KSRP Recruitment ಮೂಲಕ ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಸರ್ಕಾರಿ ಉದ್ಯೋಗವನ್ನು ಪಡೆಯಲು ಆಸಕ್ತಿ ಹೊಂದಿರುವ ಉದ್ಯೋಗಾಕಾಂಕ್ಷಿಗಳಿಗೆ ಮಹತ್ವದ ಆದೇಶ ಒಂದು ದೊರೆತಿದೆ. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನೇಮಕಾತಿ ಸೂಚನೆಯನ್ನು ಹೊರಡಿಸಿದೆ.
ಈ ನೇಮಕಾತಿ ಮೂಲಕ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ರಾಜ್ಯದಲ್ಲಿರುವ ಅನೇಕ ಯುವತಿ ಯುವಕರ ಕನಸಾಗಿದ್ದು, ಸಮಾಜದ ಸುರಕ್ಷತೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಂತಹ ಮಹತ್ವದ ಜವಾಬ್ದಾರಿಯನ್ನು ನಿರ್ವಹಿಸುವ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಅಭ್ಯರ್ಥಿಗಳಿಗೆ ಈ ನೇಮಕಾತಿ ಸುವರ್ಣ ಅವಕಾಶವಾಗಿದೆ.
ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಈ ನೇಮಕಾತಿಯಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್, ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ ಹಾಗೂ ಭಾರತೀಯ ಮೀಸಲು ಪಡೆಗಳಿಗೆ ಸಂಬಂಧಿಸಿದಂತಹ ಹುದ್ದೆಗಳು ಇದ್ದು ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ, ದೈಹಿಕ ಗುಣಮಟ್ಟ ಪರೀಕ್ಷೆ, ದೈಹಿಕ ಸಹಿಷ್ಣುತೆ ಮತ್ತು ವೈದ್ಯಕೀಯ ಪರೀಕ್ಷೆಗಳ ಆಧಾರದ ಮೇಲೆ ನಡೆಸಲಾಗುತ್ತದೆ
ಪ್ರಸ್ತುತ ಲೇಖನದಲ್ಲಿ ಹುದ್ದೆಯ ವಿವರ, ಒಟ್ಟು ಹುದ್ದೆಗಳ ಸಂಖ್ಯೆ, ಹುದ್ದೆಗಳ ಹಂಚಿಕೆ, ವಿದ್ಯಾರ್ಹತೆ, ವಯೋಮಿತಿ ಮತ್ತು ವಯೋಮಿತಿ ಸಡಿಲಿಕೆ, ವೇತನ ಶ್ರೇಣಿ, ಆಯ್ಕೆ ವಿಧಾನ, ಅರ್ಜಿ ಶುಲ್ಕ, ದೈಹಿಕ ಅರ್ಹತೆ, ಅರ್ಜಿ ಸಲ್ಲಿಸುವ ವಿಧಾನಗಳ ಬಗ್ಗೆ ಮತ್ತು ಕೊನೆಯ ದಿನಾಂಕದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ
KSRP Recruitment ನ ಸಂಕ್ಷಿಪ್ತ ವಿವರಗಳು
| ವಿವರ | ಮಾಹಿತಿ |
| ನೇಮಕಾತಿ ಸಂಸ್ಥೆ | ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ |
| ನೇಮಕಾತಿ ಪ್ರಾಧಿಕಾರ | ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) |
| ಹುದ್ದೆಯ ಹೆಸರು | ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ |
| ಒಟ್ಟು ಹುದ್ದೆಗಳು | 2314 |
| ಉದ್ಯೋಗ ಸ್ಥಳ | ಕರ್ನಾಟಕದಾದ್ಯಂತ |
| ವಿದ್ಯಾರ್ಹತೆ | ದ್ವಿತೀಯ ಪಿಯುಸಿ ಅಥವಾ ತತ್ಸಮಾನ |
| ಅರ್ಜಿ ವಿಧಾನ | ಆನ್ಲೈನ್ ವಿಧಾನ |
| ಆಯ್ಕೆ ವಿಧಾನ | ಲಿಖಿತ ಪರೀಕ್ಷೆ, PST, PET, ವೈದ್ಯಕೀಯ ಪರೀಕ್ಷೆ |
| ಲಿಖಿತ ಪರೀಕ್ಷೆ | 100 ಅಂಕಗಳು |
| ನೆಗೆಟಿವ್ ಮಾರ್ಕಿಂಗ್ | ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕ |
| ಅರ್ಜಿ ಪ್ರಾರಂಭ | 13 ಜುಲೈ 2026 |
| ಅರ್ಜಿ ಕೊನೆಯ ದಿನಾಂಕ | 10 ಆಗಸ್ಟ್ 2026 |
| ಶುಲ್ಕ ಪಾವತಿ ಕೊನೆಯ ದಿನಾಂಕ | 11 ಆಗಸ್ಟ್ 2026 |
| ನಿರೀಕ್ಷಿತ ಲಿಖಿತ ಪರೀಕ್ಷೆ ದಿನಾಂಕ | 20 ಸೆಪ್ಟೆಂಬರ್ 2026 |
KSRP Recruitment ನ ವಿಭಾಗ ಮತ್ತು ವೃಂದವಾರು ಹುದ್ದೆಗಳ ಹಂಚಿಕೆ
ಕೆ ಎಸ್ ಆರ್ ಪಿ- ಕಲ್ಯಾಣ ಕರ್ನಾಟಕ ವೃಂದ: 334 ಹುದ್ದೆಗಳು
KSRP Recruitment ನ ಕಲ್ಯಾಣ ಕರ್ನಾಟಕ ವೃಂದದ ಅಡಿಯಲ್ಲಿ ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ಒಟ್ಟು 334 ಹುದ್ದೆಗಳು ಲಭ್ಯವಿದ್ದು ಈ ವೃಂದಕ್ಕೆ ಸಂಬಂಧಿಸಿದ ಅರ್ಹ ಅಭ್ಯರ್ಥಿಗಳು ನೇಮಕಾತಿ ನಿಯಮಗಳ ಪ್ರಕಾರ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ
ಕೆ ಎಸ್ ಐ ಎಸ್ ಎಫ್- ಕಲ್ಯಾಣ ಕರ್ನಾಟಕ ವೃಂದ: 364 ಹುದ್ದೆಗಳು
ಕರ್ನಾಟಕ ರಾಜ್ಯದ ಕೈಗಾರಿಕಾ ಭದ್ರತಾ ಪಡೆಗೆ ಸಂಬಂಧಿಸಿದ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಲ್ಲಿ ಕಲ್ಯಾಣ ಕರ್ನಾಟಕ ವೃಂದದ ಅಡಿಯಲ್ಲಿ ಅಭ್ಯರ್ಥಿಗಳಿಗಾಗಿ 364 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ
ಐ ಆರ್ ಬಿ- ಕಲ್ಯಾಣ ಕರ್ನಾಟಕ ವೃಂದ: 161 ಹುದ್ದೆಗಳು
ಭಾರತೀಯ ಮೀಸಲು ಪೊಲೀಸ್ ಕಡೆಗೆ ಸಂಬಂಧಿಸಿದಂತೆ ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಲ್ಲಿಯೂ ಸಹ ನೇಮಕಾತಿ ಪ್ರಕ್ರಿಯೆ ಆರಂಭಗೊಂಡಿದ್ದು ಈ ವಿಭಾಗದಲ್ಲಿ ಕಲ್ಯಾಣ ಕರ್ನಾಟಕ ವೃಂದದ ಅಭ್ಯರ್ಥಿಗಳಿಗೆ 161 ಹುದ್ದೆಗಳು ಮೀಸಲಿವೆ
ಕೆ ಎಸ್ ಆರ್ ಪಿ- ಉಳಿಕೆ ಮೂಲ ವೃಂದ: 1455 ಹುದ್ದೆಗಳು
ಉಳಿಕೆ ಮೂಲ ವೃಂದದಲ್ಲಿ ಅತಿ ಹೆಚ್ಚಿನ ಸಂಖ್ಯೆಯ ಹುದ್ದೆಗಳು ಲಭ್ಯವಿದ್ದು ಈ ವೃಂದದಲ್ಲಿ ಒಟ್ಟು 1655 ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ
ಒಟ್ಟು 2314 ಹುದ್ದೆಗಳ ನೇಮಕಾತಿ
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಮೀಸಲು ಪೊಲೀಸ್ ಇಲಾಖೆಯಲ್ಲಿ ವಿವಿಧ ಪೊಲೀಸ್ ಪಡೆಗಳಿಗೆ ಸೇರಿದಂತೆ ಒಟ್ಟು 2314 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು ಅಭ್ಯರ್ಥಿಗಳು ತಮಗೆ ಅನ್ವಯವಾಗುವ ವ್ರಂದ ಮತ್ತು ಹುದ್ದೆಯ ವಿವರಗಳನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಬೇಕಾಗುತ್ತದೆ.
ಶೈಕ್ಷಣಿಕ ಅರ್ಹತೆ
ಈ KSRP Recruitment ಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಕನಿಷ್ಠ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕಾಗುತ್ತದೆ.
ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಮಂಡಳಿ ಅಥವಾ ವಿದ್ಯಾಸಂಸ್ಥೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು
ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ನಿಗದಿತ ವಿದ್ಯಾರ್ಹತೆಯನ್ನು ಪಡೆದು ಅಂಕಪಟ್ಟಿಯನ್ನು ಹೊಂದುವುದು ಕಡ್ಡಾಯವಾಗಿದೆ
ದ್ವಿತೀಯ ಪಿಯುಸಿಗೆ ತತ್ಸಮಾನ ವಿದ್ಯಾರ್ಹತೆಗಳು
- ಸಿ ಬಿ ಎಸ್ ಇ ಮಂಡಳಿಯ 12ನೇ ತರಗತಿ ಪರೀಕ್ಷೆ
- ಐ ಸಿ ಎಸ್ ಇ ಮಂಡಳಿಯ 12ನೇ ತರಗತಿ ಪರೀಕ್ಷೆ
- ಇತರೆ ರಾಜ್ಯಗಳಲ್ಲಿ ಮಾನ್ಯತೆ ಪಡೆದಿರುವ ಶಿಕ್ಷಣ ಮಂಡಳಿಗಳ 12ನೇ ತರಗತಿ ಪರೀಕ್ಷೆ
- ಮೂರು ವರ್ಷಗಳ ಡಿಪ್ಲೋಮಾ ಕೋರ್ಸ್
- ಎರಡು ವರ್ಷಗಳ ಐಟಿಐ ಕೋರ್ಸ್ ಜೊತೆಗೆ ಅಗತ್ಯವಿರುವ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣತೆಯನ್ನು ಹೊಂದಿರಬೇಕು
ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿರುವಂತೆ ನಿಯಮಗಳಿಗೆ ಹೊಂದಿಕೆಯಾಗುತ್ತದೆಯೇ ಎಂಬುದನ್ನು ಅರ್ಜಿ ಸಲ್ಲಿಸುವ ಮೊದಲು ಪರಿಶೀಲಿಸಿಕೊಳ್ಳಿ.
ಅಭ್ಯರ್ಥಿಗಳ ಫಲಿತಾಂಶವು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದೊಳಗೆ ಪ್ರಕಟವಾಗಿರಬೇಕು. ಪರೀಕ್ಷೆ ಬರೆದಿದ್ದು ಫಲಿತಾಂಶ ಪ್ರಕಟವಾಗದೇ ಇರುವ ಅಭ್ಯರ್ಥಿಗಳು ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ. ಆದ್ದರಿಂದ ಅರ್ಹತೆಗೆ ಸಂಬಂಧಿಸಿದ ಎಲ್ಲ ದಾಖಲೆಗಳು ಸರಿಯಾಗಿವೆ ಎಂಬುದನ್ನು ಖಚಿತಪಡಿಸಿಕೊಂಡ ನಂತರ ಅರ್ಜಿ ಸಲ್ಲಿಸಿ
ವಯೋಮಿತಿ
KSRP Recruitment ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷಗಳು ಪೂರ್ಣಗೊಂಡಿರಬೇಕು
ಅಭ್ಯರ್ಥಿಗಳ ವಯಸ್ಸನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕದ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಕರ್ನಾಟಕ ಸರ್ಕಾರದ ವಿಶೇಷ ವಯೋಮಿತಿ ಸಡಿಲಿಕೆ ಆದೇಶದಂತೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ ಐದು ವರ್ಷಗಳ ವಿಶೇಷ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.
ಪರಿಷ್ಕೃತಗೊಂಡಿರುವ ಗರಿಷ್ಠ ವಯೋಮಿತಿ ವಿವರ
- ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ: ಗರಿಷ್ಠ 33 ವರ್ಷಗಳು
- ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ: ಗರಿಷ್ಠ 35 ವರ್ಷಗಳು
- ಕರ್ನಾಟಕದ ಅರಣ್ಯ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬುಡುಕಟ್ಟು ಜನಾಂಗದ ಅಭ್ಯರ್ಥಿಗಳಿಗೆ: ಗರಿಷ್ಠ 38 ವರ್ಷಗಳು
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಸೇವೆ ಸಲ್ಲಿಸಿರುವ ಅವಧಿಯ ಜೊತೆಗೆ ಹೆಚ್ಚುವರಿಯಾಗಿ ಮೂರು ವರ್ಷಗಳ ವಯೋಮಿತಿ ಸಡಿಲಿಕೆ
ವಯಸ್ಸಿನ ಲೆಕ್ಕಾಚಾರವು ಅಭ್ಯರ್ಥಿಯ ಅಧಿಕೃತ ಜನ್ಮ ದಿನಾಂಕ ದಾಖಲೆಗಳನ್ನು ನೋಡಿ ಪರಿಗಣಿಸಲಾಗುತ್ತದೆ. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಜನ್ಮ ದಿನಾಂಕವನ್ನು ತಪ್ಪಾಗಿ ನಮೂದಿಸಬಾರದು. ಅರ್ಜಿಯಲ್ಲಿ ನೀಡಿದ ಮಾಹಿತಿ ಮತ್ತು ಅಧಿಕೃತ ದಾಖಲೆಗಳಲ್ಲಿರುವ ಮಾಹಿತಿ ನಡುವೆ ಯಾವುದಾದರೂ ವ್ಯತ್ಯಾಸಗಳು ಕಂಡುಬಂದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕಾರಕ್ಕೆ ಒಳಪಡಿಸಬಹುದು.
ಆಕರ್ಷಕ ವೇತನ ಶ್ರೇಣಿ
KSRP Recruitment ಮೂಲಕ ಕರ್ನಾಟಕ ಪೊಲೀಸ್ ಇಲಾಖೆಯ ಮೀಸಲು ಪೊಲೀಸ್ ಪಡೆಯಲ್ಲಿ ಕಾನ್ಸ್ಟೇಬಲ್ ಆಗಿ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಉತ್ತಮ ವೇತನ ಶ್ರೇಣಿ ದೊರೆಯುತ್ತದೆ
ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 37,500/- ರೂಗಳಿಂದ 76,100/- ರೂಗಳ ವರೆಗೆ ಆಕರ್ಷಕ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ. ಮೂಲ ವೇತನದ ಜೊತೆಗೆ ಸರ್ಕಾರದ ನಿಯಮಗಳ ಪ್ರಕಾರ ವಿವಿಧ ಭತ್ಯೆಗಳು ಹಾಗೂ ಇತರ ಸೇವಾ ಸೌಲಭ್ಯಗಳು ಸಹ ದೊರೆಯುತ್ತವೆ
ಇದೊಂದು ಮೀಸಲು ಪೊಲೀಸ್ ಪಡೆ ಆಗಿರುವುದರಿಂದ ಕರ್ತವ್ಯದ ಸ್ವರೂಪ ಮತ್ತು ಸೇವಾ ನಿಯಮಗಳ ಆಧಾರದ ಮೇಲೆ ಕೆಲವು ಭತ್ಯೆಗಳಲ್ಲಿ ವ್ಯತ್ಯಾಸವನ್ನು ಕಾಣಬಹುದು ಅಲ್ಲದೆ ಸರಕಾರಿ ನೌಕರರಿಗೆ ಅನ್ವಯವಾಗುವ ರಾಷ್ಟ್ರೀಯ ಪಿಂಚಣಿ ಯೋಜನೆ ಸೌಲಭ್ಯವು ಸಹ ದೊರೆಯುತ್ತದೆ ಇದರ ಜೊತೆಯಲ್ಲಿ ಈ ಕೆಳಕಂಡ ಹೆಚ್ಚವರಿ ಭತ್ಯೆಗಳು ದೊರೆಯುತ್ತವೆ.
- ದಿನ ಭತ್ಯೆ
- ಮನೆ ಬಾಡಿಗೆ ಭತ್ಯೆ
- ವೈದ್ಯಕೀಯ ಭತ್ಯೆ
- ಪ್ರಯಾಣದ ಭತ್ಯೆ
- ಸಮವಸ್ತ್ರ ಭತ್ಯೆ
- ಪಿಂಚಣಿ ಸೌಲಭ್ಯಗಳು
- ರಜೆ ಸೌಲಭ್ಯಗಳು
ಪೊಲೀಸ್ ಇಲಾಖೆಯ ಉದ್ಯೋಗವು ಕೇವಲ ವೇತನದ ದೃಷ್ಟಿಯಿಂದ ಮಾತ್ರವಲ್ಲದೆ ಉದ್ಯೋಗ ಭದ್ರತೆ ಸಾಮಾಜಿಕ ಗೌರವ ಮತ್ತು ವೃತ್ತಿ ಜೀವನದಲ್ಲಿ ಬೆಳವಣಿಗೆಯ ಅವಕಾಶಗಳನ್ನು ಹೊಂದಬಹುದು
ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ ಏಕೆ ಮುಖ್ಯ? ಅಭ್ಯರ್ಥಿಗಳಿಗೆ ಲಾಭಗಳು
- ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ನೇಮಕಾತಿಯು ಯುವಜನರಿಗೆ ಸರ್ಕಾರಿ ಉದ್ಯೋಗ ಪಡೆಯಲು ಉತ್ತಮ ಅವಕಾಶವನ್ನು ಒದಗಿಸುತ್ತದೆ.
- ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಮೂಲಕ ಸಮಾಜದ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಅವಕಾಶ ಸಿಗುತ್ತದೆ.
- ಸರ್ಕಾರಿ ಉದ್ಯೋಗ ಆಗಿರುವುದರಿಂದ ಉದ್ಯೋಗ ಭದ್ರತೆ ಮತ್ತು ಸ್ಥಿರವಾದ ವೃತ್ತಿಜೀವನ ದೊರೆಯುತ್ತದೆ.
- ಅಭ್ಯರ್ಥಿಗಳಿಗೆ ವೇತನದ ಜೊತೆಗೆ ವಿವಿಧ ರೀತಿಯ ಸರ್ಕಾರಿ ಭತ್ಯೆಗಳು ಮತ್ತು ಸೇವಾ ಸೌಲಭ್ಯಗಳು ಲಭ್ಯವಾಗುತ್ತವೆ.
- ಅರ್ಹ ಅಭ್ಯರ್ಥಿಗಳಿಗೆ ಕಾರ್ಯ ವೈಖರಿ ಮತ್ತು ಸೇವಾ ಅವಧಿಯ ಆಧಾರದಲ್ಲಿ ಬಡ್ತಿ ಪಡೆಯುವ ಮೂಲಕ ವೃತ್ತಿಜೀವನದಲ್ಲಿ ಉನ್ನತ ಹುದ್ದೆಗಳಿಗೆ ಏರಲು ಅವಕಾಶವಿದೆ.
