಿ ಮಾರ್ಗದರ್ಶನ ಹಾಗೂ ತಯಾರಿ.
ಅರ್ಹತೆ ಪಡೆದ ವಿದ್ಯಾರ್ಥಿನಿಯರು 3 ವರ್ಷಗಳಲ್ಲಿ ಒಟ್ಟು 1.8 ಲಕ್ಷಗಳವರೆಗೆ ವಿದ್ಯಾರ್ಥಿ ವೇತನವನ್ನು ಪಡೆಯುವ ಅವಕಾಶ ಇದಾಗಿದ್ದು ಆದಷ್ಟು ಬೇಗ ಅರ್ಜಿ ಸಲ್ಲಿಸಿ.
Vivo Kanyagyaan Scholorship ಗೆ ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು.

Vivo Kanyagyaan Scholorship ಗೆ ಅರ್ಜಿ ಸಲ್ಲಿಸಲು ಈ ಕೆಳಕಂಡ ಅರ್ಹತೆಗಳನ್ನು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ ಈ ಅರ್ಹತೆಗಳು ಕೆಳಕಂಡಂತಿವೆ.
ಮೂಲ ಅರ್ಹತೆಗಳು
- ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಮಹಿಳಾ ಅಭ್ಯರ್ತಿ ಆಗಿರಬೇಕು.
- ಶಿಕ್ಷಣವನ್ನು ಭಾರತ ದೇಶದಲ್ಲಿ ಪೂರೈಸುತ್ತಿರಬೇಕು.
- ಸ್ಟೆಮ್ ಕೋರ್ಸ್ ಗಳಾದ ಬಿ ಟೆಕ್ ಬಿಇ ಬಿ ಎಸ್ ಸಿ ಬಿ ಸಿ ಎ ಕೋರ್ಸ್ ಗಳನ್ನು ಓದುತ್ತಿರಬೇಕು.
- ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಯು ಒಂದನೇ ಅಥವಾ ಎರಡನೇ ವರ್ಷದ ಪದವಿ ವಿದ್ಯಾರ್ಥಿನಿ ಆಗಿರಬೇಕು.
ಶೈಕ್ಷಣಿಕ ಅರ್ಹತೆ
- ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿನಿಯರು 10ನೇ ತರಗತಿ ಹಾಗೂ 12ನೇ ತರಗತಿಯ ಪರೀಕ್ಷೆಯಲ್ಲಿ ಕನಿಷ್ಠ 70% ಅಂಕಗಳನ್ನು ಕಡ್ಡಾಯವಾಗಿ ಹೊಂದಿರಬೇಕು.
- ಇಂದಿನ ಸೆಮಿಸ್ಟರ್ನಲ್ಲಿ ಉತ್ತಮ ಅಂಕಗಳೊಂದಿಗೆ ಫಲಿತಾಂಶವನ್ನು ಪಡೆದಿರಬೇಕು.
ಆದಾಯದ ಮಿತಿ
- Vivo Kanyagyaan Scholorship ಗೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿನಿಯರ ಕುಟುಂಬದ ವಾರ್ಷಿಕ ಆದಾಯವು 5 ಲಕ್ಷಕ್ಕಿಂತ ಕಡಿಮೆ ಇರಬೇಕು ಒಂದು ಪಕ್ಷ ಐದು ಲಕ್ಷಕ್ಕಿಂತ ಹೆಚ್ಚು ಆದಾಯ ಇದ್ದಲ್ಲಿ ಈ ಯೋಜನೆಗೆ ಅರ್ಹರಾಗಿರುವುದಿಲ್ಲ.
ಅರ್ಹತೆ ಇಲ್ಲದ ಅಭ್ಯರ್ಥಿಗಳು
- ವಿವೋ ಕಂಪನಿ ಅಥವಾ ಬಡ್ಡಿ ಫಾರ್ ಸ್ಟಡಿ ಉದ್ಯೋಗಿಗಳ ಮಕ್ಕಳು ಈ ಯೋಜನೆಗೆ ಅರ್ಹರಾಗಿರುವುದಿಲ್ಲ.
