KEA ಮೂಲಕ Land Surveyor ಹುದ್ದೆಗಳಿಗೆ ಆನ್ ಲೈನ್ ಅರ್ಜಿ ಆಹ್ವಾನ
ಕರ್ನಾಟಕದಲ್ಲಿ ಸರ್ಕಾರ ಉದ್ಯೋಗ ಪಡೆಯಬೇಕೆಂಬ ಕನಸನ್ನು ಹೊಂದಿರುವ ಲಕ್ಷಾಂತರ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮತ್ತೊಂದು ಭರ್ಜರಿ ನೇಮಕಾತಿಯಲ್ಲಿ ಸೂಚನೆಯನ್ನು ಪ್ರಕಟಿಸಿದೆ. ಕರ್ನಾಟಕ ರಾಜ್ಯ ಭೂ ದಾಖಲೆಗಳು ಮತ್ತು ಕಂದಾಯ ಇಲಾಖೆಯಲ್ಲಿನ ಖಾಲಿ ಇರುವ 750 Land Surveyor ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ನೇಮಕಾತಿ ಸೂಚನೆಯನ್ನು ಹೊರಡಿಸಲಾಗಿದೆ.
ಈ ಉದ್ಯೋಗಗಳಲ್ಲಿ ಉತ್ತಮ ವೇತನ, ಶಾಶ್ವತ ಸರ್ಕಾರಿ ಉದ್ಯೋಗ, ಭವಿಷ್ಯದಲ್ಲಿ ಬಡ್ತಿ ಹೊಂದುವ ಅವಕಾಶಗಳು ಹಾಗೂ ಸರ್ಕಾರದ ವಿವಿಧ ಸೌಲಭ್ಯಗಳನ್ನು ಒಳಗೊಂಡಿರುವ ಈ ನೇಮಕಾತಿಯು ಉದ್ಯೋಗಾಕಾಂಕ್ಷಿಗಳ ಗಮನವನ್ನು ಸೆಳೆದಿದೆ.
ಇಂದಿನ ದಿನಗಳಲ್ಲಿ ರಾಜ್ಯ ಸರ್ಕಾರವು ಭೂ ದಾಖಲೆಗಳ ಡಿಜಿಟಲೀಕರಣ, ಆಧುನಿಕ ಸರ್ವೇ ತಂತ್ರಾಂಶಗಳ ಬಳಕೆ ಹಾಗೂ ಸಾರ್ವಜನಿಕ ಸೇವೆಗಳನ್ನು ಹೆಚ್ಚಿನ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಒದಗಿಸುವ ನಿಟ್ಟಿನಲ್ಲಿ ಹಲವು ಡಿಜಿಟಲ್ ಆಯಾಮಗಳನ್ನು ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಭೂ ಸರ್ವೇಯರ್ ಹುದ್ದೆಗಳ ಅಗತ್ಯ ಹೆಚ್ಚಾಗಿದ್ದು ಹೊಸ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ಗ್ರಾಮೀಣ ಪ್ರದೇಶ ಮತ್ತು ನಗರ ಪ್ರದೇಶದಲ್ಲಿನ ಭೂ ದಾಖಲೆಗಳನ್ನು ನಿಖರವಾಗಿ ನಿರ್ವಹಿಸುವಲ್ಲಿ Land Surveyor ಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ.
ಈ ನೇಮಕಾತಿಯ ಮೂಲಕ ಆಯ್ಕೆಯಾಗುವ ಭೂ ಸರ್ವೆಯರ್ ಅಭ್ಯರ್ಥಿಗಳು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸುವ ಅವಕಾಶವನ್ನು ಪಡೆಯುತ್ತಾರೆ. ಸರ್ಕಾರಿ ಸೇವೆಯ ಮೂಲಕ ಜನಸಾಮಾನ್ಯರಿಗೆ ಸಹಾಯ ಮಾಡುವ ಅವಕಾಶವೂ ದೊರೆಯುತ್ತದೆ ಆದ್ದರಿಂದ ಸರ್ಕಾರಿ ಉದ್ಯೋಗವನ್ನು ಪಡೆಯಬೇಕೆಂಬ ಆಕಾಂಕ್ಷೆಯನ್ನು ಹೊಂದಿರುವವರು ತಪ್ಪಿಸಿಕೊಳ್ಳದೆ ಅರ್ಜಿ ಸಲ್ಲಿಸಿ
ಪ್ರಸ್ತುತ ಲೇಖನದಲ್ಲಿ ನಾವು ಹುದ್ದೆಗಳ ವಿವರ, ವಯೋಮಿತಿ, ವೇತನ ಶ್ರೇಣಿ, ಅರ್ಜಿ ಶುಲ್ಕ, ಅರ್ಜಿ ಸಲ್ಲಿಕೆ ಪ್ರಕ್ರಿಯೆ, ಆಯ್ಕೆ ವಿಧಾನ, ಪರೀಕ್ಷಾ ಪಠ್ಯಕ್ರಮ, ಮುಖ್ಯಾಂಶಗಳು, ಪ್ರಶ್ನೋತ್ತರಗಳು ಹಾಗೂ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ ಲೇಖನವನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ಅರ್ಜಿಯನ್ನು ಸಲ್ಲಿಸಿ.
ಕೆಇಎ ನೇಮಕಾತಿ ಎಂದರೆ ಏನು?
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ರಾಜ್ಯ ಸರ್ಕಾರದ ವಿವಿಧ ಸರ್ಕಾರಿ ಇಲಾಖೆಗಳಿಗೆ ಸಿಬ್ಬಂದಿಯನ್ನು ಆಯ್ಕೆ ಮಾಡುವ ಪ್ರಮುಖ ಸಂಸ್ಥೆಯಾಗಿದ್ದು, ಈ ಸಂಸ್ಥೆಯು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಸಂಬಂಧಿತ ಇಲಾಖೆಗಳಿಗೆ ನೇಮಕ ಮಾಡಿಕೊಳ್ಳುವಂತೆ ತಿಳಿಸಲಾಗುತ್ತದೆ
2026 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಭೂ ದಾಖಲೆಗಳು ಮತ್ತು ಕಂದಾಯ ಇಲಾಖೆಯಲ್ಲಿರುವ ಖಾಲಿ ಇರುವ 750 Land Surveyor ಹುದ್ದೆಗಳನ್ನು ಭರ್ತಿ ಮಾಡಲು ಕೆಇಎ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದ್ದು ಈ ನೇಮಕಾತಿಯಲ್ಲಿ ಉಳಿಕೆ ಮೂಲ ವೃಂದದಿಂದ ಮತ್ತು ಕಲ್ಯಾಣ ಕರ್ನಾಟಕ ವೃಂದದಿಂದ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ.
ಈ ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಬೇಕು ಅರ್ಜಿ ಸಲ್ಲಿಸುವ ಮೊದಲು ಪ್ರಾಧಿಕಾರವು ಹೊರಡಿಸಿರುವ ಅಧಿಕೃತ ನೇಮಕಾತಿ ಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಹತೆಯನ್ನು ಪರಿಶೀಲಿಸಿದ ನಂತರ ಅರ್ಜಿ ಸಲ್ಲಿಸುವುದು ಉತ್ತಮವಾಗಿದೆ.
KEA ನೇಮಕಾತಿ ಮುಖ್ಯಾಂಶಗಳು
| ವಿವರ | ಮಾಹಿತಿ |
| ಪರೀಕ್ಷೆ ನೆಡೆಸುತ್ತಿರುವ ಸಂಸ್ಥೆಯ ಹೆಸರು | ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) |
| ಇಲಾಖೆಯ ಹೆಸರು | ಕರ್ನಾಟಕ ಭೂ ದಾಖಲೆಗಳು ಮತ್ತು ಕಂದಾಯ ಇಲಾಖೆ |
| ಹುದ್ದೆಯ ಹೆಸರು | ಭೂ ಸರ್ವೇಯರ್ (Land Surveyor) |
| ಒಟ್ಟು ಹುದ್ದೆಗಳು | 750 ಹುದ್ದೆಗಳು |
| ಉದ್ಯೋಗ ಸ್ಥಳ | ಕರ್ನಾಟಕದಾದ್ಯಂತ |
| ಅರ್ಜಿ ವಿಧಾನ | ಆನ್‌ಲೈನ್ ಮೂಲಕ ಮಾತ್ರ |
| ವೇತನ ಶ್ರೇಣಿ | ₹37,500 ರಿಂದ ₹76,100 ಪ್ರತಿ ತಿಂಗಳು |
| ಪರೀಕ್ಷೆಯ ವಿಧಾನ | OMR ಆಧಾರಿತ ಲಿಖಿತ ಪರೀಕ್ಷೆ |
| ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ | 07 ಆಗಸ್ಟ್ 2026 |
ಈ ಮೇಲಿನ ಪಟ್ಟಿಯು ಅಭ್ಯರ್ಥಿಗಳಿಗೆ ನೇಮಕಾತಿಯ ಪ್ರಮುಖ ಅಂಶಗಳನ್ನು ಒಂದೇ ಸ್ಥಳದಲ್ಲಿ ತಿಳಿಯಲು ಸಹಕರಿಸುತ್ತದೆ.