- ಪೊಲೀಸ್ ಸೇವೆಯು ಶಿಸ್ತು, ಧೈರ್ಯ, ನಾಯಕತ್ವ ಗುಣ ಮತ್ತು ಜವಾಬ್ದಾರಿಯುತ ಗುಣಗಳನ್ನು ಬೆಳೆಸುತ್ತದೆ.
- ಕರ್ನಾಟಕದ ಯುವಕರಿಗೆ ತಮ್ಮ ಸ್ವಂತ ರಾಜ್ಯದಲ್ಲಿಯೇ ಸೇವೆಯನ್ನು ಸಲ್ಲಿಸುವ ಅವಕಾಶ ದೊರೆಯುತ್ತದೆ.
- ಉತ್ತಮ ವೇತನ ಶ್ರೇಣಿ ಮತ್ತು ನಿವೃತ್ತಿ ನಂತರದ ಸರ್ಕಾರಿ ಸೌಲಭ್ಯಗಳು ಕುಟುಂಬದ ಆರ್ಥಿಕ ಸ್ಥಿರತೆಗೆ ಸಹಕಾರಿಯಾಗುತ್ತವೆ.
- ದೈಹಿಕ ಸಾಮರ್ಥ್ಯ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುವ ಮೂಲಕ ಅಭ್ಯರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ.
- ಪೊಲೀಸ್ ಇಲಾಖೆಯಲ್ಲಿ ಉದ್ಯೋಗ ಪಡೆಯುವುದು ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆಯನ್ನು ಹೆಚ್ಚಿಸುವ ಪ್ರಮುಖ ವೃತ್ತಿಯಾಗಿದೆ.
ಅರ್ಜಿ ಶುಲ್ಕದ ವಿವರ
ಈ KSRP Recruitment ಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಪ್ರಾಧಿಕಾರ ನಿಗದಿಪಡಿಸಿರುವ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ ಪಾವತಿಸಬೇಕಾದ ಅರ್ಜಿ ಶುಲ್ಕದ ವಿವರ ಈ ಕೆಳಕಂಡಂತಿದೆ
ಸಾಮಾನ್ಯ ಅರ್ಹತೆ ಮತ್ತು ಇತರೆ ಹಿಂದುಳಿದ ವರ್ಗಗಳ 2ಎ 2ಬಿ 3ಎ 3ಬಿ ಅಭ್ಯರ್ಥಿಗಳು: 750/- ರೂಗಳು
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳು: 500/- ರೂಗಳು
ಹೆಚ್ಚುವರಿ ವೃಂದದ ಹುದ್ದೆಗಳಿಗೆ ಅರ್ಜಿ ಶುಲ್ಕ
ಅಭ್ಯರ್ಥಿಗಳು ಪರೀಕ್ಷಾ ಪ್ರಾಧಿಕಾರವು ನಡೆಸುವ ಒಂದೇ ಪಠ್ಯಕ್ರಮದ ಸಂಬಂಧಿಸಿದ ಹೆಚ್ಚುವರಿ ವೃಂದದ ಹುದ್ದೆಗಳನ್ನು ಆಯ್ಕೆ ಮಾಡಿಕೊಂಡರೆ ಪ್ರತಿ ಹೆಚ್ಚುವರಿ ಹುದ್ದೆಗೆ 100/- ರೂಗಳ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ
ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಮಾತ್ರ ಪಾವತಿ ಮಾಡಲು ಅವಕಾಶವನ್ನು ನೀಡಿದ್ದು ಪಾವತಿ ರಶೀದಿಯನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಬೇಕಾಗಿರುತ್ತದೆ
ಪಾವತಿ ವಿಧಾನಗಳು:
- ಡೆಬಿಟ್ ಕಾರ್ಡ್
- ಕ್ರೆಡಿಟ್ ಕಾರ್ಡ್
- ನೆಟ್ ಬ್ಯಾಂಕಿಂಗ್
- ಯು ಪಿ ಐ (ಲಭ್ಯವಿದ್ದಲ್ಲಿ)
ಆಯ್ಕೆ ವಿಧಾನ
KSRP Recruitment ನಲ್ಲಿ ಅಭ್ಯರ್ಥಿಗಳ ಆಯ್ಕೆಯನ್ನು ಹಲವು ಹಂತಗಳಲ್ಲಿ ನಡೆಸಲಾಗುತ್ತದೆ ಅಭ್ಯರ್ಥಿಗಳು ಕೇವಲ ಲಿಖಿತ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸುವುದಲ್ಲದೇ ದೈಹಿಕ ಪರೀಕ್ಷೆಯಲ್ಲೂ ಸಹ ಉತ್ತಮ ಅರ್ಹತೆಯನ್ನು ಪಡೆಯಬೇಕು
KSRP Recruitment Selection Stages
- ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ
- ದೈಹಿಕ ಗುಣಮಟ್ಟ ಪರೀಕ್ಷೆ (PST)
- ದೈಹಿಕ ಸಹಿಷ್ಣುತೆ ಪರೀಕ್ಷೆ (PET)
- ವೈದ್ಯಕೀಯ ಪರೀಕ್ಷೆ
- ಅಂತಿಮ ಮೆರಿಟ್ ಪಟ್ಟಿ
ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ
ಈ KSRP Recruitment ನಲ್ಲಿ ಮೊದಲ ಹಂತದಲ್ಲಿ 100 ಅಂಕಗಳ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯನ್ನು ಆಫ್ಲೈನ್ ವಿಧಾನದಲ್ಲಿ ಓಎಂಆರ್ ಮಾದರಿಯಲ್ಲಿ ನಡೆಸಲಾಗುತ್ತದೆ
ಪ್ರತಿ ಸರಿ ಉತ್ತರಕ್ಕೆ ಒಂದು ಅಂಕ, ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ ಆದ್ದರಿಂದ ಅಭ್ಯರ್ಥಿಗಳು ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಆಯ್ಕೆ ಮಾಡಿಕೊಳ್ಳಲಬೇಕು ಗೊತ್ತಿಲ್ಲದ ಪ್ರಶ್ನೆಗಳಿಗೆ ಅಂದಾಜಿನ ಉತ್ತರವನ್ನು ನೀಡುವಾಗ ನೆಗೆಟಿವ್ ಮಾರ್ಕಿಂಗ್ ಇರುವುದನ್ನು ಗಮನಿಸಿ
ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಮುಂದಿನ ಹಂತಗಳಿಗೆ ಆಯ್ಕೆ ಮಾಡಲಾಗುತ್ತದೆ ಮೆರಿಟ್ ಪಟ್ಟಿ ಆಧಾರದ ಮೇಲೆ ದೈಹಿಕ ಗುಣಮಟ್ಟ ಪರೀಕ್ಷಾ ಹಂತಕ್ಕೆ 1:5 ಅನುಪಾತದಲ್ಲಿ ಅಭ್ಯರ್ಥಿಗಳನ್ನು ದೈಹಿಕ ಗುಣಮಟ್ಟ ಪರೀಕ್ಷೆ ಮತ್ತು ದೈಹಿಕ ಸಹಿತ ಪರೀಕ್ಷೆಗೆ ಕರೆಯಲಾಗುತ್ತದೆ.
