ಆನ್ ಲೈನ್ ಮೂಲಕ ಮುಖ್ಯ ಕಾರ್ಯಾಚರಣಾ ಅಧಿಕಾರಿ ಹುದ್ದೆಗಳ ನೇಮಕಾತಿ ( IPPB Recruitment 2026)
ಭಾರತದ ಅಂಚೆ ಇಲಾಖೆ ವತಿಯಿಂದ ಆರಂಭಗೊಂಡಿರುವ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ತನ್ನ ಅಧಿಕೃತ ನೇಮಕಾತಿ ಅಧಿಸೂಚನೆಯ ಪ್ರಕಾರ ಮುಖ್ಯ ಕಾರ್ಯಾಚರಣೆ ಅಧಿಕಾರಿ ಹುದ್ದೆಗೆ ಆನ್ಲೈನ್ ನಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ ಅಖಿಲ ಭಾರತ ಕ್ಷೇತ್ರದಲ್ಲಿ ಉದ್ಯೋಗವನ್ನು ಹೊಂದಬೇಕೆಂದಿರುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ ತಮ್ಮ ಸರ್ಕಾರಿ ಉದ್ಯೋಗ ಕನಸನ್ನು ಪೂರ್ಣವಾಗಿಸಿಕೊಳ್ಳಬಹುದಾಗಿರುತ್ತದೆ ಆದ್ದರಿಂದ ಆದಷ್ಟು ಬೇಗ ಅರ್ಜಿ ಸಲ್ಲಿಸಿ.
ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನೇಮಕಾತಿ (IPPB Recruitment) ಅಧಿಸೂಚನೆಯ ಮಾಹಿತಿ
ಸಂಸ್ಥೆ ಹೆಸರು : ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (ಐಪಿಪಿಬಿ – IPPB)
ಹುದ್ದೆಯ ಹೆಸರು : ಮುಖ್ಯ ಕಾರ್ಯಾಚರಣೆ ಅಧಿಕಾರಿ ( ಚೀಫ್ ಆಪರೇಟಿಂಗ್ ಆಫೀಸರ್ – COO)
ಒಟ್ಟು ಹುದ್ದೆಗಳ ಸಂಖ್ಯೆ : ಅಧಿಕೃತವಾಗಿ ನಿರ್ದಿಷ್ಟ ಸಂಖ್ಯೆಗಳನ್ನು ನಿರ್ಧರಿಸಿರುವುದಿಲ್ಲ
ಉದ್ಯೋಗದ ಸ್ಥಳ : ಭಾರತದದ್ಯಂತ
IPPB Recruitment ಗೆ ಅರ್ಜಿ ಸಲ್ಲಿಸಲು ಬೇಕಾದ ಶೈಕ್ಷಣಿಕ ಅರ್ಹತೆ

ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನ ಮುಖ್ಯ ಕಾರ್ಯಾಚರಣೆ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಯದಿಂದ ಯಾವುದಾದರೂ ವಿಷಯದಲ್ಲಿ ಪದವಿಯನ್ನು ಕಡ್ಡಾಯವಾಗಿ ಪೂರ್ಣಗೊಳಿಸಿರಬೇಕು ಎಂದು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಅನ್ನು ಅಧಿಕೃತ ನೇಮಕಾತಿ ಸೂಚನೆಯಲ್ಲಿ ತಿಳಿಸಿರುತ್ತದೆ.
IPPB Recruitment ಗೆ ಸಂಬಂಧಿಸಿದ ವಯೋಮಿತಿ ವಿವರ
ಈ IPPB Recruitment ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯಸ್ಸು 01-04-2026ರಂತೆ ಅನ್ವಯಿಕ ಕನಿಷ್ಠ 40 ವರ್ಷ ಮತ್ತು ಗರಿಷ್ಠ 55 ವರ್ಷ ವಯಸ್ಸಿನ ಆಗಿರಬೇಕು ಎಂದು ಹೇಳಲಾಗಿರುತ್ತದೆ.