Land Surveyor ಹುದ್ದೆಗಳ ವಿಭಾಗವಾರು ವಿವರ
ಈ Land Surveyor ನೇಮಕಾತಿಯಲ್ಲಿ ಒಟ್ಟು 750 ಭೂ ಸರ್ವೆಯರ್ ಹುದ್ದೆಗಳು ಲಭ್ಯವಿದ್ದು ಅವುಗಳನ್ನು ಈ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ
1. ಭೂ ಸರ್ವೇಯರ್ (ಕಲ್ಯಾಣ ಕರ್ನಾಟಕ ವೃಂದ)
- ಹುದ್ದೆಗಳ ಸಂಖ್ಯೆ – 190
2. ಭೂ ಸರ್ವೇಯರ್ (ಉಳಿಕೆ ಮೂಲ ವೃಂದ)
- ಹುದ್ದೆಗಳ ಸಂಖ್ಯೆ – 560
ಒಟ್ಟು ಹುದ್ದೆಗಳು
- 750
ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಮೀಸಲಾಗಿರುವ ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕ ವಿಭಾಗದಲ್ಲಿ ಅರ್ಜಿ ಸಲ್ಲಿಸಿದರೆ ಉಳಿದ ಅಭ್ಯರ್ಥಿಗಳು ಉಳಿಕೆ ಮೂಲ ವೃಂದ ವಿಭಾಗದ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆ ಅಭ್ಯರ್ಥಿಗಳು ತಮ್ಮ ಅರ್ಹತೆಗೆ ಅನುಗುಣವಾಗಿ ಸರಿಯಾದ ವಿಭಾಗವನ್ನು ಆಯ್ಕೆ ಮಾಡುವುದು ಪ್ರಮುಖವಾಗಿದೆ
ಭೂ ಸರ್ವೇಯರ್ (Land Surveyor) ಹುದ್ದೆಯ ಎಂದರೆ ಏನು?
ಭೂ ಸರ್ವೆಯರ್ ಎಂದರೆ ಭೂಮಿಯ ಗಡಿ, ಸ್ಥಳದ ನಿಖರತೆ ಮತ್ತು ವಿಸ್ತೀರ್ಣವನ್ನು ನಿಖರವಾಗಿ ಮಾಹಿತಿಯನ್ನು ನೀಡುವ ವೈಜ್ಞಾನಿಕ ವಿಧಾನದಲ್ಲಿ ಅಳೆಯುವ ಮತ್ತು ದಾಖಲಿಸುವ ಸರ್ಕಾರಿ ಅಧಿಕಾರಿಯಾಗಿದ್ದಾರೆ ಇವರ ಕಾರ್ಯವು ಕೇವಲ ಜಮೀನಿನ ಅಳತೆ ಮಾಡುವುದಲ್ಲದಷ್ಟೇ ಅಲ್ಲದೇ ಸರ್ಕಾರದ ಭೂ ದಾಖಲೆಗಳ ನಿರ್ವಹಣೆ, ನಕ್ಷೆಯನ್ನು ತಯಾರಿಸುವುದು, ಅಭಿವೃದ್ಧಿ ಯೋಜನೆಗಳಿಗೆ ಭೂಮಪನ ಮಾಡುವುದು, ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗಳ ಗಡಿ ಗುರುತಿಸುವಿಕೆ ಮುಂತಾದ ಅನೇಕ ಜವಾಬ್ದಾರಿಗಳನ್ನು ಹೊಂದಿರುತ್ತಾರೆ
ಇತ್ತೀಚಿನ ದಿನಗಳಲ್ಲಿ GPS, GIS, Total Station, Drone Survey ಮುಂತಾದ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಭೂಮಾಪನ ಕಾರ್ಯಗಳನ್ನು ನಿರ್ವಹಿಸಲಾಗುತ್ತದೆ ಆದ್ದರಿಂದ Land Surveyor ಹುದ್ದೆ ತಾಂತ್ರಿಕ ಜ್ಞಾನ ಮತ್ತು ಜವಾಬ್ದಾರಿಯ ಸಮನ್ವಯವಾಗಿರುವ ಸರ್ಕಾರಿ ಕೆಲಸವಾಗಿದೆ
Land Surveyor ನ ಪ್ರಮುಖ ಕರ್ತವ್ಯಗಳು
ಈ ನೇಮಕಾತಿ ಮೂಲಕ ಆಯ್ಕೆಯಾದ ಭೂ ಸರ್ವೆಯರ್ ಅಭ್ಯರ್ಥಿಗಳು ಈ ಕೆಳಕಂಡ ಪ್ರಮುಖ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ನಿರ್ವಹಿಸಬೇಕಾಗುತ್ತದೆ ಅವುಗಳೆಂದರೆ
ಜಮೀನಿನ ಗಡಿಯನ್ನು ಗುರುತಿಸುವುದು
ರೈತರ ಜಮೀನು, ಸರ್ಕಾರಿ ಭೂಮಿ ಹಾಗೂ ಖಾಸಗಿ ಆಸ್ತಿಗಳ ನಿಖರವಾದ ಗಡಿಯನ್ನು ಗುರುತಿಸಿ ದಾಖಲೆ ಮಾಡುವುದು ಭೂ ಸರ್ವೇಯರ್ ಗಳ ಪ್ರಾಥಮಿಕ ಆದ್ಯ ಕರ್ತವ್ಯವಾಗಿದೆ
ಭೂಮಾಪನ ಕಾರ್ಯ ನಿರ್ವಹಿಸುವುದು
ಜಮೀನಿನ ಅಗಲ, ಉದ್ದ ಮತ್ತು ವಿಸ್ತೀರ್ಣವನ್ನು ಅಳೆಯುವ ಮೂಲಕ ಅಧಿಕೃತ ದಾಖಲೆಗಳನ್ನು ಸಿದ್ಧಪಡಿಸುವ ಜವಾಬ್ದಾರಿ ಹೊಂದಿರುತ್ತಾರೆ
ನಕ್ಷೆ ತಯಾರಿಕೆ
ಸರ್ವೆಯನ್ನು ಮಾಡಿದ ನಂತರ ಅದರ ಫಲಿತಾಂಶದ ಆಧಾರದ ಮೇಲೆ ನಿಖರವಾದ ನಕ್ಷೆ ತಯಾರಿಸಿ ಇಲಾಖೆಗೆ ಸಲ್ಲಿಸುವುದು
ಭೂ ದಾಖಲೆಗಳ ನಿರ್ವಹಣೆ
ರಾಜ್ಯ ಸರ್ಕಾರದ ಭೂ ದಾಖಲೆಗಳನ್ನು ಕಾಲಕ್ಕೆ ತಕ್ಕಂತೆ ನವೀಕರಿಸುವುದು ಮತ್ತು ಅಗತ್ಯವಿದ್ದಲ್ಲಿ ತಿದ್ದುಪಡಿ ಮಾಡುವುದು
ರೈತರಿಗೆ ಸಹಾಯ ಮಾಡುವುದು
ಜಮೀನುಗಳ ಗಡಿ ವಿವಾದ, ಸರ್ವೇ ಸಮಸ್ಯೆಗಳು ಹಾಗೂ ಭೂಮಿಗೆ ಸಂಬಂಧಿಸಿದ ದಾಖಲೆಗಳ ಕುರಿತು ಮಾಹಿತಿಯನ್ನು ಸಾರ್ವಜನಿಕರಿಗೆ ನೀಡುವುದು
ಸರ್ಕಾರಿ ಯೋಜನೆಗಳಿಗೆ ಭೂಮಾಪನ
ರಸ್ತೆ, ರೈಲ್ವೆ, ಶಾಲೆ, ನೀರಾವರಿ ವ್ಯವಸ್ಥೆ, ಆಸ್ಪತ್ರೆ, ಕೈಗಾರಿಕಾ ವಲಯ ಹಾಗೂ ಇತರ ಅಭಿವೃದ್ಧಿ ಯೋಜನೆಗಳಿಗೆ ಅಗತ್ಯ ಭೂಮಾಪನ ಕಾರ್ಯಗಳನ್ನು ಕೈಗೊಳ್ಳುತ್ತಾರೆ
ತಾಂತ್ರಿಕ ವರದಿಗಳ ಸಿದ್ಧಪಡಿಸುವಿಕೆ
ಭೂಮಿಗೆ ಸಂಬಂಧಿಸಿದ ವಿವಾದಗಳು ಮತ್ತು ನ್ಯಾಯದ ಪ್ರಕರಣಗಳಿಗೆ ಅಗತ್ಯವಾದ ತಾಂತ್ರಿಕ ವರದಿಗಳನ್ನು ತಯಾರಿಸುವುದು ಇವರ ಜವಾಬ್ದಾರಿಯಾಗಿದೆ
ಆಧುನಿಕ ಉಪಕರಣಗಳ ಬಳಕೆ
GPS, GIS, Total Station, Drone Survey ಸೇರಿದಂತೆ ಇತರೆ ಡಿಜಿಟಲ್ ಸರ್ವೇ ಉಪಕರಣಗಳನ್ನು ಬಳಸಿ ನಿಖರವಾದ ಅಳತೆ ಮಾಡುವ ಕರ್ತವ್ಯವನ್ನು ಹೊಂದಿರುತ್ತಾರೆ
Land Surveyor ಹುದ್ದೆಯ ಮಹತ್ವ ಏನು
ಭೂ ದಾಖಲೆ ವ್ಯವಸ್ಥೆಯು ಯಾವುದೇ ರಾಜ್ಯದ ಆಡಳಿತ ವ್ಯವಸ್ಥೆಯ ಮೂಲಭೂತ ಮತ್ತು ಪ್ರಮುಖ ಅಂಶವಾಗಿದೆ. ಭೂಮಿಗೆ ಸಂಬಂಧಿಸಿದ ವ್ಯವಹಾರಗಳು ರಸ್ತೆ ನಿರ್ಮಾಣ, ಕೃಷಿ, ನಗರ ಅಭಿವೃದ್ಧಿ, ಕೈಗಾರಿಕಾ ವಿಸ್ತರಣೆ ಮುಂತಾದ ಸರ್ಕಾರಿ ಯೋಜನೆಗಳು ಯಶಸ್ಸು ನಿಖರವಾದ ಭೂಮಪಾನದ ಮೇಲೆ ಅವಲಂಬಿತವಾಗಿರುತ್ತದೆ
Land Surveyor ಗಳ ಕೆಲಸದಿಂದ
- ರೈತರ ಭೂ ದಾಖಲೆಗಳು ಸರಿಯಾಗಿ ನಿರ್ವಹಿಸಲ್ಪಡುತ್ತವೆ
- ಭೂಮಿಗೆ ಸಂಬಂಧಿಸಿದ ವಿವಾದಗಳನ್ನು ಕಡಿಮೆ ಮಾಡಲು ಸಹಕಾರಿ
- ಆಸ್ತಿ ಖರೀದಿ ಮತ್ತು ಮಾರಾಟದಲ್ಲಿ ಪಾರದರ್ಶಕತೆ ಇರುತ್ತದೆ
- ಭೂ ದಾಖಲೆಗಳ ಡಿಜಿಟಲೀಕರಣ ಸುಲಭವಾಗಿ ಆಗುತ್ತದೆ
- ಸರ್ಕಾರಿ ಯೋಜನೆಗಳು ವೇಗವಾಗಿ ಅನುಷ್ಠಾನವಾಗುತ್ತವೆ
- ನ್ಯಾಯಾಲಯದ ಪ್ರಕರಣಗಳಲ್ಲಿ ತಾಂತ್ರಿಕ ಸಾಕ್ಷಿ ಒದಗಿಸಲು ನೆರವಾಗುತ್ತದೆ