ದೈಹಿಕ ಗುಣಮಟ್ಟ ಪರೀಕ್ಷೆ
ದೈಹಿಕ ಗುಣಮಟ್ಟ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಎತ್ತರ ಮತ್ತು ಇತರೆ ನಿಗದಿತ ದೈಹಿಕ ಮಾನದಂಡಗಳನ್ನು ಪರಿಶೀಲಿಸಲಾಗುತ್ತದೆ
- ಪುರುಷ ಅಭ್ಯರ್ಥಿಗಳಿಗೆ: ಕನಿಷ್ಠ 168 ಸೆಂಟಿಮೀಟರ್ ಎತ್ತರ
- ಮಹಿಳಾ ಅಭ್ಯರ್ಥಿಗಳಿಗೆ: ಕನಿಷ್ಠ 158 ಸೆಂಟಿಮೀಟರ್ ಎತ್ತರ
- ಮಹಿಳಾ ಅಭ್ಯರ್ಥಿಗಳಿಗೆ ಕನಿಷ್ಠ 45 ಕೆಜಿ ತೂಕವನ್ನು ಹೊಂದಿರುವುದು ಕಡ್ಡಾಯವಾಗಿರುತ್ತದೆ
ಕೆಲವು ವಿಶೇಷ ವರ್ಗಗಳಿಗೆ ಸರ್ಕಾರದ ನಿಯಮಗಳ ಪ್ರಕಾರ ದೈಹಿಕ ಮಾನದಂಡಗಳಲ್ಲಿ ಸಡಿಲಿಕೆ ಮತ್ತು ವಿನಾಯಿತಿ ಇರಬಹುದು. ಅಭ್ಯರ್ಥಿಗಳು ತಮ್ಮ ವರ್ಗಕ್ಕೆ ಅನ್ವಯವಾಗುವಂತಹ ನಿಖರವಾದ ನಿಯಮಗಳನ್ನು ಅಧಿಕೃತದ ಸೂಚನೆಯಲ್ಲಿ ಓದಿ ಪರಿಶೀಲಿಸಿಕೊಳ್ಳಬೇಕು
ದೈಹಿಕ ಸಹಿಷ್ಣುತೆ ಪರೀಕ್ಷೆ
ದೈಹಿಕ ಗುಣಮಟ್ಟ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ದೈಹಿಕ ಸಹಿಷ್ಣುತೆ ಪರೀಕ್ಷೆಗೆ ಕರೆಯಲಾಗುತ್ತದೆ. ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವವರಿಗೆ ಉತ್ತಮ ದೈಹಿಕ ಸಾಮರ್ಥ್ಯ ಮತ್ತು ಸಹಿಷ್ಣುತೆ ಅಗತ್ಯ ಇರುವುದರಿಂದ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ ಅಭ್ಯರ್ಥಿಗಳು ಓಟ ಮತ್ತು ಇತರೆ ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸಬೇಕಾಗುತ್ತದೆ
ಈ ಅಭ್ಯರ್ಥಿಗಳು ಪರೀಕ್ಷೆಗೆ ಮುಂಚಿತವಾಗಿಯೇ ದೈಹಿಕ ಸಹಿಷ್ಣುತೆ ಪರೀಕ್ಷೆಗೆ ತಯಾರಿಯನ್ನು ಆರಂಭಿಸಬೇಕು ಪ್ರತಿದಿನವೂ ಓಟ, ಸ್ಟ್ರೆಚಿಂಗ್ ಹಾಗೂ ದೈಹಿಕ ವ್ಯಾಯಾಮ ಮಾಡುವುದರಿಂದ ದೇಹದ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು
ದೈಹಿಕ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ನಿಗಧಿತ ಸಮಯದಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬೇಕು ಆದ್ದರಿಂದ ಕೊನೆಯ ಕ್ಷಣದಲ್ಲಿ ತರಬೇತಿ ಆರಂಭಿಸುವುದು ಸೂಕ್ತವಲ್ಲ
ವೈದ್ಯಕೀಯ ಪರೀಕ್ಷೆ
ದೈಹಿಕ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ವೈದ್ಯಕೀಯ ಮಂಡಳಿಯು ಅಭ್ಯರ್ಥಿಗಳ ಸಾಮಾನ್ಯ ಆರೋಗ್ಯ, ದೃಷ್ಟಿ ಶಕ್ತಿ, ಶ್ರವಣ ಸಾಮರ್ಥ್ಯ ಹಾಗೂ ಇತರೆ ಆರೋಗ್ಯದ ಮಾನದಂಡಗಳನ್ನು ಪರಿಶೀಲಿಸಲಾಗುತ್ತದೆ
ಪೊಲೀಸ್ ಇಲಾಖೆ ಕರ್ತವ್ಯಗಳನ್ನು ನಿರ್ವಹಿಸಲು ಅಭ್ಯರ್ಥಿಯು ದೈಹಿಕವಾಗಿ ಸದೃಢರಾಗಿದ್ದು ವೈದ್ಯಕೀಯವಾಗಿ ಸಮರ್ಥರಾಗಿರಬೇಕು ವೈದ್ಯಕೀಯ ಪರೀಕ್ಷೆಯಲ್ಲಿ ನಿಗದಿತ ಮಾನದಂಡಗಳನ್ನು ಪೂರೈಸದ ಅಭ್ಯರ್ಥಿಗಳನ್ನು ಅಂತಿಮ ನೇಮಕಾತಿಗೆ ಪರಿಗಣಿಸಲಾಗುವುದಿಲ್ಲ
ಅಂತಿಮ ಮೆರಿಟ್ ಪಟ್ಟಿ
KSRP Recruitment ನ ಎಲ್ಲಾ ಅಗತ್ಯ ಹಂತಗಳಲ್ಲಿ ಅರ್ಹತೆಯನ್ನು ಪಡೆದ ಅಭ್ಯರ್ಥಿಗಳನ್ನು ಅಂತಿಮ ಆಯ್ಕೆ ಪಟ್ಟಿಗೆ ಪರಿಗಣಿಸಲಾಗುತ್ತದೆ. ಲಿಖಿತ ಪರೀಕ್ಷೆ ಅಂಕಗಳು, ದೈಹಿಕ ಪರೀಕ್ಷೆಯ ಅರ್ಹತೆ ಮತ್ತು ವೈದ್ಯಕೀಯ ಪರೀಕ್ಷೆ ಫಲಿತಾಂಶಗಳನ್ನು ಪರಿಗಣಿಸಿ ಅಂತಿಮ ಆಯ್ಕೆಯ ಮೆರಿಟ್ ಪಟ್ಟಿಯನ್ನು ತಯಾರಿಸಲಾಗುತ್ತದೆ
ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆಗೆ 1:2 ಅನುಪಾತದಲ್ಲಿ ಶಾರ್ಟ್ ಲಿಸ್ಟ್ ಮಾಡುವ ಮೂಲಕ ಪ್ರಕ್ರಿಯೆಯು ನಡೆಯುತ್ತದೆ ಅಂತಿಮ ಮೆರಿಟ್ ಪ್ರಕಟವಾದ ನಂತರ ಅಭ್ಯರ್ಥಿಗಳಿಗೆ ದಾಖಲೆ ಪರಿಶೀಲನೆ ನಡೆಸಲಾಗುತ್ತದೆ
ದಾಖಲೆ ಪರಿಶೀಲನೆ
ಅರ್ಹತೆ ಪಡೆದ ಅಭ್ಯರ್ಥಿಗಳನ್ನು ದಾಖಲೆ ಪರಿಶೀಲನೆಗೆ ಕರೆಯಲಾಗುತ್ತದೆ ಇಲ್ಲಿ ದಾಖಲೆಗಳ ನೈಜತೆ ಮತ್ತು ಗುಣಮಟ್ಟವನ್ನು ಪರಿಶೀಲಿಸಿ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತದೆ.
ಈ ಹಂತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಪೊಲೀಸ್ ಇಲಾಖೆಯ ಮೀಸಲು ಪೊಲೀಸ್ ಪಡೆಗಳಲ್ಲಿ ನಿಯೋಜಿಸಲಾಗುತ್ತದೆ.
KSRP Recruitment ನ ಲಿಖಿತ ಪರೀಕ್ಷೆಗೆ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು.
KSRP Recruitment ನ ಲಿಖಿತ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಅಭ್ಯರ್ಥಿಗಳು ಯೋಜಿತ ರೀತಿಯಲ್ಲಿ ಸಿದ್ಧತೆಯನ್ನು ಮಾಡಿಕೊಳ್ಳಬೇಕು. ಮತ್ತು ಪರೀಕ್ಷಾ ತಯಾರಿಯನ್ನು ಆರಂಭಿಸಬೇಕು
ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ಪರೀಕ್ಷಾ ಸಿಲಬಸ್ ಮತ್ತು ಪರೀಕ್ಷಾ ಮಾದರಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು
ಸಂಭಾವ್ಯ ಲಿಖಿತ ಪರೀಕ್ಷೆಯ ಸಿಲಬಸ್
1. ಸಾಮಾನ್ಯ ಜ್ಞಾನ
- ಭಾರತದ ಇತಿಹಾಸ
- ಕರ್ನಾಟಕದ ಇತಿಹಾಸ
- ಭಾರತೀಯ ಸ್ವಾತಂತ್ರ್ಯ ಚಳವಳಿ
- ಕರ್ನಾಟಕದ ಏಕೀಕರಣ ಚಳವಳಿ
- ಭಾರತೀಯ ಸಂವಿಧಾನ
- ಭಾರತದ ರಾಜಕೀಯ ವ್ಯವಸ್ಥೆ
- ಕೇಂದ್ರ ಮತ್ತು ರಾಜ್ಯ ಸರ್ಕಾರ
- ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳು
- ಪಂಚಾಯತ್ ರಾಜ್ ವ್ಯವಸ್ಥೆ