- ಈಗಾಗಲೇ ಈ ವಿದ್ಯಾರ್ಥಿ ವೇತನವನ್ನು ಪಡೆಯುತ್ತಿದ್ದರೆ ಈ ಯೋಜನೆಗೆ ಪುನರ್ ಅರ್ಹರಾಗಿರುವುದಿಲ್ಲ.
- ಇತರ ಇಲಾಖೆಗಳಿಂದ ಸಂಪೂರ್ಣ ವಿದ್ಯಾರ್ಥಿ ವೇತನವನ್ನು ಪಡೆಯುತ್ತಿರುವವರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
Vivo Kanyagyaan Scholorship ಗೆ ಆದ್ಯತೆ ಪಡೆಯುವ ವಿದ್ಯಾರ್ಥಿನಿಯರ ಪಟ್ಟಿ.
- ಏಕ ಪೋಷಕರನ್ನು ಹೊಂದಿರುವ ಮಕ್ಕಳು.
- ಅನಾಥ ಮಕ್ಕಳು.
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವರ್ಗದ ವಿದ್ಯಾರ್ಥಿಗಳು.
- ಮೊದಲನೇ ತಲೆಮಾರಿನ ಪದವೀಧರ ಅಭ್ಯರ್ಥಿಗಳು.
- ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರು.
- ಗ್ರಾಮೀಣ ಪ್ರದೇಶದಲ್ಲಿ ಅಥವಾ ಹಿಂದುಳಿದ ಪ್ರದೇಶದಲ್ಲಿ ಇರುವ ಹಾಗೂ ಅಭ್ಯಾಸಸುತ್ತಿರುವ ವಿದ್ಯಾರ್ಥಿನಿಯರು.
Vivo Kanyagyaan Scholorship ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು.
- ಆಧಾರ್ ಕಾರ್ಡ್.
- ಹತ್ತನೇ ತರಗತಿ ಹಾಗೂ 12ನೇ ತರಗತಿಯ ಅಂಕಪಟ್ಟಿ.
- ಕಾಲೇಜು ಐಡಿ ಕಾರ್ಡ್ ಅಥವಾ ಅಡ್ಮಿಶನ್ ಪ್ರೂಫ್.
- ಜಾತಿ ಪ್ರಮಾಣ ಪತ್ರ.
- ಆದಾಯ ಪ್ರಮಾಣ ಪತ್ರ.
- ಬ್ಯಾಂಕ್ ಖಾತೆ ವಿವರಗಳು.
- ಫೀಸ್ ರಸೀತಿ.
- ಪಾಸ್ಪೋರ್ಟ್ ಸೈಜ್ ಫೋಟೋ ಮತ್ತು ಸಹಿ.
Vivo Kanyagyaan Scholorship ಗೆ ಅರ್ಜಿ ಸಲ್ಲಿಸುವ ವಿಧಾನ.

ಈ Vivo Kanyagyaan Scholorship ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನವು ತುಂಬಾ ಸುಲಭವಾಗಿದ್ದು ಆದಷ್ಟು ಬೇಗ ಅರ್ಜಿ ಸಲ್ಲಿಸಿ, ನೋಂದಾಯಿಸಿಕೊಳ್ಳಿ.
ಮೊದಲನೇ ಹಂತ : ನೋಂದಣಿ.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಬಡ್ಡಿ ಫಾರ್ ಸ್ಟಡಿ ಯಾ ಅಧಿಕೃತ ವೆಬ್ಸೈಟ್ ಗೆ ಹೋಗಿ ನೋಂದಣಿ ಆಗಬೇಕಾಗುತ್ತದೆ.