ಈ ಮೇಲಿನ ಕಾರಣಗಳಿಂದ ಭೂ ಸರ್ವೇಯರ್ ಹುದ್ದೆಯು ರಾಜ್ಯದ ಅಭಿವೃದ್ಧಿ ಆಯಾಮಗಳಲ್ಲಿ ಪ್ರಮುಖ ಮತ್ತು ಪಾತ್ರವಹಿಸುವ ಸರಕಾರಿ ಹುದ್ದೆಯಾಗಿದೆ
ಈ ನೇಮಕಾತಿ ಯಾರಿಗೆ ಸೂಕ್ತ
Land Surveyor ನೇಮಕಾತಿ ವಿಶೇಷವಾಗಿ ಈ ಕೆಳಗಿನ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವಾಗಿದೆ
- ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವವರು
- ಪಿಯುಸಿ ಅಥವಾ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು
- ಕರ್ನಾಟಕದಲ್ಲಿ ಉದ್ಯೋಗ ಮಾಡಲು ಬಯಸುವವರು
- ಕಂದಾಯ ಇಲಾಖೆ ಭೂ ದಾಖಲೆಗಳು ಅಥವಾ ಸರ್ವೇ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರು
- ದೀರ್ಘಾವಧಿ ಉದ್ಯೋಗ ಭದ್ರತೆ ಮತ್ತು ಉತ್ತಮ ವೇತನವನ್ನು ಬಯಸುವವರು
- ತಾಂತ್ರಿಕ ಮತ್ತು ಆಡಳಿತಾತ್ಮಕ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸಲು ಬಯಸುವವರು
- ಸರ್ಕಾರಿ ಭೂ ಸಭೆಯ ಉದ್ಯೋಗದ ಪ್ರಮುಖ ಪ್ರಯೋಜನಗಳು
ಈ ನೇಮಕಾತಿ ಮೂಲಕ ಆಯ್ಕೆಯಾಗುವ Land Surveyor ಅಭ್ಯರ್ಥಿಗಳಿಗೆ ಉತ್ತಮ ಆಕರ್ಷಕ ವೇತನದ ಜೊತೆಯಲ್ಲಿ ಈ ಕೆಲಕಂಡ ಹಲವು ಸೌಲಭ್ಯಗಳು ದೊರೆಯುತ್ತವೆ ಅವುಗಳೆಂದರೆ
- ಉತ್ತಮ ಮಾಸಿಕ ವೇತನ.
- ತುಟ್ಟಿ ಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA) ಸೇರಿದಂತೆ ವಿವಿಧ ಸರ್ಕಾರಿ ಭತ್ಯೆಗಳು.
- ಉದ್ಯೋಗ ಭದ್ರತೆ.
- ನಿವೃತ್ತಿ ಸೌಲಭ್ಯಗಳು.
- ವೈದ್ಯಕೀಯ ಸೌಲಭ್ಯ.
- ವಾರ್ಷಿಕ ವೇತನ ಹೆಚ್ಚಳ.
- ಸೇವಾ ಅನುಭವದ ಆಧಾರದ ಮೇಲೆ ಬಡ್ತಿ ಅವಕಾಶ.
- ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೆಲಸ ಮಾಡುವ ಅವಕಾಶ.
- ಸಾರ್ವಜನಿಕ ಸೇವೆಯಲ್ಲಿ ನೇರ ಪಾಲ್ಗೊಳ್ಳುವ ಅವಕಾಶ.
ಈ ಎಲ್ಲಾ ಸೌಲಭ್ಯಗಳು ಸಿಗುವುದರಿಂದ ಭೂ ಸರ್ವೇಯರ್ ಹುದ್ದೆಯನ್ನು ಕರ್ನಾಟಕದ ಪ್ರಮುಖ ಸರ್ಕಾರಿ ಉದ್ಯೋಗಗಳಲ್ಲಿ ಒಂದಾಗಿ ಪರಿಗಣಿಸಲಾಗುತ್ತದೆ
ಅರ್ಜಿ ಸಲ್ಲಿಸುವ ಮೊದಲು ಗಮನಿಸಬೇಕಾದ ಅಂಶಗಳು
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಈ ಕೆಳಕಂಡ ವಿಷಯವನ್ನು ಕಡ್ಡಾಯವಾಗಿ ಗಮನಿಸಿ ಓದಿ ಖಚಿತಪಡಿಸಿಕೊಳ್ಳಬೇಕು ಅವುಗಳೆಂದರೆ
- ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಬೇಕು
- ಶೈಕ್ಷಣಿಕ ಅರ್ಹತೆ ಮತ್ತು ವಯೋಮಿತಿಯನ್ನು ಕೂಲಂಕುಶವಾಗಿ ಪರಿಶೀಲಿಸಬೇಕು
- ಅರ್ಜಿ ಸಲ್ಲಿಸಲು ಬೇಕಾಗಿರುವ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಬೇಕು
- ಸರಿಯಾದ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ಬಳಸಬೇಕು
- ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು
- ಅರ್ಜಿ ಸಲ್ಲಿಸಿದ ನಂತರ ಅದರ ಪ್ರಿಂಟನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು
Land Surveyor ನೇಮಕಾತಿಯ ಅರ್ಹತಮಾನದಂಡಗಳ ಸಂಪೂರ್ಣ ಮಾಹಿತಿ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುತ್ತಿರುವ ಭೂ ಸರ್ವೇಯರ್ ನೇಮಕಾತಿಗೆ ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ಆಸಕ್ತ ಹಾಗೂ ಅರ್ಹತೆಯು ಅಧಿಸೂಚನೆಯಲ್ಲಿ ನೀಡಿರುವ ಅರ್ಹತಮಾನದಂಡಗಳನ್ನು ಕಡ್ಡಾಯವಾಗಿ ಪೂರೈಸಲೇಬೇಕಾಗುತ್ತದೆ. ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವಾಗ ವಿದ್ಯಾರ್ಹತೆ, ವಯೋಮಿತಿ, ಮೀಸಲಾತಿ, ಅರ್ಜಿ ಶುಲ್ಕ ಮತ್ತು ಇತರ ನಿಯಮಗಳನ್ನು ಸರಿಯಾಗಿ ತಿಳಿದುಕೊಳ್ಳುವುದು ಸಹ ಬಹಳ ಪ್ರಮುಖವಾಗಿದೆ ಅರ್ಹತೆಯನ್ನು ಪರಿಶೀಲಿಸಿದೆ ಅರ್ಜಿ ಸಲ್ಲಿಸಿದ್ದರೆ ನಂತರದ ಹಂತದಲ್ಲಿ ಅರ್ಜಿ ತಿರಸ್ಕೃತವಾಗಬಹುದು
Land Surveyor ನೇಮಕಾತಿಯ ಶೈಕ್ಷಣಿಕ ಅರ್ಹತೆ
ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಈ ಕೆಳಕಂಡ ವಿದ್ಯಾರ್ಥಿಯನ್ನು ಹೊಂದಿರಬೇಕಾಗುತ್ತದೆ
- ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು
- ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿಯನ್ನು ಪೂರ್ಣಗೊಳಿಸಬೇಕು
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಿದ್ಯಾರ್ಹತೆ ಪ್ರಮಾಣ ಪತ್ರಗಳು ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳಿಂದ ಪಡೆದಿರುವ ಪ್ರಮಾಣ ಪತ್ರಗಳಾಗಿರಬೇಕು. ಅಂತಿಮ ವರ್ಷದ ವಿದ್ಯಾರ್ಥಿಗಳು ಅಥವಾ ಫಲಿತಾಂಶ ನಿರೀಕ್ಷೆಯಲ್ಲಿರುವವರು ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ನಿಯಮಗಳನ್ನು ಕಡ್ಡಾಯವಾಗಿ ಪರಿಶೀಲಿಸಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ
Land Surveyor ಹುದ್ದೆಗೆ ಯಾವ ಅಭ್ಯರ್ಥಿಗಳು ಸೂಕ್ತರು
- ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ಅನ್ನು ಪೂರ್ಣಗೊಳಿಸಿರುವವರು
- ಪದವಿ ಶಿಕ್ಷಣ ಪೂರ್ಣಗೊಳಿಸಿದ ಅಭ್ಯರ್ಥಿಗಳು