- ಭಾರತದ ಆರ್ಥಿಕತೆ
- ಕರ್ನಾಟಕದ ಆರ್ಥಿಕತೆ
- ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಚಲಿತ ಘಟನೆಗಳು
- ಪ್ರಮುಖ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ದಿನಗಳು
- ಪ್ರಶಸ್ತಿಗಳು ಮತ್ತು ಗೌರವಗಳು
- ಕ್ರೀಡೆ
- ಪ್ರಮುಖ ವ್ಯಕ್ತಿಗಳು
- ಪುಸ್ತಕಗಳು ಮತ್ತು ಲೇಖಕರು
- ವಿಜ್ಞಾನ ಮತ್ತು ತಂತ್ರಜ್ಞಾನ
- ಪ್ರಮುಖ ಸರ್ಕಾರಿ ಯೋಜನೆಗಳು
2. ಕರ್ನಾಟಕದ ಇತಿಹಾಸ ಮತ್ತು ಭೂಗೋಳ
ಕರ್ನಾಟಕ ಇತಿಹಾಸ:
- ಪ್ರಾಚೀನ ಕರ್ನಾಟಕದ ಇತಿಹಾಸ
- ಕದಂಬರು
- ಚಾಲುಕ್ಯರು
- ರಾಷ್ಟ್ರಕೂಟರು
- ಹೊಯ್ಸಳರು
- ವಿಜಯನಗರ ಸಾಮ್ರಾಜ್ಯ
- ಬಹಮನಿ ಸಾಮ್ರಾಜ್ಯ
- ಮೈಸೂರು ಸಂಸ್ಥಾನ
- ಹೈದರಲಿ ಮತ್ತು ಟಿಪ್ಪು ಸುಲ್ತಾನ್
- ಬ್ರಿಟಿಷರ ಕಾಲದ ಕರ್ನಾಟಕ
- ಕರ್ನಾಟಕ ಏಕೀಕರಣ
- ಪ್ರಮುಖ ಐತಿಹಾಸಿಕ ಸ್ಥಳಗಳು
ಕರ್ನಾಟಕ ಭೂಗೋಳ:
- ಕರ್ನಾಟಕದ ಭೌಗೋಳಿಕ ಸ್ಥಾನ
- ಜಿಲ್ಲೆಗಳು ಮತ್ತು ಗಡಿಗಳು
- ಪ್ರಮುಖ ನದಿಗಳು
- ಕೃಷ್ಣಾ, ಕಾವೇರಿ, ತುಂಗಭದ್ರಾ ನದಿ ವ್ಯವಸ್ಥೆ
- ಪಶ್ಚಿಮ ಘಟ್ಟಗಳು
- ಕರ್ನಾಟಕದ ಮಣ್ಣು
- ಹವಾಮಾನ
- ಕೃಷಿ
- ಖನಿಜ ಸಂಪತ್ತು
- ಅರಣ್ಯ ಸಂಪತ್ತು
- ರಾಷ್ಟ್ರೀಯ ಉದ್ಯಾನಗಳು ಮತ್ತು ವನ್ಯಜೀವಿ ಅಭಯಾರಣ್ಯಗಳು
- ಪ್ರಮುಖ ಅಣೆಕಟ್ಟುಗಳು
- ಕೈಗಾರಿಕೆಗಳು
3. ಭಾರತೀಯ ಸಂವಿಧಾನ ಮತ್ತು ರಾಜಕೀಯ
- ಭಾರತೀಯ ಸಂವಿಧಾನದ ರಚನೆ
- ಸಂವಿಧಾನದ ಪ್ರಸ್ತಾವನೆ
- ಮೂಲಭೂತ ಹಕ್ಕುಗಳು
- ಮೂಲಭೂತ ಕರ್ತವ್ಯಗಳು
- ರಾಜ್ಯದ ನಿರ್ದೇಶಕ ತತ್ವಗಳು
- ರಾಷ್ಟ್ರಪತಿ
- ಉಪರಾಷ್ಟ್ರಪತಿ
- ಪ್ರಧಾನಮಂತ್ರಿ
- ಕೇಂದ್ರ ಸಚಿವ ಸಂಪುಟ
- ಸಂಸತ್ತು
- ಲೋಕಸಭೆ ಮತ್ತು ರಾಜ್ಯಸಭೆ
- ಸುಪ್ರೀಂ ಕೋರ್ಟ್
- ರಾಜ್ಯಪಾಲ
- ಮುಖ್ಯಮಂತ್ರಿ
- ರಾಜ್ಯ ವಿಧಾನಸಭೆ
- ಹೈಕೋರ್ಟ್
- ಚುನಾವಣಾ ಆಯೋಗ
- ಕೇಂದ್ರ ಮತ್ತು ರಾಜ್ಯಗಳ ಸಂಬಂಧ
- ಪಂಚಾಯತ್ ರಾಜ್
- 73ನೇ ಮತ್ತು 74ನೇ ಸಂವಿಧಾನ ತಿದ್ದುಪಡಿಗಳು
4. ಸಾಮಾನ್ಯ ವಿಜ್ಞಾನ
ಭೌತಶಾಸ್ತ್ರ:
- ಚಲನೆ
- ಬಲ
- ಕೆಲಸ ಮತ್ತು ಶಕ್ತಿ
- ಬೆಳಕು
- ಧ್ವನಿ
- ವಿದ್ಯುತ್
- ಶಾಖ
- ಒತ್ತಡ
ರಸಾಯನಶಾಸ್ತ್ರ:
- ಮೂಲಧಾತುಗಳು
- ಸಂಯುಕ್ತಗಳು
- ಆಮ್ಲ, ಕ್ಷಾರ ಮತ್ತು ಲವಣ
- ಲೋಹಗಳು ಮತ್ತು ಅಲೋಹಗಳು
- ರಾಸಾಯನಿಕ ಕ್ರಿಯೆಗಳು
- ದೈನಂದಿನ ಜೀವನದ ರಸಾಯನಶಾಸ್ತ್ರ
ಜೀವಶಾಸ್ತ್ರ:
- ಮಾನವ ದೇಹ
- ರಕ್ತ ಮತ್ತು ರಕ್ತ ಪರಿಚಲನೆ
- ಉಸಿರಾಟ ವ್ಯವಸ್ಥೆ
- ಜೀರ್ಣಕ್ರಿಯೆ
- ಸಸ್ಯಗಳು
- ಪ್ರಾಣಿಗಳು
- ರೋಗಗಳು ಮತ್ತು ಆರೋಗ್ಯ
- ಪೌಷ್ಟಿಕಾಂಶ
- ಪರಿಸರ ಮತ್ತು ಪರಿಸರ ಸಂರಕ್ಷಣೆ
5. ಪ್ರಚಲಿತ ಘಟನೆಗಳು
- ಕರ್ನಾಟಕದ ಇತ್ತೀಚಿನ ಸುದ್ದಿಗಳು
- ಭಾರತದ ಪ್ರಮುಖ ಸುದ್ದಿಗಳು
- ಸರ್ಕಾರಿ ಯೋಜನೆಗಳು
- ಬಜೆಟ್
- ನೇಮಕಾತಿಗಳು
- ಪ್ರಶಸ್ತಿಗಳು
- ಕ್ರೀಡಾ ಸ್ಪರ್ಧೆಗಳು
- ವಿಜ್ಞಾನ ಮತ್ತು ತಂತ್ರಜ್ಞಾನ
- ರಕ್ಷಣಾ ಕ್ಷೇತ್ರ
- ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಮ್ಮೇಳನಗಳು
- ಪ್ರಮುಖ ವ್ಯಕ್ತಿಗಳ ನಿಧನ
- ಪ್ರಮುಖ ವರದಿಗಳು ಮತ್ತು ಸೂಚ್ಯಂಕಗಳು
6. ಮಾನಸಿಕ ಸಾಮರ್ಥ್ಯ ಮತ್ತು ತಾರ್ಕಿಕ ಚಿಂತನೆ
- ಸಂಖ್ಯಾ ಸರಣಿ
- ಅಕ್ಷರ ಸರಣಿ
- ಕೋಡಿಂಗ್ ಮತ್ತು ಡಿಕೋಡಿಂಗ್
- ಸಾದೃಶ್ಯ
- ವರ್ಗೀಕರಣ
- ವಿಭಿನ್ನ ಅಂಶವನ್ನು ಗುರುತಿಸುವುದು
- ರಕ್ತ ಸಂಬಂಧ
- ದಿಕ್ಕು ಮತ್ತು ದೂರ
- ಕ್ರಮ ಮತ್ತು ಸ್ಥಾನ
- ಕ್ಯಾಲೆಂಡರ್
- ಗಡಿಯಾರ
- ವೆನ್ ರೇಖಾಚಿತ್ರ
- ಸಿಲೋಜಿಸಂ
- ಹೇಳಿಕೆ ಮತ್ತು ನಿರ್ಣಯ
- ಸರಳ ತಾರ್ಕಿಕ ಪ್ರಶ್ನೆಗಳು
7. ನೈತಿಕತೆ ಮತ್ತು ಸಾಮಾನ್ಯ ಅರಿವು
- ಸಾರ್ವಜನಿಕ ಸೇವೆಯ ಮಹತ್ವ
- ಪ್ರಾಮಾಣಿಕತೆ
- ಕರ್ತವ್ಯನಿಷ್ಠೆ
- ಕಾನೂನು ಪಾಲನೆ
- ನಾಗರಿಕರ ಹಕ್ಕುಗಳು
- ಸಾರ್ವಜನಿಕ ಸುರಕ್ಷತೆ
- ಪೊಲೀಸ್ ಇಲಾಖೆಯ ಮೂಲಭೂತ ಜವಾಬ್ದಾರಿಗಳು
- ತುರ್ತು ಪರಿಸ್ಥಿತಿಯಲ್ಲಿ ಕರ್ತವ್ಯ
- ಶಿಸ್ತು ಮತ್ತು ಜವಾಬ್ದಾರಿ
ಇದರ ಜೊತೆಯಲ್ಲಿ ಅಭ್ಯರ್ಥಿಗಳು ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಬೇಕು ಇದರಿಂದ ಯಾವ ವಿಭಾಗದಲ್ಲಿ ಹೆಚ್ಚು ಪ್ರಶ್ನೆಗಳು ಬರುತ್ತವೆ ಮತ್ತು ಯಾವ ವಿಷಯವನ್ನು ಹೆಚ್ಚಾಗಿ ಓದಬೇಕು ಎಂಬುದನ್ನು ತಿಳಿದುಕೊಳ್ಳಬಹುದು
ಮಾಕ್ ಟೆಸ್ಟ್ ಗಳನ್ನು ಬರೆಯಬೇಕು ಇದರಿಂದ ಸಮಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು ಮತ್ತು ವೇಗವಾಗಿ ಪರಿಹರಿಸುವ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು
ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳು ಕಡಿತವಾಗುವುದರಿಂದ ಎಲ್ಲಾ ಪ್ರಶ್ನೆಗಳಿಗೆ ಅಂದಾಜಿನಿಂದ ಉತ್ತರಿಸುವುದು ಸರಿಯಲ್ಲ. ಅಭ್ಯರ್ಥಿಗಳು ಪ್ರಶ್ನೆಯನ್ನು ಓದಿ ಸಂಪೂರ್ಣವಾಗಿ ಅರ್ಥ ಮಾಡಿಕೊಂಡ ನಂತರವೇ ಸರಿಯಾದ ಉತ್ತರಗಳನ್ನು ಆರಿಸುವುದು ಉತ್ತಮವಾಗಿದೆ.