ನೊಂದಾವಣಿಗೊಳ್ಳಲು ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿ ಮೂಲಕ ನೊಂದಣಿ ಮಾಡಿಕೊಳ್ಳಬಹುದು.
ಎರಡನೇ ಹಂತ : ಅರ್ಜಿಯನ್ನು ಭರ್ತಿ ಮಾಡುವುದು.
ಅಭ್ಯರ್ಥಿಗಳು ನೊಂದಣಿ ಯಶಸ್ವಿಗೊಂಡ ಮೂಲಕ ವಿದ್ಯಾರ್ಥಿ ವೇತನದ ಅರ್ಜಿ ತೆರೆಯುತ್ತದೆ ಇದರಲ್ಲಿ ವೈಯಕ್ತಿಕ ಮಾಹಿತಿಗಳು ಶೈಕ್ಷಣಿಕ ಮಾಹಿತಿಗಳು ಆದಾಯದ ವಿವರಗಳು ಜಾತಿಗೆ ಸಂಬಂಧಿಸಿದ ವಿವರಗಳನ್ನು ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ.
ಮೂರನೇ ಹಂತ : ದಾಖಲೆಗಳ ಅಪ್ಲೋಡ್ ಮಾಡುವುದು.
ಅರ್ಜಿ ನಮೂನೆಯಲ್ಲಿ ಕಡ್ಡಾಯವಾಗಿ ಕೇಳಲಾಗುವ ಎಲ್ಲಾ ಅಗತ್ಯ ದಾಖಲೆಗಳಾದ ವೈಯಕ್ತಿಕ ಗುರುತಿನ ಪ್ರಮಾಣ ಪತ್ರ ಶೈಕ್ಷಣಿಕ ಪ್ರಮಾಣ ಪತ್ರ ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹಾಗೂ ಅಂಕಪಟ್ಟಿಗಳನ್ನು ಸ್ಕ್ಯಾನ್ ಮಾಡಿ ಇಟ್ಟುಕೊಂಡು ಗರಿಷ್ಠ ಗಾತ್ರವನ್ನು ಗಮನದಲ್ಲಿಟ್ಟುಕೊಂಡು ಅಪ್ಲೋಡ್ ಮಾಡುವುದು.
ನಾಲ್ಕನೇ ಹಂತ : ಸಲ್ಲಿಸುವಿಕೆ.
ಅಭ್ಯರ್ಥಿಗಳು ಆನ್ಲೈನ್ ಅರ್ಜಿಯಲ್ಲಿ ಭರ್ತಿ ಮಾಡಿದ ಎಲ್ಲಾ ಮಾಹಿತಿಗಳನ್ನು ರಿವ್ಯೂ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಪರಿಶೀಲಿಸಿ ಸಬ್ಮಿಟ್ ಮಾಡಬಹುದಾಗಿರುತ್ತದೆ ನಂತರ ನಿಮ್ಮ ಮೊಬೈಲ್ ನಂಬರ್ ಅಥವಾ ಇಮೇಲ್ ಐಡಿಗೆ ಕನ್ಫರ್ಮೇಶನ್ ಮೆಸೇಜ್ ಬರುತ್ತದೆ ಇದರಲ್ಲಿ ನಿಮ್ಮ ನೋಂದಣಿ ಸಂಖ್ಯೆ ಹಾಗೂ ನೀವು ನಮೂದಿಸಿರುವ ವಿವರಗಳ ಬಗ್ಗೆ ಮಾಹಿತಿ ಇದ್ದು ಭವಿಷ್ಯದ ಉದ್ದೇಶಕ್ಕಾಗಿ ಇದನ್ನು ಸೇವೆ ಮಾಡಿ ಇಟ್ಟುಕೊಳ್ಳಿ.
Vivo Kanyagyaan Scholorship ನ ಆಯ್ಕೆ ಪ್ರಕ್ರಿಯೆ.

ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆ ಮೂಲಕ ಆಯ್ಕೆಯಾಗುತ್ತಾರೆ ಆಯ್ಕೆಯು ಒಟ್ಟು ಐದು ಹಂತಗಳಲ್ಲಿ ನಡೆಯಲಿದ್ದು ಆಯ್ಕೆ ಹಂತಗಳು ಈ ಕೆಳಕಂಡಂತಿವೆ.
- ಅರ್ಜಿ ಪರಿಶೀಲನೆ ಮಾಡುವಿಕೆ.
- ಅರ್ಹತೆಯ ಪರಿಶೀಲನೆ.
- ಮೆರುಗು ಆಧಾರಿತ ಶಾರ್ಟ್ಲಿಸ್ಟಿಂಗ್.
- ಟೆಲಿಫೋನ್ ಮೂಲಕ ಅಥವಾ ಆನ್ಲೈನ್ ಮೂಲಕ ಇಂಟರ್ವ್ಯೂ.
- ಅಂತಿಮ ಆಯ್ಕೆ ಪಟ್ಟಿ ಪ್ರಕಟ.
Vivo Kanyagyaan Scholorship ಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು
ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಈಗಾಗಲೇ ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿರುತ್ತದೆ.
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 11-05-2026..
Vivo Kanyagyaan Scholorship ಯೋಜನೆಗೆ ಸಂಬಂಧಿಸಿದೆ ಪ್ರಮುಖ ಅಂಶಗಳು.
ಈ ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕ ಇರುವುದಿಲ್ಲದೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ.
- ಈ ಯೋಜನೆಗೆ ಅರ್ಜಿ ಸಲ್ಲಿಸುವಾಗ ಸರಿಯಾದ ಮಾಹಿತಿಯನ್ನು ಭರ್ತಿ ಮಾಡಬೇಕು ತಾವು ನಮೂದಿಸಿರುವ ಮಾಹಿತಿ ಅಥವಾ ದಾಖಲೆ ತಪ್ಪಾದಲ್ಲಿ ಅರ್ಜಿಯು ರಿಜೆಕ್ಟ್ ಆಗುವ ಸಾಧ್ಯತೆ ಜಾಸ್ತಿ ಇರುತ್ತದೆ.
- ತಾವು ಅಪ್ಲೋಡ್ ಮಾಡುವ ದಾಖಲೆಗಳು ನಿಖರವಾಗಿದ್ದು ಸ್ಪಷ್ಟವಾಗಿರಬೇಕು ಹಾಗೂ ಉತ್ತಮ ಗುಣಮಟ್ಟವನ್ನು ಹೊಂದಿರಬೇಕು.
- ಕೊನೆಯ ದಿನಾಂಕ 11.05.2026 ಆಗಿರುವುದರಿಂದ ಕೊನೆ ಸಂದರ್ಭದಲ್ಲಿ ಸರ್ವ ಸಮಸ್ಯೆಯ ದೂರಾಗಬಹುದು ಆದುದರಿಂದ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಿ ಅರ್ಜಿಯನ್ನು ಡೌನ್ಲೋಡ್ ಮಾಡಿ ಇಟ್ಟುಕೊಳ್ಳಿ.
ಯಾರು ಈ ವಿವೋ ಕನ್ಯಾ ಗ್ಯಾಂನ್ ಯೋಜನೆಗೆ ಅರ್ಜಿ ಹಾಕಬೇಕು ಮುಖ್ಯವಾಗಿ.
- ವಿದ್ಯಾರ್ಥಿನಿಯರು ಸ್ಟೆಮ್ ಕ್ಷೇತ್ರದಲ್ಲಿ ಓದುತ್ತಿದ್ದರೆ ಈ ಯೋಜನೆಗೆ ಆದಷ್ಟು ಬೇಗ ಅರ್ಜಿ ಸಲ್ಲಿಸಿ.
- ಆರ್ಥಿಕವಾಗಿ ಹಿಂದುಳಿದ ಕುಟುಂಬ ವಾಗಿದ್ದರೆ ಅರ್ಜಿ ಸಲ್ಲಿಸಿ.