- ರಾಜ್ಯದ ಆಡಳಿತ ಕ್ಷೇತ್ರದಲ್ಲಿ ವೃತ್ತಿ ನಿರ್ಮಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳು
- ಸರ್ಕಾರಿ ಉದ್ಯೋಗದಲ್ಲಿ ದೀರ್ಘಾವಧಿ ವೃತ್ತಿ ಜೀವನ ಬಯಸುವವರು
- ಗ್ರಾಮೀಣ ಅಭಿವೃದ್ಧಿ ಮತ್ತು ಸಾರ್ವಜನಿಕ ಸೇವೆಯಲ್ಲಿ ಆಸಕ್ತಿ ಹೊಂದಿರುವವರು
ವಯೋಮಿತಿ
ಈ Land Surveyor ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಈ ಕೆಲಕಂಡ ನಿಗಧಿತ ವಯೋಮಿತಿಯನ್ನು ಹೊಂದಿರಬೇಕು
ಕನಿಷ್ಠ ವಯಸ್ಸು: 18 ವರ್ಷಗಳು
ಗರಿಷ್ಠ ವಯಸ್ಸು: 40 ವರ್ಷಗಳು
ವಯಸ್ಸನ್ನು ಅಧಿಸೂಚನೆಯಲ್ಲಿ ಸೂಚಿಸಿರುವ ದಿನಾಂಕದ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳು ತಮ್ಮ ಎಸ್ ಎಸ್ ಎಲ್ ಸಿ ಅಂಕಪಟ್ಟಿಯಲ್ಲಿರುವ ಜನ್ಮ ದಿನಾಂಕವನ್ನು ಆಧರಿಸಿ ವಯಸ್ಸನ್ನು ಪರಿಶೀಲಿಸಬೇಕಾಗಿರುತ್ತದೆ
ವಯೋಮಿತಿ ಸಡಿಲಿಕೆ
ಕರ್ನಾಟಕ ಸರ್ಕಾರದ ಮೀಸಲಾತಿ ನಿಯಮಗಳ ಪ್ರಕಾರ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಒಂದು ಬಾರಿ ಅನ್ವಯವಾಗುವಂತೆ ಐದು ವರ್ಷಗಳ ಸಡಿಲಿಕೆಯನ್ನು ನೀಡಲಾಗಿದೆ ಅದರ ವಿವರ ಈ ಕೆಳಕಂಡಂತಿದೆ
| ಅಭ್ಯರ್ಥಿಗಳ ವರ್ಗ | ವಯೋಮಿತಿ ಸಡಿಲಿಕೆ |
| OBC / 2A / 2B / 3A / 3B | 3 ವರ್ಷಗಳು |
| SC / ST | 5 ವರ್ಷಗಳು |
| PwD (ವಿಕಲಚೇತನ ಅಭ್ಯರ್ಥಿಗಳು) | 10 ವರ್ಷಗಳು |
ವಯೋಮಿತಿ ಸಡಿಲಿಕೆಯನ್ನು ಪಡೆಯಲು ಇಲಾಖೆಯು ಕೇಳಲಾಗುವ ಸಂಬಂಧಿತ ಪ್ರಮಾಣಪತ್ರಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ವೇತನದ ವಿವರ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಆಯ್ಕೆಯಾಗುವ Land Surveyor ಅಭ್ಯರ್ಥಿಗಳಿಗೆ ಕರ್ನಾಟಕ ಸರ್ಕಾರದ ವೇತನ ಶ್ರೇಣಿಯಂತೆ ಈ ಕೆಳಕಂಡ ವೇತನವನ್ನು ನೀಡಲಾಗುತ್ತದೆ
₹37,500/- ರಿಂದ ₹76,100/-
ಈ ಆಕರ್ಷಕ ವೇತನದ ಜೊತೆಯಲ್ಲಿ ಸಿಗುವ ಹಲವು ಸರ್ಕಾರಿ ಭತ್ಯೆಗಳು ಈ ಕೆಳಕಂಡಂತಿವೆ
- ತುಟ್ಟಿಭತ್ಯೆ
- ಮನೆ ಬಾಡಿಗೆ ಭತ್ಯೆ
- ವೈದ್ಯಕೀಯ ಸೌಲಭ್ಯ
- ಪ್ರಯಾಣ ಭತ್ಯೆ
- ನಿವೃತ್ತಿ ಸೌಲಭ್ಯ
- ರಜೆ ಸೌಲಭ್ಯ
- ವಾರ್ಷಿಕ ವೇತನ ಹೆಚ್ಚಳ
ಸರ್ಕಾರಿ ಉದ್ಯೋಗ ಆಗಿರುವುದರಿಂದ ಉದ್ಯೋಗ ಭದ್ರತೆ ಮತ್ತು ನಿವೃತ್ತಿಯ ನಂತರವೂ ಸಹ ಹಲವು ಸಹಕಾರಿ ಸೌಲಭ್ಯಗಳನ್ನು ಪಡೆಯಬಹುದು.
ಅರ್ಜಿ ಶುಲ್ಕ
ಈ Land Surveyor ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ತಮ್ಮ ಮೀಸಲಾತಿ ವರ್ಗಕ್ಕೆ ಅನುಗುಣವಾಗಿ ಆನ್ ಲೈನ್ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ. ಪಾವತಿಸಬೇಕಾದ ಶುಲ್ಕದ ವಿವರ ಈ ಕೆಳಕಂಡಂತಿದೆ
| ಅಭ್ಯರ್ಥಿಗಳ ವರ್ಗ | ಅರ್ಜಿ ಶುಲ್ಕ |
| ಸಾಮಾನ್ಯ / OBC / 2A / 2B / 3A / 3B | ₹ 750 |
| SC / ST | ₹ 500 |
ಪಾವತಿ ವಿಧಾನ
- ಆನ್ ಲೈನ್ ಪಾವತಿ
- ನೆಟ್ ಬ್ಯಾಂಕಿಂಗ್
- ಡೆಬಿಟ್ ಕಾರ್ಡ್
- ಕ್ರೆಡಿಟ್ ಕಾರ್ಡ್
- ಯುಪಿಐ (ಲಭ್ಯವಿದ್ದರೆ)
ಅರ್ಜಿ ಶುಲ್ಕವನ್ನು ಪಾವತಿಸಿದ ನಂತರ ಅದರ ಪಾವತಿ ರಸೀದಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಅಭ್ಯರ್ಥಿಗಳ ಜವಾಬ್ದಾರಿಯಾಗಿದೆ
Land Surveyor ಹುದ್ದೆಗಳ ಆಯ್ಕೆ ಪ್ರಕ್ರಿಯೆ
ಭೂ ಸರ್ವೇಯರ್ ನೇಮಕಾತಿಗೆ ಅಭ್ಯರ್ಥಿಗಳನ್ನು ಹಲವು ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ ಅಂತಹ ಆಯ್ಕೆ ಪ್ರಕ್ರಿಯೆ ಈ ಕೆಳಕಂಡಂತೆ
ಲಿಖಿತ ಪರೀಕ್ಷೆ
ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಸಾಮಾನ್ಯ ಜ್ಞಾನ, ತಾರ್ಕಿಕ ಸಾಮರ್ಥ್ಯ ಮತ್ತು ವಿಷಯ ಜ್ಞಾನವನ್ನು ಪರೀಕ್ಷಿಸುವ ಮೊದಲ ಹಂತವಾಗಿದ್ದು ಈ ಪರೀಕ್ಷೆಯು ಒ ಎಂ ಆರ್ ಆಧಾರಿತವಾಗಿದ್ದು ಎಲ್ಲಾ ಅಭ್ಯರ್ಥಿಗಳು ಸಹ ಈ ಪರೀಕ್ಷೆಯನ್ನು ಬರೆಯಬೇಕಾಗುತ್ತದೆ.
ಸಹಿಷ್ಣುತೆ ಪರೀಕ್ಷೆ
ಲಿಖಿತ ಪರೀಕ್ಷೆಯಲ್ಲಿ ಅರ್ಹತೆಯನ್ನು ಪಡೆದ ಅಭ್ಯರ್ಥಿಗಳಿಗೆ ದೈಹಿಕ ಸಾಮರ್ಥ್ಯವನ್ನು ಪರೀಕ್ಷಿಸುವ ಸಹಿಷ್ಣುತೆ ಪರೀಕ್ಷೆಯನ್ನು ನಡೆಸಲಾಗುತ್ತದೆ ಇಲಾಖೆಯು ನಡೆಸುವ ದೈಹಿಕ ಸಹಿತ ಪರೀಕ್ಷೆಯಲ್ಲಿ ಉತ್ತೀರ್ಣ ಆಗಬೇಕಾಗುತ್ತದೆ.
ದೈಹಿಕ ಗುಣಮಟ್ಟ ಪರೀಕ್ಷೆ
ಇಲಾಖೆಯು ಹೊರಡಿಸಿರುವ ನೇಮಕಾತಿ ಸೂಚನೆಯಲ್ಲಿ ನಿಗದಿಪಡಿಸಿರುವ ದೈಹಿಕ ಮಾನದಂಡಗಳನ್ನು ಪರೀಕ್ಷಿಸಲಾಗುತ್ತದೆ
ವೈದ್ಯಕೀಯ ಪರೀಕ್ಷೆ
ಈ ಮೇಲಿನ ಹಂತಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ವೈದ್ಯಕೀಯ ಪರೀಕ್ಷೆಯನ್ನು ನಡೆಸಿ ಅಭ್ಯರ್ಥಿಯು ಸೇವೆಗೆ ಯೋಗ್ಯವಾಗಿದ್ದಾರೆಯೇ ಎಂಬುದನ್ನು ಪರಿಶೀಲಿಸಲಾಗುತ್ತದೆ
ದಾಖಲೆ ಪರಿಶೀಲನೆ
ಶೈಕ್ಷಣಿಕ ಅರ್ಹತೆ, ಜಾತಿ ಪ್ರಮಾಣ ಪತ್ರ, ವಯಸ್ಸಿನ ದಾಖಲೆ, ಮೀಸಲಾತಿ ಪ್ರಮಾಣ ಪತ್ರಗಳು ಹಾಗೂ ಇತರೆ ದಾಖಲೆಗಳು ಸೇರಿದಂತೆ ಎಲ್ಲ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತದೆ ಈ ಹಂತದಲ್ಲಿ ದಾಖಲೆಗಳ ನೈಜತೆ ಮತ್ತು ಗುಣಮಟ್ಟವನ್ನು ಪರಿಶೀಲಿಸಲಾಗುತ್ತದೆ.