ಪ್ರತಿದಿನವೂ ಓದಲು ನಿಗದಿತವಾದ ಸಮಯವನ್ನು ಮೀಸಲಿಡಬೇಕು. ಪರೀಕ್ಷೆಯ ಕೊನೆಯ ದಿನಗಳಲ್ಲಿ ಹೊಸ ವಿಷಯಗಳನ್ನು ಓದುವುದಕ್ಕಿಂತ ಈಗಾಗಲೇ ಓದಿರುವ ವಿಷಯಗಳ ರಿವಿಜನ್ ಮಾಡುವುದರಿಂದ ಹೆಚ್ಚು ಪರಿಣಾಮಕಾರಿಯಾಗಿ KSRP Recruitment ನ ಪರೀಕ್ಷೆಯನ್ನು ಎದುರಿಸಬಹುದು
KSP Constable ಹುದ್ದೆಗಳ ವಿವರವಾದ ಸಿಲಬಸ್ ಮತ್ತು ಪರೀಕ್ಷಾ ಸಲಹೆಗಳು-> ಸಿಲಬಸ್ ಮತ್ತು ಪರೀಕ್ಷಾ ಸಲಹೆಗಳು
KSRP, KSISF ಮತ್ತು IRB ಗಳ ನಡುವಿನ ಹೋಲಿಕೆ ಪಟ್ಟಿ
| KSRP (ಕರ್ನಾಟಕ ರಾಜ್ಯ ಮೀಸಲು ಪೊಲೀಸ್) | KSISF (ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ) | IRB (ಭಾರತೀಯ ಮೀಸಲು ಪಡೆ) |
|---|---|---|
| ಕಾನೂನು ಮತ್ತು ಶಾಂತಿ ಕಾಪಾಡುವುದು | ಸರ್ಕಾರಿ ಕಾರ್ಖಾನೆಗಳಿಗೆ ಭದ್ರತೆ | ವಿಶೇಷ ಭದ್ರತಾ ಕಾರ್ಯಗಳು |
| ಕರ್ನಾಟಕದ ಎಲ್ಲ ಜಿಲ್ಲೆಗಳು | ಸರ್ಕಾರಿ ಕೈಗಾರಿಕೆಗಳು, | ರಾಜ್ಯದ ವಿವಿಧ ಭಾಗಗಳು |
| ಚುನಾವಣೆ, ಪ್ರತಿಭಟನೆ, ಜಾತ್ರೆ, ಗಲಭೆ | ಸರ್ಕಾರಿ ಆಸ್ತಿಗಳ ಭದ್ರತೆ | ವಿಶೇಷ ಕಾರ್ಯಾಚರಣೆ |
| ಸಾರ್ವಜನಿಕ ಸಂಪರ್ಕ | ಒಂದೇ ಸ್ಥಳ | ಕ್ಷೇತ್ರ ಆಧಾರಿತ ಕೆಲಸ |
| ಕಾನೂನು ಸುವ್ಯವಸ್ಥೆ | ಸರ್ಕಾರಿ ಆಸ್ತಿಗಳ ಸುರಕ್ಷತೆ | ವಿಶೇಷ ಭದ್ರತಾ ಕಾರ್ಯಾಚರಣೆ |
| ಜನಸೇವೆ | ಭದ್ರತಾ ಕರ್ತವ್ಯ | ಸವಾಲಿನ ಕೆಲಸ |
KSRP Recruitment ನ ದೈಹಿಕ ಪರೀಕ್ಷೆಗೆ ತಯಾರಿ
KSRP Recruitment ನಲ್ಲಿ ದೈಹಿಕ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆ ಸಮಾನವಾಗಿ ಮುಖ್ಯವಾಗಿವೆ. ಅಭ್ಯರ್ಥಿಗಳು ನಿಯಮಿತವಾಗಿ ಪ್ರತಿದಿನ ಓಟದ ಅಭ್ಯಾಸ ಮಾಡಬೇಕು, ಆರಂಭದಲ್ಲಿ ಕಡಿಮೆ ದೂರ ಓಡಿ ನಂತರ ನಿಧಾನವಾಗಿ ವೇಗ ಮತ್ತು ದೂರವನ್ನು ಹೆಚ್ಚಿಸಿಕೊಳ್ಳಬೇಕು, ಮೂಲಭೂತ ವ್ಯಾಯಾಮಗಳು ಮತ್ತು ಸಹಿಷ್ಣುತೆ ಹೆಚ್ಚಿಸುವ ತರಬೇತಿಯನ್ನು ಪಡೆದುಕೊಳ್ಳಬೇಕು.
ಈ ಅವಧಿಯಲ್ಲಿ ಸಮತೋಲನ ಆಹಾರ ಸೇವಿಸುವುದು ಸಾಕಷ್ಟು ನೀರು ಕುಡಿಯುವುದು ಮತ್ತು ಉತ್ತಮ ನಿದ್ರೆ ಮಾಡುವುದು ಸಹ ದೈಹಿಕ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲು ಸಹಾಯಮಾಡುತ್ತದೆ. ದೈಹಿಕ ಪರೀಕ್ಷೆಯ ಕೆಲವೇ ದಿನಗಳ ಮೊದಲು ಅಭ್ಯಾಸ ಆರಂಭಿಸುವ ಬದಲಾಗಿ ನೇಮಕಾತಿ ಪ್ರಕಟವಾದ ನಂತರವೇ ತರಬೇತಿ ಆರಂಭಿಸುವುದು ಉತ್ತಮವಾಗಿದೆ
KSRP Recruitment ಗೆ ಅರ್ಜಿ ಸಲ್ಲಿಸುವ ವಿಧಾನ
ಈ KSRP Recruitmentಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು
ಅರ್ಜಿ ಸಲ್ಲಿಕೆ ಹಂತಗಳು
ಹಂತ-1: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು
ಹಂತ-2: ಅಧಿಕೃತ ವೆಬ್ ಸೈಟ್ ನಲ್ಲಿ ನೇಮಕಾತಿ ವಿಭಾಗಕ್ಕೆ ತೆರಳಿ ಕೆ ಎಸ್ ಆರ್ ಪಿ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ 2026 ಲಿಂಕನ್ನು ಹುಡುಕಬೇಕು
ಹಂತ-3: ಯಶಸ್ವಿಯಾಗಿ ಲಿಂಕನ್ನು ಹುಡುಕಿದ ನಂತರ ಆಯ್ಕೆಯನ್ನು ಆಯ್ದುಕೊಂಡು ಆನ್ ಲೈನ್ ಅರ್ಜಿ ಸಲ್ಲಿಕೆ ಲಿಂಕ್ ಅನ್ನು ತೆರೆಯಬೇಕು
ಹಂತ-4: ಅರ್ಜಿ ಸಲ್ಲಿಕೆ ಲಿಂಕ್ ಅನ್ನು ತೆರೆದ ನಂತರ ಅಗತ್ಯವಿರುವ ನೋಂದಣಿ ಪ್ರಕ್ರಿಯೆಯನ್ನು ಮೊಬೈಲ್ ನಂಬರ್ ಮತ್ತು ಒ ಟಿ ಪಿ ದೃಢೀಕರಣದ ಮೂಲಕ ಪೂರ್ಣಗೊಳಿಸಿ
ಹಂತ-5: ಆನ್ ಲೈನ್ ಅರ್ಜಿಯು ತೆರೆದ ನಂತರ ಅಭ್ಯರ್ಥಿಯ ಹೆಸರು, ಜನ್ಮ ದಿನಾಂಕ, ಮೊಬೈಲ್ ಸಂಖ್ಯೆ ಮುಂತಾದ ಇತರ ವೈಯಕ್ತಿಕ ಮಾಹಿತಿಗಳನ್ನು ನಮೂದಿಸಿ
ಹಂತ-6: ಶೈಕ್ಷಣಿಕ ವಿದ್ಯಾರ್ಹತೆಗೆ ಸಂಬಂಧಿಸಿದ ವಿವರಗಳನ್ನು ಸರಿಯಾಗಿ ನಮೂದಿಸಿ
ಹಂತ-7: ಅರ್ಜಿ ಸಲ್ಲಿಸಲು ಅನ್ವಯವಾಗುವ ಹುದ್ದೆ ಮತ್ತು ವೃಂದವನ್ನು ಆಯ್ಕೆ ಮಾಡಿ
ಹಂತ-8: ಎಲ್ಲ ಮಾಹಿತಿಗಳನ್ನು ಪರಿಶೀಲಿಸಿದ ನಂತರ ಅರ್ಜಿಯನ್ನು ಸಲ್ಲಿಸಿ
ಹಂತ-9: ಅರ್ಜಿಯನ್ನು ಸಬ್ಮಿಟ್ ಮಾಡಿದ ನಂತರ ನೋಂದಣಿ ಸಂಖ್ಯೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬರುತ್ತದೆ ಈ ಸಂಖ್ಯೆಯನ್ನು ಉಪಯೋಗಿಸಿಕೊಂಡು ಮತ್ತೆ ಮುಖಪುಟಕ್ಕೆ ತೆರಳಿ.
ಹಂತ-10: ಮುಖಪುಟದಲ್ಲಿ ಭಾವಚಿತ್ರ ಮತ್ತು ಸಹಿಯನ್ನು ಅಪ್ಲೋಡ್ ಮಾಡಲು ಇರುವ ನಿಗದಿತ ಲಿಂಕನ್ನು ತೆರೆಯಿರಿ
ಹಂತ-11: ಭಾವಚಿತ್ರ ಮತ್ತು ಸಹಿಯನ್ನು ಅಪ್ಲೋಡ್ ಮಾಡಲು ನೋಂದಣಿ ಸಂಖ್ಯೆಯನ್ನು ನಮೂದಿಸಿ ನಿಗದಿತ ಅಳತೆಯ ಪಾಸ್ಪೋರ್ಟ್ ಭಾವಚಿತ್ರ ಮತ್ತು ಸಹಿಯನ್ನು ಜೆಪಿಜಿ ಮಾದರಿಯಲ್ಲಿ ಅಪ್ಲೋಡ್ ಮಾಡಿ
ಭಾವಚಿತ್ರ ಮತ್ತು ಸಹಿ ಅಪ್ಲೋಡ್ ಮಾಡಲು ನಿಯಮಗಳು
ಅಭ್ಯರ್ಥಿಯ ಭಾವಚಿತ್ರ: ಕನಿಷ್ಠ 50 ಕೆ ಬಿ, ಗರಿಷ್ಠ 200 ಕೆ ಬಿ.