IPPB Recruitment ನ ವೇತನ
ಇಂಡಿಯಾ ಪೋಸ್ಟ್ ಪೆಮೆಂಟ್ ಬ್ಯಾಂಕ್ ನೇಮಕಾತಿಯ ಮೂಲಕ ನೇಮಕಗೊಂಡ ಅಭ್ಯರ್ಥಿಗಳಿಗೆ ಅಧಿಕೃತ ಬ್ಯಾಂಕಿಂಗ್ ನಿಯಮಾವಳಿಗಳ ಪ್ರಕಾರ ಆಕರ್ಷಕ ಸಂಬಳ ಹಾಗೂ ಭತ್ಯೆಗಳನ್ನು ನೀಡಲಾಗುತ್ತದೆ.
ಅರ್ಜಿ ಶುಲ್ಕ
ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ರೂ.750/- ಗಳನ್ನು ನಿಗದಿಪಡಿಸಲಾಗಿದೆ.
ಪಾವತಿ ವಿಧಾನ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆನ್ಲೈನ್ ಮೂಲಕ ಮಾತ್ರವೇ ಅಂದರೆ ಯುಪಿಐ ಡೆಬಿಟ್ ಕಾರ್ಡ್ ಕ್ರೆಡಿಟ್ ಕಾರ್ಡ್ ಈ ಮುಂತಾದಂತಹ ಪೇಮೆಂಟ್ ಬಳಸಿ ಆನ್ಲೈನ್ ಅರ್ಜಿ ಶುಲ್ಕವನ್ನು ಪಾವತಿಸಬಹುದಾಗಿರುತ್ತದೆ ಅರ್ಜಿ ಶುಲ್ಕವನ್ನು ಪಾವತಿಸಿ ಅದನ್ನು ಪರಿಗಣಿಸಲಾಗುವುದಿಲ್ಲ.
IPPB Recruitment ನ ಆಯ್ಕೆ ಪ್ರಕ್ರಿಯೆ

ಶಾರ್ಟ್ ಲಿಸ್ಟಿಂಗ್
ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನೇಮಕಾತಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಅರ್ಜಿಗಳ ಮಾಹಿತಿಯನ್ನು ಕ್ರೂಢೀಕರಿಸಿ ಮೆರಿಟ್ ಆಧಾರದ ಮೇಲೆ ಶಾರ್ಟ್ ಲಿಸ್ಟಿಂಗನ್ನು ಮಾಡಲಾಗುತ್ತದೆ.
ಮನೋಮಾಪನ ಪರೀಕ್ಷೆ
ಮನೋಮಪ್ಪನ ಪರೀಕ್ಷೆ ಎಂದರೆ ಒಬ್ಬ ವ್ಯಕ್ತಿಯ ಬುದ್ಧಿ ಸಾಮರ್ಥ್ಯ ವ್ಯಕ್ತಿತ್ವ ಹಾಗೂ ಆಸಕ್ತಿ ಮತ್ತು ನಡವಳಿಕೆಯನ್ನು ವೈಜ್ಞಾನಿಕವಾಗಿ ಅಳೆಯುವ ಮತ್ತು ಮೌಲ್ಯಮಾಪನ ಮಾಡುವ ವಿಧಾನವಾಗಿದೆ ಐಪಿಪಿಬಿ ನೇಮಕಾತಿಯಲ್ಲಿ ಮನೋಮಾಪನ ಪರೀಕ್ಷೆಯ ಮೂಲಕ ಎರಡನೇ ಹಂತದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.
ಸಂದರ್ಶನ
ಸಂದರ್ಶನದಲ್ಲಿ ಅಭ್ಯರ್ಥಿಗೆ ಹುದ್ದೆಯ ಬಗ್ಗೆ ಗೊತ್ತಿರಬೇಕಾದ ಕನಿಷ್ಠ ಜ್ಞಾನ ಅಭ್ಯರ್ಥಿಗಳ ವ್ಯಕ್ತಿತ್ವ ಹಾಗೂ ನಡತೆ ಹಾಗೂ ಸಂಭಾಷಣೆಯ ಕೌಶಲ್ಯಗಳನ್ನು ಪರೀಕ್ಷಿಸಲಾಗುವುದು.
ಮೂರು ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಅಧಿಕೃತವಾಗಿ ನೀವು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ನ ಮುಖ್ಯ ಕಾರ್ಯಾಚರಣೆ ಅಧಿಕಾರಿ ಹುದ್ದೆಗೆ ನೇಮಕಗೊಳ್ಳಬಹುದಾಗಿರುತ್ತದೆ.