- 10ನೇ ತರಗತಿ ಹಾಗೂ 12ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ್ದು ಇಂದಿನ ಸೆಮಿಸ್ಟರ್ ನಲ್ಲಿ ಉತ್ತಮ ಅಂಕಗಳನ್ನು ಪಡೆದಿದ್ದರೆ ಅರ್ಜಿ ಸಲ್ಲಿಸಿ.
- ವಿದ್ಯಾರ್ಥಿ ವೇತನದ ಜೊತೆ ಉದ್ಯೋಗವನ್ನು ಹುಡುಕುವ ಹಾಗೂ ಉದ್ಯೋಗವನ್ನು ಪಡೆಯುವ ಆಕಾಂಕ್ಷೆ ಇದ್ದರೆ ಈ ಅರ್ಜಿ ಸಲ್ಲಿಸಿ.
ಈ ವಿವೋ ಕನ್ಯಾ ಗ್ಯಾಸ್ ಸ್ಕಾಲರ್ಶಿಪ್ ಮಹಿಳಾ ವಿದ್ಯಾರ್ಥಿನಿಯರಿಗೆ ಕೇವಲ ಆರ್ಥಿಕ ನೆರವನ್ನು ನೀಡುವುದಲ್ಲದೆ ಕೌಶಲ್ಯಾಧಾರಿತ ತರಬೇತಿಯನ್ನು ನೀಡಿ ಉದ್ಯೋಗವನ್ನು ಪಡೆಯುವಲ್ಲಿ ಸಹಕರಿಸುವ ಒಂದು ದೊಡ್ಡ ಮಟ್ಟದ ಅವಕಾಶವಾಗಿದೆ ಆದ್ದರಿಂದ ನಿಮ್ಮ ಉನ್ನತ ಶಿಕ್ಷಣವನ್ನು ಯಾವುದೇ ತೊಂದರೆ ಇಲ್ಲದೆ ಮುಂದುವರಿಸುವುದರ ಜೊತೆಗೆ ಉದ್ಯೋಗವನ್ನು ಪಡೆಯುವಲ್ಲಿ ಮೆಂಟಲ್ಶಿಪ್ ಹಾಗೂ ಮಾರ್ಗದರ್ಶನವನ್ನು ನೀಡುವುದರ ಮೂಲಕ ತಮ್ಮ ವೃತ್ತಿ ಜೀವನವನ್ನು ರೂಪಿಸಿಕೊಳ್ಳಬಹುದಾಗಿರುತ್ತದೆ.
ಬಡ್ಡಿ ಫಾರ್ ಸ್ಟಡಿ ಯ ಅಧಿಕೃತ ವೆಬ್ಸೈಟ್ : Buddy4Study
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ವಾಟ್ಸಪ್ ಗ್ರೂಪ್ ಸೇರಲು : ಇಲ್ಲಿ ಕ್ಲಿಕ್ ಮಾಡಿ
Read More: Schemes
Mahila Samruddhi Loan Scheme, Loan Opportunity: ಕಡಿಮೆ ಬಡ್ಡಿ ದರದಲ್ಲಿ ಮಹಿಳೆಯರಿಗೆ 1.4 ಲಕ್ಷ ಸಾಲ ಸೌಲಭ್ಯ.
Read More: Jobs.
KSLSA Recruitments 2026, Big Update: ಪ್ರಾಧಿಕಾರದ ಶಾಖಾಧಿಕಾರಿ ಹುದ್ದೆಗೆ ಆನ್ ಲೈನ್ ಅರ್ಜಿ ಸಲ್ಲಿಕೆ ಆರಂಭ
Mysore District Court Recruitment 2026, Big Opportunity: 93 ಹುದ್ದೆಗಳ ಭರ್ಜರಿ ನೇಮಕಾತಿ ಆರಂಭ