ಪರೀಕ್ಷೆಯ ಮಾದರಿ
Land Surveyor ಪರೀಕ್ಷೆಯು ಒ ಎಂ ಆರ್ ಆಧಾರಿತ ಪರೀಕ್ಷೆಯಾಗಿದ್ದು ಈ ಕೆಳಕಂಡ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ
| ವಿಷಯ | ವಿವರ |
| ಪರೀಕ್ಷೆಯ ವಿಧಾನ | ಆಫ್ ಲೈನ್ ( ಒ ಎಂ ಆರ್) |
| ಒಟ್ಟು ಪ್ರಶ್ನೆಗಳು | 100 |
| ಒಟ್ಟು ಅಂಕಗಳು | 100 |
| ಪರೀಕ್ಷೆಯ ಅವಧಿ | 2 ಗಂಟೆಗಳು |
| ನೆಗೆಟಿವ್ ಮಾರ್ಕಿಂಗ್ | 0.25 ಅಂಕ |
ನೆಗೆಟಿವ್ ಮಾರ್ಕಿಂಗ್ ಕುರಿತು ತಿಳಿಯಿರಿ
ಈ Land Surveyor ಪರೀಕ್ಷೆಯು ಒಂದು ಸ್ಪರ್ಧಾತ್ಮಕ ಪರೀಕ್ಷೆಯಾಗಿದ್ದು ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಡಿತ ಮಾಡಲಾಗುತ್ತದೆ ಅಂದರೆ
- ಸರಿಯಾದ ಉತ್ತರಕ್ಕೆ- 1 ಅಂಕ
- ತಪ್ಪು ಉತ್ತರಕ್ಕೆ- 0.25 ಅಂಕಗಳ ಕಡಿತ
- ಉತ್ತರ ನೀಡದೆ ಇರುವ ಪ್ರಶ್ನೆಗಳಿಗೆ ಯಾವುದೇ ಅಂಕ ಕಡಿತ ಆಗುವುದಿಲ್ಲ
ಆದುದರಿಂದ ಖಚಿತವಾಗಿ ಉತ್ತರ ಗೊತ್ತಿಲ್ಲದ ಪ್ರಶ್ನೆಗಳಿಗೆ ಊಹಿಸಿ ಉತ್ತರಿಸುವುದನ್ನು ತಪ್ಪಿಸುವುದು ಉತ್ತಮವಾಗಿದೆ
Land Surveyor ಪರೀಕ್ಷೆಯಲ್ಲಿ ಕೇಳಬಹುದಾದ ಪ್ರಮುಖ ವಿಷಯಗಳು (ಪರೀಕ್ಷಾ ಸಿಲಬಸ್)
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುತ್ತಿರುವ Land Surveyor ಹುದ್ದೆಗಳಿಗೆ ಹೊರಡಿಸಲಾಗಿರುವ ಅಧಿಕೃತ ಸಿಲಬಸ್ ಅನ್ನು ಪ್ರಕಟಗೊಳಿಸಿದೆ. ಈ ಸಿಲಬಸ್ ಪ್ರಕಾರವಾಗಿ ಓದುವುದು ಸೂಕ್ತವಾಗಿದೆ ಸಾಮಾನ್ಯವಾಗಿ ಈ ಕೆಳಗಿನ ಅಂಶಗಳಿಗೆ ಹೆಚ್ಚಿನ ಮಹತ್ವವನ್ನು ನೀಡಬೇಕು.
ಸಾಮಾನ್ಯ ಜ್ಞಾನ
- ಭಾರತ ಸಂವಿಧಾನ
- ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಘಟನೆಗಳು
- ಕರ್ನಾಟಕ ಸರ್ಕಾರದ ಯೋಜನೆಗಳು
- ವಿಜ್ಞಾನ ಮತ್ತು ತಂತ್ರಜ್ಞಾನ
ಕರ್ನಾಟಕ ಇತಿಹಾಸ
- ಕರ್ನಾಟಕದ ರಾಜವಂಶಗಳು
- ಸ್ವಾತಂತ್ರ್ಯ ಹೋರಾಟ
- ಪ್ರಮುಖ ಐತಿಹಾಸಿಕ ಸ್ಥಳಗಳು
- ಸಾಂಸ್ಕೃತಿಕ ಪರಂಪರೆ
ಭೂ ದಾಖಲೆ ಮತ್ತು ಕಂದಾಯ ವ್ಯವಸ್ಥೆ
- ಭೂ ದಾಖಲೆಗಳ ನಿರ್ವಹಣೆ
- ಸರ್ವೇ ಮೂಲಭೂತ ತತ್ವಗಳು
- ಭೂ ದಾಖಲೆಗಳ ಡಿಜಿಟಲೀಕರಣ
- ಕಂದಾಯ ಇಲಾಖೆಯ ಕಾರ್ಯವೈಖರಿ
ಗಣಿತ
- ಶೇಕಡಾವಾರು
- ಲಾಭ-ನಷ್ಟ
- ಸರಾಸರಿ
- ಅನುಪಾತ
- ಸಮಯ ಮತ್ತು ಕೆಲಸ
- ವಿಸ್ತೀರ್ಣ ಹಾಗೂ ಪರಿಮಿತಿ
ತಾರ್ಕಿಕ ಸಾಮರ್ಥ್ಯ
- ಸಂಖ್ಯೆ ಸರಣಿ
- ಕೋಡಿಂಗ್-ಡಿಕೋಡಿಂಗ್
- ರಕ್ತ ಸಂಬಂಧ
- ದಿಕ್ಕು ಜ್ಞಾನ
- ವಿಶ್ಲೇಷಣಾತ್ಮಕ ಪ್ರಶ್ನೆಗಳು
ಕನ್ನಡ ಭಾಷೆ
- ವ್ಯಾಕರಣ
- ಸಮಾನಾರ್ಥಕ ಪದಗಳು
- ವಿರೋಧಾರ್ಥಕ ಪದಗಳು
- ಗಾದೆಗಳು
- ವಾಕ್ಯ ಶುದ್ಧಿ
ಇಂಗ್ಲಿಷ್
- Grammar
- Vocabulary
- Synonyms
- Antonyms
- Comprehension
ಪರೀಕ್ಷೆಗೆ ತಯಾರಿ ಮಾಡುವ ಅತ್ಯುತ್ತಮ ವಿಧಾನ
ಕೆಇಎ ನಡೆಸುತ್ತಿರುವ ಭೂ ಸರ್ವೇಯರ್ ಹುದ್ದೆಗಳಿಗೆ ನಿಮ್ಮ ಪರೀಕ್ಷೆ ತಯಾರಿ ಈ ರೀತಿ ಇದ್ದರೆ ಉತ್ತಮ ಅಂಕಗಳನ್ನು ಗಳಿಸಬಹುದಾಗಿರುತ್ತದೆ. ಇದರ ಜೊತೆಯಲ್ಲಿ ಸರಿಯಾದ ಯೋಜನೆಯನ್ನು ಅಭ್ಯರ್ಥಿಗಳು ಮಾಡಬೇಕಾಗುತ್ತದೆ
ಪ್ರತಿದಿನ ಓದುವ ವೇಳಾಪಟ್ಟಿ ರೂಪಿಸಿಕೊಳ್ಳಿ
ಪ್ರತಿದಿನವೂ ಕನಿಷ್ಠ 6 ರಿಂದ 8 ಗಂಟೆಗಳ ಕಾಲ ನಿಯಮಿತವಾಗಿ ಅಭ್ಯಾಸ ಮಾಡಿ
ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸಿ
ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದರಿಂದ ಪ್ರಶ್ನೆಗಳ ಮಾದರಿ ಮತ್ತು ಪ್ರಶ್ನೆಗಳ ಕಠಿಣತೆಯನ್ನು ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ
ಮಾಕ್ ಟೆಸ್ಟ್ ಬರೆಯಿರಿ
ಮಾಕ್ ಟೆಸ್ಟ್ ಗಳನ್ನು ವಾರಕ್ಕೊಮ್ಮೆ ಪೂರ್ಣ ಪ್ರಮಾಣವಾಗಿ ಬರೆಯುವುದರಿಂದ ಸಮಯ ನಿರ್ವಹಣೆ ಸುಧಾರಣೆಗೊಳ್ಳುತ್ತದೆ ಮತ್ತು ನೈಜ್ಯವಾದ ಪರೀಕ್ಷಾ ಅನುಭವ ದೊರೆಯುತ್ತದೆ
ಪ್ರತ್ಯೇಕ ನೋಟ್ಸ್ ಗಳನ್ನು ಸಿದ್ಧಪಡಿಸಿ
ಪ್ರತ್ಯೇಕ ವಿಷಯಗಳಿಗೆ ಪ್ರತ್ಯೇಕ ನೋಟ್ಸ್ ಅನ್ನು ಸಿದ್ಧಪಡಿಸುವುದರಿಂದ ಪ್ರಮುಖ ಅಂಶಗಳನ್ನು ಒಂದು ನಿರ್ದಿಷ್ಟ ಜಾಗದಲ್ಲಿ ಬರೆದುಕೊಂಡು ರಿವಿಶನ್ ಮಾಡಿಕೊಳ್ಳಲು ಸಹಾಯವಾಗುತ್ತದೆ
ಪ್ರಚಲಿತ ವಿದ್ಯಮಾನಗಳನ್ನು ಹೆಚ್ಚಾಗಿ ಓದಿ
ಪ್ರತಿದಿನವೂ ಕನ್ನಡ ದಿನಪತ್ರಿಕೆಗಳು, ಇಂಗ್ಲಿಷ್ ದಿನಪತ್ರಿಕೆಗಳು ಹಾಗೂ ಮಾಸಪತ್ರಿಕೆಗಳನ್ನು ಓದುವುದರಿಂದ ಸರ್ಕಾರಿ ಯೋಜನೆಗಳ ಬಗ್ಗೆ ಮತ್ತು ಪ್ರಚಲಿತ ವಿದ್ಯಮಾನಗಳ ಬಗ್ಗೆ ಉತ್ತಮ ಜ್ಞಾನ ಪಡೆದುಕೊಳ್ಳಬಹುದು
ನೆಗೆಟಿವ್ ಮಾರ್ಕಿಂಗ್ ಗಮನದಲ್ಲಿರಲಿ
ಇದೊಂದು ಸ್ಪರ್ಧಾತ್ಮಕ ಪರೀಕ್ಷೆ ಆಗಿರುವುದರಿಂದ ನೆಗೆಟಿವ್ ಮಾರ್ಕಿಂಗ್ ವ್ಯವಸ್ಥೆಯಿದ್ದು ಖಚಿತ ಉತ್ತರ ಗೊತ್ತಿರುವ ಪ್ರಶ್ನೆಗಳಿಗೆ ಮಾತ್ರ ಉತ್ತರವನ್ನು ನೀಡಿ
ಅರ್ಜಿ ಸಲ್ಲಿಸುವ ಮುನ್ನ ತಿಳಿದುಕೊಳ್ಳಬೇಕಾದ ವಿಷಯಗಳು
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುತ್ತಿರುವ ಭೂ ಸರ್ವೇಯರ್ ನೇಮಕಾತಿ 2026 ಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯಲ್ಲಿ ಹೊರಡಿಸಲಾಗಿರುವ ಸೂಚನೆ ಮತ್ತು ನಿಯಮಗಳನ್ನು ಸಂಪೂರ್ಣವಾಗಿ ಓದುವುದು ಅತ್ಯಂತ ಪ್ರಮುಖವಾಗಿದೆ.