IPPB Recruitment ಗೆ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ

- ಮೊದಲು ಐಪಿಪಿಬಿ ಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ ನೇಮಕಾತಿ ವಿಭಾಗವನ್ನು ತೆರೆದು ಅಲ್ಲಿ ಕರೆಂಟ್ ಓಪನಿಂಗ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
- ನಂತರ ಅಲ್ಲಿ ಕಾಣಿಸುವ ಸಿ ಓ ಓ ರೆಕ್ರೂಟ್ಮೆಂಟ್ 2026 ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ತಾವು ನೇಮಕಾತಿಯ ಅಧಿಕೃತ ಪುಟಕ್ಕೆ ಹೋಗಬಹುದು.
- ನಂತರ ಹುದ್ದೆಗೆ ಹೊರಡಿಸಲಾಗಿರುವ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ಅಭ್ಯರ್ಥಿಯು ಅರ್ಹತಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡ ನಂತರ ಅಪ್ಲೈ ಆನ್ಲೈನ್ ಎಂಬ ಬಟನ್ ಮೇಲೆ ಒತ್ತಬೇಕಾಗುತ್ತದೆ.
- ನಂತರ ಆನ್ಲೈನ್ ಅರ್ಜಿ ಫಾರಂ ತೆರೆಯಲಿದ್ದು ನಿಮ್ಮ ವೈಯಕ್ತಿಕ ಮಾಹಿತಿಗಳು ಶೈಕ್ಷಣಿಕ ಮಾಹಿತಿಗಳು ಅನ್ವಯಿಸಿದರೆ ಅನುಭವ ಕ್ಕೆ ಸಂಬಂಧಿಸಿದ ಮಾಹಿತಿಗಳು ಮುಂತಾದ ಮಾಹಿತಿಯನ್ನು ಸರಿಯಾಗಿ ನಮೂದಿಸಬೇಕಾಗುತ್ತದೆ.
- ಅರ್ಜಿಯನ್ನು ಭರ್ತಿ ಮಾಡಿದ ನಂತರ ರಿವ್ಯೂ ಬಟನ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ತಾವು ನಮೂದಿಸಿರುವ ಎಲ್ಲ ಮಾಹಿತಿಯನ್ನು ಪರಿಶೀಲಿಸಬಹುದು ಒಂದು ವೇಳೆ ನೀವು ನಮೂದಿಸಿರುವ ಮಾಹಿತಿಯು ತಪ್ಪಾದಲ್ಲಿ ಹಿಂದಕ್ಕೆ ಬಂದು ಅರ್ಜಿಯಲ್ಲಿ ಸರಿಪಡಿಸಬಹುದಾಗಿರುತ್ತದೆ.
- ಅರ್ಜಿಯನ್ನು ಸಂಪೂರ್ಣವಾಗಿ ಯಾವುದೇ ತಪ್ಪಿಲ್ಲದೆ ಭರ್ತಿ ಮಾಡಿದ ನಂತರ ರಿವ್ಯೂ ನೋಡಿ ತಮಗೆ ಅನ್ವಯಿಸುವ ವರ್ಗದ ಆಧಾರದ ಮೇಲೆ ಆನ್ಲೈನ್ ಅರ್ಜಿ ಶುಲ್ಕವನ್ನು ಪಾವತಿಸಿ.
- ಅರ್ಜಿ ಶುಲ್ಕವನ್ನು ಯಶಸ್ವಿಯಾಗಿ ಪಾವತಿಸಿದ ನಂತರ ನಿಮ್ಮ ಅರ್ಜಿಯು ತೆರೆಯುತ್ತದೆ ಆ ಅರ್ಜಿ ಫಾರಂ ಅನ್ನು ಪ್ರಿಂಟ್ ತೆಗೆದು ಇಟ್ಟುಕೊಳ್ಳಿ ಹಾಗೂ ಭವಿಷ್ಯದ ಉದ್ದೇಶಕ್ಕಾಗಿ ಡೌನ್ಲೋಡ್ ಮಾಡಿ ಇಟ್ಟುಕೊಳ್ಳಿ.
IPPB Recruitment ಗೆ ಸಂಬಂಧಿಸಿದ ಪ್ರಮುಖ ದಿನಾಂಕಗಳು
ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ 01-05-2026.
ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21-05-2026.
ಶುಲ್ಕ ಪಾವತಿಸಲು ಹಾಗೂ ಅರ್ಜಿಯಲ್ಲಿ ಯಾವುದಾದರೂ ಬದಲಾವಣೆಗಳಿದ್ದಲ್ಲಿ ಬದಲಾವಣೆ ಮಾಡಲು ಕೊನೆಯ ದಿನಾಂಕ 21-05-2026.
ಅಭ್ಯರ್ಥಿಗಳು ಸಲ್ಲಿಸಿರುವ ಅರ್ಜಿಯನ್ನು ಡೌನ್ಲೋಡ್ ಮಾಡಲು ಅಥವಾ ಪ್ರಿಂಟ್ ತೆಗೆದುಕೊಳ್ಳಲು ಕೊನೆಯ ದಿನಾಂಕ 15-06 2026.
India Post Payments Bank ನೇಮಕಾತಿ ಪ್ರಕ್ರಿಯೆ ದೇಶದಾದ್ಯಂತ ನಡೆಯುತ್ತಿರುವುದರಿಂದ ಸ್ಪರ್ಧೆ ಹೆಚ್ಚಾಗಿದೆ. ಆದ್ದರಿಂದ ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ ತಕ್ಷಣವೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಅತ್ಯಂತ ಮುಖ್ಯ. ಕೊನೆಯ ಕ್ಷಣಗಳಲ್ಲಿ ಸರ್ವರ್ ತೊಂದರೆಗಳು ಅಥವಾ ತಾಂತ್ರಿಕ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಸುರಕ್ಷಿತ. ಅರ್ಜಿ ಸಲ್ಲಿಸಿದ ನಂತರ ಅದರ ಪ್ರಿಂಟ್‌ಔಟ್ ಅನ್ನು ಸಂರಕ್ಷಿಸಿಕೊಳ್ಳುವುದು ಭವಿಷ್ಯದಲ್ಲಿ ಅಗತ್ಯವಾಗಬಹುದು. ಸರಿಯಾದ ಸಮಯದಲ್ಲಿ ಕ್ರಮ ತೆಗೆದುಕೊಂಡರೆ ನಿಮ್ಮ ಬ್ಯಾಂಕಿಂಗ್ ಕ್ಷೇತ್ರದ ಸರ್ಕಾರಿ ಉದ್ಯೋಗ ಕನಸನ್ನು ನನಸು ಮಾಡಿಕೊಳ್ಳಲು ಇದು ಉತ್ತಮ ಅವಕಾಶವಾಗಲಿದೆ.
ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಲು : ಇಂಡಿಯಾ ಪೋಸ್ಟ್ ಪೆಮೆಂಟ್ ಬ್ಯಾಂಕ್
ಇಂಡಿಯಾ ಪೋಸ್ಟ್ ಪೆಮೆಂಟ್ ಬ್ಯಾಂಕ್ ನೇಮಕಾತಿಗೆ ನೋಂದಾವಣೆಗೊಳ್ಳಲು : ಇಲ್ಲಿ ಕ್ಲಿಕ್ ಮಾಡಿ
ಆನ್ಲೈನಲ್ಲಿ ಅರ್ಜಿ ಸಲ್ಲಿಸಲು : ಇಲ್ಲಿ ಕ್ಲಿಕ್ ಮಾಡಿ
ನಮ್ಮ ವಾಟ್ಸಪ್ ಗ್ರೂಪ್ ಸೇರಲು : ಇಲ್ಲಿ ಕ್ಲಿಕ್ ಮಾಡಿ
Read More: Jobs.
KSLSA Recruitments 2026, Big Update: ಪ್ರಾಧಿಕಾರದ ಶಾಖಾಧಿಕಾರಿ ಹುದ್ದೆಗೆ ಆನ್ ಲೈನ್ ಅರ್ಜಿ ಸಲ್ಲಿಕೆ ಆರಂಭ
Mysore District Court Recruitment 2026, Big Opportunity: 93 ಹುದ್ದೆಗಳ ಭರ್ಜರಿ ನೇಮಕಾತಿ ಆರಂಭ