ಅಭ್ಯರ್ಥಿಯ ಸಹಿ: ಕನಿಷ್ಠ 50 ಕೆ ಬಿ, ಗರಿಷ್ಠ 70 ಕೆ ಬಿ.
ಹಂತ-12: ಭಾವಚಿತ್ರ ಮತ್ತು ಸಹಿಯನ್ನು ಅಪ್ಲೋಡ್ ಮಾಡಿದ ನಂತರ ಅರ್ಜಿ ಶುಲ್ಕವನ್ನು ಪಾವತಿಸಲು ನಿಗದಿತ ಲಿಂಕನ್ನು ನೀಡಲಾಗಿರುತ್ತದೆ ಈ ಲಿಂಕನ್ನು ಉಪಯೋಗಿಸಿಕೊಂಡು ಅರ್ಜಿ ಶುಲ್ಕವನ್ನು ಪಾವತಿಸಿ
ಹಂತ-13: ಅರ್ಜಿ ಶುಲ್ಕವನ್ನು ಪಾವತಿಸಿದ ನಂತರ ಮುಖಪುಟಕ್ಕೆ ಬಂದು ಅರ್ಜಿಯ ಪ್ರತಿ ಡೌನ್ಲೋಡ್ ಎಂಬ ಆಯ್ಕೆಯನ್ನು ಆಯ್ದುಕೊಂಡು ನಿಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಅರ್ಜಿಯನ್ನು ಪ್ರಿಂಟ್ ತೆಗೆದುಕೊಳ್ಳಬಹುದಾಗಿರುತ್ತದೆ.
KSRP Recruitment ಗೆ ಅರ್ಜಿಯನ್ನು ಸಲ್ಲಿಸುವ ಸಂದರ್ಭದಲ್ಲಿ ಮೊದಲು ಎಲ್ಲಾ ಮಾಹಿತಿಯನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ಹೆಸರು, ಜನ್ಮ ದಿನಾಂಕ, ತಂದೆ ತಾಯಿ ಹೆಸರು, ಮೀಸಲಾತಿ ವರ್ಗ, ವಿದ್ಯಾರ್ಹತೆ ಮತ್ತು ಇತರ ವಿವರಗಳಲ್ಲಿ ತಪ್ಪುಗಳಿದ್ದರೆ ಮುಂದಿನ ಹಂತದಲ್ಲಿ ಸಮಸ್ಯೆಗಳು ಎದುರಾಗಬಹುದು
KSRP Recruitment: ಪ್ರಮುಖ ದಿನಾಂಕಗಳು
Last Updated And Verified (By Author): 18 July 2026
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಮೀಸಲು ಪೊಲೀಸ್ ಪಡೆ ಕಾನ್ಸ್ಟೇಬಲ್ ನೇಮಕಾತಿ 2026 ಕ್ಕೆ ಸಂಬಂಧಿಸಿದ ಪ್ರಮುಖ ದಿನಾಂಕಗಳು ಈ ಕೆಳಕಂಡಂತಿದೆ
| ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭ | 13 ಜುಲೈ 2026 |
| ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 10 ಆಗಸ್ಟ್ 2026 |
| ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ | 11 ಆಗಸ್ಟ್ 2026 |
| ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ದಿನಾಂಕ | 20 ಸೆಪ್ಟೆಂಬರ್ 2026 |
ಅಭ್ಯರ್ಥಿಗಳು ಕೊನೆ ದಿನಾಂಕದವರೆಗೆ ಕಾಯದೇ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಉತ್ತಮವಾಗಿದೆ. ಕೊನೆಯ ದಿನಗಳಲ್ಲಿ ವೆಬ್ನ ಸೈಟ್ ನಲ್ಲಿ ಹೆಚ್ಚಿನ ಟ್ರಾಫಿಕ್ ಅಥವಾ ತಾಂತ್ರಿಕ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುವುದರಿಂದ ಅರ್ಜಿಯನ್ನು ಸಮಯಕ್ಕೆ ಮುಂಚಿತವಾಗಿ ಸಲ್ಲಿಸಿ ಅರ್ಜಿಯನ್ನು ಪ್ರಿಂಟ್ ತೆಗೆದು ಇಟ್ಟುಕೊಳ್ಳಿ.
ಅಭ್ಯರ್ಥಿಗಳಿಗೆ ಪ್ರಮುಖ ಸಲಹೆಗಳು
- ಅರ್ಜಿಯನ್ನು ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿ
- ನಿಮ್ಮ ವಿದ್ಯಾರ್ಹತೆ ಮತ್ತು ವಯೋಮಿತಿಯನ್ನು ಪರಿಶೀಲಿಸಿ
- ಅರ್ಜಿ ಸಲ್ಲಿಸಲು ಅಗತ್ಯವಿರುವ ಪ್ರಮಾಣಪತ್ರಗಳನ್ನು ಮುಂಚಿತವಾಗಿಯೇ ಸಿದ್ಧವಾಗಿಟ್ಟುಕೊಳ್ಳಿ
- ಅರ್ಜಿ ಸಲ್ಲಿಸುವಾಗ ಸರಿಯಾದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು ಸಕ್ರಿಯವಾಗಿರುವ ಇಮೇಲ್ ವಿಳಾಸವನ್ನು ಬಳಸಿ
- ಭಾವಚಿತ್ರ ಮತ್ತು ಸಹಿಯ ಗಾತ್ರವನ್ನು ಗಮನದಲ್ಲಿಟ್ಟುಕೊಂಡು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
- ಅರ್ಜಿ ಸಲ್ಲಿಸಿದ ನಂತರ ಅರ್ಜಿಯ ಪಿಡಿಎಫ್ ಅಥವಾ ಪ್ರಿಂಟನ್ನು ಸಂಗ್ರಹಿಸಿಕೊಳ್ಳಿ
- ಲಿಖಿತ ಪರೀಕ್ಷೆಗೆ ನಿಯಮಿತವಾಗಿ ಓದಿ
- ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿ
- ಮಾಕ್ ಟೆಸ್ಟ್ ಗಳನ್ನು ನಿಗದಿತ ಸಮಯದಲ್ಲಿ ಬರೆಯಿರಿ
- ಪ್ರತಿದಿನ ದೈಹಿಕ ವ್ಯಾಯಾಮ ಮತ್ತು ಓಟದ ಅಭ್ಯಾಸ ಮಾಡಿ
- ನೆಗೆಟಿವ್ ಮಾರ್ಕಿಂಗ್ ಇರುವುದರಿಂದ ಎಚ್ಚರಿಕೆಯಿಂದ ಉತ್ತರಿಸಿ
- ನೇಮಕಾತಿಗೆ ಸಂಬಂಧಿಸಿದ ಅಧಿಕೃತ ಪ್ರಕಟಣೆಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವುದರ ಮೂಲಕ ನಿಯಮಿತವಾಗಿ ಗಮನಿಸಿಕೊಳ್ಳಿ
KSRP Recruitment Official Sources
Last Updated And Verified (By Author): 18 July 2026
| ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ವೆಬ್ಸೈಟ್ | https://ksp.karnataka.gov.in/ |
| ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಅಧಿಕೃತ ವೆಬ್ಸೈಟ್ | https://ksrp.karnataka.gov.in/en |
| ಅಧಿಕೃತ ನೇಮಕಾತಿ ಅಧಿಸೂಚನೆಯ ಪಿಡಿಎಫ್ | |
| ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು | ಅರ್ಜಿ ಸಲ್ಲಿಕೆ ಲಿಂಕ್ |
ನೇಮಕಾತಿ ಅಧಿಸೂಚನೆ: ಕಲ್ಯಾಣ ಕರ್ನಾಟಕ ವೃಂದ

ನೇಮಕಾತಿ ಅಧಿಸೂಚನೆ: ಉಳಿಕೆ ಮೂಲ ವೃಂದ

ನಮ್ಮ ಹೆಚ್ಚುವರಿ ಲಿಂಕ್ ಗಳು
| ನಮ್ಮ ವಾಟ್ಸಪ್ ಗುಂಪು ಸೇರಲು | ಇಲ್ಲಿ ಕ್ಲಿಕ್ ಮಾಡಿ |
| ಇದೇ ರೀತಿಯ ಹೆಚ್ಚಿನ ಮಾಹಿತಿಯನ್ನು ಈ ಮುಂದೆ ಪಡೆಯಿರಿ |
FAQ’s (ಪ್ರಶ್ನೋತ್ತರಗಳು)
ಪ್ರಶ್ನೆ 1: KSRP Recruitment 2026 ರಲ್ಲಿ ಎಷ್ಟು ಹುದ್ದೆಗಳಿಗೆ ನೇಮಕಾತಿ ನೆಡೆಯಲಿದೆ?
ಉತ್ತರ: ಒಟ್ಟು 2314 ವಿಶೇಷ ಮೀಸಲು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.
ಪ್ರಶ್ನೆ 2: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಿದ್ಯಾರ್ಹತೆ ಏನು?
ಉತ್ತರ: ಅಭ್ಯರ್ಥಿಗಳು ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ಪ್ರಶ್ನೆ 3: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ ಎಷ್ಟು ವರ್ಷಗಳು?
ಉತ್ತರ: ವಿಶೇಷ 5 ವರ್ಷಗಳ ವಯೋಮಿತಿ ಸಡಿಲಿಕೆಯ ನಂತರ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 33 ವರ್ಷಗಳಾಗಿವೆ.
ಪ್ರಶ್ನೆ 4: ಲಿಖಿತ ಪರೀಕ್ಷೆಯಲ್ಲಿ ನೆಗೆಟಿವ್ ಮಾರ್ಕಿಂಗ್ ಇದೆಯೇ?