ಅರ್ಜಿ ಸಲ್ಲಿಕೆ ಸಂದರ್ಭದಲ್ಲಿ ತಪ್ಪು ಮಾಹಿತಿ ನೀಡುವುದು ಸರಿಯಾದ ದಾಖಲೆಗಳನ್ನು ಅಪ್ಲೋಡ್ ಮಾಡದೇ ಇರುವುದು ಅಥವಾ ಅರ್ಜಿ ಶುಲ್ಕವನ್ನು ಪಾವತಿಸಿದೆ ಇರುವುದು ಈ ರೀತಿ ಮಾಡುವುದರಿಂದ ಅರ್ಜಿ ತಿರಸ್ಕೃತ ವಾಗುವ ಅಥವಾ ಅಪೂರ್ಣವಾಗಿ ಉಳಿಯುವ ಸಾಧ್ಯತೆ ಹೆಚ್ಚಿರುತ್ತದೆ ಆದ್ದರಿಂದ ಅರ್ಜಿ ಸಲ್ಲಿಸುವ ಮೊದಲು ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಪ್ರತಿ ಅರ್ಜಿ ಸಲ್ಲಿಕೆ ಹಂತಗಳನ್ನು ಎಚ್ಚರಿಕೆಯಿಂದ ಪೂರ್ಣಗೊಳಿಸಬೇಕಾಗುತ್ತದೆ
ಅರ್ಜಿ ಸಲ್ಲಿಸಲು ಬೇಕಾಗುವ ಅಗತ್ಯ ದಾಖಲೆಗಳು
Land Surveyor ಹುದ್ದೆಗೆ ಅರ್ಜಿ ಸಲ್ಲಿಸಲು ಈ ಕೆಳಕಂಡ ದಾಖಲೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳೆಂದರೆ
ಶೈಕ್ಷಣಿಕ ದಾಖಲೆಗಳು
- ಎಸ್ ಎಸ್ ಎಲ್ ಸಿ ಅಂಕಪಟ್ಟಿ
- ಪಿಯುಸಿ ಅಂಕಪಟ್ಟಿ
- ಪದವಿ ಪ್ರಮಾಣಪತ್ರ (ಅನ್ವಯಿಸಿದರೆ)
- ಎಲ್ಲಾ ಸೆಮಿಸ್ಟರ್ ಅಂಕಪಟ್ಟಿಗಳು (ಅನ್ವಯಿಸಿದರೆ)
ವೈಯಕ್ತಿಕ ದಾಖಲೆಗಳು
- ಆಧಾರ್ ಕಾರ್ಡ್
- ನಿವಾಸ ಪ್ರಮಾಣ ಪತ್ರ
- ಜನ್ಮ ದಿನಾಂಕದ ದಾಖಲೆ
ಮೀಸಲಾತಿ ದಾಖಲೆಗಳು
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಕಲ್ಯಾಣ ಕರ್ನಾಟಕ (371J) ಪ್ರಮಾಣ ಪತ್ರ (ಅನ್ವಯಿಸಿದರೆ)
- ಅಂಗವಿಕಲ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ( UDID Card)
ಅಪ್‌ಲೋಡ್ ಮಾಡಲು ಬೇಕಾಗುವ ದಾಖಲೆಗಳು
- ಅಭ್ಯರ್ಥಿಯ ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ
- ಅಭ್ಯರ್ಥಿಯ ಸಹಿ
- ಸ್ಕ್ಯಾನ್ ಮಾಡಿದ ಶೈಕ್ಷಣಿಕ ದಾಖಲೆಗಳು
- ಮೊಬೈಲ್ ಸಂಖ್ಯೆ
- ಸಕ್ರಿಯ ಇಮೇಲ್ ಐಡಿ
ಆನ್ಲೈನಲ್ಲಿ ಅರ್ಜಿ ಸಲ್ಲಿಸುವ ವಿಧಾನ
ಈ ನೇಮಕಾತಿಗೆ ಇರುವ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸಂಪೂರ್ಣವಾಗಿ ಆನ್ಲೈನ್ ಮೂಲಕ ನಡೆಯುವುದರಿಂದ ಈ ಕೆಳಕಂಡ ಸುಲಭ ಹಂತಗಳನ್ನು ಅನುಸರಿಸಿ ಯಶಸ್ವಿಯಾಗಿ ಅರ್ಜಿಯನ್ನು ಸಲ್ಲಿಸಬಹುದು
ಹಂತ-1: ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡುವುದು
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮೊದಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು
ಹಂತ-2: ನೇಮಕಾತಿ ವಿಭಾಗವನ್ನು ತೆರೆಯಬೇಕು
ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿದ ನಂತರ ಇರುವ ನೇಮಕಾತಿ ಅಥವಾ ಇತ್ತೀಚಿನ ಪ್ರಕಟಣೆಗಳು ಎಂಬ ವಿಭಾಗವನ್ನು ತೆರೆಯಬೇಕು
ಹಂತ-3: ಹುದ್ದೆಯ ಆಯ್ಕೆ
ಅಧಿಕೃತ ವೆಬ್ ಸೈಟ್ ಅನ್ನು ತೆರೆದು ನೇಮಕಾತಿ ವಿಭಾಗಕ್ಕೆ ಹೋಗಿ ಭೂ ಸರ್ವೇಯರ್ ನೇಮಕಾತಿ 2026 ಎಂಬಲ್ಲಿ ಕ್ಲಿಕ್ ಮಾಡಬೇಕು
ಹಂತ-4: ನೋಂದಣಿ
ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೊದಲು ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಅನ್ನು ಬಳಸಿ ಹೊಸ ಖಾತೆಯನ್ನು ರಚಿಸಿಕೊಳ್ಳಬೇಕಾಗುತ್ತದೆ
ಹಂತ-5: ಓಟಿಪಿ ಪರಿಶೀಲನೆ
ನೊಂದಣಿಗೆ ಬಳಸಲಾಗಿರುವ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿಯನ್ನು ನಮೂದಿಸುವ ಮೂಲಕ ದೃಢೀಕರಣವನ್ನು ಪೂರ್ಣಗೊಳಿಸಿ ಖಾತೆಯನ್ನು ಸೂಚಿಸಬೇಕು
ಹಂತ-6: ಅರ್ಜಿ ಭರ್ತಿ ಮಾಡುವುದು
ಅರ್ಜಿ ಭರ್ತಿ ಮಾಡುವಾಗ ಅಭ್ಯರ್ಥಿಗಳು ಈ ಕೆಳಕಂಡ ಅಂಶಗಳನ್ನು ಸರಿಯಾಗಿ ಮತ್ತು ಎಚ್ಚರಿಕೆಯಿಂದ ನಮೂದಿಸಬೇಕು
- ಅಭ್ಯರ್ಥಿಯ ಹೆಸರು
- ತಂದೆ / ತಾಯಿಯ ಹೆಸರು
- ವಿಳಾಸ
- ಜನ್ಮ ದಿನಾಂಕ
- ವಿದ್ಯಾರ್ಹತೆ
- ವರ್ಗ
- ಸಂಪರ್ಕ ವಿವರಗಳು
ಹಂತ-7: ದಾಖಲೆಗಳನ್ನು ಅಪ್ಲೋಡ್ ಮಾಡುವುದು
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸೂಚಿಸಿರುವ ಎಲ್ಲಾ ಅಗತ್ಯ ದಾಖಲಾತಿಗಳನ್ನು ಸೂಚಿಸಿರುವ ಗಾತ್ರ ಮತ್ತು ಫಾರ್ಮೆಟ್ ನ ಅನುಗುಣವಾಗಿ ಎಲ್ಲ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು
ಹಂತ-8: ಅರ್ಜಿ ಶುಲ್ಕ ಪಾವತಿ
ಅಭ್ಯರ್ಥಿಗಳು ತಮ್ಮ ಮೀಸಲಾತಿಯ ವರ್ಗಕ್ಕೆ ಅನುಗುಣವಾಗಿ ನಿಗದಿಪಡಿಸಲಾಗಿರುವ ಅರ್ಜಿ ಶುಲ್ಕವನ್ನು ಪಾವತಿಸಬೇಕು
ಹಂತ-9: ಅರ್ಜಿ ಪರಿಶೀಲನೆ
ಅರ್ಜಿಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಅರ್ಜಿ ಶುಲ್ಕವನ್ನು ಪಾವತಿಸಿದ ನಂತರ ಎಲ್ಲ ಮಾಹಿತಿಯು ಸರಿಯಾಗಿದೆಯೇ ಎಂಬುದನ್ನು ಓದಿ ಪರಿಶೀಲಿಸಿ ಖಚಿತಪಡಿಸಿಕೊಳ್ಳಿ
ಹಂತ-10: ಅರ್ಜಿ ಸಲ್ಲಿಕೆ ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳುವುದು
ಈ ಮೇಲಿನ ಎಲ್ಲಾ ಅಂಶಗಳನ್ನು ಪೂರ್ಣಗೊಳಿಸಿದ ನಂತರ Submit ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಯಶಸ್ವಿಯಾಗಿ ಸಲ್ಲಿಸಬಹುದಾಗಿರುತ್ತದೆ. ನಂತರ ಸ್ಕ್ರೀನ್ ಮೇಲೆ ಕಾಣುವ ಅರ್ಜಿ ಸಲ್ಲಿಕೆಯ ಪ್ರಿಂಟ್ ಔಟ್ ಅನ್ನು ಮತ್ತು ಶುಲ್ಕ ಪಾವತಿ ರಸೀದಿಯನ್ನು ಡೌನ್ಲೋಡ್ ಮಾಡಿಟ್ಟುಕೊಂಡು ಭವಿಷ್ಯದ ಉಲ್ಲೇಖಕ್ಕಾಗಿ ಬಳಸಿಕೊಳ್ಳಿ.
ಅರ್ಜಿ ಸಲ್ಲಿಕೆ ಸಮಯದಲ್ಲಿ ಆಗುವ ಸಾಮಾನ್ಯ ತಪ್ಪುಗಳು
- ತಪ್ಪಾದ ಮೊಬೈಲ್ ಸಂಖ್ಯೆ ನಮೂದಿಸುವುದು
- ತಪ್ಪಾದ ಇಮೇಲ್ ಐಡಿ ನೀಡುವುದು
- ಅಸ್ಪಷ್ಟ ಮತ್ತು ಸರಿಯಾಗಿ ಕಾಣದ ದಾಖಲೆಗಳನ್ನು ಅಪ್ಲೋಡ್ ಮಾಡುವುದು
- ಅರ್ಜಿ ಶುಲ್ಕವನ್ನು ಪಾವತಿಸದೆ ಅರ್ಜಿ ಸಲ್ಲಿಸುವುದು
- ತಪ್ಪಾದ ಮೀಸಲಾತಿ ವರ್ಗವನ್ನು ಆಯ್ಕೆ ಮಾಡುವುದು
- ಹೆಸರು, ಜನ್ಮ ದಿನಾಂಕದಲ್ಲಿ ತಪ್ಪು ನಮೂದಿಸುವುದು
- ಕೊನೆ ದಿನಾಂಕದವರೆಗೆ ಅರ್ಜಿ ಸಲ್ಲಿಸಲು ಕಾಯುವುದು
- ತಪ್ಪು ದಾಖಲೆಗಳನ್ನು ಅಪ್ಲೋಡ್ ಮಾಡುವುದು
ಪ್ರಮುಖ ದಿನಾಂಕಗಳು
Last Updated: 17 July 2026
Last Verified: 17 July 2026
| ವಿವರ | ದಿನಾಂಕ |
| ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭ | 11-07-2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 07-08-2026 |
| ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ | 10-08-2026 |
| ನಿರೀಕ್ಷಿತ ಲಿಖಿತ ಪರೀಕ್ಷೆ ದಿನಾಂಕ | 03 ಮತ್ತು 04 ಅಕ್ಟೋಬರ್ 2026 |
ಅಭ್ಯರ್ಥಿಗಳು ಈ ಮೇಲ್ಕಂಡ ದಿನಾಂಕಗಳನ್ನು ಗಮನದಲ್ಲಿಟ್ಟುಕೊಂಡು ಸಮಯಕ್ಕೆ ಸರಿಯಾಗಿ ಎಲ್ಲಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರಬೇಕು ಮತ್ತು ಪರೀಕ್ಷೆಯಲ್ಲಿ ಯಶಸ್ಸು ಪಡೆಯಲು ಪರೀಕ್ಷಾ ತಯಾರಿಯನ್ನು ಆರಂಭಿಸಬೇಕು
Land Surveyor ಹುದ್ದೆಯಲ್ಲಿರುವ ವೃತ್ತಿ ಅವಕಾಶಗಳು
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಭೂ ಸರ್ವೇಯರ್ ಹುದ್ದೆಗೆ ಆಯ್ಕೆಯಾದ ನಂತರ ಉತ್ತಮ ಕಾರ್ಯವೈಖರಿ ಹಾಗೂ ಸೇವಾ ಅವಧಿ ಆಧಾರದ ಮೇಲೆ ಈ ಕೆಳಕಂಡ ಹುದ್ದೆಗಳಿಗೆ ಭವಿಷ್ಯದಲ್ಲಿ ಬಡ್ತಿ ಪಡೆಯುವ ಅವಕಾಶವನ್ನು ಹೊಂದಬಹುದು
- ಹಿರಿಯ ಭೂ ಸರ್ವೇಯರ್
- ಸರ್ವೇ ಅಧಿಕಾರಿ
- ತಾಲ್ಲೂಕು ಮಟ್ಟದ ತಾಂತ್ರಿಕ ಅಧಿಕಾರಿ
- ಜಿಲ್ಲಾ ಮಟ್ಟದ ಭೂ ದಾಖಲೆ ಅಧಿಕಾರಿ
- ವಿಶೇಷ ಭೂ ದಾಖಲೆ ವಿಭಾಗದ ಹುದ್ದೆಗಳು
- ಆಡಳಿತಾತ್ಮಕ ಜವಾಬ್ದಾರಿಯ ಹುದ್ದೆಗಳು
ಸೇವಾನುಭವ ಮತ್ತು ಸೇವಾ ಅವಧಿಯ ಆಧಾರದ ಮೇಲೆ ಪದೋನ್ನತಿ ಅವಕಾಶಗಳನ್ನು ಪಡೆದುಕೊಳ್ಳಬಹುದು
ಭೂ ಸರ್ವೆಯರ್ ಆಗಿ ಕೆಲಸ ಮಾಡುವುದರಿಂದ ಇರುವ ಪ್ರಯೋಜನಗಳು
ಭೂ ಸರ್ವೇಯರ್ ಆಗಿ ಕೆಲಸ ಮಾಡುವವರಿಗೆ ಈ ಕೆಳಕಂಡ ಸರ್ಕಾರಿ ಹಾಗೂ ಹೆಚ್ಚುವರಿ ಸೌಲಭ್ಯಗಳು ದೊರೆಯುತ್ತವೆ ಅವುಗಳೆಂದರೆ
- ಶಾಶ್ವತ ಸರ್ಕಾರಿ ಉದ್ಯೋಗ
- ಉತ್ತಮ ವೇತನ
- ವಾರ್ಷಿಕ ವೇತನ ಹೆಚ್ಚಳ
- ವೈದ್ಯಕೀಯ ಸೌಲಭ್ಯ
- ತುಟ್ಟಿಭತ್ಯೆ
- ಮನೆ ಬಾಡಿಗೆ ಭತ್ಯೆ
- ರಜೆ ಸೌಲಭ್ಯ
- ನಿವೃತ್ತಿ ನಂತರದ ಸೌಲಭ್ಯಗಳು
- ಉದ್ಯೋಗ ಭದ್ರತೆ
- ಬಡ್ತಿ ಅವಕಾಶಗಳು
ಅಭ್ಯರ್ಥಿಗಳು ಗಮನಿಸಬೇಕಾದ ಪ್ರಮುಖ ಅಂಶಗಳು
- ಹುದ್ದೆಗಳಿಗೆ ಹೊರಡಿಸಲಾಗಿರುವ ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಳ್ಳಿ
- ಕೊನೆಯ ದಿನಾಂಕದವರೆಗೆ ಕಾಯದೆ ಆದಷ್ಟು ಬೇಗ ಅರ್ಜಿ ಸಲ್ಲಿಸಿ
- ದಾಖಲೆಗಳ ಮೂಲ ಪ್ರತಿಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ
- ಪರೀಕ್ಷಾ ಪ್ರವೇಶ ಪತ್ರವನ್ನು ಸಮಯಕ್ಕೆ ಡೌನ್ಲೋಡ್ ಮಾಡಿ ಸುರಕ್ಷಿತವಾಗಿಟ್ಟುಕೊಳ್ಳಿ
- ಪರೀಕ್ಷಾ ಕೇಂದ್ರಕ್ಕೆ ಸಮಯಕ್ಕಿಂತ ಮುಂಚಿತವಾಗಿ ತಲುಪಿ
- ಒ ಎಂ ಆರ್ ಉತ್ತರ ಪತ್ರಿಕೆಯಲ್ಲಿ ಭರ್ತಿ ಮಾಡುವಾಗ ಎಚ್ಚರಿಕೆಯಿಂದ ಭರ್ತಿ ಮಾಡಿ
Land Surveyor Recruitment 2026: FAQ’s
ಪ್ರಶ್ನೆ-1: KEA Land Surveyor ನೇಮಕಾತಿ 2026 ರಲ್ಲಿ ಒಟ್ಟು ಎಷ್ಟು ಹುದ್ದೆಗಳು ಇವೆ?
ಉತ್ತರ: ಒಟ್ಟು 750 ಭೂ ಸರ್ವೇಯರ್ ಹುದ್ದೆಗಳಿಗೆ ಆನ್ ಲೈನ್ ಮೂಲಕ ಭರ್ತಿ ಮಾಡಲಾಗುತ್ತಿದೆ.
ಪ್ರಶ್ನೆ-1: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಉತ್ತರ: 07 ಆಗಸ್ಟ್ 2026 ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಪ್ರಶ್ನೆ-1: ಭೂ ಸರ್ವೇಯರ್ ಹುದ್ದೆಗೆ ಇರುವ ವೇತನ ಎಷ್ಟು?
ಉತ್ತರ: ಆಯ್ಕೆಯಾದ ಅಭ್ಯರ್ಥಿಗಳಿಗೆ ₹37,500 ರಿಂದ ₹76,100 ವರೆಗೆ ಪ್ರತಿ ತಿಂಗಳು ವೇತನ ದೊರೆಯುತ್ತದೆ.
ಪ್ರಶ್ನೆ-1: ಪರೀಕ್ಷೆಯು ಆನ್‌ಲೈನ್ ಅಥವಾ ಆಫ್‌ಲೈನ್?
ಉತ್ತರ: ಈ ಹುದ್ದೆಗಳ ಪರೀಕ್ಷೆಯು OMR ಆಧಾರಿತ ಆಫ್‌ಲೈನ್ ವಿಧಾನದಲ್ಲಿ ನಡೆಯಲಿದೆ.
ಪ್ರಶ್ನೆ-1: ನೆಗೆಟಿವ್ ಮಾರ್ಕಿಂಗ್ ಇದೆಯೇ?
ಉತ್ತರ: ಹೌದು. ಪ್ರತಿ ತಪ್ಪು ಉತ್ತರಕ್ಕೆ 0.25 ಅಂಕಗಳನ್ನು ಕಡಿತಗೊಳಿಸಲಾಗುತ್ತದೆ.
ಅಧಿಕೃತ ಲಿಂಕ್ ಗಳು
Last Updated: 17 July 2026
| ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್ ಸೈಟ್ | https://cetonline.karnataka.gov.in/kea/ |
| ಕರ್ನಾಟಕ ಕಂದಾಯ ಇಲಾಖೆಯ ಅಧಿಕೃತ ವೆಬ್ ಸೈಟ್ | https://kandaya.karnataka.gov.in/en |
| ಕರ್ನಾಟಕ ಭೂ ದಾಖಲೆಗಳ ಇಲಾಖೆಯ ಅಧಿಕೃತ ವೆಬ್ ಸೈಟ್ | https://landrecords.karnataka.gov.in/ |
| ನೇಮಕಾತಿ ಅಧಿಸೂಚನೆ ಪಿಡಿಎಫ್ | |
| ಅರ್ಜಿ ಸಲ್ಲಿಸಲು ಲಿಂಕ್ | ಅರ್ಜಿ ಸಲ್ಲಿಕೆ |
ಹೆಚ್ಚುವರಿ ಲಿಂಕ್ ಗಳು
| ನಮ್ಮ ವಾಟ್ಸಪ್ ಗುಂಪು ಸೇರಿ | ಇಲ್ಲಿ ಕ್ಲಿಕ್ ಮಾಡಿ |
| ಇತರ ಹೆಚ್ಚುವರಿ ಮಾಹಿತಿಯನ್ನು ಈ ಮುಂದಿನಂತೆ ಪಡೆಯಿರಿ | ಉದ್ಯೋಗ ನೇಮಕಾತಿ ಮಾಹಿತಿ |
ಕರ್ನಾಟಕ ಸರ್ಕಾರದಲ್ಲಿನ ಕಂದಾಯ ಇಲಾಖೆ ಮತ್ತು ಭೂ ದಾಖಲೆ ಇಲಾಖೆಯಲ್ಲಿನ ಸರ್ಕಾರಿ ಉದ್ಯೋಗವನ್ನು ಪಡೆಯಲು ಬಯಸುವ ಅಭ್ಯರ್ಥಿಗಳಿಗೆ Land Surveyor ನೇಮಕಾತಿ ಅತ್ಯುತ್ತಮ ಅವಕಾಶವಾಗಿದೆ. ಈ ನೇಮಕಾತಿ ಮೂಲಕ ಒಟ್ಟು 750 ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯುತ್ತಿದ್ದು ಸಾವಿರಾರು ಅಭ್ಯರ್ಥಿಗಳಿಗೆ ಸರ್ಕಾರಿ ಸೇವೆಗೆ ಸೇರುವ ಅವಕಾಶ ದೊರೆಯಲಿದೆ.
ಉತ್ತಮ ವೇತನ, ಉದ್ಯೋಗ ಭದ್ರತೆ, ವಿವಿಧ ಸರಕಾರಿ ಭತ್ಯೆಗಳು ಹಾಗೂ ವೃತ್ತಿ ಭವಿಷ್ಯಗಳು ಈ ಹುದ್ದೆಗಳ ಪ್ರಮುಖ ಆಕರ್ಷಣೆಯಾಗಿದೆ
ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಥೈಸಿಕೊಂಡು ಅರ್ಹತಮಾನದಂಡಗಳನ್ನು ಪರಿಶೀಲಿಸಿ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ಕೊನೆಯ ದಿನಾಂಕಕ್ಕೆ ಕಾಯದೇ ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.
ಪರೀಕ್ಷೆಯನ್ನು ಎದುರಿಸಲು ಯೋಜಿತವಾಗಿ ತಯಾರಿ ನಡೆಸಬೇಕು. ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳನ್ನು ಅಭ್ಯಾಸ ಮಾಡಿ ಮತ್ತು ಸಮಯ ನಿರ್ವಹಣೆಗೆ ಹೆಚ್ಚಿನ ಮಹತ್ವವನ್ನು ನೀಡಿ ಮತ್ತು ಉತ್ತಮ ರೀತಿಯ ಪರಿಶ್ರಮ ಮತ್ತು ನಿರಂತರವಾಗಿ ಅಭ್ಯಾಸ ಮಾಡುವುದರಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಭೂ ಸರ್ವೇಯರ್ ಹುದ್ದೆಯನ್ನು ಪಡೆದು ಯಶಸ್ವಿಯಾಗಿ ಸರ್ಕಾರಿ ವೃತ್ತಿ ಜೀವನವನ್ನು ಪಡೆಯಬಹುದಾಗಿರುತ್ತದೆ
Related Information: Job Recruitments
Related Information: Exam Tips
|
Karnataka Police CPC Exam Preparation Tips 2026 | Complete And Best Study Plan |
|
Exam Tips For KEA AO And AAO Posts, 90 ದಿನಗಳ Best ಸ್ಟಡಿ ಪ್ಲಾನ್ ಹೀಗಿದ್ದರೆ ನಿಮ್ಮ ಯಶಸ್ಸು ಖಚಿತ. |
Author Note: ಈ ಲೇಖನವು KEA ಭೂ ಸರ್ವೇಯರ್ ನೇಮಕಾತಿ 2026 ಕುರಿತ ಅಧಿಕೃತ ಅಧಿಸೂಚನೆ ಹಾಗೂ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಸಿದ್ಧಪಡಿಸಲಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಿ, ಇತ್ತೀಚಿನ ನವೀಕರಣಗಳನ್ನು ದೃಢಪಡಿಸಿಕೊಳ್ಳುವುದು ಸೂಕ್ತ.
–***–
About Author: ರಂಗನಾಥ ಬಿ ಜಿ ರವರು ಅರ್ಥಶಾಸ್ತ್ರದಲ್ಲಿ ಎಂ ಎ ಪದವಿಯನ್ನು ಪಡೆದಿದ್ದು, ಕಳೆದ 3 ವರ್ಷಗಳಿಂದ ಸರ್ಕಾರಿ ಉದ್ಯೋಗ, ಶಿಕ್ಷಣ, ಪರೀಕ್ಷೆಗಳು, ವಿದ್ಯಾರ್ಥಿವೇತನ, ಸರ್ಕಾರಿ ಯೋಜನೆಗಳು ಹಾಗೂ ಸಾರ್ವಜನಿಕ ಉಪಯುಕ್ತ ಮಾಹಿತಿಯನ್ನು ಸರಳ ಕನ್ನಡದಲ್ಲಿ, ನಿಖರವಾಗಿ ಮತ್ತು ವಿಶ್ವಾಸಾರ್ಹ ಮೂಲಗಳ ಆಧಾರದ ಮೇಲೆ ಓದುಗರಿಗೆ ತಲುಪಿಸುವ ಉದ್ದೇಶದಿಂದ ಲೇಖನಗಳನ್ನು ಪ್ರಕಟಿಸುತ್ತಿದ್ದಾರೆ.
–***–
Disclaimer: ಈ ಲೇಖನವು ಮಾಹಿತಿ ನೀಡುವ ಉದ್ದೇಶಕ್ಕಾಗಿ ಮಾತ್ರ ಪ್ರಕಟಿಸಲಾಗಿದೆ. ನೇಮಕಾತಿ ನಿಯಮಗಳು, ದಿನಾಂಕಗಳು ಅಥವಾ ಅರ್ಹತೆಯಲ್ಲಿ ಬದಲಾವಣೆಗಳಿರಬಹುದು. ಅಂತಿಮ ಮತ್ತು ಅಧಿಕೃತ ಮಾಹಿತಿಗಾಗಿ KEA ಅಧಿಕೃತ ಅಧಿಸೂಚನೆ ಹಾಗೂ ವೆಬ್‌ಸೈಟ್‌ನ್ನು ಪರಿಶೀಲಿಸಿ.