ಉತ್ತರ: ಹೌದು. ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಡಿತ ಮಾಡಲಾಗುತ್ತದೆ.
ಪ್ರಶ್ನೆ 5: ಪುರುಷ ಅಭ್ಯರ್ಥಿಗಳಿಗೆ ಕನಿಷ್ಠ ಎತ್ತರ ಎಷ್ಟಿರಬೇಕು?
ಉತ್ತರ: ಪುರುಷ ಅಭ್ಯರ್ಥಿಗಳು ಕನಿಷ್ಠ 168 ಸೆಂಟಿಮೀಟರ್ ಎತ್ತರ ಇರಬೇಕು.
ಪ್ರಶ್ನೆ 6: ಮಹಿಳಾ ಅಭ್ಯರ್ಥಿಗಳು ಕನಿಷ್ಠ ಎತ್ತರ ಎಷ್ಟಿರಬೇಕು?
ಉತ್ತರ: ಮಹಿಳಾ ಅಭ್ಯರ್ಥಿಗಳಿಗೆ ಕನಿಷ್ಠ 158 ಸೆಂಟಿಮೀಟರ್ ಎತ್ತರ ಅಗತ್ಯವಾಗಿದೆ.
ಪ್ರಶ್ನೆ 7: ಮಹಿಳಾ ಅಭ್ಯರ್ಥಿಗಳಿಗೆ ಕನಿಷ್ಠ ತೂಕದ ಮಾನದಂಡ ಇದೆಯೇ?
ಉತ್ತರ: ಹೌದು, ಮಹಿಳಾ ಅಭ್ಯರ್ಥಿಗಳಿಗೆ ಕನಿಷ್ಠ 45 ಕೆಜಿ ತೂಕದ ಮಾನದಂಡ ಅನ್ವಯವಾಗುತ್ತದೆ.
ಪ್ರಶ್ನೆ 8: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ನಿಗಧಿಪಡಿಸಿರುವ ಅರ್ಜಿ ಶುಲ್ಕ ಎಷ್ಟು?
ಉತ್ತರ: ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ₹750 ರೂಗಳ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
ಪ್ರಶ್ನೆ 9: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಶುಲ್ಕ ಎಷ್ಟು?
ಉತ್ತರ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹500/- ರೂಗಳ ಅರ್ಜಿ ಶುಲ್ಕವನ್ನು ಪಾವತಿಸಬೇಕು.
ಪ್ರಶ್ನೆ 10: ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಉತ್ತರ: 10 ಆಗಸ್ಟ್ 2026 ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಪ್ರಶ್ನೆ 11: ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕ ಯಾವುದು?
ಉತ್ತರ: 11 ಆಗಸ್ಟ್ 2026 ಅರ್ಜಿ ಶುಲ್ಕ ಪಾವತಿ ಮಾಡಲು ಕೊನೆಯ ದಿನಾಂಕವಾಗಿದೆ.
ಪ್ರಶ್ನೆ 12: ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ ಯಾವಾಗ ನಡೆಯಲಿದೆ?
ಉತ್ತರ: 20 ಸೆಪ್ಟೆಂಬರ್ 2026 ರಂದು ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯನ್ನು ನಡೆಸಲು ದಿನಾಂಕವನ್ನು ನಿಗದಿಪಡಿಸಲಾಗಿದೆ.
ಕೊನೆಯ ಮಾತು
ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಉದ್ಯೋಗವನ್ನು ಪಡೆಯಲು ಬಯಸುವ ಯುವಜನರಿಗೆ ಕೆ ಎಸ್ ಆರ್ ಪಿ ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿಯು ಅತ್ಯುತ್ತಮ ಅವಕಾಶವಾಗಿದೆ. ಈ ನೇಮಕಾತಿ ಮೂಲಕ ಒಟ್ಟು 2314 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿರುವುದರಿಂದ ಅರ್ಹ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೋಗವನ್ನು ಪಡೆಯಲು ಇದೊಂದು ಸುವರ್ಣ ಅವಕಾಶವಾಗಿದೆ
ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ತಮ್ಮ ವಯೋಮಿತಿ, ದೈಹಿಕ ಅರ್ಹತೆ ಮತ್ತು ಇತರೆ ನಿಯಮಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಈ ನೇಮಕಾತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯ ಜೊತೆಯಲ್ಲಿ ದೈಹಿಕ ಪರೀಕ್ಷೆಯೂ ಸಹ ಪ್ರಮುಖ ಆಗಿರುವುದರಿಂದ ಅಭ್ಯರ್ಥಿಗಳು ಎರಡು ಕ್ಷೇತ್ರಗಳಲ್ಲಿಯೂ ಸಹ ಸಮಾನವಾಗಿ ತಯಾರಿಯನ್ನು ಆರಂಭಿಸಬೇಕಾಗುತ್ತದೆ
ಲಿಖಿತ ಪರೀಕ್ಷೆಗೆ ಉತ್ತಮ ರೀತಿಯ ಅಧ್ಯಯನ ಯೋಜನೆಯನ್ನು ರೂಪಿಸಿಕೊಳ್ಳುವುದು, ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡುವುದು, ಮಾಕ್ ಟೆಸ್ಟ್ ಗಳನ್ನು ಬರೆಯುವುದು ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿದಿನ ಊಟ ಮತ್ತು ದೈಹಿಕ ವ್ಯಾಯಾಮ ಮಾಡುವುದು ಇದರಿಂದ ದೈಹಿಕ ಸಾಮರ್ಥ್ಯವನ್ನು ಕಾಪಾಡಿಕೊಳ್ಳಬೇಕು
ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೇ ಅರ್ಜಿಯನ್ನು ಮುಂಚಿತವಾಗಿ ಸಲ್ಲಿಸುವುದು ಉತ್ತಮವಾಗಿದೆ ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಓದಿ ಅರ್ಥೈಸಿಕೊಂಡು ವಿದ್ಯಾರ್ಹತೆ, ವಯೋಮಿತಿ, ವರ್ಗ, ಅರ್ಜಿ ಶುಲ್ಕ ಮತ್ತು ಇತರೆ ನಿಯಮಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳಬೇಕು
ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುವ ಕನಸನ್ನು ಹೊಂದಿರುವ ಪ್ರತಿಯೊಬ್ಬ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಯು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಉತ್ತಮ ತಯಾರಿಯನ್ನು ಆರಂಭಿಸಿ ನೇಮಕಾತಿ ಪ್ರಕ್ರಿಯೆಯನ್ನು ಎದುರಿಸುವ ಮೂಲಕ ತಮ್ಮ ಕನಸಿನ ಉದ್ಯೋಗವನ್ನು ಪಡೆಯಬಹುದಾಗಿರುತ್ತದೆ.
Related Information: Jobs
Related Information: Exam Tips
|
Karnataka Police CPC Exam Preparation Tips 2026 | Complete And Best Study Plan |
|
Exam Tips For KEA AO And AAO Posts, 90 ದಿನಗಳ Best ಸ್ಟಡಿ ಪ್ಲಾನ್ ಹೀಗಿದ್ದರೆ ನಿಮ್ಮ ಯಶಸ್ಸು ಖಚಿತ. |
Authot Note: ಈ ಲೇಖನದಲ್ಲಿ KSRP ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ 2026ಕ್ಕೆ ಸಂಬಂಧಿಸಿದ ಹುದ್ದೆಗಳ ಸಂಖ್ಯೆ, ವಿದ್ಯಾರ್ಹತೆ, ವಯೋಮಿತಿ, ವೇತನ, ಅರ್ಜಿ ಶುಲ್ಕ, ಆಯ್ಕೆ ವಿಧಾನ, ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಹಾಗೂ ಪ್ರಮುಖ ದಿನಾಂಕಗಳ ಕುರಿತು ಸರಳವಾಗಿ ವಿವರಿಸಲಾಗಿದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಬೇಕು.
About Author: ರಂಗನಾಥ ಬಿ ಜಿ ರವರು ಅರ್ಥಶಾಸ್ತ್ರದಲ್ಲಿ ಎಂಎ ಪದವೀಧರರಾಗಿದ್ದು, ಇವರು ಕಳೆದ 3 ವರ್ಷಗಳಿಂದ ಸರ್ಕಾರಿ ಉದ್ಯೋಗ, ನೇಮಕಾತಿ ಅಧಿಸೂಚನೆ, ಪರೀಕ್ಷಾ ಪಠ್ಯಕ್ರಮ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿಯನ್ನು ಓದುಗರಿಗೆ ಸರಳ ಕನ್ನಡದಲ್ಲಿ ನೀಡುವ ಲೇಖಕರಾಗಿದ್ದಾರೆ. ಉದ್ಯೋಗಾಕಾಂಕ್ಷಿಗಳಿಗೆ ನಿಖರ, ಉಪಯುಕ್ತ ಮತ್ತು ಸುಲಭವಾಗಿ ಅರ್ಥವಾಗುವ ಮಾಹಿತಿಯನ್ನು ಒದಗಿಸುವುದು ಲೇಖಕರ ಮುಖ್ಯ ಉದ್ದೇಶವಾಗಿದೆ.
Disclaimer: ಈ ಲೇಖನದಲ್ಲಿನ KSRP ನೇಮಕಾತಿ ಮಾಹಿತಿ ಲಭ್ಯವಿರುವ ಅಧಿಸೂಚನೆ ಮತ್ತು ಮೂಲ ಮಾಹಿತಿಯ ಆಧಾರದ ಮೇಲೆ ನೀಡಲಾಗಿದೆ. ಹುದ್ದೆಗಳು, ಅರ್ಹತೆ, ದಿನಾಂಕಗಳು ಅಥವಾ ನಿಯಮಗಳಲ್ಲಿ ಬದಲಾವಣೆ ಸಾಧ್ಯವಿದೆ. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಅಧಿಸೂಚನೆಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕು.